Tag: Sanjjanaa Galrani

  • ಎತ್ತಣ ಮಾಮರ, ಎತ್ತಣ ಕೋಗಿಲೆ- ಜಮೀರ್ ಹೇಳಿಕೆಗೆ ಹೆಚ್‍ಡಿಕೆ ತಿರುಗೇಟು

    ಎತ್ತಣ ಮಾಮರ, ಎತ್ತಣ ಕೋಗಿಲೆ- ಜಮೀರ್ ಹೇಳಿಕೆಗೆ ಹೆಚ್‍ಡಿಕೆ ತಿರುಗೇಟು

    -ಕದ್ದುಮುಚ್ಚಿ ಕೊಲಂಬೋ ಯಾತ್ರೆ ಮಾಡಿರಲಿಲ್ಲ

    ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಪರೋಕ್ಷವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. 2014ರಲ್ಲಿ ಜೆಡಿಎಸ್ ಶಾಸಕರು ಪ್ರವಾಸಕ್ಕೆ ಕದ್ದುಮುಚ್ಚಿ ಹೋಗಿರಲಿಲ್ಲ ಎಂದು ಹೇಳಿದ್ದಾರೆ.

    ಡ್ರಗ್ಸ್ ಮಾಫಿಯಾದಲ್ಲಿ ನಟಿ ಸಂಜನ ಗಲ್ರಾಣಿ ಹೆಸರಿನ ಜೊತೆ ಶಾಸಕ ಜಮೀರ್ ಶ್ರೀಲಂಕಾದ ಕೊಲಂಬೋದ ಕ್ಯಾಸಿನೋಗೆ ಹೋಗಿರುವ ಆರೋಪಗಳ ಕೇಳಿ ಬಂದಿದ್ದವು. ತಮ್ಮ ವಿರುದ್ಧ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದ ಜಮೀರ್ ಅಹ್ಮದ್, 2014ರಲ್ಲಿ ಜೆಡಿಎಸ್ ಶಾಸಕರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ಜೊತೆ ಪ್ರವಾಸ ಕೈಗೊಂಡಿರುವ ವಿಷಯವನ್ನ ಎಳೆದು ತಂದಿದ್ದರು. ಈ ಹಿನ್ನೆಲೆ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಅವರು ಹೆಸರು ಹೇಳದೇ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ವಾಚ್‍ಮ್ಯಾನ್ ಆಗ್ಲಿಲ್ಲ, ಇನ್ನೂ ಆಸ್ತಿ ಬರ್ದು ಕೊಡ್ತೀರಾ -ಜಮೀರ್‌ಗೆ ಕುಟುಕಿದ ರಾಮದಾಸ್

    ಹೆಚ್‍ಡಿಕೆ ಟ್ವೀಟ್: ಜೆಡಿಎಸ್ ಪಕ್ಷದ ಗೌಪ್ಯ ಕಾರ್ಯಸೂಚಿ ಹಾಗೂ ಮುಂದಿನ ರಾಜಕೀಯ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು ಹಾಗೂ ಪ್ರಮುಖ ನಾಯಕರೊಂದಿಗೆ ಶ್ರೀಲಂಕಾದ ಕೊಲಂಬೋಗೆ ಒಮ್ಮೆ ಪ್ರವಾಸ ಹೋಗಿದ್ದು ನಿಜ. ಆದರೆ, ಕದ್ದು ಮುಚ್ಚಿ ‘ಕೊಲಂಬೋ ಯಾತ್ರೆ’ ಮಾಡಿರಲಿಲ್ಲ. ಇದನ್ನೂ ಓದಿ: ನಟಿ ಸಂಜನಾ ಸೇರಿ ಉಳಿದ ಆರೋಪಿಗಳೂ 3 ದಿನ ಸಿಸಿಬಿ ಕಸ್ಟಡಿಗೆ

    ಒಂದಾನೊಂದು ಕಾಲದಲ್ಲಿ ನಮ್ಮ ಪಕ್ಷದಲ್ಲಿದ್ದ ರಾಜಕಾರಣಿಯೊಬ್ಬರು ಜೆಡಿಎಸ್ ಶಾಸಕರು ಮತ್ತು ನಾನು ಕೊಲಂಬೋ ಪ್ರವಾಸ ಕೈಗೊಂಡಿದ್ದಾಗಿ ನೀಡಿರುವ ಹೇಳಿಕೆ ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತಿದೆ. 2014ರ ಜೂನ್ ತಿಂಗಳಲ್ಲಿ ಪಕ್ಷ ಸಂಘಟನೆ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಕೊಲಂಬೋಗೆ ಪ್ರವಾಸ ಹೋಗುವುದಾಗಿ ಬಹಿರಂಗವಾಗಿಯೇ ಮಾಧ್ಯಮಗಳಿಗೆ ಹೇಳಿ ಹೋಗಿದ್ದಲ್ಲದೇ, ಅಲ್ಲಿ ನಡೆದ ಶಾಸಕರ ಜೊತೆಗಿನ ಚರ್ಚೆಯ ದೃಶ್ಯಾವಳಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದೆವು. ಇದರಲ್ಲಿ ಯಾವುದೇ ಗುಟ್ಟು ಇರಲಿಲ್ಲ. ಇದನ್ನೂ ಓದಿ: ಅಲ್ಪಸಂಖ್ಯಾತ ಅನ್ನೋದು ರಕ್ಷಣೆಯ ಟ್ಯಾಗ್ ಅಲ್ಲ: ಶಾಸಕ ಜಮೀರ್‌ಗೆ ಸಚಿವ ಸುಧಾಕರ್ ಟಾಂಗ್

    ನೆರೆಯ ರಾಜ್ಯ ಗೋವಾ ಇಲ್ಲವೇ ರಾಜ್ಯದ ರೆಸಾರ್ಸ್ ನಲ್ಲಿ ಸಭೆ ನಡೆಸುವುದಕ್ಕಿಂತ ಯಾವುದೇ ಅಡಚಣೆ ಇಲ್ಲದೆ ಶಾಸಕರೊಂದಿಗೆ ಮುಕ್ತವಾಗಿ ಚರ್ಚಿಸಲು ಕೊಲಂಬೋ ಪ್ರವಾಸ ದುಬಾರಿಯಲ್ಲ ಎಂಬ ಕಾರಣಕ್ಕೆ ಇಂತಹ ಸಭೆ ನಡೆಸಿದ್ದು ನಿಜ. ವಿಮಾನ ಹತ್ತುವಾಗಲೂ ಮತ್ತು ವಾಪಸು ಬಂದಾಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದೇನೆ. ಕೊಲಂಬೋ ಪ್ರಯಾಣ ಅದೇ ಮೊದಲು ಮತ್ತು ಕೊನೆ. ಇದರಲ್ಲಿ ಬಚ್ಚಿಡುವುದು ಏನೇನೂ ಇಲ್ಲ. ಅವರು ನಮ್ಮೊಂದಿಗೆ ಬಂದಿದ್ದರೆ ಹೊರತು ನಾವು ಅವರೊಂದಿಗೆ ಹೋಗಿರಲಿಲ್ಲ. ಇದನ್ನೂ ಓದಿ:  ಡ್ರಗ್ಸ್ ಪ್ರಕರಣದ 5ನೇ ಆರೋಪಿ, ಚಿನ್ನ ವ್ಯಾಪಾರಿಯ ಪುತ್ರ ಬಂಧನ

    ಆಚಾರವಿಲ್ಲದ ನಾಲಿಗೆ ನಿನ್ನ, ನೀಚ ಬುದ್ಧಿಯ ಬಿಡು ನಾಲಿಗೆ, ವಿಚಾರವಿಲ್ಲದೆ ಪರರ ದುಶಿಸುವುದಕ್ಕೆ, ಚಾಚಿ ಕೊಂಡಿರುವಂತ ನಾಲಿಗೆ, ಸತತವು ನುಡಿ ಕಂಡ್ಯ ನಾಲಿಗೆ, ಚಾಡಿ ಹೇಳಲು ಬೇಡ ನಾಲಿಗೆ ಪುರಂದರ ದಾಸರು. ಇದನ್ನೂ ಓದಿ: ಹಿಂದೆ ಹೇಳಿದ್ದ 3 ಸ್ಫೋಟಕ ಒಗಟುಗಳಲ್ಲಿ ಮೂರು ಸತ್ಯವಾಗಿದೆ – ಪ್ರಶಾಂತ್‌ ಸಂಬರಗಿ

    ಜಮೀರ್ ಅಹ್ಮದ್ ಹೇಳಿದ್ದೇನು?: ಶ್ರೀಲಂಕಾದ ಕೊಲಂಬೋಗೆ ಹೋಗಿದ್ದು ನಿಜ. ಕೊಲಂಬೋಗೆ ಹೋದ್ರೇ ತಪ್ಪಾ? ಕೊಲಂಬೋಗೆ ಹೊರಬಾರದು ಅಂತ ಇಂಡಿಯಾದಲ್ಲಿ ಬ್ಯಾನ್ ಆಗಿದೆಯಾ? ನಾನೇನು ಪಾಕಿಸ್ತಾನಕ್ಕೆ ಹೋಗಿದ್ನಾ? ಪ್ರತಿ ಒಂದೂವರೆ ವರ್ಷಕ್ಕೊಮ್ಮೆ ಕೊಲಂಬೋಗೆ ಹೋಗುತ್ತಿದ್ದೆ. ನಾನು ಮಾತ್ರವಲ್ಲ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಹೋಗಿದ್ದರು. ಜೆಡಿಎಸ್‍ನ 28 ಶಾಸಕರೂ ಹೋಗಿದ್ದರು. ಡ್ರಗ್ಸ್ ನಂಟು ಸಾಬೀತಾದ್ರೆ ಬೇಕಾದರೆ ಗಲ್ಲಿಗೇರಿಸಲಿ ಎಂದು ಹೇಳಿದ್ದರು. ಇದನ್ನೂ ಓದಿ: ಸಂಜನಾ ಜೊತೆ ಕೊಲಂಬೋಗೆ ಹೋಗಿದ್ದು ಸಾಬೀತಾದ್ರೆ ನನ್ನ ಆಸ್ತಿಯೆಲ್ಲ ಸರ್ಕಾರಕ್ಕೆ ಬರೆದುಕೊಡ್ತೀನಿ: ಜಮೀರ್

  • ಸಾಂತ್ವನ ಕೇಂದ್ರದಲ್ಲಿ ಗಲಾಟೆ, ಪೊಲೀಸ್ ವಾಹನದಲ್ಲಿ ಮಾತುಕತೆ – ಇದು ರಾಗಿಣಿ, ಸಂಜನಾ ಫ್ರೆಂಡ್‍ಶಿಪ್

    ಸಾಂತ್ವನ ಕೇಂದ್ರದಲ್ಲಿ ಗಲಾಟೆ, ಪೊಲೀಸ್ ವಾಹನದಲ್ಲಿ ಮಾತುಕತೆ – ಇದು ರಾಗಿಣಿ, ಸಂಜನಾ ಫ್ರೆಂಡ್‍ಶಿಪ್

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಈಗಾಗಲೇ ಸಿಸಿಬಿ ತನಿಖೆ ಎದುರಿಸುತ್ತಿದ್ದಾರೆ. ಮೊನ್ನೆಯಷ್ಟೇ ಸಾಂತ್ವನ ಕೇಂದ್ರದಲ್ಲಿ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು ಎಂದು ಮೂಲಗಳು ತಿಳಿಸಿತ್ತು. ಆದರೆ ಇಂದು ಈ ಇಬ್ಬರು ನಟಿಯರ ನಡುವೆ ಫ್ರೆಂಡ್‍ಶಿಪ್ ಆದ ಪ್ರಸಂಗ ನಡೆಯಿತು.

    ಹೌದು. ವಿಚಾರಣೆ ನಡೆಸುತ್ತಿರುವಾಗ ಈ ಇಬ್ಬರು ನಟಿಯರೂ ಪದೇ ಪದೇ ಅನಾರೋಗ್ಯದ ನೆಪವೊಡ್ಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂದು ಇಬ್ಬರ ಆರೋಗ್ಯ ತಪಾಸಣೆಗಾಗಿ ನಗರದ ಕೆ.ಸಿ ಜನರಲ್ ಆಸ್ಪತ್ರೆಗೆ ಪೊಲೀಸರು ಕರೆದೊಯ್ದಿದ್ದರು.

    ತನಿಖೆಯ ವೇಳೆ ಹುಷಾರಿಲ್ಲ ಎಂದು ಹಲವು ಬಾರಿ ಹೇಳಿದ್ದರಿಂದ ಇವರೇನೂ ನಕ್ರಾ ಮಾಡುತ್ತಿದ್ದರಾ ಅಥವಾ ನಿಜ ಹೇಳುತ್ತಿದ್ದಾರೋ ಎಂದು ಪರೀಕ್ಷಿಸಲು ಪೊಲೀಸರು ಚೆಕಪ್ ಗಾಗಿ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಪರೀಕ್ಷೆಯ ವೇಳೆ ಇಬ್ಬರ ಬಿಪಿ ನಾರ್ಮಲ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿತ್ತು.

    ಆರೋಗ್ಯ ತಪಾಸಣೆಯ ಬಳಿಕ ಇಬ್ಬರನ್ನೂ ಅದೇ ಪೊಲೀಸ್ ವಾಹನದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕರೆದೊಯ್ಯಲಾಯಿತು. ಈ ವೇಳೆ ನಟಿಯರಿಬ್ಬರು ಪೊಲೀಸ್ ವಾಹನದಲ್ಲಿ ಮಾತುಕತೆ ನಡೆಸಿದರು. ಪೊಲೀಸ್ ವಾಹನದಲ್ಲಿ ರಾಗಿಣಿ- ಸಂಜನಾ ಇಬ್ಬರ ಮಧ್ಯೆ ಮುಕ್ತವಾಗಿ ಸಂಭಾಷಣೆ ನಡೆದಿದೆ.

    ಸಾಂತ್ವನ ಕೇಂದ್ರದಲ್ಲಿ ಗಲಾಟೆ:
    ಮೊದಲು ರಾಗಿಣಿಯನ್ನು ಬಂಧಿಸಿ ಸಾಂತ್ವನ ಕೇಂದ್ರದಲ್ಲಿ ಇರಿಸಲಾಯಿತು. ಅದಾದ ಬಳಿಕ ಸಂಜನಾಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದರು. ಹೀಗಾಗಿ ಇಬ್ಬರನ್ನೂ ಸಾಂತ್ವನ ಕೇಂದ್ರದಲ್ಲಿ ಇರಿಸಲಾಯಿತು. 5 ಹಾಸಿಗೆಗಳ ಪೈಕಿ ಮೊದಲ ಮತ್ತು ಕೊನೆಯ ಹಾಸಿಗೆಯನ್ನು ಇಬ್ಬರಿಗೆ ನೀಡಿದ್ದರೆ ಮಧ್ಯದಲ್ಲಿರುವ ಮೂರು ಬೆಡ್‍ಗಳನ್ನು ಭದ್ರತೆಗೆ ನಿಯೋಜನೆಗೊಂಡಿದ್ದ ಮಹಿಳಾ ಪೊಲೀಸರಿಗೆ ನೀಡಲಾಗಿತ್ತು.

    ರಾಗಿಣಿ ನೋಡಿ ನಟಿ ಸಂಜನಾ ಈಗ ಸಮಾಧಾನ ಆಯ್ತಾ ಕೇಳಿದ್ದಾರೆ. ರಾತ್ರಿ ಊಟ ಬೇಡ ಎಂದು ಹೇಳಿದ್ದ ಸಂಜನಾ ಕಣ್ಣೀರು ಹಾಕುತ್ತಾ ಕುಳಿತಿದ್ದರು. ಕೆಪಿಎಲ್ ವಿಚಾರದಲ್ಲಿ ಇಬ್ಬರು ನಟಿಯ ನಡುವೆ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಮೊದಲೇ ಮಾತುಕತೆ ಕಡಿಮೆ ಇತ್ತು. ಹೀಗಾಗಿ ಮಂಗಳವಾರ ರಾತ್ರಿ ಇಬ್ಬರ ಮಧ್ಯೆ ಯಾವುದೇ ಜಾಸ್ತಿ ಮಾತುಕತೆ ನಡೆದಿಲ್ಲ ಎಂದು ಮೂಲಗಳಿಂದ ತಿಳಿದುಬಂದಿತ್ತು.

  • ನಿಜವಾಗಿಯೂ ಆರೋಗ್ಯ ಸಮಸ್ಯೆ ಇದ್ಯಾ? – ನಟಿಯರ ಹೈಡ್ರಾಮಾಕ್ಕೆ ಇಂದೇ ಬೀಳುತ್ತೆ ತೆರೆ

    ನಿಜವಾಗಿಯೂ ಆರೋಗ್ಯ ಸಮಸ್ಯೆ ಇದ್ಯಾ? – ನಟಿಯರ ಹೈಡ್ರಾಮಾಕ್ಕೆ ಇಂದೇ ಬೀಳುತ್ತೆ ತೆರೆ

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಸಿಸಿಬಿ ವಿಚಾರಣೆ ಎದುರಿಸುತ್ತಿದ್ದು, ಈ ಮಧ್ಯೆ ನಟಿಮಣಿಯರಿಬ್ಬರು ಅನಾರೋಗ್ಯದ ನೆಪ ಹೇಳಿಕೊಂಡು ತನಿಖೆಗೆ ಸರಿಯಾಗಿ ಸಹಕಾರ ನೀಡದ ಹಿನ್ನೆಲೆಯಲ್ಲಿ ಈಗ ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

    ಹೌದು. ರಾಗಿಣಿ ಹಾಗೂ ಸಂಜನಾಳನ್ನು ಈಗಾಗಲೇ ನಗರದ ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಈ ಮೂಲಕ ಅನಾರೋಗ್ಯ ಇದೆಯಾ ಅಥವಾ ನಟಿಮಣಿಗಳಿಬ್ಬರು ಸುಳ್ಳು ಹೇಳುತ್ತಿದ್ದಾರಾ ಎಂಬುದನ್ನು ಪತ್ತೆ ಹಚ್ಚುವ ಕೆಲಸಕ್ಕೆ ಪೊಲೀಸರು ಈಗ ಮುಂದಾಗಿದ್ದಾರೆ.

    ಅರೆಸ್ಟ್ ಆದ ಸಂದರ್ಭದಲ್ಲಿ ನಡೆದ ಟೆಸ್ಟ್ ನಲ್ಲಿ ರಕ್ತದ ಮಾದರಿ ತೆಗೆದುಕೊಂಡಿಲ್ಲ. ಹೀಗಾಗಿ ಇಂದು ರಕ್ತದ ಮಾದರಿಯನ್ನ ಪಡೆಯಲು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೊದಲು ನಾರ್ಮಲ್ ಚೆಕಪ್ ನಡೆಸಿ ನಂತರ ರಕ್ತದ ಮಾದರಿಯನ್ನ ಪಡೆಯಲಿದ್ದಾರೆ.

    ರಕ್ತದ ಮಾದರಿ ಪಡೆಯಲು ಕೋರ್ಟಿನಿಂದ ಪರ್ಮೀಷನ್ ಪಡೆಯಬೇಕು. ನಿನ್ನೆ ಕೋರ್ಟಿನಿಂದ ಪರ್ಮೀಷನ್ ಸಿಕ್ಕಿತ್ತು. ಹೀಗಾಗಿ ಇವತ್ತು ರಕ್ತದ ಸ್ಯಾಂಪಲ್ ಪಡೆಯಲು ಸಿದ್ಧತೆ ನಡೆಸಲಾಗುತ್ತಿದೆ.

    ಇಬ್ಬರ ರಕ್ತದ ಮಾದರಿ ಹಾಗೂ ಯೂರಿನ್ ಸ್ಯಾಂಪಲ್ ಸಂಗ್ರಿಹಸಲಾಗುತ್ತೆ. ಇಬ್ಬರು ನಟಿ ಮಣಿಯರ ಓವರ್ ಆ್ಯಕ್ಟಿಂಗ್ ಕೂಡ ಈ ಪರೀಕ್ಷೆಗೆ ಕಾರಣ ಎಂದು ಹೇಳಲಾಗುತ್ತಿದೆ. ಯಾಕೆಂದರೆ ತನಿಖೆ ನಡೆಸುವಾಗ ಪದೇ ಪದೇ ಅನಾರೋಗ್ಯದ ನೆಪವೊಡ್ಡಿ ನಟಿಯರು ನಾಟಕವಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರ ಸಂಪೂರ್ಣ ಆರೋಗ್ಯ ತಪಾಸಣೆಗೆ ನಿರ್ಧರಿಸಿದ್ದಾರೆ.

    ಪರೀಕ್ಷೆಯ ವೇಳೆ ಇಬ್ಬರ ಬಿಪಿ ನಾರ್ಮಲ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂಬುವುದು ಮೂಲಗಳಿಂದ ತಿಳಿದು ಬಂದಿದೆ.

  • ರಾಗಿಣಿ, ಸಂಜಾನಾಗೆ ಶಾಕ್- ಸಿಸಿಬಿ ಕಚೇರಿಗೆ ಇಡಿ ಅಧಿಕಾರಿಗಳ ಎಂಟ್ರಿ

    ರಾಗಿಣಿ, ಸಂಜಾನಾಗೆ ಶಾಕ್- ಸಿಸಿಬಿ ಕಚೇರಿಗೆ ಇಡಿ ಅಧಿಕಾರಿಗಳ ಎಂಟ್ರಿ

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ಎದುರಿಸುತ್ತಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ.

    ಹೌದು. ಸಿಸಿಬಿ ವಿಚಾರಣೆ ಎದುರಿಸುತ್ತಿರುವ ನಟಿಯರಿಗೆ ಇದೀಗ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಗಳ ಭಯ ಶುರುವಾಗಿದೆ. ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಗೆ ಇಡಿ ಅಧಿಕಾರಿಗಳು ಆಗಮಿಸಿ, ಸಂದೀಪ್ ಪಾಟೀಲ್ ರನ್ನು ಭೇಟಿ ಮಾಡಿದ್ದಾರೆ. ಡ್ರಗ್ಸ್ ಡೀಲ್ ನಲ್ಲಿ ಸಾಕಷ್ಟು ಅಕ್ರಮ ಹಣ ಹರಿದಾಡಿದೆ. ಈ ಬಗ್ಗೆ ಇಡಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿಕೊಂಡಿದ್ದರು.

    ಒಟ್ಟಿನಲ್ಲಿ ಸಿಸಿಬಿಯಿಂದ ಬಚಾವಾದ್ರೆ ಸಾಕು ಅಂತಿದ್ದ ನಟಿಯರಿಗೆ ಇದೀಗ ಇಡಿ ಸಖತ್ ಶಾಕ್ ಕೊಡಲಿದೆ. ಪಾರ್ಟಿಗಳಿಗೆ ಹರಿದು ಬರ್ತಿದ್ದ ಹಣದ ಮೂಲವನ್ನು ಇಡಿ ಕೆದಕಲಿದೆ. ಡ್ರಗ್ಸ್ ಡೀಲ್ ನಿಂದ ಯಾರ್ಯಾರು ಎಷ್ಟೆಷ್ಟು ಹಣ ಮಾಡಿದ್ದಾರೆ. ಪಾರ್ಟಿಗಳಿಗೆ ಹಣ ಎಲ್ಲಿಂದ ಬರ್ತಿತ್ತು. ಇದಕ್ಕೆಲ್ಲಾ ಲೆಕ್ಕ ಎಲ್ಲಿದೆ?. ಡ್ರಗ್ಸ್ ನಿಂದ ಅಕ್ರಮವಾಗಿ ವಿದೇಶಕ್ಕೆ ಎಷ್ಟು ಹಣ ಹರಿದಿದೆ. ಈ ಎಲ್ಲಾ ವಿಚಾರವಾಗಿ ಇಡಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.

    ಸದ್ಯ ವಿರೇನ್ ಖನ್ನಾನನ್ನು ಸಿಸಿಬಿ ಅಧಿಕಾರಿಗಳು ಇಡಿ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದು, ಇದೀಗ ಅಧಿಕಾರಿಗಳು ವೀರೇನ್ ಖನ್ನಾನನ್ನು ವಿಚಾರಣೆ ಮಾಡಲು ಕರೆದೊಯ್ದಿದ್ದಾರೆ.

    ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದ ನಟಿ ರಾಗಿಣಿಯನ್ನು ಬಂಧಿಸಲಾಗಿತ್ತು. ನಂತರ ರಾಗಿಣಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಸೋಮವಾರ ನಗರದ 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ನಡೆದಿತ್ತು. ಈ ವೇಳೆ 10 ದಿನ ನಮ್ಮ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿದ್ದರು. ಸಿಸಿಬಿ ವಕೀಲರ ವಾದವವನ್ನು ಆಲಿಸಿದ ಬಳಿಕ ನ್ಯಾ.ಜಗದೀಶ್ ಅವರು 5 ದಿನ ಕಸ್ಟಡಿಗೆ ನೀಡಿದ್ದಾರೆ. ಹೀಗಾಗಿ ಕೋರ್ಟ್ ಆದೇಶದ ಅನ್ವಯ ಶುಕ್ರವಾರದವರೆಗೂ ರಾಗಿಣಿ ಸಿಸಿಬಿ ಪೊಲೀಸರ ವಶದಲ್ಲಿ ಇರಲಿದ್ದಾರೆ.

    ಇತ್ತ ನಟಿ ಸಂಜನಾ ಆಪ್ತ ರಾಹುಲ್ ಹೇಳಿಕೆಯಿಂದಾಗಿ ಮಂಗಳವಾರ ಬೆಳಗ್ಗೆ ಸಿಸಿಬಿ ಅಧಿಕಾರಿಗಳು ಸಂಜನಾ ಮನೆ ಮೇಲೆ ದಾಳಿ ಮಾಡಿದ್ದರು. ಹಲವು ಗಂಟೆ ಶೋಧ ಕಾರ್ಯ ನಡೆಸಿ, ಸಂಜನಾರನ್ನು ಅರೆಸ್ಟ್ ಮಾಡಿದ್ದಾರೆ. ಎಫ್‍ಐಆರ್‍ನಲ್ಲಿ ಸಂಜನಾರನ್ನು ಎ-14 ಎಂದು ಉಲ್ಲೇಖಿಸಲಾಗಿದೆ. ಡ್ರಗ್ ಮಾಫಿಯಾ ಜೊತೆ ನಂಟಿರುವ ಅನುಮಾನದ ಮೇಲೆ ತೀವ್ರ ವಿಚಾರಣೆ ನಡೆಸಲಾಗಿದೆ. ಮೆಡಿಕಲ್ ಚೆಕಪ್ ಬಳಿಕ ವಸಂತನಗರದ ಸ್ಪೆಷಲ್ ರಿಮ್ಯಾಂಡ್ ಕೋರ್ಟ್‍ಗೆ ಹಾಜರುಪಡಿಸಿ ಸಂಜನಾರನ್ನು ಐದು ದಿನ ಕಸ್ಟಡಿಗೆ ಪಡೆದುಕೊಂಡಿದೆ.

  • ಡ್ರಗ್ಸ್ ಪ್ರಕರಣ: ನಟಿ ಪಾರೂಲ್ ಬೆಂಬಲಕ್ಕೆ ನಿಂತ ಶೃತಿ ಹರಿಹರನ್

    ಡ್ರಗ್ಸ್ ಪ್ರಕರಣ: ನಟಿ ಪಾರೂಲ್ ಬೆಂಬಲಕ್ಕೆ ನಿಂತ ಶೃತಿ ಹರಿಹರನ್

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿಯನ್ನು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಟಿ ಪಾರೂಲ್ ಯಾದವ್ ಗರಂ ಆಗಿದ್ದು, ಇದೀಗ ಇವರ ಬೆನ್ನಿಗೆ ಶೃತಿ ಹರಿಹರನ್ ಕೂಡ ನಿಂತಿದ್ದಾರೆ.

    ನಟಿ ಪಾರೂಲ್ ಆಕ್ರೋಶ ವ್ಯಕ್ತಪಡಿಸಿ ಮಾಡಿರುವ ಪೋಸ್ಟ್ ಅನ್ನು ಸೃಇ ತಮ್ಮ ಇನ್ಸ್ ಸ್ಟಾಗ್ರಾಂ ಸ್ಟೇಟಸ್ ನಲ್ಲಿ ಹಾಕಿಕೊಂಡು ಕೈ ಮುಗಿದಿದ್ದಾರೆ. ಅಲ್ಲದೆ ಒಳ್ಳೆಯ ಮಾತುಗಳನ್ನಾಡಿದ್ದೀರಿ. ನಮ್ಮಲ್ಲಿ ಹಲವರು ಒಂದೇ ರೀತಿಯ ಆಲೋಚನೆಗಳನ್ನು ಹಂಚಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

    ಪಾರೂಲ್ ಹೇಳಿದ್ದೇನು..?
    ಅಂತಿಮವಾಗಿ ಲಿಂಗ ಸಮಾನತೆ ಹೋರಾಟಕ್ಕೆ ಗೆಲುವು ಸಿಕ್ಕಿದೆ. ಮಾದಕ ವಸ್ತುಗಳ ವಿರುದ್ಧ ನಾನು ಸೇರಿದಂತೆ ಎಲ್ಲರೂ ಹೋರಾಡಬೇಕು. ಆದರೆ ಭಾರತದಲ್ಲಿ ಡ್ರಗ್ಸ್ ಮಾರಾಟಗಾರರು ಅಥವಾ ಬಳಕೆದಾರರು ಕೇವಲ ಮೂವರು ಮಹಿಳೆಯರು ಮಾತ್ರನಾ?, ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆಯಲ್ಲಿ ಬೇರೆ ಯಾರೂ ಭಾಗಿಯಾಗಿಲ್ವಾ ಎಂದು ಪ್ರಶ್ನೆ ಮಾಡಿದ್ದರು.

    ಯಾವುದೇ ಕಾರ್ಪೋರೇಟರ್ ಸಿಬ್ಬಂದಿ, ವ್ಯಾಪಾರಸ್ಥರು, ಕ್ರೀಡಾಪಟುಗಳು ಅಥವಾ ನಟರು ಸಹ ಡ್ರಗ್ಸ್ ಧಂದೆಯಲ್ಲಿ ಭಾಗಿಯಾಗಿಲ್ವಾ? ನಾವು ಲಿಂಗ ಸಮಾನತೆಯ ಹೋರಾಟವನ್ನು ಗೆದ್ದಿದ್ದೇವೆ ಎಂದು ಸಂಭ್ರಮಿಸಬೇಕಾ? ಅಥವಾ ನಮ್ಮಲ್ಲಿ ಕೆಲವರನ್ನು ಮಾತ್ರ ಬೇಟೆಯಾಡುವುದು ಎಷ್ಟು ಸುಲಭ ಎಂದು ನಾವು ಅಳಬೇಕೇ ಎಂದು ಡ್ರಗ್ಸ್ ದಂಧೆ ಬಗ್ಗೆ ನಟಿ ಪಾರುಲ್ ಯಾದವ್ ಪ್ರಶ್ನಿಸಿದ್ದರು.

    ರಾಗಿಣಿ, ಸಂಜನಾ ಬಂಧನ:
    ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದ ನಟಿ ರಾಗಿಣಿಯನ್ನು ಬಂಧಿಸಲಾಗಿತ್ತು. ನಂತರ ರಾಗಿಣಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಸೋಮವಾರ ನಗರದ 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ನಡೆದಿತ್ತು. ಈ ವೇಳೆ 10 ದಿನ ನಮ್ಮ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿದ್ದರು. ಸಿಸಿಬಿ ವಕೀಲರ ವಾದವವನ್ನು ಆಲಿಸಿದ ಬಳಿಕ ನ್ಯಾ.ಜಗದೀಶ್ ಅವರು 5 ದಿನ ಕಸ್ಟಡಿಗೆ ನೀಡಿದ್ದಾರೆ. ಹೀಗಾಗಿ ಕೋರ್ಟ್ ಆದೇಶದ ಅನ್ವಯ ಶುಕ್ರವಾರದವರೆಗೂ ರಾಗಿಣಿ ಸಿಸಿಬಿ ಪೊಲೀಸರ ವಶದಲ್ಲಿ ಇರಲಿದ್ದಾರೆ.

    ಇತ್ತ ನಟಿ ಸಂಜನಾ ಆಪ್ತ ರಾಹುಲ್ ಹೇಳಿಕೆಯಿಂದಾಗಿ ಮಂಗಳವಾರ ಬೆಳಗ್ಗೆ ಸಿಸಿಬಿ ಅಧಿಕಾರಿಗಳು ಸಂಜನಾ ಮನೆ ಮೇಲೆ ದಾಳಿ ಮಾಡಿದ್ದರು. ಹಲವು ಗಂಟೆ ಶೋಧ ಕಾರ್ಯ ನಡೆಸಿ, ಸಂಜನಾರನ್ನು ಅರೆಸ್ಟ್ ಮಾಡಿದ್ದಾರೆ. ಎಫ್‍ಐಆರ್‍ನಲ್ಲಿ ಸಂಜನಾರನ್ನು ಎ-14 ಎಂದು ಉಲ್ಲೇಖಿಸಲಾಗಿದೆ. ಡ್ರಗ್ ಮಾಫಿಯಾ ಜೊತೆ ನಂಟಿರುವ ಅನುಮಾನದ ಮೇಲೆ ತೀವ್ರ ವಿಚಾರಣೆ ನಡೆಸಲಾಗಿದೆ. ಮೆಡಿಕಲ್ ಚೆಕಪ್ ಬಳಿಕ ವಸಂತನಗರದ ಸ್ಪೆಷಲ್ ರಿಮ್ಯಾಂಡ್ ಕೋರ್ಟ್‍ಗೆ ಹಾಜರುಪಡಿಸಿ ಸಂಜನಾರನ್ನು ಐದು ದಿನ ಕಸ್ಟಡಿಗೆ ಪಡೆದುಕೊಂಡಿದೆ.

  • ಬಂಧನಕ್ಕೊಳಗಾಗಿರುವ ಸಂಜನಾ ಆಪ್ತ ರಾಹುಲ್ ಜೊತೆ ಸಂಬರಗಿ ಫೋಟೋ

    ಬಂಧನಕ್ಕೊಳಗಾಗಿರುವ ಸಂಜನಾ ಆಪ್ತ ರಾಹುಲ್ ಜೊತೆ ಸಂಬರಗಿ ಫೋಟೋ

    -ರಾಹುಲ್ ಪರಿಚಯವಿತ್ತಾ ಸಂಬರಗಿಗೆ?
    -ಫೋಟೋ ವೈರಲ್ ಬಳಿಕ ಸಂಬರಗಿ ಸ್ಪಷ್ಟನೆ

    ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ಸಂಜನಾ ಆಪ್ತ ಎನ್ನಲಾದ ರಾಹುಲ್ ಪರಿಚಯ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಅವರಿಗೆ ಮೊದಲೇ ಇತ್ತ ಅನುಮಾನವೊಂದು ಹುಟ್ಟಿಕೊಂಡಿದೆ. ರಾಹುಲ್ ಜೊತೆ ಪ್ರಶಾಂತ್ ಸಂಬರಗಿ ಕ್ಲಿಕ್ಕಿಸಿಕೊಂಡಿರುವ ಫೋಟೋ ವೈರಲ್ ಆಗುತ್ತಿದೆ.

    ಸ್ಯಾಂಡಲ್‍ವುಡ್ ನಲ್ಲಿರುವ ಡ್ರಗ್ಸ್ ಮಾಫಿಯಾ ನಿರ್ಮೂಲನೆ ಆಗಬೇಕೆಂದು ಪ್ರಶಾಂತ್ ಸಂಬರಗಿ ಹೇಳುತ್ತಿದ್ದು, ನಟ ಸಂಜನಾ ಗಲ್ರಾನಿ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದರು. ಇದೀಗ ಸಂಜನಾ ಆಪ್ತನ ಜೊತೆ ಫೋಟೋ ರಿವೀಲ್ ಆಗಿದೆ.

    ಫೋಟೋ ರಿವೀಲ್ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಪ್ರಶಾಂತ್ ಸಂಬರಗಿ, 2017ರಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋ ಇದಾಗಿದ್ದು, ಆತನಿಗೂ ಮತ್ತು ನನಗೂ ಯಾವುದೇ ಸಂಪರ್ಕವಿಲ್ಲ. ಅಂದು ಯುಬಿ ಸಿಟಿಯಲ್ಲಿ ನಡೆದ ಪಾರ್ಟಿಗೆ ಬಹುತೇಕ ಗಣ್ಯರು ಆಗಮಿಸಿದ್ದರು. ಪಾರ್ಟಿಯಲ್ಲಿ ಫೋಟೋ ತೆಗೆದುಕೊಳ್ಳಲಾಗಿತ್ತು. ಈ ವಿಚಾರದಲ್ಲಿ ಪೊಲೀಸರು ಸಮನ್ಸ್ ನೀಡಿದ್ರೆ ನಾನು ವಿಚಾರಣೆಗೆ ಸಿದ್ಧ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

  • ನನ್ನ ಬಗ್ಗೆ ಮಾತಾಡಿದ್ರೆ ಸುಮ್ನೆ ಇರಲ್ಲ: ಪ್ರಶಾಂತ್ ಸಂಬರಗಿಗೆ ಸಂಜನಾ ಎಚ್ಚರಿಕೆ

    ನನ್ನ ಬಗ್ಗೆ ಮಾತಾಡಿದ್ರೆ ಸುಮ್ನೆ ಇರಲ್ಲ: ಪ್ರಶಾಂತ್ ಸಂಬರಗಿಗೆ ಸಂಜನಾ ಎಚ್ಚರಿಕೆ

    – 50 ಸಿನಿಮಾ ಮಾಡಿದ್ದೇನೆ, ಪಂಚ ಭಾಷಾ ತಾರೆ ನಾನು
    – ರಾಹುಲ್ ನನ್ನ ಅಣ್ಣನಿದ್ದಂತೆ

    ಬೆಂಗಳೂರು: ನನ್ನ ಬಗ್ಗೆ ಇನ್ನೊಮ್ಮೆ ಮಾತಾಡಿದ್ರೆ ನಾನು ಸುಮ್ಮನೆ ಇರಲ್ಲ ಎಂದು ಪ್ರಶಾಂತ್ ಸಂಬರಗಿಗೆ ನಟಿ ಸಂಜನಾ ಗಲ್ರಾನಿ ಎಚ್ಚರಿಕೆ ನೀಡಿದ್ದಾರೆ.

    ಈ ಕರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನನ್ನು ವಿಚಾರಣೆಗೆ ಕರೆದಿಲ್ಲ, ನಾನು ಬೆಂಗಳೂರಲ್ಲೇ ಇದ್ದೇನೆ. ಇದು ತುಂಬಾ ದೊಡ್ಡ ವಿಷಯ, ಚಿತ್ರರಂಗದ ಹೆಸರನ್ನು ಮಣ್ಣಲ್ಲಿ ಹಾಕಲಾಗುತ್ತಿದೆ. ಚಿತ್ರರಂಗವನ್ನು ಇಷ್ಟು ಕಷ್ಟಪಟ್ಟು, ಪ್ರೀತಿಯಿಂದ ದೇವಸ್ಥಾನದ ರೀತಿ ದೊಡ್ಡದಾಗಿ ಕಟ್ಟಲಾಗಿದೆ. ಕನ್ನಡ ಚಿತ್ರರಂಗ ಡ್ರಗ್ಸ್ ನಲ್ಲಿದೆ ಎಂದು ಹೇಳಿ ಕನ್ನಡ ಚಿತ್ರರಂಗದ ಹೆಸರನ್ನು ಹಾಳು ಮಾಡಬೇಡಿ. ಕೆಲವರು ಆ ರೀತಿ ಇದ್ದರೆ ಎಲ್ಲರೂ ಅದೇ ರೀತಿ ಎಂದು ಹೇಳಬೇಡಿ, ಊಹಾಪೋಹ ಮಾಡಬೇಡಿ. ಇದರು ಇಡೀ ಕರ್ನಾಟಕಕ್ಕೇ ಬೇಜಾರಾಗುವ ಸಂಗತಿ ಎಂದು ಹೇಳಿದ್ದಾರೆ.

    ರಾಹುಲ್ ನನ್ನ ಅಣ್ಣ ಇದ್ದಂತೆ, ಅವರಿಗೂ ನನಗೂ ಯಾವುದೇ ನಂಟಿಲ್ಲ. ನನಗೆ ಒಳ್ಳೆಯ ರೀತಿಯ ಸಿನಿಮಾ ಮಾಡಿ, ಆರಾಮಾಗಿರುವುದು ಇಷ್ಟ. ಯಾರು ಏನು ಮಾಡುತ್ತಾರೆ ಎಂಬುದು ನನಗೆ ಸಂಬಂಧವಿಲ್ಲ. ರಾಹುಲ್ ರಿಯಲ್ ಎಸ್ಟೇಟ್‍ಲ್ಲಿ ಕೆಲಸ ಮಾಡುತ್ತಿದ್ದರು. ಒಳ್ಳೆಯ ಹುಡುಗ, ಪಾರ್ಟಿಗೆಲ್ಲ ಹೋಗುತ್ತಿದ್ದರು. ಯಾವುದೇ ತಪ್ಪನ್ನು ರಾಹುಲ್ ಬಳಿ ನಾನು ನೋಡಿಲ್ಲ. ಅವರು ತುಂಬಾ ಜಾಲಿ ಮನುಷ್ಯ ಹೀಗಾಗಿ ನೋಟೆಡ್ ಆಗಿದ್ದಾರೆ. ಹೀಗಾಗಿ ವಿಚಾರಣೆಗೆ ಕರೆದಿದ್ದಾರೆ. ಇದನ್ನು ಬಿಟ್ಟು ಬೇರೆನೂ ಇಲ್ಲ.

    ಪಾರ್ಟಿಗೆ ಹೋಗುತ್ತಿದ್ದರು. ಆದರೆ ಯಾವುದೇ ತಪ್ಪು ಕೆಲಸ ಮಾಡುವವರಲ್ಲ. ನಾನು ಅವರ ತಂದೆಗೆ ಕರೆ ಮಾಡಿ ಕೇಳಿದೆ, ನಿನ್ನೆಯೇ ಕರೆದುಕೊಂಡು ಹೋದರು ಎಂದು ಹೇಳಿದರು. ಕೊರೊನಾ ಬಂದಾಗಿಂದ ಯಾವುದೇ ಪಾರ್ಟಿ ನಡೆಯುತ್ತಿಲ್ಲ. ಡ್ರಗ್ಸ್ ನ್ನು ನಾನು ಯಾವುದೇ ಪಾರ್ಟಿಯಲ್ಲಿ ನೋಡಿಲ್ಲ. ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ಬೀದಿಯಲ್ಲಿ ನಾಯಿ ಬೊಗಳುತ್ತೆ ಎಂದು ನಾನು ಬಟ್ಟೆ ಬಿಚ್ಚಿ ಬೊಗಳಲು ಆಗುವುದಿಲ್ಲ. ಆತ, ನಿರ್ಮಾಪಕ, ನಿರ್ದೇಶಕ, ಹೀರೋ ಅಲ್ಲ. ಫಿಲಂ ಇಂಡಸ್ಟ್ರಿಯಲ್ಲೇ ಇಲ್ಲ. ಆದರೆ ಹೀರೋಯಿನ್‍ಗಳನ್ನು ಟಾರ್ಗೆಟ್ ಮಾಡುತ್ತಿದ್ದಾನೆ. ನನಗೆ ಮಾಡಲು ತುಂಬಾ ಕೆಲಸಗಳಿವೆ ಕೋರ್ಟ್‍ಲ್ಲಿ ಕೇಸ್ ಹಾಕಿದರೆ ಓಡಾಡಲು ಆಗುವುದಿಲ್ಲ. ಇವರೆಲ್ಲ ಬೆಳೆದಿಲ್ಲ, ಬೇರೆಯವರನ್ನು ಬೆಳೆಯಲು ಬಿಡುತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಅಲ್ಲದೆ ಪ್ರಶಾಂತ್ ಸಂಬರಗಿಯವರನ್ನು ಪ್ರಾಣಿಗೆ ಹೋಲಿಸಿದ ಅವರು, ನಾನು ಒಂದೇ ಸಿನಿಮಾ ಮಾಡಿದ್ದೇನೆ ಎಂದು ಹೇಳುತ್ತಾರೆ. ಆದರೆ ನಾನು 50 ಸಿನಿಮಾಗಳನ್ನು ಮಾಡಿದ್ದಾರೆ. ಆ ಹಂದಿ ವಿಕಿಪಿಡಿಯಾದಲ್ಲಿ ಹೋಗಿ ನೋಡಲಿ ಎಂದು ಹೇಳಿದ್ದಾರೆ. 50 ಪ್ರಾಜೆಕ್ಟ್ ಮಾಡಿದ್ದೇನೆ, ಪಂಚ ಭಾಷೆ ತಾರೆ ನಾನು. ಐಶ್ವರ್ಯ ರೈ ಅಲ್ಲದಿದ್ದರೂ ನಾನು ಸಂಜನಾ ಗಲ್ರಾಣಿ, ನನಗೆ ಸ್ವಾಭಿಮಾನ ಇದೆ. ಅಲ್ಲದೆ ನನ್ನದೇ ಸ್ವಂತ ಫ್ಯಾನ್ ಫಾಲೋವರ್ಸ್ ಇದ್ದಾರೆ. ಬೆಂಜ್, ಆಡಿ ಕಾರ್ ಬಗ್ಗೆ ಮಾತನಾಡುತ್ತಾರೆ. ನಾನು 16 ವರ್ಷ ಸಿನಿಮಾ ತಂಡದಲ್ಲಿದ್ದೇನೆ, ಸತ್ತ ಮೇಲೆ ಬೆಂಜ್ ಕಾರ್ ತೆಗೆದುಕೊಳ್ಳುವುದಾ, ಇವರಿಗೆ ಬೆಳೆಯಲು ಸಾಧ್ಯವಿಲ್ಲ, ಬೆಳೆದವರನ್ನು ಕಾಲೆಳೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

    ನನಗೆ ಕಾನೂನಾತ್ಮಕವಾಗಿ ಹೋರಾಡಲು ಸಮಯವಿಲ್ಲ. ಆದರೆ ಇದೇ ಕೊನೆ ನನ್ನ ಬಗ್ಗೆ ಇನ್ನೊಂದು ಬಾರಿ ಈ ರೀತಿ ಮಾತನಾಡಿದರೂ ಸುಮ್ಮನಿರಲ್ಲ. ಇಂದ್ರಜಿತ್ ಅವರು ಸಮಾಜವನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ನಾವು 10, 20, 30 ಲಕ್ಷ ಸಂಭಾವನೆ ಪಡೆಯುತ್ತೇವೆ. ಒಂದು ಅಂಗಡಿಯ ಓಪನ್ ಮಾಡಿ ರಿಬ್ಬನ್ ಕಟ್ ಮಾಡಿದರೂ 2 ಲಕ್ಷ ರೂ. ಸಂಭಾವನೆ ಪಡೆಯುತ್ತೇವೆ. ಕಷ್ಟ ಪಟ್ಟು ಕೆಲಸ ಮಾಡುತ್ತೇವೆ, ಹೆಸರು ಮಾಡುತ್ತೇವೆ ಅದಕ್ಕೆ ತಕ್ಕಂತೆ ಸಂಭಾವನೆಯನ್ನೂ ಪಡೆಯುತ್ತೇವೆ ಎಂದು ಖಾರವಾಗಿ ಉತ್ತರಿಸಿದ್ದಾರೆ.

  • ಹೆಣ್ಮಕ್ಳು ಎಷ್ಟು ಹೊತ್ತಲ್ಲೂ, ಯಾವ ಬಟ್ಟೆಲಿ ಬೇಕಾದ್ರೂ ಬೆಂಗ್ಳೂರಲ್ಲಿ ಸುತ್ತಾಡ್ಬೋಡು- ಆರೋಪಗಳಿಗೆ ಸಂಜನಾ ಖಡಕ್ ಉತ್ತರ

    ಹೆಣ್ಮಕ್ಳು ಎಷ್ಟು ಹೊತ್ತಲ್ಲೂ, ಯಾವ ಬಟ್ಟೆಲಿ ಬೇಕಾದ್ರೂ ಬೆಂಗ್ಳೂರಲ್ಲಿ ಸುತ್ತಾಡ್ಬೋಡು- ಆರೋಪಗಳಿಗೆ ಸಂಜನಾ ಖಡಕ್ ಉತ್ತರ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಧ್ಯರಾತ್ರಿಯಲ್ಲಿ ಹೆಣ್ಣು ಮಕ್ಕಳು ಸಂಚರಿಸೋಕೆ ಆಗಲ್ಲ. ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಆರೋಪಕ್ಕೆ ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾಣಿ ಧ್ವನಿ ಎತ್ತಿದ್ದಾರೆ.

    ರಾಜಧಾನಿ ಬೆಂಗಳೂರಿನ ಬಗ್ಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೆಣ್ಣು ಮಕ್ಕಳ ವಿರುದ್ಧ ಹಲವರು ಅಪವಾದ ಎತ್ತಿದ್ದಾಗ ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾಣಿ, ಸಿಲಿಕಾನ್ ಸಿಟಿ ಪರವಾಗಿ ಧ್ವನಿ ಎತ್ತಿದ್ದಾರೆ.

    ಎಷ್ಟು ಹೊತ್ತಲ್ಲೂ ಬೇಕಾದರೂ, ಯಾವ ಬಟ್ಟೆಯಲ್ಲಿ ಬೇಕಾದ್ರೂ ಸಿಲಿಕಾನ್ ಸಿಟಿಯಲ್ಲಿ ಸುತ್ತಾಡಬಹುದು. ನಾನೇ ಎಷ್ಟೋ ಸಲ ಮಧ್ಯರಾತ್ರಿ ಮನೆಯಿಂದ ಹೊರಗೆ ಹೋಗಿ ಸೇಫ್ ಆಗಿ ವಾಪಸ್ ಬಂದಿದ್ದೇನೆ. ದೆಹಲಿ ಹಾಗೂ ಕೋಲ್ಕತ್ತಾದಂತಹ ನಗರಗಳಿಗೆ ನಮ್ಮ ಬೆಂಗಳೂರನ್ನು ಹೋಲಿಸಿ ಮಾತನಾಡುವುದು ಸರಿಯಲ್ಲ ಸಂಜನಾ ಗುಡುಗಿದ್ದಾರೆ.