Tag: Sanju Samson

  • IPL 2026 | ಸಂಜು ಸ್ಯಾಮ್ಸನ್‌ ಆರ್‌ಸಿಬಿ ಸೇರೋದು ಪಕ್ಕಾನಾ?

    IPL 2026 | ಸಂಜು ಸ್ಯಾಮ್ಸನ್‌ ಆರ್‌ಸಿಬಿ ಸೇರೋದು ಪಕ್ಕಾನಾ?

    ಮುಂಬೈ: ರಾಜಸ್ಥಾನ್‌ ರಾಯಲ್ಸ್ (Rajasthan Royals) ಜೊತೆಗಿನ ಸಂಬಂಧ ಹದಗೆಟ್ಟಿರುವುದರಿಂದ ಸಂಜು ಸ್ಯಾಮ್ಸನ್ ಅವರು 2026ರ ಐಪಿಎಲ್‌ ಮಿನಿ ಹರಾಜಿಗೂ ಮುನ್ನವೇ ಫ್ರಾಂಚೈಸಿಯಿಂದ ಹೊರಬರಲು ಇಚ್ಛಿಸಿದ್ದಾರೆ. ಈ ಬೆನ್ನಲ್ಲೇ ವೈರಲ್‌ ಆಗಿರುವ ಫೋಟೋಗಳು ಸಂಜು ಸ್ಯಾಮ್ಸನ್‌ (Sanju Samson) ಆರ್‌ಸಿಬಿ ಸೇರೋದು ಪಕ್ಕಾ ಎಂದು ಹೇಳುತ್ತಿವೆ.

    ಹೌದು. 2026ರ ಐಪಿಎಲ್‌ಗೆ (IPL 2025) ಮುಂಚಿತವಾಗಿ ನಡೆಯಲಿರುವ ಮಿನಿ ಹರಾಜಿಗೂ ಮುನ್ನ ತಮ್ಮನ್ನು ಫ್ರಾಂಚೈಸಿಯಿಂದ ಬಿಡುಗಡೆಗೊಳಿಸುವಂತೆ ಕೇಳಿಕೊಂಡಿದಾರಂತೆ. ಈ ಬೆನ್ನಲ್ಲೇ ಸಂಜು ಆರ್‌ಸಿಬಿ (RCB) ಥ್ರೋ ಡೌನ್ ಸ್ಪೆಷಲಿಸ್ಟ್ ಜೊತೆ ತರಬೇತಿ ಪಡೆಯುತ್ತಿರುವ ಫೋಟೋಗಳು ವೈರಲ್‌ ಆಗಿದ್ದು, ಭಾರೀ ಹೈಪ್‌ ಕ್ರಿಯೆಟ್‌ ಮಾಡಿದೆ.

    ಕಳೆದ ತಿಂಗಳು ಮುಕ್ತಾಯಗೊಂಡ ಟಿ20 ಏಷ್ಯಾಕಪ್‌ (T20 Asia Cup) ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್‌ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಬ್ಯಾಟರ್‌ ಆಗಿದ್ದರು. ಅಲ್ಲದೇ ಅಕ್ಟೋಬರ್‌ 29ರಿಂದ ಶುರುವಾಗಲಿರುವ 5 ಪಂದ್ಯಗಳ ಟಿ20 ಸರಣಿಗೆ ಆಯ್ಕೆಯಾಗಿದ್ದು, ಆಸ್ಟ್ರೇಲಿಯಾಗೆ (Australia) ಪ್ರಯಾಣಿಸಲಿದ್ದಾರೆ. ಅದಕ್ಕೂ ಮುನ್ನ ಸಂಜು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಥ್ರೋ-ಡೌನ್ ಸ್ಪೆಷಲಿಸ್ಟ್ ಗೇಬ್ರಿಯಲ್ ಅವರಿಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಸ್ಯಾಮ್ಸನ್‌ ಆರ್‌ಆರ್‌ ತೊರೆಯಲು ಕಾರಣ ಏನು?
    ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕನಾಗಿದ್ದ ಸಂಜು ಸ್ಯಾಮ್ಸನ್‌ 2025ರ ಐಪಿಎಲ್‌ ಟೂರ್ನಿಯ ಬಹುತೇಕ ಪಂದ್ಯಗಳಲ್ಲಿ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕಿಳಿದಿದ್ದರು. ರಿಯಾನ್‌ ಪರಾಗ್‌ ನಾಯಕನಾಗಿ ಅನೇಕ ಪಂದ್ಯಗಳನ್ನ ಮುನ್ನಡೆಸಿದ್ದರು. ಇದು ಅಸಮಾಧಾನ ಮೂಡಿಸಿತ್ತು ಎನ್ನಲಾಗಿದೆ. ಅಲ್ಲದೇ ಜೋಸ್‌ ಬಟ್ಲರ್‌ ಅವರನ್ನ ಫ್ರಾಂಚೈಸಿಯಿಂದ ಕೈಬಿಟ್ಟಿದ್ದು ಸಹ ಸಂಜುಗೆ ಬೇಸರ ತರಿಸಿತ್ತಂತೆ. ಹೀಗಾಗಿ 2025ರ ಟೂರ್ನಿ ಮುಗಿದ ಬೆನ್ನಲ್ಲೇ ತನ್ನನ್ನು ಹರಾಜಿನಲ್ಲಿ ಬಿಡುಗಡೆ ಮಾಡಲು ಅಥವಾ ಬೇರೆ ಫ್ರಾಂಚೈಸಿ ಜೊತೆಗೆ ವಿನಿಮಯ ಮಾಡುವಂತೆ ಕೇಳಿಕೊಂಡಿದ್ದರು. ಆರಂಭದಲ್ಲಿ ಸಂಜು ಸಿಎಸ್‌ಕೆ ಸೇರಿಕೊಳ್ಳಲಿದ್ದು, ಧೋನಿ ಬಳಿಕ ವಿಕೆಟ್‌ ಕೀಪರ್‌ ಬ್ಯಾಟರ್‌ ಆಗಲಿದ್ದಾರೆ ಎನ್ನಲಾಗಿತ್ತು. ಆದರೀಗ ಅವರು ಆರ್‌ಸಿಬಿ ಫ್ರಾಂಚೈಸಿ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

    IPL RR VS RCB 2

    ಈಗಾಗಲೇ 2026ರ ಐಪಿಎಲ್‌ನ ಮಿನಿ ಹರಾಜಿಗೆ ತಯಾರಿ ನಡೆಯುತ್ತಿದೆ. ನವೆಂಬರ್‌ 15ರ ಒಳಗೆ ಎಲ್ಲಾ ಫ್ರಾಂಚೈಸಿಗಳು ರಿಟೇನ್‌ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸುವಂತೆ ಐಪಿಎಲ್‌ ಮಂಡಳಿ ತಿಳಿಸಿದೆ. ಡಿಸೆಂಬರ್‌ 13 ರಿಂದ 15ರ ಒಳಗೆ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಮಾತ್ರವೆ ಮೆಗಾ ಹರಾಜು ನಡೆಯಲಿದೆ.

  • CSKಗೆ ಗುಡ್‌ಬೈ ಹೇಳಲು ಅಶ್ವಿನ್ ನಿರ್ಧಾರ – ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಲು ಸಂಜು ಕಾತರ?

    CSKಗೆ ಗುಡ್‌ಬೈ ಹೇಳಲು ಅಶ್ವಿನ್ ನಿರ್ಧಾರ – ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಲು ಸಂಜು ಕಾತರ?

