ಮುಂಬೈ: 2022ರ ಐಪಿಎಲ್ ಮಹಾ ಹರಾಜಿಗೂ ಮುನ್ನ ಕೆಲ ಆಟಗಾರರು ತಮ್ಮ ಹಳೆಯ ಫ್ರಾಂಚೈಸ್‍ಗಳನ್ನು ಬಿಟ್ಟು ಹೊರ ಬರಲು ನಿರ್ಧರಿಸಿದ್ದಾರೆ. ಈ ಸಾಲಿನಲ್ಲಿ ಇದೀಗ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡದ ನಾಯಕರಾಗಿದ್ದ ಸಂಜು ಸ್ಯಾಮ್ಸನ್ ಕೂಡ ಸೇರಿದ್ದು, ಆರ್‌ಆರ್ ಫ್ರಾಂಚೈಸ್ ಜೊತೆ ಮುನಿಸಿಕೊಂಡು ತಂಡದಿಂದ ಹೊರ ಬರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಸಂಜು ಸ್ಯಾಮ್ಸನ್ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ರಾಜಸ್ಥಾನ ಪರ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ್ದರು. ಸ್ಯಾಮ್ಸನ್ ನಾಯನಾಗಿ ತಂಡದ ಪ್ರದರ್ಶನ ಗಮನಿಸಿದರೆ 14ನೇ ಆವೃತ್ತಿಯಲ್ಲಿ ತಂಡ 7 ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಆದರೆ ಒಬ್ಬ ಬ್ಯಾಟ್ಸ್‌ಮ್ಯಾನ್ ಆಗಿ ತಂಡದ ಪರ ಉತ್ತಮ ಪ್ರದರ್ಶನ ನೀಡಿದ ಸಂಜು 15ನೇ ಆವೃತ್ತಿಯ ಐಪಿಎಲ್‍ಗೆ ಆರ್‍ಆರ್ ಫ್ರಾಂಚೈಸಿ ಸಂಜು ಅವರನ್ನು ರಿಟೈನ್ ಮಾಡಿಕೊಳ್ಳುವ ಹಂಬಲದಲ್ಲಿತ್ತು. ಆದರೆ ಇದೀಗ ಸಂಜು ಆರ್‍ಆರ್ ಫ್ರಾಂಚೈಸ್ ಜೊತೆ ಮುನಿಸಿಕೊಂಡು ತಂಡದಿಂದ ಹೊರ ನಡೆಯಲು ಮುಂದಾಗಿದ್ದಾರೆ ಎಂದು ಪ್ರತಿಷ್ಠಿತ ಕ್ರೀಡಾ ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ ಓದಿ: ಜಡೇಜಾ ಬೌಲಿಂಗ್ ಆ್ಯಕ್ಷನ್ ಅನುಕರಿಸಿದ ಬುಮ್ರಾ

ಈ ಸುದ್ದಿಗೆ ಪುಷ್ಟಿ ನೀಡುವಂತೆ ಸಂಜು ಕೂಡ ಸಾಮಾಜಿಕ ಜಾಲತಾಣದಲ್ಲಿ ಆರ್‌ಆರ್ ಫ್ರಾಂಚೈಸ್‍ನ್ನು ಅನ್‍ಫಾಲೋ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಹಗಾಗಿ ಸಂಜು ಮುಂದಿನ ಆವೃತ್ತಿಯ ಐಪಿಎಲ್‍ಗು ಮುನ್ನ ಮಹಾ ಹರಾಜಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಊಹಾಪೋಹಗಳು ಕೇಳಿ ಬರುತ್ತಿದ್ದು, ಇದಕ್ಕೆಲ್ಲ ಮುಂದಿನ ವರ್ಷ ನಡೆಯಲಿರುವ ಐಪಿಎಲ್ ಹರಾಜಿನ ಮುನ್ನ ಸ್ಪಷ್ಟ ಉತ್ತರ ಸಿಗಲಿದೆ. ಇದನ್ನೂ ಓದಿ: ಆರ್‌ಸಿಬಿ ಮುಖ್ಯ ಕೋಚ್ ಆಗಿ ಸಂಜಯ್ ಬಂಗಾರ್ ಆಯ್ಕೆ

















ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. 155 ರನ್‍ಗಳ ಸವಾಲು ಪಡೆದ ರಾಜಸ್ಥಾನ 6 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಇದನ್ನೂ ಓದಿ:
ಡೆಲ್ಲಿ ಕ್ಯಾಪಿಡಲ್ಸ್ ಪರ ಪಂತ್ 24, ಹಾಗೂ ಅಯ್ಯರ್ 43, ಹೆಟ್ಮಿಯರ್ 16 ಎಸೆತಗಳಲ್ಲಿ 5 ಬೌಂಡರಿ ಸಹಿತ ಬಿರುಸಿನ 28 ರನ್‍ಗಳಿಸಿದರು. ನಿಗದಿತ 20 ಓವರ್‍ಗಳಲ್ಲಿ ಡೆಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್‍ಗಳಿಸಿತು. ರಾಜಸ್ತಾನ್ ಪರ ಮುಸ್ತಫಜುರ್ ರೆಹಮಾನ್ ಹಾಗೂ ಚೇತನ್ ಸಕಾರಿಯಾ ತಲಾ ಎರಡು ವಿಕೆಟ್ ಪಡೆದರು. ಇದನ್ನೂ ಓದಿ:
157 ರನ್ ಟಾರ್ಗೆಟ್ ಬೆನ್ನತ್ತಿದ ರಾಜಸ್ತಾನ್ ರಾಯಲ್ಸ್, ಆರಂಭದಲ್ಲೇ ಡೆಲ್ಲಿ ಬೌಲರ್‍ಗಳನ್ನು ಎದುರಿಸಲಾಗದೆ ವಿಕೆಟ್‍ಗಳನ್ನು ಕಳೆದುಕೊಂಡಿತು. ಡೆಲ್ಲಿ ಪರ ಲಿವಿಂಗ್‍ಸ್ಟೊನ್ 1 ರನ್, ಜೈಸ್ವಾಲ್ 4 ಎಸೆತಗಳಲ್ಲಿ 5 ರನ್, ಮಿಲ್ಲರ್ 10 ಎಸೆತಗಳಲ್ಲಿ 7 ರನ್‍ಗಳಿಸಿದರು. ಮಹಿಪಾಲ್ ಲೊಮರ್ 24 ಎಸೆತಗಳಲ್ಲಿ 19 ರನ್‍ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು.
ಆರಂಭದಿಂದಲೂ ಶಿಸ್ತಿನ ದಾಳಿ ನಡೆಸಿದ ಡೆಲ್ಲಿ ಬೌಲರ್ಸ್, ರಾಜಸ್ತಾನವನ್ನು ರನ್‍ಗಳಿಸಲು ಪರಾದಡುವಂತೆ ಮಾಡಿದರು. ರಾಜಸ್ತಾನ್ ಪರ ನಾಯಕ ಸಂಜು ಸ್ಯಾಮ್ಸನ್ ಏಕಾಂಗಿಯಾಗಿ ಹೊರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಸಂಜು 53 ಎಸೆತಗಳಲ್ಲಿ 8 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 70 ರನ್‍ಗಳಿಸಿದರು. ಡೆಲ್ಲಿ ಪರ ಅನ್ರಿಚ್ ನಾಟ್ರ್ಜೆ 2 ವಿಕೆಟ್ ಅಶ್ವಿನ್ 1, ರಬಾಡ ಹಾಗೂ ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಕಬಳಿಸಿದರು.














