Tag: Sanjay Dutt

  • ಸಂಜಯ್ ದತ್ ಕತ್ತಿಗೆ ರೇಜರ್ ಹಿಡಿದಿದ್ದ ಡಬಲ್ ಮರ್ಡರ್ ಅಪರಾಧಿ!

    ಸಂಜಯ್ ದತ್ ಕತ್ತಿಗೆ ರೇಜರ್ ಹಿಡಿದಿದ್ದ ಡಬಲ್ ಮರ್ಡರ್ ಅಪರಾಧಿ!

    ಬಾಲಿವುಡ್ ನಟ ಸಂಜಯ್ ದತ್ (Sanjay Dutt) ತಮ್ಮ ಜೀವನದಲ್ಲಿ ನಡೆದ ಭಯಾನಕ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಸಂಜಯ್ ದತ್ 1993ರ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಶಿಕ್ಷೆಗೊಳಗಾಗಿದ್ದರು. ಯೆರ್ವಾಡಾ ಜೈಲಿನಲ್ಲಿ ಐದು ವರ್ಷಗಳ ಶಿಕ್ಷೆಯನ್ನು ಅನುಭವಿಸಿದರು. ಬಳಿಕ ಉತ್ತಮ ನಡವಳಿಕೆ ತೋರಿಸಿದ್ದಕ್ಕೆ ಅವರನ್ನು ಶಿಕ್ಷೆ ಪೂರ್ಣವಾಗುವ ಮೊದಲೇ ಬಿಡುಗಡೆ ಮಾಡಲಾಯಿತು. ಇದೀಗ ಜೈಲು ದಿನದ ಒಂದು ಘಟನೆಯನ್ನ ನೆನೆದಿದ್ದಾರೆ. ಈಗಲೂ ಬೆಚ್ಚಿಬೀಳಿಸುವ ಘಟನೆ ಅದೊಂದೇ ಎಂದಿದ್ದಾರೆ ಸಂಜಯ್ ದತ್.

    ಯೆರ್ವಾಡಾ ಜೈಲಿನಲ್ಲಿದ್ದಾಗ ಒಮ್ಮೆ ನಡೆದ ಘಟನೆ ನೆನೆದ ಸಂಜಯ್ ದತ್, ಹದಿನೈದು ವರ್ಷ ಶಿಕ್ಷೆಗೆ ಒಳಗಾದ ಅಪರಾಧಿಯೊಬ್ಬ ತಮ್ಮನ್ನ ಭಯಬೀಳಿಸಿದ ಸಂದರ್ಭವನ್ನ ವಿವರಿಸುತ್ತಾರೆ. ಜೈಲಿನಲ್ಲಿದ್ದಾಗ ದಟ್ಟವಾಗಿ ಬೆಳೆದಿದ್ದ ಸಂಜಯ್ ದತ್‌ ಅವರ ಗಡ್ಡ ಬೋಳಿಸಲು ಜೈಲಧಿಕಾರಿಗಳು ಓರ್ವ ಡಬಲ್ ಮರ್ಡರ್ ಮಾಡಿರುವ ಅಪರಾಧಿಯನ್ನ ನೇಮಿಸಿದ್ದರಂತೆ. ಆತನ ಹೆಸರು ಮಿಶ್ರಾ. ಆ ವ್ಯಕ್ತಿ ಸಂಜಯ್ ದತ್ ಕತ್ತಿಗೆ ರೇಜರ್ ಹಿಡಿದಿದ್ದ. ಇವರು ಆ ವ್ಯಕ್ತಿಯನ್ನು ‘ಎಷ್ಟು ದಿನ ಜೈಲಿನಲ್ಲಿರುತ್ತೀರಿ’ ಎಂದು ಆಕಸ್ಮಿಕವಾಗಿ ಕೇಳಿದರಂತೆ. ಆತ ಹದಿನೈದು ವರ್ಷಗಳು ಎಂದನಂತೆ. ಸಂಜಯ್ ದತ್ ಕುತೂಹಲದಿಂದ ಏನಕ್ಕೆ ಎಂದು ಒತ್ತಿ ಕೇಳಿದರಂತೆ. ಆತ ಡಬಲ್ ಮರ್ಡರ್ ಮಾಡಿದ್ದಕ್ಕೆ ಎಂದನಂತೆ. ಆಗ ತಮ್ಮ ರಕ್ತ ತಣ್ಣಗಾಯಿತು ಎಂದು ಹೇಳುವ ಮೂಲಕ ಜೈಲಿನ ಭಯಾನಕ ಘಟನೆ ನೆನೆದಿದ್ದಾರೆ ಸಂಜಯ್ ದತ್. ಇದನ್ನೂ ಓದಿ: ಅಮ್ಮ ಮಗನ ಮಾತುಕತೆ ಕಂಡು ಕಣ್ಣೀರಿಟ್ಟ ಸಲ್ಮಾನ್ ಖಾನ್

    ಅಂದಹಾಗೆ ಸಂದರ್ಶನವೊಂದರಲ್ಲಿ ಸಂಜಯ್ ದತ್ ಈ ಘಟನೆ ನೆನಪು ಮಾಡಿಕೊಂಡಿದ್ದಾರೆ. `ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಕಾರ್ಯಕ್ರಮದಲ್ಲಿ ಈ ನಟ, ಮಿತ್ರ ಸುನಿಲ್ ಶೆಟ್ಟಿ ಜೊತೆ ವೇದಿಕೆ ಹಂಚಿಕೊಂಡಿದ್ದ ವೇಳೆ ತಮ್ಮ ಜೈಲು ಜೀವನದ ಒಂದು ಭಯಾನಕ ಹಳೆಯ ಅಧ್ಯಾಯವನ್ನು ನೆನಪಿಸಿಕೊಂಡಿದ್ದಾರೆ. 1993 ರ ಮುಂಬೈ ಸ್ಫೋಟ ಪ್ರಕರಣ ಸಂಬಂಧ ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದಕ್ಕೆ ಜೈಲುಶಿಕ್ಷೆ ಅನುಭವಿಸಿದ್ದರು. ಹಲವು ವರ್ಷಗಳ ನಂತರವೂ ತಮ್ಮನ್ನು ಬೆಚ್ಚಿಬೀಳಿಸಿದ ಕ್ಷಣವನ್ನು ಇದೀಗ ಸಂಜಯ್ ದತ್ ಹಂಚಿಕೊಂಡಿದ್ದಾರೆ.

  • 72 ಕೋಟಿ ಮೌಲ್ಯದ ಆಸ್ತಿಯನ್ನು ಸಂಜಯ್ ದತ್ ಹೆಸರಿಗೆ ಬರೆದಿಟ್ಟ ಅಭಿಮಾನಿ

    72 ಕೋಟಿ ಮೌಲ್ಯದ ಆಸ್ತಿಯನ್ನು ಸಂಜಯ್ ದತ್ ಹೆಸರಿಗೆ ಬರೆದಿಟ್ಟ ಅಭಿಮಾನಿ

    -ಎಲ್ಲವನ್ನು ಅಭಿಮಾನಿಯ ಕುಟುಂಬಸ್ಥರಿಗೆ ಹಿಂದಿರುಗಿಸಿದ ನಟ

    ನ್ನ ಅಭಿಮಾನಿಯೊಬ್ಬರು ತಾವು ಸಾಯುವ ಮುನ್ನ ತಮ್ಮ 72 ಕೋಟಿ ರೂ. ಮೌಲ್ಯದ ಆಸ್ತಿಯನ್ನು ನನ್ನ ಹೆಸರಿಗೆ ವರ್ಗಾಯಿಸಿದ್ದರು ಎಂದು ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

    ಇತ್ತೀಚಿಗೆ ಕರ್ಲಿ ಟೇಲ್ಸ್ ಅವರು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, 2006ರಲ್ಲಿ ನಡೆದ ಘಟನೆಯೊಂದರ ಬಗ್ಗೆ ಪ್ರಸ್ತಾಪಿಸಿದರು. ಈ ವೇಳೆ ನಿಶಾ ಪಾಟೀಲ್ ಎಂಬ ಅಭಿಮಾನಿಯೊಬ್ಬರು ಭಾಗಿಯಾಗಿದ್ದರು. ಅವರು ತಮ್ಮ ಮರಣಕ್ಕೂ ಮುನ್ನ ತಮ್ಮ 72 ಕೋಟಿ ಮೌಲ್ಯದ ಎಸ್ಟೇಟ್‌ನ್ನು ನನ್ನ ಹೆಸರಿಗೆ ಬರೆಯುವಂತೆ ಬ್ಯಾಂಕ್‌ಗೆ ಸೂಚಿಸಿದ್ದರು. ಬಳಿಕ ನಾನು ಆ ಸಂಪತ್ತನ್ನೆಲ್ಲಾ ಅವರ ಕುಟುಂಬಸ್ಥರಿಗೆ ಹಿಂದುಗಿಸಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: `ಡಿ’ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ – ರಮ್ಯಾ ದೂರು ಕೊಟ್ರೆ 7 ವರ್ಷ ಜೈಲು ಗ್ಯಾರಂಟಿ: ಮಹಿಳಾ ಆಯೋಗ

    ಸದ್ಯ ಸಂಜಯ್ ದತ್ ಅವರು ತೆಲುಗು ಸಿನಿಮಾ ಅಖಂಡ-2ರಲ್ಲಿ ಕಾಣಿಸಿಕೊಳ್ಳಲಿದ್ದು, ಸೆಪ್ಟೆಂಬರ್ 25ರಂದು ತೆರೆಕಾಣಲಿದೆ. ಮುಂಬರುವ ದಿನಗಳಲ್ಲಿ ರಿಲೀಸ್ ಆಗಲಿರುವ ಕನ್ನಡದ ಬಹುನಿರೀಕ್ಷಿತ ಕೆಡಿ ಮತ್ತು ದಿ-ಡೆವಿಲ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷದ ಆರಂಭದಲ್ಲಿ ಭೂತ್ನಿ ಮತ್ತು ಹೌಸ್‌ಫುಲ್ 5 ಸಿನಿಮಾದಲ್ಲಿ ಮಿಂಚಿದ್ದರು.

    1981ರಲ್ಲಿ ರಾಕಿ ಸಿನಿಮಾ ಮೂಲದ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಬಳಿಕ ನಾಮ್, ಸಾಜನ್, ಖಲ್ ನಾಯಕ್, ವಾಸ್ತವ್ ಮತ್ತು ಮುನ್ನಾ ಭಾಯ್ ಎಂಬಿಬಿಎಸ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಖ್ಯಾತಿಯಾದರು.ಇದನ್ನೂ ಓದಿ: `ಡಿ ಬಾಸ್‌’ ಮೇಲೆ ಗೌರವ ಇರೋರು ಯಾವುದಕ್ಕೂ ರಿಯಾಕ್ಟ್‌ ಮಾಡಬೇಡಿ: ಸೆಲೆಬ್ರಿಟಿಗಳಿಗೆ ಫ್ಯಾನ್ಸ್‌ ಪೇಜ್‌ನಲ್ಲಿ ಮನವಿ

  • ರಾಜಾಸಾಬ್ ವರ್ಸಸ್ ಧುರಂಧರ್ ಬಾಕ್ಸಾಫೀಸ್ ಕ್ಲ್ಯಾಶ್: ಸಂಜುಬಾಬ ಸ್ಫೋಟಕ ಹೇಳಿಕೆ

    ರಾಜಾಸಾಬ್ ವರ್ಸಸ್ ಧುರಂಧರ್ ಬಾಕ್ಸಾಫೀಸ್ ಕ್ಲ್ಯಾಶ್: ಸಂಜುಬಾಬ ಸ್ಫೋಟಕ ಹೇಳಿಕೆ

    ಬಾಲಿವುಡ್‌ನ ನಟ ಸಂಜಯ್ ದತ್ (Sanjay Dutt) ಭಾರತೀಯ ಚಿತ್ರರಂದಲ್ಲಿ ಭಾರೀ ಬ್ಯುಸಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ಎಲ್ಲಾ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ಸಂಜುಬಾಬ ಒಂದು ಮುಖ್ಯ ಪಾತ್ರವನ್ನ ನಿರ್ವಹಿಸಿದ್ದಾರೆ. ಕನ್ನಡದ ಕೆಡಿ ಸಿನಿಮಾದಲ್ಲೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಮುಂಬೈನಲ್ಲಿ ಕೆಡಿ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಇವೆಂಟ್‌ನಲ್ಲಿ ಮಾತನಾಡಿರುವ ಸಂಜಯ್ ದತ್ ರಾಜಾಸಾಬ್ (The Raja Saab) ಹಾಗೂ ಧುರಂಧರ್ (Dhurandhar) ಚಿತ್ರದ ರಿಲೀಸ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಎರಡೂ ಸಿನಿಮಾಗಳು ಒಂದೇ ದಿನ ತೆರೆಕಂಡರೆ ಎನ್ನುವ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಉತ್ತರಿಸಿರುವ ಸಂಜಯ್ ದತ್ ತಾವು ನಟಿಸಿದ ಎರಡು ಸಿನಿಮಾಗಳು ಒಂದೇ ದಿನ ರಿಲೀಸ್ ಆದರೂ ವ್ಯತ್ಯಾಸವೆನಿಸೊಲ್ಲ. `ಯಾಕೆಂದರೆ ಧುರಂಧರ್ ಹಾಗೂ ರಾಜಾಸಾಬ್ ಸಿನಿಮಾದ ಎರಡೂ ಪಾತ್ರಗಳು ತುಂಬಾನೇ ವಿಭಿನ್ನವಾಗಿವೆ. ಎರಡೂ ಒಂದೇ ರೀತಿ ಇರುವುದಿಲ್ಲ’ ಎಂದಿದ್ದಾರೆ. ಇದನ್ನೂ ಓದಿ: ಅಟ್ಲಿ ಸಿನಿಮಾಗೆ ಮತ್ತೆ ಒಂದಾದ ಪುಷ್ಪ ಹಿಟ್ ಜೋಡಿ..!

    ಪ್ರಭಾಸ್ ಅಭಿನಯದ ಮೋಸ್ಟ್ ಅವೈಟೆಡ್ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ಪೋನ್ ಮಾಡಿಕೊಂಡು ಬಂದಿದೆ. 2025ರ ಕೊನೆಯಲ್ಲಿ ಸಿನಿಮಾ ತೆರೆಗೆ ಬರುತ್ತೆ ಅನ್ನೋ ಮಾಹಿತಿಯನ್ನ ಚಿತ್ರತಂಡ ಶೇರ್ ಮಾಡಿಕೊಂಡಿದೆ. ಇನ್ನು ರಣವೀರ್ ಸಿಂಗ್ ನಟನೆಯ ಧುರಂಧರ್ ಸಿನಿಮಾ ಕೂಡಾ ಇದೇ ವರ್ಷ ಡಿಸೆಂಬರ್‌ಗೆ ತೆರೆಗೆ ಬರೋಕೆ ಸಿದ್ಧವಾಗಿದೆ.

    ಧುರಂಧರ್ ಹಾಗೂ ರಾಜಾಸಾಬ್ ಸಿನಿಮಾ ಒಂದೇ ದಿನ ತೆರೆಗೆ ಬಂದರೂ ಬಾಕ್ಸಾಫೀಸ್‌ನಲ್ಲಿ ಆಗಲಿ, ಸಿನಿಮಾದ ಪಾತ್ರದ ಮೇಲೆಯಾಗಲಿ ಯಾವುದೇ ಡಿಫರೆನ್ಸ್ ಆಗೋದಿಲ್ಲ ಎನ್ನು ಮಾತುಗಳನ್ನ ನಟ ಸಂಜಯ್ ದತ್ ಕೆಡಿ ಸಿನಿಮಾದ ಇವೆಂಟ್‌ನಲ್ಲಿ ಹೇಳಿದ್ದಾರೆ. ಇದನ್ನೂ ಓದಿ: `ನನ್ನ ಬ್ಲೌಸ್ ಒಳಗೆ ಕೈಹಾಕಿದ’ – ಆಶೀರ್ವಾದದ ನೆಪದಲ್ಲಿ ಅರ್ಚಕನಿಂದ ಮಾಡೆಲ್‌ಗೆ ಲೈಂಗಿಕ ದೌರ್ಜನ್ಯ ಆರೋಪ

