ಟಾಲಿವುಡ್ ನಟಿ ನಿಕ್ಕಿ ಗಲ್ರಾನಿ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ತೆಲುಗು ನಟ ಆದಿ ಪಿನಿಸೆಟ್ಟಿ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ ನಿಕ್ಕಿ ಗಲ್ರಾನಿ ಮದುವೆ ವಿಚಾರ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ನಟಿ ಸಂಜನಾ ಗಲ್ರಾನಿ ಸೀಮಂತದ ಶಾಸ್ತ್ರದ ವಿಚಾರವಾಗಿ ಸುದ್ದಿಯಲ್ಲಿದ್ರೆ, ಈಗ ತಂಗಿ ನಿಕ್ಕಿ ಗಲ್ರಾನಿ ಹಸೆಮಣೆ ಏರೋಕೆ ಸಜ್ಜಾಗಿದ್ದಾರೆ.
ಕನ್ನಡದ `ಅಜಿತ್’, `ಜಂಬುಸವಾರಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಿಕ್ಕಿ ಗಲ್ರಾನಿ ಇದೀಗ ಸೌತ್ ಸಿನಿಮಾಗಳಲ್ಲಿ ಸ್ಟಾರ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಹಲವು ವರ್ಷಗಳಿಂದ ತೆಲುಗಿನ ಸ್ಟಾರ್ ಆದಿ ಪಿನಿಸೆಟ್ಟಿ ಜತೆ ಪ್ರೀತಿಯಲ್ಲಿದ್ದ ನಿಕ್ಕಿ ಗಲ್ರಾನಿ ಇತ್ತೀಚೆಗೆ ಮಾರ್ಚ್‌ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಈಗ ಈ ಜೋಡಿಯ ಮದುವೆಯ ಸಿದ್ಧತೆ ಭರದಿಂದ ಸಾಗುತ್ತಿದೆ.
ತೆಲುಗು, ತಮಿಳಿನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನ ಕೊಟ್ಟಿರೋ ಆದಿ ಪಿನಿಸೆಟ್ಟಿ, ಪೋಷಕ ಪಾತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದಿ ಮತ್ತು ನಿಕ್ಕಿ ತಮಿಳಿನ ಎರಡು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇತ್ತೀಚಿಗೆ ಎಂಗೇಜ್‌ಮೆಂಟ್ ಆಗಿರೋ ಈ ಜೋಡಿ ಇದೀಗ ಗುರು ಹಿರಿಯರ ಸಮ್ಮುಖದಲ್ಲಿ ಮೇ 18ರಂದು ಹಸೆಮಣೆ ಏರೋದಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಮಾರ್ಚ್ 23 ಎಂಗೇಜ್ ಆಗಿದ್ದ ಆದಿ ಮತ್ತು ನಿಕ್ಕಿ ಜಾಸ್ತಿ ಗ್ಯಾಪ್ ತೆಗೆದುಕೊಳ್ಳದೇ ಮದುವೆಗೆ ಸಿದ್ಧರಾಗುತ್ತಿದ್ದಾರೆ. ಇದನ್ನೂ ಓದಿ: `ಕೆಜಿಎಫ್ 2′ ಹೊಸ ದಾಖಲೆ: 1200 ಕೋಟಿ ಕಲೆಕ್ಷನ್ ಮಾಡುವತ್ತ ರಾಕಿಭಾಯ್ ಚಿತ್ರ
ಸಂಜನಾ ಗಲ್ರಾನಿ ಬದುಕಿನಲ್ಲಿ ಸಾಕಷ್ಟು ಏಳು ಬೀಳು ಕಂಡ ನಂತರ ಸಿನಿಮಾದಿಂದಲೂ ಗ್ಯಾಪ್ ತೆಗೆದುಕೊಂಡು ಗಂಡ ಮತ್ತು ಸಂಸಾರ ಅಂತಾ ತಾಯ್ತನದ ಖುಷಿ ಅನುಭವಿಸುತ್ತಿದ್ದಾರೆ. ಇನ್ನು ಸಂಜನಾ ತಂಗಿ ನಿಕ್ಕಿ ಗಲ್ರಾನಿ ಹಸೆಮಣೆ ಏರೋದಕ್ಕೆ ರೆಡಿಯಾಗಿದ್ದಾರೆ.
ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಇತ್ತೀಚೆಗೆ ಸೀಮಂತದ ಸಂಭ್ರಮದ ಕ್ಷಣಗಳನ್ನು ಮತ್ತು ಬೇಬಿ ಬಂಪ್ ಫೋಟೋಶೂಟ್‌ನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಸಂಜನಾ ಅವರ ಬೇಬಿ ಶವರ್ ಸಮಾರಂಭ ಫೋಟೋಗಳು ಭಾರೀ ವೈರಲ್ ಆಗುತ್ತಿದೆ.
`ಗಂಡ ಹೆಂಡತಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ಸಂಜನಾ, ಬಳಿಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ್ರು. ಬಳಿಕ ಅಜೀಜ್ ಪಾಷಾ ಅವರೊಂದಿಗೆ ಸಂಜನಾ ವಿವಾಹವಾಗಿದ್ದರು. ಇತ್ತೀಚೆಗೆ ಸೀಮಂತ ಶಾಸ್ತ್ರದ ಸಂಭ್ರಮ ಕ್ಷಣಗಳನ್ನ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಬಳಿಕ ಬೇಬಿ ಬಂಪ್ ಫೋಟೋಗಳು ಕೂಡ ಅಭಿಮಾನಿಗಳ ಗಮನ ಸೆಳೆದಿತ್ತು. ವಿಶ್ವ ಅಮ್ಮಂದಿರ ದಿನದಂದು ಸಂಜನಾ ಅವರ ಬೇಬಿ ಶವರ್ ಸಮಾರಂಭ ನಡೆದಿದೆ. ನಟಿಯ ಸಂಭ್ರಮದ ಕ್ಷಣದ ಫೋಟೋಗಳು ಭಾರೀ ವೈರಲ್ ಆಗುತ್ತಿದೆ.
ಸಂಜನಾ ಗಲ್ರಾನಿ ಈಗ 9 ತಿಂಗಳ ತುಂಬು ಗರ್ಭಿಣಿಯಾಗಿದ್ದು, ತಮ್ಮ ತಾಯ್ತನದ ಸುಂದರ ಕ್ಷಣಗಳನ್ನು ಅಭಿಮಾನಿಗಳ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಿದ್ದಾರೆ. ಇದೀಗ ಮದರ್ಸ್ ಡೇಯಂದು ಸಂಜನಾ ತಾಯ್ತನದ ಅಮೂಲ್ಯ ಕ್ಷಣಗಳು ವೈರಲ್ ಆಗುತ್ತಿದೆ. ಪತಿ ಜತೆಯಿರೋ ಸಂಜನಾ ಬೇಬಿ ಶವರ್ ಸಮಾರಂಭದ ಫೋಟೋಗಳು ವೈರಲ್ ಆಗುತ್ತಿದೆ.
ಚಂದನವನದ ಕಾಂಟ್ರವರ್ಸಿ ಕ್ವೀನ್ ಸಂಜನಾ ಗಲ್ರಾನಿ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಸೀಮಂತದ ವಿಚಾರವಾಗಿ ಮತ್ತು ಬೇಬಿ ಬಂಪ್ ಫೋಟೋಶೂಟ್ ಮೂಲಕ ಗಮನ ಸೆಳೆದಿದ್ದ ಸಂಜನಾ ಇದೀಗ ಮತ್ತೆ ಹೊಸ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ.
`ಗಂಡ ಹೆಂಡತಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸಂಜನಾ, ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದ ನಟಿ ಈಗ ಮದುವೆ, ಸಂಸಾರ ಅಂತ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ತಾವು ತಾಯಿಯಾಗಿರುವ ಸಂತಸದ ಸುದ್ದಿಯನ್ನ ಅಭಿಮಾನಿಗಳಿಗೆ ತಿಳಿಸಿದ್ದರು. ನಂತರ ಸೀಮಂತ ಶಾಸ್ತçದ ಫೋಟೋ ಮತ್ತು ಬೇಬಿ ಬಂಪ್ ಫೋಟೋಸ್ ಶೇರ್ ಮಾಡಿ, ಭಾವನಾತ್ಮಕವಾಗಿ ಬರೆದುಕೊಂಡಿದ್ದರು. ಈಗ ಮತ್ತೆ ನ್ಯೂ ಬೇಬಿ ಫೋಟೋಶೂಟ್‌ನಿಂದ ಗಮನ ಸೆಳೆದಿದ್ದಾರೆ.
ಸಂಜನಾ ಹಿಂದಿನಿಂದಲೂ ಸಿನಿಮಾಗಳ ಜತೆ ಸೋಷಿಯಲ್ ಮೀಡಿಯಾದಲ್ಲೂ ಆಕ್ಟೀವ್ ಇದ್ದಂತಹ ನಟಿ, ತಮ್ಮ ದೈನಂದಿನ ಬದುಕಿನ ಅಪ್‌ಡೇಟ್‌ಗಳನ್ನ ಅಭಿಮಾನಿಗಳ ಜತೆ ಹಂಚಿಕೊಳ್ತಾರೆ. ಇದೀಗ ಗ್ರೀನ್ ಕಲರ್ ಲಾಂಗ್ ಡ್ರೇಸ್‌ನಲ್ಲಿ ನ್ಯೂ ಬೇಬಿ ಬಂಪ್ ಶೂಟ್‌ನಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ನಾಗಚೈತನ್ಯ -ಸಮಂತಾ ಮತ್ತೆ ಮುಖಾಮುಖಿ : ಮಾಜಿ ಪತಿ ಚಿತ್ರಕ್ಕೆ ಯಶೋದ ಫೈಟ್
ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಇತ್ತೀಚೆಗೆ ಸೀಮಂತದ ಸಂಭ್ರಮದ ಕ್ಷಣಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ತಮ್ಮ ಬೇಬಿ ಬಂಪ್ ಫೋಟೋಶೂಟ್‌ನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
`ಗಂಡ ಹೆಂಡತಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ಸಂಜನಾ, ಬಳಿಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ್ರು. ಬಳಿಕ ಅಜೀಜ್ ಪಾಷಾ ಅವರೊಂದಿಗೆ ಸಂಜನಾ ವಿವಾಹವಾಗಿದ್ದರು. ಇತ್ತೀಚೆಗೆ ಸೀಮಂತ ಶಾಸ್ತ್ರದ ಸಂಭ್ರಮ ಕ್ಷಣಗಳನ್ನ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದರ ಬೆನ್ನೆಲ್ಲೇ ಸಂಜನಾ ಈಗ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಶೂಟ್ ಸಖತ್ ವೈರಲ್ ಆಗುತ್ತಿದೆ.
