Tag: Sankranti

  • ಮುಂದಿನ ಸಂಕ್ರಾಂತಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ

    ಮುಂದಿನ ಸಂಕ್ರಾಂತಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ

    ನವದೆಹಲಿ: ಅಯೋಧ್ಯೆಯಲ್ಲಿ (Ayodhya) ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ (Ram Mandir) ಕಾಮಗಾರಿ ಮುಂದಿನ ಸಂಕ್ರಮಣದ ವೇಳೆಗೆ ಅಂತ್ಯವಾಗಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ. ಅಕ್ಟೋಬರ್ ವೇಳೆಗೆ ಮೊದಲ ಮಹಡಿ ಸಿದ್ಧವಾಗಲಿದ್ದು, ಮುಂದಿನ ಜನವರಿಗೆ ಕಾಮಗಾರಿ ಅಂತ್ಯವಾಗಲಿದೆ ಎಂದರು.

    ಸುದ್ದಿಗೋಷ್ಠಿ ನಡೆಸಿ ಮಂದಿರ ನಿರ್ಮಾಣ ಪ್ರಗತಿ ಬಗ್ಗೆ ತಿಳಿಸಿದ ಅವರು, ದೇವಸ್ಥಾನದ ಕಾಮಗಾರಿ 60%ರಷ್ಟು ಅಂತ್ಯವಾಗಿದೆ. ವೇಗವಾಗಿ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ನಿಗದಿತ ಅವಧಿಗಿಂತ ಮುಂಚೆ ಕಾಮಗಾರಿ ಅಂತ್ಯವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

    2024ರ ಮಕರ ಸಂಕ್ರಾಂತಿಯ (Makar Sankranti) ವೇಳೆಗೆ ದೇವಾಲಯದ ಗರ್ಭಗುಡಿಯಲ್ಲಿ ಭಗವಾನ್ ರಾಮಲಾಲಾ ಅವರ ಪ್ರಾಣ ಪ್ರತಿಸ್ಥಾಪಿಸಲಾಗುವುದು, ಸದ್ಯದ ಸಿದ್ಧತೆಗಳ ಪ್ರಕಾರ ಜನವರಿ 1 ರಿಂದ 14ರೊಳಗೆ ಪ್ರಾಣ ಪ್ರತಿಷ್ಠಾನ ಕಾರ್ಯ ನಡೆಯುವ ಯೋಜನೆ ಇದೆ ಎಂದರು. ಇದನ್ನೂ ಓದಿ: ನಿರಾಣಿ ಆ ಹುಲಿ ಜೊತೆ ಮಾತಾಡಲಿ- ಯತ್ನಾಳ್‍ರನ್ನ ಹುಲಿಗೆ ಹೋಲಿಕೆ ಮಾಡಿದ ಸ್ವಾಮೀಜಿ

    ಶ್ರೀರಾಮನ ವಿಗ್ರಹವು ಟ್ರಸ್ಟ್ ಪ್ರಕಾರ 8.5 ಅಡಿ ಎತ್ತರವಿರುತ್ತದೆ. ರಾಮ ನವಮಿಯಂದು ಸೂರ್ಯ ಕಿರಣ ರಾಮನ ಮೇಲೆ ಬೀಳುವಂತೆ ವಿನ್ಯಾಸ ಮಾಡಿರುವ ಹಿನ್ನಲೆ ಮೂರ್ತಿ 8.5 ಅಡಿ ಎತ್ತರಕ್ಕೆ ನಿರ್ಧರಿಸಿದೆ. ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಿರುವ ರಾಮನ ಮೂರ್ತಿಯೂ 5 ರಿಂದ 7 ವರ್ಷ ವಯಸ್ಸಿನ ಮಗುವಿನ ರೂಪದಲ್ಲಿರಲಿದೆ.

    ಈ ಮೂರ್ತಿ ಆಕಾಶ ನೀಲಿ ಬಣ್ಣದಲ್ಲಿರಲಿದ್ದು, ವಿಗ್ರಹಕ್ಕೆ ಅಂತಹ ಕಲ್ಲನ್ನು ಆಯ್ಕೆ ಮಾಡಲಾಗುತ್ತದೆ. ಪದ್ಮಶ್ರೀ ಪುರಸ್ಕೃತ ಶಿಲ್ಪಿ ರಾಮಲಾಲಾ ವಿಗ್ರಹದ ಆಕಾರವನ್ನು ಮಾಡಲಿದ್ದಾರೆ. ಓರಿಸ್ಸಾದ ಹಿರಿಯ ಶಿಲ್ಪಿಗಳಾದ ಸುದರ್ಶನ್ ಸಾಹು ಮತ್ತು ವಾಸುದೇವ್ ಕಾಮತ್ ಮತ್ತು ಕರ್ನಾಟಕ ಮೂಲದ ರಾಮಯ್ಯ ವಾಡೇಕರ್ ಕೆತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಚಂಪತ್ ರೈ ತಿಳಿಸಿದರು. ಇದನ್ನೂ ಓದಿ: ಸ್ಯಾಂಟ್ರೋ ಟ್ರಾವೆಲ್ಸ್ ಹತ್ತಿದವರಿಗೆ ಸಿಡಿ ಭಯ- ರವಿ ಹತ್ರ ಸಿಡಿ ಇವೆಯಾ..!?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಂಕ್ರಾಂತಿ ಹಾಡಿಗೆ ಸುಂದರಿಯರ ಜೊತೆ ಕುಣಿದ ರಮೇಶ್ ಅರವಿಂದ್

    ಸಂಕ್ರಾಂತಿ ಹಾಡಿಗೆ ಸುಂದರಿಯರ ಜೊತೆ ಕುಣಿದ ರಮೇಶ್ ಅರವಿಂದ್

    ಬ್ಬ ಅಂದ್ರೆ ಸಂಭ್ರಮ. ಸಂಭ್ರಮ ಅಂದ್ಮೇಲೆ ಒಂದಿಷ್ಟು ಆತ್ಮೀಯರು ಸೇರಬೇಕು. ಎಲ್ಲರೂ ಸೇರಿದಾರೆ ಅಂದ್ರೆ ಅಲ್ಲೊಂದು ಚೆಂದದ ಹಾಡು ಇರ್ದಿದ್ರೆ ಹೇಗೆ. ಹೌದು, ಇನ್ನೇನು ಕೆಲವೇ ದಿನ ಸಂಕ್ರಾಂತಿ ಹಬ್ಬ ಬಂದೇ ಬಿಡ್ತು. ಸಂಕ್ರಾಂತಿ ಹಬ್ಬಕ್ಕೆ ಒಂದು ಚೆಂದದ ಸಾಂಗ್ ಇದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ. ಇಂತಹ ಆಲೋಚನೆಯಲ್ಲೇ ಹಾಡೊಂಡು ಸಿದ್ಧವಾಗಿ ಬಿಡುಗಡೆಯಾಗಿದೆ. ಒಂದಿಷ್ಟು ಸಂಗೀತ ಪ್ರಿಯ ಮನಸ್ಸುಗಳು ಒಟ್ಟಿಗೆ ಸೇರಿ ಸಂಕ್ರಾಂತಿಗೆಂದು ಹೊಸ ಸಾಂಗ್ ವೊಂದನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ.

    ಸಂಕ್ರಾಂತಿ ಹಬ್ಬಕ್ಕೆಂದೇ ವಿಶೇಷವಾಗಿ ರಚಿಸಲಾದ ‘ಸಂಕ್ರಾಂತಿ ತಕಥೈ’ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ಮೂಡಿ ಬಂದಿರೋ ಈ ಹಾಡಿಗೆ ಹರ್ಷಿಕಾ ಪೂಣಚ್ಚ, ರಾಧಿಕಾ ನಾರಾಯಣ್, ಪೃಥ್ವಿ ಅಂಬರ್ ಹಾಗೂ ತೆಲುಗಿನ ಮಾನಸ್ ನಗುಲಪಲ್ಲಿ, ಕೀರ್ತಿ ಭಟ್, ನಿಖಿಲ್ ಮಲಿಯಕ್ಕಳ್ ಹೆಜ್ಜೆ ಹಾಕಿದ್ದಾರೆ. ಖ್ಯಾತ ನಟ ರಮೇಶ್ ಅರವಿಂದ್ ಸ್ಪೆಷಲ್ ಅಪಿಯರೆನ್ಸ್ ಇರುವ ಈ ಹಾಡು ಬಿಡುಗಡೆಯಾಗಿ ಸಂಕ್ರಾಂತಿ ಹಬ್ಬದ ರಂಗು ಹೆಚ್ಚಿಸಿದೆ. ಇದನ್ನೂ ಓದಿ: ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿಗೆ ಶೂಟಿಂಗ್‌ ವೇಳೆ ಅಪಘಾತ: ಆಸ್ಪತ್ರೆಗೆ ದಾಖಲು

    ತೆಲುಗಿನ ಖ್ಯಾತ ಹಾಗೂ ಹಿರಿಯ ನೃತ್ಯ ನಿರ್ದೇಶಕಿ ಆನಿ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ‘ಸಂಕ್ರಾಂತಿ ತಕಥೈ’ ಹಾಡು ಮೂಡಿ ಬಂದಿದೆ. ಗಾಯಕಿ ಹಾಗೂ ‘ಎದೆ ತುಂಬಿ ಹಾಡುವೆನು’ ಖ್ಯಾತಿಯ ಲಕ್ಷ್ಮೀ ಹೊಯ್ಸಳ್ ಹಾಗೂ ಶ್ರೀನಿವಾಸ್ ನಾಯಕ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಮಲಯಾಳಂ ಸಂಗೀತ ನಿರ್ದೇಶಕ ಅನೂಪ್ ಮೆನನ್ ಸಂಗೀತ ನಿರ್ದೇಶನ ಹಾಡಿಗಿದ್ದು, ಅನೂಪ್ ಮೆನನ್ ಹಾಗೂ ಲಕ್ಷ್ಮೀ ಹೊಯ್ಸಳ್ ಹಾಡಿಗೆ ದನಿಯಾಗಿದ್ದಾರೆ.  ಶರದ್ ಗುಮಾಸ್ತೆ ಅವರ ರೆಡ್ ಸೀಡರ್ ಎಂಟಟೈನ್ಮೆಂಟ್ ಬ್ಯಾನರ್ ಅಡಿ ‘ಸಂಕ್ರಾಂತಿ ಥಕಥೈ’ ಹಾಡನ್ನು ನಿರ್ಮಾಣ ಮಾಡಿದ್ದು, ಜಯ್ ಸಿರಿಕೊಂಡ ಛಾಯಾಗ್ರಹಣ, ಪ್ರಭು ಸಂಕಲನ ಹಾಡಿಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವ್ಯಕ್ತಿಯ ಕತ್ತನ್ನೇ ಸೀಳಿತು ನಿಷೇಧಿತ ಗಾಜು ಲೇಪಿತ ಗಾಳಿಪಟ ದಾರ!

    ವ್ಯಕ್ತಿಯ ಕತ್ತನ್ನೇ ಸೀಳಿತು ನಿಷೇಧಿತ ಗಾಜು ಲೇಪಿತ ಗಾಳಿಪಟ ದಾರ!

    ಹೈದರಾಬಾದ್: ಸಂಕ್ರಾಂತಿಯ ಹಿನ್ನೆಲೆಯಲ್ಲಿ ಹಾರಿಸುತ್ತಿದ್ದ ಗಾಳಿಪಟದ ನಿಷೇಧಿತ ಗಾಜು (ಮಾಂಜಾ) ಲೇಪಿತ ದಾರ ಬೈಕ್ ಸವಾರನ ಕತ್ತು ಸೀಳಿರುವ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ನಡೆದಿದೆ.

    ಅಮನ್ ಪತ್ನಿಯೊಂದಿಗೆ ಶನಿವಾರ ಸಂಬಂಧಿಕರನ್ನು ಭೇಟಿಯಾಗಲು ಹೋಗುತ್ತಿದ್ದ. ಈ ಸಂದರ್ಭದಲ್ಲಿ ಗಾಳಿಪಟದ ದಾರ ಅಮನ್‌ನ ಕತ್ತಿಗೆ ಸಿಲುಕಿ ಬಿಗಿದುಕೊಂಡಿದೆ. ಪರಿಣಾಮವಾಗಿ ಆತನ ಕತ್ತು ಸೀಳಿಕೊಂಡಿದೆ. ತೀವ್ರ ರಕ್ತ ಸ್ರಾವವಾದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಪತ್ನಿ, ಅಮನ್‌ನನ್ನು ದಾರದಿಂದ ಬಿಡಿಸಲು ಪ್ರಯತ್ನಿಸಿದ್ದಾಳೆ. ಇದರಿಂದ ಆಕೆಗೂ ಗಾಯಗಳಾಗಿವೆ. ಆದರೆ ಅಮನ್‌ನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಅಮನ್ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಗಾಳಿಪಟ ಹಾರಿಸುವಾಗ ಬಿದ್ದು ಒಂದೇ ದಿನ 63ಕ್ಕೂ ಹೆಚ್ಚು ಮಂದಿಗೆ ಗಾಯ

    ಗಾಳಿಪಟಗಳಲ್ಲಿ ನೈಲಾನ್ ದಾರಗಳ ಸಂಪೂರ್ಣ ನಿಷೇಧ:
    ದೇಶದಲ್ಲಿ ಗಾಳಿಪಟಗಳಲ್ಲಿ ನೈಲಾನ್ ಅಥವಾ ಸಿಂಥೆಟಿಕ್ ದಾರಗಳನ್ನು ಬಳಸುವುದು ಸಂಪೂರ್ಣ ನಿಷೇಧಿಸಲಾಗಿದೆ. ಇವುಗಳಿಂದ ಪ್ರಾಣಿ-ಪಕ್ಷಿಗಳಿಗೆ ಮಾರಣಾಂತಿಕ ಹಾನಿ ಉಂಟಾಗುತ್ತದೆ ಎಂಬ ಕಾರಣಕ್ಕೆ ಮಾಂಜಾವನ್ನು ಸಂಗ್ರಹಿಸುವುದು, ಬಳಕೆ ಮಾಡುವುದು, ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ಮಕರ ಸಂಕ್ರಾಂತಿಗೆ ಗಾಳಿಪಟ ತಂತಿ ಮಾರಾಟ, ಸಂಗ್ರಹಣೆ ನಿಷೇಧ

  • ಸಂಕ್ರಾಂತಿಗೆ ಅಮೂಲ್ಯ ಮನೆಗೆ ಗಂಗೆ, ದ್ರೌಪದಿ ಆಗಮನ

    ಸಂಕ್ರಾಂತಿಗೆ ಅಮೂಲ್ಯ ಮನೆಗೆ ಗಂಗೆ, ದ್ರೌಪದಿ ಆಗಮನ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಅವರ ಮನೆಗೆ ಗೋವುಗಳನ್ನು ತಂದು ಗೋವುಗಳಿಗೆ ಪೂಜೆ ಮಾಡಿ ಅದ್ಧೂರಿಯಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ.

    ಅಮೂಲ್ಯ ಹಾಗೂ ಪತಿ ಜಗದೀಶ್ ಸೇರಿ ಸಂಕ್ರಾತಿಯನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಅಮೂಲ್ಯ ಅವರು ಗೋವಿಗೆ ಪೂಜೆ ಮಾಡುತ್ತಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯ ಕೋರಿ ನಮ್ಮ ಮನೆಗೆ ಸಂಕ್ರಾಂತಿ ಹಬ್ಬದ ದಿನ ಗಂಗೆ ಮತ್ತು ದ್ರೌಪದಿ ಎಂಬ ಹೆಸರಿನ ಹೊಸ ಅತಿಥಿಗಳ ಆಗಮನವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ನಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ತುಂಬು ಗರ್ಭಿಣಿಯಾಗಿರುವ ನಟಿ ಅಮೂಲ್ಯ ಫೋಟೋಶೂಟ್ ಮಾಡಿಸಿರುವ ಫೋಟೋ ಭಾರೀ ವೈರಲ್ ಆಗಿತ್ತು. ಈ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್‍ನಲ್ಲಿ ನಟಿ ಅಮೂಲ್ಯ

    ಅಮೂಲ್ಯ ಸ್ಯಾಂಡಲ್‍ವುಡ್‍ಗೆ ಬಾಲ ನಟಿಯಾಗಿ ಎಂಟ್ರಿಕೊಟ್ಟರು. ನಂತರ ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಹೀರೋಯಿನ್ ಆಗಿ ಚಿರಪರಿಚಿತರಾದರು. ಉತ್ತಮವಾದ ನಟನೆಯ ಮೂಲಕವಾಗಿ ಅಭಿಮಾನಿಗಳ ಮನದಲ್ಲಿ ಜಾಗ ಗಿಟ್ಟಿಸಿಕೊಂಡರು. 2017ರಲ್ಲಿ ಜಗದೀಶ್ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದಂಪತಿ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: ರಿಯಲ್ ಸ್ಟಾರ್  ಉಪ್ಪಿ ಮನೆಯಲ್ಲಿ ಸಂಕ್ರಾಂತಿ ಸಡಗರ

  • ಸಂಕ್ರಾಂತಿ ವೇಳೆ ಕೋಳಿ ಅಂಕಕ್ಕೆ ಬ್ರೇಕ್ ಹಾಕಲು ಪೊಲೀಸರು ಸಜ್ಜು

    ಸಂಕ್ರಾಂತಿ ವೇಳೆ ಕೋಳಿ ಅಂಕಕ್ಕೆ ಬ್ರೇಕ್ ಹಾಕಲು ಪೊಲೀಸರು ಸಜ್ಜು

    ಅಮರಾವತಿ: ದಕ್ಷಿಣ ಭಾರತದ ಹೆಚ್ಚಿನ ಕಡೆಗಳಲ್ಲಿ ನಡೆಸಲಾಗುವ ಜೂಜಿನ ಆಟ ಕೋಳಿ ಅಂಕಕ್ಕೆ ಆಂಧ್ರಪ್ರದೇಶದಲ್ಲಿ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ. ಸಂಕ್ರಾಂತಿಗೆ ಕೆಲವೇ ದಿನಗಳು ಬಾಕಿ ಇರುವಾಗ ಕೋಳಿ ಅಂಕ ಜನರು ಸಜ್ಜಾಗುತ್ತಿದ್ದಂತೆ ಪೊಲೀಸರು ಅದರ ನಿರ್ಬಂಧದ ಕಟ್ಟೆಚ್ಚರಿಕೆ ನೀಡಿದ್ದಾರೆ.

    ಕೋಳಿ ಅಂಕ ನಿಷೇಧ ಕೆಲವು ವರ್ಷಗಳ ಹಿಂದೆಯಷ್ಟೇ ಜಾರಿಯಾಗಿತ್ತು. ಹೀಗಿದ್ದರೂ ಜನರು ಅದನ್ನು ಮರೆತು ಮತ್ತೆ ಕೋಳಿ ಅಂಕಕ್ಕೆ ಸಜ್ಜಾಗುತ್ತಿದ್ದಾರೆ. ಮುಖ್ಯವಾಗಿ ಆಂಧ್ರಪ್ರದೇಶದ ಪೂರ್ವ ಹಾಗೂ ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಕೋಳಿ ಅಂಕ ಹಾಗೂ ಬೆಟ್ಟಿಂಗ್ ನಡೆಯುವ ಪ್ರಮುಖ ಕೇಂದ್ರಗಳೆಂದು ವರದಿಯಾಗಿದೆ. ಇದನ್ನೂ ಓದಿ: ಪುಷ್ಪ ಸಿನಿಮಾ ಮಾದರಿಯಲ್ಲಿ ದರೋಡೆ – ಇಬ್ಬರು ಹೆಡ್ ಕಾನ್‍ಸ್ಟೇಬಲ್ ಸಸ್ಪೆಂಡ್

    ಮಂಗಳವಾರ ಪೊಲೀಸರು ಸಂಕ್ರಾಂತಿಗೆಂದು ಸಿದ್ಧಪಡಿಸಿದ್ದ 4 ಕೋಳಿಗಳನ್ನು ಸೆರಹಿಡಿದು, ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಪಶ್ಚಿಮ ಗೋದಾವರಿಯ ಎಲೂರಿನಲ್ಲಿ ಬೆಟ್ಟಿಂಗ್ ದಂಧೆಯೊಂದನ್ನು ಬೇಧಿಸಿ 1.20 ಲಕ್ಷ ರೂ.ಯನ್ನು ವಶಪಡಿಸಿಕೊಂಡಿದ್ದಾರೆ.

    ಕೋಳಿ ಅಂಕದಲ್ಲಿ ಪಂಟರ್ ಕೋಳಿಗಳ ಕಾಲಿಗೆ ಚಿಕ್ಕ ಕತ್ತಿಯನ್ನು ಕಟ್ಟಿ ಕಾಳಗಕ್ಕೆ ಬಿಡಲಾಗುತ್ತದೆ. ಎರಡು ಕೋಳಿಗಳಲ್ಲಿ ಯಾವುದಾದರೂ ಒಂದು ಸಾಯುವ ವರೆಗೂ ಕಾಳಗ ಮುಂದುವರಿಯುತ್ತದೆ. ಇದರಲ್ಲಿ ಪ್ರಾಣಿ ಹಿಂಸೆಯೊಂದಿಗೆ ಬೆಟ್ಟಿಂಗ್ ಕೂಡಾ ನಡೆಯುವ ಕಾರಣ ಈ ಆಟವನ್ನು ದಕ್ಷಿಣ ಭಾರತ ರಾಜ್ಯಗಳಲ್ಲಿ ನಿಷೇಧಿಸಲಾಗಿದೆ. ಇದನ್ನೂ ಓದಿ: ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ಮಾಡಿದವನು ಸೇರಿ 5 ಜನ ಅರೆಸ್ಟ್

    ಇಂತಹ ಕಾನೂನು ಬಾಹಿರ ಆಟಗಳಲ್ಲಿ ತೊಡಗಿಗೊಳ್ಳುವುದು ಅಥವಾ ಪ್ರೋತ್ಸಾಹಿಸುವುದು ತಿಳಿದು ಬಂದಲ್ಲಿ ಕಾನೂನು ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತದೆ.

