Tag: Santhekatte

  • ನಾಲ್ವರ ಕೊಲೆ ಆರೋಪಿ ಪ್ರವೀಣ್ ಚೌಗುಲೆಗೆ ನ್ಯಾಯಾಂಗ ಬಂಧನ

    ನಾಲ್ವರ ಕೊಲೆ ಆರೋಪಿ ಪ್ರವೀಣ್ ಚೌಗುಲೆಗೆ ನ್ಯಾಯಾಂಗ ಬಂಧನ

    ಉಡುಪಿ: ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರ ವಿಚಾರಣೆ ಬಹುತೇಕ ಮುಕ್ತಾಯಗೊಂಡಂತಿದೆ. ಆರೋಪಿ ಪ್ರವೀಣ್ ಚೌಗುಲೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

    ಉಡುಪಿಯ ಸಂತೆಕಟ್ಟೆ ನೇಜಾರು (Nejaru Family) ನೂರ್ ಮೊಹಮ್ಮದ್ ಕುಟುಂಬದ ನಾಲ್ವರ ಬರ್ಬರ ಹತ್ಯೆಗೆ ಸಂಬಂಧಪಟ್ಟಂತೆ ಪೊಲೀಸರ ತನಿಖೆ ನಡೆಯುತ್ತಿದೆ. ಈ ನಡುವೆ ಆರೋಪಿ ಪ್ರವೀಣ್ ಚೌಗುಲೆ ವಿಚಾರಣೆ ಬಹುತೇಕ ಪೂರ್ಣಗೊಂಡಿದ್ದು, ಇಂದು ಕೋರ್ಟಿಗೆ ಆರೋಪಿಯನ್ನು ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

    ಪ್ರಧಾನ ಸಿವಿಲ್ ನ್ಯಾಯಾಧೀಶರಾದ ದೀಪಾ ಮುಂದೆ ಮಲ್ಪೆ ಪೊಲೀಸರು ಹಾಜರುಗೊಳಿಸಿದರು. ಆರೋಪಿಗೆ ಡಿಸೆಂಬರ್ 5 ರ ವರೆಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ಪ್ರವೀಣ್ ಚೌಗುಲೆಯನ್ನು (Praveen Chowgule) ಹಿರಿಯಡ್ಕ ಸಬ್ ಜೈಲ್ ಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ನಟ ವಿಜಯಕಾಂತ್ ಆರೋಗ್ಯದಲ್ಲಿ ಅಲ್ಪ ಚೇತರಿಕೆ: ಐಸಿಯುವಿನಲ್ಲೇ ಚಿಕಿತ್ಸೆ

  • 15 ನಿಮಿಷದಲ್ಲಿ 4 ಕೊಲೆ, ಇದು ವಿಶ್ವ ದಾಖಲೆ – ಸ್ಟೇಟಸ್ ಹಾಕಿದಾತನಿಗೆ ಬಿಸಿ ಮುಟ್ಟಿಸಿದ ಪೊಲೀಸರು

    15 ನಿಮಿಷದಲ್ಲಿ 4 ಕೊಲೆ, ಇದು ವಿಶ್ವ ದಾಖಲೆ – ಸ್ಟೇಟಸ್ ಹಾಕಿದಾತನಿಗೆ ಬಿಸಿ ಮುಟ್ಟಿಸಿದ ಪೊಲೀಸರು

    ಉಡುಪಿ: ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ (Murder) ಮಾಡಿದ್ದ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ದುಷ್ಕೃತ್ಯವನ್ನು ವಿರೋಧಿಸುವುದನ್ನು ಬಿಟ್ಟು ಹಂತಕನ ಫೋಟೋಗೆ ಕಿರೀಟ ಇಟ್ಟು ಇನ್ಸಾಗ್ರಾಮ್‌ನಲ್ಲಿ ಸ್ಟೋರಿ ಹಾಕಿದ್ದ ವ್ಯಕ್ತಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

    ಹಿಂದೂ ಮಂತ್ರ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂತಕ ಪ್ರವೀಣ್ ಅರುಣ್ ಚೌಗುಲೆಯ ಫೋಟೋ ಹಾಕಿ, ಆತನಿಗೆ ಕಿರೀಟ ಇಟ್ಟು, 15 ನಿಮಿಷದಲ್ಲಿ 4 ಕೊಲೆ, ಇದು ವರ್ಲ್ಡ್ ರೆಕಾರ್ಡ್ ಎಂದು ಬರೆದು ವ್ಯಕ್ತಿಯೊಬ್ಬ ವಿಕೃತಿ ಮೆರೆದಿದ್ದಾನೆ. ಇದನ್ನೂ ಓದಿ: ನಾಲ್ವರ ಕೊಂದ ಆರೋಪಿ ಮೇಲೆ ಜನಾಕ್ರೋಶ; ರಸ್ತೆ ತಡೆದು ಸಾರ್ವಜನಿಕರ ಪ್ರತಿಭಟನೆ, ಲಾಠಿ ಪ್ರಹಾರ – ಉಡುಪಿ ಉದ್ವಿಗ್ನ

    ಈ ವಿಚಾರ ಉಡುಪಿ ಪೊಲೀಸರ (Udupi Police) ಗಮನಕ್ಕೆ ಬಂದಿದ್ದು, ತಕ್ಷಣ ಅವರು ಕ್ರಮಕ್ಕೆ ಮುಂದಾಗಿದ್ದಾರೆ. ಪೋಸ್ಟ್ ಹಾಕಿದಾತನ ವಿರುದ್ಧ ಸೆನ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಹಿಂದೂ ಮಂತ್ರ ಖಾತೆಯಲ್ಲಿ ಹಾಕಲಾಗಿದ್ದ ಸ್ಟೋರಿ ಡಿಲೀಟ್ ಆಗಿದೆ. ಇದನ್ನೂ ಓದಿ: ಮುಸ್ಲಿಂ ಸ್ಪೀಕರ್‌ಗೆ ಬಿಜೆಪಿಯವರೂ ನಮಸ್ಕರಿಸುತ್ತಾರೆ: ಜಮೀರ್ ಮತ್ತೊಂದು ಎಡವಟ್ಟು

  • ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣ – ಒಬ್ಬಳ ಮೇಲಿನ ದ್ವೇಷಕ್ಕೆ ನಾಲ್ವರು ಬಲಿ!

    ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣ – ಒಬ್ಬಳ ಮೇಲಿನ ದ್ವೇಷಕ್ಕೆ ನಾಲ್ವರು ಬಲಿ!

    ಉಡುಪಿ: ಭಾನುವಾರ ಬೆಳಗ್ಗೆ ಒಂದೇ ಕುಟುಂಬದ ನಾಲ್ವರನ್ನು ಭೀಕರವಾಗಿ ಹತ್ಯೆ ನಡೆಸಿರುವ ಘಟನೆ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ. ಒಬ್ಬಳ ಮೇಲಿನ ದ್ವೇಷಕ್ಕೆ ಇನ್ನೂ ಮೂವರು ಬಲಿಯಾಗಿರುವುದು ಇದೀಗ ತಿಳಿದುಬಂದಿದೆ.

    ಸಂತೆಕಟ್ಟೆ (Santekatte) ನೇಜಾರು (Nejaru) ಸಮೀಪ ತಾಯಿ ಹಸೀನಾ (46), ಅಫ್ನಾನ್ (23), ಅಯ್ನಾಝ್ (21) ಹಾಗೂ ಆಸಿಂನನ್ನು (12) ದುಷ್ಕರ್ಮಿಯೊಬ್ಬ ಮಾರಕಾಸ್ತ್ರಗಳಿಂದ ಇರಿದು ಕೊಲೆ (Murder) ಮಾಡಿದ್ದ. ಏರ್ ಇಂಡಿಯಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಅಫ್ನಾನ್ ಮೇಲಿನ ದ್ವೇಷಕ್ಕೆ ದುಷ್ಕರ್ಮಿ ಇನ್ನೂ ಮೂವರನ್ನು ಕೊಲೆ ಮಾಡಿದ್ದಾನೆ.

     ಅಫ್ನಾನ್

    ಅಫ್ನಾನ್ ಏರ್ ಇಂಡಿಯಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಅಯ್ನಾಝ್ ಲಾಜಿಸ್ಟಿಕ್ ಸಂಸ್ಥೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದರು. ಆಸಿಂ 8ನೇ ತರಗತಿಯಲ್ಲಿ ಓದುತ್ತಿದ್ದ. ತಾಯಿ ಹಸೀನಾ ಗೃಹಿಣಿಯಾಗಿದ್ದಳು. ಕಳೆದ ರಾತ್ರಿ ಅಫ್ನಾನ್ ರಜೆ ಹಿನ್ನೆಲೆ ಉಡುಪಿಗೆ ಬಂದಿದ್ದಳು. ಹಂತಕ ಬೆಂಗಳೂರಿನಿಂದ ಬಂದಿರುವ ಶಂಕೆ ಮೂಡಿದೆ. ಸಾಕ್ಷ್ಯ ನಾಶಮಾಡುವ ಸಲುವಾಗಿ ಉಳಿದ ಮೂವರನ್ನೂ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

    ಆಟೋ ಹತ್ತಿ ಬಂದಿದ್ದ ಹಂತಕ:
    ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ನಡೆಸಿದ ಹಂತಕನನ್ನು ತಾನೇ ಕರೆದುಕೊಂಡು ಅವರ ಮನೆಗೆ ಬಿಟ್ಟಿದ್ದಾಗಿ ಸಂತೆಕಟ್ಟೆ ಆಟೋ ಚಾಲಕ ಶ್ಯಾಮ್ ತಿಳಿಸಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ಅವರು, ನಾನು ಸಂತೆಕಟ್ಟೆ ಆಟೋ ಡ್ರೈವರ್. ಹೂವಿನ ಮಾರ್ಕೆಟ್ ಬಳಿ ನನ್ನ ಆಟೋ ಸ್ಟ್ಯಾಂಡ್‌ ಇದೆ. ಆತ ತೃಪ್ತಿ ಲೇಔಟ್ ಹತ್ತಿರ ಬಿಡುವಂತೆ ಹೇಳಿದ್ದ. ನಾನು ಆತನನ್ನು ಹೇಳಿದೆಡೆಗೆ ತಂದು ಬಿಟ್ಟೆ. ಆ ವ್ಯಕ್ತಿಯನ್ನು ಮನೆಗೆ ಬಿಟ್ಟು 15 ನಿಮಿಷದಲ್ಲಿ ಮತ್ತೆ ಸಂತೆಕಟ್ಟೆಯಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ!

    ಆಟೋ ಚಾಲಕ ಶ್ಯಾಮ್

    ನಮ್ಮ ಆಟೋ ಸ್ಟ್ಯಾಂಡ್‌ನಲ್ಲಿ ಕ್ಯೂ ಸಿಸ್ಟಂ ಇದೆ. ಆತ ವಾಪಸ್ ಹೋಗೋವಾಗ ನನಗೆ ಸಿಕ್ಕಿಲ್ಲ. ನಾನೇ ನಿಮ್ಮನ್ನು ಕರೆದುಕೊಂಡು ಹೋಗುತ್ತಿದ್ದೆ ಎಂದು ಹೇಳಿದೆ. ಆದರೆ ಆತ ಆತುರದಲ್ಲಿ ಬೇರೆ ಆಟೋ ಹತ್ತಿ ಹೋಗಿದ್ದಾನೆ. ನಾವು ಬಾಡಿಗೆ ಮಾಡಿದ ಅರ್ಧ ಗಂಟೆಯಲ್ಲಿ ಈ ಕೃತ್ಯ ನಡೆದಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದರು.

    ಆ ವ್ಯಕ್ತಿ ಬೆಂಗಳೂರು ಭಾಗದ ಕನ್ನಡವನ್ನು ಮಾತನಾಡುತ್ತಿದ್ದ. ಉಡುಪಿ-ಮಂಗಳೂರು ಕನ್ನಡ ಆತ ಮಾತನಾಡುತ್ತಿರಲಿಲ್ಲ. ಕೃತ್ಯ ನಡೆಸಿ ಅಪರಿಚಿತರ ಬೈಕಿನಲ್ಲಿ ವಾಪಸ್ ಸಂತೆಕಟ್ಟೆಗೆ ಬಂದಿದ್ದಾನೆ. ಆತ ಮಾಸ್ಕ್ ಹಾಕಿದ್ದ. ಬೋಳು ತಲೆ ಮತ್ತು ಬ್ಯಾಗ್‌ ಒಂದನ್ನು ಹಾಕಿಕೊಂಡಿದ್ದ. ಆತ ಟಾರ್ಗೆಟ್ ಮಾಡಿದ್ದ ಮನೆ, ತೃಪ್ತಿ ಲೇಔಟ್ ಬಗ್ಗೆ ಮೊದಲೇ ಮಾಹಿತಿ ಇತ್ತು ಎಂಬುದು ಸ್ಪಷ್ಟವಾಗಿದೆ ಎಂದು ಪಬ್ಲಿಕ್ ಟಿವಿಗೆ ಚಾಲಕ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರ ಮೇಲೆಯೇ ಹಲ್ಲೆಗೈದ ಯುವಕರ ಗುಂಪು