Tag: Sanju Samson

  • ʻಹಿಟ್‌ʼ ಮೇಯರ್‌, ಸಂಜು ಸೂಪರ್‌ ಸಿಕ್ಸರ್‌ – ರೋಚಕ ಪಂದ್ಯದಲ್ಲಿ ರಾಜಸ್ಥಾನ್‌ಗೆ 3 ವಿಕೆಟ್‌ಗಳ ಜಯ

    ʻಹಿಟ್‌ʼ ಮೇಯರ್‌, ಸಂಜು ಸೂಪರ್‌ ಸಿಕ್ಸರ್‌ – ರೋಚಕ ಪಂದ್ಯದಲ್ಲಿ ರಾಜಸ್ಥಾನ್‌ಗೆ 3 ವಿಕೆಟ್‌ಗಳ ಜಯ

    ಅಹಮದಾಬಾದ್‌: ಸಂಜು ಸ್ಯಾಮ್ಸನ್‌ (Sanju Samson), ಶಿಮ್ರಾನ್‌ ಹೆಟ್ಮೇಯರ್‌ (Shimron Hetmyer) ಸಿಕ್ಸರ್‌, ಬೌಂಡರಿ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ ಹಾಲಿ ಚಾಂಪಿಯನ್ಸ್‌ ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    ಮೊದಲ 10 ಓವರ್‌ಗಳಲ್ಲಿ ಕೇವಲ 53 ರನ್‌ ಗಳಿಸಿದ್ದ ರಾಜಸ್ಥಾನ್‌ (Rajasthan Royals) ತಂಡ ಮುಂದಿನ 56 ಎಸೆತಗಳಲ್ಲಿ ಬರೋಬ್ಬರಿ 126 ರನ್‌ ಸಿಡಿಸಿತು. ಕೊನೆಯ 6 ಓವರ್‌ಗಳಲ್ಲಿ ತಂಡದ ಗೆಲುವಿಗೆ 64 ರನ್‌ಗಳ ಅಗತ್ಯವಿತ್ತು. ಈ ವೇಳೆ 15ನೇ ಓವರ್‌ನಲ್ಲಿ 13 ರನ್‌, 16ನೇ ಓವರ್‌ನಲ್ಲಿ 20 ರನ್‌, 17ನೇ ಓವರ್‌ನಲ್ಲಿ 8 ರನ್‌, 18ನೇ ಓವರ್‌ನಲ್ಲಿ 13 ರನ್‌ ಹಾಗೂ 19ನೇ ಓವರ್‌ನಲ್ಲಿ 16‌ ರನ್‌ ಸೇರ್ಪಡೆಯಾಯಿತು. ಕೊನೆಯ ಓವರ್‌ನಲ್ಲಿ 7 ರನ್‌ಗಳು ಬೇಕಿದ್ದಾಗ ಮೊದಲ ಎಸೆತದಲ್ಲಿ 2 ರನ್‌ ಕದ್ದ ಹೆಟ್ಮೇಯರ್‌ ರನೌಟ್‌ನಿಂದ ಪಾರಾದರು. 2ನೇ ಎಸೆತದಲ್ಲೇ ಸಿಕ್ಸರ್‌ ಚಚ್ಚಿ ತಂಡ ರೋಚಕ ಜಯ ಸಾಧಿಸಲು ಕಾರಣವಾದರು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟಾನ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 177 ರನ್‌ ಗಳಿಸಿತ್ತು. 178 ರನ್‌ಗಳ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ ರಾಯಲ್ಸ್‌ 19.2 ಓವರ್‌ಗಳಲ್ಲೇ 179 ರನ್‌ ಗಳಿಸಿ ಗುಜರಾತ್‌ ತವರಿನಲ್ಲೇ ಗೆದ್ದು ಬೀಗಿತು. ಇದನ್ನೂ ಓದಿ: IPL 2023: ಕೊನೆಗೂ ಐಪಿಎಲ್‌ಗೆ ಎಂಟ್ರಿಕೊಟ್ಟ ಸಚಿನ್‌ ತೆಂಡೂಲ್ಕರ್‌ ಪುತ್ರ

    ಚೇಸಿಂಗ್‌ ಆರಂಭಿಸಿದ ರಾಜಸ್ಥಾನ್‌ ರಾಯಲ್ಸ್‌ ಆರಂಭದಲ್ಲೇ ಆಘಾತ ಎದುರಿಸಿತು. ಆರಂಭಿಕರಾದ ಯಶಸ್ವಿ ಜೈಸ್ವಾಲ್‌ 1 ರನ್‌ ಗಳಿಸಿದರೆ, ಜೋಸ್‌ ಬಟ್ಲರ್‌ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ ಸೇರಿದರು. ಇದರಿಂದ ಮೊದಲ 6 ಓವರ್‌ಗಳಲ್ಲಿ ಕೇವಲ 26 ರನ್‌ ಕಲೆಹಾಕಿತ್ತು. 3ನೇ ಕ್ರಮಾಂಕದಲ್ಲಿ ಬಂದ ದೇವದತ್‌ ಪಡಿಕಲ್‌ ಕೂಡ 25 ಎಸೆತಗಳಲ್ಲಿ 26 ರನ್‌, ರಿಯಾನ್‌ ಪರಾಗ್‌ 5 ರನ್‌ ಗಳಿಸಿ ಔಟಾದರು. ಇದರಿಂದ ತಂಡಕ್ಕೆ ಬಹುತೇಕ ಸೋಲು ಖಚಿತವಾಗಿತ್ತು.

    ಮಧ್ಯಮ ಕ್ರಮಾಂಕದಲ್ಲಿ ಒಂದಾದ ಶಿಮ್ರಾನ್‌ ಹೆಟ್ಮೇಯರ್‌ ಹಾಗೂ ಸಂಜು ಸ್ಯಾಮನ್‌ ಭರ್ಜರಿ ಬ್ಯಾಟಿಂಗ್‌ ನಡೆದರು. ಸಿಕ್ಸರ್‌, ಬೌಂಡರಿ ಸಿಡಿಸುತ್ತಾ ಉತ್ತಮ ರನ್‌ ಕಲೆಹಾಕಿದರು. 13ನೇ ಓವರ್‌ನಲ್ಲಿ ರಶೀದ್‌ಖಾನ್‌ ಬೌಲಿಂಗ್‌ಗೆ ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿದ ಸಂಜು ಸ್ಯಾಮ್ಸನ್‌ ಒಂದೇ ಓವರ್‌ನಲ್ಲಿ 20 ರನ್‌ ಚಚ್ಚಿದರು. ಆ ನಂತರ ತಂಡದಲ್ಲಿ ಗೆಲುವಿನ ಆಸೆ ಚಿಗುರಿತು. 32 ಎಸೆತಗಳನ್ನು ಎದುರಿಸಿದ ಸಂಜು ಬರೋಬ್ಬರಿ 6 ಸಿಕ್ಸರ್‌, 3 ಬೌಂಡರಿಗಳೊಂದಿಗೆ 60 ರನ್‌ ಗಳಿಸಿದರು. ಈ ವೇಳೆ ಮತ್ತೊಮ್ಮೆ ಸಿಕ್ಸರ್‌ ಸಿಡಿಸುವ ಬರದಲ್ಲಿ ಕ್ಯಾಚ್‌ ನೀಡಿದರು. ಸಂಜು ಔಟಾಗುತ್ತಿದ್ದಂತೆ ಗುಜರಾತ್‌ ಫ್ಯಾನ್ಸ್‌ ಹುಚ್ಚೆದ್ದು ಕುಣಿದರು. ಆದರೆ ತನ್ನ ಅಬ್ಬರ ನಿಲ್ಲಿಸದ ಹೆಟ್ಮೇಯರ್‌ ಸ್ಫೋಟಕ ಅರ್ಧಶತಕದೊಂದಿಗೆ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.

    ಕೇವಲ 25 ಎಸೆತಗಳನ್ನು ಎದುರಿಸಿದ ಹೆಟ್ಮೇಯರ್‌ 5 ಸಿಕ್ಸರ್‌, 2 ಬೌಂಡರಿಯೊಂದಿಗೆ 56 ರನ್‌ ಚಚ್ಚಿ ಅಜೇಯರಾಗುಳಿದರು. ಈ ನಡುವೆ ದ್ರುವ್‌ ಜುರೆಲ್‌ ಸ್ಪೋಟಕ 17 ರನ್‌ (10 ಎಸೆತ, 1 ಸಿಕ್ಸರ್‌, 2 ಬೌಂಡರಿ), ಅಶ್ವಿನ್‌ 3 ಎಸೆತಗಳಲ್ಲಿ 10 ರನ್‌ ಚಚ್ಚಿ ಔಟಾದರು. ಇದನ್ನೂ ಓದಿ: IPL 2023: ಇಶಾನ್‌ ಕಿಶನ್‌ ಶೈನ್‌, ಅಯ್ಯರ್‌ ಶತಕದಾಟ ವ್ಯರ್ಥ – ಮುಂಬೈಗೆ 5 ವಿಕೆಟ್‌ಗಳ ಜಯ

    ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಗುಜರಾತ್ ಟೈಟಾನ್ಸ್‌ ಬ್ಯಾಟ್ಸ್‌ಮ್ಯಾನ್‌ಗಳು ತವರಿನಲ್ಲಿ ಪಂದ್ಯ ನಡೆದರು ನಿರೀಕ್ಷಿತ ಮಟ್ಟದಲ್ಲಿ ಅಬ್ಬರಿಸಲು ವಿಫಲವಾದರು. ಪವರ್‌ಪ್ಲೇ ಅವಧಿಯಲ್ಲಿ ರಾಜಸ್ಥಾನ್ ರಾಯಲ್ಸ್ ಬೌಲರ್‌ಗಳು ಗುಜರಾತ್‌ ವಿರುದ್ಧ ವಿರುದ್ಧ ಅದ್ಭುತ ಯಶಸ್ಸು ಸಾಧಿಸಿದರು. ಮೊದಲ 6 ಓವರ್‌ಗಳಲ್ಲಿ ಗುಜರಾತ್‌ ಟೈಟಾನ್ಸ್‌ 42 ರನ್‌ಗಳಿಗೆ ಪ್ರಮುಖ 2 ವಿಕೆಟ್‌ ಕಳೆದುಕೊಂಡಿತ್ತು.

    ಆರಂಭಿಕ ಆಟಗಾರ ಶುಭಮನ್‌ ಗಿಲ್‌ 34 ಎಸೆತಗಳಲ್ಲಿ 45 ರನ್‌, ಮಂದಗತಿಯ ಬ್ಯಾಟಿಂಗ್‌ ನಡೆಸಿದ ಸಾಯಿ ಸುದರ್ಶನ್‌ 19 ಎಸೆತಗಳಲ್ಲಿ 20 ರನ್‌ ಗಳಿಸಲಷ್ಟೇ ಶಕ್ತವಾದರು. ನಾಯಕ ಹಾರ್ದಿಕ್‌ ಪಾಂಡ್ಯ 28 ರನ್‌ (19 ಎಸೆತ, 3 ಬೌಂಡರಿ, 1 ಸಿಕ್ಸರ್‌), ಅಭಿನವ್‌ ಮನೋಹರ್‌ 27 ರನ್‌ (13 ಎಸೆತ, 3 ಸಿಕ್ಸರ್‌) ಗಳಿಸಿದರು. ಈ ನಡುವೆ ಡೇವಿಡ್‌ ಮಿಲ್ಲರ್‌ 46 ರನ್‌ (30 ಎಸೆತ, 3 ಬೌಂಡರಿ, 2 ಸಿಕ್ಸರ್‌) ಗಳಿಸಿ ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ರಾಹುಲ್‌ ತೆವಾಟಿಯಾ (1 ರನ್‌), ಅಲ್ಝರಿ ಜೋಸೆಫ್‌ ಅಜೇಯರಾಗುಳಿದರು.

    ರಾಜಸ್ಥಾನ್ ರಾಯಲ್ಸ್ ಪರವಾಗಿ ಸಂದೀಪ್ ಶರ್ಮಾ ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. 4 ಓವರ್‌ಗಳಲ್ಲಿ 25 ರನ್ ನೀಡಿ 2 ವಿಕೆಟ್ ಪಡೆದರು. ಟ್ರೆಂಟ್ ಬೋಲ್ಟ್‌, ಆಡಂ ಜಂಪಾ ಹಾಗೂ ಚಾಹಲ್ ತಲಾ ಒಂದೊಂದು ವಿಕೆಟ್ ಪಡೆದರು.

  • IPL 2023: ಯಶಸ್ವಿ, ಬಟ್ಲರ್‌ ಬೊಂಬಾಟ್‌ ಬ್ಯಾಟಿಂಗ್‌ – ರಾಜಸ್ಥಾನ್‌ಗೆ 57 ರನ್‌ಗಳ ಭರ್ಜರಿ ಜಯ

    IPL 2023: ಯಶಸ್ವಿ, ಬಟ್ಲರ್‌ ಬೊಂಬಾಟ್‌ ಬ್ಯಾಟಿಂಗ್‌ – ರಾಜಸ್ಥಾನ್‌ಗೆ 57 ರನ್‌ಗಳ ಭರ್ಜರಿ ಜಯ

    – ಡೇವಿಡ್‌ ವಾರ್ನರ್‌ ಏಕಾಂಗಿ ಹೋರಾಟ ವ್ಯರ್ಥ

    ಗುವಾಹಟಿ: ಜೋಸ್‌ ಬಟ್ಲರ್‌ (Jos Buttler), ಯಶಸ್ವಿ ಜೈಸ್ವಾಲ್‌ (Yashasvi Jaiswal) ಬೊಂಬಾಟ್‌ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 57 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಅಸ್ಸಾಂನ ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್‌ (Rajasthan Royals) ತಂಡ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿತು. 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 199 ರನ್ ಕಲೆಹಾಕಿತು. ಬರೋಬ್ಬರಿ 200 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಡೇವಿಡ್‌ ವಾರ್ನರ್‌ (DavidWarner) ಏಕಾಂಗಿ ಹೋರಾಟದಿಂದ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.

    ಚೇಸಿಂಗ್‌ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ನಾಯ ಡೇವಿಡ್‌ ವಾರ್ನರ್‌ ಒಬ್ಬರೇ ಏಕಾಂಗಿ ಹೋರಾಟ ನಡೆಸಿದರು. ರಾಜಸ್ಥಾನ್‌ ಬೌಲರ್‌ಗಳ ಸಂಘಟಿತ ದಾಳಿಗೆ ಬೆಚ್ಚಿದ ಡೆಲ್ಲಿ ಕ್ಯಾಪಿಟಲ್ಸ್‌ ಪವರ್‌ಪ್ಲೇನಲ್ಲೇ 38 ರನ್‌ಗಳಿಗೆ ಪ್ರಮುಖ 3 ವಿಕೆಟ್‌ಗಳನ್ನ ಕಳೆದುಕೊಂಡಿತ್ತು. ಆರಂಭಿಕನಾಗಿ ಕಣಕ್ಕಿಳಿದ ವಾರ್ನರ್‌ 19ನೇ ಓವರ್‌ವರೆಗೂ ಹೋರಾಡಿ 65 ರನ್‌ (55 ಎಸೆತ, 7 ಬೌಂಡರಿ) ಗಳಿಸಿದರು. ಇದರೊಂದಿಗೆ ಲಲಿತ್‌ ಯಾದವ್‌ 38 ರನ್‌ (24 ಎಸೆತ, 5 ಬೌಂಡರಿ) ಗಳಿಸಿ ತಂಡಕ್ಕೆ ನೆರವಾದರು. ಉಳಿದವರು ರಾಜಸ್ಥಾನ್‌ ಬೌಲರ್‌ಗಳ ದಾಳಿಗೆ ತತ್ತರಿಸಿದರು. ಅಂತಿಮವಾಗಿ 20 ಓವರ್‌ಗಳಲಿ 9 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ರಾಜಸ್ಥಾನ್‌ ರಾಯಲ್ಸ್‌ ಪರ ಟ್ರೆಂಟ್‌ ಬೋಲ್ಟ್‌, ಯಜುವೇಂದ್ರ ಚಾಹಲ್‌ ತಲಾ 3 ವಿಕೆಟ್‌ ಪಡೆದರೆ, ರವಿಚಂದ್ರನ್‌ ಅಶ್ವಿನ್‌ 2 ವಿಕೆಟ್‌ ಹಾಗೂ ಸಂದೀಪ್‌ ಶರ್ಮಾ 1 ವಿಕೆಟ್‌ ಕಿತ್ತರು.

    ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ರಾಯಲ್ಸ್‌ ಪರ ಯಶಸ್ವಿ ಜೈಸ್ವಾಲ್ ಸ್ಫೋಟಕ ಆರಂಭ ನೀಡಿದರು. ಮೊದಲ ಓವರ್‌ನಲ್ಲಿಯೇ ಬರೋಬ್ಬರಿ 5 ಬೌಂಡರಿಗಳೊಂದಿಗೆ 20 ರನ್‌ ಚಚ್ಚಿದರು. ಈ ಮೂಲಕ 2023ರ ಐಪಿಎಲ್‌ನಲ್ಲಿ ಮೊದಲ ಓವರ್ ನಲ್ಲೇ ಅತಿ ಹೆಚ್ಚು ರನ್ ದಾಖಲಾಯಿತು. ಯಶಸ್ವಿಯೊಂದಿಗೆ ಜೊತೆಯಾದ ಬಟ್ಲರ್‌ ಸಹ ಭರ್ಜರಿ ಸಿಕ್ಸರ್‌, ಬೌಂಡರಿ ಚಚ್ಚಿದರು. ಪರಿಣಾಮ ಮೊದಲ ವಿಕೆಟ್‌ ಜೊತೆಯಾಟಕ್ಕೆ ಈ ಜೋಡಿ 8.3 ಓವರ್‌ಗಳಲ್ಲಿ ಈ ಜೋಡಿ ಬರೋಬ್ಬರಿ 98 ರನ್‌ ಕಲೆಹಾಕಿ, ದೊಡ್ಡ ಮೊತ್ತ ಗಳಿಸಲು ನೆರವಾಯಿತು.

    ಈ ವೇಳೆ ಜೈಸ್ವಾಲ್‌ 60 ರನ್‌ (31 ಎಸೆತ, 11 ಬೌಂಡರಿ, 1 ಸಿಕ್ಸರ್‌) ಬಾರಿಸಿ ಔಟಾದರು. ಈ ಬೆನ್ನಲ್ಲೇ ಸಂಜು ಸ್ಯಾಮ್ಸನ್‌ ಸಹ ಶೂನ್ಯ ಸುತ್ತಿ ನಿರ್ಗಮಿಸಿದರೆ, ರಿಯಾನ್‌ ಪರಾಗ್‌ ಕೇವಲ 7 ರನ್‌ ಗಳಿಸಿ ಹೊರನಡೆದರು. ಆದರೂ ಬಟ್ಲರ್‌ ಬ್ಯಾಟಿಂಗ್‌ ಅಬ್ಬರ ನಿಲ್ಲಲಿಲ್ಲ. ಬಳಿಕ 5ನೇ ವಿಕೆಟ್‌ಗೆ ಜೊತೆಯಾದ ಬಟ್ಲರ್‌ ಹಾಗೂ  ಹೆಟ್ಮೇಯರ್‌ 29 ಎಸೆತಗಳಲ್ಲಿ 49 ರನ್‌ ಕಲೆಹಾಕಿ ತಂಡಕ್ಕೆ ಚೇತರಿಕೆ ನೀಡಿತು. 51 ಎಸೆತಗಳಲ್ಲಿ 79 ರನ್‌ (11 ಬೌಂಡರಿ, 1 ಸಿಕ್ಸರ್)‌ ಚಚ್ಚಿ ಬಟ್ಲರ್‌ ಔಟಾದರು. ಕೊನೆಯಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ ಹೆಟ್ಮೇಯರ್‌ 21 ಎಸೆತಗಳಲ್ಲಿ ಸ್ಫೋಟಕ 39 ರನ್‌ (1 ಬೌಂಡರಿ, 4 ಸಿಕ್ಸರ್‌) ಚಚ್ಚಿದರೆ, ಧ್ರುವ್ ಜುರೆಲ್ 3 ಎಸೆತಗಳಲ್ಲಿ 1 ಸಿಕ್ಸರ್‌ನೊಂದಿಗೆ 8 ರನ್‌ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ರಾಜಸ್ಥಾನ್‌ 20 ಓವರ್‌ಗಳಲ್ಲಿ 199 ರನ್‌ ಕಲೆಹಾಕಿತು.

    ಡೆಲ್ಲಿ ಕ್ಯಾಪಿಟಲ್ಸ್‌ ಪರ ಮುಕೇಶ್‌ ಕುಮಾರ್‌ 2 ವಿಕೆಟ್‌ ಕಿತ್ತರೆ, ಕುಲ್‌ದೀಪ್‌ ಯಾದವ್‌, ರೋವ್ಮನ್‌ ಪೋವೆಲ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ರನ್‌ ಏರಿದ್ದು ಹೇಗೆ?
    50 ರನ್‌, 24 ಎಸೆತ
    100 ರನ್‌, 55 ಎಸೆತ
    150 ರನ್‌, 99 ಎಸೆತ
    199 ರನ್‌, 120 ಎಸೆತ

  • IPL 2023: ಕೊನೆಯವರೆಗೂ ಹೋರಾಡಿ ಸೋತ ರಾಜಸ್ಥಾನ್‌ – ಪಂಜಾಬ್‌ಗೆ 5 ರನ್‌ಗಳ ರೋಚಕ ಜಯ

    IPL 2023: ಕೊನೆಯವರೆಗೂ ಹೋರಾಡಿ ಸೋತ ರಾಜಸ್ಥಾನ್‌ – ಪಂಜಾಬ್‌ಗೆ 5 ರನ್‌ಗಳ ರೋಚಕ ಜಯ

    ಗುವಾಹಟಿ: ನಾಯಕ ಶಿಖರ್‌ ಧವನ್‌ (Shikhar Dhawan), ಪ್ರಭ್‌ಸಿಮ್ರಾನ್‌ ಸಿಂಗ್‌ (Prabhsimran Singh) ಸಿಕ್ಸರ್‌, ಬೌಂಡರಿ ಬ್ಯಾಟಿಂಗ್‌ ಹಾಗೂ ನಾಥನ್ ಎಲ್ಲಿಸ್ ಬೆಂಕಿ ಬೌಲಿಂಗ್‌ ದಾಳಿ ನೆರವಿನಿಂದ ಪಂಜಾಬ್‌ ಕಿಂಗ್ಸ್‌ ತಂಡವು ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿದ್ದು, 16ನೇ ಐಪಿಎಲ್‌ ಆವೃತ್ತಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ.

    ಗುವಾಹಟಿಯ ಬರ್ಸಾಪರಾ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್‌ (Punjab Kings) ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿತು. 198 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 192 ರನ್‌ ಹೋರಾಡಿ ಸೂತಿತು. ಇದನ್ನೂ ಓದಿ: ಸುದರ್ಶನ್‌ ಫಿಫ್ಟಿ, ಮಿಲ್ಲರ್‌ ಸ್ಫೋಟಕ ಆಟ – ಗುಜರಾತ್‌ಗೆ ಸತತ ಎರಡನೇ ಜಯ

    15 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 124 ರನ್‌ ಗಳಿಸಿದ್ದ ರಾಜಸ್ಥಾನ್‌ ತಂಡ ಸಂಕಷ್ಟಕ್ಕೆ ಗುರಿಯಾಗಿತ್ತು. ಆದರೆ 7ನೇ ವಿಕೆಟ್‌ಗೆ ಜೊತೆಯಾದ ಶಿಮ್ರಾನ್‌ ಹೆಟ್ಮೆಯರ್‌ ಹಾಗೂ ಧ್ರುವ್‌ ಜುರೆಲ್‌ ಭರ್ಜರಿ ಸಿಕ್ಸರ್‌, ಬೌಂಡರಿ ಸಿಡಿಸಿ ಪಂಜಾಬ್‌ ಬೌಲರ್‌ಗಳನ್ನ ಬೆಂಡೆತ್ತಿದರು. 26 ಎಸೆತಗಳಲ್ಲಿ ಬರೋಬ್ಬರಿ 61 ರನ್‌ ಚಚ್ಚಿದರು.

    18ನೇ ಓವರ್‌ನಲ್ಲಿ 19 ರನ್‌, 19ನೇ ಓವರ್‌ನಲ್ಲಿ 18 ರನ್‌ ಬಂದ ಹಿನ್ನೆಲೆಯಲ್ಲಿ ಕೊನೆಯ ಓವರ್‌ ಅತ್ಯಂತ ರೋಚಕತೆಯಿಂದ ಕೂಡಿತ್ತು. ಕೊನೆಯ 6 ಎಸೆತಗಳಲ್ಲಿ ರಾಜಸ್ಥಾನ್‌ಗೆ 15 ರನ್‌ಗಳ ಅಗತ್ಯವಿತ್ತು. ಈ ವೇಳೆ ಜುರೆಲ್‌ ಮೊದಲ ಎಸೆತದಲ್ಲಿ 1 ರನ್‌ ಕದ್ದರೆ, 2ನೇ ಎಸೆತದಲ್ಲಿ ಹೆಟ್ಮೆಯರ್‌ 2 ರನ್‌ ಕದ್ದರು. 3ನೇ ಎಸೆತದಲ್ಲಿ 2ರನ್‌ ಕದಿಯಲು ಯತ್ನಿಸಿ ಹೆಟ್ಮೆಯರ್‌ ರನೌಟ್‌ಗೆ ತುತ್ತಾದರು. ಕೊನೆಯ 3 ಎಸೆತಗಳಲ್ಲಿ 13 ರನ್‌ಗಳ ಅಗತ್ಯವಿದ್ದಾಗ 2 ಎಸೆತಗಳಲ್ಲಿ ಒಂದೊಂದು ರನ್‌ಗಳಷ್ಟೇ ಸೇರ್ಪಡೆಯಾಯಿತು. ಕೊನೆಯ ಎಸೆತವನ್ನು ಧ್ರುವ್‌ ಜುರೆಲ್‌ ಬೌಂಡರಿಗಟ್ಟಿದರು. ಅಂತಿಮವಾಗಿ ರಾಜಸ್ಥಾನ್‌ 5 ರನ್‌ಗಳ ವಿರೋಚಿತ ಸೋಲು ಅನುಭವಿಸಿತು.

    ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್‌, ರವಿಚಂದ್ರನ್‌ ಅಶ್ವಿನ್‌ ಹಾಗೂ ಜೋಸ್‌ ಬಟ್ಲರ್‌ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ಜೈಸ್ವಾಲ್‌ 11 ರನ್‌ ಗಳಿಸಿದರೆ, ಬಟ್ಲರ್‌ 11 ಎಸೆತಗಳಲ್ಲಿ 19 ರನ್‌ ಹೊಡೆದರು. ಆದರೆ ಅಶ್ವಿನ್‌ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ ಸೇರಿಕೊಂಡರು. ಒಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಿದ್ದರೂ ರನ್‌ ಕಲೆಹಾಕುತ್ತಾ ತಂಡ ಮುನ್ನಡೆದಿತ್ತು. 4ನೇ ವಿಕೆಟ್‌ಗೆ ಜೊತೆಯಾದ ನಾಯಕ ಸಂಜು ಸ್ಯಾಮ್ಸನ್‌ ಹಾಗೂ ದೇವದತ್‌ ಪಡಿಕಲ್‌ ಉತ್ತಮ ಜೊತೆಯಾಟವಾಡಿದರು. 32 ಎಸೆತಗಳಲ್ಲಿ 34 ರನ್‌ ಕಲೆಹಾಕಿ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿತ್ತು. ಇದನ್ನೂ ಓದಿ:  ICC ರ‍್ಯಾಂಕಿಂಗ್‌ನಲ್ಲಿ ಕೊಹ್ಲಿಯನ್ನು ಹಿಂದಿಕ್ಕಿದ ಗಿಲ್

    ಅಷ್ಟರಲ್ಲೇ 42 ರನ್‌ (25 ಎಸೆತ, 5 ಬೌಂಡರಿ, 1 ಸಿಕ್ಸರ್‌) ಗಳಿಸಿ ಆಟವಾಡುತ್ತಿದ್ದ ಸಂಜು ಸ್ಯಾಮ್ಸನ್‌ ಸಿಕ್ಸರ್‌ ಚಚ್ಚಲು ಯತ್ನಿಸಿ ಕ್ಯಾಚ್‌ ನೀಡಿ ಔಟಾದರು. ಈ ಬೆನ್ನಲ್ಲೇ ರಿಯಾನ್‌ ಪರಾಗ್‌ 20 ರನ್‌ (12 ಎಸೆತ, 2 ಸಿಕ್ಸರ್‌, 1 ಬೌಂಡರಿ), ದೇವದತ್‌ ಪಡಿಕಲ್‌ 21 ರನ್‌ (26 ಎಸೆತ, 1 ಬೌಂಡರಿ) ಗಳಿಸಿ ವಿಕೆಟ್‌ ಒಪ್ಪಿಸಿದರು. ಇದರಿಂದ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಗೆಲುವಿನ ಭರವಸೆ ಕೈತಪ್ಪಿತು. ಕೊನೆಯಲ್ಲಿ ಶಿಮ್ರಾನ್ ಹೆಟ್ಮೆಯರ್ ಸ್ಫೋಟಕ 36 ರನ್‌ (18 ಎಸೆತ, 3 ಸಿಕ್ಸರ್‌, 1 ಬೌಂಡರಿ) ಚಚ್ಚಿದರೆ, ಧ್ರುವ್‌ 15 ಎಸೆತಗಳಲ್ಲೇ 32 ರನ್‌ ಬಾರಿಸಿದರು. ಜೇಸನ್‌ ಹೋಲ್ಡರ್‌ 1 ರನ್‌ ಗಳಿಸಿ ಅಜೇಯರಾಗುಳಿದರು.

    ನಾಥನ್ ಎಲ್ಲಿಸ್ ಬೌಲಿಂಗ್‌ ಮಿಂಚು:
    ಪಂಜಾಬ್‌ ಕಿಂಗ್ಸ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ನಾಥನ್‌ ಎಲ್ಲಿಸ್‌ ರಾಜಸ್ಥಾನ ತಂಡದ ಪ್ರಮುಖ‌ ಬ್ಯಾಟ್ಸ್‌ಮ್ಯಾನ್‌ಗಳನ್ನ ಪೆವಿಲಿಯನ್‌ಗೆ ಕಳುಹಿಸುವಲ್ಲಿ ಯಶಸ್ವಿಯಾದರು. 4 ಓವರ್‌ಗಳಲ್ಲಿ 30 ರನ್‌ ನೀಡಿ ಪ್ರಮುಖ ನಾಲ್ಕು ವಿಕೆಟ್‌ ಕಿತ್ತರೆ, ಅರ್ಶ್‌ ದೀಪ್‌ ಸಿಂಗ್‌ 2 ವಿಕೆಟ್‌ ಪಡೆದರು.

    ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ತಂಡದ ಪರ ಬ್ಯಾಟಿಂಗ್ ಆರಂಭಿಸಿದ ನಾಯಕ ಶಿಖರ್ ಧವನ್ ಮತ್ತು ಪ್ರಭ್‌ಸಿಮ್ರಾನ್ ಸಿಂಗ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 9.1 ಓವರ್‌ಗಳಲ್ಲಿ ಭರ್ಜರಿ 90 ರನ್‌ ಕಲೆಹಾಕಿತು. ಪ್ರಭ್‌ಸಿಮ್ರಾನ್ ಸಿಂಗ್ ಸ್ಫೋಟಕ 60 ರನ್ (34 ಎಸೆತ, 7 ಬೌಂಡರಿ, 3 ಸಿಕ್ಸರ್‌) ಬಾರಿಸಿ ಔಟಾದರು. ನಂತರ ಕಣಕ್ಕಿಳಿದ ಭಾನುಕ ರಾಜಪಕ್ಸ 1 ರನ್ ಗಳಿಸಿ ಆಡುತ್ತಿದ್ದಾಗಲೇ ಗಾಯಗೊಂಡು ಹೊರನಡೆದರು. ಬಳಿಕ ಕ್ರೀಸ್‌ಗಿಳಿದ ಜಿತೇಶ್ ಶರ್ಮಾ 16 ಎಸೆತಗಳಲ್ಲಿ 27 ರನ್ (2 ಬೌಂಡರಿ, 1 ಸಿಕ್ಸರ್) ಗಳಿಸಿದರೆ, ಶಾರೂಖ್ ಖಾನ್ 10 ಎಸೆತಗಳಲ್ಲಿ 11 ರನ್ ಗಳಿಸಿ ಕೊನೆಯ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು.

    ಧವನ್‌ಗೆ ಕೈತಪ್ಪಿದ ಶತಕ:
    ಆರಂಭದಿಂದ ಕೊನೆಯವರೆಗೂ ಹೋರಾಡಿದ ನಾಯಕ ಶಿಖರ್ ಧವನ್ 56 ಎಸೆತಗಳಲ್ಲಿ 86 ರನ್ ಬಾರಿಸಿ (9 ಬೌಂಡರಿ, 3 ಸಿಕ್ಸರ್) ತಂಡದ ಮೊತ್ತ 190 ರನ್‌ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಸಿಕ್ಸರ್‌, ಬೌಂಡರಿ ಅಬ್ಬರಿಸುತ್ತಾ ರಾಜಸ್ಥಾನ್‌ ಬೌಲರ್‌ಗಳನ್ನ ಬೆಂಡೆತ್ತಿದರು.

    ರನ್‌ ನೀಡಿದ ಹೊರತಾಗಿಯೂ ಉತ್ತಮ ಬೌಲಿಂಗ್‌ ದಾಳಿ ನಡೆಸಿದ ರಾಜಸ್ಥಾನ್‌ ರಾಯಲ್ಸ್‌ ತಂಡದ ಪರ ಜೇಸನ್ ಹೋಲ್ಡರ್ 4 ಓವರ್‌ಗಳಲ್ಲಿ 29 ರನ್ ನೀಡಿ 2 ವಿಕೆಟ್ ಕಿತ್ತರೆ, ಆರ್‌. ಅಶ್ವಿನ್ 4 ಓವರ್‌ಗಳಲ್ಲಿ 25 ರನ್ ನೀಡಿ 1 ವಿಕೆಟ್ ಪಡೆದರು, ಯಜುವೇಂದ್ರ ಚಾಹಲ್ 4 ಓವರ್‌ಗಳಲ್ಲಿ 50 ರನ್ ನೀಡಿ 1 ವಿಕೆಟ್ ಉರುಳಿಸಿದರು.

  • IPL 2023: ಜೋಸ್, ಜೈಸ್ವಾಲ್‌, ಸ್ಯಾಮ್ಸನ್‌ ಸಿಡಿಲಬ್ಬರದ ಬ್ಯಾಟಿಂಗ್‌ – ರಾಜಸ್ಥಾನ್‌ಗೆ 72 ರನ್‌ಗಳ ಭರ್ಜರಿ ಜಯ

    IPL 2023: ಜೋಸ್, ಜೈಸ್ವಾಲ್‌, ಸ್ಯಾಮ್ಸನ್‌ ಸಿಡಿಲಬ್ಬರದ ಬ್ಯಾಟಿಂಗ್‌ – ರಾಜಸ್ಥಾನ್‌ಗೆ 72 ರನ್‌ಗಳ ಭರ್ಜರಿ ಜಯ

    ಹೈದರಾಬಾದ್‌: ಜೋಸ್ ಬಟ್ಲರ್ (Jos Buttler), ಯಶಸ್ವೀ ಜೈಸ್ವಾಲ್ (Yashasvi Jaiswal) ಹಾಗೂ ಸಂಜು ಸ್ಯಾಮ್ಸನ್‌ (Sanju Samson) ಅವರ ಸಿಡಿಲಬ್ಬರದ ಅರ್ಧಶತಕ ಹಾಗೂ ಯಜುವೇಂದ್ರ ಚಾಹಲ್‌ ಸ್ಪಿನ್‌ ಬೌಲಿಂಗ್‌ ದಾಳಿ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ ತಂಡವು ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ವಿರುದ್ಧ 72 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ (Rajasthan Royals) 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್ ಪೇರಿಸಿತ್ತು. 204 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಹೈದರಾಬಾದ್‌ ಕಳಪೆ ಬ್ಯಾಟಿಂಗ್‌ ಪ್ರದರ್ಶನದಿಂದ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಪರಿಣಾಮ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 131 ರನ್‌ ಗಳಿಸಿ ಹೀನಾಯ ಸೋಲನುಭವಿಸಿತು.

    ಬೌಲಿಂಗ್‌ ವಿಭಾಗದಲ್ಲಿ ಕಳಪೆ ಪ್ರದರ್ಶನ ತೋರಿ, ರನ್‌ ಚಚ್ಚಿಸಿಕೊಂಡ ಹೈದರಾಬಾದ್‌ ಆಟಗಾರರು ಬ್ಯಾಟಿಂಗ್‌ ವಿಭಾಗದಲ್ಲೂ ಕಳಪೆ ಪ್ರದರ್ಶನ ನೀಡಿದರು. ಚೇಸಿಂಗ್‌ ಆರಂಭಿಸಿದ ಹೈದರಾಬಾದ್‌ ಆರಂಭದಲ್ಲೇ ಅಗ್ರಕ್ರಮಾಂಕದ ಬ್ಯಾಟರ್‌ಗಳನ್ನು ಕಳೆದುಕೊಂಡಿತು. ಮಯಾಂಕ್‌ ಅಗರ್ವಾಲ್‌ (Mayank Agarwal) 23 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 27 ರನ್‌ ಗಳಿಸಿದರೆ, ಇಂಗ್ಲೆಂಡ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಹ್ರಾರಿ ಬ್ರೂಕ್‌ (Harry Brook) 21 ಎಸೆತಗಳಲ್ಲಿ ಕೇವಲ 1 ಬೌಂಡರಿಯೊಂದಿಗೆ 13 ರನ್‌ ಗಳಿಸಿ ಔಟಾದರು. ಇದರಿಂದ ಪವರ್‌ ಪ್ಲೇ ಮುಗಿಯುವಷ್ಟರಲ್ಲೇ ಹೈದರಾಬಾದ್‌ ಕೇವಲ 30 ರನ್‌ ಗಳಿಸಿ 2 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

    ನಂತರ ಕಣಕ್ಕಿಳಿದವರು ರಾಜಸ್ಥಾನ್‌ ಬೌಲರ್‌ಗಳ ದಾಳಿಗೆ ದಂಗಾದರು. ಆದಿಲ್‌ ರಶೀದ್‌ 18 ರನ್‌, ಗ್ಲೇನ್‌ ಫಿಲಿಪ್ಸ್‌ 8 ರನ್‌, ನಾಯಕ ಭುವನೇಶ್ವರ್‌ ಕುಮಾರ್‌ 6 ರನ್‌, ವಾಷಿಂಗ್ಟನ್‌ ಸುಂದರ್‌ 1 ರನ್‌ ಗಳಿಸಿದರೆ, ಆರಂಭಿಕ ಅಭಿಷೇಕ್‌ ಶರ್ಮಾ, ರಾಹುಲ್‌ ತ್ರಿಪಾಠಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿಕೊಂಡರು. ಇದರಿಂದ ತಂಡವು 100 ರನ್‌ಗಳ ಗಡಿ ತಲುಪುವುದೇ ಕಷ್ಟವಾಗಿತ್ತು. ಆದರೆ ಕೊನೆಯಲ್ಲಿ ಉಮ್ರಾನ್‌ ಮಲಿಕ್‌, ಅಬ್ದುಲ್‌ ಸಮದ್‌ ಸಿಕ್ಸರ್‌, ಬೌಂಡರಿ ಚಚ್ಚಿ ತಂಡದ ಮೊತ್ತ 130ರ ಗಡಿ ದಾಟಿಸಿದರು. ಸಮದ್ 32 ರನ್‌ ಗಳಿಸಿದರೆ, ಮಲಿಕ್‌‌ ಕೇವಲ 8 ಎಸೆತಗಳಲ್ಲಿ 19 ರನ್‌ ಗಳಿಸಿ ತಂಡಕ್ಕೆ ನೆರವಾದರು.

    ಚಾಹಲ್‌ ಸ್ಪಿನ್‌ ಕಮಾಲ್:‌ ರಾಜಸ್ಥಾನ್‌ ರಾಯಲ್ಸ್‌ ಪರ ಬೌಲಿಂಗ್‌ ಕಮಾಲ್‌ ಮಾಡಿದ ಯಜುವೇಂದ್ರ ಚಾಹಲ್‌ (Yuzvendra Chahal) 4 ಓವರ್‌ಗಳಲ್ಲಿ ಕೇವಲ 17 ರನ್‌ ನೀಡಿ 4 ವಿಕೆಟ್‌ ಕಿತ್ತರೆ, ಟ್ರೆಂಟ್‌ ಬೋಲ್ಟ್‌ 4 ಓವರ್‌ಗಳಲ್ಲಿ 21 ರನ್‌ ನೀಡಿ 2 ವಿಕೆಟ್‌ ಪಡೆದರು. ಜೇಸನ್‌ ಹೋಲ್ಡರ್‌, ರವಿಚಂದ್ರನ್‌ ಅಶ್ವಿನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಬಟ್ಲರ್‌ ಬೊಂಬಾಟ್‌ ಬ್ಯಾಟಿಂಗ್‌: ಇನ್ನೂ ಕಳೆದ ಆವೃತ್ತಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಜೋಸ್ ಬಟ್ಲರ್ ಈ ಆವೃತ್ತಿಯ ಮೊದಲ ಪಂದ್ಯದಲ್ಲೇ ಬೆಂಕಿ ಬ್ಯಾಟಿಂಗ್‌ ಮಾಡಿ, ಫಾರ್ಮ್ ಮುಂದುವರಿಸಿದರು. ಆರಂಭದಲ್ಲೇ ಅಬ್ಬರಿಸಿದ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಸನ್‌ರೈಸರ್ಸ್ ಹೈದರಾಬಾದ್ ಬೌಲರ್‌ಗಳನ್ನು ಚೆಂಡಾಡಿದರು. ಇದರಿಂದಾಗಿ ರಾಜಸ್ಥಾನ್‌ ಪವರ್‌ ಪ್ಲೇ ಮುಗಿಯುವ ಹೊತ್ತಿಗೆ ಭರ್ಜರಿ 85 ರನ್‌ ಗಳಿಸಿತ್ತು.

    ಜೋಸ್ ಬಟ್ಲರ್ ಕೇವಲ 22 ಎಸೆತಗಳಲ್ಲಿ 54 ರನ್ (7 ಬೌಂಡರಿ, 3 ಸಿಕ್ಸರ್) ಗಳಿಸಿದರು. ಇದರೊಂದಿಗೆ ಪವರ್ ಪ್ಲೇನಲ್ಲಿ 3 ಅರ್ಧಶತಕ ಗಳಿಸುವ ಮೂಲಕ ಕ್ರಿಸ್‌ಗೇಲ್ ಸಾಧನೆಯನ್ನು ಜೋಸ್ ಬಟ್ಲರ್ ಸರಿಗಟ್ಟಿದರು. ಪವರ್ ಪ್ಲೇನಲ್ಲಿ 6 ಅರ್ಧಶತಕ ಗಳಿಸಿರುವ ಡೇವಿಡ್ ವಾರ್ನರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

    ಇನ್ನೂ ಜೋಸ್ ಬಟ್ಲರ್ ಔಟಾಗುತ್ತಿದ್ದಂತೆ ಜೊತೆಗೂಡಿದ ಸಂಜು ಸ್ಯಾಮ್ಸನ್‌ ಹಾಗೂ ಯಶಸ್ವೀ ಜೈಸ್ವಾಲ್ ಬ್ಯಾಟಿಂಗ್‌ ಅಬ್ಬರ ಮುಂದುವರಿಸಿದರು. ಯಶಸ್ವೀ ಜೈಸ್ವಾಲ್ 37 ಎಸೆತಗಳಲ್ಲಿ 9 ಬೌಂಡರಿ ಸಹಿತ 37 ರನ್ ಗಳಿಸಿದರೆ, ನಿಧಾನಗತಿಯಲ್ಲಿ ಬ್ಯಾಟಿಂಗ್‌ ಆರಂಭಿಸಿದ ನಾಯಕ ಸಂಜು ಸ್ಯಾಮ್ಸನ್ 32 ಎಸೆತಗಳಲ್ಲೇ 55 ರನ್ (3 ಬೌಂಡರಿ, 4 ಸಿಕ್ಸರ್) ಚಚ್ಚಿದರು. ನಂತರ ಬಂದ ದೇವದತ್ ಪಡಿಕ್ಕಲ್ ಕೇವಲ 2 ರನ್ ಗಳಿಸಿ ಔಟಾದರೆ, ರಿಯಾನ್ ಪರಾಗ್ ಕೂಡ 7 ರನ್ ಗಳಿಸಿ ವಿಕೆಟ್‌ ಒಪ್ಪಿಸಿದರು.

    ಕೊನೆಯಲ್ಲಿ ಶಿಮ್ರಾನ್ ಹೆಟ್ಮೇರ್ 16 ಎಸೆತಗಳಲ್ಲಿ ಅಜೇಯ 22 ರನ್ ಗಳಿಸಿದರೆ, ಅಶ್ವಿನ್ ಅಜೇಯ 1 ರನ್ ಗಳಿಸಿದರು. ಅಂತಿಮವಾಗಿ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡ ರಾಜಸ್ಥಾನ್‌ 203 ರನ್ ಗಳಿಸಿತ್ತು.

    ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಫಜಲಕ್ ಫಾರ್‍ಹೂಕಿ ಮತ್ತು ಟಿ. ನಟರಾಜನ್ ತಲಾ 2 ವಿಕೆಟ್ ಪಡೆದರೆ, ಉಮ್ರಾನ್ ಮಲಿಕ್ ಒಂದು ವಿಕೆಟ್ ಪಡೆದು ಮಿಂಚಿದರು.

  • ಕಳಪೆ ಬ್ಯಾಟಿಂಗ್‌ – ಸೂರ್ಯನ ವಿರುದ್ಧ ಸಿಡಿದ ಅಭಿಮಾನಿಗಳು

    ಕಳಪೆ ಬ್ಯಾಟಿಂಗ್‌ – ಸೂರ್ಯನ ವಿರುದ್ಧ ಸಿಡಿದ ಅಭಿಮಾನಿಗಳು

    ಅಮರಾವತಿ: ಕೆಲ ದಿನಗಳ ಹಿಂದೆಯಷ್ಟೇ ಸಿಕ್ಸರ್‌ ವೀರನಾಗಿ ಟಿ20 ಪಂದ್ಯಗಳಲ್ಲಿ ಹಲವು ದಾಖಲೆಗಳನ್ನ ಉಡೀಸ್‌ ಮಾಡಿದ್ದ ಟೀಂ ಇಂಡಿಯಾ (Team India) ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಸೂರ್ಯಕುಮಾರ್‌ ಯಾದವ್‌ (Suryakumar Yadav) ಇದೀಗ ಆಸ್ಟ್ರೇಲಿಯಾ (Australia) ವಿರುದ್ಧದ ಏಕದಿನ ಸರಣಿಯಲ್ಲಿ ಕಳಪೆ ಪ್ರದರ್ಶನದಿಂದ ಟೀಕೆಗಳಿಗೆ ಗುರಿಯಾಗಿದ್ದಾರೆ.

    ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಮಿಚೆಲ್‌ ಸ್ಟಾರ್ಕ್‌ ಅವರ ಮೊದಲ ಎಸೆತದಲ್ಲೇ ಔಟಾಗಿದ್ದಾರೆ. 2ನೇ ಪಂದ್ಯದಲ್ಲೂ ಶೂನ್ಯಕ್ಕೆ ನಿರ್ಗಮಿಸಿದ ಬಳಿಕ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಏಕದಿನ ಮಾದರಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಸಂಜು ಸ್ಯಾಮ್ಸನ್‌ರನ್ನ ಕಡೆಗಣಿಸಿ ಸೂರ್ಯಕುಮಾರ್ ಯಾದವ್‌ಗೆ ಮಣೆ ಹಾಕಿರುವುದಕ್ಕೆ ಬಿಸಿಸಿಐ (BCCI) ವಿರುದ್ಧ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಭಾರತ ಕಳಪೆ ಬೌಲಿಂಗ್‌, ಬ್ಯಾಟಿಂಗ್‌ – ಆಸ್ಟ್ರೇಲಿಯಾಗೆ 10 ವಿಕೆಟ್‌ಗಳ ಭರ್ಜರಿ ಜಯ

    ಜನವರಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ಸಂಜು ಸ್ಯಾಮ್ಸನ್ (Sanju Samson) ಸದ್ಯ 100 ಪ್ರತಿಶತ ಫಿಟ್ ಆಗಿದ್ದಾರೆ. ಆದರೂ ಅವರು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ. ಸೂರ್ಯಕುಮಾರ್ ಯಾದವ್ ಟಿ20 ಮಾದರಿಯಲ್ಲಿ ಭಾರತ ತಂಡದ ಮ್ಯಾಚ್ ವಿನ್ನಿಂಗ್ ಪ್ಲೇಯರ್. ತಮ್ಮ ಸ್ಫೋಟಕ ಇನ್ನಿಂಗ್ಸ್ ಮೂಲಕ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಅದಕ್ಕೆ ಅವರು ಟಿ20 ಯಲ್ಲಿ ಐಸಿಸಿ ರ್‍ಯಾಂಕಿಂಗ್‌ನಲ್ಲಿ ನಂಬರ್ 1 ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: IPL 2023: ಈ ಬಾರಿ ಸಿಎಸ್‌ಕೆ ಕಪ್ ಗೆಲ್ಲಲ್ಲ, ಆರ್‌ಸಿಬಿ ಗೆದ್ದರೆ ಖುಷಿ – ಭಾರತದ ಮಾಜಿ ಕ್ರಿಕೆಟಿಗ ಭವಿಷ್ಯ

    ದೀರ್ಘ ಸ್ವರೂಪದಲ್ಲಿ ಸೂರ್ಯ ರನ್‌ ಗಳಿಸುವಲ್ಲಿ ವಿಫಲರಾಗಿದ್ದಾರೆ. ಕಳೆದ 10 ಏಕದಿನ ಪಂದ್ಯಗಳಲ್ಲಿ 34 ರನ್ ಅವರ ಗರಿಷ್ಠ ಸ್ಕೋರ್ ಆಗಿದೆ. ಕಳೆದ 10 ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 9, 8, 4, 34, 6, 4, 31, 14, 0, 0, ರನ್ ಗಳಿಸಿದ್ದಾರೆ. ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ ಸೂರ್ಯಕುಮಾರ್ ಯಾದವ್‌ರನ್ನು ಕೈಬಿಟ್ಟು ಟಿ20 ಮಾದರಿಯಲ್ಲಿ ಮಾತ್ರ ತಂಡದಲ್ಲಿ ಉಳಿಸಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

    ಹಿಟ್‌ಮ್ಯಾನ್‌ ಬೆಂಬಲ:
    ಅಭಿಮಾನಿಗಳ ಟೀಕೆಯ ನಡುವೆ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma), ಸೂರ್ಯಕುಮಾರ್‌ ಬೆಂಬಲಕ್ಕೆ ನಿಂತಿದ್ದಾರೆ. ಸೂರ್ಯಕುಮಾರ್‌ ಯಾದವ್‌ ಇನ್ನಷ್ಟು ಏಕದಿನ ಪಂದ್ಯಗಳನ್ನಾಡುವ ಮೂಲಕ ಅವರು ಫಾರ್ಮ್‌ಗೆ ಮರಳಲಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಅವರು ಶೂನ್ಯಕ್ಕೆ ಔಟಾಗಿದ್ದಾರೆ. ಮುಂದಿನ ಇನ್ನಿಂಗ್ಸ್‌ಗಳಲ್ಲಿ ಫಾರ್ಮ್‌ಗೆ ಮರಳುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

  • ಸಂಜುಗೆ ಬಲಗೈ ಶಾಪ – ಪಂತ್‌ಗೆ ಎಡಗೈ ವರ

    ಸಂಜುಗೆ ಬಲಗೈ ಶಾಪ – ಪಂತ್‌ಗೆ ಎಡಗೈ ವರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟಿ20 ಸರಣಿಯಿಂದ ಹೊರನಡೆದ ಸಂಜು ಸ್ಯಾಮ್ಸನ್ – ಸರಣಿ ಗೆಲುವಿನತ್ತ ಭಾರತದ ಚಿತ್ತ

    ಟಿ20 ಸರಣಿಯಿಂದ ಹೊರನಡೆದ ಸಂಜು ಸ್ಯಾಮ್ಸನ್ – ಸರಣಿ ಗೆಲುವಿನತ್ತ ಭಾರತದ ಚಿತ್ತ

    ಪುಣೆ: ಭಾರತ (India) ಹಾಗೂ ಶ್ರೀಲಂಕಾ (Sri Lanka) ನಡುವೆ ಇಂದು ಪುಣೆಯಲ್ಲಿ ಎರಡನೇ ಟಿ20 (T20I) ಪಂದ್ಯ ನಡೆಯಲಿದೆ. ಈ ನಡುವೆ ಮೊದಲ ಪಂದ್ಯವಾಡಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ ಸಂಜು ಸ್ಯಾಮ್ಸನ್ (Sanju Samson) ಗಾಯಾಳುವಾಗಿ ಟಿ20 ಸರಣಿಯಿಂದ ಹೊರ ನಡೆದಿದ್ದಾರೆ.

    ಸಂಜು ಸ್ಯಾಮ್ಸನ್ ಮೊಣಕಾಲು ಗಾಯದಿಂದಾಗಿ ಇನ್ನುಳಿದ ಎರಡು ಪಂದ್ಯದಿಂದ ಹೊರ ನಡೆದಿದ್ದಾರೆ. ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಡಿದ್ದ ಸಂಜು ಸ್ಯಾಮ್ಸನ್ ಕೇವಲ 5 ರನ್ ಸಿಡಿಸಿ ನಿರಾಸೆ ಅನುಭವಿಸಿದ್ದರು. ಈ ನಡುವೆಯೂ 2ನೇ ಟಿ20 ಪಂದ್ಯದಲ್ಲಿ ಅವಕಾಶ ಪಡೆಯುವ ನಿರೀಕ್ಷೆ ಇತ್ತು. ಆದರೆ ಇದೀಗ ಗಾಯಾಳುವಾಗಿ ಸರಣಿಯಿಂದಲೇ ಹೊರ ಬಿದ್ದಿದ್ದಾರೆ. ಇದನ್ನೂ ಓದಿ: ಪಂತ್ ಮುಂಬೈಗೆ ಏರ್‌ಲಿಫ್ಟ್‌

    ಸಂಜು ಹೊರಬಿದ್ದಿರುವ ಕಾರಣ ಅವರ ಸ್ಥಾನದಲ್ಲಿ ರಾಹುಲ್ ತ್ರಿಪಾಠಿ ಅಥವಾ ವಾಷಿಂಗ್ಟನ್ ಸುಂದರ್ ಆಡುವ ಸಾಧ್ಯತೆ ಹೆಚ್ಚಿದೆ. ಬ್ಯಾಟ್ಸ್‌ಮ್ಯಾನ್‌ಗೆ ಮಣೆ ಹಾಕಿದರೆ ತ್ರಿಪಾಠಿ ಅವಕಾಶ ಪಡೆಯ ಬಹುದು. ಇತ್ತ ವಾಷಿಂಗ್ಟನ್ ಸುಂದರ್ ಆಲ್‍ರೌಂಡರ್ ಆಗಿರುವ ಕಾರಣ ಹೆಚ್ಚಿನ ಬೌಲಿಂಗ್ ಆಯ್ಕೆ ಸಿಗುವ ನಿಟ್ಟಿನಲ್ಲಿ ಆಡುವ 11ರ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಂಡರೂ ಅಚ್ಚರಿ ಪಡಬೇಕಾಗಿಲ್ಲ. ಇದನ್ನು ಹೊರತು ಪಡೆಸಿ ಮೊದಲ ಪಂದ್ಯವಾಡಿದ ತಂಡವನ್ನೇ ಪಾಂಡ್ಯ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: ಕೊಹ್ಲಿಗೆ ಸೂರ್ಯನಂತೆ ಬ್ಯಾಟಿಂಗ್ ಮಾಡಲು ಹೇಳಿದ್ರೆ ಆಗಲ್ಲ – ಗಂಭೀರ್

    ಮುಂಬೈನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳು ಕೈಕೊಟ್ಟಿದ್ದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೂಡಾ ಮತ್ತು ಅಕ್ಷರ್ ಪಟೇಲ್ ಹೋರಾಟ ಮತ್ತು ಬೌಲರ್‌ಗಳ ಸಂಘಟಿತ ಪ್ರದರ್ಶನದಿಂದಾಗಿ ಭಾರತ 2 ರನ್‍ಗಳ ರೋಚಕ ಜಯ ಸಾಧಿಸಿತ್ತು. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿದ್ದು, ಇಂದಿನ ಪಂದ್ಯ ಗೆದ್ದರೆ ಸರಣಿ ಭಾರತದ ಪಾಲಾಗಲಿದೆ. ಇತ್ತ ಶ್ರೀಲಂಕಾ ಇಂದಿನ ಪಂದ್ಯ ಗೆದ್ದು ಸರಣಿ ಸಮಬಲಗೊಳಿಸಲು ಹೋರಾಟ ನಡೆಸಲಿದೆ.

    ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್ (WK), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪದೇ ಪದೇ ಸ್ಯಾಮ್ಸನ್ ಕಡೆಗಣನೆ – ಟೀಂ ಇಂಡಿಯಾ ವಿರುದ್ಧ ಅಭಿಮಾನಿಗಳು ಗರಂ

    ಪದೇ ಪದೇ ಸ್ಯಾಮ್ಸನ್ ಕಡೆಗಣನೆ – ಟೀಂ ಇಂಡಿಯಾ ವಿರುದ್ಧ ಅಭಿಮಾನಿಗಳು ಗರಂ

    ಮುಂಬೈ: ಟೀಂ ಇಂಡಿಯಾದಲ್ಲಿ (India) ಸ್ಥಾನ ಪಡೆದರೂ ಆಡುವ 11ರ ಬಳಗದಲ್ಲಿ ಚಾನ್ಸ್ ಸಿಗದೆ ಪದೇ ಪದೇ ನಿರಾಸೆ ಅನುಭವಿಸುತ್ತಿರುವ ಸಂಜು ಸ್ಯಾಮ್ಸನ್ (Sanju Samson) ಅಭಿಮಾನಿಗಳು ಟೀಂ ಇಂಡಿಯಾ ವಿರುದ್ಧ ತಿರುಗಿಬಿದ್ದಿದ್ದಾರೆ.

    ಸಂಜು ಸ್ಯಾಮ್ಸನ್ ಉತ್ತಮ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ಆಗಿದ್ದರೂ ತಂಡದಲ್ಲಿ ರಿಷಭ್ ಪಂತ್ (Rishabh Pant) ಇರುವ ಕಾರಣ ಅವಕಾಶ ವಂಚಿತರಾಗುತ್ತಿದ್ದಾರೆ. ತಂಡದಲ್ಲಿದ್ದರೂ ಕೇವಲ ಬೆಂಚ್ ಬಿಸಿಮಾಡಲಷ್ಟೇ ಸೀಮಿತವಾಗಿದ್ದಾರೆ. ಇದನ್ನೂ ಓದಿ: ಟೈನಲ್ಲಿ ಅಂತ್ಯಕಂಡ ಫೈನಲ್ ಮ್ಯಾಚ್ – ಭಾರತಕ್ಕೆ T20 ಸರಣಿ

    ನ್ಯೂಜಿಲೆಂಡ್ (New Zealand) ವಿರುದ್ಧ ಹಿರಿಯ ಆಟಗಾರರಿಗೆ ರೆಸ್ಟ್ ನೀಡಿದ ಪರಿಣಾಮ ತಂಡಕ್ಕೆ ಆಯ್ಕೆಯಾಗಿದ್ದ ಸಂಜು ಸ್ಯಾಮ್ಸನ್‍ಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇತ್ತು. ಆದರೆ 3 ಪಂದ್ಯಗಳ ಟಿ20 (T20I) ಸರಣಿಯಲ್ಲಿ ಒಂದೇ ಒಂದು ಪಂದ್ಯದಲ್ಲೂ ಸ್ಯಾಮ್ಸನ್‍ಗೆ ಅವಕಾಶ ನೀಡಲಿಲ್ಲ.

    ಇತ್ತ ರಿಷಭ್ ಪಂತ್ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ಆಗಿ ಮೂರು ಪಂದ್ಯದಲ್ಲೂ ಅವಕಾಶ ಪಡೆದರೂ ಬ್ಯಾಟಿಂಗ್‍ನಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಆದರೂ ಪದೇ ಪದೇ ಸ್ಥಾನ ಕಲ್ಪಿಸಿಕೊಡಲಾಗಿದೆ. ಅವರ ಬದಲು ಒಂದು ಪಂದ್ಯದಲ್ಲಾದರೂ ಸ್ಯಾಮ್ಸನ್‍ಗೆ ಅವಕಾಶ ನೀಡಬೇಕಿತ್ತು ಎಂದು ಅಭಿಮಾನಿಗಳು ಬಿಸಿಸಿಐ (BCCI), ತಂಡದ ಕೋಚ್, ನಾಯಕನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ. ಇದನ್ನೂ ಓದಿ: 25 ಬೌಂಡರಿ, 15 ಸಿಕ್ಸರ್ – 277 ರನ್ ಸಿಡಿಸಿ ವಿಶ್ವದಾಖಲೆ ಬರೆದ ಜಗದೀಶನ್ – ಹಿಟ್‌ಮ್ಯಾನ್ ದಾಖಲೆಯೂ ಉಡೀಸ್

    2022ರಲ್ಲಿ ಸ್ಯಾಮ್ಸನ್ ಟೀಂ ಇಂಡಿಯಾ ಪರ 6 ಪಂದ್ಯಗಳನ್ನು ಆಡಿದ್ದು, 158.40 ಸ್ಟ್ರೈಕ್‍ರೇಟ್‍ನಲ್ಲಿ 1 ಅರ್ಧಶತಕ ಸಹಿತ 179 ರನ್ ಬಾರಿಸಿದ್ದಾರೆ. ಅಲ್ಲದೇ ಐಪಿಎಲ್‍ನಲ್ಲೂ (IPL) ಉತ್ತಮವಾಗಿ ಬ್ಯಾಟ್‍ಬೀಸಿದ್ದರು. ಆದರೆ ಟೀಂ ಇಂಡಿಯಾಗೆ ಆಯ್ಕೆ ಮಾಡಿದರೂ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗುತ್ತಿಲ್ಲ. ಇದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಶ್ರೇಯಸ್‌ ಅಯ್ಯರ್‌, ಇಶಾನ್‌ ಕಿಶನ್‌ ಭರ್ಜರಿ ಬ್ಯಾಟಿಂಗ್‌ – ಭಾರತಕ್ಕೆ 7 ವಿಕೆಟ್‌ಗಳ ಜಯ

    ಶ್ರೇಯಸ್‌ ಅಯ್ಯರ್‌, ಇಶಾನ್‌ ಕಿಶನ್‌ ಭರ್ಜರಿ ಬ್ಯಾಟಿಂಗ್‌ – ಭಾರತಕ್ಕೆ 7 ವಿಕೆಟ್‌ಗಳ ಜಯ

    ರಾಂಚಿ: ಶ್ರೇಯಸ್‌ ಅಯ್ಯರ್‌ (Shreyas Iyer), ಇಶಾನ್‌ ಕಿಶನ್‌ (Ishan Kishan) ಅವರ ಭರ್ಜರಿ ಬ್ಯಾಟಿಂಗ್‌ ಹಾಗೂ ಮೊಹಮ್ಮದ್‌ ಸಿರಾಜ್‌ ಬೌಲಿಂಗ್‌ ದಾಳಿ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ  7 ವಿಕೆಟ್‌ಗಳ ಜಯ ಸಾಧಿಸಿದೆ.

    ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಭಾರತ (Team India) ಮತ್ತು ದಕ್ಷಿಣ ಆಫ್ರಿಕಾ (SouthAfrica) ನಡುವಿನ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ಭಾರತದ ಪ್ರಬಲ ಬೌಲಿಂಗ್ ದಾಳಿಗೆ 300ರ ಗಡಿ ಮುಟ್ಟಲು ಸಾಧ್ಯವಾಗದೇ 7 ವಿಕೆಟ್ ನಷ್ಟಕ್ಕೆ 278ರನ್ ಕಲೆಹಾಕಿತು. 279 ರನ್‌ಗಳ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಭಾರತ ನಿಗದಿತ 45.5 ಓವರ್‌ಗಳಲ್ಲೇ 3 ವಿಕೆಟ್‌ ನಷ್ಟಕ್ಕೆ 282 ರನ್‌ ಪೇರಿಸಿ ಗೆಲುವು ಸಾಧಿಸಿತು. ಈ ಮೂಲಕ 1-1 ಅಂತರದಲ್ಲಿ ಸರಣಿ ಸಮಬಲ ಸಾಧಿಸಿದೆ.

    279 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ಪವರ್‌ ಪ್ಲೇ ಮುಗಿಯುವಷ್ಟರಲ್ಲೇ ಆರಂಭಿಕರಾದ ಶುಭಮನ್‌ ಗಿಲ್‌ (Shubman Gill) ಹಾಗೂ ಶಿಖರ್‌ ಧವನ್‌ (Shikhar Dhawan) ಜೋಡಿ ವಿಕೆಟ್‌ ಒಪ್ಪಿಸಿತು. ಈ ವೇಳೆ ಶಿಖರ್‌ ಧವನ್‌ 20 ಎಸೆತಗಳಲ್ಲಿ ಕೇವಲ 13 ರನ್‌ಗಳಿಸಿದರೆ, ಗಿಲ್‌ 26 ಎಸೆತಗಳಲ್ಲಿ 5 ಬೌಂಡರಿಯೊಂದಿಗೆ 28 ರನ್‌ಗಳಿಸಿ ನಿರ್ಗಮಿಸಿದರು.

    ನಂತರ ಕಣಕ್ಕಿಳಿದ ಶ್ರೇಯಸ್‌ ಅಯ್ಯರ್‌ ಹಾಗೂ ಇಶಾನ್‌ ಕಿಶನ್‌ ಜೋಡಿ ಭರ್ಜರಿ ಬ್ಯಾಟಿಂಗ್‌ ಮಾಡಿದರು. 155 ಎಸೆತಗಳಲ್ಲಿ 161 ರನ್‌ಗಳ ಜೊತೆಯಾಟವಾಡಿದರು. ಸಿಕ್ಸರ್‌, ಬೌಂಡರಿಗಳ ಜೊತೆಯಾಟದಲ್ಲಿ ಎದುರಾಳಿ ಬೌಲರ್‌ಗಳ ಬೆವರಿಳಿಸಿದರು. ಈ ವೇಳೆ ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದ ಇಶಾನ್‌ ಕಿಶನ್‌ ಶತಕದ ಸನಿಹದಲ್ಲಿರುವಾಗಲೇ ಔಟಾದರು. ಟೀಂ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡಿದ ಇಶಾನ್‌ ಕಿಶನ್‌ 84 ಎಸೆತಗಳಲ್ಲಿ 93 ರನ್‌ (7 ಸಿಕ್ಸರ್‌, 4 ಬೌಂಡರಿ) ಗಳಿಸಿ ಔಟಾದರು. ಆ ನಂತರವೂ ತಮ್ಮ ಅಬ್ಬರ ಮುಂದುವರಿಸಿದ ಶ್ರೇಯಸ್‌ ಅಯ್ಯರ್‌ ಶತಕ ಸಿಡಿಸಿ ಮಿಂಚಿದರು.

    ಮಿಂಚಿದ ಶ್ರೇಯಸ್‌ ಅಯ್ಯರ್‌:
    ದಕ್ಷಿಣಾ ಆಫ್ರಿಕಾ ಬೌಲರ್‌ಗಳ ಬೆವರಿಳಿಸಿದ ಶ್ರೇಯಸ್‌ ಅಯ್ಯರ್‌ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ನೆರವಾದರು. 111 ಎಸೆತಗಳನ್ನು ಎದುರಿಸಿದ ಶ್ರೇಯಸ್‌ ಅಯ್ಯರ್‌ 113 ರನ್‌ (15 ಬೌಂಡರಿ) ಸಿಡಿಸಿ ಅಜೇಯರಾಗುಳಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬಂದ ಸಂಜು ಸ್ಯಾಮ್ಸನ್‌ (Sanju Samson) 36 ಎಸೆತಗಳಲ್ಲಿ 1 ಬೌಂಡರಿ, 1 ಸಿಕ್ಸರ್‌ನೊಂದಿಗೆ 29 ರನ್‌ಗಳನ್ನು ಗಳಿಸಿ ಟೀಂ ಇಂಡಿಯಾ ಗೆಲುವಿಗೆ ಕಾರಣರಾದರು.

    ಟೆಂಬಾ ಬವುಮಾ ಅನುಪಸ್ಥಿತಿಯಲ್ಲಿ ತಂಡವನ್ನ ಮುನ್ನಡೆಸಿದ ಕೇಶವ್ ಮಹಾರಾಜ ಮೊದಲು ಬ್ಯಾಟಿಂಗ್ ಆಯ್ದುಕೊಂಡ ನಿರ್ಧಾರಕ್ಕೆ ಟಾಪ್ ಆರ್ಡರ್ ಬ್ಯಾಟರ್‌ಗಳು ನೀರಸ ಪ್ರತಿಕ್ರಿಯೆ ತೋರಿದರು. ಮೊದಲಿಗೆ ಇನ್‌ಫಾರ್ಮ್ ಬ್ಯಾಟರ್ ಕ್ವಿಂಟನ್ ಡಿಕಾಕ್ ಕೇವಲ 5 ರನ್‌ಗಳಿಸಿ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಆರಂಭಿಕ ಹಿನ್ನಡೆ ಅನುಭವಿಸಿದರು.

    ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶಹಬಾಜ್ ಅಹಮದ್ 10 ಓವರ್ ಬೌಲಿಂಗ್‌ ಮಾಡಿ 54ರನ್ ನೀಡಿ 1 ಪ್ರಮುಖ ವಿಕೆಟ್ ಪಡೆದರು. ಓಪನಿಂಗ್ ಬ್ಯಾಟರ್ ಜನ್ನೆಮನ್ ಮಲನ್‌ರನ್ನ ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದರು. ಅಂಪೈರ್ ತೀರ್ಪನ್ನು ನಾಟೌಟ್ ನೀಡಿದಾಗ, ರಿವ್ಯೂ ತೆಗೆದುಕೊಂಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

    ದಕ್ಷಿಣ ಆಫಿಕಾ ಆರಂಭದಲ್ಲೇ 40 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿತು. ಈ ವೇಳೆ ರೀಜಾ ಹೆಂಡ್ರಿಕ್ಸ್ ಮತ್ತು ಏಡೆನ್ ಮಕ್ರಾಮ್ ತಂಡಕ್ಕೆ ಆಸರೆಯಾದರು. 3ನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಈ ಜೋಡಿ ವೈಯಕ್ತಿಕ ಅರ್ಧಶತಕ ದಾಖಲಿಸಿ ತಂಡದ ರನ್‌ ಮೊತ್ತವನ್ನು 150ರ ಗಡಿ ದಾಟಿಸಿತು. ಈ ವೇಳೆ 76 ಎಸೆತಗಳಲ್ಲಿ 74 ರನ್‌ (1 ಸಿಕ್ಸರ್‌, 9 ಬೌಂಡರಿ) ಸಿಡಿಸಿ, ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದ್ದ ರೀಜಾ ಹೆಂಡ್ರಿಕ್ಸ್‌ ಅವರನ್ನು ಔಟ್‌ ಮಾಡಿಸಿದ ಮೊಹಮ್ಮದ್‌ ಸಿರಾಜ್‌ ಪೆವಿಲಿಯನ್‌ ದಾರಿ ತೋರಿದರು. ಈ ಮೂಲಕ ಆರಂಭಿಕ ವಿಕೆಟ್ ಪಡೆದಿದ್ದ ಸಿರಾಜ್ ಕಠಿಣವಾಗಿದ್ದ ಜೋಡಿಯನ್ನ ಬೇರ್ಪಡಿಸಿದರು.

    ಹೆಂಡ್ರಿಕ್ಸ್ ಔಟಾದ ಬಳಿಕ ಹೆನ್ರಿಚ್ ಕ್ಲಾಸ್ 30 ರನ್‌ ಗಳಿಸಿ ಉತ್ತಮವಾಗೇ ಆಡುತ್ತಿದ್ದ ವೇಳೆ ಕುಲ್‌ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದ್ರು. 89 ಎಸೆತಗಳಲ್ಲಿ 79ರನ್ ಕಲೆಹಾಕಿದ್ದ ಏಡೆನ್ ಮಕ್ರಾಮ್ ಇನ್ನಿಂಗ್ಸ್‌ಗೆ ವಾಷಿಂಗ್ಟನ್ ಸುಂದರ್ ತೆರೆ ಎಳೆದರು. ವೇಯ್ನೆ ಪರ್ನೆಲ್ 16ರನ್‌ಗಳಿಸಿ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಔಟಾದರು. ಅಂತಿಮ ಓವರ್‌ನಲ್ಲಿ ಕೇವಲ 3 ರನ್ ನೀಡಿ ಕೇಶವ್ ಮಹಾರಾಜ್ ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್ ಭಾರತದ ಪರ ಹೀರೋ ಆಗಿ ಮಿಂಚಿದರು.

    ಸಿರಾಜ್‌ ಬೊಂಬಾಟ್‌ ಬೌಲಿಂಗ್‌:
    ಟೀಂ ಇಂಡಿಯಾ ಪರ ಬೊಂಬಾಟ್ ಬೌಲಿಂಗ್ ಮಾಡಿದ ಮೊಹಮ್ಮದ್ ಸಿರಾಜ್ (Mohammed Siraj) 10 ಓವರ್‌ಗಳಲ್ಲಿ 1 ಮೇಡನ್ ಸಹಿತ 38ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದರು. ಇನ್ನುಳಿದಂತೆ ಶಾರ್ದೂಲ್ ಠಾಕೂರ್, ಶಹಬಾಜ್ ಅಹಮದ್, ವಾಷಿಂಗ್ಟನ್ ಸುಂದರ್ ಮತ್ತು ಕುಲ್‌ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು. ದಕ್ಷಿಣ ಆಫ್ರಿಕಾ 7 ವಿಕೆಟ್‌ ನಷ್ಟಕ್ಕೆ 278ರನ್‌ಗಳಿಗೆ ಇನ್ನಿಂಗ್ಸ್‌ ಮುಗಿಸಿತು.

    Live Tv
    [brid partner=56869869 player=32851 video=960834 autoplay=true]

  • ಯುವ ಬ್ಯಾಟ್ಸ್‌ಮಾನ್‌ಗಳು, ಆಲ್‍ರೌಂಡರ್‌ಗಳ ನಾಯಕತ್ವಕ್ಕೆ ಚಪ್ಪಾಳೆ ಹೊಡೆದ ದ್ರಾವಿಡ್

    ಯುವ ಬ್ಯಾಟ್ಸ್‌ಮಾನ್‌ಗಳು, ಆಲ್‍ರೌಂಡರ್‌ಗಳ ನಾಯಕತ್ವಕ್ಕೆ ಚಪ್ಪಾಳೆ ಹೊಡೆದ ದ್ರಾವಿಡ್

    ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ನಾಯಕರಾಗಿ ಭಾರತೀಯ ಆಟಗಾರರ ಯಶಸ್ಸು ಅಂತಿಮವಾಗಿ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಪ್ರಯೋಜನವಾಗಿದೆ. ಏಕೆಂದರೆ ನಾಯಕತ್ವದ ಪಾತ್ರವು ಕ್ರಿಕೆಟಿಗರ ಬೆಳವಣಿಗೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಎಂದು ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾರ್ದಿಕ್ ಪಾಂಡ್ಯ ತಮ್ಮ ನಾಯಕತ್ವದ ಮೊದಲ ಐಪಿಎಲ್ ಆವೃತ್ತಿಯಲ್ಲಿಯೇ ಗುಜರಾತ್ ಟೈಟಾನ್ಸ್ ತಂಡಕ್ಕೆ ಚೊಚ್ಚಲ ಪ್ರಶಸ್ತಿಯನ್ನು ನೀಡಿದ್ದಾರೆ. ಹಾಗೆಯೇ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಸಂಜು ಸಾಮ್ಸನ್ ಐಪಿಎಲ್ 2022ರಲ್ಲಿ ತಮ್ಮ ತಂಡಗಳ ನಾಯಕತ್ವದ ಜವಾಬ್ದಾರಿಯನ್ನು ಅತ್ಯಂತ ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದರು.

    ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಪ್ಲೇಆಫ್ ಹಂತದವರೆಗೂ ತೆಗೆದುಕೊಂಡು ಹೋಗಿದ್ದಾರೆ. ಅದೇ ರೀತಿಯಾಗಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸಾಮ್ಸನ್ ಕೂಡಾ ತಮ್ಮ ತಂಡವನ್ನು ಫೈನಲ್ ಹಂತದವರೆಗೂ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಐಪಿಎಲ್ ಹರಾಜಿನ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ

    ನಮ್ಮಲ್ಲಿ ಬಹಳಷ್ಟು ಭಾರತೀಯ ನಾಯಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಅದ್ಭುತವಾಗಿದೆ. ಹಾರ್ದಿಕ್ ಅವರಲ್ಲಿ ಒಬ್ಬ ಅದ್ಭುತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಎಂದರು.

    ಯುವ ಬ್ಯಾಟ್ಸ್‌ಮ್ಯಾನ್‌ಗಳು ಮತ್ತು ಆಲ್‍ರೌಂಡರ್‌ಗಳು ತಮ್ಮ ತಂಡವನ್ನು ಮುನ್ನಡೆಸುವುದನ್ನು ನೋಡುತ್ತಿದ್ದರೆ ನಿಜಕ್ಕೂ ಅದ್ಭುತವೆನಿಸುತ್ತದೆ. ಇದು ಆಟಗಾರರಾಗಿ ಬೆಳೆಯಲು ಮತ್ತು ತಂಡಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಭಾರತದ ಕಿರಿಯ ಆಟಗಾರರು ಐಪಿಎಲ್‍ನಲ್ಲಿ ಉತ್ತಮ ಮುನ್ನಡೆ ಸಾಧಿಸುತ್ತಿರುವುದು ನಿಜಕ್ಕೂ ನಮ್ಮ ದೃಷ್ಟಿಕೋನದಿಂದ ಅದ್ಭುತವಾಗಿದೆ ಎಂದು ಹೇಳಿದರು.

    ಈಗಾಗಲೇ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಆಫ್ರಿಕಾ ವಿರುದ್ಧ ಭಾರತ ಕಣಕ್ಕಿಳಿದಿದೆ. ಭಾರತೀಯ ತಂಡದಲ್ಲಿ ಹಲವಾರು ಹೊಸ ಮುಖಗಳನ್ನು ಹೆಸರಿಸಲಾಗಿದೆ. ಇದನ್ನೂ ಓದಿ: ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ಹರಾಜಿನಿಂದ ಹಿಂದೆ ಸರಿದ ಅಮೆಜಾನ್

    ಕಳೆದ ವರ್ಷ ಟಿ-20 ವಿಶ್ವಕಪ್‍ನಿಂದ ತಂಡವು ನಿರಾಶಾದಾಯಕವಾಗಿ ಗುಂಪು ಸುತ್ತಿನ ನಿರ್ಗಮನದ ನಂತರ ಬೆನ್ನಿನೋವಿನೊಂದಿಗೆ ಹೋರಾಡಿದ ಮತ್ತು ತಂಡದಿಂದ ಕೈಬಿಡಲ್ಪಟ್ಟ ಪಾಂಡ್ಯ, ಮತ್ತೆ ಐಪಿಎಲ್‍ನಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‍ಗೆ ಮರಳಿದ್ದಾರೆ. ಅವರು ಗುಜರಾತ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ಆಲ್‍ರೌಂಡರ್ ಆಟದಿಂದ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಅವರನ್ನು ಮರಳಿ ಪಡೆದಿರುವುದು ನಿಜಕ್ಕೂ ಸಂತಸ ತಂದಿದೆ. ಅವರು ಏಕದಿನ ಕ್ರಿಕೆಟ್‍ನಲ್ಲಿ ಅತ್ಯಂತ ಯಶಸ್ವಿಯಾಗಿದ್ದಾರೆ. ಈ ಐಪಿಎಲ್‍ನಲ್ಲೂ ಉತ್ತಮ ಫಾರ್ಮ್ ಅನ್ನು ತೋರಿಸಿದ್ದಾರೆ ಎಂದು ಹೇಳಿದರು.