Tag: santa claus

  • Christmas | ಮಕ್ಕಳಿಗೆ ಗಿಫ್ಟ್‌ ನೀಡುವ ಸಾಂತಾ ಕ್ಲಾಸ್‌ ಯಾರು? ಹಿನ್ನೆಲೆ ಏನು?

    Christmas | ಮಕ್ಕಳಿಗೆ ಗಿಫ್ಟ್‌ ನೀಡುವ ಸಾಂತಾ ಕ್ಲಾಸ್‌ ಯಾರು? ಹಿನ್ನೆಲೆ ಏನು?

    ಕ್ರಿಸ್ಮಸ್‌ (Christmas) ಹಬ್ಬದ ಸಂದರ್ಭದಲ್ಲಿ ಮಕ್ಕಳಿಗಾಗಿ ಸಾಕಷ್ಟು ಉಡುಗೊರೆಗಳು, ಸಿಹಿತಿಂಡಿಗಳನ್ನು ನೀಡುವ ಸಾಂತಾ ಕ್ಲಾಸ್‌ (Santa Claus) ಯಾರು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ.

    ಸಾಂತಾ ಕ್ಲಾಸ್‌ ಬಗ್ಗೆ ಮಕ್ಕಳು ಪ್ರಶ್ನೆ ಮಾಡಿದರೆ ಆತ ದೇವದೂತ. ಕ್ರಿಸ್ಮಸ್‌ ಹಬ್ಬದಂದು ಮೇಲಿನಿಂದ ಇಳಿದು ಬಂದು ಉಡುಗೊರೆ (Gift) ನೀಡಿ ಮರಳಿ ಹೋಗುತ್ತಾನೆ ಎಂದು ಪೋಷಕರು ಹೇಳುತ್ತಿರುತ್ತಾರೆ. ಆದರೆ ನಿಜವಾದ ಸಾಂತಾ ಕ್ಲಾಸನ ಕಥೆ ಬೇರೆಯೇ ಇದೆ.

    ಬಹಳ ಹಿಂದೆ ಟರ್ಕಿಯ (Turkey) ಮೈರಾ ನಗರದಲ್ಲಿ ಸೇಂಟ್ ನಿಕೋಲಸ್ (Saint Nicholas) ಎಂಬ ವ್ಯಕ್ತಿ ನೆಲೆಸಿದ್ದ. ಶ್ರೀಮಂತನಾಗಿದ್ದ ಈತ ಜನರಿಗೆ ಸಹಾಯ ಮಾಡುವುದರಲ್ಲೇ ಸಂತೋಷ ಅನುಭವಿಸುತ್ತಿದ್ದ. ಮಕ್ಕಳು ದು:ಖದಲ್ಲಿದ್ದರೆ ವಿಶೇಷವಾದ ಉಡುಪು ತೊಟ್ಟು ಅವರಿಗೆ ಉಡುಗೊರೆಗಳನ್ನು ನೀಡುತ್ತಿದ್ದ. ಎಲ್ಲರೂ ಸಂತೋಷವಾಗಿರಬೇಕು ಎಂದು ಆತ ಬಯಸುತ್ತಿದ್ದ.

    17ನೇ ವಯಸ್ಸಿನಲ್ಲಿ ಪಾದ್ರಿಯಾದ ಸೇಂಟ್ ನಿಕೋಲಸ್ ತನ್ನ ಜೀವನದುದ್ದಕ್ಕೂ ಮಧ್ಯರಾತ್ರಿಯಲ್ಲಿ ಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತಿದ್ದ. ಒಂದು ಬಾರಿ ಊರಿನಲ್ಲಿ ವರದಕ್ಷಿಣೆ ಕೊಡಲು ಹಣವಿಲ್ಲದೆ ಮೂವರು ಹುಡುಗಿಯರ ಮದುವೆ ನಿಂತು ಹೋಗುವ ಪರಿಸ್ಥಿತಿ ಬಂದಿತ್ತು. ಈ ವಿಚಾರ ತಿಳಿದ ಸಂತ ನಿಕೊಲಾಸ್ ಮೂರು ಥೈಲಿ ಹಣವನ್ನು ಕ್ರಿಸ್ಮಸ್ ಹಬ್ಬದಂದು ಕಿಟಕಿಯ ಮೂಲಕ ಒಳಗೆಸೆದು ಅವರಿಗೆ ಸಂತೋಷ ಉಂಟುಮಾಡಿದ್ದ.  ಇದನ್ನೂ ಓದಿ: ಕ್ರಿಸ್ಮಸ್ ಟ್ರೀ – ಏನಿದರ ಇತಿಹಾಸ, ಮಹತ್ವ?

    ನಿಕೋಲಸ್‌ ಹೆಸರಿನ ರೂಪಾಂತರವೇ ಸಾಂತಾಕ್ಲಾಸ್. ಈ ಕಾರಣಕ್ಕೆ ನಿದ್ರೆ ಮಾಡುತ್ತಿರುವ ಮಕ್ಕಳ ಹಾಸಿಗೆ ಬದಿಯಲ್ಲಿ ಕ್ರಿಸ್ಮಸ್ ಬಹುಮಾನಗಳನ್ನು ಇಟ್ಟುಹೋಗುವುದು ಸಂಪ್ರದಾಯ ಆರಂಭಗೊಂಡಿದೆ.

    ನಿಕೋಲಸ್‌ ಸಾವಿನ ನಂತರ ಚರ್ಚ್ ಅನುಯಾಯಿಗಳು ಈ ಪರಂಪರೆಯನ್ನು ಮುಂದುವರೆಸಿದರು. ಅಂದಿನಿಂದ ಈ ಕ್ರಮ ಒಂದು ಆಚರಣೆಯಾಗಿ ವಿಶ್ವಾದ್ಯಂತ ಪಸರಿಸಿತು. ಕುಟುಂಬದ ಹಿರಿಯರು ನಿಕೋಲಸ್ ತೊಡುತ್ತಿದ್ದಂತಹ ಉಡುಗೆ ಧರಿಸಿ ಮಕ್ಕಳಿಗಾಗಿ ಉಡುಗೊರೆಗಳನ್ನು ನೀಡಲಾರಂಭಿಸಿದರು. ಹೀಗೆ ಬಿಳಿಯ ಗಡ್ಡ, ಕೆಂಪು ಬಣ್ಣದ ಉಡುಗೆಯೊಂದಿಗೆ ಗಿಫ್ಟ್‌ ನೀಡುವ ಹಿರಿಯ ವ್ಯಕ್ತಿಯನ್ನು ಇಂದಿಗೂ ಮಕ್ಕಳು ಸಾಂತಾ ಕ್ಲಾಸ್ ಎಂದು ನಂಬುತ್ತಾರೆ.

     

  • ಸ್ಪೇಸ್‌ನಲ್ಲೇ ಕ್ರಿಸ್ಮಸ್ ಸಂಭ್ರಮ – ಸಾಂತಾಕ್ಲಾಸ್ ಆದ ಸುನಿತಾ ವಿಲಿಯಮ್ಸ್!

    ಸ್ಪೇಸ್‌ನಲ್ಲೇ ಕ್ರಿಸ್ಮಸ್ ಸಂಭ್ರಮ – ಸಾಂತಾಕ್ಲಾಸ್ ಆದ ಸುನಿತಾ ವಿಲಿಯಮ್ಸ್!

    ವಾಷಿಂಗ್ಟನ್: ಕ್ರಿಸ್ಮಸ್ ಹಬ್ಬಕ್ಕಾಗಿ ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್ (Sunita Williams) ಸಾಂತಾಕ್ಲಾಸ್ ಆಗಿ ಕಾಣಿಸಿಕೊಂಡಿದ್ದು, ಫೋಟೋವೊಂದಕ್ಕೆ ಪೋಸ್ ನೀಡಿದ್ದಾರೆ.

    ಕಳೆದ ಆರು ತಿಂಗಳಿಂದ ಬಾಹ್ಯಾಕಾಶದಲ್ಲಿರುವ ಸುನಿತಾ ವಿಲಿಯಮ್ಸ್ ಇದೀಗ ಕ್ರಿಸ್ಮಸ್ ಸಂಭ್ರಮದಲ್ಲಿದ್ದಾರೆ. ಸದ್ಯ ಸುನಿತಾ ಅವರು ಸಾಂತಾ ಕ್ಲಾಸ್ ಆಗಿ ಕಾಣಿಸಿಕೊಂಡಿರುವ ಫೋಟೋವನ್ನು ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.ಇದನ್ನೂ ಓದಿ: ಮುಂಗಡ ಟಿಕೆಟ್ ಬುಕಿಂಗ್‌ನಲ್ಲೂ ‘ಯುಐ’ ದಾಖಲೆ- ಇನ್ನೇನಿದ್ರೂ ಉಪ್ಪಿ ಮೇನಿಯಾ ಶುರು

