Tag: sanjana

  • ಕೊಲಂಬೋದಲ್ಲಿ ‘ಆಕ್ಸಿಜನ್’ ಡ್ಯಾನ್ಸ್ ಮಾಡಿದ್ದ ಸಂಜನಾ

    ಕೊಲಂಬೋದಲ್ಲಿ ‘ಆಕ್ಸಿಜನ್’ ಡ್ಯಾನ್ಸ್ ಮಾಡಿದ್ದ ಸಂಜನಾ

    – ಕ್ಯಾಸಿನೋ ಪಾರ್ಟಿಯಲ್ಲಿ ಸಂಜನಾ ನೃತ್ಯ
    – ಸಂಜನಾ ನೃತ್ಯಕ್ಕೆ ವಿಶೇಷ ಪ್ರಚಾರ

    ಬೆಂಗಳೂರು: ನಾನು ಸಿನಿಮಾ ಈವೆಂಟ್‍ಗಾಗಿ ಶ್ರೀಲಂಕಾಕ್ಕೆ ಹೋಗಿದ್ದೆ ಅಷ್ಟೇ. ಅದು ಬಿಟ್ಟರೆ ನನಗೂ ಶ್ರೀಲಂಕಾಕ್ಕೂ ಯಾವುದೇ ನಂಟಿಲ್ಲ ಎಂದು ನಟಿ ಸಂಜನಾ ಸಿಸಿಬಿ ಪೊಲೀಸರು ಮುಂದೆ ಹೇಳುತ್ತಿದ್ದಾರೆ. ಆದರೆ ಇದೀಗ ನಟಿ ಸಂಜನಾ ಕ್ಯಾಸಿನೋದಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಿಸಿಬಿ ಪೊಲೀಸರಿಗೆ ಲಭ್ಯವಾಗಿದೆ. ಇದನ್ನೂ ಓದಿ: ಸಂಬರಗಿಗೆ ಸಿಸಿಬಿ ನೋಟಿಸ್ – ಟೆನ್ಶನ್ ಜಾಸ್ತಿಯಾಗಿ ರಾತ್ರಿ ನಿದ್ದೆ ಮಾಡದ ಸಂಜನಾ

    ನಟಿ ಸಂಜನಾ ಕೊಲಂಬೋದಲ್ಲಿ ‘ಆಕ್ಸಿಜನ್’ ಡ್ಯಾನ್ಸ್ ಕೂಡ ಮಾಡಿದ್ದಾರೆ. ಕೊಲಂಬೋದ ಅನೇಕ ಕ್ಯಾಸಿನೋಗಳಲ್ಲಿ ನಟಿ ಸಂಜನಾ ಡ್ಯಾನ್ಸ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಡಿಸೆಂಬರ್, ಜನವರಿಯಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಲಭ್ಯವಾಗಿದೆ. ಆದರೆ ಸಂಜನಾ, ನಾನು ಸಿನಿಮಾ ಈವೆಂಟ್‍ಗಾಗಿ ಶ್ರೀಲಂಕಾಕ್ಕೆ ಹೋಗಿದ್ದೆ ಅಷ್ಟೇ. ಅದು ಬಿಟ್ಟರೆ ನನಗೂ ಶ್ರೀಲಂಕಾಕ್ಕೂ ಯಾವುದೇ ನಂಟಿಲ್ಲ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ:   ‘ಗಂಡ-ಹೆಂಡತಿ’ ನಟಿ ಮದುವೆ ಸೀಕ್ರೆಟ್- ಮ್ಯಾರೇಜ್ ಆಗಿಲ್ಲ ಅಂತ ಸುಳ್ಳು ಹೇಳಿದ್ರಾ ಸಂಜನಾ?

    ಸತತ ಐದು ವರ್ಷಗಳಿಂದ ನಟಿ ಸಂಜನಾ ಕ್ಯಾಸಿನೋಗಳಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಕೇವಲ ಶೇಕ್ ಫಾಜಿಲ್ ಕ್ಯಾಸಿನೋಗೆ ಮಾತ್ರವಲ್ಲದೇ ಶ್ರೀಲಂಕಾದ ಅನೇಕ ಕ್ಯಾಸಿನೋಗಳಲ್ಲಿ ಸಂಜನಾ ಡ್ಯಾನ್ಸ್ ಮಾಡಿದ್ದಾರೆ. ಕ್ಯಾಸಿನೋದಲ್ಲಿ ನಡೆದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸಂಜನಾ ಫೋಟೋ ಹಾಕಿ ‘ಆಕ್ಸಿಜನ್ ನೃತ್ಯ’ ಮಾಡಲಿದ್ದಾರೆ ಎಂದು ವಿವರ ಮುದ್ರಣವಾಗಿತ್ತು.

    ಕೊಲಂಬೋ ಕ್ಯಾಸಿನೋ ಪಾರ್ಟಿಯಲ್ಲಿ ನಟಿ ಸಂಜನಾ ಡ್ಯಾನ್ಸ್ ಮಾಡಿರುವ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ವಿಡಿಯೋದಲ್ಲಿ ಸಂಜನಾ ಶಾಂಪೇನ್ ಬಾಟಲ್ ಚಿಯರ್ಸ್ ಮಾಡಿ ಡ್ಯಾನ್ಸ್ ಮಾಡಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಶೇಕ್ ಫಾಝಿಲ್ ಜೊತೆಗೆ ಟಿಕ್‍ಟಾಕ್ ವಿಡಿಯೋ ಕೂಡ ಮಾಡಿದ್ದಾರೆ. ಅಲ್ಲದೇ ಸಂಜನಾ ಕ್ಯಾಸಿಯೋ ಪಾರ್ಟಿಗೆ ಪದೇ ಪದೇ ಹೋಗಿ ಬರುತ್ತಿದ್ದರು ಎಂಬುದು ಎಂದು ತಿಳಿದುಬಂದಿದೆ. ಹೀಗಾಗಿ ಈ ಕ್ಯಾಸಿನೋ ಪಾರ್ಟಿಯೇ ಸಂಜನಾಗೆ ಮುಳುವಾಗುತ್ತಾ ಎಂಬ ಅನುಮಾನ ಮೂಡಿದೆ. ಶ್ರೀಲಂಕಾ ಅಲ್ಲದೇ ಬಾಲಿಯಲ್ಲೂ ಶೇಕ್ ಫಾಝಿಲ್ ಜೊತೆ ಗುರುತಿಸಿಕೊಂಡಿರುವ ಫೋಟೋ ಲಭ್ಯವಾಗಿದೆ.

    ಸದ್ಯಕ್ಕೆ ಶೇಕ್ ಫಾಝಿಲ್ ತಲೆಮರೆಸಿಕೊಂಡಿದ್ದು, ಸಿಸಿಬಿ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೂ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನವಾಗಿರುವ ನಟಿ ಸಂಜನಾ ಅವರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ನ್ಯಾಯಾಲಯ ನೀಡಿದೆ. ಸೋಮವಾರದವರೆಗೂ ನಟಿ ರಾಗಿಣಿ, ಸಂಜನಾ ಸೇರಿದಂತೆ 6 ಮಂದಿ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲೇ ಉಳಿಯಲಿದ್ದಾರೆ.

  • ಸಂಬರಗಿಗೆ ಸಿಸಿಬಿ ನೋಟಿಸ್ – ಟೆನ್ಶನ್ ಜಾಸ್ತಿಯಾಗಿ ರಾತ್ರಿ ನಿದ್ದೆ ಮಾಡದ ಸಂಜನಾ

    ಸಂಬರಗಿಗೆ ಸಿಸಿಬಿ ನೋಟಿಸ್ – ಟೆನ್ಶನ್ ಜಾಸ್ತಿಯಾಗಿ ರಾತ್ರಿ ನಿದ್ದೆ ಮಾಡದ ಸಂಜನಾ

    ಬೆಂಗಳೂರು: ಇಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪ್ರಶಾಂತ್ ಸಂಬರಗಿಗೆ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸುಮಾರು 10 ಗಂಟೆ ನಂತರ ಸಿಸಿಬಿ ಕಚೇರಿಗೆ ಪ್ರಶಾಂತ್ ಸಂಬರಗಿ ಬರಲಿದ್ದಾರೆ. ಆದರೆ ಇದರಿಂದ ನಟಿ ಸಂಜನಾ ಮತ್ತು ಶಾಸಕ ಜಮೀರ್ ಅಹ್ಮದ್‍ಗೆ ಟೆನ್ಶನ್ ಶುರುವಾಗಿದೆ. ಇದನ್ನೂ ಓದಿ:   ಕೋರ್ಟ್ ಆದೇಶ ಹೊರಬರುತ್ತಿದ್ದಂತೆ ರಾಗಿಣಿ-ಸಂಜನಾ ಕಣ್ಣೀರು

    ಪ್ರಶಾಂತ್ ಸಂಬರಗಿ ನಟಿ ಸಂಜನಾ ಮತ್ತು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಆರೋಪ ಮಾಡಿದ್ದರು. ಬಾಲಿವುಡ್ ಸೇರಿದಂತೆ ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಹಿಂದೆ ಶಾಸಕರ ಕೈವಾಡವಿದೆ ಎಂದು ಆರೋಪ ಮಾಡಿದ್ದರು. ಹೀಗಾಗಿ ನಿಮ್ಮ ಬಳಿ ಇರುವ ದಾಖಲೆ ಸಹಿತ ವಿಚಾರಣೆ ಬನ್ನಿ ಎಂದು ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ಇದನ್ನೂ ಓದಿ: ಸಿಕ್ಕಾಕೊಂಡ್ರರೆ ನಾವು ಮತ್ತೆ ಜೈಲಿಗೆ ಹೋಗ್ಬೇಕಾಗುತ್ತೆ- ಆಸ್ಪತ್ರೆಯಲ್ಲಿ ನಟಿ ರಾಗಿಣಿ ಕಿರಿಕ್

    ಡ್ರಗ್ಸ್ ಜಾಲದಲ್ಲಿ ಯಾರ‍್ಯಾರು ನಂಟು ಹೊಂದಿದ್ದಾರೆಂಬ ಮಾಹಿತಿ ಕೋರಿ ನೋಟಿಸ್ ನೀಡಲಾಗಿದೆ. ಆದ್ದರಿಂದ ದಾಖಲೆ ಸಮೇತ ಸಿಸಿಬಿಗೆ ಹಾಜರಾಗಲು ಸಂಬರಗಿ ಸಿದ್ಧತೆ ಮಾಡಿಕೊಂಡಿದ್ದಾರೆ. ಹೀಗಾಗಿ ಸಂಬರಗಿ ಯಾವ ದಾಖಲೆ ನೀಡಲಿದ್ದಾರೆ ಎಂದು ನಟಿ ಸಂಜನಾ ಮತ್ತು ಶಾಸಕ ಜಮೀರ್ ಆತಂಕಗೊಂಡಿದ್ದಾರೆ. ಸಂಬರಗಿಗೆ ಸಿಸಿಬಿ ನೋಟಿಸ್ ವಿಚಾರ ಕೇಳಿ ಸಂಜನಾಗೆ ಟೆನ್ಶನ್ ಮಾಡಿಕೊಂಡು ರಾತ್ರಿಯಿಡೀ ನಿದ್ದೆ ಮಾಡಲಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸಂಜನಾ ಜೊತೆ ಕೊಲಂಬೋಗೆ ಹೋಗಿದ್ದು ಸಾಬೀತಾದ್ರೆ ನನ್ನ ಆಸ್ತಿಯೆಲ್ಲ ಸರ್ಕಾರಕ್ಕೆ ಬರೆದುಕೊಡ್ತೀನಿ: ಜಮೀರ್

    ಸಂಜನಾ ರಾಜಕಾರಣಿ ಜೊತೆ ಶ್ರೀಲಂಕಾ ಕ್ಯಾಸಿನೋಗೆ ಹೋಗಿದ್ದರು ಎಂದು ಸಂಬರಗಿ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪ್ರಶಾಂತ್ ಸಂಬರಗಿ ಸಿಸಿಬಿ ಮುಂದೆ ಮಹತ್ವದ ದಾಖಲೆಗಳನ್ನು ಒದಗಿಸುವ ಸಾಧ್ಯತೆ ಇದೆ. ಸಿಸಿಬಿ ಪೊಲೀಸರಿಗೆ ಸಂಜನಾಗೆ ಸಂಬಂಧಪಟ್ಟ ಫೋಟೋಗಳು ಹಾಗೂ ವಿಡಿಯೋ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮತ್ಯಾವ ಸಾಕ್ಷ್ಯ ಬಿಚ್ಚಿಡುತ್ತಾರೋ ಎಂದು ರಾಗಿಣಿ ಜೊತೆಯೂ ಮಾತನಾಡದೆ ಮೌನವಾಗಿದ್ದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಇತ್ತ ಜಮೀರ್ ವಿರುದ್ಧ ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದರು. ಹೀಗಾಗಿ ಸಂಬರಗಿ ಹೇಳಿಕೆ ವಿರುದ್ಧ ಎಫ್‍ಐಆರ್ ದಾಖಲು ಮಾಡುವಂತೆ ಜಮೀರ್ ಕೋರ್ಟ್ ಮೊರೆ ಹೋಗಿ ಕೇಳಿಕೊಂಡಿದ್ದರು. ಅದರಂತೆಯೇ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

    ನಟಿ ಸಂಜನಾ ಅವರ ವಿಚಾರದಲ್ಲಿ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳ ಕುರಿತು ಎರಡು ದಿನಗಳ ಹಿಂದೆ ಮಾತನಾಡಿದ್ದ ಜಮೀರ್ ಅವರು, ಸಂಜನಾ ಹಾಗೂ ನಾನು ಕೊಲಂಬೋಗೆ ಹೋಗಿರುವ ಬಗ್ಗೆ ಖುದ್ದು ಸಿಎಂ ತನಿಖೆ ಮಾಡಲಿ ಎಂದು ಮನವಿ ಮಾಡುತ್ತೇನೆ. ನಾನು ತನಿಖೆ ಎದುರಿಸಲು ತಯಾರಿದ್ದೇನೆ ಎಂದಿದ್ದರು.

    ನಾನು ಆಕೆ ಒಂದೇ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರೆ ಅಲ್ಲಿ ಪಾಸ್‍ಪೋರ್ಟ್ ಕೊಡಬೇಕಾಗುತ್ತೆ. ಅದನ್ನು ಪರಿಶೀಲಿಸಲಿ. ನಾನು ಸಂಜನಾ ಕೊಲಂಬೋಗೆ ಹೋದರೆ ಒಂದೇ ವಿಮಾನದಲ್ಲಿ ತಾನೇ ಹೋಗಬೇಕು. ಆ ಕುರಿತಾದ ಫ್ಲೈಟ್ ಮಾಹಿತಿಗಳನ್ನು ಪರಿಶೀಲನೆ ನಡೆಸಲಿ. ವಿದೇಶಗಳ ಹೋಟೆಲ್‍ಗಳಲ್ಲಿ ಹೋಟೆಲ್ ಸಿಸಿ ಕ್ಯಾಮರಾ ದೃಶ್ಯಗಳನ್ನು 10 ವರ್ಷ ಇಡಬೇಕು. ಅದನ್ನೂ ಚೆಕ್ ಮಾಡಲಿ ಎಂದು ತಿಳಿಸಿದ್ದರು.

    ಅಲ್ಲಿರುವ ಸಿಸಿಟಿವಿ ಪರಿಶೀಲನೆ ಮಾಡಿದರೆ ನಾನು ಸಂಜನಾ ಅವರೊಂದಿಗೆ ಉಳಿದುಕೊಂಡಿದ್ದರೆ ಖಂಡಿತ ಗೊತ್ತಾಗುತ್ತೆ. ಈಗ ನಮ್ಮ ಸರ್ಕಾರ ಇಲ್ಲ. ಬಿಜೆಪಿ ಸರ್ಕಾರನೇ ಇರುವುದರಿಂದ ಅವರೇ ಎಲ್ಲವನ್ನೂ ಪರಿಶೀಲನೆ ಮಾಡಲಿ. ಒಂದೊಮ್ಮೆ ನನ್ನ ಮೇಲಿನ ಆರೋಪ ಸಾಬೀತು ಆದರೆ ನನ್ನ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುತ್ತೇನೆ. ಆದರೆ ಆರೋಪ ಸುಳ್ಳಾದರೆ ಪ್ರಶಾಂತ್ ಸಂಬರಗಿ ಏನು ಮಾಡುತ್ತೀರಾ ನೀವೇ ಹೇಳಿ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದರು.

  • ಸಂಜನಾ ಜೊತೆ ಲಂಕಾ ಪ್ರಯಾಣ – ಸಂಬರಗಿ ವಿರುದ್ಧ ಎಫ್‌ಐಆರ್‌ ದಾಖಲು

    ಸಂಜನಾ ಜೊತೆ ಲಂಕಾ ಪ್ರಯಾಣ – ಸಂಬರಗಿ ವಿರುದ್ಧ ಎಫ್‌ಐಆರ್‌ ದಾಖಲು

    ಬೆಂಗಳೂರು: ಸಿನಿ ವಿತರಕ ಪ್ರಶಾಂತ್‌ ಸಂಬರಗಿ ವಿರುದ್ಧ ಜಮೀರ್‌ ಅಹಮದ್‌ ನೀಡಿದ ದೂರಿನ ಅನ್ವಯ ಎಫ್‌ಐಆರ್‌ ದಾಖಲಾಗಿದೆ.

    ಸಂಬರಗಿ ಆರೋಪದ ಹಿನ್ನೆಲೆಯಲ್ಲಿ ಜಮೀರ್‌ ಅಹಮದ್‌ ಬೆಂಗಳೂರಿನ 24ನೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ನೀಡಿದ್ದರು.

    ಈ ದೂರಿನಂತೆ ಐಪಿಸಿ ಸೆಕ್ಷನ್ 120 ಬಿ(ಕ್ರಿಮಿನಲ್‌ ಪಿತೂರಿ), 504 (ಉದ್ದೇಶಪೂರ್ವಕ ತೇಜೋವಧೆ), 463 (ಫೋರ್ಜರಿ) , 465 (ಫೋರ್ಜರಿ ಬಗ್ಗೆ ಶಿಕ್ಷೆಯ ಪ್ರಮಾಣ) 506 (ಬೆದರಿಕೆ ಒಡ್ಡುವುದು) ಅಡಿಯಲ್ಲಿ ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    2019ರ ಜುಲೈ 8 ರಂದು ಶ್ರೀಲಂಕಾದ ಕೊಲಂಬೋದಲ್ಲಿ ಸಂಜನಾ ಮತ್ತು ಜಮೀರ್ ಇದ್ದರು. ನಾನು ಸುಳ್ಳು ಹೇಳುತ್ತಿಲ್ಲ. ನೀವು ಜೂಜು ಮತ್ತು ಡ್ರಗ್ಸ್ ನಲ್ಲಿ ಭಾಗಿಯಾಗದೇ ಇದ್ದರೆ ನಿಮಗೆ ಹೆದರಿಕೆ ಯಾಕೆ ಎಂದು ಪ್ರಶಾಂತ್ ಸಂಬರಗಿ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಸಂಬರಗಿ ಆರೋಪಕ್ಕೆ ತಿರುಗೇಟು ನೀಡಿದ್ದ ನಟಿ ಸಂಜನಾ, ಶಾಸಕ ಜಮೀರ್ ಅವರೇ ಪ್ರಶಾಂತ್ ಸಂಬರಗಿ ಅವರನ್ನು ಸುಮ್ಮನೇ ಬಿಡಬೇಡಿ ಎಂದು ಕಣ್ಣೀರು ಹಾಕಿಕೊಂಡು ಮನವಿ ಮಾಡಿಕೊಂಡಿದ್ದರು.  ಇದನ್ನೂ ಓದಿ: ನನ್ನ ವಿರುದ್ಧ ತನಿಖೆ ನಡೆಸಿ – ರಾಜ್ಯ ಸರ್ಕಾರಕ್ಕೆ ಜಮೀರ್ ಸವಾಲ್

    ಡ್ರಗ್ಸ್ ಮಾಫಿಯಾದಲ್ಲಿ ಸಿಸಿಬಿ ಪೊಲೀಸರು ಬಂಧಿಸಿರುವ ನಟಿ ಸಂಜನಾ ಅವರೊಂದಿಗೆ ನಾನು ಕೊಲಂಬೋಗೆ ಹೋಗಿದ್ದು ಸಾಬೀತಾದರೆ ನನ್ನ ಆಸ್ತಿಯೆಲ್ಲ ಸರ್ಕಾರಕ್ಕೆ ಬರೆದುಕೊಡುತ್ತೇನೆ ಎಂದು ಜಮೀರ್‌ ಹೇಳಿದ್ದಾರೆ.

    ನಾನು ಆಕೆ ಒಂದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರೆ ಅಲ್ಲಿ ಪಾಸ್‍ಪೋರ್ಟ್ ಕೊಡಬೇಕಾಗುತ್ತೆ. ಅದನ್ನು ಪರಿಶೀಲಿಸಲಿ. ನಾನು ಸಂಜನಾ ಕೊಲಂಬೋಗೆ ಹೋದರೆ ಒಂದೇ ವಿಮಾನದಲ್ಲಿ ತಾನೇ ಹೋಗಬೇಕು. ಆ ಕುರಿತಾದ ಫ್ಲೈಟ್ ಮಾಹಿತಿಗಳನ್ನು ಪರಿಶೀಲನೆ ನಡೆಸಲಿ. ವಿದೇಶಗಳ ಹೋಟೆಲ್‍ಗಳಲ್ಲಿ ಹೋಟೆಲ್ ಸಿಸಿ ಕ್ಯಾಮರಾ ದೃಶ್ಯಗಳನ್ನು 10 ವರ್ಷ ಇಡಬೇಕು. ಅದನ್ನೂ ಚೆಕ್ ಮಾಡಲಿ ಎಂದು ತಿಳಿಸಿದರು.

     

  • ನಶೆ‌ ನಟಿಯರು ಅರೆಸ್ಟ್‌ – ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದ ನಟ – ನಟಿಯರು ಸೈಲೆಂಟ್‌

    ನಶೆ‌ ನಟಿಯರು ಅರೆಸ್ಟ್‌ – ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದ ನಟ – ನಟಿಯರು ಸೈಲೆಂಟ್‌

    ಬೆಂಗಳೂರು: ನಟಿಯರಾದ ರಾಗಿಣಿ, ಸಂಜನಾ ಬಂಧನದ ಬಳಿಕ ಇವರ ಜೊತೆ ಸದಾ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದ ಯುವ ನಟ, ನಟಿಯರು ಮೌನಕ್ಕೆ ಶರಣಾಗಿದ್ದಾರೆ.

    ಹೌದು. ಸ್ಯಾಂಡಲ್‌ವುಡ್‌ನ ಮೂರನೇ ತಲೆಮಾರಿನ ನಟ, ನಟಿಯರು ರಾಗಿಣಿ, ಸಂಜನಾ ಬಂಧನ ಬಳಿಕ ಡ್ರಗ್ಸ್‌ ವಿಚಾರಕ್ಕೆ ಸಂಬಂಧಿಸಿದಂತೆ ಅಂತರ ಕಾಯ್ದುಕೊಂಡಿದ್ದಾರೆ. ವಿಶೇಷ ಏನೆಂದರೆ ಇಬ್ಬರು ನಟಿಯರ ಜೊತೆ ಮೂರನೇ ತಲೆಮಾರಿನ ಹಲವು ನಟ, ನಟಿಯರಿಗೆ ಹೆಚ್ಚಿನ ಸಂಪರ್ಕವಿತ್ತು. ಅವರೆಲ್ಲರೂ ಈಗ ಡ್ರಗ್ಸ್‌ ಮಾಫಿಯಾಯದಲ್ಲಿ ನಮ್ಮ ಹೆಸರು ಬರಬಹುದು ಎಂಬ ಭಯಕ್ಕೆ ಬಿದ್ದು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

    ಈ ಪ್ರಕರಣ ಬಯಲಿಗೆ ಬರುವ ಮೊದಲು ಇವರೆಲ್ಲ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು. ಯಾವಾಗ ಇಂದ್ರಜಿತ್‌ ಲಂಕೇಶ್‌ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಅವರು ಹೊಸ ತಲೆಮಾರಿನ ಯುವ ಕಲಾವಿದರು ಡ್ರಗ್ಸ್‌ ದಂಧೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರೋ ಅಲ್ಲಿಂದ ಇವರೆಲ್ಲರಿಗೂ ಭಯ ಮೂಡಲಾರಂಭಿಸಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಮಾಜಿ ಪರಿಷತ್‌ ಸದಸ್ಯರೊಬ್ಬರಿಗೆ ಲಂಕಾ ಕ್ಯಾಸಿನೋ ನಂಟು

    ಒಂದು ವೇಳೆ ಪ್ರತಿಕ್ರಿಯೆ ನೀಡಿದರೆ ಸುದ್ದಿಯಾಗುತ್ತದೆ. ಸುದ್ದಿಯಾದ ಕೂಡಲೇ ಪಾರ್ಟಿಯಲ್ಲಿ ಯಾರೋ ತೆಗೆದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ. ಹೀಗಾಗಿ ಈ ವಿಚಾರಕ್ಕೆ ಹೋಗಿ ಕೈ ಸುಟ್ಟು ಕೊಳ್ಳುವುದು ಯಾಕೆ ಎಂದು ಭಾವಿಸಿ ತೆಪ್ಪಗಿದ್ದಾರೆ ಎನ್ನಲಾಗುತ್ತಿದೆ.

    ಈ ನಟ, ನಟಿಯರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಆದರೆ ಡ್ರಗ್ಸ್‌ ಪ್ರಕರಣ ಬೆಳಕಿಗೆ ಬಂದ ನಂತರ ಅಂತರ ಕಾಯ್ದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ನಟಿಯರ ವಿಚಾರಣೆ ಸಂದರ್ಭದಲ್ಲಿ ನಮ್ಮ ಹೆಸರನ್ನು ಬಾಯಿಬಿಟ್ಟರೆ ಏನು ಮಾಡುವುದು ಎಂಬ ಚಿಂತೆಯೂ ಇವರನ್ನು ಕಾಡುತ್ತಿದೆ.

  • ಆರಂಭದಲ್ಲಿ ‘ಐ ದೋಂತ್ ನೋ ಇಂಗ್ಲಿಷ್ʼ ಎಂದಿದ್ದ ಸಾಂಬಾ ಬಾಯ್ಬಿಟ್ಟಿದ್ದಾನೆ ಸ್ಫೋಟಕ ರಹಸ್ಯ

    ಆರಂಭದಲ್ಲಿ ‘ಐ ದೋಂತ್ ನೋ ಇಂಗ್ಲಿಷ್ʼ ಎಂದಿದ್ದ ಸಾಂಬಾ ಬಾಯ್ಬಿಟ್ಟಿದ್ದಾನೆ ಸ್ಫೋಟಕ ರಹಸ್ಯ

    ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದ 7ನೇ ಆರೋಪಿಯಾಗಿರುವ ಸೆನೆಗಲ್‌ ದೇಶದ ಪ್ರಜೆ ಡ್ರಗ್‌ ಪೆಡ್ಲರ್‌ ಲೂಮ್‌ ಪೆಪ್ಪರ್‌ ಸಾಂಬಾ ಎಲ್ಲ ಆರೋಪಿಗಳಿಗೆ ಚೈನ್‌ ಲಿಂಕ್‌ ಆಗಿರುವ ವಿಚಾರ ಸಿಸಿಪಿ ವಿಚಾರಣೆ ವೇಳೆ ಗೊತ್ತಾಗಿದೆ.

    ಹೌದು. ಸೆರೆ ಸಿಕ್ಕ ಆರಂಭದಲ್ಲಿ “ಐ ದೋಂತ್ ನೋ ಇಂಗ್ಲಿಷ್” ನನಗೆ ಆಫ್ರಿಕನ್‌ ಭಾಷೆ ಬಿಟ್ಟರೆ ಬೇರೆ ಯಾವುದೇ ಭಾಷೆ ಬರುವುದಿಲ್ಲ ಎಂದು ಸಾಂಬಾ ಹೇಳಿದ್ದ. ಪ್ರಕರಣದಲ್ಲಿ ಈತನ ಪಾತ್ರ ದೊಡ್ಡದಿದೆ ಎಂದು ತಿಳಿದಿದ್ದ ಪೊಲೀಸರಿಗೆ ಈತನ ಬಾಯಿ ಬಿಡಿಸುವುದು ಹೇಗೆ ಎನ್ನುವುದು ದೊಡ್ಡ ಚಿಂತೆಯಾಗಿತ್ತು.

    ಮೊದಲ ಎರಡು ದಿನ ನನಗೆ ಇಂಗ್ಲಿಷ್‌ ಬರುವುದಿಲ್ಲ ಎಂದು ಹೈಡ್ರಾಮಾ ಮಾಡಿದ್ದ. ಈ ವೇಳೆ ಉಳಿದ ಆರೋಪಿಗಳ ಮೊಬೈಲ್‌ನಲ್ಲಿ ಈತ ಮಾಡಿರುವ ವಾಟ್ಸಪ್‌ ಚಾಟ್‌ ಮುಂದಿಟ್ಟು ಈ ಇಂಗ್ಲಿಷ್‌ ಮಸೇಜ್‌ ಮಾಡಿದವರು ಯಾರು ಎಂದು ಪ್ರಶ್ನಿಸಿದಾಗ ತನ್ನ ವರಸೆ ಬದಲಾಯಿಸಿ ಡ್ರಗ್ಸ್‌ ವಿಚಾರಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ನೀಡುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

    ಈ ಲೂಮ್‌ ಪೆಪ್ಪರ್‌ ಎಲ್ಲರಿಗೂ ಚೈನ್ ಲಿಂಕ್ ಆಗಿದ್ದಾನೆ. ಡ್ರಗ್ಸ್ ಕೇಸ್ ನಲ್ಲಿ ಆರೋಪಿಗಳ ಜೊತೆಗೆ ಲೂಮ್ ಪೆಪ್ಪರ್ ನೇರ ಸಂಪರ್ಕದಲ್ಲಿದ್ದ. ಬೇರೆ ಬೇರೆ ದೇಶಗಳಿಂದ ವಿವಿಧ ರೀತಿಯ ಡ್ರಗ್ಸ್ ಅನ್ನು ಈತ ಸರಬರಾಜು ಮಾಡುತ್ತಿದ್ದ. ಈತನ ಬಂಧನದ ಬಳಿಕ ಈ ಪ್ರಕರಣದ ಪ್ರಮುಖ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಇದನ್ನೂ ಓದಿ: ವಯಸ್ಸಿಗೂ ಡ್ರಗ್ಸ್‌ಗೂ ಕನೆಕ್ಟ್ ಮಾಡಬೇಡಿ: ನಟಿ ರಾಗಿಣಿ

    ಈಗ ಸೆರೆಯಾದವರು ಮಾತ್ರವಲ್ಲದೇ ಇನ್ನು ಹಲವು ವ್ಯಕ್ತಿಗಳ ಬಗ್ಗೆ ಲೂಮ್‌ ಪೆಪ್ಪರ್‌ ಬಾಯಿಬಿಟ್ಟಿದ್ದಾನೆ. ಈಗ ಆ ವ್ಯಕ್ತಿಗಳ ಪಾತ್ರದ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಸಂಪರ್ಕ ಆಗಿದ್ದು ಹೇಗೆ?
    ವಿದೇಶದಿಂದ ಕಳ್ಳ ಸಾಗಾಣೆಯ ಮೂಲಕ ಬರುತ್ತಿದ್ದ ಡ್ರಗ್ಸ್‌ ಅನ್ನು ಸಾಂಬಾ ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಿಗೂ ವಿತರಿಸುತ್ತಿದ್ದ. ಆರಂಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಐಟಿ-ಬಿಟಿಯವರಿಗೆ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ. ಈ ವೇಳೆ ಪಬ್‌ವೊಂದರಲ್ಲಿ ಪಾರ್ಟಿ ವೇಳೆ ಪರಿಚಯವಾಗಿದ್ದ ವ್ಯಕ್ತಿಯಿಂದ ದೊಡ್ಡ ಮಟ್ಟದ ಗ್ರಾಹಕರ ಸಂಪರ್ಕ ಬೆಳೆದಿದೆ. ಬಳಿಕ ಪಾರ್ಟಿಗಳಿಗೆ ನೇರವಾಗಿ ಹೋಗಿ ಡ್ರಗ್ಸ್‌ ಕೊಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

  • ಡ್ರಗ್ಸ್ ದಂಧೆಯಲ್ಲಿ ಕೇವಲ ಮೂವರು ಮಹಿಳೆಯರು ಮಾತ್ರನಾ: ಪಾರೂಲ್ ಯಾದವ್ ಗರಂ

    ಡ್ರಗ್ಸ್ ದಂಧೆಯಲ್ಲಿ ಕೇವಲ ಮೂವರು ಮಹಿಳೆಯರು ಮಾತ್ರನಾ: ಪಾರೂಲ್ ಯಾದವ್ ಗರಂ

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನಟಿ ರಾಗಿಣಿ ಮತ್ತು ಸಂಜನಾರನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ಆದರೆ ಡ್ರಗ್ಸ್ ವಿಚಾರದಲ್ಲಿ ನಟಿಯರ ಹೆಸರು ಮಾತ್ರ ಕೇಳಿ ಬಂದ ಹಿನ್ನೆಲೆಯಲ್ಲಿ ನಟಿ ಪಾರೂಲ್ ಯಾದವ್ ಕಿಡಿಕಾರಿದ್ದಾರೆ. ಇದನ್ನೂ ಓದಿ: ವಿಚಾರಣೆ ವೇಳೆ ಬರೋಬ್ಬರಿ 24 ಜನರ ಹೆಸರು ಬಾಯ್ಬಿಟ್ಟ ಸಂಜನಾ

    ಡ್ರಗ್ಸ್ ದಂಧೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನಟಿ ರಾಗಿಣಿ ಮನೆಯ ಮೇಲೆ ದಾಳಿ ಮಾಡಿದ್ದು, ಕಳೆದ ವಾರ ನಟಿಯನ್ನು ಬಂಧಿಸಲಾಗಿತ್ತು. ಮಂಗಳವಾರ ನಟಿ ಸಂಜನಾ ಮನೆಯ ಮೇಲೂ ಸಿಸಿಬಿ ಅಧಿಕಾರಿಗಳು ದಾಳಿ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದುವರೆಗೂ ಡ್ರಗ್ಸ್ ವಿಚಾರದಲ್ಲಿ ಸ್ಯಾಂಡಲ್‍ವುಡ್‍ನ ಇಬ್ಬರನ್ನು ನಟಿಯರನ್ನು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಟಿ ಪಾರೂಲ್ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಯಮಾಡಿ ಇಡೀ ಚಿತ್ರರಂಗವನ್ನು ಟಾರ್ಗೆಟ್ ಮಾಡಬೇಡಿ: ಸುಮಲತಾ

    “ಅಂತಿಮವಾಗಿ ಲಿಂಗ ಸಮಾನತೆ ಹೋರಾಟಕ್ಕೆ ಗೆಲುವು ಸಿಕ್ಕಿದೆ. ಮಾದಕ ವಸ್ತುಗಳ ವಿರುದ್ಧ ನಾನು ಸೇರಿದಂತೆ ಎಲ್ಲರೂ ಹೋರಾಡಬೇಕು. ಆದರೆ ಭಾರತದಲ್ಲಿ ಡ್ರಗ್ಸ್ ಮಾರಾಟಗಾರರು ಅಥವಾ ಬಳಕೆದಾರರು ಕೇವಲ ಮೂವರು ಮಹಿಳೆಯರು ಮಾತ್ರನಾ?, ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆಯಲ್ಲಿ ಬೇರೆ ಯಾರೂ ಭಾಗಿಯಾಗಿಲ್ವಾ?” ಎಂದು ಪ್ರಶ್ನೆ ಮಾಡಿದ್ದಾರೆ.

    “ಯಾವುದೇ ಕಾರ್ಪೋರೇಟರ್ ಸಿಬ್ಬಂದಿ, ವ್ಯಾಪಾರಸ್ಥರು, ಕ್ರೀಡಾಪಟುಗಳು ಅಥವಾ ನಟರು ಸಹ ಡ್ರಗ್ಸ್ ಧಂದೆಯಲ್ಲಿ ಭಾಗಿಯಾಗಿಲ್ವಾ? ನಾವು ಲಿಂಗ ಸಮಾನತೆಯ ಹೋರಾಟವನ್ನು ಗೆದ್ದಿದ್ದೇವೆ ಎಂದು ಸಂಭ್ರಮಿಸಬೇಕಾ? ಅಥವಾ ನಮ್ಮಲ್ಲಿ ಕೆಲವರನ್ನು ಮಾತ್ರ ಬೇಟೆಯಾಡುವುದು ಎಷ್ಟು ಸುಲಭ ಎಂದು ನಾವು ಅಳಬೇಕೇ? ಎಂದು ಡ್ರಗ್ಸ್ ದಂಧೆ ಬಗ್ಗೆ ನಟಿ ಪಾರುಲ್ ಯಾದವ್ ಪ್ರಶ್ನಿಸಿದ್ದಾರೆ.

    ಮೊದಲಿಗೆ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದ ನಟಿ ರಾಗಿಣಿಯನ್ನು ಬಂಧಿಸಲಾಗಿತ್ತು. ನಂತರ ರಾಗಿಣಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಗರದ 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ನಡೆದಿತ್ತು. ಈ ವೇಳೆ 10 ದಿನ ನಮ್ಮ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿದ್ದರು. ಸಿಸಿಬಿ ವಕೀಲರ ವಾದವವನ್ನು ಆಲಿಸಿದ ಬಳಿಕ ನ್ಯಾ.ಜಗದೀಶ್ ಅವರು 5 ದಿನ ಕಸ್ಟಡಿಗೆ ನೀಡಿದ್ದಾರೆ. ಹೀಗಾಗಿ ಕೋರ್ಟ್ ಆದೇಶದ ಅನ್ವಯ ಶುಕ್ರವಾರದವರೆಗೂ ರಾಗಿಣಿ ಸಿಸಿಬಿ ಪೊಲೀಸರ ವಶದಲ್ಲಿ ಇರಲಿದ್ದಾರೆ.

    ಇನ್ನೂ ನಟಿ ಸಂಜನಾ ಆಪ್ತ ರಾಹುಲ್ ಹೇಳಿಕೆಯಿಂದಾಗಿ ಮಂಗಳವಾರ ಬೆಳಗ್ಗೆ ಸಿಸಿಬಿ ಅಧಿಕಾರಿಗಳು ಸಂಜನಾ ಮನೆ ಮೇಲೆ ದಾಳಿ ಮಾಡಿದ್ದರು. ಹಲವು ಗಂಟೆ ಶೋಧ ಕಾರ್ಯ ನಡೆಸಿ, ಸಂಜನಾರನ್ನು ಅರೆಸ್ಟ್ ಮಾಡಿದ್ದಾರೆ. ಎಫ್ಐಆರ್‌ನಲ್ಲಿ ಸಂಜನಾರನ್ನು ಎ-14 ಎಂದು ಉಲ್ಲೇಖಿಸಲಾಗಿದೆ. ಡ್ರಗ್ ಮಾಫಿಯಾ ಜೊತೆ ನಂಟಿರುವ ಅನುಮಾನದ ಮೇಲೆ ತೀವ್ರ ವಿಚಾರಣೆ ನಡೆಸಲಾಗಿದೆ. ಮೆಡಿಕಲ್ ಚೆಕಪ್ ಬಳಿಕ ವಸಂತನಗರದ ಸ್ಪೆಷಲ್ ರಿಮ್ಯಾಂಡ್ ಕೋರ್ಟ್ ಗೆ ಹಾಜರುಪಡಿಸಿ ಸಂಜನಾರನ್ನು ಐದು ದಿನ ಕಸ್ಟಡಿಗೆ ಪಡೆದುಕೊಂಡಿದೆ.

     

    ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ವಿರುದ್ಧ ಕಳೆದ ವಾರ ಯಾವುದೇ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಹೀಗಾಗಿ ಸೂಕ್ತ ಸಾಕ್ಷ್ಯಕ್ಕಾಗಿ ಕಾಯುತ್ತಿದ್ದರು. ಈ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ಹಲವು ಮಾಹಿತಿಗಳನ್ನು ತಿಳಿಸಿದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದ ಪೃಥ್ವಿ ಶೆಟ್ಟಿ ಕಂಪನಿಯಲ್ಲಿ ಸಂಜನಾ ಸಹ ಪಾಲುದಾರೆ ಎಂಬ ಮಾಹಿತಿ ಸಿಕ್ಕಿದೆ. ಇಬ್ಬರ ನಡುವೆ ಲಕ್ಷಾಂತರ ರೂಪಾಯಿ ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ದಾಖಲೆಗಳನ್ನು ಕೆದಕಿದಾಗ ದೊಡ್ಡ ದೊಡ್ಡ ಹೋಟೆಲ್‍ಗಳಲ್ಲಿ ಪಾರ್ಟಿಗಳನ್ನು ಆಯೋಜನೆ ಮಾಡಿದ ಬಗ್ಗೆ ಮಾಹಿತಿ ಸಿಕ್ಕಿದೆ.

  • ವಿಚಾರಣೆ ವೇಳೆ ಬರೋಬ್ಬರಿ 24 ಜನರ ಹೆಸರು ಬಾಯ್ಬಿಟ್ಟ ಸಂಜನಾ

    ವಿಚಾರಣೆ ವೇಳೆ ಬರೋಬ್ಬರಿ 24 ಜನರ ಹೆಸರು ಬಾಯ್ಬಿಟ್ಟ ಸಂಜನಾ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ಮಾಡುತ್ತಿದ್ದು, ಈ ವೇಳೆ ಸಂಜನಾ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಸಂಜನಾ ಪತಿ ನನಗೆ ಚಿಕಿತ್ಸೆ ನೀಡಿದ್ರು – ಡಾಕ್ಟರ್ ಜೊತೆ ಸಂಜನಾ ಮದ್ವೆ ಆಗಿದ್ದಾರಾ?

    ಸಿಸಿಬಿ ಕಚೇರಿಯಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಸಂಜನಾರನ್ನು ಅಧಿಕಾರಿಗಳು ಪ್ರಶ್ನೆ ಮಾಡುತ್ತಿದ್ದಾರೆ. ವಿಚಾರಣೆ ವೇಳೆ ಸಂಜನಾ ಬರೋಬ್ಬರಿ 24 ಮಂದಿಯ ಹೆಸರನ್ನು ರಿಲೀವ್ ಮಾಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಮೊದಲಿಗೆ ಸಂಜನಾ ಯಾವ ಪ್ರಶ್ನೆಗಳಿಗೂ ಸರಿಯಾಗಿ ಉತ್ತರ ಕೊಡುತ್ತಿರಲಿಲ್ಲ. ನಂತರ ಸಿಸಿಬಿ ಅಧಿಕಾರಿಗಳು ದಾಖಲೆ ಸಮೇತ ಪ್ರಶ್ನೆ ಮಾಡಿದ್ದಾರೆ.

    ಕೊನೆಗೆ ಸಂಜನಾ ಸಂಜನಾ 24 ಮಂದಿಯ ಹೆಸರನ್ನು ಬಾಯಿಬಿಟ್ಟಿದ್ದಾರೆ. ಆದರೆ ಆ 24 ಜನರ ಯಾರು ಎಂಬುದು ಅಧಿಕೃತವಾಗಿ ಇನ್ನೂ ತಿಳಿದುಬಂದಿಲ್ಲ. ಬೆಂಗಳೂರಿನ ಮಾಜಿ ಶಾಸಕರ ಮಗ, ಸ್ಯಾಂಡಲ್‍ವುಡ್ ಇಬ್ಬರು ತಾರೆಯರು, ಕಿರುತೆರೆಯ ನಾಲ್ಕು ಜನರ ಜೊತೆ ಸ್ನೇಹ ಮಾಡಿದ್ದೇನೆ. ಅಲ್ಲದೇ ಪ್ರಸಿದ್ಧ ಬ್ಯುಸಿನೆಸ್ ಮ್ಯಾನ್ ಮಕ್ಕಳು ಜೊತೆಯಲ್ಲಿ ಪಾರ್ಟಿ ಮಾಡಿರುವುದಾಗಿ ಸಿಸಿಬಿ ಮುಂದೆ ಸಂಜನಾ ತಪ್ಪೊಪ್ಪಿಕೊಂಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಈ ಹಿಂದೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಸಂಬರಗಿ ಮಾಡಿದ ಆರೋಪಕ್ಕೆ ಸಂಜನಾ ಗರಂ ಆಗಿದ್ದರು. ಪ್ರಶಾಂತ್ ಸಂಬರಗಿ ನನ್ನ ಇಮೇಜ್ ಹಾಳು ಮಾಡುತ್ತಿದ್ದಾನೆ. ನನ್ನ ಮೇಲೆ ಆರೋಪ ಮಾಡಲು ಆತನ ಬಳಿ ಸಾಕ್ಷ್ಯ ಏನಿದೆ. ಸಿಕ್ಕ ಸಿಕ್ಕ ಕಡೆ ಹೆಸರು ಹಾಳು ಮಾಡುವ ಕೆಲಸ ಮಾಡುತ್ತಿದ್ದಾನೆ. ಅಲ್ಲದೇ ಹಳೆ ದ್ವೇಷಕ್ಕಾಗಿ ನನ್ನ ಮೇಲೆ ಡ್ರಗ್ ಆರೋಪ ಹೊರಿಸುತ್ತಿದ್ದಾನೆ ಎಂದು ಸಂಜನಾ ಗರಂ ಆಗಿದ್ದರು.

  • ಸಂಜನಾ ಪತಿ ನನಗೆ ಚಿಕಿತ್ಸೆ ನೀಡಿದ್ರು – ಡಾಕ್ಟರ್ ಜೊತೆ ಸಂಜನಾ ಮದ್ವೆ ಆಗಿದ್ದಾರಾ?

    ಸಂಜನಾ ಪತಿ ನನಗೆ ಚಿಕಿತ್ಸೆ ನೀಡಿದ್ರು – ಡಾಕ್ಟರ್ ಜೊತೆ ಸಂಜನಾ ಮದ್ವೆ ಆಗಿದ್ದಾರಾ?

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ನಟಿ ಸಂಜನಾ ಮನೆಯ ಮೇಲೆ ದಾಳಿದ್ದರು. ಇದೀಗ ಸಂಜನಾರನ್ನು ಬಂಧಿಸಿ ಸಿಸಿಬಿ ಕಚೇರಿಗೆ ಅಧಿಕಾರಿಗಳು ಕರೆದುಕೊಂಡು ಹೋಗಿದ್ದಾರೆ. ಆದರೆ ಈ ಮಧ್ಯೆ ನಟಿ ನ್ಯೂರೋ ಸರ್ಜನ್ ಕರೆಯಲು ಗಲಾಟೆ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

    ಸಿಸಿಬಿ ಅಧಿಕಾರಿಗಳು ನಟಿ ಸಂಜನಾ ಮನೆಯಲ್ಲಿ ಶೋಧ ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ನ್ಯೂರೋ ಸರ್ಜನ್ ಕರೆಯಲು ಗಲಾಟೆ ಮಾಡಿದ್ದರು ಎನ್ನಲಾಗಿದೆ. ಅದೇ ಅಪಾರ್ಟ್ ಮೆಂಟ್ ಅಲ್ಲಿ ಡಾಕ್ಟರ್ ವಾಸಿಸುತ್ತಿದ್ದು, ಆತನ ಜೊತೆ ಸಂಜನಾ ಸ್ನೇಹ ಇಟ್ಟುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಅವರಿಬ್ಬರು ಅಮೆರಿಕಾಗೆ ಹೋಗಿ ಮದುವೆ ಆಗಿದ್ದಾರೆ ಎಂದು ಗುಮಾನಿ ಸಹ ಇದೆ. ಹೀಗಾಗಿ ಸಂಜನಾ ಡಾಕ್ಟರ್ ಕರೆಯಲು ಒತ್ತಾಯಿಸಿದ್ದರು ಎನ್ನಲಾಗಿದೆ.

    ವೈದ್ಯ ಸಂಜನಾರನ್ನು ಮದುವೆ ಆಗಿದ್ದಾರೋ ಅಥವಾ ಲಿವ್ ಇನ್ ಸಂಬಂಧ ಇಟ್ಟುಕೊಂಡಿದ್ದಾರೋ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ರಾಹುಲ್ ತಂದೆ ರಾಮಚಂದ್ರ ಮೂರು ದಿನಗಳ ಹಿಂದೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡುವ ವೇಳೆ ಸಂಜನಾ ಪತಿ ಚಿಕಿತ್ಸೆ ನೀಡಿದ್ದರು ಎಂದು ಹೇಳಿಕೆ ನೀಡಿದ್ದರು.

    ಮೂರು ದಿನಗಳ ಹಿಂದೆ ರಾಹುಲ್ ತಂದೆ ಪಬ್ಲಿಕ್ ಟಿವಿ ಜೊತೆ ಮಾತನಾಡುವ ವೇಳೆ, ನನ್ನ ಮಗನಿಗೆ ಸಂಜನಾ ಒಬ್ಬರೇ ಪರಿಚಯ ಇರುವುದು. ರಾಹುಲ್ ಎಂಜಿನಿಯರ್ ಮಾಡಿ ಆರ್ಕಿಟೆಕ್ಚರ್ ಕೆಲಸ ಮಾಡುತ್ತಿದ್ದಾನೆ. ಒಮ್ಮೆ ಸಂಜನಾ ಮನೆಗೆ ಹೋಗಿ ಇಂಟಿರಿಯರ್ ಡಿಸೈನರ್ ಕೆಲಸ ಮಾಡಿಕೊಟ್ಟಿದ್ದನು. ಅಂದಿನಿಂದ ಇಬ್ಬರಿಗೂ ಪರಿಚಯವಾಗಿದೆ. ಅವರ ಮನೆ ಇವನು, ನಮ್ಮ ಮನೆಗೆ ಸಂಜನಾ ಬಂದು ಹೋಗುತ್ತಿದ್ದರು ಎಂದು ಹೇಳಿದ್ದರು.

     

    ಅಲ್ಲದೇ ಅವರ ಬರ್ತ್ ಡೇ ಪಾರ್ಟಿಗೆ ಇವನು ಹೋಗುತ್ತಿದ್ದನು. ಇವನ ಹುಟ್ಟುಹಬ್ಬಕ್ಕೆ ಸಂಜನಾ ಕೂಡ ಬರುತ್ತಿದ್ದಳು. ಅವರಿಬ್ಬರದ್ದು ಅಣ್ಣ-ತಂಗಿ ಸಂಬಂಧ ಬೇರೆ ಏನು ಇಲ್ಲ. ನನಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಒಮ್ಮೆ ಸಂಜನಾ ಪತಿಯೇ ನನಗೆ ಚಿಕಿತ್ಸೆ ನೀಡಿದ್ದರು. ಸಂಜನಾ ಪತಿ ಕೂಡ ರಾಹುಲ್‍ಗೆ ಪರಿಚಯ, ಸಂಜನಾ ಪತಿ ಡಾಕ್ಟರ್ ಆಗಿದ್ದು, ನಮಗೆ ಸಹಾಯ ಮಾಡಿದ್ದರು ಎಂದು ರಾಮಚಂದ್ರ ಪ್ರತಿಕ್ರಿಯಿಸಿದ್ದರು.

  • ಡ್ರಗ್ಸ್ ಕೇಸ್ – ಸಂಜನಾಗೆ ಉರುಳಾದ ಮೂರು ವ್ಯಕ್ತಿಗಳು

    ಡ್ರಗ್ಸ್ ಕೇಸ್ – ಸಂಜನಾಗೆ ಉರುಳಾದ ಮೂರು ವ್ಯಕ್ತಿಗಳು

    ಬೆಂಗಳೂರು: ನಟಿ ಸಂಜನಾ ಮನೆಯ ಮೇಲೆ ಸಿಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದು, ಶೋಧ ಕಾರ್ಯಾಚರಣೆ ಮಾಡುತ್ತಿದ್ದಾರೆ. ಸಂಜನಾ ಮನೆ ಮೇಲಿನ ದಾಳಿಗೆ ಮೂವರು ವ್ಯಕ್ತಿಗಳ ಜೊತೆಗಿನ ಒಡನಾಟ ಕಾರಣ ಎನ್ನಲಾಗುತ್ತಿದೆ. ಇದನ್ನೂ ಓದಿ: ಏಕಾಏಕಿ ದಾಳಿ ಮಾಡಿದ್ದೀರಿ, ನಾನು ಬರೋದಿಲ್ಲ – ಸಿಸಿಬಿ ಮುಂದೆ ಸಂಜನಾ ರಂಪಾಟ

    ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿರುವ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ನೀಡಿದ ಹೇಳಿಕೆಯ ಆಧಾರದ ಮೇಲೆ ನಟಿ ಸಂಜನಾ ನಿವಾಸದ ಮೇಲೆ ಸಿಸಿಬಿ ದಾಳಿ ನಡೆಸಿದೆ ಎನ್ನಲಾಗಿದೆ. ಈ ಹಿಂದೆ ನಟಿ ಸಂಜನಾ ಆಪ್ತ ರಾಹುಲ್, ಪ್ರಶಾಂತ್ ರಾಂಕಾ ಕೊಟ್ಟ ಹೇಳಿಕೆಯ ಎಲ್ಲಾವನ್ನ ಇಟ್ಟುಕೊಂಡು ಸಿಸಿಬಿ ಸೋಮವಾರ ರಾತ್ರಿ ಸರ್ಚ್ ವಾರೆಂಟ್ ಪಡೆದಿತ್ತು. ಹೀಗಾಗಿ ಬೆಳ್ಳಂಬೆಳಗ್ಗೆ ನಟಿ ಸಂಜನಾ ಮನೆಯ ಮೇಲೆ ಸಿಸಿಬಿ ದಾಳಿ ಮಾಡಿದೆ. ಇದನ್ನೂ ಓದಿ: ಪೃಥ್ವಿ ಶೆಟ್ಟಿ ಹೇಳಿಕೆಯ ಆಧಾರದ ಮೇಲೆ ಸಂಜನಾ ನಿವಾಸದ ಮೇಲೆ ದಾಳಿ?

    ಸಂಜನಾ-ಪೃಥ್ವಿ ಶೆಟ್ಟಿ:
    ಬೆಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದ ಪೃಥ್ವಿ ಶೆಟ್ಟಿ ಕಂಪನಿಯಲ್ಲಿ ಸಂಜನಾ ಸಹ ಪಾಲುದಾರೆ ಎಂಬ ಮಾಹಿತಿ ಸಿಕ್ಕಿದೆ. ಇಬ್ಬರ ನಡುವೆ ಲಕ್ಷಾಂತರ ರೂಪಾಯಿ ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ದಾಖಲೆಗಳನ್ನು ಕೆದಕಿದಾಗ ದೊಡ್ಡ ದೊಡ್ಡ ಹೋಟೆಲ್‍ಗಳಲ್ಲಿ ಪಾರ್ಟಿಗಳನ್ನು ಆಯೋಜನೆ ಮಾಡಿದ ಬಗ್ಗೆ ಮಾಹಿತಿ ಸಿಕ್ಕಿದೆ. ಇವರಿಬ್ಬರು ಬರೀ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದರೇ ಅಥವಾ ಬೇರೆ ಯಾವೆಲ್ಲಾ ವ್ಯವಹಾರಗಳನ್ನು ನಡೆಸುತ್ತಿದ್ದರು ಎಂಬುದರ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದೆ. ಸದ್ಯಕ್ಕೆ ಪೃಥ್ವಿ ಶೆಟ್ಟಿ ತಿಳಿಸಿದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ.

    ಸಂಜನಾ-ರಾಹುಲ್ ಲಿಂಕ್:
    ರಾಹುಲ್ ನಟಿ ಸಂಜನಾ ಗಲ್ರಾನಿ ಆಪ್ತನಾಗಿದ್ದು, ರಾಹುಲ್‍ನನ್ನು ರಾಕಿ ಬ್ರದರ್ ಎನ್ನುತ್ತಾರೆ. ರಾಹುಲ್ ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿದ್ದು, ರಾಹುಲ್ ಜೊತೆ ಶ್ರೀಲಂಕಾ ಕ್ಯಾಸಿನೋಗಳಲ್ಲಿ ಸಂಜನಾ ಕಾಣಿಸಿಕೊಂಡಿದ್ದರು. ಜೊತೆಗೆ ರಾಹುಲ್ ಡ್ರಗ್ ಪೆಡ್ಲರ್ ಆಗಿದ್ದು, ಸೆಲೆಬ್ರಿಟಿ ಪಾರ್ಟಿಗಳಿಗೆ ಡ್ರಗ್ ಪೂರೈಸುತ್ತಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ವಿಚಾರಣೆ ವೇಳೆ ಸಂಜನಾ ಹೆಸರು ಬಾಯಿಬಿಟ್ಟಿದ್ದನು. ಅಲ್ಲದೇ ರಾಹುಲ್ ಮೊಬೈಲ್‍ನಲ್ಲಿದ್ದ ಪಾರ್ಟಿ ಫೋಟೋ ಕೂಡ ಸೀಜ್ ಮಾಡಲಾಗಿದೆ.

     

    ಸಂಜನಾ_ಪ್ರಶಾಂತ್ ರಾಂಕಾ ಲಿಂಕ್:
    ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಪ್ರಶಾಂತ್ ರಾಂಕಾ ನಾಲ್ಕನೇಯ ಆರೋಪಿಯಾಗಿದ್ದು, ವಿದೇಶಿಯೊಂದಿಗೆ ಡ್ರಗ್ಸ್ ವ್ಯವಹಾರದಲ್ಲಿ ನೇರ ಸಂಪರ್ಕ ಹೊಂದಿದ್ದನು ಎಂದು ತಿಳಿದು ಬಂದಿದೆ. ಪ್ರಶಾಂತ್ ರಾಂಕಾ ಜೊತೆ ನಟಿ ಸಂಜನಾ ಹಲವು ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದು, ಇಬ್ಬರ ನಡುವೆ ಸಂಪರ್ಕ ಇದ್ದ ಬಗ್ಗೆ ಮೊಬೈಲ್‍ನಲ್ಲಿರುವ ಫೋಟೋ, ಕರೆ ಸಾಕ್ಷ್ಯ ಸುಳಿವು ನೀಡಿದೆ. ಈ ಸುಳಿವನ್ನು ಬೆನ್ನತ್ತಿದ ಸಿಸಿಬಿ ಅಧಿಕಾರಿಗಳು ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದಾರೆ.

    ನಟಿ ಸಂಜನಾಗೆ ನೋಟಿಸ್ ಕೊಟ್ಟರೆ ಎಚ್ಚೆತ್ತುಕೊಳ್ಳುತ್ತಾರೆ ಎಂದು ತನಿಖೆಯ ವೇಳೆ ಸಿಕ್ಕಿರುವ ಮಾಹಿತಿಯನ್ನ ಇಟ್ಟುಕೊಂಡು ಸಿಸಿಬಿ ದಿಢೀರ್ ದಾಳಿ ಮಾಡಿದೆ.

  • ಏಕಾಏಕಿ ದಾಳಿ ಮಾಡಿದ್ದೀರಿ, ನಾನು ಬರೋದಿಲ್ಲ – ಸಿಸಿಬಿ ಮುಂದೆ ಸಂಜನಾ ರಂಪಾಟ

    ಏಕಾಏಕಿ ದಾಳಿ ಮಾಡಿದ್ದೀರಿ, ನಾನು ಬರೋದಿಲ್ಲ – ಸಿಸಿಬಿ ಮುಂದೆ ಸಂಜನಾ ರಂಪಾಟ

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಮನೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಆದರೆ ಈ ವೇಳೆ ನಟಿ ಸಂಜನಾ ರಂಪಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪೃಥ್ವಿ ಶೆಟ್ಟಿ ಹೇಳಿಕೆಯ ಆಧಾರದ ಮೇಲೆ ಸಂಜನಾ ನಿವಾಸದ ಮೇಲೆ ದಾಳಿ?

    ಸಿಸಿಬಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆಯುತ್ತಿದ್ದಂತೆ ನಟಿ ಸಂಜನಾ ರಂಪಾಟ ಮಾಡಿದ್ದಾರೆ. ರೆಡಿ ಆಗಿ ಮೇಡಂ ಸಿಸಿಬಿ ಕಚೇರಿಗೆ ಹೋಗಬೇಕು ಎಂದು ಪೊಲೀಸರು ಹೇಳಿದ್ದಾರೆ. ಆಗ ಸಂಜನಾ, ನಾನ್ಯಾಕೆ ಬರಲಿ, ನೀವು ನನಗೆ ನೋಟಿಸ್ ಕೊಟ್ಟಿಲ್ಲ. ಏಕಾಏಕಿ ದಾಳಿ ಮಾಡಿದ್ದೀರಿ? ನಾನೇನು ಆರೋಪಿನಾ? ನಾನು ಬರುವುದಿಲ್ಲ ಎಂದು ಸಿಸಿಬಿ ಮುಂದೆ ರಂಪಾಟ ಮಾಡಿದ್ದಾರೆ.

    ರಂಪಾಟ ಜಾಸ್ತಿಯಾಗುತ್ತಿದ್ದಂತೆ ಸಿಸಿಬಿ ಅಧಿಕಾರಿಗಳು ಗದರಿಸಿದ್ದಾರೆ. ನೀವು ನಮ್ಮ ವಶದಲ್ಲಿ ಇದ್ದೀರಿ. ಹೀಗಾಗಿ ನಾವು ನೀವು ಹೇಳಿದಂತೆ ಕೇಳುವುದಕ್ಕೆ ಆಗುವುದಿಲ್ಲ. ನಾವು ಹೇಳಿದ್ದನ್ನ ನೀವು ಕೇಳಿ, ಸರ್ಚ್ ವಾರೆಂಟ್ ಸಂದರ್ಭದಲ್ಲಿ ವಿರೋಧ ಮಾಡಿದರೆ ನಿಮಗೆ ಕಷ್ಟವಾಗುತ್ತದೆ ಎಂದು ಸಿಸಿಬಿ ಅಧಿಕಾರಿಗಳು ಏರು ಮಾತಿನಲ್ಲಿ ಹೇಳಿದ ಬಳಿಕ ಸಂಜನಾ ತಣ್ಣಗೆ ಆಗಿದ್ದಾರೆ.

    ಇಂದು ಬೆಳ್ಳಂಬೆಳಗ್ಗೆ ಇಂದಿರಾನಗರದಲ್ಲಿರುವ ನಟಿ ಸಂಜನಾ ನಿವಾಸದ ಮೇಲೆ ಇನ್ಸ್ ಪೆಕ್ಟರ್ ಪುನೀತ್ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಬಂದ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈಗಾಗಲೇ ಸಂಜನಾ ಮೊಬೈಲ್ ಮತ್ತು ಪರ್ಸ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.