ಸಂಜನಾ ಗಲ್ರಾನಿ 9 ತಿಂಗಳ ತುಂಬು ಗರ್ಭೀಣಿಯಾಗಿದ್ದು, ಹೊಸ ಫೋಟೋಶೂಟ್‌ನಲ್ಲಿ ಮೆರುನ್ ಕಲರ್ ಡ್ರೇಸ್‌ನಲ್ಲಿ ಭಿನ್ನವಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ತಲೆಗೆ ಹ್ಯಾಟ್ ಹಾಕಿಕೊಂಡು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಜೀವನ ಎಷ್ಟು ವಿಭಿನ್ನ ಮತ್ತು ಕಷ್ಟಕರವೆಂದು ನಟಿ ಸಂಜನಾ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
ಐವತ್ತಕ್ಕೂ ಹೆಚ್ಚು ಚಿತ್ರಗಳು, ಹಲವಾರು ಶೋಗಳು, ನಾಲ್ಕು ಭಾಷೆಗಳಲ್ಲಿನ ಕಾರ್ಯಕ್ರಮಗಳ ಉದ್ಘಾಟನೆಯ ಜತೆಗೆ ವಿವಿಧ ನಗರಗಳಲ್ಲಿ ಓಡಾಟ ಮತ್ತು ತಾವು 18ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ. ಜತೆಗೆ ತನ್ನ ಫ್ಯಾಮಿಲಿ ಜೀವನವನ್ನ 35ನೇ ವರ್ಷಕ್ಕೆ ಶುರು ಮಾಡಿದ್ದೇನೆ. ಕಳೆದ 2 ವರ್ಷಗಳಿಂದ ಜೀವನದಲ್ಲಿ ಸಾಕಷ್ಟು ಕಷ್ಟ ಮತ್ತು ಸವಾಲುಗಳನ್ನು ಏದುರಿಸಿದ್ದೇನೆ. ಇದೀಗ 18 ಕೆ.ಜಿ ತೂಕ ಹೆಚ್ಚಾಗಿರುವುದರಿಂದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್
ನನ್ನ ಕಷ್ಟದ ಸಮಯದಲ್ಲಿ ನನ್ನ ಮನಸ್ಸನ್ನು ಬೇರೆಡೆಗೆ ತಿರುಗಿಸಿದ್ದೆ, ನನ್ನ ನೆರೆಹೊರೆಯಲ್ಲಿ 40ಕ್ಕೂ ಹೆಚ್ಚು ಗಿಡಗಳನ್ನು ಸಂಜನಾ ಫೌಂಡೇಶನ್ ನೇತೃತ್ವದಲ್ಲಿ ನೆಡುವುದರ ಮೂಲಕ ನನ್ನ ಸಮಯವನ್ನು ಮೀಸಲಿಟ್ಟಿದ್ದೇನೆ. ನನ್ನ 9ನೇ ತಿಂಗಳ ಗರ್ಭಾವಸ್ಥೆಯ ಹಂತದಲ್ಲಿ ನಾನು ಹಿಂದೂ ಆಗಿ ಜನಿಸಿ ಮುಸ್ಲಿಂ ಕುಟುಂಬಕ್ಕೆ ಮದುವೆಯಾಗಿ ಎರಡು ಧರ್ಮದ ಪದ್ಧತಿಯನ್ನು ಖುಷಿಯಿಂದ ಜೀವಿಸುತ್ತಿದ್ದೇನೆ ಎಂದು ತಮ್ಮ ಅಭಿಪ್ರಾಯವನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಪೋಸ್ಟ್ ಮತ್ತು ಬೇಬಿ ಬಂಪ್ ಫೋಟೋಶೂಟ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಂಜನಾ ಫೋಟೋಶೂಟ್ ವೈರಲ್ ಆಗುತ್ತಿದೆ.
ಬಹುಭಾಷಾ ನಟಿ ಸಂಜನಾ ಗಲ್ರಾನಿ 8 ತಿಂಗಳ ಗರ್ಭಿಣಿಯಾಗಿದ್ದಾರೆ. ಈ ಮಧ್ಯೆ ತಮ್ಮ ತಾಯ್ತನದ ಖುಷಿಯನ್ನು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದರು. ಆದರೆ ಭಾನುವಾರ ತಮ್ಮ ಬೋಳುತಲೆ ಫೋಟೋ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಇನ್‍ಸ್ಟಾದಲ್ಲಿ ಫೋಟೋ ಶೇರ್ ಮಾಡಿರುವ ಸಂಜನಾ, ಸೌಂದರ್ಯವು ನೋಡುವವರ ದೃಷ್ಟಿಯಲ್ಲಿದೆ. ಅದಕ್ಕಾಗಿಯೇ ನಾನು ನನ್ನ ಕೂದಲನ್ನು ತ್ಯಾಗ ಮಾಡಿದ್ದೇನೆ. ನಾನು ದೇವರಿಗೆ ಯಾವ ರೀತಿ ನಮನ ಸಲ್ಲಿಸಬೇಕು ಎಂದು ನನಗೆ ತಿಳಿಯುತ್ತಿಲ್ಲ. ಹಲವಾರು ಕಷ್ಟಗಳನ್ನು ದಾಟಿದ ನಂತರ, ನನ್ನ ಜೀವನವು ಮತ್ತೊಮ್ಮೆ ಸುಂದರವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ‘ನನ್ನಮ್ಮ ಸೂಪರ್ ಸ್ಟಾರ್’ ಯಶಸ್ಸಿನ ಗರಿಯನ್ನ ಮುಡಿಗೇರಿಸಿಕೊಂಡ ಬಿಜ್ಲಿ ಪಟಾಕಿ ವಂಶಿಕಾ – ಯಶಸ್ವಿನಿ
ನನ್ನ ಜೀವನದಲ್ಲಿ ತಾಯ್ತನದ ಹಂತ ಕೊಟ್ಟಿದ್ದಕ್ಕೆ ನಾನು ದೇವರಿಗೆ ಧನ್ಯವಾದ ಹೇಗೆ ಹೇಳಬೇಕು ಎಂದು ತಿಳಿಯುತ್ತಿಲ್ಲ. ನನ್ನ ಮಗು ನನ್ನ ಜೀವನದಲ್ಲಿ ಶೀಘ್ರದಲ್ಲೇ ಬರಲಿ ಎಂದು ನಾನು ನನ್ನ ಕೃತಜ್ಞತೆಯನ್ನು ಈ ರೀತಿ ವ್ಯಕ್ತಪಡಿಸಲು ಬಯಸುತ್ತೇನೆ. ಜೈ ಶ್ರೀ ಕೃಷ್ಣ, ಅಹಂ ಬ್ರಹ್ಮಾಷ್ಟಮಿ ಎಂದು ತಮ್ಮ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: 20ಕ್ಕೂ ಹೆಚ್ಚು ಕೆಜಿ ತೂಕದ ಕಾಸ್ಟ್ಯೂಮ್ ಹಾಕಿಕೊಂಡು ಶೂಟ್ ಮಾಡಿದ್ದು ಕಷ್ಟವಾಗಿತ್ತು ಎಂದ ಮುನ್ನಾಭಾಯಿ
ಇತ್ತೀಚಿನ ಸಂದರ್ಶನದಲ್ಲಿ ಸಂಜನಾ ಲಾಕ್‍ಡೌನ್‍ನಿಂದ ತಾವು ಕಲಿತ ಪಾಠವನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದು, ಕಳೆದ ಎರಡು ವರ್ಷಗಳಲ್ಲಿ ಯಾವುದು ನಿಜ ಎಂಬುದನ್ನು ತಿಳಿದುಕೊಳ್ಳುವ ಪ್ರಬುದ್ಧತೆ ನನಗೆ ಕೋವಿಡ್ ಸಮಯದಲ್ಲಿ ಬಂದಿದೆ ಎಂದು ವಿವರಿಸಿದ್ದರು.
ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ ಹೊಸ ವರ್ಷಕ್ಕೆ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ತಾವು ತಾಯಿ ಆಗುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ.
ಸಂಜನಾ ತಾಯಿಯಾಗುತ್ತಿದ್ದಾರೆ. ಈ ವರ್ಷ ಮೇ ತಿಂಗಳಿನಲ್ಲಿ ಕುಟುಂಬಕ್ಕೆ ಹೊಸ ಅತಿಥಿ ಆಗಮಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಸಂಜನಾ, ಹೌದು ನಾನು ತಾಯಿ ಆಗುತ್ತಿದ್ದೇನೆ ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
ಮದುವೆ, ಡ್ರಗ್ ಕೇಸ್ ಮುಂತಾದ ಕಾರಣಗಳಿಂದ ಕಳೆದ ಒಂದೂವರೆ ವರ್ಷಗಳಿಂದಲೂ ಸಂಜನಾ ಸುದ್ದಿಯಲ್ಲಿದ್ದಾರೆ. ಈ ನಡುವೆಯೇ ಇದೀಗ ನಟಿ ತಾಯಿಯಾಗುತ್ತಿದ್ದಾರೆ ಎಂಬ ವಿಚಾರ ಸಂಜನಾ ಅಭಿಮಾನಿಗಳಿಗೆ ಸಖತ್ ಸಂತೋಷವನ್ನುಂಟು ಮಾಡಿದೆ. ಇದನ್ನೂ ಓದಿ:ಕಳೆದ ಲಾಕ್‍ಡೌನ್‍ನಲ್ಲಿ ನನ್ನ ಮದುವೆಯಾಯ್ತು: ಸಂಜನಾ ಗಲ್ರಾಣಿ
2021 ಜೂನ್ 3ರಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಸಂಜನಾ, ಮದುವೆ ವಿಚಾರ ಬಿಚ್ಚಿಟ್ಟರು. ಕಳೆದ ಲಾಕ್ ಡೌನ್ ನಲ್ಲಿ ನನ್ನ ಮದುವೆಯಾಯ್ತು. ನಾನಾ ಕಾರಣಗಳಿಂದ ಮದುವೆ ಸಂಭ್ರಮವನ್ನ ನಿಮ್ಮೆಲ್ಲರ ಜೊತೆ ಹಂಚಿಕೊಳ್ಳೋಕೆ ಆಗಲಿಲ್ಲ. ದೊಡ್ಡದಾಗಿ ಸೆಲೆಬ್ರೇಷನ್ ಮಾಡಬೇಕು ಅನ್ಕೊಂಡಿದ್ದೆ. ಚಿತ್ರರಂಗದ ಅಣ್ಣ-ತಮ್ಮಂದಿರಿಗೆ ಊಟ ಹಾಕಿಸೋಕೆ ಆಗಲಿಲ್ಲ ಅನ್ನೋ ಕೊರಗಿದೆ ಎಂದಿದ್ದರು. ಇದನ್ನೂ ಓದಿ: ‘ಗಂಡ-ಹೆಂಡತಿ’ ನಟಿ ಮದುವೆ ಸೀಕ್ರೆಟ್- ಮ್ಯಾರೇಜ್ ಆಗಿಲ್ಲ ಅಂತ ಸುಳ್ಳು ಹೇಳಿದ್ರಾ ಸಂಜನಾ?
ನಟಿ ಸಂಜನಾ ಮುಸ್ಲಿಂ ಸಂಪ್ರದಾಯದಲ್ಲಿ ವೈದ್ಯ ಅಜೀಜ್ ಪಾಷ ಅವರನ್ನು ಮದುವೆಯಾಗಿದ್ದರು. ಇದಕ್ಕೆ ಪೂರಕ ಎಂಬಂತೆ ಮದುವೆಯ ಫೋಟೋ ಕೂಡ ವೈರಲ್ ಆಗಿತ್ತು. ಅಜೀಜ್ ಪಾಷ ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಡ್ರಗ್ಸ್ ವಿವಾದದ ವೇಳೆ ಸಂಜನಾ ಮದುವೆ ವಿಚಾರ ಹೊರಬಂದಿತ್ತು. ಇದೀಗ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಬೆಂಗಳೂರು: ಒಲಾ ಕ್ಯಾಬ್ ಚಾಲಕನ ಜೊತೆ ಕಿರಿಕ್ ಮಾಡಿ ಸುದ್ದಿಯಾಗಿದ್ದ ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ ಇದೀಗ ದೇವಿ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ.
