Tag: Sanjay Patil

  • ನನ್ನಿಂದ 50 ಸಾವಿರ ಸಾಲ ಪಡೆದಿದ್ದ ಹೆಬ್ಬಾಳ್ಕರ್ 500 ಕೋಟಿ ಹೇಗೆ ಸಂಪಾದನೆ ಮಾಡಿದ್ರು: ಸಂಜಯ್ ಪಾಟೀಲ್

    ನನ್ನಿಂದ 50 ಸಾವಿರ ಸಾಲ ಪಡೆದಿದ್ದ ಹೆಬ್ಬಾಳ್ಕರ್ 500 ಕೋಟಿ ಹೇಗೆ ಸಂಪಾದನೆ ಮಾಡಿದ್ರು: ಸಂಜಯ್ ಪಾಟೀಲ್

    ಬೆಳಗಾವಿ: 20 ವರ್ಷಗಳ ಹಿಂದೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನನ್ನ ಬಳಿ 50 ಸಾವಿರ ರೂ. ಹಣ ಪಡೆದಿದ್ದರು. ಇಂದು ಅವರು 500 ಕೋಟಿ ರೂ. ಮಾಲೀಕರು ಹೇಗೆ ಆಗ್ತಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ (BJP) ಮಾಜಿ ಶಾಸಕ ಸಂಜಯ್ ಪಾಟೀಲ್ (Sanjay Patil) ಪ್ರಶ್ನೆಯಿಟ್ಟಿದ್ದಾರೆ.

    ಸಂಜಯ್ ಪಾಟೀಲ್ ರಾಜಹಂಸಗಡ ಕೋಟೆ ಬಳಿಯ ಮಣ್ಣು ಮಾರಿದ್ದಾರೆ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಕ್ಕೆ ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಹೆಬ್ಬಾಳ್ಕರ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಏನಾದರೂ ದಾಖಲೆ ಕೊಟ್ಟರೆ ನಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ತಿರುಗೇಟು ನೀಡಿದರು,

    20 ವರ್ಷಗಳ ಹಿಂದೆ ನಾನು ರಾಜಕೀಯದಲ್ಲಿ ಇರಲಿಲ್ಲ. ಅವರೂ ಸಕ್ರಿಯ ರಾಜಕಾರಣದಲ್ಲಿ ಇರಲಿಲ್ಲ. ಅಂದು ಅವರು ಗೋಮಟೇಶ್ ವಿದ್ಯಾಪೀಠದ ನನ್ನ ಕಚೇರಿಗೆ ಬಂದಿದ್ದರು. ಆಗ 50 ಸಾವಿರ ರೂ. ನನಗೆ ಸಹಾಯ ಮಾಡಿ ಎಂದು ಕೇಳಿ ಹೋಗಿದ್ದರು. ಆ ಸಮಯ ನನ್ನಿಂದ 50 ಸಾವಿರ ರೂ. ತೆಗೆದುಕೊಂಡು ಹೋದವರು ವಾಪಾಸ್ ಬರಲೇ ಇಲ್ಲ ಎಂದು ಆರೋಪಿಸಿದರು.

    ಅಂದು ನನ್ನ ಕಡೆಯಿಂದ 50 ಸಾವಿರ ರೂ. ಸಾಲ ತೆಗೆದುಕೊಂಡು ಹೋಗುವಂತಹ ಸ್ಥಿತಿಯಲ್ಲಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಈಗ 500 ಕೋಟಿ ರೂ. ಮಾಲೀಕರು ಹೇಗೆ ಆಗ್ತಾರೆ? ಅವತ್ತೇ ಸಂಜಯ್ ಪಾಟೀಲ್ ನಿಮಗೆ 50 ಸಾವಿರ ರೂ. ಸಾಲ ಕೊಟ್ಟಿದ್ದಾನೆ. ಅವನಿಗೆ ದುಡ್ಡಿನ ಅವಶ್ಯಕತೆ ಇಲ್ಲ. ಮಣ್ಣು ಮಾರುವಂತಹ ಬಡತನ ಬಂದಿಲ್ಲ. ಸಂಜಯ್ ಪಾಟೀಲ್‌ಗೆ ಕೊಂಡು ತೆಗೆದುಕೊಳ್ಳೋ, ಎರಡು ನಂಬರ್ ಬ್ಯುಸಿನೆಸ್ ಮಾಡುವಂತಹ ಆಶೀರ್ವಾದ ದೇವರು ನನಗೆ ಮಾಡಿಲ್ಲ. ನಾನು ಲಕ್ಷ್ಮಿ ಪುತ್ರ ಎಂಬುದು ನನಗೆ ಗೊತ್ತಿದೆ. ದುಡ್ಡಿನ ಸಲುವಾಗಿ ಸಗಣಿ ತಿನ್ನುವಂತಹ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ತಿರುಗೇಟು ನೀಡಿದರು.

    ಆ ಮಣ್ಣು ಮಾರೋಕೆ ನಾನು ರಾಜಹಂಸಗಡ ಕೆಲಸ ಪ್ರಾರಂಭ ಮಾಡಿರಲಿಲ್ಲ. ಶಿವಾಜಿ ಮಹಾರಾಜರನ್ನು ದೇವರು ಎಂದು ಪೂಜೆ ಮಾಡುತ್ತೇನೆ. ಆ ಶಿವಾಜಿ ಮಹಾರಾಜರ ಸ್ಮಾರಕ ಮಾಡಲು ಆ ಕೆಲಸ ಪ್ರಾರಂಭ ಮಾಡಿದ್ದೇನೆ. ನಾನು ಕೊಟ್ಟ 50 ಸಾವಿರ ರೂ. ವಾಪಸ್ ಕೊಟ್ಟಿಲ್ಲ. ಅದಕ್ಕೂ ಆಣೆ ಮಾಡಲಿ ಬರಲಿ ಅವರು. ಮಳೇಕರಣಿ ದೇವಿ ಅಲ್ಲ, ಅವರಿಗೆ ಯಾವ ದೇವರ ಮೇಲೆ ಭಕ್ತಿ ಇದೆ, ಆ ದೇವರ ಕಡೆ ಬರಬೇಕು. ಸಂಜಯ್ ಪಾಟೀಲ್ ಬಳಿ 50 ಸಾವಿರ ರೂ. ಪಡೆದಿಲ್ಲ ಎಂದು ಆಣೆ ಮಾಡಬೇಕು. ನನಗೆ ಅವಶ್ಯಕತೆ ಇದೆ ಸಹಾಯ ಮಾಡಿ ಎಂದು 50 ಸಾವಿರ ರೂ. ಕೊಡಿ ಎಂದಿದ್ದರು. 2 ಗಂಟೆ ನನ್ನ ಕಚೇರಿಯಲ್ಲಿ ಕುಳಿತು ಹಣ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.

    ಸಂಜಯ ಪಾಟೀಲ್ ಗೋಮಟೇಶ್ ವಿದ್ಯಾಪೀಠಕ್ಕೆ ಶಾಸಕರ ಅನುದಾನದ 40 ಲಕ್ಷ ರೂ. ಹಣ ಪಡೆದ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವಲ್ಪ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಅದರ ಬಗ್ಗೆ ಅಭ್ಯಾಸ ಮಾಡಿ ಹೇಳಬೇಕು. ಗೋಮಟೇಶ್ ವಿದ್ಯಾಪೀಠಕ್ಕೆ ತೆಗೆದುಕೊಂಡಿದ್ದೇವೋ ಇಲ್ಲವೋ, ಹಣ ವಾಪಾಸ್ ಆಗಿದೆಯೋ ಇಲ್ಲವೋ ಅಂತ. ಗೋಮಟೇಶ್ ವಿದ್ಯಾಪೀಠದ ಹಣ ಉಪಯೋಗ ಆಗಿದೆಯೋ ಇಲ್ಲವೋ ಅದರ ಬಗ್ಗೆ ತಿಳಿದುಕೊಳ್ಳಬೇಕು. ಆ ಬಳಿಕ ನಾನು ಯಾವಾಗ ಬೇಕಾದರೂ ಉತ್ತರಿಸಲು ವೇದಿಕೆ ಮೇಲೆ ಬರುತ್ತೇನೆ ಎಂದರು.

    ಅವರು ಸುಳ್ಳು ಆರೋಪ ಮಾಡುವುದನ್ನು ಬಿಡಬೇಕು. ಯಾವ ವಿಚಾರ ಬಂದರೂ ದಾಖಲೆ ತೆಗೆದುಕೊಂಡು ಬರಬೇಕು. ನೀವು 10 ವರ್ಷ ಎಂಎಲ್‌ಎ ಆಗಿದ್ದು, 20 ಕೋಟಿ ರೂ. ಶಾಸಕರ ಅನುದಾನ ಬಂದಿತ್ತು. ಶಿವಾಜಿ ಮೂರ್ತಿ ಏಕೆ ಪ್ರತಿಷ್ಠಾಪಿಸಿಲ್ಲ ಎಂದು ಕೇಳಿದ್ರು. ನಾನು ಶಿವಾಜಿ ಮೂರ್ತಿ ಸಲುವಾಗಿ ಎಂಎಲ್‌ಎ ಫಂಡ್ ನೀಡುವಂತೆ ಡಿಸಿಗೆ ಪತ್ರ ಬರೆದಿದ್ದೇನೆ. ಅದಕ್ಕೆ ಅದು ಪ್ರೊವಿಜಿನ್ ಇಲ್ಲ, ಕೊಡೋಕೆ ಆಗಲ್ಲ ಎಂದು ಡಿಸಿ ಉತ್ತರಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ತೆರೆದ ವಾಹನದಲ್ಲಿ ಎಚ್‌ಡಿಡಿ 100 ಕಿ.ಮೀ. ರೋಡ್ ಶೋ

    ಎಂಎಲ್‌ಎ ಫಂಡ್ ಯಾವ್ಯಾವ ಕೆಲಸಕ್ಕೆ ಉಪಯೋಗ ಮಾಡಬೇಕು ಎಂಬ ಜ್ಞಾನ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಬೇಕಲ್ಲ. ಎಂಎಲ್‌ಎ ಫಂಡ್ ಯಾವ್ಯಾವ ಕಾಮಗಾರಿಗಳಿಗೆ ಕೊಡಬೇಕು ಅಂತಾ ಕಾನೂನು ಇದೆ. ಆ ಕಾನೂನು ಬಿಟ್ಟು ಮಾಡೋಕೆ ಆಗಲ್ಲ. ಸುಮ್ಮನೆ ಭಾಷಣ ಏನೇನೋ ಮಾಡೋದು, ಜನರಿಗೆ ಸುಳ್ಳು ಹೇಳಿ ಮೋಸ ಮಾಡುವ ಸ್ವಭಾವವನ್ನು ಲಕ್ಷ್ಮಿ ಹೆಬ್ಬಾಳ್ಕರ್ ಹೊಂದಿದ್ದಾರೆ ಎಂದು ಕಿಡಿ ಕಾರಿದರು.

    ಶಾಸಕಿ ಅಂದ್ರೆ ಏನು? ಶಾಸಕರ ಅಧಿಕಾರ ಏನಿದೆ? ಇದರ ಬಗ್ಗೆ ಅವರು ಅಧ್ಯಯನ ಮಾಡಬೇಕು. ನಾನು ರಾಜಹಂಸಗಡ ಕೋಟೆ ಅಭಿವೃದ್ಧಿ ಕೆಲಸ ಪ್ರಾರಂಭ ಮಾಡಿದ್ದ ದಾಖಲೆಗಳಿವೆ. ಅವರಿಗೆ ಬಹಳ ಸಲ ವಿನಂತಿ ಮಾಡಿದ್ದೇನೆ. ಅವರು ಕೇವಲ ಭಾಷಣ ಮಾಡುತ್ತಿದ್ದಾರೆ. ಸರ್ಕಾರಿ ದಾಖಲಾತಿಗಳೊಂದಿಗೆ ಅವರು ಉತ್ತರಿಸಲು ಪ್ರಾರಂಭ ಮಾಡಬೇಕು. ಅಲ್ಲಿ ಎಲ್ಲಾದರೂ ತಪ್ಪಿದ್ದರೆ ನಾನು ಕ್ಷಮೆ ಕೇಳೋಕೆ ರೆಡಿ ಎಂದು ಸಂಜಯ್ ಪಾಟೀಲ್ ಹೇಳಿದ್ದಾರೆ. ಇದನ್ನೂ ಓದಿ: HDK ಕುಟುಂಬದಿಂದ ದೇವರ ಮೊರೆ – ಚಂಡಿಕಾ ಯಾಗ, ಮಹಾಮೃತ್ಯುಂಜಯ ಜಪ ಆಯೋಜನೆ

  • ರಮೇಶ್ ಜಾರಕಿಹೊಳಿ ಬೆಂಬಲಿಗರು ಮಾಡುತ್ತಿರೋ ಸಮಾವೇಶಕ್ಕೆ ಹೋಗಲ್ಲ: ಸಂಜಯ್ ಪಾಟೀಲ್

    ರಮೇಶ್ ಜಾರಕಿಹೊಳಿ ಬೆಂಬಲಿಗರು ಮಾಡುತ್ತಿರೋ ಸಮಾವೇಶಕ್ಕೆ ಹೋಗಲ್ಲ: ಸಂಜಯ್ ಪಾಟೀಲ್

    ಬೆಳಗಾವಿ: ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ (Ramesh Jarakiholi) ಬೆಂಬಲಿಗರು ಮಾಡುತ್ತಿರುವ ಸಮಾವೇಶಕ್ಕೆ ನಾನು ಹೋಗುವುದಿಲ್ಲ ಎಂದು ಮಾಜಿ ಶಾಸಕ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ (Sanjay Patil) ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಬಿಜೆಪಿ ಕಾರ್ಯಕ್ರಮ ಅಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಹೀಗಾಗಿ ನಾನು ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ರಮೇಶ್ ಜಾರಕಿಹೊಳಿ ಅಭಿಮಾನಿ ಬಳಗದಿಂದ ಕಾರ್ಯಕ್ರಮ ಮಾಡ್ತಿದ್ದಾರೆ. ನಾನು ಬಿಜೆಪಿ ಜಿಲ್ಲಾಧ್ಯಕ್ಷನಾಗಿ ನಾನು ಹೋಗೋದಿಲ್ಲ, ನನ್ನ ಮನಸ್ಸು ಒಪ್ಪೋದಿಲ್ಲ ಎಂದರು. ಇದನ್ನೂ ಓದಿ: ವಿದೇಶಗಳಿಗೆ ಹಣಕಾಸು ಸಚಿವಾಲಯದ ಮಾಹಿತಿ ರವಾನೆ – ಓರ್ವ ಉದ್ಯೋಗಿ ಅರೆಸ್ಟ್‌

    ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ (BJP Ticket) ಫೈಟ್ ವಿಚಾರಕ್ಕೆ, ಟಿಕೆಟ್ ಡಿಕ್ಲೇರ್ ಆದ ಮೇಲೆ ಎಲ್ಲರೂ ಒಂದಾಗುತ್ತಾರೆ. ಈಗ ಎಲ್ಲರೂ ಆಕಾಂಕ್ಷಿಗಳು ಅಂತಾ ಕಾರ್ಯಕ್ರಮ ಮಾಡುತ್ತಿದ್ದಾರೆ. ಯಾವುದೇ ವೇದಿಕೆ ಆದರೂ ಬಿಜೆಪಿ ಗೆಲ್ಲಿಸಿ ಅಂತಾ ಮನವಿ ಮಾಡ್ತೇವೆ. ರಮೇಶ್ ಜಾರಕಿಹೊಳಿ ಐದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳನ್ನ ಏನೂ ಕರೆದಿಲ್ಲ. ರಮೇಶ್ ಜಾರಕಿಹೊಳಿ ನಮ್ಮ ಬಿಜೆಪಿ ಲೀಡರ್ ಅವರ ಬಗ್ಗೆ ಹೆಮ್ಮೆ ಇದೆ. ಬಿಜೆಪಿ, ಕಮಲ, ಹಿಂದುತ್ವ, ನರೇಂದ್ರ ಮೋದಿ ನನ್ನ ಉಸಿರು. ಕಾರ್ಯಕರ್ತರಿಗೆ ಹೋಗಿ ಅಂತಾನೂ ಹೇಳಲ್ಲ, ಹೋಗಬೇಡಿ ಅಂತಾನೂ ಹೇಳಲ್ಲ. ನಮಗೆ ಯಾವುದೇ ಹಿರಿಯ ನಾಯಕರಿಂದ ಸೂಚನೆ ಬಂದಿಲ್ಲ ಎಂದರು.

    ಬಿಜೆಪಿ ಬ್ಯಾನರ್ (BJP Banner) ಇಲ್ಲದ ವೇದಿಕೆ ಮೇಲೆ ಹೋಗಲು ಮನಸ್ಸಿಲ್ಲ. ಕ್ಯಾಂಡಿಡೇಟ್ ನಾನೇ ಅಂತಾ ಪೌಡರ್ ಲಿಪ್‍ಸ್ಟಿಕ್ ಹಚ್ಚಿಕೊಂಡು ನಿಂತಿದ್ದಾರೆ. ಆದರೆ ಪಕ್ಷ ನಿರ್ಧಾರ ಮಾಡುತ್ತೆ ಯಾರಿಗೆ ಟಿಕೆಟ್ ನೀಡಬೇಕು ಅಂತಾ. ಸಂಜಯ್ ಪಾಟೀಲ್ ಗೆ ಟಿಕೆಟ್ ಕೊಡಬೇಡಿ ಬೇಡ ಅಂತಾ ರಮೇಶ್ ಜಾರಕಿಹೊಳಿ ಎಲ್ಲೂ ಹೇಳಿಲ್ಲ. ಫೋನ್ ಮಾಡಿ ರಮೇಶ್ ಜಾರಕಿಹೊಳಿ ಸಮಾವೇಶಕ್ಕೆ ಕರೆದಿದ್ದರು. ಆದರೆ ಬಿಜೆಪಿ ಬ್ಯಾನರ್ ಹಚ್ಚಿದ್ರೆ ಬರ್ತೀನಿ ಅಂತಾ ಹೇಳಿದ್ದೇನೆ ಎಂದು ಸಂಜಯ್ ಪಾಟೀಲ್ ಹೇಳಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಭಿವೃದ್ಧಿ ಕೆಲಸ ಮಾಡಿದ್ದರೆ ಟಿಫಿನ್ ಬಾಕ್ಸ್ ಹಂಚುವ ಅವಶ್ಯಕತೆ ಇರುತ್ತಿರಲಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಂಜಯ್ ಪಾಟೀಲ್ ಟಾಂಗ್

    ಅಭಿವೃದ್ಧಿ ಕೆಲಸ ಮಾಡಿದ್ದರೆ ಟಿಫಿನ್ ಬಾಕ್ಸ್ ಹಂಚುವ ಅವಶ್ಯಕತೆ ಇರುತ್ತಿರಲಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಂಜಯ್ ಪಾಟೀಲ್ ಟಾಂಗ್

    ಬೆಳಗಾವಿ: ಅಭಿವೃದ್ಧಿ ಕೆಲಸ ಮಾಡಿದ್ದರೆ ಟಿಫಿನ್ ಬಾಕ್ಸ್ (Tiffin Box) ಹಂಚುವ ಅವಶ್ಯಕತೆ ಇರುತ್ತಿರಲಿಲ್ಲ ಎನ್ನುವ ಮೂಲಕ ಬೆಳಗಾವಿ (Belagavi) ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಮತ್ತು ಅಂಜಲಿ ನಿಂಬಾಳ್ಕರ್‌ಗೆ (Anjali Nimbalkar) ಮಾಜಿ ಶಾಸಕ ಸಂಜಯ್ ಪಾಟೀಲ್  (Sanjay Patil) ಟಾಂಗ್ ನೀಡಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಂಚುವವರು ಹಂಚುತ್ತಾರೆ. ನಾನು ಸದ್ಯಕ್ಕೆ ಜಿಲ್ಲಾಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ನಾನು ಗಂಡಸಾಗಿ ಹೇಗೆ ಹಳದಿ, ಕುಂಕುಮ ಕಾರ್ಯಕ್ರಮ ಮಾಡೋಕೆ ಆಗುತ್ತದೆ? ಕಾರ್ಯಕ್ರಮ ಮಾಡಲು ಎಲ್ಲರಿಗೂ ಸ್ವಾತಂತ್ರ‍್ಯವಿದೆ. ಎಲ್ಲರೂ ಏನು ಬೇಕಾದರೂ ಕಾರ್ಯಕ್ರಮ ಮಾಡಬಹುದು. ಎಲ್ಲರೂ ಅವರವರ ಕಾರ್ಯಕ್ರಮ ಮಾಡುತ್ತಾರೆ. ನಾನು ಪಕ್ಷದ ಜಿಲ್ಲಾಧ್ಯಕ್ಷನಾಗಿ ಪಕ್ಷ ಸಂಘಟನೆ ಬೆಳೆಸಲು ಪಕ್ಷದ ಕಾರ್ಯಕ್ರಮಗಳಲ್ಲಿ ಇರುತ್ತೇನೆ ಎಂದರು.

    ಗ್ರಾಮೀಣ ಕ್ಷೇತ್ರದಲ್ಲಿ ಟಿಫಿನ್ ಬಾಕ್ಸ್ ಹಂಚುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಟಿಫಿನ್ ಬಾಕ್ಸ್ ತೆಗೆದುಕೊಳ್ಳುವವರು, ತೆಗೆದುಕೊಳ್ಳುತ್ತಿರಬಹುದು. ಆದರೆ ಟಿಫಿನ್ ಬಾಕ್ಸ್ ಬಿಜೆಪಿ ಕಾರ್ಯಕರ್ತರು ಯಾರೂ ತೆಗೆದುಕೊಳ್ಳುವುದಿಲ್ಲ. ಚುನಾವಣೆ ಅಭಿವೃದ್ಧಿ ಮೇಲೆ ಆಗಬೇಕೇ ಹೊರತು. ಏನಾದರೂ ಹಂಚಿ ಆಗಬಾರದು. ಬಾಬಾಸಾಹೇಬ ಅಂಬೇಡ್ಕರ್ ಅವರು ಎಲ್ಲರಿಗೂ ಒಂದೇ ಮತ ಹಾಕುವ ಅಧಿಕಾರ ಕೊಟ್ಟಿದ್ದಾರೆ. ಆ ಮತವನ್ನು ಯಾರೂ ಮಾರಾಟ ಮಾಡಿಕೊಳ್ಳಬಾರದು ಎಂದು ತಿಳಿಸಿದರು. ಇದನ್ನೂ ಓದಿ: ನಾಳೆಯಿಂದ ಹಾಲು, ಮೊಸರಿನ ದರ 2 ರೂ. ಏರಿಕೆ

    ನಿಮ್ಮ ಪಕ್ಷದವರು ಯಾರೂ ಏನೂ ಹಂಚಿಲ್ಲವೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿನ್ನೆ ನಮ್ಮವರು ಪುಸ್ತಕ ಹಂಚಿದ್ದಾರೆ. ಆದರೆ ಅವರು ಸಾರಾಯಿಯನ್ನು ಹಂಚುತ್ತಿಲ್ಲವಲ್ಲ. ಪುಸ್ತಕ ಹಂಚಬೇಕು, ಬಡವರ ಮಕ್ಕಳಿಗೆ ಕಲಿಸಬೇಕು. ಇದರಿಂದ ಅವರಿಗೆ ಜ್ಞಾನ ಬರುತ್ತದೆ. ಟಿಫಿನ್ ಬಾಕ್ಸ್ ಚುನಾವಣೆ ಸಂದರ್ಭದಲ್ಲಿ ಹಂಚುವುದು, ನಮಗೆ ಮತ ಹಾಕಬೇಕು ಎಂದು ಷರತ್ತು ಹಾಕುವುದು. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗುಡಿ ಕಟ್ಟಲು 50 ಲಕ್ಷ ರೂ. ಕೊಡುತ್ತೇನೆ, ಒಂದೂ ಬೇರೆ ಟೇಬಲ್ ಹಾಕಬಾರದು ಎಂದು ಕಂಡಿಷನ್ ಹಾಕುತ್ತಿದ್ದಾರೆ. ನಾನು 10 ವರ್ಷ ಏನೂ ಕೆಲಸ ಮಾಡಿಲ್ಲ. ಇದನ್ನು ಜನರ ಮೇಲೆ ಬಿಡುತ್ತೇನೆ ಎಂದರು.

    ನಾನು ನಾಳೆ ಬೆಳಗ್ಗಿನ ವಿಚಾರಕ್ಕೆ ಗ್ಯಾರಂಟಿ ಕೊಡುವುದಿಲ್ಲ. ನಾಳೆ ಬೆಳಗ್ಗೆ ಏಳುತ್ತೇವೋ ಇಲ್ಲವೋ ಗೊತ್ತಿಲ್ಲ. ಅಂತಹ ಆಸೆ ಇರಬಾರದು. ಯಾರು ಅಭಿವೃದ್ಧಿ ಮಾಡುತ್ತಾರೆ, ಅವರು ಏನೂ ಹಂಚುವ ಅವಶ್ಯಕತೆ ಇಲ್ಲ ಎಂದು ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಂಜಯ್ ಪಾಟೀಲ್ ಟಾಂಗ್ ಕೊಟ್ಟರು. ಇದನ್ನೂ ಓದಿ: ವಿರೋಧಪಕ್ಷ ಮತಕ್ಕೋಸ್ಕರ ಭಯೋತ್ಪಾದನೆಗೆ ಸಪೋರ್ಟ್ ಮಾಡ್ತಿದೆ: ಪ್ರಮೋದ್ ಮುತಾಲಿಕ್

    Live Tv
    [brid partner=56869869 player=32851 video=960834 autoplay=true]

  • ಈಗಿನಿಂದ್ಲೇ ಡಬ್ಬಿ, ಕುಕ್ಕರ್‌ಗಳನ್ನು ಹಂಚಲಾಗ್ತಿದೆ- ಹೆಬ್ಬಾಳ್ಕರ್ ವಿರುದ್ಧ ಸಂಜಯ್ ಪಾಟೀಲ್ ವಾಗ್ದಾಳಿ

    ಈಗಿನಿಂದ್ಲೇ ಡಬ್ಬಿ, ಕುಕ್ಕರ್‌ಗಳನ್ನು ಹಂಚಲಾಗ್ತಿದೆ- ಹೆಬ್ಬಾಳ್ಕರ್ ವಿರುದ್ಧ ಸಂಜಯ್ ಪಾಟೀಲ್ ವಾಗ್ದಾಳಿ

    ಬೆಳಗಾವಿ: ಗ್ರಾಮೀಣ ಕ್ಷೇತ್ರದಲ್ಲೀ ಈಗಿನಿಂದಲೇ ಡಬ್ಬಿ-ಕುಕ್ಕರ್ ಗಳನ್ನು ಹಂಚಲಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ವಿರುದ್ಧ ಮಾಜಿ ಶಾಸಕ ಸಂಜಯ್ ಪಾಟೀಲ್ (Sanjay Patil) ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿರುವ ಚುನಾವಣೆ (Election) ಮಾಡುವ ಪದ್ಧತಿ ಬೇರೆಲ್ಲೂ ಇಲ್ಲ. ಈಗಲೇ ಡಬ್ಬಿ- ಕುಕ್ಕರ್ ಗಳನ್ನು ಹಂಚುವ ಕೆಲಸಗಳು ಗ್ರಾಮೀಣ ಭಾಗದಲ್ಲಿ ನಡೆಯುತ್ತಿವೆ. ನೀವು ಒಳ್ಳೆಯ ಕೆಲಸ ಮಾಡಿದ್ರೆ ಡಬ್ಬಿ ಹಂಚುವ ಅವಶ್ಯಕತೆ ಏನಿದೆ?. ಅವರು ಡಬ್ಬಿ ಹಂಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ತೇಜಸ್ವಿ ಸೂರ್ಯ ದೋಸೆ ಸವಿದಿದ್ದನ್ನು ಟೀಕಿಸಿದ್ದ ಕಾಂಗ್ರೆಸ್‍ಗೆ ಬಿಜೆಪಿ ತಿರುಗೇಟು

    ನಾನು ಪಕ್ಷ ಸಂಘಟನೆ ಮಾಡುತ್ತಿದ್ದೇನೆ. 10 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ಶಾಸಕ(MLA) ನಾಗುವ ಆಸೆ ಇದೆ. ನಾನೇನೂ ಸನ್ಯಾಸಿ ಅಲ್ಲ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ. ಎರಡು ಸಲ ಶಾಸಕನಾಗಿದ್ದೇನೆ. ಈಗ ಜಿಲ್ಲಾಧ್ಯಕ್ಷನಾಗಿರುವೆ ಮುಂದೆಯೂ ರಾಜಕಾರಣದಲ್ಲಿ ಇರುತ್ತೇನೆ. ಟಿಕೆಟ್ ಯಾರಿಗೆ ಸಿಗುತ್ತದೆಯೋ ಅವರ ಪರ ಎಲ್ಲರೂ ಕೆಲಸ ಮಾಡಬೇಕು ಎಂದರು.

    ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಹೆಚ್ಚಾಗುತ್ತಿರುವುದು ತಪ್ಪಲ್ಲ. ಪಾರ್ಟಿ ಸಂಘಟನಾತ್ಮಕವಾಗಿ ಬೆಳೆಯುತ್ತಿರುವ ಕಾರಣಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗ್ತಿದೆ. ಜಿಲ್ಲಾ ಅಧ್ಯಕ್ಷನಾಗಿ ಆ ಬಗ್ಗೆ ನನಗೆ ಹೆಮ್ಮೆಯಿದ್ದು ಜಿಲ್ಲಾಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡ್ತಿದ್ದೇನೆ. ಗ್ರಾಮೀಣ ಕ್ಷೇತ್ರದಲ್ಲೂ ಸಂಘಟನೆ ನಡೆದಿದೆ ಎಂದು ಬೆಳಗಾವಿಯಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್ ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್‍ನವರಿಗೆ ಚಡ್ಡಿ ಸುಡುವ ಅಭ್ಯಾಸ ಇದ್ರೆ ನಂದೂ ಚಡ್ಡಿ ಕೊಡ್ತೇನೆ, ಅದನ್ನು ಸುಡಲು ಹೇಳಿ: ಸಂಜಯ್ ಪಾಟೀಲ್

    ಕಾಂಗ್ರೆಸ್‍ನವರಿಗೆ ಚಡ್ಡಿ ಸುಡುವ ಅಭ್ಯಾಸ ಇದ್ರೆ ನಂದೂ ಚಡ್ಡಿ ಕೊಡ್ತೇನೆ, ಅದನ್ನು ಸುಡಲು ಹೇಳಿ: ಸಂಜಯ್ ಪಾಟೀಲ್

    ಬೆಳಗಾವಿ: ಕಾಂಗ್ರೆಸ್‍ನವರಿಗೆ ಚಡ್ಡಿ ಸುಡೋದು ಅಭ್ಯಾಸ ಇದ್ರೆ ನಂದೂ ಚಡ್ಡಿ ಕೊಡುತ್ತೇನೆ, ಅದನ್ನೂ ಸುಡಲು ಹೇಳಿ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್‌ಎಸ್‍ಎಸ್ ಸಂಘಟನೆಯ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್ಸಿಗಿಲ್ಲ. ದೇಶಭಕ್ತಿ ಸಮಾಜಸೇವಾ ಸಂಘಟನೆ ಜೊತೆಗೆ ನಮಗೆ ಮಾರ್ಗದರ್ಶನವನ್ನು ಸಂಘ ಮಾಡುತ್ತದೆ. ಕಾಂಗ್ರೆಸ್‍ನವರು ಆರ್‌ಎಸ್‍ಎಸ್ ಬಗ್ಗೆ ಮಾತನಾಡುವ ಮೂಲಕ ಸೂರ್ಯನ ಮೇಲೆ ಉಗುಳು ಪ್ರಯತ್ನ ಮಾಡ್ತಿದ್ದಾರೆ. ಅದು ಅವರ ಮೇಲೆ ಬೀಳುತ್ತದೆ ಎಂದು ಟೀಕಿಸಿದರು.

    Congress

    ನೀವೂ ಕಾಂಗ್ರೆಸ್‍ಗೆ ಚಡ್ಡಿ ಕೊಡ್ತೀರಾ ಎಂಬ ಮಾಧ್ಯಮದವರ ಪ್ರಶ್ನೆ ವಿಚಾರಕ್ಕೆ, ನಂದೂ ಚಡ್ಡಿ ಕೊಡ್ತೇನಿ ಸುಡಾಕ್ ಹೇಳಿ. ಅವರಿಗೆ ಸುಡೋದು ಅಭ್ಯಾಸ ಇದ್ದರೆ ನಾವೇನು ಮಾಡಲು ಆಗುತ್ತದೆ. ನಂದ್ ಫೋನ್ ನಂಬರ್ ಕೊಡಿ ಅವರಿಗೆ. ಯಾವಾಗ ಬೇಕು ಅವಾಗ ನಾನು ಪರ್ಸನಲ್ ಆಗಿ ಕಳುಹಿಸಿ ಕೊಡುತ್ತೇನೆ. ಅವಶ್ಯಕತೆ ಬಿದ್ರೆ ನನಗೆ ತಿಳಿಸಿ ನಾನು ಕಳುಹಿಸಿ ಕೊಡುತ್ತೇನೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಹಿಜಬ್ ಧರಿಸಿ ಬಂದ 24 ವಿದ್ಯಾರ್ಥಿನಿಯರಿಗೆ 1 ವಾರ ತರಗತಿಗೆ ನಿರ್ಬಂಧ

    ಆರ್‌ಎಸ್‍ಎಸ್ ಬಗ್ಗೆ ಪ್ರೀತಿಯಲ್ಲ ಕಾಂಗ್ರೆಸ್ ಖಿನ್ನತೆಗೆ ಒಳಗಾಗಿದೆ. ಪ್ರಧಾನಿ ನೇತೃತ್ವದಲ್ಲಿ ಪ್ರತಿಯೊಂದು ರಾಜ್ಯದಲ್ಲಿ ಒಳ್ಳೆಯ ಸ್ಥಾನಮಾನ ಗಳಿಸಿದ್ದೇವೆ. ಒಂದು ಕಾಲದಲ್ಲಿ ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿತ್ತು. ಇದೀಗ ವಿರೋಧ ಪಕ್ಷದ ಸ್ಥಾನವೂ ಸಿಗುತ್ತಿಲ್ಲ. ಅದಕ್ಕಾಗಿ ಕಾಂಗ್ರೆಸ್ ಖಿನ್ನತೆಗೆ ಒಳಗಾಗಿ ಈ ತರಹ ಮಾಡುತ್ತಿದ್ದಾರೆ. ಇವತ್ತು ಬಿಜೆಪಿ ಅಧಿಕಾರಕ್ಕೆ ಬರಲು ಆರ್‌ಎಸ್‍ಎಸ್ ಕೊಡುಗೆ ಅಪಾರವಾಗಿದೆ. ಅವರ ಆಶೀರ್ವಾದ, ಮಾರ್ಗದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕ ನೇಣಿಗೆ ಶರಣು

