Tag: sanke

  • ಕಚ್ಚಿದ ಹಾವನ್ನು ಹಿಡಿದುಕೊಂಡೇ ಆಸ್ಪತ್ರೆಗೆ ಬಂದ ಭೂಪ

    ಕಚ್ಚಿದ ಹಾವನ್ನು ಹಿಡಿದುಕೊಂಡೇ ಆಸ್ಪತ್ರೆಗೆ ಬಂದ ಭೂಪ

    ಬಳ್ಳಾರಿ: ಸಾಮಾನ್ಯವಾಗಿ ಹಾವು ಕಂಡರೆ ಮಾರುದ್ದ ಓಡಿ ಹೋಗುವ ಜನರ ಮಧ್ಯೆ, ತನಗೆ ಕಚ್ಚಿದ ಹಾವನ್ನು ಹಿಡಿದುಕೊಂಡು ಯುವನೋರ್ವ ಆಸ್ಪತ್ರೆಗೆ ಬಂದಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾರಳ್ಳಿಯಲ್ಲಿ ನಡೆದಿದೆ.

    ಇಂದು ಮುಂಜಾನೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಗ್ರಾಮದ ಯುವಕ ಕಾಡಪ್ಪನ ಕಾಲಿಗೆ ಹಾವು ಕಚ್ಚಿದೆ. ಹಾವು ಕಚ್ಚಿದ ತಕ್ಷಣ ಎಚ್ಚರಗೊಂಡ ಕಾಡಪ್ಪ ಪಕ್ಕದಲ್ಲಿ ಇದ್ದ ಹಾವನ್ನು ನೋಡಿದ್ದಾನೆ. ಕೂಡಲೇ ಆ ಹಾವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಗ್ರಾಮದ ಮಧ್ಯದಲ್ಲಿಯೇ ನಡೆದುಕೊಂಡು ಆಸ್ಪತ್ರೆಗೆ ಬಂದಿದ್ದಾನೆ. ಇದನ್ನೂ ಓದಿ : ದಾರಿ ತಪ್ಪಿ ಬಳ್ಳಾರಿ ನಗರಕ್ಕೆ ಕರಡಿ ಎಂಟ್ರಿ

    ಕಾಡಪ್ಪ ಹಾವು ಹಿಡಿದುಕೊಂಡು ಆಸ್ಪತ್ರೆಯ ಮುಂದೆ ಚಿಕಿತ್ಸೆಗಾಗಿ ಕಾದು ಕುಳಿತಿದ್ದು, ಆಸ್ಪತ್ರೆ ಆಗಮಿಸಿದ ವೈದ್ಯರು ಕಾಡಪ್ಪ ಕೈಯಲ್ಲಿ ಇದ್ದ ಹಾವುನ್ನು ಕಂಡ ಹೌಹಾರಿದ್ದಾರೆ. ಆಸ್ಪತ್ರೆಯ ಮುಂದೆ ಹಾವು ಹಿಡಿದುಕೊಂಡು ಕುಳಿತ ಕಾಡಪ್ಪನನ್ನು ನೋಡಲು ಜನ ಮುಗಿಬಿದಿದ್ದರು. ಬಳಿಕ ಆಸ್ಪತ್ರೆಯ ವೈದ್ಯರು ಕಾಡಪ್ಪನ ಕೈಯಲ್ಲಿ ಇದ್ದ ಹಾವನ್ನು ಬಿಡಿಸಿ ಚಿಕಿತ್ಸೆ ನೀಡಿದ್ದಾರೆ.

  • ಬೆಂಗ್ಳೂರು ಸುಂದರಿ ಬಳಿ ಮಾತನಾಡೋ ದೇವರ ಹಾವು- ಪಬ್ಲಿಕ್ ಟಿವಿಯಲ್ಲಿ ನಾಗಿಣಿ ರಹಸ್ಯ

    ಬೆಂಗ್ಳೂರು ಸುಂದರಿ ಬಳಿ ಮಾತನಾಡೋ ದೇವರ ಹಾವು- ಪಬ್ಲಿಕ್ ಟಿವಿಯಲ್ಲಿ ನಾಗಿಣಿ ರಹಸ್ಯ

    – ಹಾವ್ ರಾಣಿ ಹೇಳ್ತಾಳಂತೆ ಮಹಾಭವಿಷ್ಯ
    – ಮಾಟಗಾತಿಯ ಮೋಸಕ್ಕೆ ಮದ್ವೆಯೇ ಸ್ಟಾಪ್!

    ಬೆಂಗಳೂರು: ದೇವಲೋಕದಿಂದ ಭೂ ಲೋಕಕ್ಕೆ ದೇವರೆ ಕಳಿಸಿದ ಹಾವು. ಈ ದೇವರ ಹಾವು ಮಾತನಾಡುತ್ತದೆ, ಭವಿಷ್ಯ ಹೇಳುತ್ತದೆ. ಅಷ್ಟೇ ಅಲ್ಲದೆ ಥಟ್ ಅಂತ ಕಷ್ಟ ಪರಿಹರಿಸುತ್ತದೆ. ದೇವರ ಹಾವಿಗಾಗಿ ಇಡೀ ಖಾಕಿ ಪಡೆ ಹುಡುಕಾಡುತ್ತಿದೆ. ಆದರೆ ಈ ಭವಿಷ್ಯ ಹೇಳುವ ದೇವರ ಹಾವನ್ನು ಪಬ್ಲಿಕ್ ಟಿವಿ ಲೈವ್ ಚೇಸ್ ಮಾಡಿದೆ.

    ಹಸ್ತಸಾಮುದ್ರಿಕೆ, ರೇಖಿ ಭವಿಷ್ಯ, ಮುಖ ಭವಿಷ್ಯ, ಜಾತಕ ಭವಿಷ್ಯ. ಹೀಗೆ ನಾನಾ ತರದ ರೀತಿಯಲ್ಲಿ ಭವಿಷ್ಯ ಹೇಳುವವರನ್ನು ನೋಡಿರುತ್ತೀರಿ. ಆದರೆ ಹೆಚ್‍ಬಿಆರ್ ಲೇಔಟ್‍ನ ಶಬನಮ್ ದೇವರ ಹಾವಿನ ಮೂಲಕ ಭವಿಷ್ಯ ಹೇಳುತ್ತಿದ್ದಾಳೆ. ಈ ದೇವರ ಹಾವನ್ನು ಪಬ್ಲಿಕ್ ಟಿವಿ ಜಾಲಾಡಿ ಹುಡುಕಲು ಪ್ರಯತ್ನಿಸಿದೆ. ದೇವರ ಹಾವನ್ನು ಲೈವ್ ಚೇಸ್ ಮಾಡಿದೆ.

    ಹೆಚ್‍ಬಿಆರ್ ಲೇಔಟ್‍ನ ಶಬನಮ್ ಸೊಂಟ ಬಳುಕಿಸಿ ರ‍್ಯಾಂಪ್‌‌ವಾಕ್ ಮಾಡುವಾಗ ಅದ್ಯಾರು ಆಕೆಗೆ ಈ ಐಡಿಯಾ ಕೊಟ್ರೋ ಏನೋ? ನನ್ ಬಳಿ ಹಾವಿದೆ, ಭವಿಷ್ಯ ಹೇಳುತ್ತದೆ ಅಂತಾ ಸ್ಯಾಂಪಲ್ ಬುಟ್ಲು. ಅಷ್ಟೇ ಹಿಂದೂ ಮುಸ್ಲಿಂ ಎನ್ನದೇ ನೂರಾರು ಕುಟುಂಬ ಈಕೆಯ ಬೆನ್ನುಬಿದ್ದು ಕಷ್ಟ ಪರಿಹಾರವಾಗುವ ಕನಸು ಕಂಡರು. ಆದರೆ ಇದೂವರೆಗೆ ಯಾರೋಬ್ಬರೂ ದೇವರ ಹಾವನ್ನು ನೋಡಿದವರಿಲ್ಲ. ಎಲ್ಲರನ್ನೂ ಬಾಗಿಲಲ್ಲೇ ನಿಲ್ಲಿಸುತ್ತಿದ್ದಳು.

    ಶಬನಮ್ ಮೊದಮೊದಲು ಮುಸ್ಲಿಮರನ್ನೇ ಟಾರ್ಗೆಟ್ ಮಾಡಿಕೊಂಡು ತನ್ನ ಮನೆಯಲ್ಲಿಯೇ ಆಧ್ಯಾತ್ಮಿಕ ಕೇಂದ್ರವನ್ನು ಶುರು ಮಾಡಿಕೊಂಡಳು. ಇದು ದೇವರ ನೀರು ಅಂತ ಜನರಿಗೆ ಕುಡಿಸಿ, ಅವರನ್ನು ಆಧ್ಯಾತ್ಮಿಕತೆಗೆ ತಳ್ಳುತ್ತಿದ್ದಳು. ಅಷ್ಟೇ ಅಲ್ಲದೆ ನಿನ್ನ ಗಂಡನ ಜೀವಕ್ಕೆ ಕಂಟಕವಿದೆ. ಅವರನ್ನ ಉಳಿಸಿಕೊಳ್ಳಬೇಕಾದರೆ 5 ಲಕ್ಷ ರೂ. ಕೊಡಬೇಕು, 10 ಹತ್ತು ಲಕ್ಷ ರೂ. ಕೊಡಬೇಕು. ಹಜರತ್ ಜೊತೆ ಮಾತನಾಡಬೇಕು ಎಂದು ಜನರನ್ನು ಹೆದರಿಸುತ್ತಿದ್ದಳು. ದೇವರ ಹಾವು ಭವಿಷ್ಯ ಹೇಳಿದೆ, ನಾನು ನಾಗಿಣಿ ಅಂತ ಜನರಿಂದ ದುಡ್ಡು ಪೀಕತೊಡಗಿದ್ದಳು.