ಇಂದಿನಿಂದ ದೇಶಾದ್ಯಂತ ನವರಾತ್ರಿ ಪ್ರಾರಂಭವಾಗಿದ್ದು, ಜನ ನವರಾತ್ರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಆರಂಭಿಸಿದ್ದಾರೆ. ಈ ಮಧ್ಯೆ ಗಂಡ-ಹೆಂಡತಿ ಸಿನಿಮಾ ಖ್ಯಾತಿಯ ನಟಿ ಸಂಜನಾ ಗಲ್ರಾನಿ ಸದಾ ಮಾಡ್ರೆನ್ ಡ್ರೆಸ್ ತೊಟ್ಟು ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದ ಅವರು ಇದ್ದಕ್ಕಿದ್ದಂತೆ ದೇವಿ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಕ್ಯಾಬ್ ಕಿರಿಕ್‍ಗೆ ನಟಿ ಸಂಜನಾ ಗಲ್ರಾನಿ ಸ್ಪಷ್ಟನೆ
ಈ ವೀಡಿಯೋ ಸಂಜನಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಸಂಜನಾ ಕೆಂಪು ಬಣ್ಣದ ಸೀರೆ, ಆಭರಣಗಳನ್ನು ತೊಟ್ಟಿದ್ದು, ಕೈಯಲ್ಲಿ ಕಮಲ, ತ್ರಿಶೂಲ ಹಿಡಿದು, ಕಿರೀಟ ತೊಟ್ಟು, ದೇವಿಯಂತೆ ಕಾಣಿಸಿಕೊಂಡಿದ್ದಾರೆ. ವೀಡಿಯೋ ಜೊತೆಗೆ ಅತ್ಯಂತ ಪ್ರತಿಭಾವಂತ ತಂಡ ಇದನ್ನು ಶೂಟ್ ಮಾಡಿದೆ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಸಂಜನಾ ಗಲ್ರಾನಿ ಓಲಾ ಕ್ಯಾಬ್ ಚಾಲಕನ ಜೊತೆ ಕಿರಿಕ್ ಮಾಡಿಕೊಂಡಿದ್ದು, ಕೋಪಾತಾಪ ತೋರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ವಿಚಾರವಾಗಿ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ:ಕ್ಯಾಬ್ ಡ್ರೈವರ್ ಜೊತೆ ಸಂಜನಾ ಕಿರಿಕ್ – ಅವಾಚ್ಯ ಶಬ್ದಗಳಿಂದ ನಿಂದನೆ
ಈ ಸಂಬಂಧ ಸಂಜನಾ, ಆತ ಎಸಿ ಹಾಕುವುದಿಲ್ಲ ಎಂದು ರೂಡ್ ಆಗಿ ಹೇಳಿದ. ಆದರೆ ಆತ ಕೋವಿಡ್ ರೂಲ್ಸ್ ಇದೆ ಹಾಕಲ್ಲ ಅಂತ ಹೇಳಿಲ್ಲ. ನಾನು ಎಸಿ ಕಾರನ್ನೇ ಬುಕ್ ಮಾಡಿದ್ದೆ. ಎಸಿ ಹಾಕಲು ಸರ್ವೀಸ್ ಕೊಡಬೇಕು. ಒಂದು ಹುಡುಗಿಯನ್ನ ರಸ್ತೆಯಲ್ಲಿ ನಿಲ್ಲಿಸುತ್ತೇನೆ ಎಂದು ಬೆದರಿಕೆ ಹಾಕಿದಾಗ ಭಯ ಆಯ್ತು. ನಾನು ಒಂದು ಸಿಂಗಲ್ ಪದದಲ್ಲೂ ಆತನನ್ನ ನಿಂದಿಸಿಲ್ಲ ಎಂದು ತಮ್ಮ ಮೇಲೆ ಕೇಳಿ ಬಂದಿರುವ ಆರೋಪವನ್ನು ಟ್ವೀಟ್ ಮಾಡುವ ಮೂಲಕ ತಳ್ಳಿ ಹಾಕಿದ್ದರು.
ಆದರೆ ಸಂಜನಾ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಚಾಲಕ ಮಣಿ ಆರೋಪಿಸಿದ್ದರು. ಅಲ್ಲದೆ ಸಂಜನಾ ನಡೆದುಕೊಂಡಿರುವ ಬಗ್ಗೆ ಮೊಬೈಲ್‍ನಲ್ಲಿ ವೀಡಿಯೋ ಮಾಡಿದ್ದಾರೆ. ಹೇಳಿದ ಜಾಗಕ್ಕೆ ಹೋಗಿಲ್ಲ ಎಂದು ಸಂಜನಾ ಕೆಂಡಾಮಲರಾಗಿದ್ದರಂತೆ. ಅದೇ ರೀತಿ ಅವಾಚ್ಯ ಶಬ್ದದಿಂದ ಸಂಜನಾ ನಿಂದಿಸಿದರು ಎಂದು ರಾಜರಾಜೇಶ್ವರಿ ನಗರ ಠಾಣೆಗೆ ತೆರಳಿ ಕ್ಯಾಬ್ ಚಾಲಕ ಮಣಿ ದೂರು ದಾಖಲಿಸಿದ್ದಾರೆ.
ಬೆಂಗಳೂರು: ಚಂದನವನದ ಮಾದಕ ಜಾಲದ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದೆ. ಕಂಬಿ ಎಣಿಸಿ, ಜಾಮೀನಿನ ಮೇಲಿರುವ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಇಬ್ಬರೂ ಡ್ರಗ್ಸ್ ಸೇವಿಸಿರೋದು ದೃಢವಾಗಿದ್ದು, ಮತ್ತೆ ಪರಪ್ಪನ ಅಗ್ರಹಾರ ಸೇರುವ ಭೀತಿ ಎದುರಿಸುತ್ತಿದ್ದಾರೆ.
10 ತಿಂಗಳ ಬಳಿಕ ಹೈದರಾಬಾದ್‍ನ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸಿಕ್ಕಿದ್ದು, ತಲೆಕೂದಲ ಪರೀಕ್ಷೆಯಲ್ಲಿ ನಟಿಯರ ಮಾದಕ ದ್ರವ್ಯ ಸೇವನೆ ದೃಢವಾಗಿದೆ. ಸೆಪ್ಟೆಂಬರ್ 13, 2020ರಲ್ಲಿ ಕೆಸಿ ಜನರಲ್ ಆಸ್ಪತ್ರೆಯಲ್ಲಿ ರಕ್ತ, ಯೂರಿನ್ ಸ್ಯಾಂಪಲ್ ಸಂಗ್ರಹ ಮಾಡಲಾಗಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಮತ್ತೆ ಡಿಸೆಂಬರ್ 5ರಂದು ಕೋರ್ಟ್ ಅನುಮತಿ ಪಡೆದು, ಕೂದಲು, ರಕ್ತ, ಯೂರಿನ್ ಅಂಶಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಈಗ ಎಫ್‍ಎಸ್‍ಎಲ್ ವರದಿಯಲ್ಲಿ ಡ್ರಗ್ಸ್ ಸೇವನೆ ಖಚಿತವಾಗಿದೆ. ಈ ಮೂಲಕ ಕರ್ನಾಟಕದಲ್ಲಿ ತಲೆ ಕೂದಲ ಮೂಲಕ ಡ್ರಗ್ಸ್ ಸೇವನೆ ಖಚಿತ ಆಗಿರೋದು ಇದೇ ಮೊದಲ ಕೇಸ್ ಎಂದು ಸಿಸಿಬಿ ಹೇಳಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್- ನಮ್ಮನ್ನು ಬಿಟ್ಟುಬಿಡಿ ಎಂದು ಕಣ್ಣೀರಿಟ್ಟ ಸಂಜನಾ ತಾಯಿ
ಡ್ರಗ್ಸ್ ಸೇವನೆ ಖಚಿತ, ಮುಂದೇನು?
ಡ್ರಗ್ಸ್ ಕೇಸಲ್ಲಿ ಕೂದಲು ಮೂಲಕ ಪತ್ತೆ ಹಚ್ಚಿರೋದು ರಾಜ್ಯದಲ್ಲಿ ಇದೇ ಮೊದಲ ಕೇಸ್ ಆಗಿದೆ. ರಾಗಿಣಿ, ಸಂಜನಾ ವಿರುದ್ಧ ಬೆಂಗಳೂರಿನ 33ನೇ ಸಿಸಿಹೆಚ್ ಕೋರ್ಟ್‍ಗೆ ಸಿಸಿಬಿ ಪೊಲೀಸರು 145 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ಎಫ್‍ಎಸ್‍ಎಲ್ ವರದಿ, ಸಿಸಿಬಿ ವಿಚಾರಣೆ ವೇಳೆ ಇಬ್ಬರ ವಿರುದ್ಧ ನಟರು ಕೊಟ್ಟಿರುವ ಹೇಳಿಕೆಯನ್ನು ಸಾಕ್ಷ್ಯವಾಗಿ ಉಲ್ಲೇಖಿಸಿದ್ದಾರೆ.
ಹೈದ್ರಾಬಾದ್ ಎಫ್‍ಎಸ್‍ಎಲ್ ರಿಪೋರ್ಟ್ ಬಗ್ಗೆ ಕೋರ್ಟ್ ಪರಿಶೀಲನೆ ನಡೆಸಲಿದೆ. ಇಬ್ಬರ ವಿಚಾರಣೆ ವೇಳೆ ಸರ್ಕಾರಿ ವಕೀಲರು ವಾದ ಮಂಡಿಸಲಿದ್ದಾರೆ. ಈ ವೇಳೆ ಪೂರಕ ಸಾಕ್ಷ್ಯ ಕೊಟ್ಟು ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಲಿದ್ದಾರೆ. ವಿಚಾರಣೆ ಬಳಿಕ ಆರೋಪ ಸಾಬೀತಾದರೆ ಸಂಜನಾ, ರಾಗಿಣಿಗೆ ಕೋರ್ಟ್ ಶಿಕ್ಷೆ ವಿಧಿಸಬಹುದು. ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಟಿ ಮಣಿಯರು ಹೈಕೋರ್ಟ್ ಮೊರೆ ಹೋಗಬಹುದು. ಇದನ್ನೂ ಓದಿ: ಸಣ್ಣ ಮೀನು ಹಿಡಿದಿದ್ದಾರೆ, ತಿಮಿಂಗಿಲಗಳಿವೆ: ಇಂದ್ರಜಿತ್ ಲಂಕೇಶ್
ರಾಗಿಣಿ ಮಾದಕ ಲೋಕ:
ಡ್ರಗ್ಸ್ ದಂಧೆಕೋರರ ಜೊತೆಗೆ ನಟಿ ರಾಗಿಣಿ ವಾಟ್ಸ್ ಆ್ಯಪ್ ಮೂಲಕ ವಿಡಿಯೋ ಚಾಟ್ ಮಾಡಿರುವುದು, ಡ್ರಗ್ಸ್‍ಗಾಗಿ ಡೀಲರ್ಸ್ ಜೊತೆ 49 ಬಾರಿ ದೂರವಾಣಿ ಸಂಭಾಷಣೆ ಮಾಡಿರುವುದನ್ನು ಉಲ್ಲೇಖಿಸಲಾಗಿದೆ. ಅಲ್ಲದೆ ನಟಿ ರಾಗಿಣಿ ಕೊಕೇನ್, ಎಂಡಿಎಂಎ, ಎಕ್ಸ್‍ಟೆಸಿ ಮಾತ್ರೆ ತರಿಸಿಕೊಂಡಿದ್ದರು. ತಟ್ಟೆಯಲ್ಲಿ ಕೊಕೇನ್ ಪೌಡರ್ ಹಾಕಿ ಎಟಿಎಂ ಕಾರ್ಡ್‍ನಿಂದ ಉಜ್ಜುತ್ತಿದ್ದರು. ಬಳಿಕ ಕೊಕೇನ್ ಪೌಡರ್‍ನ್ನು 2 ಲೈನ್ ಆಗಿ ಮಾಡುತ್ತಿದ್ದರು. ಸುರುಳಿ ಸುತ್ತಿದ್ದ 100 ರೂ. ನೋಟಿನ ಮೂಲಕ ಮೂಗಿನಿಂದ ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಬೆಂಗಳೂರಿನ ಫ್ಯಾಷನ್ ಶೋನಲ್ಲೂ ಮಾದಕ ಪಾರ್ಟಿ ನಡೆಯುತ್ತಿತ್ತು. ರಾಗಿಣಿ ತಾವು ಮಾದಕ ದ್ರವ್ಯ ಸೇವನೆ ಮಾಡಿ ಬೇರೆಯವರಿಗೂ ಪ್ರಚೋದಿಸುತ್ತಿದ್ದರು. ಈ ಬಗ್ಗೆ ರಾಗಿಣಿ ಡ್ರೈವರ್ ಇಮ್ರಾನ್, ರವಿಶಂಕರ್ ಪತ್ನಿ ಸೇರಿ 19 ಮಂದಿ ಹೇಳಿಕೆಯನ್ನು ಸಿಸಿಬಿ ಅಧಿಕಾರಿಗಳು ದಾಖಲಿಸಿದ್ದಾರೆ.
ಮಾದಕ ಜಾಲದಲ್ಲಿ ಸಂಜನಾ:
2017ರ ಅಕ್ಟೋಬರ್‍ನಲ್ಲಿ ಕೋರಮಂಗಲದ ವಾಲ್‍ಸ್ಟ್ರೀಟ್ ಕ್ಲಬ್‍ನಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ನಟಿ ಸಂಜನಾ ಗಲ್ರಾನಿ ಡ್ರಗ್ಸ್ ಸೇವಿಸಿ, ಡ್ರಗ್ಸ್ ಮಾರಾಟ ಮಾಡಿದ್ದರು. 2018ರಲ್ಲಿ ಜೇಡ್ ಗಾರ್ಡನ್‍ನಲ್ಲಿ ನಡೆದ ಬರ್ತ್‍ಡೇ ಪಾರ್ಟಿಯಲ್ಲಿ ಸಹ ಡ್ರಗ್ಸ್ ಸೇವನೆ ಮಾಡಿದ್ದರು. 2018ರ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‍ನಲ್ಲಿ ನಡೆದಿದ್ದ ವ್ಯಾಲೆಂಟೆನ್ಸ್ ಡೇ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಿದ್ದಾರೆ ಎಂದು ಚಾರ್ಜ್ ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ.
ನಟಿಯಾಗಿ ಉಳಿದವರಿಗೆ ಡ್ರಗ್ಸ್ ಸೇವಿಸುವಂತೆ ಸಂಜನಾ ಪ್ರಚೋದನೆ ನೀಡುತ್ತಿದ್ದರು. ಒಮ್ಮೆ ನಶೆ ಏರಿಸಿಕೊಂಡ ಬಳಿಕ ಸಾಯಿತೇಜ್ ಶೈನ್ ಅಪಾರ್ಟ್‍ಮೆಂಟ್ ಎದುರು ಸಂಜನಾ ಗಲಾಟೆ ಮಾಡಿದ್ದರು. ಡ್ರಗ್ಸ್ ಗಾಗಿ ಸಂಜನಾ ಇತರೆ ಡ್ರಗ್ ಪೆಡ್ಲರ್‍ಗಳಿಗೆ ನಿರಂತರವಾಗಿ ಕರೆ ಮಾಡುತ್ತಿದ್ದರು. ನಟ ಅಕುಲ್ ಬಾಲಾಜಿ ಸಂಜನಾ ಗಲ್ರಾನಿ ವಿರುದ್ಧವೂ ಹೇಳಿಕೆ ಕೊಟ್ಟಿದ್ದಾರೆ ಎಂಬ ಅಂಶವವನ್ನು ತನಿಖಾಧಿಕಾರಿಗಳು ಉಲ್ಲೇಖಿಸಿದ್ದಾರೆ.
ಅಜ್ಞಾತ ಸ್ಥಳದಲ್ಲಿ ರಾಗಿಣಿ, ಸಂಜನಾ
ಎಫ್‍ಎಸ್‍ಎಲ್ ವರದಿಯಲ್ಲಿ ಡ್ರಗ್ಸ್ ಸೇವನೆ ಖಚಿತ, ಪೊಲೀಸರು ಚಾರ್ಜ್‍ಶೀಟ್ ಸಲ್ಲಿಸಿದ ಬೆನ್ನಲ್ಲೇ ನಟಿರಾದ ರಾಗಿಣಿ, ಸಂಜನಾ ಅಜ್ಞಾತವಾಗಿದ್ದಾರೆ. ಯಲಹಂಕದ ಜ್ಯುಡಿಷಿಯಲ್ ಲೇಔಟ್‍ನ ನಿವಾಸದಲ್ಲಿ ರಾಗಿಣಿ ಇಲ್ಲ. ಬೆಳಗ್ಗೆಯೇ ರಾಗಿಣಿ ಹೊರಟಿದ್ದಾರೆ. ಯಾವಾಗ ಬರುತ್ತಾರೆ ಎಂಬ ಮಾಹಿತಿ ಇಲ್ಲ ಎಂದು ಸೆಕ್ಯೂರಿಟಿ ಹೇಳಿದ್ದಾರೆ.
ಸಂಜನಾ ಮೊಬೈಲನ್ನೇ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಸಂಜನಾ ಮ್ಯಾನೇಜರ್ ಸಂಪರ್ಕಿಸಿದರೂ ನೋ ರೆಸ್ಪಾನ್ಸ್ ಅಂತಿದ್ದಾರೆ. ಪ್ರತಿದಿನ ಮಧ್ಯಾಹ್ನ 1 ಗಂಟೆ ಹೊತ್ತಿಗೆ ತಮ್ಮ ಮನೆಯ ಪಕ್ಕದ ಕಟ್ಟಡ ಕಾರ್ಮಿಕರಿಗೆ ಸಂಜನಾ ಊಟ ವಿತರಿಸುತ್ತಿದ್ದರು. ಇಂದು ಅಲ್ಲಿ ಊಟವನ್ನೂ ಕೊಟ್ಟಿಲ್ಲ. ಆದರೆ ಸದ್ಯ ಸಂಜನಾ ಮನೆಯಲ್ಲೇ ಇದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ, ಸಂಜನಾ ತಾಯಿ ರೇಷ್ಮಾ ಮಾತ್ರ ಕಣ್ಣೀರು ಹಾಕಿದ್ದಾರೆ. ಸಂಜನಾ ಈಗಾಗಲೇ ತುಂಬಾ ನೊಂದಿದ್ದಾರೆ. ಡ್ರಗ್ಸ್ ಸೇವನೆ, ಎಫ್‍ಎಸ್‍ಎಲ್, ಚಾರ್ಜ್‍ಶೀಟ್ ಬಗ್ಗೆ ನಮಗೇನು ಗೊತ್ತಿಲ್ಲ. ನಮ್ಮನ್ನು ಬಿಟ್ಟುಬಿಡಿ ಎಂದು ಕ್ಯಾಮೆರಾಗಳಿಗೆ ಕೈಮುಗಿದಿದ್ದಾರೆ.
ಬೆಂಗಳೂರು: ಹಳೆ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಎಂಬಂತೆ ಡ್ರಗ್ ಕೇಸ್ ಬೆನ್ನಲ್ಲೇ ನಟಿ ಸಂಜನಾ ಗಲ್ರಾನಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಮಾಡೆಲ್ ವಂದನಾ ಜೈನ್ ದೂರಿನ್ವಯ ಕೋರ್ಟ್ ಆದೇಶದಂತೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
2019 ರಲ್ಲಿ ಲ್ಯಾವೆಲ್ಲಿ ರಸ್ತೆಯ ಕ್ಲಬ್‍ನಲ್ಲಿ ವಂದನಾ ಜೈನ್ ಸ್ನೇಹಿತನೊಂದಿಗೆ ಮಾತುಕತೆ ವೇಳೆ ಸಂಜನಾ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಾರೆ. ಈ ವೇಳೆ ಅವಾಚ್ಯ ಶಬ್ಧಗಳನ್ನು ಬಳಸದಂತೆ ವಂದನಾ ಜೈನ್ ಸೂಚನೆ ನೀಡಿದ್ದಾರೆ. ಬಳಿಕ ವಂದನಾ ಮುಖಕ್ಕೆ ಮಧ್ಯ ಎರಚಿ ಸಂಜನಾ ಹಲ್ಲೆ ಮಾಡಿದ್ದಾರೆ. ಇದರಿಂದ ವಂದನಾ ಜೈನ್ ಕಣ್ಣಿಗೆ ಗಾಯವಾಗಿದೆ. ಘಟನೆ ಬಳಿಕ ಸಂಜನಾ ವಂದನಾಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ಪಡೆದು ಅಜ್ಞಾತವಾಗಿದ್ದ ಸಂಜನಾ ಇಂದು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದ ಸಂಜನಾ ಐದು ದಿನಗಳ ಬಳಿಕ ಕಾಣಿಸಿಕೊಂಡಿದ್ದಾರೆ. ಹೈಕೋರ್ಟ್ ಸೂಚನೆಯಂತೆ ಇಂದು ಎನ್‌ಡಿಪಿಎಸ್ ಕೋರ್ಟ್ ಸಂಜನಾ ಹಾಜರಾಗಿದ್ದರು.
ಜಾಮೀನು ಪ್ರಕ್ರಿಯೆ ಮುಗಿಸಿಲು ಸಿಟಿ ಸಿವಿಲ್ ಕೋರ್ಟ್‌ಗೆ ಸಂಜನಾ ಇಂದು ಆಗಮಿಸಿದ್ದರು. ಕೋರ್ಟ್ ಹಾಲ್‌ಗೆ ಹೋಗುವ ಮುನ್ನ ಸಂಜನಾಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ನೆಗೆಟಿವ್ ರಿಪೋರ್ಟ್ ಬಂದ ನಂತರ ಎನ್‌ಡಿಪಿಎಸ್ ಜಡ್ಜ್ ಮುಂದೆ ಸಂಜನಾ ಹಾಜರಾದರು. ಬುರ್ಕಾವನ್ನು ಧರಿಸಿ ಸಂಜನಾ ಕೋರ್ಟ್‌ಗೆ ಹಾಜರಾಗಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಬಲವಂತದಿಂದ ಇಸ್ಲಾಂಗೆ ಸಂಜನಾ ಮತಾಂತರ
ಸ್ಯಾಂಡಲ್ವುಡ್ ಡ್ರಗ್ ದಂಧೆ ಪ್ರಕರಣ ಸಂಬಂಧ ಜೈಲುಪಾಲಾಗಿದ್ದ ನಟಿ ಸಂಜನಾ ಗಲ್ರಾನಿಗೆ ಕರ್ನಾಟಕ ಹೈಕೋರ್ಟ್ ಡಿ.11 ರಂದು ಜಾಮೀನು ಮಂಜೂರು ಮಾಡಿತ್ತು. ಅನಾರೋಗ್ಯದಿಂದ ಬಳಲುತ್ತಿರುವ ಗಲ್ರಾನಿಗೆ ಶಸ್ತ್ರ ಚಿಕಿತ್ಸೆ ಮಾಡುವ ಅಗತ್ಯವಿದೆ ಎಂದು ವಾಣಿ ವಿಲಾಸ ಆಸ್ಪತ್ರೆ ವೈದ್ಯರು ಹೈಕೋರ್ಟ್ ಗೆ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಜಾಮೀನು ನೀಡಿತ್ತು.
ಸೆಪ್ಟೆಂಬರ್ 8 ರಂದು ಸಂಜನಾ ಗಲ್ರಾನಿ ಮನೆ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಸಂಜನಾ ಗಲ್ರಾನಿಯನ್ನು ವಿಚಾರಣೆಗೆ ಕರೆದು, ನಂತರ ಬಂಧಿಸಿದ್ದರು. ಸಿಸಿಬಿ ವಿಚಾರಣೆಯ ಬಳಿಕ ಸಂಜನಾ ನ್ಯಾಯಾಂಗ ಬಂಧನದಲ್ಲಿದ್ದರು.