Tag: Santosh Anandram

  • ಸ್ಕ್ರೀನ್‍ನಲ್ಲಿ ಅಪ್ಪು ಬಯೋಪಿಕ್ – ಸುಳಿವು ನೀಡಿದ ಸಂತೋಷ್ ಆನಂದ್‍ರಾಮ್

    ಸ್ಕ್ರೀನ್‍ನಲ್ಲಿ ಅಪ್ಪು ಬಯೋಪಿಕ್ – ಸುಳಿವು ನೀಡಿದ ಸಂತೋಷ್ ಆನಂದ್‍ರಾಮ್

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ವಾರಗಳು ಕಳೆಯುತ್ತಿದ್ದರೂ ಅವರ ನೆನಪು ಮಾತ್ರ ಇನ್ನು ಹಸಿಯಾಗಿಯೇ ಇದೆ. ಈ ಹಿನ್ನೆಲೆ ಅಭಿಮಾನಿಯೊಬ್ಬರು ನಿರ್ದೇಶಕ ಸಂತೋಷ್ ಆನಂದ್‍ರಾಮ್ ಅವರನ್ನು ಅಪ್ಪು ಬಯೋಪಿಕ್ ತೆಗೆಯುವಂತೆ ಮನವಿ ಮಾಡಿಕೊಂಡಿದ್ದು, ರಾಮ್ ಅದಕ್ಕೆ ಒಪ್ಪಿಕೊಂಡಿದ್ದಾರೆ.

    ಅಪ್ಪು ಜೊತೆ ಸಂತೋಷ್ ಆನಂದ್‍ರಾಮ್ ಅವರು ಕೆಲಸ ಮಾಡಿ ಒಳ್ಳೆಯ ಸಿನಿಮಾಗಳನ್ನು ನೀಡಿದ್ದಾರೆ. ಇವರಿಬ್ಬರ ನಡುವೆ ಒಳ್ಳೆಯ ಬಾಂಧವ್ಯವಿದೆ. ಈ ಪರಿಣಾಮ ರಾಮ್ ಅವರು, ನಿಮ್ಮಲ್ಲಿ ಇದ್ದಂತಹ ನಿಷ್ಕಲ್ಮಶ ಮನಸ್ಸು ಮಗುವಿನಷ್ಟೇ ಚಂದ. ನಿಮ್ಮ ನಗುವಿನಲ್ಲಿ ಯಾವುದೇ ರೀತಿಯ ಅಹಂ ಇಲ್ಲ. ಅದಕ್ಕೆ ನೀವು ನಿಮ್ಮನ್ನು ಇಷ್ಟಪಡುವ ಎಲ್ಲ ಮಕ್ಕಳಲ್ಲೂ ಇದ್ದಿರಾ. ನೀವು ಇಲ್ಲ ಎಂದು ನಾನು ಎಂದೂ ಸಹ ಭಾವಿಸುವುದಿಲ್ಲ. ನಿಮಗೆ ಸಂಬಂಧ ಪಟ್ಟ ಪ್ರತಿ ಪೋಸ್ಟ್ ನಲ್ಲೂ ನಿಮ್ಮನ್ನು ಟ್ಯಾಗ್ ಮಾಡುತ್ತೇನೆ. ನೀವು ನನಗೆ ಸದಾ ಜೀವಂತ ಎಂದು ಬರೆದು ಟ್ವೀಟ್ ಮಾಡಿದ್ದರು. ಇದನ್ನೂ ಓದಿ:  ಪ್ರಾಣವನ್ನೇ ಪಣಕ್ಕಿಟ್ಟು ಅರ್ಚಕನನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್ – ವೀಡಿಯೋ ವೈರಲ್

    ಈ ಸಾಲುಗಳನ್ನು ನೋಡಿದ ಅಪ್ಪು ಅಭಿಮಾನಿಗಳು ರಾಮ್ ಅವರಿಗೆ ಅಪ್ಪುಗೊಸ್ಕರ ಒಂದು ಒಯೋಪಿಕ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಉತ್ಸಾಹದಿಂದ ಆನಂದ್‍ರಾಮ್ ಅವರು, ನಾನು ಅವರ ಬಗ್ಗೆ ತೆರೆ ಮೇಲೆ ತರಲು ನನ್ನ ಕೈಯಲ್ಲಿ ಆದಷ್ಟು ಪ್ರಯತ್ನ ಮಾಡುತ್ತೇನೆ ಎಂದು ರಿಪ್ಲೈ ಮಾಡಿದ್ದಾರೆ.

    ಅದು ಅಲ್ಲದೇ ಅಭಿಮಾನಿ, ಅಪ್ಪು ಸರ್‍ಗೋಸ್ಕರ ಪ್ರತಿ ವರ್ಷ ಒಂದು ಹಾಡನ್ನು ಮಾಡಿ. ಅದು ನಮಗೆ ಪ್ರಾರ್ಥನೆ ಆಗಿರುತ್ತೆ ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ರಾಮ್ ಅವರು, 1000% ಪಕ್ಕ ಎಂದು ರಿಪ್ಲೈ ಮಾಡಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ಪತಿ ಪತ್ನಿಯ ಹುಟ್ಟುಹಬ್ಬ ಮರೆತರೆ ಜೈಲೇ ಗತಿ!

  • ರಾಯರ ದರ್ಶನಕ್ಕೆ ಹೊರಟ ಪುನೀತ್, ಜಗ್ಗೇಶ್

    ರಾಯರ ದರ್ಶನಕ್ಕೆ ಹೊರಟ ಪುನೀತ್, ಜಗ್ಗೇಶ್

    ಬೆಂಗಳೂರು: ಯುವರತ್ನ ಸಿನಿಮಾ ತಂಡದ ಮೂವರು ಹಾಗೂ ಜಗ್ಗೇಶ್ ಒಟ್ಟಾಗಿ ಸೇರಿ ಮಂತ್ರಾಲಯದ ರಾಯರ ದರ್ಶನವನ್ನು ಮಾಡಲು ಹೋಗಿರುವ ಫೋಟೋವನ್ನು ನವರಸನಾಯಕ ಜಗ್ಗೇಶ್ ಟ್ವೀಟ್‍ನಲ್ಲಿ ಹಂಚಿಕೊಂಡಿದ್ದಾರೆ.

