Tag: sanjana

  • ಸಂಜನಾ ಬಲಿ ಪಡೆದ ಕಟ್ಟಡ ಕುಸಿತಕ್ಕೆ ಟ್ವಿಸ್ಟ್- ದುರಂತಕ್ಕೆ ಸಿಲಿಂಡರ್ ಸ್ಫೋಟ ಕಾರಣವಲ್ಲ

    ಸಂಜನಾ ಬಲಿ ಪಡೆದ ಕಟ್ಟಡ ಕುಸಿತಕ್ಕೆ ಟ್ವಿಸ್ಟ್- ದುರಂತಕ್ಕೆ ಸಿಲಿಂಡರ್ ಸ್ಫೋಟ ಕಾರಣವಲ್ಲ

    ಬೆಂಗಳೂರು: ಮೂರು ವರ್ಷದ ಮಗು ಸಂಜನಾ ಸೇರಿದಂತೆ ಏಳು ಮಂದಿ ಅಮಾಯಕರನ್ನು ಬಲಿ ಪಡೆದಿದ್ದ ಬೆಂಗಳೂರಿನ ಈಜಿಪುರದಲ್ಲಿನ ಕಟ್ಟಡ ದುರಂತಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

    ದುರಂತಕ್ಕೆ ಸಿಲಿಂಡರ್ ಸ್ಫೋಟ ಕಾರಣವಲ್ಲ. ಬದಲಿಗೆ ಹಳೆಯದಾಗಿದ್ದರಿಂದ ಬಿಲ್ಡಿಂಗ್ ಕುಸಿದು ಬಿದ್ದಿದೆ ಅಂತ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹೇಳಿದೆ. ಆದ್ರೆ ಸಿಲಿಂಡರ್ ಸ್ಫೋಟವಾಗಿದೆ ಅಂತಾ ಸುಳ್ಳು ಹೇಳಿ ಮಾಲೀಕರು ಪ್ರಕರಣವನ್ನು ಮುಚ್ಚಲು ಹುನ್ನಾರ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಜೆಸಿಬಿ ಕಾರ್ಯಾಚರಣೆ ವೇಳೆ ಕೇಳಿತು ಮಗು ಅಳೋ ಸದ್ದು – ಸಾವು ಗೆದ್ದು ಬಂದಳು 3 ವರ್ಷದ ಸಂಜನಾ

    ದೂರು ಕೊಟ್ಟ ಮೃತ ಕಲಾವತಿಯ ಮಗನಿಗೆ ಧಮ್ಕಿ ಹಾಕಿದ್ದು ಕೇಸ್ ವಾಪಸ್ ಪಡೆಯುವಂತೆ ಒತ್ತಡ ಹೇರಿದ್ದಾರೆ. ಜೊತೆಗೆ ಕಾಸು ಮಾಡಲು ಇದೇ ಟೈಂ ಅಂತ ಭಾವಿಸಿರುವ ಖಾಕಿಗಳು ಪ್ರಕರಣ ಮುಚ್ಚಿ ಹಾಕಲು 50 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆಂಬ ಮಾಹಿತಿಯೊಂದು ತಿಳಿದುಬಂದಿದೆ.

    ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಪುಟ್ಟ ಕಂದಮ್ಮ ಸಂಜನಾ ಪಕ್ಕದಲ್ಲೇ ಇದ್ದ ಟ್ರಾನ್ಸ್‍ಫಾರ್ಮರ್‍ನಲ್ಲಾದ ಶಾರ್ಟ್ ಸಕ್ರ್ಯೂಟ್‍ನಿಂದ ಸುಟ್ಟ ಗಾಯಕ್ಕೆ ಒಳಗಾಗಿದ್ಳು ಅಂತಾ ವರದಿ ಸ್ಪಷ್ಟಪಡಿಸಿದೆ. ಶೇಕಡಾ 60ರಷ್ಟು ಬೆಂದು ಹೋಗಿದ್ದ ಪುಟ್ಟ ಬಾಲಕಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಳು.

    ಇದನ್ನೂ ಓದಿ: ಬೆಂಗ್ಳೂರಲ್ಲಿ ಸಿಲಿಂಡರ್ ಸ್ಫೋಟದಿಂದ 2 ಅಂತಸ್ತಿನ ಮನೆ ಕುಸಿತ – ನಾಲ್ವರು ಸಾವು, ಅವಶೇಷದಡಿ ಗರ್ಭಿಣಿ

    ಏನಾಗಿತ್ತು?: ಅಕ್ಟೋಬರ್ 16ರ ಬೆಳಗ್ಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 2 ಅಂತಸ್ತಿನ ಮನೆ ಕುಸಿದು ಏಳು ಜನರು ಮೃತಪಟ್ಟಿದ್ದರು. ಗ್ರೀನ್‍ವ್ಯೂ ಹೋಟೆಲ್ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ಬೆಳಗ್ಗೆ 7.10ಕ್ಕೆ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ಸುಮಾರು 7.15ಕ್ಕೆ ಕಟ್ಟಡ ಕುಸಿದಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಅಗ್ನಿಶಾಮಕ ದಳ ಸಿಬ್ಬಂದಿಯ ಮೇಲೂ ಗೋಡೆ ಕುಸಿದಿದ್ದು ಸುರೇಶ್, ಸುಬಾನ್, ಸೋಮಶೇಖರ್ ಎಂಬವರು ಗಾಯಗೊಂಡಿದ್ದರು. ಸುಮಾರು 20 ವರ್ಷ ಹಳೆಯ ಕಟ್ಟಡ ಇದಾಗಿದ್ದು, ಬ್ಯಾಚುಲರ್ಸ್ ಸುಮಾರು 5-6 ವರ್ಷದಿಂದ ಈ ಕಟ್ಟಡದಲ್ಲಿ ನೆಲೆಸಿದ್ದರು. ಘಟನೆಯಿಂದಾಗಿ ಅಕ್ಕಪಕ್ಕದ ಮನೆಗಳೂ ಕೂಡ ಬಿರುಕುಬಿಟ್ಟಿತ್ತು.

    ಇದನ್ನೂ ಓದಿ: ಸಾವು ಗೆದ್ದು ಬಂದಿದ್ದ ಸಂಜನಾ ಬದುಕುಳಿಯಲಿಲ್ಲ

     

  • ದರ್ಶನ್ ಅಭಿಮಾನಿಗಳಿಗೆ ಕ್ಷಮೆ ಕೋರಿದ ಬಿಗ್ ಬಾಸ್ ಸಂಜನಾ

    ದರ್ಶನ್ ಅಭಿಮಾನಿಗಳಿಗೆ ಕ್ಷಮೆ ಕೋರಿದ ಬಿಗ್ ಬಾಸ್ ಸಂಜನಾ

    ಬೆಂಗಳೂರು: ಇನ್ನು ಮುಂದೆ ಇದೆ ನಿನಗೆ ಹಬ್ಬ…! ಒಂದು ಆರು ತಿಂಗಳು ಗಾಂಧಿನಗರದ ಕಡೆ ತಲೆಹಾಕಿ ಮಲಗ್ಬೇಡ..! ಹೀಗೆ ನಾನಾ ರೀತಿಯ ಟ್ರಾಲ್‍ಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ಸಂಜನಾ ವಿರುದ್ಧ ಠೇಂಕರಿಸುತ್ತಿದ್ದು, ಇದೀಗ ನಟಿ ಸಂಜನಾ ಐ ಆಮ್ ಸಾರಿ ಅಂದಿದ್ದಾರೆ.

    ಅಷ್ಟಕ್ಕು ಬಿಗ್‍ಬಾಸ್ ಸಂಜನಾ ಮೇಲೆ ದರ್ಶನ್ ಅಭಿಮಾನಿಗಳು ಈ ರೀತಿ ಗದಾಪ್ರಹಾರ ಮಾಡಲು ಕಾರಣ ಖಾಸಗಿ ವಾಹಿನಿಯ ರಿಯಾಲಿಟಿ ಶೋಗೆ ಸಂಜನಾ ನೀಡಿದ ಸಂದರ್ಶನ.

    ಸ್ಟಾರ್ ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಡುವ ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ಸಂಜನಾಗೆ ಸ್ಯಾಂಡಲ್ ವುಡ್‍ನಲ್ಲಿ `ಬಿಲ್ಡಪ್’ ಅಂದ್ರೆ ಯಾರು ಎಂದು ಕೇಳಿದಾಗ ದರ್ಶನ್ ಎಂದು ಹೇಳಿದ್ದರು. ಈ ಉತ್ತರಕ್ಕೆ ದರ್ಶನ್ ಫ್ಯಾನ್ಸ್ ಕೆಂಡಾಮಂಡಲರಾಗಿದ್ದರು. ಸಂಜನಾ ಕ್ಷಮೆ ಕೆಳಬೇಕು ಇಲ್ಲದಿದ್ರೆ ಪರಿಸ್ಥಿತಿ ನೆಟ್ಟಗಿರೋದಿಲ್ಲ ಎಂದು ಗುಡುಗಿದ್ದರು.

    ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಜನಾ ವಿರುದ್ಧ ತೀವ್ರ ಖಂಡನೆ ವ್ಯಕ್ತವಾದ ಬಳಿಕ ನಟಿ ವಿಡಿಯೋ ಮೂಲಕ ಕ್ಷಮೆ ಕೋರಿದ್ದಾರೆ.

    I Am Sorry.. ದರ್ಶನ್ ಸರ್ ಫ್ಯಾನ್ಸ್ ಗೆ ಅಥವಾ ಅವರಿಗೆ ಬೇಜಾರು ಮಾಡುವ ಯಾವ ಉದ್ದೇಶ ಇರಲಿಲ್ಲ. ಅಕುಲ್ ನನ್ನನ್ನು Rapid Fire Round ನಲ್ಲಿ ಬಿಲ್ಡಪ್ ಅನ್ನೋ ಪದ ಕೇಳಿದ್ರು. ನಾನು ಸ್ಪಷ್ಟವಾಗಿ ಹೇಳಿದ್ದೀನಿ. ಅವರ ಸಿನಿಮಾಗಳಲ್ಲಿ ತುಂಬಾ ಬಿಲ್ಡಪ್ ಇರತ್ತೆ ಅಂತ ಹೇಳಿದ್ದೀನಿ. ಅದು ಇಷ್ಟು ಸೀರಿಯಸ್ ಆಗತ್ತೆ ಅಂತ ಗೊತ್ತಿರಲಿಲ್ಲ. I Am Extremely Sorry.. ಬೇಜಾರು ಮಾಡೋ ಉದ್ದೇಶ ಇರಲಿಲ್ಲ. ನನ್ನಿಂದ ಬೇಜಾರಾಗಿದ್ದರೆ I Am Sorry..

    https://twitter.com/DarshanFanz/status/891260777650208769

  • ಭುವನ್ ತೊಡೆಯನ್ನು ಕಚ್ಚಿದ ಬಿಗ್‍ಬಾಸ್ ವಿನ್ನರ್ ಪ್ರಥಮ್

    ಭುವನ್ ತೊಡೆಯನ್ನು ಕಚ್ಚಿದ ಬಿಗ್‍ಬಾಸ್ ವಿನ್ನರ್ ಪ್ರಥಮ್

    ಬೆಂಗಳೂರು: ಬಿಗ್ ಬಾಸ್ ವಿನ್ನರ್ ಪ್ರಥಮ್ ಧಾರಾವಾಹಿ ಶೂಟಿಂಗ್ ವೇಳೆ ಭುವನ್ ತೊಡೆಯನ್ನು ಕಚ್ಚುವ ಮೂಲಕ ಮತ್ತೊಮ್ಮೆ ತಮ್ಮ ಹುಚ್ಚಾಟವನ್ನು ಪ್ರದರ್ಶನ ಮಾಡಿದ್ದಾರೆ.

    ಭುವನ್, ಸಂಜನಾ ಮತ್ತು ಪ್ರಥಮ್ ಖಾಸಗಿ ಚಾನೆಲ್‍ನ ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ. ಶನಿವಾರ ಧಾರಾವಾಹಿಯ ಕೊನೆಯ ಶೂಟಿಂಗ್ ದಿನವಾಗಿತ್ತು. ಶೂಟಿಂಗ್ ವೇಳೆ ಪ್ರಥಮ್ ಮತ್ತು ಭುವನ್ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಒಬ್ಬರ ಮೇಲೊಬ್ಬರ ಮೇಲೆ ಹಲ್ಲೆ ಮಾಡುವ ಪರಿಸ್ಥಿತಿ ತಲುಪಿತ್ತು. ಈ ವೇಳೆ ಪ್ರಥಮ್ ನೇರವಾಗಿ ಬಂದು ಭುವನ್‍ರ ತೊಡೆಯ ಭಾಗವನ್ನು ಕಚ್ಚಿ ಗಾಯಗೊಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಪ್ರಥಮ್, ನಾನು ಯಾರನ್ನು ಕಚ್ಚಿಲ್ಲ. ಸ್ಥಳದಲ್ಲಿ ಯಾವುದೋ ಒಂದು ನಾಯಿ ಕಚ್ಚಿದೆ. ಅವರು ನನ್ನನ್ನು ಒಂದು ರೀತಿ ನೋಡ್ತಾಯಿದ್ದರು. ಇದಕ್ಕೆ ನನಗೂ ಯಾವುದೇ ಸಂಬಂಧವಿಲ್ಲ. ಈ ಕುರಿತು ನಾನು ಪ್ರತಿಕ್ರಿಯೆ ನೀಡಲ್ಲ. ಭುವನ್ ಮತ್ತು ಸಂಜನಾ ಮಾಡುತ್ತಿರುವ ಆರೋಪಗಳೆಲ್ಲಾ ಸುಳ್ಳು, ಬೇಕಾದ್ರೆ ನಿರ್ದೇಶಕ ರಾಜೇಶ್ ಅವರನ್ನು ಸಂಪರ್ಕಿಸಿ. ಕೊನೆಗೆ ಇಲ್ಲಾ ಸಂಜನಾನೇ ಭುವನ್ ತೊಡೆಯ ಭಾಗವನ್ನು ಕಚ್ಚಿದ್ದಾರೆ ಎಂದು ದ್ವಂದ್ವ ಹೇಳಿಕೆಯನ್ನು ನೀಡಿ ಫೋನ್ ಕಟ್ ಮಾಡಿದ್ದಾರೆ.

    ಪ್ರಥಮ್ ಮತ್ತು ಭುವನ್ ನಡುವೆ ಜಗಳ ನಡೀತಾಯಿದ್ದಾಗ ನಾನು ಅಲ್ಲಿರಲಿಲ್ಲ, ಸೆಟ್ ಒಳಗಡೆ ನಾನು ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದೆ ಹಾಗಾಗಿ ನಾನು ಜಗಳ ನೋಡಿಲ್ಲ. ನಾನು ಹೊರ ಬಂದಾಗ ಭುವನ್ ಪ್ರಥಮ್ ಕತ್ತನ್ನು ಹಿಡಿದಿದ್ರು. ಇಬ್ಬರ ನಡುವೆ ಗಲಾಟೆ ನಡೆಯುತಿತ್ತು, ಕೂಡಲೇ ಪಕ್ಕದ ರೂಮಿನಲ್ಲಿ ಕರೆದುಕೊಂಡು ಹೋಗಿ ನೋಡಿದಾಗ ಭುವನ್ ತೊಡೆಯ ಭಾಗದಲ್ಲಿ ಹಲ್ಲಿನ ಗುರುತುಗಳಿದ್ದವು. ಈ ವೇಳೆ ನಾನು, ಭುವನ್ ಹಾಗೂ ವಿಶಾಲಮ್ಮ ಎಂಬವರು ಸಹ ಇದ್ದರು. ಭುವನ್ ಗೆ ಯಾವ ನಾಯಿಯೂ ಕಚ್ಚಿಲ್ಲ. ಪ್ರಥಮ್ ಕಚ್ಚಿದ್ದು ಎಂದು ಸೆಟ್‍ನಲ್ಲಿ ಎಲ್ರೂ ಹೇಳ್ತಾಯಿದ್ರು. ಪ್ರಥಮ್ ಯಾವಗಲೂ ಕೆಟ್ಟದಾಗಿ ಕಮೆಂಟ್, ಟಾಂಟ್ ಮಾಡ್ತಾಯಿದ್ದ ಎಂದು ನಟಿ ಸಂಜನಾ ತಿಳಿಸಿದರು.

    ಇದೊಂದು ದೊಡ್ಡ ಸ್ಟೋರಿ ಕಳೆದ ಮೂರು ತಿಂಗಳಿನಿಂದ ಪ್ರಥಮ್ ಟಾರ್ಚರ್ ಕೊಡುತ್ತಿದ್ದ. ಆದ್ರೆ ನಿನ್ನೆ ಧಾರಾವಾಹಿಯ ಲಾಸ್ಟ್ ಶಾಟ್ ನಡೀತಾಯಿತ್ತು. ಶೂಟಿಂಗ್‍ನಲ್ಲಿ ಸಂಜನಾ ಕೈ ಹಿಡಿದು ಮಾತನಾಡುವ ದೃಶ್ಯದ ಚಿತ್ರೀಕರಣ ನಡೀತಿತ್ತು. ಈ ವೇಳೆ ಪ್ರಥಮ್ ನನಗೆ ತುಂಬಾ ಟಾಂಟ್ ಕೊಡುತ್ತಿದ್ದ. ತುಂಬಾ ಚೀಪ್ ಆಗಿ ಪ್ರಥಮ್ ಮಾತನಾಡುತ್ತಿದ್ದ. ಇನ್ನೂ ಸಂಜನಾ ನಾನು ಇದ್ದಾಗ ಇಬ್ಬರ ಬಗ್ಗೆ ಕಮೆಂಟ್ ಕೊಡ್ತಿದ್ದ ಎಂದು ನಟ ಭುವನ್ ಆರೋಪಿಸಿದ್ದಾರೆ.

    ಆಗಿದ್ದೇನು?: ಶೂಟಿಂಗ್ ವೇಳೆ ಪ್ರಥಮ್ ಪದೇ ಪದೇ ನನ್ನ ಕಿವಿಯಲ್ಲಿ ಬಂದು ಕಿರುಚುತ್ತಿದ್ದ. ಹೀಗೆ ಮಾಡಬೇಡ ಎಂದು ಹೇಳಿದ್ರೂ ಪ್ರಥಮ್ ಪದೇ ಪದೇ ಕಿವಿಯ ಹತ್ರ ಕಿರುಚುವ ಮೂಲಕ ತೊಂದರೆ ಕೊಡುತ್ತಿದ್ದ. ಇದ್ರಿಂದ ನಾನು ಬೇಸರಗೊಂಡು ಪ್ರಥಮ್‍ನನ್ನು ತಳ್ಳಿದೆ. ಈ ವೇಳೆ ಸ್ಥಳದಲ್ಲಿದ್ದ ಸಿಬ್ಬಂದಿ ನನ್ನನ್ನು ಬಿಗಿಯಾಗಿ ಹಿಡಿದ್ರು. ಕೆಳಗೆ ಬಿದ್ದ ಪ್ರಥಮ್ ನೇರವಾಗಿ ಬಂದು ನನ್ನ ತೊಡೆಯನ್ನು ಕಚ್ಚಿ ಬಳಿಕ ಕಾರು ಹತ್ತಿ ಹೋಗಿಬಿಟ್ಟ. ಕೂಡಲೇ ನಾನು ಆಸ್ಪತ್ರೆಗೆ ಹೋಗಿ ಪೇನ್ ಕಿಲ್ಲರ್ ತೊಗೊಂಡಿದ್ದೇನೆ ಎಂದು ಘಟನೆ ಬಗ್ಗೆ ಭುವನ್ ವಿವರಿಸಿದ್ರು.

    ಭುವನ್‍ಗೆ ಕಚ್ಚಿದು ನಾಯಿ ಅಲ್ಲ, ಪ್ರಥಮ್. ಶನಿವಾರ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಜಗಳ ಆಡಿ ಸುಮ್ಮನಾಗಿ ಬಿಡ್ತಾರೆ ಅಂತ ನಾವು ಸುಮ್ಮನಿದೆ. ಆದ್ರೆ ಪ್ರಥಮ್ ಮತ್ತು ಭುವನ್ ಒಬ್ಬರ ಮೇಲೊಬ್ಬರು ಬಿದ್ದು ಜಗಳ ಮಾಡಲು ಪ್ರಾರಂಭಿಸಿದರು. ನೋಡ ನೋಡುತ್ತಿದ್ದಂತೆ ಪ್ರಥಮ್ ಭುವನ್‍ರನ್ನು ಕಚ್ಚಿ ಗಾಯಗೊಳಿಸಿದರು. ಪ್ರಥಮ್ ಯಾವಗಲೂ ಭುವನ್ ಮತ್ತು ಸಂಜನಾ ಬಗ್ಗೆ ತುಂಬ ಕೆಟ್ಟದಾಗಿ ಕಮೆಂಟ್ ಮತ್ತು ಟಾಂಟ್ ಮಾಡುತ್ತಿದ್ದರು ಎಂದು ಧಾರವಾಹಿ ಸಹ ನಿರ್ದೇಶಕ ಓಂಕಾರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಈ ಸಂಬಂಧ ಭುವನ್ ನಗರದ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಥಮ್ ವಿರುದ್ಧ ದೂರು ದಾಖಲಿಸಿದ್ದಾರೆ.

     

     

  • ದಂಡುಪಾಳ್ಯ 2 ಸಿನಿಮಾ ತಂಡದ ವಿರುದ್ಧ ಹುಚ್ಚ ವೆಂಕಟ್ ಆಕ್ರೋಶ

    ದಂಡುಪಾಳ್ಯ 2 ಸಿನಿಮಾ ತಂಡದ ವಿರುದ್ಧ ಹುಚ್ಚ ವೆಂಕಟ್ ಆಕ್ರೋಶ

    ಬೆಂಗಳೂರು: ನಟಿ ಸಂಜನಾ ಬೆತ್ತಲಾಗಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಕ್ಕೆ ಹುಚ್ಚ ವೆಂಕಟ್ ಗರಂ ಆಗಿ ದಂಡುಪಾಳ್ಯ ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ವಾ? ಈ ರೀತಿ ಚಿತ್ರವನ್ನು ನಿರ್ಮಾಣ ಮಾಡುವುದು ಎಷ್ಟು ಸರಿ ಎಂದು ಹುಚ್ಚ ವೆಂಕಟ್ ಪ್ರಶ್ನಿಸಿದ್ದಾರೆ.

    ಹೆಣ್ಣು ಮಕ್ಕಳನ್ನು ಬೆತ್ತಲುಗೊಳಿಸಿ ಚಿತ್ರೀಕರಣ ನಡೆಸಿದ್ದು ಸರಿಯಲ್ಲ. ಕಾವೇರಿಗಾಗಿ ಹೇಗೆ ಕನ್ನಡಿಗರು ಒಂದಾಗುತ್ತಾರೋ ಅದೇ ರೀತಿಯಾಗಿ ಈ ವಿಚಾರದಲ್ಲಿ ಒಂದಾಗಿ ಪ್ರತಿಭಟಿಸಬೇಕು. ಹೆಣ್ಣು ಮಕ್ಕಳಿಗೆ ಆಗುವ ಅನ್ಯಾಯವನ್ನು ನಾನು ಸಹಿಸುವುದಿಲ್ಲ. ಈ ವಿಚಾರದಲ್ಲಿ ನಾನು ಜೈಲಿಗೆ ಹೋಗಲು ಸಿದ್ಧ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

    ಏನಿದು ವಿವಾದ?
    ಸೆನ್ಸಾರ್ ಮಂಡಳಿ ಸಂಜನಾ ಅಭಿನಯಿಸಿದ್ದ ಈ ದೃಶ್ಯಕ್ಕೆ ಕತ್ತರಿ ಹಾಕಿದೆ. ಹೀಗಾಗಿ ಸಿನಿಮಾದಲ್ಲಿ ಈ ದೃಶ್ಯ ಕಾಣಿಸುವುದಿಲ್ಲ. ರವಿಶಂಕರ್ ಪೊಲೀಸ್ ಆಫೀಸರ್ ಆಗಿದ್ದು ಸಂಜನಾಗೆ ಶಿಕ್ಷೆ ಕೊಡೋ ದೃಶ್ಯ ಇದಾಗಿದೆ. ನಿಜವಾಗಿಯೂ ಇದು ಸಿನಿಮಾಗೆ ಅವಶ್ಯಕಥೆ ಇತ್ತಾ ಅನ್ನೋದು ಒಂದು ಪ್ರಶ್ನೆಯಾದ್ರೆ? ಇನ್ನು ಸಂಜನಾ ಸಿನಿಮಾಗೆ ಈ ದೃಶ್ಯದ ಅವಶ್ಯಕಥೆ ಇತ್ತಾ? ನೈಜ ಘಟನೆ ಆಧಾರಿತ ಸಿನಿಮಾ ಆಗಿರೋದ್ರಿಂದ ಆ ಗ್ಯಾಂಗ್‍ಗೆ ರೀಯಲ್ಲಾಗಿ ಪೋಲೀಸರು ಈ ಶಿಕ್ಷೆ ಕೊಟ್ಟಿದ್ರಾ ಅನ್ನೊ ಪ್ರಶ್ನೆಗಳು ಕಾಡ್ತಿವೆ.

    ಈ ವಿಚಾರದ ಬಗ್ಗೆ ಸೆನ್ಸಾರ್ ಮಂಡಳಿ ನಮ್ಮಿಂದ ಯಾವುದೇ ದೃಶ್ಯ ಲೀಕ್‍ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.

     

     

  • ದಂಡುಪಾಳ್ಯ 2 ಚಿತ್ರತಂಡದ ವಿರುದ್ಧ ನಟಿ ಸಂಜನಾ ಸಿಟ್ಟು

    ದಂಡುಪಾಳ್ಯ 2 ಚಿತ್ರತಂಡದ ವಿರುದ್ಧ ನಟಿ ಸಂಜನಾ ಸಿಟ್ಟು

    ಬೆಂಗಳೂರು: ದಂಡುಪಾಳ್ಯ 2 ಚಿತ್ರದ ಪ್ರಮೋಷನ್‍ಗೆ ನಟಿ ಸಂಜನಾ ಗೈರು ಹಾಜರಾಗಿದ್ದಕ್ಕೆ ಚಿತ್ರತಂಡ ಅಪ್‍ಸೆಟ್ ಆಗಿದೆ.

    ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಚಿತ್ರ ಮೂಡಿಬಂದಿದ್ದು, ಹೈದ್ರಾಬಾದ್‍ನಲ್ಲಿ ನಡೆದ ಪ್ರಮೋಷನ್‍ಗೆ ಸಂಜನಾ ಗೈರಾಗಿದ್ರು. ದಂಡುಪಾಳ್ಯ ಪೋಸ್ಟರ್‍ಗಳಲ್ಲಿ ಸಂಜನಾ ಅವರನ್ನು ನಿರ್ಲಕ್ಷ್ಯ ಮಾಡಲಾಗಿದ್ದು, ಟ್ರೇಲರ್‍ನಲ್ಲೂ ಇದೇ ರೀತಿ ಆಗಿದೆ ಅಂತಾ ಸಂಜನಾ ಸಿಟ್ಟಾಗಿದ್ದಾರೆ.

    ಈ ಬಗ್ಗೆ ನಟಿ ಸಂಜನಾ ಅವರನ್ನು ಕೇಳಿದ್ರೆ, ಮಾತನಾಡೋಕೆ ಇಷ್ಟವಿಲ್ಲ. ಮೊದಲು ಲಕ್ಷ್ಮೀ ಮಂಚು ಅವರನ್ನು ಕೇಳಲಾಗಿತ್ತು, ಅವರು ಒಪ್ಪದಿದ್ದಕ್ಕೆ ನನಗೆ ಆಫರ್ ಕೊಟ್ರು. ಸಿನಿಮಾದಲ್ಲಿ ಪಾತ್ರಕ್ಕಿರುವ ಪ್ರಾಮುಖ್ಯತೆ ಹಾಗೂ ಉತ್ತಮ ಸಂಭಾವನೆಗಾಗಿ ಒಪ್ಪಿಕೊಂಡೆ. ದಂಡುಪಾಳ್ಯ 2 ಹಾಗೂ ಭಾಗ 3 ಒಟ್ಟಿಗೆ ಶೂಟಿಂಗ್ ಆಗಿದ್ದು, ನನ್ನ ಪಾತ್ರ ಎಷ್ಟರ ಮಟ್ಟಿಗೆ ಉಳಿಸಿದ್ದಾರೆ ಅನ್ನೋ ಬಗ್ಗೆ ಗೊಂದಲ ಆಗಿದೆ. ಚಿತ್ರದ ಟ್ರೇಲರ್ ನೋಡಿ ಬೇಸರ ಆಗಿದೆ ಎಂದಿದ್ದಾರೆ.

    ನನ್ನನ್ನು ಡಮ್ಮಿ ಮಾಡಿ ಪೂಜಾ ಗಾಂಧಿಯನ್ನು ಹೈಲೈಟ್ ಮಾಡಿರೋದಕ್ಕೆ ಪ್ರಮೋಷನ್‍ಗೆ ಬರಲ್ಲ ಅಂತ ಸಂಜನಾ ಚಿತ್ರತಂಡಕ್ಕೆ ಹೇಳಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ.