Tag: Sanjana Garlani

  • ಮುಸ್ಲಿಂ ಸಂಪ್ರದಾಯದಂತೆ ಸೀಮಂತ ಮಾಡಿಕೊಂಡ ಸಂಜನಾ ಗರ್ಲಾನಿ

    ಮುಸ್ಲಿಂ ಸಂಪ್ರದಾಯದಂತೆ ಸೀಮಂತ ಮಾಡಿಕೊಂಡ ಸಂಜನಾ ಗರ್ಲಾನಿ

    ಮೊನ್ನೆಯಷ್ಟೇ ಹಿಂದೂ ಸಂಪ್ರದಾಯದಂತೆ ಸೀಮಂತ ಕಾರ್ಯ ಮಾಡಿಸಿಕೊಂಡಿದ್ದ ಸಂಜನಾ ಗರ್ಲಾನಿ, ನಿನ್ನೆಯಷ್ಟೇ ಅವರ ಪತಿ ಕುಟುಂಬದ ಪರವಾಗಿ ಮುಂಸ್ಲಿಂ ಸಂಪ್ರದಾಯದಂತೆ ಸೀಮಂತ ಕಾರ್ಯ ನಡೆದಿದೆ. ಆ ಫೋಟೋಗಳನ್ನು ಸ್ವತಃ ಸಂಜನಾ ಗರ್ಲಾನಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಷಯವನ್ನು ಅವರೇ ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    ಸಂಜನಾ ಗರ್ಲಾನಿ ಮತ್ತು ಡಾ. ಅಜೀಜ್ ಪಾಶಾ ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಒಂಬತ್ತು ತಿಂಗಳ ಗರ್ಭಿಣಿ ಆಗಿರುವ ಸಂಜನಾ ಅವರಿಗೆ ಅವರ ಕುಟುಂಬ ಹಿಂದು ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಾಗಾಗಿ ನಿನ್ನೆ ರವಿವಾರ ಡಾ.ಅಜೀಜ್ ಪಾಶಾ ಕುಟುಂಬದವರು ಮುಸ್ಲಿಂ ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮ ನೆರವೇರಿಸಿ, ಮೊದಲ ಮಗುವಿಗಾಗಿ ಹಾರೈಸಿದ್ದಾರೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ಸೀಮಂತ ಕಾರ್ಯಕ್ರಮದಲ್ಲಿ ಸಂಜನಾ ಗರ್ಲಾನಿ ಬಿಳಿ ಬಣ್ಣದ ಡಿಸೈನರ್ ಸೀರೆ ತೊಟ್ಟು ಕಂಗೊಳಿಸುತ್ತಿದ್ದರು. ತಲೆಗೆ ಮತ್ತು ಕೊರಳಿಗೆ ಹೂವಿನ ಹಾರ ಹಾಕಿಕೊಂಡು ಸಂಭ್ರಮಿಸುತ್ತಿದ್ದರು. ಇನ್ನೂ 20 ದಿನಗಳ ಒಳಗೆ ಸಂಜನಾ ಅವರಿಗೆ ಹೆರಿಗೆ ಆಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

    `ಗಂಡ ಹೆಂಡತಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ಸಂಜನಾ, ಬಳಿಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ್ರು. ಬಳಿಕ ಅಜೀಜ್ ಪಾಷಾ ಅವರೊಂದಿಗೆ ಸಂಜನಾ ವಿವಾಹವಾಗಿದ್ದರು. ಇತ್ತೀಚೆಗೆ ಸೀಮಂತ ಶಾಸ್ತ್ರದ ಸಂಭ್ರಮ ಕ್ಷಣಗಳನ್ನ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಬಳಿಕ ಬೇಬಿ ಬಂಪ್ ಫೋಟೋಗಳು ಕೂಡ ಅಭಿಮಾನಿಗಳ ಗಮನ ಸೆಳೆದಿತ್ತು. ವಿಶ್ವ ಅಮ್ಮಂದಿರ ದಿನದಂದು ಸಂಜನಾ ಅವರ ಬೇಬಿ ಶವರ್ ಸಮಾರಂಭ ನಡೆದಿದೆ.

  • ಸಂಜನಾ ತಲೆ ಬೋಳಿಸಿಕೊಂಡಿದ್ದು ಸುಳ್ಳೇ ಸುಳ್ಳು : ಭಾವನೆಗಳ ಜೊತೆ ಆಟವಾಡಿದ ನಟಿಗೆ ಕ್ಲಾಸ್ ತಗೆದುಕೊಂಡ ನೆಟ್ಟಿಗರು

    ಸಂಜನಾ ತಲೆ ಬೋಳಿಸಿಕೊಂಡಿದ್ದು ಸುಳ್ಳೇ ಸುಳ್ಳು : ಭಾವನೆಗಳ ಜೊತೆ ಆಟವಾಡಿದ ನಟಿಗೆ ಕ್ಲಾಸ್ ತಗೆದುಕೊಂಡ ನೆಟ್ಟಿಗರು

    ಮಾಜಮುಖಿ ಕಾರ್ಯಕ್ಕಾಗಿ ನಟಿ ಸಂಜನಾ ಗರ್ಲಾನಿ ಕೇಶಮುಂಡನ ಮಾಡಿಸಿಕೊಂಡಿದ್ದಾರೆ ಎಂಬ ಸುದ್ದಿ ಎರಡ್ಮೂರು ದಿನಗಳಿಂದ ಹರಿದಾಡುತ್ತಿತ್ತು. ತುಂಬು ಗರ್ಭಿಣಿಯಾಗಿರುವ ಸಂಜನಾ ಹೀಗೇಕೆ ಮಾಡಿಕೊಂಡರು ಎನ್ನುವ ಚರ್ಚೆ ಕೂಡ ನಡೆದಿತ್ತು. ಅವರು ಮದುವೆ ಆಗಿದ್ದು ಬೇರೆ ಧರ್ಮದ ಹುಡುಗನಾಗಿದ್ದರಿಂದ, ಆ ಕುಟುಂಬ ತಲೆ ಬೋಳಿಸಿಕೊಳ್ಳಲು ಒಪ್ಪುತ್ತದಾ ಎನ್ನುವ ಅನುಮಾನವೂ ಮೂಡಿತ್ತು. ಏನೇ ಆದರೂ, ಒಳ್ಳೆಯ ಕೆಲಸಕ್ಕಾಗಿ ಅವರು ಕೇಶಮುಂಡನ ಮಾಡಿಸಿದ್ದರಿಂದ ನಾಡಿಗೆ ನಾಡೇ ಅವರನ್ನು ಹೊಗಳಿತ್ತು. ಇದೀಗ ನಂಬಿದ ಎಲ್ಲರಿಗೂ ಸಂಜನಾ ಫೂಲ್ ಮಾಡಿದ್ದಾರೆ. ಇದನ್ನೂ ಓದಿ: ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ

    ದೇವರಿಗೆ ಹರಕೆ ಹೊತ್ತಿರಬಹುದು ಅಥವಾ ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡಿರಬಹುದು ಎಂದು ನಂಬಿದ್ದ ಜನಕ್ಕೆ ಸಂಜನಾ ಫೂಲ್ ಮಾಡಿದ್ದರ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಈ ರೀತಿ ಭಾವನಾತ್ಮಕವಾಗಿ ಯಾರೊಂದಿಗೂ ಆಟ ಆಡಬಾರದು ಎಂದು ಕೆಲವರು ಕಟುವಾಗಿಯೇ ತಿವಿದಿದ್ದರೆ, ಇದು ಫೇಕ್ ಎಂದು ಮೊದಲೇ ಗೊತ್ತಿತ್ತು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಟ್ರೋಲ್ ಪೇಜ್ ಗಳು ಮಾತ್ರ ಸಂಜನಾ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿವೆ. ಇದೊಂದು ಭಾವನಾತ್ಮಕ ವಿಷಯವಾಗಿದ್ದರಿಂದ ಈ ರೀತಿಯಾಗಿ ಜನರನ್ನು ಮೂರ್ಖರನ್ನಾಗಿ ಮಾಡಬಾರದು ಎಂದು ಅಭಿಮಾನಿಗಳು ಗರಂ ಆಗಿದ್ದಾರೆ.

     

    ಸಂಜನಾ ತಲೆ ಬೋಳಿಸಿಕೊಂಡಿದ್ದು ಸುಳ್ಳು, ಅದು ಕೇವಲ ಏಪ್ರಿಲ್ ಫೂಲ್ ಗಾಗಿ ಮಾಡಿದ್ದು ಎಂದು ಮನವರಿಕೆ ಮಾಡಿಕೊಡಲು ಸಂಜನಾ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.  ಅದಕ್ಕೂ ಮುನ್ನ ಬೋಳು ತಲೆಯ  ಫೋಟೋ ಹಾಕಿ ‘ಚೆಲುವು ಎನ್ನುವುದು ನೋಡುವವರ ಕಣ್ಣಿನಲ್ಲಿದೆ. ನಾನು ದೇವರ ಮೇಲಿಟ್ಟ ನಂಬಿಕೆಗಾಗಿ ನನ್ನ ತಲೆಗೂದಲನ್ನು ನಾನು ತ್ಯಾಗ ಮಾಡಿದ್ದೇನೆ.  ನಾನು ಈಗಾಗಲೇ ಅನೇಕ ಸಂಕಷ್ಟಗಳನ್ನು ದಾಟಿಕೊಂಡು ಬಂದಿದ್ದೇನೆ. ಅವೆಲ್ಲದಕ್ಕೂ ಶಕ್ತಿ ಕೊಟ್ಟಿದ್ದು ದೇವರು. ಹಾಗಾಗಿ ನಾನು ದೇವರಿಗೆ ಅವುಗಳನ್ನು ಅರ್ಪಿಸಿದ್ದೇನೆ. ನನ್ನ ಮಗುವಿಗಾಗಿ ನಾನು ಹರಕೆ ತೀರಿಸಿದ್ದೇನೆ’ ಹೀಗೆ ಭಾವನಾತ್ಮಕವಾಗಿ ಕರಳು ಹಿಂಡುವಂತೆ ಫೋಟೋ ಜತೆ ಬರೆದುಕೊಂಡಿದ್ದರು. ಇದನ್ನೂ ಓದಿ : ನೀನಾಸಂ ಸತೀಶ್ ಫಸ್ಟ್ ಫೋಟೋ ಶೂಟ್ ಸ್ಟೋರಿ ವಿತ್ ಫೋಟೋ ಆಲ್ಬಂ

    ತಮಗೆ ಪ್ರಚಾರದ ಅಗತ್ಯವಿಲ್ಲವೆಂದು ಹಲವಾರು ಭಾರೀ ಸಂಜನಾ ಹೇಳಿಕೊಂಡಿದ್ದರೂ, ತಲೆ ಬೋಳಿಸಿದ ಫೋಟೋವನ್ನು ಹಾಕಿರುವುದು ಏತಕ್ಕೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ತಲೆ ಬೋಳಿಸಿಕೊಂಡಿರುವ ಫೋಟೋ ಅಷ್ಟೇ ಹಾಕಿದ್ದರೆ  ಇಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ. ಆ ಫೋಟೋ ಜತೆ ಹಾಕಿರುವ ಅಕ್ಷರಗಳ ಸಾಲುಗಳು ಅಭಿಮಾನಿಗಳನ್ನು ಕೆರಳಿಸಿವೆ. ಧಾರ್ಮಿಕ ಹೆಸರಿನಲ್ಲಿ ಈ ರೀತಿ ಆಟ ಆಡುವುದು ಸರಿಯಲ್ಲ ಎಂದು ಖಾರವಾಗಿಯೇ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

  • ಆತ ವಾರದಿಂದ ಮಾನಸಿಕ ಹಿಂಸೆ ಕೊಟ್ಟಿದ್ದಾನೆ : ಫ್ಯಾಶನ್ ಐಕಾನ್ ಪುತ್ರನ ವಿಚಿತ್ರ ಖಯಾಲಿ ಬಿಚ್ಚಿಟ್ಟ ನಟಿ ಸಂಜನಾ

    ಆತ ವಾರದಿಂದ ಮಾನಸಿಕ ಹಿಂಸೆ ಕೊಟ್ಟಿದ್ದಾನೆ : ಫ್ಯಾಶನ್ ಐಕಾನ್ ಪುತ್ರನ ವಿಚಿತ್ರ ಖಯಾಲಿ ಬಿಚ್ಚಿಟ್ಟ ನಟಿ ಸಂಜನಾ

    ಒಂದು ಕಾಲದಲ್ಲಿ ಫ್ಯಾಶನ್ ಐಕಾನ್ ಪ್ರಸಾದ್ ಬಿದ್ದಪ್ಪ ಅವರ ಶೋಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ನಟಿ ಸಂಜನಾ, ಇದೀಗ ಬಿದ್ದಪ್ಪ ಅವರ ಪುತ್ರ ಆಡಂ ಬಿದಪ್ಪ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ತಮ್ಮ ಮೊಬೈಲ್ ಗೆ ಆಡಂನಿಂದ ಅಶ್ಲೀಲ, ನಿಂದನಾತ್ಮಕ ಮತ್ತು ಮಾನಸಿಕ ಹಿಂಸೆ ಆಗುವಂತಹ ಮಸೇಜ್ ಗಳು ಬಂದಿವೆ ಎಂದು ಆರೋಪ ಮಾಡಿದ್ದಾರೆ. ಈಗಾಗಲೇ ಆಡಂ ನನ್ನು ವಶಕ್ಕೆ ಪಡೆದಿರುವ ಇಂದಿರಾ ನಗರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದಿರುವ ನಟಿ ಸಂಜನಾ, ಮಾಧ್ಯಮಗಳಿಗೆ ಸುದೀರ್ಘ ಎರಡು ಪುಟಗಳಷ್ಟು ಪತ್ರವನ್ನು ಬರೆದಿದ್ದಾರೆ. ಇದನ್ನೂ ಓದಿ : ಬಜೆಟ್ ನಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಸಂಚಾರಿ ವಿಜಯ್ ಪ್ರಸ್ತಾಪ

    ನಾನು ಅಗ್ಗದ ಪ್ರಚಾರ ಬಯಸಲಾರೆ. ನನಗೆ ಅದರ ಅಗತ್ಯವೂ ಇಲ್ಲ. ಹಾಗಾಗಿ ಮಾಧ್ಯಮಗಳ ಮುಂದೆ ಬರಲು ಹಿಂದೇಟು ಹಾಕುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಆಡಂನಿಂದ ತಮಗಾದ ತೊಂದರೆಯನ್ನು ಎಳೆ ಎಳೆಯಾಗಿ ಅವರು ಬಿಚ್ಚಿಟ್ಟಿದ್ದು, ಫೆ. 25 ರಂದು ರಾತ್ರಿ 11 ಗಂಟೆಗೆ ಕುಡಿದ ಮತ್ತಿನಲ್ಲಿದ್ದ ಆಡಂ ತಮಗೆ ಅಶ್ಲೀಲ ಮಸೇಜ್ ಗಳನ್ನು ಕಳುಹಿಸುವ ಮೂಲಕ ಮಾನಸಿಕ ದಾಳಿ ಮಾಡಿದ್ದಾನೆ. ಇದರಿಂದ ನಾನು ಮತ್ತು ನನ್ನ ಕುಟುಂಬ ತೀವ್ರ ಆಘಾತಕ್ಕೆ ಒಳಗಾಗಿದೆ. ಅಸಹ್ಯಕರವಾಗಿದ್ದ ಆ ಮಸೇಜ್ ಗಳಿಂದ ತಪ್ಪಿಸಿಕೊಳ್ಳಲು ಅನಿವಾರ್ಯವಾಗಿ ನಾನು ಕಾನೂನು ಮೊರೆ ಹೋಗಬೇಕಾಯಿತು. ಏಳು ತಿಂಗಳು ಗರ್ಭಿಣಿ ನಾನು. ಹಾಗಾಗಿ ನನ್ನ ಮನಸ್ಸಿನಲ್ಲಿ ನಕಾರಾತ್ಮಕ ಅಂಶಗಳು ಘಾಸಿ ಮಾಡಬಾರದೆಂದು ವಿಐಪಿ ಮಗನ ವಿರುದ್ಧ ದೂರು ದಾಖಲಿಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್

    ಪದೇ ಪದೇ ಟಾರ್ಗೆಟ್ ಆಗುತ್ತಿದ್ದೇನೆ

    ನನ್ನದಲ್ಲದ ತಪ್ಪಿಗೆ ಪದೇ ಪದೇ ನಾನು ಟಾರ್ಗೆಟ್ ಆಗುತ್ತಿದ್ದೇನೆ. ನಾನು ಯಾರ ಜೀವನದಲ್ಲೂ ಪ್ರವೇಶ ಪಡೆಯಲು ಬಯಸುವುದಿಲ್ಲ. ಆದರೆ, ಯಾರಾದರೂ ನನ್ನ ಜೀವನಕ್ಕೆ ಎಂಟ್ರಿ ಕೊಟ್ಟರೆ ಅವರನ್ನು ಸುಮ್ಮನೆ ಬಿಡುವುದಿಲ್ಲ. ಅಂಥವರು ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನನ್ನ ವಿರುದ್ಧ ಸಲ್ಲದ ಆರೋಪ ಮಾಡುವವರು, ನನ್ನ ಕುಟುಂಬಕ್ಕೆ ತೊಂದರೆ ಕೊಡಲು ಬಂದವರನ್ನು ಸುಮ್ಮನೆ ಬಿಡಲಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ ಸಂಜನಾ. ಇದನ್ನೂ ಓದಿ : ಜನಾರ್ದನ ರೆಡ್ಡಿ ಪುತ್ರನ ಸಿನಿಮಾದಲ್ಲಿ ಇಬ್ಬರು ನಾಯಕಿಯರು?

    ಸವಾಲಿನ ಎರಡು ವರ್ಷಗಳು

    ಕಳೆದ ಒಂದೆರಡು ವರ್ಷಗಳಲ್ಲಿ ನನ್ನ ಜೀವನ ಏನೆಲ್ಲ ಅಡೆತಡೆಗಳನ್ನು ಎದುರಿಸಿದೆ. ಈ ಎರಡು ವರ್ಷಗಳಲ್ಲಿ ನಾನು ಸಾಕಷ್ಟು ನೊಂದಿದ್ದೇನೆ. ಕೆಟ್ಟ ದಿನಗಳನ್ನು ಎದುರಿಸಿದ್ದೇನೆ. ನನ್ನ ಅಧ್ಯಾತ್ಮಿಕ ಮನಸ್ಸು ಮತ್ತು ಸಕಾರಾತ್ಮಕ ಭಾವನೆಗಳು ನನಗೆ ಚೈತನ್ಯ ತುಂಬಿವೆ. ಒಂದೊಳ್ಳೆ ದಿನಗಳು ಮತ್ತೆ ನನ್ನ ಬಾಳಲ್ಲಿ ಬರುತ್ತೇವೆ ಎನ್ನುವ ಹೊತ್ತಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ ಎಂದು ಆಡಂ ಪ್ರಕರಣದ ಬಗ್ಗೆ ಉಲ್ಲೇಖಿಸಿದ್ದಾರೆ ಸಂಜನಾ. ಇದನ್ನೂ ಓದಿ: ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದಲ್ಲಿ ಪ್ರಶಾಂತ್ ಸಿದ್ದಿ ವಿಶೇಷ ಪಾತ್ರ

    ಕಿರುಕುಳ ಕೊಡುವುದು ಆಡಂ ಚಟ

    ಆಡಂ ತಮ್ಮೊಂದಿಗೆ ನಡೆದುಕೊಂಡ ಬಗ್ಗೆ ಅವರ ಪಾಲಕರಿಗೆ ತಿಳಿಸಿದ್ದೆ. ಅವನು ಕುಡಿದ ಮತ್ತಿನಲ್ಲಿದ್ದಾಗ ಹೀಗೆ ಕಿರುಕುಳ ಕೊಡುವುದು ಸಾಮಾನ್ಯ ಅಭ್ಯಾಸ ಆಗಿ ಹೋಗಿದೆ ಎಂದು ಆತನ ತಾಯಿ ತಿಳಿಸಿದರು. ಅವರ ಪಾಲಕರಿಗೆ ಬಗ್ಗೆ ನನಗೆ ತುಂಬಾ ಗೌರವವಿದೆ. ಆದರೆ, ಆಡಂ ನಡೆದುಕೊಂಡ ರೀತಿ ಸರಿಯಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ ಸಂಜನಾ.

  • ಏಳು ತಿಂಗಳ ಗರ್ಭಿಣಿಗೆ ಇದೆಂಥ ಟಾರ್ಚರ್?: ಶಾಕ್‌ನಲ್ಲಿ ನಟಿ ಸಂಜನಾ

    ಏಳು ತಿಂಗಳ ಗರ್ಭಿಣಿಗೆ ಇದೆಂಥ ಟಾರ್ಚರ್?: ಶಾಕ್‌ನಲ್ಲಿ ನಟಿ ಸಂಜನಾ

    ಒಂದಿಲ್ಲೊಂದು ಕಾರಣದಿಂದಾಗಿ ಸದಾ ಸದ್ದು ಮಾಡುವ ನಟಿ ಸಂಜನಾ, ಈಗ ಮತ್ತೆ ಸುದ್ದಿಗೆ ಆಹಾರವಾಗಿದ್ದಾರೆ. ಈ ಬಾರಿ ಫ್ಯಾಷನ್ ಲೋಕದ ಐಕಾನ್ ಪ್ರಸಾದ್ ಬಿದ್ದಪ್ಪ ಪುತ್ರ ಆಡಂ ಬಿದ್ದಪ್ಪ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ. ತಾವೀಗ ಏಳು ತಿಂಗಳ ಗರ್ಭಿಣಿ, ಸಲ್ಲದ ಕಾರಣಕ್ಕಾಗಿ ಸುಖಾಸುಮ್ಮನೆ ನನಗೆ ತೊಂದರೆ ನೀಡಲಾಗುತ್ತಿದೆ ಎಂದಿದ್ದಾರೆ ಸಂಜನಾ. ಇದನ್ನೂ ಓದಿ : ರವಿಚಂದ್ರನ್ ಸಿನಿಮಾ ಹಿರೋಯಿನ್ ಈಗ ನಿರ್ದೇಶಕಿ

    “ನನ್ನ ಜೀವನದಲ್ಲಿ ಈ ಎರಡು ವರ್ಷಗಳು ಅತ್ಯಂತ ನೋವಿನ ವರ್ಷಗಳಾಗಿವೆ. ಒಂದಿಲ್ಲೊಂದು ಸಮಸ್ಯೆಗೆ ಸಿಲುಕಿಕೊಳ್ಳುತ್ತಿದ್ದೇನೆ. ನಾನು ಮಾಡದೇ ಇರುವ ತಪ್ಪಿಗೆ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಅವಮಾನಿಸಲಾಗುತ್ತಿದೆ. ಪ್ರತಿ ಸಲವೂ ಗಟ್ಟಿಗೊಳ್ಳುತ್ತಾ, ಮುಂದಿನ ಬದುಕಿನ ಬಗ್ಗೆ ಯೋಚಿಸುತ್ತಾ ಹೋಗುತ್ತಿದ್ದೇನೆ. ನನ್ನ ಕುಟುಂಬ ನನ್ನ ಬೆಂಬಲಕ್ಕೆ ನಿಂತಿದೆ. ಎಂತಹ ಸಂದರ್ಭ ಬಂದರೂ ನಾನು ಎದುರಿಸುತ್ತೇನೆ” ಎಂದು ಸುದೀರ್ಘವಾಗಿ ಪತ್ರ ಬರೆದಿದ್ದಾರೆ ಸಂಜನಾ. ಇದನ್ನೂ ಓದಿ : ಅನೂಪ್ ಭಂಡಾರಿ ಜತೆ 3 ಸಿನಿಮಾ ಮಾಡ್ತಾರಾ ಸುದೀಪ್? : ಬರಲಿದೆ ವಿಕ್ರಾಂತ್ ರೋಣ 2

    ಸದ್ಯ ಸಂಜನಾ ಏಳು ತಿಂಗಳ ಗರ್ಭಿಣಿ. ತಾಯ್ತನವನ್ನು ನೆಮ್ಮದಿಯಿಂದ ಅನುಭವಿಸಬೇಕಾದ ಈ ಸಂದರ್ಭದಲ್ಲಿ ತಮಗೆ ವಿಪರೀತ ತೊಂದರೆ ಆಗುತ್ತಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಇಂತಹ ಪ್ರಕರಣದಿಂದ ತಾವು ಮಾತ್ರವಲ್ಲ, ತಮ್ಮ ಇಡೀ ಕುಟುಂಬ ಆಘಾತಕ್ಕೆ ಒಳಗಾಗಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್

    ಕುಡಿದ ಮತ್ತಿನಲ್ಲಿ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆಡಂ ಸಾಕಷ್ಟು ಬಾರಿ ಸಂಜನಾ ಅವರಿಗೆ ಕೆಟ್ಟದ್ದಾಗಿ ಮಸೇಜ್ ಕಳುಹಿಸಿದ್ದಾನಂತೆ. ಚಾರಿತ್ರ್ಯ ಹರಣ ಮಾಡುವಂತಹ ಸಂದೇಶಗಳು ಅವಾಗಿವೆ ಎಂದು ಸಂಜನಾ ಆರೋಪಿಸಿದ್ದಾರೆ ಮತ್ತು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಸದ್ಯ ಆಡಂ ಪೊಲೀಸ್ ರ ಅತಿಥಿಯಾಗಿದ್ದಾನೆ.

  • ಮಾಡಿದ ತಪ್ಪಿಗೆ ದಂಡ ಕಟ್ಟಿದ ಸಂಜನಾ ಗಲ್ರಾನಿ

    ಮಾಡಿದ ತಪ್ಪಿಗೆ ದಂಡ ಕಟ್ಟಿದ ಸಂಜನಾ ಗಲ್ರಾನಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ ಮಾಡಿದ್ದ ತಪ್ಪಿಗೆ 2 ಸಾವಿರ ರೂ. ದಂಡ ಕಟ್ಟಿ, ಕ್ಷಮೆ ಕೇಳಿದ್ದಾರೆ.

    ನಟಿ ಸಂಜನಾ ಗಲ್ರಾನಿ ದುಬಾರಿ ಬೆಲೆಯ ಆಡಿ ಕಾರ್ ಖರೀದಿ ಮಾಡಿದ್ದ ಜೋಶ್‍ನಲ್ಲಿ ಡ್ರೈವಿಂಗ್ ಮಾಡುತ್ತಾ ಸೆಲ್ಫಿ ವಿಡಿಯೋ ಮಾಡಿ ವೈರಲ್ ಮಾಡಿದ್ದರು. ಮೈಲೇಜ್ ತಗೆದುಕೊಳ್ಳೊದಕ್ಕೆ ವಿಡಿಯೋ ಮಾಡಿದ ಸಂಜನಾಗೆ ಇದು ಕಂಟಕವಾಗಿ ಪರಿಣಮಿಸಿತ್ತು. ಕಾರು ಚಲಿಸುತ್ತಲೇ ಸೆಲ್ಫಿ ವಿಡಿಯೋ ಮಾಡಿದ್ದು ವೈರಲ್ ಆಗುತ್ತಿದ್ದಂತೆ ಟ್ರಾಫಿಕ್ ಪೊಲೀಸರು ಸಂಜನಾಗೆ ನೋಟಿಸ್ ನೀಡಿದ್ದರು.

    ಸಂಚಾರಿ ನಿಯಮ ಉಲ್ಲಂಘನೆ ಆರೋಪದಡಿ ಸಂಜನಾಗೆ ಇಂದಿರಾನಗರ ಸಂಚಾರಿ ಪೊಲೀಸರು ನೋಟಿಸ್ ನೀಡಿದ್ದರು. ಸಂಚಾರಿ ನಿಯಮ ಉಲ್ಲಂಘನೆಯ ನೋಟಿಸ್ ಪಡೆದಿದ್ದ ಸಂಜನಾ ಇಂದು ದಂಡ ಕಟ್ಟಿದ್ದಾರೆ. ಕ್ವೀನ್ಸ್ ರಸ್ತೆಯಲ್ಲಿರುವ ಮುಖ್ಯ ಕಚೇರಿಗೆ ಹಾಜರಾಗಿ 2000 ರೂ. ದಂಡ ಕಟ್ಟಿ ಹೋಗಿದ್ದಾರೆ. ಜಂಟಿ ಪೊಲೀಸ್ ಆಯುಕ್ತ ಡಾ. ರವಿಕಾಂತೇಗೌಡರ ಮುಂದೆ ಸಂಜನಾ ದಂಡ ಪಾವತಿಸಿದ್ದಾರೆ.

    ಅಲ್ಲದೇ ಸಂಚಾರಿ ಪೊಲೀಸರಿಗೆ ಪತ್ರ ಬರೆದು ಘಟನೆ ನಡೆದ ವಿಚಾರದ ಬಗ್ಗೆ ವಿಷಾದಿಸಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಬೇಕು ಎನ್ನುವ ಕಾರಣಕ್ಕೆ ನಾನು ವಿಡಿಯೋ ಮಾಡಿಲ್ಲ. ಕಾಮನ್ ಆಗಿ ಹೊಸ ಕಾರು ಖರೀದಿಸಿದ್ದರಿಂದ ಸಂತೋಷಕಷ್ಟೇ ವಿಡಿಯೋ ಮಾಡಿದ್ದೆ. ನನಗೆ ಪೊಲೀಸರ ಬಗ್ಗೆ ಸಾಕಷ್ಟು ಗೌರವವಿದೆ. ಆದ್ದರಿಂದ ನಾನು ಸಂಚಾರಿ ನಿಯಮವನ್ನ ಉಲ್ಲಂಘನೆ ಮಾಡುವ ಕೆಲಸ ಮಾಡಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿ, ಸಂಜನಾ ಕ್ಷಮೆ ಯಾಚಿಸಿದ್ದಾರೆ.

  • ರವಿ ಶ್ರೀವತ್ಸ ವಿರುದ್ಧ ಮೀಟೂ ಆರೋಪ- ಬಹಿರಂಗವಾಗಿ ಕ್ಷಮೆ ಕೇಳಿದ ಸಂಜನಾ: ವಿಡಿಯೋ ನೋಡಿ

    ರವಿ ಶ್ರೀವತ್ಸ ವಿರುದ್ಧ ಮೀಟೂ ಆರೋಪ- ಬಹಿರಂಗವಾಗಿ ಕ್ಷಮೆ ಕೇಳಿದ ಸಂಜನಾ: ವಿಡಿಯೋ ನೋಡಿ

    ಬೆಂಗಳೂರು: ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಮೀಟೂ ಆರೋಪ ಮಾಡಿದ್ದ ನಟಿ ಸಂಜನಾ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

    ಗಂಡ-ಹೆಂಡತಿ ಚಿತ್ರದಲ್ಲಿ ಪದೇ ಪದೇ ಕಿಸ್ಸಿಂಗ್ ಸೀನ್ ಮಾಡಿಸಿದ್ದರು ಎಂದು ಆರೋಪಿಸಿದ್ದ ಸಂಜನಾ ಕಲಾವಿದರ ಸಂಘ, ನಿರ್ದೇಶಕರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕ್ಷಮೆ ಕೇಳಿದ್ದಾರೆ.

    ಸಂಜನಾ ಹೇಳಿದ್ದೇನು?
    ನಾನು ನನ್ನ ಅನುಭವ ಹಾಗೂ ಜೀವನದಲ್ಲಿ ನಡೆದ ಸತ್ಯವನ್ನೇ ಹೇಳಿಕೊಂಡಿದ್ದೇನೆ. ಅಲ್ಲದೇ ಗಂಡ-ಹೆಂಡತಿ ಚಿತ್ರದ ವೇಳ ಆದಂತಹ ಅನುಭವಗಳನ್ನು ಹೇಳಿಕೊಳ್ಳಲು ನನಗೆ ಆಗ ಸಾಧ್ಯವಾಗಿರಲಿಲ್ಲ. ಅಲ್ಲದೇ ನಾನು ಆಹ ಚಿಕ್ಕವಳಿದ್ದೆ. ಈ ಎಲ್ಲಾ ವಿಷಯವನ್ನು ಮೀಟೂ ಅಭಿಯಾನದ ಮೂಲಕ ಹಂಚಿಕೊಂಡಿದ್ದೆ. ಇದರಿಂದಾಗಿ ಚಿತ್ರದ ನಿರ್ದೇಶಕ ಹಾಗೂ ನಿರ್ದೇಶಕರ ಸಂಘದವರಿಗೆ ನೋವುಂಟಾಗಿದೆ.

    ನನ್ನ ಉದ್ದೇಶ ಯಾರ ಹೆಸರು ಹಾಗೂ ಜೀವನವನ್ನು ಹಾಳು ಮಾಡಬೇಕೆಂದು ಇರಲಿಲ್ಲ. ಹೀಗಾಗಿ ನಾನು ಕಲಾವಿದರ ಸಂಘದ ಹಿರಿಯರಾದ ನಟ ಅಂಬರೀಶ್, ದೊಡ್ಡಣ್ಣ ಹಾಗೂ ರಾಕ್‍ಲೈನ್ ವೆಂಕಟೇಶ್ ಅವರ ಮಾತಿಗೆ ಬೆಲೆಕೊಟ್ಟು, ಗಂಡ-ಹೆಂಡತಿ ನಿರ್ದೇಶಕರು ಹಾಗೂ ಚಿತ್ರತಂಡ ಮತ್ತು ನಿರ್ದೇಶಕರ ಸಂಘದ ಎಲ್ಲರಿಗೂ ಕ್ಷಮೆಯನ್ನು ಕೋರುತ್ತೇನೆ. ಈ ಘಟನೆಯನ್ನು ಮುಂದುವರಿಸಿಕೊಂಡು ಹೋಗಲು ಇಷ್ಟಪಡುವುದಿಲ್ಲ. ಹೀಗಾಗಿ ಎಲ್ಲರ ಬಳಿ ನಾನು ಕ್ಷಮೆ ಕೇಳುತ್ತೇನೆ.

    ಸಂಜನಾ ಆರೋಪವೇನು?
    ಅಕ್ಟೋಬರ್ 7ರಂದು ಮಾಧ್ಯಮಗಳೊಂದಿಗೆ ತಮ್ಮ ಸಿನಿ ಜರ್ನಿಯಲ್ಲಿ ನಡೆದ ಹಿಂಸೆಯ ಬಗ್ಗೆ ತೆರೆದಿಟ್ಟ ಸಂಜನಾ ಗರ್ಲಾನಿ, ನನಗೂ ಚಿತ್ರರಂಗದಲ್ಲಿ ತುಂಬಾ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ನಿನ್ನ ವೃತ್ತಿ ಜೀವನ ಚೆನ್ನಾಗಿರಬೇಕು ಅಂದರೆ ಕಿಸ್ಸಿಂಗ್ ಸೀನ್ ಮಾಡು ಎಂದು ನಿರ್ದೇಶಕರು ಒತ್ತಾಯ ಮಾಡಿದ್ದರು. ಅಲ್ಲದೇ ಒಮ್ಮೆಲೇ 50ಕ್ಕೂ ಹೆಚ್ಚು ಕಿಸ್ಸಿಂಗ್ ಸೀನ್ ಮಾಡಿಸಿದ್ದರು. ಬ್ಯಾಕ್ ಲೆಸ್ ಸೀನ್ ಮಾಡುವಾಗಲು ಇಂತಹದ್ದೇ ಹಿಂಸೆಯಾಗಿತ್ತು. ಚಿತ್ರೀಕರಣದ ಸಮಯದಲ್ಲಿ ಭಯ ಹುಟ್ಟಿಸುವ ವಾತಾವರಣ ಇತ್ತು. ನನ್ನ ಮೇಲೆ ದಬ್ಬಾಳಿಕೆ ಮಾಡಿ ಕಿಸ್ಸಿಂಗ್ ಸೀನ್ ಗಳನ್ನು ಮಾಡಿಸಿಕೊಂಡರು. ಈ ವೇಳೆ ವಿದೇಶದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಬ್ಯಾಕಾಂಕ್ ನಿಂದ ಬಂದ ನಂತರವೂ ಬೆಂಗಳೂರಿನಲ್ಲಿ ಕಿಸ್ಸಿಂಗ್ ಸೀನ್ ಮಾಡಿಸಿದ್ದರು ಎಂದು ಚಿತ್ರನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಆರೋಪ ಮಾಡಿದ್ದರು.

    ಸಂಜನಾ ಗರ್ಲಾನಿ ಆರೋಪಕ್ಕೆ ನಿರ್ದೇಶಕ ರವಿ ಶ್ರೀವತ್ಸ ನಿರ್ದೇಶಕರ ಸಂಘದ ಮೊರೆ ಹೋಗಿದ್ದರು. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದ ವಿ.ನಾಗೇಂದ್ರ ಪ್ರಸಾದ್ ನಿರ್ದೇಶಕರಿಗೆ ಕ್ಷಮೆ ಕೋರುವಂತೆ ಸಂಜಾನಾಗೆ ಆಗ್ರಹಿಸಿದ್ದರು. ಅಲ್ಲದೇ ಈ ಬಗ್ಗೆ ಕಲಾವಿದರ ಸಂಘಕ್ಕೆ ದೂರನ್ನು ಸಹ ಕೊಟ್ಟಿದ್ದರು.

    https://www.youtube.com/watch?v=SiaVF8Wjf1c

    https://www.youtube.com/watch?v=ALJ_vOFTo5Y

    https://youtu.be/Fngx4OL8iUY

    https://youtu.be/2YYfQAOr3SM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸಿಎಂ ಸಿದ್ದರಾಮಯ್ಯ ಪರ ಪ್ರಚಾರ ಮಾಡಲಿದ್ದಾರೆ ಸಂಜನಾ

    ಸಿಎಂ ಸಿದ್ದರಾಮಯ್ಯ ಪರ ಪ್ರಚಾರ ಮಾಡಲಿದ್ದಾರೆ ಸಂಜನಾ

    ಬೆಂಗಳೂರು: ಕನ್ನಡದ ಸ್ಟಾರ್ ನಟ, ನಟಿಯರು ಚುನಾವಣಾ ಪ್ರಚಾರಕ್ಕೆ ಎಂಟ್ರಿಕೊಡುತ್ತಿದ್ದಾರೆ. ಈಗ ಇದಕ್ಕೆ ಹೊಸ ಸೇರ್ಪಡೆಯಾಗಿ ಸಂಜನಾ ಸಿಎಂ ಪರ ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ.

    ಸಿಎಂ ಸಿದ್ದರಾಮಯ್ಯ ಪರ ಚಾಮುಂಡೇಶ್ವರಿಯಲ್ಲಿ ನಾನು ಪ್ರಚಾರ ಮಾಡುವುದಾಗಿ ಸಂಜನಾ ಪಬ್ಲಿಕ್ ಟಿವಿ ತಿಳಿಸಿದ್ದಾರೆ.

    ಸ್ಯಾಂಡಲ್‍ವುಡ್ ಸೆಲೆಬ್ರಿಟಿಗಳ ಪೈಕಿ ಈಗಾಗಲೇ ಕೆಆರ್ ನಗರದ ಜೆಡಿಎಸ್ ಅಭ್ಯರ್ಥಿ ಸಾರಾ ಮಹೇಶ್ ಮತ್ತು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮ್‍ದಾಸ್ ಪರ ರಾಕಿಂಗ್ ಸ್ಟಾರ್ ಯಶ್ ಪ್ರಚಾರ ನಡೆಸಿದ್ದರು.

    ಡಿಂಪಲ್ ಕ್ವಿನ್ ವಿಡಿಯೋ ಮೂಲಕ ಕುಮಾರಸ್ವಾಮಿ ಅವರನ್ನು ಬೆಂಬಲಿಸಿದರೆ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್ ಕೆ ರಮೇಶ್ ಪರ ಲೂಸ್ ಮಾದ ಯೋಗಿ ಪ್ರಚಾರ ಮಾಡಿದ್ದರು.