    ಮಂತ್ರಾಲಯ ರಾಯರ ಬೃಂದಾವನದ ದರ್ಶನಕ್ಕೆ ಸಹೋದರ ಪುನೀತ್, ಸಂತೋಷ್ ಆನಂದ್ ರಾಮ್, ಕಾರ್ತಿಕ್ ಜೊತೆ ಹೊರಟಿದ್ದೇನೆ. ಶುಭದಿನ ಶುಭೋದಯ.. ಎಂದು ಬರೆದುಕೊಂಡು ಕಾರಿನಲ್ಲಿ ಕುಳಿತಿರುವ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಸಿನಿಮಾ ಬಿಡುಗಡೆಯಾದ ಒಂದೇ ದಿನಕ್ಕೆ ಕೊರೊನಾ ಕಾರಣದಿಂದಾಗಿ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 50% ಸೀಟು ಭರ್ತಿಗೆ ನಿಯಮ ಮಾಡಿತ್ತು. ಈ ವಿಚಾರದಿಂದ ನೊಂದು ಇಡೀ ಚಿತ್ರರಂಗವೇ ಸರ್ಕಾರದ ವಿರುದ್ಧ ತಿರುಗಿ ಬಿತ್ತು. ಅಲ್ಲದೆ ಪುನೀತ್, ಪ್ರಶಾಂತ್ ನೀಲ್ ಸೇರಿದಂತೆ ಯುವರತ್ನ ತಂಡ ಸಿಎಂ ಭೇಟಿಯಾಗಿ ಮನವಿ ಮಾಡಿಕೊಂಡಿತ್ತು.

    ಈ ಹಿನ್ನೆಲೆಯಲ್ಲಿ ಏಪ್ರಿಲ್ 7ರವರೆಗೆ ಶೇ.100 ರಷ್ಟು ಆಸನ ವ್ಯವಸ್ಥೆಗೆ ಸರ್ಕಾರ ಅನುಮತಿ ನೀಡಿತ್ತು. ಈ ಎಲ್ಲಾ ವಿಚಾರಗಳಿಂದ ನಿಟ್ಟುಸಿರುಬಿಟ್ಟ ಯುವರತ್ನ ಸಿನಿಮಾ ತಂಡ ಇದೀಗ ಮಂತ್ರಾಲಯದ ರಾಯರ ದರ್ಶನ ಮಾಡಲು ಹೊರಟಿದೆ.

    ಪುನೀತ್ ರಾಜ್‍ಕುಮಾರ್, ನಿರ್ದೇಶಕ ಸಂತೋಷ್ ಆನಂದ್‍ರಾಮ್ ಹಾಗೂ ಹೊಂಬಾಳೆ ಫಿಲ್ಮ್‍ಂ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹಾಗೂ ಜೊತೆಯಲ್ಲಿ ಜಗ್ಗೇಶ್ ಅವರು ರಾಯರ ದರ್ಶನಕ್ಕೆ ಹೋಗಿರುವುದು ವಿಶೇಷವಾಗಿದೆ.

  • ಪಕ್ಕದಲ್ಲಿ ಫೆರಾರಿ ಹೋದ್ರು ತಲೆಕೆಡಿಸಿಕೊಳ್ಳಲ್ಲ: ಯುವರತ್ನ ಪುನೀತ್ ರಾಜ್‍ಕುಮಾರ್

    ಪಕ್ಕದಲ್ಲಿ ಫೆರಾರಿ ಹೋದ್ರು ತಲೆಕೆಡಿಸಿಕೊಳ್ಳಲ್ಲ: ಯುವರತ್ನ ಪುನೀತ್ ರಾಜ್‍ಕುಮಾರ್

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳಿಗೆ ‘ಯುವರತ್ನ’ ಸಿನಿಮಾ ತಂಡ ವರಮಹಾಲಕ್ಷ್ಮಿ ಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದೆ.

    ಈ ವಿಚಾರವಾಗಿ ಕಳೆದ ಎರಡು ದಿನಗಳ ಹಿಂದೆ ಟ್ವೀಟ್ ಮಾಡಿದ್ದ ಯುವರತ್ನ ಸಿನಿಮಾದ ನಿರ್ದೇಶಕ ಸಂತೋಷ್ ಅನಂದರಾಮ್ ಅವರು, ಅಭಿಮಾನಿಗಳ ಕೋರಿಕೆಗಾಗಿ “ಯುವರತ್ನ” ಪೋಸ್ಟರ್ ವರಮಹಾಲಕ್ಷ್ಮಿಗೆ ದೊಡ್ಮನೆ ಅಭಿಮಾನಿ ಬಳಗಕ್ಕೆ ಇದು ಸಮರ್ಪಣೆ. ಹಬ್ಬದ ಪ್ರಯುಕ್ತ ಸಿನಿಮಾದ ಪೋಸ್ಟರ್ ಜೊತೆಗೆ ಒಂದು ಡೈಲಾಗ್ ಅನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು.

    ಈ ಇಂದು ಹತ್ತು ಗಂಟೆಗೆ ಟ್ವೀಟ್ ಮಾಡಿರುವ ಸಂತೋಷ್ ಅನಂದರಾಮ್ ಅವರು, ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಪೋಸ್ಟರ್ ಅಲ್ಲಿ ಅಪ್ಪು ಕಣ್ಣಿಗೆ ಕನ್ನಡಕ ಹಾಕಿಕೊಂಡು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಾನ್ ಯಾವತ್ತು ಬೇರೆಯವರ ರೂಟ್‍ನಲ್ಲಿ ಟ್ರಾವೆಲ್ ಆಗಲ್ಲ, ನಮ್ದೇ ದಾರಿ ನಮ್ದೇ ಸವಾರಿ. ಪಕ್ಕದಲ್ಲಿ ಫೆರಾರಿ ಹೋದ್ರು ತಲೆಕೆಡಿಸಿಕೊಳ್ಳಲ್ಲ ಎಂದು ಡೈಲಾಗ್ ಬರೆಯಲಾಗಿದೆ. ಈ ಪೋಸ್ಟರ್ ಅನ್ನು ಅಪ್ಪು ಕೂಡ ತಮ್ಮ ಟ್ವಿಟ್ಟರ್ ಅಲ್ಲಿ ಹಾಕಿಕೊಂಡಿದ್ದಾರೆ.

    ಕೊರೊನಾ ಭೀತಿ ಎದುರಾಗದಿದ್ದಲ್ಲಿ ಏಪ್ರಿಲ್ 3ಕ್ಕೆ ಯುವರತ್ನ ಸಿನಿಮಾ ಬಿಡುಗಡೆಯಾಗುತ್ತಿತ್ತು. ಸಿನಿಮಾ ಬಿಡುಗಡೆ ಕುರಿತು ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಈ ಹಿಂದೆ ಸ್ಪಷ್ಟನೆ ನೀಡಿದ್ದರು. ಬಹುನಿರೀಕ್ಷಿತ ಯುವರತ್ನ ಸಿನಿಮಾ ಮೇ 21ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ನಮ್ಮ ಪವರ್ ಸ್ಟಾರ್ ಸ್ವಾಗತಿಸಲು ಸಜ್ಜಾಗಿ ಎಂದು ಟ್ವೀಟ್ ಮಾಡಿದ್ದರು. ಆದರೆ ಮತ್ತೆ ಲಾಕ್‍ಡೌನ್ ಆದ ಪರಿಣಾಮ ಮುಂದೂಡಲಾಗಿದ್ದು, ಇನ್ನೂ ರಿಲೀಸ್ ದಿನಾಂಕವನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ.

    `ರಾಜಕುಮಾರ` ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಿಸಿದ ಸಂತೋಷ್ ಆನಂದ್ ರಾಮ್ ಅವರೇ `ಯುವರತ್ನ` ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾದಲ್ಲಿ ಪವರ್ ಸ್ಟಾರ್ ಗೆ ಜೋಡಿಯಾಗಿ ಸಯೇಷ ಸೈಗಲ್ ಕಾಣಿಸಿಕೊಳ್ಳಲಿದ್ದು, ಇದರ ಜೊತೆಗೆ ಸೋನು, ಡಾಲಿ ಧನಂಜಯ್, ವಸಿಷ್ಠ ಸಿಂಹ ಸಿನಿಮಾದಲ್ಲಿ ನಟಿಸಲಿದ್ದಾರೆ.

  • ವರಮಹಾಲಕ್ಷ್ಮಿ ಹಬ್ಬಕ್ಕೆ ಅಪ್ಪು ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್

    ವರಮಹಾಲಕ್ಷ್ಮಿ ಹಬ್ಬಕ್ಕೆ ಅಪ್ಪು ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್

    ಬೆಂಗಳೂರು: ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ಸಂತೋಷ್ ಆನಂದ್‍ರಾಮ್ ಕಾಂಬಿನೇಷನ್ ಸಿನಿಮಾ ‘ಯುವರತ್ನ’ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ವೈರಸ್ ಎಂಬ ಮಹಾಮಾರಿಯಿಂದಾಗಿ ಅನಿವಾರ್ಯವಾಗಿ ಮುಂದೂಡಲಾಗಿದೆ.

    ಈ ಮಧ್ಯೆ ನಿರ್ದೇಶಕ ಸಂತೋಷ್ ಅವರು ಟ್ವೀಟ್ ಮಾಡಿ, ಅಭಿಮಾನಿಗಳ ಕೋರಿಕೆಗಾಗಿ “ಯುವರತ್ನ” ಪೋಸ್ಟರ್ ವರಮಹಾಲಕ್ಷ್ಮಿಗೆ ದೊಡ್ಮನೆ ಅಭಿಮಾನಿ ಬಳಗಕ್ಕೆ ಇದು ಸಮರ್ಪಣೆ ಎಂದು ಬರೆದುಕೊಂಡಿದ್ದಾರೆ.

    ಕೊರೊನಾ ಭೀತಿ ಎದುರಾಗದಿದ್ದಲ್ಲಿ ಏಪ್ರಿಲ್ 3ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿತ್ತು. ಸಿನಿಮಾ ಬಿಡುಗಡೆ ಕುರಿತು ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಈ ಹಿಂದೆ ಸ್ಪಷ್ಟನೆ ನೀಡಿದ್ದರು. ಬಹುನಿರೀಕ್ಷಿತ ಯುವರತ್ನ ಸಿನಿಮಾ ಮೇ 21ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ನಮ್ಮ ಪವರ್ ಸ್ಟಾರ್ ಸ್ವಾಗತಿಸಲು ಸಜ್ಜಾಗಿ ಎಂದು ಟ್ವೀಟ್ ಮಾಡಿದ್ದರು. ಆದರೆ ಮತ್ತೆ ಲಾಕ್‍ಡೌನ್ ಆದ ಪರಿಣಾಮ ಮುಂದೂಡಲಾಗಿದ್ದು, ಇನ್ನೂ ರಿಲೀಸ್ ದಿನಾಂಕವನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ.