  • ನಮ್ಮ ದೇಶದ ತಾಕತ್ ಏನಂತ ಪ್ರಪಂಚಕ್ಕೆ ಗೊತ್ತಾಗಿದೆ: ಸಂಜಯ್ ದತ್

    ನಮ್ಮ ದೇಶದ ತಾಕತ್ ಏನಂತ ಪ್ರಪಂಚಕ್ಕೆ ಗೊತ್ತಾಗಿದೆ: ಸಂಜಯ್ ದತ್

    ನವದೆಹಲಿ: ಯುದ್ಧ ಇಂದು ಮುಗಿಯದೇ ಇರಬಹುದು. ಆದರೆ ನಮ್ಮ ಶಕ್ತಿ, ನಮ್ಮ ದೇಶದ ತಾಕತ್ ಪ್ರಪಂಚಕ್ಕೆ ಗೊತ್ತಾಗಿದೆ. ಶಾಂತಿ ನೆಲೆಸುವವರೆಗೂ ಇದು ನಿಲ್ಲಬಾರದು ಎಂದು ಬಾಲಿವುಡ್ (Bollywood) ನಟ ಸಂಜಯ್ ದತ್ (Sanjay Dutt) ಭಾರತೀಯ ಸೇನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಭಾರತ ಮತ್ತು ಪಾಕ್ ಮಧ್ಯೆ ನಡೆಯುತ್ತಿರುವ ಸಂಘರ್ಷದ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಆಪರೇಷನ್ ಸಿಂಧೂರಗೆ (Operation Sindoor) ಬೆಂಬಲ ವ್ಯಕ್ತಪಡಿಸಿದ್ದಾರೆ. ನಮ್ಮ ಜನರ ಮೇಲಿನ ನಿರಂತರ ದಾಳಿಗಳನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ. ನಾವು ಹಿಂಜರಿಯದೇ ಪೂರ್ಣ ಬಲದಿಂದ ಮತ್ತು ಅಚಲ ದೃಢಸಂಕಲ್ಪದಿಂದ ಪ್ರತಿಕ್ರಿಯಿಸುತ್ತೇವೆ. ನಮ್ಮ ಯುದ್ಧ ಜನರು ಅಥವಾ ರಾಷ್ಟ್ರದ ವಿರುದ್ಧವಲ್ಲ. ಭಯ, ಅವ್ಯವಸ್ಥೆ ಮತ್ತು ವಿನಾಶದ ವಿರುದ್ಧ ಎಂಬುದನ್ನು ಜಗತ್ತು ಅರ್ಥಮಾಡಿಕೊಳ್ಳಬೇಕು. ಈ ಬಾರಿ ಯಾವುದೇ ಕಾರಣಕ್ಕೂ ನಾವು ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಗುಂಡಿನ ದಾಳಿ, ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲು ಭಾರತ-ಪಾಕ್‌ ಒಪ್ಪಂದ: ಜೈಶಂಕರ್‌

    ಈ ಭಯೋತ್ಪಾದಕರು ಹಿಂಸಾಚಾರದ ಪರದೆಯ ಹಿಂದೆ ಅಡಗಿರುವ ಹೇಡಿಗಳು. ಅವರು ನೆರಳಿನ ಹಿಂದೆ ನಿಂತು ದಾಳಿ ಮಾಡುತ್ತಾರೆ. ಆದರೆ ನಾವು ತಲೆಬಾಗದ ರಾಷ್ಟ್ರ ಎಂದು ಅವರಿಗೆ ಗೊತ್ತಾಗಬೇಕು. ಅವರು ನಮ್ಮನ್ನು ಬೀಳಿಸಲು ಪ್ರಯತ್ನಿಸಿದಾಗಲೆಲ್ಲಾ ನಾವು ಬಲಶಾಲಿಯಾಗುತ್ತೇವೆ. ನಮ್ಮ ಏಕತೆ, ನಮ್ಮ ಚೈತನ್ಯ ಮತ್ತು ಹೋರಾಡುವ ಇಚ್ಛಾಶಕ್ತಿ ಅವರ ದ್ವೇಷಕ್ಕಿಂತ ಬಹಳ ದೊಡ್ಡದು ಎಂದು ತಿಳಿಸಿದರು. ಇದನ್ನೂ ಓದಿ: ಭಾರತ- ಪಾಕ್ ನಡುವೆ ಕದನ ವಿರಾಮ

    ನಮ್ಮ ಯೋಧರು ಮುಂಚೂಣಿಯಲ್ಲಿ ನಿಂತು, ನಿರ್ಭೀತರಾಗಿ ಪ್ರತಿಯೊಂದು ಭಯೋತ್ಪಾದಕ ಕೃತ್ಯಕ್ಕೂ ಧೈರ್ಯದಿಂದ ಉತ್ತರಿಸುತ್ತಾರೆ. ಅವರು ಕೇವಲ ಗಡಿಗಳನ್ನು ರಕ್ಷಿಸುತ್ತಿಲ್ಲ. ಅವರು ಪ್ರತಿ ಮಗುವಿನ ಕನಸು, ಪ್ರತಿ ಕುಟುಂಬದ ಶಾಂತಿ ಮತ್ತು ಈ ರಾಷ್ಟ್ರವನ್ನು ರಕ್ಷಿಸುತ್ತಿದ್ದಾರೆ. ಅವರು ನಿಜವಾದ ವೀರರು. ಇವರಿಗೆ ನಾನು ಸಲ್ಯೂಟ್ ಹೊಡೆಯುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿದೆ: ಪಾಕ್ ವಿದೇಶಾಂಗ ಸಚಿವ ಘೋಷಣೆ

    ಇದು ಕೇವಲ ಸೈನಿಕರ ಹೋರಾಟವಲ್ಲ, ಇದು ನಮ್ಮ ಹೋರಾಟ. ನಾಗರಿಕರಾಗಿ ನಾವು ಒಟ್ಟಾಗಿ ನಿಲ್ಲಬೇಕು. ಈ ಯುದ್ಧ ಇಂದು ಕೊನೆಗೊಳ್ಳದಿರಬಹುದು. ಆದರೆ ನಮ್ಮ ಶಕ್ತಿ, ನಮ್ಮ ದೃಢನಿಶ್ಚಯ ಮತ್ತು ನಮ್ಮ ಏಕತೆ ಶಾಶ್ವತ. ಅಗತ್ಯವಿದ್ದಲ್ಲಿ ನಾವು ಸಾಧ್ಯವಿರುವ ಯಾವುದೇ ರೀತಿಯ ಸೇವೆ ಸಲ್ಲಿಸುತ್ತೇವೆ ಎಂದು ಭರವಸೆಯ ನುಡಿಗಳನ್ನಾಡಿದರು. ಇದನ್ನೂ ಓದಿ: ಭಾರತ್ ಫೋರ್ಜ್, ಮಹೀಂದ್ರಾ ಕಂಪನಿಗಳಿಗೆ ಯುದ್ಧ ಸಾಮಗ್ರಿ ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಸೂಚನೆ

  • ದಕ್ಷಿಣದಲ್ಲಿ ಅಧೀರನಿಗೆ ಭಾರೀ ಬೇಡಿಕೆ- ಪ್ರಭಾಸ್ ಸಿನಿಮಾದಲ್ಲಿ ಸಂಜಯ್ ದತ್

    ದಕ್ಷಿಣದಲ್ಲಿ ಅಧೀರನಿಗೆ ಭಾರೀ ಬೇಡಿಕೆ- ಪ್ರಭಾಸ್ ಸಿನಿಮಾದಲ್ಲಿ ಸಂಜಯ್ ದತ್

    ‘ಕೆಜಿಎಫ್ 2′ ಹಿಟ್ ಆದ್ಮೇಲೆ ಸಂಜಯ್ ದತ್‌ಗೆ (Sanjay Dutt) ಸೌತ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್‌ಗಿಂತ ದಕ್ಷಿಣದ ಸಿನಿಮಾಗಳಿಗೆ ನಟ ಹೆಚ್ಚು ಪ್ರಾಮುಖ್ಯತೆ ಕೊಡ್ತಿದ್ದಾರೆ. ಸದ್ಯ ಪ್ರಭಾಸ್ (Prabhas) ನಟನೆಯ ಹೊಸ ಸಿನಿಮಾದಲ್ಲಿ ಸಂಜಯ್ ದತ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:’ಸಿಕಂದರ್‌’ ಚಿತ್ರದ ಟ್ರೈಲರ್‌ನಲ್ಲಿ ಮಿಂಚಿದ ಕನ್ನಡಿಗ ಕಿಶೋರ್

    ಸೌತ್‌ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಸಂಜಯ್ ದತ್ ಬ್ಯುಸಿಯಾಗಿದ್ದಾರೆ. ಸದ್ಯ ‘ಅನಿಮಲ್’ (Animal) ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ನಲ್ಲಿ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಸಂಜಯ್ ದತ್ ಅವರು ಪ್ರಭಾಸ್‌ಗೆ ಅಣ್ಣನಾಗಿ ಬಣ್ಣ ಹಚ್ಚಲಿದ್ದಾರೆ ಎನ್ನಲಾದ ಸುದ್ದಿಯೊಂದು ಟಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ.

    ಸಂದೀಪ್ ಮಾರ್ಕ್ ಅನ್ನೋ ಪಾತ್ರಕ್ಕೆ ಸಂಜಯ್‌ರನ್ನು ಚಿತ್ರತಂಡ ಸಂಪರ್ಕಿಸಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ನಟನಾಗಲಿ, ಚಿತ್ರತಂಡದ ಕಡೆಯಿಂದ ಆಗಲಿ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಅದಷ್ಟೇ ಅಲ್ಲ, ಪ್ರಭಾಸ್ ನಟನೆಯ ರಾಜಾ ಸಾಬ್ ಸಿನಿಮಾದಲ್ಲೂ ಸಂಜಯ್ ದತ್ ವಿಲನ್ ಆಗಿ ನಟಿಸಿದ್ದಾರೆ ಎಂಬ ಸುದ್ದಿ ಕೂಡ ಇದೆ. ಚಿತ್ರತಂಡದ ಕಡೆಯಿಂದ ಅಫಿಷಿಯಲ್ ಅಪ್‌ಡೇಟ್ ಸಿಗುವವರೆಗೂ ಕಾದುನೋಡಬೇಕಿದೆ.

    ಇನ್ನೂ ಕನ್ನಡದ ನಟ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿ ಸಂಜಯ್ ದತ್ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ರಿಲೀಸ್‌ಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ಬ್ರೇಕಪ್ ಬೆನ್ನಲ್ಲೇ ಸಿನಿಮಾದಲ್ಲಿ ತಮನ್ನಾ ಆ್ಯಕ್ಟೀವ್- ಬಾಲಿವುಡ್‌ನಲ್ಲಿ ಬಿಗ್ ಚಾನ್ಸ್

    ಬ್ರೇಕಪ್ ಬೆನ್ನಲ್ಲೇ ಸಿನಿಮಾದಲ್ಲಿ ತಮನ್ನಾ ಆ್ಯಕ್ಟೀವ್- ಬಾಲಿವುಡ್‌ನಲ್ಲಿ ಬಿಗ್ ಚಾನ್ಸ್

    ಟಿ ತಮನ್ನಾ ಭಾಟಿಯಾ (Tamannaah Bhatia) ಇತ್ತೀಚೆಗೆ ವಿಜಯ್ ವರ್ಮಾ (Vijay Varma) ಜೊತೆ ಬ್ರೇಕಪ್ ಆದ ಬೆನ್ನಲ್ಲೇ ಸಿನಿಮಾದಲ್ಲಿ ಮತ್ತೆ ಆ್ಯಕ್ಟೀವ್ ಆಗಿದ್ದಾರೆ. ಸಿನಿಮಾದತ್ತ ನಟಿ ಫೋಕಸ್ ಮಾಡ್ತಿದ್ದಾರೆ. ಬಾಲಿವುಡ್‌ನಲ್ಲಿ ಬಿಗ್ ಪ್ರಾಜೆಕ್ಟ್‌ವೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ:ಅಪ್ಪು ಕಂದ ಒಂದ್ಸಲ ಬಂದು ನನ್ನ ನೋಡ್ಕೊಂದು ಹೋಗು: ಪುನೀತ್ ಬಗ್ಗೆ ಸೋದರತ್ತೆ ಮಾತು

    ಸದಾ ಹೊಸ ಬಗೆಯ ಪಾತ್ರದಲ್ಲಿ ಮಿಂಚೋ ತಮನ್ನಾಗೆ ಈಗ ಬಂಪರ್‌ ಆಫರ್‌ವೊಂದು ಸಿಕ್ಕಿದೆ. ಬಾಲಿವುಡ್‌ ನಟರಾದ ಅಜಯ್ ದೇವಗನ್ (Ajay Devgn) ಹಾಗೂ ಸಂಜಯ್ ದತ್ (Sanjay Dutt) ಜೊತೆ ನಟಿಸುವ ಅವಕಾಶ ತಮನ್ನಾಗೆ ಅರಸಿ ಬಂದಿದೆ. ‘ಮಿಷನ್ ಮಂಗಲ್’ ಡೈರೆಕ್ಟರ್ ಜಗನ್ ಶಕ್ತಿ ನಿರ್ದೇಶನದ ‘ರೇಂಜರ್’ ಚಿತ್ರಕ್ಕೆ ಅವರು ಆಯ್ಕೆಯಾಗಿದ್ದಾರೆ.

    ಇನ್ನೂ ಅಜಯ್ ದೇವಗನ್‌ಗೆ (Ajay Devgn) ವಿಲನ್ ಆಗಿ ‘ಕೆಜಿಎಫ್ 2’ ಖ್ಯಾತಿಯ ಸಂಜಯ್ ದತ್ (Sanjay Dutt) ಅಬ್ಬರಿಸಲಿದ್ದಾರೆ. ತಮನ್ನಾ ನಾಯಕಿಯಾಗಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಏಪ್ರಿಲ್ ಮೊದಲ ವಾರದಲ್ಲಿ ಶೂಟಿಂಗ್‌ ಶುರುವಾಗಲಿದೆ. ಚಿತ್ರೀಕರಣಕ್ಕೆ ಸ್ಟಾರ್‌ ನಟರೊಂದಿಗೆ ತಮನ್ನಾ ಕೂಡ ಭಾಗಿಯಾಗ್ತಿದ್ದಾರೆ. ಇನ್ನೂ 2026ರಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್‌ ಚಿತ್ರತಂಡಕ್ಕಿದೆ.

    ಇನ್ನೂ ಒಡೆಲಾ 2, ವೇದ ಸೇರಿದಂತೆ ಹಲವು ಸಿನಿಮಾಗಳು ನಟಿಯ ಕೈಯಲ್ಲಿವೆ. ತೆಲುಗು ಹಾಗೂ ಬಾಲಿವುಡ್ ನಟಿ ಸಕ್ರಿಯರಾಗಿದ್ದಾರೆ.

  • ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಜಯ್ ದತ್ ಭೇಟಿ

    ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಜಯ್ ದತ್ ಭೇಟಿ

    ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಅವರು ದಸರಾ ಹಬ್ಬದ ಸಂದರ್ಭದಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ನಯನತಾರಾ

    ಆಗಾಗ ವಿವಿಧ ದೇವಾಲಯಗಳಿಗೆ ಭೇಟಿ ನೀಡುವ ಸಂಜಯ್ ದತ್ ಇದೀಗ ಮಂಗಳೂರಿನ ಕಟೀಲು ದೇವಸ್ಥಾನಕ್ಕೆ (Kateel Durgaparameshwari Temple) ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ. ಹುಲಿ ಕುಣಿತದ ಊದು ಪೂಜೆಯಲ್ಲಿ ಸಂಜಯ್ ದತ್ ಭಾಗವಹಿಸಿದರು. ಈ ಪೂಜೆಯಲ್ಲಿ ಭಾಗವಹಿಸಲೆಂದೇ ಮುಂಬೈನಿಂದ ಮಂಗಳೂರಿಗೆ ನಟ ಆಗಮಿಸಿದ್ದಾರೆ. ಇನ್ನೂ ವೇಳೆ, ದೇವಸ್ಥಾನದ ವತಿಯಿಂದ ಸಂಜಯ್ ದತ್ ಅವರನ್ನು ದೇವರ ಶೇಷ ವಸ್ತ್ರ ಮತ್ತು ಪ್ರಸಾದ ನೀಡಿ ಗೌರವಿಸಿದರು. ಈ ವೇಳೆ, ಸಂಜಯ್ ದತ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು.

    ಪ್ಯಾನ್ ಇಂಡಿಯಾ ಸಿನಿಮಾಗಳಾದ ಕೆಜಿಎಫ್ 2, ಕೆಡಿ ಸಿನಿಮಾಗಳಲ್ಲಿ ಸಂಜಯ್ ದತ್ ನಟಿಸಿದ ಬಳಿಕ ಕರ್ನಾಟಕ ಮತ್ತು ಕನ್ನಡ ಸಿನಿಮಾಗಳ ಜೊತೆ ಉತ್ತಮ ನಂಟು ಹೊಂದಿದ್ದಾರೆ.

  • ಸಂಜಯ್ ದತ್ ಜೊತೆಗಿನ ಫೋಟೋ ಹಂಚಿಕೊಂಡ ಉಪ್ಪಿಯ ಟ್ರೋಲ್ ಹುಡುಗಿ ರೀಷ್ಮಾ

    ಸಂಜಯ್ ದತ್ ಜೊತೆಗಿನ ಫೋಟೋ ಹಂಚಿಕೊಂಡ ಉಪ್ಪಿಯ ಟ್ರೋಲ್ ಹುಡುಗಿ ರೀಷ್ಮಾ

    ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ (Reeshma Nanaiah) ಇದೀಗ ‘ಕೆಡಿ’ (KD Film) ಚಿತ್ರದ ಸೆಟ್‌ನಲ್ಲಿ ಬಾಲಿವುಡ್ ನಟ ಸಂಜಯ್ ದತ್ ಜೊತೆ ತೆಗೆದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೀವು ನನಗೆ ಸ್ಪೂರ್ತಿ ಎಂದು ನಟಿ ಬಣ್ಣಿಸಿದ್ದಾರೆ. ಇದನ್ನೂ ಓದಿ:ಶಾರುಖ್ ಖಾನ್ ಕಣ್ಣಿಗೆ ಗಾಯ- ಸರ್ಜರಿಗಾಗಿ ವಿದೇಶಕ್ಕೆ ಹೊರಟ ‘ಜವಾನ್’ ನಟ

    ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿ ರೀಷ್ಮಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೇ ಸಿನಿಮಾದಲ್ಲಿ ‘ಕೆಜಿಎಫ್ 2’ (KGF 2) ಖ್ಯಾತಿಯ ಸಂಜಯ್ ದತ್ (Sanjay Dutt) ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಕೆಡಿ’ ಸೆಟ್‌ನಲ್ಲಿ ತೆಗೆದ ವಿಶೇಷ ಫೋಟೋವೊಂದನ್ನು ಶೇರ್ ಮಾಡಿ, ಹುಟ್ಟುಹಬ್ಬದ ಶುಭಾಶಯಗಳು ‘ಢಾಕ್ ದೇವ’ ಎಂದು ನಟಿ ವಿಶ್ ಮಾಡಿದ್ದಾರೆ. ನಿಮ್ಮ ನಮ್ರತೆ ಮತ್ತು ದಯೆ ನಿಜವಾಗಿಯೂ ಸ್ಫೂರ್ತಿದಾಯಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಅಂದಹಾಗೆ, ಜು.29ರಂದು ಸಂಜಯ್ ದತ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹಾಗೆಯೇ ಅವರ ‘ಕೆಡಿ’ ಸಿನಿಮಾದ ಖಡಕ್ ಪೋಸ್ಟ್ ಕೂಡ ರಿವೀಲ್ ಆಗಿದೆ. ‘ಢಾಕ್ ದೇವ’ನಾಗಿ ಸಂಜಯ್ ದತ್ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾವನ್ನು ಜೋಗಿ ಪ್ರೇಮ್ ನಿರ್ದೇಶನ ಮಾಡಿದ್ದು, ಈ ವರ್ಷದ ಅಂತ್ಯದಲ್ಲಿ ‘ಕೆಡಿ’ ಚಿತ್ರ ರಿಲೀಸ್ ಆಗಲಿದೆ.

  • ಧ್ರುವ ಸರ್ಜಾ ಮುಂದೆ ‘ಢಾಕ್ ದೇವ’ನಾಗಿ ಬಂದ ಸಂಜಯ್ ದತ್- ರಿವೀಲ್ ಆಯ್ತು ‘ಕೆಡಿ’ ಲುಕ್

    ಧ್ರುವ ಸರ್ಜಾ ಮುಂದೆ ‘ಢಾಕ್ ದೇವ’ನಾಗಿ ಬಂದ ಸಂಜಯ್ ದತ್- ರಿವೀಲ್ ಆಯ್ತು ‘ಕೆಡಿ’ ಲುಕ್

    ಬಾಲಿವುಡ್ ನಟ ಸಂಜಯ್ ದತ್ (Sanjay Dutt) ‘ಕೆಜಿಎಫ್ 2’ (KGF 2) ಚಿತ್ರದ ಸಕ್ಸಸ್ ನಂತರ ಕನ್ನಡದ ಸಿನಿಮಾಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡ್ತಿದ್ದಾರೆ. ಹೀಗಿರುವಾಗ ಅವರ ಹುಟ್ಟುಹಬ್ಬದ ಪ್ರಯುಕ್ತ ‘ಕೆಡಿ’ ಸಿನಿಮಾದ ಲುಕ್ ರಿವೀಲ್ ಆಗಿದೆ. ‘ಢಾಕ್ ದೇವ’ನಾಗಿ ಅಧೀರ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.

    ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ‘ಕೆಡಿ’ ಸಿನಿಮಾದಲ್ಲಿ (KD Film) ಸಂಜಯ್ ದತ್ ಕೂಡ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ತಲೆಗೆ ಪೊಲೀಸ್ ಹ್ಯಾಟ್ ಧರಿಸಿ ವಿಭಿನ್ನ ಲುಕ್‌ನಲ್ಲಿ ನಟ ಢಾಕ್‌ ದೇವನಾಗಿ ಮಿಂಚಿದ್ದಾರೆ. ನಟನ ಲುಕ್‌ಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

     

    View this post on Instagram

     

    A post shared by KVN Productions (@kvn.productions)

    ಅಂದಹಾಗೆ, 70ರ ದಶಕದ ಗ್ಯಾಂಗ್‌ಸ್ಟರ್ ಕುರಿತ ನೈಜ ಕಥೆಯನ್ನೇ ಸಿನಿಮಾ ರೂಪದಲ್ಲಿ ತಂದಿದ್ದಾರೆ ನಿರ್ದೇಶಕ ಜೋಗಿ ಪ್ರೇಮ್. ರೆಟ್ರೋ ಲುಕ್‌ನಲ್ಲಿ ಈ ‘ಕೆಡಿ’ ಚಿತ್ರ ಮೂಡಿ ಬಂದಿದೆ.ಮಲ್ಟಿ ಸ್ಟಾರ್‌ಗಳು ಇರುವ ಈ ಸಿನಿಮಾ ಭಿನ್ನವಾಗಿ ಮೂಡಿ ಬಂದಿದೆ.

    ಧ್ರುವ ಸರ್ಜಾ, ಸಂಜಯ್ ದತ್ ಜೊತೆ ರೀಷ್ಮಾ ನಾಣಯ್ಯ, ರವಿಚಂದ್ರನ್, ಶಿಲ್ಪಾ ಶೆಟ್ಟಿ, ನೋರಾ ಫತೇಹಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಬಹುಭಾಷೆಗಳಲ್ಲಿ ಚಿತ್ರ ಮೂಡಿ ಬಂದಿದ್ದು, ಡಿಸೆಂಬರ್‌ನಲ್ಲಿ ರಿಲೀಸ್ ಆಗಲಿದೆ.

  • ಭರ್ಜರಿ ಆ್ಯಕ್ಷನ್ ಅವತಾರದಲ್ಲಿ ರಾಮ್ ಪೋತಿನೇನಿ ಎಂಟ್ರಿ- ‌’ಡಬಲ್ ಇಸ್ಮಾರ್ಟ್’ ಟೀಸರ್ ಔಟ್

    ಭರ್ಜರಿ ಆ್ಯಕ್ಷನ್ ಅವತಾರದಲ್ಲಿ ರಾಮ್ ಪೋತಿನೇನಿ ಎಂಟ್ರಿ- ‌’ಡಬಲ್ ಇಸ್ಮಾರ್ಟ್’ ಟೀಸರ್ ಔಟ್

    ಡೈರೆಕ್ಟರ್ ಪುರಿ ಜಗನ್ನಾಥ್ ಮತ್ತು ರಾಮ್ ಪೋತಿನೇನಿ (Ram Pothineni)  ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾ ‘ಡಬಲ್ ಇಸ್ಮಾರ್ಟ್’ (Double Ismart) ಚಿತ್ರದ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ‘ಇಸ್ಮಾರ್ಟ್ ಶಂಕರ್’ ಚಿತ್ರದ ಸೀಕ್ವೆಲ್ ಆಗಿರುವ ‘ಡಬಲ್ ಇಸ್ಮಾರ್ಟ್’ ಸಿನಿಮಾದ ಟೀಸರ್ ಇಂದು (ಮೇ 15) ರಾಮ್ ಪೋತಿನೇನಿ ಜನ್ಮದಿನಕ್ಕೆ ಬಿಡುಗಡೆ ಮಾಡಲಾಗಿದೆ. ಭರ್ಜರಿ ಆ್ಯಕ್ಷನ್ ಮೂಲಕ ರಾಮ್ ಅಬ್ಬರಿಸಿದ್ದಾರೆ. ಇದನ್ನೂ ಓದಿ:ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್ ಸೀಸನ್-2 ಟೀಸರ್ ಬಿಡುಗಡೆ

     

    View this post on Instagram

     

    A post shared by Puri Connects (@puriconnects)


    ಮಾಸ್ ಮತ್ತು ಆ್ಯಕ್ಷನ್ -ಪ್ಯಾಕ್ಡ್ ಟೀಸರ್‌ನಲ್ಲಿ ರಾಮ್ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಕಾವ್ಯಾ ಥಾಪರ್ ನಾಯಕಿಯಾಗಿ ನಟಿಸಿದ್ದು, ಸಂಜಯ್ ದತ್ ಖಳನಾಯಕನಾಗಿ ತೊಡೆ ತಟ್ಟಿದ್ದಾರೆ. 1.26 ಸೆಕೆಂಡ್ ಇರುವ ಟೀಸರ್‌ನಲ್ಲಿ ರಾಮ್ ಪೋತಿನೇನಿ ಮತ್ತು ಸಂಜಯ್ ದತ್ ಜುಗಲ್‌ಬಂದಿ ನೋಡುಗರಿಗೆ ಕಿಕ್ ಕೊಡ್ತಿದೆ.

    ಡಬಲ್ ಆಕ್ಷನ್, ಡಬಲ್ ಎನರ್ಜಿ ಮತ್ತು ಡಬಲ್ ಫನ್ ಕೊಡುವ ‘ಡಬಲ್ ಇಸ್ಮಾರ್ಟ್’ ಟೀಸರ್ ಕ್ಲೈಮ್ಯಾಕ್ಸ್ ಸೀನ್ಸ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಮೂಡಿ ಬಂದಿದೆ. ಮಣಿ ಶರ್ಮಾ ಸಂಗೀತ ಚಿತ್ರಕ್ಕಿದೆ. ಕ್ರೇಜಿ ಪ್ಯಾನ್ ಇಂಡಿಯನ್ ಪ್ರಾಜೆಕ್ಟ್ ‘ಡಬಲ್ ಇಸ್ಮಾರ್ಟ್’ ಸಿನಿಮಾವನ್ನು ಪುರಿ ಕನೆಕ್ಟ್ ಬ್ಯಾನರ್ ನಡಿ ಪುರಿ ಜಗನ್ನಾಥ್, ಚಾರ್ಮಿ ಕೌರ್ ನಿರ್ಮಾಣದಲ್ಲಿ ಚಿತ್ರ ಅದ್ಧೂರಿಯಾಗಿ ಮೂಡಿ ಬರುತ್ತಿದೆ