  • ED ನನ್ನ ಮೇಲೆ ದಾಳಿ ಮಾಡುವುದಿಲ್ಲ, ನಾನು BJP ಸಂಸದ: ಸಂಜಯ್ ಪಾಟೀಲ್

    ED ನನ್ನ ಮೇಲೆ ದಾಳಿ ಮಾಡುವುದಿಲ್ಲ, ನಾನು BJP ಸಂಸದ: ಸಂಜಯ್ ಪಾಟೀಲ್

    ಮುಂಬೈ: ನಾನು ಬಿಜೆಪಿ ಸಂಸದ, ಹೀಗಾಗಿ ನನ್ನ ಮೇಲೆ ಜಾರಿ ನಿರ್ದೇಶನಾಲಯ(ED)ದಾಳಿ ನಡೆಸುವುದಿಲ್ಲ ಎಂದು ಮಹಾರಾಷ್ಟ್ರದ ಸಾಂಗ್ಲಿ ಕ್ಷೇತ್ರದ ಬಿಜೆಪಿ(BJP) ಸಂಸದ ಸಂಜಯ್ ಪಾಟೀಲ್(SANJAY PATIL  )ಹೇಳಿದ್ದಾರೆ.

    ಸಾಂಗ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಸಂಸದನಾದ್ದರಿಂದ ಇ.ಡಿ ನನ್ನ ಬಳಿ ಬರುವುದಿಲ್ಲ. 40 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಕಾರು ಖರೀದಿಸುವುದಕ್ಕಾಗಿ ಸಾಲ ತೆಗೆದುಕೊಳ್ಳಬೇಕಿದೆ. ನಮ್ಮ ಸಾಲದ ಮೊತ್ತ ನೋಡಿದರೆ ಇ.ಡಿಗೆ ಆಶ್ಚರ್ಯವಾಗಲಿದೆ. ಕೇಸರಿ ಪಕ್ಷದವರ ಮೇಲೆ ಯಾವುದೇ ತನಿಖೆ ಇರುವುದಿಲ್ಲ. ಹೀಗಾಗಿ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇನೆ ಎಂದು ಬಿಜೆಪಿ ನಾಯಕ ಹರ್ಷವರ್ಧನ್ ಪಾಟೀಲ್ ಹೇಳಿದ್ದಾರೆ. ಇದನ್ನೂ ಓದಿ:  ದಂಪತಿಯ ಹನಿ ಟ್ರ್ಯಾಪ್ ಬಲೆಗೆ ಬಿದ್ದ 300 ಮಂದಿ- ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ!

    ಪ್ರತಿಪಕ್ಷಗಳನ್ನು ಗುರಿಯಾಗಿಸಲು ಕೇಂದ್ರ ಸರ್ಕಾರವು ಸಿಬಿಐ, ಇ.ಡಿ ಹಾಗೂ ಎನ್‍ಸಿಬಿಗಳನ್ನು ಬಳಸಿಕೊಳ್ಳುತ್ತಿದೆ ಎಂದು ಎನ್‍ಸಿಪಿ ವರಿಷ್ಠ ಶರದ್ ಪವಾರ್ ಇತ್ತೀಚೆಗೆ ಆರೋಪಿಸಿದರು. ಅದೇ ದಿನ ಹರ್ಷವರ್ಧನ್ ಪಾಟೀಲ್ ಕೂಡ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆನಂದ್ ಬರ್ಬರ ಕೊಲೆ

  • ಯಾರೇ ಇರಲಿ ಮಹಿಳೆಯರ ಬಗ್ಗೆ ಗೌರವದಿಂದ ಮಾತನಾಡಬೇಕು: ಬಿ.ಸಿ ಪಾಟೀಲ್

    ಯಾರೇ ಇರಲಿ ಮಹಿಳೆಯರ ಬಗ್ಗೆ ಗೌರವದಿಂದ ಮಾತನಾಡಬೇಕು: ಬಿ.ಸಿ ಪಾಟೀಲ್

    ಧಾರವಾಡ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಮಾಜಿ ಶಾಸಕ ಸಂಜಯ್ ಪಾಟೀಲ್ ರಾತ್ರಿ ಕೆಲಸ ಮಾಡುತ್ತಾರೆ ಎಂಬ ಹೇಳಿಕೆ ವಿಚಾರವಾಗಿ ಸಚಿವ ಬಿ.ಸಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಇನ್ಸ್‌ಪೆಕ್ಟರ್‌ ಮೃತಪಟ್ಟಾಗ ಸೋನಿಯಾ ಅತ್ತಿರಲಿಲ್ಲ, ಟೆರರಿಸ್ಟ್ ಸತ್ತಾಗ ಅತ್ತಿದ್ದರು: ಪ್ರಹ್ಲಾದ್ ಜೋಶಿ

    ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಜಯ ಪಾಟೀಲ್ ಏನು ಹೇಳಿದ್ದಾರೆ ನನಗೆ ಗೊತ್ತಿಲ್ಲ, ನಾನು ಯಾಕೆ ಪ್ರತಿಕ್ರಿಯೆ ಕೊಡಲಿ, ಯಾರೇ ಇರಲಿ ಮಹಿಳೆಯರ ಬಗ್ಗೆ ಗೌರವ ಇಟ್ಟು ಮಾತನಾಡಬೇಕು. ಅದನ್ನು ಪಾಲಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಇಡಿ ದಾಳಿ ಪ್ರಕರಣ- ದೆಹಲಿಯಲ್ಲಿ ಮೊದಲ ಬಾರಿ ವಿಚಾರಣೆಗೆ ಹಾಜರಾದ ಜಮೀರ್

    ಗೋಹತ್ಯೆ ಬಗ್ಗೆ ಮಾತನಾಡಿದ ಅವರು, ಯಾವುದೇ ಕಾಯ್ದೆ ಜಾರಿಗೆ ತರುವುದು ಬಹಳ ಮುಖ್ಯ, ಗೋಹತ್ಯೆ ಇವತ್ತು ನಿನ್ನೆ ಬಂದಿದ್ದಲ್ಲ, 1965 ರಲ್ಲಿ ಬಂದಿದೆ. ಎಲ್ಲಿ ಅಕ್ರಮ ಸಾಗಾಣಿಕೆ ಇರುತ್ತದೆ. ಅಲ್ಲಿ ಹಿಡಿಯುವ ಕೆಲಸ ಮಾಡುತ್ತಾರೆ. ಅದನ್ನು ಹುಡುಕಿಕೊಂಡು ಹೋಗಿ ಮಾಡಲು ಆಗಲ್ಲ ಎಂದು ಹೇಳಿದ್ದಾರೆ.

    ಇದೇ ವೇಳೆ ರಾಜ್ಯದಲ್ಲಿನ ಉಪಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಸಂಜೆ ಹಾನಗಲ್ ನಲ್ಲಿ ಸಭೆ ಕರೆದಿದ್ದೇವೆ. ಯಾರು, ಯಾರು ಆಕಾಂಕ್ಷಿ ಇದ್ದಾರೆ. ಅವರ ಪಟ್ಟಿ ಹೈಕಮಾಂಡ್‍ಗೆ ಕಳುಹಿಸುತ್ತೇವೆ. ಸೂಕ್ತ ವ್ಯಕ್ತಿಗೆ ಟಿಕೆಟ್ ಕೊಡುತ್ತೇವೆ. ಹಾನಗಲ್ ಹಾಗೂ ಸಿಂದಗಿಯಲ್ಲಿ ನಾವೇ ಗೆಲ್ಲುತ್ತೇವೆ. ಯಾರು ಗೆಲ್ಲುತ್ತಾರೆ ಹಾಗೂ ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ಕೊಡುತ್ತಾರೆ. ಅವರಿಗೆ ನನ್ನ ಒಲವು ಎಂದಿದ್ದಾರೆ. ಇದನ್ನೂ ಓದಿ: ಕೊಲೆ ಯತ್ನ- ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಂಧನ

  • ರಾತ್ರಿ ರಾಜಕಾರಣ ಗೊತ್ತಿರೋದಕ್ಕೆ ಹೆಬ್ಬಾಳ್ಕರ್ ಶಾಸಕಿ ಆಗಿರೋದು: ಸಂಜಯ್ ಪಾಟೀಲ್

    ರಾತ್ರಿ ರಾಜಕಾರಣ ಗೊತ್ತಿರೋದಕ್ಕೆ ಹೆಬ್ಬಾಳ್ಕರ್ ಶಾಸಕಿ ಆಗಿರೋದು: ಸಂಜಯ್ ಪಾಟೀಲ್

    ಬೆಳಗಾವಿ: ರಾತ್ರಿ ರಾಜಕಾರಣ ಸಂಸ್ಕೃತಿ ಗೊತ್ತಿರೋದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಸಕಿ ಆಗಿದ್ದಾರೆ ಎಂದು ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ರೋಡ್ ಪಾಲಿಟಿಕ್ಸ್ ವೇಳೆ ಮಾತಿನ ಭರದಲ್ಲಿ ಮಾಜಿ ಶಾಸಕರು ನಾಲಿಗೆ ಹರಿಬಿಟ್ಟಿದ್ದಾರೆ. ರಾತ್ರಿ ರಾಜಕಾರಣ ಸಂಸ್ಕೃತಿ ಗೊತ್ತಿದ್ದಕ್ಕೆ ನೀವು ಎಂಎಲ್‍ಎ ಆಗಿರೋದು. ಲಕ್ಷ್ಮೀ ಹೆಬ್ಬಾಳ್ಕರ್‍ಗೆ ಸತ್ಯ ಎದುರಿಸುವ ಶಕ್ತಿ ಇನ್ನೂ ಬರ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಎಂಎಲ್‍ಎ ಆಗುವ ಮೊದಲು ನಾನು ನಿಮ್ಮ ಮಗಳು ಎಂದ್ರು. ಚಾಂದ್ ತಾರೇ ತೋಡ್ ಕೇ ಲಾವೂಂಗಿ ಅಂತಾ ದೊಡ್ಡ ದೊಡ್ಡ ಕನಸು ತೋರಿಸಿದ್ರು. ಆ ಕನಸು ನನಸು ಮಾಡಿಲ್ಲದ್ದಕ್ಕೆ ಜನ ರಿಯ್ಯಾಕ್ಷನ್ ಕೊಡುತ್ತಿದ್ದಾರೆ. ಆ ರಿಯ್ಯಾಕ್ಷನ್‍ಗೆ ಭಾರತೀಯ ಜನತಾ ಪಾರ್ಟಿ ಹೆಸರು ಕೊಡುತ್ತಿದ್ದಾರೆ. ರಾತ್ರಿ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ ಕಾಂಗ್ರೆಸ್‍ದ್ದಾಗಿದೆ. ರಾತ್ರಿ ರಾಜಕೀಯ ಸಂಸ್ಕೃತಿ ಗೊತ್ತಿದೆಯಂತೆ ನೀವು ಎಂಎಲ್‍ಎ ಆಗಿದ್ದೀರಿ ಎಂದರು. ಇದನ್ನೂ ಓದಿ: ಕಿರುತೆರೆ ನಟಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಓರ್ವ ನಟ, ಸವಿ ಪಿಎ ವಿರುದ್ಧ ತಂದೆ ದೂರು

    ನೀವು ಕೆಲಸ ಮಾಡಿಲ್ಲ ಅಂತಾ ನಾನು ಹೇಳ್ತಿಲ್ಲ. ಪ್ರತಿಯೊಬ್ಬ ಶಾಸಕರು ಸಂಸದರಿಗೆ ಕೆಲವೊಂದು ಸ್ಕೀಮ್‍ಗಳಿದ್ದಾವೆ. ಏನೂ ಕೆಲಸ ಮಾಡಿಲ್ಲ ಅಂತಾ ಹೇಳೋಕೆ ಸಾಧ್ಯವಿಲ್ಲ. ಅಭಿವೃದ್ಧಿ ಹೊಳೆ ಹರಿದಿದ್ರೆ ಈ ರೀತಿ ಬ್ಯಾನರ್ ಹಾಕುತ್ತಿರಲಿಲ್ಲ. ಬಿಜೆಪಿ ಈ ರೀತಿ ಹೊಲಸ್ಸು ರಾಜಕೀಯ ಮಾಡಿಲ್ಲ, ಮಾಡೋದಿಲ್ಲ. ಜನರು ಟೀಕೆ ಮಾಡೋದನ್ನು ಲಕ್ಷ್ಮೀ ಹೆಬ್ಬಾಳ್ಕರ್ ಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಬಿಜೆಪಿ ಮೇಲೆ ಸಿಟ್ಟು ತಗೆಯುತ್ತಿದ್ದಾರೆ ಎಂದು ಕಿಡಿಕಾರಿದರು.

    ಡೆವಲಪ್ಮೆಂಟ್ ಕ್ವೀನ್, ಮಹಾರಾಣಿ ಅಂತಾ ಸೆಲ್ಫ್ ಡಿಕ್ಲೇರ್ ಏನೇನೋ ಅನ್ನಲಿ ನಾನು ಮಾತನಾಡಲಿಕ್ಕೆ ಆಗಲ್ಲ. ಟೀಕೆ ಸಹಿಸಿಕೊಳ್ಳುವ ಶಕ್ತಿ ದೇವರ ಹತ್ತಿರ ಲಕ್ಷ್ಮೀ ಬೇಡಿಕೊಳ್ಳಬೇಕು ಎಂದು ಸಂಜಯ್ ಪಾಟೀಲ್ ಟಾಂಗ್ ನೀಡಿದರು.

  • ರಾತ್ರಿ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ ಕಾಂಗ್ರೆಸ್ಸಿನದ್ದು: ಸಂಜಯ್ ಪಾಟೀಲ್

    ರಾತ್ರಿ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ ಕಾಂಗ್ರೆಸ್ಸಿನದ್ದು: ಸಂಜಯ್ ಪಾಟೀಲ್

    ಬೆಳಗಾವಿ: ರಾತ್ರಿ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ ಕಾಂಗ್ರೆಸ್ಸಿನದ್ದು ಎಂದು ಹೇಳುವ ಮೂಲಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ತಿರುಗೇಟು ನೀಡಿದ್ದಾರೆ.

    ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ರೋಡ್ ಪಾಲಿಟಿಕ್ಸ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾತ್ರಿ ರಾಜಕಾರಣ ಸಂಸ್ಕೃತಿ ಗೊತ್ತಿದ್ದಕ್ಕೆ ನೀವು ಎಂಎಲ್‍ಎ ಆಗಿರೋದು. ಲಕ್ಷ್ಮೀ ಹೆಬ್ಬಾಳ್ಕರ್‍ಗೆ ಸತ್ಯ ಎದುರಿಸುವ ಶಕ್ತಿ ಇನ್ನೂ ಬರ್ತಿಲ್ಲ. ಎಂಎಲ್‍ಎ ಆಗುವ ಮೊದಲು ನಾನು ನಿನ್ನ ಮಗಳು ಎಂದಿದ್ದರು. ಚಾಂದ್ ತಾರೇ ತೋಡ್ ಕೇ ಲಾವೂಂಗಿ ಅಂತಾ ದೊಡ್ಡ ದೊಡ್ಡ ಕನಸು ತೋರಿಸಿದ್ರು. ಆ ಕನಸು ನನಸು ಮಾಡಿಲ್ಲದ್ದಕ್ಕೆ ಜನ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ:  ಪಾಕಿಸ್ತಾನ ನನಗೆ 20 ಸಾವಿರ ನೀಡಿದೆ – ತಪ್ಪೊಪ್ಪಿಕೊಂಡ ಲಷ್ಕರ್ ಉಗ್ರ

    ಜನರ ಪ್ರತಿಕ್ರಿಯೆಗೆ ಭಾರತೀಯ ಜನತಾ ಪಾರ್ಟಿ ಹೆಸರು ಕೊಡ್ತಿದ್ದಾರೆ. ರಾತ್ರಿ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ ಕಾಂಗ್ರೆಸ್ಸಿದ್ದು. ರಾತ್ರಿ ರಾಜಕೀಯ ಸಂಸ್ಕೃತಿ ಗೊತ್ತಿದೆ ನೀವು ಎಂಎಲ್‍ಎ ಆಗಿದ್ದೀರಿ. ನೀವು ಕೆಲಸ ಮಾಡಿಲ್ಲ ಎಂದು ನಾನು ಹೇಳ್ತಿಲ್ಲ. ಪ್ರತಿಯೊಬ್ಬ ಶಾಸಕರು ಸಂಸದರಿಗೆ ಕೆಲವೊಂದು ಯೋಜನೆಗಳಿದೆ. ಏನೂ ಕೆಲಸ ಮಾಡಿಲ್ಲ ಎಂದು ಹೇಳೋಕೆ ಸಾಧ್ಯವಿಲ್ಲ. ಅಭಿವೃದ್ಧಿ ಹೊಳೆ ಹರಿದಿದ್ರೆ ಈ ರೀತಿ ಬ್ಯಾನರ್ ಹಚ್ಚುತ್ತಿರಲಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ:  ನಾಗಮಂಗಲದ ಸರ್ಕಾರಿ ಕಾಲೇಜಿನ 28 ವಿದ್ಯಾರ್ಥಿನಿಯರಿಗೆ ಕೊರೊನಾ

    ಬಿಜೆಪಿ ಈ ರೀತಿ ಹೊಲಸ್ಸು ರಾಜಕೀಯ ಮಾಡಿಲ್ಲ, ಮಾಡೋದಿಲ್ಲ. ಜನರು ಟೀಕೆ ಮಾಡೋದನ್ನು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಬಿಜೆಪಿ ಮೇಲೆ ಸಿಟ್ಟು ತಗೆಯುತ್ತಿದ್ದಾರೆ. ಡೆವಲಪ್ಮೆಂಟ್ ಕ್ವೀನ್, ಮಹಾರಾಣಿ ಎಂದು ಸೆಲ್ಫ್ ಡಿಕ್ಲೇರ್ ಏನೇನೋ ಅನ್ನಲಿ ನಾನು ಮಾತನಾಡಲಿಕ್ಕೆ ಆಗಲ್ಲ. ಟೀಕೆ ಸಹಿಸಿಕೊಳ್ಳುವ ಶಕ್ತಿ ದೇವರ ಹತ್ತಿರ ಲಕ್ಷ್ಮೀ ಬೇಡಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.

  • 10 ವರ್ಷ ನನ್ನನ್ನು ಚುಚ್ಚಿದ್ರು, ಈಗ ಜನರೆ ನನ್ನ ಹಣೆಬರಹ ಬದಲಾಯಿಸಿದ್ರು: ಲಕ್ಷ್ಮೀ ಹೆಬ್ಬಾಳ್ಕರ್

    10 ವರ್ಷ ನನ್ನನ್ನು ಚುಚ್ಚಿದ್ರು, ಈಗ ಜನರೆ ನನ್ನ ಹಣೆಬರಹ ಬದಲಾಯಿಸಿದ್ರು: ಲಕ್ಷ್ಮೀ ಹೆಬ್ಬಾಳ್ಕರ್

    ಬೆಳಗಾವಿ: ಕಳೆದ 10 ವರ್ಷ ಕೆಲವರು ನನ್ನನ್ನು ವ್ಯಂಗ್ಯ ಮಾತುಗಳಿಂದ ಚುಚ್ಚಿದರು. ಆದರೆ ಈ ಭಾರೀ ಕ್ಷೇತ್ರ ಮತದಾರರು ನನ್ನ ಹಣೆಬರಹ ಬರೆದಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    2013ರ ವಿಧಾನಸಭೆ ಹಾಗೂ 2014ರ ಲೋಕಸಭೆ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೋತಿದ್ದು, ಈ ಬಾರಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ ಗೆಲವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

    ಅಭಿನಂದನಾ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಚುನಾವಣೆಯಲ್ಲಿ ಸೋತಾಗ ಚುಚ್ಚು ಮಾತನಾಡಿದ್ದರು. ಆದರೆ ನಾನು ಹಾಗೇ ಮಾಡಲ್ಲ ಎಂದು ಪರೋಕ್ಷವಾಗಿ ಸಂಜಯ್ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.

    ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗೆ ಪ್ರತಿಕ್ರಿಯೆ ನೀಡಿದ ಶಾಸಕಿ, ಯಾವುದೇ ಕಾರಣಕ್ಕೂ ನಾನು 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬೆಳಗಾವಿ ಗ್ರಾಮೀಣ ಮತಕ್ಷೇತ್ರ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.