Tag: Sanjjanaa Galrani

  • ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿಗೆ ಜೈಲೇ ಗತಿ – ಜಾಮೀನು ಅರ್ಜಿ ವಜಾ

    ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿಗೆ ಜೈಲೇ ಗತಿ – ಜಾಮೀನು ಅರ್ಜಿ ವಜಾ

    ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧನದಲ್ಲಿರುವ ಮಾದಕ ಚೆಲುವೆಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಜಾಮೀನು ಅರ್ಜಿಯನ್ನು ಎನ್‍ಡಿಪಿಎಸ್ ಕೋರ್ಟ್ ವಜಾಗೊಳಿಸಿದೆ. ಇನ್ನುಳಿದ ಆರೋಪಿಗಳ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

    ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಜಾಮೀನು ಅರ್ಜಿಯ ವಿಚಾರಣೆಯನ್ನ ನ್ಯಾಯಾಲಯ ಸೆಪ್ಟೆಂಬರ್ 21ರಂದು ನಡೆಸಿತ್ತು. ವಿಚಾರಣೆಯ ಬಳಿಕ ಆದೇಶವನ್ನು ನ್ಯಾಯಾಧೀಶರು ಕಾಯ್ದಿರಿಸಿದ್ದರು. ಇತ್ತ ಮತ್ತೋರ್ವ ನಟಿ ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ಸೆಪ್ಟೆಂಬರ್ 24ರಂದು ನ್ಯಾಯಲಯ ಮುಂದೆ ಬಂದಿತ್ತು. ವಾದ- ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು ಇಂದು ಆದೇಶ ಕಾಯ್ದಿರಿಸಿದ್ದರು. ಇದನ್ನೂ ಓದಿ: ನನಗೆ ಸಿಗರೇಟ್ ಕೊಡಿ- ಜೈಲಿನಲ್ಲಿ ಸಂಜನಾ ಮತ್ತೆ ಕಿರಿಕ್

    ಈ ಎಲ್ಲ ಬೆಳವಣಿಗೆಗಳ ನಡುವೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಹಿನ್ನೆಲೆ ಇಬ್ಬರು ನಟಿಯರನ್ನು ವಿಚಾರಣೆ ನಡೆಸಲು ನ್ಯಾಯಾಲಯದಿಂದ ಐದು ದಿನ ಅನುಮತಿ ಪಡೆದುಕೊಂಡಿತ್ತು. ನ್ಯಾಯಾಲಯದ ಆದೇಶದ ಹಿನ್ನೆಲೆ ರಾಗಿಣಿ ಮತ್ತು ಸಂಜನಾ ಇಬ್ಬರು ಪರಪ್ಪನ ಅಗ್ರಹಾರದಲ್ಲಿಯೇ ಇಡಿ ವಿಚಾರಣೆ ಎದುರಿಸಿದ್ದಾರೆ. ಇದನ್ನೂ ಓದಿ: ಇಬ್ಬರ ಜೊತೆ ಬಂದು ಸಂಜನಾ ಮತಾಂತರ: ಮೌಲ್ವಿ ಮಹಮ್ಮದ್ ಜಲಾಲುದ್ದಿನ್

    ಸಂಜನಾ ಪರ ವಕೀಲರ ವಾದ: ರವಿಶಂಕರ್ ಹೇಳಿಕೆಯನ್ನು ಎಸಿಪಿ ಗೌತಮ್ ರೆಕಾರ್ಡ್ ಮಾಡಿದ್ದಾರೆ. ಅದರಲ್ಲಿ ನಗರದ ವಿವಿಧೆಡೆ ಪಾರ್ಟಿ ನಡೆಸಿರುವುದಾಗಿ ಹೇಳಿದ್ದಾರೆ. ಈ ಸ್ಟೇಟ್ ಮೆಂಟ್ ಬಿಟ್ಟರೆ ಯಾವುದೇ ಮಟಿರಿಯಲ್ ಇಲ್ಲ. ಕೇವಲ ರವಿಶಂಕರ್ ಹೇಳಿಕೆ ಆಧಾರದ ಮೇಲೆ ಎಫ್‍ಐಆರ್ ಮಾಡಲಾಗಿದೆ. ದಾಖಲಾಗಿರುವ ಎಫ್‍ಐಅರ್ ನಲ್ಲಿ ಅನೇಕ ಸೆಕ್ಷನ್ ಗಳನ್ನ ಹಾಕಲಾಗಿದೆ. ಆದ್ರೆ ಆರೋಪಗಳಿಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಶ್ರೀನಿವಾಸ ಮೂರ್ತಿ ವಾದ ಮಂಡಿಸಿದ್ದರು. ಇದನ್ನೂ ಓದಿ: ರಾಗಿಣಿಗಾಗಿ ರಕ್ತ, ಪ್ರಾಣ ಕೊಡಲು ಸಿದ್ಧ – ಅಭಿಮಾನಿ ವಿಡಿಯೋ ವೈರಲ್

    ಎಕ್ಸ್ ಟೆಸಿ ಮಾತ್ರೆ ಸೇವಿಸಿದ್ದಾರೆಂದು ಆರೋಪಿಸಲಾಗಿದ್ದು, ಎಫ್‍ಐಆರ್ ನಲ್ಲಿ ನಿರ್ದಿಷ್ಟ ಆರೋಪಗಳೇ ಇಲ್ಲ. ಎಕ್ಸ್ ಟೆಸಿ ಮಾತ್ರೆಯ ಪ್ರಸ್ತಾಪ ಬಿಟ್ಟರೇ ಬೇರೆ ಯಾವುದೇ ಆರೋಪಗಳಿಲ್ಲ. ಇತರೆ ಆರೋಪಿಗಳ ಹೇಳಿಕೆಯ ಮೇಲೆ ಪ್ರಕರಣ ನಿಂತಿದೆ. ಆದ್ರೆ ಸಂಜನಾ ಗಲ್ರಾನಿ ಅವರನ್ನ ಯಾಕೆ ಬಂಧಿಸಲಾಗಿದೆ ಎಂಬುವುದು ಇದುವರೆಗೂ ಗೊತ್ತಾಗಿಲ್ಲ. ಕಕ್ಷಿದಾರರಿಗೆ ಬಂಧನ ವೇಳೆ ಯಾಕೆ ಅರೆಸ್ಟ್ ಮಾಡಲಾಗ್ತಿದೆ ಅಂತ ಹೇಳಿಲ್ಲ. ಹಾಗಾಗಿ ಸಂಜನಾ ಗಲ್ರಾನಿ ಅವರ ಬಂಧನ ಕಾನೂನೂ ಬಾಹಿರವಾಗಿದ್ದು, ಇಲ್ಲಿಯವರೆಗೂ ಪೊಲೀಸರು ನ್ಯಾಯಾಲಯದ ಮುಂದೆ ಯಾವ ಸಾಕ್ಷ್ಯವನ್ನ ಹಾಜರುಪಡಿಸಿಲ್ಲ. ಇದೇ ವೇಳೆ ವಕೀಲರು ಕೆಲ ಹಳೆ ಪ್ರಕರಣಗಳ ಉದಾಹರಣೆಗಳನ್ನು ನ್ಯಾಯಾಲಯದ ಗಮನಕ್ಕೆ ತಂದು ತಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ:  ನನ್ನ ಮಗಳು ಹೆಣ್ಣು ಸಿಂಹ, ನಾವು ಯಾವುದಕ್ಕೂ ಹೆದರಲ್ಲ: ರಾಗಿಣಿ ತಾಯಿ