    ಹ್ಯಾಮ್ ರೇಡಿಯೋದಲ್ಲಿ ಮಾತನಾಡುವ ಸಮಯದಲ್ಲಿ ಸುನಿತಾ ವಿಲಿಯಮ್ಸ್ ಹಾಗೂ ಡಾನ್ ಪೆಟ್ಟಿಟ್ ಜೊತೆಗೂಡಿ ಫೋಟೋಗೆ ಪೋಸ್ ನೀಡಿದ್ದಾರೆ. ಫೋಟೋದಲ್ಲಿ ಇಬ್ಬರು ಸಾಂತಾಕ್ಲಾಸ್ ಟೋಪಿ ಧರಿಸಿದ್ದು, ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಲು ತಯಾರಿ ನಡೆಸುತ್ತಿದ್ದಾರೆ.

    ಸ್ಪೇಸ್‌ಎಕ್ಸ್ ಡ್ರ‍್ಯಾಗನ್ ಕ್ಯಾಪ್ಸುಲ್, ಭೂಮಿಯಿಂದ ಸರಕು ಹಾಗೂ ಇನ್ನಿತರ ಉಡುಗೊರೆಗಳನ್ನು ಸರಬರಾಜು ಮಾಡಿದೆ ಹಾಗೂ ಕ್ರಿಸ್ಮಸ್ ಸಮೀಪಿಸುತ್ತಿರುವ ಕಾರಣ ಗಗನಯಾತ್ರಿಗಳು ತಮ್ಮ ಕುಟುಂಬ, ಸ್ನೇಹಿತರಿಗೆ ವಿಡಿಯೋ ಕರೆ ಮೂಲಕ ಸಂಪರ್ಕ ಕಲ್ಪಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್ 2024ರ ಜೂನ್‌ನಿಂದ ಬಾಹ್ಯಾಕಾಶದಲ್ಲಿದ್ದಾರೆ. ಎಂಟು ದಿನಗಳ ಕಾರ್ಯಾಚರಣೆಗಾಗಿ ಬಾಹ್ಯಾಕಾಶಕ್ಕೆ ತೆರಳಿದ್ದ ಅವರು ಬಾಹ್ಯಾಕಾಶ ನೌಕೆಯ ಸಮಸ್ಯೆ ಹಾಗೂ ತಾಂತ್ರಿಕ ದೋಷಗಳಿಂದಾಗಿ ಹಿಂದಿರುಗಲು ಸಾಧ್ಯವಾಗಿಲ್ಲ. 2025ರ ಫೆಬ್ರವರಿ ತಿಂಗಳಲ್ಲಿ ಭೂಮಿಗೆ ಮರಳಲಿದ್ದಾರೆ ಎಂದು ವರದಿಗಳು ತಿಳಿಸಿವೆ.ಇದನ್ನೂ ಓದಿ: NDA ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಅತಿಹೆಚ್ಚು 2.08 ಲಕ್ಷ ಕೋಟಿ ಅನುದಾನ: ಸಂಸದ ಕೆ.ಸುಧಾಕರ್‌

  • ಕ್ರಿಸ್‌ಮಸ್‌ ವಿಶೇಷ – ಸಮುದ್ರ ತೀರದ ಮರಳಿನಲ್ಲಿ 5,400 ಗುಲಾಬಿ ಹೂಗಳಿಂದ ಅರಳಿದ ಸಂತಾ ಕ್ಲಾಸ್‌ ಕಲಾಕೃತಿ

    ಕ್ರಿಸ್‌ಮಸ್‌ ವಿಶೇಷ – ಸಮುದ್ರ ತೀರದ ಮರಳಿನಲ್ಲಿ 5,400 ಗುಲಾಬಿ ಹೂಗಳಿಂದ ಅರಳಿದ ಸಂತಾ ಕ್ಲಾಸ್‌ ಕಲಾಕೃತಿ

    ಭುವನೇಶ್ವರ: ವಿಶ್ವದೆಲ್ಲೆಡೆ ಇಂದು ಕ್ರಿಸ್‌ಮಸ್‌ ಸಂಭ್ರಮ ಮನೆಮಾಡಿದೆ. ಈ ನಡುವೆ ಕಲಾವಿದರೊಬ್ಬರು ತಮ್ಮ ವಿಶಿಷ್ಟ ಕಲೆಯ ಮೂಲಕ ಕ್ರೈಸ್ತ ಬಾಂಧವರಿಗೆ ಕ್ರಿಸ್‌ಮಸ್‌ ಶುಭಾಶಯ ತಿಳಿಸಿದ್ದಾರೆ.

