ಬೆಂಗಳೂರಿನ ಸಲೂನ್ಶಾಪ್ವೊಂದರಲ್ಲಿ ಬ್ಯೂಟಿಷಿಯನ್ (Beautician) ಆಗಿ ಕೆಲಸ ಮಾಡುತ್ತಿದ್ದ ಹುಡುಗಿಯೊಬ್ಬಳಿಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಮೋಸ (cheating) ಮಾಡಿರುವ ಘಟನೆ ನಡೆದಿದೆ. ಸಿನಿಮಾದಲ್ಲಿಅವಕಾಶಕೊಡಿಸ್ತೀನಿಅಂತಾಪರಿಚಯ ಮಾಡಿಕೊಂಡಿದ್ದ ಸಹ ನಟನೊಬ್ಬ ಲೈಂಗಿಕವಾಗಿಯೂ ಆ ಹುಡುಗಿಯನ್ನು ಬಳಸಿಕೊಂಡಿದ್ದಾನೆ ಎಂದು ಆ ಹುಡುಗಿ ದೂರು ನೀಡಿದ್ದಾಳೆ.
ಕನ್ನಡಹಾಗೂತಮಿಳುಸಿನಿಮಾದಲ್ಲಿ ಸಣ್ಣಪುಟ್ಟಪಾತ್ರಮಾಡಿಕೊಂಡಿದ್ದ ಸಹನಟ ಸಂತೋಷ್ (Santosh), ಆ ಹುಡುಗಿಗೆ ಪ್ರೀತಿಯ ನಾಟಕವಾಡಿ, ಚಿತ್ರದಲ್ಲಿ ನಾಯಕಿಯನ್ನಾಗಿ ಮಾಡುತ್ತೇನೆ ಎಂಧು ನಂಬಿಸಿ, ಲೈಂಗಿಕವಾಗಿಬಳಸಿಕೊಂಡುಕೈಕೊಟ್ಟುಪರಾರಿ ಆಗಿದ್ದಾನೆ ಎಂದು ಹುಡುಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಆ ಹುಡುಗನ ಸಹವಾಸಬೇಡಅಂತಾಯುವತಿ ಸುಮ್ಮನಿದ್ರುಆಗಾಗಮನೆಬಳಿಬಂದುತನ್ನಜೊತೆಬರುವಂತೆಕಾಟ ಕೊಡುತ್ತಿದ್ದ ಹಾಗೂ ಬರದಿದ್ದರೇರಸ್ತೆರಸ್ತೆಯಲ್ಲಿಹೊಡೆತಿದ್ದಎಂದೂ ದೂರಿನಲ್ಲಿ ಹುಡುಗಿ ಉಲ್ಲೇಖ ಮಾಡಿದ್ದಾಳೆ. ಅವನ ಕಾಟಕ್ಕೆ ಮನನೊಂದುಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದಾಳೆ. ಠಾಣೆಎದುರೇ ಆ ಹುಡುಗಹಲ್ಲೆಮಾಡಿದರೂಕಣ್ಣುಕಾಣದೆಕುರುಡರಂತೆಪೊಲೀಸರು ವರ್ತನೆ ಮಾಡಿದ್ದಾರೆ ಎಂದು ಹುಡುಗಿ ಆರೋಪ ಮಾಡಿದ್ದಾಳೆ.
ಕಳೆದಆರುತಿಂಗಳಿಂದನ್ಯಾಯಕ್ಕಾಗಿಅಲೆದಾಟ ಮಾಡುತ್ತಿರುವೆ. ಫೆಬ್ರವರಿ 15 ರಂದು ಎರಡನೆಬಾರಿಗೆಎಫ್ಐಆರ್ದಾಖಲಿಸಿದ್ದೇನೆ. ಆರುತಿಂಗಳ ಹಿಂದೆ ಒಂದುಎಫ್ಐಆರ್ದಾಖಲಾಗಿತ್ತು ಎಂದು ಹುಡುಗಿ ಆರೋಪಿಸಿದ್ದಾರೆ.
ಕಳೆದ ಒಂದು ವಾರದಿಂದ ಉಸಿರೆ ಸಿನಿಮಾದ ಚಿತ್ರೀಕರಣ ಮಡಿಕೇರಿ ಸುತ್ತಮುತ್ತ ನಡೆಯುತ್ತಿದೆ. ಚಿತ್ರೀಕರಣ ನಡೆಸುತ್ತಿದ್ದ ಚಿತ್ರತಂಡ ಇಂದು ಮಕ್ಕಂಧೂರು ಬಳಿ ನಾಯಕ ಸಂತೋಷ್ (Santosh) ಮತ್ತು ನಾಯಕಿ ಅಪೂರ್ವ (Apoorva) ಬೈಕ್ ಓಡಿಸುವ ದೃಶ್ಯ ಚಿತ್ರಿಸುವ ವೇಳೆ ಆಯಾ ತಪ್ಪಿ ಜಾರಿ ಬಿದ್ದಿದ್ದಾರೆ. ಪರಿಣಾಮ ನಾಯಕ ಮತ್ತು ನಾಯಕಿ ಇಬ್ಬರ ಕಾಲುಗಳಿಗೆ ಪೆಟ್ಟಾಗಿದೆ.
ಬೈಕ್ ಅಪಘಾತವಾಗಿ ಇಬ್ಬರೂ ನೆಲಕ್ಕೆ ಉರುಳಿದ್ದಾರೆ. ಕೂಡಲೇ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹತ್ತಿರದ ಮಾದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ ಮತ್ತು ಇಂದಿನ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಪನೆಮ್ ಪ್ರಭಾಕರ್ ತಿಳಿಸಿದ್ದಾರೆ.
ಆರ್.ಎಸ್.ಪಿ. ಪ್ರೊಡಕ್ಷನ್ಸ್ ಮೂಲಕ ಲಕ್ಷ್ಮಿ ಹರೀಶ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ನಟ ತಿಲಕ್, ಪ್ರಿಯಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಬ್ಬ ಬೇಜವಾಬ್ದಾರಿ ಪೊಲೀಸ್ ಅಧಿಕಾರಿ, ತನ್ನ ಹೆಂಡತಿಗೆ ಅನಾಮಿಕ ವ್ಯಕ್ತಿಯಿಂದ ಪ್ರಾಣಕ್ಕೆ ಆಪತ್ತು ಬಂದಾಗ ಆತ ಪತ್ನಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ, ತನ್ನ ತಾಯಿಯನ್ನು ಕೊಂದವರ ಮೇಲೆ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾನೆ ಎಂಬುದನ್ನು ಉಸಿರು ಚಿತ್ರದ ಕಥೆಯಾಗಿದೆ.