  • ಹಬ್ಬ ಮಾಡಿದ್ರೆ ದನಕರುಗಳು ಸಾಯುವ ಭಯ – ಸಂಕ್ರಾಂತಿ ಹಬ್ಬವನ್ನೇ ಮಾಡುತ್ತಿಲ್ಲ ಗ್ರಾಮಸ್ಥರು

    ಹಬ್ಬ ಮಾಡಿದ್ರೆ ದನಕರುಗಳು ಸಾಯುವ ಭಯ – ಸಂಕ್ರಾಂತಿ ಹಬ್ಬವನ್ನೇ ಮಾಡುತ್ತಿಲ್ಲ ಗ್ರಾಮಸ್ಥರು

    ಕೋಲಾರ : ಕೋಲಾರದ ಈ ಊರಲ್ಲಿ ಸಂಕ್ರಾಂತಿ ಅಂದ್ರೆನೆ ಭಯ, ಶೋಕ. ಸಂಕ್ರಾಂತಿ ಬಂತು ಅಂದ್ರೆ ಈ ಹಳ್ಳಿಯ ಜನ ಸೂತಕದ ರೀತಿ ಹಬ್ಬ ಆಚರಣೆ ಮಾಡುತ್ತಾರೆ ಹಾಗೂ ಹಬ್ಬ ಆಚರಿಸಿದರೆ ಊರಿಗೆ ಸಮಸ್ಯೆಯಾಗುತ್ತದೆ. ಜನ ಜಾನುವಾರು ಸಾಯುತ್ತವೆ ಎನ್ನುವ ನಂಬಿಕೆಯಿಂದ ಸಂಕ್ರಾಂತಿ ಹಬ್ಬ ಆಚರಿಸುವುದನ್ನು ಬಿಟ್ಟು ಬಿಟ್ಟಿದ್ದಾರೆ.

    ಇದು ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಆಚರಣೆ ಮಾಡಿಕೊಂಡು ಬಂದಿರುವ ಪದ್ದತಿ ಎನ್ನುತ್ತಾರೆ ಹಿರಿಯರು. ಒಂದು ಸಾವಿರಕ್ಕೂ ಹೆಚ್ಚು ಜನ ಸಂಖ್ಯೆಯಿರುವ ಈ ಗ್ರಾಮದಲ್ಲಿ ಇಂದಿಗೂ ಇಂತಹ ಮೌಢ್ಯಕ್ಕೆ ಜೋತು ಬಿದ್ದಿದ್ದಾರೆ.

    ಇತ್ತೀಚೆಗಂತೂ ಈ ಊರಿನಲ್ಲಿ ವಿದ್ಯಾವಂತರು ಮತ್ತು ಉತ್ತಮ ಸರ್ಕಾರಿ ಹುದ್ದೆಗಳಲ್ಲಿದ್ದಾರೆ. ಈ ಊರಿಗೆ ಕೋಲಾರ ನಗರ ಕೂಗಳತೆ ದೂರದಲ್ಲಿದೆ. ಆದರೆ ಇವರು ಕೂಡಾ ಹಳೆ ಕಾಲದವರಂತೆ ಹಿಂದಿನ ಪದ್ದತಿಯ ಮೂಢನಂಬಿಕೆಯನ್ನು ಈಗಲೂ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಸಂಕ್ರಾಂತಿ ಹಬ್ಬವನ್ನು ಮಾಡಿದರೆ ಊರಿಗೆ ಕೆಟ್ಟದಾಗುತ್ತದೆ ಎಂದು ಹಿಂದಿನವರು ಹೇರಿರುವ ಆಧಾರವಿಲ್ಲದ ನಿಷೇಧವನ್ನು ಇನ್ನೂ ಪಾಲಿಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಸಂಕ್ರಾಂತಿ ಹಬ್ಬವನ್ನು ಮಾಡುವುದೇ ಇಲ್ಲ, ಸಂಕ್ರಾಂತಿ ಹಬ್ಬ ಬಂತು ಅಂದರೆ ಈ ಗ್ರಾಮಕ್ಕೆ ಗ್ರಾಮವೇ ಭಯದ ವಾತಾವರಣ ಆವರಿಸುತ್ತದೆ.

    ಪಕ್ಕದ ಊರುಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಆದರೆ ಅರಾಭಿಕೊತ್ತನೂರಲ್ಲಿ ಮಾತ್ರ ಇವತ್ತು ಸೂತಕದ ಛಾಯೆಯಲ್ಲಿ ಮುಳಗಿರುತ್ತದೆ. ಈ ಹಿಂದೆ ಹಬ್ಬ ಮಾಡಿದ ವೇಳೆ ದನಕರುಗಳನ್ನ ಓಡಿಸಲಾಯಿತು. ಹೀಗೆ ಓಡಿಸಿದ ಜನ ಜಾನುವಾರು ಯಾರೂ ವಾಪಸ್ ಬಂದಿಲ್ಲ. ಅದಾದ ಬಳಿಕ ಗ್ರಾಮದಲ್ಲಿದ್ದ ಎಲ್ಲಾ ದನ ಕರುಗಳು ಇದಕ್ಕಿದ್ದಂತೆ ಸಾವನ್ನಪ್ಪುತ್ತಿದ್ದವು, ಇದರಿಂದ ಬೆಚ್ಚಿ ಬಿದ್ದ ಜನರು ಇಂದಿಗೂ ಹಬ್ಬವನ್ನ ಶೋಕದ ರೀತಿಯಲ್ಲಿ ಆಚರಣೆ ಮಾಡುತ್ತಾರೆ.

    ಈ ಹಿಂದೆ ಅರಾಭಿಕೊತ್ತನೂರಿಗೆ ದೊಡ್ಡ ಕಾಯಿಲೆಯೊಂದು ವಕ್ಕರಿಸಿ ಊರಲ್ಲಿದ್ದ ದನ-ಕರುಗಳು ಇದ್ದಕ್ಕಿದ್ದಂತೆ ಸಾಯುವುದಕ್ಕೆ ಶುರುವಾಗಿತ್ತು. ಆಗ ದಿಕ್ಕು ತೋಚದಂತಾದ ಊರಿನ ಹಿರಿಯರು ನಡಿಯುತ್ತಿರುವ ಅನಾಹುತವನ್ನು ನಿಲ್ಲಿಸುವಂತೆ ಬಸವಣ್ಣನಲ್ಲಿ ಕೋರಿಕೊಂಡಿದ್ದಾರೆ. ಸಂಕ್ರಾಂತಿ ಹಬ್ಬದಲ್ಲಿ ದನ-ಕರುಗಳಿಗೆ ಮಾಡುವ ಪೂಜೆ ಪುನಸ್ಕಾರವನ್ನು ಬೇರೊಂದು ದಿನ ನಿನಗೆ ಮಾಡುತ್ತೇವೆ ಎಂದು ಪ್ರಾರ್ಥನೆಯನ್ನು ಮಾಡಿಕೊಂಡಿದ್ದಾರೆ. ಆಗ ಹಸುಗಳ ಸಾವು ನಿಲ್ಲಿತು. ಹಾಗಾಗಿ ಸಂಕ್ರಾಂತಿ ಹಬ್ಬವನ್ನು ಊರಲ್ಲಿ ಮಾಡದಿರುವ ಪ್ರತೀತಿಯು ಅಂದಿನಿಂದಲೂ ಜಾರಿಗೆ ಬಂದಿದೆ. ಸಂಕ್ರಾಂತಿ ಅದ ಮೇಲೆ ಒಂದು ದಿನ ಗ್ರಾಮಸ್ಥರು ಊರಲ್ಲಿರುವ ಬಸವಣ್ಣನ ದೇವಸ್ಥಾನಕ್ಕೆ ಹಸುಗಳನ್ನು ಅಲಂಕಾರ ಮಾಡಿಕೊಂಡು ಹೋಗಿ ಪೂಜೆ ಮಾಡಿಕೊಂಡು ಬರುತ್ತಾರೆ.

  • ಸಂಕ್ರಾಂತಿಗೆ ಮಾಡಿ ಸಿಹಿ ಪೊಂಗಲ್

    ಸಂಕ್ರಾಂತಿಗೆ ಮಾಡಿ ಸಿಹಿ ಪೊಂಗಲ್

    ಸಂಕ್ರಾಂತಿ ಹಬ್ಬ ಸಂಭ್ರಮದ ಹಬ್ಬವಾಗಿದೆ. ವರ್ಷದ ಮೊದಲ ಹಬ್ಬ ಇದಾಗಿದೆ. ಸುಗ್ಗಿ ಹಬ್ಬ ಎಂದು ಕರೆಸಿಕೊಳ್ಳುವ ಈ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತದೆ. ಹಬ್ಬದ ಸಡಗರ, ಸಂಭ್ರಮ ಹೆಚ್ಚುಮಾಡಲು ರುಚಿಯಾದ ಆಹಾರಗಳಿರುತ್ತವೆ. ಈ ಹಬ್ಬದ ವಿಶೇಷ ಅಡುಗೆ ಪೊಂಗಲ್. ಆದ್ದರಿಂದ ನಿಮಗಾಗಿ ಸಿಹಿ ಪೊಂಗಲ್ ಮಾಡುವ ವಿಧಾನ ಇಲ್ಲಿದೆ.

     

    ಬೇಕಾಗುವ ಸಾಮಗ್ರಿಗಳು:
    1. ಹೆಸರುಬೇಳೆ – 1 ಕಪ್
    2. ಅಕ್ಕಿ – 1 ಕಪ್
    3. ಪುಡಿ ಮಾಡಿದ ಬೆಲ್ಲ/ ಸಕ್ಕರೆ – 1 ಕಪ್
    4. ಏಲಕ್ಕಿ – 4
    5. ದ್ರಾಕ್ಷಿ ,ಗೋಡಂಬಿ- 50 ಗ್ರಾಂ
    6. ತುಪ್ಪ – 4 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು ಹಾಕಿ ಅದು ಕೆಂಪಾಗುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ.
    * ಕುಕ್ಕರ್ ನಲ್ಲಿ ತೊಳೆದ ಅಕ್ಕಿ ಮತ್ತು ಹುರಿದ ಹೆಸರುಬೇಳೆ ಹಾಕಿ 4 ಕಪ್ ನೀರು ಹಾಕಿ ಒಂದು ವಿಷಲ್ ಬರುವ ತನಕ ಬೇಯಿಸಿ.
    * ಮತ್ತೊಂದು ಪ್ಯಾನ್ ನಲ್ಲಿ ಪುಡಿಮಾಡಿದ ಬೆಲ್ಲ ಹಾಕಿ ಕರಗಿಸಿ.(ಒಂದು ವೇಳೆ ಬೆಲ್ಲದಲ್ಲಿ ಕಲ್ಮಶವಿದ್ದರೆ ಒಮ್ಮೆ ಶೋಧಿಸಿಕೊಳ್ಳಿ)
    * ಈಗ ಬೆಂದ ಅಕ್ಕಿ ಮತ್ತು ಬೇಳೆಗೆ ಬೆಲ್ಲದ ಪಾಕ ಹಾಕಿ ಚೆನ್ನಾಗಿ ತಿರುವಿ.
    * ನಂತರ ಪುಡಿ ಮಾಡಿದ ಏಲಕ್ಕಿ, ತುಪ್ಪದಲ್ಲಿ ಕರಿದ ದ್ರಾಕ್ಷಿ ಗೋಡಂಬಿ ಹಾಕಿ ಒಲೆಯಿಂದ ಇಳಿಸಿ.
    (ಇದಕ್ಕೆ ಬೇಕಿದ್ದಲ್ಲಿ ಸ್ವಲ್ಪ ಪಚ್ಚ ಕರ್ಪೂರ ಮತ್ತು ಒಂದು ಚಿಟಿಕೆ ಲವಂಗದ ಪುಡಿಯನ್ನು ಸೇರಿಸಬಹುದು)

  • ಸಂಕ್ರಾಂತಿ ಸ್ಪೆಷಲ್ – ಖಾರಾ ಪೊಂಗಲ್ ಮಾಡುವ ವಿಧಾನ

    ಸಂಕ್ರಾಂತಿ ಸ್ಪೆಷಲ್ – ಖಾರಾ ಪೊಂಗಲ್ ಮಾಡುವ ವಿಧಾನ

    ಹಬ್ಬ ಎಂದರೆ ಸಡಗರ, ಸಂಭ್ರಮ ಹೀಗಿರುವಾಗ ವರ್ಷದ ಮೊದಲ ಹಬ್ಬ ಎಂದರೆ ತುಸು ಸಂತೋಷ ಹೆಚ್ಚಾಗಿಯೇ ಇರುತ್ತದೆ. ಹಬ್ಬಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವುದರಲ್ಲಿ ಪ್ರತಿಯೊಬ್ಬರು ತೊಡಗಿರುತ್ತಾರೆ. ಹಬ್ಬ ಎಂದರೆ ವಿಶೇಷವಾದ ಅಡುಗೆ ಮತ್ತು ರುಚಿ ರುಚಿಯಾದ ತಿನಿಸುಗಳಿದ್ದರೆ ಹಬ್ಬಕ್ಕೆ ಒಂದು ಮೆರಗು ಎಂದರೆ ತಪ್ಪಾಗಲಾರದು. ಈ ಹಬ್ಬದ ವಿಶೇಷ ಅಡುಗೆ ಪೊಂಗಲ್. ಹಾಗಾಗಿ ಖಾರ ಪೊಂಗಲ್ ಮಾಡುವುದು ಹೇಗೆ ಎಂದು ಯೋಚಿಸುವವರೆಗೆ ಇಲ್ಲಿದೆ ಸುಲಭ ವಿಧಾನ.

    ಬೇಕಾಗುವ ಸಾಮಗ್ರಿಗಳು:
    1. ಹೆಸರುಬೇಳೆ- 1 ಕಪ್
    2. ಅಕ್ಕಿ- 1 ಕಪ್
    3. ಜೀರಿಗೆ – ಅರ್ಧ ಚಮಚ
    4 ಕಾಳುಮೆಣಸು – ಅರ್ಧ ಚಮಚ
    5. ಕರಿಬೇವಿನಸೊಪ್ಪು – ಸ್ವಲ್ಪ
    6. ಹಸಿಮೆಣಸಿನಕಾಯಿ – 2 ರಿಂದ 3
    7 ತುಪ್ಪ – 1 ಚಮಚ
    8. ಅರಿಶಿನ- ಒಂದು ಚಿಟಿಕೆ
    9. ಉಪ್ಪು – ರುಚಿಗೆ ತಕ್ಕಷ್ಟು
    10 ಗೋಡಂಬಿ – 10

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು ಹಾಕಿ ಅದು ಕೆಂಪಾಗುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ.
    * ಬಳಿಕ ಕುಕ್ಕರ್ ನಲ್ಲಿ ತೊಳೆದ ಅಕ್ಕಿ ಮತ್ತು ಹುರಿದ ಹೆಸರುಬೇಳೆ ಹಾಕಿ 4 ಕಪ್ ನೀರು ಹಾಕಿ ಒಂದು ವಿಷಲ್ ಬರುವ ತನಕ ಬೇಯಿಸಿ.

    * ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಬಿಸಿ ಮಾಡಿ ಅದಕ್ಕೆ ಕರಿಬೇವಿನಸೊಪ್ಪು, ಜೀರಿಗೆ, ಕಾಳುಮೆಣಸು, ಅರಿಶಿನ, ಗೋಡಂಬಿ ಮತ್ತು ಕತ್ತರಿಸಿದ ಹಸಿಮೆಣಸಿನಕಾಯಿ ಹಾಕಿ ಬಾಡಿಸಿ.
    * ಇದನ್ನು ಬೇಯಿಸಿದ ಅಕ್ಕಿ ಮತ್ತು ಹೆಸರುಬೇಳೆಗೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ 5 ನಿಮಿಷ ಬೇಯಲು ಬಿಡಿ.
    * ಕೊನೆಗೆ ಒಂದು ಚಮಚ ತುಪ್ಪ ಸೇರಿಸಿ ಒಲೆಯಿಂದ ಕೆಳಗಿಳಿಸಿದರೆ ಖಾರ ಪೊಂಗಲ್ ಸವಿಯಲು ಸಿದ್ಧ.

  • ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ – ವಿಸ್ಮಯ ಕಣ್ತುಬಿಕೊಂಡ ಭಕ್ತಗಣ

    ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ – ವಿಸ್ಮಯ ಕಣ್ತುಬಿಕೊಂಡ ಭಕ್ತಗಣ

    ತಿರುವನಂತಪುರಂ: ಪ್ರತಿ ವರ್ಷದಂತೆ ಈ ಬಾರಿ ಶಬರಿಮಲೆಯಲ್ಲಿ ಮಕರ ಜ್ಯೋತಿಯನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ. ದೇವಾಲಯದಿಂದ 8 ಕಿ.ಮೀ ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಜ್ಯೋತಿ ಬುಧವಾರ ಸಂಜೆ 6.45ರ ಸುಮಾರಿಗೆ ಕಾಣಿಸಿಕೊಂಡಿತು.

    ಈ ವಿಶೇಷ ಘಳಿಗೆಗಾಗಿ ಕಾದಿದ್ದ ಲಕ್ಷಾಂತರ ಭಕ್ತರು ಮಕರ ಜ್ಯೋತಿಯ ದರ್ಶನವಾಗುತ್ತಿದ್ದಂತೆ ಗಟ್ಟಿ ಸ್ವರದಲ್ಲಿ “ಸ್ವಾಮಿಯೇ ಶರಣಂ ಅಯ್ಯಪ್ಪ” ಎಂದು ಹೇಳಿ ಜಯಘೋಷ ಕೂಗಿದರು. ಭಕ್ತಿಯಿಂದ ಮಕರ ಜ್ಯೋತಿಗೆ ನಮಸ್ಕರಿಸಿ ಧನ್ಯರಾದರು.

    ಪ್ರತಿ ವರ್ಷ ಜನವರಿ 14ರ ಸಂಜೆ ಅಯ್ಯಪ್ಪ ಸ್ವಾಮಿಗೆ ಮಹಾಮಂಗಳಾರತಿ ಬಳಿಕ ಮಕರ ಜ್ಯೋತಿ ದರ್ಶನವಾಗುತ್ತದೆ. ಆದರೆ ಈ ಬಾರಿ ಮಕರ ಜ್ಯೋತಿ ಜನವರಿ 15ರಂದು ಕಾಣಿಸಿಕೊಂಡಿದೆ. ದೇಶದ ವಿವಿಧ ಭಾಗಗಳಿಂದ ಜಾತಿ, ಧರ್ಮ ಬೇದಭಾವವಿಲ್ಲದೆ ಶಬರಿಮಲೆಗೆ ಬರುವ ಭಕ್ತರು, ಅಯ್ಯಪ್ಪನ ಸನ್ನಿಧಾನದಲ್ಲಿ ಜ್ಯೋತಿಯ ದರ್ಶನ ಪಡೆಯಲು ಎರಡು ಮೂರು ದಿನಗಳ ಮುಂಚೆಯೇ ಆಗಮಿಸುತ್ತಾರೆ.

    ಐತಿಹಾಸಿಕ ಸಾಂಪ್ರದಾಯದಂತೆ ಪಂದಳದಿಂದ ಘೋಷಯಾತ್ರೆಯ ಮೂಲಕ ತಂದ ತಿರುವಾಭರಣಗಳನ್ನು ಅಯ್ಯಪ್ಪನಿಗೆ ತೊಡಿಸಿ ದೀಪಾರಾಧನೆ ನಡೆಸಿದ ಬಳಿಕ ಮಹಾ ಮಂಗಳರಾತಿಯನ್ನು ಮಾಡಲಾಗುತ್ತದೆ. ಮಹಾ ಮಂಗಳಾರತಿ ನಡೆದ ಬಳಿಕ ಪೊನ್ನಂಬಲಮೇಡು ಬೆಟ್ಟದಲ್ಲಿ ಮೂರು ಬಾರಿ ಜ್ಯೋತಿ ಕಾಣಿಸುತ್ತದೆ.

  • ರಸ್ತೆಯಲ್ಲಿ ಸಂಕ್ರಾಂತಿ ಆಚರಿಸಿ ಪ್ರತಿಭಟಿಸಿದ ಕನ್ನಡ ಸಂಘಟನೆಯ ಸದಸ್ಯರು

    ರಸ್ತೆಯಲ್ಲಿ ಸಂಕ್ರಾಂತಿ ಆಚರಿಸಿ ಪ್ರತಿಭಟಿಸಿದ ಕನ್ನಡ ಸಂಘಟನೆಯ ಸದಸ್ಯರು

    ಬೆಂಗಳೂರು: ಸಂಕ್ರಾಂತಿ ಹಬ್ಬ ಅಂದರೆ ಸಡಗರ ಸಂಭ್ರಮ ಜೋರಾಗಿರುತ್ತೆ. ಮನೆಯ ಮುಂದೆ ಬಣ್ಣದ ರಂಗೋಲಿ ಹಾಕಿ, ಎಳ್ಳು ಬೆಲ್ಲ ಬೀರಿ, ಕಬ್ಬು ಸವಿದು ಹಬ್ಬದೂಟ ಮಾಡುವ ಖುಷಿ ಇರುತ್ತೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಕನ್ನಡ ಸಂಘಟನೆ ಕಾರ್ಯಕರ್ತರು, ಮಹಿಳೆಯರು ರಸ್ತೆಯಲ್ಲೇ ಸಂಕ್ರಾಂತಿ ಆಚರಿಸಿದರು.

    ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಮೌರ್ಯ ಸರ್ಕಲ್‍ನಲ್ಲಿ ಸಾಕಷ್ಟು ದಿನದಿಂದ ಕನ್ನಡ ಸಂಘಟನೆಯವರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ರಸ್ತೆಯಲ್ಲಿಯೇ ರಂಗೋಲಿ ಹಾಕಿ, ರಸ್ತೆಯಲ್ಲಿ ಓಡಾಡೋ ಜನರಿಗೆ ಎಳ್ಳು ಬೆಲ್ಲ ಕೊಟ್ಟು, ಹಬ್ಬದ ಖಾದ್ಯವನ್ನು ಅಲ್ಲಿಯೇ ತಯಾರಿಸಿ ಭಿನ್ನವಾಗಿ ಕನ್ನಡ ಸಂಘಟನೆ ಕಾರ್ಯಕರ್ತರು ಹಾಗೂ ಮಹಿಳೆಯರು ಪ್ರತಿಭಟನೆ ನಡೆಸಿದರು.

    ರಸ್ತೆಯಲ್ಲಿ ಹಬ್ಬ ಆಚರಿಸಿದ ಬಗ್ಗೆ ಮಾತನಾಡಿದ ಕಾರ್ಯಕರ್ತರು, ಹಬ್ಬ ಅಂದರೆ ಸಂಭ್ರಮವಿರುತ್ತದೆ. ಆದರೆ ನಾವು ಕನ್ನಡಕ್ಕಾಗಿ, ಕನ್ನಡಿಗರ ಅಭಿವೃದ್ಧಿಗಾಗಿ ಸಂಕ್ರಾಂತಿಯನ್ನು ಇಲ್ಲೇ ಆಚರಣೆ ಮಾಡುತ್ತಿದ್ದೇವೆ. ಮುಂದೆ ಸರೋಜಿನಿ ಮಹಿಷಿ ವರದಿ ಜಾರಿಯಾಗದೇ ಇದ್ದರೆ ತಿಥಿನೂ ಇಲ್ಲೇ ಮಾಡುತ್ತೇವೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.