    ಹೌದು, ಅಂತಾರಾಷ್ಟ್ರೀಯ ಮರಳು ಶಿಲ್ಪ ಕಲಾವಿದ ಸುದರ್ಶನ್‌ ಪಾಟ್ನಾಯಕ್‌ ಅವರು, ಪುರಿ ಕಡಲ ತೀರದಲ್ಲಿ ಸುಮಾರು 5,400 ಗುಲಾಬಿಗಳನ್ನು ಬಳಸಿ ಸಂತಾ ಕ್ಲಾಸ್‌ ಅವರ ಕಲಾಕೃತಿ ರೂಪಿಸಿ ಗಮನ ಸೆಳೆದಿದ್ದಾರೆ. ಆ ಮೂಲಕ ಕ್ರೈಸ್ತ ಬಾಂಧವರಿಗೆ ವಿಶಿಷ್ಟ ರೀತಿಯಲ್ಲಿ ಕ್ರಿಸ್‌ಮಸ್‌ ಶುಭಕೋರಿದ್ದಾರೆ. ಇದನ್ನೂ ಓದಿ: ಕೊರೊನಾ ಟೈಮ್ ನಲ್ಲಿ ನೀವು ಮಾಡಿದ ಕೆಲಸಕ್ಕೆ ಹ್ಯಾಂಡ್ ಸಾಫ್ ಎಂದ ರಚಿತಾ

    ಕೆಂಪು ಹಾಗೂ ಬಿಳಿ ಗುಲಾಬಿ ಹೂಗಳನ್ನು ಬಳಸಿಕೊಂಡು ಸಮುದ್ರ ತೀರದ ಮರಳಿನಲ್ಲಿ ಸಂತಾ ಕ್ಲಾಸ್‌ ಕಲಾಕೃತಿ ಮೂಡಿಸಿದ್ದಾರೆ. ಜೊತೆಗೆ ʼಕ್ರಿಸ್‌ಮಸ್‌ ಶುಭಾಶಯಗಳು, ಕೋವಿಡ್‌ ನಿಯಮಗಳನ್ನು ಪಾಲಿಸಿ ಕ್ರಿಸ್‌ಮಸ್‌ ಆಚರಿಸಿʼ ಎಂಬ ಸಾಲುಗಳನ್ನು ಬರೆದು ವಿಶ್‌ ಮಾಡಿದ್ದಾರೆ.

    ಸುಮಾರು 28 ಅಡಿ ಅಗಲ ಮತ್ತು 50 ಅಡಿ ಉದ್ದದಲ್ಲಿ ಸಂತಾ ಕ್ಲಾಸ್‌ ಅವರ ಕಲಾಕೃತಿ ಮೂಡಿಬಂದಿದೆ. ಈ ಕಲಾಕೃತಿಯನ್ನು ರೂಪಿಸಲು ಸುದರ್ಶನ್‌ ಅವರು ಸುಮಾರು 8 ಗಂಟೆಗಳ ಸಮಯ ತೆಗೆದುಕೊಂಡಿದ್ದಾರೆ. ಇದಕ್ಕಾಗಿ ಮರಳು ಶಿಲ್ಪ ಕಲಾಸಂಸ್ಥೆಯ ಸಹಕಾರವನ್ನೂ ಪಡೆದಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಮಿಗ್-21 ವಿಮಾನ ಪತನ – ಪೈಲಟ್‍ ಹುತಾತ್ಮ

    ಕೊರೊನಾ ಸಾಂಕ್ರಾಮಿಕ ಇಡೀ ವಿಶ್ವವನ್ನು ವ್ಯಾಪಿಸಿ ಸಂಕಷ್ಟ ಉಂಟುಮಾಡಿರುವುದು ನಮಗೆಲ್ಲರಿಗೂ ತಿಳಿದಿದೆ. ಆದರೂ ನಾವು ಹಬ್ಬ ಆಚರಣೆಗಳನ್ನು ಮಾಡುತ್ತಿದ್ದೇವೆ. ಕೋವಿಡ್‌ ನಿಯಮಗಳನ್ನು ಪಾಲಿಸಿ ಕ್ರಿಸ್‌ಮಸ್‌ ಆಚರಿಸುವಂತೆ ಕಲಾಕೃತಿ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ. ಈ ಕಲಾಕೃತಿಯು ದಾಖಲೆ ಪುಸ್ತಕದಲ್ಲಿ ಹೆಸರಾಗುತ್ತದೆ ಎಂದು ಕಲಾವಿದ ಸುದರ್ಶನ್‌ ಪ್ರತಿಕ್ರಿಯಿಸಿದ್ದಾರೆ.

  • ಸಂತಾಕ್ಲಾಸ್ ಡ್ರೆಸ್ ಧರಿಸಿದ ಸಚಿನ್ – ಅನಾಥ ಮಕ್ಕಳೊಂದಿಗೆ ಕ್ರಿಸ್ಮಸ್ ಆಚರಣೆ

    ಸಂತಾಕ್ಲಾಸ್ ಡ್ರೆಸ್ ಧರಿಸಿದ ಸಚಿನ್ – ಅನಾಥ ಮಕ್ಕಳೊಂದಿಗೆ ಕ್ರಿಸ್ಮಸ್ ಆಚರಣೆ

    ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಸಂತಾಕ್ಲಾಸ್ ಡ್ರೆಸ್ ಧರಿಸಿ ಅನಾಥ ಮಕ್ಕಳೊಡನೆ ಮಗುವಾಗಿ ಸಂಭ್ರವಿಸಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

    ಸಂತಾಕ್ಲಾಸ್ ವೇಷ ಧರಿಸಿ ಮುಂಬೈನಲ್ಲಿರುವ ಆಶ್ರಯ ಚೈಲ್ಡ್  ಕೇರ್‌ಲ್ಲಿ  ಅನಾಥ ಮಕ್ಕಳೊಂದಿಗೆ ಈ ಬಾರಿ ಕ್ರಿಸ್ಮಸ್ ಆಚರಿಸಿದ್ದಾರೆ.

    ಮಕ್ಕಳೊಂದಿಗೆ ಮಗುವಾದ ಸಚಿನ್ ಮಕ್ಕಳ ಆಸೆಯಂತೆ ಅವರೊಂದಿಗೆ ಕ್ರಿಕೆಟ್ ಆಟವಾಡಿ ಖುಷಿಪಟ್ಟರು. ಅಲ್ಲದೆ ಮಕ್ಕಳ ಜೊತೆ ತಾವು ಮಕ್ಕಳಾಗಿ ಸಂತೋಷವಾಗಿ ಎಲ್ಲರೊಡನೆ ಬೆರೆತರು. ಬಳಿಕ ಎಲ್ಲಾ ಮಕ್ಕಳಿಗೂ ಉಡುಗೊರೆಯನ್ನು ಕೊಟ್ಟು ಸಂಭ್ರಮಿಸಿದ್ದಾರೆ.

    ಮಕ್ಕಳೊಡನೆ ಕಳೆದ ಕ್ಷಣವನ್ನು, ಅವರ ಸಂಭ್ರಮದ ಕ್ರಿಸ್ಮಸ್ ಆಚರಣೆಯ ವೀಡಿಯೋವನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಸಚಿನ್ ಪೋಸ್ಟ್ ಮಾಡಿದ್ದಾರೆ. ಹಾಗೆಯೇ ಎಲ್ಲರಿಗೂ ಮೇರಿ ಕ್ರಿಸ್ಮಸ್. ಆಶ್ರಯ ಚೈಲ್ಡ್ ಕೇರ್‌ ಮಕ್ಕಳೊಂದಿಗೆ ಕಳೆದ ಸಮಯ ತುಂಬಾ ಅದ್ಭುತವಾಗಿತ್ತು. ಮಕ್ಕಳ ಮುಗ್ಧ ಮುಖಗಳಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಅಂತ ಸಂತಸ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv