Tag: Sanjana Galrani

  • ಸಂಜನಾಗೆ ವಂಚನೆ – ಅಪರಾಧಿಗೆ 61.50 ಲಕ್ಷ ದಂಡ, 6 ತಿಂಗಳು ಜೈಲು

    ಸಂಜನಾಗೆ ವಂಚನೆ – ಅಪರಾಧಿಗೆ 61.50 ಲಕ್ಷ ದಂಡ, 6 ತಿಂಗಳು ಜೈಲು

    ಬೆಂಗಳೂರು: ನಟಿ ಸಂಜನಾ ಗಲ್ರಾನಿ (Sanjana Galrani) ಅವರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ರಾಹುಲ್ ತೋನ್ಸೆಗೆ (Rahul Thonse) ಬೆಂಗಳೂರಿನ ನ್ಯಾಯಾಲಯ 61.50 ಲಕ್ಷ ರೂ. ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

    ಸಂಜನಾ ಗಲ್ರಾನಿ ಅವರ ಸ್ನೇಹಿತ ಬನಶಂಕರಿ 3ನೇ ಹಂತದ ನಿವಾಸಿ ರಾಹುಲ್ ತೋನ್ಸೆ ಅಲಿಯಾಸ್ ರಾಹುಲ್ ಶೆಟ್ಟಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 33ನೇ ಎಸಿಜೆಎಂ ನ್ಯಾಯಾಲಯ ನ್ಯಾಯಾಧೀಶ ಪಿಎಸ್ ಸಂತೋಷ್ ಕುಮಾರ್‌ ಅವರು ದಂಡ ಮತ್ತು ಶಿಕ್ಷೆ ವಿಧಿಸಿ ಆದೇಶ ಪ್ರಕಟಿಸಿದ್ದಾರೆ.

    ದಂಡದ ಮೊತ್ತದಲ್ಲಿ 10 ಸಾವಿರ ರೂ. ಕೋರ್ಟ್ ಶುಲ್ಕವನ್ನು ಕಡಿತಗೊಳಿಸಿ ಉಳಿದ 61.40 ಲಕ್ಷ ರೂ.ವನ್ನು ದೂರುದಾರೆ ಸಂಜನಾಗೆ ನೀಡಬೇಕು. ನಿಗದಿತ ಸಮಯದ ಒಳಗಡೆ ದಂಡದ ಮೊತ್ತವನ್ನು ಪಾವತಿ ಮಾಡಿದರೆ 6 ತಿಂಗಳ ಶಿಕ್ಷೆಯನ್ನು ಮಾಫಿ ಮಾಡಲಾಗುತ್ತದೆ. ಇಲ್ಲವಾದರೆ 6 ತಿಂಗಳು ಜೈಲು ಮತ್ತು ದಂಡವನ್ನು ಪಾವತಿ ಮಾಡಬೇಕೆಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ: ಸಂಜನಾ ಗಲ್ರಾನಿ ಮತ್ತೆ ಗರ್ಭಿಣಿ – 2ನೇ ಮಗುವಿನ ನಿರೀಕ್ಷೆಯಲ್ಲಿ ನಟಿ

    ಏನಿದು ಪ್ರಕರಣ?
    ರಾಹುಲ್ ತೋನ್ಸೆ ಗೋವಾ ಮತ್ತು ಕೊಲಂಬೋದಲ್ಲಿ ಕ್ಯಾಸಿನೋಗಳ (Colombo Casino) ವ್ಯವಸ್ಥಾಪಕ ನಿರ್ದೇಶಕನಾಗಿದ್ದಾನೆ. ಈತ ಸಂಜನಾಗೆ ನಾನು ಹೇಳಿದ ಕಡೆಗಳಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಸಿಗಲಿದೆ ಎಂದು ಹೇಳಿದ್ದ. ಇದನ್ನೂ ಓದಿ: ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾ ಕೊಟ್ಟಿದ್ದ ರಶ್ಮಿಕಾಗೆ ಶುರುವಾಯ್ತಾ ಬ್ಯಾಡ್ ಟೈಮ್?

    ರಾಹುಲ್‌ ಮಾತು ಕೇಳಿ 2018-19 ರಲ್ಲಿ 45 ಲಕ್ಷ ರೂ.ಗಳನ್ನು ಸಂಜನಾ ಹೂಡಿಕೆ ಮಾಡಿದ್ದರು. ಆದರೆ ನಂತರ ಯಾವುದೇ ವ್ಯವಹಾರ ಆಗದೇ ವಂಚನೆ ಮಾಡಿದ್ದ. ನಂತರ ಹೂಡಿಕೆ ಮಾಡಿದ್ದ ಹಣವನ್ನು ಮರಳಿಸುವಂತೆ ಒತ್ತಾಯ ಮಾಡಿದರೂ ರಾಹುಲ್‌ ಎರಡು ಚೆಕ್ ನೀಡಿದ್ದ. ಚೆಕ್‌ನಿಂದಲೂ ಹಣ ವಾಪಸ್ ಆಗದ ಹಿನ್ನೆಲೆ ಸಂಜನಾ ಇಂದಿರಾನಗರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು.

  • ಸಂಜನಾ ಗಲ್ರಾನಿ ಮತ್ತೆ ಗರ್ಭಿಣಿ – 2ನೇ ಮಗುವಿನ ನಿರೀಕ್ಷೆಯಲ್ಲಿ ನಟಿ

    ಸಂಜನಾ ಗಲ್ರಾನಿ ಮತ್ತೆ ಗರ್ಭಿಣಿ – 2ನೇ ಮಗುವಿನ ನಿರೀಕ್ಷೆಯಲ್ಲಿ ನಟಿ

    ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ (Sanjana Galrani) ಅವರ ಮನೆಯಲ್ಲಿ ಸಂತಸ ಮನೆ ಮಾಡಿದೆ. ಸದ್ಯ ಸಿನಿಮಾಗಳಿಂದ (Cinema) ಆಗಿ ದೂರ ಸರಿದು ಕುಟುಂಬದೊಂದಿಗೆ ಸಂತಸದ ದಿನಗಳನ್ನು ಕಳೆಯುತ್ತಿರುವ ನಟಿ ಈಗ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

    ಸಿನಿಮಾಗಳಿಂದ ವಿರಾಮ ಪಡೆದುಕೊಂಡಿರುವ ನಟಿ, ಪತಿ ಅಜೀಜ್‌ ಪಾಷಾ ಮತ್ತು ಮಗ ಅಲಾರಿಕ್‌ ಜೊತೆ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್‌ ಆಗಿರುವ ಸಂಜನಾ ಮತ್ತೆ ತಾಯಿಯಾಗುತ್ತಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ತೆಲುಗಿನತ್ತ ಧರ್ಮ ಕೀರ್ತಿರಾಜ್- ಅಪ್ಸರ ರಾಣಿ ಜೊತೆ ಸಿನಿಮಾ

    ಸಂಜನಾ ಗಲ್ರಾನಿ ತಾವು ಮತ್ತೆ ಗರ್ಭಿಣಿಯಾಗಿರುವ ಸಂತಸದ ಸುದ್ದಿಯನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಸಿರು ಸೀರೆಯುಟ್ಟು, ಸೀಮಂತದ ಫೋಟೋಗಳು (Sanjana Galrani Photoshoot) ಮತ್ತು ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ಗೆ, ʻಈ ಯುಗಾದಿ ನನಗೆ ತುಂಬಾ ವಿಶೇಷವಾಗಿದೆ ಏಕೆಂದರೆ ನಮ್ಮ ಕುಟುಂಬದ ಹೊಸ ಸದಸ್ಯರು ಶೀಘ್ರದಲ್ಲೇ ನಮ್ಮೊಂದಿಗೆ ಸೇರಲು ನಾವು ಕಾಯುತ್ತಿದ್ದೇವೆ. ದಯವಿಟ್ಟು ನಿಮ್ಮ ಪ್ರಾರ್ಥನೆ ಮತ್ತು ಆಶೀರ್ವಾದದಲ್ಲಿ ನನ್ನನ್ನು ಇರಿಸಿʼ ಎಂದು ನಟಿ ಕ್ಯಾಪ್ಷನ್‌ ಸಹ ಕೊಟ್ಟಿದ್ದಾರೆ. ಸಂಜನಾ ಅವರ ಸೀಮಂತದ ಫೋಟೋಗಳು ಸಖತ್‌ ವೈರಲ್‌ ಆಗಿದ್ದು, ಅಭಿಮಾನಿಗಳು, ಸ್ನೇಹಿತರು ಮತ್ತು ಹಿತೈಶಿಗಳು ಶುಭ ಹಾರೈಸಿದ್ದಾರೆ.

    ತೆಲುಗು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಸಂಜನಾ, ಬಳಿಕ ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ಚಾನ್ಸ್‌ ಗಿಟ್ಟಿಸಿಕೊಂಡಿದ್ದರು. ಅಲ್ಲದೇ ತಮ್ಮ ಗ್ಲ್ಯಾಮರ್‌ ಪಾತ್ರಕ್ಕೆ ಹಲವು ಬಾರಿ ಸುದ್ದಿಯಾಗಿದ್ದರು. ಲಾಕ್‌ಡೌನ್‌ ಸಮಯದಲ್ಲಿ ಪ್ರೀತಿಸಿ ವೃತ್ತಿಯಲ್ಲಿ ವೈದ್ಯರಾಗಿರುವ ಅಜೀಜ್‌ ಪಾಷಾ ಅವರನ್ನು ವಿವಾಹವಾಗಿ ಸುದ್ದಿಯಲ್ಲಿದ್ದರು. ಇದನ್ನೂ ಓದಿ: ಯಶ್ ನಟನೆಯ ‘ಟಾಕ್ಸಿಕ್’ ಚಿತ್ರೀಕರಣಕ್ಕಾಗಿ ಮುಂಬೈಗೆ ಬಂದಿಳಿದ ನಯನತಾರಾ

    2022ರ ಮೇ ತಿಂಗಳಲ್ಲಿ ಸಂಜನಾ ಗಲ್ರಾನಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದರು. ತಂಗಿ ನಿಕ್ಕಿ ಗಲ್ರಾನಿ ಮದುವೆಯ ದಿನವೇ ಮಗುವಿನ ಆಗಮನವಾಗಿತ್ತು. ಅಜೀಜ್‌ ಪಾಷಾ ಮತ್ತು ಸಂಜನಾ ಸಂಪತಿಗೆ ಅಲಾರಿಕ್‌ ಎಂಬ ಹೆಸರಿನ ಮಗನಿದ್ದಾನೆ. ಇದನ್ನೂ ಓದಿ: EXCLUSIVE: ಆಶ್ರಯ ಇಲ್ಲದೆ ವೃದ್ಧಾಶ್ರಮ ಸೇರಿದ ಹಿರಿಯ ನಟಿ ಶೈಲಶ್ರೀ – ನಟಿಗೆ ಧನ ಸಹಾಯ ಮಾಡಿದ ದರ್ಶನ್

  • ನನ್ನ ಲೈಫ್‌ನಲ್ಲಿ ಆಗಿದ್ದು ಬೇರೆಯವರಿಗೆ ಆಗಬಾರದು: ಕಾಸ್ಟಿಂಗ್ ಕೌಚ್ ಬಗ್ಗೆ ಸಂಜನಾ ಗಲ್ರಾನಿ ಪ್ರತಿಕ್ರಿಯೆ

    ನನ್ನ ಲೈಫ್‌ನಲ್ಲಿ ಆಗಿದ್ದು ಬೇರೆಯವರಿಗೆ ಆಗಬಾರದು: ಕಾಸ್ಟಿಂಗ್ ಕೌಚ್ ಬಗ್ಗೆ ಸಂಜನಾ ಗಲ್ರಾನಿ ಪ್ರತಿಕ್ರಿಯೆ

    ಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಭುಗಿಲೆದ್ದ ಹಿನ್ನೆಲೆ ಸ್ಯಾಂಡಲ್‌ವುಡ್‌ನಲ್ಲೂ Sandalwood) ನಟಿಯರಿಗಾಗಿ ಕೇರಳದಂತೆಯೇ ತನಿಖಾ ಸಮಿತಿ ರಚಿಸುವಂತೆ ಆಗ್ರಹಿಸುತ್ತಿದ್ದಾರೆ. ಈ ಬೆನ್ನಲ್ಲೇ ಫೈರ್ ಸಂಸ್ಥೆ ಬಗ್ಗೆ ಮತ್ತು ಸ್ಯಾಂಡಲ್‌ವುಡ್ ಕಾಸ್ಟಿಂಗ್ ಕೌಚ್ (Casting Couch) ಬಗ್ಗೆ ಮಾತನಾಡಿದ್ದಾರೆ. ನನ್ನ ಲೈಫ್‌ನಲ್ಲಿ ಆಗಿದ್ದು, ಬೇರೆ ಅವರಿಗೆ ಆಗಬಾರದು. ಹೀರೋಯಿನ್ ಮಾಡ್ತೀನಿ ಅಂತ ತಪ್ಪು ದಾರಿಗೆ ಎಳೆಯುತ್ತಾರೆ ಎಂದು ‘ಪಬ್ಲಿಕ್‌ ಟಿವಿ’ಗೆ ಸಂಜನಾ ಗಲ್ರಾನಿ (Sanjjanaa Galrani) ಮಾತನಾಡಿದ್ದಾರೆ. ಇದನ್ನೂ ಓದಿ:ನಾನು ನಿರಪರಾಧಿ ಅಂತ ಸಾಬೀತುಪಡಿಸಲು ಯಾವ ಹಂತಕ್ಕೆ ಬೇಕಾದ್ರೂ ಹೋಗ್ತೀನಿ: ನಟ ನಿವಿನ್ ಪೌಲಿ

    ನಾನು ಈ ಹಿಂದೆಯೇ ಮೀಟೂ ಪ್ರಕರಣದಲ್ಲಿ ಮಾತಾಡಿದ್ದೆ, ಆಗ ಏನು ಆಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ನಡೆದಿದ್ದು ನಡೆದಂಗೆ ಹೇಳಿದ್ರೆ ಅದೇನೋ ಅಂತಾರಲ್ಲ ಹಾಗಾಯಿತು. ನನ್ನ ಲೈಫ್‌ನಲ್ಲಿ ನಡೆದಿದ್ದು, ಬೇರೆ ಅವರಿಗೆ ಆಗಬಾರದು. ಚಿತ್ರರಂಗಕ್ಕೆ ಬರುವ ಹೊಸ ನಟಿಯರಿಗೆ ಈ ರೀತಿ ತೊಂದರೆ ಆಗಬಾರದು. ಅವತ್ತು ಅದರಿಂದ ಹೊರಗೆ ಬಂದು 55 ಸಿನಿಮಾ ಮಾಡಿ ಗುರುತಿಸಿಕೊಂಡಿದ್ದೇನೆ. ಈಗಲೂ 2 ಸಿನಿಮಾ ಮಾಡುತ್ತಿದ್ದೇನೆ. ನನಗೆ ಆದ ಹಾಗೆ ಬೇರೆ ಯಾರಿಗೂ ಆಗಬಾರದು ಎಂದು ಮಾತನಾಡಿದ್ದಾರೆ.

    ‘ಫೈರ್’ ಎನ್ನುವ ಸಂಸ್ಥೆಯದು ಅದ್ಭುತವಾದ ಐಡಿಯಾ. ನಟ ಚೇತನ್ ಅವರು ನನಗೂ ಕರೆ ಮಾಡಿ ತಿಳಿಸಿದರು. ಇದು ಮುಂದೆವರೆಯಬೇಕು. ಸದ್ಯ ನಟಿಯರ ಕಡೆಯಿಂದ ಸರ್ಕಾರಕ್ಕೆ ಪತ್ರ ಹೋಗಿದೆ. ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡುವ ಜೊತೆ ಆಫೀಸ್ ಕೂಡ ವ್ಯವಸ್ಥೆ ಮಾಡಬೇಕಿದೆ. ಇದು ಆ್ಯಕ್ಟೀವ್ ಆಗಿ ನಡೆಯಬೇಕಿದೆ. ಇದನ್ನು ನಾವು ಎದುರು ನೋಡಬೇಕಿದೆ ಎಂದಿದ್ದಾರೆ.

    ಇನ್ನೂ ಕನ್ನಡ ಇಂಡಸ್ಟ್ರಿ ಕೆಟ್ಟ ಜಾಗ ಅಲ್ಲ. ಒಕ್ಕೂಟದಲ್ಲಿರೋ ನಟ, ನಿರ್ದೇಶಕ, ನಿರ್ಮಾಪಕರು ಒಳ್ಳೆಯವರು. ಒಕ್ಕೂಟದಲ್ಲಿ ಇರದೇ ಹೊರಗಡೆ ಸಿನಿಮಾ ಮಾಡ್ತೀನಿ, ಫೈನಾನ್ಸ್ ಮಾಡ್ತಿದ್ದೀನಿ ಅಂತಾ ಹೇಳಿಕೊಂಡು ಓಡಾಡುತ್ತಾರೆ. ಹೀರೋಯಿನ್ ಮಾಡ್ತೀನಿ ಚಾನ್ಸ್ ಕೊಡಿಸ್ತೀನಿ ಅಂತಾ ಹೇಳಿ ಕನ್ನಡ ಇಂಡಸ್ಟ್ರಿ ಹೆಸರು ಹಾಳು ಮಾಡುತ್ತಾರೆ ಎಂದು ನಟಿ ಸಂಜನಾ ಮಾತನಾಡಿದ್ದಾರೆ.

  • ನನಗೂ ಪೂಜಾಗೂ ದಂಡುಪಾಳ್ಯ ಟೈಮ್‌ನಲ್ಲಿ ಕೋಳಿ ಜಗಳ ಆಗಿತ್ತು- ಸಂಜನಾ ಗಲ್ರಾನಿ

    ನನಗೂ ಪೂಜಾಗೂ ದಂಡುಪಾಳ್ಯ ಟೈಮ್‌ನಲ್ಲಿ ಕೋಳಿ ಜಗಳ ಆಗಿತ್ತು- ಸಂಜನಾ ಗಲ್ರಾನಿ

    ಳೆ ಹುಡುಗಿ ಪೂಜಾ ಗಾಂಧಿ (Pooja Gandhi) ಅವರು ಮಂತ್ರ ಮಾಂಗಲ್ಯ ಪದ್ಧತಿಯಂತೆ ಹೊಸ ಬಾಳಿಗೆ ಇಂದು (ನ.29) ಕಾಲಿಟ್ಟಿದ್ದಾರೆ. ಪೂಜಾ-ವಿಜಯ್ ಮದುವೆಗೆ ಸಂಜನಾ ಗಲ್ರಾನಿ ಆಗಮಿಸಿ ಶುಭಕೋರಿದ್ದಾರೆ. ಇದನ್ನೂ ಓದಿ:ಪೂಜಾ ಗಾಂಧಿ ಮದುವೆಗೆ ಕೌಂಟ್‌ಡೌನ್-‌ ಮಳೆ ಹುಡುಗಿ ಫುಲ್‌ ಮಿಂಚಿಂಗ್

    ಪೂಜಾ ಅವರನ್ನ ನೋಡಿದ್ರೆ ಹೆಮ್ಮೆ ಆಗುತ್ತದೆ. ಬೇರೇ ರಾಜ್ಯದಿಂದ ಬಂದು ಕನ್ನಡ ಕಲಿತಿದ್ದಾರೆ. ಈಗ ಕರ್ನಾಟಕದ ಸೊಸೆ ಆಗಿದ್ದಾರೆ. ವಿಜಯ್ ತುಂಬಾ ಒಳ್ಳೆಯ ಹುಡುಗ. ನಾನು ಹುಡುಗನ ಕಡೆಯಿಂದ ಮದುವೆಗೆ ಬಂದಿದ್ದೀನಿ ಎಂದು ಸಂಜನಾ ಮಾತನಾಡಿದ್ದಾರೆ. ಬಳಿಕ ನನಗೂ ಪೂಜಾಗೂ ದಂಡುಪಾಳ್ಯ ಟೈಮ್‌ನಲ್ಲಿ ಕೋಳಿ ಜಗಳ ಆಗಿತ್ತು ಎಂದು ಹಳೆಯ ದಿನಗಳನ್ನ ನಟಿ ಸಂಜನಾ ಗಲ್ರಾನಿ (Sanjana Galrani) ಸ್ಮರಿಸಿದ್ದರು. ಬಳಿಕ ನವಜೋಡಿಗೆ ಶುಭ ಹಾರೈಸಿದ್ದರು.

    ಕಳೆದ 10 ವರ್ಷಗಳಿಂದ ವಿಜಯ್ ಮತ್ತು ಪೂಜಾ ಗಾಂಧಿ ಸ್ನೇಹಿತರಾಗಿದ್ದರು. ವಿಜಯ್ ಅವರಿಂದಲೇ ಪೂಜಾ ಗಾಂಧಿ ಕನ್ನಡ ಕಲಿತಿದ್ದರು. ಈ ಪರಿಚಯವೇ ಪ್ರೇಮಕ್ಕೆ ಮುನ್ನುಡಿ ಬರೆದಿದೆ. ಯಲಹಂಕದ ಖಾಸಗಿ ರೆಸಾರ್ಟ್‌ವೊಂದರಲ್ಲಿ ಪೂಜಾ ಗಾಂಧಿ ಮದುವೆಯಾಗಿದ್ದಾರೆ.

    ಪೂಜಾ ಗಾಂಧಿ ಬಿಳಿ ಸೀರೆಯಲ್ಲಿ ಮಿಂಚಿದ್ರೆ, ವಿಜಯ್ ಬಿಳಿ ಬಣ್ಣದ ಶೆರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ. 10 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ.

    ಯೋಗರಾಜ್ ಭಟ್, ಸುಧಾರಾಣಿ, ಶುಭ ಪೂಂಜಾ, ಸುಮನಾ ಕಿತ್ತೂರು, ಸಾಹಿತಿ ಜಯಂತ್ ಕಾಯ್ಕಿಣಿ ಸೇರಿದಂತೆ ಅನೇಕರು ಭಾಗಿಯಾಗಿ ನವಜೋಡಿಗೆ ಶುಭ ಕೋರಿದ್ದಾರೆ. ಮಳೆ ಹುಡುಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋದು ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ. ಅವರು ಶುಭಕೋರಿದ್ದಾರೆ.

  • ಸಂಭ್ರಮದಿಂದ ಬಕ್ರೀದ್ ಆಚರಿಸಿದ ನಟಿ ಸಂಜನಾ ಗಲ್ರಾನಿ

    ಸಂಭ್ರಮದಿಂದ ಬಕ್ರೀದ್ ಆಚರಿಸಿದ ನಟಿ ಸಂಜನಾ ಗಲ್ರಾನಿ

    ನ್ನಡದ ‘ಗಂಡ ಹೆಂಡತಿ’ (Ganda Hendti) ಸಿನಿಮಾ ಮೂಲಕ ಪರಿಚಿತರಾದ ನಟಿ ಸಂಜನಾ ಗಲ್ರಾನಿ (Sanjana Galrani) ಅವರು ಬಕ್ರೀದ್ (Bakrid) ಹಬ್ಬವನ್ನ ಖುಷಿ, ಸಂಭ್ರಮದಿAದ ಆಚರಿಸಿದ್ದಾರೆ. ಈ ಕುರಿತ ಫೋಟೋವನ್ನ ನಟಿ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಸಂಜನಾ ಮಾಡೆಲ್ ಆಗಿ ಮೊದಲು ಬಣ್ಣ ಹಚ್ಚಿದ್ರು. ಬಳಿಕ ಸ್ಯಾಂಡಲ್‌ವುಡ್‌ಗೆ ತಿಲಕ್‌ಗೆ ನಾಯಕಿಯಾಗಿ ‘ಗಂಡ ಹೆಂಡತಿ’ ಚಿತ್ರಕ್ಕೆ ಎಂಟ್ರಿ ಕೊಟ್ಟರು. ಮೊದಲ ಚಿತ್ರದಲ್ಲೇ ಭರವಸೆಯ ನಟಿಯಾಗಿ ಗಮನ ಸೆಳೆದರು. ಬಹುಭಾಷೆಗಳಲ್ಲಿ ನಾಯಕಿಯಾಗಿ ಮಿಂಚಿದ್ದರು. ಬಿಗ್ ಬಾಸ್ ಮನೆಗೆ ಸಂಜನಾ ಕಾಲಿಟ್ಟಿದ್ದರು. ಈ ಶೋನಲ್ಲೂ ಗಟ್ಟಿ ಸ್ಪರ್ಧಿಯಾಗಿ ಸಂಜನಾ ಕಾಣಿಸಿಕೊಂಡಿದ್ದರು.

    2020ರಲ್ಲಿ ಡ್ರಗ್ಸ್ ವಿಚಾರದಲ್ಲಿನ ಕಹಿ ಘಟನೆ ಮರೆತು, ಈಗ ಪತಿ ಅಜೀಜ್ ಪಾಷಾ ಜೊತೆ ಮದುವೆಯಾಗಿ ಖುಷಿಯಿಂದ ಜೀವನ ಸಾಗಿಸುತ್ತಿದ್ದಾರೆ. ಇಸ್ಲಾಂ ಧರ್ಮ ಪದ್ಧತಿಯನ್ನ ಅರಿತು ಸಂಜನಾ ಅನುಸರಿಸುತ್ತಿದ್ದಾರೆ. ಸದ್ಯ ಬಕ್ರೀದ್ ಹಬ್ಬದ ಸಂಭ್ರಮದ ಖುಷಿಯಲ್ಲಿದ್ದಾರೆ. ಅತ್ತೆ ಮನೆಯಲ್ಲಿ ಬಕ್ರೀದ್ ಹಬ್ಬ ಆಚರಿಸಿದ್ದರ ಬಗ್ಗೆ ನಟಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಶಾನುಭೋಗರ ಮಗಳಾದ ನಟ ಪ್ರಜ್ವಲ್ ಪತ್ನಿ ರಾಗಿಣಿ ಪ್ರಜ್ವಲ್

    ಇತ್ತೀಚಿಗೆ ಸಂಜನಾ ಮೆಕ್ಕಾ, ಮದೀನಾಗೆ ತೆರಳಿದ್ದರು. ಈಗ ಸಂಭ್ರದಿಂದ ಹಬ್ಬ ಆಚರಿಸಿದ್ದಾರೆ. ಎಲ್ಲರಿಗೂ ಬಕ್ರೀದ್ ಹಬ್ಬಕ್ಕೆ ಶುಭಾಶಯ ಕೂಡ ತಿಳಿಸಿದ್ದಾರೆ. ಈ ಕುರಿತ ಫೋಟೋ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಮಲಯಾಳಂ ಚಿತ್ರವೊಂದರ ಕಥೆ ಕೇಳಿ ನಟಿಸಲು ಸಂಜನಾ ಓಕೆ ಎಂದಿದ್ದಾರೆ. ಮಾಲಿವುಡ್ ನಟ ಶ್ರೀನಾಥ್ ಬಸಿ ನಾಯಕನಾಗಿರುವ ಈ ಚಿತ್ರಕ್ಕೆ ವಿಜಯ್ ಕುಮಾರ್ ನಿರ್ದೇಶನ ಮಾಡ್ತಿದ್ದಾರೆ. ಸಿನಿಮಾದಲ್ಲಿ ಸಂಜನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಕೆಲ ದಿನಗಳ ಹಿಂದೆ ಮಗು ಅಲಾರಿಕ್ ಜೊತೆ ಸಂಜನಾ ಅವರು ಶೂಟಿಂಗ್‌ಗಾಗಿ ಪ್ರಯಾಣ ಮಾಡಿದ್ದು, ನನ್ನ ತಾಯಿಯ ಬೆಂಬಲದಿಂದಲೇ ಸಾಧ್ಯವಾಯಿತು ಎಂದು ನಟಿ ತಿಳಿಸಿದ್ದರು. ದಂಡುಪಾಳ್ಯ-2 ಬಳಿಕ ಮೋಹನ್ ಲಾಲ್ ನಟನೆಯ ಆರಟ್ಟು ಮತ್ತು ಚೋರನ್ ಸಿನಿಮಾದಲ್ಲಿ ಕಡೆಯದಾಗಿ ಸಂಜನಾ ನಟಿಸಿದ್ದರು. ಇದೀಗ ಮಾಲಿವುಡ್‌ನ ಭಿನ್ನ ಕಥೆಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ನಟನೆಯತ್ತ ಮುಖ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತಿ- ಮಗುವಿನೊಂದಿಗೆ ಮೆಕ್ಕಾ ಮದೀನಾಗೆ ಸಂಜನಾ ಗಲ್ರಾನಿ ಭೇಟಿ

    ಪತಿ- ಮಗುವಿನೊಂದಿಗೆ ಮೆಕ್ಕಾ ಮದೀನಾಗೆ ಸಂಜನಾ ಗಲ್ರಾನಿ ಭೇಟಿ

    ಸ್ಯಾಂಡಲ್‌ವುಡ್ (Sandalwood) ನಟಿ ಸಂಜನಾ ಗಲ್ರಾನಿ (Sanjana Galrani) ಅಲಿಯಾಸ್ ಮಹಿರಾ (Mahira) ಅವರು ಪತಿ ಮತ್ತು ಮಗನೊಂದಿಗೆ ಮೆಕ್ಕಾ, ಮದೀನಾಗೆ ಭೇಟಿ ನೀಡಿದ್ದಾರೆ. ಈ ಕುರಿತ ಫೋಟೋಗಳನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:‘ಯಶ್ 19’ ಸಿನಿಮಾದ ಫೋಟೋ ಲೀಕ್? ರಾಕಿ ಭಾಯ್ ನಯಾ ಲುಕ್

    ಸಂಜನಾ ಅವರು ಡಾ. ಅಜೀಜ್ ಪಾಷಾರನ್ನ ಪ್ರೀತಿಸಿ ಮದುವೆಯಾಗಿದ್ದಾರೆ. ಇದೀಗ ಅಲಾರಿಕ್ ಎಂಬ ಮುದ್ದಾದ ಗಂಡು ಮಗುವಿನ ತಾಯಿಯಾಗಿದ್ದಾರೆ. ಮಗನ ಆರೈಕೆಯ ಜೊತೆಗೆ ಮಲಯಾಳಂ ಚಿತ್ರದ ಮೂಲಕ ಸಂಜನಾ ಇದೀಗ ನಟನೆಗೆ ಕಂಬ್ಯಾಕ್ ಆಗಿದ್ದಾರೆ.

    ಇದೀಗ ಇಸ್ಲಾಂ ಧರ್ಮದ ಪವಿತ್ರ ಸ್ಥಳವಾದ ಮೆಕ್ಕಾ, ಮದೀನಾಗೆ (Mecca Medina) ಕುಟುಂಬದ ಜೊತೆ ಸಂಜನಾ ಭೇಟಿ ನೀಡಿದ್ದಾರೆ. ನಟಿ, ಮೆಕ್ಕಾ ಮದೀನಾ ಭೇಟಿಯ ವಿಡಿಯೋವನ್ನು ಅವರ ಯೂಟ್ಯೂಬ್ ಚಾನೆಲ್ ಮೂಲಕವಾಗಿ ಹಂಚಿಕೊಂಡಿದ್ದಾರೆ. ಜೊತೆಗೆ ಅಲ್ಲಿನ ರೀತಿ ರಿವಾಜುಗಳನ್ನು ಕೂಡಾ ವಿವರಿಸಿದ್ದಾರೆ.

    ಮೇ 19 ರಂದು ಮಗ ಅಲಾರಿಕ್ ಮೊದಲ ವರ್ಷದ ಹುಟ್ಟುಹಬ್ಬವನ್ನು ಸಂಜನಾ ಗಲ್ರಾನಿ ಪವಿತ್ರ ಯಾತ್ರಾಸ್ಥಳ ಮೆಕ್ಕಾದಲ್ಲಿ ಆಚರಿಸಿದ್ದಾರೆ. ಈ ಫೋಟೋಗಳು ಇದೀಗ ವೈರಲ್ ಆಗಿವೆ. ಅಭಿಮಾನಿಗಳು ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ 2018ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ತಮ್ಮ ಹೆಸರನ್ನು ಮಹಿರಾ ಎಂದು ಬದಲಿಸಿಕೊಂಡಿದ್ದಾರೆ.

  • ನಟನೆಗೆ ಸಂಜನಾ ಗಲ್ರಾನಿ ಕಂಬ್ಯಾಕ್ – ಮಾಲಿವುಡ್‌ನತ್ತ ನಟಿ

    ನಟನೆಗೆ ಸಂಜನಾ ಗಲ್ರಾನಿ ಕಂಬ್ಯಾಕ್ – ಮಾಲಿವುಡ್‌ನತ್ತ ನಟಿ

    ‘ಗಂಡ ಹೆಂಡತಿ’ (Ganda Hendthi) ಖ್ಯಾತಿಯ ನಟಿ ಸಂಜನಾ ಗಲ್ರಾನಿ (Sanjana Galrani) ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಮತ್ತೆ ನಟನೆಗೆ ಕನ್ನಡದ ನಟಿ ಸಂಜನಾ ಕಂಬ್ಯಾಕ್ ಆಗಿದ್ದಾರೆ.  ತಾಯ್ತನದ ನಂತರ ಒಪ್ಪಿಕೊಂಡ ಮೊದಲ ಸಿನಿಮಾ ಇದಾಗಿದೆ.

    ಸಂಜನಾ ಗಲ್ರಾನಿ ಅವರು ಮದುವೆಯ ಬಳಿಕ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದರು. ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದ ನಟಿ, ಮಗ ಅಲಾರಿಕ್ ಪಾಲನೆಯಲ್ಲಿ ತೊಡಗಿದ್ದರು. ಈಗ ಮತ್ತೆ ಕ್ಯಾಮೆರಾ ಮುಂದೆ ಮಿಂಚಲು ನಟಿ ಸಂಜನಾ ರೆಡಿಯಾಗಿದ್ದಾರೆ. ಮಲಯಾಳಂ (Mollywood) ಸಿನಿಮಾ ಮೂಲಕ ಸಂಜನಾ ನಟನೆಗೆ ಮರಳುತ್ತಿದ್ದಾರೆ.

    ಮಲಯಾಳಂ ಚಿತ್ರವೊಂದರ ಕಥೆ ಕೇಳಿ ನಟಿಸಲು ಸಂಜನಾ ಓಕೆ ಎಂದಿದ್ದಾರೆ. ಮಾಲಿವುಡ್ ನಟ ಶ್ರೀನಾಥ್ ಬಸಿ (Srinath Bhasi) ನಾಯಕನಾಗಿರುವ ಈ ಚಿತ್ರಕ್ಕೆ ವಿಜಯ್ ಕುಮಾರ್ (Vijay Kumar) ನಿರ್ದೇಶನ ಮಾಡ್ತಿದ್ದಾರೆ. ಸಿನಿಮಾದಲ್ಲಿ ಸಂಜನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಒಂದು ವಾರದಿಂದ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಇದನ್ನೂ ಓದಿ:ಪ್ಯಾಂಟ್ ಧರಿಸದೇ ರಸ್ತೆಗಿಳಿದ ನಿರೂಪಕಿಗೆ ನೆಟ್ಟಿಗರಿಂದ ಕ್ಲಾಸ್

    11 ತಿಂಗಳ ಮಗು ಅಲಾರಿಕ್  (Alarik) ಜೊತೆ ಸಂಜನಾ ಅವರು ಶೂಟಿಂಗ್‌ಗಾಗಿ ಪ್ರಯಾಣ ಮಾಡಿದ್ದು, ನನ್ನ ತಾಯಿಯ ಬೆಂಬಲದಿಂದಲೇ ಸಾಧ್ಯವಾಯಿತು ಎಂದು ನಟಿ ತಿಳಿಸಿದ್ದಾರೆ. ದಂಡುಪಾಳ್ಯ-2 ಬಳಿಕ ಮೋಹನ್ ಲಾಲ್ ನಟನೆಯ ‘ಆರಟ್ಟು’ ಮತ್ತು ‘ಚೋರನ್’ ಸಿನಿಮಾದಲ್ಲಿ ಕಡೆಯದಾಗಿ ಸಂಜನಾ ನಟಿಸಿದ್ದರು. ಇದೀಗ ಮಾಲಿವುಡ್‌ನ ಭಿನ್ನ ಕಥೆಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ನಟನೆಯತ್ತ ಮುಖ ಮಾಡಿದ್ದಾರೆ.

  • ನಟಿ ಸಂಜನಾ ಗಲ್ರಾನಿಗೆ ಕೊಲೆ ಬೆದರಿಕೆ : ಎಫ್ಐಆರ್‌ ದಾಖಲು

    ನಟಿ ಸಂಜನಾ ಗಲ್ರಾನಿಗೆ ಕೊಲೆ ಬೆದರಿಕೆ : ಎಫ್ಐಆರ್‌ ದಾಖಲು

    ಸಿನಿಮಾ ರಂಗದಿಂದ ದೂರವಿದ್ದು, ಸದ್ಯ ಮಗುವಿನ ಪಾಲನೆ ಪೋಷನೆಯಲ್ಲಿ ಬ್ಯುಸಿಯಾಗಿರುವ ನಟಿ ಸಂಜನಾ ಗಲ್ರಾನಿ (Sanjana Galrani) ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸಂಜನಾಗೆ ಕೊಲೆ ಬೆದರಿಕೆ (Death threat) ಹಾಕಲಾಗಿದೆ ಎಂದು ಆರೋಪ ಮಾಡಿರುವ ಅವರು, ಬೆದರಿಕೆ ಹಾಕಿದವರು ವಿರುದ್ಧ ದೂರು ದಾಖಲಿಸಿದ್ದಾರೆ.

    ಪಾರ್ಕಿಂಗ್ ವಿಚಾರವಾಗಿ ಸ್ಥಳೀಯ ನಿವಾಸಿಗಳ ಜೊತೆ ಗಲಾಟೆ ನಡೆದಿದ್ದು, ಕೊಲೆ ಮಾಡ್ತಿನಿ ಅಂತ ಬೆದರಿಕೆ ಹಾಕಿದ್ದಾರೆ ಎಂದು ಸಂಜನಾ ಇಂದಿರಾನಗರ ಠಾಣೆಗೆ ದೂರು ನೀಡಿದ್ದಾರೆ. ಇಂದಿರಾನಗರದ (Indiranagar) ಧೂಪನಹಳ್ಳಿಯಲ್ಲಿ ವಾಸವಾಗಿರುವ ಸಂಜನಾ ಗಲ್ರಾನಿ ಮನೆ ಬಳಿ ಯಶೋಧಮ್ಮ ಹಾಗೂ ರಾಜಣ್ಣ ಎಂಬುವವರ ಮನೆಯೂ ಇದೆ. ಇವರ ಮೇಲೆಯೇ ಸಂಜನಾ ದೂರು ನೀಡಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ನಮ್ಮ ಭಾರತದ ಹೆಮ್ಮೆ ಎಂದು ಹಾಡಿ ಹೊಗಳಿದ ಕಂಗನಾ

    ಯಶೋಧಮ್ಮ ಹಾಗೂ ರಾಜಣ್ಣ ಎನ್ನುವವರು ರಸ್ತೆಗೆ ಅಡ್ಡಲಾಗಿ ಕಾರುಗಳನ್ನ ನಿಲ್ಲಿಸ್ತಾರಂತೆ. ಇದನ್ನ ಪ್ರಶ್ನೆ ಮಾಡಿದ್ರೆ ಕೊಲೆ ಮಾಡ್ತಿನಿ, ನಾವು ನಲವತ್ತು ವರ್ಷದಿಂದ ವಾಸ ಇದ್ದೀವಿ ಅಂತ ಆವಾಜ್ ಹಾಕಿದ್ದಲ್ಲದೆ, ವೇಶ್ಯೆ ಎಂದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ ಸಂಜನಾ ಗಲ್ರಾನಿ. ಸದ್ಯ ನ್ಯಾಯಲಯದ ಅನುಮತಿ ಮೇರೆಗೆ ಎಫ್ಐಆರ್‌ (FIR) ದಾಖಲಾಗಿದೆ.

  • ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ನಿಕ್ಕಿ ಗಲ್ರಾನಿ ದಂಪತಿ

    ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ನಿಕ್ಕಿ ಗಲ್ರಾನಿ ದಂಪತಿ

    ನ್ನಡ ಮತ್ತು ತೆಲುಗು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟಿ ನಿಕ್ಕಿ ಗಲ್ರಾನಿ(Nikki Galrani), ಸದ್ಯ ವೈವಾಹಿಕ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ನಿಕ್ಕಿ ದಂಪತಿಯ ಬದುಕಲ್ಲಿ ಹೊಸ ಸದಸ್ಯನ ಆಗಮನವಾಗಲಿದೆ ಎನ್ನಲಾಗುತ್ತಿದೆ. ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಸಂಜನಾ ಗಲ್ರಾನಿ(Sanjana Galrani) ಸಹೋದರಿ ನಿಕ್ಕಿ ತೆಲುಗಿನ ಸಿನಿಮಾಗಳ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ. ಕಳೆದ ಮೇನಲ್ಲಿ ಆದಿ ಪಿನಿಸೆಟ್ಟಿ ಜೊತೆ ಹಸೆಮಣೆ ಏರಿದ್ದ ಈ ಚೆಲುವೆ, ವೈವಾಹಿಕ ಬದುಕಲ್ಲಿ ಹಾಯಾಗಿದ್ದಾರೆ. ಸದ್ಯದಲ್ಲಿಯೇ ಈ ಜೋಡಿ ಗುಡ್ ನ್ಯೂಸ್ ಕೊಡುವ ಮುನ್ಸೂಚನೆ ಕೊಟ್ಟಿದ್ದಾರೆ.

    ಇಬ್ಬರೂ ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಗುರುಹಿರಿಯರ ಸಮ್ಮುಖದಲ್ಲಿ ಆದಿ ಮತ್ತು ನಿಕ್ಕಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವಿವಾಹದ ಕೆಲವೇ ತಿಂಗಳುಗಳ ನಂತರ ನಿಕ್ಕಿ ಪ್ರೆಗ್ನೆಂಟ್ ಆಗಿದ್ದಾರೆ. ಸೂಕ್ತ ಸಮಯದಲ್ಲಿ ಅಧಿಕೃತವಾಗಿ ಫ್ಯಾನ್ಸ್‌ಗೆ ತಿಳಿಸಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.

    ಇನ್ನೂ ನಿಕ್ಕಿ ಗಲ್ರಾನಿ ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ೩೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುದ್ದು ಮಗನನ್ನ ಪರಿಚಯಿಸಿದ ಸಂಜನಾ ಗಲ್ರಾನಿ

    ಮುದ್ದು ಮಗನನ್ನ ಪರಿಚಯಿಸಿದ ಸಂಜನಾ ಗಲ್ರಾನಿ

    ಸ್ಯಾಂಡಲ್‌ವುಡ್ ಬ್ಯೂಟಿ ಸಂಜನಾ ಗಲ್ರಾನಿ ಮಗನ ಲಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮುದ್ದು ಮಗನ ಜೊತೆ ಕ್ಯೂಟ್ ಫೋಟೋಶೂಟ್ ಮಾಡಿಸಿ, ಮಗನನ್ನ ಪರಿಚಯಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಚಂದನವನದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಛಾಪೂ ಮೂಡಿಸಿದ್ದ ನಟಿ ಸಂಜನಾ ಮನೆಯಲ್ಲಿ ಸಂತಸ ಮನೆ ಮಾಡಿದೆ. ಎರಡು ತಿಂಗಳ ಹಿಂದಷ್ಟೇ ಮುದ್ದ ಮಗನ ಆಗಮನವಾಗಿದೆ.‌ ಇದನ್ನೂ ಓದಿ:ಮಾಲಿವುಡ್ ನಟ ಶರತ್ ಚಂದ್ರನ್ ನಿಧನ

    ಮಗನ ಮುಖ ಕಾಣದಂತೆ ನೋಡಿಕೊಳ್ಳುತ್ತಿದ್ದ ನಟಿ ಈಗ ಮಗ ಅಲಾರಿಕ್‌ನ್ನ ಕ್ಯೂಟ್ ಫೋಟೋಶೂಟ್ ಮಾಡಿಸಿ, ಅಭಿಮಾನಿಗಳಿಗೆ ಸಂಜನಾ ಪರಿಚಯ ಮಾಡಿಕೊಟ್ಟಿದ್ದಾರೆ. ವಿಭಿನ್ನ ಪರಿಕರಗಳ ಜೊತೆಗೆ ಚೆಂದದ ಫೋಟೋ ಮತ್ತು ವಿಡಿಯೋ ಶೇರ್ ಮಾಡಿದ್ದಾರೆ.

    ಇನ್ನು ಮುದ್ದು ಮಗನ ಫೋಟೋಶೂಟ್‌ನ್ನ ಎರಡು ಥೀಮ್‌ನಲ್ಲಿ ಸಂಜನಾ ಮಾಡಿಸಿದ್ದಾರೆ. ಪತಿ ಅಜೀಜ್‌ ಪಾಷಾ ಡಾಕ್ಟರ್‌ ಆಗಿರುವ ಕಾರಣ, ಡಾಕ್ಟರ್ ಮತ್ತು ಆಕ್ಟರ್ ಥೀಮ್‌ನಲ್ಲಿ ಮಗನ ಫೋಟೋಶೂಟ್ ಮಾಡಿಸಿದ್ದಾರೆ. ಆಕ್ಟರ್ ಥೀಮ್‌ನ ಫೋಟೋ ಅಪ್‌ಲೋಡ್ ಮಾಡಿದ್ದು, ಶೀಘ್ರದಲ್ಲಿಯೇ ಡಾಕ್ಟರ್ ಥೀಮ್ ಫೋಟೋಶೂಟ್ ಶೇರ್ ಮಾಡಲಿದ್ದಾರೆ. ಸದ್ಯ ಸಂಜನಾ ಮಗನ ಚೆಂದದ ಫೋಟೋಶೂಟ್ ನೋಡಿ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]