ಈ ಹಿಂದೆ 2024 ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಭಾರತ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿವೆ. ಆದರೆ, ಹರಿಯಾಣ ಮತ್ತು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದವು.
ಪರಪ್ಪನ ಅಗ್ರಹಾರದಿಂದ ಇಂದು (ಡಿ.17) ಪವಿತ್ರಾ ಗೌಡ (Pavithra Gowda) ರಿಲೀಸ್ ಆದ ಬೆನ್ನಲ್ಲೇ ನಟಿಯ ಮಾಜಿ ಪತಿ ಸಂಜಯ್ ಸಿಂಗ್ (Sanjay Singh) ಪ್ರತಿಕ್ರಿಯಿಸಿ, ಮುಂದೆಯೂ ದರ್ಶನ್ (Darshan) ಜೊತೆ ಪವಿತ್ರಾ ಚೆನ್ನಾಗಿರುತ್ತೇನೆ ಅಂದರೆ ಇರಲಿ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಹೊಸ ಪ್ರತಿಭೆಗಳ ಜೊತೆ ಕೈ ಜೋಡಿಸಿದ ಶ್ರೀಮುರಳಿ- ಬರ್ತ್‌ಡೇಗೆ ‘ಪರಾಕ್’ ಸಿನಿಮಾ ಅನೌನ್ಸ್
ಪವಿತ್ರಾಗೆ ಜಾಮೀನು ಸಿಕ್ಕಿರೋದು ಖುಷಿ ಆಗುತ್ತಿದೆ. ಈ ಕೇಸ್ ಮುಗಿದು ಹೋದರೆ ಸಾಕು ಅನಿಸುತ್ತಿದೆ. ಯಾರು ತಪ್ಪು ಮಾಡಿದ್ದಾರೆ. ಅವರಿಗೆ ಶಿಕ್ಷೆ ಸಿಗಲಿ. ನಾನು ಮೊದಲೇ ಹೇಳ್ತಿದ್ದೆ ಈಗಲೂ ಹೇಳ್ತಿದ್ದೀನಿ, ಪವಿತ್ರಾ ಮುಗ್ಧೆ ಆಕೆ ಯಾವ ತಪ್ಪು ಮಾಡಿಲ್ಲ. ಇನ್ಮುಂದೆಯೂ ದರ್ಶನ್ ಜೊತೆ ಪವಿತ್ರಾ ಚೆನ್ನಾಗಿರುತ್ತಾಳೆ ಅಂದರೆ ಇರಲಿ. ಆಕೆ ಸ್ಟ್ರಾಂಗ್ ಲೇಡಿ, ಈ ಪ್ರಕರಣದಲ್ಲಿ ಪವಿತ್ರಾದೇನು ತಪ್ಪಿಲ್ಲ. ಆಕೆಗೆ ಕೆಟ್ಟ ಮೆಸೇಜ್ ಬಂದಿರೋದಕ್ಕೆ ಯಾರಿಗೆ ಹೇಳಬೇಕಿತ್ತೋ ಅವರಿಗೆ ತಿಳಿಸಿದ್ದಾರೆ. ಇದರಲ್ಲಿ ಆಕೆಯದ್ದು ಏನೂ ತಪ್ಪಿಲ್ಲ ಎಂದಿದ್ದಾರೆ. ಇನ್ನೂ ದರ್ಶನ್ ಆಸ್ಪತ್ರೆಯಲ್ಲಿದ್ದಾರೆ ಅಂತ ಗೊತ್ತಾಯ್ತು, ಅವರು ಬೇಗ ಚೇತರಿಸಿಕೊಳ್ಳಲಿ ಎಂದರು.
ಇನ್ನೂ ಪವಿತ್ರಾ ಮನೆ ದೇವರು ವಜ್ರಮುನೇಶ್ವರ, ಹೀಗಾಗಿ ಜೈಲಿಂದ ರಿಲೀಸ್ ಆದ್ಮೇಲೆ ಆ ದೇವರಿಗೆ ಹರಕೆ ತೀರಿಸಿದ್ದಾರೆ. ಈ ಹಿಂದೆ ನಾನು ಮತ್ತು ಪವಿತ್ರಾ ಎಷ್ಟೋ ಸಲ ಆ ದೇವಸ್ಥಾನಕ್ಕೆ ಹೋಗಿದ್ದೇವೆ. ನಮ್ಮ ಮಗಳ ಮುಡಿ ಕೊಡುವ ಶಾಸ್ತ್ರವನ್ನು ಅಲ್ಲೇ ಮಾಡಿದ್ದೇವೆ. ಅಲ್ಲಿ ನಮ್ಮ ಕೆಲಸ ಆಗೋದಿದ್ರೆ ದೇವರು ಬಲಗಡೆಯಿಂದ ಹೂ ಪ್ರಸಾದ ಕೊಡುತ್ತದೆ. ಪವಿತ್ರಾಗೆ ಆ ದೇವರ ಬಗ್ಗೆ ಭಾರೀ ನಂಬಿಕೆ ಇದೆ ಎಂದು ಹಳೆಯ ದಿನಗಳನ್ನು ಸ್ಮರಿಸಿದರು.
ಈಗ ಬೆಂಗಳೂರಲ್ಲಿ ಇದ್ದರೂ ನಾನಂತೂ ಅವರಿಗೆ ಕಾಲ್ ಮಾಡಲ್ಲ ಮಾತಾಡಲ್ಲ. ಆದರೆ ನಾನು ಅವರ ಕಾಲ್‌ಗೆ ಕಾಯುತ್ತಿದ್ದೇನೆ. ಅವರಾಗಿಯೇ ಕಾಲ್ ಮಾಡಿದ್ದರೂ ನನಗೆ ಖುಷಿ. ಅವರ ಮೇಲಿನ ನನ್ನ ಪ್ರೀತಿ ಶಾಶ್ವತವಾಗಿ ಇರುತ್ತದೆ. ಪವಿತ್ರಾಗೆ ಸದಾ ಒಳ್ಳೆಯದಾಗಲಿ ಅಂತ ಬಯಸುತ್ತೇನೆ ಎಂದಿದ್ದಾರೆ ಮಾಜಿ ಪತಿ.
ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಿಂದ ಇಂದು (ಡಿ.17) ಪವಿತ್ರಾ ಗೌಡ ಬಿಡುಗಡೆಯಾಗಿದ್ದಾರೆ. ಈ ಬೆನ್ನಲ್ಲೇ ನಟಿಯ ಮಾಜಿ ಪತಿ ಸಂಜಯ್ ಸಿಂಗ್ ಪ್ರತಿಕ್ರಿಯಿಸಿ, ಪವಿತ್ರಾಗೆ ಜಾಮೀನು ಸಿಕ್ಕಿರೋದು ಖುಷಿ ಆಗುತ್ತಿದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ದರ್ಶನ್‌ಗೆ ಜಾಮೀನು – ಶೀಘ್ರವೇ ಸುಪ್ರೀಂನಲ್ಲಿ ಮೇಲ್ಮನವಿ
ಪವಿತ್ರಾಗೆ (Pavithra Gowda) ಜಾಮೀನು ಸಿಕ್ಕಿರೋದು ಖುಷಿ ಆಗುತ್ತಿದೆ. ಆ ದೇವರು ನನ್ನ ಮಾತು ಕೇಳಿದರು. ಈ ಕೇಸ್ ಮುಗಿದು ಹೋದರೆ ಸಾಕು ಅನಿಸುತ್ತಿದೆ. ಯಾರು ತಪ್ಪು ಮಾಡಿದ್ದಾರೆ. ಅವರಿಗೆ ಶಿಕ್ಷೆ ಸಿಗಲಿ. ನಾನು ಮೊದಲಿಂದಲೂ ಹೇಳ್ತಿದ್ದೆ ಈಗಲೂ ಹೇಳ್ತಿದ್ದೀನಿ, ಪವಿತ್ರಾ ಇನೋಸೆಂಟ್ ಆಕೆ ತಪ್ಪು ಮಾಡಿಲ್ಲ. ಆಕೆ ಬಹಳ ಮಹತ್ವಾಕಾಂಕ್ಷೆ ಇರುವವಳು ಎಂದಿದ್ದಾರೆ.
ಪವಿತ್ರಾಗೆ ಜಾಮೀನು ಸಿಕ್ಕಿರೋದು ಮೊದಲು ಗೊತ್ತಿರಲಿಲ್ಲ. ಈಗ ನಾನು ಬೆಂಗಳೂರಿಗೆ ಟ್ರಿಪ್‌ಗೆ ಬಂದಿದ್ದೆ, ನನ್ನ ವೈಯಕ್ತಿಕ ಕೆಲಸ ಇತ್ತು ಹಾಗಾಗಿ ಬಂದಿದ್ದೇನೆ. ಅವರಿಗೆ ಬೇಲ್ ಸಿಕ್ಕ ವಿಚಾರ ನನ್ನ ಸ್ನೇಹಿತರೊಬ್ಬರು ತಿಳಿಸಿದರು. ಈ 6 ತಿಂಗಳ ಹಿಂದೆ ಒಂದ್ಸಲ ನಮ್ಮ ಮಾವನಿಗೆ ಫೋನ್ ಮಾಡಿದ್ದೆ, ಪವಿತ್ರಾ ಬಗ್ಗೆ ವಿಚಾರಿಸಿದೆ. ಈಗಲೂ ಪವಿತ್ರಾಗಾಗಿ ಕಾಯುತ್ತಿದ್ದೇನೆ. ಮುಂದೆಯೂ ಕಾಯುತ್ತೇನೆ ಎಂದು ಮಾಜಿ ಪತಿ ಸಂಜಯ್ ಸಿಂಗ್ ಮಾತನಾಡಿದ್ದಾರೆ.
ನವದೆಹಲಿ: ದೆಹಲಿ (Delhi) ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ತಮ್ಮ ಸಿಎಂ ಅಧಿಕೃತ ನಿವಾಸ ಖಾಲಿ ಮಾಡಲಿದ್ದಾರೆ. ಅವರಿಗೆ ಒದಗಿಸಿದ ಎಲ್ಲಾ ಸೌಲಭ್ಯಗಳನ್ನು ಮತ್ತು ಭದ್ರತೆ ತ್ಯಜಿಸಿ ಸಾಮಾನ್ಯರಂತೆ ಬದುಕುತ್ತಾರೆ ಎಂದು ಆಪ್ ಸಂಸದ ಸಂಜಯ್ ಸಿಂಗ್ (Sanjay Singh) ಅವರು ಬುಧವಾರ ತಿಳಿಸಿದರು.
ಕೇಜ್ರಿವಾಲ್ ಅವರಿಗೆ ದೆಹಲಿಯ ಜನ ಹೆಚ್ಚಿನ ಬಹುಮತದೊಂದಿಗೆ ಪ್ರಾಮಾಣಿಕತೆಯ ಪ್ರಮಾಣಪತ್ರ ನೀಡುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ಅವರು ಪ್ರಾಮಾಣಿಕತೆಯಿಂದ ದೆಹಲಿಯ ಜನರ ಸೇವೆ ಮಾಡಿದ್ದಾರೆ. ನಿನ್ನೆ ರಾಜೀನಾಮೆ ನೀಡಿದ ನಂತರ ತನಗೆ ಸಿಕ್ಕಿರುವ ಎಲ್ಲಾ ಸೌಲಭ್ಯಗಳನ್ನು ಹಾಗೂ ಒಂದು ವಾರದೊಳಗಾಗಿ ತಮ್ಮ ಮನೆಯನ್ನು ಖಾಲಿ ಮಾಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ರಾಹುಲ್ ಗಾಂಧಿಯವರನ್ನ ರಾಜಕೀಯವಾಗಿ ಮುಗಿಸಲು ಬಿಜೆಪಿ ಯತ್ನ: ಸಿಎಂ
ಕೇಜ್ರಿವಾಲ್ ಅವರು 2013 ರಲ್ಲಿ ಮೊದಲ ಬಾರಿಗೆ ದೆಹಲಿ ಮುಖ್ಯಮಂತ್ರಿಯಾದಾಗಲೂ ಹಳೆಯ ನೀಲಿ ವ್ಯಾಗನ್ ಆರ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅವರ ಭದ್ರತೆಯ ಬಗ್ಗೆಯೂ ನಮಗೆ ಕಳವಳವಿದೆ. ಅವರ ಮೇಲೆ ಈ ಹಿಂದೆ ಹಲವಾರು ಬಾರಿ ದಾಳಿ ನಡೆದಿದೆ. ಅವರಿಗೆ ವಯಸ್ಸಾದ ಪೋಷಕರು, ಪತ್ನಿ, ಮಕ್ಕಳು ಇದ್ದಾರೆ. ಅವರೆಲ್ಲರ ಸುರಕ್ಷತೆಯ ಬಗ್ಗೆ ನಾವು ಚಿಂತೆ ಮಾಡುತ್ತಿದ್ದೇವೆ. ಅವರ ಭದ್ರತೆ ಅಪಾಯದಲ್ಲಿದೆ ಎಂದು ನಾವು ಅವರಿಗೆ ಹೇಳಲು ಪ್ರಯತ್ನಿಸಿದ್ದೇವೆ. ಆದರೂ, ಅವರು ಹೊರಹೋಗಲು ನಿರ್ಧರಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ಯತ್ನಾಳ್‌ರನ್ನ ಪಕ್ಷದಲ್ಲಿ ಇಟ್ಟುಕೊಂಡಿರೋದೆ ಬೊಗಳಿಸೋಕೆ: ಸಿದ್ದರಾಮಯ್ಯ
ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಸಾಕ್ಷಿ ಹೇಳಲಿರುವ ಮಹಿಳಾ ಕುಸ್ತಿಪಟುಗಳ (Women Wrestlers) ಭದ್ರತೆಯನ್ನು ದೆಹಲಿ ಪೊಲೀಸರು ಹಿಂಪಡೆದಿದ್ದಾರೆ ಎಂದು ಒಲಿಂಪಿಯನ್ ವಿನೇಶ್ ಫೋಗಟ್ (Vinesh Phogat) ಗಂಭೀರ ಆರೋಪ ಮಾಡಿದ್ದಾರೆ.
जिन महिला पहलवानों की बृजभूषण के ख़िलाफ़ कोर्ट में गवाहियाँ होने वाली हैं, दिल्ली पुलिस ने उनकी सुरक्षा हटा ली है @DelhiPolice@DCWDelhi@NCWIndia
ಹೌದು.. ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ ಹೇಳಲು ಹೊರಟಿದ್ದ ಮಹಿಳಾ ಕುಸ್ತಿಪಟುಗಳ ಭದ್ರತೆಯನ್ನು ದೆಹಲಿ ಪೊಲೀಸರು (Delhi Police) ಹಿಂಪಡೆದಿದ್ದಾರೆ ಎಂದು ವಿನೇಶ್ ಆರೋಪಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಭದ್ರತೆಯನ್ನು ಹಿಂತೆಗೆದುಕೊಂಡಿರುದರಿಂದ ಕುಸ್ತಿಪಟುಗಳು ಸುರಕ್ಷಿತವಾಗಿ ನ್ಯಾಯಾಲಯದಲ್ಲಿ ಹಾಜರಾಗಲು ಹಾಗೂ ಸಾಕ್ಷ್ಯಗಳನ್ನು ನೀಡುವ ಅವರ ಸಾಮರ್ಥ್ಯದ ಮೇಲೆ ಪ್ರಭಾವ ಬೀರಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಆದ್ರೆ ವಿನೇಶ್ ಆರೋಪವನ್ನು ದೆಹಲಿ ಪೊಲೀಸರು ಅಲ್ಲಗಳೆದಿದ್ದಾರೆ.
ಇದಕ್ಕೂ ಮುನ್ನ ಕುಸ್ತಿಪಟುಗಳು ದೆಹಲಿ ನ್ಯಾಯಾಲಯ ಸಂಪರ್ಕಿಸಿದ್ದರು. ಬಳಿಕ ಕೋರ್ಟ್ ತಕ್ಷಣವೇ ಭದ್ರತಾ ಕವಚ ಮರುಸ್ಥಾಪಿಸುವಂತೆ ನಗರ ಪೊಲೀಸರಿಗೆ ಸೂಚಿಸಿತ್ತು. ಬಳಿಕ ಪ್ರತಿಕ್ರಿಯಿಸಿದ ದೆಹಲಿ ಪೊಲೀಸರು, ಕುಸ್ತಿಪಟುಗಳಿಗೆ ಒದಗಿಸಲಾದ ಭದ್ರತೆಯನ್ನು ಹಿಂತೆಗೆದುಕೊಂಡಿಲ್ಲ. ಭವಿಷ್ಯದಲ್ಲಿ ಜವಾಬ್ದಾರಿ ವಹಿಸಿಕೊಳ್ಳುವಂತೆ ಹರಿಯಾಣ ಪೊಲೀಸರಿಗೆ ವಿನಂತಿಸಲು ನಿರ್ಧರಿಸಲಾಗಿದೆ. ಆದ್ರೆ ನಿಯೋಜಿತ ದೆಹಲಿ ಪೊಲೀಸ್ ಪಿಎಸ್‌ಒಗಳು ಈ ನಿರ್ಧಾರವನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ. ಈ ಕಾರಣದಿಂದಾಗಿ ಗುರುವಾರ ವರದಿ ಮಾಡಲು ತಡಮಾಡಿದ್ದಾರೆ, ಗೊಂದಲವನ್ನು ಸರಿಪಡಿಸಿದ್ದೇವೆ ಎಂದು ತಿಳಿಸಿದರು.
ಹಿಂದೆ ಏನಾಗಿತ್ತು?
ಈ ಹಿಂದೆ ಕುಸ್ತಿ ಫೆಡರೇಷನ್ (Wrestling Federation of India) ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಬಂದಿದ್ದರಿಂದ ದೂರು ದಾಖಲಾಗಿತ್ತು. ನಂತರ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಭಾರೀ ಪ್ರತಿಭಟನೆ ನಡೆದಿದ್ದವು. ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್, ಬಜರಂಗ್ ಪುನಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದವು. ಕೊನೆಗೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮಧ್ಯಪ್ರವೇಶಿಸಿ ಸಾಂಧಾನ ನಡೆಸಿದ ಬಳಿಕ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದರು. ಈ ವರ್ಷಾರಂಭದಲ್ಲಿ ಬ್ರಿಜ್ ಭೂಷಣ್ ಅಧ್ಯಕ್ಷಗಿರಿಯಿಂದ ಕೆಳಗಿಳಿದಿದ್ದರು
ಇತ್ತೀಚೆಗೆ ಒಲಿಂಪಿಕ್ಸ್ ಫೈನಲ್ ತಲುಪಿ ವಿನೇಶ್ ಅನರ್ಹಗೊಂಡರು. ಭಾರತಕ್ಕೆ ಮರಳಿದ ಬಳಿಕ ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ. ಸತ್ಯವೇ ಮೇಲುಗೈ ಸಾಧಿಸುತ್ತದೆ ಎಂದು ಹೇಳಿದ್ದರು.
– ಸದ್ಯ ಉತ್ತರ ಪ್ರದೇಶಲ್ಲಿ ಉದ್ಯೋಗ ಮಾಡುತ್ತಿರುವ ಸಂಜಯ್ ಸಿಂಗ್ – ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರೀತಿ – 2013ರಲ್ಲಿ ಪವಿತ್ರಾ ಗೌಡ ಜೊತೆ ಡಿವೋರ್ಸ್
ಬೆಂಗಳೂರು: ಇಲಿ ಸಾಯಿಸಲು ಹಿಂಜರಿಯುತ್ತಿದ್ದ ಹುಡುಗಿ ಅವಳು. ಪವಿತ್ರಾ ಗೌಡ (Pavithra Gowda) ಒಬ್ಬರನ್ನ ಕೊಲೆ ಮಾಡುತ್ತಾಳೆ ಅಂದ್ರೆ ಅದು ಸುಳ್ಳು ಎಂದು ಮಾಜಿ ಪತಿ ಸಂಜಯ್ ಸಿಂಗ್ (Sanjay Singh) ಹೇಳಿದ್ದಾರೆ.
ಉತ್ತರ ಪ್ರದೇಶ (Uttar Pradesh) ಮೂಲದ ಸಂಜಯ್ ಸಿಂಗ್ ಮತ್ತು ಪವಿತ್ರಾ ಗೌಡ ಪ್ರೀತಿಸಿ ಮದುವೆಯಾಗಿದ್ದರು. ಮಗಳು ಹುಟ್ಟಿದ ನಂತರ ಸಂಜಯ್ ಸಿಂಗ್ ಅವರನ್ನು ದೂರ ಮಾಡತೊಡಗಿದ ಪವಿತ್ರಾ ಗೌಡ ಕೊನೆಗೆ ಡಿವೋರ್ಸ್ (Divorce) ಕೇಳಿದ್ದರು.
ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಂಜಯ್ ಸಿಂಗ್ ಸದ್ಯ ಉತ್ತರ ಪ್ರದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ ಪವಿತ್ರಾಗೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ತಿಳಿಸಿದ್ದಾರೆ.
ಸಂಜಯ್ ಸಿಂಗ್ ಹೇಳಿದ್ದೇನು?
ನನ್ನದು ಮತ್ತು ಪವಿತ್ರಾ ಗೌಡ ಸಂಬಂಧ ಮುರಿದು ಬಿದ್ದು 12 ವರ್ಷ ಆಗಿದೆ. ಇವತ್ತು ನನಗೆ ಕೊಲೆ ಮಾಡಿದ ವಿಚಾರ ಗೊತ್ತಾಯಿತು. ಮಗಳ ಬಗ್ಗೆ ಯೋಚನೆ ಬಂತು. ಅದಕ್ಕೆ ಏನು ಅಂತ ಕೇಳೋಣ ಅಂದುಕೊಂಡೆ. ನಾನು ಅವರಿಗೆ ಫೋನ್ ಮಾಡಲ್ಲ. ಅವರ ಕಡೆಯಿಂದಲೂ ನನಗೆ ಯಾವುದೇ ಫೋನ್ ಬರಲ್ಲ.
ನಮ್ಮ ಅಣ್ಣ, ತಮ್ಮ ಎಲ್ಲರೂ ವಿದೇಶದಲ್ಲಿದ್ದಾರೆ. ಉತ್ತರ ಪ್ರದೇಶದಲ್ಲಿ ನಮ್ಮದು ಒಂದು ಶಾಲೆಯಿದ್ದು ಅದನ್ನು ನಾನು ನೋಡಿಕೊಳ್ಳುತ್ತಿದ್ದೇನೆ. 2002 ರಲ್ಲಿ ನಾನು ಬೆಂಗಳೂರಿಗೆ ಬಂದಿದ್ದೆ. ಪವಿತ್ರಾ ಗೌಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ನಾವಿಬ್ಬರು ಪ್ರೀತಿಸಿ ಮದುವೆಯಾದೆವು.
ಮದುವೆಯಾಗಿ ಮೂರನೇ ವರ್ಷಕ್ಕೆ ನನ್ನ ಮಗಳು ಹುಟ್ಟಿದ್ದಳು. ಆಗ ಪವಿತ್ರ ಗೌಡ ಫಿಲ್ಮ್ ಇಂಡಸ್ಟ್ರಿ (Film Industry) ಸೇರಿದ್ದಳು. ಆ ಬಳಿಕ ನಮ್ಮಿಬ್ಬರ ನಡುವೆ ಅಂತರ ಆರಂಭವಾಯ್ತು. ಆಮೇಲೆ ಅವಳು ನನ್ನ ಮೇಲೆ ಡಿವೋರ್ಸ್ ಕೇಸ್ ಫೈಲ್ ಮಾಡಿದಳು. ಇದನ್ನೂ ಓದಿ: ಕೊಲೆ ಆರೋಪಿ ದರ್ಶನ್ ಜೊತೆ ಮತ್ತೊಬ್ಬ ಸ್ಯಾಂಡಲ್‌ವುಡ್ ನಟ ಅರೆಸ್ಟ್!
2013ರಲ್ಲಿ ನಮ್ಮ ಡಿವೋರ್ಸ್ ಆಯ್ತು. ಡಿವೋರ್ಸ್ ಮೊದಲೇ ನಾವಿಬ್ಬರು ಒಂದು ವರ್ಷ ಪ್ರತ್ಯೇಕವಾಗಿ ವಾಸಿಸುತ್ತಿದ್ದೆವು. ಗಂಡ ಹೆಂಡತಿ ಮಧ್ಯೆ ಕೆಲ ವಿಚಾರಕ್ಕೆ ಸಣ್ಣ ಸಣ್ಣ ಜಗಳ ಆಗುತಿತ್ತಿತ್ತು. ಅವಳು ಡಿವೋರ್ಸ್ ಫೈಲ್ ಮಾಡಿದಾಗ ನಾನು ಮುಂಬೈನಲ್ಲಿದ್ದೆ. ಆಗ ಅವಳು ದರ್ಶನ್ ಜೊತೆ ಸಂಬಂಧದಲ್ಲಿ ಇದ್ದಾಳೆ ಎಂಬ ವಿಚಾರ ಗೊತ್ತಾಯ್ತು.
ಮಗಳ ಹತ್ತಿರ ವರ್ಷಕ್ಕೆ ಒಂದು ಸಾರಿ, ಎರಡು ವರ್ಷಕ್ಕೆ ಒಂದು ಸಾರಿ ಫೋನ್‌ನಲ್ಲಿ ಮಾತನಾಡುತ್ತೇನೆ. ಆದರೆ ಡೈರೆಕ್ಟ್ ಆಗಿ ಮಾತಾಡಲು ಆಗುವುದಿಲ್ಲ. ಆಕೆಯ ಫೋನ್ ನಂಬರ್ ನನ್ನ ಬಳಿ ಇಲ್ಲ. ನಮ್ಮ ಅತ್ತೆ ಮಾವರಿಗೆ ಫೋನ್ ಮಾಡಿದರೆ ನನ್ನ ಮಗಳ ಜೊತೆ ಮಾತನಾಡಬಹುದು. ಇದನ್ನೂ ಓದಿ: ರೇಣುಕಾಸ್ವಾಮಿ ಶವ ಸಾಗಾಟಕ್ಕೆ ಬಳಸಿದ್ದ ಸ್ಕಾರ್ಪಿಯೋ ಸೀಜ್
ನಾನು ಅವಳನ್ನ ಚಿನ್ನು ಅಂತ ಕರೆಯುತ್ತಿದ್ದೆ. ಅವಳು ಸಂಜಯ್ ಅನ್ನುತ್ತಿದ್ದಳು. ನಾವಿಬ್ಬರು ಜೊತೆಗೆ ಇರಲು ಸಾಧ್ಯವಿಲ್ಲ. ನಾನು ಮತ್ತು ದರ್ಶನ್ (Darshan) ಗಂಡ ಹೆಂಡತಿ ಆಗಲು ಇಷ್ಟಪಟ್ಟಿದ್ದೇವೆ ಎಂದು ಹೇಳಿದ್ದಳು. ಅದಕ್ಕೆ ನನ್ನಿಂದ ಏನು ಆಗಬೇಕು ಎಂದು ಕೇಳಿದೆ. ಅದಕ್ಕೆ ಡಿವೋರ್ಸ್ ಕೊಡು ಎಂದು ಹೇಳಿದ್ದಳು. ನಾನು ಸರಿ ಎಂದು ಡಿವೋರ್ಸ್ ಕೊಟ್ಟೆ. ಬಳಿಕ ಆಕೆ ದರ್ಶನ್ ಜೊತೆ ಜೀವನ ಮಾಡಲು ಶುರು ಮಾಡಿದಳು.
ಹತ್ಯೆಯಾದ ರೇಣುಕಾಸ್ವಾಮಿ
ಆ ಬಳಿಕ ಆಕೆ ಮದುವೆ ಆಗಿದ್ದಾಳೋ ಇಲ್ವೋ ಗೊತ್ತಿಲ್ಲ. ಯಾಕೆಂದರೆ ನನಗೆ ಅವರ ಮೇಲೆ ಯಾವುದೇ ಆಸಕ್ತಿ ಇಲ್ಲ. ಆದರೆ ಬಹಳ ದಿನಗಳ ಬಳಿಕ ಒಮ್ಮೆ 2017, 2018ರಲ್ಲಿ ಮಗಳನ್ನು ನೋಡಲು ನಾನು ಬೆಂಗಳೂರಿನಲ್ಲಿ ಭೇಟಿಯಾದೆ. ಆದಾದ ನಂತರ ನಾನು ಇಲ್ಲಿಯವರೆಗೂ ಮಗಳನ್ನು ನೋಡಲೇ ಇಲ್ಲ. ಅವರ ಮೂಡ್ ಅನ್ನು ಯಾಕೆ ಹಾಳಮಾಡಬೇಕು ಅಂತ ಸುಮ್ಮನಾದೆ. ನಾನು ಮತ್ತು ನನ್ನ ಮಗಳ ಮಧ್ಯೆ 12 ವರ್ಷದಲ್ಲಿ ಒಂದೆರೆಡು ಬಾರಿ ಅಷ್ಟೇ ಮಾತಾನಾಡಿದ್ದೇನೆ.
ಪವಿತ್ರಾಗೆ ಕಷ್ಟ ಬಂದಾಗ ದರ್ಶನ್ ಹತ್ತಿರ ಹೋಗಿದ್ದಾಳೆ. ಅವರೊಬ್ಬ ಗಂಡನಾಗಿ ಅವರ ಸ್ಟೆಪ್ ತೆಗೆದುಕೊಳ್ಳಲೇಬೇಕು. ಆದರೆ ಇಲ್ಲಿ ಆ ಸ್ಟೆಪ್ ತಪ್ಪಾಗಿದೆ. ಇದರಲ್ಲಿ ಪವಿತ್ರ ಗೌಡರ ಒಂದೇ ಒಂದು ತಪ್ಪು ಘಟನೆ ನಡೆದ ಜಾಗದಲ್ಲಿ ಇದ್ದಿದ್ದು. ಗಂಡ ಬಾ ಆ ಜಾಗಕ್ಕೆಹೋಗಿ ಬರೋಣ ಅಂತ ಕರೆದಿರಬಹುದು. ಹೋಗಿಲ್ಲ ಅಂದರೆ ದರ್ಶನ್ ಅವರು ಗೊತ್ತಲ್ವಾ ಯಾವ ತರ ಮನುಷ್ಯ ಅಂತಾ.
ನಾನು ಮತ್ತು ದರ್ಶನ್ ಇಲ್ಲಿಯವರೆಗೂ ಒಂದು ಬಾರಿಯೂ ಫೇಸ್ ಟು ಫೇಸ್ ಭೇಟಿಯಾಗಿಲ್ಲ. ಪವಿತ್ರ ಗೌಡ ಫಿಲ್ಮ್ ಇಂಡಸ್ಟ್ರಿಗೆ ಬರುವ ಮುನ್ನ ನಾನು ದರ್ಶನ್ ಅವರ ಅಭಿಮಾನಿಯಾಗಿದ್ದೆ. ಆದರೆ ಎಲ್ಲಾ ಘಟನೆ ಬಳಿಕ ನಾನು ಅವರ ಫಿಲ್ಮ್ ನೋಡುವುದನ್ನೇ ಬಿಟ್ಟೆ
ಈಗ ದರ್ಶನ್ ಅವರು ಹೇಳಿರುವ ಕಾರಣಕ್ಕೆ ಅವರು ಸ್ಥಳಕ್ಕೆ ಹೋಗಿರಬೇಕು. ಇದರಿಂದ ಪವಿತ್ರ ಗೌಡ ಸಿಕ್ಕಿಹಾಕಿಕೊಂಡಿದ್ದಾರೆ. ಕಷ್ಟ ಬಂದಾಗ ಗಂಡನಿಗೆ ಹೇಳಿಕೊಂಡಿದ್ದಾರೆ. ಆದರೆ ಇವರು ತಪ್ಪು ಹೆಜ್ಜೆ ಇಟ್ಟಿದ್ದಾರೆ. ಇದರಲ್ಲಿ ಪವಿತ್ರ ಗೌಡ ಸಮಸ್ಯೆಗೆ ಸಿಲುಕಿದ್ದಾರೆ. ನನಗೆ ಪವಿತ್ರ ಗೌಡ ತುಂಬಾ ಚೆನ್ನಾಗಿ ಗೊತ್ತು. ಬೈ ಮಿಸ್ ಇದು ಆಗಿರಬಹುದು. ಅವಳು ಮೆದುಳಿನಿಂದ ಬಹಳ ಸ್ಟ್ರಾಂಗ್ ಇದ್ದಾಳೆ. ಹೃದಯದಿಂದ ಬಹಳ ಸಾಫ್ಟ್ ಇದ್ದಾಳೆ. ಏನೋ ತಪ್ಪುಆಗಿದೆ. ಇಲಿ ಸಾಯಿಸೋಕು ಹಿಂಜರಿಯುತ್ತಿದ್ದ ಹುಡುಗಿ ಅವಳು. ಒಬ್ಬರನ್ನ ಕೊಲೆ ಮಾಡ್ತಾರೆ ಇದು ಸುಳ್ಳು.
ನವದೆಹಲಿ: ಹೊಸ ಮಧ್ಯ ನೀತಿಯಲ್ಲಿ (Delhi liquor Policy Case) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದ ಎಎಪಿ ನಾಯಕ ಹಾಗೂ ಸಂಸದ ಸಂಜಯ್ ಸಿಂಗ್ (Sanjay Singh) ಅವರಿಗೆ ಸುಪ್ರಿಂ ಕೋರ್ಟ್ ಮಂಗಳವಾರ ಜಾಮೀನು ನೀಡಿದೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಂಜಯ್ ಸಿಂಗ್ ಅವರ ಕಸ್ಟಡಿ ಇನ್ನು ಮುಂದೆ ಅಗತ್ಯವಿಲ್ಲ ಎಂದು ಜಾರಿ ನಿರ್ದೇಶನಾಲಯ (ED) ಹೇಳಿದ ನಂತರ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ದೀಪಂಕರ್ ದತ್ತಾ ಮತ್ತು ಪ್ರಸನ್ನ ಬಿ ವರಾಲೆ ಅವರಿದ್ದ ತ್ರಿಸದಸ್ಯ ಪೀಠವು ಜಾಮೀನಿನ ಮೇಲೆ ಬಿಡುಗಡೆಗೆ ಆದೇಶಿಸಿತು.
ಇಡಿ ಬಂಧನ ಮತ್ತು ಜಾಮೀನು ಕೋರಿ ಸಂಜಯ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ ನೇತೃತ್ವದ ತ್ರಿ ಸದಸ್ಯ ಪೀಠ, ಜಾಮೀನು ನೀಡಲು ಆಕ್ಷೇಪಗಳಿವೆಯೇ ಎಂದು ಇಡಿಯನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಇಡಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್-3 ಮತ್ತು 4ರ ಅಡಿಯಲ್ಲಿ ತನಿಖಾ ವರದಿಯಿಂದ ಉಂಟಾಗುವ ವಿಚಾರಣೆಯ ಬಾಕಿ ಇರುವಾಗ ಸಂಜಯ್ ಸಿಂಗ್‌ಗೆ ಜಾಮೀನು ನೀಡಲು ಆಕ್ಷೇಪಿಸುವುದಿಲ್ಲ ಎಂದು ಹೇಳಿತು.
ಇಡಿ ವಾದ ಆಲಿಸಿದ ಬಳಿಕ ಕೋರ್ಟ್ (Supreme Court) ಮಧ್ಯಂತರ ಜಾಮೀನು ಮಂಜೂರು ಮಾಡಿತು. ಷರತ್ತುಗಳನ್ನು ಕೆಳಹಂತದ ನ್ಯಾಯಲಯ ನಿರ್ಧರಿಸಲಿದೆ ಎಂದು ಹೇಳಿತು. ಜಾಮೀನಿನ ಅವಧಿಯಲ್ಲಿ ಸಿಂಗ್ ಅವರು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅರ್ಹರಾಗಿರುತ್ತಾರೆ. ಆದ್ರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಬಹಿರಂಗ ಹೇಳಿಕೆ ನೀಡಬಾರದು ಎಂದು ಕೋರ್ಟ್ ಸಂಜಯ್ ಸಿಂಗ್‌ಗೆ ತಾಕೀತು ಮಾಡಿದೆ. ಇದನ್ನೂ ಓದಿ: ಆಯುರ್ವೇದ ಉತ್ಪನ್ನ ಉತ್ತೇಜಿಸಲು ದಾರಿತಪ್ಪಿಸುವ ಜಾಹೀರಾತು ಪ್ರಸಾರ; ಬಾಬಾ ರಾಮದೇವ್ ಕ್ಷಮೆ ಒಪ್ಪದ ಸುಪ್ರೀಂ
ಸಂಜಯ್ ಸಿಂಗ್ ಪರ ವಾದ ಮಂಡಿಸಿದ ಅಭಿಷೇಕ್ ಮನುಸಿಂಘ್ವಿ, ಇತರೆ ಆರೋಪಿಗಳ ಹೇಳಿಕೆ ಆಧರಿಸಿ ದಾಳಿಯನ್ನು ನಡೆಸಲಾಗಿತ್ತು. ಈವರೆಗೂ ಯಾವುದೇ ನಗದು ಹಣ ಪತ್ತೆಯಾಗಿಲ್ಲ ಅಂತಹ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ವಾದಿಸಿದರು. ಇದನ್ನೂ ಓದಿ: ಜೈಲು ಸೇರಿರುವ ಸಂಜಯ್ ಸಿಂಗ್‍ಗೆ ಎಂಪಿಯಾಗಿ ಮುಂದುವರಿಸಲು ಆಪ್ ನಿರ್ಧಾರ
ಏನಿದು ಪ್ರಕರಣ?
ಕಳೆದ ವರ್ಷ ಅಕ್ಟೋಬರ್ 4 ರಂದು ಸಂಜಯ್ ಸಿಂಗ್ ಅವರನ್ನು ಹೊಸ ಮದ್ಯ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಅವರ ಮನೆಯ ಮೇಲೆ ಇಡಿ ದಾಳಿ ನಡೆಸಿತ್ತು. ಬಳಿಕ ಅವರನ್ನು ಬಂಧಿಸಲಾಗಿತ್ತು. ಇಡಿ ಬಂಧನವನ್ನು ಪ್ರಶ್ನಿಸಿ ಸಂಜಯ್ ಸಿಂಗ್ ಅರ್ಜಿ ಸಲ್ಲಿಸಿದ್ದರು, ಆದರೆ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಇದೀಗ 6 ತಿಂಗಳ ಬಳಿಕ ಸುಪ್ರೀಂ ಕೋರ್ಟ್ ಸಂಜಯ್ ಸಿಂಗ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಕೇಂದ್ರದಿಂದ ಬಿಗ್ ರಿಲೀಫ್ – ಚುನಾವಣೆ ಮುಗಿಯವರೆಗೂ ತೆರಿಗೆ ವಸೂಲಿ ಇಲ್ಲ
ನವದೆಹಲಿ: ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅವರಿಗೆಯಾವುದೇ ಪರಿಹಾರ ಸಿಗುವಂತೆ ಕಾಣುತ್ತಿಲ್ಲ. ದೆಹಲಿ ಹೈಕೋರ್ಟ್ (Delhi High Court) ಅವರ ಜಾಮೀನು ಅರ್ಜಿಯನ್ನು ಇಂದು ತಿರಸ್ಕರಿಸಿದೆ.
ದೆಹಲಿ ಮದ್ಯ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಸಂಜಯ್ ಸಿಂಗ್ (Sanjay Singh) ಅವರನ್ನು 2023 ರ ಅಕ್ಟೋಬರ್ 4 ರಂದು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬಂಧಿಸಿದ್ದರು. ಜನವರಿ 31 ರಂದು ಮದ್ಯದ ಹಗರಣ ಪ್ರಕರಣದಲ್ಲಿ ಸಂಜಯ್ ಸಿಂಗ್ ಪರವಾಗಿ ಹಿರಿಯ ವಕೀಲ ಮೋಹಿತ್ ಮಾಥುರ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಅವರು ವಾದ ಮಂಡಿಸಿದರು. ಜನವರಿ 31 ರಂದು ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದೆ. ಇದನ್ನೂ ಓದಿ: ಇಡಿ ಅಧಿಕಾರಿಗಳ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ
ಆರೋಪಗಳೇನು?: ಮದ್ಯದ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಜಯ್ ಸಿಂಗ್ ಅವರನ್ನು ಬಂಧಿಸಲಾಗಿದೆ. ಸಂಜಯ್ ಸಿಂಗ್ ಅವರು ಕೆಲವು ಮಧ್ಯ ಉತ್ಪಾದಕರು, ಸಗಟು ವ್ಯಾಪಾರಿಗಳು ಸೇರಿದಂತೆ ಹಲವು ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಇಡಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.
ನವದೆಹಲಿ: ಹೊಸ ಮದ್ಯ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿ, ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆಪ್ (AAP) ಸಂಸದ ಸಂಜಯ್ ಸಿಂಗ್ (Sanjay Singh) ಅವರಿಗೆ ರಾಜ್ಯಸಭಾ ಮರು ನಾಮನಿರ್ದೇಶನ ಪತ್ರಕ್ಕೆ ಜೈಲಿನಿಂದಲೇ ಸಹಿ ಹಾಕಲು ದೆಹಲಿ ಕೋರ್ಟ್ (Delhi Court) ಅನುಮತಿ ನೀಡಿದೆ.
ಸಂಜಯ್ ಸಿಂಗ್ ರಾಜ್ಯಸಭೆ ಸದಸ್ಯತ್ವ ಅವಧಿ ಜ.27ಕ್ಕೆ ಕೊನೆಗೊಳ್ಳಲಿದ್ದು ಅವರ ಸದಸ್ಯತ್ವವನ್ನು ಮುಂದುವರಿಸಲು ಆಪ್ ನಿರ್ಧರಿಸಿದೆ. ಈ ಹಿನ್ನಲೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಲು, ಮೇಲ್ಮನೆಯ ಚುನಾವಣಾಧಿಕಾರಿಯ ಮುಂದೆ ಈ ಪತ್ರಗಳನ್ನು ಸಲ್ಲಿಸಲು ನ್ಯಾಯಾಲಯ ಅನುಮತಿ ನೀಡಬೇಕು ಎಂದು ಸಂಜಯ್ ಸಿಂಗ್ ಪರ ವಕೀಲರು ರೋಸ್ ಅವೆನ್ಯೂ ಕೋರ್ಟ್‍ಗೆ ಮನವಿ ಮಾಡಿದ್ದರು. ಇದೀಗ ನ್ಯಾಯಾಲಯ ಮನವಿಗೆ ಅವಕಾಶ ನೀಡಿದೆ. ಇದನ್ನೂ ಓದಿ: ಆಪ್ ಸರ್ಕಾರದ ಬಹುನಿರೀಕ್ಷಿತ ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಅಕ್ರಮ – ಸಿಬಿಐ ತನಿಖೆಗೆ ಆದೇಶ
ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮರು ನಾಮನಿರ್ದೇಶನ ದಾಖಲೆಗಳಿಗೆ ಸಹಿ ಹಾಕುವುದನ್ನು ವಿರೋಧಿಸದೇ ಸಂಜಯ್ ಸಿಂಗ್ ಅವರ ದಾಖಲೆಗಳಿಗೆ ಸಹಿ ಹಾಕಲು ಅವಕಾಶ ನೀಡುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿದೆ. ಕೋರ್ಟ್ ಆದೇಶದಿಂದಾಗಿ ಸಂಜಯ್ ಸಿಂಗ್ ಮತ್ತೊಮ್ಮೆ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಲಿದ್ದಾರೆ.
ಕಳೆದ ವರ್ಷ ಅ.4 ರಂದು ಸಂಜಯ್ ಸಿಂಗ್ ಅವರನ್ನು ನೂತನ ಮದ್ಯ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಅವರ ಮನೆಯ ಮೇಲೆ ಇಡಿ ದಾಳಿ ನಡೆಸಿತ್ತು. ಬಳಿಕ ಅವರನ್ನು ಬಂಧಿಸಲಾಗಿತ್ತು. ಇಡಿ ಬಂಧನವನ್ನು ಪ್ರಶ್ನಿಸಿ ಸಂಜಯ್ ಸಿಂಗ್ ಅರ್ಜಿ ಸಲ್ಲಿಸಿದ್ದರು, ಆದರೆ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಇದನ್ನೂ ಓದಿ: ಹರಿಯಾಣ, ಪಂಜಾಬ್‍ನಲ್ಲಿ ಇಡಿ ದಾಳಿ – ಭಾರೀ ಪ್ರಮಾಣದ ಅಕ್ರಮ ಶಸ್ತ್ರಾಸ್ತ್ರ ಪತ್ತೆ
ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಹೊಸದಾಗಿ ಆಯ್ಕೆಯಾದ ಸಂಜಯ್ ಸಿಂಗ್ (Sanjay Singh) ನೇತೃತ್ವದ ಭಾರತೀಯ ಕುಸ್ತಿ ಫೆಡರೇಶನ್ (Wrestling Federation of India) ಸಮಿತಿಯನ್ನು ಕ್ರೀಡಾ ಸಚಿವಾಲಯ (Sports Ministry) ಅಮಾನತುಗೊಳಿಸಿದೆ.
ಡಬ್ಲ್ಯೂಎಫ್‌ಐ (WFI) ಸಂವಿಧಾನ ಮತ್ತು ನಿಯಮವನ್ನು ಉಲ್ಲಂಘಿಸಿ ನಿರ್ಧಾರವನ್ನು ಕೈಗೊಂಡಿದ್ದಕ್ಕೆ ಭಾನುವಾರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿ ಆದೇಶ ಪ್ರಕಟಿಸಿದೆ.
ಭಾರತದ ಕುಸ್ತಿ ಫೆಡರೇಶನ್‌ನ ಹೊಸದಾಗಿ ಚುನಾಯಿತರಾದ ಸಂಜಯ್ ಕುಮಾರ್ ಸಿಂಗ್ ಅವರು ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ 15 ಮತ್ತು 20 ವರ್ಷದ ಒಳಗಿನ ರಾಷ್ಟ್ರೀಯ ಕುಸ್ತಿ ಪಂದ್ಯಾಟ ಉತ್ತರ ಪ್ರದೇಶದದ ಗೊಂಡಾದ ನಂದಿನಿ ನಗರದಲ್ಲಿ ನಡೆಸಲಾಗುವುದು ಎಂದು ಘೋಷಿಸಿದ್ದರು. ರಾಷ್ಟ್ರೀಯ ಕುಸ್ತಿಪಟುಗಳಿಗೆ ಸಾಕಷ್ಟು ಸೂಚನೆ ನೀಡದೇ ಮತ್ತು WFI ನ ಸಂವಿಧಾನದ ನಿಬಂಧನೆಗಳನ್ನು ಅನುಸರಿಸದೇ ಈ ಘೋಷಣೆಯನ್ನು ತರಾತುರಿಯಲ್ಲಿ ಮಾಡಲಾಗಿದೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಕಲುಷಿತ ಕಾಂಗ್ರೆಸ್‌ಗೆ ಹಿಂದುತ್ವ ರುಚಿಸಲ್ಲ, ವಿದೇಶಿ ಜೀನ್ಸ್ ಎಂದೂ ಭಾರತೀಯತೆಯನ್ನು ಒಪ್ಪಲ್ಲ: ಜೆಡಿಎಸ್ ಕಿಡಿ
ಕುಸ್ತಿಪಟುಗಳು ತಯಾರಾಗಲು ಕನಿಷ್ಠ 15 ದಿನಗಳ ಸೂಚನೆ ಅಗತ್ಯವಿದೆ. ಯಾವುದೇ ಟೂರ್ನಿ ನಡೆಸುವ ಮೊದಲು ಕಾರ್ಯಕಾರಿ ಸಮಿತಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು. ಹೊಸದಾಗಿ ಚುನಾಯಿತ ಸಮಿತಿಯು ಕ್ರೀಡಾ ಸಂಹಿತೆಯನ್ನು ಕಡೆಗಣಿಸಿ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದೆ.