Tag: Sanjay Nagar Police

  • ಅತ್ತೆಯ ಕೊಲೆಗೆ ವೈದ್ಯರ ಬಳಿ ಮಾತ್ರೆ ಕೇಳಿದ್ದ ಸೊಸೆ ಕೊನೆಗೂ ಪತ್ತೆ

    ಅತ್ತೆಯ ಕೊಲೆಗೆ ವೈದ್ಯರ ಬಳಿ ಮಾತ್ರೆ ಕೇಳಿದ್ದ ಸೊಸೆ ಕೊನೆಗೂ ಪತ್ತೆ

    ಬೆಂಗಳೂರು: ಅತ್ತೆಯನ್ನು ಸಾಯಿಸಲು ವೈದ್ಯರ ಬಳಿ ಮಾತ್ರೆ ಕೇಳಿದ್ದ ಸೊಸೆಯನ್ನು ಇದೀಗ ಸಂಜಯ್ ನಗರದ (Sanjay Nagar) ಪೊಲೀಸರು ಪತ್ತೆ ಹಚ್ಚಿದ್ದಾರೆ.

    ಮಹಿಳೆಯನ್ನು ಕೊಳ್ಳೇಗಾಲದ ಮೂಲದವರು ಎಂದು ತಿಳಿಯಲಾಗಿದ್ದು, ತನ್ನ ಗಂಡನ ಜೊತೆ ಬೆಂಗಳೂರಿನ ಚೌಟ್ರಿಪಾಳ್ಯದಲ್ಲಿ ವಾಸವಾಗಿದ್ದರು. ಜೊತೆಗೆ ಒಂದೂವರೆ ವರ್ಷದ ಮಗುವಿದೆ.ಇದನ್ನೂ ಓದಿ: Champions Trophy 2025 | ಇಂದು ಭಾರತ-ಬಾಂಗ್ಲಾ ಮುಖಾಮುಖಿ – ಹಿಟ್‌ಮ್ಯಾನ್‌ ಪಡೆಗೆ ಗೆಲುವಿನ ತವಕ

    ಗಂಡ ಕ್ಯಾಬ್ ಚಾಲಕನಾಗಿದ್ದು, ವೈದ್ಯರಿಗೆ ಮಾತ್ರೆ ಕೇಳಿದ್ದ ಮಾಹಿತಿ ತಿಳಿದು, ಆಕೆಯನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಅತ್ತೆ ಹಾಗೂ ಮಹಿಳೆ ನಡುವೆ ಯಾವುದೇ ಗಲಾಟೆ ಇರಲಿಲ್ಲ. ಮಹಿಳೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಸ್ವತಃ ತಾನೇ ಸಾಯಲು ಮಾತ್ರೆ ಕೇಳಿರುವುದಾಗಿ ತನಿಖೆ ವೇಳೆ ಹೊರಬಂದಿದೆ. ಜೊತೆಗೆ ಗೂಗಲ್‌ನಲ್ಲಿ ಸರ್ಚ್ ಮಾಡಿ ಮಹಿಳೆ ಡಾಕ್ಟರ್ ನಂಬರ್ ಪಡೆದಿದ್ದರು ಎಂದು ತಿಳಿದು ಬಂದಿದೆ.

    ಖುದ್ದು ಡಾಕ್ಟರ್ ಮುಂದೆಯೇ ಸಂಜಯ್ ನಗರ ಪೊಲೀಸರು ಮಹಿಳೆಯನ್ನು ವಿಚಾರಣೆ ಮಾಡಿದ್ದು, ಮಹಿಳೆಗೆ ಸದ್ಯ ಕೌನ್ಸಲಿಂಗ್ ನೀಡಲು ನಿರ್ಧರಿಸಲಾಗಿದೆ.

    ಏನಿದು ಪ್ರಕರಣ?
    ಅತ್ತೆಯನ್ನು ಕೊಲ್ಲಲು ಸೊಸೆ ವೈದ್ಯರ ಬಳಿಯೇ ಮಾತ್ರೆ ಕೇಳಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿತ್ತು. ಡಾಕ್ಟರ್ ಸುನೀಲ್ ಕುಮಾರ್ ಎನ್ನುವವರಿಗೆ ವಾಟ್ಸಾಪ್‌ನಲ್ಲಿ ಸಂಪರ್ಕಿಸಿ, ನಮ್ಮ ಅತ್ತೆ ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರಿಗೆ ವಯಸ್ಸಾಗಿದೆ. ಅವರನ್ನು ಹೇಗೆ ಸಾಯಿಸೋದು? ಒಂದೆರೆಡು ಮಾತ್ರೆ ತೆಗೆದುಕೊಂಡರೆ ಸಾಯುತ್ತಾರಲ್ಲ, ಅದನ್ನು ಹೇಳಿ ಎಂದು ಮೆಸೇಜ್ ಮೂಲಕ ಕೇಳಿದ್ದರು.

    ಮಹಿಳೆ ಮಾತ್ರೆ ಕೇಳುವಾಗ ಈ ತರ ಮಾತ್ರೆ ಕೇಳುವುದು ತಪ್ಪು ಎಂದು ವೈದ್ಯರು ಬುದ್ಧಿಮಾತು ಹೇಳಿದ್ದರು. ವೈದ್ಯರು ಬುದ್ಧಿ ಹೇಳುತ್ತಿದ್ದಂತೆ, ವಾಟ್ಸಾಪ್ ಚಾಟ್ ಡಿಲೀಟ್ ಮಾಡಿದ ಮಹಿಳೆ ಡಾಕ್ಟರ್ ನಂಬರ್‌ನ ಬ್ಲಾಕ್ ಮಾಡಿದ್ದರು. ಇದಕ್ಕಿಂತ ಮುಂಚೆಯೇ ಸ್ಕ್ರೀನ್‌ಶಾಟ್‌ ಪಡೆದಿದ್ದ ವೈದ್ಯ ಸುನೀಲ್ ಕುಮಾರ್ ಸಂಜಯ್ ನಗರ ಪೊಲೀಸರಿಗೆ ಮಾಹಿತಿ ನೀಡಿ, ತನಿಖೆ ಮಾಡಿ ಎಂದು ಮನವಿ ಮಾಡಿದ್ದರು.ಇದನ್ನೂ ಓದಿ: ಅವರು ಯಾರನ್ನಾದರೂ ಆಯ್ಕೆ ಮಾಡಲು ಪ್ರಯತ್ನಿಸುತ್ತಿದ್ದರು: ಭಾರತದ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪದ ಬಗ್ಗೆ ಟ್ರಂಪ್‌ ಸುಳಿವು

  • ಅತ್ತೆಯನ್ನು ಕೊಲ್ಲಲು ವೈದ್ಯರ ಬಳಿ ಮಾತ್ರೆ ಕೇಳಿದ ಸೊಸೆ

    ಅತ್ತೆಯನ್ನು ಕೊಲ್ಲಲು ವೈದ್ಯರ ಬಳಿ ಮಾತ್ರೆ ಕೇಳಿದ ಸೊಸೆ

    ಬೆಂಗಳೂರು: ಅತ್ತೆಯನ್ನು ತಾಯಿ ಸ್ಥಾನದಲ್ಲಿ ನೋಡುತ್ತಾರೆ. ಆದರೆ ನಗರದಲ್ಲಿ ಅತ್ತೆಯನ್ನು ಕೊಲ್ಲಲು ಸೊಸೆ ವೈದ್ಯರ ಬಳಿಯೇ ಮಾತ್ರೆ ಕೇಳಿದ ಘಟನೆಯೊಂದು ನಡೆದಿದೆ. ಡಾಕ್ಟರ್ ಒಬ್ಬರಿಗೆ ನನ್ನ ಅತ್ತೆಯನ್ನು ಸಾಯಿಸಲು ಮಾತ್ರೆ ಬರೆದುಕೊಡಿ ಎಂದು ಕೇಳಿದ್ದು, ಡಾಕ್ಟರ್ ಒಂದು ಕ್ಷಣ ಶಾಕ್ ಆಗಿದ್ದಾರೆ.

    ಹೌದು, ಅತ್ತೆ ಜೊತೆಗಿನ ಜಗಳಕ್ಕೆ ರೋಸಿ ಹೋದ ಸೊಸೆಯೊಬ್ಬರು, ಅವರನ್ನು ಕೊಲ್ಲುವ ಪ್ಲ್ಯಾನ್‌ ಮಾಡಿದ್ದಾರೆ. ಬಳಿಕ ಡಾಕ್ಟರ್ ಸುನೀಲ್ ಕುಮಾರ್ ಎನ್ನುವವರಿಗೆ ವಾಟ್ಸಾಪ್‌ನಲ್ಲಿ ಸಂಪರ್ಕಿಸಿದ್ದಾರೆ. ನಮ್ಮ ಅತ್ತೆ ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರಿಗೆ ವಯಸ್ಸಾಗಿದೆ. ಅವರನ್ನು ಹೇಗೆ ಸಾಯಿಸೋದು? ಒಂದೆರೆಡು ಮಾತ್ರೆ ತೆಗೆದುಕೊಂಡರೆ ಸಾಯುತ್ತಾರಲ್ಲ, ಅದನ್ನು ಹೇಳಿ ಎಂದು ಮೆಸೇಜ್ ಮೂಲಕ ಕೇಳಿದ್ದಾರೆ. ಇದನ್ನು ಕೇಳಿ ಶಾಕ್ ಆದ ಡಾಕ್ಟರ್ ಸಂಜಯ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ದೆಹಲಿ ಸಿಎಂ ಕುತೂಹಲಕ್ಕೆ ಇಂದು ತೆರೆ, ನಾಳೆ ಬೆಳಗ್ಗೆ 11:30ಕ್ಕೆ ಪ್ರಮಾಣವಚನ – ರೇಸ್‌ನಲ್ಲಿ ಯಾರಿದ್ದಾರೆ?

    ಮಹಿಳೆ ಮಾತ್ರೆ ಕೇಳುವಾಗ ಈ ತರ ಮಾತ್ರೆ ಕೇಳುವುದು ತಪ್ಪು ಎಂದು ವೈದ್ಯರು ಬುದ್ಧಿಮಾತು ಹೇಳಿದ್ದಾರೆ. ವೈದ್ಯರು ಬುದ್ಧಿ ಹೇಳುತ್ತಿದ್ದಂತೆ, ವಾಟ್ಸಾಪ್ ಚಾಟ್ ಡಿಲೀಟ್ ಮಾಡಿದ ಮಹಿಳೆ ಡಾಕ್ಟರ್ ನಂಬರ್‌ನ ಬ್ಲಾಕ್ ಮಾಡಿದ್ದಾರೆ. ಇದಕ್ಕಿಂತ ಮುಂಚೆಯೇ ಸ್ಕ್ರೀನ್‌ಶಾಟ್‌ ಪಡೆದಿದ್ದ ವೈದ್ಯ ಸುನೀಲ್ ಕುಮಾರ್ ಸಂಜಯ್ ನಗರ ಪೊಲೀಸರಿಗೆ ಮಾಹಿತಿ ನೀಡಿ, ತನಿಖೆ ಮಾಡಿ ಎಂದು ಮನವಿ ಮಾಡಿದ್ದಾರೆ.

    ಸದ್ಯ ಅತ್ತೆಯನ್ನು ಸಾಯಿಸಲು ಮಾತ್ರೆ ಕೇಳಿದ ಮಹಿಳೆಯ ಫೋನ್ ಸ್ವಿಚ್ಡ್ಆಫ್ ಆಗಿದ್ದು, ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿದ ಬಳಿಕ ಅಸಲಿ ಸತ್ಯ ಬಯಲಾಗಲಿದೆ.ಇದನ್ನೂ ಓದಿ: ಶಿರಾಡಿಘಾಟ್‌ನಲ್ಲಿ ಸುರಂಗ, ಗ್ರೀನ್‌ಫೀಲ್ಡ್ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಲು ಕೇಂದ್ರ ಒಪ್ಪಿಗೆ

  • ವಕೀಲೆ ಚೈತ್ರಾ ಗೌಡ ಅನುಮಾನಾಸ್ಪದ ಸಾವು ಕೊಲೆಯಲ್ಲ, ಆತ್ಮಹತ್ಯೆ – ಪೊಲೀಸ್‌ ವರದಿಯಲ್ಲೇನಿದೆ?

    ವಕೀಲೆ ಚೈತ್ರಾ ಗೌಡ ಅನುಮಾನಾಸ್ಪದ ಸಾವು ಕೊಲೆಯಲ್ಲ, ಆತ್ಮಹತ್ಯೆ – ಪೊಲೀಸ್‌ ವರದಿಯಲ್ಲೇನಿದೆ?

    ಬೆಂಗಳೂರು: ಇತ್ತೀಚೆಗಷ್ಟೇ ಅನುಮಾನಾಸ್ಪದ ಸಾವಿಗೀಡಾಗಿದ್ದ ಕೆಎಎಸ್ ಅಧಿಕಾರಿ ಪತ್ನಿಯೂ ಆಗಿರುವ ಹೈಕೋರ್ಟ್ ವಕೀಲರಾದ (High Court Lawyer) ಚೈತ್ರಾ ಗೌಡ ಅವರದ್ದು ಕೊಲೆಯಲ್ಲ, ಆತ್ಮಹತ್ಯೆ ಎಂದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಪುಷ್ಠಿಕೊಡುವಂತೆ ಡೆತ್ ನೋಟ್ ಸಹ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು (Sanjay Nagar Police ) ಮೂಲಗಳು ತಿಳಿಸಿವೆ.

    ಇದೇ ತಿಂಗಳ ಮೇ 11ರಂದು ವಕೀಲೆ ಚೈತ್ರಾ ಗೌಡ ಸಂಜಯನಗರದ (SanjayNagar) ಅಣ್ಣಯ್ಯಪ್ಪ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದ್ರೆ ಚೈತ್ರಾ ಕುಟುಂಬಸ್ಥರು ಕೊಲೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಕೆಎಎಸ್ ಅಧಿಕಾರಿ (KAS, Officer) ಶಿವಕುಮಾರ್‌ನನ್ನು ಪೊಲೀಸರು ವಿಚಾರಣೆ ನಡೆಸಿದ್ದರು.

    ವಿಚಾರಣೆ ವೇಳೆ ಶಿವಕುಮಾರ್, ಪತ್ನಿಯೊಂದಿಗೆ ಯಾವುದೇ ವೈಷಮ್ಯ ಇರಲಿಲ್ಲ. ಹಣಕಾಸಿನ ತೊಂದರೆಯೂ ಇರಲಿಲ್ಲ. ಆದ್ರೆ ಇತ್ತೀಚೆಗೆ ಖಿನ್ನತೆಗೆ ಒಳಗಾಗಿದ್ದರು ಅಂತ ಹೇಳಿದ್ದರು. ಇದನ್ನೂ ಓದಿ: 2047 ರವರೆಗೆ 24×7 ಕೆಲಸ ಮಾಡಬೇಕೆಂದು ದೇವರು ನನಗೆ ಆದೇಶಿಸಿದ್ದಾನೆ ಎಂದು ನಂಬಿದ್ದೇನೆ: ಮೋದಿ

    ಈ ನಡುವೆ ಕುಟುಂಬಸ್ಥರೊಂದಿಗೆ ಚೈತ್ರಾ ಮಾತನಾಡುವಾಗ ಮೂರು ತಿಂಗಳ ಹಿಂದೆಯೇ ಸಾಯೋ ಮಾತುಗಳನ್ನಾಡಿದ್ದರು, ಆಗ ಕುಟುಂಬಸ್ಥರೇ ಧೈರ್ಯತುಂಬಿದ್ದರು. ಆನಂತರವೇ ಚೈತ್ರಾ ಹಿಂದೆಯೇ ಡೆತ್ ನೋಟ್ ಬರೆದಿಟ್ಟಿದ್ದರು ಅನ್ನೋ ಮಾಹಿತಿಯೂ ತಿಳಿದುಬಂದಿದೆ.

    ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಸಂಜಯ್ ನಗರದ ಪೊಲೀಸರಿಗೆ, ಮನೆಯಲ್ಲಿ ಸಿಕ್ಕ ಡೆತ್ ನೋಟ್‌ ಚೈತ್ರಾ ಅವರೇ ಬರೆದಿದ್ದಾರೆ ಅನ್ನೋದು ಕನ್ಫರ್ಮ್‌ ಆಗಿದೆ. ಮರಣೋತ್ತರ ಪರೀಕ್ಷೆಯಲ್ಲೂ ಆಕೆ ಆತ್ಮಹತ್ಯೆ ಮಾಡಿಕೊಂಡಿರೋದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಂಜಯ್‌ನಗರ ಪೊಲೀಸರು ತನಿಖೆ ನಡೆಸಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ. ಇದನ್ನೂ ಓದಿ: ಮತಗಟ್ಟೆವಾರು ದತ್ತಾಂಶ ನೀಡಿದ್ರೆ ದುರ್ಬಳಕೆ ಆಗಬಹುದು: ಚುನಾವಣಾ ಆಯೋಗ ಆತಂಕ 

  • ಕೆಎಎಸ್ ಅಧಿಕಾರಿಯ ಪತ್ನಿ, ಹೈಕೋರ್ಟ್ ವಕೀಲೆ ಆತ್ಮಹತ್ಯೆ – ಕಾರಣ ನಿಗೂಢ!

    ಕೆಎಎಸ್ ಅಧಿಕಾರಿಯ ಪತ್ನಿ, ಹೈಕೋರ್ಟ್ ವಕೀಲೆ ಆತ್ಮಹತ್ಯೆ – ಕಾರಣ ನಿಗೂಢ!

    ಬೆಂಗಳೂರು: ಕೆಎಎಸ್ ಅಧಿಕಾರಿ ಪತ್ನಿಯೂ ಆಗಿರುವ ಹೈಕೋರ್ಟ್‌ ವಕೀಲರಾದ (High Court Lawyer)  ಚೈತ್ರಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಪತಿ ಶಿವಕುಮಾರ್ ಕೆಎಎಸ್ ಅಧಿಕಾರಿಯಾಗಿದ್ದು, ಚೈತ್ರಾ ಹೈಕೋರ್ಟ್ ವಕೀಲೆಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಸಂಜಯ್ ನಗರ ಪೊಲೀಸ್ ಠಾಣಾ (Sanjay Nagar Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ: ಜೈಲಿನಿಂದ ಹೊರ ಬರುತ್ತಿದ್ದಂತೆ ಟೆಂಪಲ್ ರನ್ – ಹನುಮಾನ್ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕೇಜ್ರಿವಾಲ್!

    ಈ ಸಂಬಂಧ ಮೃತ ಚೈತ್ರಾ ಸಹೋದರ ಕೊಟ್ಟ ದೂರಿನ ಆಧಾರದ ಮೇಲೆ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ; ಹೃದಯ ಶ್ರೀಮಂತಿಕೆ ಮೆರೆದ ಧೋನಿ – ವೀಡಿಯೋ ವೈರಲ್‌!