    ಚೆನ್ನೈ: 2026ರ ಐಪಿಎಲ್‌ (IPL 2025) ಟೂರ್ನಿಯ ಮಿನಿ ಹರಾಜಿಗೆ ಇನ್ನೂ ಕೆಲ ತಿಂಗಳು ಬಾಕಿಯಿದೆ. ಅದಕ್ಕೂ ಮುನ್ನವೇ 5 ಬಾರಿ ಐಪಿಎಲ್‌ ಚಾಂಪಿಯನ್‌ ಆಗಿರುವ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡ ತೊರೆಯಲು ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ನಿರ್ಧರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಈ ಕುರಿತು ಎಂ.ಎಸ್‌ ಧೋನಿ ಹಾಗೂ ನಾಯಕ ರುತುರಾಜ್‌ ಗಾಯಕ್ವಾಡ್‌ ಅವರೊಂದಿಗೆ ಚರ್ಚಿಸಿದ ಬಳಿಕ ಅಧಿಕೃತವಾಗಿ ತಿಳಿಸುವುದಾಗಿ ಅಶ್ವಿನ್‌ (R Ashwin) ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ದೂರವಾದಾಗಲೇ ಬೆಲೆ ತಿಳಿಯೋದು – ಮತ್ತೆ ಒಂದಾಗುತ್ತೇವೆಂದ ಸೈನಾ ನೆಹ್ವಾಲ್ ದಂಪತಿ

    ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಅಶ್ವಿನ್‌ 2025ರ ಋತುವಿನಲ್ಲ ಸ್ಥಿರ ಪ್ರದರ್ಶನವನ್ನೂ ನೀಡಲಾಗಲಿಲ್ಲ. ಕೇವಲ 9 ಪಂದ್ಯಗಳಲ್ಲಿ ಮಾತ್ರವೇ ಕಾಣಿಸಿಕೊಂಡು 7 ವಿಕೆಟ್‌ ಪಡೆದಿದ್ದರು. ಕಳಪೆ ಪ್ರದರ್ಶನದಿಂದಾಗಿ ಅವರನ್ನು 5 ಪಂದ್ಯಗಳಿಗೆ ಬೆಂಚ್‌ನಲ್ಲಿ ಇರಿಸಲಾಗಿತ್ತು. ಅಲ್ಲದೇ ಸಿಎಸ್‌ಕೆ ಕೂಡ ಕೇವಲ 4 ಪಂದ್ಯಗಳಲ್ಲಿ ಗೆದ್ದು, ಕೊನೇ ಸ್ಥಾನದಲ್ಲೇ 18ನೇ ಆವೃತ್ತಿ ಮುಗಿಸಿತ್ತು. ಸದ್ಯ ಸಿಎಸ್‌ಕೆ ತೊರೆಯಲು ನಿರ್ಧರಿಸಿರುವ ಅಶ್ವಿನ್‌ ಮತ್ತೆ ರಾಜಸ್ಥಾನ್‌ ರಾಯಲ್ಸ್‌ ತಂಡ ಸೇರಲಿದ್ದಾರೆ ಎಂಬ ವದಂತಿಗಳೂ ಹಬ್ಬಿವೆ. ಇದನ್ನೂ ಓದಿ: ಟೀಕೆಯಿಂದ ಖಿನ್ನತೆಗೆ ಜಾರಿದ್ದೆ, ಆತ್ಮಹತ್ಯೆಗೆ ಯೋಚಿಸಿದ್ದೆ – ಮೌನ ಮುರಿದ ಚಹಲ್‌

    ಸಿಎಸ್‌ಕೆಗೆ ಸಂಜು ಸ್ಯಾಮ್ಸನ್‌
    ಮತ್ತೊಂದು ಕಡೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಮತ್ತು ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್‌ ಸಂಜು ಸ್ಯಾಮ್ಸನ್ (Sanju Samson) ಫ್ರಾಂಚೈಸಿ ತೊರೆಯಲು ಬಯಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ್‌ (Rajasthan Royals) ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಹಾಗೂ ಅತಿಹೆಚ್ಚು ರನ್‌ ಗಳಿಸಿದ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ ಸಂಜು ಸ್ಯಾಮ್ಸನ್‌. ಹರಾಜಿಗೂ ಮುನ್ನವೇ ತಮ್ಮನ್ನು ತಂಡದಿಂದ ಬಿಡುಗಡೆ ಮಾಡಲು ಅಥವಾ ವಿನಿಯಮ ಮಾಡಿಕೊಳ್ಳಲು ರಿಕ್ವೆಸ್ಟ್‌ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಬಾಗಲಕೋಟೆ | ಬಡ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಕ್ರಿಕೆಟಿಗ ರಿಷಭ್‌ ಪಂತ್ ಆರ್ಥಿಕ ನೆರವು

    ವರದಿಗಳು ಹರಿದಾಡುತ್ತಿದ್ದಂತೆ ಸಂಜು ಸ್ಯಾಮ್ಸನ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಸಿಎಸ್‌ಕೆ ಬಯಸಿದೆ. ಈ ಬಗ್ಗೆ ಸಂಜು ಸ್ಯಾಮ್ಸನ್‌ ಮುಖ್ಯಕೋಚ್‌ ಸ್ಟೀಫನ್ ಫ್ಲೆಮಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ಸಹ ನಡೆಸಿದ್ದರು ಎಂದು ಹೇಳಲಾಗಿದೆ. ಆದ್ರೆ ಉಭಯ ಫ್ರಾಂಚೈಸಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ಯಶಸ್ವಿ, ವೈಭವ್‌ ಹೋರಾಟ ವ್ಯರ್ಥ, ಪಂಜಾಬ್‌ಗೆ 10 ರನ್‌ ರೋಚಕ ಜಯ – ಪ್ಲೇ ಆಫ್‌ಗೆ ಇನ್ನೂ ಹತ್ತಿರ!

    ಯಶಸ್ವಿ, ವೈಭವ್‌ ಹೋರಾಟ ವ್ಯರ್ಥ, ಪಂಜಾಬ್‌ಗೆ 10 ರನ್‌ ರೋಚಕ ಜಯ – ಪ್ಲೇ ಆಫ್‌ಗೆ ಇನ್ನೂ ಹತ್ತಿರ!

    ಜೈಪುರ್‌: ಯಶಸ್ವಿ ಜೈಸ್ವಾಲ್‌, ವೈಭವ್‌ ಸೂರ್ಯವಂಶಿ ಅವರ ಸ್ಫೋಟಕ ಆರಂಭದ ಹೊರತಾಗಿಯೂ ರಾಜಸ್ಥಾನ್‌ ರಾಯಲ್ಸ್‌ 10 ರನ್‌ಗಳ ವಿರೋಚಿತ ಸೋಲು ಕಂಡಿದೆ. ರಾಜಸ್ಥಾನ್‌ ವಿರುದ್ಧ ಗೆದ್ದ ಪಂಜಾಬ್‌ 17 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದ್ದು, ಪ್ಲೇ ಆಫ್‌ಗೆ ಇನ್ನೂ ಹತ್ತಿರವಾಗಿದೆ.

    ಅಂಕಪಟ್ಟಿಯಲ್ಲಿ 17 ಅಂಕ ಗಳಿಸಿರುವ ಆರ್‌ಸಿಬಿ +0.482 ನೆಟ್‌ ರನ್‌ರೇಟ್‌ನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಪಂಜಾಬ್‌ ಕಿಂಗ್ಸ್‌ 17 ಅಂಕ ಗಳಿಸಿದ್ದರೂ +0.389 ನೆಟ್‌ರನ್‌ರೇಟ್‌ನೊಂದಿಗೆ 2ನೇ ಸ್ಥಾನ ಕಾಯ್ದುಕೊಂಡಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ 5 ವಿಕೆಟ್‌ ನಷ್ಟಕ್ಕೆ 219 ರನ್‌ ಗಳಿಸಿತ್ತು. 220 ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್‌ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 209 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಸ್ಫೋಟಕ ಅರ್ಧಶತಕ ಜೊತೆಯಾ:
    ರಾಜಸ್ಥಾನ್‌ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ವೈಭವ್‌ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್‌ ಸ್ಪೋಟಕ ಪ್ರದರ್ಶನ ನೀಡಿದ್ದರು. ಮೊದಲ ಓವರ್‌ನಲ್ಲೇ ಯಶಸ್ವಿ 22 ರನ್‌ ಚಚ್ಚಿದ್ದರು. ಇನ್ನೂ ಮೊದಲ ವಿಕೆಟ್‌ಗೆ ಈ ಜೋಡಿ 29 ಎಸೆತಗಳಲ್ಲಿ ಸ್ಫೋಟಕ 76 ರನ್‌ ಜೊತೆಯಾಟ ನೀಡಿತ್ತು. ಈ ವೇಳೆ ವೈಭವ್‌ 15 ಎಸೆತಗಳಲ್ಲಿ 40 ರನ್‌ (4 ಸಿಕ್ಸರ್‌, 4 ಬೌಂಡರಿ) ಚಚ್ಚಿ ಔಟಾದರು. ಈ ಬೆನ್ನಲ್ಲೇ ಯಶಸ್ವಿ ಜೈಸ್ವಾಲ್‌ 25 ಎಸೆತಗಳಲ್ಲಿ 50 ರನ್‌ (1 ಸಿಕ್ಸರ್‌, 9 ಬೌಂಡರಿ) ಗಳಿಸಿ ಔಟಾದರು.

    ಇವರಿಬ್ಬರ ವಿಕೆಟ್‌ ಬೀಳುತ್ತಿದ್ದಂತೆ ಒಂದೆಡೆ ರನ್‌ ವೇಗ ಕಡಿತಗೊಂಡರೆ ಮತ್ತೊಂದೆಡೆ ಪ್ರಮುಖ ವಿಕೆಟ್‌ ಬೀಳುತ್ತಾ ಸಾಗಿತು. ಮಧ್ಯಮ ಕ್ರಮಾಂಕದಲ್ಲಿ ಧ್ರುವ್‌ ಜುರೆಲ್‌ ಅವರ ಅರ್ಧಶತಕದ (53 ರನ್‌) ಹೋರಾಟ ವ್ಯರ್ಥವಾಯಿತು. ಅಂತಿಮವಾಗಿ ರಾಜಸ್ಥಾನ್‌ 7 ವಿಕೆಟ್‌ಗೆ 209 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ್ದ ಪಂಜಾಬ್‌ ಪರ ನೇಹಾಲ್‌ ವಧೇರಾ 70 ರನ್‌ (37 ಎಸೆತ, 5 ಸಿಕ್ಸರ್‌, 5 ಬೌಂಡರಿ), ಶಶಾಂಕ್‌ ಸಿಂಗ್‌ (30 ಎಸೆತ, 3 ಸಿಕ್ಸರ್‌, 5 ಬೌಂಡರಿ), ಶ್ರೇಯಸ್‌ ಅಯ್ಯರ್‌ 30 ರನ್‌, ಪ್ರಭ್‌ ಸಿಮ್ರನ್‌, ಒಮರ್ಝೈ ತಲಾ 21 ರನ್‌, ಪ್ರಿಯಾಂಶ್‌ ಆರ್ಯ 9 ರನ್‌ ಗಳಿಸಿದ್ರೆ ಮಿಚೆಲ್ ಓವನ್ ಶೂನ್ಯ ಸುತ್ತಿದರು.

  • IPL 2025 | ಜಿಟಿ ವಿರುದ್ಧ ಸೋಲಿನ ಬೆನ್ನಲ್ಲೇ ಸಂಜು ಸ್ಯಾಮ್ಸನ್‌ಗೆ 24 ಲಕ್ಷ ರೂ. ದಂಡ

    IPL 2025 | ಜಿಟಿ ವಿರುದ್ಧ ಸೋಲಿನ ಬೆನ್ನಲ್ಲೇ ಸಂಜು ಸ್ಯಾಮ್ಸನ್‌ಗೆ 24 ಲಕ್ಷ ರೂ. ದಂಡ

    ಅಹಮದಾಬಾದ್‌: ಗುಜರಾತ್‌ ಟೈಟಾನ್ಸ್‌ (Gujarat Titans )ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಹೀನಾಯ ಸೋಲು ಕಂಡಿತು. ಈ ಬೆನ್ನಲ್ಲೇ ಆರ್‌ಆರ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ (Sanju Samson) ಅವರಿಗೆ 24 ಲಕ್ಷ ರೂ. ದಂಡ ವಿಧಿಸಿದೆ.

    ಬುಧವಾರ ಟೈಟಾನ್ಸ್‌ ವಿರುದ್ಧ ಪಂದ್ಯದಲ್ಲಿ ನಿಧಾನಗತಿಯ ಓವರ್‌ ರೇಟ್‌ ಕಾಯ್ದುಕೊಂಡಿದ್ದಕ್ಕಾಗಿ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಪ್ರಸಕ್ತ ಆವೃತ್ತಿಯಲ್ಲಿ ಸ್ಲೋ ಓವರ್‌ ರೇಟ್‌ಗಾಗಿ (slow over-rate) ಆರ್‌ಆರ್‌ಗೆ 2ನೇ ಬಾರಿ ದಂಡ ವಿಧಿಸಲಾಗಿದೆ. ಇನ್ನೊಂದು ಪಂದ್ಯದಲ್ಲಿ ಈ ಘಟನೆ ಮರುಕಳಿಸಿದ್ರೆ, ಸಂಜು ಸ್ಯಾಮ್ಸನ್‌ ಒಂದು ಪಂದ್ಯದಿಂದ ಬ್ಯಾನ್‌ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: IPL 2025 – ಜಿಯೋದಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಚಿತ ಇಂಟರ್ನೆಟ್

    ಈ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಆರ್‌ಆರ್‌ ಸ್ಲೋ ಓವರ್‌ ರೇಟ್‌ ಕಾಯ್ದುಕೊಂಡಿತ್ತು. ಆಗ ಸ್ಟ್ಯಾಂಡ್‌ ಇನ್‌ ಕ್ಯಾಪ್ಟನ್‌ ಆಗಿದ್ದ ರಿಯಾನ್‌ ಪರಾಗ್‌ಗೆ (Riyan Parag) 12 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಜೊತೆಗೆ ತಂಡದ ಇತರ ಆಟಗಾರರಿಗೆ ಪಂದ್ಯ ಶುಲ್ಕದ ಶೇ.25 ರಷ್ಟು ಅಥವಾ ತಲಾ 6 ಲಕ್ಷ ರೂ. ದಂಡ ವಿಧಿಸಿತ್ತು. ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕಿಳಿದಿದ್ದರು. 2ನೇ ಬಾರಿ ಅದೇ ತಪ್ಪು ಮಾಡಿದ್ದರಿಂದ ತಂಡದ ನಾಯಕ ಸ್ಯಾಮ್ಸನ್‌ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದನ್ನೂ ಓದಿ: ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಸ್ಫೋಟಕ ಶತಕ – ಎಬಿಡಿ, ಕೊಹ್ಲಿ ದಾಖಲೆ ಪುಡಿಗಟ್ಟಿದ 24ರ ಯುವಕ

    ಬುಧವಾರ ನಡೆದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ 58 ರನ್‌ಗಳ ಹೀನಾಯ ಸೋಲು ಕಂಡಿರು. ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಸಂಜು, ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ನಮ್ಮ ಪ್ರದರ್ಶನ ಕಳಪೆಯಾಗಿತ್ತು. ಬೌಲಿಂಗ್‌ನಲ್ಲಿ 15-20 ರನ್‌ಗಳನ್ನು ಹೆಚ್ಚುವರಿಯಾಗಿ ಕೊಟ್ಟಿದ್ದೇವೆ. ಅಲ್ಲದೇ ತಂಡಕ್ಕೆ ರನ್‌ ಅಗತ್ಯವಿದ್ದಾಗಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡೆವು ಇದು ತಂಡದ ಸೋಲಿಗೆ ಕಾರಣ ಎಂದು ಹೇಳಿದರು. ಇದನ್ನೂ ಓದಿ: ಐಪಿಎಲ್ 2025: ಪಂಜಾಬ್ ಆಲ್‌ರೌಂಡರ್ ಮ್ಯಾಕ್ಸ್‌ವೆಲ್‌ಗೆ ಪಂದ್ಯದ 25% ದಂಡ

  • ಐಪಿಎಲ್ 2025: ಮೊದಲ 3 ಪಂದ್ಯಗಳಿಗೆ ರಾಜಸ್ಥಾನ ರಾಯಲ್ಸ್‌ಗೆ ರಿಯಾನ್ ಪರಾಗ್ ಕ್ಯಾಪ್ಟನ್

    ಐಪಿಎಲ್ 2025: ಮೊದಲ 3 ಪಂದ್ಯಗಳಿಗೆ ರಾಜಸ್ಥಾನ ರಾಯಲ್ಸ್‌ಗೆ ರಿಯಾನ್ ಪರಾಗ್ ಕ್ಯಾಪ್ಟನ್

    ಮುಂಬೈ: ಇನ್ನೆರಡು ದಿನಗಳಲ್ಲಿ 2025ರ ಐಪಿಎಲ್ (IPL 2025) ಟೂರ್ನಿ ಆರಂಭವಾಗಲಿದೆ. ಈ ಬಾರಿ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ಮೊದಲ 3 ಪಂದ್ಯಗಳನ್ನು ರಿಯಾನ್ ಪರಾಗ್ (Riyan Parag) ಮುನ್ನಡೆಸಲಿದ್ದಾರೆ ಎಂದು ಫ್ರಾಂಚೈಸಿ ತಿಳಿಸಿದೆ.

    ಸದ್ಯ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವ ವಹಿಸಿರುವ ಸಂಜು ಸ್ಯಾಮ್ಸನ್ (Sanju Samson) ಅವರು ಫಿಟ್‌ನೆಟ್ ಸಮಸ್ಯೆ ಎದುರಿಸುತ್ತಿರುವ ಕಾರಣ ಬಿಸಿಸಿಐ ವಿಕೆಟ್ ಕೀಪಿಂಗ್ ಮಾಡಲು ಅನುಮತಿ ನೀಡಿಲ್ಲ. ಈ ಕಾರಣದಿಂದ ತಂಡಕ್ಕೆ ಹೊಸ ನಾಯಕನನ್ನು ನೇಮಿಸುವ ನಿರ್ಧಾರ ಫ್ರಾಂಚೈಸಿ ಕೈಗೊಂಡಿತ್ತು. ಇದೀಗ ರಿಯಾನ್ ಪರಾಗ್‌ನನ್ನು ಮೊದಲ ಮೂರು ಪಂದ್ಯಗಳಿಗೆ ನಾಯಕನನ್ನಾಗಿ ಘೋಷಿಸಿದೆ. ಇನ್ನೂ ಸಂಜು ಸ್ಯಾಮ್ಸನ್ ಈ ಟೂರ್ನಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ ಎಂದು ಫ್ರಾಂಚೈಸಿ ತಿಳಿಸಿದೆ.ಇದನ್ನೂ ಓದಿ: ಸಚಿವರ ಮೇಲೆ 2 ಸಲ ಹನಿಟ್ರ್ಯಾಪ್ ಯತ್ನ – ಸತೀಶ್ ಜಾರಕಿಹೊಳಿ ಬಾಂಬ್

    ನಾಯಕತ್ವ ವಹಿಸಲಿರುವ ರಿಯಾನ್ ಪರಾಗ್ ಅವರು, ವಿರಾಟ್ ಕೊಹ್ಲಿ (Virat Kohli) ಬಳಿಕ ಐಪಿಎಲ್‌ನ ಅತ್ಯಂತ ಕಿರಿಯ ನಾಯಕರಲ್ಲಿ ಒಬ್ಬರಾಗಲಿದ್ದಾರೆ.

    2025ರ ಐಪಿಎಲ್ ಟೂರ್ನಿ ಮಾ.22 ರಂದು ಆರಂಭವಾಗಲಿದೆ. ಮಾ.23 ರಂದು ಹೈದರಾಬಾದ್‌ನ (Hyderabad) ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ (Rajiv Gandhi International Cricket Stadium) ಸನ್ ರೈಸರ್ಸ್ ಹೈದರಾಬಾದ್ (Sun Risers Hyderabad) ವಿರುದ್ಧ ರಾಜಸ್ಥಾನ ರಾಯಲ್ಸ್ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯ ಸೇರಿದಂತೆ ಮಾ.26 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮಾ.30 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಗಳನ್ನು ರಿಯಾನ್ ಮುನ್ನಡೆಸಲಿದ್ದಾರೆ.

    ಸಂಜು ಸ್ಯಾಮ್ಸನ್‌ಗೆ ಏನಾಗಿತ್ತು?
    ಫೆಬ್ರವರಿಯಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಅವರ ಬೆರಳಿಗೆ ಪೆಟ್ಟಾಗಿತ್ತು. ಸದ್ಯ ವಿಕೆಟ್‌ಕೀಪರ್-ಬ್ಯಾಟ್ಸ್ಮನ್ ಆಗಿ ಫಿಟ್ ಆಗಲು ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ರಾಜಸ್ಥಾನ್ ರಾಯಲ್ಸ್ ತಂಡ: ಸಂಜು ಸ್ಯಾಮ್ಸನ್, ಶುಭಂ ದುಬೆ, ವೈಭವ್ ಸೂರ್ಯವಂಶಿ, ಕುನಾಲ್ ರಾಥೋರ್, ಶಿಮ್ರೋನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ರಿಯಾನ್ ಪರಾಗ್, ನಿತೀಶ್ ರಾಣಾ, ಯುಧ್ವೀರ್ ಸಿಂಗ್, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಮದ್ ಸಿಂಗ್ ತೀಕ್ಷಣಾ, ಮದ್ ಕುಮಾರ, ವಾನ್, ವಾನ್ ತುಷಾರ್ ದೇಶಪಾಂಡೆ, ಫಜಲ್ಹಕ್ ಫಾರೂಕಿ, ಕ್ವೇನಾ ಮಫಕಾ, ಅಶೋಕ್ ಶರ್ಮಾ, ಸಂದೀಪ್ ಶರ್ಮಾ.ಇದನ್ನೂ ಓದಿ: ಸೂರ್ಯ ನಟನೆಯ ‘ರೆಟ್ರೋ’ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್

     

  • ರನ್‌ ಹೊಳೆಯಲ್ಲಿ ತೇಲಾಡಿದ ಭಾರತ – ಸಂಜು, ತಿಲಕ್‌ ಶತಕಗಳ ಅಬ್ಬರಕ್ಕೆ ದಾಖಲೆಗಳು ಧೂಳಿಪಟ

    ರನ್‌ ಹೊಳೆಯಲ್ಲಿ ತೇಲಾಡಿದ ಭಾರತ – ಸಂಜು, ತಿಲಕ್‌ ಶತಕಗಳ ಅಬ್ಬರಕ್ಕೆ ದಾಖಲೆಗಳು ಧೂಳಿಪಟ

    ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆ ದ 4ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ (Sanju Samson) ಹಾಗೂ ತಿಲಕ್‌ ವರ್ಮಾ ದ್ವಿಶತಕ ಜೊತೆಯಾಟಕ್ಕೆ ದಾಖಲೆಗಳು ಧೂಳಿಪಟವಾಗಿವೆ.

    ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 4 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತು. ಮೊದಲ ಓವರ್‌ನಲ್ಲಿ ಕೇವಲ 4 ರನ್‌ ಕಲೆಹಾಕಿದ ಭಾರತ 2ನೇ ಓವರ್‌ನಿಂದಲೇ ಎದುರಾಳಿ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿತು. ಇದನ್ನೂ ಓದಿ: Champions Trophy | ಪಾಕ್‌ ಆಕ್ರಮಿತ ಕಾಶ್ಮೀರ ಪ್ರವಾಸಕ್ಕೆ ಬಿಸಿಸಿಐ ಆಕ್ಷೇಪ, ನೋ ಎಂದ ಐಸಿಸಿ