    ಒಟ್ಟಿನಲ್ಲಿ ಯುವರಚಿತ್ನ ಸಿನಿಮಾ ಬಿಡುಗಡೆ ಕುರಿತು ಭಾರೀ ಕುತೂಹಲ ಮೂಡಿದ್ದು, ಅಭಿಮಾನಿಗಳು ಬಿಡುಗಡೆ ದಿನಾಂಕದ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

  • ಬ್ಯಾನ್ ಟಿಕ್‍ಟಾಕ್ ಅಭಿಯಾನಕ್ಕೆ ನಿಂತ ಚಂದನವನದ ಸ್ಟಾರ್ ನಿರ್ದೇಶಕರು

    ಬ್ಯಾನ್ ಟಿಕ್‍ಟಾಕ್ ಅಭಿಯಾನಕ್ಕೆ ನಿಂತ ಚಂದನವನದ ಸ್ಟಾರ್ ನಿರ್ದೇಶಕರು

    ಬೆಂಗಳೂರು: ಇತ್ತೀಚೆಗೆ ಸಖತ್ ಸದ್ದು ಮಾಡುತ್ತಿರುವ ಟಿಕ್‍ಟಾಕ್ ಆ್ಯಪ್ ಅನ್ನು ಇಂಡಿಯಾದಲ್ಲಿ ಬ್ಯಾನ್ ಮಾಡುವಂತೆ ಟ್ವಿಟ್ಟರ್‍ನಲ್ಲಿ ಅಭಿಯಾನವನ್ನು ಆರಂಭಿಸಿದ್ದಾರೆ.

    ನಮ್ಮ ಯುವ ಪೀಳಿಗೆ ಇತ್ತೀಚೆಗೆ ಜಾಸ್ತಿ ಬಳಕೆ ಮಾಡುತ್ತಿರುವ ಸಾಮಾಜಿಕ ಜಾಲತಾಣದಲ್ಲಿ ಟಿಕ್‍ಟಾಕ್ ಕೂಡ ಒಂದು. ಇದು ಯಾವ ಮಟ್ಟಕ್ಕೆ ಪ್ರಚಲಿತದಲ್ಲಿ ಇದೆ ಎಂದರೆ ಇಲ್ಲಿ ವಿಡಿಯೋವನ್ನು ಮಾಡಲು ಹೋಗಿ ಜನರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಈಗ ಈ ಆ್ಯಪ್ ಅನ್ನು ಬ್ಯಾನ್ ಮಾಡುವಂತೆ ಕೆಲವರು ಒತ್ತಾಯ ಮಾಡುತ್ತಿದ್ದಾರೆ. ಇದರಿಂದ ಮೊದಲಿಗೆ 4.6ರ ರೇಟಿಂಗ್‍ನಲ್ಲಿ ಇದ್ದ ಟಿಕ್‍ಟಾಕ್ ಆ್ಯಪ್ ಈಗ 1.3ಕ್ಕೆ ಇಳಿದಿದೆ.

    ಟಿಕಾಟಾಕ್ ಚೀನಾದ ಆ್ಯಪ್ ಆಗಿದ್ದು, ಸ್ವದೇಶಿ ವಸ್ತುಗಳನ್ನು ಬಳಸಿ ಹಾಗೂ ಚೀನಾದ ವಸ್ತುಗಳನ್ನು ತಿರಸ್ಕರಿಸಬೇಕು ಎಂಬ ನಿಟ್ಟಿನಲ್ಲಿ ಕೆಲವರು ಟಿಕ್‍ಟಾಕ್ ಅನ್ನು ವಿರೋಧ ಮಾಡುತ್ತಿದ್ದರೆ, ಇನ್ನೂ ಕೆಲವರು ಇದರಲ್ಲಿ ವಿಡಿಯೋ ಮಾಡಿ ಜನಪ್ರಿಯತೆ ಪಡೆಯುವ ಗೀಳಿಗೆ ಬಿದ್ದ ಯುವಕ-ಯುವತಿಯರು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ ಎಂದು ವಾದಿಸುತ್ತಿದ್ದಾರೆ. ಈ ಎಲ್ಲ ಕಾರಣದಿಂದ ಟಿಕ್‍ಟಾಕ್ ಬ್ಯಾನ್ ಆಗಬೇಕು ಎಂದು ಅಭಿಯಾನವನ್ನು ಆರಂಭಿಸಿದ್ದಾರೆ.

    ಟಿಕ್‍ಟಾಕ್ ಆ್ಯಪ್ ನಲ್ಲಿ ಕೆಲ ಸೆಲೆಬ್ರಿಟಿಗಳು ವಿಡಿಯೋ ಮಾಡುತ್ತಿದ್ದರೆ, ಈ ಕಡೆ ಕೆಲ ಸೆಲೆಬ್ರಿಟಿಗಳು ಅದನ್ನು ಬ್ಯಾನ್ ಮಾಡುವಂತೆ ಟ್ವೀಟ್ ಮಾಡುತ್ತಿದ್ದಾರೆ. ಈಗ ಸ್ಯಾಂಡಲ್‍ವುಡ್‍ನ ಸ್ಟಾರ್ ನಿರ್ದೇಶಕರಾದ ಸಂತೋಷ್ ಅನಂದ್‍ರಾಮ್, ಪವನ್ ಒಡೆಯರ್ ಮತ್ತು ಎಪಿ ಅರ್ಜೂನ್ ಟಿಕ್‍ಟಾಕ್ ಅನ್ನು ಬ್ಯಾನ್ ಮಾಡಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕೆಲ ಬಾಲಿವುಡ್ ನಟರು ಕೂಡ ಕೈಜೋಡಿಸಿದ್ದು, ಟಿಕ್‍ಟಾಕ್ ಬ್ಯಾನ್ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ.

