Tag: sanjana

  • ಸಂಜನಾ ಪರಿಚಯವೇ ಪ್ರಶ್ನೆಗೆ ಥ್ಯಾಂಕ್ಯೂ, ಥ್ಯಾಂಕ್ಯೂ ಎಂದು ಹೇಳಿ ಹೊರಟ ಜಮೀರ್

    ಸಂಜನಾ ಪರಿಚಯವೇ ಪ್ರಶ್ನೆಗೆ ಥ್ಯಾಂಕ್ಯೂ, ಥ್ಯಾಂಕ್ಯೂ ಎಂದು ಹೇಳಿ ಹೊರಟ ಜಮೀರ್

    ಬೆಂಗಳೂರು: ನಟಿ ಸಂಜನಾ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಶಾಸಕ ಜಮೀರ್ ಅಹ್ಮದ್ ಥ್ಯಾಂಕ್ಯೂ, ಥ್ಯಾಂಕ್ಯೂ ಎಂದು ಹೇಳಿ ಉತ್ತರಿಸದೇ ಹೋಗಿದ್ದಾರೆ. ಇದನ್ನೂ ಓದಿ: ನನಗೆ ಇನ್ನೂ ಮದುವೆಯಾಗಿಲ್ಲ, ನನ್ನ ಕಾರೆಕ್ಟರ್ ಬಗ್ಗೆ ಮಾತನಾಡಲು ಯಾರು – ಸಂಬರಗಿ ವಿರುದ್ಧ ಸಂಜನಾ ಕಿಡಿ

    ನಟಿ ಸಂಜನಾ ಇಂದು ಶಾಸಕ ಜಮೀರ್ ಬಳಿ ಪ್ರಶಾಂತ್ ಸಂಬರಗಿ ಅವರನ್ನು ಸುಮ್ಮನೇ ಬಿಡಬೇಡಿ ಕಣ್ಣೀರು ಹಾಕಿಕೊಂಡು ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ಪ್ರಶ್ನೆ ಮಾಡಿದ್ದಕ್ಕೆ, ನಾನು ಯಾವುದಕ್ಕೂ ಪ್ರತಿಕ್ರಿಯಿಸಲ್ಲ, ಉತ್ತರನೂ ಕೊಡಲ್ಲ ಎಂದು ಶಾಸಕ ಜಮೀರ್ ಹೇಳಿದ್ದಾರೆ.

    ನಾನು ಮಾತನಾಡಲ್ಲ, ನಾನು ಏನು ಮಾತನಾಡಲ್ಲ ಎಂದು ಸಂಜನಾ, ಪ್ರಶಾಂತ್ ಸಂಬರಗಿ ಬಗ್ಗೆ ಕೇಳಿದ್ದಕ್ಕೆ ಉತ್ತರ ಕೊಡಲಿಲ್ಲ. ಪದೇ ಪದೇ ಈ ಬಗ್ಗೆ ಕೇಳಿದರೂ ಥ್ಯಾಂಕ್ಯೂ ಥ್ಯೂಂಕ್ಯೂ ಎಂದು ಹೇಳಿ ಜಮೀರ್ ಕಾರನ್ನು ಹತ್ತಿ ಹೋಗಿದ್ದಾರೆ.

    ಜಮೀರ್ ಅಹಮದ್ ಸರ್ ದಯವಿಟ್ಟು ಪ್ರಶಾಂತ್ ಸಂಬರಗಿ ಅವರನ್ನು ಸುಮ್ಮನೇ ಬಿಡಬೇಡಿ. ಆ ಬೀದಿ ನಾಯಿ ನನ್ನ ಹಿಂದೆ ಯಾಕೆ ಬಿದ್ದಿದ್ದಾನೆ ಗೊತ್ತಿಲ್ಲ. ನಾನು ತುಂಬಾ ಕಷ್ಟಪಟ್ಟು ಮೇಲೆ ಬಂದ ಕಲಾವಿದೆ. ಆದರೆ ಇದರಲ್ಲಿ ನನ್ನ ತಪ್ಪು ಏನಿದೆ. ನಾನು ಸೆಲೆಬ್ರಿಟಿ ಆಗಿರೋದೆ ತಪ್ಪಾ. ನನಗೆ ತುಂಬಾ ಕಷ್ಟ ಆಗುತ್ತಿದೆ. ದಯವಿಟ್ಟು ಪ್ರಶಾಂತ್ ಸಂಬರಗಿಯನ್ನು ಬಿಡಬೇಡಿ ಎಂದು ಕೈ ಮುಗಿದು ಕಣ್ಣೀರು ಹಾಕಿದ್ದರು.

     

    2019ರ ಜುಲೈ 8 ರಂದು ಶ್ರೀಲಂಕಾದ ಕೊಲಂಬೋದಲ್ಲಿ ಸಂಜನಾ ಮತ್ತು ಜಮೀರ್ ಇದ್ದರು. ನಾನು ಸುಳ್ಳು ಹೇಳುತ್ತಿಲ್ಲ. ನೀವು ಜೂಜು ಮತ್ತು ಡ್ರಗ್ಸ್ ನಲ್ಲಿ ಭಾಗಿಯಾಗದೇ ಇದ್ದರೆ ನಿಮಗೆ ಹೆದರಿಕೆ ಯಾಕೆ ಎಂದು ಪ್ರಶಾಂತ್ ಸಂಬರಗಿ ಪ್ರಶ್ನಿಸಿದ್ದಾರೆ.

  • ನನಗೆ ಇನ್ನೂ ಮದುವೆಯಾಗಿಲ್ಲ, ನನ್ನ ಕಾರೆಕ್ಟರ್ ಬಗ್ಗೆ ಮಾತನಾಡಲು ಯಾರು – ಸಂಬರಗಿ ವಿರುದ್ಧ ಸಂಜನಾ ಕಿಡಿ

    ನನಗೆ ಇನ್ನೂ ಮದುವೆಯಾಗಿಲ್ಲ, ನನ್ನ ಕಾರೆಕ್ಟರ್ ಬಗ್ಗೆ ಮಾತನಾಡಲು ಯಾರು – ಸಂಬರಗಿ ವಿರುದ್ಧ ಸಂಜನಾ ಕಿಡಿ

    – ನಮ್ಮ ಅಮ್ಮಗೆ ಏನಾದ್ರೂ ಆದ್ರೆ, ನಾನು ಸತ್ತರೂ ಸಂಬರಗಿಯನ್ನ ಬಿಡಲ್ಲ
    – ನಾನು ಚಿಯರ್ ಗರ್ಲ್ ಅಲ್ಲ, ಚಪ್ಪಲಿ ತಕೊಂಡು ಹೊಡಿತ್ತೀನಿ
    – ಬೀದಿ ನಾಯಿ ನನ್ನ ಹಿಂದೆ ಯಾಕೆ ಬಿದ್ದಿದೆ ಗೊತ್ತಿಲ್ಲ

    ಬೆಂಗಳೂರು: ನಮ್ಮ ಅಮ್ಮನ ಹಾರ್ಟ್ ವೀಕ್, ಈಗಾಗಲೇ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಶಾಂತ್ ಸಂಬರಗಿ ಇನ್ನಾ ಮಾತನಾಡಿ ನಮ್ಮ ಅಮ್ಮಗೆ ಏನಾದರೂ ಆದರೆ ನಾನು ಸತ್ತೋದರೂ ಅವನನ್ನು ನಾನು ಬಿಡಲ್ಲ ಎಂದು ನಟಿ ಸಂಜನಾ ಕಣ್ಣೀರು ಹಾಕಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ನಟಿ ಸಂಜನಾ, ಕ್ಯಾಸಿನೋ ಕಾರ್ಯಕ್ರಮಕ್ಕೆ ನಾನು ಮುಖ್ಯ ಅತಿಥಿಯಾಗಿ ಹೋಗಿದ್ದೆ. ವಿವೇಕ್ ಒಬೇರಾಯ್ ನನ್ನ ಪಕ್ಕ ನಿಂತಿದ್ದರು, ಉಪೇಂದ್ರ ಸಹ ಭಾಗವಹಿಸಿದ್ದರು. ಎಲ್ಲಾ ರಾಜ್ಯಗಳಿಂದ 200 ಜನ ಪ್ರತಿನಿಧಿಸಿದ್ದರು. ಹೀಗಾಗಿ ಊಹಾಪೋಹಾಗಳನ್ನು ಮಾತನಾಡಬೇಡಿ. ನಮ್ಮ ಅಮ್ಮಗೆ ಎದೆ ನೋವು ಕಾಣಿಸಿಕೊಂಡಿದೆ. ಅವರಿಗೆ ಏನಾದರೂ ಆದರೆ ನಾನು ಬಿಡಲ್ಲ. ನಾನು ಒಂದು ಹೆಣ್ಣು, ನನಗೆ ಇನ್ನೂ ಮದುವೆಯಾಗಿಲ್ಲ. ನನ್ನ ಕಾರೆಕ್ಟರ್ ಬಗ್ಗೆ ಮಾತನಾಡಲು ಅವರು ಯಾರು ಎಂದು ಪ್ರಶ್ನಿಸಿ ಸಂಜನಾ ಆಕ್ರೋಶ ಹೊರ ಹಾಕಿದರು.

    ಜಮೀರ್ ಅವರು ಯಾರು ಅಂತಾನೇ ಗೊತ್ತಿಲ್ಲ. ಜಮೀರ್ ಅಹ್ಮದ್ ಸರ್ ದಯವಿಟ್ಟು ಪ್ರಶಾಂತ್ ಸಂಬರಗಿ ಅವರನ್ನು ಸುಮ್ಮನೇ ಬಿಡಬೇಡಿ. ಆ ಬೀದಿ ನಾಯಿ ನನ್ನ ಹಿಂದೆ ಯಾಕೆ ಬಿದ್ದಿದ್ದಾನೆ ಗೊತ್ತಿಲ್ಲ. ನಾನು ತುಂಬಾ ಕಷ್ಟಪಟ್ಟು ಮೇಲೆ ಬಂದ ಕಲಾವಿದೆ. ಆದರೆ ಇದರಲ್ಲಿ ನನ್ನ ತಪ್ಪು ಏನಿದೆ. ನಾನು ಸೆಲೆಬ್ರಿಟಿ ಆಗಿರೋದೆ ತಪ್ಪಾ. ನನಗೆ ತುಂಬಾ ಕಷ್ಟ ಆಗುತ್ತಿದೆ. ದಯವಿಟ್ಟು ಪ್ರಶಾಂತ್ ಸಂಬರಗಿಯನ್ನು ಬಿಡಬೇಡಿ ಎಂದು ಕೈ ಮುಗಿದು ಕಣ್ಣೀರು ಹಾಕಿದರು.

