Tag: sanjjana galrani

  • ಅಭಿಮಾನಿಗಳಿಗೆ ನಟಿ ಸಂಜನಾ ಗಲ್ರಾನಿ ಧನ್ಯವಾದ

    ಅಭಿಮಾನಿಗಳಿಗೆ ನಟಿ ಸಂಜನಾ ಗಲ್ರಾನಿ ಧನ್ಯವಾದ

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿ ಬಿಡುಗಡೆಗೊಂಡ ನಟಿ ಸಂಜನಾ ಗಲ್ರಾನಿ ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ಜೈಲಿನಿಂದ ಬಿಡುಗಡೆಯಾದ 1 ತಿಂಗಳ ಬಳಿಕ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳಿಗೆ ಪ್ರೀತಿಯ ಸಂದೇಶವನ್ನು ನೀಡಿದ್ದಾರೆ. ಅಲ್ಲದೆ ಕಷ್ಟದ ಸಮಯದಲ್ಲಿ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

    ಸಂಜನಾ ಬರೆದುಕೊಂಡಿದ್ದೇನು..?
    ನನ್ನ ಇನ್ ಬಾಕ್ಸ್‍ಗೆ ಸಂದೇಶ ಕಳುಹಿಸಿದ್ದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದ. ಪ್ರತಿಯೊಬ್ಬರ ಮೇಸೆಜ್ ಕೂಡ ಓದಿದ್ದೇನೆ. ನಿಮ್ಮ ಅಮೂಲ್ಯವಾದ ಕಾಳಜಿ ಮತ್ತು ಪ್ರೀತಿ ನನ್ನನ್ನು ಆಶೀರ್ವದಿಸಿದೆ ಎಂದು ಭಾವಿಸುತ್ತೇನೆ. ನಾನು ಆರೋಗ್ಯವಾಗಿದ್ದೇನೆ. ನಿಮ್ಮಲ್ಲರ ಪ್ರೀತಿಗೆ ನನ್ನ ಕುಟುಂಬ, ಸ್ನೇಹಿತರು ನಾನು ಎಷ್ಟು ಧನ್ಯವಾದ ಹೇಳಿದರು ಸಾಲದು ಎಂದು ಧನ್ಯವಾದಗಳನ್ನು ತಿಳಿಸಿದ್ದಾರೆ.

    ಅಲ್ಲದೇ ಸಂಜನಾ ನಾನು ಇದೀಗ ಆರೋಗ್ಯಕರವಾಗಿದ್ದೇನೆ. ಶೀಘ್ರವೇ ಮೊದಲಿನಂತೆ ಸಾಮಾಜಿಕ ಜಾಲತಾಣಕ್ಕೆ ಮರುಳುತ್ತೇನೆ ಎಂದು ಕೂಡ ತನ್ನ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.

    2020ರ ಸೆಪ್ಟೆಂಬರ್ 8ರಂದು ಸ್ಯಾಂಡಲ್‍ವುಡ್ ಡ್ರಗ್ ಕೇಸ್‍ನಲ್ಲಿ ಭಾಗಿಯಾಗಿದ್ದ ಗಂಡ-ಹೆಂಡತಿ ಸಿನಿಮಾದ ನಟಿ ಸಂಜನಾ ಗಲ್ರಾನಿಯನ್ನು ಬೆಂಗಳೂರು ಕೇಂದ್ರ ಅಪರಾಧ ವಿಭಾಗ ಬಂಧಿಸಲಾಯಿತು. ಸುಮಾರು 90 ದಿನಗಳ ನಂತರ 12 ಡಿಸೆಂಬರ್ 2020 ರಂದು ಅನಾರೋಗ್ಯದ ಕಾರಣದಿಂದ ವೈದ್ಯಕೀಯ ಆಧಾರದ ಮೇಲೆ ಜಾಮೀನು ಮಂಜೂರು ಮಾಡಲಾಯಿತು. ಇದೀಗ ತಮ್ಮ ಇನ್ಸ್ಟಾಗ್ರಾಮ್‍ನಲ್ಲಿ ನೆಚ್ಚಿನ ಅಭಿಮಾನಿಗಳಿಗೆ ಆರೋಗ್ಯವಾಗಿದ್ದೇನೆ ಶೀಘ್ರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗುವುದಾಗಿ ತಿಳಿಸಿದ್ದಾರೆ.

  • ರಾಗಿಣಿ, ಸಂಜನಾ ಜಾಮೀನು ಅರ್ಜಿ ವಜಾ- ಮತ್ತೆ ಜೈಲುವಾಸ

    ರಾಗಿಣಿ, ಸಂಜನಾ ಜಾಮೀನು ಅರ್ಜಿ ವಜಾ- ಮತ್ತೆ ಜೈಲುವಾಸ

    ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಜಾಮೀನು ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ. ರಾಗಿಣಿ ಮತ್ತು ಸಂಜನಾ ಸೇರಿದಂತೆ ಒಟ್ಟು ಆರೋಪಿಗಳು ಇಂದು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರು.

    ಮಾದಕ ದ್ರವ್ಯ ವ್ಯಸನಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 4 ರಂದು ಸಿಸಿಬಿ ಪೊಲಿಸರು ಮೊದಲು ನಟಿ ರಾಗಿಣಿ ಮನೆ ಮೇಲೆ ದಾಳಿ ಮಾಡಿದ್ದರು. ರಾಗಿಣಿ ನಿವಾಸದ ಮೇಲೆ ದಾಳಿ ನಡೆಸಿದ್ದು ಅಧಿಕಾರಿಗಳು ವಿಚಾರಣೆಗಾಗಿ ನಟಿಯನ್ನ ಸಿಸಿಬಿ ಕಚೇರಿಗೆ ಕರೆ ತಂದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ, ರಾತ್ರಿ ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಿ ವಿಚಾರಣೆ ನಡೆಸಿತ್ತು. ಎನ್‍ಡಿಪಿಎಸ್ ಕೋರ್ಟ್ ನಲ್ಲಿ ಜಾಮೀನು ಸಿಗದ ಹಿನ್ನೆಲೆಯಲ್ಲಿ ನಟಿಯನ್ನ ಪರಪ್ಪನ ಅಗ್ರಹಾರದಲ್ಲಿರಿಸಲಾಗಿತ್ತು. ಅಕ್ರಮ ಹಣ ವರ್ಗಾವಣೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ ನ್ಯಾಯಾಲಯದ ಅನುಮತಿ ಪಡೆದು ಜೈಲಿನಲ್ಲಿಯೇ ವಿಚಾರಣೆ ನಡೆಸಿತ್ತು.

    ರಾಗಿಣಿ, ಸಂಜನಾಗೆ ಜಾಮೀನು ಕೊಡಬಾರದು. ಸಾಕ್ಷ್ಯ ನಾಶದ ಆರೋಪ ಇಬ್ಬರ ಮೇಲೆ ಇವೆ. ಇಬ್ಬರ ವಿರುದ್ಧವೂ ಡಿಜಿಟಲ್ ಸಾಕ್ಷ್ಯ ಲಭ್ಯವಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳ ಬಂಧನವಾಗಿಲ್ಲ. ಜಾಮೀನು ಕೊಟ್ಟರೆ ಇಬ್ಬರು ಪ್ರಭಾವಿಗಳಾಗಿದ್ದರಿಂದ ಪ್ರಕರಣದ ಪ್ರಭಾವ ಬೀರುವ ಸಾಧ್ಯತೆಗಳಿವೆ ಹಾಗಾಗಿ ಜಾಮೀನು ನೀಡಕೂಡದ ಎಂದು ಸಿಸಿಬಿ ಪರ ವಕೀಲರು ವಾದ ಮಂಡಿಸಿದ್ದರು.

    ಡ್ರಗ್ ಕೇಸಲ್ಲಿ ರಾಗಿಣಿ ಅಮಾಯಕಿ. ನಮ್ಮ ಕಕ್ಷಿದಾರರ ವಿರುದ್ಧ ಅನಗತ್ಯ ಆರೋಪಗಳನ್ನ ಮಾಡಲಾಗಿದೆ. ಸಿಸಿಬಿ ಪೊಲೀಸರ ದಾಳಿ ವೇಳೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಡ್ರಗ್ ಕೇಸಲ್ಲಿ ಸುಮ್ಮನೆ ಸಿಲುಕಿಸಲಾಗಿದೆ ಎಂದು ರಾಗಿಣಿ ಪರ ವಕೀಲರು ನ್ಯಾಯಲಯದ ಗಮನಕ್ಕೆ ತಂದಿದ್ದರು.

  • ರಾಗಿಣಿ, ಸಂಜನಾಗೆ ಬಿಗ್ ಶಾಕ್ – ಮೊಬೈಲ್‍ನಲ್ಲಿ ಸಿಕ್ಕಿದೆ ಸ್ಫೋಟಕ ಸಾಕ್ಷ್ಯ!

    ರಾಗಿಣಿ, ಸಂಜನಾಗೆ ಬಿಗ್ ಶಾಕ್ – ಮೊಬೈಲ್‍ನಲ್ಲಿ ಸಿಕ್ಕಿದೆ ಸ್ಫೋಟಕ ಸಾಕ್ಷ್ಯ!

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪರಪ್ಪನ ಅಗ್ರಹಾರ ಸೇರಿರುವ ಮಾದಕ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರ ಬಿಗ್ ಶಾಕಿಂಗ್ ನ್ಯೂಸ್ ಒಂದು ಇದೀಗ ಹೊರಬಿದ್ದಿದೆ.

    ಡ್ರಗ್ಸ್ ಕೇಸ್ ಬೆನ್ನು ಹತ್ತಿರೋ ಪೊಲೀಸರಿಗೆ ಸಿನಿಲೋಕದ ಡ್ರಗ್ಸ್ ಕೇಸ್‍ಗೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ನಟಿ ರಾಗಿಣಿ, ಸಂಜನಾ ಮೊಬೈಲ್‍ನಲ್ಲಿ ಸ್ಫೋಟಕ ಸಾಕ್ಷ್ಯ ದೊರೆತಿದೆ. ಅದೇನೆಂದರೆ ಡ್ರಗ್ಸ್ ಕೇಸ್‍ನಲ್ಲಿ ಬಂಧಿತರಾಗಿರುವ ಆರೋಪಿಗಳಿಂದ ಸೆಕ್ಸ್ ದಂಧೆ ನಡೆಯುತ್ತಿರುವ ಶಂಕೆ ವ್ಯಕ್ತವಾಗಿದೆ.

    ಬಂಧಿತ ಆರೋಪಿಗಳ ಮೊಬೈಲ್‍ನಲ್ಲಿ ಸೆಕ್ಸ್ ದಂಧೆ ಸಾಕ್ಷ್ಯ ದೊರಕಿದ್ಯಂತೆ. ಸೆಕ್ಸ್ ದಂಧೆಗಾಗಿಯೇ ಆರೋಪಿಗಳು ವಾಟ್ಸಾಪ್ ಗ್ರೂಪ್ ಮಾಡ್ಕೊಂಡಿದ್ದರು. ಆದರೆ ಡ್ರಗ್ಸ್ ಕೇಸ್ ಬಯಲಾಗ್ತಿದ್ದಂತೆ ವಾಟ್ಸಾಪ್ ಗ್ರೂಪ್‍ನ್ನೇ ಡಿಲೀಟ್ ಮಾಡಿದ್ದರು. ಬಂಧಿತ ನಟಿಯರ ಮೊಬೈಲ್‍ನಲ್ಲಿಯೂ ಸಾಕ್ಷ್ಯ ಸಿಕ್ಕಿರುವ ಬಗ್ಗೆ ಸಿಸಿಬಿ ಮೂಲಗಳಿಂದ ಪಬ್ಲಿಕ್ ಟಿವಿಗೆ  ಮಾಹಿತಿ ಲಭ್ಯವಾಗಿದೆ.

    ನಿನ್ನೆಯಷ್ಟೇ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಹಾಗೂ ಉಳಿದ ಆರೋಪಿಗಳ ಜಾಮೀನು ಅರ್ಜಿಯನ್ನು ಎನ್‍ಡಿಪಿಎಸ್ ಕೋರ್ಟ್ ವಜಾಗೊಳಿಸಿತ್ತು. ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ರಾಗಿಣಿ ಜಾಮೀನು ಅರ್ಜಿಯ ವಿಚಾರಣೆಯನ್ನ ನ್ಯಾಯಾಲಯ ಸೆಪ್ಟೆಂಬರ್ 21ರಂದು ನಡೆಸಿತ್ತು. ವಿಚಾರಣೆಯ ಬಳಿಕ ಆದೇಶವನ್ನು ನ್ಯಾಯಾಧೀಶರು ಕಾಯ್ದಿರಿಸಿದ್ದರು. ಇತ್ತ ಮತ್ತೋರ್ವ ನಟಿ ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ಸೆಪ್ಟೆಂಬರ್ 24ರಂದು ನ್ಯಾಯಲಯ ಮುಂದೆ ಬಂದಿತ್ತು. ವಾದ- ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು ಇಂದು ಆದೇಶ ಕಾಯ್ದಿರಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಹಿನ್ನೆಲೆ ಇಬ್ಬರು ನಟಿಯರನ್ನು ವಿಚಾರಣೆ ನಡೆಸಲು ನ್ಯಾಯಾಲಯದಿಂದ ಐದು ದಿನ ಅನುಮತಿ ಪಡೆದುಕೊಂಡಿತ್ತು. ನ್ಯಾಯಾಲಯದ ಆದೇಶದ ಹಿನ್ನೆಲೆ ರಾಗಿಣಿ ಮತ್ತು ಸಂಜನಾ ಇಬ್ಬರು ಪರಪ್ಪನ ಅಗ್ರಹಾರದಲ್ಲಿಯೇ ಇಡಿ ವಿಚಾರಣೆ ಎದುರಿಸಿದ್ದರು.

    https://www.youtube.com/watch?v=8RVxc4NofrA&ab_channel=PublicTV%7C%E0%B2%AA%E0%B2%AC%E0%B3%8D%E0%B2%B2%E0%B2%BF%E0%B2%95%E0%B3%8D%E0%B2%9F%E0%B2%BF%E0%B2%B5%E0%B2%BF

  • ನಟಿ ಸಂಜನಾಗೆ ಡ್ರಗ್ ಪೆಡ್ಲರ್, ನಟ ನಿಯಾಸ್ ಅಹಮದ್ ಜೊತೆ ನಂಟು

    ನಟಿ ಸಂಜನಾಗೆ ಡ್ರಗ್ ಪೆಡ್ಲರ್, ನಟ ನಿಯಾಸ್ ಅಹಮದ್ ಜೊತೆ ನಂಟು

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿಯ ಬಳಿಕ ಇದೀಗ ಸಿಸಿಬಿ ಅಧಿಕಾರಿಗಳು ನಟಿ ಸಂಜನಾ ಗಲ್ರಾನಿಯನ್ನು ಬಂಧಿಸಿದ್ದಾರೆ.

    ನಟಿ ಸಂಜನಾಗೆ ಡ್ರಗ್ ಪೆಡ್ಲರ್ ಸೋಮವಾರ ಬಂಧನಕ್ಕೆ ಒಳಗಾದ ಮಲೆಯಾಳಿ ನಟ ನಿಯಾಸ್ ಜೊತೆ ನಂಟಿದೆ. ಈ ವಿಚಾರವನ್ನು ಸ್ವತಃ ನಟನೇ ಸಿಸಿಬಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಕಲ್ಕಿ ಹೆಸರಿನ ಮಲೆಯಾಳಿ ಸಿನಿಮಾದಲ್ಲಿ ಆತ ನಟಿಸಿದ್ದಾನೆ.

    ನಿಯಾಸ್ ನೈಟ್ ಪಾರ್ಟಿಗೆ ಸಂಜನಾ ಸ್ಪೆಷಲ್ ಗೆಸ್ಟ್ ಅಪಿಯರೆನ್ಸ್ ಆಗಿದ್ದರು. ಈ ಸಂಬಂಧದ ಎಕ್ಸ್ ಕ್ಲ್ಯೂಸಿವ್ ಫೋಟೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಸ್ಪ್ರೆಕ್ಟ್ರಾ -360 ಕಾರ್ಪೋರೇಟ್ ಪಾರ್ಟಿಗಳನ್ನು ಗಳನ್ನು ಸ್ಟಾರ್ ಹೋಟೆಲ್ ಗಳಲ್ಲಿ ನಿಯಾಸ್ ಆಯೋಜನೆ ಮಾಡುತ್ತಿದ್ದ. ಈ ಕಾರ್ಯಕ್ರಮಕ್ಕೆ ಸಂಜನಾ ಸ್ಪೆಷಲ್ ಗೆಸ್ಟ್ ಆಗಿ ಭಾಗವಹಿಸಿದ್ದರು.

