Tag: Sanjay Leela Bansali

  • ‘ಪುಷ್ಪ 2’ ವಿವಾದದ ನಡುವೆ ಬನ್ಸಾಲಿ ಕಚೇರಿಯಲ್ಲಿ ಕಾಣಿಸಿಕೊಂಡ ಅಲ್ಲು ಅರ್ಜುನ್

    ‘ಪುಷ್ಪ 2’ ವಿವಾದದ ನಡುವೆ ಬನ್ಸಾಲಿ ಕಚೇರಿಯಲ್ಲಿ ಕಾಣಿಸಿಕೊಂಡ ಅಲ್ಲು ಅರ್ಜುನ್

    ‘ಪುಷ್ಪ 2′ (Pushpa 2) ವಿವಾದದ ನಡುವೆ ಹೊಸ ಪ್ರಾಜೆಕ್ಟ್‌ನತ್ತ ಅಲ್ಲು ಅರ್ಜುನ್ ಮುಖ ಮಾಡಿದ್ದಾರೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಕಚೇರಿಯಲ್ಲಿ ಅಲ್ಲು ಅರ್ಜುನ್ (Allu Arjun) ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ನಟ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಈಗ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಕೋರ್ಟ್‌ನಲ್ಲಿ ಪವಿತ್ರಾ ಭಾವುಕ – ಬೆನ್ನುತಟ್ಟಿ ಸಂತೈಸಿದ ದರ್ಶನ್‌

    ‘ಪುಷ್ಪ 2’ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್‌ಗೆ ರೆಗ್ಯೂಲರ್ ಬೇಲ್ ಸಿಕ್ಕಿದೆ. ಇದರ ವಿವಾದದ ನಡುವೆ ಹೊಸ ಸಿನಿಮಾ ಮಾಡಲು ಅವರು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಹಿಂದೆ ಸಂಜಯ್ ಲೀಲಾ ಬನ್ಸಾಲಿ ಜೊತೆ ಅಲ್ಲು ಅರ್ಜುನ್ ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಇಬ್ಬರ ಕಡೆಯಿಂದಲೂ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ.

     

    View this post on Instagram

     

    A post shared by Viral Bhayani (@viralbhayani)

    ನಿನ್ನೆ (ಜ.9) ಅಲ್ಲು ಅರ್ಜುನ್ ಮುಂಬೈಗೆ ಆಗಮಿಸಿದ್ದರು. ಈ ವೇಳೆ, ಅವರು ಬನ್ಸಾಲಿ ಕಚೇರಿಯಲ್ಲಿ ನಟ ಕಾಣಿಸಿಕೊಂಡಿದ್ದಾರೆ. ಮುಂದಿನ ಸಿನಿಮಾ ಬಗ್ಗೆ ಮಾತುಕತೆ ನಡೆದಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಈ ಹಿಂದೆ ಹರಿದಾಡುತ್ತಿದ್ದ ಸಿನಿಮಾ ಸುದ್ದಿಗೆ ಇದೀಗ ಪುಷ್ಠಿ ಸಿಕ್ಕಿದೆ. ಸದ್ಯ ಹರಿದಾಡುತ್ತಿರುವ ಸುದ್ದಿ ನಿಜನಾ? ಇಬ್ಬರ ಕಡೆಯಿಂದ ಸಿನಿಮಾ ಕುರಿತು ಗುಡ್ ನ್ಯೂಸ್ ಸಿಗುತ್ತಾ ಎಂದು ಕಾಯಬೇಕಿದೆ.

     

    View this post on Instagram

     

    A post shared by Viral Bhayani (@viralbhayani)

    ಇನ್ನೂ ಡಿ.5ರಂದು ರಿಲೀಸ್ ಆದ ‘ಪುಷ್ಪ 2’ ಸಿನಿಮಾ ಗೆಲ್ಲಾಪೆಟ್ಟಿಗೆಯಲ್ಲಿ 1800 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನಗ್ಗುತ್ತಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಡಾಲಿ, ತಾರಕ್ ಪೊನ್ನಪ್ಪ ಸೇರಿದಂತೆ ಅನೇಕರು ನಟಿಸಿದ್ದಾರೆ.

  • ಒಂದೇ ಚಿತ್ರದಲ್ಲಿ ರಣ್‌ಬೀರ್, ಆಲಿಯಾ ಭಟ್, ವಿಕ್ಕಿ ಕೌಶಲ್- ಬನ್ಸಾಲಿ ಆ್ಯಕ್ಷನ್ ಕಟ್

    ಒಂದೇ ಚಿತ್ರದಲ್ಲಿ ರಣ್‌ಬೀರ್, ಆಲಿಯಾ ಭಟ್, ವಿಕ್ಕಿ ಕೌಶಲ್- ಬನ್ಸಾಲಿ ಆ್ಯಕ್ಷನ್ ಕಟ್

    ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali)’ಹೀರಾಮಂಡಿ’ ಸಿನಿಮಾದ ನಂತರ ‘ಲವ್ & ವಾರ್’ (Love & War) ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಡೆಡ್ಲಿ ಪ್ರೇಮ ಕಥೆ ಹೇಳೋದಕ್ಕೆ ನಿರ್ದೇಶಕ ಸಜ್ಜಾಗಿದ್ದಾರೆ. ಇದನ್ನೂ ಓದಿ:‘ಬ್ರಹ್ಮರಾಕ್ಷಸ’ನಿಗಾಗಿ ಐಟಂ ಸಾಂಗ್: ಸಂಜೆ ಹೊತ್ನಾಗ ಮೈಪುಳಕ

    ರಣ್‌ಬೀರ್ ಕಪೂರ್, ಆಲಿಯಾ ಭಟ್ (Alia Bhatt) ಜೊತೆ ವಿಕ್ಕಿ ಕೌಶಲ್ ಒಂದೇ ಸಿನಿಮಾದಲ್ಲಿ ಜೊತೆಯಾಗುತ್ತಿದ್ದಾರೆ. ವಿಕ್ಕಿಗೆ ಜೋಡಿಯಾಗಿ ನಟಿಸುತ್ತಿರುವ ಆಲಿಯಾಗೆ ರಣ್‌ಬೀರ್ (Ranbir Kapoor) ವಿಲನ್ ಆಗಿ ನಟಿಸಲಿದ್ದಾರೆ ಎನ್ನಲಾಗಿದೆ. ಇದೇ ಅಕ್ಟೋಬರ್ ಮೊದಲ ವಾರದಿಂದ ಶೂಟಿಂಗ್ ಶುರುವಾಗಲಿದೆ.

    ಈ ಹಿಂದೆ ಎಂದೂ ತೋರಿಸಿರದ ವಿಭಿನ್ನ ತ್ರಿಕೋನ ಪ್ರೇಮಕಥೆಯನ್ನು ಹೇಳೋಕೆ ಸಂಜಯ್ ಲೀಲಾ ಬನ್ಸಾಲಿ ಸಜ್ಜಾಗಿದ್ದಾರೆ. ಆಲಿಯಾ ಭಟ್, ರಣ್‌ಬೀರ್ ಕಪೂರ್, ವಿಕ್ಕಿ ಕೌಶಲ್ ಸುತ್ತ ಈ ಕಥೆ ಇರಲಿದೆ. ಮುಂದಿನ ವರ್ಷ ಈ ಸಿನಿಮಾ ರಿಲೀಸ್ ಆಗಲಿದೆ.

  • ಸಂಜಯ್‌ ಲೀಲಾ ಬನ್ಸಾಲಿ ಚಿತ್ರದಲ್ಲಿ ನನ್ನಂತಹ ನಟರ ಅಗತ್ಯವಿಲ್ಲ: ಮನೋಜ್‌ ಬಾಜಪೇಯಿ

    ಸಂಜಯ್‌ ಲೀಲಾ ಬನ್ಸಾಲಿ ಚಿತ್ರದಲ್ಲಿ ನನ್ನಂತಹ ನಟರ ಅಗತ್ಯವಿಲ್ಲ: ಮನೋಜ್‌ ಬಾಜಪೇಯಿ

    ಬಾಲಿವುಡ್ ನಟ ಮನೋಜ್ ಬಾಜಪೇಯಿ (Manoj Bajpayee) ನಟಿಸಿದ ‘ಭಾಯ್ಯಾ ಜಿ’ ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಅವರ ಕೆರಿಯರ್‌ನ 100ನೇ ಚಿತ್ರವಾಗಿದೆ. ಈ ಸಂದರ್ಶನವೊಂದರಲ್ಲಿ ಅವರು ಆಡಿದ ಮಾತು ವೈರಲ್ ಆಗಿದೆ. ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗಳಲ್ಲಿ ನನ್ನಂತಹ ನಟರ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

    ಯಾರ ಇದುವರೆಗೂ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದು ಮನೋಜ್ ಬಾಜಪೇಯಿ ಹೇಳಿದ್ದಾರೆ. ಗುಲ್ಜಾರ್ ಸಾಬ್, ಗೋವಿಂದ್ ನಿಹಲಾನಿ ಅವರೊಂದಿಗೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಸಂಜಯ್ ಲೀಲಾ ಬನ್ಸಾಲಿ ಹೆಸರು ತೆಗೆದುಕೊಂಡು ಅವರ ಜೊತೆ ಕೆಲಸ ಮಾಡುವ ಆಸಕ್ತಿಯಿದೆ ಎಂದಿದ್ದಾರೆ.