ಶಿವಮೊಗ್ಗ: ಈ ಪ್ರಕರಣದಿಂದ ಮುಕ್ತನಾಗಿ ಬರುತ್ತೇನೆ ಎಂದು ಮೊದಲೇ ಗೊತ್ತಿತ್ತು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಂತೋಷ ವ್ಯಕ್ತಪಡಿಸಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ಸಿಕ್ಕ ಹಿನ್ನೆಲೆ ಅವರ ನಿವಾಸದಲ್ಲಿ ಸಂತಸ ಮನೆ ಮಾಡಿದೆ. ಈ ವೇಳೆ ಪತ್ನಿ, ಪುತ್ರನಿಗೆ ಸಿಹಿ ತಿನಿಸಿ ಸಂತೋಷ ಹಂಚಿಕೊಂಡ ಈಶ್ವರಪ್ಪ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಾನು ಮೊದಲೇ ಹೇಳಿದ್ದೆ. ಈ ಪ್ರಕರಣದಿಂದ ಮುಕ್ತನಾಗಿ ಬರುತ್ತೇನೆ ಎಂದು ಮೊದಲೇ ಗೊತ್ತಿತ್ತು. ಮನೆ ದೇವರಾದ ತಾಯಿ ಚೌಡೇಶ್ವರಿ ಆಶೀರ್ವಾದದಿಂದ ನಾನು ಗೆದ್ದು ಬರುತ್ತೇನೆ ಎಂದಿದ್ದೆ. ಇದೀಗ ಹಾಗೆ ಆಗಿದೆ ಎಂದರು. ಇದನ್ನೂ ಓದಿ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ – ಕೋರ್ಟ್‌ಗೆ ಬಿ ರಿಪೋರ್ಟ್ ಸಲ್ಲಿಕೆ; ಈಶ್ವರಪ್ಪಗೆ ಕ್ಲೀನ್ ಚಿಟ್
ದೇವರು ನನ್ನ ಪರವಾಗಿರುವುದಕ್ಕೆ ಸಂತೋಷವಾಗಿದೆ. ನನ್ನಿಂದಾಗಿ ನನ್ನ ಪಕ್ಷದ ಹಿರಿಯರು ಮತ್ತು ಕಾರ್ಯಕರ್ತರಿಗೆ ಮುಜುಗರವಾಗಿತ್ತಲ್ಲ ಎಂಬ ನೋವಿತ್ತು. ಏನೂ ತಪ್ಪು ಮಾಡದ ನನ್ನ ಮೇಲೆ ಬಂದ ಆರೋಪದಲ್ಲಿ ನನ್ನ ಪಾತ್ರವಿಲ್ಲ ಎಂದು ಮೊದಲೇ ಹೇಳಿದ್ದೆ. ಸಂತೋಷ್ ಪಾಟೀಲ್ ಪತ್ನಿಗೆ ಯಾರೋ ಪ್ರಚೋದಿಸಿ ರಾಜ್ಯಪಾಲರಿಗೆ ದೂರು ಕೊಡಿಸಿದ್ದಾರೆ ಎಂದು ಆರೋಪಿಸಿದರು.
ಮಠಾಧೀಶರು ಕರೆ ಮಾಡಿ ಶುಭಾ ಕೋರಿದ್ರು
ಪಕ್ಷ ನೀಡುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ನಾನು ಯಾವುದೇ ಹುದ್ದೆ ಬಯಸಿಲ್ಲ. ಬಯಸುವುದೂ ಇಲ್ಲ. ಪಕ್ಷದ ನಾಯಕರ ತೀರ್ಮಾನಕ್ಕೆ ನಾನು ಬದ್ಧ. ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಪಕ್ಷದ ಹಿರಿಯರ, ಮಠಾಧೀಶರ ಆಶೀರ್ವಾದ ನನಗೆ ಇದೆ. ಅನೇಕ ಹಿರಿಯರು ಮಠಾಧೀಶರು ನನಗೆ ಕರೆ ಮಾಡಿ ಶುಭಾಶಯ ಕೋರುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಪತ್ನಿಗೆ ‘ಐ ಲೈಕ್ ಯೂ’ ಎಂದು ಕಾಮೆಂಟ್ ಮಾಡಿದವನ ಮೇಲೆ ಪತಿ ಫುಲ್ ಗರಂ – ಯುವಕನಿಗೆ ಬಿತ್ತು ಗೂಸಾ
ಡಿಕೆಶಿ ಕ್ಷಮೆ ಕೋರಬೇಕು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದ ಅವರು, ಡಿಕೆಶಿ ಮೊದಲು ರಾಜ್ಯದ ಜನರ ಕ್ಷಮೆ ಕೋರಬೇಕು. ಈ ಹಿಂದೆ ವ್ಯಕ್ತಿ ಪೂಜೆ ಮಾಡಲ್ಲ, ಜಾತಿವಾದ ಮಾಡಲ್ಲ. ಎಂದಿದ್ದರು. ಆದರೆ, ಈಗ ಮುಖ್ಯಮಂತ್ರಿ ಆಗಲು ನನ್ನ ಹಿಂದೆ ಒಕ್ಕಲಿಗರು ನಿಲ್ಲಲಿ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಈಗಾಗಲೇ ಜಾತಿವಾದಿ ಎಂದು ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಈಗ ಒಕ್ಕಲಿಗರನ್ನು ಎಳೆದು ತಂದು ಡಿ.ಕೆ.ಶಿವಕುಮಾರ್ ತಾನು ಕೂಡ ಜಾತಿವಾದಿ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅವರು ಜಾತಿವಾದಿಗಳು ಎಂದು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಒಕ್ಕಲಿಗರು ರಾಷ್ಟ್ರೀಯವಾದಿಗಳು ಎಂದು ಬಿಜೆಪಿ ಜೊತೆ ನಿಂತಿದ್ದಾರೆ. ಜಾತಿ, ಧರ್ಮ ವಿಚಾರ ನೋಡದೇ ನಮ್ಮ ಸರ್ಕಾರ ಎಲ್ಲವೂ ಮಾಡಿದೆ. ಎಸ್.ಎಂ.ಕೃಷ್ಣ ಬಳಿಕ ನನಗೆ ಅವಕಾಶ ಸಿಕ್ಕಿದೆ ಎಂದು ಹೇಳಿದ್ದು ಕೂಡ ತಪ್ಪು. ಇದನ್ನು ಒಕ್ಕಲಿಗರು ಕೂಡ ಒಪ್ಪುವುದಿಲ್ಲ. ಕೆಂಗಲ್ ಹನುಮಂತಯ್ಯ, ಎಸ್.ಎಂ.ಕೃಷ್ಣ ಅವರಂತಹ ವ್ಯಕ್ತಿಗಳ ರಕ್ತ ಹರಿಯುತ್ತಿರುವ ಸಮುದಾಯ ಅದು. ಜನರ ಜೊತೆಗೆ ಸ್ವತಃ ಕಾಂಗ್ರೆಸ್ ಅವರೇ ಈ ಮಾತನ್ನು ಒಪ್ಪುವುದಿಲ್ಲ ಎಂದು ಟೀಕಿಸಿದರು.
ಜಾತಿ ಧರ್ಮ ನೋಡದೇ, ಒಕ್ಕಲಿಗರು ರಾಷ್ಟ್ರೀಯತೆಗೆ ಒತ್ತು ನೀಡಿದ್ದಾರೆ. ಜಾತಿ ಅಧಾರದಲ್ಲಿ ಮತ ಕೇಳುತ್ತಾರೆ ನಾಚಿಕೆಯಾಗಬೇಕು. ಹೀಗಾಗಿ ಡಿಕೆಶಿ ಒಕ್ಕಲಿಗರ ಕ್ಷಮೆ ಕೇಳಬೇಕು. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ನಾನ್ಯಾವುದೇ ಕಾರಣಕ್ಕೂ ಜಾತಿ ವಿಚಾರ ತರಲ್ಲ ಎಂದು ಹೇಳಿದ್ದ ಅವರು ನನಗೆ ಮುಖ್ಯಮಂತ್ರಿ ಮಾಡಿ ಎಂದಿದ್ದಾರೆ. ಜಾತಿ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ಅವರ ಪಕ್ಷದ ನಾಯಕರು ಕೂಡ ಅದನ್ನು ಖಂಡನೆ ಮಾಡಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ವಿರುದ್ಧವೂ ಮಾತನಾಡಿದ ಅವರು, ಹೈಲೈಟ್ ಆಗಿ ಮುಖ್ಯಮಂತ್ರಿ ಆಗಿದ್ದವರೇ ಈಗ ಮನೆಗೆ ಹೋದ್ರು. ಜನರು ಇವರನ್ನು ಚಾಮುಂಡೇಶ್ವರಿಯಲ್ಲಿ ಸೋಲಿಸಿಲ್ವಾ? ಮುಖ್ಯಮಂತ್ರಿ ಸ್ಥಾನ ಕಿತ್ತು ಬಿಸಾಕಿಲ್ವಾ? ಇನ್ನೂ ಯಾವತ್ತೋ ಚುನಾವಣೆ ಇದೆ. ಇನ್ನೂ ಹೆಣ್ಣೆ ಹುಡುಕಿಲ್ಲ – ನಿಶ್ಚಿತಾರ್ಥ ಆಗಿಲ್ಲ. ಇನ್ನೂ ಮದುವೆನೇ ಆಗಿಲ್ಲ. ಆಗಲೇ ಮುಖ್ಯಮಂತ್ರಿ ನಾವು ಎಂದು ಇಬ್ಬರು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಎರಡೂ ಜಾತಿಯವರು ಒಪ್ಪಲ್ಲ
ಮಗುವಿಗೆ ಇಬ್ಬಿಬ್ರು ಅಪ್ಪ ಆಗಲು ಸಾಧ್ಯವೇನು? ಕಾಂಗ್ರೆಸ್‍ನಲ್ಲಿ ಇವರಿಬ್ಬರಿಗೆ ಉಗಿಯೋರು ಇಲ್ವಾ? ಛೀಮಾರಿ ಹಾಕುವವರು ಇಲ್ವಾ? ಇನ್ಯಾವೊತ್ತೋ ಚುನಾವಣೆ, ಈ ರಾಜ್ಯದ ಜನ ಯಾವತ್ತೋ ಅವರನ್ನು ಸೋಲಿಸಿಯಾಗಿದೆ. ಈಗಲೇ ಜಾತಿ ಮುಂದಿಟ್ಟುಕೊಂಡು ಇವರಿಬ್ಬರು ಸಿಎಂ ಆಗಲು ಹೊರಟಿದ್ದಾರಲ್ಲ. ಕುರುಬರು, ಒಕ್ಕಲಿಗರು ಇವರಿಬ್ಬರಿಗೂ ಒಪ್ಪಿಲ್ಲ. ಯಾವುದೇ ಕಾಲಕ್ಕೂ ಇವರಿಗೆ ಎರಡೂ ಜಾತಿಯವರು ಒಪ್ಪಲ್ಲ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಖರೀದಿ ಹೆಸರಿನಲ್ಲಿ ಲಕ್ಷಾಂತರ ರೂ. ಮೌಲ್ಯದ 26 ಸೀರೆ ಕಳ್ಳತನ ಮಾಡಿದ್ದ ಖತರ್ನಾಕ್ ಗ್ಯಾಂಗ್
ಓಟ್ ಬರುತ್ತೆ ಎಂಬ ಭ್ರಮೆ
ರಾಜ್ಯದ ಜನ ಇವರಿಗೆ ಜಾತಿವಾದಿ ಎಂದು ಮತ್ತೊಮ್ಮೆ ಮನೆಗೆ ಕಳುಹಿಸುತ್ತಾರೆ. ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ನೂರೈವತ್ತಕ್ಕೂ ಹೆಚ್ಚು ಸ್ಥಾನ ನೀಡಿ ಬಿಜೆಪಿಯನ್ನೇ ಅಧಿಕಾರಕ್ಕೆ ತರ್ತಾರೆ. ಬಿಜೆಪಿಯವರೇ ಕರ್ನಾಟಕದ ಮುಖ್ಯಮಂತ್ರಿ ಆಗ್ತಾರೆ. ಬಾದಮಿಯಲ್ಲಿಯೂ ನಿಲ್ಲಲ್ಲ, ಚಾಮುಂಡೇಶ್ವರಿಯಲ್ಲೂ ನಿಲ್ಲಲ್ಲ. ಅವರಿಗೆ ಅಲ್ಲಿ ನಿಂತರೆ ಸೋಲ್ತಿನಿ ಅಂತಾ ಗೊತ್ತು. ಅವರು ನಿಲ್ಲೋದೇ ಚಾಮರಾಜಪೇಟೆಯಲ್ಲಿ, ಜಮೀರ್ ಅಹಮದ್ ಹತ್ರಾನೆ. ಅಲ್ಲಿ ಮುಸಲ್ಮಾನರು ಅತಿ ಹೆಚ್ಚಿದ್ದಾರೆ. ಅಲ್ಲಿ ಓಟ್ ಬರುತ್ತೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಗೆ ಕೇರಳಕ್ಕೆ ಹೋದರೋ ಹಾಗೇ ಇವರು ಚಾಮರಾಜಪೇಟೆಗೆ ಹೋಗ್ತಾರೆ. ನೋಡೊಣ ಅಲ್ಲಿ ಏನಾಗುತ್ತೆ ಅಂತಾ ಎಂದು ಹೇಳಿದರು.
