Tag: sanjjana galrani

  • ಸಂಜನಾ ಗಲ್ರಾನಿ ಬರ್ತ್‌ಡೇ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್ಸ್

    ಸಂಜನಾ ಗಲ್ರಾನಿ ಬರ್ತ್‌ಡೇ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್ಸ್

    ಟಿ ಸಂಜನಾ ಗಲ್ರಾನಿ (Sanjjana Galrani) ಅ.10ರಂದು ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ತಮ್ಮ ಮೇಲಿದ್ದ ಎಲ್ಲಾ ಸುಳ್ಳು ಕೇಸ್‌ಗಳಿಂದ ದೋಷಮುಕ್ತರಾದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಹುಟ್ಟುಹಬ್ಬವನ್ನು ಕುಟುಂಬಸ್ಥರು ಹಾಗೂ ಆತ್ಮೀಯರೊಂದಿಗೆ ಸಂಜನಾ ವಿಜೃಂಭಣೆಯಿಂದ ಆಚರಿಸಿದ್ದಾರೆ. ನಟಿಯ ಬರ್ತ್‌ಡೇ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ಸ್ ಭಾಗಿಯಾಗಿ ಹಾರೈಸಿದ್ದಾರೆ.

    ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಸಂಜನಾ ಗಲ್ರಾನಿ ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜಿಸಿದ್ದು, ಬಹುಭಾಷಾ ನಟಿ ನಿಕ್ಕಿ ಗಲ್ರಾನಿ, ‘ಬಿಗ್ ಬಾಸ್’ ಖ್ಯಾತಿಯ ಶೈನ್ ಶೆಟ್ಟಿ, ನಟ ಅನಿರುದ್ಧ್, ನಿರ್ಮಾಪಕ ಭಾಮ ಗಿರೀಶ್, ನಿರ್ಮಾಪಕ ಆರ್. ಚಂದ್ರು, ಲೇಖಕ ಕವಿರಾಜ್ ಸೇರಿದಂತೆ ಅನೇಕ ಗಣ್ಯರು ಈ ಸಂಭ್ರಮಕ್ಕೆ ಸಾಕ್ಷಿಯಾದರು.

    ಅಂದಹಾಗೆ, ವೈಯಕ್ತಿಕ ಬದುಕಿನಲ್ಲಿ ಮಗನ ಪಾಲನೆಯಲ್ಲಿ ಬ್ಯುಸಿಯಾಗಿದ್ದ ನಟಿ ಮತ್ತೆ ನಟನೆಗೆ ಕಮ್ ಬ್ಯಾಕ್ ಆಗಿದ್ದಾರೆ. ಮಾಲಿವುಡ್‌ನಲ್ಲಿ ಹೊಸ ಚಿತ್ರವನ್ನು ಅವರು ಒಪ್ಪಿಕೊಂಡಿದ್ದಾರೆ. ಸದ್ಯದಲ್ಲೇ ಮುಂಬರುವ ಚಿತ್ರಗಳ ಬಗ್ಗೆ ಅವರು ಮಾಹಿತಿ ನೀಡಲಿದ್ದಾರೆ. ಇದನ್ನೂ ಓದಿ:ಮಗುವಿನ ಮುಖ ರಿವೀಲ್ ಮಾಡಿದ ‘ಲಕ್ಷ್ಮಿ ಬಾರಮ್ಮ’ ನಟಿ ಕವಿತಾ

  • ನಟಿ ಸಂಜನಾಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಆರೋಪ- ಯುವಕ ಪೊಲೀಸ್ ವಶಕ್ಕೆ

    ನಟಿ ಸಂಜನಾಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಆರೋಪ- ಯುವಕ ಪೊಲೀಸ್ ವಶಕ್ಕೆ

    ಮಡಿಕೇರಿ: ಬಹುಭಾಷಾ ತಾರೆ, ನಟಿ ಸಂಜನಾ ಗಲ್ರಾನಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ ಆರೋಪದಡಿ ಯುವಕನೊಬ್ಬನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಆ್ಯಡಂ ಬಿದ್ದಪ್ಪ ಸದ್ಯ ಪೊಲೀಸರ ವಶದಲ್ಲಿರುವ ಯುವಕ. ಈತನನ್ನು ನಿನ್ನೆ ತಡರಾತ್ರಿ ಇಂದಿರಾನಗರ ಪೊಲೀಸರು ಮಡಿಕೇರಿಗೆ ಬಂದು ವಶಕ್ಕೆ ಪಡೆದಿದ್ದಾರೆ. ಕೋರಿಯೋಗ್ರಾಫರ್ ಪ್ರಸಾದ್ ಬಿದ್ದಪ್ಪ ಪುತ್ರನಾಗಿರುವ ಆ್ಯಡಂ ಬಿದ್ದಪ್ಪ, ಸಂಜನಾಗೆ ನಿಂದಿಸಿ ವಾಟ್ಸಪ್ ಮೆಸೇಜ್ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿತ್ತು. ಇದನ್ನೂ ಓದಿ: ‘ಕನ್ನೇರಿ’ಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ ರಾಜ್ಯ ಪ್ರಶಸ್ತಿ ವಿಜೇತ ಎಂ.ಕೆ.ಮಠ

    ವಾಟ್ಸಪ್ ಮೆಸೇಜ್‍ನಿಂದ ನೊಂದ ಸಂಜನಾ ಕೂಡಲೇ ಇಂದಿರಾನಗರ ಠಾಣೆಗೆ ದೂರು ನೀಡಿದ್ರು. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಇಂದಿರಾನಗರ ಪೊಲೀಸರು, ಬಿದ್ದಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಬಿದ್ದಪ್ಪ ಮೊಬೈಲ್ ವಶಕ್ಕೆ ಪಡೆದು ವಾಟ್ಸಪ್ ಚಾಟ್ ಪರಿಶೀಲಿಸಿದ್ದಾರೆ. ಆದರೆ ಆತ ಸಂಜನಾಗೆ ಮಾಡಿರುವ ಎಲ್ಲಾ ಮೆಸೇಜಸ್‍ಗಳನ್ನು ಡಿಲೀಟ್ ಮಾಡಿದ್ದಾನೆ. ಹೀಗಾಗಿ ಮೊಬೈಲ್ ಅನ್ನು ಮತ್ತೆ ರಿಟ್ರೀಲ್‍ಗೆ ಪೊಲೀಸರು ಕಳುಹಿಸಿದ್ದಾರೆ. ಇತ್ತ ಬಿದ್ದಪ್ಪ ವಿಚಾರಣೆ ಮುಂದುವರಿಸಿದ್ದಾರೆ. ಇದನ್ನೂ ಓದಿ; ಪ್ರೀತಿ ಅರಸಿ ಹೊರಟವನ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ‘ಮೈಸೂರು’

  • ಗೆಳೆಯನ ನಂಬಿ ಕ್ಯಾಸಿನೋದಲ್ಲಿ 40 ಲಕ್ಷ ಬಂಡವಾಳ- ಸಂಜನಾಗೆ ಎದುರಾಗುತ್ತಾ ಸಂಕಷ್ಟ..?

    ಗೆಳೆಯನ ನಂಬಿ ಕ್ಯಾಸಿನೋದಲ್ಲಿ 40 ಲಕ್ಷ ಬಂಡವಾಳ- ಸಂಜನಾಗೆ ಎದುರಾಗುತ್ತಾ ಸಂಕಷ್ಟ..?

    ಬೆಂಗಳೂರು: ಗೆಳೆಯ ರಾಹುಲ್ ತೋನ್ಸೆಯನ್ನ ನಂಬಿ ನಟಿ ಸಂಜನಾ ಗಲ್ರಾನಿ ಕೈ ಸುಟ್ಟುಕೊಂಡಿದ್ದಾರೆ. ಆದರೆ ಸಂಜನಾಗೆ ದೋಖ ಆಗಿರೋದು ಒಂದಲ್ಲ, ಎರಡಲ್ಲ. ಬರೋಬ್ಬರಿ 40-45 ಲಕ್ಷ ಹಣ.

    ಕ್ಯಾಸಿನೋದಲ್ಲಿ ಹಣ ಹೂಡಿದ್ರೆ ಹೆಚ್ಚು ಲಾಭ ಬರುತ್ತೆ ಅಂತ ನಂಬಿದ್ದ ನಟಿ ಸಂಜನಾ ತನ್ನ ಆತ್ಯಾಪ್ತ ಗೆಳೆಯ ರಾಹುಲ್ ತೋನ್ಸೆ ಕೈಯಲ್ಲಿ 40-45 ಲಕ್ಷ ಹಣ ನೀಡಿದ್ರಂತೆ. 2018ರಲ್ಲಿ ಶೇ.15 ಬಡ್ಡಿ ನೀಡುವುದಾಗಿ 40 ಲಕ್ಷ ಪಡೆದಿದ್ದ ರಾಹುಲ್, ಮೂರೇ ತಿಂಗಳಲ್ಲಿ 40 ಲಕ್ಷಕ್ಕೆ 70 ಲಕ್ಷ ಕೊಡ್ತೀನಿ ಅಂತ ಹೇಳಿದ್ನಂತೆ. ಆದರೆ ಇದೀಗ ಲಾಭ ಹೋಗ್ಲಿ ಅಸಲು ಹಣವನ್ನೂ ನೀಡದೆ ಉಂಡೇನಾಮ ಹಾಕಿದ್ದಾನೆ. ಇದೀಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಇದೇ ಕೇಸ್ ಸಂಜನಾಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

    ಆಪ್ತ ಗೆಳೆಯನಿಂದ ವಂಚನೆ ಬಗ್ಗೆ ದೂರು ಕೊಟ್ಟಿದ್ದ ಸಂಜನಾಗೂ ಕಂಟಕ ಫಿಕ್ಸ್ ಆಂತ ಹೇಳಲಾಗ್ತಿದೆ. ಎಫ್‍ಐಆರ್ ಬೆನ್ನಲ್ಲೇ ಇಂದಿರಾನಗರ ಪೊಲೀಸರು 3 ದಿನಗಳಲ್ಲಿ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ರಾಹುಲ್‍ಗೆ ಸಮನ್ಸ್ ಜಾರಿ ಮಾಡಿದ್ದಾರೆ. ಈ ಬೆನ್ನಲ್ಲೇ ನಟಿ ಸಂಜನಾ ಗಲ್ರಾನಿ ವಿಚಾರಣೆ ನಡೆಸಲಿರುವ ಪೊಲೀಸರು, ಕ್ಯಾಸಿನೋಗೆ ಹಣ ಹೂಡಿಕೆ ಮಾಡಿದ್ದರ ಮೂಲ ಕೆದಕಿದ್ದಾರೆ. ಈ ಸಂಬಂಧ ಐಟಿ ಇಲಾಖೆಗೂ ಪೊಲೀಸರು ಪತ್ರ ಬರೆಯುವ ಸಾಧ್ಯತೆ ಇದೆ. ಇದನ್ನೂ ಓದಿ: ನಟಿ ಸಂಜನಾ ಗಲ್ರಾನಿಗೆ ಕ್ಯಾಸಿನೋ ದೋಖಾ – ಸ್ನೇಹಿತನಿಂದಲೇ ಹಣ ದುಪ್ಪಟ್ಟು ಆಮಿಷ

    ಒಟ್ಟಿನಲ್ಲಿ ಸಂಜನಾಗೆ ತಾನೇ ನೀಡಿದ ದೂರು ಕಂಟಕವಾಗಿ ಕಾಡುವ ಸಾಧ್ಯತೆ ಇದೆ. ಒಮದು ವೇಳೆ 40 ಲಕ್ಷ ಹಣದ ಮೂಲ ಸರಿಯಾಗಿ ನೀಡಿದ್ದೇ ಆದಲ್ಲಿ ಮಾತ್ರ ಸಂಜನಾ ಪಾರಾಗಲಿದ್ದಾರೆ.

  • ನಟಿ ಸಂಜನಾ ಗಲ್ರಾನಿಗೆ ಕ್ಯಾಸಿನೋ ದೋಖಾ – ಸ್ನೇಹಿತನಿಂದಲೇ ಹಣ ದುಪ್ಪಟ್ಟು ಆಮಿಷ

    ನಟಿ ಸಂಜನಾ ಗಲ್ರಾನಿಗೆ ಕ್ಯಾಸಿನೋ ದೋಖಾ – ಸ್ನೇಹಿತನಿಂದಲೇ ಹಣ ದುಪ್ಪಟ್ಟು ಆಮಿಷ

    – ಲಾಭ ಹೋಗ್ಲಿ ಈಗ ಕೊಟ್ಟ ಹಣವೂ ಇಲ್ಲ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾಗೂ ಗಲ್ರಾನಿಗೂ ವಿವಾದಗಳಿಗೂ ಅವಿನಾಭಾವ ಸಂಬಂಧ ಅನ್ಸುತ್ತೆ. ಮೊನ್ನೆ ಮೊನ್ನೆ ಕ್ಯಾಬ್ ಚಾಲಕನ ಜೊತೆ ಕಿರಿಕ್ ಮಾಡ್ಕೊಂಡು ಸುದ್ದಿಯಾಗಿದ್ದ ಸಂಜನಾ ಈಗ ಮತ್ತೆ ಸುದ್ದಿಯಾಗಿದ್ದಾರೆ. ಆತ್ಮೀಯ ಸ್ನೇಹಿತ ರಾಹುಲ್ ತೊನ್ಸೆ ನಟಿ ಸಂಜನಾಗೆ ವಂಚಿಸಿದ್ದು ನಟಿಮಣಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಹೌದು. ಸಹೋದರ, ಸಹೋದರಿಯಂತೆ ಇದ್ದ ಸಂಜನಾ ಮತ್ತು ರಾಹುಲ್ ತೊನ್ಸೆ ನಡುವೆ ಇದೀಗ ಬಿರುಗಾಳಿ ಬೀಸಿದೆ. ರಾಹುಲ್ ತೊನ್ಸೆ ಗೋವಾ ಹಾಗೂ ಕೊಲೊಂಬೊದಲ್ಲಿ ಕ್ಯಾಸಿನೋಗಳಿದ್ದು ಹಣ ಹಾಕಿದ್ರೆ ದುಪ್ಪಟ್ಟು ಆಗುತ್ತೆ ಅಂತ ಹೇಳಿದ್ರಂತೆ. ಸ್ನೇಹಿತನ ಮಾತು ನಂಬಿ ಸಂಜನಾ ರಾಹುಲ್ ತೊನ್ಸೆಗೆ ಹಣವನ್ನು ನೀಡಿದ್ರಂತೆ. ಆದರೆ ಇದೀಗ ಸಂಜನಾ ಹಣ ಕೇಳಿದ್ರೆ ರಾಹುಲ್ ಕೈ ಎತ್ತಿದ್ದಾರಂತೆ. ಸ್ನೇಹಿತನಿಂದ ಮೊಸ ಹೋದ ಸಂಜನಾ ನ್ಯಾಯಕೊಡಿಸುವಂತೆ 4ನೇ ಎಸಿಎಂಎಂ ಕೋರ್ಟ್ ಮೊರೆ ಹೋಗಿದ್ದರು. ಸಂಜನಾ ಸಲ್ಲಿಸಿದ್ದ ಪಿಸಿಆರ್ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ತನಿಖೆಗೆ ಸೂಚನೆ ನೀಡಿದೆ. ನ್ಯಾಯಾಲಯದ ಆದೇಶದಂತೆ ಇಂದಿರಾನಗರ ಪೊಲೀಸರು ರಾಹುಲ್ ತೊನ್ಸೆ ಸೇರಿದಂತೆ 3 ಜನರ ವಿರುದ್ಧ ವಂಚನೆ, ಮೋಸ, ಮಾನನಷ್ಟಕ್ಕೆ ಸಂಬಂಧಿಸಿದ ಕೇಸ್ ದಾಖಲಿಸಿದ್ದಾರೆ.

    ಎಫ್‍ಐಆರ್ ನಲ್ಲಿ ಏನಿದೆ..?
    ರಾಹುಲ್ ತೊನ್ಸೆ ಫಿರ್ಯಾದಿ ಸಂಜನಾ ಗಲ್ರಾನಿ ಸ್ನೇಹಿತನು ಹಾಗೂ ಆತ್ಮೀಯನು ಆಗಿದ್ದು, ಫಿರ್ಯಾದಿ ಸಂಜನಾ ಗಲ್ರಾನಿ ಬಳಿ ತಾನು ಗೋವಾ ಮತ್ತು ಕೊಲಂಬೋದಲ್ಲಿ ಕ್ಯಾಸಿನೋಗಳ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುತ್ತೇನೆ. ತಾನು ಹೇಳಿದ ಕಡೆಗಳಲ್ಲಿ ಹಣ ವಿನಿಯೋಗಿಸಿದರೇ ಅಧಿಕ ಲಾಭ ಗಳಿಸಬಹುದು ಎಂದು ಫಿರ್ಯಾದುದಾರರಾದ ಸಂಜನಾ ಗಲ್ರಾನಿಯನ್ನು ನಂಬಿಸಿ, ಕಳೆದ ಮೂರು ವರ್ಷಗಳಲ್ಲಿ ರಾಹುಲ್ ತೊನ್ಸೆ, ರಾಮಕೃಷ್ಣ ಮತ್ತು ಶ್ರೀಮತಿ ರಾಗೇಶ್ವರಿಯ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿಸಿಕೊಂಡಿರುತ್ತಾರೆ. ಆದರೆ ಯಾವುದೇ ಲಾಭಾಂಶವನ್ನು ನೀಡಿರುವುದಿಲ್ಲ. ಹಲವಾರು ಬಾರಿ ಹಣವನ್ನು ನೀಡುವಂತೆ ಕೇಳಿದ್ದು, ಹಿಂದಿರುಗಿಸಿರುವುದಿಲ್ಲ. ಇದನ್ನೂ ಓದಿ: 200 ಕಿಮೀ ವೇಗದಲ್ಲಿ ಕಾರ್ ಸವಾರಿ ಮಾಡಿದ ಅರ್ವಿಯಾ

    ಆರೋಪಿಗಳು ಫಿರ್ಯಾದುದಾರರಾದ ಸಂಜನಾ ಗಲ್ರಾನಿಯನ್ನು ವಂಚಿಸುವ ಸಂಚು ರೂಪಿಸಿರುತ್ತಾರೆ. ಅಲ್ಲದೇ ಫಿರ್ಯಾದುದಾರರಾದ ಸಂಜನಾ ಗಲ್ರಾನಿಯವರ ಹಣವನ್ನು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಲಾಭ ಗಳಿಸಿರುತ್ತಾರೆ. ಮೂವರು ಆರೋಪಿಗಳು ಫಿರ್ಯಾದುದಾರರಾದ ಸಂಜನಾ ಗಲ್ರಾನಿಯವರ ಘನತೆಗೆ ಕುಂದುಂಟು ಬರುವಂತೆ ಸುಳ್ಳು ಹೇಳಿಕೆಗಳನ್ನು ನೀಡಿರುತ್ತಾರೆ. ಹಣವನ್ನು ವಾಪಸ್ ಮಾಡದೇ ಮೋಸ ಮಾಡಿರುತ್ತಾರೆ. ಎ-1 ರಾಹುಲ್ ತೋನ್ಸೆ, ಎ-2 ರಾಮಕೃಷ್ಣ ಮತ್ತು ಎ-3 ರಾಗೇಶ್ವರಿಯವರು ಐಪಿಸಿ ಕಲಂ 34, 120(ಬಿ), 107, 354, 406, 420, 506ರ ಅಡಿಯಲ್ಲಿ ವಂಚಿಸಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲು ದೂರಿನಲ್ಲಿ ಫಿರ್ಯಾದಿದಾರಾದ ಸಂಜನಾ ಗಲ್ರಾನಿ ಕೋರಿರುತ್ತಾರೆ.

    ಎಫ್‍ಐಆರ್ ದಾಖಲಾಗ್ತಿದ್ದ ಹಾಗೆ ಸಂಜನಾ ಟ್ವಿಟರ್‍ನಲ್ಲಿ ರಾಹುಲ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಾನು ಒಬ್ಬ ವ್ಯಕ್ತಿಯನ್ನು ನಾನು ನನ್ನ ಒಡಹುಟ್ಟಿದ ಸಹೋದರ ಎಂದು ಪರಿಗಣಿಸಿದ್ದೆ. ನಾವು ಒಂದೇ ತಟ್ಟೆಯಲ್ಲಿ ಊಟ ಮಾಡಿದ ಸಮಯವಿದೆ. ಆತ ಊಟ ಮಾಡಿದ ತಟ್ಟೆಯಲ್ಲಿ ಎಂಜಲು ಉಗುಳುವ ಮೂಲಕ ನನಗೆ ದ್ರೋಹ ಬಗೆದಿದ್ದಾನೆ. ನನ್ನ ಹೆಸರು, ನನ್ನ ಖ್ಯಾತಿ, ನನ್ನ ಘನತೆಗೆ ಧಕ್ಕೆ ತಂದಿದ್ದಲ್ಲದೆ, ನನ್ನ ಆರ್ಥಿಕವಾಗಿಯೂ ನಾಶ ಮಾಡಿದ್ದಾನೆ. ಇಷ್ಟಾದರೂ ನಾನು ಮಾನವೀಯತೆಯ ದೃಷ್ಟಿಯಿಂದ ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರ ತಂದೆ, ತಾಯಿ ಹಿರಿಯರಿದ್ದಾರೆ. ಅವರ ಸಲುವಾಗಿ ನಾನು ದೇವರಲ್ಲಿ ಮತ್ತೊಮ್ಮೆ ಪ್ರಾರ್ಥಿಸುವುದು ಇಷ್ಟೇ, ಆದಷ್ಟು ಬೇಗ ಈ ಎಲ್ಲಾ ಪ್ರಕರಣಗಳು ಸುಖಾಂತ್ಯವಾಗಲಿ ಎಂದು ಟ್ವೀಟ್ ಮಾಡುವ ಮೂಲಕ ರಾಹುಲ್ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್‍ಗೆ ಜೈಲೇ ಗತಿ

    ಒಟ್ಟಿನಲ್ಲಿ ಸಂಜನಾ ಮತ್ತು ರಾಹುಲ್ ನಡುವೆ ಇದ್ದ ಅನ್ಯೋನ್ಯ ಸಂಬಂಧ ಹಣದ ವಿಚಾರವಾಗಿ ಇದೀಗ ಪರಸ್ಪರ ಶತೃಗಳನ್ನಾಗಿ ಮಾಡಿದೆ. ಸಂಜನಾ ಮಾಡಿರುವ ಆರೋಪ ಪೊಲೀಸರ ತನಿಖೆಯಲ್ಲಿ ಸಾಬಿತಾದ್ರೆ ರಾಹುಲ್‍ಗೆ ಶಿಕ್ಷೆಯಾಗುವ ಸಾಧ್ಯತೆ ಇದೆ.

  • ಕ್ಯಾಬ್ ಡ್ರೈವರ್ ಜೊತೆ ಸಂಜನಾ ಕಿರಿಕ್ – ಅವಾಚ್ಯ ಶಬ್ದಗಳಿಂದ ನಿಂದನೆ

    ಕ್ಯಾಬ್ ಡ್ರೈವರ್ ಜೊತೆ ಸಂಜನಾ ಕಿರಿಕ್ – ಅವಾಚ್ಯ ಶಬ್ದಗಳಿಂದ ನಿಂದನೆ

    – ತಪ್ಪು ಅಡ್ರೆಸ್ ಬುಕ್ ಮಾಡಿ, ಡ್ರೈವರ್ ಜೊತೆ ಕಿರಿಕ್

    ಬೆಂಗಳೂರು: ನಟಿ ಸಂಜನಾ ಗಲ್ರಾನಿ ಓಲಾ ಕ್ಯಾಬ್ ಚಾಲಕನ ಜೊತೆ ಕಿರಿಕ್ ಮಾಡಿಕೊಂಡಿದ್ದು, ಕೋಪಾತಾಪ ತೋರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಶೂಟಿಂಗ್ ಸ್ಪಾಟ್ ಗೆ ಹೋಗಬೇಕೆಂದು ಸಂಜನಾ ಇಂದು ಬೆಳಗ್ಗೆ ಓಲಾ ಬುಕ್ ಮಾಡಿದ್ದರು. ಇಂದಿರಾ ನಗರದಿಂದ ಕೆಂಗೇರಿಗೆ ಕ್ಯಾಬ್ ಬುಕ್ ಮಾಡಬೇಕಿತ್ತು. ಆದರೆ ರಾಜರಾಜೇಶ್ವರಿ ನಗರಕ್ಕೆ ಕ್ಯಾಬ್ ಬುಕ್ ಮಾಡಿದ್ದಾರೆ. ಓಲಾ ಚಾಲಕ ಸುಸಯ್ ಮಣಿ.ಎಸ್ ಓಲಾ ಕಸ್ಟಮರ್ ಕೇರ್ ಗೆ ಕರೆ ಮಾಡಿ ಲೊಕೇಶನ್ ಬದಲಿಸುವಂತೆ ಹೇಳಿದ್ದರು. ಆದರೆ ಲೊಕೇಶನ್ ಬದಲಾಗಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚಾಲಕನ ಜೊತೆ ನಟಿ ಸಂಜನಾ ವಾಗ್ವಾದಕ್ಕಿಳಿದು ಆವಾಜ್ ಹಾಕಿದ್ದಾರೆ.

    ಸಂಜನಾ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಚಾಲಕ ಮಣಿ ಆರೋಪಿಸಿದ್ದಾರೆ. ಅಲ್ಲದೆ ಸಂಜನಾ ನಡೆದುಕೊಂಡಿರುವ ಬಗ್ಗೆ ಮೊಬೈಲ್ ನಲ್ಲಿ ವೀಡಿಯೋ ಮಾಡಿದ್ದಾರೆ. ಹೇಳಿದ ಜಾಗಕ್ಕೆ ಹೋಗಿಲ್ಲ ಎಂದು ಸಂಜನಾ ಕೆಂಡಾಮಲರಾಗಿದ್ದರಂತೆ. ಅದೇ ರೀತಿ ಅವಾಚ್ಯ ಶಬ್ದದಿಂದ ಸಂಜನಾ ನಿಂದಿಸಿದರು ಎಂದು ರಾಜರಾಜೇಶ್ವರಿ ನಗರ ಠಾಣೆಗೆ ತೆರಳಿ ಕ್ಯಾಬ್ ಚಾಲಕ ಮಣಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಭಾರತ, ಪಾಕಿಸ್ತಾನ ಟಿ20 – ಕೆಲವೇ ನಿಮಿಷಗಳಲ್ಲಿ ಟಿಕೆಟ್ ಸೋಲ್ಡ್ ಔಟ್

    ಇತ್ತ ಸಂಜನಾ ಟ್ವೀಟ್ ಮಾಡುವ ಮೂಲಕ ಓಲಾ ಕ್ಯಾಬ್ ನಂಬರ್ ಹಾಗೂ ಚಾಲಕನ ಹೆಸರು ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಎಸಿ ಹೆಚ್ಚು ಮಾಡುವಂತೆ ಹೇಳಿದ್ದಕ್ಕೆ ಉಡಾಫೆ ಉತ್ತರ ನಿಡಿದರು. ತೊಂದರೆ ನೀಡಿದ್ದಾರೆ. ಅಲ್ಲದೆ ಕಾರ್ ಕಿಟಕಿ ಸಹ ಸರಿಯಾಗಿ ಇರಲಿಲ್ಲ. ನಾವು ಪೂರ್ತಿ ಹಣ ನೀಡಿದರೂ ಇಂತಹ ಕಾರನ್ನು ಏಕೆ ನೀಡುತ್ತೀರಿ ಎಂದು ಓಲಾಗೆ ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ನಿಮ್ಮPASSION ಹುಡುಕಲು ವಯಸ್ಸು ಮುಖ್ಯವಲ್ಲ: ಪ್ರಿಯಾಂಕಾ ತಿಮ್ಮೇಶ್

    ಚಾಲಕ ಕಿರುಕುಳ ನಿಡಿದ ಎಂದು ಸಂಜನಾ ಟ್ವೀಟ್ ಮಾಡಿದರೆ, ಇತ್ತ ಅವಾಚ್ಯ ಶಬ್ದದಿಂದ ನಿಂದಿಸಿದರು ಎಂದು ಸಂಜನಾ ವಿರುದ್ಧ ಚಾಲಕ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ 100ಗೆ ಕರೆ ಮಾಡಿ ಸಂಜನಾ ಸಹ ದೂರು ನೀಡಿದ್ದಾರೆ ಎನ್ನಲಾಗಿದೆ. ಕಾರ್ ನಂಬರ್, ಚಾಲಕನ ಹೆಸರು ಹಾಕಿ ಚಾಲಕ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರಿದ್ದಾರೆ.

  • ನಟಿ ಸಂಜನಾ ಗಲ್ರಾನಿ ಆಸ್ಪತ್ರೆಗೆ ದಾಖಲು

    ನಟಿ ಸಂಜನಾ ಗಲ್ರಾನಿ ಆಸ್ಪತ್ರೆಗೆ ದಾಖಲು

    ಬೆಂಗಳೂರು: ಡ್ರಗ್ಸ್ ಸೇವಿಸಿರುವುದು ಖಚಿತ ಎಂದು ವರದಿಯಾಗುತ್ತಿದ್ದಂತೆಯೇ ಇತ್ತ ನಟಿ ಸಂಜನಾ ಗಲ್ರಾನಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಹೌದು. ಮಗಳು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾಳೆ. ಈ ಹಿಂದೆ ಸಂಜನಾಗೆ ಸರ್ಜರಿ ಆಗಿತ್ತು. ಹೀಗಾಗಿ ರಾತ್ರಿಯೇ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಮೆಂಟಲಿ ಅಪ್ ಸೆಟ್ ಆಗಿದ್ದಾರೆ ಎಂದು ನಟಿ ಸಂಜನಾ ತಾಯಿ ರೇಷ್ಮಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