    ಹರಿಣರ ಪಡೆಯ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಬೆಂಡೆತ್ತಿದ ಸಂಜು ಮತ್ತು ಅಭಿಷೇಕ್‌ ಶರ್ಮಾ ಜೋಡಿ ಮೊದಲ ವಿಕೆಟ್‌ಗೆ 35 ಎಸೆತಗಳಲ್ಲಿ 73 ರನ್‌ ಜೊತೆಯಾಟ ನೀಡಿತು. ಈ ವೇಳೆ 200 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅಭಿಷೇಕ್‌ ಶರ್ಮಾ 18 ಎಸೆತಗಳಲ್ಲಿ 4 ಸಿಕ್ಸರ್‌, 3 ಬೌಂಡರಿಗಳೊಂದಿಗೆ 36 ರನ್‌ ಬಾರಿಸಿ ಔಟಾದರು. ಇದನ್ನೂ ಓದಿ: ಟೀಂ ಇಂಡಿಯಾಕ್ಕೆ ಉಗ್ರರ ದಾಳಿಯದ್ದೇ ಭೀತಿ – ಐಸಿಸಿ ಬಳಿ ಇರೋದು ಮೂರೇ ಆಯ್ಕೆ

    ಬಳಿಕ ಕ್ರೀಸ್‌ಗೆ ಬಂದ ತಿಲಕ್‌ ವರ್ಮಾ (Tilak Varma) ಸಂಜು ಜೊತೆಗೂಡಿ ಅಬ್ಬರಿಸಲು ಶುರು ಮಾಡಿದರು. ಕೊನೆಯವರೆಗೂ ವಿಕೆಟ್‌ ಬಿಟ್ಟುಕೊಡದ ಈ ಜೋಡಿ ಕೇವಲ 86 ಎಸೆತಗಳಲ್ಲಿ ಬರೋಬ್ಬರಿ 210 ರನ್‌ ಪೇರಿಸಿತು. ಇದರೊಂದಿಗೆ 20 ಓವರ್‌ಗಳಲ್ಲಿ ಭಾರತ ಕೇವಲ 1 ವಿಕೆಟ್‌ ನಷ್ಟಕ್ಕೆ 283 ರನ್‌ ಗಳಿಸಿ, ಎದುರಾಳಿ ತಂಡಕ್ಕೆ 284 ರನ್‌ ಗಳ ಗುರಿ ನೀಡಿತು. ಇದನ್ನೂ ಓದಿ: Ranji Trophy: ಇನ್ನಿಂಗ್ಸ್‌ನ ಎಲ್ಲಾ 10 ವಿಕೆಟ್‌ ಕಿತ್ತು ದಾಖಲೆ ಬರೆದ ಅಂಶುಲ್‌ ಕಾಂಬೋಜ್‌

    ಸ್ಫೋಟಕ ಶತಕ ಸಿಡಿಸಿದ 3ನೇ ಭಾರತೀಯ
    ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿದ ತಿಲಕ್‌ ವರ್ಮಾ ಸತತ 2ನೇ ಅಂತಾರಾಷ್ಟ್ರೀಯ ಟಿ20 ಶತಕ ಸಿಡಿಸಿ ಮಿಂಚಿದರು. 255.31 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ತಿಲಕ್‌ 41 ಎಸೆತಗಳಲ್ಲೇ 6 ಬೌಂಡರಿ, 9 ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿದರು. ಈ ಮೂಲಕ ವೇಗದ ಶತಕ ಸಿಡಿಸಿದ 3ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ 35 ಎಸೆತಗಳಲ್ಲಿ, ಬಾಂಗ್ಲಾದೇಶದ ವಿರುದ್ಧ ಸಂಜು ಸ್ಯಾಮ್ಸನ್‌ 40 ಎಸೆತಗಳಲ್ಲಿ ಶತಕ ಸಿಡಿಸಿ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ. ಒಟ್ಟಾರೆ 47 ಎಸೆತಗಳನ್ನು ಎದುರಿಸಿದ ತಿಲಕ್‌ 10 ಸಿಕ್ಸರ್‌, 9 ಬೌಂಡರಿಗಳೊಂದಿಗೆ ಬರೋಬ್ಬರಿ 120 ರನ್‌ ಚಚ್ಚಿದರು.

    ಸಂಜು ವಿಶೇಷ ಸಾಧನೆ:
    ಸರಣಿಯ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ, ಕಳೆದ ಎರಡು ಪಂದ್ಯಗಳಲ್ಲಿ ಡಕ್‌ಔಟ್‌ ಆಗಿದ್ದ ಆರಂಭಿಕ ಸಂಜು ಸ್ಯಾಮ್ಸನ್‌ ಅಂತಿಮ ಪಂದ್ಯದಲ್ಲಿ 51 ಎಸೆತಗಳಲ್ಲಿ 6 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿದರು. ಈ ಮೂಲಕ ಒಂದೇ ವರ್ಷದಲ್ಲಿ 3 ಟಿ20 ಶತಕ ಸಿಡಿಸಿದ ಮೊದಲ ಆಟಗಾರ ಎಂಬ ವಿಶೇಷ ಸಾಧನೆ ಮಾಡಿದ್ದಾರೆ. ಒಟ್ಟಾರೆ 200 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಸಂಜು ಸ್ಯಾಮ್ಸನ್‌ 56 ಎಸೆತಗಳಲ್ಲಿ 109 ರನ್‌ (9 ಸಿಕ್ಸರ್‌, 6 ಬೌಂಡರಿ) ಸಿಡಿಸಿ ಅಜೇಯರಾಗುಳಿದರು.

  • IPL Retention | ದ್ರಾವಿಡ್‌ ಗರಡಿಯಲ್ಲಿ ಉಳಿದ ಸಂಜು – ಪ್ರಮುಖ ಆಟಗಾರರಿಗೆ ಗೇಟ್‌ಪಾಸ್‌

    IPL Retention | ದ್ರಾವಿಡ್‌ ಗರಡಿಯಲ್ಲಿ ಉಳಿದ ಸಂಜು – ಪ್ರಮುಖ ಆಟಗಾರರಿಗೆ ಗೇಟ್‌ಪಾಸ್‌

    ಮುಂಬೈ: ಕಳೆದ ಐಪಿಎಲ್ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಸ್ಟಾರ್ ಆಟಗಾರರಿಗೆ ಗೇಟ್‌ಪಾಸ್‌ ನೀಡಿದೆ. ತಂಡದ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಮೊದಲ ಆಯ್ಕೆಯ ಆಟಗಾರನಾಗಿ ಉಳಿಸಿಕೊಂಡಿದೆ.

    ಇನ್ನುಳಿದಂತೆ ಜೋಸ್ ಬಟ್ಲರ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್‌ ಅವರಂತಹ ಸ್ಟಾರ್‌ಗಳನ್ನು ಬಿಡುಗಡೆ ಮಾಡಿದೆ. ಸಂಜು ಸ್ಯಾಮ್ಸನ್ ಜೊತೆಗೆ ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಸಂದೀಪ್ ಶರ್ಮಾ, ಧ್ರುವ್‌ ಜುರೆಲ್‌, ಶಿಮ್ರನ್‌ ಹೆಟ್ಮೇಯರ್‌ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. 2025ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ತಂಡ ರಾಹುಲ್‌ ದ್ರಾವಿಡ್‌ ಕೋಚಿಂಗ್‌ ನೇತೃತ್ವದಲ್ಲಿ ಮುನ್ನಡೆಯಲಿದೆ. ಆದ್ರೆ ಈಗಾಗಲೇ 6 ಆಟಗಾರರನ್ನು ಆರ್‌ಆರ್‌ ರಿಟೇನ್‌ ಮಾಡಿಕೊಂಡಿರುವುದರಿಂದ ಆರ್‌ಟಿಎಂ ಕಾರ್ಡ್‌ ಆಯ್ಕೆಯನ್ನು ಕಳೆದುಕೊಂಡಿದೆ. ಇದನ್ನೂ ಓದಿ: IPL Retention | ಹೊಸ ಮುಖಗಳಿಗೆ ಪಂಜಾಬ್‌ ಕಿಂಗ್ಸ್‌ ಮಣೆ – ಸ್ಟಾರ್‌ ಆಟಗಾರರು ಹೊರಕ್ಕೆ

    ರಾಜಸ್ಥಾನ್‌ ರಾಯಲ್ಸ್‌ನಲ್ಲಿ ಯಾರ ಸಂಭಾವನೆ ಎಷ್ಟು?
    * ಸಂಜು ಸ್ಯಾಮ್ಸನ್‌ – 18 ಕೋಟಿ ರೂ.
    * ಯಶಸ್ವಿ ಜೈಸ್ವಾಲ್‌ – 18 ಕೋಟಿ ರೂ.
    * ರಿಯಾನ್‌ ಪರಾಗ್‌ – 14 ಕೋಟಿ ರೂ.
    * ಧ್ರುವ್‌ ಜುರೆಲ್‌ – 14 ಕೋಟಿ ರೂ.
    * ಶಿಮ್ರನ್‌ ಹೆಟ್ಮೇಯರ್‌ – 11 ಕೋಟಿ ರೂ.
    * ಸಂದೀಪ್‌ ಶರ್ಮಾ – 4 ಕೋಟಿ ರೂ.

    2025 ರಿಂದ 2027ರ ಐಪಿಎಲ್‌ ಆವೃತ್ತಿಗಳಿಗೆ ಹೊಸ ನಿಯಮ ಘೋಷಣೆ ಮಾಡಿರುವ ಬಿಸಿಸಿಐ, ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೆಗಾ ಹರಾಜು ನಡೆಸಲು ತೀರ್ಮಾನಿಸಿದೆ. ಇದನ್ನೂ ಓದಿ: IPL Retention | ಸಂಭಾವನೆ ಹೆಚ್ಚಿಸಿಕೊಂಡ ಕ್ಲಾಸೆನ್‌ – ಬರೋಬ್ಬರಿ 23 ಕೋಟಿ ರೂ.ಗೆ ರೀಟೆನ್‌ 

  • ಟೀಂ ಇಂಡಿಯಾ ಆರ್ಭಟಕ್ಕೆ ದಾಖಲೆಗಳು ಧೂಳಿಪಟ – ನಿಜಕ್ಕೂ ಇದು ಬೆಂಕಿ ಟೀಂ ಎಂದ ಸೂರ್ಯ!

    ಟೀಂ ಇಂಡಿಯಾ ಆರ್ಭಟಕ್ಕೆ ದಾಖಲೆಗಳು ಧೂಳಿಪಟ – ನಿಜಕ್ಕೂ ಇದು ಬೆಂಕಿ ಟೀಂ ಎಂದ ಸೂರ್ಯ!

    ಹೈದರಾಬಾದ್‌: ಬಾಂಗ್ಲಾ ವಿರುದ್ಧ ನಡೆದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಅಬ್ಬರಿಸಿದ ಟೀಂ ಇಂಡಿಯಾ (Team India) ಹಲವು ದಾಖಲೆಗಳನ್ನು ನುಚ್ಚುನೂರು ಮಾಡಿತು.

    ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ (ಅಕ್ಟೋಬರ್‌ 12) ನಡೆದ ಪಂದ್ಯವು ನಿಜಕ್ಕೂ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಹಬ್ಬವಾಗಿತ್ತು. ಭಾರತದ ಬ್ಯಾಟರ್‌ಗಳ ಅಬ್ಬರಕ್ಕೆ ದಾಖಲೆಗಳು ಧೂಳಿಪಟ ಆದವು. ಮೊದಲ ಓವರ್‌ನಿಂದಲೇ ಅಬ್ಬರಿಸಲು ಶುರು ಮಾಡಿದ ಸಂಜು ಸ್ಯಾಮ್ಸನ್‌‌ (Sanju Samson), ಸಿಕ್ಸರ್, ಬೌಂಡರಿಗಳೊಂದಿಗೆ ಶತಕ ಸಿಡಿಸಿ ಮೆರೆದಾಡಿದರು. ಈ ಮೂಲಕ ಟಿ20 ಕ್ರಿಕೆಟ್‌ ಶತಕ ಸಿಡಿಸಿದ ಮೊದಲ ವಿಕೆಟ್‌ ಕೀಪರ್‌ ಎನಿಸಿಕೊಂಡರು. ಜೊತೆಗೆ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ ಶತಕ ಸಿಡಿಸಿದ 2ನೇ ಭಾರತೀಯ ಬ್ಯಾಟರ್‌ ಸಹ ಎನಿಸಿಕೊಂಡರು.

    ವಿಶ್ವದ 2ನೇ ಗರಿಷ್ಠ ರನ್‌:
    20 ಓವರ್‌ಗಳಲ್ಲಿ 297 ರನ್‌ ಗಳಿಸಿದ ಭಾರತ ತಂಡವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (T20I Cricket) ಗಳಿಸಿದ 2ನೇ ಗರಿಷ್ಠ ಸ್ಕೋರ್‌ ಆಯಿತು. 2023ರ ಏಷ್ಯನ್‌ ಗೇಮ್ಸ್‌ನಲ್ಲಿ ನೇಪಾಳ ತಂಡವು ಮಂಗೋಲಿಯಾ ವಿರುದ್ಧ 314 ರನ್‌ ಗಳಿಸಿರುವುದು ಈವರೆಗಿನ ದಾಖಲೆ. ಇದನ್ನೂ ಓದಿ: 6,6,6,6,6: ಒಂದೇ ಓವರ್‌ನಲ್ಲಿ 5 ಸಿಕ್ಸರ್‌ ಸಿಡಿಸಿ ಅಬ್ಬರಿಸಿದ ಸ್ಯಾಮ್ಸನ್‌

    ಅಲ್ಲದೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೊದಲ 10 ಓವರ್‌ಗಳಲ್ಲಿ ಅತಿಹೆಚ್ಚು ರನ್‌ ಗಳಿಸಿದ, ಅತಿವೇಗವಾಗಿ 100, 150, 200, 250 ರನ್‌ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಜೊತೆಗೆ ಇನ್ನಿಂಗ್ಸ್‌ವೊಂದರಲ್ಲಿ ಅತಿಹೆಚ್ಚು ಸಿಕ್ಸರ್‌ ಡಿಸಿದ ಖ್ಯಾತಿಯನ್ನೂ ತನ್ನದಾಗಿಸಿಕೊಂಡಿತು.  ಇದನ್ನೂ ಓದಿ: ಟಿ20 ಕ್ರಿಕೆಟ್‌ನಲ್ಲಿ ವಿಶೇಷ ಸಾಧನೆ -‌ ಕಿಂಗ್‌ ಕೊಹ್ಲಿಗೆ ಸರಿಸಮನಾಗಿ ನಿಂತ ಮಿಸ್ಟರ್‌ 360

    ಕ್ಲೀನ್‌ಸ್ವೀಪ್‌ ಸಾಧನೆ:
    ಬಾಂಗ್ಲಾದೇಶ ವಿರುದ್ಧ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಅತಿಹೆಚ್ಚು ಬಾರಿ ಕ್ಲೀನ್‌ ಸ್ವೀಪ್‌ ಸಣಿ ಗೆದ್ದ ಸಾಧನೆಯೂ ಮಾಡಿತು. 34 ಸರಣಿಗಳ ಪೈಕಿ ಭಾರತ 10 ಸರಣಿಗಳನ್ನು ಕ್ಲೀನ್‌ ಸ್ವೀಪ್‌ ಮಾಡಿ ಭಾರತ ಅಗ್ರಸ್ಥಾನಲ್ಲಿದೆ. ಇನ್ನುಳಿದಂತೆ ಪಾಕಿಸ್ತಾನ (8), ಅಫ್ಘಾನಿಸ್ತಾನ (6), ಆಸ್ಟ್ರೇಲಿಯಾ (5), ಇಂಗ್ಲೆಂಡ್‌ (4) ಸರಣಿಗಳನ್ನು ಗೆದ್ದು ಕ್ರಮವಾಗಿ 2,3,4,5ನೇ ಸ್ಥಾನದಲ್ಲಿವೆ.  ಇದನ್ನೂ ಓದಿ: ಸಂಜು, ಸೂರ್ಯ ಬ್ಯಾಟಿಂಗ್‌ ಅಬ್ಬರ – ಬಾಂಗ್ಲಾ ವಿರುದ್ಧ ಭಾರತಕ್ಕೆ 133 ರನ್‌ ಭರ್ಜರಿ ಜಯ; 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌

  • ಬೌಲರ್‌ಗಳ ದಾಳಿಗೆ ಬಾಂಗ್ಲಾ ಧೂಳಿಪಟ – ಪಾಂಡ್ಯ ಸೂಪರ್‌ ಸಿಕ್ಸರ್; ಭಾರತಕ್ಕೆ 7 ವಿಕೆಟ್‌ಗಳ ಜಯ

    ಬೌಲರ್‌ಗಳ ದಾಳಿಗೆ ಬಾಂಗ್ಲಾ ಧೂಳಿಪಟ – ಪಾಂಡ್ಯ ಸೂಪರ್‌ ಸಿಕ್ಸರ್; ಭಾರತಕ್ಕೆ 7 ವಿಕೆಟ್‌ಗಳ ಜಯ

    ಗ್ವಾಲಿಯರ್‌: ಅರ್ಷ್‌ದೀಪ್‌, ಮಯಾಂಕ್‌, ವರುಣ್‌ ಮಾರಕ ಬೌಲಿಂಗ್‌ ದಾಳಿ ಹಾಗೂ ಸಂಘಟಿತ ಬ್ಯಾಟಿಂಗ್‌ ಪ್ರದರ್ಶನದೊಂದಿಗೆ ಟೀಂ ಇಂಡಿಯಾ (Team India), ಬಾಂಗ್ಲಾದೇಶದ ವಿರುದ್ಧ 7 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    ಇಲ್ಲಿನ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ (Bangladesh) 19.5 ಓವರ್‌ಗಳಲ್ಲಿ 127 ರನ್‌ಗಳಿಗೆ ಆಲೌಟ್‌ ಆಯಿತು. ಅಲ್ಪಮೊತ್ತದ ಗುರಿ ಪಡೆದ ಭಾರತ ತಂಡ ಕೇವಲ 11.5 ಓವರ್‌ಗಳಲ್ಲೇ 3 ವಿಕೆಟ್‌ ನಷ್ಟಕ್ಕೆ 132 ರನ್‌ ಚಚ್ಚಿ ಗೆಲುವಿನ ನಗೆ ಬೀರಿತು.

    ಸುಲಭ ಮೊತ್ತದ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಬ್ಯಾಟರ್‌ಗಳು ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿದರು. ಸಂಜು ಸ್ಯಾಮ್ಸನ್‌ ಹಾಗೂ ಅಭಿಷೇಕ್‌ ಶರ್ಮಾ ಜೋಡಿ ಮೊದಲ ವಿಕೆಟ್‌ಗೆ 2 ಓವರ್‌ಗಳಲ್ಲಿ 25 ರನ್‌ ಚಚ್ಚಿತ್ತು. ಈ ವೇಳೆ ಅಭಿಷೇಕ್‌ ಶರ್ಮಾ ರನೌಟ್‌ಗೆ ತುತ್ತಾಗಿ ನಿರಾಸೆ ಅನುಭವಿಸಿದ್ರು.

    ನಂತರ ಸಂಜು ಸ್ಯಾಮ್ಸನ್‌, ಕ್ಯಾಪ್ಟನ್‌ ಸೂರ್ಯಕುಮಾರ್‌ ಯಾದವ್‌ (Suryakumar Yadav), ಹಾರ್ದಿಕ್‌ ಪಾಂಡ್ಯ (Hardik Pandya) ಭರ್ಜರಿ ಸಿಕ್ಸರ್‌, ಬೌಂಡರಿಗಳ ಸುರಿಮಳೆ ಸುರಿಸಿ ಗೆಲುವಿನ ಹಾದಿಯನ್ನು ಸುಗಮವಾಗಿಸಿದರು. 243.75 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಹಾರ್ದಿಕ್‌ ಪಾಂಡ್ಯ ಕೇವಲ 16 ಎಸೆತಗಳಲ್ಲಿ 39 ರನ್‌ (5 ಬೌಂಡರಿ, 2 ಸಿಕ್ಸರ್)‌ ಚಚ್ಚಿದರೆ, ಸೂರ್ಯಕುಮಾರ್‌ ಯಾದವ್‌ 14 ಎಸೆತಗಳಲ್ಲಿ 29 ರನ್‌, ಸಂಜು ಸ್ಯಾಮ್ಸನ್‌ 19 ಎಸೆತಗಳಲ್ಲಿ 29 ರನ್‌, ಅಭಿಷೇಕ್‌ ಶರ್ಮಾ 7 ಎಸೆತಗಳಲ್ಲಿ 16 ರನ್‌ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ 16 ರನ್‌ ಗಳಿಸಿ ಮಿಂಚಿದರು.

    ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ಭಾರತದ ಬೌಲರ್‌ಗಳ ದಾಳಿಗೆ ಧೂಳಿಪಟವಾಯಿತು. ಮೊದಲ ಓವರ್‌ನಿಂದಲೇ ಬಾಂಗ್ಲಾ ಪೆವಿಲಿಯನ್‌ ಪರೇಡ್‌ ನಡೆಸಿತು. ವೇಗಿ ಅರ್ಷ್‌ದೀಪ್‌ ಸಿಂಗ್‌, ಮಯಾಂಕ್‌ ಯಾದವ್‌, ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಬಾಂಗ್ಲಾ ಬ್ಯಾಟರ್‌ಗಳ ವಿರುದ್ಧ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ನಾಯಕ ಜನ್ಮುಲ್ಲಾ ಹೊಸೈನ್‌ ಸ್ಯಾಂಟೋ ಹಾಗೂ ಮೆಹಿದಿ ಹಸನ್ ಮಿರಾಜ್ ಹೊರತುಪಡಿಸಿದ್ರೆ, ಉಳಿದ ಆಟಗಾರರು ಸಂಪೂರ್ಣ ಮಕಾಡೆ ಮಲಗಿದರು. ಬಾಂಗ್ಲಾ ಪರ ಮೆಹಿದಿ ಹಸನ್ ಮಿರಾಜ್ 32 ಎಸೆತಗಳಲ್ಲಿ 35 ರನ್‌ ಗಳಿಸಿದ್ರೆ, ಸ್ಯಾಂಟೋ 25 ಎಸೆತಗಳಲ್ಲಿ 27 ರನ್‌ ಬಾರಿಸಿದರು. ಉಳಿದ ಆಟಗಾರರು ಅಲ್ಪಮೊತ್ತಕ್ಕೆ ಪೆವಿಲಿಯನ್‌ ಸೇರಿದರು.

    ಇನ್ನೂ ಬಾಂಗ್ಲಾ ಬ್ಯಾಟರ್‌ಗಳ ವಿರುದ್ಧ ಪ್ರಾಬಲ್ಯ ಮೆರೆದ ಭಾರತದ ಪರ ಅರ್ಷ್‌ದೀಪ್‌ ಸಿಂಗ್‌, ವರುಣ್‌ ಚಕ್ರವರ್ತಿ ತಲಾ 3 ವಿಕೆಟ್‌ ಕಿತ್ತರೆ, ಹಾರ್ದಿಕ್‌ ಪಾಂಡ್ಯ, ಮಯಾಂಕ್‌ ಯಾದವ್‌, ವಾಷಿಂಗ್ಟನ್‌ ಸುಂದರ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಚೊಚ್ಚಲ ಪಂದ್ಯದಲ್ಲೇ ದಾಖಲೆ ಬರೆದ ಮಯಾಂಕ್‌:
    ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ರಾಕೆಟ್‌ ವೇಗಿ ಮಯಾಂಕ್‌ ದಾಖಲೆಯ ಪುಟ ತೆರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಪವರ್‌ ಪ್ಲೇನಲ್ಲಿ ಮೇಡಿನ್‌ ಓವರ್‌ ಮಾಡಿ ದಾಖಲೆ ಪುಟ ಸೇರಿದ್ದಾರೆ.

