ಲಾಕ್‌ಡೌನ್ ಸಮಯದಲ್ಲಿ ಡಾ. ಅಜೀಜ್ ಪಾಷಾ ಅವರನ್ನ ಪ್ರೀತಿಸಿ ವಿವಾಹವಾಗಿದ್ದರು. 2022ರ ಮೇ ತಿಂಗಳಲ್ಲಿ ಸಂಜನಾ ಗಲ್ರಾನಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಅಜೀಜ್ ಪಾಷಾ ಮತ್ತು ಸಂಜನಾ ದಂಪತಿಗೆ ‘ಅಲಾರಿಕ್’ ಹೆಸರಿನ ಮಗನಿದ್ದಾನೆ.
2006ರಲ್ಲಿ ‘ಗಂಡ ಹೆಂಡತಿ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಸಂಜನಾ ಎಂಟ್ರಿ ಕೊಟ್ಟರು. ಜಾಕ್ ಪಾಟ್, ಆಟೋಗ್ರಾಫ್ ಪ್ಲೀಸ್, ಸತ್ಯಮೇವ ಜಯತೇ, ಮಸ್ತ್ ಮಜಾ ಮಾಡಿ, ಹುಡುಗ ಹುಡುಗಿ, ಮೈಲಾರಿ ಮತ್ತು ನರಸಿಂಹ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
‘ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆ ಕುರಿತು ಇನ್‌ಸ್ಟಾ ಪೋಸ್ಟ್‌ವೊಂದನ್ನು ಅವರು ಹಂಚಿಕೊಂಡಿದ್ದಾರೆ. ಪ್ರತಿಯೊಂದು ಕ್ರಿಯೆಗೂ ಸಮನಾದ ಹಾಗೂ ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ. ನಾನು ದೇಶಪ್ರೇಮಿಯೇ, ಅದೇ ಸಮಯದಲ್ಲಿ ಸಂಪೂರ್ಣ ಶಾಂತಿ ಪ್ರಿಯಳೂ ಹೌದು. ಸಣ್ಣ ಅಥವಾ ದೊಡ್ಡ ಯುದ್ಧದ ಯಾವುದೇ ಸೂಚನೆಯು ದೇಶದ ಖ್ಯಾತಿಗೆ ಒಳ್ಳೆಯದಲ್ಲ. ಅದು ಭಾರತದ ಆರ್ಥಿಕತೆ, ಅಂತಾರಾಷ್ಟ್ರೀಯ ಪ್ರವಾಸಿಗರ ಮೇಲೆ ಪರಿಣಾಮ ಬೀರಬಹುದು. ಯುದ್ಧದಲ್ಲಿ ಭಾಗಿಯಾದ ದೇಶಕ್ಕೆ ಆಗುವ ಹಾನಿಯಾಗುವುದೇ ಹೆಚ್ಚು. ಅದು ಊಹೆಗೂ ಮೀರಿದ್ದಾಗಿದೆ. ತಕ್ಷಣವೇ ಎಲ್ಲವೂ ಶಾಂತಿಯೊಂದಿಗೆ ಕೊನೆಗೊಳ್ಳಲಿ ಎಂದು ಕೇಳಿಕೊಳ್ಳುತ್ತೇನೆ. ಜೈ ಹಿಂದ್ ಎಂದು ಸಂಜನಾ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಆಪರೇಷನ್ ಸಿಂಧೂರ: ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸುವ ನಮ್ಮ ಸೈನಿಕರಿಗೆ ಥ್ಯಾಂಕ್ಯೂ ಎಂದ ರಶ್ಮಿಕಾ ಮಂದಣ್ಣ
ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಬಲಿಯಾಗಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ 9 ಅಡಗುತಾಣಗಳ ಮೇಲೆ ದಾಳಿ ನಡೆಸುವ ಪ್ರತೀಕಾರ ತೀರಿಸಿಕೊಂಡಿದೆ. ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ 100 ಉಗ್ರರನ್ನ ಹತ್ಯೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಬಿಳಿ ಬಣ್ಣದ ಸೀರೆಯುಟ್ಟು ನಟಿ ಮಿಂಚಿದ್ದಾರೆ. ಮಗನೊಂದಿಗೆ ಕುಳಿತು ಕ್ಯಾಮೆರಾಗೆ ಸಂಜನಾ ಪೋಸ್ ನೀಡಿದ್ದಾರೆ. ನಟಿಯ ಮುಖದಲ್ಲಿ ಪ್ರೆಗ್ನೆನ್ಸಿ ಗ್ಲೋ ಎದ್ದು ಕಾಣುತ್ತಿದೆ. ಇದನ್ನೂ ಓದಿ:ಸಂಜನಾ ಗಲ್ರಾನಿ ಮತ್ತೆ ಗರ್ಭಿಣಿ – 2ನೇ ಮಗುವಿನ ನಿರೀಕ್ಷೆಯಲ್ಲಿ ನಟಿ
ತಾಯ್ತನ ಒಂದು ಸುಂದರವಾದ ಪ್ರಯಾಣವಾಗಿದ್ದು, ಹಲವು ಸವಾಲುಗಳೊಂದಿಗೆ ಬೆರೆತು ಹೋಗಿದೆ. 2ನೇ ಬಾರಿ ತಾಯಿ ಆಗೋದು ಅಷ್ಟು ಸುಲಭವಾಗಿರಲಿಲ್ಲ. 35ನೇ ವಯಸ್ಸಿನಲ್ಲಿ ಎದುರಿಸಬೇಕಾದ ಸವಾಲುಗಳು ಬಹಳಷ್ಟಿದ್ದವು ಎಂದು ನಟಿ ಬರೆದುಕೊಂಡಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಎಂದಿದ್ದಾರೆ.
ಇತ್ತೀಚೆಗೆ ಯುಗಾದಿಯಂದು (ಮಾ.30) ತಾವು 2ನೇ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದರು ಸಂಜನಾ.
ಲಾಕ್‌ಡೌನ್ ಸಮಯದಲ್ಲಿ ವೈದ್ಯ ಅಜೀಜ್ ಪಾಷಾರನ್ನು ನಟಿ ಮದುವೆಯಾದರು. 2022ರಲ್ಲಿ ಚೊಚ್ಚಲ ಮಗುವನ್ನು ಸಂಜನಾ ಬರಮಾಡಿಕೊಂಡರು. ಅವರಿಗೆ ಅಲಾರಿಕ್ ಎಂಬ ಹೆಸರಿನ ಮಗನಿದ್ದಾನೆ. ಸದ್ಯ ಎರಡನೇ ಮಗುವಿನ ಆಗಮನಕ್ಕಾಗಿ ಸಂಜನಾ ದಂಪತಿ ಎದುರು ನೋಡ್ತಿದ್ದಾರೆ.
ನಟಿ ರನ್ಯಾ ರಾವ್ ಬೆನ್ನಲ್ಲೇ ಮತ್ತಿಬ್ಬರು ಸ್ಯಾಂಡಲ್‌ವುಡ್ ನಟಿಯರಿಗೆ ಮಾಸ್ಟರ್ ಸ್ಟ್ರೋಕ್ ಎದುರಾಗಿದೆ. ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸಲ್ಲಿ ಇಬ್ಬರು ನಟಿಯರಿಗೆ ಸಿಸಿಬಿ ಶಾಕ್ ನೀಡಿದೆ.
ನಟಿ ಸಂಜನಾ ಮತ್ತು ರಾಗಿಣಿ ಎಫ್‌ಐಆರ್ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಿಸಿಬಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ.
ಸಿಸಿಬಿ ಡ್ರಗ್ಸ್ ಕೇಸಲ್ಲಿ ಎಫ್‌ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ನಟಿಯರು ಅರ್ಜಿ ಸಲ್ಲಿಸಿದ್ದರು. ನಟಿ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಹಾಗೂ ವೀರೇನ್ ಖನ್ನಾನ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದು ಮಾಡಿತ್ತು.
ಗೃಹ ಇಲಾಖೆ ಮತ್ತು ಕಾನೂನು ಇಲಾಖೆಯ ಸಮ್ಮತಿ ಬಳಿಕ ಸುಪ್ರೀಂಗೆ ಸಿಸಿಬಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋಗಲು ಕಾನೂನು ಇಲಾಖೆ ಅಸ್ತು ಎಂದಿತ್ತು. ಆ ಬಳಿಕ ಗೃಹ ಇಲಾಖೆಯಿಂದ ಅನುಮತಿ ಪಡೆದು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದೆ. ಹೈಕೋರ್ಟ್ ಆದೇಶ ರದ್ದುಗೊಳಿಸುವಂತೆ ಸಿಸಿಬಿ, ಸುಪ್ರೀಂ ಮೊರೆ ಹೋಗಿದೆ.
ನಟಿ ಸಂಜನಾ ಗಲ್ರಾನಿಗೆ ಡ್ರಗ್ಸ್ ಪ್ರಕರಣದಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ. ಕೇಸ್ ಸಂಬಂಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಗಲ್ರಾನಿ ಸಿಲುಕಿದ ಬಳಿಕ ಹೈಕೋರ್ಟ್‌ನಲ್ಲಿ ಪ್ರಕರಣ ರದ್ದು ಮಾಡಿಸಿಕೊಂಡಿದ್ದರು. ಆದರೀಗ, ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್‌ಗೆ ಹೋಗಲು ತಯಾರಿ ಮಾಡಿದೆ. ಬಹುತೇಕ ಈ ತಿಂಗಳ ಅಂತ್ಯದ ಒಳಗಾಗಿ ರದ್ದಾಗಿರೋ ಎಫ್‌ಐಆರ್ ಆದೇಶವನ್ನು ಪ್ರಶ್ನೆ ಮಾಡಲಿದ್ದಾರೆ.
ನಟಿ ವಿರುದ್ಧ ಮೇಲ್ಮನವಿ ಸಲ್ಲಿಕೆಗೆ ನಿರ್ಧರಿಸಲಾಗಿದೆ. ಹೈಕೋರ್ಟ್‌ನಲ್ಲಿ ಪ್ರಕರಣ ವಜಾ ಬಳಿಕ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ತಯಾರಿ ನಡೆದಿದೆ. ಸಿಸಿಬಿ ಪೊಲೀಸರಿಂದ ಸಂಜನಾ ಅವರನ್ನು ಬಂಧಿಸಲಾಗಿತ್ತು. ಜೈಲಿನಲ್ಲಿ ಇದ್ದು ಜಾಮೀನಿನ ಮೇಲೆ ನಟಿ ಹೊರಗೆ ಬಂದಿದ್ದರು. ಹೀಗಾಗಿ, ಸಂಜನಾ ಗಲ್ರಾನಿ ವಿರುದ್ಧ ಮೇಲ್ಮನವಿ ಸಲ್ಲಿಕೆ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. ಈಗಾಗಲೇ ಸಭೆ ನಡೆಸಿ ಸರ್ಕಾರದ ಮಟ್ಟದಲ್ಲಿ ಅರ್ಜಿ ತಯಾರಿಯಾಗಿದೆ. ಪ್ರಾಸಿಕ್ಯೂಷನ್ ಅನುಮತಿ ಬರುತ್ತಾ ಇದ್ದಂತೆ ಅರ್ಜಿ ಸಲ್ಲಿಕೆ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.
ದರ್ಶನ್‌ಗೆ (Darshan) ಬೇಲ್ (Bail) ಸಿಕ್ಕ ಬೆನ್ನಲ್ಲೇ ನಟಿ ಸಂಜನಾ ಗಲ್ರಾನಿ (Sanjjanaa Galrani) ಸಂತಸ ವ್ಯಕ್ತಪಡಿಸಿದ್ದಾರೆ. ದೀಪಾವಳಿ ಹೊತ್ತಲ್ಲೇ ಅವರು ಹೊರಬರುತ್ತಿದ್ದಾರೆ. ಇದು ದೀಪಾವಳಿ ಗಿಫ್ಟ್ ಎಂದು ಸಂಜನಾ ಗಲ್ರಾನಿ ಖುಷಿಯಿಂದ ಮಾತನಾಡಿದ್ದಾರೆ. ಇದನ್ನೂ ಓದಿ:5 ತಿಂಗಳ ಬಳಿಕ ದರ್ಶನ್ ರಿಲೀಸ್ – ಹೈಕೋರ್ಟ್‌ನಿಂದ 6 ವಾರಗಳ ಜಾಮೀನು ಮಂಜೂರು
ದರ್ಶನ್ ಅವರಿಗೆ ಜಾಮೀನು ಸಿಕ್ಕಿರೋದು ಒಂದು ರೀತಿ ಖುಷಿ ಇದೆ. ಒಂದು ರೀತಿ ದುಃಖ ಇದೆ. ಇಷ್ಟು ಸ್ಟ್ರಿಕ್ಸ್ ಆಗಿ ಕೇವಲ 6 ವಾರಗಳ ಕಾಲ ಜಾಮೀನು ನೀಡಿದ್ದಾರೆ. ಅವರಿಗೆ ಗಂಭೀರವಾಗಿ ಹೆಲ್ತ್ ಸಮಸ್ಯೆ ಇದೆ ಎಂಬುದನ್ನು ನಾವೆಲ್ಲಾ ನೋಡ್ತಾ ಇದ್ವಿ. ಅವರಿಗೆ ಫುಲ್ ಬೇಲ್ ಆಗಬೇಕು ಎಂದು ನಾನು ದೇವರಲ್ಲಿ ಕೇಳಿಕೊಳ್ಳುತ್ತಿದ್ದೆ, ಈಗ ಅವರಿಗೆ ಒಳ್ಳೆಯ ಚಿಕಿತ್ಸೆ ಸಿಗುತ್ತೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ ಸಂಜನಾ ಗಲ್ರಾನಿ.
ದರ್ಶನ್ ಅವರಿಗೆ ಫುಲ್ ಬೇಲ್ ಆಗಬೇಕಿತ್ತು. ಏಕೆಂದರೆ ಅವರೀಗ ಆರೋಪಿಯಷ್ಟೇ ಅಪರಾಧಿ ಅಲ್ಲ. ಪ್ರತಿಯೊಬ್ಬ ಆರೋಪಿ ಬೇಲ್ ಅನ್ನೋದು ಅವರ ಅಧಿಕಾರ, ಅದು ಕಾನೂನು ಪ್ರಕಾರ ಕೂಡ. ಡ್ರಗ್ಸ್ ಕೇಸ್ ಪ್ರಕರಣದಲ್ಲಿ ನನಗೆ ಈಗ ಕ್ಲೀನ್ ಚಿಟ್ ಸಿಕ್ಕಿದೆ, ಆ ಸಮಯದಲ್ಲಿ ನನಗೂ ಹೆಲ್ತ್ ಸಮಸ್ಯೆಯಿಂದ ನನಗೆ ಫುಲ್ ಬೇಲ್ ಆಗಿತ್ತು. ಮುಂದೆ ದರ್ಶನ್ ಅವರಿಗೂ ಕ್ಲೀನ್ ಚಿಟ್ ಸಿಗಬೇಕು ಅಂತ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.
ದರ್ಶನ್ ಪರ ಲಾಯರ್ ಸಿವಿ ನಾಗೇಶ್ ಅವರ ಮೇಲೆ ಗೌರವ ಇದೆ. ಎಲ್ಲಾ ದರ್ಶನ್ ಅಭಿಮಾನಿಗಳು ಅವರಿಗೆ ರೆಸ್ಟ್ ಮಾಡೋಕೆ ಬಿಡಬೇಕು. ದೀಪಾವಳಿ ಹೊತ್ತಲ್ಲಿ ದರ್ಶನ್ ಹೊರಬರುತ್ತಿದ್ದಾರೆ. ನಮಗೂ ಮತ್ತು ದರ್ಶನ್ ಅಭಿಮಾನಿಗಳಿಗೆ ಇದೇ ದೀಪಾವಳಿ ಹಬ್ಬ ಎಂದು ಸಂಜನಾ ಗಲ್ರಾನಿ ಸಂತಸ ವ್ಯಕ್ತಪಡಿಸಿದ್ದಾರೆ.
ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿಗೆ (Sanjjanaa Galrani) ಡ್ರಗ್ಸ್ ಕೇಸ್‌ನಲ್ಲಿ (Drugs Case) ಬಿಗ್ ರಿಲೀಫ್ ಸಿಕ್ಕಿದೆ. ನಟಿಯ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ. ಈ ಡ್ರಗ್ಸ್ ಪ್ರಕರಣದಲ್ಲಿ ನನ್ನದೇನೂ ತಪ್ಪಿರಲಿಲ್ಲ ಎಂದು ನಟಿ ಸಂಜನಾ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮೇಲೆ ಕೆಲವರು ಟಾರ್ಗೆಟ್ ಮಾಡಿದ್ದಾರೆ ಎಂದು ನಟಿ ಕಣ್ಣೀರಿಟ್ಟಿದ್ದಾರೆ.
ಈಗ ನಿರಾಳ ಅನ್ನಿಸುತ್ತಿದೆ. ಆದರೂ ಬೇಸರ ಆಗ್ತಿದೆ. ಈ ಪ್ರಕರಣದಲ್ಲಿ ನನ್ನದೇನೂ ತಪ್ಪಿರಲಿಲ್ಲ. ಆದರೂ ಯಾರೂ ಒಬ್ಬರು ನನ್ನ ವೈಯಕ್ತಿಕ ದ್ವೇಷದಿಂದ ಸಿಲುಕುವಂತೆ ಮಾಡಿದರು. ನನ್ನದೇನೂ ತಪ್ಪಿಲ್ಲದೆ ಈ ಪ್ರಕರಣದಲ್ಲಿ ವಿಕ್ವಿಮ್ ಆದೆ ಎಂದಿದ್ದಾರೆ. ಕೆಲವರು ನನ್ನ ಹೆಸರು ಬಳಸಿಕೊಂಡು ಮುಂದಕ್ಕೆ ಹೋಗೋಕೆ ನೋಡಿದರು. ನನ್ನ ಮೇಲೆ ಬೇಕಂತಲೇ ಟಾರ್ಗೆಟ್ ಮಾಡಿದರು. ಬರೀ ಮಾತಲ್ಲಿ ಒಬ್ಬ ನನ್ನ ಹೆಸರು ಹೇಳಿದ ಅದಕ್ಕೆ ಅಲ್ವೇ ಇವತ್ತು ಈ ಕೇಸ್ ರದ್ದು ಆಗಿದ್ದು ಎಂದು ಸಂಜನಾ ಗಲ್ರಾನಿ ಮಾತನಾಡಿದ್ದಾರೆ.
ನಾನಂತೂ ಈ ಪ್ರಕರಣ ಆದ್ಮೇಲೆ ಸಾಕಷ್ಟು ನೋವು ಅನುಭವಿಸಿದೆ. ಅದು ಯಾವತ್ತೂ ಹೋಗಲ್ಲ. ದೇವರ ದಯೆ ಒಳ್ಳೆಯ ಕುಟುಂಬ ಕೊಟ್ಟಿದ್ದಾರೆ. ಕೃಷ್ಣನಂತ ಮಗನ ಕೊಟ್ಟ ಈ ಪ್ರಕರಣ ಆದ್ಮೇಲೆ ನನಗೆ ಸಿನಿಮಾ ಅವಕಾಶವೂ ಇರಲಿಲ್ಲ. ಸಂಭಾವನೆ ವಿಚಾರ ಮಾತನಾಡಿದ್ರೆ ಡ್ರಗ್ಸ್ ಕೇಸ್‌ನಲ್ಲಿ ಇದ್ರಿ ನೋವು ಅಂತ ಮಾತನಾಡ್ತಾರೆ ಎಂದು ಸಂಜನಾ ಭಾವುಕರಾದರು. ಇದನ್ನೂ ಓದಿ:‘ಇಂಡಿಯನ್ 2’ ಬಜೆಟ್ ಮೀರಲು ಕಾರಣ ತಿಳಿಸಿದ ಕಮಲ್ ಹಾಸನ್
ನನ್ನನ್ನು ಬರೀ ಟ್ರೋಲ್ ಮಾಡ್ತಿದ್ರು. ಕೆಟ್ಟದಾಗಿ ನಿಂದಿಸುತ್ತಿದ್ದರು. ಈಗ ಡ್ರಗ್ಸ್ ಪ್ರಕರಣದ ಬಗ್ಗೆ ಸತ್ಯ ಗೊತ್ತಾಗಿದೆ. ನನಗೆ ಈ ಬಗ್ಗೆ ನೆನಪು ಮಾಡ್ಕೊಂಡು ಮಾತಾಡೋಕೆ ಇಷ್ಟ ಇಲ್ಲ. ತಾಳ್ಮೆಯಿಂದ ಕಾದಿದ್ದಕ್ಕೆ ನ್ಯಾಯ ಸಿಕ್ಕಿದೆ. ನನ್ನನ್ನು ಟ್ರೋಲ್ ಮಾಡಬೇಡಿ. ಒಂದು ಮೆಸೇಜ್, ಟ್ರೋಲ್‌ನಿಂದ ಏನಾಗುತ್ತೆ ಅನ್ನೋದಕ್ಕೆ ರೇಣುಕಾಸ್ವಾಮಿ ಕೊಲೆ ಪ್ರಕರಣವೇ ಸಾಕ್ಷಿ ಎಂದು ಸಂಜನಾ ಮಾತನಾಡಿದ್ದಾರೆ.
ನನ್ನ ಕಷ್ಟದ ಸಮಯದಲ್ಲಿ ಯಾರೂ ಬರಲಿಲ್ಲ. ಈಗ ನೆನಪಿಸಿಕೊಂಡರೂ ನೋವಾಗುತ್ತೆ. ಅಂದು ನಮ್ಮ ಮನೆಯಲ್ಲಿ ಒಂದು ಬಿಯರ್ ಬಾಟಲ್ ಕೂಡ ಸಿಕ್ಕಿರಲಿಲ್ಲ. ಸಿಗರೇಟು ಸಿಕ್ಕಿರಲಿಲ್ಲ. ಆದರೆ ಅದರಲ್ಲಿ ನನ್ನ ವಿಕ್ಟಿಮ್ ಮಾಡಲಾಯ್ತು ಎಂದು ಕಣ್ಣೀರು ಸುರಿಸಿದ ಸಂಜನಾ. ನನ್ನನ್ನು ಜನ ಎಷ್ಟು ಟ್ರೋಲ್ ಮಾಡಿದ್ರು ಅಂದರೆ ಮುಸ್ಲಿಂನ ಮದುವೆ ಆಗಿದ್ದಕ್ಕೂ ಟ್ರೋಲ್ ಮಾಡಿದರು ಎಂದು ಸಂಜನಾ ಖಡಕ್ ಆಗಿ ಮಾತನಾಡಿದ್ದಾರೆ.
ಅಂದಹಾಗೆ, `ಗಂಡ ಹೆಂಡತಿ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಬಹುಭಾಷಾ ನಟಿಯಾಗಿ 50ಕ್ಕೂ ಸಿನಿಮಾದಲ್ಲಿ ಸಂಜನಾ ನಟಿಸಿದ್ದಾರೆ.
ಬೆಂಗಳೂರು: ಭಾರೀ ಸಂಚಲನ ಸೃಷ್ಟಿಸಿದ್ದ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ (Sandalwood Drugs Case) ನಟಿ ಸಂಜನಾ ಗಲ್ರಾನಿ (Sanjjanaa Galrani) ಹಾಗೂ ಶಿವಪ್ರಕಾಶ್ ಚಿಪ್ಪಿಗೆ ಬಿಗ್ ರಿಲೀಫ್ ಸಿಕ್ಕಿದೆ. ಇಬ್ಬರ ವಿರುದ್ದ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಸಿಸಿಬಿಯಿಂದ (CCB) ನಟಿಯರು ಸೇರಿದಂತೆ ಡ್ರಗ್ ಪೆಡ್ಲರ್ ಗಳ ಬಂಧನವಾಗಿತ್ತು. ಎಫ್‌ಐಆರ್ (FIR) ರದ್ದು ಕೋರಿ ಸಂಜನಾ ಹಾಗೂ ಶಿವಪ್ರಕಾಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಮಾದಕ ಜಾಲಕ್ಕೆ ಸ್ಯಾಂಡಲ್ವುಡ್ ನಂಟಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ 2020ರ ಸೆಪ್ಟೆಂಬರ್‌ನಲ್ಲಿ ಸಂಜನಾ ಗಲ್ರಾಣಿ ಮನೆಗೆ ದಾಳಿ ಮಾಡಿದ ಸಿಸಿಬಿ ಅಧಿಕಾರಿಗಳು ಮನೆ ಪರಿಶೀಲನೆ ನಡೆಸಿ ಬಂಧಿಸಿದ್ದರು.
ಬೆಂಗಳೂರು: ನಟಿ ಸಂಜನಾ ಗಲ್ರಾನಿ ಓಲಾ ಕ್ಯಾಬ್ ಚಾಲಕನ ಜೊತೆ ಕಿರಿಕ್ ಮಾಡಿಕೊಂಡಿದ್ದು, ಕೋಪಾತಾಪ ತೋರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ವಿಚಾರವಾಗಿ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಂಜನಾ, ಆತ ಎಸಿ ಹಾಕುವುದಿಲ್ಲ ಎಂದು ರೂಡ್ ಆಗಿ ಹೇಳಿದ. ಆದರೆ ಆತ ಕೋವಿಡ್ ರೂಲ್ಸ್ ಇದೆ ಹಾಕಲ್ಲ ಅಂತ ಹೇಳಿಲ್ಲ. ನಾನು ಎಸಿ ಕಾರನ್ನೇ ಬುಕ್ ಮಾಡಿದ್ದೆ. ಎಸಿ ಹಾಕಲು ಸರ್ವೀಸ್ ಕೊಡಬೇಕು. ಒಂದು ಹುಡುಗಿಯನ್ನ ರಸ್ತೆಯಲ್ಲಿ ನಿಲ್ಲಿಸುತ್ತೇನೆ ಎಂದು ಬೆದರಿಕೆ ಹಾಕಿದಾಗ ಭಯ ಆಯ್ತು. ನಾನು ಒಂದು ಸಿಂಗಲ್ ಪದದಲ್ಲೂ ಆತನನ್ನ ನಿಂದಿಸಿಲ್ಲ ಎಂದು ತಮ್ಮ ಮೇಲೆ ಕೇಳಿ ಬಂದಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಆತ ನಾನು ಹೇಳುವ ಲೊಕೇಶನ್ ತಲುಪಿಸಲು ಡಬಲ್ ಮೀಟರ್ ಕೇಳಿದ್ದಾನೆ. ನಾನು ಅದಕ್ಕೆ ಹೇಳದ್ದೆ 10.000 ಕೊಡಬೇಕಾ ಅಂತ..? ಕೇಳಿದ್ದೆನು. ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಕೇಳಿ ಬರುತ್ತಿದೆ. ಇದೆಲ್ಲಾ ಸುಳ್ಳು ಎಂದು ಕ್ಯಾಬ್ ಡ್ರೈವರ್ ಮೇಲಿನ ಕಂಪ್ಲೇಂಟ್ ವಿಚಾರಕ್ಕೆ ತೆರೆ ಎಳೆದಿದ್ದಾರೆ. ಕ್ಯಾಬ್ ಡ್ರೈವರ್ ಜೊತೆ ಸಂಜನಾ ಕಿರಿಕ್ – ಅವಾಚ್ಯ ಶಬ್ದಗಳಿಂದ ನಿಂದನೆ
ಏನಿದು ಕಿರಿಕ್..?: ಶೂಟಿಂಗ್ ಸ್ಪಾಟ್‍ಗೆ ಹೋಗಬೇಕೆಂದು ಸಂಜನಾ ಸೋಮವಾರ ಬೆಳಗ್ಗೆ ಓಲಾ ಬುಕ್ ಮಾಡಿದ್ದರು. ಇಂದಿರಾ ನಗರದಿಂದ ಕೆಂಗೇರಿಗೆ ಕ್ಯಾಬ್ ಬುಕ್ ಮಾಡಬೇಕಿತ್ತು. ಆದರೆ ರಾಜರಾಜೇಶ್ವರಿ ನಗರಕ್ಕೆ ಕ್ಯಾಬ್ ಬುಕ್ ಮಾಡಿದ್ದಾರೆ. ಓಲಾ ಚಾಲಕ ಸುಸಯ್ ಮಣಿ.ಎಸ್ ಓಲಾ ಕಸ್ಟಮರ್ ಕೇರ್‍ಗೆ ಕರೆ ಮಾಡಿ ಲೊಕೇಶನ್ ಬದಲಿಸುವಂತೆ ಹೇಳಿದ್ದರು. ಆದರೆ ಲೊಕೇಶನ್ ಬದಲಾಗಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚಾಲಕನ ಜೊತೆ ನಟಿ ಸಂಜನಾ ವಾಗ್ವಾದಕ್ಕಿಳಿದು ಆವಾಜ್ ಹಾಕಿದ್ದಾರೆ.
Car number Ka 50 – 8960 @olamoney_in@Olacabs@Ola_Bangalore , we are Harrassed early morning by this driver named Susay mani s , Not increasing the A/c from speed level one ,
We are 4 people in car he is suffocating us . Full story in pic below pic.twitter.com/ivxwgeB7LL
ಸಂಜನಾ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಚಾಲಕ ಮಣಿ ಆರೋಪಿಸಿದ್ದಾರೆ. ಅಲ್ಲದೆ ಸಂಜನಾ ನಡೆದುಕೊಂಡಿರುವ ಬಗ್ಗೆ ಮೊಬೈಲ್‍ನಲ್ಲಿ ವೀಡಿಯೋ ಮಾಡಿದ್ದಾರೆ. ಹೇಳಿದ ಜಾಗಕ್ಕೆ ಹೋಗಿಲ್ಲ ಎಂದು ಸಂಜನಾ ಕೆಂಡಾಮಲರಾಗಿದ್ದರಂತೆ. ಅದೇ ರೀತಿ ಅವಾಚ್ಯ ಶಬ್ದದಿಂದ ಸಂಜನಾ ನಿಂದಿಸಿದರು ಎಂದು ರಾಜರಾಜೇಶ್ವರಿ ನಗರ ಠಾಣೆಗೆ ತೆರಳಿ ಕ್ಯಾಬ್ ಚಾಲಕ ಮಣಿ ದೂರು ದಾಖಲಿಸಿದ್ದಾರೆ.
ಇತ್ತ ಸಂಜನಾ ಟ್ವೀಟ್ ಮಾಡುವ ಮೂಲಕ ಓಲಾ ಕ್ಯಾಬ್ ನಂಬರ್ ಹಾಗೂ ಚಾಲಕನ ಹೆಸರು ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಎಸಿ ಹೆಚ್ಚು ಮಾಡುವಂತೆ ಹೇಳಿದ್ದಕ್ಕೆ ಉಡಾಫೆ ಉತ್ತರ ನಿಡಿದರು. ತೊಂದರೆ ನೀಡಿದ್ದಾರೆ. ಅಲ್ಲದೆ ಕಾರ್ ಕಿಟಕಿ ಸಹ ಸರಿಯಾಗಿ ಇರಲಿಲ್ಲ. ನಾವು ಪೂರ್ತಿ ಹಣ ನೀಡಿದರೂ ಇಂತಹ ಕಾರನ್ನು ಏಕೆ ನೀಡುತ್ತೀರಿ ಎಂದು ಓಲಾಗೆ ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಇದೀಗ ಅವರ ವಿರುದ್ಧವಾಗಿ ಕೇಳಿ ಬಂದಿರುವ ಆರೋಪ ಸುಳ್ಳು ಎಂದು ಹೇಳಿದ್ದಾರೆ.
ಮಡಿಕೇರಿ: ಕಾಂಗ್ರೆಸ್ ಹಡಗು ಸಮುದ್ರದ ಮಧ್ಯದಲ್ಲಿ ಸಿಲುಕಿ ಗಿರಗಿರನೇ ತಿರುಗುತ್ತಿದೆ. ಹೀಗಾಗಿ ಸಿದ್ದರಾಯಮ್ಮನವರ ತಲೆ ತಿರುಗುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾತೆಗಳ ಕ್ಯಾತೆಯಿಂದಾಗಿ ಬೊಮ್ಮಾಯಿ ಅವರ ಸರ್ಕಾರ ಹೆಚ್ಚುದಿನ ಉಳಿಯುವುದಿಲ್ಲ ಎಂದಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯನವರಿಗೆ ಗೂಟದ ಕಾರು ಬೇಕಾಗಿತ್ತು. ಇದಕ್ಕಿಂತ ದೊಡ್ಡ ಹುದ್ದೆ ಸಿಗುವುದಿಲ್ಲ ಎಂಬುದು ಸಿದ್ದರಾಮಯ್ಯನವರಿಗೆ ಗೊತ್ತಾಗಿತ್ತು. ಹೀಗಾಗಿ ಅವರ ಮನಸ್ಸಿನಲ್ಲಿದ್ದ ಕೆಲಸಗಳೆಲ್ಲವೂ ಈಡೇರುತ್ತಿದ್ದಂತೆ ಕುಮಾರಸ್ವಾಮಿ ಅವರ ರಾಜೀನಾಮೆ ಕೊಡಿಸಿದರು ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಅಸಮಾಧಾನಗೊಂಡವರೆಲ್ಲ ರಾಜೀನಾಮೆ ನೀಡಿ, ಬಿಜೆಪಿಗೆ ಬಂದು ಸಪೋರ್ಟ್ ಮಾಡಿದರು. ಆದರೆ ಬೊಮ್ಮಾಯಿ ಅವರ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಖಾತೆ ವಿಚಾರಕ್ಕೆ ಮುನಿಸು ಇದ್ದಿದ್ದೆಲ್ಲವೂ ಸರಿಯಾಗಿದೆ. ಹೀಗಾಗಿ ಸರ್ಕಾರ ಅವಧಿಯನ್ನು ಪೂರ್ಣಗೊಳಿಸುತ್ತದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಅದನ್ನು ಮತ್ತಷ್ಟು ಬಲಗೊಳಿಸುವ ಕೆಲಸವಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಬೆಲೆ ಏರಿಕೆಗೆ ಬಿಜೆಪಿ ಕಾರ್ಯಕರ್ತನಿಂದಲೇ ಆಕ್ರೋಶ- ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
ಕಾನೂನಿನ ನಿಜ ಸ್ವರೂಪ ಗೊತ್ತಾಗಲಿ
ಸ್ಯಾಂಡಲ್‍ವುಡ್ ನಟಿಯಾರದ ಸಂಜನಾ ಗರ್ಲಾನಿ ಮತ್ತು ರಾಗಿಣಿ ದ್ವಿವೇದಿ ಡ್ರಗ್ಸ್ ಪ್ರಕರಣದಲ್ಲಿ ಕಾನೂನು ತನ್ನ ನಿಜ ಸ್ವರೂಪ ಏನೆಂದು ತೋರಿಸಲಿ. ಕೋರ್ಟ್ ಯಾವ ಸೆಕ್ಷನ್ ಗಳ ಮೇಲೆ ಕ್ರಮ ಕೈಗೊಳ್ಳುವುದೋ ಕೈಗೊಳ್ಳಲಿ. ಇದರಿಂದ ಉಳಿದವರಿಗೂ ಒಂದು ಎಚ್ಚರಿಕೆ ಗಂಟೆಯಾಗುತ್ತದೆ. ಡ್ರಗ್ಸ್ ಜಾಲದಲ್ಲಿ ಸಿಲುಕಿದರೆ ಎಂತಹ ಶಿಕ್ಷೆ ಆಗುತ್ತದೆ ಎನ್ನುವ ಅರಿವು ಮೂಡಲಿ. ಹೀಗಾಗಿ ಕಾನೂನು ಸರಿಯಾದ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
ಡ್ರಗ್ಸ್ ದಂಧೆ ಸಾಮಾಜಿಕ ಪಿಡುಗಾಗಿ ಮಾರ್ಪಟ್ಟಿದೆ. ಯುವಶಕ್ತಿ ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕು ಎನ್ನೋದು ಪ್ರಧಾನಿ ಮೋದಿಯವರ ಆಶಯವಾಗಿತ್ತು. ಆದರೆ ಈ ರೀತಿ ತಪ್ಪು ದಾರಿಗಳನ್ನು ಹಿಡಿಯುತ್ತಿರುವುದು ಸರಿಯಲ್ಲ. ಇಂದು ಆಫ್ರಿಕನ್ ಪ್ರಜೆಗಳು ದೊಡ್ಡ ಪ್ರಮಾಣದಲ್ಲಿ ಭಾರತಕ್ಕೆ ಡ್ರಗ್ಸ್ ಸಾಗಾಟ ಮಾಡುತ್ತಿದ್ದಾರೆ. ಸರಿಯಾದ ಕಾನೂನು ಕ್ರಮ ಕೈಗೊಂಡರೆ ಯುವ ಸಮೂಹಕ್ಕೂ ಅರಿವು ಮೂಡಿದಂತೆ ಆಗುತ್ತದೆ ಎಂದು ಸದಾನಂದಗೌಡ ಹೇಳಿದ್ದಾರೆ.