    ಸದ್ಯ ಆಕೆ ಈ ಕೇಸ್ ನಿಂದ ಡಿಸ್ಟರ್ಬ್ ಆಗಿದ್ದಾಳೆ. ಪದೇ ಪದೇ ಇದೇ ಕೇಸ್ ಬಗ್ಗೆ ಕೇಳಿ ಡಿಪ್ರೆಶನ್ ಗೆ ಹೋಗಿದ್ದಾಳೆ. ಹುಷಾರಿಲ್ಲದ ಕಾರಣ ಆಕೆಯನ್ನ ಆಸ್ಪತ್ರೆಗೆ ಸೇರಿಸಲಾಗಿದೆ. ನನ್ನ ಮಗಳು ಏನೂ ತಪ್ಪು ಮಾಡಿಲ್ಲ. ಆದರೆ ದುರಾದೃಷ್ಟದಿಂದ ಈತರ ಎಲ್ಲಾ ಆಗ್ತಿದೆ. ನಾವು ಭಗವಾನ್ ನನ್ನ ನಂಬ್ತೀವಿ. ದೇವರ ದಯೆಯಿಂದ ನಾಲ್ಕು ಜನರಿಗೆ ಸಹಾಯ ಮಾಡುತ್ತಿದ್ದೇವೆ. ಹುಷಾರಿಲ್ಲದ ಕಾರಣ ನಂಗೆ ಊಟ ನೀಡೋಕೆ ಹೇಳಿದಳು ಎಂದರು. ಇದನ್ನೂ ಓದಿ: ಬೆಟ್ಟದಲ್ಲಿ ವಿವಸ್ತ್ರಗೊಳಿಸಿ ಮಹಿಳೆಯ ಶವ ಪತ್ತೆ – ಅತ್ಯಾಚಾರ ಎಸಗಿ ಕೊಲೆ ಶಂಕೆ

    ಒಂದು ಹುಡುಗಿ ಆಗಿ ಒಳ್ಳೆ ಕೆಲಸ ಮಾಡ್ತಿದ್ದಾಳೆ. ಎಲ್ಲಾ ನಮ್ಮ ಡೆಸ್ಟಿನಿ. ಸಂಜನಾಗೆ ಹುಷಾರಿಲ್ಲ ಬೇಜಾರನಲ್ಲಿ ಇದ್ದೇವೆ. ಅವರಿಗೆ ಅಟ್ಯಾಕ್ಟ್ ತರಾ ಆಗ್ತಿದೆ. 10-12 ದಿನ ಊಟ ಕೊಡ್ತೇವೆ. ತುಂಬಾ ಡಿಪ್ರೇಸ್ ಆಗಿದ್ದಾರೆ. ಎಲ್ಲರೂ ಸರ್ಪೋಟ್ ಮಾಡಿ. ತಾಯಿಯಾಗಿ ದೇವರನ್ನು ಪ್ರೇಯರ್ ಮಾಡ್ತೇನೆ ಎಂದು ರೇಷ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.

    10 ತಿಂಗಳ ಬಳಿಕ ಹೈದರಾಬಾದ್‍ನ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸಿಕ್ಕಿದ್ದು, ತಲೆಕೂದಲ ಪರೀಕ್ಷೆಯಲ್ಲಿ ನಟಿಯರ ಮಾದಕ ದ್ರವ್ಯ ಸೇವನೆ ದೃಢವಾಗಿದೆ. 2020ರ ಸೆಪ್ಟೆಂಬರ್ 13 ಕೆಸಿ ಜನರಲ್ ಆಸ್ಪತ್ರೆಯಲ್ಲಿ ರಕ್ತ, ಯೂರಿನ್ ಸ್ಯಾಂಪಲ್ ಸಂಗ್ರಹ ಮಾಡಲಾಗಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಮತ್ತೆ ಡಿಸೆಂಬರ್ 5ರಂದು ಕೋರ್ಟ್ ಅನುಮತಿ ಪಡೆದು, ಕೂದಲು, ರಕ್ತ, ಯೂರಿನ್ ಅಂಶಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಈಗ ಎಫ್‍ಎಸ್‍ಎಲ್ ವರದಿಯಲ್ಲಿ ಡ್ರಗ್ಸ್ ಸೇವನೆ ಖಚಿತವಾಗಿದೆ. ಈ ಮೂಲಕ ಕರ್ನಾಟಕದಲ್ಲಿ ತಲೆ ಕೂದಲ ಮೂಲಕ ಡ್ರಗ್ಸ್ ಸೇವನೆ ಖಚಿತ ಆಗಿರೋದು ಇದೇ ಮೊದಲ ಕೇಸ್ ಎಂದು ಸಿಸಿಬಿ ಹೇಳಿದೆ.

    ಡ್ರಗ್ಸ್ ಸೇವನೆ ಖಚಿತ, ಮುಂದೇನು?
    ಡ್ರಗ್ಸ್ ಕೇಸಲ್ಲಿ ಕೂದಲು ಮೂಲಕ ಪತ್ತೆ ಹಚ್ಚಿರೋದು ರಾಜ್ಯದಲ್ಲಿ ಇದೇ ಮೊದಲ ಕೇಸ್ ಆಗಿದೆ. ರಾಗಿಣಿ, ಸಂಜನಾ ವಿರುದ್ಧ ಬೆಂಗಳೂರಿನ 33ನೇ ಸಿಸಿಹೆಚ್ ಕೋರ್ಟ್‍ಗೆ ಸಿಸಿಬಿ ಪೊಲೀಸರು 145 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ಎಫ್‍ಎಸ್‍ಎಲ್ ವರದಿ, ಸಿಸಿಬಿ ವಿಚಾರಣೆ ವೇಳೆ ಇಬ್ಬರ ವಿರುದ್ಧ ನಟರು ಕೊಟ್ಟಿರುವ ಹೇಳಿಕೆಯನ್ನು ಸಾಕ್ಷ್ಯವಾಗಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣ – ಕೊನೆಗೂ ಮೌನ ಮುರಿದ ನಟಿ ರಾಗಿಣಿ

    ಹೈದ್ರಾಬಾದ್ ಎಫ್‍ಎಸ್‍ಎಲ್ ರಿಪೋರ್ಟ್ ಬಗ್ಗೆ ಕೋರ್ಟ್ ಪರಿಶೀಲನೆ ನಡೆಸಲಿದೆ. ಇಬ್ಬರ ವಿಚಾರಣೆ ವೇಳೆ ಸರ್ಕಾರಿ ವಕೀಲರು ವಾದ ಮಂಡಿಸಲಿದ್ದಾರೆ. ಈ ವೇಳೆ ಪೂರಕ ಸಾಕ್ಷ್ಯ ಕೊಟ್ಟು ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಲಿದ್ದಾರೆ. ವಿಚಾರಣೆ ಬಳಿಕ ಆರೋಪ ಸಾಬೀತಾದರೆ ಸಂಜನಾ, ರಾಗಿಣಿಗೆ ಕೋರ್ಟ್ ಶಿಕ್ಷೆ ವಿಧಿಸಬಹುದು. ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಟಿ ಮಣಿಯರು ಹೈಕೋರ್ಟ್ ಮೊರೆ ಹೋಗಬಹುದು.

  • ತಟ್ಟೆಯಲ್ಲಿ ಪೌಡರ್ ಹಾಕಿ ಎಟಿಎಂ ಕಾರ್ಡ್‍ನಿಂದ ಉಜ್ಜಿ ಕೊಕೇನ್ ಸೇವಿಸಿದ್ದ ರಾಗಿಣಿ

    ತಟ್ಟೆಯಲ್ಲಿ ಪೌಡರ್ ಹಾಕಿ ಎಟಿಎಂ ಕಾರ್ಡ್‍ನಿಂದ ಉಜ್ಜಿ ಕೊಕೇನ್ ಸೇವಿಸಿದ್ದ ರಾಗಿಣಿ

    ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾಣಿ ಡ್ರಗ್ಸ್ ಸೇವನೆ ಮಾಡುತ್ತಿರುವುದು ದೃಢಪಟ್ಟಿದ್ದು, ಇದೀಗ ಇಬ್ಬರಿಗೂ ಮತ್ತೆ ಸಂಕಷ್ಟ ಎದುರಾಗಿದೆ.

    ತಲೆ ಕೂದಲು ಮಾದರಿ ಪರೀಕ್ಷೆಯಲ್ಲಿ ಡ್ರಗ್ಸ್ ಸೇವನೆ ಮಾಡುತ್ತಿದ್ದಿದ್ದು ದೃಢಪಟ್ಟಿದೆ. ಬರೋಬ್ಬರಿ 10 ತಿಂಗಳ ಬಳಿಕ ಎಫ್‍ಎಸ್‍ಎಲ್ ವರದಿ ಸಿಸಿಬಿ ಕೈ ಸೇರಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜೈಲುವಾಸ ಅನುಭವಿಸಿರುವ ನಟಿಯರು ಮತ್ತೆ ಲಾಕ್ ಆಗುವ ಸಾಧ್ಯತೆಗಳು ದಟ್ಟವಾಗಿವೆ.

    ಬೆಂಗಳೂರಿನ 33ನೇ ಸಿಸಿಹೆಚ್ ಕೋರ್ಟ್‍ಗೆ ಸಿಸಿಬಿ ಪೊಲೀಸರು 145 ಪುಟಗಳ ಆರೋಪಪಟ್ಟಿಯನ್ನು ಈಗಾಗಲೇ ಸಲ್ಲಿಕೆ ಮಾಡಿದ್ದಾರೆ. ರಾಗಿಣಿ ಮೂಗಿನಲ್ಲಿ ಕೋಕೇನ್ ಸೇವಿಸುತ್ತಿದ್ದರು. ಇಂತಹ ಮಾದಕ ಪಾರ್ಟಿಗಳು ಫ್ಯಾಷನ್ ಶೋನಲ್ಲೂ ನಡೆಯುತ್ತಿತ್ತು. ರಾಗಿಣಿ ಎಟಿಎಂ ಕಾರ್ಡ್, ನೋಟ್ ಮೂಲಕ ನಶೆ ಏರಿಸಿಕೊಳ್ಳುತ್ತಿದ್ದರು ಎಂಬುದು ಆರೋಪಪಟ್ಟಿಯಲ್ಲಿ ಅನಾವರಣವಾಗಿದೆ.

    ರಾಗಿಣಿಯವರು ತಟ್ಟೆಯಲ್ಲಿ ಕೊಕೇನ್ ಪೌಡರ್ ಹಾಕಿ ಎಟಿಎಂ ಕಾರ್ಡ್‍ನಿಂದ ಉಜ್ಜುತ್ತಿದ್ದರು. ಬಳಿಕ ಆ ಕೊಕೇನ್ ಪೌಡರ್ ಅನ್ನು 2 ಲೇನ್ ಆಗಿ ಮಾಡಿ ನಂತರ ಸುರುಳಿ ಸುತ್ತಿದ್ದ 100 ರೂ. ನೋಟಿನ ಮೂಲಕ ಡ್ರಗ್ಸ್ ಸೇವನೆ ಮಾಡುತ್ತಿದ್ದರು. ನೋಟಿನ ಮೂಲಕ ಮೂಗಿಗೆ ಕೊಕೇನ್ ಪೌಡರ್ ಇಳಿಸಿಕೊಳ್ಳುತ್ತಿದ್ದರು ಎಂಬುದಾಗಿ ಕೋರ್ಟ್‍ಗೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಸಿಸಿಬಿ ದೋಷಾರೋಪಣೆ ಮಾಡಿದೆ. ಇದನ್ನೂ ಓದಿ: ರಾಜೀನಾಮೆ ಸಂದೇಶ ರವಾನಿಸಿದ ಸಚಿವ ಆನಂದ್ ಸಿಂಗ್?

    ಹೈದರಾಬಾದ್ ಎಫ್‍ಎಸ್‍ಎಲ್ ಲ್ಯಾಬ್ ನೀಡಿರುವ ವರದಿಯನ್ನು ಸಿಸಿಬಿ ತರಿಸಿಕೊಂಡಿದೆ. ಈ ಹಿಂದೆ ಇಬ್ಬರು ನಟಿಯರನ್ನು ಬಂಧಿಸಿದ್ದಾಗ ತಲೆ ಕೂದಲು ಸಂಗ್ರಹಿಸಿ ಡ್ರಗ್ಸ್ ಸೇವನೆ ಪತ್ತೆ ಮಾಡಲು ಕಳುಹಿಸಲಾಗಿತ್ತು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಲೆ ಕೂದಲಿನ ಮಾದರಿ ಸಂಗ್ರಹ ಮಾಡಲಾಗಿತ್ತು. ಒಮ್ಮೆ ಸರಿಯಾದ ಕ್ರಮದಲ್ಲಿ ಮಾದರಿ ಸಂಗ್ರಹ ಆಗದೇ ರಿಜೆಕ್ಟ್ ಆಗಿತ್ತು. ಬಳಿಕ ಮತ್ತೊಮ್ಮೆ ಮಾದರಿ ಸಂಗ್ರಹ ಮಾಡಿ ಕಳುಹಿಸಲಾಗಿತ್ತು. ಈಗ ವರದಿ ದೃಢ ಎಂದು ಪ್ರಯೋಗಾಲಯದಿಂದ ವರದಿ ನೀಡಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ನಿಮ್ಮನ್ನು ಮದುವೆಯಾಗುತ್ತೇನೆ ಎಂದ ಅಭಿಮಾನಿಗೆ ಖುಷ್ಬೂ ಉತ್ತರ

  • ಡ್ರಗ್ಸ್ ಕೇಸ್ – ಸಂಜನಾ, ರಾಗಿಣಿ ದ್ವಿವೇದಿಗೆ ಸಂಕಷ್ಟ!

    ಡ್ರಗ್ಸ್ ಕೇಸ್ – ಸಂಜನಾ, ರಾಗಿಣಿ ದ್ವಿವೇದಿಗೆ ಸಂಕಷ್ಟ!

    – ಡ್ರಗ್ಸ್ ಸ್ಯಾಂಪಲ್ಸ್ ವರದಿ ಪಾಸಿಟಿವ್!

    ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಜಾಮೀನಿನ ಮೇಲೆ ಹೊರ ಬಂದಿರುವ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಮತ್ತೆ ಸಂಕಷ್ಟ ಎದುರಾಗಿದೆ. ಎಫ್‍ಎಸ್‍ಎಲ್ ವರದಿಯಲ್ಲಿ ಇಬ್ಬರು ನಟಿಯರು ಡ್ರಗ್ಸ್ ಸೇವನೆ ಮಾಡಿರೋದು ದೃಢವಾಗಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೈದರಾಬಾದ್ ನ ಸಿಎಸ್‍ಎಫ್‍ಎಲ್‍ನ ಲ್ಯಾಬ್ ನೀಡಿರುವ ವರದಿಯನ್ನು ಸಿಸಿಬಿ ತರಿಸಿಕೊಂಡಿದೆ. ಈ ಹಿಂದೆ ಇಬ್ಬರು ನಟಿಯರನ್ನು ಬಂಧಿಸಿದ್ದಾಗ ತಲೆ ಕೂದಲು ಸಂಗ್ರಹಿಸಿ ಡ್ರಗ್ಸ್ ಸೇವನೆ ಪತ್ತೆ ಮಾಡಲು ಕಳುಹಿಸಲಾಗಿತ್ತು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಲೆ ಕೂದಲಿನ ಮಾದರಿ ಸಂಗ್ರಹ ಮಾಡಲಾಗಿತ್ತು. ಒಮ್ಮೆ ಸರಿಯಾದ ಕ್ರಮದಲ್ಲಿ ಮಾದರಿ ಸಂಗ್ರಹ ಆಗದೇ ರಿಜೆಕ್ಟ್ ಆಗಿತ್ತು. ಬಳಿಕ ಮತ್ತೊಮ್ಮೆ ಮಾದರಿ ಸಂಗ್ರಹ ಮಾಡಿ ಕಳುಹಿಸಲಾಗಿತ್ತು. ಈಗ ವರದಿ ದೃಢ ಎಂದು ಪ್ರಯೋಗಾಲಯದಿಂದ ವರದಿ ನೀಡಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಲ್ಲಿ ರಾಗಿಣಿ, ಸಂಜನಾಗೆ ರಾಜಾತಿಥ್ಯ

    ಆರೋಪಿ ಡ್ರಗ್ಸ್ ಸೇವನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವರ್ಷಾನುಗಟ್ಟಲೇ ತಲೆ ಮರಿಸಿಕೊಳ್ಳುತ್ತಿದ್ದರು. ಆದ್ದರಿಂದ ಮಾದಕ ವಸ್ತು ಸೇವನೆ ಮಾಡಿರೋದು ದೃಢಪಡಿಸೋದು ಕಷ್ಟವಾಗುತ್ತಿತ್ತು. ಆ ಕಾರಣ ಸಿಸಿಬಿ ಪೊಲೀಸರು ತಲೆ ಕೂದಲಿನ ಸ್ಯಾಂಪಲ್ ಪಡೆದು ಹೈದರಾಬಾದ್ ಎಫ್‍ಎಸ್‍ಎಲ್ ಗೆ ಕಳಿಸಿಕೊಡಲಾಗಿತ್ತು. ಇದನ್ನೂ ಓದಿ: ರಾಗಿಣಿ, ಸಂಜನಾಗೆ ಬಿಗ್ ಶಾಕ್ – ಮೊಬೈಲ್‍ನಲ್ಲಿ ಸಿಕ್ಕಿದೆ ಸ್ಫೋಟಕ ಸಾಕ್ಷ್ಯ!

  • ಕಳೆದ ಲಾಕ್‍ಡೌನ್‍ನಲ್ಲಿ ನನ್ನ ಮದುವೆಯಾಯ್ತು: ಸಂಜನಾ ಗಲ್ರಾಣಿ

    ಕಳೆದ ಲಾಕ್‍ಡೌನ್‍ನಲ್ಲಿ ನನ್ನ ಮದುವೆಯಾಯ್ತು: ಸಂಜನಾ ಗಲ್ರಾಣಿ

    – ಭಗವಂತ ಶಕ್ತಿ ಕೊಟ್ರೆ ಕನ್ನಡ ಇಂಡಸ್ಟ್ರಿಯೇ ಮೊದಲ ಆದ್ಯತೆ

    ಬೆಂಗಳೂರು: ಡ್ರಗ್ಸ್ ಆರೋಪದ ಮೇಲೆ ಬಂಧಿತರಾಗಿದ್ದ ಸಂದರ್ಭದಲ್ಲಿ ನಟಿ ಗಲ್ರಾಣಿ ಮದುವೆ ವಿಚಾರ ಭಾರೀ ಸುದ್ದಿ ಮಾಡಿತ್ತು. ಆದರೆ ನಟಿ ಮಾತ್ರ ತಮ್ಮ ಮದುವೆ ವಿಚಾರವನ್ನು ಅಲ್ಲಗೆಳೆದಿದ್ದರು. ಇದೀಗ ತಾನು ಮದುವೆಯಾಗಿದ್ದೇನೆ ಎಂಬ ಸತ್ಯ ಬಾಯ್ಬಿಟ್ಟಿದ್ದಾರೆ.

    ಹೌದು. ಕೊರೊನಾ ಸಂಕಷ್ಟದ ಈ ಸಮಯದಲ್ಲಿ ನಟಿ ಲೈಟ್ ಮೆನ್ ಸಂಘ ಮತ್ತು ಪ್ರೊಡಕ್ಷನ್ ಯೂನಿಟ್ ನ ಸದಸ್ಯರಿಗೆ ರೇಶನ್ ಕಿಟ್ ವಿತರಣೆ ಮಾಡಿದರು. ಈ ವೇಳೆ ಮಾತನಾಡುತ್ತಾ ತಮ್ಮ ಮದುವೆ ವಿಚಾರ ಬಿಚ್ಚಿಟ್ಟರು. ಕಳೆದ ಲಾಕ್ ಡೌನ್ ನಲ್ಲಿ ನನ್ನ ಮದುವೆಯಾಯ್ತು. ನಾನಾ ಕಾರಣಗಳಿಂದ ಮದುವೆ ಸಂಭ್ರಮವನ್ನ ನಿಮ್ಮೆಲ್ಲರ ಜೊತೆ ಹಂಚಿಕೊಳ್ಳೋಕೆ ಆಗಲಿಲ್ಲ. ದೊಡ್ಡದಾಗಿ ಸೆಲೆಬ್ರೇಷನ್ ಮಾಡಬೇಕು ಅನ್ಕೊಂಡಿದ್ದೆ ಎಂದರು.

    ಚಿತ್ರರಂಗದ ಅಣ್ಣ-ತಮ್ಮಂದಿರಿಗೆ ಊಟ ಹಾಕಿಸೋಕೆ ಆಗಲಿಲ್ಲ ಅನ್ನೋ ಕೊರಗಿದೆ. ಆದರೆ ಪ್ಯಾಂಡಮಿಕ್ ಕಾಲದಲ್ಲಿ ಕುಟುಂಬದ ಜೊತೆ ಚರ್ಚಿಸಿ ಕೈಲಾದ ಸಹಾಯ ಮಾಡೋಕೆ ನಿರ್ಧರಿಸಿದ್ದೇವೆ. ಸಂಜನಾ ಗಲ್ರಾಣಿ ಫೌಂಡೇಷನ್ ವತಿಯಿಂದ ಕೈಲಾದ ಸಹಾಯ ಮಾಡ್ತಿದ್ದೀವಿ. ಎಲ್ಲರಿಗೂ ಕಿಟ್ ಕೊಡಲು ಆಗಲಿಲ್ಲ. ಭಗವಂತ ಶಕ್ತಿ ಕೊಟ್ರೆ ಕನ್ನಡ ಇಂಡಸ್ಟ್ರಿಯೇ ನನ್ನ ಮೊದಲ ಆದ್ಯತೆ ಎಂದು ತಿಳಿಸಿದರು. ಇದನ್ನೂ ಓದಿ: ‘ಗಂಡ-ಹೆಂಡತಿ’ ನಟಿ ಮದುವೆ ಸೀಕ್ರೆಟ್- ಮ್ಯಾರೇಜ್ ಆಗಿಲ್ಲ ಅಂತ ಸುಳ್ಳು ಹೇಳಿದ್ರಾ ಸಂಜನಾ?

    ಬಯಲಾಗಿದ್ದ ಮದುವೆ ವಿಚಾರ:
    ನಟಿ ಸಂಜನಾರನ್ನು ಪೊಲೀಸರು ಬಂಧಿಸಿದ್ದ ಸಂದರ್ಭದಲ್ಲಿ ಅವರ ಡ್ರಗ್ಸ್ ನಂಟಿನ ಜೊತೆ ಮದುವೆ ವಿಚಾರವೂ ಕೂಡ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬಂಧನವಾಗುವ ಒಂದು ದಿನಕ್ಕೂ ಮೊದಲು ಬಾರಿ ನನಗಿನ್ನೂ ಮದುವೆಯಾಗಿಲ್ಲ. ನಾನು ಹುಡುಗಿ. ನನ್ನ ಬಗ್ಗೆ ಸುಳ್ಳು ವರದಿ ಮಾಡಬೇಡಿ ಎಂದು ಹೇಳಿ ಮದುವೆ ಸುದ್ದಿಗೆ ಬ್ರೇಕ್ ಹಾಕಿ ನುಣುಚಿಕೊಳ್ಳಲು ಸಂಜನಾ ಪ್ರಯತ್ನಿಸಿದ್ದರು.  ಇದನ್ನೂ ಓದಿ: ಇಬ್ಬರ ಜೊತೆ ಬಂದು ಸಂಜನಾ ಮತಾಂತರ: ಮೌಲ್ವಿ ಮಹಮ್ಮದ್ ಜಲಾಲುದ್ದಿನ್

    ಮಾಧ್ಯಮಗಳ ಎದುರು ತನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಬೇಡಿ ಎಂದು ಕಣ್ಣೀರಿಟ್ಟಿದ್ದರು. ಆದರೆ ಒಂದು ವರ್ಷದ ಹಿಂದೆಯೇ ನಟಿ ಸಂಜನಾಗೆ ಮದುವೆ ಆಗಿದೆ ಎಂಬ ಸುದ್ದಿ ಈಗ ಹರಿದಾಡಲು ಆರಂಭವಾಗಿತ್ತು. ನಟಿ ಸಂಜನಾ ಒಂದು ವರ್ಷದ ಹಿಂದೆಯೇ ಮುಸ್ಲಿಂ ಸಂಪ್ರದಾಯದಲ್ಲಿ ವೈದ್ಯ ಅಜೀಜ್ ಪಾಷ ಅವರೊಂದಿಗೆ ಮದುವೆಯಾಗಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಪೂರಕ ಎಂಬಂತೆ ಮದುವೆಯ ಫೋಟೋ ಕೂಡ ವೈರಲ್ ಆಗಿತ್ತು. ಅಜೀಜ್ ಪಾಷ ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು, ಆಗಾಗ ಇಂದಿರಾನಗರದಲ್ಲಿರುವ ಸಂಜನಾ ಮನೆಗೆ ಬರುತ್ತಿದ್ದರು. ಮದುವೆಯ ಬಳಿಕ ಒಂದು ವರ್ಷದಿಂದ ಗಂಡನ ಜೊತೆಗೆ ಸಂಜನಾ ಇದ್ದರು. ಅಲ್ಲದೇ ಸಂಜನಾ ಮಾಡುತ್ತಿದ್ದ ಪಾರ್ಟಿಗಳಲ್ಲಿ ಅಜೀಜ್ ಪಾಷ ಭಾಗಿಯಾಗುತ್ತಿದ್ದರು ಎನ್ನಲಾಗಿತ್ತು.  ಇದನ್ನೂ ಓದಿ: ಸಂಜನಾ ಪತಿ ನನಗೆ ಚಿಕಿತ್ಸೆ ನೀಡಿದ್ರು – ಡಾಕ್ಟರ್ ಜೊತೆ ಸಂಜನಾ ಮದ್ವೆ ಆಗಿದ್ದಾರಾ?

    ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಸೆ.8 ರಂದು ಬೆಳ್ಳಂಬೆಳಗ್ಗೆ ನಟಿ ಸಂಜನಾ ಮನೆಯ ಮೇಲೆ ದಾಳಿದ್ದರು. ಈ ವೇಳೆ ಸಂಜನಾ ನಟಿ ನ್ಯೂರೋ ಸರ್ಜನ್ ಕರೆಯಲು ಗಲಾಟೆ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಅದೇ ಅಪಾರ್ಟ್ ಮೆಂಟ್ ಅಲ್ಲಿ ಡಾಕ್ಟರ್ ವಾಸಿಸುತ್ತಿದ್ದು, ಆತನ ಜೊತೆ ಸಂಜನಾ ಸ್ನೇಹ ಇಟ್ಟುಕೊಂಡಿದ್ದಾರೆ ಎಂದು ತಿಳಿದಿತ್ತು. ಅಲ್ಲದೇ ಅವರಿಬ್ಬರು ಅಮೆರಿಕಾಗೆ ಹೋಗಿ ಮದುವೆ ಆಗಿದ್ದಾರೆ ಎಂದು ಗುಮಾನಿ ಸಹ ಕೇಳಿ ಬಂದಿತ್ತು.

  • ನಟಿ ಸಂಜನಾ ಗಲ್ರಾನಿಗೂ ಕೊರೊನಾ ಪಾಸಿಟಿವ್

    ನಟಿ ಸಂಜನಾ ಗಲ್ರಾನಿಗೂ ಕೊರೊನಾ ಪಾಸಿಟಿವ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

    ಈ ಕುರಿತು ನಟಿ ಕೊರೊನಾ ಟೆಸ್ಟ್ ಮಾಡಿಸಿರುವ ವೀಡಿಯೋವನ್ನು ಇನ್ ಸ್ಟಾದಲ್ಲಿ ಅಪ್ಲೋಡ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. ಅಲ್ಲದೆ ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಎಂಬುದನ್ನು ಕೂಡ ತಿಳಿಸಿದ್ದಾರೆ.

    ನನಗೆ ಕೊರೊನಾ ಪಾಸಿಟಿವ್ ಬಂದಿದೆ. ನನ್ನ ಕುಟುಂಬದಲ್ಲಿಯೇ ವೈದ್ಯರು ಇದ್ದಾರೆ. ಅವರು ಕೊರೊನಾ ವಾರಿಯರ್ ಆಗಿದ್ದು, ಅವರು ಸಮಾಜಕ್ಕೆ ತಮ್ಮ ಸೇವೆ ನೀಡಲೇಬೇಕು. ನೀವು ಮನೆ ಬಿಟ್ಟು ಹೋಗಬೇಡಿ, ಸಮಾಜಸೇವೆ ಮಾಡಬೇಡಿ. ನಿಮ್ಮ ಸುರಕ್ಷತೆ ನೋಡಿಕೊಳ್ಳಿ ಅಂತ ನಾನು ಅವರಿಗೆ ಹೇಳುವುದಕ್ಕೆ ಸಾಧ್ಯವಿಲ್ಲ. ಸದ್ಯ ಸ್ವಲ್ಪ ಕೆಮ್ಮು ಇದೆ ಎಂದು ನಟಿ ಬರೆದುಕೊಂಡಿದ್ದಾರೆ.

    ನನಗೆ 7ನೇ ತರಗತಿಯಿಂದಲೇ ಉಬ್ಬಸ ಇದೆ. ಹೀಗಾಗಿ ಮೊದಲೇ ಉಸಿರಾಟದ ಸಮಸ್ಯೆ ಇರುವುದರಿಂದ ನಾನು ಅಂದಿನಿಂದಲೂ ಅದಕ್ಕಾಗಿ ಪಂಪ್ ಬಳಸುತ್ತೇನೆ. ಮುಂದಿನ ದಿನಗಳಲ್ಲಿ ಕೊರೊನಾ ನನ್ನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲ್ಲ ಎಂದು ಭಾವಿಸುತ್ತೇನೆ. ಅಲ್ಲದೆ ನನ್ನಂತೆಯೇ ಉಸಿರಾಟದ ತೊಂದರೆ ಇರುವ ಕೊರೊನಾ ರೋಗಿಗಳಿಗೆ ಕೆಲವೊಂದು ವ್ಯಾಯಾಮಗಳನ್ನು ಈ ಸಮಯದಲ್ಲಿ ಹೇಳಿಕೊಡುವ ಪ್ರಯತ್ನ ಮಾಡುತ್ತೇನೆ. ಹೀಗಾಗಿ ದಯವಿಟ್ಟು ನಾನು ಅಪ್ಲೋಡ್ ಮಾಡುತ್ತಿರುವ ವೀಡಿಯೋಗಳನ್ನು ನೋಡಿ ಎಂದು ಹೇಳಿದ್ದಾರೆ.

    ಇದೇ ವೇಳೆ ಮಣಿಪಾಲ್ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ಸತ್ಯನಾರಾಯಣ್ ಅವರಿಗೆ ಸಂಜನಾ ಧನ್ಯವಾದಗಳನ್ನು ತಿಳಿಸಿದ್ದಾರೆ. ಕೆಲ ತಿಂಗಳ ಹಿಂದೆ ಸ್ಯಾಂಡಲ್‍ವುಡ್ ನಲ್ಲಿ ಡ್ರಗ್ಸ್ ಪ್ರಕರಣ ದೊಡ್ಡ ಬಿರುಗಾಳಿಯನ್ನೇ ಬೀಸಿತ್ತು. ಈ ಸಂಬಂಧ ನಟಿ ರಾಗಿಣಿ ದ್ವೇದೀ ಹಾಗೂ ಸಂಜನಾ ಜೈಲು ಪಾಲಾಗಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.