    ಯುವ ಜನತೆಯನ್ನು ಟಿಕ್‍ಟಾಕ್ ತಪ್ಪು ದಾರಿಗೆ ಎಳೆಯುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅಭಿಪ್ರಾಯಪಟ್ಟಿದ್ದು, ಟಿಕ್‍ಟಾಕ್ ಅನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದರು. ಮನರಂಜನೆಗಾಗಿ ಆರಂಭವಾದ ಟಿಕ್‍ಟಾಕ್ ಇಂದು ಹಿಂಸೆಯನ್ನು ಪ್ರೇರೇಪಿಸುತ್ತಿದೆ. ಮಹಿಳೆಯ ಮೇಲಿನ ಅತ್ಯಾಚಾರ, ಆ್ಯಸಿಡ್ ದಾಳಿಗೆ ಪ್ರೇರಣೆ ನೀಡುವ ವಿಡಿಯೋಗಳು ಟಿಕ್‍ಟಾಕ್‍ನಲ್ಲಿ ಹೆಚ್ಚಾಗುತ್ತಿದೆ ಎಂದು ಬಿಜೆಪಿ ನಾಯಕ ತಾಜೀಂದರ್ ಸಿಂಗ್ ಮಾಡಿರುವ ಟ್ವೀಟ್‍ಗೆ ರೇಖಾ ಶರ್ಮಾ ಪ್ರತಿಕ್ರಿಯೆ ನೀಡಿದ್ದರು.

    ಆ್ಯಸಿಡ್ ದಾಳಿಗೆ ಪ್ರೇರಣೆ ನೀಡುವ ರೀತಿ ಟಿಕ್‍ಟಾಕ್ ವಿಡಿಯೋ ಮಾಡಿ ಹರಿಬಿಡಲಾಗಿದೆ. ಇತ್ತೀಚೆಗೆ ಟಿಕ್‍ಟಾಕ್‍ನಲ್ಲಿ 1.34 ಕೋಟಿ ಹಿಂಬಾಲಕರನ್ನು ಹೊಂದಿದ್ದ ಫೈಜಲ್ ಸಿದ್ದಿಕಿ ಇಂತಹ ವಿಡಿಯೋ ಮಾಡಿದ್ದ. ಇಂತಹ ವಿಡಿಯೋಗಳು ಸಮಾಜದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ವಿಡಿಯೋ ಮಾಡಿ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳಲು ಮಹಾರಾಷ್ಟ್ರ ಡಿಜಿಪಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ರೇಖಾ ಶರ್ಮಾ ಮಾಹಿತಿ ನೀಡಿದ್ದರು.

    ಹಿಂಸೆಗೆ ಪ್ರಚೋದಿಸುವ ವಿಡಿಯೋಗಳನ್ನು ಕೂಡಲೇ ಆ್ಯಪ್‍ನಿಂದ ತೆಗೆದು ಹಾಕುವಂತೆ ಆಗ್ರಹಿಸಿರುವ ಅವರು, ಇಂತಹ ಆಕ್ಷೇಪರ್ಹ ವಿಡಿಯೋಗಳು ಮಾತ್ರವಲ್ಲದೇ ಮಾತ್ರವಲ್ಲದೇ ಟಿಕ್‍ಟಾಕ್ ಯುವ ಜನತೆಯನ್ನು ಅನುತ್ಪಾದಕ ಜೀವನ ಹಾಗೂ ಕೆಲ ಹಿಂಬಾಲಕರನ್ನು ಪಡೆಯವತ್ತ ತಳ್ಳುತ್ತಿದೆ. ಅನುಯಾಯಿಗಳು ಸಿಕ್ಕದಿದ್ದಾಗ ಕೆಲವರು ಸಾವಿಗೂ ಶರಣಾಗುತ್ತಿದ್ದಾರೆ ಎಂದು ರೇಖಾ ಶರ್ಮಾ ಕಳವಳ ವ್ಯಕ್ತಪಡಿಸಿದ್ದರು.

  • ಸ್ಟೇ ಹೋಂ, ಸ್ಟೇ ಫಿಟ್ – ಪವರ್‌ಸ್ಟಾರ್ ಫಿಟ್ನೆಸ್‍ಗೆ ನೆಟ್ಟಿಗರು ಫಿದಾ

    ಸ್ಟೇ ಹೋಂ, ಸ್ಟೇ ಫಿಟ್ – ಪವರ್‌ಸ್ಟಾರ್ ಫಿಟ್ನೆಸ್‍ಗೆ ನೆಟ್ಟಿಗರು ಫಿದಾ

    ಬೆಂಗಳೂರು: ಚಂದನವದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಫಿಟ್ನೆಸ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ನಮ್ಮ ಸ್ಯಾಂಡಲ್‍ವುಡ್‍ನಲ್ಲಿ ಫಿಟ್ನೆಸ್, ಡ್ಯಾನ್ಸ್ ಹಾಗೂ ಫೈಟ್ ಹೀಗೆ ಎಲ್ಲದಕ್ಕೂ ಸೈ ಅನ್ನುವ ನಟರಲ್ಲಿ ಪುನೀತ್ ರಾಜ್‍ಕುಮಾರ್ ಅವರು ಮುಂಚೂಣಿಗೆ ಬರುತ್ತಾರೆ. ವಯಸ್ಸು 45 ಅದರೂ ದೇಹದಲ್ಲಿ ಮೂಳೆಯೇ ಇಲ್ಲ ಎಂಬತೆ ಡ್ಯಾನ್ಸ್ ಮಾಡುವ ಅಪ್ಪು ದೇಹ ದಂಡಿಸುವ ವಿಚಾರದಲ್ಲೂ ಯಾವಾಗಲೂ ಮುಂದೆ ಇರುತ್ತಾರೆ. ಹಾಗೆಯೇ ಲಾಕ್‍ಡೌನ್ ಸಮಯದಲ್ಲಿ ಅಪ್ಪು ಮನೆಯಲ್ಲೇ ಕಸರತ್ತು ಮಡುತ್ತಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟಯ ವೈರಲ್ ಆಗುತ್ತಿದ್ದು, ಅಪ್ಪು ದೇಹದಂಡನೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

    https://twitter.com/SanthoshAnand15/status/1253014574057439232

    ಅಪ್ಪು ಅವರ ಈ ಕಸರತ್ತಿನ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ನಿರ್ದೇಶಕ ಸಂತೋಷ್ ಅನಂದ್‍ರಾಮ್, `ಪವರ್ ಸ್ಟಾರ್` ಎಂಬ ಬಿರುದು ಶಿವಣ್ಣ ಕೊಟ್ಟಿದ್ದಕ್ಕೂ, ಅಭಿಮಾನಿಗಳು ಎದೆಯಲ್ಲಿಟ್ಟುಕೊಂಡು ಹಚ್ಚೆ ಹಾಕಿಸಿಕೊಂಡಿದ್ದಕ್ಕೂ, ಕರ್ನಾಟಕ ಜನತೆಯು ಪ್ರೀತಿಯಿಂದ ಕರೆಯುವುದಕ್ಕೂ ಸಾರ್ಥಕವಾಗಿದೆ. ಪವರ್ ಸ್ಟಾರ್ 45ರ ವಯಸ್ಸಿನಲ್ಲೂ ಕಾಲೇಜು ಯುವಕನ ಪಾತ್ರ ಮಾಡುವಷ್ಟು ಫಿಟ್ ಆಗಿ ಇದ್ದಾರೆ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/B_SJuXJpbFd/

    ಕೇವಲ 17 ಸೆಕೆಂಡ್ ಇರುವ ಪುನೀತ್ ಅವರ ಈ ವಿಡಿಯೋದಲ್ಲಿ ಅಪ್ಪು ಜಿಗಿದು ಬಂದು ಲೆಗ್ ಪಂಚ್ ಜೊತೆಗೆ ಬ್ಯಾಕ್‍ಫ್ಲಿಪ್ ಹೊಡೆದಿದ್ದಾರೆ. ಈಗ ವಿಡಿಯೋ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿದೆ. ಈ ವಿಡಿಯೋವನ್ನು ಅಪ್ಪು ಕೂಡ ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದು, ಸ್ಟೇ ಹೋಂ, ಸ್ಟೇ ಸೇಫ್, ಸ್ಟೇ ಫಿಟ್ ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಪವರ್ ಸ್ಟಾರ್ ಫಿಟ್ನೆಸ್ ನೋಡಿದ ಅವರ ಅಭಿಮಾನಿಗಳು ಪವರ್ ಸ್ಟಾರ್ ಎಂಬ ಬಿರುದು ಇವರಿಗೆ ಮಾತ್ರ ಸೂಟ್ ಆಗುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.

    ಸದ್ಯ ಲಾಕ್‍ಡೌನ್ ನಡುವೆ ಮನೆಯಲ್ಲೇ ಕುಟುಂಬದವರ ಜೊತೆ ಕಾಲಕಳೆಯುತ್ತಿರುವ ಪವರ್ ಸ್ಟಾರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇದ್ದಾರೆ. ಜೊತೆಗೆ ಮನೆಯಲ್ಲೇ ಕುಳಿತು ತಮ್ಮ ಅಭಿಮಾನಿಗಳಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಇದರ ಜೊತೆಗೆ ಕೊರೊನಾ ಸಿಎಂ ಪರಿಹಾರ ನಿಧಿಗೆ ಪುನೀತ್ ಅವರು 50 ಲಕ್ಷ ದೇಣಿಗೆ ಕೂಡ ನೀಡಿದ್ದರು.

    https://www.instagram.com/p/B9sw1Y7pxwc/

    ಕೊರೊನಾ ವಿಚಾರವಾಗಿ ಮಾರ್ಚ್ 17 ರಂದು ಇದ್ದ ಅವರ ಹುಟ್ಟುಹಬ್ಬವನ್ನು ಕೂಡ ಅಪ್ಪು ಅಚರಿಸಿಕೊಂಡಿರಲಿಲ್ಲ. ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದ ಬಗ್ಗೆ ಟ್ವಿಟ್ಟರಿನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದ ಅಪ್ಪು, “ಎಲ್ಲಾ ಸಮಸ್ತ ಅಭಿಮಾನಿ ದೇವರುಗಳಿಗೆ ನಮಸ್ಕಾರ. ಈ ವರ್ಷ ನಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ಯಾರೂ 17 ರಂದು ತಮ್ಮ ತಮ್ಮ ಊರುಗಳಿಂದ ಮನೆಯ ಹತ್ತಿರ ಬರಬೇಡಿ. ನಾನು ಮನೆಯಲ್ಲೂ ಇರುವುದಿಲ್ಲ” ಎಂದು ಮನವಿ ಮಾಡಿಕೊಂಡಿದ್ದರು.

    ಪುನೀತ್ ರಾಜ್‍ಕುಮಾರ್ ಸದ್ಯ ಯುವರತ್ನ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಸಂತೋಷ್ ಅನಂದ್‍ರಾಮ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಪುನೀತ್, ಅಪ್ಪು ಸಿನಿಮಾದ ಬಳಿಕ ಕಾಲೇಜು ಯುವಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್ ಆಗಲೇ ಮುಗಿದಿದ್ದು, ಇನ್ನುಳಿದ ಚಿತ್ರೀಕರಣ ಕೊರೊನಾ ವೈರಸ್ ನಿಂದ ಮುಂದಕ್ಕೆ ಹೋಗಿದೆ.

  • ಹುಟ್ಟುಹಬ್ಬದ ಮುನ್ನವೇ ‘ಯುವರತ್ನ’ನಿಗೆ ಸ್ಪೆಷಲ್ ಗಿಫ್ಟ್

    ಹುಟ್ಟುಹಬ್ಬದ ಮುನ್ನವೇ ‘ಯುವರತ್ನ’ನಿಗೆ ಸ್ಪೆಷಲ್ ಗಿಫ್ಟ್

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಇನ್ನೇನು 1 ದಿನ ಬಾಕಿ ಇದೆ. ಆದರೆ ಜನ್ಮದಿನ ಮುನ್ನವೇ ‘ಯುವರತ್ನ’ ಚಿತ್ರತಂಡ ಅಪ್ಪುಗೆ ಗಿಫ್ಟ್ ಕೊಟ್ಟಿದೆ.

    ಪುನೀತ್ ಹುಟ್ಟುಹಬ್ಬದ ಹಿನ್ನೆಲೆ ಅಭಿಮಾನಿಗಳಲ್ಲಿ ಸಂಭ್ರಮ ಜೋರಾಗಿದೆ. ಈಗಾಗಲೇ ತಮ್ಮ ನೆಚ್ಚಿನ ಹೀರೋಗೆ ಅಭಿನಂದನೆಗಳ ಮಹಾಪೂರವನ್ನೇ ಅಭಿಮಾನಿಗಳು ಹರಿಸಿದ್ದಾರೆ. ಪುನೀತ್ ಸಿನಿಮಾಗಳ ವಿವಿಧ ಪೋಸ್ಟರ್ ಗಳನ್ನು ರೆಡಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಖುಷಿ ಪಡುತ್ತಿದ್ದಾರೆ.

    ಈ ಮಧ್ಯೆ ಪುನೀತ್ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳಿಗೆ ಉಡುಗೊರೆ ನೀಡಲು ಚಿತ್ರರಂಗ ಕೂಡ ಸಜ್ಜಾಗಿದೆ. ಇತ್ತ ‘ಯುವರತ್ನ’ ಚಿತ್ರತಂಡ ಇಂದು ಸಂಜೆ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಅತ್ತ ಅಪ್ಪು ಹುಟ್ಟುಹಬ್ಬದ ದಿನದಂದು ‘ಜೇಮ್ಸ್’ ಚಿತ್ರತಂಡ ಕೂಡ ಮೋಷನ್ ಪೋಸ್ಟರ್ ರಿಲೀಸ್ ಮಾಡಲು ಮುಂದಾಗಿದ್ದು, ಅಭಿಮಾನಿಗಳಿಗೆ ಡಬಲ್ ಖುಷಿ ನೀಡಲು ಸಿದ್ಧತೆ ನಡೆಸಿದೆ.

    ‘ಯುವರತ್ನ’ ಸಿನಿಮಾದ ಎರಡನೆಯ ಟೀಸರ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದ ಚಿತ್ರತಂಡ, ಅದಕ್ಕೂ ಮೊದಲೇ ಪವರ್ ಸ್ಟಾರ್ ಗಾಗಿ ‘ಯುವರತ್ನ’ದ ಪವರ್‌ಫುಲ್ ಸಿಡಿಪಿ (ಕಾಮನ್ ಡಿಸ್‍ಪ್ಲೇ ಪಿಕ್ಚರ್) ಬಿಡುಗಡೆ ಮಾಡಿದೆ. ಈ ಸಿಡಿಪಿಯನ್ನ ಪುನೀತ್ ಅಭಿಮಾನಿಗಳು ತಮ್ಮ ಫ್ಯಾನ್ ಪೇಜ್‍ಗಳಲ್ಲಿ ಶೇರ್ ಮಾಡಿಕೊಂಡು ಖುಷಿ ಪಟ್ಟಿದ್ದಾರೆ.

    ಪುನೀತ್ 18 ವರ್ಷಗಳ ಹಿಂದೆ ಮೊದಲು ನಾಯಕರಾಗಿ ನಟಿಸಿದ್ದ ‘ಅಪ್ಪು’ ಚಿತ್ರದ ಗೆಟಪ್‍ನಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಯುವರತ್ನ ಚಿತ್ರತಂಡ ಮಾಹಿತಿ ನೀಡಿತ್ತು. ಆ ಸಿನಿಮಾವನ್ನು ನೆನಪಿಸುವ ಲುಕ್‍ನಲ್ಲಿಯೇ ಚಿತ್ರತಂಡ ಸಿಡಿಪಿ ಶೇರ್ ಮಾಡಿಕೊಂಡಿದೆ. ಕರ್ನಾಟಕದ ಧ್ವಜದ ಎರಡು ಬಣ್ಣಗಳ ನಡುವೆ ಪುನೀತ್ ಅವರ ವಿವಿಧ ಸಿನಿಮಾಗಳ ಕಟೌಟ್ ಹಾಗೂ ಪೋಸ್ಟರ್ ಚಿತ್ರಗಳನ್ನು ಬಳಸಿ ಸಿಡಿಪಿಯನ್ನ ಚಿತ್ರತಂಡ ರೆಡಿಮಾಡಿದೆ. ಜೊತೆಗೆ ಸಿಡಿಪಿಯಲ್ಲಿ ‘ಹ್ಯಾಪಿ ಬರ್ಥ್ ಡೇ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್’ ಎಂದು ಶುಭ ಹಾರೈಸಲಾಗಿದ್ದು, ಪುನೀತ್‍ಗೆ ಬಾಕ್ಸ್ ಆಫೀಸ್ ಬಾದ್‍ಷಾ ಎಂಬ ಬಿರುದು ನೀಡಿ ಶ್ಲಾಘಿಸಲಾಗಿದೆ.

    ನಿರ್ದೇಶಕ ಸಂತೋಷ್ ಆನಂದರಾಮ್ ಈ ಹೊಸ ಪ್ರೊಫೈಲ್ ಪಿಕ್ಚರ್ ರಿಲೀಸ್ ಮಾಡಿದ್ದಾರೆ. ‘ಯುವರತ್ನ’ ಚಿತ್ರದ ಡೈಲಾಗ್ ಪೋಸ್ಟರ್ ಸೋಮವಾರ ಸಂಜೆ 6.03ಕ್ಕೆ ಬಿಡುಗಡೆಯಾಗಲಿದ್ದು, ಇದು ಪವರ್ ಪ್ಯಾಕ್ಡ್ ಡೈಲಾಗ್ ಟೀಸರ್ ಎಂದು ಚಿತ್ರತಂಡ ತಿಳಿಸಿದೆ. ಅಷ್ಟೇ ಅಲ್ಲದೇ ಇದು ಪವರ್ ಸ್ಟಾರ್ ಅವರ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳಿಗೆ ಡೆಡಿಕೇಟ್ ಮಾಡುತ್ತಿರುವುದಾಗಿ ಹೇಳಿಕೊಂಡಿದೆ.

  • ಮಾಯಾಬಜಾರ್​ನಲ್ಲಿ ಕುಣಿಯಲು ರೆಡಿಯಾದ ಯುವರತ್ನ!

    ಮಾಯಾಬಜಾರ್​ನಲ್ಲಿ ಕುಣಿಯಲು ರೆಡಿಯಾದ ಯುವರತ್ನ!

    ಬೆಂಗಳೂರು: ಸಂತೋಷ್ ಆನಂದ್‍ರಾಮ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕಾಂಬಿನೇಷನ್ನಿನ ಎರಡನೇ ಚಿತ್ರ ಯುವರತ್ನ. ರಾಜಕುಮಾರದಂಥಾ ಸೂಪರ್ ಹಿಟ್ ಸಿನಿಮಾ ಕೊಟ್ಟಿರೋ ಈ ಜೋಡಿಯ ಈ ಎರಡನೇ ಸಿನಿಮಾ ಬಗ್ಗೆ ಸಹಜವಾಗಿಯೇ ಭಾರೀ ನಿರೀಕ್ಷೆಗಳು ಮೂಡಿಕೊಂಡಿವೆ. ಇದೀಗ ಯುವರತ್ನ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರೋ ಪುನೀತ್ ರಾಜ್ ಕುಮಾರ್ ಇದರ ನಡುವೆಯೇ ಬೇರೆ ಸಿನಿಮಾಗಳಿಗೆ ಸಪೋರ್ಟು ಮಾಡೋದು ಸೇರಿದಂತೆ ನಾನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಜೊತೆ ಜೊತೆಗೇ ಮಾಯಾಬಜಾರ್ ಎಂಬ ಚಿತ್ರವನ್ನು ನಿರ್ಮಾಣ ಮಾಡಿ ಅದರಲ್ಲೊಂದು ಅತಿಥಿ ಪಾತ್ರವನ್ನು ನಿರ್ವಹಿಸಲೂ ತಯಾರಾಗಿದ್ದಾರೆ.

    ಪಿಆರ್ ಕೆ ಬ್ಯಾನರ್ ನಡಿಯಲ್ಲಿ ನಿರ್ಮಾಣಗೊಳ್ಳುತ್ತಿರೋ ಎರಡನೇ ಚಿತ್ರ ಮಾಯಾಬಜಾರ್. ಈ ಚಿತ್ರದ ಪ್ರತಿಯೊಂದು ವಿಚಾರದಲ್ಲಿಯೂ ಗಮನ ಹರಿಸಿಯೇ ಪುನೀತ್ ನಿರ್ಮಾಣ ಕಾರ್ಯ ನಡೆಸುತ್ತಿದ್ದಾರೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡುತ್ತಿರೋ ಈ ಚಿತ್ರದಲ್ಲಿ ಬೃಹತ್ ತಾರಾಗಣವೇ ಇದೆ. ರಾಜ್ ಬಿ ಶೆಟ್ಟಿ, ವಸಿಷ್ಟ ಸಿಂಹ, ಪ್ರಕಾಶ್ ರಾಜ್ ಸೇರಿದಂತೆ ಅನೇಕರು ಇದರಲ್ಲಿ ನಟಿಸಿದ್ದಾರೆ. ಈಗಾಗಲೇ ಹೊರಬಿದ್ದಿರೋ ಒಂದಷ್ಟು ವಿವರಗಳಿಂದಾಗಿ ಪಾಸಿಟಿವ್ ಟಾಕ್ ಕ್ರಿಯೇಟ್ ಮಾಡಿರೋ ಈ ಚಿತ್ರದ ಹಾಡೊಂದರಲ್ಲಿ ಪುನೀತ್ ನಟಿಸಲಿದ್ದಾರಂತೆ.

    ಸಮಯ ಸಿಕ್ಕರೂ, ಸಮಯದ ಅಭಾವವಿದ್ದರೂ ಸದಾ ಬೇರೆಯವರ ಚಿತ್ರಗಳಿಗೆ ತಮ್ಮದೇ ರೀತಿಯಲ್ಲಿ ಸಾಥ್ ಕೊಡುವವರು ಪುನೀತ್. ಹಾಗಿದ್ದ ಮೇಲೆ ತಾವೇ ನಿರ್ಮಾಣ ಮಾಡುತ್ತಿರೋ ಈ ಚಿತ್ರದಲ್ಲಿ ಪುನೀತ್ ಅತಿಥಿ ಪಾತ್ರದಲ್ಲಿ ನಟಿಸುತ್ತಿರೋದು ಅಚ್ಚರಿಯ ವಿಚಾರವೇನಲ್ಲ. ಆದರೆ ಈ ಹಾಡನ್ನು ಎಲ್ಲರೂ ಬೆರಗಾಗುವಂತೆ ರೂಪಿಸುವ ಸಲುವಾಗಿ ಚಿತ್ರತಂಡ ಶ್ರಮ ವಹಿಸುತ್ತಿದೆ. ಈ ವಿಶೇಷವಾದ ಹಾಡಿಗೆ ನೃತ್ಯ ನಿದೇಶನ ಮಾಡೋ ಜವಾಬ್ದಾರಿಯನ್ನು ಎ ಹರ್ಷ ವಹಿಸಿಕೊಂಡಿದ್ದಾರೆ. ಇಷ್ಟರಲ್ಲಿಯೇ ಪುನೀತ್ ಯುವರತ್ನ ಚಿತ್ರೀಕರಣದ ನಡುವೆ ಬಿಡುವು ಮಾಡಿಕೊಂಡು ಈ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ.