Tag: Sanjana Galrani

  • ಮಗನ ಜೊತೆ ಮೊದಲ ಬಾರಿಗೆ ರೀಲ್ಸ್ ಮಾಡಿದ ಸಂಜನಾ ಗಲ್ರಾನಿ

    ಮಗನ ಜೊತೆ ಮೊದಲ ಬಾರಿಗೆ ರೀಲ್ಸ್ ಮಾಡಿದ ಸಂಜನಾ ಗಲ್ರಾನಿ

    ಸ್ಯಾಂಡಲ್‌ವುಡ್ ಬ್ಯೂಟಿ ಸಂಜನಾ ಗಲ್ರಾನಿ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಸಂಜನಾ ಮನೆಯಲ್ಲಿ ಸಂತಸ ಮನೆ ಮಾಡಿದೆ. ಇತ್ತೀಚೆಗಷ್ಟೇ ಮಗುವಿಗೆ `ಅಲಾರಿಕ್’ ಎಂಬ ಹೆಸರನ್ನ ಇಟ್ಟಿದ್ದರು. ಈಗ ಮುದ್ದು ಮಗನ ಜತೆ ಮೊದಲ ಬಾರಿಗೆ ರೀಲ್ಸ್ ಮಾಡಿ, ಸುದ್ದಿಯಲ್ಲಿದ್ದಾರೆ.

    ಮುದ್ದು ಮಗನ ಪೋಷಣೆಯಲ್ಲಿ ಬ್ಯುಸಿಯಾಗಿರುವ ಸಂಜನಾ ಗಲ್ರಾನಿ, ಇದೀಗ ಮಗುವಿನ ಜೊತೆ ಮೊದಲ ಬಾರಿಗೆ ರೀಲ್ಸ್ ಮಾಡಿ ಸಿನಿರಸಿಕರ ಗಮನ ಸೆಳೆದಿದ್ದಾರೆ. ಮುದ್ದು ಮಗ ಅಲಾರಿಕ್ ಜತೆ ಚೆಂದದೊಂದು ರೀಲ್ಸ್‌ಗೆ ಹೆಜ್ಜೆ ಸಂಜನಾ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಗುಮ್ಮನ ಜೊತೆ ಬಂದ `ವಿಕ್ರಾಂತ್ ರೋಣ’ ಟೀಮ್: ಹೊಸ ಸಾಂಗ್‌ ರಿಲೀಸ್

    ಮಗನ ಲಾಲನೆ ಬ್ಯುಸಿಯಿರುವ ಸಂಜನಾ ಗಲ್ರಾನಿ, ಮುಂದಿನ ದಿನಗಳಲ್ಲಿ ಪವರ್‌ಫುಲ್ ಪಾತ್ರಗಳ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಲಿದ್ದಾರೆ. ಬ್ರೇಕ್‌ನ ನಂತರ ಮತ್ತೆ ಬೆಳ್ಳಿತೆರೆಯಲ್ಲಿ `ಗಂಡ ಹೆಂಡತಿ’ ಖ್ಯಾತಿಯ ನಾಯಕಿ ಸಂಜನಾ ಮಿಂಚೋದು ಗ್ಯಾರೆಂಟಿ.

    Live Tv
    [brid partner=56869869 player=32851 video=960834 autoplay=true]

  • ಹೆರಿಗೆಯ ವಿಡಿಯೋ ಹಂಚಿಕೊಂಡ ಸಂಜನಾ ಗಲ್ರಾನಿ

    ಹೆರಿಗೆಯ ವಿಡಿಯೋ ಹಂಚಿಕೊಂಡ ಸಂಜನಾ ಗಲ್ರಾನಿ

    ಸ್ಯಾಂಡಲ್‌ವುಡ್ ನಟಿ ಸಂಜನಾ ಮನೆಯಲ್ಲಿ ಸಂತಸ ಮನೆ ಮಾಡಿದೆ. ಮುದ್ದು ಮಗನ ಆಗಮನದ ಖುಷಿಯಲ್ಲಿದ್ದಾರೆ. ಈ ಮಧ್ಯೆ ತನ್ನ ಸಿಸೇರಿಯನ್ ಹೆರಿಗೆಯ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಸಂಜನಾ ಗಲ್ರಾನಿ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದರು. ನಂತರ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ ನಂತರ ತಮ್ಮ ವೈಯಕ್ತಿಕ ಜೀವನದತ್ತ ಮುಖ ಮಾಡಿದ್ದಾರೆ. ಮದುವೆ, ಸಂಸಾರ ಅಂತಾ ತನ್ನದೇ ಪ್ರಪಂಚ ಕಟ್ಟಿಕೊಂಡು ಖುಷಿಯಾಗಿದ್ದಾರೆ. ಹೀಗಿರುವಾಗ ಇತ್ತೀಚೆಗಷ್ಟೇ ಗಂಡು ಮಗುವಿಗೆ ಸಂಜನಾ ತಾಯಿಯಾಗಿದ್ದರು. ಈ ಮೂಲಕ ಮನೆಗೆ ಹೊಸ ಅತಿಥಿಯ ಆಗಮನವಾಗಿತ್ತು. ತಮ್ಮ ಹೆರಿಗೆಯ ಅನುಭವ ಕಷ್ಟ ಹೇಗಿತ್ತು ಎಂಬ ಸಣ್ಣ ತುಣುಕನ್ನ ಸಂಜನಾ ಸಾಮಾಜಿಕ ಜಾತಾಣದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ತಮಿಳು ಕಿರುತೆರೆಯತ್ತ `ಪಾರು’ ಖ್ಯಾತಿಯ ಮೋಕ್ಷಿತಾ ಪೈ

    ತಂಗಿ ನಿಕ್ಕಿ ಗಲ್ರಾನಿ ಮದುವೆಯ ದಿನವೇ ಮಗುವಿನ ಆಗಮನವಾಗಿತ್ತು. ಸಿಸೇರಿಯನ್ ಹೆರಿಗೆ ಸಂಜನಾಗೆ ಆಗಿತ್ತು. ಅಂದಿನ ದಿನ ಹೇಗಿತ್ತು. ಆ ದಿನ ಎಷ್ಟು ಕಷ್ಟವಾಗಿತ್ತು ಎಂಬುದನ್ನ ವಿಡಿಯೋ ಮುಖಾಂತರ ತಿಳಿಸಿದ್ದಾರೆ. ಈ ಮೂಲಕ ತಮಗೆ ಹೆರಿಗೆ ಮಾಡಿಸಿದ ಡಾಕ್ಟರ್ ಹೇಮಾ ನಂದಿನಿ ಅವರಿಗೆ ಸಂಜನಾ ಧನ್ಯವಾದ ತಿಳಿಸಿದ್ದಾರೆ. ಈ ವಿಡಿಯೋ ಈಗ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸಂಜನಾ ಗಲ್ರಾನಿ ಮಗು `ಅಲಾರಿಕ್’ ಹೆಸರಿನ ಅರ್ಥವೇನು ಗೊತ್ತಾ?

    ಸಂಜನಾ ಗಲ್ರಾನಿ ಮಗು `ಅಲಾರಿಕ್’ ಹೆಸರಿನ ಅರ್ಥವೇನು ಗೊತ್ತಾ?

    ಸ್ಯಾಂಡಲ್‌ವುಡ್ ನಟಿ ಸಂಜನಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಸಿನಿಮಾಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ಈಗ ಮಗುವಿನ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಮನೆಗೆ ಹೊಸ ಅತಿಥಿ, ಸಂಜನಾ ಮುದ್ದು ಮಗನ ಆಗಮನವಾಗಿ, ಒಂದು ತಿಂಗಳು ಕಳೆದಿದೆ. ಇದೇ ಖುಷಿಯಲ್ಲಿ ಮಗುವಿಗೆ ನಾಮಕರಣ ಮಾಡಿದ್ದಾರೆ.

    ನಟಿ ಸಂಜನಾ ಕಳೆದ 2020ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಅಜೀಜ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಗಂಡು ಮಗುವಿಗೆ ತಾಯಿಯಾಗಿ ಮಗುವಿನ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮಗುವಿನ ನಾಮಕರಣ ನೆರವೇರಿದ್ದು, ಅಲಾರಿಕ್ ಎಂಬ ಹೆಸರನ್ನು ಇಡಲಾಗಿದೆ. ಈ ಕುರಿತು ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಭಿನ್ನವಾದ ಹೆಸರನ್ನ ಮಗುವಿಗೆ ಇಟ್ಟಿರೋ ಬೆನ್ನಲ್ಲೇ `ಅಲಾರಿಕ್ʼ ಎಂದರೆ ಅರ್ಥವೇನು ಅಂತಾ ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ.

    ಸಂಜನಾ ಪತಿ ಅಜೀಜ್ ಮಗುವಿನ ಆರೈಕೆ ಮಾಡುತ್ತಿರುವ ವಿಡಿಯೋ ಶೇರ್ ಮಾಡಿ, ಮುದ್ದು ಮಗನ ಹೆಸರನ್ನು ಅನೌನ್ಸ್ ಮಾಡಿರುವ ಬೆನ್ನಲ್ಲೇ ಅಲಾರಿಕ್ ಹೆಸರಿನ ಅರ್ಥವೇನು ಅಂತಾ ಫ್ಯಾನ್ಸ್ ಸರ್ಚ್ ಮಾಡುತ್ತಿದ್ದಾರೆ. `ಅಲಾರಿಕ್’ ಹೆಸರು ಭಿನ್ನಾವಾಗಿದ್ದರು. ಈ ಹೆಸರಿಗೆ ಒಂದೊಳ್ಳೆಯ ಅರ್ಥವಿದೆ. `ಅಲಾರಿಕ್’ ಎಂದರೆ ಒಬ್ಬ ಉದಾತ್ತ ಆಡಳಿತಗಾರ ಎಂಬ ಅರ್ಥವಿದೆ. ಲೀಡರ್ ಎಂಬುದು ಅಲಾರಿಕ್ ಹೆಸರಿನ ಅರ್ಥವಾಗಿದೆ. ಇದನ್ನೂ ಓದಿ: ಸಂಜನಾ ಗಲ್ರಾನಿ ಮಗುವಿನ ನಾಮಕರಣ: ಹೆಸರೇನು ಗೊತ್ತಾ?

    ಸದ್ಯ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿರುವ ಸಂಜನಾ, ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೆ ಸಿನಿಮಾರಂಗದತ್ತ ಮುಖ ಮಾಡುತ್ತಾರಾ ಅಂತಾ ಕಾದುನೋಡಬೇಕಿದೆ.

    Live Tv

  • ನಟಿ ಸಂಜನಾ ಗಲ್ರಾನಿ ಮಗನಿಗೆ ಕರೆಯೋ ಹೆಸರು ಪ್ರಿನ್ಸ್ ಪಾಷಾ

    ನಟಿ ಸಂಜನಾ ಗಲ್ರಾನಿ ಮಗನಿಗೆ ಕರೆಯೋ ಹೆಸರು ಪ್ರಿನ್ಸ್ ಪಾಷಾ

    ನ್ನಡದ ಹೆಸರಾಂತ ನಟಿ ಸಂಜನಾ ಗಲ್ರಾನಿ ಬಹುತೇಕ ಸಮಯವನ್ನು ಮಗುವಿನೊಂದಿಗೆ ಕಳೆಯುತ್ತಿದ್ದಾರೆ. ಆ ಕ್ಷಣಗಳನ್ನು ಫೋಟೋ ಮತ್ತು ವಿಡಿಯೋ ರೂಪದಲ್ಲಿ ಸೆರೆ ಹಿಡಿದು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಮಗುವಿಗೆ ಯಾವ ಹೆಸರಿನಿಂದ ಕರೆಯುತ್ತಾರೆ ಎನ್ನುವುದನ್ನೂ ಅವರು ಹಂಚಿಕೊಂಡಿದ್ದಾರೆ. ಮಗುವಿಗೆ ಇನ್ನೂ ಹೆಸರಿಟ್ಟಿಲ್ಲವಾದರೂ, ಪ್ರೀತಿಯಿಂದ ಪ್ರಿನ್ಸ್ ಪಾಷಾ ಎಂದು ಕರೆಯುತ್ತಾರಂತೆ.

    ‘ಪ್ರಿನ್ಸ್’ ಬಹುತೇಕ ತಾಯಂದಿರು ಮಕ್ಕಳಿಗೆ ಕರೆಯುವ ಹೆಸರಾದ್ದರಿಂದ, ಸಂಜನಾ ಕೂಡ ತಮ್ಮ ಮಗುವಿಗೆ ಪ್ರಿನ್ಸ್ ಎಂದೇ ಕರೆಯುತ್ತಿದ್ದಾರೆ. ಸಂಜನಾ ಪತಿಯ ಪೂರ್ಣ ಹೆಸರು ಅಜೀಜ್ ಪಾಷಾ. ಹಾಗಾಗಿ ಪ್ರಿನ್ಸ್ ಪಾಷಾ ಎಂದು ಸಂಜನಾ ತಮ್ಮ ಮಗುವಿಗೆ ಕರೆಯುತ್ತಿದ್ದಾರೆ. ಸದ್ಯಕ್ಕೆ ಹೀಗೆ ಕರೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮಗುವಿಗೆ ಅಷ್ಟೇ ಚಂದದ ಹೆಸರನ್ನು ಇಡುವುದಾಗಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಕಾಂಗ್ರೆಸ್ ಪಾದಯಾತ್ರೆ 

    ಮಗುವನ್ನು ಮನೆಯಿಂದ ಆಚೆ ಕರೆದುಕೊಂಡು ಆಟವಾಡಿಸುವ ವೀಡಿಯೋವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿರುವ ಸಂಜನಾ, ಪ್ರಿನ್ಸ್ ಜೊತೆ ಮೊದಲ ಬಾರಿಗೆ ಆಚೆ ಬಂದಿರುವೆ ಎಂದು ಬರೆದುಕೊಂಡಿದ್ದಾರೆ. ಸಂಜನಾ ಅಭಿಮಾನಿಗಳು ಮುದ್ದಾದ ಮಗುವಿಗೆ ಶುಭ ಹಾರೈಸಿದ್ದಾರೆ. ಮದುವೆ ನಂತರ ಸಿನಿಮಾ ರಂಗದಿಂದ ದೂರವೇ ಉಳಿದಿರುವ ಸಂಜನಾ ಮತ್ತೆ ಅವರು ಸಿನಿಮಾ ರಂಗಕ್ಕೆ ಬರಲಿ ಎಂದು ಅಭಿಮಾನಿಗಳು ಕೇಳಿದ್ದಾರೆ.

  • ಮಗುವಿನ ಮುಖ ರಿವೀಲ್ ಮಾಡಿದ ಸಂಜನಾ ಗಲ್ರಾನಿ

    ಮಗುವಿನ ಮುಖ ರಿವೀಲ್ ಮಾಡಿದ ಸಂಜನಾ ಗಲ್ರಾನಿ

    ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇದ್ದಾರೆ. ಇತ್ತೀಚೆಗಷ್ಟೇ ಗಂಡು ಮಗುವಿಗೆ ತಾಯಿಯಾದ ಸಂಜನಾ, ಇದೀಗ ತನ್ನ ಮಗುವಿನ ಮುಖವನ್ನ ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದಾರೆ.

    ಡ್ರಗ್ಸ್ ಹಗರಣದ ನಂತರ ತಾನು ಆಯ್ತು ತನ್ನ ಬದುಕು ಆಯ್ತು ಅಂತಾ ಖಾಸಗಿ ಜೀವನದ ಕಡೆ ಮುಖ ಸಂಜನಾ ಮಾಡಿದ್ದಾರೆ. ಪತಿ ಅಜೀಜ್ ಪಾಷಾ ಜೊತೆ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ಇನ್ನು ತಾನು ತಾಯಿಯಾದ ದಿನದಿಂದ ಅಭಿಮಾನಿಗಳಿಗೆ ಸಂಜನಾ ಗುಡ್ ನ್ಯೂಸ್ ಕೊಡುತ್ತಲೇ ಬಂದಿದ್ದಾರೆ. ಇತ್ತೀಚೆಗಷ್ಟೇ ಗಂಡು ಮಗುವಿಗೆ ತಾಯಿಯಾಗಿ ಈಗಷ್ಟೇ ಡಿಸ್ಚಾರ್ಜ್ ಆಗಿ ಮನೆ ಬಂದಿರುವ ಸಂಜನಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಅಷ್ಟೇ ಅಲ್ಲ, ತನ್ನ ಮುದ್ದಾದ ಮಗುವಿನ ಮುಖ ಕೂಡ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ಸಹಸ್ರಲಿಂಗ ಸನ್ನಿಧಾನಕ್ಕೆ ಭೇಟಿ ಕೊಟ್ಟ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್

    ಬೇಬಿ ಬಂಪ್ ಫೋಟೋಶೂಟ್, ಹಿಂದೂ ಮತ್ತು ಮುಸ್ಲಿಂ ಧರ್ಮದ ಸೀಮಂತ ಶಾಸ್ತ್ರದ ಮೂಲಕ ಸುದ್ದಿಯಾಗಿದ್ದ ನಟಿ ಸಂಜನಾ ಗಲ್ರಾನಿ, ಇದೀಗ ತನ್ನ ಮಗುವಿನ ಮುಖವನ್ನು ರಿವೀಲ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗೆ ಮಗುವಿನ ಮುಖ ಪರಿಚಯ ಮಾಡಿಸಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

  • ಆರತಕ್ಷತೆಯಲ್ಲಿ ಮಿಂಚಿದ ನಿಕ್ಕಿ ಗಲ್ರಾನಿ- ಆದಿ ಪಿನಿಸೆಟ್ಟಿ ಜೋಡಿ

    ಆರತಕ್ಷತೆಯಲ್ಲಿ ಮಿಂಚಿದ ನಿಕ್ಕಿ ಗಲ್ರಾನಿ- ಆದಿ ಪಿನಿಸೆಟ್ಟಿ ಜೋಡಿ

    ಸೌತ್ ಸಿನಿರಂಗದ ಮುದ್ದಾದ ಜೋಡಿಗಳಲ್ಲಿ ನಿಕ್ಕಿ ಗಲ್ರಾನಿ ಮತ್ತು ಆದಿ ಪಿನಿಸೆಟ್ಟಿ ಕೂಡ ಒಬ್ಬರು. ಇತ್ತೀಚೆಗಷ್ಟೇ ಪ್ರೀತಿಸಿ ಹಸೆಮಣೆ ಏರಿರುವ ಈ ಜೋಡಿಗೆ ಹಾರೈಸಲು ಇಡೀ ಚಿತ್ರರಂಗವೇ ಈ ನವಜೋಡಿಯ ಆರತಕ್ಷತೆಯಲ್ಲಿ ಭಾಗಿಯಾಗಿದ್ದರು. ಸದ್ಯ ನಿಕ್ಕಿ ಗಲ್ರಾನಿ ಮತ್ತು ಆದಿ ಪಿನಿಸೆಟ್ಟಿ ಅವರ ಆರತಕ್ಷತೆಯ ಫೋಟೋಗಳು ವೈರಲ್ ಆಗುತ್ತಿದೆ.

    ಸ್ಯಾಂಡಲ್‌ವುಡ್ ಬ್ಯೂಟಿ ಸಂಜನಾ ಗಲ್ರಾನಿ ತಂಗಿ ನಿಕ್ಕಿ ಗಲ್ರಾನಿ ಕನ್ನಡದ ಜೊತೆಗೆ ಸೌತ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಕಲಾವಿದೆ. ಚಿತ್ರರಂಗದಲ್ಲಿ ಬೇಡಿಕೆಯಿರುವಾಗಲೇ ಆದಿ ಪಿನಿಸೆಟ್ಟಿಯನ್ನು ಪ್ರೀತಿಸಿ ಮದುವೆಯಾದರು. ಕೆಲ ಸಿನಿಮಾಗಳು ಒಟ್ಟಿಗೆ ನಟಿಸಿರುವ ಈ ಜೋಡಿಗೆ ಪ್ರೀತಿಯಾಗಿದೆ, ಬಳಿಕ ಕೆಲ ವರ್ಷಗಳ ಡೇಟಿಂಗ್ ನಂತರ ಕುಟುಂಬದ ಸಮ್ಮತಿಯ ಮೇರೆಗೆ ಮಾರ್ಚ್ 24ರಂದು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು.

    ಈ ವರ್ಷದ ಶುರುವಿನಲ್ಲಿಯೇ ಅಧಿಕೃತವಾಗಿ ನಿಕ್ಕಿ ಮತ್ತು ಆದಿ ನಿಶ್ಚಿತಾರ್ಥ ಮಾಡಿಕೊಂಡರು. ಮೇ 18ರಂದು ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿಯ ವಿವಾಹವಾಯಿತು. ಇದೇ ದಿನ ಅಕ್ಕ ಸಂಜನಾ ಕೂಡ ಗಂಡು ಮಗುವಿಗೆ ತಾಯಿಯಾದರು. ಗಲ್ರಾನಿ ಕುಟುಂಬದಿಂದ ಡಬಲ್ ಗುಡ್ ನ್ಯೂಸ್ ಸಿಕ್ಕಿತ್ತು. ಇದನ್ನೂ ಓದಿ: ಸಂಭಾಷಣೆಗಾರನಿಂದ ನಿರ್ದೇಶಕನವರೆಗೆ… ‘ವೀಲ್ ಚೇರ್ ರೋಮಿಯೋ’ ಸೂತ್ರಧಾರನ ಪರಿಶ್ರಮದ ಕಥೆ ಗೊತ್ತಾ ನಿಮಗೆ?

    ಇದೀಗ ಇಡೀ ಚಿತ್ರರಂಗವೇ ನಿಕ್ಕಿ ಗಲ್ರಾನಿ- ಆದಿ ಪಿನಿಸೆಟ್ಟಿ ಜೋಡಿಯ ಅದ್ದೂರಿ ಆರತಕ್ಷತೆಗೆ ಭಾಗಿಯಾಗಿ ನವಜೋಡಿಗೆ ಶುಭಹಾರೈದ್ದಾರೆ. ಚಿತ್ರರಂಗದ ದಿಗ್ಗಜರು ಭಾಗಿಯಾಗಿ ಜೋಡಿಗೆ ವಿಶ್ ಮಾಡಿದ್ದಾರೆ.

  • ಮಗುವಿನೊಂದಿಗೆ ಮನೆಗೆ ಮರಳಿದ ಸಂಜನಾ: ಮಗು ಹೆಸರಿನ ಬಗ್ಗೆ ಭಾರೀ ಚರ್ಚೆ

    ಮಗುವಿನೊಂದಿಗೆ ಮನೆಗೆ ಮರಳಿದ ಸಂಜನಾ: ಮಗು ಹೆಸರಿನ ಬಗ್ಗೆ ಭಾರೀ ಚರ್ಚೆ

    ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಗಂಡು ಮಗುವಿಗೆ ತಾಯಿಯಾದ ಸಂಜನಾ, ಮಗುವಿನೊಂದಿಗೆ ಮನೆಗೆ ಬಂದಿರುವ ಕುರಿತು ವಿಡಿಯೋವೊಂದು ಹಂಚಿಕೊಂಡು ಭಾವುಕರಾಗಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

    ಇತ್ತೀಚೆಗಷ್ಟೇ ಗಂಡು ಮಗುವಿಗೆ ತಾಯಿಯಾದ ಸಂತಸದಲ್ಲಿರುವ ಸಂಜನಾ ಗಲ್ರಾನಿ, ಇದೀಗ ಮರಳಿ ಗೂಡಿಗೆ ಮಗುವಿನೊಂದಿಗೆ ಮರಳಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನನ್ನ ಬದುಕು ಸಂಪೂರ್ಣವಾಗಿ ಬದಲಾಗಿದೆ ಎಂದು ಮಗುವಿನ ಜೊತೆಯಿರುವ ವಿಡಿಯೋವೊಂದನ್ನ ಸಂಜನಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿರುವ ಸಂಜನಾ, ನನ್ನ ಪುಟ್ಟ ಗೂಡಿಗೆ ನನ್ನ ಮಗು, ನನ್ನ ಜೀವನದಲ್ಲಿ ಸೃಷ್ಟಿಸಿದ ಸುಂದರ ಶಕ್ತಿ ಈ ಪುಟ್ಟ ಕಂದಮ್ಮಗೆ ಸ್ವಾಗತ, ಈ ನಾಲ್ಕು ದಿನಗಳಲ್ಲಿ ನನ್ನ ಜೀವನ ಸಂಪೂರ್ಣ ಬದಲಾಗಿದೆ. ಮಾತೃತ್ವ ಮತ್ತು ರಕ್ಷಣೆಯ ಕಡೆಗೆ ಎಂದು ಸಂಜನಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಇದನ್ನೂ ಓದಿ: ಹಾಟ್‌ ಫೋಟೋ ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ `ಅರ್ಜುನ್ ರೆಡ್ಡಿ’ ಚೆಲುವೆ

    ಇನ್ನು ಈ ವೇಳೆ ತಾಯಿ ಮತ್ತು ಮಗುವಿಗೆ ದೃಷ್ಟಿ ತೆಗೆದು ಮನೆಗೆ ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲ, ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯದಂತೆ ಸೀಮಂತ ಆಚರಿಸಿದ್ದ ಸಂಜನಾ, ಮಗುವಿಗೆ ಯಾವ ಸಂಪ್ರದಾಯದ ಹೆಸರನ್ನ ಇಡಬಹುದು ಅಂತಾ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ.

  • ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ವಿವಾಹ: ಆದಿ ಪಿನಿಸೆಟ್ಟಿ ಜತೆ ನಿಕ್ಕಿ ಮದುವೆ

    ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ವಿವಾಹ: ಆದಿ ಪಿನಿಸೆಟ್ಟಿ ಜತೆ ನಿಕ್ಕಿ ಮದುವೆ

    ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ, ಆದಿ ಪಿನಿಸೆಟ್ಟಿ ಜತೆ ಹಸೆಮಣೆ ಏರಿದ್ದಾರೆ. ಇತ್ತೀಚೆಗಷ್ಟೇ ಇಂಗೇಜ್‌ಮೆಂಟ್ ಮಾಡಿಕೊಂಡಿದ್ದ ಈ ಜೋಡಿ ಸದ್ದಿಲ್ಲದೇ ಇಬ್ಬರೂ ಹಸೆಮಣೆ ಏರಿದ್ದಾರೆ.

    ಕನ್ನಡ ಸೇರಿದಂತೆ ಸಾಕಷ್ಟು ಸಿನಿಮಾಗಳ ಮೂಲಕ ಬಹುಭಾಷಾ ನಟಿಯಾಗಿ ನಿಕ್ಕಿ ಗಲ್ರಾನಿ ಮಿಂಚ್ತಿದ್ದಾರೆ. ಇದೀಗ ಬಹುಕಾಲದ ಗೆಳೆಯ ಆದಿ ಪಿನಿಸೆಟ್ಟಿ ಜತೆ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ಮದುವೆ ಆಗಿದ್ದಾರೆ. ಗುರು ಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ಖ್ಯಾತ ನಟ ಆದಿ ಪಿನಿಸೆಟ್ಟಿ ಜತೆ ನಿಕ್ಕಿ ಹಸೆಮಣೆ ಏರಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನವದಂಪತಿಗೆ ಶುಭಾಶಯಗಳು ಹರಿದು ಬರುತ್ತಿದೆ.

    ನಿಕ್ಕಿ ಮತ್ತು ಆದಿ ಹಲವು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ನಿಕ್ಕಿ ಮತ್ತು ಆದಿ ಗುರುಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಕುಟುಂಬದ ಮತ್ತು ಸಿನಿಮಾ ರಂಗದ ಸ್ನೇಹಿತರ ಸಮ್ಮುಖದಲ್ಲಿ ಸದ್ದಿಲ್ಲದೇ ಹಸೆಮಣೆ ಏರಿದ್ದಾರೆ. ಮೇ 18ರಂದು ಅರಿಶಿಣ ಶಾಸ್ತ್ರ ನೆರವೇರಿತ್ತು. ಇಂದು ನಿಕ್ಕಿ ಮತ್ತು ಆದಿ ಪಿನಿಸೆಟ್ಟಿ ಮದುವೆ ಆಗಿದ್ದಾರೆ. ಮದುವೆ ಸಂಭ್ರಮದಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಕೂಡ ಭಾಗಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ ಚೋಪ್ರಾ ರಕ್ತ ಸಿಕ್ತ ಮುಖ ನೋಡಿ ಬೆಚ್ಚಿ ಬಿದ್ದ ಫ್ಯಾನ್ಸ್: ಅಷ್ಟಕ್ಕೂ ಆಗಿದ್ದೇನು?

    ಗಲ್ರಾನಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಸಂಜನಾ ಗಲ್ರಾನಿ ಈಗ ಪ್ರೆಗ್ನೆಂಟ್. ಅವರ ಕುಟುಂಬಕ್ಕೆ ಶೀಘ್ರವೇ ಹೊಸ ಸದಸ್ಯನ ಆಗಮನ ಆಗಲಿದೆ. ಇನ್ನೊಂದ್ ಕಡೆ ತಂಗಿ ನಿಕ್ಕಿ ಗಲ್ರಾನಿ ಮದುವೆ, ಈ ಎರಡು ಸಂತಸದ ಸುದ್ದಿ ಕೇಳಿ ಅಭಿಮಾನಿಗಳು ಥ್ರೀಲ್ ಆಗಿದ್ದಾರೆ.

  • ಗ್ರೀನ್ ಕಲರ್ ಗೌನ್‌ನಲ್ಲಿ ಸಂಜನಾ ಗಲ್ರಾನಿ ಮಿಂಚಿಂಗ್

    ಗ್ರೀನ್ ಕಲರ್ ಗೌನ್‌ನಲ್ಲಿ ಸಂಜನಾ ಗಲ್ರಾನಿ ಮಿಂಚಿಂಗ್

    ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಇತ್ತೀಚೆಗಷ್ಟೇ ಸೀಮಂತದ ಶಾಸ್ತ್ರದ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. 9 ತಿಂಗಳ ತುಂಬು ಗರ್ಭಿಣಿಯಾಗಿರುವ ಸಂಜನಾ ಇದೀಗ ಹೊಸ ಫೋಟೋಶೂಟ್‌ನಿಂದ ಗಮನ ಸೆಳೆದಿದ್ದಾರೆ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    `ಗಂಡ ಹೆಂಡತಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಲಗ್ಗೆಯಿಟ್ಟ ನಟಿ ಸಂಜನಾ ಗಲ್ರಾನಿ, ಬಳಿಕ ಸಾಕಷ್ಟು ಸಿನಿಮಾಗಳ ಸಂಚನ ಮೂಡಿಸಿದ್ರು. ಕನ್ನಡ ಮಾತ್ರವಲ್ಲದೇ ಬಹುಭಾಷಾ ನಟಿಯಾಗಿ ಗಮನ ಸೆಳೆದರು. ಬಳಿಕ ಅಜೀಜ್ ಪಾಷಾ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸಿನಿಮಾಗಳಿಂದ ಸ್ವಲ್ಪ ಅಂತರ ಕಾಯ್ದುಕೊಂಡಿರುವ ನಟಿ ಸಂಜನಾ ಈಗ ವಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಬೇಬಿ ಬಂಪ್ ಫೋಟೋಶೂಟ್, ಸೀಮಂತ ಶಾಸ್ತ್ರದ ವಿಚಾರವಾಗಿ ಸುದ್ದಿಯಾಗಿದ್ರು. ಈಗ ಹೊಸ ಫೋಟೋಶೂಟ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ನೋಡುಗರ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಚೇತನಾ ರಾಜ್ ಸಾವು: ಬಾಡಿ ಶೇಮಿಂಗ್‌ ವಿರುದ್ಧ ದನಿಯೆತ್ತಿದ ಅಶ್ವಿತಿ ಶೆಟ್ಟಿ

    ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯದ ಪ್ರಕಾರ ಇತ್ತೀಚೆಗೆ ಸಂಜನಾ ಸೀಮಂತ ನೆರವೇರಿತ್ತು. ಈಗ ಕಲರ್‌ಫುಲ್‌ ಲುಕ್ಕಿನಲ್ಲಿ ಗ್ರೀನ್‌ ಕಲರ್ ಗೌನ್‌ನಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ವೆಲ್ವೆಟ್ ಕಲರ್ ಗೌನ್‌ನಲ್ಲಿ ಮಿರ ಮಿರ ಅಂತಾ ಸಂಜನಾ ಗಲ್ರಾನಿ ಮಿಂಚಿದ್ದಾರೆ. ಈ ಸದ್ಯ ಈ ಫೋಟೋ ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  • ಸೀಮಂತದ ಖುಷಿಯಲ್ಲಿ ಸಂಜನಾ: ತಿಂಗಳಾಂತ್ಯಕ್ಕೆ ಮಡಿಲಿಗೆ ಮಗುವಿನ ಆಗಮನ

    ಸೀಮಂತದ ಖುಷಿಯಲ್ಲಿ ಸಂಜನಾ: ತಿಂಗಳಾಂತ್ಯಕ್ಕೆ ಮಡಿಲಿಗೆ ಮಗುವಿನ ಆಗಮನ

    ಸ್ಯಾಂಡಲ್‌ವುಡ್ ಕಿರಿಕ್ ಬ್ಯೂಟಿ ಸಂಜನಾ ಗಲ್ರಾನಿ ಸಿಕ್ಕಾಪಟ್ಟೆ ಸುದ್ದಿಯಲ್ಲಿಯಲ್ಲಿದ್ದಾರೆ. ಆದರೆ ಸಿನಿಮಾ ವಿಚಾರವಾಗಿ ಅಲ್ಲ. ವಯಕ್ತಿಕ ಬದುಕಿನ ತಾಯ್ತನದ ವಿಚಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ.

    `ಗಂಡ ಹೆಂಡತಿ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪರಿಚಿತರಾದ ನಟಿ ಸಂಜನಾ, ಸಾಕಷ್ಟು ಸಿನಿಮಾಗಳ ಸಂಚಲನ ಮೂಡಿಸಿದ್ದಾರೆ. ಬಳಿಕ ಅಜೀಜ್ ಪಾಷಾ ಅವರನ್ನ ಸಂಜನಾ ವಿವಾಹವಾದ್ರು. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟಿ ಸಂಜನಾ, ತಮ್ಮ ದೈನಂದಿನ ಬದುಕಿನ ಆಗು ಹೋಗುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ಮಾಡುತ್ತಾರೆ. ತಾವು ತಾಯಿಯಾಗುತ್ತಿರುವ ವಿಚಾರದಿಂದ ಹಿಡಿದು ಬೇಬಿ ಬಂಪ್ ಫೋಟೋಶೂಟ್ ಜತೆಗೆ ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯದ ಸೀಮಂತದ ಸಂಭ್ರಮದ ಕ್ಷಣಗಳನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜತೆ ಹಂಚಿಕೊಂಡಿದ್ದರು.

    ಸಾಕಷ್ಟು ಸವಾಲುಗಳನ್ನು ಎದುರಿಸಿದ ನಂತರ ಸಂಜನಾ ತಮ್ಮ ವಯಕ್ತಿಕ ಬದುಕಿನ ಕಡೆ ಗಮನ ಹರಿಸಿದ ಈ ನಟಿ. ತಾವು ತಾಯಿಯಾಗುತ್ತಿರುವ ಸಂತಸದ ವಿಚಾರವನ್ನ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಸಂಜನಾ ಹೇಳಿಕೊಂಡಿದ್ರು. ಭಿನ್ನವಾಗಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ, ಸಂಜನಾ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದ್ರು. ಇದನ್ನೂ ಓದಿ: ಸನ್ನಿ ಲಿಯೋನ್ ಮೂರು ಮಕ್ಕಳ ತಾಯಿ, ನೂರಾರು ಕೋಟಿ ಒಡತಿ : ಜಸ್ಟ್ @ 40

    ಬಳಿಕ ಹಿಂದೂ ಸಂಪ್ರದಾಯದಂತೆ ಕುಟುಂಬಸ್ಥರ ಸಮ್ಮುಖದಲ್ಲಿ ಸಂಜನಾಗೆ ವಿವಿಧ ತಿಂಡಿ ಪದಾರ್ಥಗಳನ್ನು ಇಟ್ಟು ಸೀಮಂತ ಶಾಸ್ತ್ರ ಮಾಡಲಾಯಿತು. ಬಳಿಕ ಮುಸ್ಲಿಂ ಪದ್ಧತಿ ಪ್ರಕಾರ ಸೀಮಂತ ಶಾಸ್ತ್ರ ನೆರವೇರಿದ್ದು, ವೈಟ್ ಸ್ಯಾರಿನಲ್ಲಿ ಮಿರ ಮಿರ ಅಂತಾ ಸಂಜನಾ ಮಿಂಚಿದ್ರು. ಈ ಸಮಾರಂಭದಲ್ಲಿ ಸಾಕಷ್ಟು ಸೆಲೆಬ್ರೆಟಿ ಸ್ನೇಹಿತರು ಭಾಗಿಯಾಗಿದ್ರು. ಈ ಫೋಟೋ ಮತ್ತು ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಒಟ್ನಲ್ಲಿ ಅದೆನೇ ಇರಲಿ 9 ತಿಂಗಳು ತುಂಬಿರುವ ತುಂಬು ಗರ್ಭಿಣಿ ಸಂಜನಾ ಹೆರಿಗೆ ಸದ್ಯದಲ್ಲೇಯಿದ್ದು,ಯಾವುದೇ ಕಷ್ಟವಿಲ್ಲದೇ ಹೆರಿಗೆ ನೆರವೇರಲಿ ಎಂಬುದೇ ಅಭಿಮಾನಿಗಳ ಆಶಯ.