Tag: Sanjay Bangar

  • ನಿನ್ ಜೊತೆ ಮಲ್ಕೋಬೇಕು ಬಾ – ಟೀಂ ಇಂಡಿಯಾ ಮಾಜಿ ಆಟಗಾರ ಬಂಗಾರ್‌ ಪುತ್ರಿಗೆ ಕ್ರಿಕೆಟಿಗರಿಂದ ಲೈಂಗಿಕ ಕಿರುಕುಳ

    ನಿನ್ ಜೊತೆ ಮಲ್ಕೋಬೇಕು ಬಾ – ಟೀಂ ಇಂಡಿಯಾ ಮಾಜಿ ಆಟಗಾರ ಬಂಗಾರ್‌ ಪುತ್ರಿಗೆ ಕ್ರಿಕೆಟಿಗರಿಂದ ಲೈಂಗಿಕ ಕಿರುಕುಳ

    – ನಗ್ನ ಚಿತ್ರ ಕಳುಹಿಸಿ ಕಿರುಕುಳ
    – ಶಸ್ತ್ರ ಚಿಕಿತ್ಸೆಯ ಬಳಿ ಹೆಣ್ಣಾಗಿ ಬದಲಾದ ಬಂಗಾರ್‌ ಪುತ್ರ

    ಮುಂಬೈ: ಗಂಡಾಗಿದ್ದ ಬಳಿಕ ಹೆಣ್ಣಾಗಿ ಬದಲಾದ ಮಾಜಿ ಕ್ರಿಕೆಟಿಗ ಸಂಜಯ್‌ ಬಂಗಾರ್‌ (Sanjay Bangar) ಅವರ ಪುತ್ರಿ ಅನಯಾ ಬಂಗಾರ್ (Anaya Bangar) ಹಿರಿಯ ಕ್ರಿಕೆಟ್‌ ಆಟಗಾರರ ಬಗ್ಗೆ ಶಾಕಿಂಗ್‌ ಆರೋಪ ಮಾಡಿದ್ದಾರೆ.

    ಯೂಟ್ಯೂಬ್‌ ಚಾನೆಲ್‌ ಜೊತೆ ಮಾತನಾಡಿದ ಅನಯಾ ಹಿರಿಯ ಕ್ರಿಕೆಟಿಗರು ನನಗೆ ನಗ್ನ ಚಿತ್ರವನ್ನು ಕಳುಹಿಸಿ ಕಿರುಕುಳ ನೀಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಡ್ರೆಸ್ಸಿಂಗ್‌ ರೂಮ್‌ ಮಾಹಿತಿ ಲೀಕ್‌ – ಗಂಭೀರ್‌ ಆಪ್ತ ಸೇರಿ ನಾಲ್ವರು ಕೋಚಿಂಗ್‌ ಸಿಬ್ಬಂದಿಯನ್ನ ಕಿತ್ತೆಸೆದ ಬಿಸಿಸಿಐ

    ನಾನು ಭಾರತದಲ್ಲಿದ್ದಾಗ (India) ನನಗೆ ಆಗುತ್ತಿರುವ ನೋವಿನ ಬಗ್ಗೆ ಓರ್ವ ಆಟಗಾರನ ಬಳಿ ತಿಳಿಸಿದ್ದೆ. ಈ ವೇಳೆ ಆತ ಕಾರಿನಲ್ಲಿ ಹೋಗೋಣ. ನಿನ್ನ ಜೊತೆ ನಾನು ಮಲಗಲು ಬಯಸುತ್ತೇನೆ ಎಂದು ಹೇಳಿದ್ದ ಎಂದು ತಿಳಿಸಿದರು. ಆದರೆ ಅನಯಾ ಆ ಆಟಗಾರನ ಹೆಸರನ್ನು ಬಹಿರಂಗ ಮಾಡಲು ನಿರಾಕರಿಸಿದರು. ಸಂದರ್ಶನದಲ್ಲಿ ಅನಯಾ ಪುಣೆಯ ಯೆಶ್ವಿ ಕ್ರಿಕೆಟ್ ಅಕಾಡೆಮಿಯಲ್ಲಿ ಈ ಘಟನೆ ನಡೆದಿತ್ತು ಎಂದು ಸುಳಿವು ನೀಡಿದರು.

    ನನ್ನ ತಂದೆ ಒಬ್ಬ ಕ್ರಿಕೆಟಿಗ ಮತ್ತು ಟೀಮ್ ಇಂಡಿಯಾದ ತರಬೇತುದಾರರಾಗಿ ಪ್ರಸಿದ್ಧಿ ಪಡೆದಿದ್ದ ಕಾರಣ ನಾನು ನನ್ನ ಬಗ್ಗೆ ರಹಸ್ಯವನ್ನು ಕಾಪಾಡಿಕೊಳ್ಳಬೇಕಾಯಿತು. ಕ್ರಿಕೆಟ್ ಜಗತ್ತು ಅಭದ್ರತೆ ಮತ್ತು ಕೆಟ್ಟ ಪುರುಷರ ಪ್ರಾಬಲ್ಯದಿಂದ ತುಂಬಿದೆ ಎಂದು ಸಿಟ್ಟು ಹೊರ ಹಾಕಿದರು. ಇದನ್ನೂ ಓದಿ: ಕಾಫಿ ತೋಟದ ಸೊಬಗಿಗೆ ಮಾರುಹೋದ ಬ್ಯಾಡ್ಮಿಂಟರ್ ತಾರೆ – ಪಿವಿ ಸಿಂಧುಗೆ ಕೊಡಗಿನಲ್ಲಿ ಕಾಫಿ ತೋಟ ಖರೀದಿಸುವಾಸೆ!

    ಬಾಲ್ಯದಲ್ಲಿ ಇದ್ದಾಗಲೇ ತಪ್ಪಾದ ಲಿಂಗದಲ್ಲಿ ಜನಿಸಿದ್ದೀನಾ ಎಂದು ನನಗೆ ನಾನೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದೆ. 8 ಅಥವಾ 9 ವರ್ಷದಲ್ಲಿದ್ದಾಗ ನಾನು ನನ್ನ ತಾಯಿಯ ಕಪಾಟಿನಿಂದ ಬಟ್ಟೆಗಳನ್ನು ಆರಿಸಿ ಧರಿಸುತ್ತಿದ್ದೆ. ನಂತರ, ನಾನು ಕನ್ನಡಿಯಲ್ಲಿ ನೋಡಿಕೊಂಡು, “ನಾನು ಹುಡುಗಿ. ನಾನು ಹುಡುಗಿಯಾಗಲು ಬಯಸುತ್ತೇನೆ ಎಂದು ಹೇಳುತ್ತಿದ್ದೆ” ಎಂದು ತಿಳಿಸಿದರು.

    ಗಂಡಾಗಿದ್ದ ವೇಳೆ ಆರ್ಯನ್ ಬಂಗಾರ್‌  ಹಾರ್ಮೋನ್ ಬದಲಿ ಚಿಕಿತ್ಸೆ ಮತ್ತು ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆ ಮಾಡಿಸಿದ ಬಳಿಕ ಅನಯಾವಾಗಿ ಬದಲಾಗಿದ್ದಾರೆ. ಹೆಣ್ಣಾಗಿ ಬದಲಾಗುವ ಮೊದಲು ಯಶಸ್ವಿ ಜೈಸ್ವಾಲ್, ಮುಶೀರ್ ಖಾನ್ ಮತ್ತು ಸರ್ಫರಾಜ್ ಖಾನ್ ಅವರಂತಹ ಪ್ರಸಿದ್ಧ ಕ್ರಿಕೆಟಿಗರೊಂದಿಗೆ ಕ್ರಿಕೆಟ್ ಆಡಿದ್ದರು.

    ಅನಯಾ ಪ್ರಸ್ತುತ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವಾಸಿಸುತ್ತಿದ್ದಾರೆ. ಎಡಗೈ ಬ್ಯಾಟರ್‌ ಆಗಿರುವ ಅನಯಾ ಲೀಸೆಸ್ಟರ್‌ಶೈರ್‌ನಲ್ಲಿರುವ ಹಿಂಕ್ಲೆ ಕ್ರಿಕೆಟ್ ಕ್ಲಬ್‌ಗಾಗಿ ಆಡಿದ್ದರು. ನವೆಂಬರ್ 2023 ರಲ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆಟದ ಸಮಗ್ರತೆಯನ್ನು ರಕ್ಷಿಸಲು ಟ್ರಾನ್ಸ್ಜೆಂಡರ್ ಕ್ರೀಡಾಪಟುಗಳಿಗೆ ಮಹಿಳಾ ಕ್ರಿಕೆಟ್‌ ತಂಡದಲ್ಲಿ ಆಡಲು ಅವಕಾಶ ನೀಡುವುದಿಲ್ಲ ಎಂಬ ನಿರ್ಧಾರ ತೆಗೆದುಕೊಂಡಿತ್ತು.

  • ಹೊಸ ಕೋಚ್ ನೇಮಿಸಿದ RCB – ಮುಂದಿನ ಸಲ ಕಪ್ ನಮ್ದೆ ಅಂತಿದ್ದಾರೆ ಫ್ಯಾನ್ಸ್

    ಹೊಸ ಕೋಚ್ ನೇಮಿಸಿದ RCB – ಮುಂದಿನ ಸಲ ಕಪ್ ನಮ್ದೆ ಅಂತಿದ್ದಾರೆ ಫ್ಯಾನ್ಸ್

    ಮುಂಬೈ/ಬೆಂಗಳೂರು: 16 ಆವೃತ್ತಿ ಕಳೆದರೂ IPL ಟ್ರೋಫಿ (IPL Trophy) ಗೆಲ್ಲುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕೋಚಿಂಗ್ ಬಳಗವನ್ನ ಬದಲಾಯಿಸಿದ್ದು, ಜಿಂಬಾಬ್ವೆಯ ದಿಗ್ಗಜ ಕ್ರಿಕೆಟಿಗ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಜಿ ಮುಖ್ಯ ಕೋಚ್ ಆಂಡಿ ಫ್ಲವರ್ (Andy Flower) ಅವರನ್ನ ಆರ್‌ಸಿಬಿ ಮುಖ್ಯಕೋಚ್ ಆಗಿ ನೇಮಿಸಿಕೊಂಡಿದೆ.

    16 ಆವೃತ್ತಿಗಳಲ್ಲಿ ಮೂರ್ನಾಲ್ಕು ಬಾರಿ ಆರ್‌ಸಿಬಿ ತಂಡವನ್ನ ಪ್ಲೇ ಆಫ್ ತಲುಪಿಸುವಲ್ಲಿ ಯಶಸ್ವಿಯಾದರೂ ಒಂದು ಬಾರಿಯೂ ಟ್ರೋಫಿ ಗೆಲ್ಲದೇ ನಿರಾಸೆಗೊಂಡಿತ್ತು. 2023ರ 16ನೇ ಆವೃತ್ತಿಯ ಕೊನೆ ಪಂದ್ಯದಲ್ಲೂ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ್ದ ಆರ್‌ಸಿಬಿ ತಂಡ ಪ್ಲೇ ಆಫ್‌ನಿಂದ ಹೊರಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಕೋಚಿಂಗ್ ಬಳಗವನ್ನ RCB ಫ್ರಾಂಚೈಸಿ ಬದಲಾಯಿಸಿದೆ. ತಂಡದ ಕ್ರಿಕೆಟ್ ಡೈರೆಕ್ಟರ್ ಮೈಕ್ ಹೇಸನ್ (Mike Hesson) ಮತ್ತು ಮುಖ್ಯ ಕೋಚ್ ಸಂಜಯ್ ಬಾಂಗರ್ (Sanjay Bangar) ಜೊತೆಗಿನ ಒಪ್ಪಂದ ಅಂತ್ಯಗೊಳಿಸಿದೆ.

    ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಜಿಂಬಾಬ್ವೆ ತಂಡದ ಪರ 63 ಟೆಸ್ಟ್ ಮತ್ತು 213 ಏಕದಿನ ಕ್ರಿಕೆಟ್ ಪಂದ್ಯಗಳನ್ನ ಆಡಿದ್ದಾರೆ. ಜೊತೆಗೆ ಇಂಗ್ಲೆಂಡ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ತಂಡಗಳಿಗೆ ಕೋಚಿಂಗ್ ಮಾಡಿದ ಅನುಭವ ಹೊಂದಿದ್ದಾರೆ. 2010ರಲ್ಲಿ ಆಂಡಿ ಫ್ಲವರ್ ಕೋಚಿಂಗ್ ಬಲದೊಂದಿಗೆ ಇಂಗ್ಲೆಂಡ್ ತಂಡ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಗೆದ್ದಿತ್ತು. ಇದನ್ನೂ ಓದಿ: `ಮಹಿ’ಯಂತೆ ಸಕ್ಸಸ್‌ಫುಲ್ ಕ್ಯಾಪ್ಟನ್ ಆಗ್ತಾರಾ `ಪಾಂಡ್ಯ’?

    ಕಳೆದ ಎರಡು ವರ್ಷಗಳಿಂದ ಲಕ್ನೋ ಸೂಪರ್ ಜೈಂಟ್ಸ್ನ ಕೋಚ್ ಆಗಿದ್ದ ಅವರು, 2022 ರಲ್ಲಿ ಲಕ್ನೋ ಸೇರಿದ್ದರು. ಅವರು ಗೌತಮ್ ಗಂಭೀರ್ ಮತ್ತು ನಾಯಕ ರಾಹುಲ್ ಅವರೊಂದಿಗೆ ಕೆಲಸ ನಿರ್ವಹಿಸಿದ್ದಾರೆ.

    ಐಸಿಸಿ ಹಾಲ್ ಆಫ್ ಫೇಮರ್ ಮತ್ತು ಟಿ20 ವಿಶ್ವಕಪ್ ವಿಜೇತ ಕೋಚ್ ಆಂಡಿ ಫ್ಲವರ್ ಅವರನ್ನು ಆರ್‌ಸಿಬಿ ಪುರುಷರ ತಂಡದ ಮುಖ್ಯ ಕೋಚ್ ಆಗಿ ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಆರ್‌ಸಿಬಿ ಹೇಳಿಕೆಯಲ್ಲಿ ತಿಳಿಸಿದೆ.

    ಹಳೆ ಕೋಚ್ ಬಳಗಕ್ಕೆ ಗೇಟ್ ಪಾಸ್:
    2019ರಲ್ಲಿ ಆರ್‌ಸಿಬಿ ತಂಡ ನ್ಯೂಜಿಲೆಂಡ್‌ನ ಮೈಕ್ ಹೇಸನ್ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಮೊದಲ ವರ್ಷ ಮುಖ್ಯ ಕೋಚ್ ಆಗಿದ್ದ ಅವರನ್ನ ನಂತರ ಕ್ರಿಕೆಟ್ ಡೈರೆಕ್ಟರ್ ಮಾಡಿ, ಮುಖ್ಯ ಕೋಚ್ ಸ್ಥಾನಕ್ಕೆ ಸಂಜಯ್ ಬಾಂಗರ್ ಅವರನ್ನ ನೇಮಿಸಲಾಯಿತು. ಹೇಸನ್ ಮತ್ತು ಬಂಗಾರ್ ಜೋಡಿಯ ಸಾರಥ್ಯದಲ್ಲಿ 2020, 2021 ಮತ್ತು 2022ರ ಆವೃತ್ತಿಗಳಲ್ಲಿ ಸತತವಾಗಿ ಪ್ಲೇ ಆಫ್ ತಲುಪಿದ್ದ ಆರ್‌ಸಿಬಿ ಐಪಿಎಲ್ 2023 ಟೂರ್ನಿಯಲ್ಲಿ ನಾಕ್‌ಔಟ್ ಹಂತಕ್ಕೇರಲು ವಿಫಲವಾಯಿತು. 16ನೇ ಆವೃತ್ತಿಯಲ್ಲೂ ಉತ್ತಮ ತಂಡ ಹೊಂದಿದ್ದರೂ ಪ್ಲೇ ಆಫ್‌ನಿಂದ ಹೊರಗುಳಿದ ಕಾರಣ ಆರ್‌ಸಿಬಿ ಫ್ರಾಂಚೈಸಿ ಈ ನಿರ್ಧಾರಕ್ಕೆ ಬಂದಿದೆ. ಇದನ್ನೂ ಓದಿ: ಐಷಾರಾಮಿ ಬೇಡ, ಕನಿಷ್ಠ ಸೌಲಭ್ಯವನ್ನು ವೆಸ್ಟ್ ಇಂಡೀಸ್ ಮಾಡಿಲ್ಲ – ಹಾರ್ದಿಕ್ ಪಾಂಡ್ಯ ಗರಂ

    ಆಂಡಿ ಫ್ಲವರ್ ಯಾರು?
    2022ರ ಆವೃತ್ತಿಯಲ್ಲಿ ಐಪಿಎಲ್ ಪ್ರವೇಶಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ್ದ ಆಂಡಿ ಫ್ಲವರ್ (55), ಚೊಚ್ಚಲ ಆವೃತ್ತಿಯಲ್ಲೇ ಫ್ಲೇ ಆಫ್ ಪ್ರವೇಶಿಸುವಂತೆ ಮಾಡಿದ್ದರು. 2023ರ ತನ್ನ 2ನೇ ಆವೃತ್ತಿಯಲ್ಲೂ ಕೆ.ಎಲ್ ರಾಹುಲ್ ಸಾರಥ್ಯದ ಲಕ್ನೋ ತಂಡ ಪ್ಲೇ-ಆಫ್ ಎಂಟ್ರಿ ಕೊಟ್ಟಿತ್ತು. 2022ರಲ್ಲಿ ಎಲ್‌ಎಸ್‌ಜಿ ತಂಡ ಸೇರಿದ್ದ ಫ್ಲವರ್, ಮೆಂಟರ್ ಗೌತಮ್ ಗಂಭೀರ್ ಜೊತೆಗೂಡಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇನ್ನೂ ಲಕ್ನೋ ತಂಡ ಆಸ್ಟ್ರೇಲಿಯಾದ ಮಾಜಿ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರನ್ನ ತನ್ನ ನೂತನ ಮುಖ್ಯ ಕೋಚ್ ಆಗಿ ತೆಗೆದುಕೊಂಡಿದೆ. ಆರ್‌ಸಿಬಿ ಮುಖ್ಯಕೋಚ್ ತೆಗೆದುಕೊಂಡಿರುವುದಕ್ಕೆ ಫ್ಲವರ್ ಸಂತಸ ವ್ಯಕ್ತಪಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆರ್‌ಸಿಬಿ ಮುಖ್ಯ ಕೋಚ್ ಆಗಿ ಸಂಜಯ್‌ ಬಂಗಾರ್‌ ಆಯ್ಕೆ

    ಆರ್‌ಸಿಬಿ ಮುಖ್ಯ ಕೋಚ್ ಆಗಿ ಸಂಜಯ್‌ ಬಂಗಾರ್‌ ಆಯ್ಕೆ

    ಬೆಂಗಳೂರು: ಟೀಂ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.

    ಮೈಕ್ ಹೆಸ್ಸನ್ ಅವರ ಸ್ಥಾನವನ್ನು ಸಂಜಯ್‌ ಬಂಗಾರ್ ತುಂಬಲಿದ್ದಾರೆ. ಹೆಸ್ಸನ್‌ ಅವರು ತಂಡದ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕರಾಗಿ ಜೊತೆಗಿರಲಿದ್ದಾರೆ. ಆಸ್ಟ್ರೇಲಿಯಾದ ಸೈಮನ್‌ ಕ್ಯಾಟಿಚ್‌ ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅವರ ಸ್ಥಾನವನ್ನು ಮೈಕ್‌ ಹೆಸ್ಸನ್‌ ತುಂಬಿದ್ದರು.

    ಸಂಜಯ್ ಅವರಿಗೆ ಅಭಿನಂದನೆಗಳು. ಕಠಿಣ ಮತ್ತು ದೃಢವಾದ ಆಯ್ಕೆ ವಿಧಾನವನ್ನು ಅನುಸರಿಸಿ ಸಂಜಯ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂದು ಮುಖ್ಯಸ್ಥ ಪ್ರಥಮೇಶ್ ಮಿಶ್ರಾ ಹೇಳಿದ್ದಾರೆ.

    ತಂಡದ ಸಾಮರ್ಥ್ಯವನ್ನು ಹೆಚ್ಚಿಸಲು ಸಂಜಯ್‌ ಬಂಗಾರ್‌ ಅವರ ಅನುಭವ ನೆರವಾಗಲಿದೆ ಎಂಬ ವಿಶ್ವಾಸವಿದೆ. ಈ ಆಯ್ಕೆಗೆ ಮತ್ತು ತಮ್ಮ ಹೊಸ ಅಧ್ಯಾಯ ಪ್ರಾರಂಭಿಸುತ್ತಿರುವ ಸಂಜಯ್‌ ಬಂಗಾರ್‌ ಅವರಿಗೆ ಶುಭ ಕೋರುತ್ತೇನೆ ಎಂದಿದ್ದಾರೆ.

    ಆರ್‌ಸಿಬಿಯಂಥ ಫ್ರಾಂಚೈಸಿಗೆ ಮುಖ್ಯ ಕೋಚ್‌ ಆಗಿ ಸೇವೆ ಸಲ್ಲಿಸುವುದು ದೊಡ್ಡ ಅವಕಾಶ ಮತ್ತು ಅದೊಂದು ಗೌರವ. ಐಪಿಎಲ್‌ ಹರಾಜು ಹರಾಜು ಮತ್ತು ಅದರ ನಂತರದ ಋತುವಿನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದೆ ಎಂದು ಬಂಗಾರ್‌ ಹೇಳಿದ್ದಾರೆ.

    ಯುಎಇಯಲ್ಲಿ ನಡೆದ ಐಪಿಎಲ್‌ ಎಲಿಮಿನೇಟರ್‌ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ಸೋತಿರುವ ಆರ್‌ಸಿಬಿ ಈಗ ಹೊಸ ನಾಯಕನಿಗಾಗಿ ಹುಡುಕಾಟ ನಡೆಸುತ್ತಿದೆ. ವಿರಾಟ್‌ ಕೊಹ್ಲಿ ಈಗಾಗಲೇ ನಾಯಕ ಸ್ಥಾನನದಿಂದ ಕೆಳಗೆ ಇಳಿದಿದ್ದಾರೆ. ಇದನ್ನೂ ಓದಿ: ಅಂತ್ಯವಾಯಿತು ಟೀಂ ಇಂಡಿಯಾದಲ್ಲಿ ಕೊಹ್ಲಿ, ಶಾಸ್ತ್ರಿ ಯುಗ

    ಸಂಜಯ್‌ ಬಂಗಾರ್‌ ಭಾರತದ ಪರ 12 ಟೆಸ್ಟ್‌ ಮತ್ತು 15 ಏಕದಿನ ಪಂದ್ಯವನ್ನು ಆಡಿದ್ದಾರೆ. 2008 ಮತ್ತು 2009ರ ಐಪಿಎಲ್‌ನಲ್ಲಿ ಡೆಕ್ಕನ್‌ ಚಾರ್ಜರ್ಸ್‌ ಮತ್ತು ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಪರ ಆಡಿದ್ದಾರೆ. 2013ರಲ್ಲಿ ನಿವೃತ್ತರಾದಾಗ ಎಲ್ಲ ಮಾದರಿಯಲ್ಲಿ ಒಟ್ಟು 33 ಟಿ20 ಪಂದ್ಯಗಳನ್ನು ಆಡಿದ್ದರು.

  • ಕಳಪೆ ಪ್ರದರ್ಶನ ನೀಡಿದ್ರೂ ರಾಹುಲ್ ಪರ ಬ್ಯಾಟ್ ಬೀಸಿದ ಬ್ಯಾಟಿಂಗ್ ಕೋಚ್

    ಕಳಪೆ ಪ್ರದರ್ಶನ ನೀಡಿದ್ರೂ ರಾಹುಲ್ ಪರ ಬ್ಯಾಟ್ ಬೀಸಿದ ಬ್ಯಾಟಿಂಗ್ ಕೋಚ್

    ಹೈದರಾಬಾದ್: ಟೀಂ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ಸತತವಾಗಿ ಬ್ಯಾಟಿಂಗ್‍ನಲ್ಲಿ ವೈಫಲ್ಯ ಅನುಭವಿಸುತ್ತಿದ್ದರೂ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಂಜಯ್ ಬಂಗರ್, ರಾಹುಲ್ ತಂಡ ಭರವಸೆಯ ಆಟಗಾರ ಎಂದು ಹೇಳಿದ್ದಾರೆ.

    ಸದ್ಯ ನಡೆಯುತ್ತಿರುವ ವಿಂಡೀಸ್ ವಿರುದ್ಧದ ಟೂರ್ನಿಯಲ್ಲಿ ರಾಹುಲ್ ಮೊದಲ ಪಂದ್ಯದಲ್ಲಿ ಕೇವಲ 4 ರನ್, 2ನೇ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದರು. ಇದರ ನಡುವೆಯೂ ರಾಹುಲ್ ಉತ್ತಮ ಆಟಗಾರ ಎಂದಿರುವ ಸಂಜಯ್ ಅವರು, ಯಾವುದೇ ಒಬ್ಬ ಆಟಗಾರ ತನ್ನದೇ ಶೈಲಿಯನ್ನು ಅಳವಡಿಸಿಕೊಳ್ಳುವ ಸಮಯದಲ್ಲಿ ಬೇರೆಯವರು ಮಾತನಾಡುವುದು ಸಾಮಾನ್ಯ. ನನ್ನ ಪ್ರಕಾರ ರಾಹುಲ್ ಒಬ್ಬ ಭರವಸೆಯ ಆಟಗಾರನಾಗಿದ್ದು, ತಂಡದಲ್ಲಿ ಮಹತ್ವದ ಸ್ಥಾನ ಪಡೆದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಟೆಸ್ಟ್ ಪಂದ್ಯಗಳನ್ನು ಆಡುವ ವೇಳೆ ರಾಹುಲ್ ತಮ್ಮ ಬ್ಯಾಟಿಂಗ್ ಶೈಲಿಯಲ್ಲಿ ಬದಲಾವಣೆ ಮಾಡುವ ಅವಶ್ಯಕತೆ ಇದೆ. ಅದರಲ್ಲೂ ಇಂತಹ ವಿಚಾರದಲ್ಲಿ ಟೀಕೆಗಳು ಕೇಳಿ ಬಂದಾಗ ಅದರತ್ತ ಗಮನ ಹರಿಸಬೇಕಾಗುತ್ತದೆ. ಆದರೆ ರಾಹುಲ್ ಬ್ಯಾಟಿಂಗ್ ಶೈಲಿಯ ತಂತ್ರಗಳಲ್ಲಿ ಲೋಪವಿದೆ ಎಂದು ಹೇಳಲು ಸಾಧ್ಯವಿಲ್ಲ. ಈ ಕುರಿತು ರಾಹುಲ್‍ರೊಂದಿಗೆ ಹೆಚ್ಚು ಬಾರಿ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.

    ರಾಹುಲ್ ಸಮರ್ಥನೆಗೆ ಸೂಕ್ತ ಉದಾಹಣೆ ನೀಡಿರುವ ಸಂಜಯ್ ಅವರು, 2017ರ ಆಸೀಸ್ ಪ್ರವಾಸವನ್ನು ಗಮನಿಸಿದರೆ ಭಾರತದ ತಂಡಕ್ಕೆ ಹೆಚ್ಚು ಸವಾಲಿನಿಂದ ಕೂಡಿತ್ತು. ಆದರೆ ಈ ಟೂರ್ನಿಯಲ್ಲಿ ರಾಹುಲ್ 6 ಅರ್ಧಶತಕ ಸಿಡಿಸಿ ಉತ್ತಮ ಪ್ರದರ್ಶನ ನೀಡಿದ್ದರು. ರಾಹುಲ್ ಉತ್ತಮ ಭವಿಷ್ಯವನ್ನು ಹೊಂದಿದ್ದಾರೆ ಎಂದು ಆಶ್ವಾಸನೆ ವ್ಯಕ್ತಪಡಿಸಿದ್ದಾರೆ. ಆದರೆ ರಾಹುಲ್ ವೈಫಲ್ಯ ಮುಂದುವರಿದರೆ ಅವರ ಆಯ್ಕೆ ಕುರಿತು ನಿಖರ ಉತ್ತರ ನೀಡಿದ ಸಂಜಯ್ ಅವರು, ಟೀಂ ಮ್ಯಾನೇಜ್‍ಮೆಂಟ್ ದೃಷ್ಟಿಯಲ್ಲಿ ಯಾರು ತಂಡಕ್ಕೆ ಗೆಲುವು ತಂದುಕೊಡುತ್ತಾರೋ ಅವರ ಆಯ್ಕೆಯತ್ತ ಗಮನಹರಿಸಲಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಟೀಂ ಇಂಡಿಯಾದ ಬ್ಯಾಟಿಂಗ್, ಫೀಲ್ಡಿಂಗ್ ಕೋಚ್‍ಗೆ 15 ಲಕ್ಷ ರೂ. ಸಂಬಳ!

    ಟೀಂ ಇಂಡಿಯಾದ ಬ್ಯಾಟಿಂಗ್, ಫೀಲ್ಡಿಂಗ್ ಕೋಚ್‍ಗೆ 15 ಲಕ್ಷ ರೂ. ಸಂಬಳ!

    ಮುಂಬೈ: ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರು ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರಿಗೆ ಪ್ರತಿ ತಿಂಗಳು 15 ಲಕ್ಷ ರೂ. ಸಂಬಳವನ್ನು ಬಿಸಿಸಿಐ ನಿಗದಿ ಮಾಡಿದೆ.

    ಇಲ್ಲಿಯವರೆಗೆ ಬಂಗಾರು ಮತ್ತು ಶ್ರೀಧರ್ ಅವರಿಗೆ ಪ್ರತಿ ತಿಂಗಳು 10 ಲಕ್ಷ(ಇಂಡಿಯನ್ ಪ್ರೀಮಿಯರ್ ಲೀಗ್‍ನ 2 ತಿಂಗಳು ಹೊರತು ಪಡಿಸಿ 10 ತಿಂಗಳ ಕಾಲ, ಒಂದು ವರ್ಷಕ್ಕೆ 1 ಕೋಟಿ)ರೂ. ಸಂಬಳವನ್ನು ಪಡೆಯುತ್ತಿದ್ದರು.

    ಎರಡು ವರ್ಷಗಳ ಕಾಲ ಹಿರಿಯರ ತಂಡದ ಜೊತೆ ಇದ್ದ ಇವರು ಸಂಬಳವನ್ನು ಹೆಚ್ಚಳ ಮಾಡುವಂತೆ ಈ ಹಿಂದೆಯೇ ಮನವಿ ಸಲ್ಲಿಸಿದ್ದರು. ಆದರೆ ಈಗ ಈ ಮನವಿ ಪುರಸ್ಕೃತವಾಗಿದ್ದು ಶೇ.50 ರಷ್ಟು ಸಂಬಳ ಏರಿಕೆಯಾಗಿದೆ.

    ಈ ಹಿಂದೆ ಇದ್ದ ಬಿಸಿಸಿಐ ಆಡಳಿತ ಮಂಡಳಿ ಶೇ.100 ರಷ್ಟು ಸಂಬಳ ಏರಿಕೆಯ ಪ್ರಸ್ತಾಪನ್ನು ಒಪ್ಪಿತ್ತು. ಆದರೆ ಕಳೆದ ತಿಂಗಳು ಶೇ.25ರಷ್ಟು ಸಂಬಳ ಏರಿಸಲು ಬಿಸಿಸಿಐ ನಿರ್ಧರಿಸಿತ್ತು. ಬಿಸಿಸಿಐ ಈ ನಿರ್ಧಾರಕ್ಕೆ ಸಿಬ್ಬಂದಿಯಿಂದ ವಿರೋಧ ವ್ಯಕ್ತವಾಗಿತ್ತು. ಈಗ ಕೋಚ್ ಅನಿಲ್ ಕುಂಬ್ಳೆ ಸುಪ್ರೀಂ ನೇಮಿಸಿದ್ದ ಆಡಳಿತ ಸಮಿತಿಯ ಜೊತೆ ಸಭೆ ನಡೆಸಿ ಶೇ.50ರಷ್ಟು ಸಂಬಳವನ್ನು ಏರಿಸಿದ್ದಾರೆ.

    ಬುಧವಾರ ಆಟಗಾರರ ಸಂಭಾವನೆ ಮತ್ತು ಪಂದ್ಯದ ಶುಲ್ಕವನ್ನು ಆಡಳಿತ ಮಂಡಳಿ ದುಪ್ಟಟ್ಟು ಮಾಡಿತ್ತು. 2016ರ ಅಕ್ಟೋಬರ್ 1ರಿಂದ ಪರಿಷ್ಕೃತ ಸಂಭಾವನೆ ಮತ್ತು ಶುಲ್ಕ ಜಾರಿಗೆ ಬರಲಿದೆ.

    ಎಷ್ಟಿತ್ತು? ಈಗ ಎಷ್ಟು ಆಗಿದೆ?
    `ಎ’ ದರ್ಜೆಯಲ್ಲಿರುವ ಆಟಗಾರರು ಈ ಮೊದಲು ಕೋಟಿ ರೂ. ಪಡೆಯುತ್ತಿದ್ದರೆ ಈU ಆ ಮೊತ್ತವು 2 ಕೋಟಿ ರೂ.ಗೆ ಏರಿಕೆಯಾಗಿದೆ. ಬಿ ದರ್ಜೆ ಮತ್ತು ಸಿ ದರ್ಜೆಗಳ ಆಟಗಾರರು ಕ್ರಮವಾಗಿ 50 ಲಕ್ಷ ರೂ. ಮತ್ತು 25 ಲಕ್ಷ ರೂ. ಪಡೆಯುತ್ತಿದ್ದರು. ಅವರು ಇನ್ನು ಮುಂದೆ ಕ್ರಮವಾಗಿ 1 ಕೋಟಿ ರೂ. ಮತ್ತು 50 ಲಕ್ಷ ರೂ. ಹಣವನ್ನು ಪಡೆಯಲಿದ್ದಾರೆ.

    ಟೆಸ್ಟ್ ಪಂದ್ಯದಲ್ಲಿ ಆಡುವ ಆಟಗಾರರು ಶುಲ್ಕವನ್ನು 7.50 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸಲಾಗಿದ್ದರೆ, ಏಕದಿನ ಮತ್ತು ಟ್ವೆಂಟಿ 20 ಪಂದ್ಯಗಳಲ್ಲಿ ಆಡುವವರ ಶುಲ್ಕವನ್ನು ಕ್ರಮವಾಗಿ 6 ಲಕ್ಷ ರೂ. ಮತ್ತು 3 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.

    ಎ ದರ್ಜೆ:
    ವಿರಾಟ್ ಕೊಹ್ಲಿ, ಮಹೇಂದ್ರಸಿಂಗ್ ಧೋನಿ, ಆರ್. ಆಶ್ವಿನ್, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ರವೀಂದ್ರ ಜಡೇಜ, ಮುರಳಿ ವಿಜಯ್.

    ಬಿ ದರ್ಜೆ:
    ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಉಮೇಶ್ ಯಾದವ್, ವೃದ್ಧಿಮಾನ್ ಸಹಾ, ಜಸ್‍ಪ್ರೀತ್ ಬೂಮ್ರಾ, ಯುವರಾಜ್ ಸಿಂಗ್.

    ಸಿ ದರ್ಜೆ :
    ಶಿಖರ್ ಧವನ್, ಅಂಬಟಿ ರಾಯುಡು, ಅಮಿತ್ ಮಿಶ್ರಾ, ಕೇದಾರ್ ಜಾಧವ್, ಯಜುವೇಂದ್ರ ಚಾಹಲ್, ಪಾರ್ಥಿವ್ ಪಟೇಲ್, ಜಯಂತ್ ಯಾದವ್, ಮನೀಷ್ ಪಾಂಡೆ, ಅಕ್ಷರ್ ಪಟೇಲ್, ಕರುಣ್ ನಾಯರ್, ಹಾರ್ದಿಕ್ ಪಾಂಡ್ಯ, ಆಶಿಶ್ ನೆಹ್ರಾ, ಮನದೀಪ್ ಸಿಂಗ್, ಧವಳ್ ಕುಲಕರ್ಣಿ, ಶಾರ್ದೂಲ್ ಠಾಕೂರ್, ರಿಷಭ್ ಪಂತ್.