Live Tv
[brid partner=56869869 player=32851 video=960834 autoplay=true]
ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಎಲ್ಲಾ ರೀತಿಯಿಂದಲೂ ತನಿಖೆ ನಡೆಸಲು ತಿಳಿಸಿದ್ದಾರೆ. ಕಮೀಷನ್ ಕೊಟ್ಟಿದ್ದು ಯಾರು, ತೆಗೆದುಕೊಂಡಿದ್ದು ಯಾರು ಎಂಬುದು ಸಾಬೀತು ಆಗಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವ, ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಹೋಟೆಲ್‌ಗೆ ಪೊಲೀಸರು ಭೇಟಿ ನೀಡಿದ್ದಾರೆ. ಎಫ್‌ಎಸ್‌ಎಲ್ ತಂಡ ಹಾಗೂ ಸಂತೋಷ್ ಪಾಟೀಲ್ ಕುಟುಂಬಸ್ಥರು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಹೋಟೆಲ್‌ನ ಕೊಠಡಿ ತೆಗೆಯುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆಗೆ ಒತ್ತಾಯ- ಬಿಎಸ್‌ವೈಗೆ ಫೋನ್ ಕರೆ ಮಾಡಿ ಬೊಮ್ಮಾಯಿ ಮಾತುಕತೆ
ನಾನು ಕೂಡಾ ಘಟನೆ ಬಳಿಕ ಉಡುಪಿಯ ಎಸ್‌ಪಿ ಜೊತೆ ಮಾತನಾಡಿದ್ದೇನೆ. ಘಟನೆ ಕುರಿತು ಎಲ್ಲಾ ಆ್ಯಂಗಲ್‌ನಲ್ಲೂ ತನಿಖೆ ನಡೆಸುವಂತೆ ಸೂಚಿಸಿದ್ದೇನೆ. ಕಾಂಗ್ರೆಸ್‌ನವರು ಏನೋ ಹೇಳುತ್ತಾರೆ ಎಂದು ಯಾರನ್ನೂ ಅರೆಸ್ಟ್ ಮಾಡುವುದು ಅಸಾಧ್ಯ. ತನಿಖೆ ಬಳಿಕ ಪೊಲೀಸರು ತಮ್ಮ ಕಾರ್ಯ ಮಾಡುತ್ತಾರೆ. ಸಂತೋಷ್ ಡೆತ್ ನೋಟ್ ಬರೆದಿಟ್ಟಿರುವ ಬಗ್ಗೆ ನನಗೆ ತಿಳಿದಿಲ್ಲ. ಅವರು ಸೋಷಿಯಲ್ ಮೀಡಿಯಾದಲ್ಲಿ ಏನೋ ಮೆಸೇಜ್ ಹಾಕಿದ್ದರಂತೆ. ನನ್ನ ಜೊತೆ ಇಬ್ಬರು ಸ್ನೇಹಿತರನ್ನು ಕರೆದುಕೊಂಡು ಬಂದಿದ್ದೇನೆ, ಅವರಿಗೂ ನನ್ನ ಸಾವಿಗೂ ಸಂಬಂಧವಿಲ್ಲ ಎಂದು ಬರೆದಿರುವಬಗ್ಗೆ ಕೇಳಿದ್ದೇನೆ. ಆ ದೃಷ್ಟಿಯಿಂದಲೂ ತನಿಖೆ ನಡೆಯುತ್ತದೆ ಎಂದರು. ಇದನ್ನೂ ಓದಿ: ಸಾಲ ಸೋಲ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು: ಈಶ್ವರಪ್ಪ ಪರ ಯತ್ನಾಳ್ ಬ್ಯಾಟಿಂಗ್
ಈ ಘಟನೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರೋ ಅಥವಾ ಒಳ್ಳೆ ಹೆಸರು ಬರುತ್ತದೋ ಎಂಬುದು ತನಿಖೆಯಿಂದ ಗೊತ್ತಾಗುತ್ತದೆ. ಯಾರೋ ಆರೋಪ ಮಾಡಿದ ಕೂಡಲೆ ಸಾಬೀತು ಆಗುವುದಿಲ್ಲ. ಕಮಿಷನ್ ಯಾರು ಕೊಟ್ಟಿದ್ದು, ಯಾರು ತೆಗೆದುಕೊಂಡಿದ್ದು ಎಂಬುದು ಮೊದಲು ಸಾಬೀತು ಆಗಬೇಕು. ಇದೆಲ್ಲಾ ಸಾಬೀತು ಆದರೆ ಅವರ ಮೇಲೆ ಕ್ರಮ ಕೈಗೊಳ್ಳಬಹುದು ಎಂದರು.
ವಿಜಯಪುರ: ಸಂತೋಷ್ ಆತ್ಮಹತ್ಯೆಗೆ ಯಾರ ಸಂಬಂಧವೂ ಇಲ್ಲ. ಆತ್ಮಹತ್ಯೆಗೆ ಅನೇಕ ಕಾರಣಗಳು ಇರುತ್ತವೆ. ಅವರ ಜೀವನದಲ್ಲಿ ಜಿಗುಪ್ಸೆ ಆಗಿರಬಹುದು ಹೀಗಾಗಿ ಸಂತೋಷ್ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈಶ್ವರಪ್ಪ ಪರವಾಗಿ ಮಾತನಾಡಿದರು.
ಸಾಲ ಸೋಲ ಹೆಚ್ಚಾಗಿ ಅಥವಾ ಕುಟುಂಬದ ಸಮಸ್ಯೆಯಿಂದಾಗಿ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿರಬಹುದು. ತಮ್ಮ ವಯಕ್ತಿಕ ವಿಚಾರವನ್ನು ತಂದು, ವ್ಯಕ್ತಿ ಹಾಗೂ ಪಕ್ಷದ ವಿರುದ್ಧ ಮಾಡುವುದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: ನನ್ನ ಗಂಡನ ಸಾವಿಗೆ ಈಶ್ವರಪ್ಪನೇ ಕಾರಣ: ಸಂತೋಷ್ ಪತ್ನಿ ಕಣ್ಣೀರು
ಶೇ.40 ಲಂಚಕ್ಕಾಗಿ ಆತ್ಮಹತ್ಯೆ ಎನ್ನುವುದು ಸಂಪೂರ್ಣ ಸುಳ್ಳು. ಈಶ್ವರಪ್ಪ ಶೇ.40 ಲಂಚ ತೆಗೆದುಕೊಳ್ಳುತ್ತಾರೆ ಎನ್ನುವುದಾದರೆ ಅದಕ್ಕೆ ಸಾಕ್ಷಿ ಏನಿದೆ? ಇದು ಹೇಗೆ ಸಾಧ್ಯ? ಈ ಬಗ್ಗೆ ತನಿಖೆಯಾಗಲಿ. ಕೆಲವರು ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿ ಹಣ ಕೇಳುವವರೂ ಇರುತ್ತಾರೆ ಎಂದು ತಿಳಿಸಿದರು.
ಈಶ್ವರಪ್ಪ ಇಂತಹ ಕೀಳುಮಟ್ಟಕ್ಕೆ ಹೋಗುವವರು ಅಲ್ಲ. ಈಶ್ವರಪ್ಪ ವಿರುದ್ದ ಬರೆದಿಟ್ಟು, ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ಎಲ್ಲರೂ ಹಾಗೇ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರ ಅಲ್ಲ. ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂದರು. ಇದನ್ನೂ ಓದಿ: ಎಫ್‌ಎಸ್‌ಎಲ್ ವರದಿಯ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ: ಉಡುಪಿ ಎಸ್‌ಪಿ
ಕಾಂಗ್ರೆಸ್‌ನವರು ಇಂಥವನೊಬ್ಬನನ್ನು ರೆಡಿ ಮಾಡ್ತಾರೆ. ಅವನಿಂದ ಹೇಳಿಕೆ ಕೊಡಿಸುತ್ತಾರೆ. ಇಂತಹ ಘಟನೆಗಳು ರಾಜಕಾರಣದಲ್ಲಿ ಬಹಳ ನಡೆಯುತ್ತವೆ. ಪಂಚರಾಜ್ಯ ಚುನಾವಣೆಯಲ್ಲಿ ಸೋಲುಂಡ ಕಾಂಗ್ರೆಸ್ ಹತಾಷೆಗೊಂಡು ಹೀಗೆಲ್ಲಾ ಮಾಡುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
ಬೆಳಗಾವಿ: ನನ್ನ ಗಂಡ ಯಾವಾಗಲೂ ಬಿಜೆಪಿ ಕಾರ್ಯಕರ್ತ ಎಂದು ಎಲ್ಲರ ಬಳಿ ಹೇಳಿಕೊಳ್ಳುತ್ತಿದ್ದರು. ಆದರೆ ಇಂದು ಅದೇ ಬಿಜೆಪಿ ನನ್ನ ಗಂಡನನ್ನು ಸಮಾಧಿ ಮಾಡಿಬಿಟ್ಟಿತು ಎಂದು ಮೃತ ಗುತ್ತಿಗೆದಾರ ಸಂತೋಷ್ ಪತ್ನಿ ಜಯಶ್ರೀ ಕಣ್ಣೀರು ಹಾಕಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಸಂತೋಷ್ ಪತ್ನಿ, ನನ್ನ ಪತಿ ಈಶ್ವರಪ್ಪ ಭರವಸೆ ಮೇಲೆಯೇ ಕೆಲಸ ಮಾಡುತ್ತಿದ್ದರು. ಕಳೆದ ವಾರದಿಂದ ಅವರು ಕಾಮಗಾರಿಯ ಬಿಲ್ ಪಾಸ್ ಮಾಡುತ್ತಿಲ್ಲ. ಶೇ.40 ರಷ್ಟು ಲಂಚ ಕೊಟ್ಟರೆ ಮಾತ್ರವೇ ಬಿಲ್ ಪಾಸ್ ಮಾಡುತ್ತೇನೆ ಎಂದಿದ್ದರು. ಈ ವಿಚಾರವಾಗಿ ಈಶ್ವರಪ್ಪನ ಬಳಿ ಮಾತನಾಡಲು ಹೋದಾಗ ಬೆಳಗ್ಗೆ ಬನ್ನಿ, ಸಂಜೆ ಬನ್ನಿ ಎಂದು ಹೇಳಿ ಆಟ ಆಡಿಸುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಎಫ್‌ಎಸ್‌ಎಲ್ ವರದಿಯ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ: ಉಡುಪಿ ಎಸ್‌ಪಿ
ಬಿಜೆಪಿ ಸರ್ಕಾರಕ್ಕಾಗಿ ಕಷ್ಟ ಪಟ್ಟು ನನ್ನ ಪತಿ ಕೆಲಸ ಮಾಡುತ್ತಿದ್ದರು. ಕೆಲಸದ ಬರದಲ್ಲಿ ದಿನಕ್ಕೆ ಕೇವಲ ಒಂದೇ ಬಾರಿ ಊಟ ಮಾಡುತ್ತಿದ್ದರು. ಬಿಜೆಪಿಗಾಗಿ ನಿಯತ್ತಿನಲ್ಲಿ ಕೆಲಸ ಮಾಡುತ್ತಿದ್ದ ನನ್ನ ಪತಿಯನ್ನು ಅವರು ಈತ ಬಿಜೆಪಿ ಕಾರ್ಯಕರ್ತನೇ ಅಲ್ಲ. ಸಂತೋಷ್ ಯಾರು ಎಂಬುದೇ ಗೊತ್ತಿಲ್ಲ ಎಂದಿದ್ದಾರೆ. ಯಾರು ಎಂಬುದೇ ಗೊತ್ತಿಲ್ಲ ಎಂದಾದರೆ ಫೋಟೋದಲ್ಲಿ ಹೇಗೆ ತಾನೆ ಕಾಣಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿ ಆಕ್ರೋಶ ಹೊರ ಹಾಕಿದರು.
ನನ್ನ ಪತಿ ಸಾವಿನ ಬಗ್ಗೆ ನನಗೆ ಗೊತ್ತಾಗಿದ್ದು, ಸ್ನೇಹಿತರ ಹಾಗೂ ಕುಟುಂಬದವರ ಫೋನ್ ಬಂದಾಗ. ತಕ್ಷಣ ಟಿವಿ ನೋಡಿದಾಗ ಅವರು ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿಯಿತು. ನಿನ್ನೆ ರಾತ್ರಿ ಕೊನೆ ಬಾರಿ ಅವರು ಕಾಲ್ ಮಾಡಿದ್ದರು. ಎಂದಿನಂತೆ ಅವರು ಖಿನ್ನತೆಯಲ್ಲಿಯೇ ಇದ್ದರು. ಕಳೆದ 1 ತಿಂಗಳಿನಿಂದಲೂ ಅವರು ಖಿನ್ನತೆಯಲ್ಲಿದ್ದರು ಎಂದು ಕಂಬನಿ ಮಿಡಿದರು. ಇದನ್ನೂ ಓದಿ: ವರ್ಕ್ ಆರ್ಡರ್ ಇಲ್ಲದೇ 4 ಕೋಟಿ ಕಾಮಗಾರಿ ಮಾಡಿದ್ದ ಸಂತೋಷ್ – ಆತ್ಮಹತ್ಯೆಗೆ ಕಾರಣ ಏನು?
ನನ್ನ ಪತಿ ಸಾವಿಗೆ ಈಶ್ವರಪ್ಪ ಅವರೇ ಕಾರಣ. ಇನ್ನೂ ಎಷ್ಟು ಗುತ್ತಿಗೆದಾರರ ಜೀವನ ಇದೇ ರೀತಿಯಲ್ಲಿ ಅಂತ್ಯವಾಗಲಿದೆಯೋ ದೇವರೇ ಬಲ್ಲ. ನನ್ನ ಗಂಡನ ಸಾವಿಗೆ ನ್ಯಾಯ ಬೇಕು. ತನಿಖೆ ನಡೆಸುತ್ತೀರಾದರೆ ನಿಯತ್ತಾಗಿ ನಡೆಸಿ. ಅದು ಬಿಟ್ಟು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಬೇಡಿ ಎಂದು ವಿನಂತಿಸಿದರು.
ಬೆಂಗಳೂರು: ನಾನು 14 ಲಕ್ಷ ರೂ. ಹಣವನ್ನು ಈಶ್ವರಪ್ಪನವರಿಗೆ ತಲುಪಿಸಿದ್ದೆ. ಆದರೂ ಬಿಲ್ ಪಾವತಿ ಆಗಿಲ್ಲ. ಹೀಗಾಗಿ ಸಾಯುವುದು ಮಾತ್ರ ಬಾಕಿ ಎಂದು ಸಂತೋಷ್ ಪಾಟೀಲ್ ಈ ಹಿಂದೆ ತಿಳಿಸಿದ್ದರು.
ದೆಹಲಿಯಲ್ಲಿ ಮಾರ್ಚ್ 9 ರಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಅವರು ನಾನು ಮೋದಿಯ ಪರಮ ಭಕ್ತ. ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ನಾನು ಕೆಲಸ ಮಾಡಿದ್ದೇನೆ. ಗ್ರಾಮಗಳ ಅಭಿವೃದ್ಧಿ ಮಾಡುತ್ತೇವೆ ಎಂದು ಸರ್ಕಾರ ಹೇಳುತ್ತದೆ. ಆದರೆ ಕಾಮಗಾರಿ ಮಾಡಿದರೂ ಬಿಲ್ ಪಾವತಿ ಇನ್ನೂ ಮಾಡಿಲ್ಲ. ಹೀಗೆ ಆದರೆ ನಾನು ಸಾಯುವುದೇ ಲೇಸು. ಈ ಕಾರಣಕ್ಕೆ ನಾನು ದೆಹಲಿಯಲ್ಲಿರುವ ಬಿಜೆಪಿ ನಾಯಕರನ್ನು ಭೇಟಿಯಾಗಲು ಬಂದಿದ್ದೇನೆ ಎಂದು ಹೇಳಿದ್ದರು.
ವರ್ಕ್ ಆರ್ಡರ್‌ಇಲ್ಲದೇ ಕಾಮಗಾರಿ:
ಈಶ್ವರಪ್ಪ ಅವರಿಂದ ನಂಬಿಕೆ ದ್ರೋಹ ಆರೋಪವನ್ನು ಸಂತೋಷ್ ಮಾಡಿದ್ದರು. ಹಿಂಡಲಗಾದಲ್ಲಿ ವರ್ಕ್ ಆರ್ಡರ್ ಇಲ್ಲದೇ ಸಂತೋಷ್ ಕಾಮಗಾರಿ ಮಾಡಿದ್ದರು. ಈಶ್ವರಪ್ಪರಿಂದ ಮೌಕಿಕ ಆದೇಶ ಪಡೆದು 4 ಕೋಟಿ ರಸ್ತೆ ನಿರ್ಮಿಸಿದ್ದರು. ಕಾಮಗಾರಿ ಮುಗಿಸಿ ಬಿಲ್ ಕ್ಲೈಮ್ ಮಾಡಲು ವರ್ಕ್ ಆರ್ಡರ್ ಮುಖ್ಯವಾಗುತ್ತದೆ. ಇದನ್ನೂ ಓದಿ: ನನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ – ಡೆತ್‍ನೋಟ್ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
ಕಾಮಗಾರಿ ಅಂತ್ಯವಾದ ಬಳಿಕ ವರ್ಕ್ ಆರ್ಡರ್ ನೀಡುವಂತೆ ಸಂತೋಷ್ ಈಶ್ವರಪ್ಪ ಬಳಿ ಮನವಿ ಮಾಡಿದ್ದರು. ಆದರೆ ವರ್ಕ್ ಆರ್ಡರ್ ಬಿಡುಗಡೆ ಆಗಿರಲ್ಲ. ಬಿಲ್ ಸಹ ಸರ್ಕಾರದಿಂದ ಬಿಡುಗಡೆ ಆಗಿರಲ್ಲ.
ಸಂತೋಷ್ ಹೇಳಿದ್ದೇನು?
ಬಿಲ್ ಬಿಡುಗಡೆಗೆ ಪಿಎಗಳ ಮೂಲಕ 40% ಕಮಿಷನ್‍ಗೆ ಈಶ್ವರಪ್ಪ ಬೇಡಿಕೆ ಇಟ್ಟಿದ್ದರು. ಈಗಾಗಲೇ 14 ಲಕ್ಷ ರೂ. ಹಣವನ್ನು ಲಂಚವಾಗಿ ನೀಡಿದ್ದೇನೆ. 4 ಕೋಟಿ ರೂ.ಗೆ ಬಡ್ಡಿ ಕಟ್ಟುತ್ತಿದ್ದೇನೆ. ಬಿಲ್ ಬಿಡುಗಡೆಯಾಗದಿದ್ದರೇ ವಿಷ ಸೇವಿಸುತ್ತೇನೆ. ಆತ್ಮಹತ್ಯೆ ಬಿಟ್ಟು ಬೇರೆ ಯಾವುದೇ ದಾರಿ ಇಲ್ಲ. ಕೇಂದ್ರ ನಾಯಕರನ್ನು ಭೇಟಿಯಾಗಲು ಬಂದಿದ್ದೇನೆ. ಪರಿಹಾರ ಸಿಗದಿದ್ದರೇ ಸಾವೊಂದೇ ದಾರಿ ಎಂದು ಸಂತೋಷ್ ಹೇಳಿದ್ದರು.
ಈಶ್ವರಪ್ಪ ಹೇಳೋದು ಏನು?
ಸಂತೋಷ್ ಪಾಟೀಲ್ ಯಾರೂ ಎಂಬುದು ಗೊತ್ತಿಲ್ಲ, ಯಾವತ್ತೂ ನೋಡಿರಲಿಲ್ಲ. ನನ್ನ ಮೇಲೆ ಕಮೀಷನ್ ಆರೋಪ ಮಾಡಿದ್ದಕ್ಕೆ ಮಾನನಷ್ಟ ಮೊಕದ್ದಮೆ ಹೂಡಿದ್ದೆ. ಕೋರ್ಟ್‍ನಿಂದ ಲೀಗಲ್ ನೋಟಿಸ್ ಬಂದಿತ್ತು. ಆ ನೋಟಿಸ್‍ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಸಂತೋಷ್ ಪಾಟೀಲ್ ಆತ್ಮಹತ್ಯೆಗೂ ನನಗೂ ಸಂಬಂಧ ಇಲ್ಲ. ನನಗೆ ಯಾಕೆ ಶಿಕ್ಷೆ ಆಗ್ಬೇಕು? ಶಿಕ್ಷೆ ಆಗುವಂತಹ ತಪ್ಪನ್ನು ನಾನು ಮಾಡಿಲ್ಲ.
ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿ ಸಂಪೂರ್ಣ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಕಂಡುಕೊಳ್ಳುತ್ತೇವೆ. ರಾಜ್ಯ ಸರ್ಕಾರ ಈ ಕೇಸ್‍ನಲ್ಲಿ ಯಾವುದೇ ಹಸ್ತಕ್ಷೇಪ ಮಾಡಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ್ ಪಾಟೀಲ್ ಆತ್ಮಹತ್ಯೆ ಅವರು 40 ಪರ್ಸೆಂಟ್ ಆರೋಪ ಮಾಡಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂತೋಷ್ ಪಾಟೀಲ್ ಉಡುಪಿಯ ಲಾಡ್ಜ್‍ನಲ್ಲಿ ಶವ ಪತ್ತೆ ಆಗಿದೆ. ಈಗಾಗಲೇ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಎಲ್ಲಾ ರೀತಿಯ ತನಿಖೆ ಆಗುತ್ತದೆ. ಇದರ ಪ್ರಾಥಮಿಕ ವರದಿ ಏನು ಬರುತ್ತದೆ ಎನ್ನುವುದರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಈ ಸಾವಿನ ಹಿನ್ನೆಲೆ ಸಂಪೂರ್ಣವಾಗಿ ತನಿಖೆ ನಡೆಯುತ್ತದೆ ಎಂದು ಹೇಳಿದರು.
ಪ್ರತಿಪಕ್ಷಗಳು ರಾಜೀನಾಮೆಗೆ ಒತ್ತಾಯಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಹಿಂದೆ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಆಗ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರಾ ಪ್ರಶ್ನಿಸಿದರು. ಈ ಕುರಿತು ತನಿಖೆ ನಡೆಸುತ್ತೇವೆ. ಇದರ ಸತ್ಯಾಂಶ ಹೊರಬರುತ್ತದೆ. ಅದಾದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಇದನ್ನೂ ಓದಿ:ರಾಜ್ಯದಲ್ಲಿ ಡಿಜಿಪಿ ಬದುಕಿದ್ದರೆ, ಕ್ರಮ ಕೈಗೊಳ್ಳಬೇಕು: ಡಿಕೆಶಿ
ಪೊಲೀಸ್ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಹೇಳಿದ್ದೇವೆ. ಸಂತೋಷ್ ಸಾವಿನ ಕುರಿತು ಕಾನೂನು ಬದ್ಧವಾಗಿ ಆಗಬೇಕು. ಪಾರದರ್ಶಕ ತನಿಖೆ ಆಗುತ್ತದೆ. ಗುತ್ತಿಗೆದಾರ ಸಂತೋಷ್ ಮಾಡಿದ್ದ ಆರೋಪವನ್ನು ಈಶ್ವರಪ್ಪ ಅವರು ಅಲ್ಲಗಳೆದಿದ್ದಾರೆ. ಅಷ್ಟೇ ಅಲ್ಲದೇ ಕೋಟ್‍ನಲ್ಲಿ ಕೇಸ್ ಹಾಕಿದ್ದಾರೆ. ಸಂತೋಷ್‍ಗೆ ನೋಟಿಸ್ ಹೋಗಿದೆ. ಇದೆಲ್ಲವನ್ನು ತನಿಖೆ ಸಂದರ್ಭದಲ್ಲಿ ಒಳಪಡುತ್ತದೆ. ಯಾವ ಸಂದರ್ಭದಲ್ಲಿ ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವುದು ತನಿಖೆಯಲ್ಲಿ ತಿಳಿಯುತ್ತದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ:ನಾನು ಯಾವುದೇ ತಪ್ಪು ಮಾಡಿಲ್ಲ, ಸಂತೋಷ್ ತಪ್ಪು ಮಾಡಿರೋದು : ಈಶ್ವರಪ್ಪ
ಬೆಂಗಳೂರು: ಗುತ್ತಿಗೆದಾರ ಸಂತೋಷ್ ಅವರೇ ತಪ್ಪು ಮಾಡಿದ್ದು, ನಾನು ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟನೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಡಿ.ಕೆ ಸುರೇಶ್, ಹನುಮಂತಯ್ಯ ಅವರನ್ನು ಸಂತೋಷ್ ಭೇಟಿ ಮಾಡಿ ಸುದ್ದಿಗೋಷ್ಠಿ ನಡೆಸಿದ್ದರು. ಆ ಕಾಪಿಯನ್ನು ನಾನು ತೆಗೆದುಕೊಂಡು ಗುತ್ತಿಗೆದಾರ ಸಂತೋಷ್ ವಿರುದ್ಧ ಕೋರ್ಟ್‍ನಲ್ಲಿ ಮಾನನಷ್ಟ ಕೇಸ್ ಹಾಕಿದ್ದೇನೆ ಎಂದರು.
ಕೋರ್ಟ್‍ನಿಂದ ನೋಟಿಸ್ ಹೋದ ನಂತರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೋಟಿಸ್ ಹೋದ ನಂತರ ಗಾಬರಿಯಾಗಿದ್ದಾರೆ ಅನಿಸುತ್ತೆ. ಸಂತೋಷ್ ಆತ್ಮಹತ್ಯೆಗೂ, ನನಗೂ ಏನೂ ಸಂಬಂಧವಿಲ್ಲ. ಸಂತೋಷ್ ಅವರನ್ನು ನಾನು ನೋಡಿಲ್ಲ. ಅವರು ಯಾರೂ ಎಂದು ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ:ನನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ – ಡೆತ್‍ನೋಟ್ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
40 ಪರ್ಸೆಂಟ್ ಕಮಿಷನ್ ಕುರಿತು ಗುತ್ತಿಗೆದಾರ ಸಂತೋಷ್ ನನ್ನ ಬಗ್ಗೆಯೂ ಅಲ್ಲ, ನಮ್ಮ ಕಡೆ ಅವರು ಯಾರೋ ಕೇಳುತ್ತಿದ್ದಾರೆ ಎಂದು ಪತ್ರ ಬರೆದಿದ್ದಾರೆ. ಇದರಿಂದಾಗಿ ನಾನು ಕಾನೂನುಬದ್ಧವಾಗಿ ಪ್ರಜಾಪ್ರಭುತ್ವದಲ್ಲಿ ಏನು ವ್ಯವಸ್ಥೆ ಇದೆಯೋ ಅದನ್ನು ನಾನು ಮಾಡಿದ್ದೇನೆ. ಸುಮ್‍ಸುಮ್ಮನೆ ಯಾವುದೇ ರಾಜಕಾರಣಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಗೂ ಪತ್ರಗಳನ್ನು ಬರೆದರೆ ಸಹಿಸಲು ಸಾಧ್ಯವಿಲ್ಲ. ಇದರಿಂದಾಗಿ ನಾನು ಕೋರ್ಟ್‍ಗೆ ಹೋಗಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ:ಬಿಜೆಪಿ, ಭಜರಂಗದಳ, ಪಿಎಫ್‍ಐ, ಸಿಎಫ್‍ಐ ಸೇರ್ಕೊಂಡು ಸಿಎಂ ಸಾಮರಸ್ಯ ಹಾಳು ಮಾಡ್ತಿದ್ದಾರೆ: ಸುರ್ಜೆವಾಲ
ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶೇ.40 ಪರ್ಸೆಂಟ್ ಆರೋಪ ಮಾಡಿದ್ದ ಬೆಳಗಾವಿ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಧ್ಯಮದ ಪ್ರತಿನಿಧಿಗಳಿಗೆ ವಾಟ್ಸಪ್ ಸಂದೇಶ ರವಾನಿಸಿ ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿ ಐಸಿಯು ಸೇರಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರನ್ನು ಶನಿವಾರ ರಾತ್ರಿ ರಾಮಯ್ಯ ಆಸ್ಪತ್ರೆಯ ಜನರಲ್ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ.
ಇಂದು ಸಂಜೆ ವೇಳೆಗೆ ಸಂತೋಷ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದರೆ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಸಂತೋಷ್ ವಿರುದ್ಧ ಐಪಿಸಿ ಸೆಕ್ಷನ್ 309(ಆತ್ಮಹತ್ಯೆಗೆ ಯತ್ನ) ಅಡಿ ಎಫ್‍ಐಆರ್ ದಾಖಲಾಗಿತ್ತು. ಹೀಗಾಗಿ ಯಾವ ಕಾರಣಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿದ್ದು ಎಂದು ಸಂತೋಷ್ ಹೇಳಿಕೆ ನೀಡಬೇಕಿದೆ. ವಾರ್ಡ್‍ಗೆ ಶಿಫ್ಟ್ ಆದ ಹಿನ್ನೆಲೆಯಲ್ಲಿ ಇಂದು ಸದಾಶಿವನಗರ ಪೊಲೀಸರು ಸಂತೋಷ್ ಅವರಿಂದ ಹೇಳಿಕೆ ಪಡೆಯುವ ಸಾಧ್ಯತೆಯಿದೆ.
ಅವ ಚಿಕ್ಕ ಹುಡುಗ:
ಅವ ಚಿಕ್ಕ ಹುಡುಗ. ಮೊನ್ನೆ ತಾನೆ ಮದ್ವೆ ಮಾಡ್ಕೊಂಡಿದ್ದಾನೆ ಎಂದು ವಸತಿ ಸಚಿವ ವಿ ಸೋಮಣ್ಣ ಸಂತೋಷ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.
ಶಿವಕುಮಾರ್ ಸಾಹೇಬ್ರು ಯಾಕೆ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ. ನಮ್ಮಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ನಿಮ್ಮಲ್ಲಿ ಏನಾದರೂ ದಾಖಲೆಗಳು ಇದ್ದರೆ ಕೊಡಿ ಅಂತ ಗೃಹ ಸಚಿವರು ಕೇಳಿದ್ದಾರೆ ಎಂದು ತಿಳಿಸಿದರು.