    ಮೊದಲಿಗೆ ‘ಗಂಡ-ಹೆಂಡತಿ’ ಸಿನಿಮಾ ಮಾಡಿ ಬಿಎಂಡಬ್ಲ್ಯೂ ಕಾರಿನಲ್ಲಿ ಹೇಗೆ ಓಡಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಅದು ಈಗ ಮುಚ್ಚಿ ಹೋಗಿದೆ. ಅವರಿಗೆ ಟೈಂ ಪಾಸ್ ಬೇಕು ಅಷ್ಟೇ. ರಾಹುಲ್ ಒಳ್ಳೆಯ ಹುಡುಗ, ಎಫ್ಐಆರ್‌ನಲ್ಲಿ ನನ್ನ ಹೆಸರು ಇಲ್ಲ. ಸಂಜನಾ ಡ್ರಗ್ಸ್ ನಲ್ಲಿದ್ದಾರೆ ಎಂದು ಹೇಳಲು ಯಾರಿಗೂ ಏನು ಅಧಿಕಾರ ಇಲ್ಲ. ಏನು ಸಾಕ್ಷ್ಯ ಇಲ್ಲದೆ ಮಾತನಾಡುತ್ತಿದ್ದಾರೆ. ಆದರೆ ನಾನು ತುಂಬಾ ಕಷ್ಟಪಟ್ಟು ಇಲ್ಲಿಯವರೆಗೂ ಹೆಸರು ಮಾಡಿಕೊಂಡು ಬಂದಿದ್ದೇನೆ. 50 ಸಿನಿಮಾಗಳನ್ನು ಮಾಡಿರುವ ಪಂಚಭಾಷಾ ತಾರೆ ನಾನು. ನನಗೆ ಅಗ್ಗದ ಪ್ರಚಾರ ಬೇಡ ಎಂದರು.

    ನನ್ನ ಅಮ್ಮಗೆ ಎದೆನೋವು ಕಾಣಿಸಿಕೊಂಡಿದೆ. ರಾತ್ರಿಯೆಲ್ಲಾ ಅಮ್ಮ ಮಲಗಿಲ್ಲ. ಅಮ್ಮನ ಹಾರ್ಟ್ ವೀಕ್, ಅವರಿಗೆ ಸರಿಯಾಗಿ ರಕ್ತ ಸಂಚಲನ ಆಗುತ್ತಿಲ್ಲ. ಈಗಾಗಲೇ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಶಾಂತ್ ಸಂಬರಗಿ ಇನ್ನಾ ಮಾತನಾಡಿ ನಮ್ಮ ಅಮ್ಮಗೆ ಏನಾದರೂ ಆದರೆ ನಾನು ಸತ್ತೋದರೂ ಅವನನ್ನು ನಾನು ಬಿಡಲ್ಲ ಎಂದು ಸಂಬರಗಿ ವಿರುದ್ಧ ವಾಗ್ದಾಳಿ ಮಾಡಿದರು.

    ನಾನು ಚಿಯರ್ ಗರ್ಲ್ ಅಲ್ಲ. ಚಪ್ಪಲಿ ತೆಗೆದುಕೊಂಡು ಹೊಡಿತ್ತೀನಿ. ಪ್ರಶಾಂತ್ ಸಂಬರಗಿ ಯಾರು ಅಂತನೇ ಗೊತ್ತಿಲ್ಲ. ಅವನ ನಂಬರ್ ಕೂಡ ಇಲ್ಲ. ಸುದ್ದಿಯಲ್ಲಿರುವವರ ಬಗ್ಗೆ ಊಹಾಪೋಹ ಮಾತನಾಡುತ್ತಾನೆ. ಅವನು ಇಂಡಸ್ಟ್ರಿಯಲ್ಲಿ ಇಲ್ಲ. ರಾಹುಲ್ ನನ್ನ ಸ್ವಂತ ಅಣ್ಣನ ತರ, ಅವನು ಒಳ್ಳೆಯ ಹುಡುಗ. ರಾಹುಲ್ ಆಚೆ ಬಂದರೆ ಸಾಕು. ಪೊಲೀಸ್ ಅವರು ಬಂದರೆ ನಾನೇ ಗೌರವ ಕೊಟ್ಟು ಹೋಗುತ್ತೇನೆ. ನನಗೆ ಭಾರತದ ಕಾನೂನಿನ ಮೇಲೆ ಗೌರವ ಇದೆ ಎಂದು ಸಂಜನಾ ಹೇಳಿದರು.

  • ಸಂಜನಾ ವಿರುದ್ಧ 4 ಕೋಟಿ ರೂ. ಮಾನನಷ್ಟ ಮೊಕದ್ದಮೆ

    ಸಂಜನಾ ವಿರುದ್ಧ 4 ಕೋಟಿ ರೂ. ಮಾನನಷ್ಟ ಮೊಕದ್ದಮೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾ ಮತ್ತು ಬಾಲಿವುಡ್ ನಿರ್ಮಾಪಕಿ ವಂದನಾ ಗಲಾಟೆ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಇದೀಗ ವಂದನಾ 4 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯನ್ನು ಸಂಜನಾ ವಿರುದ್ಧ ದಾಖಲು ಮಾಡಿದ್ದಾರೆ.

    ಸಂಜನಾ ನನ್ನ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಿದ್ದಾರೆ. ಆವತ್ತು ಅವರು ಮಾಡಿದ ಗಲಾಟೆಯಿಂದ ನನ್ನ ಕಣ್ಣಿನ ಮೇಲೆ ಗಾಯವಾಗಿದೆ. ಅದಕ್ಕೆ ಸಂಬಂಧಿಸಿದಂತೆ ನಾನು ದೂರು ನೀಡಿದ್ದೀನಿ. ದೂರಿನ ಬಗ್ಗೆ ಸುದ್ದಿ ಪ್ರಸಾರವಾದಾಗ ಸಂಜನಾ ನನ್ನ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಿದ್ದಾರೆ. ನನ್ನ ವೈಯಕ್ತಿಕ ವಿಚಾರಗಳನ್ನೆಲ್ಲ ಸಾರ್ವಜನಿಕವಾಗಿ ಬಹಿರಂಗವಾಗಿ ಮಾತನಾಡಿದ್ದಾರೆ. ಇದರಿಂದ ನನಗೆ ಅವಮಾನವನ್ನೂ ಮಾಡಿದ್ದಾರೆ ಎಂದು ನಾಲ್ಕು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದನ್ನೂ ಓದಿ:  ಅವಳು ಮಾಡಿದ್ದು ಮಾಡಲಿ, ನಾನು ಅವಳಷ್ಟು ಚೀಪ್ ಅಲ್ಲ: ವಂದನಾ ಜೈನ್

    ಅಷ್ಟೇ ಅಲ್ಲದೆ ಸಂಜನಾಗೆ ಲೀಗಲ್ ನೋಟಿಸ್ ಸಹ ನೀಡಿದ್ದಾರೆ. ಇದೆಲ್ಲದರ ಮಧ್ಯೆ ಸಂಜನಾ ಮಾಡಿದ ಆರೋಪಗಳಿಗೆ ವಂದನಾ ಉತ್ತರವನ್ನು ನೀಡಿದ್ದಾರೆ. 8 ನಿಮಿಷಗಳ ವಿಡಿಯೋ ಬಿಡುಗಡೆ ಮಾಡಿರುವ ವಂದನಾ, ಸಂಜನಾ ಆರೋಪಗಳಿಗೆಲ್ಲ ಪ್ರತ್ಯುತ್ತರವನ್ನು ನೀಡಿದ್ದಾರೆ. ಇದನ್ನೂ ಓದಿ: ವಂದನಾ ಪ್ರಚಾರಕ್ಕಾಗಿ ಗಲಾಟೆ ಮಾಡ್ತಿದ್ದಾಳೆ: ನಟಿ ಸಂಜನಾ ಆರೋಪ

    ಏನಿದು ಪ್ರಕರಣ?
    ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಮತ್ತು ಸ್ಯಾಂಡಲ್‍ವುಡ್ ನಟಿ ಸಂಜನಾ ಇಬ್ಬರು ಸ್ನೇಹಿತರಾಗಿದ್ದರು. ಹೀಗೆ ಇಬ್ಬರೂ ಸ್ಟಾರ್ ಹೋಟೆಲಿನಲ್ಲಿ ಪಾರ್ಟಿ ಮಾಡುತ್ತಿದ್ದರು. ಒಂದೇ ಟೇಬಲ್‍ನಲ್ಲಿ ಕುಳಿತು ಕುಡಿಯುತ್ತಾ ಇದ್ದ ಇಬ್ಬರ ಮಧ್ಯೆ ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದಿದೆ. ಮಾತು ಅತಿರೇಕಕ್ಕೆ ಹೋಗಿದ್ದೇ ತಡ, ಇಬ್ಬರೂ ಪರಸ್ಪರ ಕೆಟ್ಟ ಮಾತುಗಳಿಂದ ಬೈದುಕೊಂಡಿದ್ದಾರೆ.

    ಈ ವೇಳೆ ಸಿಟ್ಟಿಗೆದ್ದ ಸಂಜನಾ ಅವರು ವಂದನಾರಿಗೆ ಹೊಡೆಯಲು ಮುಂದಾಗಿದ್ದು, ತನ್ನ ಕೈಯಲ್ಲಿದ್ದ ವಿಸ್ಕಿ ಗ್ಲಾಸನ್ನು ವಂದನಾ ಮೇಲೆ ಬಿಸಾಕಿದ್ದಾರೆ. ನಟಿ ಬಿಸಾಡಿದ ವೇಗಕ್ಕೆ ಗ್ಲಾಸ್ ನಿರ್ಮಾಪಕಿಯ ಹಣೆಗೆ ಬಂದು ಬಡಿದಿದೆ. ಇದಾದ ಬಳಿಕ ನಿರ್ಮಾಪಕಿಯು ನಟಿಯ ಮೇಲೆ ಕ್ರಮ ಕೈಗೊಳ್ಳಿ ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಬಳಿಕ ರಾಜಿ ಪಂಚಾಯ್ತಿ ಮಾಡಿಕೊಂಡು ಕೇಸನ್ನು ಹಿಂಪಡೆದುಕೊಂಡಿದ್ದಾರೆ.

  • ಜಡೆ ಜಗಳಕ್ಕೆ ಬ್ರೇಕ್ – ಸಂಜನಾ, ವಂದನಾ ಫುಲ್ ಸೈಲೆಂಟ್

    ಜಡೆ ಜಗಳಕ್ಕೆ ಬ್ರೇಕ್ – ಸಂಜನಾ, ವಂದನಾ ಫುಲ್ ಸೈಲೆಂಟ್

    ಬೆಂಗಳೂರು: ನಟಿ ಸಂಜನಾ ಮತ್ತು ನಿರ್ಮಾಪಕಿ ವಂದನಾ ಇಬ್ಬರು ಕೂಡ ಪಬ್ ಒಂದರಲ್ಲಿ ಕುಡಿದು ಪರಸ್ಪರ ಕಿತ್ತಾಡಿಕೊಂಡಿದ್ದರು. ಒಬ್ಬರ ನಡೆತೆ ಮೇಲೆ ಮತ್ತೊಬ್ಬರು ಆರೋಪವನ್ನು ಮಾಡಿಕೊಂಡಿದ್ದರು. ಆದರೆ ಈಗ ಆ ಜಗಳಕ್ಕೆ ಇಬ್ಬರು ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ.

    ಯುಬಿ ಸಿಟಿ ಬಳಿಯ ಪಬ್ ಒಂದರಲ್ಲಿ ಸ್ಯಾಂಡಲ್‍ವುಡ್ ನಟಿ ಸಂಜನಾ, ನಿರ್ಮಾಪಕಿ ವಂದನಾ ಮೇಲೆ ವಿಸ್ಕಿ ಗ್ಲಾಸ್ ಅನ್ನು ಬಿಸಾಡಿದ್ದಕ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾದ ಬಳಿಕ ಸಂಜನಾ ಕೂಡ ವಂದನಾ ಮೇಲೆ ದೂರು ನೀಡಿದ್ದರು.  ಇದನ್ನು ಓದಿ: ರಾಜಿಗೆ ಒಂದೆಜ್ಜೆ ಮುಂದೆ ಇಟ್ಟ ಸಂಜನಾ ಗಲ್ರಾನಿ?

    ಇಬ್ಬರು ಜಿದ್ದಿಗೆ ನಿಂತವರಂತೆ ಇದ್ದರೂ ಕೊನೆಗೆ ಪ್ರಕರಣದಿಂದ ಇಬ್ಬರೂ ಹಿಂದೆ ಸರಿಯುತ್ತಿದ್ದಾರೆ. ಸಂಜನಾ ದೂರು ನೀಡಿದ ಕೆಲವೇ ಗಂಟೆಗಳಲ್ಲಿ ತಮ್ಮ ಟ್ವಿಟ್ಟರ್ ಅಕೌಂಟ್‍ನಲ್ಲಿ ನಾನು ಪ್ರಕರಣಕ್ಕೆ ಇತ್ಯರ್ಥ ಹಾಡುತ್ತೇನೆ ಎಂದಿದ್ದರು. ಬಳಿಕ ವಂದನಾ ಕೂಡ ಸುದ್ದಿಗೋಷ್ಟಿ ನಡೆಸುತ್ತೇನೆ. ಕೋರ್ಟ್ ಮೆಟ್ಟಿಲೇರುತ್ತೇನೆ ಎಂದು ಹೇಳಿ ಈಗ ಸೈಲೆಂಟ್ ಆಗಿದ್ದಾರೆ.

    ಇಬ್ಬರೂ ಬಾಟಲಿಯಲ್ಲಿ ಬಡಿದಾಡಿಕೊಂಡು ಈಗ ಫುಲ್ ಸೈಲೆಂಟ್ ಆಗಿದ್ದಾರೆ. ಸದ್ಯಕ್ಕೆ ಜಡೆ ಜಗಳಕ್ಕೆ ಬ್ರೇಕ್ ಬಿದ್ದಿದೆ.

  • ಏಳು ಬಣ್ಣಗಳಲ್ಲಿ ಪ್ರೀತಿಯ ಹಾಡು ‘ಮಳೆಬಿಲ್ಲು’

    ಏಳು ಬಣ್ಣಗಳಲ್ಲಿ ಪ್ರೀತಿಯ ಹಾಡು ‘ಮಳೆಬಿಲ್ಲು’

    ಬೆಂಗಳೂರು: ಏಳು ಬಣ್ಣಗಳ ಸಮಾಗಮವೇ ಮಳೆಬಿಲ್ಲು. ಈ ಮಳೆಬಿಲ್ಲನ್ನು ಮನುಷ್ಯನ ಜೀವನದ ಕಲರ್‍ಫುಲ್ ಲೈಫ್‍ಗೆ ಹೋಲಿಸಿ ನಾಗರಾಜ್ ಹಿರಿಯೂರು ಚಲನಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಮಳೆಬಿಲ್ಲು ಎಂಬ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಶರತ್ ನಾಯಕ, ಸಂಜನಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಗಣೇಶ್ ನಾರಾಯಣ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರ್ದೇಶಕರ ಸಹೋದರ ನಿಂಗಪ್ಪ ಈ ಚಿತ್ರವನ್ನು ನಿರ್ಮಿಸಿದ್ದಾರೆ.

    ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಹಾಗೂ ಫಿಲಂ ಛೇಂಬರ್ ಅಧ್ಯಕ್ಷ ಎಸ್.ಎ. ಚಿನ್ನೇಗೌಡ್ರು, ಭಾಮಾ ಹರೀಶ್ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

    ನಿರ್ಮಾಪಕ ನಿಂಗಪ್ಪ ಮಾತನಾಡುತ್ತಾ, ನಿರ್ದೇಶಕ ನಾಗರಾಜ್ ನನ್ನ ಸಹೋದರ. ಚಿಕ್ಕವನಿದ್ದಾಗಿನಿಂದಲೇ ಸಿನಿಮಾ ಬಗ್ಗೆ ತುಂಬಾ ಆಸಕ್ತಿಯಿತ್ತು. ಕಳೆದ ವರ್ಷ ಒಂದು ಕಿರು ಚಿತ್ರ ನಿರ್ಮಿಸಿದ್ದರು. ಈ ಚಿತ್ರವನ್ನು ಕಳೆದ ಜನವರಿಯಲ್ಲಿ ಆರಂಭಿಸಿದೆವು. ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು ಸೆನ್ಸಾರ್ ಹಂತದಲ್ಲಿದೆ. ಜುಲೈನಲ್ಲಿ ರಿಲೀಸ್ ಮಾಡುವ ಯೋಜನೆ ಇದೆ ಎಂದು ಹೇಳಿಕೊಂಡರು.

    ನಾಯಕ ಶರತ್ ಮಾತನಾಡಿ, ಹಿಂದೆ ಕ ಎಂಬ ಚಿತ್ರದಲ್ಲಿ ಅಭಿನಯಿಸಿದ್ದೆ. ಹೈಸ್ಕೂಲ್ ಹುಡುಗ ಹಾಗೂ ಕಾಲೇಜ್ ವಿದ್ಯಾರ್ಥಿಯಾಗಿ ಎರಡು ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ನಾಯಕಿ ನಯನ ಮಾತನಾಡಿ, ಇದು 3ನೇ ಚಿತ್ರ ಈಗಿನ ಯೂಥ್‍ಗೆ ಇಷ್ಟವಾಗುವ ಕಥೆ, ಲವ್ ಸ್ಟೋರಿ ಜೊತೆಗೆ ಒಂದು ಟ್ವಿಸ್ಟ್ ಈ ಚಿತ್ರದಲ್ಲಿದೆ. ಅದು ಈ ಚಿತ್ರಕ್ಕೆ ಹೊಸ ರೂಪ ನೀಡುತ್ತದೆ ಎಂದು ಹೇಳಿದರು. ಮತ್ತೊಬ್ಬ ನಾಯಕಿ ಸಂಜನಾ ಮಾತನಾಡಿ, 2010-11ರ ಸಮಯದಲ್ಲಿ ನಡೆದ ಯುವ ಪ್ರೇಮ ಕಥೆಯಿದು. ಭಾರ್ಗವಿ ಎಂಬ ಬೋಲ್ಡ್ ಹುಡುಗಿಯ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.

    ನಿರ್ದೇಶಕ ನಾಗರಾಜ್ ಮಾತನಾಡಿ ನನ್ನ ಚಿತ್ರದಲ್ಲಿ ಕಥೆಯೇ ಹೀರೋ. ನಾನು ರವಿಚಂದ್ರನ್ ಅವರ ಅಭಿಮಾನಿ. ಗೂಗಲ್‍ನಲ್ಲೇ ನಿರ್ದೇಶನ ಹೇಗೆ ಮಾಡೋದೆಂದು ಕಲಿತೆ. ಹುಡುಗರ ಜೀವನ ಬಿಳಿ ಹಾಳೆ ಇದ್ದ ಹಾಗೆ. ಅವರ ಲೈಫ್‍ನಲ್ಲಿ ಹುಡುಗಿಯೊಬ್ಬಳು ಬಂದಾಗ ಅವರ ಜೀವನದಲ್ಲಿ ಮಳೆ ಬಂದ ಹಾಗೆ ಆ ಮಳೆಬಿಲ್ಲು ಯಾರು ಅಂತ ಚಿತ್ರದಲ್ಲಿ ಹೇಳಿದ್ದೇವೆ ಅಂತ ಹೇಳಿದರು.

    ಸಂಗೀತ ನಿರ್ದೇಶಕ ಗಣೇಶ್ ನಾರಾಯಣ್ ಮಾತನಾಡಿ ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ. ಈ ಚಿತ್ರದಲ್ಲಿ ಹಾಡುಗಳನ್ನು ಬರೆದ ನಂತರ ಟ್ಯೂನ್ ಮಾಡಿಕೊಂಡು 10 ಹಾಡುಗಳು ಈ ಚಿತ್ರದಲ್ಲಿದ್ದು, ಎಲ್ಲಾ ಹಾಡುಗಳು ಅದ್ಭುತವಾಗಿ ಮೂಡಿ ಬಂದಿವೆ ಎಂದು ಹೇಳಿದರು.

    ಫಿಲಂ ಛೇಂಬರ್ ಅಧ್ಯಕ್ಷ ಚಿನ್ನೇಗೌಡ್ರು ಮಾತನಾಡಿ ಚಿತ್ರರಂಗವನ್ನು ಒಂದು ಕುಟುಂಬ ಎನ್ನುತ್ತೇವೆ. ಇಲ್ಲಿ ಕುಟುಂಬವೇ ಸೇರಿ ಒಂದು ಚಿತ್ರ ಮಾಡಿದ್ದಾರೆ. ಹೋಂವರ್ಕ್ ಮಾಡಿಕೊಳ್ಳದೆ ಚಿತ್ರರಂಗಕ್ಕೆ ಬರಬೇಡಿ ಎಂದು ಹೊಸದಾಗಿ ಬರುತ್ತಿರುವವರಿಗೆ ಕಿವಿ ಮಾತು ಹೇಳಿದರು.

  • ಸೀರಿಯಲ್ ಬ್ಲಾಸ್ಟ್ – ಕೂದಲೆಳೆ ಅಂತರದಲ್ಲಿ ಪಾರಾದ ಕನ್ನಡಿಗನ ಕರಾಳ ಅನುಭವ

    ಸೀರಿಯಲ್ ಬ್ಲಾಸ್ಟ್ – ಕೂದಲೆಳೆ ಅಂತರದಲ್ಲಿ ಪಾರಾದ ಕನ್ನಡಿಗನ ಕರಾಳ ಅನುಭವ

    ಕೊಲಂಬೋ: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಬ್ಲಾಸ್ಟ್ ದುರಂತದಲ್ಲಿ ಕನ್ನಡಿಗರೊಬ್ಬರು ಸಾವಿನ ದವಡೆಯಿಂದ ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ.

    ನಟಿ ಸಂಜನಾ ಅವರ ಸಹೋದರ ರಾಹುಲ್ ಸ್ಫೋಟ ಸಂಭವಿಸಿದ ಕಿಂಗ್ಸ್‍ಬ್ಯುರಿ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರು. ಸ್ಫೋಟ ಸಂಭವಿಸಿದ ಕೂಡಲೇ ರಾಹುಲ್ ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಈ ಕುರಿತು ಸ್ವತಃ ರಾಹುಲ್ ಅವರೇ ಪಬ್ಲಿಕ್ ಟಿವಿ ಜೊತೆ ತನಗಾದ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ.

    ರಾಹುಲ್ ಹೇಳಿದ್ದೇನು?
    ಕಿಂಗ್ಸ್‍ಬ್ಯುರಿನಲ್ಲಿ ನಾನು ಮಲಗಿದ್ದ ಸಂದರ್ಭದಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ. ಘಟನೆಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ ಅಲ್ಲದೆ ಹಲವರು ಗಾಯಗೊಂಡಿದ್ದಾರೆ. ಬಾಂಬ್ ಬ್ಲಾಸ್ಟ್ ಆದ ಸ್ಥಳದಲ್ಲಿ ರಕ್ತದೋಕುಳಿ ನೋಡಿ ಶಾಕ್ ಆಗಿದೆ. 6- 7 ವರ್ಷಗಳಿಂದ ಕೊಲಂಬೋಗೆ ಬರುತ್ತಿದ್ದೇನೆ. ಆದ್ರೆ ಮೊದಲ ಬಾರಿಗೆ ಇಂತಹ ಒಂದು ಘಟನೆ ನಡೆದಿದೆ. ಕೆಲವರು ಇದು ಆತ್ಮಾಹುತಿ ದಾಳಿ ಎಂದು ಕೆಲವರು ಹೇಳುತ್ತಿದ್ದಾರೆ. ಆದ್ರೆ ನಿಜವಾಗಿ ಏನೂ ಎಂದು ಗೊತ್ತಿಲ್ಲ. ಇಲ್ಲಿ ತುಂಬಾ ಭಯವಾಗುತ್ತಿದೆ. ಎಲ್ಲಿ ಉಳಿದುಕೊಳ್ಳುವುದು ಎಂದು ಗೊತ್ತಾಗುತ್ತಿಲ್ಲ. ಯಾಕಂದ್ರೆ ಫೈವ್ ಸ್ಟಾರ್ ಹೋಟೆಲಿನಲ್ಲಿ ಬ್ಲಾಸ್ಟ್ ಮಾಡಿದ್ದಾರೆ ಅಂದ್ರೆ ಹೇಗೆ ಭದ್ರತೆ ಒದಗಿಸುತ್ತಾರೆ ಎಂದು ಗೊತ್ತಿಲ್ಲ. ನೋಡೋಣ ಹೇಗಾದ್ರು ಮಾಡಿ ಭಾರತಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಸ್ಫೋಟಕ್ಕೆ 160 ಬಲಿ – ಸ್ಫೋಟಕ್ಕೆ ಮೇಲ್ಚಾವಣಿ ಹಾರಿತು, ಎಲ್ಲಿ ನೋಡಿದರಲ್ಲಿ ರಕ್ತ: ವಿಡಿಯೋ

    ಆಗಿದ್ದೇನು?
    ಈಸ್ಟರ್ ಹಬ್ಬದ ದಿನವೇ ಶ್ರೀಲಂಕಾದಲ್ಲಿ ಮಾರಣಹೋಮ ನಡೆದಿದೆ. ಕೊಲಂಬೋದಲ್ಲಿ ಸೀರಿಯಲ್ ಬ್ಲಾಸ್ಟ್ ಸಂಭವಿಸಿದ್ದು, ಐದು ಚರ್ಚ್, ಮೂರು ಫೈವ್‍ಸ್ಟಾರ್ ಹೊಟೆಲ್‍ಗಳಲ್ಲಿ ಆತ್ಮಾಹುತಿ ದಾಳಿ ನಡೆದಿದೆ. ಇದುವರೆಗೂ 160ಕ್ಕೂ ಹೆಚ್ಚು ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಬೆಳಗ್ಗೆ 8.45ಕ್ಕೆ ಕೊಲಂಬೋ, ನೆಗಂಬೋ ಮತ್ತು ಬಟ್ಟಿಕಲೋವಾದಲ್ಲಿ ಚರ್ಚ್‍ಗಳು ಮತ್ತು ಮೂರು ಫೈವ್‍ಸ್ಟಾರ್ ಹೊಟೇಲ್‍ಗಳಲ್ಲಿ ಆತ್ಮಾಹುತಿ ಸ್ಫೋಟಗಳು ನಡೆದಿದೆ.

    https://www.youtube.com/watch?v=S6cNQz5DtY0

    https://www.youtube.com/watch?time_continue=122&v=toEBKqvDA3c

     

  • ನನ್ನ ಬಳಿ 3 ಸೈಟ್, 5 ಕಾರು ಇದೆ: ತನ್ನ ಆಸ್ತಿ ವಿವರ, ದಿನದ ಸಂಬಳ ತಿಳಿಸಿ ತಿರುಗೇಟು ಕೊಟ್ಟ ಸಂಜನಾ

    ನನ್ನ ಬಳಿ 3 ಸೈಟ್, 5 ಕಾರು ಇದೆ: ತನ್ನ ಆಸ್ತಿ ವಿವರ, ದಿನದ ಸಂಬಳ ತಿಳಿಸಿ ತಿರುಗೇಟು ಕೊಟ್ಟ ಸಂಜನಾ

    ಬೆಂಗಳೂರು: ನನ್ನನ್ನು ನೋಡಿದರೆ ರವಿ ಶ್ರೀವತ್ಸ ಅವರಿಗೆ ಹೊಟ್ಟೆ ಕಿಚ್ಚು. ಹಾಗಾಗಿ ಈ ರೀತಿಯ ಟೀಕೆ ಮಾಡುತ್ತಿದ್ದಾರೆ ಎಂದು ಸಂಜನಾ ತಿರುಗೇಟು ಕೊಟ್ಟಿದ್ದಾರೆ.

    ಜಾಗ್ವಾರ್ ಕಾರ್, ಕೋಟಿ ರೂ. ಆಸ್ತಿ ಇರುವ ಸಂಜನಾ ಐಟಿ ರಿರ್ಟನ್ಸ್ ಸಲ್ಲಿಸಿದ್ದಾರಾ ಎಂಬ ನಿರ್ದೇಶಕ ರವಿ ಶ್ರೀವತ್ಸವ ಅವರ ಪ್ರಶ್ನೆಗೆ ಪಬ್ಲಿಕ್ ಟಿವಿಯಲ್ಲಿ ಸಂಜನಾ ದೀರ್ಘ ಉತ್ತರ ನೀಡಿದರು.

    ಸಂಜನಾ ಹೇಳಿದ್ದು ಹೀಗೆ:
    ನನ್ನ ಆಸ್ತಿ ಬಗ್ಗೆ ನಾನೇ ಸಂಪೂರ್ಣವಾಗಿ ಎಲ್ಲರಿಗೂ ಹೇಳುತ್ತೇನೆ. ನನ್ನ ಹುಟ್ಟುಹಬ್ಬಕ್ಕೆ ನಾನು ಜಾಗ್ವಾರ್ ಖರೀದಿಸಿದೆ. ನನ್ನ ಹತ್ತಿರ ಬಿಎಂಡಬ್ಲ್ಯೂ, ಹೋಂಡಾ ಸಿವಿಕ್, ವೆರ್ನಾ ಇದ್ದರೆ ತಂಗಿ ಬಳಿ ಆಡಿ ಕಾರಿದೆ. 100*100 ಮನೆ ಮಾತ್ರ ಇಲ್ಲ. ರಾಜನಕುಂಟೆಯಲ್ಲಿ ಸೈಟ್ ಇದೆ ಹಾಗೂ ಹೈದರಾಬಾದ್‍ನಲ್ಲಿ ಸೈಟ್ ಇದೆ. ನಾನು 45 ಸಿನಿಮಾಗಳಲ್ಲಿ ನಟಿಸಿದ್ದೇನೆ. ಪ್ರಭಾಸ್, ಪವನ್ ಕಲ್ಯಾಣ್, ಮೋಹನ್ ಲಾಲ್, ಮುಮ್ಮಟ್ಟಿ, ದರ್ಶನ್ ಅವರ ಜೊತೆಯಲ್ಲಿ ನಾನು ನಟಿಸಿದ್ದೇನೆ. ಅಲ್ಲದೇ 12 ವರ್ಷದಲ್ಲಿ 120 ಜಾಹೀರಾತು ಮಾಡಿದ್ದೇನೆ. ತೆಲುಗು ಕಾರ್ಯಕ್ರಮದಲ್ಲಿ ನಟಿಸುತ್ತಿದ್ದೇನೆ. ಆ ಕಾರ್ಯಕ್ರಮಕ್ಕೆ ಒಂದು ದಿನಕ್ಕೆ 1.5 ಲಕ್ಷ ರೂ. ಸಂಭಾವನೆ ಸಿಗುತ್ತದೆ. ಹೀಗಾಗಿ ನಾನು ಈ ಆಸ್ತಿಯನ್ನು ಸಂಪಾದಿಸಿದ್ದೇನೆ.

    ಗಂಡ- ಹೆಂಡತಿ ಸಿನಿಮಾ ಮಾಡುವಾಗ ನನಗೆ 16 ವರ್ಷ. ಅಕ್ಟೋಬರ್ 10, 1989 ರಂದು ಮಾತಾಸ್ ಆಸ್ಪತ್ರೆಯಲ್ಲಿ ಹುಟ್ಟಿದ್ದೇನೆ. ವೀಕಿಪಿಡಿಯಾದಲ್ಲಿ ಬರುವುದು ಸರಿಯಿರುವುದಿಲ್ಲ. ಅವರಿಗೆ ಅಷ್ಟು ಅನುಮಾನವಿದ್ದರೆ, ಅವರು ಮಾತಾಸ್ ಆಸ್ಪತ್ರೆಗೆ ಹೋಗಿ ಪರಿಶೀಲಿಸಲಿ ಆಸ್ಪತ್ರೆಯಲ್ಲಿ ನಿಮಗೆ ಈ ದಿನಾಂಕ ಸಿಗಲಿಲ್ಲ ಎಂದರೆ ನಾನು ಚಿತ್ರರಂಗ ಬಿಡುತ್ತೇನೆ. ನನಗೆ ಶ್ರೀವತ್ಸ ಮೇಲೆ ಯಾವುದೇ ದ್ವೇಷವಿಲ್ಲ. ನಾನು ಎಲ್ಲ ಮರೆತು ಆರಮವಾಗಿದ್ದೆ. ಈ ಮೀಟೂ ಬಂದಿದ್ದಕ್ಕೆ ನಾನು ನನ್ನ ಅನುಭವನ್ನು ಹಂಚಿಕೊಂಡೆ. ನನ್ನ ಹುಟ್ಟುಹಬ್ಬಕ್ಕೆ ನಾನು ಇವರನ್ನು ಹಾಗೂ ಚಿತ್ರರಂಗದ ಸದಸ್ಯರನ್ನು ಕರೆದಿದ್ದೆ. 45 ಸಿನಿಮಾದ ಪಯಣದಲ್ಲಿ ನಾನು ಒಂದು ಚಿತ್ರದ ಅನುಭವ ಮಾತ್ರ ಹೇಳಿಕೊಂಡಿದ್ದೇನೆ. ಏಕೆಂದರೆ ಇವರು ಒಂದು ಹೇಳಿ ಸಿನಿಮಾದಲ್ಲಿ ಬೇರೆ ಮಾಡಿಸಿದ್ದು, ಸರಿಯಿಲ್ಲ.

    ಶ್ರೀವತ್ಸ ನನ್ನ ತಂಗಿಯ ವಯಸ್ಸನ್ನು ಹಾಗೂ ನನ್ನ ತಂದೆ ಬಗ್ಗೆ ಮಾತನಾಡುತ್ತಿರುವುದು ಅವರಿಗೆ ನಾಚಿಕೆ ಆಗಬೇಕು. ಶೇಮ್ ಆನ್ ಯೂ ಶ್ರೀವತ್ಸ. ಮೀಟೂ ಅಭಿಯಾನದ ಬಗ್ಗೆ ಮಾತನಾಡುವಾಗ ನಿಮ್ಮ ಅನುಭವ ಹೇಳಿಕೊಳ್ಳಿ ಎಂದು ಕೇಳಿದ್ದಾಗ ನಾನು ನನ್ನ ಅನುಭವವನ್ನು ಹಂಚಿಕೊಂಡೆ. ಆದರೆ ಇವರು ಪ್ರೆಸ್‍ಮೀಟ್ ನಡೆಸಿ ಪಬ್ಲಿಸಿಟಿ ತೆಗೆದುಕೊಳ್ಳುತ್ತಿದ್ದಾರೆ. 12 ವರ್ಷದಿಂದ ನಾನು ಚಿತ್ರಗಳಲ್ಲಿ ದೊಡ್ಡ ನಟರ ಜೊತೆ ನಟಿಸಿದ್ದೇನೆ. ಹಾಗಾಂತ ನನಗೆ ಅವರಿಂದ ಪಬ್ಲಿಸಿಟಿ ಪಡೆಯುವ ಅವಶ್ಯಕತೆ ಇಲ್ಲ.

    ಗಂಡ-ಹೆಂಡತಿ ಸಿನಿಮಾದಲ್ಲಿ ನಟಿಸಿದ್ದು ಒಂದು ಶಾಪದಂತೆ ಆಗಿದೆ. ಇದರಿಂದಾಗಿ ನನಗೆ ರಕ್ಷಿತಾ, ರಮ್ಯಾ ಅವರಂತೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲ. ನಿರ್ದೇಶಕ ರವಿ ಶ್ರೀವತ್ಸ ಸಹ ಯೋಗರಾಜ್ ಭಟ್ ಹಾಗೂ ಸೂರಿಯಂತೆ ಬೆಳೆಯಲು ಆಗಲಿಲ್ಲ.

    ನಾನು 2 ವರ್ಷಗಳ ಹಿಂದೆ ‘ಜಿಸ್ಮ್’ ಸಿನಿಮಾ ಮಾಡೋಣ ಎಂದು ಹೇಳಿದೆ. ರವಿ ಇಂದು ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸುವ ಮೊದಲು ನನಗೆ ಅವರ ಮೇಲೆ ಯಾವ ಕೋಪ ಇರಲಿಲ್ಲ. ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ನನ್ನ ತಂಗಿ ಹಾಗೂ ಅಪ್ಪನ ಬಗ್ಗೆ ಮಾತನಾಡಿದ್ದು ನನಗೆ ಇಷ್ಟವಾಗಲಿಲ್ಲ. ಗಂಡ-ಹೆಂಡತಿ ಚಿತ್ರೀಕರಣದ ಸಮಯದಲ್ಲಿ ನಾನು ಅವರು ನನ್ನನ್ನು ಪ್ರಾಣಿಗಳ ರೀತಿ ನಡೆಸಿಕೊಂಡಿದ್ದರು. ಆ ಸಮಯದಲ್ಲಿ ಅವರು ಲೂಸ್, ಸೈಕೋ ತರಹ ಆಡುತ್ತಿದ್ದರು. ಹಾಗಾಗಿ ಅವರು ಈಗಲೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

    ನಾನು ಹಲವಾರು ದೊಡ್ಡ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. ಯಾರೂ ಕೂಡ ನಿಮ್ಮಂತೆ ನನಗೆ ಟಾರ್ಚರ್ ನೀಡಿಲ್ಲ. ನೀವು ನನಗೆ ಸತ್ತು ಹೋಗು. ಸತ್ತು ಹೋಗು ಎಂದು ಕಿರುಚುತ್ತಾ ಟಾರ್ಚರ್ ನೀಡಿದ್ದೀರಿ. ಹಿಂದಿಯ ಮರ್ಡರ್ ಸಿನಿಮಾ 100 ರಷ್ಟು ಇದ್ದರೆ, ಇವರು 400 ರಷ್ಟು ಸಿನಿಮಾ ಮಾಡಿದ್ದಾರೆ. ಗಂಡ-ಹೆಂಡತಿ ಭಾಗ-2 ಸಿನಿಮಾ ತೆಗೆಯೋವಷ್ಟು ಶೂಟಿಂಗ್ ಮಾಡಿದ್ದಾರೆ. ವೆಬ್ ಸೀರಿಸ್ ಚಿತ್ರಗಳನ್ನು ತೆಗೆಯೋಣ ಎಂದು ಹೇಳಿದೆ. ಅವರು ಈಗ ಬದಲಾಗಿದ್ದಾರೆ ಎನ್ನಿಸಿತ್ತು. ಅಲ್ಲದೇ ನಾನು ಅವರನ್ನು ಕ್ಷಮಿಸಿದ್ದೇನೆ. ನನ್ನ ಮನಸ್ಸು ದೊಡ್ಡದು. ಹಾಗಾಗಿ ನಾನು ನಿಮ್ಮನ್ನು ನನ್ನ ಹುಟ್ಟುಹಬ್ಬಕ್ಕೆ ಕರಿದಿದ್ದೆ.

    ಗಂಡ-ಹೆಂಡತಿ ಸಿನಿಮಾ ಶೂಟಿಂಗ್ ವೇಳೆ ಅವರು ನನ್ನನ್ನು ಬೈದಿದ್ದರು. ಅದನ್ನು ನಾನು ಮೀಟೂ ಅಭಿಯಾನದಲ್ಲಿ ಹೇಳಿಕೊಂಡೆ. ನಾನು ನಿರ್ದೇಶಕರ ಸಂಘಕ್ಕೆ ಹಾಗೂ ನಿರ್ಮಾಪಕರ ಸಂಘದಲ್ಲಿ ಕ್ಷಮೆ ಕೇಳುತ್ತೇನೆ. ಆದರೆ ರವಿ ಶ್ರೀವತ್ಸ ಅವರಲ್ಲಿ ನಾನು ಕ್ಷಮೆ ಕೇಳುವುದಿಲ್ಲ. ರವಿ ಶ್ರೀವತ್ಸ ಅವರೇ ನನ್ನನ್ನು ಕ್ಷಮೆ ಕೇಳಬೇಕು. ಅವರು ನನ್ನ ತಂಗಿ ಹಾಗೂ ನನ್ನ ತಂದೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಹಾಗಾಗಿ ಅವರು ನನ್ನ ಬಳಿ ಕ್ಷಮೆ ಕೇಳಬೇಕು. ನವೆಂಬರ್ 6 ರಂದು ನಾನು ಕಲಾವಿದರ ಸಂಘಕ್ಕೆ ಬಂದು ಕ್ಷಮೆ ಕೇಳುತ್ತೇನೆ.

    ಸಾಲ ಕೇಳಿದ್ರು: ಇಡೀ ಚಿತ್ರರಂಗ ನಿಮ್ಮನ್ನು ಪ್ಲಾಪ್ ನಟಿ ಎಂದು ಕರೆಯುತ್ತದೆ. ಆದರೆ ನನ್ನನ್ನು ಯಾರೂ ಪ್ಲಾಪ್ ನಿರ್ದೇಶಕರೆಂದು ಕರೆಯುವುದಿಲ್ಲ. ಸಂಜನಾ ಎಲ್ಲಾದರೂ ವಿವಾದ ಮಾಡಿಸಿಕೊಂಡರೆ ಆ ವಿವಾದನನ್ನು ನಿಲ್ಲಿಸುವುದ್ದಕ್ಕೆ ಅವರಿಗೆ ಮೊಬೈಲ್ ಫೋನ್ ಗಿಫ್ಟ್ ನೀಡುತ್ತಾರೆ ಎಂದು ರವಿ ಆರೋಪಿಸಿದರು. ಇದಕ್ಕೆ ಸಂಜನಾ, ರವಿ 1 ಲಕ್ಷ ರೂ. ಸಾಲ ಬೇಕೆಂದು ಕೇಳಿದ್ದರು. ಆಗ ನಾನು ನೀವು ನನ್ನ ವೆಬ್ ಸೀರಿಸ್ ಸಿನಿಮಾ ಮಾಡಿದರೆ ಸಂಬಳವಾಗಿ ನಿಮಗೆ 1 ಲಕ್ಷ ನೀಡುತ್ತೇನೆ ಎಂದು ತಿಳಿಸಿದ್ದೆ ಎಂಬುದಾಗಿ ಸಂಜನಾ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    https://www.youtube.com/watch?v=Fngx4OL8iUY

    https://www.youtube.com/watch?v=2YYfQAOr3SM

    https://www.youtube.com/watch?v=EhTC1JWIn1I

    https://www.youtube.com/watch?v=mst7VaRbRP4

    https://www.youtube.com/watch?v=EYjWyRuUtGY

    https://www.youtube.com/watch?v=bI0PW29YLrU

  • ರವಿ ಶ್ರೀವತ್ಸ ಒಬ್ಬ ಫ್ಲಾಪ್ ಡೈರೆಕ್ಟರ್, ಯಾವ್ದೇ ಫಿಲ್ಮ್ ಇಲ್ದೇ ಮನೆಯಲ್ಲಿದ್ದಾರೆ: ಸಂಜನಾ

    ರವಿ ಶ್ರೀವತ್ಸ ಒಬ್ಬ ಫ್ಲಾಪ್ ಡೈರೆಕ್ಟರ್, ಯಾವ್ದೇ ಫಿಲ್ಮ್ ಇಲ್ದೇ ಮನೆಯಲ್ಲಿದ್ದಾರೆ: ಸಂಜನಾ

    ಬೆಂಗಳೂರು: ರವಿ ಶ್ರೀವತ್ಸ ಒಬ್ಬ ಫ್ಲಾಪ್ ಡೈರಕ್ಟರ್, ಕೆಲಸ ಕಾರ್ಯ ಇಲ್ಲದೇ ಮನೆಯಲ್ಲಿ ಕುಳಿತಿದ್ದಾರೆ ಎಂದು ನಟಿ ಸಂಜನಾ ಕಿಡಿಕಾರಿದ್ದಾರೆ.

    ತನ್ನ ವಿರುದ್ಧ ರವಿ ಶ್ರೀವತ್ಸವ ಮಾಡಿದ ಆರೋಪಗಳಿಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ರವಿ ಶ್ರೀವತ್ಸ ಮೂರು ಸಿನಿಮಾ ಮಾಡಿದ್ದಾರೆ. ನಾನು 45 ಸಿನಿಮಾ ಮಾಡಿದ್ದೇನೆ. ಈಗ ಯಾವುದೇ ಸಿನಿಮಾ ಇಲ್ಲದೇ ಅವರು ಮನೆಯಲ್ಲಿ ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.  ಇದನ್ನು ಓದಿ: ಜಾಗ್ವಾರ್ ಕಾರ್, ಕೋಟಿ ರೂ. ಆಸ್ತಿ ಇರುವ ಸಂಜನಾ ಐಟಿ ರಿರ್ಟನ್ಸ್ ಸಲ್ಲಿಸಿದ್ದಾರಾ: ರವಿ ಶ್ರೀವತ್ಸ ತಿರುಗೇಟು

    ಹುಟ್ಟಿನ ಡೇಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು 1989ರಲ್ಲಿ ಹುಟ್ಟಿದ್ದು ಬೇಕಾದರೆ ಪಾಸ್ ಪೋರ್ಟ್ ಕಳುಹಿಸಿ ಕೊಡುತ್ತೇನೆ. ನಿರ್ಮಾಪಕರಾದ ಶೈಲೇಂದ್ರ ಬಾಬು ಅವರು ಏನು ಮಾಡಿಲ್ಲ. ಈ ಘಟನೆಯಲ್ಲಿ ಅವರನ್ನು ಎಳೆದು ತರೋದು ಸರಿಯಲ್ಲ. ಶೈಲೇಂದ್ರ ಬಾಬು ಅವರ ಬಗ್ಗೆ ಅಂದು ಮಾತನಾಡಿಲ್ಲ. ಇಂದು ಕೂಡ ಮಾತನಾಡುವುದಿಲ್ಲ ಎಂದರು.

    ಎರಡೂವರೆ ಲಕ್ಷ ಪಡೆದ ಸಂಜನಾ ಆಸ್ತಿ ಕೋಟಿಗಟ್ಟಲೇ ಆಗಿದ್ದು, ಈಗ ಜಾಗ್ವಾರ್ ಕಾರಿನಲ್ಲಿ ಓಡುತ್ತಿದ್ದಾರೆ ಐಟಿ ರಿಟನ್ರ್ಸ್ ಪಾವತಿಸಿದ್ದಾರಾ ಎನ್ನುವ ಪ್ರಶ್ನೆಗೆ, ದೇವರು ಅಂತ ಮೇಲೆ ಒಬ್ಬ ಇದ್ದಾನೆ. ಗಂಡ ಹೆಂಡತಿ ಸಿನಿಮಾಗೆ ನಾನು ತೆಗೆದುಕೊಂಡಿದ್ದು ಒಂದುಕಾಲು ಲಕ್ಷ. ಇಂದು ನನ್ನ ಒಂದು ದಿನದ ಸಂಬಳ ಇದು. ನನ್ನ ಬಳಿ ಇರುವ ಆಸ್ತಿ ಹಣಗಳಿಗೆ ಐಟಿ ರಿಟನ್ರ್ಸ್ ಇದೆ. ನನ್ನ ಸ್ಟಾಪ್ ಸಂಬಳ ಬಂದು 14 ಸಾವಿರ ರೂ. ಎಂದು ತಿರುಗೇಟು ನೀಡಿದರು.

    ಗಂಡ ಹೆಂಡತಿ ಸಿನಿಮಾವನ್ನು ನೋಡಿದರೆ ಯಾವ ಯಾವ ಆಂಗಲ್ ಅಲ್ಲಿ ಶೂಟ್ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. 12 ವರ್ಷಗಳ ಹಿಂದೆ ಮಾಡಿದ್ದ್ದ ಈ ಕೆಲಸಕ್ಕೆ ದೇವರು ಅವರಿಗೆ ಕೆಲಸವನ್ನೇ ಕೊಟ್ಟಿಲ್ಲ. ತಂದೆಯ ವಿಚಾರಕ್ಕೆ ಪ್ರತಿಕ್ರಿಯಿಸಿ ನನ್ನ ತಂದೆಗೆ ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಇರುವುದು ಇಷ್ಟನೇ ಇಲ್ಲ. ಅವತ್ತಿಗೂ ಇಷ್ಟವಿಲ್ಲ. ಇವತ್ತಿಗೂ ಇಷ್ಟವಿಲ್ಲ. ಇವತ್ತು ಯಾಕೆ ಮಾತನಾಡುವುದಿಲ್ಲ ಎಂದರೆ ನನ್ನ ಸರ್ಕಸ್ ನೋಡಿ ಮಾತನಾಡುತ್ತಿಲ್ಲ ಎಂದರು.

    ನಾಲ್ಕೈದು ಬಾರಿ ಸಿನಿಮಾವನ್ನು ನೋಡಿದ್ದೆ. ಅದಕ್ಕೆ ನಾನು ಸರ್ ನನಗೆ ಮಾಡುವುದಕ್ಕೆ ಧೈರ್ಯ ಬರುತ್ತಿಲ್ಲ. ಸ್ಟಲ್ಪ ಭಯವಾಗುತ್ತಿದೆ ಎಂದು ಹೇಳಿದ್ದೆ. ಅದಕ್ಕೆ ಅವರು ಇಲ್ಲಮ್ಮ ನಾವು ಮಾಡುವುದು ಬರೀ ಸೌತ್ ಇಂಡಿಯನ್ ವರ್ಷನ್. ನಮ್ಮ ನೇಟಿವಿಟಿ ಪ್ರಕಾರವೇ ಮಾಡುತ್ತೇವೆ. ನಮ್ಮ ನೇಟಿವಿಟಿ ಪ್ರಕಾರ ಮಾಡಲಿಲ್ಲ ಅಂದರೆ ಫ್ಯಾಮಿಲಿ ಪ್ರೇಕ್ಷಕರು ಬರುವುದಿಲ್ಲ. ಹೀಗಾದರೆ ಸಿನಿಮಾ ಫ್ಲಾಪ್ ಆಗುತ್ತೆ ಅಂದಿದ್ರು. ಅವತ್ತು ಅವರು ಹೇಳಿದ್ದೆ ಬೇರೆ ಮಾತನಾಡಿದ್ದೇ ಬೇರೆ, ಇಂದು ಮಾತನಾಡುತ್ತಿರುವುದೇ ಬೇರೆ ಎಂದು ಸಂಜನಾ ತಮ್ಮ ಅಸಮಾಧಾನವನ್ನು ಹೊರಹಾಕಿದರು.

    ಸಿನಿಮಾದಲ್ಲಿ 40-50 ಕಿಸ್ ದೃಶ್ಯಗಳನ್ನು ತೆಗೆದಿದ್ದಾರೆ. ಗಂಡ ಹೆಂಡತಿ ಪಾರ್ಟ್ 2 ವಿತ್‍ಔಟ್ ಶೂಟಿಂಗ್ ರಿಲೀಸ್ ಮಾಡುವಷ್ಟು ದೃಶ್ಯಗಳನ್ನು ತೆಗೆದಿದ್ದಾರೆ. ಅದರಲ್ಲಿ ಸೆನ್ಸಾರ್ ಮಂಡಳಿ ಸ್ವಲ್ಪ ಸೀನ್‍ಗಳಿಗೆ ಕತ್ತರಿ ಹಾಕಿದೆ. ಅವರನ್ನೇ ಬೇಕಾದ್ರೆ ಕೇಳಿ. ಕಡಿತಗೊಳಿಸಿದ ಮೇಲೆ 20% ಸಿನಿಮಾವಾಗಿದ್ದು, ಅಷ್ಟು ಅಶ್ಲೀಲವಾಗಿತ್ತು. ಮಾಡಲು ಇಷ್ಟವಿಲ್ಲದಿದ್ದರೂ ಹೆದರಿಸಿ ನಿಮಗೆ ಏನ್‍ಗೊತ್ತು ದೊಡ್ಡು ಚಾನ್ಸ್ ಕೊಡುತ್ತಿದ್ದೇವೆ. ನಿರ್ದೇಶಕರಿಗೆ ಮರ್ಯಾದೆ ಕೊಡುವುದಿಲ್ಲವಾ, ಸಿನಿಮಾ ಕೆಡಿಸುವುದಕ್ಕೆ ಬಂದಿದ್ದೀರಾ ಎಂದು ಹೆದರಿಸಿದ್ದರು ಎಂಬುದಾಗಿ ಹೇಳಿ ಅಂದಿನ ಶೂಟಿಂಗ್ ಘಟನೆಯನ್ನು ನೆನಪಿಸಿದರು.

    ಈಗಾಗಲೇ ಸಮಸ್ಯೆಗಳಿಂದ ಬದುಕುತ್ತಿರುವವರಿಗೆ ಏನೂ ಬೈಯಲು ಇಷ್ಟ ಪಡುವುದಿಲ್ಲ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದಷ್ಟೇ ಹೇಳಬಹುದು ಎಂದು ತಿಳಿಸಿ ಮಾತಿಗೆ ಸಂಜನಾ ವಿರಾಮ ಹಾಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=_I8lmYouzBk

    https://www.youtube.com/watch?v=bI0PW29YLrU

    https://www.youtube.com/watch?v=Pr1WxEPsJPc

    https://www.youtube.com/watch?v=Fngx4OL8iUY

    https://www.youtube.com/watch?v=EhTC1JWIn1I

  • ಜಾಗ್ವಾರ್ ಕಾರ್, ಕೋಟಿ ರೂ. ಆಸ್ತಿ ಇರುವ ಸಂಜನಾ ಐಟಿ ರಿರ್ಟನ್ಸ್ ಸಲ್ಲಿಸಿದ್ದಾರಾ: ರವಿ ಶ್ರೀವತ್ಸ ತಿರುಗೇಟು

    ಜಾಗ್ವಾರ್ ಕಾರ್, ಕೋಟಿ ರೂ. ಆಸ್ತಿ ಇರುವ ಸಂಜನಾ ಐಟಿ ರಿರ್ಟನ್ಸ್ ಸಲ್ಲಿಸಿದ್ದಾರಾ: ರವಿ ಶ್ರೀವತ್ಸ ತಿರುಗೇಟು

    – ಸಂಜನಾ ಕ್ಷಮೆಗೆ ಡೆಡ್‍ಲೈನ್ ಕೊಟ್ಟ ನಿರ್ದೇಶಕ
    – ಗಂಡ ಹೆಂಡತಿ ಮೊದಲ ಸಂಜನಾ ಸಿನಿಮಾವಲ್ಲ
    – ಅ.16ರವರೆಗೂ ಮಾಡಿರುವ ಮೆಸೇಜ್ ಸಾಕ್ಷಿಯಿದೆ
    – ಪ್ರಚಾರಕ್ಕಾಗಿ ನನ್ನ ವಿರುದ್ಧ ಸುಳ್ಳು ಆರೋಪ

    ಬೆಂಗಳೂರು: ಗಂಡ ಹೆಂಡತಿ ಚಿತ್ರದ ಶೂಟಿಂಗ್ ವೇಳೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ನಿರ್ದೇಶಕ ರವಿ ಶ್ರೀವತ್ಸ ಸುದ್ದಿಗೋಷ್ಠಿ ನಡೆಸಿ ಸಂಜನಾಗೆ ತಿರುಗೇಟು ನೀಡಿದ್ದಾರೆ.

    ತನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕೆ ರವಿ ಶ್ರೀವತ್ಸ ಸಂಜನಾಗೆ ಶುಕ್ರವಾರ ಮಧ್ಯಾಹ್ನ 1 ಗಂಟೆಯ ಒಳಗಡೆ ಕ್ಷಮೆ ಕೇಳಬೇಕೆಂದು ಡೆಡ್‍ಲೈನ್ ನೀಡಿದ್ದಾರೆ.

    ಮೊದಲು ಒಂದು ಕಿಸ್‍ಯಿಂದ 10 ಕಿಸ್, 10 ಕಿಸ್‍ಯಿಂದ 30 ಕಿಸ್ ಮಾಡಿಸಿದ್ದರು ಎನ್ನುವ ಸಂಜನಾ ಆರೋಪಕ್ಕೆ, ಕಿಸ್ ದೃಶ್ಯವನ್ನಿಟ್ಟು ನಾನು ಈ ಸಿನಿಮಾ ಮಾಡಿಲ್ಲ. ಈ ಸಿನಿಮಾದಲ್ಲಿ ಸಾಕಷ್ಟು ಕಲಾವಿದರಿದ್ದರು. ಹಿರಿಯ ಪತ್ರಕರ್ತರಾದ ರವಿ ಬೆಳಗೆರೆ ಇದ್ದರು. ಇವರೆಲ್ಲಾ ಇರುವಾಗ ನಾನು ಹೇಗೆ ಕಿಸ್ ಮಾಡಿಸಲಿ. ಸಂಜನಾ ಪತ್ರಿಕೆಯೊಂದರಲ್ಲಿ ನನಗೆ ಮೊದಲು ಕಿಸ್ ಮಾಡುವಾಗ ಸ್ವಲ್ಪ ನರ್ವಸ್ ಆದೆ. ನಂತರ ಕಿಸ್ ಸೀನ್ ಮಾಡುವಾಗ ನನಗೆ ನರ್ವಸ್ ಹೋಯಿತು ಹೇಳಿದ್ದನ್ನು ಈ ವೇಳೆ ರವಿ ಶ್ರೀವತ್ಸ ತಿಳಿಸಿದರು.

    ರವಿ ಶ್ರೀವತ್ಸ ಹೇಳಿದ್ದೇನು?
    ‘ಗಂಡ- ಹೆಂಡತಿ’ ಸಿನಿಮಾಗಾಗಿ ನಾನು ಮೊದಲು ರಕ್ಷಿತಾ ಪ್ರೇಮ್ ಅವರನ್ನು ಅಪ್ರೋಚ್ ಮಾಡಿದ್ದೆ. ಈ ಸಿನಿಮಾಗಾಗಿ ಶೈಲೇಂದ್ರ ಬಾಬು ಅವರು ನಿರ್ಮಾಪಕರಾಗಿದ್ದರು. ಆಗ ಕಲಾವಿದರು ಯಾರು ಎಂದು ಅವರು ಕೇಳಿದ್ದಾಗ ನಾನು ರಕ್ಷಿತಾ ಅವರ ಹೆಸರು ಹೇಳಿದೆ. ನಂತರ ನಾನು ರಕ್ಷಿತಾ ಅವರನ್ನು ಸಂಪರ್ಕಿಸಿದಾಗ ಅವರು ನಾನು ಮದುವೆಯಾಗುತ್ತಿದ್ದೇನೆ. ಈ ರೀತಿಯ ಸಿನಿಮಾ ಮಾಡುವುದು ಸರಿಯಲ್ಲ ಎಂದು ಹೇಳಿ ಈ ಚಿತ್ರಕ್ಕೆ ನಾಯಕಿಯಾಗಲು ನಿರಾಕರಿಸಿದ್ದರು. ನಂತರ ಈ ಸಿನಿಮಾಗಾಗಿ ಹೊಸಬರನ್ನು ಕರೆಸಲು ನಿರ್ಧರಿಸಿದೆ.

    ಹಿಂದಿಯ ‘ಮರ್ಡರ್’ ಸಿನಿಮಾದಲ್ಲೂ ಕೂಡ ಹೊಸಬರು ನಟಿಸಿದ್ದರು. ಹಾಗಾಗಿ ನಾವು ಕನ್ನಡದಲ್ಲೂ ಹೊಸಬರಿಗೆ ಅವಕಾಶ ನೀಡಲು, ಮಲ್ಲಿಕಾ ಶೆರಾವತ್ ಪಾತ್ರಕ್ಕೆ ಸಂಜನಾ ಅವರನ್ನು ಆಯ್ಕೆ ಮಾಡಿದ್ದೇವು. ನಂತರ ನಾವು ಸಂಜನಾ ಅವರನ್ನು ಕತೆ ಹೇಳಿದೆ. ಅಲ್ಲದೇ ಮರ್ಡರ್ ಸಿನಿಮಾದ ಸಿಡಿಯನ್ನು ಹಾಕಿ ಅವರನ್ನು ತೋರಿಸಿ ಈ ರೀತಿಯಲ್ಲೇ ನಾನು ಸಿನಿಮಾ ಮಾಡುತ್ತಿದ್ದೇನೆ ಎಂದು ಹೇಳಿದೆ. ಅಲ್ಲದೇ ಈ ಚಿತ್ರದ ಎರಡನೇ ಭಾಗದಲ್ಲಿ ಅವರಿಗೆ ನಾನು ತಾಳಿಯ ಮಹತ್ವದ ಬಗ್ಗೆ ತಿಳಿಸಿದ್ದೆ.

    ನಾನು ಈ ಚಿತ್ರದಲ್ಲಿ ಬೆತ್ತಲೆಯ ಸೀನ್ ತೋರಿಸಿಲ್ಲ. ಆಗ ಅವರು ನನಗೆ 16 ವರ್ಷ ಎಂದು ಹೇಳಿದ್ದರು. ಗಂಡ-ಹೆಂಡತಿ ಸಂಜನಾ ಅವರ ಮೊದಲ ಸಿನಿಮಾ ಅಲ್ಲ. ಈ ಹಿಂದೆ ಅವರು ಜೂನಿಯರ್ ಆರ್ಟಿಸ್ಟ್ ಆಗಿ ನಟನೆ ಮಾಡಿದ್ದರು. ಗಂಡ-ಹೆಂಡತಿ ಸಂಜನಾ ಅವರ 5ನೇ ಸಿನಿಮಾ. ಗಂಡ- ಹೆಂಡತಿ ಸಿನಿಮಾ ಮಾಡುವಾಗ ಈ ಸಿನಿಮಾ ಮರ್ಡರ್ ರಿಮೇಕ್ ಎಂದು ಹೇಳಿದೆ. ಈ ಸಿನಿಮಾಗಾಗಿ ಮಲ್ಲಿಕಾ ಶರವಾತ್ ಪಾತ್ರಕ್ಕಾಗಿ 150ಕ್ಕೂ ಹೆಚ್ಚು ಜನರ ಆಡಿಶನ್ ನಡೆದಿತ್ತು. ಆಡಿಶನ್ ವೇಳೆ ಪಾಸಾದವರಿಗೆ ಇದು ಮರ್ಡರ್ ಸಿನಿಮಾ ರಿಮೇಕ್ ಎಂದು ಹೇಳಿದ್ದಾಗ ಅವರು ಅಭಿನಯಿಸಲ್ಲ ಎಂದು ಹೇಳಿದ್ದರು.

    ಯಾವುದೇ ಮಕ್ಕಳು ಹೊರಗೆ ಬರುತ್ತಾರೆಂದರೆ ತಮ್ಮ ಜೊತೆ ತಂದೆ- ತಾಯಿಯನ್ನು ಕರೆದುಕೊಂಡು ಬರುತ್ತಾರೆ. ಆದರೆ ಸಿನಿಮಾ ಶೂಟಿಂಗ್ ಸಮಯದಲ್ಲಿ ಸಂಜನಾ ಅವರ ತಂದೆ ಬಂದಿರಲಿಲ್ಲ. ನಂತರ ಚಿತ್ರದ ಬಿಡುಗಡೆಯಾದ ಮೊದಲ ದಿನ ಸಂಜನಾ ಅವರ ತಂದೆ ಹಾಜರಾಗಿದ್ದರು. ಆದರೆ ಸಂಜನಾ, ನನ್ನ ತಂದೆ ಸಿನಿಮಾ ನೋಡಲು ಆಗಲಿಲ್ಲ. ನಂತರ ನನ್ನ ತಂದೆ ಸಿನಿಮಾ ನೋಡಿ ತಲೆ ತಗ್ಗಿಸಿ ಚಿತ್ರಮಂದಿರದಿಂದ ಹೊರ ಬಂದರು ಎಂದು ಹೇಳುತ್ತಾರೆ. ಈ 12 ವರ್ಷದಲ್ಲಿ ಅವರ ತಂದೆ ನನಗೆ ಕರೆ ಮಾಡಿ ನನ್ನ ಮಗಳನ್ನು ಯಾಕೆ ಈ ರೀತಿ ಬಳಸಿಕೊಂಡಿದ್ದೀಯಾ ಎಂದು ಇದೂವರೆಗೆ ಕರೆ ಮಾಡಿ ಪ್ರಶ್ನೆ ಮಾಡಿಲ್ಲ.

    ನಾನು ಸೆಕ್ಸ್ ಸಿನಿಮಾ ಮಾಡುವುದ್ದಕ್ಕೆ ಇಲ್ಲಿ ಬಂದಿಲ್ಲ. ನಾನು ಇಲ್ಲಿ ಗಂಡ- ಹೆಂಡತಿಯ ಬಾಂಧವ್ಯವನ್ನು ತೋರಿಸಲು ಪ್ರಯತ್ನಪಟ್ಟಿದ್ದೇನೆ. ನಾನು ಹೆದರಿಸಿ ಕೆಲಸ ಮಾಡಿಲ್ಲ. ಚಿತ್ರದ ಮೊದಲ ದಿನದ ಫೋಟೋಶೂಟ್ ವೇಳೆ ಅವರು ಸಂಜನಾ ಬೋಲ್ಡ್ ಆಗಿ ನಟಿಸಿದ್ದರು. ಈ ವೇಳೆ ಚಿತ್ರದ ಸಹ ನಿರ್ದೇಶಕರು ನನಗೆ ಸಂಜನಾ ಹೇಗೆ ನಟಿಸಿದ್ದಾರೆ ನೋಡಿ ಎಂದು ಹೇಳಿದ್ದರು. ಸಂಜನಾ ಅವರಿಗೆ ಸರಿಯಾಗಿ ಕನ್ನಡ ಬರುತ್ತಿರಲಿಲ್ಲ. ಅವರಿಗೆ ಕನ್ನಡ ಹೇಳಿಕೊಟ್ಟು ಆಕೆಯನ್ನು ತಿದ್ದಿದ್ದೇವೆ.

    ಬ್ಯಾಂಕಾಕ್ ಶೂಟಿಂಗ್ ಬಳಿಕವೂ ಬೆಂಗಳೂರಿನಲ್ಲೂ ಕಿಸ್ಸಿಂಗ್ ದೃಶ್ಯದ ಶೂಟಿಂಗ್ ಮಾಡಿದ್ದಾರೆ ಎನ್ನುವ ಸಂಜನಾ ಆರೋಪಕ್ಕೆ, ಬ್ಯಾಂಕಾಕ್ ಶೂಟಿಂಗ್ ಹೋಗಿದ್ದಾಗ ಸಂಜನಾ ರಾತ್ರಿಯೆಲ್ಲಾ ಶಾಪಿಂಗ್ ಹೋಗುತ್ತಿದ್ದರು. ನಂತರ ಬೆಳಗ್ಗೆ ಬಂದಿದ್ದಾಗ ಅವರ ಕಣ್ಣು ಕೆಂಪಾಗಿತ್ತು. ಅವರು ಈ ಸ್ಥಿತಿಯಲ್ಲಿರುವಾಗ ನಾನು ಅವರಿಂದ ಹೇಗೆ ಕಿಸ್ಸಿಂಗ್ ಸೀನ್ ಮಾಡಿಸಲಿ? ಸಮಯದಲ್ಲೇ ನಾನು ಅವರಿಗೆ ಬೈದಿದ್ದೆ. ಆರಂಭದಲ್ಲಿ ಸಂಜನಾಗೆ ಗಂಡ- ಹೆಂಡತಿ ಸಿನಿಮಾದ ಮೂಲಕ ಪಬ್ಲಿಸಿಟಿ ಬೇಕಿತ್ತು. ಈಗ ಮೀಟೂ ಅಭಿಯಾನದ ಚಿತ್ರದ ವಿರುದ್ಧ ಹೇಳಿಕೆ ನೀಡಿ ಪಬ್ಲಿಸಿಟಿಗೆ ಮುಂದಾಗಿದ್ದಾರೆ.

    ಸಂಜನಾ ಅವರ ಹತ್ತಿರ ಈಗ ಕೋಟಿ ರೂ. ಆಸ್ತಿ ಇದೆ. ಅದಕ್ಕೆಲ್ಲಾ ಐಟಿ ರಿರ್ಟನ್ಸ್ ಸಲ್ಲಿಸಿದ್ದಾರಾ. ಅವರು ಈಗ ಜಾಗ್ವಾರ್ ಕಾರಿನಲ್ಲಿ ಓಡಾಡುತ್ತಾರೆ. ನಾನು ಈಗ ಮಾರುತಿ ಬೆಲೆನೋ ಕಾರಿನಲ್ಲಿ ಓಡಾಡುತ್ತಿದ್ದೇನೆ. ಅವರು ಐಶಾರಾಮಿ ಮನೆಯಲ್ಲಿ ಇರುತ್ತಾರೆ. ನಾನು 8 ಸಾವಿರ ಕೊಟ್ಟು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ. ಈಗ ಅವರು ತಮಿಳು, ತೆಲುಗು, ಮಲೆಯಾಳಂ ಎಲ್ಲ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈಗ ಅವರನ್ನು ಗಂಡ- ಹೆಂಡತಿ ಸಂಜನಾ ಎಂದು ಗುರುತಿಸುತ್ತಾರೆ. ಸಂಜನಾ ಅವರಿಗೆ ಕನ್ನಡ ಬಿಟ್ಟರೆ ಬೇರೆ ಚಿತ್ರರಂಗವಿದೆ. ನಮಗೆ ಕನ್ನಡ ಚಿತ್ರರಂಗ ಮಾತ್ರ ಇದೆ. ಈಗ ನನ್ನ ವಿರುದ್ಧ ಆರೋಪಿಸಿದ್ದನ್ನು ನಾಳೆ ಸಂಜನಾ ಬೇರೆ ಚಿತ್ರರಂಗದ ನಿರ್ದೇಶಕರನ್ನು ಮಾಡಬಹುದು.

    ಅಕ್ಟೋಬರ್ 16 ವರೆಗೂ ಸಂಜನಾ ನನಗೆ ಮೆಸೇಜ್ ಮಾಡಿದ್ದಕ್ಕೆ ಸಾಕ್ಷಿಗಳಿದೆ. ನನ್ನ ಹುಟ್ಟುಹಬ್ಬಕ್ಕೆ ನೀವು ಬನ್ನಿ. ಈ ಕಾಸ್ಟ್ಲಿ ಹೋಟೆಲ್‍ಗೆ ನೀವು ಒಬ್ಬರೇ ಬರುತ್ತೀರಾ ಅಥವಾ ನಿಮ್ಮ ಸ್ನೇಹಿತರ ಜೊತೆ ಬರುತ್ತೀರಾ. ನಾನು ಸೀಟ್ ಬುಕ್ ಮಾಡಬೇಕೆಂದು ಹೇಳಿದ್ದರು. ನಂತರ ಸಂಜನಾ ಹಿಂದಿಯ ‘ಜಿಸ್ಮ್’ ಸಿನಿಮಾ ಮಾಡೋಣ ಎಂದು ಹೇಳಿದ್ದರು. ಆಗ ನಾನು ಗಂಡ- ಹೆಂಡತಿ ಸಿನಿಮಾ ಮಾಡಿದೆ ಸಾಕು ಎಂದು ಹೇಳಿದೆ.

    https://www.youtube.com/watch?v=Fngx4OL8iUY

    https://www.youtube.com/watch?v=2YYfQAOr3SM

    https://www.youtube.com/watch?v=EhTC1JWIn1I

    https://www.youtube.com/watch?v=Pr1WxEPsJPc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಘಟನೆ ನಡೆದಾಗಲೇ ಚಲನಚಿತ್ರ ಮಂಡಳಿಗೆ ದೂರು ನೀಡಬೇಕಿತ್ತು: ಫಿಲ್ಮಂ ಚೇಂಬರ್ ಅಧ್ಯಕ್ಷ ಚೆನ್ನೇಗೌಡ

    ಘಟನೆ ನಡೆದಾಗಲೇ ಚಲನಚಿತ್ರ ಮಂಡಳಿಗೆ ದೂರು ನೀಡಬೇಕಿತ್ತು: ಫಿಲ್ಮಂ ಚೇಂಬರ್ ಅಧ್ಯಕ್ಷ ಚೆನ್ನೇಗೌಡ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಮೀಟೂ ಶುರುವಾಗಿದ್ದು, ನಟಿ ಸಂಜನಾ ಹಾಗೂ ಶೃತಿ ಹರಿಹರನ್ ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಸದ್ಯ ನಟಿಯರಾದ ಸಂಜನಾ ಹಾಗೂ ಶೃತಿ ಹರಿಹರನ್ ಮಾಡಿರುವ ಆರೋಪಗಳಿಗೆ ಘಟನೆ ನಡೆದಾಗಲೇ ಚಲನಚಿತ್ರ ಮಂಡಳಿಗೆ ದೂರು ನೀಡಬೇಕಿತ್ತು ಫಿಲ್ಮಂ ಚೇಂಬರ್ ಅಧ್ಯಕ್ಷ ಚೆನ್ನೇಗೌಡ ಪ್ರತಿಕ್ರಿಯಿಸಿದ್ದಾರೆ.

    ಶೃತಿ ಹರಿಹರನ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಫಿಲ್ಮಂ ಚೇಂಬರ್ ಅಧ್ಯಕ್ಷ ಚಿನ್ನೇಗೌಡ, “ಈ ಘಟನೆ ನಡೆದು ತುಂಬಾ ದಿನ ಆಗಿದೆ. ಈಗ ಈ ಘಟನೆ ಬಗ್ಗೆ ಮಾತನಾಡುವುದು ಸರಿಯಲ್ಲ. ಈ ಘಟನೆ ನಡೆದಾಗಲೇ ಚಲನಚಿತ್ರ ಮಂಡಳಿಗೆ ದೂರು ನೀಡಬೇಕಿತ್ತು. ಈಗ ಯಾಕೆ ಹೀಗೆ ಮಾಡುತ್ತಿದ್ದಾರೆಂಬುದು ನನಗೆ ಗೊತ್ತಿಲ್ಲ. ಅಂದೇ ಇಬ್ಬರು ಕುಳಿತು ಮಾತುಕತೆ ನಡೆಸಿ ಈ ಪ್ರಕರಣವನ್ನು ಬಗೆಹರಿಸಿಕೊಳ್ಳಬೇಕಿತ್ತು. ಫಿಲ್ಮಂ ಚೇಂಬರ್ ಗೆ ಬಂದು ಮಾತನಾಡಬಹುದಿತ್ತು. ಅದನ್ನು ಬಿಟ್ಟು ಮಾಧ್ಯಮದ ಮೂಲಕ ಈ ರೀತಿ ಮಾತನಾಡುವುದು ಸರಿಯಲ್ಲ. ಇಲ್ಲಿವರೆಗೂ ದೂರು ಬಂದಿಲ್ಲ ದೂರು ಬಂದರೆ ಈ ಬಗ್ಗೆ ಮಾತನಾಡುತ್ತೇವೆ” ಎಂದು ಶೃತಿ ಹರಿಹರನ್ ಹಾಗು ಸಂಜನಾ ಮಾಡಿರುವ ಆರೋಪಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:  ಶೃತಿ ಹರಿಹರನ್ ಆರೋಪಕ್ಕೆ ಅರ್ಜುನ್ ಸರ್ಜಾ ತಿರುಗೇಟು

    ಅರ್ಜುನ್ ಸರ್ಜಾ ಅವರನ್ನು ನಾನು ಮೊದಲಿನಿಂದಲೂ ನೋಡಿದ್ದೇನೆ. ಅರ್ಜುನ್ ಸರ್ಜಾ ಮೇಲೆ ಇಲ್ಲಿಯವರೆಗೂ ಈ ರೀತಿಯ ಆರೋಪ ಎದುರಿಸಿಲ್ಲ. ಈ ರೀತಿ ಆರೋಪಗಳನ್ನು ಮಾಡಿ ಲೈಮ್ ಲೈಟ್ ಗೆ ಬರುವುದು ನಿಲ್ಲಬೇಕು ಎಂದು ಅರ್ಜುನ್ ಸರ್ಜಾ ಬಗ್ಗೆ ನಿರ್ಮಾಪಕ ಭಾ. ಮಾ ಹರೀಶ್ ಹೇಳಿದ್ದಾರೆ. ಇದನ್ನೂ ಓದಿ: ಬೆಡ್ ರೂಂ, ಕ್ಲೋಸ್ ಅಪ್ ಸೀನ್ ಇದ್ದ ಚಿತ್ರವನ್ನ ಯಾಕೆ ಮಾಡ್ಬೇಕು – ಶ್ರುತಿ ವಿರುದ್ಧ ಅರ್ಜುನ್ ಸರ್ಜಾ ಅತ್ತೆ ಕಿಡಿ

    ಮೀಟೂ ಆರೋಪ ಎದುರಿಸುತ್ತಿರುವ ನಿರ್ದೇಶಕ ರವಿ ಶ್ರೀವತ್ಸಾ ಫಿಲಂ ಚೇಂಬರ್ ನಲ್ಲಿ ಮೀಟೂ ಆರೋಪದ ಬಗ್ಗೆ ಕುರಿತು ಚರ್ಚೆ ಮಾಡುತ್ತಿದ್ದಾರೆ. ಎರಡು ದಿನಗಳ ಹಿಂದೆ ನಟಿ ಸಂಜನ ನಿರ್ದೇಶಕ ರವಿ ಶ್ರೀವತ್ಸಾ ವಿರುದ್ಧ ಆರೋಪ ಮಾಡಿದರು. ಸದ್ಯ ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಜೊತೆ ರವಿ ಶ್ರೀವತ್ಸಾ ಮಾತುಕತೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv