Tag: sanjana

  • ರಾಗಿಣಿ, ಸಂಜನಾ ಇರುವ ಜೈಲು ಕೊಠಡಿಗೆ ಬಂದಿದೆ ಹೊಸ ಟಿವಿ

    ರಾಗಿಣಿ, ಸಂಜನಾ ಇರುವ ಜೈಲು ಕೊಠಡಿಗೆ ಬಂದಿದೆ ಹೊಸ ಟಿವಿ

    ಬೆಂಗಳೂರು: ಜೈಲಿನಲ್ಲಿ ದುಡ್ಡು ಕೊಟ್ಟರೆ ಏನು ಬೇಕಾದರೂ ಸಿಗುತ್ತದೆ ಎಂಬ ಆರೋಪ ಹೊಸದೇನಲ್ಲ. ಇದಕ್ಕೆ ಪೂರಕವಾಗಿ, ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟಿಯರಾದ ಸಂಜನಾ ಮತ್ತು ರಾಗಿಣಿ ಐಶಾರಾಮಿ ಜೀವನ ನಡೆಸ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

    ಜೈಲಿನ ಕ್ವಾರಂಟೈನ್ ಕೇಂದ್ರದಿಂದ ಎರಡು ದಿನಗಳ ಹಿಂದೆ ಹಳೆ ಜೈಲಿಗೆ ಶಿಫ್ಟ್ ಆಗಿರುವ ಸಂಜನಾ, ರಾಗಿಣಿಗೆ ಫೈವ್ ಸ್ಟಾರ್ ಹೋಟೆಲ್ ಮಾದರಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನಿನ್ನೆ ಸಂಜೆ ರಾಗಿಣಿ, ಸಂಜನಾ ಇರುವ ಜೈಲು ಕೊಠಡಿಗೆ ಹೊಸ ಟಿವಿ ಬಂದಿದೆ. ರಾಗಿಣಿ ಆಪ್ತರು ತಂದು ಕೊಟ್ಟಿದ್ದ ಟಿವಿಯನ್ನು ಜೈಲು ಸಿಬ್ಬಂದಿ ಬಂದು ಫಿಟ್ ಮಾಡಿ ಕೊಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಡ್ರಗ್ಸ್‌ ನಟಿಯರ ಕೂದಲ ಸ್ಯಾಂಪಲ್‌ ವಾಪಸ್‌ ಕಳುಹಿಸಿದ ಎಫ್‌ಎಸ್‌ಎಲ್‌ ಲ್ಯಾಬ್‌

    ಸಂಜನಾ ರಾಗಿಣಿಗೆ ಬೇಕಾದ ತಿಂಡಿ, ಊಟ ಎಲ್ಲವನ್ನು ಜೈಲು ಸಿಬ್ಬಂದಿ ಖುದ್ದಾಗಿ ಒದಗಿಸ್ತಿದ್ದಾರೆ. ಇಬ್ಬರು ನಟಿಯರು ಜೈಲಿನಲ್ಲಿ ಆರಾಮವಾಗಿ ಜೀವನ ನಡೆಸುತ್ತಿದ್ದಾರೆ ಎಂದು ಜೈಲು ಮೂಲಗಳಿಂದ ಮಾಹಿತಿ ಸಿಕ್ಕಿದೆ.

    ಇಡಿ ವಿಚಾರಣೆ ವೇಳೆ, ನಟಿ ಸಂಜನಾ, ಬಡ್ಡಿ ವ್ಯವಹಾರ ಮಾಡುತ್ತಿದ್ದ ಬಗ್ಗೆಯೂ ಮಾಹಿತಿ ಬಯಲಾಗಿದೆ. ಹಲವು ಉದ್ಯಮಿಗಳಿಗೆ, ಮಾಲ್‍ಗಳ ಮಾಲೀಕರಿಗೆ ಕೋಟಿ ಕೋಟಿ ಸಾಲ ಕೊಟ್ಟಿದ್ದೇನೆ. ಕೊಟ್ಟ ಸಾಲವನ್ನು ಯಾರಾದರೂ ವಾಪಸ್ ನೀಡದಿದ್ರೆ ನಮ್ಮ ಹುಡುಗರ ಮೂಲಕ ವಸೂಲಿ ಮಾಡಿಸ್ತಿದ್ದೆ ಎಂದು ಸಂಜನಾ ಹೇಳಿದ್ದಾರೆ ಎನ್ನಲಾಗಿದೆ.

     

  • ಡ್ರಗ್ಸ್‌ ಕೇಸ್‌ – ನಟಿ ಸಂಜನಾ ಜೈಲುಪಾಲು

    ಡ್ರಗ್ಸ್‌ ಕೇಸ್‌ – ನಟಿ ಸಂಜನಾ ಜೈಲುಪಾಲು

    ಬೆಂಗಳೂರು: ಡ್ರಗ್ಸ್‌ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ  ರಾಗಿಣಿ ಬೆನ್ನಲ್ಲೇ ಈಗ  ನಟಿ ಸಂಜನಾ ಜೈಲುಪಾಲಾಗಿದ್ದಾರೆ. ಈ ಮೂಲಕ ಡ್ರಗ್ಸ್‌ ಪ್ರಕರಣದಲ್ಲಿ ಜೈಲು ಸೇರಿದ ಎರಡನೇ ನಟಿ ಎಂಬ ಕುಖ್ಯಾತಿಗೆ ಸಂಜನಾ ಪಾತ್ರವಾಗಿದ್ದಾರೆ.

    ಇಂದು ಸಿಸಿಬಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಸಂಜನಾ ಜೊತೆ ವೀರೇನ್ ಖನ್ನಾ, ರವಿಶಂಕರ್‌ ಅವರನ್ನು 1ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ವೀರೇನ್ ಖನ್ನಾ, ರವಿಶಂಕರ್‌  14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದರೆ ಸಂಜನಾಗೆ 2 ದಿನಗಳ ನ್ಯಾಯಾಂಗ ಬಂಧನ ವಿಧಿಸಿತು.  ಸಂಜನಾ ಪ್ರಕರಣವನ್ನು ವಿಶೇಷ ಕೋರ್ಟ್‌ಗೆ ವರ್ಗಾಯಿಸಿದ ಜೆಡ್ಜ್‌ ಸೆ.18ರಂದು ಕೋರ್ಟ್‌ಗೆ ಹಾಜರುಪಡಿಸಬೇಕೆಂದು ಸೂಚಿಸಿದರು.

    ಸಾಂತ್ವನ ಕೇಂದ್ರದಲ್ಲಿದ್ದ ಸಂಜನಾರನ್ನು ಬೆಳಗ್ಗೆ ಕೆಸಿ ಜನರಲ್ ಆಸ್ಪತ್ರಗೆ ಕರೆತಂದು ವೈದ್ಯಕೀಯ ಪರೀಕ್ಷೆ, ಕೊರೊನಾ ಟೆಸ್ಟ್‌  ನಡೆಸಲಾಯಿತು. ಬಳಿಕ ಸಾಂತ್ವನ ಕೇಂದ್ರಕ್ಕೆ ಕರೆತಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಇಂದಿನ ವಿಚಾರಣೆ ವೇಳೆ ಸಿಸಿಬಿ ಪೊಲೀಸರು ಕಸ್ಟಡಿಗೆ ನೀಡುವಂತೆ ಕೇಳಿರಲಿಲ್ಲ. ಹೀಗಾಗಿ ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿತು.

    ಸೋಮವಾರ ನಟಿ ರಾಗಿಣಿಗೆ ಕೋರ್ಟ್‌ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಈ ವೇಳೆ ಸಿಸಿಬಿ ಪೊಲೀಸರು ಸಂಜನಾರನ್ನು 5 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಕೇಳಿದ್ದರು. ಆದರೆ ಕೋರ್ಟ್‌ 2 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿತ್ತು.

    ರಾಗಿಣಿ ಸೇರಿದಂತೆ ಆರೋಪಿಗಳ ವಿರುದ್ಧ ನಾರ್ಕೊಟಿಕ್‌ ಡ್ರಗ್ಸ್ ಆ್ಯಂಡ್ ಸೈಕೊಟ್ರಾಫಿಕ್ ಸಬ್‌ಸ್ಟೆನ್ಸಸ್ (ಎನ್‍ಡಿಪಿಎಸ್) ಆ್ಯಕ್ಟ್ ಸೆಕ್ಷನ್ 21, 21ಸಿ, 27ಎ, 27ಬಿ, 29, ಐಪಿಸಿ 120ಬಿ ಅಡಿ ಕೇಸ್‌ ದಾಖಲಾಗಿದೆ.

     

    ಯಾವ ಸೆಕ್ಷನ್‌ ಏನು ಹೇಳುತ್ತದೆ?
    ಎನ್‍ಡಿಪಿಎಸ್ 21 – ಮಾದಕ ವಸ್ತುಗಳನ್ನು ಅಕ್ರಮವಾಗಿ ತಯಾರು ಮಾಡುವುದು, ಮಾರಾಟ ಮಾಡುವುದು, ಸಾಗಾಟ ಮಾಡುವುದು ಅಪರಾಧ.

    ಎನ್‍ಡಿಪಿಎಸ್ 21ಸಿ – ವಾಣಿಜ್ಯ ಉದ್ದೇಶಕ್ಕಾಗಿ ಮಾದಕವಸ್ತುಗಳ ಸಂಗ್ರಹಣೆ ಮತ್ತು ಮಾರಾಟ ಮಾಡುವುದು ನಿಷಿದ್ಧ. ಆರೋಪ ಸಾಬೀತಾದರೆ 10 ವರ್ಷಕ್ಕೆ ಮೇಲ್ಪಟ್ಟು ಶಿಕ್ಷೆ

    ಎನ್‍ಡಿಪಿಎಸ್ 27 ಎ – ಮಾದಕ ವಸ್ತುಗಳಿಗೆ ಸಂಬಂಧಿಸಿ ಹಣಕಾಸು ನೆರವು. ನೇರವಾಗಿ ಅಥವಾ ಪರೋಕ್ಷವಾಗಿ ಅಥವಾ ಮಾದಕ ವಸ್ತು ಸಾಗಣಿಕೆಗೆ ನೆರವಾಗುವುದು ಅಪರಾಧ.

    ಎನ್‍ಡಿಪಿಎಸ್ 27 ಬಿ – ಮಾದಕವಸ್ತು ಸೇವನೆ ಕೂಡ ಅಪರಾಧ. ಆರು ತಿಂಗಳ ಶಿಕ್ಷೆ ಅಥವಾ 10 ಸಾವಿರ ದಂಡ.

    ಎನ್‍ಡಿಪಿಎಸ್ 29 – ಅಪರಾಧಿಕ ಒಳ ಸಂಚಿಗೆ ಸಹಾಯ ಮಾಡುವುದು. ಅಂತೆಯೇ ಒಳ ಸಂಚು ಮಾಡಲು ವೇದಿಕೆ ಕಲ್ಪಿಸುವುದು ಪಾರ್ಟಿ ಆಯೋಜನೆ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧ.

    ಐಪಿಸಿ 120 ಬಿ – ಅಪರಾಧಿಕ ಒಳಸಂಚು.

  • ಇಬ್ಬರೂ ಬೆಂಗಳೂರಿನಲ್ಲಿ ಇಲ್ಲ, ಕಾಲ್ ರಿಸೀವ್ ಮಾಡ್ತಿಲ್ಲ- ದಿಗಂತ್ ತಾಯಿ

    ಇಬ್ಬರೂ ಬೆಂಗಳೂರಿನಲ್ಲಿ ಇಲ್ಲ, ಕಾಲ್ ರಿಸೀವ್ ಮಾಡ್ತಿಲ್ಲ- ದಿಗಂತ್ ತಾಯಿ

    ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಕುರಿತಂತೆ ನಟ ದಿಗಂತ್ ಹಾಗೂ ಐಂದ್ರಿತಾ ರೇಗೆ ಸಿಸಿಬಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಆದರೆ ಇದುವರೆಗೂ ನಮ್ಮ ಮನೆಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ದಿಗಂತ್ ತಾಯಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಸಿಸಿಬಿ ನೋಟಿಸ್ ಕುರಿತಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ದಿಗಂತ್ ತಾಯಿ ಅವರು, ಸಿಸಿಬಿ ನೋಟಿಸ್ ವಿಚಾರದ ಕುರಿತು ಯಾವುದೇ ಮಾಹಿತಿ ಲಭಿಸಿಲ್ಲ. ಅವರು ನಿನ್ನೆ ಬೆಳಗ್ಗೆ ಕೇರಳಗೆ ಹೋಗುತ್ತೇವೆ ಎಂದು ಹೇಳಿ ತೆರಳಿದ್ದಾರೆ. ಅವರು ಮೂರು ದಿನ ಆಗುತ್ತೆ ಎಂದು ತಿಳಿಸಿದ್ದರು. ಆ ಬಳಿಕ ಅವರು ನನಗೆ ಫೋನ್ ಮಾಡಿಲ್ಲ. ನಮ್ಮ ಸ್ನೇಹಿತರೊಬ್ಬರು ಮಾಧ್ಯಮಗಳಲ್ಲಿ ಸುದ್ದಿ ನೋಡಿ ನನಗೆ ಮಾಹಿತಿ ನೀಡಿದ್ದಾರೆ. ಇದನ್ನು ಬಿಟ್ಟು ನನಗೆ ಬೇರೆ ಮಾಹಿತಿ ಗೊತ್ತಿಲ್ಲ ಎಂದರು. ಇದನ್ನೂ ಓದಿ: ವಿಚಾರಣೆಗೆ ಹಾಜರಾಗುತ್ತೇವೆ ಎಂದ ದಿಗಂತ್, ಐಂದ್ರಿತಾ

    ಡ್ರಗ್ಸ್ ಮಾಫಿಯಾ ಕುರಿತಂತೆ ಸಾಕಷ್ಟು ದಿನಗಳಿಂದ ಚರ್ಚೆ ಆಗುತ್ತಿದೆ. ಆ ಬಗ್ಗೆಯೂ ನಾನು ಪ್ರಶ್ನಿಸಿದ್ದೆ, ಆಗ ಅವರು ನಮಗೇ ಅಂತಹ ವ್ಯಕ್ತಿಗಳ ಪರಿಚಯ ಇಲ್ಲ ಎಂದಿದ್ದರು. ಶ್ರೀಲಂಕಾ ಪ್ರವಾಸಕ್ಕೆ ನಾವು ಹೋಗಿದ್ದೇವು. ಆ ವೇಳೆ ನಮ್ಮ ಡಾನ್ಸ್ ಕಾರ್ಯಕ್ರಮ ಇದೆ ಎಂದು ಐಂದ್ರಿತಾ ಹೇಳಿದ್ದರು. ಹಿಂದಿ ಸಿನಿಮಾವೊಂದರ ಪ್ರಚಾರದ ಸಂದರ್ಭದಲ್ಲಿ ಅಲ್ಲಿಗೆ ತೆರಳಿದ್ದರು. ಸಾಕಷ್ಟು ಸ್ಟಾರ್ ನಟ-ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕುರಿತು ನಮಗೆ ಹೇಳಿದ್ದರು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ನಾನೊಬ್ಬಳೇ ಅಲ್ಲ ಐಂದ್ರಿತಾ ಕೂಡ ಹೋಗಿ ಬರುತ್ತಿದ್ದಳು

    ಘಟನೆ ಕುರಿತಂತೆ ನಮಗೆ ಯಾವುದೇ ಭಯವಿಲ್ಲ. ನಮ್ಮ ಕುಟುಂಬದಲ್ಲಿ ಸಂಪ್ರದಾಯವಾಗಿ ನಡೆದುಕೊಂಡು ಬಂದಿರುವುದರಿಂದ ಅವರು ಅಂತಹ ಯಾವುದೇ ತಪ್ಪು ಮಾಡಿರುವುದಿಲ್ಲ ಎಂಬ ಭರವಸೆ ಇದೆ. ಈ ಬಗ್ಗೆ ಸಾಕ್ಷಿ ಇದ್ದರೆ ಪೊಲೀಸರೆ ವಿಚಾರಣೆ ನಡೆಸುತ್ತಾರೆ. ಇಂತಹ ವಿಚಾರದ ಬಗ್ಗೆ ನಮ್ಮ ಮನೆಯಲ್ಲಿ ಚರ್ಚೆ ಕೂಡ ನಡೆಯುವುದಿಲ್ಲ. ಈ ಹಿಂದೆಯೂ ಕೆಲ ಆರೋಪಗಳು ಕೇಳಿ ಬಂದಿದ್ದವು. ಇಂತಹ ಆರೋಪಗಳಿಂದ ಹೊರ ಬರುತ್ತೇವೆ ಎಂದರು.

    ದಿಗಂತ್ ಮನೆಯಲ್ಲಿ ಸರಿ ಸುಮಾರು 3 ಗಂಟೆ ವ್ಯಾಯಾಮ ಮಾಡುತ್ತಾರೆ. ಡ್ರಗ್ಸ್ ತೆಗೆದಕೊಳ್ಳುತ್ತಿದ್ದಾರೆ ಆ ರೀತಿ ಅಭ್ಯಾಸ ಮಾಡಲು ಸಾಧ್ಯವಿಲ್ಲ. ನೀವು ನೋಡಿದಂತೆ ಸೈಕ್ಲಿಂಗ್ ಸೇರಿದಂತೆ ಹಲವು ಕ್ರೀಡೆಗಳಲ್ಲಿಯೂ ದಿಗಂತ್ ತೊಡಗಿಸಿಕೊಳ್ಳುತ್ತಾರೆ. ಆದರೆ ಡ್ರಗ್ಸ್ ತೆಗೆದುಕೊಂಡರೆ ಹೇಗಿರುತ್ತಾರೆ ಎಂಬುವುದು ಎಲ್ಲರಿಗೂ ತಿಳಿದಿದೆ. ಸದ್ಯ ಅವರಿಗೆ ಫೋನ್ ಮಾಡಿದ್ದೆ ಅವರು ಫೋನ್ ರಿಸೀವ್ ಮಾಡಿಲ್ಲ. ಜನರು ಈ ಬಗ್ಗೆ ತಪ್ಪು ತಿಳಿದುಕೊಳ್ಳಬಾರದು ಎಂದು ನಾನು ಸ್ಪಷ್ಟಪಡಿಸಿದ್ದೇನೆ ಎಂದರು.

  • ಬೆಂಗಳೂರಿನಲ್ಲಿ ಇಲ್ಲ ದಿಗಂತ್, ಐಂದ್ರಿತಾ

    ಬೆಂಗಳೂರಿನಲ್ಲಿ ಇಲ್ಲ ದಿಗಂತ್, ಐಂದ್ರಿತಾ

    – ವಿಚಾರಣೆಗೆ ಹಾಜರಾಗುತ್ತೇವೆ ಎಂದ ದಂಪತಿ
    – ನಾಳೆ 11 ಗಂಟೆ ಹಾಜರಾಗುವಂತೆ ನೋಟಿಸ್

    ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆಗೆ ವೇಗ ತುಂಬಿರುವ ಸಿಸಿಬಿ ಪೊಲೀಸರು ಸದ್ಯ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇಗೆ ನೋಟಿಸ್ ನೀಡಿ ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

    ನಗರದ ಸೆಂಟ್ ಜಾನ್ಸ್ ರೋಡ್‍ನಲ್ಲಿರುವ ರಹೇಜ ಆರ್ಬರ್ ಅಪಾರ್ಟ್‍ಮೆಂಟ್‍ನಲ್ಲಿ ದಿಗಂತ್-ಐಂದಿತ್ರಾ ವಾಸಿಸುತ್ತಿದ್ದಾರೆ. ಸಿಸಿಬಿ ದಂಪತಿಗೆ ನೋಟಿಸ್ ನೀಡಿ ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದು, ಸದ್ಯ ದಂಪತಿ ಬೆಂಗಳೂರಿನಲ್ಲಿ ಇಲ್ಲ ಎಂಬ ಮಾಹಿತಿ ಲಭಿಸಿದೆ. ಲಾಕ್‍ಡೌನ್ ಸಮಯದಲ್ಲಿ ಆರ್ಬರ್ ಅಪಾರ್ಟ್‍ಮೆಂಟ್‍ನಲ್ಲಿಯೇ ದಂಪತಿ ಕಾಲ ಕಳೆದಿದ್ದರು. ಈ ಅಪಾರ್ಟ್‍ಮೆಂಟ್ ಮಾತ್ರವಲ್ಲದೇ ಆರ್.ಆರ್ ನಗರದಲ್ಲಿರುವ ಮತ್ತೊಂದು ಫ್ಲಾಟ್‍ಅನ್ನು ದಂಪತಿ ಹೊಂದಿದ್ದಾರೆ.

    ಸಿಸಿಬಿ ನೋಟಿಸ್ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಐಂದ್ರಿತಾ ಮತ್ತು ದಿಂಗತ್, ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ಸಿಸಿಬಿಯಿಂದ ನೋಟಿಸ್ ಬಂದಿದೆ. ದೂರವಾಣಿ ಕರೆ ಮೂಲಕ ನೋಟಿಸ್ ನೀಡಲಾಗಿದೆ. ನಾವು ವಿಚಾರಣೆಗೆ ಹಾಜರಿರುತ್ತೇವೆ ಮತ್ತು ಸಿಸಿಬಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದಿದ್ದಾರೆ.

    ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಈಗಾಗಲೇ ಸಿಸಿಬಿ ಪೊಲೀಸರ ಕಸ್ಟಡಿಯಲ್ಲಿರುವ ನಟಿ ಸಂಜನಾ ಕೂಡ ಆರಂಭದಲ್ಲಿ ನಾನು ಕ್ಯಾಸಿನೋ ಈವೆಂಟ್‍ಗೆ ಹೋಗಿದ್ದೆ ಎಂದಿದ್ದರು. ಕ್ಯಾಸಿನೋ ಪಾರ್ಟಿ ಕುರಿತ ವೈರಲ್ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದ ಐಂದ್ರಿತಾ, ಸಿನಿಮಾ ಪ್ರಚಾರಕ್ಕಾಗಿ ಈವೆಂಟ್‍ಗೆ ಹೋಗಿದ್ದೆ ಎಂದಿದ್ದರು. ಸಂಜನಾ ವಿಚಾರಣೆಯ ಸಂದರ್ಭದಲ್ಲಿ ಸಿಸಿಬಿ ಪೊಲೀಸರ ಎದುರು ಐಂದ್ರಿತಾ ಅವರ ಹೆಸರನ್ನು ಬಾಯ್ಬಿಟ್ಟಿದ್ದು, ಫಾಝಿಲ್ ಜೊತೆಗೆ ನಾನು ಮಾತ್ರವಲ್ಲ ಐಂದ್ರಿತಾ ಕೂಡ ಕ್ಯಾಸಿನೋಗೆ ಬರುತ್ತಿದ್ದಳು. ಆದರೆ ಐಂದ್ರಿತಾ ಡ್ರಗ್ಸ್ ತೆಗೆದುಕೊಳ್ಳುತ್ತಾರಾ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಅಲ್ಲಿ ಬಂದವರಲ್ಲಿ ಬಹುತೇಕರು ಡ್ರಗ್ಸ್ ತಗೋತಿದ್ದರು ಎಂದು ಹೇಳಿದ್ದರು ಎಂಬ ಮಾಹಿತಿ ಲಭಿಸಿದೆ.

    ಆರೋಪಿ ಫಾಝಿಲ್ ಸ್ಟಾರ್ ಆಟ್ರಾಕ್ಷನ್ ಮೂಲಕ ಕೊಲಂಬೋದಲ್ಲಿದ್ದ ತನ್ನ ಕ್ಯಾಸಿನೋಗೆ ಹೆಚ್ಚಿನ ಪ್ರಮೋಷನ್ ಪಡೆದುಕೊಳ್ಳುತ್ತಿದ್ದ. ಈ ಪ್ರಮೋಷನ್‍ಗಾಗಿಯೇ ಐಂದ್ರಿತಾ ಪಾರ್ಟಿಯಲ್ಲಿ ಹೆಜ್ಜೆ ಹಾಕಿದ್ರು. ನಟಿ ಸಂಜನಾ ರೀತಿಯೇ ಐಂದ್ರಿತಾ ಕೂಡ ಶೇಕ್ ಫಾಝಿಲ್ ಕ್ಯಾಸಿನೋದ ಸ್ಟಾರ್ ಆಟ್ರಾಕ್ಷನ್ ಆಗಿದ್ದರು ಎನ್ನಲಾಗಿದೆ. ಸದ್ಯ ಪಾರ್ಟಿಯಲ್ಲಿ ಡಾನ್ಸ್ ಮಾಡಿದ್ದೇ ಐಂದ್ರಿತಾಗೆ ಮುಳುವಾಗುತ್ತಾ ಎಂಬುವುದನ್ನು ಕಾದುನೋಡಬೇಕಿದೆ.

    ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಟಿ ಐಂದ್ರಿತಾ, ‘ಮೇ ಝರೂರ್ ಅವುಂಗಾ’ ಸಿನಿಮಾ ಪ್ರಚಾರಕ್ಕೆ ಮಾತ್ರವಲ್ಲದೇ ಅದಕ್ಕೂ ಮುನ್ನ ಹಲವು ಬಾರಿ ಕ್ಯಾಸಿನೋಗೆ ದಂಪತಿ ಭೇಟಿ ನೀಡಿದ್ದರು ಬಗ್ಗೆಯೂ ಸಾಕ್ಷಿಗಳನ್ನು ಕಲೆಹಾಕಲಾಗುತ್ತಿದೆ. ಈ ಹಿಂದೆಯೂ ಹಲವು ಬಾರಿ ದಿಗಂತ್ ಅವರ ಹೆಸರು ಲೇಟ್ ನೈಟ್ ಪಾರ್ಟಿಗಳಲ್ಲಿ ಕೇಳಿಬಂದಿರುವ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈಗಾಲೇ ಸಮನ್ಸ್ ನೀಡಿರುವ ಸಿಸಿಬಿ, ದಂಪತಿಯನ್ನು ವಿಚಾರಣೆಗೆ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದೆ ಎನ್ನಲಾಗಿದೆ. ಇತ್ತ ಐಂದ್ರಿತಾ, ದಿಗಂತ್ ಮಾತ್ರವಲ್ಲದೇ ಇನ್ನು ಹಲವು ತಾರೆಯರಿಗೆ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆ ಇದೆ.

  • ಸಿಸಿಬಿ ಮುಂದೆ ತಮ್ಮ ಲವ್ ಬ್ರೇಕಪ್ ಸ್ಟೋರಿ ಬಿಚ್ಚಿಟ್ಟ ನಟಿಯರು

    ಸಿಸಿಬಿ ಮುಂದೆ ತಮ್ಮ ಲವ್ ಬ್ರೇಕಪ್ ಸ್ಟೋರಿ ಬಿಚ್ಚಿಟ್ಟ ನಟಿಯರು

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಈಗಾಗಲೇ ನಟಿ ರಾಗಿಣಿ ಜೈಲು ಸೇರಿದ್ದಾರೆ. ಸದ್ಯಕ್ಕೆ ನಟಿ ಸಂಜನಾ ಸಿಸಿಬಿ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಇದೀಗ ಇಬ್ಬರು ನಟಿಯರು ಸಿಸಿಬಿ ವಿಚಾರಣೆ ವೇಳೆ ತಮ್ಮ ತಮ್ಮ ಲವ್ ಬ್ರೇಕಪ್ ಆಗಿರುವ ಬಗ್ಗೆ ಹೇಳಿರುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ‘ಗಂಡ-ಹೆಂಡತಿ’ ನಟಿ ಮದುವೆ ಸೀಕ್ರೆಟ್- ಮ್ಯಾರೇಜ್ ಆಗಿಲ್ಲ ಅಂತ ಸುಳ್ಳು ಹೇಳಿದ್ರಾ ಸಂಜನಾ?

    ನಟಿ ರಾಗಿಣಿ ಮತ್ತು ಸಂಜನಾ ಇಬ್ಬರಿಗೂ ಲವ್ ಬ್ರೇಕಪ್ ನೋವು ಕಾಡುತ್ತಿದೆ ಎನ್ನಲಾಗಿದೆ. ಸಿಸಿಬಿ ತನಿಖೆ ವೇಳೆಯಲ್ಲಿ ನಟಿಯರಿಬ್ಬರು ಸಿಸಿಬಿ ಮುಂದೆ ತಮ್ಮ ನೋವಿನ ಕಥೆಯನ್ನು ಹೇಳಿಕೊಂಡಿದ್ದಾರೆ. ಡ್ರಗ್ಸ್ ಪ್ರಕರಣದ ಆರೋಪಿ 1 ಶಿವಪ್ರಕಾಶ್ ಹಾಗೂ ರಾಗಿಣಿ ನಡುವೆ ಲವ್ ಬ್ರೇಕಪ್ ಆಗಿ ಸುಮಾರು ಮೂರು ವರ್ಷ ಆಗಿದೆಯಂತೆ. ಇದನ್ನೂ ಓದಿ: ಮಧ್ಯರಾತ್ರಿವರೆಗೂ ಕಣ್ಣೀರಾಕುತ್ತಾ ಕುಳಿತ ರಾಗಿಣಿ – ಬುಕ್ ಓದಿದ ನಂತ್ರ ಜಂಖಾನ ಹಾಸ್ಕೊಂಡು ನಟಿ ನಿದ್ದೆ

    3 ವರ್ಷದ ಹಿಂದೆಯೇ ಆರೋಪಿ ಶಿವಪ್ರಕಾಶ್ಗೆ ಏನು ನೀಡಬೇಕಿತ್ತೋ ಅದನ್ನು ಆತನಿಗೆ ನೀಡಿದ್ದು, ಆತನಿಂದ ತೆಗೆದುಕೊಳ್ಳುವುದನ್ನ ತೆಗೆದುಕೊಂಡು ದೂರವಾಗಿದ್ದೇನೆ. ಹೀಗಾಗಿ ಮೂರು ವರ್ಷದಿಂದ ನನಗೂ ಅವನಿಗೂ ಯಾವುದೇ ಸಂಬಂಧ ಇಲ್ಲ ಎಂದು ನಟಿ ರಾಗಿಣಿ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ರೆಸ್ಟೋರೆಂಟ್‍ನಲ್ಲಿ ಆದ ಗಲಾಟೆ ಅನಿರೀಕ್ಷಿತ ಎಂದಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಕೇಸ್‍ನಲ್ಲಿ ಕನ್ನಡದ ಮೊದಲ ನಟಿ ಜೈಲಿಗೆ – ಕೋರ್ಟಿನಲ್ಲಿ ಇಂದು ಏನೇನಾಯ್ತು?

    ಇನ್ನೂ ನಟಿ ಸಂಜನಾ ಕೂಡ ತಮ್ಮ ಲವ್ ಬ್ರೇಕಪ್ ಬಗ್ಗೆ ಸಿಸಿಬಿ ಮುಂದೆ ಹೇಳಿದ್ದಾರೆ. ನಾನು ಹಾಗೂ ವೈದ್ಯ ಅಜೀಜ್ ಪಾಷ ಒಟ್ಟಿಗೆ ಇಲ್ಲ. ನನಗೂ ಅವರಿಗೂ ಬ್ರೇಕಪ್ ಆಗಿ ವರ್ಷವೇ ಕಳೆದಿದೆ. ಮದುವೆ ಆಗುವ ತೀರ್ಮಾನ ಮಾಡಿದ್ದೆವು. ಆದರೆ ಮದುವೆ ಆಗಿರಲಿಲ್ಲ. ಆದರೆ ಕಳೆದ 1 ವರ್ಷದಿಂದ ಇಬ್ಬರು ದೂರವಾಗಿದ್ದೇವೆ. ಹೀಗಾಗಿ ನನಗೂ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದು ತನಿಖೆ ವೇಳೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

    ಮತ್ತೊಂಡೆದೆ ಡ್ರಗ್ಸ್ ಕೇಸ್‍ನಿಂದ ಬಚಾವಾಗಲು ರಾಗಿಣಿ ಈ ಬ್ರೇಕಪ್ ಕಥೆ ಹೇಳಿದ್ದಾರಾ? ಎಂಬ ಅನುಮಾನ ಮೂಡಿದೆ. ಇನ್ನೂ ಭಾವಿ ಪತಿಯನ್ನು ಸೇಫ್ ಮಾಡಲು ಸಂಜನಾ ಈ ಪ್ರೇಮದ ಸ್ಟೋರಿ ಹೇಳಿದ್ದಾರಾ ಎಂದು ಪ್ರಶ್ನೆ ಮೂಡಿದೆ. ಆದರೆ ಡ್ರಗ್ಸ್ ಕೇಸಲ್ಲಿ ಸಿಕ್ಕಿಬಿದ್ದ ನಟಿಯರಿಬ್ಬರು ಮೂರು ವರ್ಷ ಹಾಗೂ ಒಂದು ವರ್ಷದ ಬ್ರೇಕಪ್ ಸ್ಟೋರಿಯನ್ನು ಪೊಲೀಸರ ಮುಂದಿಟ್ಟಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

     

    ಸಂಜನಾ ಮದುವೆ:
    ಸಿಸಿಬಿ ಪೊಲೀಸರ ಅತಿಥಿಯಾಗಿರುವ ನಟಿ ಸಂಜನಾ ಗಲ್ರಾನಿ ಅವರ ಮದುವೆ ಕುರಿತವಾಗಿ ಸ್ಫೋಟಕ ಫೋಟೋವೊಂದು ಹೊರಬಿದ್ದಿತ್ತು. ನಟಿ ಸಂಜನಾ ಒಂದು ವರ್ಷದ ಹಿಂದೆಯೇ ಮುಸ್ಲಿಂ ಸಂಪ್ರದಾಯದಲ್ಲಿ ವೈದ್ಯ ಅಜೀಜ್ ಪಾಷ ಅವರೊಂದಿಗೆ ಮದುವೆಯಾಗಿದ್ದಾರೆ ಎನ್ನಲಾಗಿತ್ತು. ಅಜೀಜ್ ಪಾಷ ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು, ಆಗಾಗ ಇಂದಿರಾನಗರದಲ್ಲಿರುವ ಸಂಜನಾ ಮನೆಗೆ ಬರುತ್ತಿದ್ದರು. ಮದುವೆಯ ಬಳಿಕ ಒಂದು ವರ್ಷದಿಂದ ಗಂಡನ ಜೊತೆಗೆ ಸಂಜನಾ ಇದ್ದರು. ಅಲ್ಲದೇ ಸಂಜನಾ ಮಾಡುತ್ತಿದ್ದ ಪಾರ್ಟಿಗಳಲ್ಲಿ ಅಜೀಜ್ ಪಾಷ ಭಾಗಿಯಾಗುತ್ತಿದ್ದರು ಎನ್ನಲಾಗುತ್ತಿದೆ.

  • ರಾಜಕೀಯ ಕೈವಾಡ ಇದೆ, ನನ್ನ ಮುಗಿಸೋದು ಅಷ್ಟು ಸುಲಭ ಅಲ್ಲ: ಶಾಸಕ ಜಮೀರ್

    ರಾಜಕೀಯ ಕೈವಾಡ ಇದೆ, ನನ್ನ ಮುಗಿಸೋದು ಅಷ್ಟು ಸುಲಭ ಅಲ್ಲ: ಶಾಸಕ ಜಮೀರ್

    – ಕರ್ನಾಟಕ ಪೊಲೀಸ್ ನಂಬರ್ ಒನ್, ಅವರ ಮೇಲೆ ವಿಶ್ವಾಸ ಇದೆ
    – ಕಳ್ಳನ ಜೊತೆ ಫೋಟೋ ತೆಗೆಸಿಕೊಂಡ್ರೆ ನಾನು ಕಳ್ಳ ಅನ್ನೋಕೆ ಆಗುತ್ತಾ

    ಬೆಂಗಳೂರು: ಎಲ್ಲೋ ಒಂದು ಕಡೆ ರಾಜಕೀಯ ಕೈವಾಡ ಇದೆ. ನಾನು ಬೆಳೆಯುತ್ತಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನನ್ನನ್ನು ಮುಗಿಸಬೇಕು ಎಂದು ತೀರ್ಮಾನ ಮಾಡುತ್ತಿದ್ದಾರೆ. ಆದರೆ ನಮ್ಮ ರಾಜ್ಯದ ಪೊಲೀಸರು ಯಾವ ರಾಜ್ಯದಲ್ಲೂ ಇಲ್ಲ. ನಂಬರ್ ಒನ್ ಪೊಲೀಸರು ಎಂದರೆ ಕರ್ನಾಟಕ ಪೊಲೀಸ್. ಅವರ ಬಗ್ಗೆ ವಿಶ್ವಾಸ ಇದೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ. ಇದನ್ನೂ ಓದಿ: ಕ್ಯಾಸಿನೋಗೆ ಹೋದ್ರು ಅನ್ನೋದು ತಪ್ಪಲ್ಲ: ಜಮೀರ್ ನಡೆ ಸಮರ್ಥಿಸಿಕೊಂಡ ಸಿದ್ದರಾಮಯ್ಯ

    ವರದಿಗಾರರೊಂದಿಗೆ ಮಾತನಾಡಿದ ಶಾಸಕ ಜಮೀರ್, ಕೊರೊನಾದಿಂದಾಗಿ ನಾನು ಏನೂ ಮಾತನಾಡಲಿಲ್ಲ. ಪೊಲೀಸ್ ಠಾಣೆಯಲ್ಲೂ ಸಂಬರಗಿ ವಿರುದ್ಧ ದೂರು ಕೊಟ್ಟಿದ್ದೇನೆ. ಕಾನೂನಿನ ಮೂಲಕ ಹೋರಾಟ ಮಾಡುತ್ತಿದ್ದೇನೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನಮ್ಮ ರಾಜ್ಯದ ಪೊಲೀಸರು ಯಾವ ರಾಜ್ಯದಲ್ಲೂ ಇಲ್ಲ. ನಂಬರ್ ಒನ್ ಪೊಲೀಸರು ಎಂದರೆ ಕರ್ನಾಟಕ ಪೊಲೀಸ್. ಅವರ ಬಗ್ಗೆ ವಿಶ್ವಾಸ ಇದೆ. ಸಂಬರಗಿ ಒಳ್ಳೆ ಕೆಲಸ ಮಾಡುತ್ತಿದ್ದಾರೆ, ಮಾಡಲಿ. ಅವರು ನನ್ನ ಮೇಲೆ ಎಲ್ಲೂ ಡ್ರಗ್ಸ್ ಆರೋಪ ಮಾಡಿಲ್ಲ ಎಂದರು. ಇದನ್ನೂ ಓದಿ: ಅಲ್ಪಸಂಖ್ಯಾತ ಅನ್ನೋದು ರಕ್ಷಣೆಯ ಟ್ಯಾಗ್ ಅಲ್ಲ: ಶಾಸಕ ಜಮೀರ್‌ಗೆ ಸಚಿವ ಸುಧಾಕರ್ ಟಾಂಗ್

    ಎಲ್ಲೋ ಒಂದು ಕಡೆ ರಾಜಕೀಯ ಕೈವಾಡ ಇದೆ. ನಾನು ಬೆಳೆಯುತ್ತಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನನ್ನನ್ನು ಮುಗಿಸಬೇಕು ಎಂದು ತೀರ್ಮಾನ ಮಾಡುತ್ತಿದ್ದಾರೆ. ಆದರೆ ಜಮೀರ್ ಮುಗಿಸುವುದು ಅಷ್ಟು ಸುಲಭ ಅಲ್ಲ. ನಾನು ಯಾವುದೇ ತಪ್ಪು ಮಾಡಲು ಹೋಗುವುದಿಲ್ಲ ಎಂದು ಪ್ರಮಾಣ ಮಾಡಿದರು. ಇದನ್ನೂ ಓದಿ: ನಾನು ಅಲ್ಪಸಂಖ್ಯಾತನಾಗಿದ್ದೇನೆ, ನನ್ನನ್ನು ತುಳಿಯಲು ನೋಡಲಾಗುತ್ತಿದೆ – ಜಮೀರ್‌

    ನನಗೂ ಫಾಝಿಲ್‍ಗೂ ಪರಿಚಯ ಇಲ್ಲ. ಕಳ್ಳ ನನ್ನ ಜೊತೆ ನಿಂತು ಫೋಟೋ ತೆಗೆಸಿಕೊಂಡರೆ ನಾನು ಕಳ್ಳ ಅನ್ನೋಕೆ ಆಗುತ್ತಾ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾಗಿ ನನ್ನ ಜೊತೆ ಯಾರೋ ಫೋಟೋ ತೆಗೆಸಿಕೊಳ್ಳುತ್ತಾರೆ. ಆದ್ದರಿಂದ ನಾನು ಭಾಗಿಯಾಗಿರುತ್ತೀನಾ ಎಂದು ಪ್ರಶ್ನೆ ಮಾಡಿದರು. ಡ್ರಗ್ಸ್ ದಂಧೆಯಲ್ಲಿ ಫಾಝಿಲ್ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ಫಾಝಿಲ್‍ಗೂ ನನಗೂ ಯಾವುದೇ ಸಂಬಂಧವಿಲ್ಲ. ಮೂರು ವರ್ಷಗಳಿಂದ ಅವನು ನನಗೆ ಕಂಡೇ ಇಲ್ಲ ಎಂದು ಜಮೀರ್ ಹೇಳಿದರು.

    ವರ್ಷಕ್ಕೆ ಒಮ್ಮೆ ಉಮ್ರಾಗೆ ನಾನು ಹೋಗಿದ್ದೇನೆ. ಅಲ್ಲಿಗೆ ಎಲ್ಲರೂ ಬರುತ್ತಾರೆ, ಅವನೂ ಬಂದಿರಬಹುದು. ಉಮ್ರಾಗೆ ರಾಜ್ಯದಿಂದ ಸಾವಿರಾರು ಜನ ಬರುತ್ತಾರೆ. ನಾನು 23 ವರ್ಷದಿಂದ ಉಮ್ರಾಗೆ ಹೋಗುತ್ತಿದ್ದೇನೆ. ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದರೆ ಫಾಝಿಲ್‍ಗೆ ಗಲ್ಲು ಶಿಕ್ಷೆ ಆಗಬೇಕು, ಅದೇ ರೀತಿ ನಾನು ಭಾಗಿಯಾಗಿದ್ದರೆ ನನಗೂ ಗಲ್ಲು ಶಿಕ್ಷೆ ಆಗಬೇಕು ಎಂದು ಈ ಹಿಂದೆಯೇ ನಾನು ಮಾಧ್ಯಮಗಳಲ್ಲಿ ಹೇಳಿದ್ದೇನೆ ಎಂದರು.

    ಮಾಜಿ ಸಿಎಂ ಕುಮಾರಸ್ವಾಮಿ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿ ಜಮೀರ್, ಕೊಲಂಬೋಗೆ ಹೋಗುವುದು ತಪ್ಪಾ. ನಾನು ನನ್ನ ಫ್ಯಾಮಿಲಿ ಜೊತೆ ಎರಡು ಭಾರಿ ಹೋಗಿದ್ದೇನೆ. ಕುಮಾರಸ್ವಾಮಿಯವರ ಜೊತೆಗೂ ಹೋಗಿದ್ದೇನೆ. ಜೆಡಿಎಸ್ ಶಾಸಕರ ಜೊತೆ ಕೊಲಂಬೋಗೆ ಹೋಗಿದ್ದೇವೆ. ಕೊಲಂಬೋಗೆ ಪ್ರವಾಸಕ್ಕೆ ಹೋಗಿದ್ದು, ಕೊಲಂಬೋಗೆ ಹೋದರೆ ಕ್ಯಾಸಿನೋಗೆ ಹೋದಂಗೆ ಅಂದುಕೊಳ್ಳೋದಾ. ನಾವು ಮನಸ್ಸಿನ ಶಾಂತಿ, ನೆಮ್ಮದಿಗಾಗಿ ಹೋಗಿರುತ್ತೇವೆ ಎಂದು ಜಮೀರ್ ಸ್ಪಷ್ಟಪಡಿಸಿದರು.

    ನಾನು ಯಾವುದೇ ತಪ್ಪನ್ನೂ ಮಾಡಿಲ್ಲ. ಸಂಜನಾ ನನ್ನ ಜೊತೆ ಹೋಗಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಸಂಜನಾ ಏನಾದರೂ ದಾಖಲೆ ಕೊಟ್ಟಿದ್ದಾರ, ಈಗ ಸಂಜನಾ ಬಿಟ್ಟು ಫಾಝಿಲ್ ಇಟ್ಟುಕೊಂಡಿದ್ದೀರ, ನಾನು ಎಲ್ಲೂ ತಪ್ಪು ಮಾಡಿಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಸಂಜನಾ ಜೊತೆ ಜಮೀರ್ ಹೋಗಿದ್ದರೂ ಅಂತ ಸಂಬರಗಿ ಹೇಳಿದ್ದು, ಹೀಗಾಗಿ ಅವರನ್ನೇ ಕೇಳಿ. ಸಂಜನಾ ಜೊತೆ ನಾನು ಹೋಗಿರೋ ಒಂದು ಫೋಟೋ ತೋರಿಸಲಿ ಎಂದು ಹೇಳಿದರು.

  • ಖನ್ನಾ ಪೂಲ್ ಪಾರ್ಟಿಯಲ್ಲಿ ಮತ್ಸ್ಯಕನ್ಯೆಯಂತೆ ಈಜಿದ್ದ ಸಂಜನಾ

    ಖನ್ನಾ ಪೂಲ್ ಪಾರ್ಟಿಯಲ್ಲಿ ಮತ್ಸ್ಯಕನ್ಯೆಯಂತೆ ಈಜಿದ್ದ ಸಂಜನಾ

    – ಕಿಕ್ಕೇರಿಸಿ ಪೂಲ್ ಪಾರ್ಟಿ, ಹೋಲಿ ಪಾರ್ಟಿ
    – ನಟಿಯರ ಮೂಲಕ ಪಾರ್ಟಿ ಆಯೋಜಿಸಿ ಹಣ ಮಾಡ್ತಿದ್ದ ಖನ್ನಾ?

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣವನ್ನು ಬೇಧಿಸುತ್ತಿರುವ ಸಿಸಿಬಿ ಪೊಲೀಸರಿಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಒಂದು ಕಡೆ ರಾಜಕಾರಣಿ ಹಾಗೂ ಬ್ಯುಸಿನೆಸ್ ಮೆನ್ ಮಕ್ಕಳಿದ್ರೆ, ಇನ್ನೊಂದೆಡೆ ಹತ್ತಾರು ಮಾದರಿಯ ಪಾರ್ಟಿಗಳಲ್ಲಿ ನಟಿ ಮಣಿಯರು ಕಿಕ್ಕೇರಿಸಿಕೊಂಡು ಕುಣಿದಿರುವ ವಿಡಿಯೋಗಳು ಲಭ್ಯವಾಗುತ್ತಿವೆ.

    ನಟಿ ಮಣಿಯರ ಪಾರ್ಟಿಗಳಿಗೆ ಡ್ರಗ್ಸ್ ಡೀಲರ್ ವೀರೇನ್ ಖನ್ನಾ ಸೂತ್ರದಾರ ಎಂದು ಹೇಳಲಾಗಿದ್ದು, ಪೂಲ್ ಪಾರ್ಟಿ, ಹೋಲಿ ಪಾರ್ಟಿ ಹೀಗೆ ವಿವಿಧ ಬಗೆಯ ಪಾರ್ಟಿಗಳ ಪ್ಲಾನ್ ಮಾಡಿ ಹಣ ಸಂಪಾದಿಸುತ್ತಿದ್ದ ಎನ್ನಲಾಗಿದೆ. ವೀಕೆಂಡ್ ನಲ್ಲಿ ಪೂಲ್ ಪಾರ್ಟಿ ಆಯೋಜಿಸಿ ಖನ್ನಾ ಕಿಕ್ಕೇರಿಸುತ್ತಿದ್ದ. ಪೂಲ್ ಪಾರ್ಟಿ, ಹೋಲಿ ಪಾರ್ಟಿ ಹೀಗೆ ಸಂದರ್ಭಕ್ಕೆ ತಕ್ಕ ಪಾರ್ಟಿ ಆಯೋಜಿಸಿ ಹಣ ಕೀಳುತ್ತಿದ್ದ. ಸ್ಟಾರ್ ಹೋಟೆಲ್ ಗಳ ಪೂಲ್ ಬಳಿ ಪಾರ್ಟಿ ಆಯೋಜಿಸಿ, ನಶೆಯೇರಿಸುತ್ತಿದ್ದ ಎನ್ನಲಾಗಿದೆ.

    ಪಕ್ಕಾ ಪ್ಲಾನ್ ಮಾಡಿ ಪಾರ್ಟಿ ಆಯೋಜಿಸಿ ಸಖತ್ ಹಣ ಮಾಡುತ್ತಿದ್ದ ಖನ್ನಾ, ಪಾರ್ಟಿ ಪ್ಲಾನ್ ಇವನದ್ದು, ಆಯೋಜನೆ ಎಲ್ಲಾ ಹೋಟೆಲ್ ನವರದ್ದು. ಹೀಗೆ ಪಾರ್ಟಿ ಆಯೋಜಿಸಿ ಬಂದ ಹಣದಲ್ಲಿ ಹೋಟೆಲ್‍ನವರಿಂದ ಖನ್ನಾ ಪರ್ಸೆಂಟೇಜ್ ಪಡೆಯುತ್ತಿದ್ದ. ಪ್ರತಿ ಟೇಬಲ್ ಗೆ 25,000 ಎಂಟ್ರಿ ಫೀಸ್ ಇಡುತ್ತಿದ್ದ. ಪೂಲ್ ಪಾರ್ಟಿಗೆ ನಟ, ನಟಿಯರು, ವಿಐಪಿಗಳಂಥ ಗೆಸ್ಟ್ ಗಳನ್ನು ಸಹ ಕರೆ ತರುತ್ತಿದ್ದ ಎಂದು ತಿಳಿದು ಬಂದಿದೆ.

     

    View this post on Instagram

     

    It’s my time at @tajconnemara ❤️❤️❤️

    A post shared by SANJJANAA GALRANI (@sanjjanaagalrani) on

    ಒಂದೆರಡು ಪೂಲ್ ಪಾರ್ಟಿಗಳಲ್ಲಿ ನಟಿ ಸಂಜನಾ ಸಹ ಭಾಗವಹಿಸಿರುವ ಶಂಕೆ ವ್ಯಕ್ತವಾಗುತ್ತಿದೆ. ಇದೀಗ ಸಂಜನಾ ಪೂಲ್ ಸ್ವಿಮ್ಮಿಂಗ್ ವಿಡಿಯೋ ಲಭ್ಯವಾಗಿದ್ದು, ಈ ವಿಡಿಯೋ ಆಧರಿಸಿ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಕಷ್ಟು ನಟಿಯರು ಪೂಲ್ ಪಾರ್ಟಿಯಲ್ಲಿ ಭಾಗವಹಿಸಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

  • 3 ದಿನಗಳ ಪೊಲೀಸ್ ಕಸ್ಟಡಿ ಅಂತ್ಯ – ಸಾಂತ್ವನ ಕೇಂದ್ರದಲ್ಲಿ ಇಬ್ಬರು ನಟಿಯರಿಗೆ ಟೆನ್ಶನ್

    3 ದಿನಗಳ ಪೊಲೀಸ್ ಕಸ್ಟಡಿ ಅಂತ್ಯ – ಸಾಂತ್ವನ ಕೇಂದ್ರದಲ್ಲಿ ಇಬ್ಬರು ನಟಿಯರಿಗೆ ಟೆನ್ಶನ್

    – ರಾಗಿಣಿ, ಸಂಜನಾಗೆ ಜೈಲಾ, ಬೇಲಾ?

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಮತ್ತು ಸಂಜನಾರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ಇಂದಿಗೆ ಇಬ್ಬರು ನಟಿಯರ ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದು, ಇಂದು ನ್ಯಾಯಾಲದಲ್ಲಿ ಮತ್ತೆ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ರಾಗಿಣಿ ಡ್ರಗ್ಸ್ ಸೇವಿಸಿರೋದಕ್ಕೆ ‘ಬಿಗ್’ ಸಾಕ್ಷ್ಯ – ಆರೋಪಿ ರವಿಶಂಕರ್ ತಪ್ಪೊಪ್ಪಿಗೆ

    ನಟಿ ರಾಗಿಣಿ ಮತ್ತು ಸಂಜನಾ ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಮತ್ತೆ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ. ಮತ್ತೆ ಪೊಲೀಸ್ ಕಸ್ಟಡಿಗೆ ಕೇಳದಿರಲು ಸಿಸಿಬಿ ತೀರ್ಮಾನ ಮಾಡಿದೆ. ಹೀಗಾಗಿ ನಟಿ ರಾಗಿಣಿಗೆ ಬೇಲ್ ಸಿಗುತ್ತಾ ಅಥವಾ ಇಲ್ಲವಾ ಎಂಬುದು ವಿಚಾರಣೆಯ ನಂತರ ತಿಳಿಯುತ್ತದೆ. ಇದನ್ನೂ ಓದಿ: ಮತ್ತೆ ಪೊಲೀಸ್ ಕಸ್ಟಡಿಗೆ ಕೇಳ್ಬೇಡಿ- ಅಧಿಕಾರಿಗಳ ಮುಂದೆ ರಾಗಿಣಿ, ಸಂಜನಾ ಗೋಳು

    ನಟಿ ರಾಗಿಣಿಯ ಜಾಮೀನು ಅರ್ಜಿ ಸಹ ಇಂದೇ ವಿಚಾರಣೆಗೆ ಬರಲಿದೆ. ಇಂದು ಸಿಸಿಬಿ ಆಕ್ಷೇಪಣೆ ಸಲ್ಲಿಸಿ ವಾದಕ್ಕೆ ಇಳಿಯೋದಿಲ್ಲ. ಆದರೆ ರಾಗಿಣಿ ಪರ ವಕೀಲರು ಮಧ್ಯಂತರ ಜಾಮೀನಿಗೆ ಮನವಿ ಮಾಡುತ್ತಾರೆ. ಈಗಾಗಲೇ ಎಲ್ಲಾ ದಾಳಿ ಮುಗಿದಿದೆ. ವಿಚಾರಣೆ ಮುಗಿದಿದೆ, ಆರೋಪಿಗಳ ಬಂಧನವಾಗಿಲ್ಲ ಅಂತಾರೆ. ಅದು ಪೊಲೀಸರ ವೈಫಲ್ಯ ಅದಕ್ಕಾಗಿ ಮಧ್ಯಂತರ ಜಾಮೀನಿಗೆ ಮನವಿ ಮಾಡುತ್ತಾರೆ ಎಂದು ತಿಳಿದು ಬಂದಿದೆ.

    ನಟಿ ಸಂಜನಾ ಇನ್ನೂ ಕೂಡ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಇಂದು ಅರೆಸ್ಟ್ ಆಗಿರುವ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಹೀಗಾಗಿ ಸಂಜನಾರನ್ನ ಮತ್ತೆ 5 ದಿನ ಕಸ್ಟಡಿಗೆ ಪಡೆಯಲು ಸಿಸಿಬಿ ಸಿದ್ಧತೆ ಮಾಡಿಕೊಂಡಿದೆ. ಕಸ್ಟಡಿ ಮುಗಿಯಲಿ ಅಂತ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ ಎಂದು ಹೇಳಲಾಗುತ್ತಿದೆ. ಇಂದಿನ ಆದೇಶ ನೋಡಿಕೊಂಡು ನಟಿ ಸಂಜನಾ ಜಾಮೀನು ಅರ್ಜಿ ಸಲ್ಲಿಸೋ ಸಾಧ್ಯತೆ ಇದೆ.

    ಇತ್ತ ಪ್ರತಿನಿತ್ಯ ಬೆಳ್ಳಂಬೆಳಗ್ಗೆ ವ್ಯಾಯಾಮಾದಲ್ಲಿದ್ದ ರಾಗಿಣಿಗೆ ಇಂದು ಟೆನ್ಶನ್ ಶುರುವಾಗಿದೆ. ಇಂದು ಮತ್ತೆ ನ್ಯಾಯಾಧೀಶರ ಮುಂದೆ ನಟಿ ರಾಗಿಣಿ ಮತ್ತು ಸಂಜನಾ ಹಾಜರಾಗಲಿದ್ದಾರೆ. ಹೀಗಾಗಿ ಇಂದು ಕೋರ್ಟಿನ ವಿದ್ಯಮಾನದ ಬಗ್ಗೆ ಇಬ್ಬರು ನಟಿಯರು ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ. ನಟಿ ಸಂಜನಾಳಿಗಿಂತ ನಟಿ ರಾಗಿಣಿ ಮತ್ತಷ್ಟು ಟೆನ್ಶನ್‍ನಲ್ಲಿದ್ದು, ಭಾನುವಾರ ರಾತ್ರಿ ಕೂಡ ಊಟವನ್ನು ತಡವಾಗಿ ಸೇವಿಸಿದ್ದಾರೆ. ಆದ್ದರಿಂದ ಮಹಿಳಾ ಪೊಲೀಸರು ಸಾಂತ್ವನ ಕೇಂದ್ರದಲ್ಲೇ ಇಬ್ಬರ ಮೇಲೂ ಹೆಚ್ಚಿನ ನಿಗಾ ಇಟ್ಟಿದ್ದಾರೆ.

    ಈಗಾಗಲೇ ಮೂರನೇ ಬಾರಿ ರಾಗಿಣಿಯನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ನಟಿಯರ ಹೈಡ್ರಾಮಗಳ ಮಧ್ಯೆಯೂ ಕೂಡ ಕೆಲ ಮಹತ್ವದ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ. ಈಗಾಗಲೇ ಸಾಕ್ಷಿ ನಾಶಕ್ಕೆ ಪ್ರಯತ್ನಪಟ್ಟಿರುವ ವಿಡಿಯೋಗಳು, ದಾಖಲೆಗಳನ್ನು ಕೋರ್ಟ್ ಗಮನಕ್ಕೆ ತರಲು ಪೊಲೀಸರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

    ಒಟ್ಟಿನಲ್ಲಿ ಇಂದು ಸಂಜೆ ಮೂರು ಗಂಟೆಗೆ ಬೇಲ್ ಸಿಗುತ್ತಾ ಇಲ್ಲವಾ ಎಂಬುದು ಗೊತ್ತಾಗುತ್ತದೆ. ಒಂದು ವೇಳೆ ಇಂದು ನಟಿ ರಾಗಿಣಿಗೆ ಜಾಮೀನು ಸಿಕ್ಕಿದರೆ 12 ದಿನಗಳ ಪೊಲೀಸ್ ಕಸ್ಟಡಿಯ ವಾಸ ಮುಗಿಯಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಬೇಲ್ ಸಿಗೋದು ಡೌಟ್ ಎಂದು ಸಿಸಿಬಿ ಪೊಲೀಸರು ಹೇಳುತ್ತಿದ್ದಾರೆ.

  • ನಾವು ಅಂತಹ ಕುಟುಂಬದಿಂದ ಬಂದಿಲ್ಲ, ಫಾಝಿಲ್ ಯಾರು ಅಂತ ಗೊತ್ತಿಲ್ಲ- ರಕ್ಷ್

    ನಾವು ಅಂತಹ ಕುಟುಂಬದಿಂದ ಬಂದಿಲ್ಲ, ಫಾಝಿಲ್ ಯಾರು ಅಂತ ಗೊತ್ತಿಲ್ಲ- ರಕ್ಷ್

    ಬೆಂಗಳೂರು: ನಾವು ಆ ರೀತಿಯ ಕುಟುಂಬದಿಂದ ಬಂದಿಲ್ಲ, ಫಾಝಿಲ್ ಯಾರೆಂಬುದು ನನಗೆ ಗೊತ್ತಿಲ್ಲ ಎಂದು ಕಿರುತೆರೆ ನಟ ರಕ್ಷ್ ಸ್ಪಷ್ಟಪಡಿಸಿದ್ದಾರೆ.

    ಫಾಝಿಲ್ ಜೊತೆ ರಕ್ಷ್ ಇರುವ ಫೋಟೋ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಖಾಸಗಿ ಸಮಾರಂಭಕ್ಕೆ ಹೋದಾಗ ಸುನಿಲ್ ಗವಾಸ್ಕರ್ ಬಂದಿರುವುದು ತಿಳಿಯಿತು. ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಹೋಗಿದ್ದೆವು. ಫಾಝಿಲ್ ಯಾರು ಅಂತ ಗೊತ್ತಿಲ್ಲ. ಅದು ಯಾರ ಮನೆ ಎಂದೂ ಸಹ ಗೊತ್ತಿಲ್ಲ. ಸುನಿಲ್ ಗವಾಸ್ಕರ್ ಅವರೊಂದಿಗೆ ತೆಗೆಸಿದ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲೂ ಹಾಕಿಕೊಂಡಿದ್ದೇನೆ. ಫಾಝಿಲ್ ಯಾರು ಅಂತ ನನಗೆ ಗೊತ್ತಿಲ್ಲ. ನಾವು ಆ ರೀತಿಯ ಕುಟುಂಬದಿಂದ ಬಂದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನಗೂ ಅಪ್ರೋಚ್ ಮಾಡಿದ್ರು, ಆದ್ರೆ ನಾನು ಅದನ್ನ ಮುಟ್ಟಿಲ್ಲ – ‘ಗಟ್ಟಿಮೇಳ’ ಖ್ಯಾತಿಯ ನಟ ರಕ್ಷ್

    ಯಾರ ಪರಿಚಯ ನನಗಿಲ್ಲ: ಫಾಝಿಲ್, ವೈಭವ್ ಯಾರ ಪರಿಚಯವೂ ಇಲ್ಲ. ಅವರ ಫೋನ್ ನಂಬರ್ ಸಹ ನನ್ನ ಬಳಿ ಇಲ್ಲ. ಏನು ಬೇಕಾದರೂ ಚೆಕ್ ಮಾಡಿ, ಯಾರು ಕರೆದರೂ ನಾನು ಹೋಗಿ ಸ್ಪಷ್ಟನೆ ನೀಡುತ್ತೇನೆ. ನನ್ನ ಕಾಲ್ ಲಿಸ್ಟ್ ಚೆಕ್ ಮಾಡಿ, ಮೆಸೇಜ್ ಚೆಕ್ ಮಾಡಿ. ಫಾಝಿಲ್ ಯಾರೆಂಬುದು ನನಗೆ ಗೊತ್ತಿಲ್ಲ. ನಾವು ಕೇವಲ ಫೋಟೋ ತೆಗೆಸಿಕೊಳ್ಳಲು ಹೋಗಿದ್ದೆವು. ಕೇವಲ ಫೋಟೋ ತೆಗೆಸಿಕೊಂಡು ಬಂದಿದ್ದೇವೆ. ಅದು ಯಾರ ಮನೆ ಎಂಬುದು ಸಹ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಎಲ್ಲ ಕಾರ್ಯಕ್ರಮಗಳಿಗೂ ನಾವು ಹೋಗಲ್ಲ. ಪ್ರಮುಖ ಕಾರ್ಯಕ್ರಮಗಳಿಗೆ ಮಾತ್ರ ಹೋಗುತ್ತೇನೆ. ಗಣೇಶ ಹಬ್ಬಗಳಿಗೂ ಹೋಗಲು ಹಲವು ಬಾರಿ ಯೋಚಿಸುತ್ತೇನೆ. ಇದಕ್ಕೂ ನನಗೂ ಎಳ್ಳಷ್ಟೂ ಸಂಬಂಧವಿಲ್ಲ. ನಾವು ಆ ರೀತಿಯ ಕುಟುಂಬದಿಂದಲೂ ಬಂದಿಲ್ಲ.

    ನಾವು ಧಾರಾವಾಹಿಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಸಿನಿಮಾ ಮಾಡಿಕೊಂಡು ಒಂದು ಮಟ್ಟಕ್ಕೆ ಬೆಳೆಯಬೇಕು ಎಂಬ ಕನಸು ಹೊತ್ತಿರುತ್ತೇವೆ. ಇದಕ್ಕಾಗಿ ಹಲವು ನಿರ್ಮಾಪಕರನ್ನು ಸಹ ಭೇಟಿಯಾಗುತ್ತಿರುತ್ತೇವೆ. ಸಿನಿಮಾ ಮಾಡುವುದರಲ್ಲೇ ಕಾಲ ಕಳೆಯುತ್ತಿರುತೇವೆ. ಈ ರೀತಿ ಮಾಡಿ ಜೀವನ, ಹೆಸರು ಹಾಳು ಮಾಡಿಕೊಂಡರೆ ತಂದೆ, ತಾಯಿ ತುಂಬಾ ಚಿಂತೆಗೀಡಾಗುತ್ತಾರೆ. ಮೂಲವಾಗಿ ನಾವು ಈ ರೀತಿ ಬೆಳೆದವರೇ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

  • ಹೆಚ್ಚಿನ ಮಾಹಿತಿ ಕೇಳಿದ್ದಾರೆ, ಮತ್ತೆ ಶುಕ್ರವಾರ ವಿಚಾರಣೆಗೆ ಹೋಗ್ತೀನಿ – ಸಂಬರಗಿ

    ಹೆಚ್ಚಿನ ಮಾಹಿತಿ ಕೇಳಿದ್ದಾರೆ, ಮತ್ತೆ ಶುಕ್ರವಾರ ವಿಚಾರಣೆಗೆ ಹೋಗ್ತೀನಿ – ಸಂಬರಗಿ

    – ಜಮೀರ್‌ಗೂ ಡ್ರಗ್ಸ್‌ಗೂ ಸಂಬಂಧ ಇದೆ ಅಂತ ನಾನು ಹೇಳಿಲ್ಲ
    – ನಾನು ಏನೂ ಸಾಕ್ಷ್ಯ ಕೊಟ್ಟಿಲ್ಲ
    – ಕೊಂಲಬೋಗೆ ಹೋಗಿರುವುದನ್ನ ಜಮೀರ್ ಒಪ್ಪಿಕೊಂಡಿದ್ದಾರೆ

    ಬೆಂಗಳೂರು: ಮತ್ತೆ ಶುಕ್ರವಾರ ವಿಚಾರಣೆಗೆ ಬರುವಂತೆ ಸಿಸಿಬಿ ತನಿಖಾಧಿಕಾರಿಗಳು ನನಗೆ ಸೂಚಿಸಿದ್ದಾರೆ ಎಂದು ಉದ್ಯಮಿ, ಸಿನಿ ವಿತರಕ ಪ್ರಶಾಂತ್ ಸಂಬರಗಿ ಹೇಳಿದ್ದಾರೆ. ಇದನ್ನೂ ಓದಿ: ಜಮೀರ್ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತಿದ್ದೇನೆ: ಪ್ರಶಾಂತ್ ಸಂಬರಗಿ

    ಸಿಸಿಬಿ ವಿಚಾರಣೆ ಮುಗಿದ ನಂತರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರಶಾಂತ್ ಸಂಬರಗಿ, ತನಿಖಾಧಿಕಾರಿಗಳ ಮುಂದೆ ಕೊಟ್ಟ ದಾಖಲೆಗಳು ಸಮರ್ಪಕವಾಗಿಲ್ಲ ಅಂದಿದ್ದಾರೆ. ಸಂಪೂರ್ಣವಾದ ದಾಖಲೆಗಳನ್ನು ತರುವಂತೆ ಹೇಳಿದ್ದಾರೆ. ಅಲ್ಲದೇ ಮತ್ತೆ ಶುಕ್ರವಾರವೂ ಬರುವಂತೆ ಹೇಳಿದ್ದು, ನೋಟಿಸ್ ಕೊಡುತ್ತೇವೆ ಎಂದಿದ್ದಾರೆ. ವಿಡಿಯೋ ಬಿಡುಗಡೆ ಮಾಡಿರುವುದು ತೋರಿಸುವಂತೆ ಹೇಳಿದರು. ನಾನು ನನ್ನ ಬಳಿ ಇರುವ ವಿಡಿಯೋವನ್ನು ತೋರಿಸಿದೆ. ಆದರೆ ಆ ವಿಡಿಯೋ ನಮ್ಮ ಬಳಿಯೂ ಇದೆ, ನಿಮ್ಮ ಬಳಿ ಇರುವುದು ಕೊಡಿ ಅಂದರು. ಆಗ ನಾನು ನನ್ನ ಬಳಿಯೂ ಇದೆ ವಿಡಿಯೋ ಇರುವುದು ಅಂತ ಹೇಳಿದ್ದೇನೆ ಎಂದು ಅವರು ತಿಳಿಸಿದರು.

    ನಾನು ಫೇಸ್‍ಬುಕ್, ಟ್ವಿಟ್ಟರ್ ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ಜಮೀರ್‌ಗೂ ಡ್ರಗ್ಸ್‌ಗೂ ಸಂಬಂಧ ಇದೆ ಅಂತ ನಾನು ಹೇಳಿಲ್ಲ. ಜಮೀರ್ ಕೊಲಂಬೋಗೆ ಹೋಗಿದ್ದರು ಎಂದು ಹೇಳಿದ್ದೆ ಎಂದು ಪ್ರಶಾಂತ್ ಸಂಬರಗಿ ಈ ವೇಳೆ ಸ್ಪಷ್ಟಪಡಿಸಿದ್ದರು.

    ವಿಚಾರಣೆ ವೇಳೆ ಜಮೀರ್ ನಾನು ಶ್ರೀಲಂಕಾ ಹೋಗಿದ್ದೇನೆ ಅಂತ ಒಪ್ಪಿಕೊಂಡಿದ್ದಾರೆ ಅನ್ನೋ ವಿಚಾರ ಟಿವಿಯಲ್ಲಿ ನೋಡಿದೆ. ಹೀಗಾಗಿ ನಾನು ಮಾಡಿರುವ ಆರೋಪಕ್ಕೆ ಉತ್ತರ ಇಲ್ಲೇ ಸಿಕ್ಕಿದೆ. ನಾನು ಯಾವ ದಾಖಲೆಗಳನ್ನು ಕೊಟ್ಟಿದ್ದೇನೆ ಎನ್ನುವುದನ್ನು ಹೇಳುವುದಕ್ಕೆ ಆಗಲ್ಲ. ನಾನು ಏನೂ ಸಾಕ್ಷ್ಯ ಕೊಟ್ಟಿಲ್ಲ ಎಂದೇ ತಿಳಿದುಕೊಳ್ಳಿ, ನಾನು ಏನೂ ಸಾಕ್ಷ್ಯ ಕೊಟ್ಟಿಲ್ಲ ಎಂದರು.

    ಜಮೀರ್ ಕೊಲಂಬೋಗೆ ಹೋಗಿದ್ದರು ಎಂದು ಹೇಳಿದ್ದೆ. ಅದನ್ನು ಈಗ ಅವರೇ ಒಪ್ಪಿಕೊಂಡಿದ್ದಾರೆ. ಈಗ ಶೇಖ್ ಫಾಝಿಲ್ ಬಗ್ಗೆ ವಿಚಾರಣೆ ಮಾಡಿ ಅಂತ ಮಾತ್ರ ನಾನು ಹೇಳಿದ್ದೇನೆ. ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಪೂರಕ ಸಾಕ್ಷ್ಯ ಕೊಡಿ ಅಂದರು. ನಾನು ನನ್ನ ಬಳಿ ಇರುವಷ್ಟು ಮಾಹಿತಿಯನ್ನು ಕೊಟ್ಟಿದ್ದೇನೆ. ಆದರೆ ಸಿಸಿಬಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಕೇಳಿದ್ದಾರೆ. ಹೀಗಾಗಿ ಶುಕ್ರವಾರ ಮತ್ತೆ ವಿಚಾರಣೆಗೆ ಕರೆಯುತ್ತಾರೆ ಎಂದು ಸಂಬರಗಿ ತಿಳಿಸಿದರು.

    ನಾನು ರಾಹುಲ್ ಜೊತೆ ಇದ್ದ ಫೋಟೋಗಳ ಬಗ್ಗೆಯೂ ಕೇಳಿದರು ಎಂದರು. ನಾನು ಸಂಜನಾ ಬಗ್ಗೆ ಯಾವುದೇ ಸಾಕ್ಷ್ಯಗಳನ್ನು ಕೊಟ್ಟಿಲ್ಲ. ಆದರೆ ಅವರ ಟಿಕ್‍ಟಾಕ್ ವಿಡಿಯೋಗಳು, ದುಬೈಗೆ ಹೋಗಿರುವ ಮಾಹಿತಿ ಹೇಳಿದೆ. ಬೇರೆ ಯಾವುದೇ ನಟಿ-ನಟರ ಬಗ್ಗೆ ಮಾಹಿತಿ ಕೊಟ್ಟಿಲ್ಲ. ನಾನು ಬಿಜೆಪಿ ವಕ್ತಾರ ಎಂದು ಹೇಳುತ್ತಿದ್ದಾರೆ. ಆದರೆ ನಾನು ಕಾಂಗ್ರೆಸ್ ಅವರನ್ನೂ ಭೇಟಿ ಮಾಡಿದರೆ ಕಾಂಗ್ರೆಸ್ ವಕ್ತಾರ ಎಂದು ಹೇಳುತ್ತಾರೆ. ರಾಜಕೀಯಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ, ರಾಜಕೀಯ ಪ್ರೇರಿತವಾಗಿ, ಈ ಉದ್ದೇಶಪೂರವಾಗಿ ಈ ಅಭಿಯಾನ ನಡೆಸುತ್ತಿಲ್ಲ ಎಂದು ಪ್ರಶಾಂತ್ ಆಕ್ರೊಶದಿಂದ ಮಾತನಾಡಿದರು.

    ಜಮೀರ್ ಕೊಲಂಬೋಕ್ಕೆ ಹೋದ ಬಗ್ಗೆ ಪೊಲೀಸರು ಪ್ರಶ್ನೆ ಕೇಳಲ್ಲ ಎಂದಿದ್ದಾರೆ. ಯಾಕೆಂದರೆ ಜಮೀರ್ ಕೊಲಂಬೋಕ್ಕೆ ಹೋಗಿರುವ ಬಗ್ಗೆ ಅವರೇ ಒಪ್ಪಿಕೊಂಡಿದ್ದಾರೆ. ಶಾಸಕ ಜಮೀರ್ ಬಗ್ಗೆ ನನಗೆ ಯಾವುದೇ ಅಭ್ಯಂತರ ಇಲ್ಲ. ಅವರ ವೈಯಕ್ತಿಕ ವಿಷಯದ ಬಗ್ಗೆ ನಾನು ಮಾತಾಡಲ್ಲ. ಮಾನ್ಯ ಶಾಸಕರ ಬಗ್ಗೆ ನನ್ನ ಅಭ್ಯಂತರ ಇಲ್ಲ. ಆದರೆ ಶಾಸಕರ ಆಪ್ತ ಬಂಟ ಶೇಖ್ ಫಾಝಿಲ್ ಬಗ್ಗೆ ಮಾತಾಡಿದ್ದೇನೆ ಎಂದರು.

     

    ನನ್ನ ವಿರುದ್ಧದ ಎಫ್‍ಐಆರ್ ಬಗ್ಗೆ ನಮ್ಮ ವಕೀಲರು ನೋಡಿಕೊಳ್ಳುತ್ತಾರೆ. ಜಮೀರ್‍ಗೂ ಶೇಖ್ ಫಾಝೀಲ್‍ಗೂ ಏನು ಸಂಬಂಧ ಇದೆ ಅನ್ನೋದನ್ನ ವಿಚಾರ ಮಾಡುವಂತೆ ಹೇಳಿದ್ದೇನೆ. ಅದೆಲ್ಲದಕ್ಕೂ ನಾನು ಉತ್ತರವನ್ನು ಕೊಟ್ಟಿದ್ದೇನೆ. ಕೆಲವೊಂದು ಡಾಕ್ಯುಮೆಂಟ್ ತರುವುದಕ್ಕೆ ಹೇಳಿದ್ದಾರೆ. ಎಲ್ಲವನ್ನು ಶುಕ್ರವಾರ ತಂದು ಕೊಡುತ್ತೇನೆ ಎಂದು ಪ್ರಶಾಂತ್ ಸಂಬರಗಿ ಹೇಳಿದರು.