    ಕೇವಲ ಕೆಲವೇ ತಿಂಗಳಲ್ಲಿ, ಭರ್ತಿ ದುಡ್ಡು, ಚಿನ್ನ ಮಾಡಿಕೊಂಡ ಶಬನಮ್ ರಾತ್ರೋರಾತ್ರಿ ಮನೆ ಬಿಟ್ಟು ಎಸ್ಕೇಪ್ ಆಗಿದ್ದಾಳೆ. ಅತ್ತ ಲಕ್ಷ ಲಕ್ಷ ದುಡ್ಡು ಕಳೆದುಕೊಂಡ ಜನರು ಇನ್ನಷ್ಟು ಕಷ್ಟವನ್ನು ಮೈಮೇಲೆ ಎಳೆದುಕೊಂಡ ಜನ ಕಂಗಾಲಾಗಿದ್ದಾರೆ.

    ಸಂಬಂಧಿಕರನ್ನೂ ಬಿಡದ ಹಾಬ್ ರಾಣಿ:
    ಶಬನಮ್, ತನ್ನ ಸ್ವಂತ ಸಂಬಂಧಿಕರಿಗೆ ಚಳ್ಳೆ ಹಣ್ಣು ತಿನ್ನಿಸಿ 70 ಲಕ್ಷ ರೂಪಾಯಿಯನ್ನ ತೆಗೆದುಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಶಬನಮ್ ಮನೆಯಲ್ಲಿ ನಾಗರತ್ನಮ್ಮ ಎಂಬ ವೃದ್ಧೆ, 8 ವರ್ಷದಿಂದ ಮನೆಗೆಲಸ ಮಾಡುತ್ತಿದ್ದರು. ಅವರನ್ನೂ ನಂಬಿಸಿ 8 ಲಕ್ಷ ರೂ. ಪೀಕಿದ್ದಾಳೆ. ಈ ಹಣವನ್ನು ನಾಗರತ್ನಮ್ಮ ತನ್ನ ಮಗಳ ಮದ್ವೆಗೆ ಅಂತ ತೆಗೆದಿಟ್ಟಿದ್ದರು. ಆದರೆ ಶಬನಮ್ ಕೆಲಸದಿಂದ ನಾಗರತ್ನಮ್ಮನ ಮಗಳ ಮದುವೆ ನಿಂತು ಹೋಗಿದೆ.

    ಶಬನಮ್ ಅದ್ಯಾವ ಪರಿ ಮೋಸ ಮಾಡಿದ್ದಾಳೆ ಅಂದ್ರೆ ಭರ್ತಿ ನಾಲ್ಕು ಸ್ಟೇಷನ್‍ನಲ್ಲಿ ಆಕೆಯ ವಿರುದ್ಧ ನೂರಾರು ದೂರು ದಾಖಲಾಗಿವೆ. ವಿವೇಕನಗರ, ಕೆ.ಜಿ ಹಳ್ಳಿ, ಪುಲಿಕೇಶಿ ನಗರ, ಭಾರತಿನಗರ ಪೊಲೀಸರು ನಾಗಿಣಿ ಹಿಂದೆ ಬಿದ್ರೂ ಪತ್ತೆ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಒಂದೆರಡು ಬಾರಿ ಈಕೆಯನ್ನು ಹಿಡಿದು ತಂದರೂ ಅದೆಂಗೋ ರಿಲೀಸ್ ಆದ ಶಬನಮ್ ಯಾರ ಕೈಗೂ ಸಿಗದಂತೆ ಮಾಯವಾಗಿದ್ದಾಳೆ.

  • ಊರಿಗೇ ಊರೇ ಹಾವಿನ ಕಾಟದಿಂದ ಹೈರಾಣ- ರಾತ್ರಿ ಮಲಗೋಕಾಗಲ್ಲ, ಬೆಳಗಾದ್ರೆ ಸಾವಿನ ಸುದ್ದಿ ತಪ್ಪಲ್ಲ

    ಊರಿಗೇ ಊರೇ ಹಾವಿನ ಕಾಟದಿಂದ ಹೈರಾಣ- ರಾತ್ರಿ ಮಲಗೋಕಾಗಲ್ಲ, ಬೆಳಗಾದ್ರೆ ಸಾವಿನ ಸುದ್ದಿ ತಪ್ಪಲ್ಲ

    ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಸಕೋಟೆ ಗ್ರಾಮದ ಜನ ಹಾವಿನ ಕಾಟದಿಂದ ಹೈರಾಣವಾಗಿದ್ದಾರೆ.

    ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ಬೆಟ್ಟವಿದ್ದು ಸರಿ ಸುಮಾರು ಐದು ಸಾವಿರ ಜನ ಇಲ್ಲಿ ವಾಸ ಮಾಡ್ತಿದ್ದಾರೆ. ಆದ್ರೆ 3 ತಿಂಗಳಿನಿಂದ ಈ ಗ್ರಾಮದ ಜನ ಸರಿಯಾಗಿ ನಿದ್ದೆ ಮಾಡಿಲ್ಲ. ಬೆಳಗಾಗ್ತಿದ್ದಂತೆ ಗ್ರಾಮದಲ್ಲಿ ಒಬ್ಬರಲ್ಲ ಒಬ್ಬರಿಗೆ ಹಾವು ಕಚ್ಚಿದೆ ಅನ್ನೋ ಸುದ್ದಿ ಕಿವಿಗೆ ಬೀಳುತ್ತೆ. ಕೆಲವರಂತೂ ರಾತ್ರಿಯಿಡೀ ಕೈಯಲ್ಲಿ ಕೋಲು ಹಿಡ್ಕೊಂಡು ಹಾವನ್ನ ಕಾಯೋ ಕೆಲಸ ಮಾಡಿಕೊಂಡಿದ್ದಾರೆ.

    ಕರಿನಾಗರ ಹಾವು ಕಚ್ಚಿ ಈಗಾಗಲೇ ಐವರು ಸಾವನ್ನಪ್ಪಿದ್ದು, 17 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಇಂದು ಸಹ ಇಬ್ಬರಿಗೆ ನಾಗರಹಾವು ಕಚ್ಚಿದ್ದು, ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ.

    ಸುತ್ತಮುತ್ತಲಿನ ಗ್ರಾಮದಲ್ಲಿರುವ 51 ದೇವರಿಗೆ ಪೂಜೆ, ಪುನಸ್ಕಾರ, ಹೋಮ ಹವನ, ಮಾಟ ಮಂತ್ರ ಎಲ್ಲವನ್ನೂ ಮಾಡಿಸಿದ್ದಾರೆ. ಪ್ರತಿ ಮನೆಗೂ ನೂರು ರೂಪಾಯಿ ಹಣ ಪಡೆದು ಗ್ರಾಮ ದೇವತೆಗೆ ಶಾಂತಿ ಪೂಜೆ, ನಾಗದೇವತೆಗೆ ಬಲಿದಾನ ನೀಡಿದ್ದಾರೆ. ಇಷ್ಟಾದ್ರೂ ಹಾವಿನ ಕಾಟ ತಪ್ಪುತ್ತಿಲ್ಲ. ರಾತ್ರಿ ಮನೆಯಲ್ಲಿ ಮಲಗಿದ ಸಮಯದಲ್ಲಿ ಕಿವಿಗೆ, ಗಂಟಲಿಗೆ ಹೆಚ್ಚಾಗಿ ಹಾವು ಕಚ್ಚಿದೆ. ಕೆಲವರಂತೂ ಹಾವಿನ ಭಯದಿಂದ ಊರನ್ನೇ ತ್ಯಜಿಸಿದ್ದಾರೆ.

    ಗ್ರಾಮದಲ್ಲಿ ಕಣ್ಣಿಗೆ ಬಿದ್ದ ಹಾವು ನೋಡ ನೋಡ್ತಿದ್ದಂತೆ ಮಾಯವಾಗ್ತಿವೆಯಂತೆ. ಬೆಡ್‍ರೂಂ, ಬಾತ್‍ರೂಂ ಸೇರಿದಂತೆ ಎಲ್ಲಾ ಕಡೆನೂ ಹಾವುಗಳದ್ದೇ ಭಯ. ಇದನ್ನೆ ಬಂಡವಾಳ ಮಾಡಿಕೊಂಡ ಮಾಂತ್ರಿಕರು ಜನರಿಂದ ಹಣ ಕೀಳ್ತಿದ್ದಾರೆ.