    ನಟ ಮನೋಜ್ ನಗುತ್ತಲೇ, ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಅವರ ಚಿತ್ರಗಳಲ್ಲಿ ನನ್ನಂತಹ ನಟರ ಅಗತ್ಯವಿಲ್ಲ ಎಂದಿದ್ದಾರೆ. ಅವರು ವಿಭಿನ್ನ ರೀತಿಯ ನಿರ್ಮಾಪಕ, ನಿರ್ದೇಶಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇನ್ನೂ ಈ ಹಿಂದೆ ‘ದೇವದಾಸ್’ ಸಿನಿಮಾದಲ್ಲಿ ಚುನ್ನಿ ಲಾಲ್ ಪಾತ್ರವನ್ನು ನೀಡಿದರು. ಆದರೆ ಮನೋಜ್ ಅದನ್ನು ರಿಜೆಕ್ಟ್ ಮಾಡಿದ್ದರು. ದೇವದಾಸ್ ಪಾತ್ರದಲ್ಲಿ ನಟಿಸಲು ಇಷ್ಟವಿದ್ದ ಕಾರಣ ಆ ಪಾತ್ರವನ್ನು ಕೈ ಬಿಟ್ಟಿರೋದಾಗಿಯೂ ಹೇಳಿಕೊಂಡಿದ್ದಾರೆ.

  • ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಾಯಕಿ

    ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಾಯಕಿ

    ಬಾಲಿವುಡ್ ಬೆಡಗಿ ಮೃಣಾಲ್ ಠಾಕೂರ್‌ಗೆ (Mrunal Thakur) ಇದೀಗ ಭಾರೀ ಬೇಡಿಕೆಯಿದೆ. ಬ್ಯಾಕ್ ಟು ಬ್ಯಾಕ್ 3 ಹಿಟ್ ಸಿನಿಮಾ ಕೊಟ್ಮೇಲೆ ‘ಸೀತಾರಾಮಂ’ ನಟಿಯ ಅದೃಷ್ಟ ಖುಲಾಯಿಸಿದೆ. ಬಿಟೌನ್ ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಸಿನಿಮಾದಲ್ಲಿ ಹೀರೋಯಿನ್ ಆಗಿ ಮೃಣಾಲ್ ಸೆಲೆಕ್ಟ್ ಆಗಿದ್ದಾರೆ.

    ಬಾಲಿವುಡ್‌ನ ಹಾಟ್ ಹೀರೋ ಸಿದ್ಧಾಂತ್ ಚತುರ್ವೇದಿಗೆ (Siddhant Chaturvedi) ಮೃಣಾಲ್ ನಾಯಕಿಯಾಗಿದ್ದಾರೆ. ಮುಂದಿನ ವಾರದಿಂದ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಸದ್ಯ ಸಿನಿಮಾ ವರ್ಕ್ಶಾಪ್‌ನಲ್ಲಿ ನಟಿ ಭಾಗಿಯಾಗುತ್ತಿದ್ದಾರೆ. ಪಾತ್ರದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ ಮೃಣಾಲ್. ಇದನ್ನೂ ಓದಿ:ಇಡಿ ದಾಳಿ ಬಳಿಕ ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ದಂಪತಿ ಪ್ರತಿಕ್ರಿಯೆ

    ಇತ್ತೀಚೆಗೆ ಮೃಣಾಲ್‌ರನ್ನು ಆಫೀಸ್‌ಗೆ ಕರೆಸಿ ಕಥೆ ಬಗ್ಗೆ ಚರ್ಚೆಸಿದ್ದರು ಬನ್ಸಾಲಿ ಟೀಮ್. ಅಷ್ಟು ಸುಲಭವಾಗಿ ಯಾರಿಗೂ ಮಣೆ ಹಾಕದ ನಿರ್ದೇಶಕ ಸಂಜಯ್ ಈಗ ಮೃಣಾಲ್ ನಟನೆಯನ್ನು ಮೆಚ್ಚಿ ಮುಂದಿನ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ಉತ್ತಮ ಪಾತ್ರವನ್ನೇ ಮೃಣಾಲ್‌ಗೆ ನೀಡಿದ್ದಾರೆ.

    ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಗರಡಿಯಲ್ಲಿ ಮೃಣಾಲ್ ಪಳಗುತ್ತಾರೆ ಎಂದರೆ ಸಕ್ಸಸ್ ಕಟ್ಟಿಟ್ಟ ಬುತ್ತಿ ಎಂದರ್ಥ. ಸೀತಾರಾಮಂ, ಹಾಯ್ ನಾನಾ, ಫ್ಯಾಮಿಲಿ ಸ್ಟಾರ್ ಚಿತ್ರದ ಸಕ್ಸಸ್ ನಂತರ ಮೃಣಾಲ್ ಮತ್ತೆ ಹೇಗೆ ಹವಾ ಕ್ರಿಯೇಟ್ ಮಾಡುತ್ತಾರೆ ಎಂದು ಕಾದುನೋಡಬೇಕಿದೆ.

  • ‘ಫ್ಯಾಮಿಲಿ ಸ್ಟಾರ್’ ರಿಲೀಸ್ ಬೆನ್ನಲ್ಲೇ ಮೃಣಾಲ್ ಠಾಕೂರ್ ಗುಡ್ ನ್ಯೂಸ್

    ‘ಫ್ಯಾಮಿಲಿ ಸ್ಟಾರ್’ ರಿಲೀಸ್ ಬೆನ್ನಲ್ಲೇ ಮೃಣಾಲ್ ಠಾಕೂರ್ ಗುಡ್ ನ್ಯೂಸ್

    ಮುಂಬೈ ಬ್ಯೂಟಿ ಮೃಣಾಲ್ ಠಾಕೂರ್ ನಟನೆಯ ‘ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾ ಇಂದು (ಏ.5) ರಿಲೀಸ್ ಆಗಿದೆ. ಈ ಬೆನ್ನಲ್ಲೇ ‘ಸೀತಾ ರಾಮಂ’ ನಟಿ ಬಂಪರ್ ಆಫರ್‌ವೊಂದನ್ನು ಗಿಟ್ಟಿಸಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕನ ಸಿನಿಮಾದಲ್ಲಿ ನಟಿಸುವ ಚಾನ್ಸ್ ಮೃಣಾಲ್‌ಗೆ ಸಿಕ್ಕಿದೆ.

    ಮೃಣಾಲ್ ಠಾಕೂರ್ (Mrunal Thakur) ಸದ್ಯ ಬಾಲಿವುಡ್ ಮತ್ತು ಟಾಲಿವುಡ್ (Tollywood) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೀತಾ ರಾಮಂ, ಹಲೋ ನಾನ್ನಾ ಚಿತ್ರದ ಸಕ್ಸಸ್ ನಂತರ ನಟಿಗೆ ಬೇಡಿಕೆ ಜಾಸ್ತಿ ಆಗಿದೆ. ಯಾವುದೇ ಪಾತ್ರ ಕೊಟ್ಟರೂ ಸಹಜವಾಗಿ ನಟಿಸುವ ಮೃಣಾಲ್ ಇದೀಗ ಸಂಜಯ್ ಲೀಲಾ ಬನ್ಸಾಲಿ ಕಣ್ಣಿಗೆ ಬಿದ್ದಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಬರ್ತ್‌ಡೇಗೆ ಶ್ರೀವಲ್ಲಿ ಲುಕ್ ರಿವೀಲ್

    ಮುಂಬರುವ ಸಿನಿಮಾಗಾಗಿ ಮೃಣಾಲ್‌ರನ್ನು ಆಫೀಸ್‌ಗೆ ಕರೆಸಿ ಕಥೆ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ಅಷ್ಟು ಸುಲಭವಾಗಿ ಯಾರಿಗೂ ಮಣೆ ಹಾಕದ ನಿರ್ದೇಶಕ ಸಂಜಯ್ ಈಗ ಮೃಣಾಲ್ ನಟನೆಯನ್ನು ಮೆಚ್ಚಿ ಮುಂದಿನ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಾಲಿವುಡ್ ಗಲ್ಲಿಯಲ್ಲಿ ಹರಿದಾಡುತ್ತಿದೆ.

    ಒಂದು ವೇಳೆ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದ್ದೇ ಆಗಿದ್ದಲ್ಲಿ ಆಲಿಯಾ ಭಟ್‌ರಂತೆಯೇ (Alia Bhatt) ಮೃಣಾಲ್ ಕೂಡ ಬಾಲಿವುಡ್‌ನಲ್ಲಿ ಹವಾ ಸೃಷ್ಟಿಸೋದು ಗ್ಯಾರಂಟಿ. ಎಲ್ಲದ್ದಕ್ಕೂ ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಸಿಗುವವರೆಗೂ ಕಾದುನೋಡಬೇಕಿದೆ.

    ಸದ್ಯ ವಿಜಯ್ ದೇವರಕೊಂಡ (Vijay Devarakonda) ಜೊತೆ ನಟಿಸಿದ ‘ಫ್ಯಾಮಿಲಿ ಸ್ಟಾರ್’ ಚಿತ್ರ ರಿಲೀಸ್ ಆಗಿ ಮೃಣಾಲ್ ನಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

  • ಮತ್ತೆ ಬನ್ಸಾಲಿ ಅಡ್ಡಾಗೆ ಎಂಟ್ರಿ ಕೊಟ್ಟ ಆಲಿಯಾ ಭಟ್

    ಮತ್ತೆ ಬನ್ಸಾಲಿ ಅಡ್ಡಾಗೆ ಎಂಟ್ರಿ ಕೊಟ್ಟ ಆಲಿಯಾ ಭಟ್

    ಬಿಟೌನ್ ಬೆಡಗಿ ಆಲಿಯಾ ಭಟ್ (Alia Bhatt) ಇದೀಗ ಮತ್ತೊಂದು ಬಂಪರ್ ಆಫರ್ ಅನ್ನು ಗಿಟ್ಟಿಸಿಕೊಂಡಿದ್ದಾರೆ. ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಸಕ್ಸಸ್ ನಂತರ ‘ಲವ್‌ & ವಾರ್‌’ ಕಥೆ ಹೇಳೋದಕ್ಕೆ ರೆಡಿಯಾಗಿದ್ದಾರೆ. 3 ವರ್ಷಗಳ ನಂತರ ಮತ್ತೆ ಸಂಜಯ್ ಲೀಲಾ ಬನ್ಸಾಲಿ ಜೊತೆ ಸಿನಿಮಾ ಮಾಡಲು ಆಲಿಯಾ ಭಟ್ ಸಾಥ್ ನೀಡುತ್ತಿದ್ದಾರೆ.

    ಮದುವೆಯಾದ್ಮೇಲೆ ನಟಿಯರಿಗೆ ಡಿಮ್ಯಾಂಡ್ ಕಮ್ಮಿ ಎಂಬ ಮಾತಿದೆ. ಆದರೆ ಆಲಿಯಾ ಭಟ್ ಆ ಮಾತನ್ನು ಸುಳ್ಳು ಮಾಡಿದ್ದಾರೆ. ಮಗು ಆದ್ಮೇಲೆಯೂ ಫಿಟ್‌ನೆಸ್ ಕಡೆ ಹೆಚ್ಚು ಗಮನ ಕೊಡುತ್ತಿರುವ ಆಲಿಯಾ ಈಗ ಮತ್ತೊಂದು ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

    ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (Sajay Leela Bansali) ಅಡ್ಡಾಗೆ ಆಲಿಯಾ ಭಟ್ ಎಂಟ್ರಿ ಕೊಟ್ಟಿದ್ದಾರೆ. ‘ಲವ್ & ವಾರ್’ (Love & War) ಎಂಬ ಚಿತ್ರದಲ್ಲಿ ಆಲಿಯಾ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಮತ್ತೊಮ್ಮೆ ರಣ್‌ಬೀರ್ ಕಪೂರ್ (Ranbir Kapoor) ಜೊತೆ ತೆರೆಯ ಮೇಲೆ ಆಲಿಯಾ ರೊಮ್ಯಾನ್ಸ್ ಮಾಡಲಿದ್ದಾರೆ. ‘ಬ್ರಹ್ಮಾಸ್ತ್ರ’ ನಂತರ ಮತ್ತೆ ಈ ಜೋಡಿ ಲವ್ & ವಾರ್ ಚಿತ್ರದಲ್ಲಿ ಜೊತೆಯಾಗಿ ನಟಿಸಲಿದ್ದಾರೆ. ಇದನ್ನೂ ಓದಿ:ನಟಿ ದೀಪಿಕಾ ಪಡುಕೋಣೆಗೆ ಆಸ್ಕರ್ ಗೌರವ

    ಅದಷ್ಟೇ ಅಲ್ಲ, ಬಾಲಿವುಡ್ ನಟ ವಿಕ್ಕಿ ಕೌಶಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಲಿಯಾ ಈ ಚಿತ್ರದಲ್ಲಿ ಗಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಎಮೋಷನಲ್ ಡ್ರಾಮ ಇರುವ ಚಿತ್ರವಾಗಿದೆ. ನವೆಂಬರ್‌ನಲ್ಲಿ ಶೂಟಿಂಗ್ ಶುರುವಾಗಲಿದ್ದು, ಮುಂದಿನ ವರ್ಷ ಕ್ರಿಸ್‌ಮಸ್ ವೇಳೆ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.

    ಮೊದಲ ಬಾರಿಗೆ ಆಲಿಯಾ ಭಟ್, ವಿಕ್ಕಿ ಕೌಶಲ್, ರಣ್‌ಬೀರ್ ಕಪೂರ್ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಟ್ರಯೋ ಕಥೆ ನೋಡುವುದಕ್ಕೆ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

  • ಬಾಲಿವುಡ್‌ನತ್ತ ‘ಆರ್‌ಆರ್‌ಆರ್’ ಹೀರೋ ರಾಮ್ ಚರಣ್

    ಬಾಲಿವುಡ್‌ನತ್ತ ‘ಆರ್‌ಆರ್‌ಆರ್’ ಹೀರೋ ರಾಮ್ ಚರಣ್

    ಟಾಲಿವುಡ್ ನಟ ರಾಮ್ ಚರಣ್ (Ram Charan) ಅವರು ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ಬೆನ್ನಲ್ಲೇ ‘ಗೇಮ್ ಚೇಂಜರ್’ ಚಿತ್ರಕ್ಕೆ ಅಭಿಮಾನಿಗಳು ಕಾಯುತ್ತಿರುವ ವೇಳೆ, ಬಾಲಿವುಡ್‌ನ ಬಿಗ್ ಪ್ರಾಜೆಕ್ಟ್‌ವೊಂದನ್ನು ರಾಮ್ ಚರಣ್ ಒಪ್ಪಿಕೊಂಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ನಟ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.

    ಈಗ ಚಿತ್ರರಂಗದಲ್ಲಿ ಸೌತ್ ಸಿನಿಮಾಗಳೇ ಕಮಾಲ್ ಮಾಡುತ್ತಿವೆ. ಹಾಗಾಗಿ ಸೌತ್ ನಟರಿಗೆ ಬಾಲಿವುಡ್ ನಿರ್ದೇಶಕರು ಮಣೆ ಹಾಕ್ತಿದ್ದಾರೆ. ಸದ್ಯ ರಾಮ್ ಚರಣ್ ಅವರು ಹೊಸ ಚಿತ್ರಕ್ಕಾಗಿ ಬಾಲಿವುಡ್ ಸ್ಟಾರ್ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ ಜೊತೆ ಕೈಜೋಡಿಸಿದ್ದಾರೆ. ಇದನ್ನೂ ಓದಿ:ಕಡೆಗೂ ಬ್ರೇಕಪ್ ಬಗ್ಗೆ ಮೌನ ಮುರಿದ ‘ಬೃಂದಾವನ’ ಹೀರೋ

    ಅಮಿಶ್ ಅವರ ‘ದಿ ಲೆಜೆಂಡ್ ಆಫ್ ಸುಹೇಲ್ದೇವ್’ ಪುಸ್ತಕವನ್ನು ಆಧರಿಸಿ ಸಂಜಯ್ ಲೀಲಾ ಬನ್ಸಾಲಿ ಸಿನಿಮಾ ಮಾಡಲು ಮುಂದಾಗಿದ್ದಾರಂತೆ. ಈ ಕಥೆಯ ನಾಯಕನಾಗಿ ರಾಮ್ ಚರಣ್ ಕಾಣಿಸಿಕೊಳ್ತಿದ್ದಾರೆ. ಅದಕ್ಕಾಗಿ ಈಗಾಗಲೇ ಮುಂಬೈನಲ್ಲಿ ಬನ್ಸಾಲಿ ಅವರನ್ನು ರಾಮ್ ಭೇಟಿಯಾಗಿ ಮಾತು ಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

    ಸದ್ಯದಲ್ಲೇ ಬನ್ಸಾಲಿ ಮತ್ತು ರಾಮ್‌ಚರಣ್ ಕಾಂಬೋ ಸಿನಿಮಾ ಕುರಿತು ಅಧಿಕೃತ ಅಪ್‌ಡೇಟ್ ಹೊರಬೀಳಲಿದೆ. ಅಲ್ಲಿಯವರೆಗೂ ಕಾಯಬೇಕಿದೆ. ‘ಗೇಮ್ ಚೇಂಜರ್’ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

  • ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಯನತಾರಾ

    ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಯನತಾರಾ

    ಸೌತ್ ನಟಿ ನಯನತಾರಾ ‘ಜವಾನ್’ (Jawan) ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿ ಸಕ್ಸಸ್‌ಫುಲ್ ನಟಿಯಾಗಿ ಮಿಂಚ್ತಿದ್ದಾರೆ. ಮೊದಲ ಸಿನಿಮಾ ಗೆದ್ದ ಖುಷಿಯಲ್ಲಿ ಈಗ ಹೊಸ ಪ್ರಾಜೆಕ್ಟ್‌ವೊಂದನ್ನ ಒಪ್ಪಿಕೊಂಡಿದ್ದಾರೆ. ಬಾಲಿವುಡ್‌ನ ಖ್ಯಾತ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಜೊತೆ ನಟಿ ಕೈಜೋಡಿಸಿದ್ದಾರೆ.

    ಬೈಜು ಬವ್ರಾ ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಣ್‌ವೀರ್ ಸಿಂಗ್- ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ಈ ನಡುವೆ ಮುಖ್ಯ ಪಾತ್ರವೊಂದಕ್ಕೆ ಬನ್ಸಾಲಿ ಟೀಮ್, ನಯನತಾರಾ (Nayanatara) ಜೊತೆ ಮಾತುಕತೆ ನಡೆಸಿದ್ದಾರೆ. ಕಥೆ ಕೇಳಿ ಅವರು ಕೂಡ ಓಕೆ ಎಂದಿದ್ದಾರಂತೆ.

    ‘ಗಂಗೂಬಾಯಿ ಕಥಿಯಾವಾಡಿ’ ಚಿತ್ರದ ಸೂಪರ್ ಸಕ್ಸಸ್ ನಂತರ ‘ಹೀರಾಮಂಡಿ’ ಚಿತ್ರದ ಬಳಿಕ ಬೈಜು ಬವ್ರಾ ಪ್ರಾಜೆಕ್ಟ್ ಅನ್ನು ಬನ್ಸಾಲಿ ಕೈಗೆತ್ತಿಕೊಂಡಿದ್ದಾರೆ. ಸದ್ಯದಲ್ಲೇ ಸಿನಿಮಾದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ. ಇದನ್ನೂ ಓದಿ:ರಾಧಿಕಾ ಕುಮಾರಸ್ವಾಮಿ ಸಹೋದರ ಚಿತ್ರರಂಗಕ್ಕೆ ಎಂಟ್ರಿ

    1952ರಲ್ಲಿ ‘ಬೈಜು ಬವ್ರಾ’ ಚಿತ್ರವನ್ನು ವಿಜಯ್ ಭಟ್ ಅವರು ಡೈರೆಕ್ಷನ್ ಮಾಡಿದ್ದರು. ಭರತ್ ಭೂಷಣ್- ಮೀನಾ ಕುಮಾರಿ ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಸಂಗೀತ ಸ್ಪರ್ಧೆಯಲ್ಲಿ ತಾನ್ಸೇನ್‌ನ ಸೋಲಿಸಬೇಕು ಎಂದು ಪಣ ತೊಡುವ ಬೈಜುವಿನ ಕಥೆಯಾಗಿದೆ. ಈ ಚಿತ್ರದ ರಿಮೇಕ್ ಎಂದು ಹೇಳಲಾಗುತ್ತಿದೆ.

    ಒಂದು ವೇಳೆ ರಣ್‌ವೀರ್‌ ಸಿಂಗ್‌-ಆಲಿಯಾ ಭಟ್‌ (Alia Bhatt) ಮತ್ತು ನಯನತಾರಾ ಜೊತೆಯಾಗಿ ನಟಿಸೋದು ನಿಜವೇ ಆಗಿದ್ದಲ್ಲಿ, ಸಿನಿರಸಿಕರಿಗೆ ಹಬ್ಬವೋ ಹಬ್ಬ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಲಿವುಡ್‌ನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡ ‘ಸೀತಾರಾಮಂ’ ಬೆಡಗಿ

    ಬಾಲಿವುಡ್‌ನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡ ‘ಸೀತಾರಾಮಂ’ ಬೆಡಗಿ

    ದುಲ್ಕರ್ ಸಲ್ಮಾನ್ ಜೊತೆ ಮೃಣಾಲ್ ಠಾಕೂರ್ (Mrunal Thakur) ಡ್ಯುಯೇಟ್ ಹಾಡಿದ ಮೇಲೆ ನಟಿಯ ಲಕ್ ಬದಲಾಗಿದೆ. ಸೌತ್ ಮತ್ತು ಬಾಲಿವುಡ್‌ನಲ್ಲಿ ಬಂಪರ್‌ಗಳನ್ನ ಬಾಚಿಕೊಳ್ತಿದ್ದಾರೆ. ಹೀಗಿರುವಾಗ ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಸಿನಿಮಾದಲ್ಲಿ ನಟಿಸುವ ಚಾನ್ಸ್ ಅನ್ನ ನಟಿ ಗಿಟ್ಟಿಸಿಕೊಂಡಿದ್ದಾರೆ.

    ಬಾಲಿವುಡ್‌ಗೆ (Bollywood) ಎಂಟ್ರಿ ಕೊಟ್ಟ ಮೇಲೆ ಬನ್ಸಾಲಿ ಅವರ ಸಿನಿಮಾದಲ್ಲಿ ಹೀರೋಯಿನ್ ಆಗಬೇಕು ಎಂಬುದು ಪ್ರತಿಯೊಬ್ಬರ ನಾಯಕಿಯರ ಕನಸು. ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ಆಲಿಯಾ ಭಟ್ ಅವರಂತಹ ನಟಿಯರು ಬನ್ಸಾಲಿ ಗರಡಿಯಲ್ಲಿ ಪಳಗಿ ಗೆದ್ದಿದ್ದಾರೆ. ಗಂಗೂಬಾಯಿ ಕಾಥಿಯಾವಾಡಿ ಚಿತ್ರದ ಸಕ್ಸಸ್ ನಂತರ ಯಾವ ಸಿನಿಮಾ ಮಾಡುತ್ತಾರೆ ಎಂದು ಕಾಯ್ತಿದ್ದವರಿಗೆ ಈಗ ಸಿಹಿಸುದ್ದಿ ಸಿಕ್ಕಿದೆ. ಇದನ್ನೂ ಓದಿ:ತೆಲುಗಿಗೆ ರಕ್ಷಿತ್‌ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ- ರಿಲೀಸ್‌ ಡೇಟ್‌ ಫಿಕ್ಸ್

    ಸದ್ಯ ಅವರು ‘ಹೀರಾಮಂಡಿ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ನವೆಂಬರ್‌ನಲ್ಲಿ ಸಿನಿಮಾ ಚಿತ್ರೀಕರಣ ಅಂತ್ಯವಾಗಲಿದೆ. ಬಳಿಕ ಮೃಣಾಲ್ ಠಾಕೂಲ್‌ಗೆ ಸಂಜಯ್ ಲೀಲಾ ಬನ್ಸಾಲಿ(Sanjay Leela Bansali) ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸಿದ್ಧಾಂತ್ ಚತುರ್ವೇದಿಗೆ ನಾಯಕಿಯಾಗಿ ‘ಸೀತಾರಾಮಂ’ (Seetha Ramam) ನಟಿ ಸಾಥ್ ನೀಡುತ್ತಿದ್ದಾರೆ. ಈ ಚಿತ್ರಕ್ಕೆ ರವಿ ಉದ್ಯಾವರ್ ನಿರ್ದೇಶನ ಮಾಡುತ್ತಿದ್ದಾರೆ.

    2024ರ ವೇಳೆ ಈ ಸಿನಿಮಾ ಶುರುವಾಗಲಿದೆ. ಒಂದು ವಿಭಿನ್ನ ಲವ್ ಸ್ಟೋರಿಯನ್ನ ಈ ಜೋಡಿಯ ಮೂಲಕ ತೋರಿಸಲು ಹೊರಟಿದ್ದಾರೆ. ಸಿದ್ಧಾಂತ್-‌ ಮೃಣಾಲ್‌ ಜೋಡಿ ತೆರೆಯ ಮೇಲೆ ಕ್ಲಿಕ್‌ ಆಗುತ್ತಾರಾ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಲಿವುಡ್‌ನಿಂದ ಬಂತು ಬಿಗ್ ಆಫರ್: ಬನ್ಸಾಲಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ

    ಬಾಲಿವುಡ್‌ನಿಂದ ಬಂತು ಬಿಗ್ ಆಫರ್: ಬನ್ಸಾಲಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ

    ಕ್ಕಿ ನಟಿ ರಶ್ಮಿಕಾ ಮಂದಣ್ಣ (Rashmika Mandanna), ಬಾಲಿವುಡ್ ಸಿನಿಮಾರಂಗದಲ್ಲಿ ಆಕ್ಟೀವ್ ಆಗ್ತಿದ್ದಾರೆ. `ಗುಡ್ ಬೈ’ (Good Bye) ಸಿನಿಮಾದ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಇದೀಗ ಬಂಪರ್ ಅವಕಾಶವೊಂದನ್ನ ಗಿಟ್ಟಿಸಿಕೊಂಡಿದ್ದಾರೆ. ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಕಡೆಯಿಂದ ಸಿನಿಮಾ ಆಫರ್‌ ಅರಸಿ ಬಂದಿದೆ.

    ಕೊಡಗಿನ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಬಾಲಿವುಡ್‌ನಲ್ಲಿ (Bollywood) ಕಮಾಲ್ ಮಾಡಲು ಮುಂದಾಗಿದ್ದಾರೆ. `ಗುಡ್ ಬೈ’ ಸಿನಿಮಾ ಹೀನಾಯ ಸೋಲಿನ ನಂತರವೂ ಕಿರಿಕ್ ಬ್ಯೂಟಿಗೆ ಡಿಮ್ಯಾಂಡ್ ಏನು ಕಮ್ಮಿಯಾಗಿಲ್ಲ. ಸಾಲು ಸಾಲು ಸಿನಿಮಾಗಳ ಗೆಲುವಿನ ಸರದಾರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಸಿನಿಮಾಗೆ ರಶ್ಮು ಸೆಲೆಕ್ಟ್ ಆಗಿದ್ದಾರೆ. ಇದನ್ನೂ ಓದಿ: ದೊಡ್ಮನೆಯಲ್ಲಿ ಹುಲಿವೇಷ: ಕುಣಿದು ಕುಪ್ಪಳಿಸಿದ ರೂಪೇಶ್ ಶೆಟ್ಟಿ

    ಇತ್ತೀಚೆಗಷ್ಟೇ ಸಂಜಯ್ ಲೀಲಾ ಬನ್ಸಾಲಿ ಅವರ ಕಚೇರಿಗೆ ರಶ್ಮಿಕಾ ಭೇಟಿ ಕೊಟ್ಟಿದ್ದಾರೆ. ಸಿನಿಮಾ ಕುರಿತು ಈಗಾಗಲೇ ಒಂದು ಸುತ್ತಿನ ಮಾತುಕತೆ ಕೂಡ ಆಗಿದೆ. ಎಲ್ಲಾ ಓಕೆ ಆದರೆ ಸಿನಿಮಾ ಶುರುವಾಗೋದು ಪಕ್ಕಾ ಅಂತಿದ್ದಾರೆ ಬಾಲಿವುಡ್‌ನ ಸಿನಿಪಂಡಿತರು.

     

    View this post on Instagram

     

    A post shared by Manav Manglani (@manav.manglani)

    ಬಾಲಿವುಡ್‌ನ `ಮಿಷನ್ ಮಜ್ನು’ ಸಿನಿಮಾ ರಿಲೀಸ್ ಬೆನ್ನಲ್ಲೇ ರಶ್ಮಿಕಾ ಹೊಸ ಸಿನಿಮಾದ ಗುಡ್ ನ್ಯೂಸ್ ಕೇಳಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]