  • ಸೂಪರ್‌ ಓವರ್‌ ಥ್ರಿಲ್ಲಿಂಗ್‌ – ಮೊದಲ ಎಸೆತದಲ್ಲೇ ಭಾರತಕ್ಕೆ ಗೆಲುವು – ಕ್ಲೀನ್‌ಸ್ವೀಪ್‌ನೊಂದಿಗೆ ಸರಣಿ ಜಯ

    ಸೂಪರ್‌ ಓವರ್‌ ಥ್ರಿಲ್ಲಿಂಗ್‌ – ಮೊದಲ ಎಸೆತದಲ್ಲೇ ಭಾರತಕ್ಕೆ ಗೆಲುವು – ಕ್ಲೀನ್‌ಸ್ವೀಪ್‌ನೊಂದಿಗೆ ಸರಣಿ ಜಯ

    ಕೊಲಂಬೊ: ಸೂಪರ್‌ ಓವರ್‌ನ ಮೊದಲ ಎಸೆತದಲ್ಲೇ ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav) ಬೌಂಡರಿಯೊಂದಿಗೆ ಲಂಕಾ ವಿರುದ್ಧ ಭಾರತ ರೋಚಕ ಗೆಲುವು ಸಾಧಿಸಿತು. ಅಲ್ಲದೇ ಲಂಕಾ ತವರಿನಲ್ಲೇ ಕ್ಲೀನ್‌ ಸ್ವೀಪ್‌ನೊಂದಿಗೆ ಸರಣಿ ಗೆದ್ದುಕೊಂಡಿತು.

    ಗೆಲುವಿಗೆ 138 ರನ್‌ ಗುರಿ ಪಡೆದಿದ್ದ ಲಂಕಾ 20 ಓವರ್‌ಗಳಲ್ಲಿ 8 ವಿಕೆಟ್‌ಕೆ 137 ರನ್‌ ಗಳಿಸಿ ಮ್ಯಾಚ್‌ ಟೈನಲ್ಲಿ ನಿಂತಿತು. ಇದರಿಂದ ಮ್ಯಾಚ್‌ ಸೂಪರ್‌ ಓವರ್‌ನತ್ತ ತಿರುಗಿತು. ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಲಂಕಾ ತಂಡ 2 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಪೆವಿಲಿಯನ್‌ಗೆ ಮರಳಿತು. ಆದ್ರೆ ಟೀಂ ಇಂಡಿಯಾ ಪರ ಕಣಕ್ಕಿಳಿದ ನಾಯಕ ಸೂರ್ಯಕುಮಾರ್‌, ಮಹೀಶ್‌ ತೀಕ್ಷಣ ಬೌಲಿಂಗ್‌ನಲ್ಲಿ ಮೊದಲ ಎಸೆತದಲ್ಲೇ ಬೌಂಡರಿ ಚಚ್ಚಿ ನೀರು ಕುಡಿದಂತೆ ಮ್ಯಾಚ್‌ ಗೆಲ್ಲಿಸಿದರು.

    ಕೊನೇ 2 ಓವರ್‌ ಥ್ರಿಲ್ಲಿಂಗ್‌:
    138 ರನ್‌ ಗುರಿ ಬೆನ್ನಟ್ಟಿದ್ದ ಲಂಕಾ ತಂಡಕ್ಕೆ ಕೊನೇ 2 ಓವರ್‌ಗಳಲ್ಲಿ ಗೆಲುವಿಗೆ 9 ರನ್‌ ಬೇಕಿತ್ತು. ಆದ್ರೆ 19ನೇ ಓವರ್‌ನಲ್ಲಿ ಬೌಲಿಂಗ್‌ ಮಾಡಿದ ರಿಂಕು ಸಿಂಗ್‌ 2 ಪ್ರಮುಖ ವಿಕೆಟ್‌ ಕಿತ್ತು, ಕೇವಲ 3 ರನ್‌ ಬಿಟ್ಟುಕೊಟ್ಟರು. ಕೊನೇ ಓವರ್‌ನಲ್ಲಿ 6 ರನ್‌ ಬೇಕಿದ್ದಾಗ ನಾಯಕ ಸೂರ್ಯಕುಮಾರ್‌ ಯಾದವ್‌ ಅವರೇ ಖುದ್ದು ಬೌಲಿಂಗ್‌ಗೆ ಇಳಿದರು. ಮೊದಲ ಎಸೆತದಲ್ಲಿ ರನ್‌ ಬಿಟ್ಟುಕೊಡದ ಸೂರ್ಯ 2-3ನೇ ಎಸೆತಗಳಲ್ಲಿ ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಕಿತ್ತರು. 4ನೇ ಎಸೆತದಲ್ಲಿ 1 ರನ್‌ ಬಿಟ್ಟುಕೊಟ್ಟರು. 5ನೇ ಎಸೆತದಲ್ಲಿ ರನೌಟ್‌ಗೆ ಸುಲಭ ಸಾಧ್ಯತೆ ಇದ್ದರೂ ಕೊಂಚ ಗಲಿಬಿಲಿಯಿಂದ ಸೂರ್ಯ 2 ರನ್‌ ಕೈಚೆಲ್ಲಿದರು. ಕೊನೇ ಎಸೆತದಲ್ಲಿ ಲಂಕಾ ಬ್ಯಾಟರ್‌ಗಳು 2 ರನ್‌ ಕದಿಯುವಲ್ಲಿ ಯಶಸ್ವಿಯಾದ ಪರಿಣಾಮ ಮ್ಯಾಚ್‌ ಸೂಪರ್‌ ಓವರ್‌ನತ್ತ ತಿರುಗಿತು.

    ಸೂಪರ್ ಓವರ್ ನಿಯಮವೇನು?:
    * ಪ್ರತಿ ತಂಡವು 3 ಬ್ಯಾಟ್ಸ್ ಮೆನ್ ಹಾಗೂ ಓರ್ವ ಬೌಲರನ್ನು ಆಯ್ಕೆ ಮಾಡಬೇಕು.
    * ಇಬ್ಬರು ಆಟಗಾರರು ಔಟ್ ಆದರೆ ತಂಡ ಆಲೌಟ್ ಆದಂತೆ ಲೆಕ್ಕ.
    * ಸೂಪರ್ ಓವರ್ ನಲ್ಲಿ ಅತ್ಯಧಿಕ ರನ್ ಗಳಿಸಿದ ತಂಡ ವಿಜೇತ ಎಂದು ಘೋಷಣೆ
    * ಪ್ರತಿ ತಂಡಕ್ಕೆ 1 ಓವರ್ ಆಡುವ ಅವಕಾಶ

    ಚೇಸಿಂಗ್‌ ಮಾಡಿದ ಲಂಕಾ ಪರ ಆರಂಭಿಕರಾದ ಪಥುಮ್‌ ನಿಸ್ಸಾಂಕ 26ರನ್‌, ಕುಸಲ್‌ ಮೆಂಡಿಸ್‌ 43 ರನ್‌, ಕುಸಲ್‌ ಪೆರೆರಾ 46 ರನ್‌ ಬಾರಿಸಿದರು. ಲಂಕಾ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದ ಟೀಂ ಇಂಡಿಯಾ ಪರ ವಾಷಿಂಗ್ಟನ್‌ ಸುಂದರ್‌, ರವಿ ಬಿಷ್ಣೋಯಿ, ರಿಂಕು ಸಿಂಗ್‌, ಸೂರ್ಯಕುಮಾರ್‌ ಯಾದವ್‌ ತಲಾ 2 ವಿಕೆಟ್‌ ಪಡೆದು ಮಿಂಚಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ ಪರ ಜೈಸ್ವಾಲ್‌ 10 ರನ್‌, ಶುಭಮನ್‌ ಗಿಲ್‌ 39 ರನ್‌, ಶಿವಂ ದುಬೆ 13 ರನ್‌, ಸೂರ್ಯ 8 ರನ್‌, ರಿಂಕು ಸಿಂಗ್‌ 1 ರನ್‌, ರಿಯಾನ್‌ ಪರಾಗ್‌ 26 ರನ್‌, ವಾಷಿಂಗ್ಟನ್‌ ಸುಂದರ್‌ 25 ರನ್‌ ಹಾಗೂ ರವಿ ಬಿಷ್ಣೋಯಿ 8 ರನ್‌ ಗಳಿಸಿದ್ರೆ ಸಿರಾಜ್‌, ಸಂಜು ಸ್ಯಾಮ್ಸನ್‌ ಶೂನ್ಯ ಸುತ್ತಿದರು.