Tag: Sanjay Nishad

  • ಗಂಗೆ ನಿಮ್ಮ ಪಾದವನ್ನು ಸ್ಪರ್ಶಿಸುತ್ತಿದ್ದಾಳೆ, ಇದು ನಿಮ್ಮನ್ನು ನೇರವಾಗಿ ಸ್ವರ್ಗಕ್ಕೆ ಕರೆದೊಯ್ಯುತ್ತೆ – ಯುಪಿ ಸಚಿವ ವಿವಾದಾತ್ಮಕ ಹೇಳಿಕೆ

    ಗಂಗೆ ನಿಮ್ಮ ಪಾದವನ್ನು ಸ್ಪರ್ಶಿಸುತ್ತಿದ್ದಾಳೆ, ಇದು ನಿಮ್ಮನ್ನು ನೇರವಾಗಿ ಸ್ವರ್ಗಕ್ಕೆ ಕರೆದೊಯ್ಯುತ್ತೆ – ಯುಪಿ ಸಚಿವ ವಿವಾದಾತ್ಮಕ ಹೇಳಿಕೆ

    -ನಮ್ಮ ಜೊತೆ ಇಲ್ಲೇ ಇದ್ದು ಗಂಗೆಯ ಆಶೀರ್ವಾದ ಪಡೆಯಿರಿ ಎಂದು ಸಚಿವರಿಗೆ ಹೇಳಿದ ವೃದ್ಧ ಮಹಿಳೆ

    ಲಕ್ನೋ: ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಗಂಗಾ ನದಿಯುದ್ದಕ್ಕೂ ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ. ಪ್ರವಾಹ ಪೀಡಿತ ಕಾನ್ಪುರದ ದೇಹತ್ ಪ್ರದೇಶಕ್ಕೆ ರಾಜ್ಯ ಕ್ಯಾಬಿನೆಟ್ ಸಚಿವ ಸಂಜಯ್ ನಿಶಾದ್ (Sanjay Nishad) ಅವರು ಪರಿಶೀಲನೆಗಾಗಿ ತೆರಳಿದ್ದರು. ಈ ವೇಳೆ ವಿವಾದಾತ್ಮಕ ಹೇಳಿಕೆಯೊಂದು ನೀಡಿ ಟೀಕೆಗೆ ಗುರಿಯಾಗಿದ್ದಾರೆ.

    ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಡೆಯುವ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ಜವಾಬ್ದಾರಿಯನ್ನು ನಿಶಾದ್ ಅವರಿಗೆ ವಹಿಸಲಾಗಿತ್ತು. ಈ ಹಿನ್ನೆಲೆ ಸಚಿವ ಸಂಜಯ್ ನಿಶಾದ್ ಅವರು ಕಾನ್ಪುರ ದೇಹತ್‌ನ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ತಮ್ಮ ಸಂಕಷ್ಟವನ್ನು ಸಚಿವರ ಮುಂದೆ ಹೇಳಿಕೊಂಡಿದ್ದಾರೆ.ಇದನ್ನೂ ಓದಿ: ಡಿಕೆಶಿ ಶ್ರಮ, ಹೋರಾಟಕ್ಕೆ ಪ್ರತಿಫಲ ಸಿಗಬೇಕು: ಇಕ್ಬಾಲ್ ಹುಸೇನ್

    ಈ ವೇಳೆ ಸಚಿವರು ಮಾತನಾಡಿ, ನೀವು ಗಂಗೆಯ ಮಕ್ಕಳು, ಗಂಗಾ ನದಿ ನಿಮ್ಮ ಪಾದಗಳನ್ನು ಸ್ವಚ್ಛಗೊಳಿಸಲು ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾಳೆ. ಇದು ನಿಮ್ಮನ್ನು ನೇರವಾಗಿ ಸ್ವರ್ಗಕ್ಕೆ ಕರೆದೊಯ್ಯುತ್ತದೆ ಎಂದು ಪ್ರವಾಹ ಪೀಡಿತ ಗ್ರಾಮಸ್ಥರಿಗೆ ಹೇಳಿದ್ದಾರೆ. ಈ ಕುರಿತ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

    ಈ ವೇಳೆ ತಂಡದಲ್ಲಿದ್ದ ಓರ್ವ ಮಹಿಳೆ ಸಚಿವರ ಹೇಳಿಕೆಗಳನ್ನು ವೃದ್ಧ ಮಹಿಳೆಗೆ ವಿವರಿಸಲು ಪ್ರಯತ್ನಿಸಿದರು. ಈ ವೇಳೆ ಆ ವೃದ್ಧ ಮಹಿಳೆ, ನಮ್ಮ ಜೊತೆ ಇಲ್ಲೇ ಇದ್ದು ಗಂಗಾ ನದಿಯ ಆಶೀರ್ವಾದವನ್ನು ನೀವು ಕೂಡ ಪಡೆದುಕೊಳ್ಳಿ ಎಂದು ಪ್ರತ್ಯುತ್ತರ ನೀಡಿದ್ದಾರೆ. ಈ ಕುರಿತ ವೀಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

    ಇದರ ಬೆನ್ನಲ್ಲೇ ಸಚಿವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಪ್ರವಾಹ ಒಂದು ನೈಸರ್ಗಿಕ ವಿಕೋಪ ಮತ್ತು ಸರ್ಕಾರ ಜನರಿಗೆ ತನ್ನಿಂದ ಸಾಧ್ಯವಿರುವ ಎಲ್ಲ ಸಹಾಯವನ್ನೂ ಮಾಡುತ್ತಿದೆ. ನಾವು ಅವರಿಗೆ ಆಹಾರ ಪೊಟ್ಟಣಗಳನ್ನು, ಬೇಯಿಸಿದ ಆಹಾರವನ್ನು ನೀಡುತ್ತಿದ್ದೇವೆ. ನಾವು ಅವರಿಗೆ ಧೈರ್ಯವನ್ನು ನೀಡಬೇಕು. ಅದಕ್ಕಾಗಿ ನಾನು ಅವರಿಗೆ ಆ ಮಾತುಗಳನ್ನು ಹೇಳಿದೆ. ನಾವು ನೀರನ್ನು ನಿಲ್ಲಿಸಲು ಸಾಧ್ಯವಿಲ್ಲ ಮತ್ತು ಇದು ಒಂದು ದಿನ ಅಥವಾ ಒಂದು ವರ್ಷದ ಸಮಸ್ಯೆಯಲ್ಲ. ನಾನು ಅವರಿಗೆ ಭಾವನಾತ್ಮಕ ಬೆಂಬಲವನ್ನು ನೀಡಲು ಪ್ರಯತ್ನಿಸಿದೆ ಎಂದು ಹೇಳಿಕೊಂಡಿದ್ದಾರೆ.ಇದನ್ನೂ ಓದಿ: ವಿಜಯಪುರ | ನಿರಂತರ ಮಳೆಗೆ ಸರ್ಕಾರಿ ಶಾಲೆ ಜಲಾವೃತ – ವಿದ್ಯಾರ್ಥಿಗಳ ಪರದಾಟ

  • ದೇವಾಲಯಗಳ ಬಳಿ ಇರುವ ಮಸೀದಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ: ಯುಪಿ ಸಚಿವ

    ದೇವಾಲಯಗಳ ಬಳಿ ಇರುವ ಮಸೀದಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ: ಯುಪಿ ಸಚಿವ

    ಲಕ್ನೋ: ದೇವಾಲಯಗಳ ಬಳಿ ಇರುವ ಮಸೀದಿಗಳನ್ನು (mosques) ಮುಸ್ಲಿಮರು ಸ್ವಯಂಪ್ರೇರಣೆಯಿಂದ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಸಚಿವ ಸಂಜಯ್‌ ನಿಶಾದ್‌ (Sanjay Nishad) ಹೇಳಿಕೆ ನೀಡಿದ್ದಾರೆ.

    ರಾಮ ಮಂದಿರದಂತೆಯೇ (Ram Temple), ಮಸೀದಿಗಳನ್ನು ಸ್ವಯಂಪ್ರೇರಿತವಾಗಿ ಸ್ಥಳಾಂತರಿಸಬೇಕೆಂದು ನಾನು ಬಯಸುತ್ತೇನೆ. ಅಲ್ಲಿ ಯಾವುದೇ ತೊಂದರೆಯಿಲ್ಲದೆ ಮಂದಿರವನ್ನು ನಿರ್ಮಿಸಲಾಗುತ್ತಿದೆ. ಮಸೀದಿಯನ್ನು ಬೇರೆ ಸ್ಥಳದಲ್ಲಿ ನಿರ್ಮಿಸಲಾಗುತ್ತಿದೆ. ಭಾರತೀಯ ಸಂಸ್ಕೃತಿಯ ಇತರ ಧರ್ಮಗಳು ಅವರು ಎಲ್ಲಿ ಬೇಕಾದರೂ ತಮ್ಮ ಪೂಜಾ ಸ್ಥಳಗಳನ್ನು ನಿರ್ಮಿಸಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿ ಜಿಲ್ಲೆಯಲ್ಲಿ 3 ಸ್ಕ್ರ್ಯಾಪಿಂಗ್ ಸೌಲಭ್ಯ : ಗಡ್ಕರಿ

    MOSQUE

    ರಾಜ್ಯದಲ್ಲಿನ ಮದರಸಾಗಳ ಸಮೀಕ್ಷೆ ನಡೆಸುವ ಸರ್ಕಾರದ ನಿರ್ಧಾರವನ್ನು ಸಚಿವ ನಿಶಾದ್‌ ಸ್ವಾಗತಿಸಿದ್ದರು. ಭಯೋತ್ಪಾದಕರು ಮತ್ತು ಅಪರಾಧಿಗಳು ಮದರಸಾಗಳೊಂದಿಗೆ ಸಂಪರ್ಕ ಹೊಂದಿರುವುದು ಕಂಡುಬಂದಿದೆ ಎಂದು ಆರೋಪಿಸಿದ್ದರು. ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಅವರು ರಾಜ್ಯವನ್ನು ಗಲಭೆ ಮುಕ್ತಗೊಳಿಸಿದ್ದಾರೆ ಎಂದು ಹೇಳಿದ್ದರು.

    ಮೀನುಗಾರಿಕೆ ಸಚಿವರಾಗಿರುವ ನಿಶಾದ್ ಅವರು, 2022 ರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಓಯೋ ರೂಂಗೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ – ಆರೋಪಿಗಳ ಬಂಧನ

    Live Tv
    [brid partner=56869869 player=32851 video=960834 autoplay=true]

  • ನಿಮಗೆ ಹಿಂದಿ ಬರದಿದ್ದರೆ ದೇಶ ಬಿಟ್ಟು ತೊಲಗಿ: ಯುಪಿ ಸಚಿವ

    ನಿಮಗೆ ಹಿಂದಿ ಬರದಿದ್ದರೆ ದೇಶ ಬಿಟ್ಟು ತೊಲಗಿ: ಯುಪಿ ಸಚಿವ

    ಲಕ್ನೋ: ಹಿಂದಿಯನ್ನು ಇಷ್ಟಪಡದವರು ವಿದೇಶಿಯರೆಂದು ನಾನು ಭಾವಿಸುತ್ತೇನೆ. ಭಾಷೆ ಬಾರದವರು ದೇಶವನ್ನು ಬಿಟ್ಟು ಹೋಗಬಹುದು ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಮೀನುಗಾರಿಕೆ ಸಚಿವ ಸಂಜಯ್ ನಿಶಾದ್ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ.

    ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಕನ್ನಡ ನಟ ಕಿಚ್ಚ ಸುದೀಪ್ ಅವರ ಟ್ವೀಟ್ ವಾರ್ ಈಗ ಎಲ್ಲಕಡೆ ದೊಡ್ಡ ಸುದ್ದಿಯಾಗಿದೆ. ಈ ವಾರ್ ಸಿನಿರಂಗದಲ್ಲಿ ಮಾತ್ರವಲ್ಲ ರಾಜಕೀಯಕ್ಕೂ ಪ್ರವೇಶ ಮಾಡಿದ್ದು ಭಾಷಾ ಚರ್ಚೆ ನಡೆಯುತ್ತಿದೆ. ಪರಿಣಾಮ ಈ ಕುರಿತು ನಿಶಾದ್ ಅವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ ಅವರು, ಭಾರತದಲ್ಲಿ ವಾಸಿಸಲು ಬಯಸುವವರು ಹಿಂದಿಯನ್ನು ಪ್ರೀತಿಸಬೇಕಾಗುತ್ತದೆ. ನೀವು ಹಿಂದಿಯನ್ನು ಪ್ರೀತಿಸದಿದ್ದರೆ, ನೀವು ವಿದೇಶಿ ಅಥವಾ ವಿದೇಶಿ ಶಕ್ತಿಗಳೊಂದಿಗೆ ಸಂಬಂಧ ಹೊಂದಿದ್ದೀರಿ ಎಂದು ಭಾವಿಸಲಾಗುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಜಮೀನು ಹಣ ನೀಡಲ್ಲ ಎಂದು ತಂದೆಯ 13 ಲಕ್ಷ ರೂ. ಕದ್ದ ಮಗ 

    ನಾವು ಪ್ರಾದೇಶಿಕ ಭಾಷೆಗಳನ್ನು ಗೌರವಿಸುತ್ತೇವೆ. ಆದರೆ ಈ ದೇಶ ಒಂದೇ ಮತ್ತು ಭಾರತದ ಸಂವಿಧಾನವು ಭಾರತವು ಹಿಂದೂಸ್ಥಾನ್‌ ಎಂದು ಹೇಳುತ್ತದೆ. ಅಂದರೆ ಹಿಂದಿ ಮಾತನಾಡುವವರಿಗೆ ಒಂದು ಸ್ಥಳ. ಹಿಂದೂಸ್ಥಾನವು ಹಿಂದಿ ಮಾತನಾಡದವರಿಗೆ ಇರುವ ಸ್ಥಳವಲ್ಲ. ಅವರು ಈ ದೇಶವನ್ನು ಬಿಟ್ಟು ಬೇರೆಡೆ ಹೋಗಬೇಕು ಎಂದು ಆಕ್ರೋಶ ಹೊರಹಾಕಿದರು.

    ಕಾನೂನಿನ ಪ್ರಕಾರ ಹಿಂದಿ ರಾಷ್ಟ್ರೀಯ ಭಾಷೆಯಾಗಿದೆ. ಕಾನೂನನ್ನು ಉಲ್ಲಂಘಿಸುವ ಯಾರಾದರೂ ಅವರು ಎಷ್ಟೇ ದೊಡ್ಡ ರಾಜಕಾರಣಿ ಅಥವಾ ಶಕ್ತಿಶಾಲಿಯಾಗಿದ್ದರೂ ಅವರನ್ನು ಕಂಬಿ ಹಿಂದೆ ಹಾಕಬೇಕು. ಕೆಲವರು ಹಿಂದಿ ಮಾತನಾಡಲು ನಿರಾಕರಿಸುವ ಮೂಲಕ ದೇಶದ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಇಂತಹ ಅಂಶಗಳು ದೇಶದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುತ್ತೆ. ಆದರೆ ಇದಕ್ಕೆ ತಕ್ಕ ಉತ್ತರವನ್ನು ನೀಡುತ್ತಾರೆ ಎಂದು ಹೇಳಿದರು.

    ಸಂಜಯ್ ನಿಶಾದ್ ಅವರು ನಿರ್ಬಲ್ ಇಂಡಿಯನ್ ಶೋಷಿತ್ ಹಮಾರಾ ಆಮ್(NISHAD) ದಳದ ಮುಖ್ಯಸ್ಥರಾಗಿದ್ದಾರೆ. ಈ ಪಕ್ಷವನ್ನು ಸಾಮಾನ್ಯವಾಗಿ ಎಲ್ಲರೂ ನಿಶಾದ್ ಪಕ್ಷ ಎಂದೇ ಕರೆಯುತ್ತಾರೆ. ಈ ಪಕ್ಷವು ಆಡಳಿತಾರೂಢ ಬಿಜೆಪಿಯೊಂದಿಗೆ ಮಿತ್ರ ಪಕ್ಷವಾಗಿ ಉತ್ತರಪ್ರದೇಶದಲ್ಲಿ ಕೆಲಸ ಮಾಡುತ್ತಿದೆ. ಇದನ್ನೂ ಓದಿ:  ವಿದ್ಯುತ್ ಸಮಸ್ಯೆಗೆ ಮೋದಿ ಸರ್ಕಾರವನ್ನು ದೂಷಿಸಲು ಸಾಧ್ಯವಿಲ್ಲ: ಚಿದಂಬರಂ ವ್ಯಂಗ್ಯ

    ಸಂವಿಧಾನವು ಯಾವುದೇ ಭಾಷೆಗೆ ‘ರಾಷ್ಟ್ರೀಯ ಭಾಷೆ’ ಸ್ಥಾನಮಾನವನ್ನು ನೀಡುವುದಿಲ್ಲ. ಎಂಟನೇ ಶೆಡ್ಯೂಲ್ 22 ‘ಅಧಿಕೃತ ಭಾಷೆಗಳನ್ನು’ ಪಟ್ಟಿ ಮಾಡಲಾಗಿದೆ. ಅಧಿಕೃತ ಭಾಷೆಗಳ ಕಾಯಿದೆ, 1963, ಕೇಂದ್ರ ಸರ್ಕಾರದ ಅಧಿಕೃತ ಉದ್ದೇಶಗಳಿಗಾಗಿ ಬಳಸಲು ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ಗೊತ್ತುಪಡಿಸಲಾಗಿದೆ.