    ಜಾಮೀನು ಬೇಡ: ಇತ್ತ ಸಿಸಿಬಿ ಪರ ವಕೀಲರು, ನ್ಯಾಯಾಲಯ ಮುಂದೆ ಮುಚ್ಚಿದ ಲಕೋಟೆಯಲ್ಲಿ ಕೆಲ ಸಿಡಿಗಳನ್ನು ಸಲ್ಲಿಸಿದರು. ಪ್ರಕರಣ ತನಿಖಾ ಹಂತದಲ್ಲಿ ಇರೋದರಿಂದ ಸಿಡಿಯಲ್ಲಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಆರೋಪಿ ರವಿಶಂಕರ್ ಹೇಳಿಕೆಯ ಆಧಾರದ ಮೇಲೆ ಎಫ್‍ಐಆರ್ ದಾಖಲಾಗಿದೆ. ವಿಚಾರಣೆ ವೇಳೆ ಬಯಲಿಗೆ ಬಂದ ಅಂಶಗಳ ಮೇಲೆ ತನಿಖೆ ನಡೆಯುತ್ತಿದೆ. ಡ್ರಗ್ ಸೇವನೆ ಮಾಡಿರುವುದೇ ಒಳ್ಳೆಯ ಎವಿಡೆನ್ಸ್ ಆಗುತ್ತೆ. ತನಿಖೆ ಮುಗಿಯುವ ಮುನ್ನವೇ, ಜಾಮೀನು ನೀಡುವುದು ಸರಿಯಲ್ಲ ಎಂದು ವಾದಿಸಿದ್ದರು. ಇದನ್ನೂ ಓದಿ:  ಕಾಂಗ್ರೆಸ್‌ ಸೇರಲು ಮುಂದಾಗಿದ್ರಾ ರಾಗಿಣಿ? – ಕೆಪಿಸಿಸಿ ಚರ್ಚೆಯ ಇನ್‌ಸೈಡ್‌ ಸ್ಟೋರಿ

    ರಾಗಿಣಿ ಪರ ವಕೀಲರ ವಾದ: ಕಕ್ಷಿದಾರರು ಸಿಸಿಬಿ ಪೊಲೀಸರ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಕಕ್ಷಿದಾರರ ಪರ ಯಾವುದೇ ಆರೋಪಗಳಿಲ್ಲ ಮತ್ತು ಸಾಕ್ಷ್ಯ ಇಲ್ಲ. ಈ ಹಂತದಲ್ಲಿ ಕಕ್ಷಿದಾರರಿಗೆ ಜಾಮೀನು ನೀಡಬಹುದು. ಪೊಲೀಸರು ಆತುರದಲ್ಲಿ ತನಿಖೆಯ ದಿಕ್ಕು ತಲುಪಿಸು ಕೆಲಸ ಮಾಡುತ್ತಿದ್ದಾರೆ. ಪ್ರಕರಣ ಒಂದೇ ದಿಕ್ಕಿನಲ್ಲಿ ಸಾಗದೇ, ಬೇರೆ ಬೇರೆ ಆಯಾಮಗಳಲ್ಲಿ ಸಾಗಿ ನಮ್ಮ ಕಕ್ಷಿದಾರರನ್ನು ಸಿಲುಕಿಸುವ ಹುನ್ನಾರ ಮಾಡಲಾಗುತ್ತಿದೆ. ಪೊಲೀಸರು ರಾಗಿಣಿ ಆರೋಪಿ ಎಂದು ಕಲ್ಪನೆ ಮಾಡಿಕೊಂಡಿದ್ದಾರೆ. ಕಲ್ಪನೆಯಲ್ಲಿ ತನಿಖೆ ಸಾಗುತ್ತಿದೆ ಎಂದು ವಾದಿಸಿದ್ದರು. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಲ್ಲಿ ರಾಗಿಣಿ, ಸಂಜನಾಗೆ ರಾಜಾತಿಥ್ಯ

    ರಾಗಿಣಿ ಡ್ರಗ್ಸ್ ದಂಧೆಯಲ್ಲಿ ಆ್ಯಕ್ಟೀವ್ ಮೆಂಬರ್: ರಾಗಿಣಿ ಐದು ವರ್ಷಗಳಿಂದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ನಡೆದ ಡ್ರಗ್ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು. ಡ್ರಗ್ಸ್ ಪೆಡ್ಲರ್ ಗಳ ಗ್ಯಾಂಗ್ ಜೊತೆಯಲ್ಲಿ ರಾಗಿಣಿ ಮೋಜು ಮಸ್ತಿ ನಡೆಸಿದ್ದಾರೆ. ಪಾರ್ಟಿಗಳಿಗೆ ಬಂದವರಿಗೆ ರಾಗಿಣಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು. ಆಂಧ್ರ ಪ್ರದೇಶ, ಗೋವಾ, ಮುಂಬೈ, ಪಂಜಾಬ್ ಮತ್ತು ವಿದೇಶಗಳಿಂದಲೂ ಡ್ರಗ್ಸ್ ತೆರೆಸಿಕೊಂಡಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ರಾಗಿಣಿಯ ಆ?ಯಕ್ಟಿವ್ ಮೆಂಬರ್. ಎಂಡಿಎಂಎ, ಎಲ್ ಎಸ್‍ಡಿ, ಕೋಕೆನ್ ಕೊಡುತ್ತಿದ್ದರು. ಆರೋಪಿಗಳ ಜೊತೆ ನಡೆಸಿರುವ ಸಂಭಾಷಣೆಯ ಡಿಜಿಟಲ್ ಸಾಕ್ಷ್ಯವಿದೆ. ಮೂತ್ರ ಪರೀಕ್ಷೆ ವೇಳೆ ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದರು ಎಂಬ ಅಂಶಗಳನ್ನು ಉಲ್ಲೇಖಿಸಿ ಸಿಸಿಬಿ ವಕೀಲರು ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ್ದರು. ಇದನ್ನೂ ಓದಿ: ರಾಗಿಣಿ, ಸಂಜನಾಗೆ ಜೈಲಿನಲ್ಲಿಯೇ ಇಡಿ ಡ್ರಿಲ್

  • ರಾಗಿಣಿ, ಸಂಜನಾಗೆ ಜೈಲಿನಲ್ಲಿಯೇ ಇಡಿ ಡ್ರಿಲ್

    ರಾಗಿಣಿ, ಸಂಜನಾಗೆ ಜೈಲಿನಲ್ಲಿಯೇ ಇಡಿ ಡ್ರಿಲ್

    ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಸೆರೆವಾಸದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯನ್ನು ಇಡಿ (ಜಾರಿ ನಿರ್ದೇಶನಾಲಯ) ವಿಚಾರಣೆ ನಡೆಸಲಿದೆ. ನಾಳೆಯಿಂದ ಜೈಲಿನಲ್ಲಿಯೇ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ ನ್ಯಾಯಲಯದ ಅನುಮತಿ ಪಡೆದುಕೊಂಡಿದೆ.

    ಡ್ರಗ್ಸ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದ ಹಿನ್ನೆಲೆ ಇಡಿ ಪ್ರಕರಣ ದಾಖಲಿಸಿಕೊಂಡಿತ್ತು. ಡ್ರಗ್ಸ್ ಪ್ರಕರಣದಲ್ಲಿ ಇಬ್ಬರೂ ನಟಿಯರನ್ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಐದು ದಿನಗಳ ಕಾಲ ಇಡಿ ಅಧಿಕಾರಿಗಳು ಜೈಲಿನಲ್ಲಿ ವಿಚಾರಣೆಗೆ ಕೋರ್ಟ್ ಅನುಮತಿ ನೀಡಿದೆ. ನಾಳೆಯಿಂದ ಒಟ್ಟು ಐದು ದಿನ ಇಡಿ ಇಬ್ರು ನಟಿಯರನ್ನು ವಿಚಾರಣೆಗೆ ಒಳಪಡಿಸಲಿದೆ. ರವಿಶಂಕರ್, ವೀರೇನ್ ಖನ್ನಾ, ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

    ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ನಾಳೆಗೆ ಮುಂದೂಡಿಕೆ ಆಗಿದೆ. ಪ್ರತೀಕ್ ಶೆಟ್ಟಿ ಜಾಮೀನು ಅರ್ಜಿ ವಿಚಾರಣೆ 28 ಕ್ಕೆ ಮುಂದೂಡಿಕೆಯಾಗಿದೆ. ಆರೋಪಿಗಳಾದ ನಿಯಾಜ್ ಅಹಮ್ಮದ್ ಮತ್ತು ವೈಭವ್ ಜೈನ್ ಜಾಮೀನು ಅರ್ಜಿ ಸಹ ಸೆಪ್ಟೆಂಬರ್ 29ಕ್ಕೆ ಮುಂದೂಡಿಕೆಯಾಗಿದೆ.

  • ಡ್ರಗ್ಸ್ ದಂಧೆಯಲ್ಲಿ ರಾಗಿಣಿ ಆ್ಯಕ್ಟಿವ್ ಮೆಂಬರ್ – ಸೆ.24ರವರೆಗೂ ರಾಗಿಣಿ, ಸಂಜನಾಗೆ ಜೈಲು ಫಿಕ್ಸ್

    ಡ್ರಗ್ಸ್ ದಂಧೆಯಲ್ಲಿ ರಾಗಿಣಿ ಆ್ಯಕ್ಟಿವ್ ಮೆಂಬರ್ – ಸೆ.24ರವರೆಗೂ ರಾಗಿಣಿ, ಸಂಜನಾಗೆ ಜೈಲು ಫಿಕ್ಸ್

    – ಸೆ. 24ಕ್ಕೆ ಜಾಮೀನು ಅರ್ಜಿ ಮುಂದೂಡಿಕೆ
    – ಮೂರು ದಿನ ನಟಿಯರಿಗೆ ಜೈಲೂಟ

    ಬೆಂಗಳೂರು: ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ಎನ್‍ಡಿಪಿಎಸ್ ವಿಶೇಷ ಕೋರ್ಟ್, ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿ ಆದೇಶಿಸಿದೆ.

    ನಟಿ ಸಂಜನಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಗೆ ಸಿಸಿಬಿ ಕಾಲಾವಕಾಶ ಕೇಳಿತ್ತು. ಸಿಸಿಬಿ ಮನವಿಗೆ ಸಮ್ಮಿಸಿದ ನ್ಯಾಯಾಲಯ ಸಂಜನಾ ಬೇಲ್ ಅರ್ಜಿಯನ್ನ ಸೆಪ್ಟೆಂಬರ್ 24ಕ್ಕೆ ಮುಂದೂಡಲಾಗಿದೆ. ಹಾಗಾಗಿ ಸಂಜನಾ ಇನ್ನು ಮೂರು ದಿನ ಪರಪ್ಪನ ಅಗ್ರಹಾರದಲ್ಲಿರಬೇಕಾಗಿದೆ. ರಾಗಿಣಿ ಅರ್ಜಿಯ ವಿಚಾರಣೆ ನಡೆಸಿದ್ದು, ಆದೇಶವನ್ನು ಸೆಪ್ಟೆಂಬರ್ 24ಕ್ಕೆ ನ್ಯಾಯಾಧೀಶರು ಕಾಯ್ದಿರಿಸಿದ್ದಾರೆ.

    ನಟಿ ರಾಗಿಣಿ ವಿರುದ್ಧ ಸಿಸಿಬಿ ಪರ ವಕೀಲರು 12 ಪುಟಗಳ ಆಕ್ಷೇಪಣೆ ಸಲ್ಲಿಸಿ, ಆರೋಪಿಗಳು ಜಾಮೀನು ನೀಡಬಾರದು. ಆರೋಪಿಗಳು ಪ್ರಭಾವಿಗಳಾಗಿದ್ದು, ಪ್ರಕರಣದ ತನಿಖೆಗೆ ಅಡ್ಡಿಯುಂಟಾಗಬಹುದು. ಇವರ ವಿರುದ್ಧ ಗಂಭೀರ ಆರೋಪಗಳಿದ್ದು, ಈ ಹಂತದಲ್ಲಿ ಜಾಮೀನು ಕೊಡುವುದು ಸರಿಯಲ್ಲ ಎಂದು ವಾದ ಮಂಡಿಸಿದ್ದರು.

    ರಾಗಿಣಿ ಐದು ವರ್ಷಗಳಿಂದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ನಡೆದ ಡ್ರಗ್ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು. ಡ್ರಗ್ಸ್ ಪೆಡ್ಲರ್ ಗಳ ಗ್ಯಾಂಗ್ ಜೊತೆಯಲ್ಲಿ ರಾಗಿಣಿ ಮೋಜು ಮಸ್ತಿ ನಡೆಸಿದ್ದಾರೆ. ಪಾರ್ಟಿಗಳಿಗೆ ಬಂದವರಿಗೆ ರಾಗಿಣಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು. ಆಂಧ್ರ ಪ್ರದೇಶ, ಗೋವಾ, ಮುಂಬೈ, ಪಂಜಾಬ್ ಮತ್ತು ವಿದೇಶಗಳಿಂದಲೂ ಡ್ರಗ್ಸ್ ತೆರೆಸಿಕೊಂಡಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ರಾಗಿಣಿಯ ಆ್ಯಕ್ಟಿವ್ ಮೆಂಬರ್. ಎಂಡಿಎಂಎ, ಎಲ್ ಎಸ್‍ಡಿ, ಕೋಕೆನ್ ಕೊಡುತ್ತಿದ್ದರು. ಆರೋಪಿಗಳ ಜೊತೆ ನಡೆಸಿರುವ ಸಂಭಾಷಣೆಯ ಡಿಜಿಟಲ್ ಸಾಕ್ಷ್ಯವಿದೆ. ಮೂತ್ರ ಪರೀಕ್ಷೆ ವೇಳೆ ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದರು ಎಂಬ ಅಂಶಗಳನ್ನು ಉಲ್ಲೇಖಿಸಿ ಸಿಸಿಬಿ ವಕೀಲರು ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.

    ರಾಗಿಣಿ ಪರ ವಕೀಲ ಕಲ್ಯಾಣ್ ಕೃಷ್ಣ, ಕಕ್ಷಿದಾರರು ಸಿಸಿಬಿ ಪೊಲೀಸರ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಕಕ್ಷಿದಾರರ ಪರ ಯಾವುದೇ ಆರೋಪಗಳಿಲ್ಲ ಮತ್ತು ಸಾಕ್ಷ್ಯ ಇಲ್ಲ. ಈ ಹಂತದಲ್ಲಿ ಕಕ್ಷಿದಾರರಿಗೆ ಜಾಮೀನು ನೀಡಬಹುದು. ಪೊಲೀಸರು ಆತುರದಲ್ಲಿ ತನಿಖೆಯ ದಿಕ್ಕು ತಲುಪಿಸು ಕೆಲಸ ಮಾಡುತ್ತಿದ್ದಾರೆ. ಪ್ರಕರಣ ಒಂದೇ ದಿಕ್ಕಿನಲ್ಲಿ ಸಾಗದೇ, ಬೇರೆ ಬೇರೆ ಆಯಾಮಗಳಲ್ಲಿ ಸಾಗಿ ನಮ್ಮ ಕಕ್ಷಿದಾರರನ್ನು ಸಿಲುಕಿಸುವ ಹುನ್ನಾರ ಮಾಡಲಾಗುತ್ತಿದೆ. ಪೊಲೀಸರು ರಾಗಿಣಿ ಆರೋಪಿ ಎಂದು ಕಲ್ಪನೆ ಮಾಡಿಕೊಂಡಿದ್ದಾರೆ. ಕಲ್ಪನೆಯಲ್ಲಿ ತನಿಖೆ ಸಾಗುತ್ತಿದೆ.

    ಎಫ್‍ಐಆರ್ ದಾಖಲಾದ ಬಳಿಕ ರಾಗಿಣಿ ಮನೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ರಾಗಿಣಿ ಮನೆಯಲ್ಲಿ ಎರಡು ಫೋನ್ ಮತ್ತು ಆರು ಆರ್ಗೆನಿಕ್ಸ್ ಸಿಗರೇಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಎಫ್‍ಐಆರ್ ಯಾಕೆ ಬಂಧನವಾಗಿದೆ ಎಂಬುದನ್ನ ಉಲ್ಲೇಖಿಸಿಲ್ಲ. ವೈಭವ್ ನಿಂದ ಸ್ವಲ್ಪ ಸ್ವಲ್ಪ ಡ್ರಗ್ಸ್ ಖರೀದಿಸಿದ್ದ ಎಂದು ರವಿಶಂಕರ್ ಹೇಳಿಕೆ ಉಲ್ಲೇಖಿಸಿದ ರಾಗಿಣಿ ಪರ ವಕೀಲರು, ಕಮರ್ಶಿಯಲ್ ಕ್ವಾಂಟೆಟಿ ಕಡಿಮೆ. ಇದು ಅಪರಾಧವಲ್ಲ. ರವಿಶಂಕರ್ ಮತ್ತು ವೈಭವ್ ಜೈನ್ ನಿಂದ ಕಡಿಮೆ ಪ್ರಮಾಣದಲ್ಲಿ ಡ್ರಗ್ಸ್ ಖರೀದಿಸಿದ್ದಾರೆ. ಇದು ಕಮರ್ಶಿಯಲ್ ಕ್ವಾಂಟಿಟಿ ಕಡಿಮೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

    ಡ್ರಗ್ಸ್ ಪ್ರಕರಣದಲ್ಲಿ ಇಬ್ಬರೂ ನಟಿಯರು ನ್ಯಾಯಾಂಗ ಬಂಧನದಡಿ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಶನಿವಾರ ವಿಚಾರಣೆ ನಡೆದಾಗ ಸಿಸಿಬಿ ಪರ ವಕೀಲರು, ಎಲ್ಲ ಅರ್ಜಿಗಳು ಒಂದಕ್ಕೊಂದು ಲಿಂಕ್ ಹೊಂದಿವೆ. ಎಲ್ಲ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಸೋಮವಾರದವರೆಗೂ ಸಮಯ ಕೇಳಿದ್ದರು. ಇಂದು ಜಾಮೀನು ಅರ್ಜಿ ವಿಚಾರಣೆ ನ್ಯಾಯಾಲಯದ ಮುಂದೆ ಬಂದಿತ್ತು. ಶನಿವಾರ ಅರ್ಜಿದಾರರ ಪರ ವಕೀಲರು, ಸಿಸಿಬಿ ವಕೀಲರು ಕಾಲಹರಣ ಮಾಡುತ್ತಿದ್ದಾರೆ ಎಂದು ವಾದ ಮಂಡಿಸಿದ್ದರು.

    ರಾಗಿಣಿ ಡ್ರಗ್ಸ್ ಕನ್ಸೂಮರ್ ಅಲ್ಲವೇ ಅಲ್ಲ. ಸಿಸಿಬಿ ಪೊಲೀಸರು ಪ್ಲಾನ್ ಮಾಡಿಕೊಂಡ ರೀತಿಯಲ್ಲಿ ತನಿಖೆ ನಡೆಯುತ್ತಿದೆ. ರಾಗಿಣಿ ಸಂಪೂರ್ಣ ಅಮಾಯಕರು. ಉದ್ದೇಶಪೂರ್ವಕವಾಗಿ ರಾಗಿಣಿಯವರನ್ನು ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ. ರಾಗಿಣಿ ಸಂಪೂರ್ಣ ಅಮಾಯಕರು ಎಂದು ಹೇಳಿ ಕಲ್ಯಾಣ್ ಕೃಷ್ಣ ವಾದ ಅಂತ್ಯ ಮಾಡಿದರು.

  • ಇಂದು ರಾಗಿಣಿ, ಸಂಜನಾಗೆ ಬೇಲ್ ಸಿಗುತ್ತಾ ಇಲ್ಲ ಮತ್ತೆ ಜೈಲಾ?

    ಇಂದು ರಾಗಿಣಿ, ಸಂಜನಾಗೆ ಬೇಲ್ ಸಿಗುತ್ತಾ ಇಲ್ಲ ಮತ್ತೆ ಜೈಲಾ?

    ಬೆಂಗಳೂರು: ನಟಿ ರಾಗಿಣಿ ಮತ್ತು ಸಂಜನಾ ಸಲ್ಲಿಸಿರುವ ಬೇಲ್ ಅರ್ಜಿಯ ವಿಚಾರಣೆ ಇಂದು ಬೆಂಗಳೂರಿನ ಎನ್‍ಡಿಪಿಎಸ್ ಕೋರ್ಟ್‍ನಲ್ಲಿ ನಡೆಯಲಿದೆ.

    ಸದ್ಯ ಇಬ್ಬರೂ ನಟಿಯರು ನ್ಯಾಯಾಂಗ ಬಂಧನದಡಿ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಶನಿವಾರ ವಿಚಾರಣೆ ನಡೆದಾಗ ಸಿಸಿಬಿ ಪರ ವಕೀಲರು ಎಲ್ಲ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಸೋಮವಾರದವರೆಗೂ ಸಮಯ ಕೇಳಿದ್ದರು.

    ಆಕ್ಷೇಪಣೆ ಪ್ರಮುಖವಾದ ಅಂಶಗಳು ಯಾವುವು..?
    ಈಗಾಗಲೇ ಸಾಕ್ಷ್ಯ ನಾಶದ ಆರೋಪ ಇದೆ. ಹೀಗಾಗಿ ಮತ್ತೆ ಸಾಕ್ಷ್ಯ ನಾಶ ಮಾಡ್ತಾರೆ. ಇವರಿಂದ ಮತ್ತಷ್ಟು ಆರೋಪಿಗಳು ಬಚವಾಗೋ ಸಾಧ್ಯತೆ ಇದೆ. ಅಲ್ಲದೆ ಜಾಮೀನು ಸಿಕ್ಕರೆ ಮತ್ತೆ ವಿಚಾರಣೆಗೆ ಸ್ಪಂದಿಸೋದಿಲ್ಲ. ಪ್ರಭಾವಿಗಳ ಸಹಾಯ ಇದೆ. ತನಿಖಾ ಹಾದಿ ತಪ್ಪಲಿದೆ. ಡ್ರಗ್ಸ್ ಪೆಡ್ಲರ್ ಗಳು ಅನ್ನೋದನ್ನ ಆರೋಪಿಗಳು ಈಗಾಗಲೇ ಒಪ್ಪಿದ್ದಾರೆ. ಸಮಾಜದ ಸ್ವಾಸ್ಥ್ಯ ಹಾಳಾಗುತ್ತೆ, ಓಆPS ಪ್ರಬಲವಾದ ಪ್ರಕರಣ. ರಾಜ್ಯ ಬಿಟ್ಟು ಹೋಗುವ ಭಯ ಕೂಡ ಇದ್ದು, ಅರ್ಗನೈಸ್ಡ್ ಕ್ರೈಂ ಇದು, ಜಾಮೀನು ಸಿಕ್ಕರೆ ಸಹಾಯ ಆಗಲಿದೆ ಎಂಬುದು ಆಕ್ಷೇಪಣೆಯ ಪ್ರಮುಖ ಅಂಶಗಳಾಗಿವೆ.

    ರಾಗಿಣಿಗೆ ಜಾಮೀನು ಸಿಗದೆ ಇರಲು ಕಾರಣಗಳು ಏನು?
    ರಾಗಿಣಿ ಬಂಧನ ಪ್ರಕರಣದಲ್ಲಿ ಹಾಕಿರುವ ಸೆಕ್ಷನ್ ಗಳು, ಅದರಲ್ಲೂ 21ಛಿ ರಾಗಿಣಿ ಪಾಲಿಗೆ ಬಿಸಿ ತುಪ್ಪ ಆಗಲಿದೆ. ಇಂತಹ ಕೇಸ್ ನಲ್ಲಿ ಸೆಷನ್ಸ್ ಕೊರ್ಟ್ ಬೇಲ್ ನೀಡೋದು ಕಡಿಮೆ. ಸಿಸಿಬಿ ಬಳಿ ಪ್ರಮುಖ ಸಾಕ್ಷಿಗಳು ಇದೆ. ದಾಳಿ ವೇಳೆಯಲ್ಲಿ ರಾಗಿಣಿ ಲಾಕ್ ಮಾಡುವ ಸಾಕ್ಷಿ ಸಿಕ್ಕಿವೆ. ನೊಟೀಸ್ ಗೆ ಉತ್ತರ ನೀಡದೇ ಸಾಕ್ಷಿ ನಾಶ ಪ್ರಯತ್ನ ಆರೋಪ ಮುಖ್ಯವಾಗಲಿದೆ. ಕಷ್ಟಡಿಯಲ್ಲಿದ್ದೂ ವಿಚಾರಣೆಗೆ ಸಹಕರಿಸದ ಆರೋಪ ಇದೆ. ಈ ಕಾರಣಗಳಿಂದ ಸದ್ಯ ರಾಗಿಣಿಗೆ ಜಾಮೀನು ಕನಸಿನ ಮಾತಾಗಿದೆ.

  • ಪರಪ್ಪನ ಅಗ್ರಹಾರ ಜೈಲಲ್ಲಿ ರಾಗಿಣಿ, ಸಂಜನಾಗೆ ರಾಜಾತಿಥ್ಯ

    ಪರಪ್ಪನ ಅಗ್ರಹಾರ ಜೈಲಲ್ಲಿ ರಾಗಿಣಿ, ಸಂಜನಾಗೆ ರಾಜಾತಿಥ್ಯ

    ಬೆಂಗಳೂರು: ಡ್ರಗ್ಸ್ ಕೇಸ್ಸಲ್ಲಿ ಬಂಧಿತರಾಗಿರೋ ಸಂಜನಾ ಹಾಗೂ ರಾಗಿಣಿಗೆ ಜೈಲಲ್ಲಿ ರಾಜಾತಿಥ್ಯ ನೀಡುತ್ತಿರೋದು ಬಹಿರಂಗವಾಗಿದೆ. ಇದೀಗ ಜೈಲಲ್ಲಿ ಈ ನಟಿಮಣಿಯರಿಗೆ ಜೈಲೂಟದ ಬದಲು ಮನೆ ಊಟ ಒದಗಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

    ಕೋರ್ಟ್ ಆದೇಶ ಇಲ್ಲದೇ ಆರೋಪಿಗಳಿಗೆ ಜೈಲು ಸಿಬ್ಬಂದಿಯೊಬ್ಬರ ಮನೆಯಿಂದ ನಿತ್ಯ ರುಚಿ ರುಚಿಯಾದ ಊಟ ಪೂರೈಕೆ ಮಾಡಲಾಗುತ್ತಿದೆ. ಈ ಬೆನ್ನಲ್ಲೇ ಸಾಮಾನ್ಯರಿಗೆ ಒಂದು ಕಾನೂನು, ಸೆಲೆಬ್ರಿಟಿಗಳಿಗೆ ಒಂದು ಕಾನೂನಾ ಅನ್ನೋ ಪ್ರಶ್ನೆ ಎದ್ದಿದೆ.

    ಇತ್ತ ಕಳೆದ ನಾಲ್ಕು ದಿನಗಳಿಂದ ಜೈಲಿನಲ್ಲಿರುವ ಸಂಜನಾದ್ದು ಒಂದಲ್ಲ ಒಂದು ರಗಳೆ ಇದ್ದೇ ಇರುತ್ತೆ. ನಿನ್ನೆ ಸಿಗರೇಟ್ ಬೇಕು ಅಂತ ಗಲಾಟೆ ಮಾಡಿದ್ದ ಸಂಜನಾ, ಇಂದು ನನಗೆ ಚಿಕನ್ ಊಟನೇ ಬೇಕು ಅಂತ ಕಿರಿಕ್ ಮಾಡಿದರು. ಈಕೆಯ ರಂಪಾಟಕ್ಕೆ ಹೈರಾಣದ ಜೈಲಾಧಿಕಾರಿಗಳು ಮನೆ ಊಟದ ವ್ಯವಸ್ಥೆ ಮಾಡಿದ್ರು. ಸಂಜನಾಳ ಈ ವರ್ತನೆ ಆಕೆ ಡ್ರಗ್ಸ್ ಅಡಿಕ್ಟ್ ಆಗಿದ್ರಾ ಅನ್ನೋ ಅನುಮಾನ ಮೂಡಿಸಿದೆ.

    ಸಂಜನಾ ಫುಲ್ ವೈಲೆಂಟ್ ಆದ್ರೆ ರಾಗಿಣಿ ಮಾತ್ರ ಮಾತ್ರ ಫುಲ್ ಕೂಲಾಗಿದ್ದಾರೆ. ಇಂಗ್ಲೀಷ್ ಕಾದಂಬರಿ ಓದುತ್ತಾ, ದೇವರ ಪೂಜೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಈ ಮಧ್ಯೆ ನಟಿ ಸಂಜನಾ, ರಾಗಿಣಿ ಸೇರಿದಂತೆ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಆಕ್ಷೇಪಣೆ ಸಲ್ಲಿಸಲು ಸಿಸಿಬಿ ಕಾಲಾವಕಾಶ ಕೋರಿದ ಕಾರಣ, ಕೋರ್ಟ್ ವಿಚಾರಣೆ ಮುಂದೂಡಿದೆ. ಹೀಗಾಗಿ ಇನ್ನೂ ಎರಡು ದಿನ ಇಬ್ಬರು ನಟಿಮಣಿಯರು ಜೈಲಿನಲ್ಲೇ ಕಳೆಯೋ ಪರಿಸ್ಥಿತಿ ಬಂದೊದಗಿದೆ.

  • ಇಬ್ಬರ ಜೊತೆ ಬಂದು ಸಂಜನಾ ಮತಾಂತರ: ಮೌಲ್ವಿ ಮಹಮ್ಮದ್ ಜಲಾಲುದ್ದಿನ್

    ಇಬ್ಬರ ಜೊತೆ ಬಂದು ಸಂಜನಾ ಮತಾಂತರ: ಮೌಲ್ವಿ ಮಹಮ್ಮದ್ ಜಲಾಲುದ್ದಿನ್

    -ಸ್ವಇಚ್ಛೆಯ ಮೇರೆಗೆ ಮತಾಂತರ

    ಬೆಂಗಳೂರು: 2018ರಲ್ಲಿ ಇಬ್ಬರು ಜೊತೆ ಬಂದಿದ್ದ ಸಂಜನಾ ಗಲ್ರಾನಿ ಸ್ವಇಚ್ಛೆಯ ಮೇರೆಗೆ ಮತಾಂತರ ಆಗಿದ್ದಾರೆ ಎಂದು ಬೆಂಗಳೂರಿನ ಟ್ಯಾನಿ ರಸ್ತೆಯ ಅರೆಬಿಕ್ ಮದರಸದ ಧರ್ಮ ಗುರು ಮಹಮ್ಮದ್ ಜಲಾಲುದ್ದಿನ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜಲಾಲುದ್ದಿನ್, ಅರ್ಚನಾ ಗರ್ಲಾನಿ 09-10-2018 ರಂದು ಇಮ್ತಿಯಾಜ್ ಅಹ್ಮದ್ ಮತ್ತು ಅಸ್ಲಂ ಪಾಷಾ (ಬೆಂಗಳೂರಿನ ನಿವಾಸಿಗಳು) ಎಂಬವರ ಜೊತೆಗೆ ಬಂದು ನನ್ನನ್ನ ಭೇಟಿಯಾದರು. ಕೋರ್ಟ್ ಅಫಿಡವಿಟ್ ಸಹಾ ತಗೆದುಕೊಂಡು ಬಂದಿದ್ದರು. ಇಸ್ಲಾಂನ ತತ್ವ ಆದರ್ಶಗಳನ್ನ ಒಪ್ಪಿಕೊಂಡು ಇಸ್ಲಾಂ ಧರ್ಮ ಸ್ವೀಕರಿಸಲು ಬಂದಿದ್ದೇನೆ ಎಂದರು. ಯಾವುದೇ ಒತ್ತಡ ಇಲ್ಲದೆ ಮತಾಂತರ ಆಗುತಿದ್ದೇನೆ ಎಂದರು. ನಾವು ಸಹ ಕೋರ್ಟ್ ಅಫಿಡವಿಟ್ ಇಲ್ಲದೇ ಮತಾಂತರ ಕಾರ್ಯಕ್ಕೆ ಮುಂದಾಗಲ್ಲ. ನಾನೇ ಅವರನ್ನ ಇಸ್ಲಾಂ ಧರ್ಮ ಸ್ವೀಕಾರದ ಕಾರ್ಯ ನೆರವೇರಿಸಿದೆ ಎಂದರು ಹೇಳಿದರು. ಇದನ್ನೂ ಓದಿ: ಮತಾಂತರ ಆಗಿದ್ದಾರಾ ಗಂಡ-ಹೆಂಡತಿ ನಟಿ ಸಂಜನಾ

    ಇಸ್ಲಾಂ ಧರ್ಮ ಸ್ವೀಕಾರದ ಬಳಿಕ ಅವರಿಗೆ ಎಲ್ಲ ಮಾಹಿತಿ ನೀಡುತ್ತೇವೆ. ಅವರು ನಮಾಜ್, ಹಜ್, ಜಕಾತ್, ರೋಜಾ, ಕಲ್ಮಾ ಎಲ್ಲವನ್ನು ಒಪ್ಪಿಕೊಂಡಿದ್ದರು. ನಾನು ಸ್ವಇಚ್ಛೆಯ ಮೇರೆಗೆ ಮತಾಂತರ ಆಗುತ್ತೇನೆ ಎಂದು ಹೇಳಿರೋದು ದಾಖಲೆಗಳಲ್ಲಿದೆ. ಮತಾಂತರಗೊಳ್ಳಲು ಆಗಮಿಸುವ ಜನರ ದಾಖಲಾತಿ ಕೇಳುತ್ತೇವೆ. ನಮಗೂ ಅವರ ಬಗ್ಗೆ ಹೆಚ್ಚಿನ ಮಾಹಿತಿ ಇರಲ್ಲ. ಮದುವೆ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಿಲ್ಲ. ಮತಾಂತರಗೊಂಡ ನಂತರ ನಾವು ಅವರಿಗೆ ಬದಲಾದ ಧರ್ಮ ಮತ್ತು ಹೆಸರಿನ ಕುರಿತು ದೃಢೀಕರಣದ ದಾಖಲೆಗಳನ್ನು ನೀಡುತ್ತೇವೆ. ಎಲ್ಲ ದಾಖಲೆಗಳಲ್ಲಿ ಮತಾಂತರಗೊಂಡ ವ್ಯಕ್ತಿಯ ಸಹಿ ಪಡೆದುಕೊಳ್ಳುತ್ತೇವೆ. ಇದನ್ನೂ ಓದಿ: ನನಗೆ ಸಿಗರೇಟ್ ಕೊಡಿ- ಜೈಲಿನಲ್ಲಿ ಸಂಜನಾ ಮತ್ತೆ ಕಿರಿಕ್

    ಇಲ್ಲಿಂದ ಬಂದ ಹೋದಮೇಲೆ ಸಂಜನಾ ಏನು ಮಾಡಿದ್ರು ಅನ್ನೋದು ನಮಗೆ ಗೊತ್ತಿಲ್ಲ. ಈ ರೀತಿಯ ಕೆಟ್ಟ ಕೆಲಸಗಳಿಂದ ದೂರವಾಗಲಿ, ಅವರು ಮನಸ್ಸು ಪರಿವರ್ತನೆಯಾಗಲಿ ಎಂದು ನಾವು ಅಲ್ಲಾನಲ್ಲಿ ಪ್ರಾರ್ಥಿಸುತ್ತೇವೆ. ತಾನು ಮಾಡಿದ ಕೆಲಸ ಕೆಟ್ಟದ್ದು ಅಂದು ಪ್ರಾಯಶ್ಚಿತವಾಗಿ ಕಣ್ಣೀರು ಹಾಕಿ ಪ್ರಾರ್ಥಿಸಿದ್ರೆ ಅಲ್ಲಾನ ಕ್ಷಮೆಗೆ ಪಾತ್ರರಾಗುತ್ತಾರೆ.  ಇದನ್ನೂ ಓದಿ: ಡ್ರಗ್ಸ್ ಪ್ರಕರಣ – ಅಕುಲ್ ಬಾಲಾಜಿಗೆ ಸಿಸಿಬಿ ನೋಟಿಸ್

    ಕಲ್ಮಾ ಓದಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಳಿಕವೂ ಇಂತಹ ಕೆಲಸಗಳಲ್ಲಿ ಭಾಗಿಯಾಗಿ ಜೈಲು ಸೇರಿರೋದಕ್ಕೆ ನಮಗೆ ದುಃಖವಿದೆ. ತಮ್ಮ ತಪ್ಪು ತಿದ್ದಿಕೊಳ್ಳಲು ಅವರು ನಮ್ಮ ಬಳಿ ಬರುವ ಅಗತ್ಯವಿಲ್ಲ. ಅವರು ಇದ್ದ ಜಾಗದಲ್ಲಿಯೇ ಅಲ್ಲಾನಲ್ಲಿ ಪ್ರಾರ್ಥಿಸಿ ಆತನಲ್ಲಿ ಕ್ಷಮೆ ಕೇಳಬೇಕು. ನಾವು ಅವರಿಗೆ ಒಳ್ಳೆಯ, ನೀತಿ ಮಾರ್ಗದಲ್ಲಿ ನಡೆಯುವಂತಾಗಲಿ. ಎಲ್ಲ ಪ್ರಕರಣಗಳಿಂದ ಮುಕ್ತರಾಗಿ ಹೊರ ಬರಲಿ ಎಂದು ನಾವು ಸಹ ಅಲ್ಲಾನಲ್ಲಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು.

  • ‘ಆ’ ಫೋಟೋ ಹಾಕಿ ಹೊಗಳಿದ್ದ ಸಂಜನಾ!

    ‘ಆ’ ಫೋಟೋ ಹಾಕಿ ಹೊಗಳಿದ್ದ ಸಂಜನಾ!

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪರಪ್ಪನ ಅಗ್ರಹಾರ ಸೇರಿರುವ ನಟಿ ಸಂಜನಾ ಗಲ್ರಾನಿ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರಾ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಮತಾಂತರ ಸುದ್ದಿಗೆ ಪುಷ್ಠಿ ಎಂಬಂತೆ ಸಂಜನಾ ಸಿನಿಮಾ ಶೂಟಿಂಗ್ ಗೆ ಬುರ್ಖಾ ಧರಿಸಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಆ ಧರ್ಮವನ್ನು ಹೊಗಳಿರುವುದು ಬೆಳಕಿಗೆ ಬಂದಿದೆ.

    ಹೌದು, ಅಂದು ಬ್ಲಾಕ್ ಆಂಡ್ ವೈಟ್ ಫೋಟೋ ಪೋಸ್ಟ್ ಮಾಡಿದ್ದ ಸಂಜನಾ, ಇಸ್ಲಾಂ ಧರ್ಮದ ಬಗ್ಗೆ ಅತೀವ ಒಲವು ತೋರಿರುವ ಸಂಜನಾ, ಇಸ್ಲಾಂ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಪ್ರಭಾವಿತಳಾಗಿದ್ದೇನೆ. ಅಲ್ಲದೆ ಧರ್ಮದ ಬಗ್ಗೆ ಆಕರ್ಷಿತಳಾಗಿದ್ದೇನೆ ಎಂದು ಬರೆದುಕೊಳ್ಳುವ ಮೂಲಕ ಮುಸ್ಲಿಂ ಧರ್ಮವನ್ನು ಹೊಗಳಿದ್ದರು. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರು ದಾಖಲೆ ಬಿಡುಗಡೆ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ ನಟಿ 2014ರಲ್ಲೇ ಮತಾಂತರಕ್ಕೆ ಮನಸ್ಸು ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ.

    https://www.instagram.com/p/qJh3xiuY0n/

    ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಅವರ ಹೆಸರು ಕೇಳಿ ಬಂದ ಸಮಯದಿಂದಲೂ ಅವರ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದೆ. ಬಂಧನದ ಮುನ್ನ 32 ವರ್ಷವಾದರೂ ಇನ್ನು ಮದುವೆಯೇ ಆಗಿಲ್ಲ. ನನ್ನ ಕ್ಯಾರೆಕ್ಟರ್ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸಂಜನಾ ಆರೋಪಿಸಿದ್ದರು. ಆದರೆ ಆ ಬಳಿಕ ಅವರು ವೈದ್ಯರೊಬ್ಬರನ್ನು ಕಳೆದ ವರ್ಷವೇ ಮದುವೆಯಾಗಿದ್ದರು ಎಂಬ ಫೋಟೋ ಸಾಕಷ್ಟು ವೈರಲ್ ಆಗಿತ್ತು.

    ಡಾ. ಅಜೀಜ್ ಪಾಷಾ ಅವರ ಪರಿಚಯವಾದ ಬಳಿಕ ಪ್ರೇಮ ಪಾಶಕ್ಕೆ ಸಿಲುಕಿದ್ದ ಸಂಜನಾ ಮತಾಂತರವಾಗಿ ಮದುವೆಯಾಗಿದ್ದರು ಎಂಬ ಮಾಹಿತಿ ಪೊಲೀಸ್ ಉನ್ನತ ಮೂಲಗಳಿಂದ ಲಭಿಸಿದೆ. ಮದುವೆಯಾದ ಬಳಿಕ ಕೆಲ ಸಮಯ ವೈದ್ಯರೊಂದಿಗೆ ವಾಸವಿದ್ದರು. 7 ತಿಂಗಳ ಹಿಂದೆಯಷ್ಟೇ ಇಬ್ಬರ ನಡುವೆ ವೈಮನಸ್ಸು ಮೂಡಿದ್ದ ಕಾರಣದಿಂದ ದೂರವಾಗಿದ್ದರು. ಚಿತ್ರರಂಗದಲ್ಲಿ ಇರುವ ಕಾರಣ ತಮ್ಮ ಮದುವೆ ಹಾಗೂ ಮತಾಂತರದ ಮಾಹಿತಿಯನ್ನು ಸಂಜನಾ ಮುಚ್ಚಿಟ್ಟಿದ್ದರು ಎನ್ನಲಾಗಿದೆ. ಇದನ್ನೂ ಓದಿ:  ಡ್ರಗ್ಸ್ ಕೇಸ್ – ನಟ ಸಂತೋಷ್, ಐಂದ್ರಿತಾ ಕಾಲೆಳೆದ ಪ್ರಶಾಂತ್ ಸಂಬರಗಿ

    ಸಂಜನಾ ಮದುವೆಯಾಗಿರುವ ಅಧಿಕೃತ ಮಾಹಿತಿ ಲಭಿಸಿಲ್ಲ. ಆದರೆ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ರಾಹುಲ್ ತಂದೆ ರಾಮಚಂದ್ರ ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡುವ ವೇಳೆ ಸಂಜನಾ ಪತಿಯ ವಿಚಾರವನ್ನು ಪ್ರಸ್ತಾಪಿಸಿದ್ದರು. ನನಗೆ ಹೃದಯ ಸಂಬಂಧಿ ಖಾಯಿಲೆ ಇದೆ. ಸಂಜನಾ ಪತಿಯೇ ನನಗೆ ಚಿಕಿತ್ಸೆ ನೀಡಿದ್ದರು. ಸಂಜನಾ ಪತಿ ಕೂಡ ನನ್ನ ಮಗ ರಾಹುಲ್‍ಗೆ ಪರಿಚಯವಿದ್ದು, ಸಂಜನಾ ಪತಿ ಡಾಕ್ಟರ್ ಆಗಿದ್ದು ನನಗೆ ಸಹಾಯ ಮಾಡಿದ್ರು ಎಂದು ಹೇಳಿದ್ದರು.

    https://www.instagram.com/p/pIjfkbOYx2/

    ತೆಲುಗು ಕಾರ್ಯಕ್ರಮ ಸಂದರ್ಶನವೊಂದರಲ್ಲಿ 2018ರಲ್ಲಿ ಮಾತನಾಡಿದ್ದ ಸಂಜನಾ ತಮ್ಮ ಪ್ರೀತಿಯ ಬಗ್ಗೆ ಹೇಳಿದ್ದರು. ನಾನು ಪ್ರೀತಿಸುತ್ತಿರುವ ಹುಡುಗ ಡಾಕ್ಟರ್ ಆಗಿದ್ದು, ನನ್ನ ಕುಟುಂಬದವರಿಗೂ ಪರಿಚಯವಿದೆ. ಮನೆಗೂ ಬಂದು ಹೋಗುತ್ತಾರೆ. ಬೆಂಗಳೂರಿನ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಅವರನ್ನು ಪರಿಚಯವಾಗಿದ್ದರು. ನನ್ನ ವೃತ್ತಿ ಜೀವನದ ಆರಂಭದಲ್ಲಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ವೇಳೆ ಅವರನ್ನು ನೋಡಿದ್ದೆ, ಮೊದಲ ನೋಟದಲ್ಲೇ ಅವರ ಮೇಲೆ ಪ್ರೀತಿ ಮೂಡಿತ್ತು ಎಂದು ಸಂಜನಾ ಹೇಳಿದ್ದರು.

    https://www.youtube.com/watch?v=dt5fTVectHE

  • ನನಗೆ ಸಿಗರೇಟ್ ಕೊಡಿ- ಜೈಲಿನಲ್ಲಿ ಸಂಜನಾ ಮತ್ತೆ ಕಿರಿಕ್

    ನನಗೆ ಸಿಗರೇಟ್ ಕೊಡಿ- ಜೈಲಿನಲ್ಲಿ ಸಂಜನಾ ಮತ್ತೆ ಕಿರಿಕ್

    ಬೆಂಗಳೂರು: ಸಿಸಿಬಿ ನೋಟಿಸ್ ನೀಡಿದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಕಿರಿಕ್ ಮಾಡುತ್ತಿರುವ ನಟಿ ಸಂಜನಾಗಲ್ರಾನಿ ಇದೀಗ ಜೈಲಿನಲ್ಲಿ ಮತ್ತೆ ಕ್ಯಾತೆ ತೆಗೆದಿದ್ದಾರೆ.

    ಸಂಜನಾ ಎರಡು ದಿನಗಳ ನ್ಯಾಯಾಂಗ ಬಂಧನ ಇಂದು ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ನಟಿ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ್ದು, ಈ ಹಿನ್ನೆಲೆಯಲ್ಲಿ ನಟಿಯ ಅರ್ಜಿ ವಿಚಾರಣೆ ನಾಳೆ ನಡೆಯಲಿದೆ. ಇದರಿಂದ ಟೆನ್ಶನ್ ಗೆ ಒಳಗಾಗಿರುವ ನಟಿ, ನನಗೆ ಸಿಗರೇಟ್ ಕೋಡಿ ಎಂದು ಜೈಲು ಸಿಬ್ಬಂದಿ ಮುಂದೆ ರಂಪಾಟ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ನಟಿಯ ರಂಪಾಟದಿಂದ ಬೇಸತ್ತ ಜೈಲು ಸಿಬ್ಬಂದಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸದ್ಯ ಸಂಜನಾಳ ಮನವೊಲಿಸಲು ಜೈಲಿನ ಅಧಿಕಾರಿಗಳು ಕಷ್ಟ ಪಡುತ್ತಿದ್ದಾರೆ.

    ಈ ಹಿಂದೆ ನಟಿ ಪರಪ್ಪನ ಅಗ್ರಹಾರ ಜೈಲಿನೊಳಗೆ ಹೋಗುವ ವೇಳೆಯೂ ತಕರಾರು ತೆಗೆದಿದ್ದರು. ಜೈಲಿಗೆ ಎಂಟ್ರಿ ಕೊಡುವಾಗಲೂ ಕಿರಿಕ್ ಮಾಡಿರುವ ಸಂಜನಾ, ಇಷ್ಟು ಚಿಕ್ಕ ಗೇಟ್‍ನಲ್ಲಿ ನಾನು ಹೋಗಲ್ಲ. ನಾನು ಹೋಗಲ್ಲ..ಹೋಗಲ್ಲ ಎಂದು ಹಠಕ್ಕೆ ಬಿದ್ದಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ಒಳಗೆ ಹೋಗಿ ಎಂದು ಹೇಳಿದ್ದಾರೆ. ನಂತರ ಒಂದು ನಿಮಿಷದ ಬಳಿಕ ಸಂಜನಾ ಒಳಗೆ ಹೋಗಿದ್ದರು.

     

  • ಇಷ್ಟು ಚಿಕ್ಕ ಗೇಟ್‍ನಲ್ಲಿ ನಾನು ಹೋಗಲ್ಲ – ಜೈಲಿನಲ್ಲೂ ಸಂಜನಾ ಕಿರಿಕ್

    ಇಷ್ಟು ಚಿಕ್ಕ ಗೇಟ್‍ನಲ್ಲಿ ನಾನು ಹೋಗಲ್ಲ – ಜೈಲಿನಲ್ಲೂ ಸಂಜನಾ ಕಿರಿಕ್

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ನೋಟಿಸ್ ಕೊಟ್ಟಾಗಿನಿಂದಲೂ ತಗಾದೆ ತೆಗೆಯುತ್ತಿದ್ದ ನಟಿ ಸಂಜನಾ ಗಲ್ರಾನಿ ಇಂದು ಪರಪ್ಪನ ಅಗ್ರಹಾರ ಜೈಲಿನೊಳಗೆ ಹೋಗುವ ವೇಳೆಯೂ ಕಿರಿಕ್ ಮುಂದುವರಿಸಿದ್ದಾರೆ.

    ಹೌದು. ಜೈಲಿಗೆ ಎಂಟ್ರಿ ಕೊಡುವಾಗಲೂ ಕಿರಿಕ್ ಮಾಡಿರುವ ಸಂಜನಾ, ಇಷ್ಟು ಚಿಕ್ಕ ಗೇಟ್‍ನಲ್ಲಿ ನಾನು ಹೋಗಲ್ಲ. ನಾನು ಹೋಗಲ್ಲ..ಹೋಗಲ್ಲ ಎಂದು ಹಠಕ್ಕೆ ಬಿದ್ದಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ಒಳಗೆ ಹೋಗಿ ಎಂದು ಹೇಳಿದ್ದಾರೆ. ನಂತರ ಒಂದು ನಿಮಿಷದ ಬಳಿಕ ಸಂಜನಾ ಒಳಗೆ ಹೋಗಿದ್ದಾರೆ.

    ಸಂಜನಾರನ್ನು ಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದಂತೆಯೇ ಇತ್ತ ಪರಪ್ಪನ ಅಗ್ರಹಾರದ ಮುಂದೆ ಫುಲ್ ಟೈಟ್ ಪೊಲೀಸ್ ಸೆಕ್ಯೂರಿಟಿ ಕೈಗೊಳ್ಳಲಾಗಿತ್ತು. ಜೈಲು ಆವರಣದಿಂದ 500 ಮೀಟರ್ ದೂರದಲ್ಲಿಯೇ ಬ್ಯಾರಿಕೇಡ್ ಹಾಕಲಾಗಿತ್ತು. ಒಳಗಡೆ ಯಾರಿಗೂ ಪ್ರವೇಶ ನೀಡದೆ ಸಾರ್ವಜನಿಕರನ್ನೂ ಮುಖ್ಯ ರಸ್ತೆಯಲ್ಲೇ ತಡೆದಿದ್ದರು. ಇದನ್ನೂ ಓದಿ: ಸಂಜನಾಗೆ 2 ದಿನ, ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ಯಾಕೆ?

    ಸಾಂತ್ವನ ಕೇಂದ್ರದಿಂದ ಸಂಜನಾರನ್ನು ಲಗೇಜ್ ಸಮೇತ ಪರಪ್ಪನ ಅಗ್ರಹಾರಕ್ಕೆ ಸಿಸಿಬಿ ಪೊಲೀಸರು ಕಳುಹಿಸಿದರು. ಈಕೆಯ ಜೊತೆಗೆ ವೀರೇನ್ ಖನ್ನಾ ಮತ್ತು ರವಿಶಂಕರ್ ನನ್ನೂ ಕೂಡ ಸಿಸಿಬಿ ಪೊಲೀಸರು ಕರೆದೊಯ್ದಿದ್ದಾರೆ. ರಾಜ್ಯ ಮಹಿಳಾ ನಿಲಯದಿಂದ ಪರಪ್ಪನ ಅಗ್ರಹಾರ ರೂಮ್ ನಂ.4ರಲ್ಲಿ ಸಂಜನಾರನ್ನು ಸಿಸಿಬಿ ಪೊಲೀಸರು ಬಿಟ್ಟು ಬಂದಿದ್ದಾರೆ. ಈ ಮೂಲಕ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ ಕನ್ನಡದ ಎರಡನೇ ನಟಿಯಾಗಿದ್ದಾರೆ.

    ಇನ್ನು ಸಿಸಿಬಿ ಪೊಲೀಸರು ಸಾಂತ್ವನ ಕೇಂದ್ರದಿಂದ ಕರೆದುಕೊಂಡು ಬರುವಾಗ ವಾಹನದಲ್ಲಿ ಸಂಜನಾ ಮಲಗಿಕೊಂಡೇ ಬಂದಿದ್ದಾರೆ. ಮಾಧ್ಯಮಗಳ ಕಣ್ತಪ್ಪಿಸೋದರ ಜೊತೆಗೆ ತೀವ್ರ ಅಸ್ವಸ್ಥರಾದಂತೆ ಬಿಂಬಿಸಿಕೊಳ್ಳುವ ಮೂಲಕ ಮತ್ತೆ ಹೈಡ್ರಾಮ ಶುರು ಮಾಡಿದ್ದರು.

     

  • ಮತ್ತೆ ಪೊಲೀಸ್ ಕಸ್ಟಡಿಗೆ ಕೇಳ್ಬೇಡಿ- ಅಧಿಕಾರಿಗಳ ಮುಂದೆ ರಾಗಿಣಿ, ಸಂಜನಾ ಗೋಳು

    ಮತ್ತೆ ಪೊಲೀಸ್ ಕಸ್ಟಡಿಗೆ ಕೇಳ್ಬೇಡಿ- ಅಧಿಕಾರಿಗಳ ಮುಂದೆ ರಾಗಿಣಿ, ಸಂಜನಾ ಗೋಳು

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಯಿಂದ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ರೋಸಿ ಹೋಗಿದ್ದಾರೆ. ಹೀಗಾಗಿ ಮತ್ತೆ ಪೊಲೀಸ್ ಕಸ್ಟಡಿಗೆ ಕೇಳಬೇಡಿ ಎಂದು ಪೊಲೀಸರ ಬಳಿ ನಟಿಯರು ಗೋಳಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಪೊಲೀಸ್ ಕಸ್ಟಡಿ ಸಾಕಪ್ಪಾ ಸಾಕು. ಬೇಕಾದರೆ ಕಸ್ಟಡಿಯಿಂದ ನಮ್ಮನ್ನ ಜೈಲಿಗೆ ಕಳಿಸಿ ಎಂದು ನಟಿಮಣಿಯರು ಕೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಪೊಲೀಸರ ತನಿಖೆಯಿಂದ ರೋಸಿ ಹೋಗಿರುವ ನಟಿಯರಿಗೆ ಕಸ್ಟಡಿಯಲ್ಲಿ ಇದ್ದಷ್ಟು ದಿನ ಬೇಲ್ ಸಿಗೋದಿಲ್ಲ ಅನ್ನೋದು ಗೊತ್ತಾಗಿದೆ. ಹೀಗಾಗಿ ಪೊಲೀಸ್ ಕಸ್ಟಡಿಗೆ ಮತ್ತೆ ತೆಗೆದುಕೊಳ್ಳಬೇಡಿ ಅಂತ ತನಿಖಾಧಿಕಾರಿ ಮುಂದೆ ರಾಗಿಣಿ ಮತ್ತು ಸಂಜನಾ ತಮ್ಮ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

    ಮೆಡಿಕಲ್ ಅಲ್ಲಿ, ಇಲ್ಲಿ ಕರೆದೊಯ್ಯುತ್ತಿರುತ್ತೀರಿ. ಮಾಧ್ಯಮದವರು ಕೂಡ ನಮ್ಮನ್ನು ಫಾಲೋ ಮಾಡಿಕೊಂಡು ಬರುತ್ತಿದ್ದಾರೆ. ಜನ ನಮ್ಮನ್ನ ನೋಡ್ತಿರೋದ್ರಿಂದ ಮುಜುಗರವಾಗ್ತಿದೆ. ದಯಮಾಡಿ ಕಸ್ಟಡಿ ಅಂತ್ಯ ಮಾಡಿಕೊಡಿ ಅಂತ ಹೇಳುತ್ತಿದ್ದು, ನಟಿಮಣಿಯರು ನ್ಯಾಯಾಂಗ ಬಂಧನಕ್ಕೆ ಹೋದ್ರೆ ಬೇಲ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: ವೈಭವ್ ಜೈನ್ ವೈಭವಕ್ಕೆ ತುಪ್ಪದ ಹುಡ್ಗಿ ಫುಲ್ ಸೈಲೆಂಟ್

    ನಾಳೆ ತುಪ್ಪದ ಬೆಡಗಿಯ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ಹೀಗಾಗಿ ಎನ್‍ಡಿಪಿಎಸ್ ಕೋರ್ಟಿನಲ್ಲಿ ರಾಗಿಣಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಈ ಜಾಮೀನು ಅರ್ಜಿಯ ವಿಚಾರಣೆ ನಾಳೆ ನಡೆಯಲಿದೆ.

    ಇತ್ತ ನಾಳೆ ಎನ್‍ಡಿಪಿಎಸ್ ಕೋರ್ಟಿಗೆ ನಟಿ ಸಂಜನಾ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಇದೇ ವೇಳೆ 1ನೇ ಎಸಿಎಂಎಂ ಕೋರ್ಟಿನಲ್ಲಿ ವಿಚಾರಣೆ ನಡೆಯಲಿದೆ. ನಾಳೆಯೇ ರಾಗಿಣಿ, ಸಂಜನಾ ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಮತ್ತಷ್ಟು ದಿನ ಇಬ್ಬರೂ ನಟಿಯರನ್ನ ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳುವ ಸಾಧ್ಯತೆಗಳು ಹೆಚ್ಚಾಗಿವೆ.