    ಇತ್ತೀಚೆಗೆ ಮಾಸ್ಕ್ ಕೂಡ ತಯಾರು ಮಾಡುತ್ತಿದ್ದ ನಿಯಾಸ್ ಗೆ ಫೋಟೋಗಳನ್ನು ಹಾಕಿಕೊಂಡು ಭರ್ಜರಿ ಪ್ರಮೋಷನ್ ಅನ್ನು ಕೂಡ ಸಂಜನಾ ಕೊಡುತ್ತಿದ್ದರು. ಇಂದಿರಾನಗರ, ಮಾರತಹಳ್ಳಿ ಸೇರಿದಂತೆ ಬೆಂಗಳೂರಿನ ಹೈ- ಫೈ ಏರಿಯಾದಲ್ಲಿ ನಿಯಾಸ್ ಪಾರ್ಟಿ ಆರ್ಗನೈಸರ್ ಆಗಿದ್ದನು. ಸ್ಟಾರ್ ಅಟ್ರಾಕ್ಷನ್ ಇಟ್ಟುಕೊಂಡು ಪಾರ್ಟಿ ಆಯೋಜನೆ ಮಾಡುತ್ತಿದ್ದ. ಪಾರ್ಟಿಯಲ್ಲಿ ಸಂಜನಾ ಬಹುತೇಕ ಬಾರಿ ಗೆಸ್ಟ್ ಆಗಿ ಹೋಗಿದ್ದರು.

    ನಟಿ ಸಂಜನಾಗೆ ಡ್ರಗ್ಸ್ ಪೆಡ್ಲರ್ ನಿಯಾಸ್ಅಹಮದ್ ರಾಕಿ ಬ್ರದರ್ ಆಗಿದ್ದಾನಂತೆ. ಈ ಮೂಲ ಡ್ರಗ್ಸ್ ಡೀಲರ್ ಜೊತೆ ನಿಮಗೇಕೆ ಬೇಕಿತ್ತು ಸಹೋದರತ್ವ? ಡ್ರಗ್ಸ್ ಪೆಡ್ಲರ್ ಅಂತ ಗೊತ್ತಿದ್ದೂ ನಿಯಾಸ್ ಜೊತೆ ಒಡನಾಟವೇಕೆ? ನಿಯಾಜ್ ಒಡೆತನದ 360 ಡಿಗ್ರಿ ಫೋಟೊಗ್ರಫಿಯಲ್ಲಿ ಪಾಲು ಹೊಂದಿರೋ ಶಂಕೆ ಸಿಸಿಬಿ ಪೊಲೀಸರಿಗೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಿಯಾಸ್ ಡ್ರಗ್ಸ್ ಪಾರ್ಟಿಗಳಲ್ಲಿ ಸಂಜನಾ ಭಾಗವಹಿಸ್ತಿದ್ದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಜನಾ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.

    ನಿಯಾಸ್ ಅಹಮದ್ ಫ್ಯಾಷನ್ ಇಂಡಿಯನ್ ಲೀಗ್ ಗೆ ಜಡ್ಜ್ ಸಹ ಆಗಿದ್ದ. ಕೊಚ್ಚಿಯಿಂದ ಬೆಂಗಳೂರಿಗೆ ಬಂದು ಪಾರ್ಟಿಗಳಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದಾನೆ ಎಂಬ ಆರೋಪವಿದೆ. ಈ ಮೂಲಕ ಪಾರ್ಟಿ ಹೆಸರಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿತ್ತು. ಇದೇ ವಿಚಾರವಾಗಿ ನಿಯಾಸ್ ನನ್ನ ಸಿಸಿಬಿ ಬಂಧಿಸಿತ್ತು. ವಿಚಾರಣೆ ವೇಳೆ ಈತ ನಟಿ ಸಂಜನಾ ಹೆಸರನ್ನು ಬಾಯಿಬಿಟ್ಟಿದ್ದಾನೆ.

    360 ಮಾಡೆಲ್ ಮ್ಯಾನೇಜ್ ಮೆಂಟ್ ಮಾಲೀಕ ನಿಯಾಸ್ ಆಗಿದ್ದು, ಪೃಥ್ವಿ ಶೆಟ್ಟಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ವಂದನಾ ಪ್ರಚಾರಕ್ಕಾಗಿ ಗಲಾಟೆ ಮಾಡ್ತಿದ್ದಾಳೆ: ನಟಿ ಸಂಜನಾ ಆರೋಪ

    ವಂದನಾ ಪ್ರಚಾರಕ್ಕಾಗಿ ಗಲಾಟೆ ಮಾಡ್ತಿದ್ದಾಳೆ: ನಟಿ ಸಂಜನಾ ಆರೋಪ

    ಬೆಂಗಳೂರು: ನಟಿ ಸಂಜನಾ ಗಲ್ರಾನಿ ಮತ್ತು ನಿರ್ಮಾಪಕಿ ವಂದನಾ ಜೈನ್ ನಡುವಿನ ಗಲಾಟೆ ಪ್ರಕರಣ ಮುಂದುವರಿದಿದೆ. ಇಂದು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ಅವರನ್ನು ಭೇಟಿಯಾದ ಸಂಜನಾ, ಘಟನೆಯ ಬಗ್ಗೆ ವಿವರಣೆ ನೀಡಿದರು. ಅಲ್ಲದೆ ನಿರ್ಮಾಪಕಿ ವಂದನಾ ಜೈನ್ ವಿರುದ್ಧ ಪ್ರತಿ ದೂರು ಕೂಡ ದಾಖಲು ಮಾಡಿದ್ದಾರೆ.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜನಾ, ನಾನು ವಿಸ್ಕಿ ಬಾಟೆಲ್ ನಿಂದ ಹೊಡೆದಿಲ್ಲ. ಯಾರು ಆ ರೀತಿಯಾಗಿ ನಿಮಗೆ ಹೇಳಿದ್ದು ಎಂದು ಪ್ರಶ್ನಿಸಿದರು. ನನ್ನ ತಾಯಿಯನ್ನ ನಿಂದನೆ ಮಾಡಿದಾಗ ಸುಮ್ಮನಿರಬೇಕಿತ್ತಾ? ಆಕೆಗೆ ಪ್ರಚಾರದ ಹುಚ್ಚು ಹಿಡಿದಿದೆ. ಅವಳೇ ಸುಮ್ಮನೆ ಗಲಾಟೆ ಮಾಡ್ಕೊಂಡು ಬಂದಿದ್ದು. ನಾನು ಐದಾರು ಭಾಷೆಗಳಲ್ಲಿ ನಟಿಸುತ್ತಿದ್ದೇನೆ. ಮುಂದಿನ ವರ್ಷ ಏಳೆಂಟು ಸಿನಿಮಾಗಳು ರಿಲೀಸ್ ಆಗುತ್ತವೆ. ಆಕೆ ನಿರ್ಮಾಪಕಿಯೇ ಅಲ್ಲ, ಯಾವ ಸಿನಿಮಾ ನಿರ್ಮಾಣ ಮಾಡಿದ್ದಾಳೆ ಹೇಳಿ ಎಂದು ಗರಂ ಆದರು.

    ಆಕೆಯ ಇತಿಹಾಸ ಏನಿದೆ ಗೊತ್ತಾ, ಆಕೆ ಎಂಇಪಿ ಪಕ್ಷದ ನೌಹಿರಾ ಶೇಖ್ ಜೊತೆ ಗುರುತಿಸಿಕೊಂಡಿದ್ದಳು. ಜನರಿಗೆ ಟೋಪಿ ಹಾಕಿದವರ ಜೊತೆ ಇದ್ದಾಳೆ. ನನ್ನನ್ನು ಕೂಡ ಎಂಇಪಿಗೆ ಜಾಯಿನ್ ಆಗುವಂತೆ ಬಲವಂತ ಮಾಡಿದ್ದಳು. ಆದರೆ ನಾನು ಒಪ್ಪಿರಲಿಲ್ಲ ಎಂದು ಸಂಜನಾ ಅವರು ವಂದನಾ ವಿರುದ್ಧ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಸಂಜನಾ ಏನ್ ಮಾಡ್ತಾಳೋ ಮಾಡ್ಲಿ, ನಾನು ಕಾನೂನು ಕ್ರಮ ಕೈಗೊಳ್ಳುವೆ: ವಂದನಾ ಜೈನ್

    ಇಷ್ಟು ಮಾತ್ರವಲ್ಲದೆ ಕ್ರಿಕೆಟಿಗ ಅಮಿತ್ ಮಿಶ್ರಾ ಅವರು ಈಕೆಯಿಂದಲೇ ತಂಡದಿಂದ ಕೈ ಬಿಡುವಂತೆ ಆಯಿತು. ಈಕೆಯೇ ಗಲಾಟೆ ಮಾಡಿ ಕಂಪ್ಲೆಂಟ್ ಕೊಟ್ಟಿದ್ದಾರೆ.. ರಾತ್ರಿ ಎರಡು ಗಂಟೆಯಲ್ಲಿ ಪೊಲೀಸರು ಫೋನ್ ಮಾಡಿ ಕರೆಯುತ್ತಾರೆ. ರಾತ್ರಿಯ ಹೊತ್ತು ಹೆಣ್ಣು ಮಕ್ಕಳನ್ನ ವಿಚಾರಣೆ ಮಾಡಬಹುದಾ..? ನೀನ್ಯಾರಾದರೆ ಏನು ಬರಬೇಕು ಅಂತ ಪೊಲೀಸರು ದಬಾಯಿಸುತ್ತಾರೆ. ಇದೆಲ್ಲವನ್ನೂ ಡಿಸಿಪಿಯವರಿಗೆ ತಿಳಿಸಿದ್ದೀನಿ ಎಂದು ಸಂಜನಾ ಗಲ್ರಾನಿ ತಿಳಿಸಿದರು.

  • ಸಂಜನಾ ಏನ್ ಮಾಡ್ತಾಳೋ ಮಾಡ್ಲಿ, ನಾನು ಕಾನೂನು ಕ್ರಮ ಕೈಗೊಳ್ಳುವೆ: ವಂದನಾ ಜೈನ್

    ಸಂಜನಾ ಏನ್ ಮಾಡ್ತಾಳೋ ಮಾಡ್ಲಿ, ನಾನು ಕಾನೂನು ಕ್ರಮ ಕೈಗೊಳ್ಳುವೆ: ವಂದನಾ ಜೈನ್

    ಚಿಕ್ಕಬಳ್ಳಾಪುರ: ಸಂಜನಾ ಏನು ಮಾಡುತ್ತಾಳೋ ಮಾಡಲಿ ನಾನು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವೆ ಅಂತ ನಿರ್ಮಾಪಕಿ ವಂದನಾ ಜೈನ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ಸದ್ಯ ಕೇರಳದಲ್ಲಿರುವ ವಂದನಾ ಜೈನ್ ಮೊಬೈಲ್ ಮೂಲಕ ಪ್ರತಿಕ್ರಿಯಿಸಿ, ಸಂಜನಾ ದಿನಕ್ಕೊಂದು ರೀತಿ ಆಟ ಆಡಿದರೆ ಜನ ನೋಡುತ್ತಿರುತ್ತಾರೆ. ಆಟ ಅದರೂ ಆಡಲಿ, ನನ್ನ ಮೇಲೆ ಕಂಪ್ಲೇಂಟ್ ಆದರೂ ಕೊಡಲಿ. ಏನಾದ್ರೂ ಮಾಡಲಿ, ನಾನು ಬೆಂಗಳೂರಿಗೆ ಬಂದು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇನೆ. ನಾನು ಈಗಾಗಲೇ ಸಂಜನಾ ವಿರುದ್ಧ ದೂರು ನೀಡಿದ್ದೇನೆ. ಪೊಲೀಸ್ ಠಾಣೆ ಮುಂದೆ ಹೋಗಿ ಸಂಜನಾ ನಿಂತ ಮಾತ್ರಕ್ಕೆ ಕಂಪ್ಲೇಂಟ್ ಆಗೋದಿಲ್ಲ. ಕಂಪ್ಲೇಂಟ್ ಯಾರದ್ದು ಆಗಬೇಕೋ ಅವರದ್ದೇ ಆಗೋದು. ಆಕೆ ಏನ್ ಮಾಡಿದ್ಲು ಅನ್ನೋದರ ಸಾಕ್ಷಿ ಕೊಟ್ಟು ಕಂಪ್ಲೇಂಟ್ ಕೊಟ್ಟಿದ್ದೇನೆ. ಅಕೆಗೂ ಕಂಪ್ಲೇಂಟ್ ಕೊಡೋಕೆ ಕಾರಣ ಇದ್ದರೆ ಕೊಡಲಿ. ಸಂಜನಾ ಮಾಡಿದ ವರ್ತನೆಯಿಂದಲೇ ನಾನು ಆ ದಿನ ರಾತ್ರಿ ಪೊಲೀಸರಿಗೆ ಕರೆ ಮಾಡಿದೆ ಎಂದಿದ್ದಾರೆ.

    ಗಲಾಟೆ ಆದ ದಿನ ರಾತ್ರಿ ನನ್ನ ಫ್ರೆಂಡ್ ಜೊತೆ ಮಾತಾಡುತ್ತಿದ್ದಳು. ಆಗ ನನ್ನ ಫ್ರೆಂಡ್ ನೀವಿಬ್ಬರೂ ಯಾಕೆ ಮಾತಾಡಲ್ಲ ಅಂದರು. ಆಗ ತಕ್ಷಣ ಅಕೆ ನನ್ನ ಮೇಲೆ ವೈಯಕ್ತಿಕವಾಗಿ ನಿಂದಿಸೋಕೆ ಆರಂಭಿಸಿದಳು. ಆಗ ನಾನು ಇದು ಪಬ್ಲಿಕ್ ಪ್ಲೇಸ್ ಹೀಗೆಲ್ಲಾ ಮಾತಾಡಬೇಡ ಅಂತ ಹೇಳಿದೆ. ಈ ವೇಳೆ ಸಂಜನಾ ಕೈಯಲ್ಲಿದ್ದ ಡ್ರಿಂಕ್‍ನ್ನ ಬಿಸಾಡಿದಳು. ಇದನ್ನ ಸ್ವತಃ ಸಂಜನಾ ನೇ ಹೇಳ್ತಾ ಇದ್ದಾಳೆ. ಹಾಗಾಗಿ ಅಕೆ ಮಾಡಿದ್ದನ್ನ ಒಪ್ಪಿಕೊಂಡಿದ್ದಾಳೆ. ಸಂಜನಾಗೆ ನನ್ನ ಮೇಲೆ ಯಾಕೆ ಅಷ್ಟೊಂದು ಕೋಪ ಅಂತ ಸಂಜನಾನೇ ಹೇಳಬೇಕು. ಕಾರಣ ಇಲ್ಲದೆ ಯಾವ ಕಾರಣಕ್ಕೆ ಸಂಜನಾ ಯಾಕೆ ಆ ರೀತಿ ನಡೆದುಕೊಳ್ತಾ ಇದ್ದಾಳೋ ನನಗೆ ಗೊತ್ತಿಲ್ಲ. ನನಗೆ ಪ್ರಚಾರ ಪಡೆದುಕೊಳ್ಳೋಕೆ ಸಂಜನಾ ರೀತಿ ಬರಲ್ಲ. ನನಗೆ ಪ್ರಚಾರ ಪಡೆದುಕೊಳ್ಳಬೇಕಾದರೆ ಬೇರೆ ದಾರಿಗಳಿವೆ. ನಾವು ಸ್ನೇಹಿತರಾಗಿದ್ದವರು. ಸಂಜನಾ ಈ ನಡೆಯಿಂದ ನನಗೆ ಬೇಜಾರಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗಲಾಟೆಯಾಗಿಲ್ಲ, ಸಾಕ್ಷಿಗೆ ನನ್ನ ಬಳಿ ವಿಡಿಯೋ ಇದೆ: ಸಂಜನಾ ಸ್ಪಷ್ಟನೆ

    ಕಾರಣ ಇಲ್ಲದೆ ಸಂಜನಾ ಯಾಕೆ ಹೀಗೆ ಮಾಡಿತಿದ್ದಾಳೋ ಅರ್ಥ ಆಗ್ತಾ ಇಲ್ಲ. ಜನ ನನಗೆ ಮೆಸೇಜ್ ಮಾಡ್ತಾ ಇದ್ದಾರೆ. ಆಕೆ ನಡೆದುಕೊಳ್ಳುತ್ತಿರುವ ರೀತಿ ಸರಿ ಇಲ್ಲ. ನಿಮ್ಮ ನಡೆ ಸರಿ ಇದೆ. ಆಕೆಯನ್ನ ಬಿಡಬೇಡಿ ಅಂತ ಹಲವರು ಮೆಸೇಜ್ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ; ಎಣ್ಣೆ ಕಿಕ್‍ನಲ್ಲಿ ಗಲಾಟೆ ಮಾಡ್ಕೊಂಡ್ರಾ ಸಂಜನಾ ಗಲ್ರಾನಿ?

    ನಾನು ನ್ಯೂ ಇಯರ್ ಸೆಲೆಬ್ರೇಷನ್ ಗೆ ಅಂತ ಕೇರಳಕ್ಕೆ ಬಂದಿದ್ದೇನೆ. ಆದರೆ ಈ ಗಲಾಟೆ ಹಿನ್ನೆಲೆಯಲ್ಲಿ ಈಗ ಬೆಂಗಳೂರಿಗೆ ವಾಪಾಸ್ ಆಗ್ತೀನಿ ಬಂದ ನಂತರ ಮಾಧ್ಯಮಗಳಿಗೆ ಸಂಪೂರ್ಣ ಮಾಹಿತಿ ಕೊಡುತ್ತೇನೆ ಎಂದು ಹೇಳಿದರು.