Tag: Sanjana Anand

  • ಚಂದನ್ ಶೆಟ್ಟಿ ಸೂತ್ರಧಾರಿಯಿಂದ ಹೊಸ ವರ್ಷಕ್ಕೆ ‘ಡ್ಯಾಶ್’ ಸಾಂಗ್

    ಚಂದನ್ ಶೆಟ್ಟಿ ಸೂತ್ರಧಾರಿಯಿಂದ ಹೊಸ ವರ್ಷಕ್ಕೆ ‘ಡ್ಯಾಶ್’ ಸಾಂಗ್

    ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಜನಮನಸೂರೆಗೊಂಡಿರುವ ಚಂದನ್ ಶೆಟ್ಟಿ (Chandan Shetty), ಈಗ ನಾಯಕನಾಗೂ ಜನಪ್ರಿಯ. ಚಂದನ್ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ ” ಸೂತ್ರಧಾರಿ” (Sutradhara) ಚಿತ್ರದ “ಡ್ಯಾಶ್” ಸಾಂಗ್  ಬಿಡುಗಡೆಯಾಗಿದೆ. ಕೆಲವೇ ದಿನಗಳಲ್ಲಿ ಹೊಸವರ್ಷ ಆರಂಭವಾಗಲಿದೆ. ಹೊಸವರ್ಷದ ಸಂಭ್ರಮಾಚರಣೆಗೆ ಇದು ಅದ್ಭುತ ಗೀತೆಯಾಗಲಿದೆ.

    “ಸೂತ್ರಧಾರಿ” ಸಿನಿಮಾದ “ಡ್ಯಾಶ್” ಹಾಡು ಇಂದು ಬಿಡುಗಡೆಯಾಗಿದೆ. ಹೊಸವರ್ಷಕ್ಕೆ ನಮ್ಮ ಚಿತ್ರತಂಡದಿಂದ ಈ ಹಾಡು ಉಡುಗೊರೆ. “ಡ್ಯಾಶ್” ಎಂದರೆ ಏನು ಅಂತ ಎಲ್ಲಾ ಕೇಳುತ್ತಿದ್ದಾರೆ? ಡ್ಯಾಶ್ ಎಂದರೆ ಖಾಲಿ ಜಾಗ. ಅಲ್ಲಿ ನೀವು ಏನು ಬೇಕಾದರೂ ಬರೆದುಕೊಳ್ಳಬಹುದು. ಈ ಹಾಡಿಗೆ ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಸಂಜನಾ ಆನಂದ್  (Sanjana Anand)ಈ ಹಾಡಿಗೆ ನನ್ನ ಜೊತೆ ಹೆಜ್ಜೆ ಹಾಕಿದ್ದಾರೆ. ನಿರ್ಮಾಪಕ ನವರಸನ್ ಅದ್ದೂರಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಾನು ಹಾಗೂ ಚೇತನ್ ಕುಮಾರ್ ಈ ಹಾಡನ್ನು ಬರೆದಿದ್ದೇವೆ. ನಾನೇ ಸಂಗೀತ ನೀಡಿದ್ದೀನಿ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಒಂದುವರೆ ಲಕ್ಷಕ್ಕೂ ಅಧಿಕ ಜನರು ಈ ಹಾಡನ್ನು ವೀಕ್ಷಿಸಿದ್ದಾರೆ ಎಂದರು ಚಂದನ್ ಶೆಟ್ಟಿ. ಇದನ್ನೂ ಓದಿ: ನಡುರಾತ್ರಿಯಲ್ಲಿ ಎಲಿಮಿನೇಷನ್: ಬಿಗ್ ಬಾಸ್ ಮನೆಯಿಂದ ಆರ್ಯವರ್ಧನ್ ಔಟ್

    ನಾನು ಮೊದಲ ಬಾರಿಗೆ ಸ್ಪೆಷಲ್ ಸಾಂಗ್ ಒಂದರಲ್ಲಿ ನಟಿಸಿದ್ದೇನೆ. ಚಂದನ್ ಶೆಟ್ಟಿ ಅವರ ಜೊತೆ ಡ್ಯಾನ್ಸ್ ಮಾಡಿರುವುದು ಖುಷಿಯಾಗಿದೆ. ಹಾಡು ಅದ್ಭುತವಾಗಿದೆ ಎಂದರು ಸಂಜನಾ ಆನಂದ್. ಚಂದನ್ ಶೆಟ್ಟಿ ಅವರು ಹೊಸವರ್ಷಕ್ಕೆ ಹೊಸ ಹಾಡೊಂದನ್ನು ಬಿಡುಗಡೆ ಮಾಡುತ್ತಾರೆ. ಈ ಬಾರಿ ನಮ್ಮ ಚಿತ್ರದ ಹಾಡೊಂದನ್ನು ಹೊಸವರ್ಷಕ್ಕೆ ಬಿಡುಗಡೆ ಮಾಡುವ ಆಸೆಯಿತ್ತು. ಆದರೆ ಸಮಯ ಕಡಿಮೆ ಇತ್ತು. ಚಂದನ್ ಶೆಟ್ಟಿ ಅವರ ಬಳಿ ಈ ವಿಷಯ ಹೇಳಿದೆ. ಕೇವಲ ಎರಡು ದಿನಗಳ ಹಿಂದೆ ಈ ಹಾಡಿನ ಚಿತ್ರೀಕರಣವಾಗಿ ಈಗ ಬಿಡುಗಡೆಯಾಗಿದೆ. ಈ ಚಿತ್ರದ ನಾಯಕಿ ಅಪೂರ್ವ. ಆದರೆ ಈ ವಿಶೇಷ ಹಾಡಿಗೆ ಚಂದನ್ ಶೆಟ್ಟಿ ಅವರ ಜೊತೆ ಸಂಜನಾ ಆನಂದ್ ಹೆಜ್ಜೆ ಹಾಕಿದ್ದಾರೆ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದರು ನಿರ್ಮಾಪಕ ನವರಸನ್.

    ನಿರ್ದೇಶಕ ಕಿರಣ್ ಕುಮಾರ್ ಹಾಡಿನ ಬಗ್ಗೆ ಮಾಹಿತಿ ನೀಡಿದರು. ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು ಹಾಗೂ ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಸೇರಿದಂತೆ ಅನೇಕ ತಂತ್ರಜ್ಞರು ಚಿತ್ರದ ಕುರಿತು ಮಾತನಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಾಪಕರಾದ ಸಂಜಯ್ ಗೌಡ, ರವಿ ಗೌಡ, ಗೋವಿಂದರಾಜು, ರಾಜೇಶ್ ಮುಂತಾದವರು “ಸೂತ್ರಧಾರಿ” ಹಾಡಿಗೆ ಹಾರೈಸಿದರು. ಕಿರುತೆರೆ ಸೂಪರ್ ಸ್ಟಾರ್ ಎಂದು ಖ್ಯಾತರಾಗಿರುವ ಬೇಬಿ ವಂಶಿಕಾ ಕೆಲವು ಸಮಯ ಕಾರ್ಯಕ್ರಮದ ನಿರೂಪಣೆ ಮಾಡಿದ್ದು ವಿಶೇಷವಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಚಂದನ್ ಶೆಟ್ಟಿ ಹೊಸ ಸಿನಿಮಾಗೆ ಸಲಗ ಖ್ಯಾತಿಯ ಸಂಜನಾ ಆನಂದ್ ನಾಯಕಿ

    ಚಂದನ್ ಶೆಟ್ಟಿ ಹೊಸ ಸಿನಿಮಾಗೆ ಸಲಗ ಖ್ಯಾತಿಯ ಸಂಜನಾ ಆನಂದ್ ನಾಯಕಿ

    ನ್ನಡದ ಹೆಸರಾಂತ ಯುವ ಗಾಯಕ ಚಂದನ್ ಶೆಟ್ಟಿ (Chandan Shetty) ನಾಯಕನಾಗಿ ನಟಿಸುತ್ತಿರುವ ಸೂತ್ರಧಾರ (Sutradhara) ಚಿತ್ರಕ್ಕೆ ನಾಯಕಿಯಾಗಿ ಸಲಗ ಖ್ಯಾತಿಯ ಸಂಜನಾ ಆನಂದ್ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ. ತಮ್ಮ ಹಾಡುಗಳ ಮೂಲಕ ಪಡ್ಡೆ ಹುಡುಗರ ಮತ್ತು ಹುಡುಗಿಯರ ಮನಗೆದ್ದ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿರುವ ಸಿನಿಮಾವಿದು.

    ನವರಸನ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಈಗಾಗಲೆ ಶೇಕಡಾ 90ರಷ್ಟು ಸಿನೆಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು ಚಿತ್ರದ ಮೊದಲ ಹಾಡಿನ ಚಿತ್ರೀಕರಣ ಇನೋವೇಟೀವ್ ಫಿಲ್ಮ್ ಸಿಟಿಯಲ್ಲಿ ಅದ್ದೂರಿಯಾಗಿ ಸೆಟ್ಟೆರಿದೆ. ಈ ಚಿತ್ರದ ಹೀರೋ ಇಂಟ್ರೊಡಕ್ಷನ್ ಸಾಂಗ್ ಆಗಿದ್ದು ಸಂಗೀತ ನಿರ್ದೇಶಕ ಮತ್ತು ಗಾಯಕನಾಗಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ನನಗೆ, ನೇಹಾಗೆ ಕಾಂಪಿಟೇಶನ್ ಇತ್ತು: ಅನುಪಮಾ

    ಈ ಹಾಡಿನಲ್ಲಿ ಮೊದಲ ಬಾರಿಗೆ ಚಂದನ್ ಶೆಟ್ಟಿ ಜೋಡಿಯಾಗಿ ಸಲಗ ಖ್ಯಾತಿಯ ಸಂಜನಾ ಆನಂದ್ (Sanjana Anand) ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಈ ಹಾಡನ್ನು ಇದೇ ಡಿಸೆಂಬರ್ 27ರಂದು ಬೆಳಗ್ಗೆ 10.35ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಈ ಹಾಡು ಹೊಸ ವರ್ಷದ ಸಂಭ್ರಮಾಚರಣೆಗೆ ಹೇಳಿ ಮಾಡಿಸಿದ ಹಾಗಿದೆ ಎಂದಿದ್ದಾರೆ ನಿರ್ಮಾಪಕ ನವರಸನ್.

    Live Tv
    [brid partner=56869869 player=32851 video=960834 autoplay=true]

  • ತೆಲುಗಿಗೆ ಎಂಟ್ರಿ ಕೊಟ್ಟ ಸಲಗನ ಸಂಗಾತಿ ಸಂಜನಾ ಆನಂದ್

    ತೆಲುಗಿಗೆ ಎಂಟ್ರಿ ಕೊಟ್ಟ ಸಲಗನ ಸಂಗಾತಿ ಸಂಜನಾ ಆನಂದ್

    ದುನಿಯಾ ವಿಜಿ ನಟಿಸಿ, ನಿರ್ದೇಶನ ಮಾಡಿದ್ದ ‘ಸಲಗ’ ಸಿನಿಮಾ ಮೂಲಕ ಸಿನಿಮಾ ದುನಿಯಾಗೆ ಮತ್ತಷ್ಟು ಹತ್ತಿರ ಆದವರು. ಸಂಜನಾ ಆನಂದ್. ಈ ಸಿನಿಮಾದಲ್ಲಿ ಬೋಲ್ಡ್ ಮಾತುಗಳ ಮೂಲಕವೇ ಪ್ರೇಕ್ಷಕರನ್ನು ಸೆಳೆದವರು. ಈ ಚಿತ್ರದ ನಟನೆಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಈ ಸಿನಿಮಾ ಇವರಿಗೆ ದೊಡ್ಡ ಬ್ರೇಕ್ ಕೊಟ್ಟಿದ್ದು, ತೆಲುಗು ಸಿನಿಮಾಗಳಲ್ಲಿಯೂ ಭರ್ಜರಿ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

    ದುನಿಯಾ ವಿಜಯ್ ಕೂಡ ತೆಲುಗಿಗೆ ಹಾರಿದ ಬೆನ್ನಲ್ಲೇ ಸಂಜನಾ ಕೂಡ ಅದೇ ಹಾದಿ ಹಿಡಿದಿದ್ದು, ಚಿತ್ರ ಪ್ರೇಮಿಗಳಲ್ಲಿ ಡಬಲ್ ಸಂಭ್ರಮ ತಂದಿದೆ. ದುನಿಯಾ ವಿಜಯ್ ತೆಲುಗಿನ ಸೂಪರ್ ಸ್ಟಾರ್ ಬಾಲಯ್ಯ ಜತೆ ಸಿನಿಮಾ ಮಾಡುತ್ತಿದ್ದರೆ, ಸಂಜನಾ ‘ನೇನು ಮೀಕು ಬಾಗಾ ಕಾವಾಲ್ಸಿ ನಿವಾಡಿನಿ’ ಸಿನಿಮಾದ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾದಲ್ಲಿ ಇವರು ‘ತೇಜು’ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಪಾತ್ರದ ಫಸ್ಟ್ ಲುಕ್ ಇದೀಗ ರಿಲೀಸಾಗಿದೆ. ಇದನ್ನೂ ಓದಿ: ಕನ್ನಡದ ಎವರ್‌ಗ್ರೀನ್ ಸಾಂಗ್‍ಗೆ ದನಿಯಾದ ರಾಬರ್ಟ್ ರಾಣಿ!

    ಶೀತಲ್ ಶೆಟ್ಟಿ ನಿದೇಶನದ ‘ವಿಂಡೋಸೀಟ್’ ಸಿನಿಮಾದಲ್ಲಿಯೂ ಸಂಜನಾ ನಟಿಸಿದ್ದು, ಈ ಸಿನಿಮಾ ರಿಲೀಸ್ಗೆ ರೆಡಿ ಇದೆ. ಅಲ್ಲದೆ ಸಂಜನಾ, ಅಜಯ್ ರಾವ್ ಜೊತೆ ‘ಶೋಕಿವಾಲ’ ಚಿತ್ರದಲ್ಲೂ ನಟಿಸಿದ್ದು, ಈ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.

    Sanjana Anand Ultra HD Images

    ತಬಲಾ ನಾಣಿ ಜೊತೆಗೆ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ಮೂಲಕ ಸಿನಿರಂಗಕ್ಕೆ ಪ್ರವೇಶ ಮಾಡಿದವರು ಸಂಜನಾ, ನಂತರ ನಿವೇದಿತಾ ಶಿವರಾಜ್‍ಕುಮಾರ್ ನಿರ್ಮಾಣದ ‘ಹನಿಮೂನ್’ ವೆಬ್ ಸಿರೀಸ್‍ನಲ್ಲಿಯೂ ನಟಿಸಿದ್ದರು. ಈ ವೆಬ್ ವರ್ಷನ್ ತೆಲುಗಿನಲ್ಲೂ ತೆರೆಕಂಡಿರುವುದು ವಿಶೇಷ.

  • ‘ಸಲಗ’ ಕ್ರೇಜ್ ಭಲೇ ಜೋರು- ಭಕ್ತಗಣಕ್ಕೆ ಶರಣೆಂದ ಬ್ಲ್ಯಾಕ್ ಕೋಬ್ರಾ

    ‘ಸಲಗ’ ಕ್ರೇಜ್ ಭಲೇ ಜೋರು- ಭಕ್ತಗಣಕ್ಕೆ ಶರಣೆಂದ ಬ್ಲ್ಯಾಕ್ ಕೋಬ್ರಾ

    ಬೆಂಗಳೂರು: ಗಾಂದೀನಗರದ ಗಲ್ಲಿ ಗಲ್ಲಿಗಳಲ್ಲಿ, ವಿಜಿ ಅಭಿಮಾನಿ ದೇವರುಗಳಲ್ಲೀಗ ಸಲಗ ಜಪ ಶುರುವಾಗಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ ಕುಂತ್ರು, ನಿಂತ್ರು ಸಲಗ ಸಲಗ ಅಂತಿದ್ದಾರೆ. ಸೆಟ್ಟೇರಿದ ದಿನವೇ ಒಂದು ಬಝ್ ಕ್ರಿಯೇಟ್ ಮಾಡಿದ್ದ ಸಿನಿಮಾ ಈಗ ವಿಜಿ ಭಕ್ತಗಣದಲ್ಲಿ ಹೈವೋಲ್ಟೇಜ್ ಕ್ರೇಜ್ ಕ್ರಿಯೇಟ್ ಮಾಡಿದೆ. ಒಂಟಿ ಸಲಗದಂತೆ ಎಲ್ಲಾ ಅಡೆತಡೆಗಳನ್ನು ದಾಟಿ ಫೈನಲಿ ನಾಡ ಹಬ್ಬಕ್ಕೆ ಚಿತ್ರಮಂದಿರಕ್ಕೆ ಭರ್ಜರಿ ಎಂಟ್ರಿ ಕೊಡೋಕೆ ‘ಸಲಗ’ ಸಕಲ ಸಜ್ಜಾಗಿದೆ.

    ವಿಜಿ ನಿರ್ದೇಶನದ ಸಲಗ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆ ಟೀಸರ್, ಹಾಡುಗಳು ಸೋಶಿಯಲ್ ಮೀಡಿಯಾಗಳಲ್ಲಿ ಧೂಳ್ ಎಬ್ಬಿಸಿ ಸಿನಿರಸಿಕರ ಕಿಕ್ಕೇರಿಸಿವೆ. ಒಂದು ಕಡೆ ವಿಜಿ ಚೊಚ್ಚಲ ನಿರ್ದೇಶನ, ಇನ್ನೊಂದು ಕಡೆ ಮಾಸ್ ಸಬ್ಜೆಕ್ಟ್, ಇದಕ್ಕೂ ಮೀರಿ ದುನಿಯಾ ವಿಜಿ ಡಾಲಿಯ ಹೈವೋಲ್ಟೇಜ್ ಕಾಂಬಿನೇಷನ್, ಇವೆಲ್ಲವೂ ಚಿತ್ರದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ದುಪ್ಟಟ್ಟು ಮಾಡಿದ್ದು, ಬ್ಲ್ಯಾಕ್ ಕೋಬ್ರಾ ಚಿತ್ರಮಂದಿರದಲ್ಲಿ ಗೆದ್ದು ಬೀಗೋದೊಂದೇ ಬಾಕಿ ಇದೆ.ಇದನ್ನೂ ಓದಿ: ನಟ ದುನಿಯಾ ವಿಜಯ್ ನೋಡಲು ಮುಗಿಬಿದ್ದ ಅಭಿಮಾನಿಗಳು!

    ‘ಸಲಗ’ ಮೇಲೆ ವಿಜಿ ಭಕ್ತಗಣ ತೋರುತ್ತಿರುವ ಪ್ರೀತಿ ಮತ್ತೊಂದು ದುನಿಯಾ ವಿಜಿ ಮುಂದೆ ಸೃಷ್ಟಿಯಾಗುವ ಮಟ್ಟಿಗಿದೆ. ಅಭಿಮಾನಿಗಳ ಪ್ರೀತಿ ಕಂಡು ಸ್ವತಃ ವಿಜಿಯೇ ಮೂಕವಿಸ್ಮಿತರಾಗಿದ್ದಾರೆ. ಸಾಮಾಜಿಕ ಜಾಲತಾಣದ ಅಂಗಳದಲ್ಲಂತೂ ಸಲಗ ಹವಾ ಜೋರಾಗಿದೆ. ಚಿತ್ರದ ಪ್ರತಿ ಅಪ್ಡೇಟ್‍ನ್ನೂ ಅಭಿಮಾನಿಗಳು ತೇರು ಹೊತ್ತು ಸಂಭ್ರಮಿಸುವ ರೀತಿ ಸಂಭ್ರಮಿಸುತ್ತಿದ್ದಾರೆ. ಇಷ್ಟಕ್ಕೆ ಈ ಅಭಿಮಾನ ಮುಗಿಯಲಿಲ್ಲ, ವಿಜಿ ಡೈ ಹಾರ್ಡ್ ಫ್ಯಾನ್ಸ್ ಅಂತೂ ಕೇಳೋದೇ ಬೇಡ, ಕೈ ಮೇಲೆ, ಎದೆ ಮೇಲೆ ಸಲಗ ಟ್ಯಾಟೂ ಹಾಕಿಸಿಕೊಂಡು ಆರಾಧಿಸುತ್ತಿದ್ದಾರೆ. ಕೆಲವರಂತೂ ಹೇರ್ ಸ್ಟೈಲ್ ನಲ್ಲೂ ಸಲಗ ಎಂದು ಡಿಸೈನ್ ಮಾಡಿಸಿಕೊಂಡಿದ್ದಾರೆ. ಈ ಪ್ರೀತಿ, ಅಭಿಮಾನ ಕಂಡು ಖುದ್ದು ವಿಜಿಯೇ ಶರಣು ಶರಣೆಂದಿದ್ದಾರೆ. ಈ ಕ್ರೇಜ್ ಕೇವಲ ಗಾಂದೀನಗರದ ಗಲ್ಲಿಗಳಲ್ಲಿ ಮಾತ್ರವಲ್ಲ, ಕರುನಾಡಿನ ಮನೆ ಮನದಲ್ಲೂ ಶುರುವಾಗಿದೆ ಅನ್ನೋದೇ ಬಲು ವಿಶೇಷ.

    ‘ಸಲಗ’ ಚಿತ್ರಮಂದಿರಕ್ಕೆ ಬರೋದನ್ನೇ ಕಾದು ಕುಳಿತಿರುವ ಭಕ್ತಗಣಕ್ಕೆ ಹೈವೋಲ್ಟೇಜ್ ಟ್ರೇಲರ್ ಸದ್ಯದಲ್ಲೇ ಉಡುಗೊರೆಯಾಗಿ ನೀಡಲಿದೆ ಚಿತ್ರತಂಡ. ರೌಡಿಸಂ ಕಥಾನಕ, ಚರಣ್ ರಾಜ್ ಸಂಗೀತ ನಿರ್ದೇಶನ, ಮಾಸ್ತಿ ಸಂಭಾಷಣೆ, ವಿಜಿ ಮಾಸ್ ಅವತಾರ, ಡಾಲಿಯ ಖಾಕಿ ಖದರ್ ಎಲ್ಲವೂ ಮೇಳೈಸಿರುವ ಸಲಗ ನಾಡಹಬ್ಬಕ್ಕೆ ಥಿಯೇಟರ್ ನಲ್ಲಿ ದರ್ಬಾರ್ ಶುರುಮಾಡಲಿದೆ. ಇದನ್ನೂ ಓದಿ: 10 ವರ್ಷದ ಹಿಂದಿನ ಫೋಟೋ ಹಂಚಿಕೊಂಡು ಪತಿಗೆ ಪ್ರೇರಣಾ ವಿಶ್

  • ‘ವಿಂಡೋಸೀಟ್’ ಎರಡನೇ ಲಿರಿಕಲ್ ವೀಡಿಯೋ ಡಿ.18ಕ್ಕೆ ರಿಲೀಸ್

    ‘ವಿಂಡೋಸೀಟ್’ ಎರಡನೇ ಲಿರಿಕಲ್ ವೀಡಿಯೋ ಡಿ.18ಕ್ಕೆ ರಿಲೀಸ್

    ನಿರೂಪ್ ಭಂಡಾರಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ವಿಂಡೋಸೀಟ್’ ಸ್ಯಾಂಡಲ್‍ವುಡ್ ಅಂಗಳದಲ್ಲಿ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಒಂದೊಂದೇ ಸ್ಯಾಂಪಲ್‍ಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ‘ವಿಂಡೋಸೀಟ್’ ಚಿತ್ರತಂಡ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ ಮಾಡಲು ಸಜ್ಜಾಗಿದೆ.

    ಈಗಾಗಲೇ ಯೋಗರಾಜ್ ಭಟ್ ಸಾಹಿತ್ಯ ಕೃಷಿಯಲ್ಲಿ ಅರಳಿರೋ ‘ಅತಿ ಚೆಂದದ ಹೂಗೊಂಚಲು’ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿ ಹಿಟ್ ಆಗಿದೆ. ಇದೀಗ ಅದೇ ಖುಷಿಯಲ್ಲಿ ಚಿತ್ರತಂಡ ‘ಖಾಲಿ ಆಕಾಶ’ ಎಂಬ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ ಮಾಡುತ್ತಿದ್ದು, ಡಿಸೆಂಬರ್ 18ಕ್ಕೆ ಆನಂದ್ ಆಡಿಯೋನಲ್ಲಿ ಈ ಲಿರಿಕಲ್ ವೀಡಿಯೋ ಬಿಡುಗಡೆಯಾಗುತ್ತಿದೆ. ಮೊದಲ ಲಿರಿಕಲ್ ವೀಡಿಯೋಗೆ ಸಿಕ್ಕ ಪ್ರತಿಕ್ರಿಯೆಯಿಂದ ಖುಷಿಯಲ್ಲಿರುವ ‘ವಿಂಡೋಸೀಟ್’ ಚಿತ್ರತಂಡ ‘ಖಾಲಿ ಆಕಾಶ’ ಹಾಡಿಗೆ ಯಾವ ರೀತಿ ಪ್ರೇಕ್ಷಕ ಪ್ರಭುವಿನ ಪ್ರತಿಕ್ರಿಯೆ ಸಿಗುತ್ತೆ ಅನ್ನೋದನ್ನ ಎದುರು ನೋಡುತ್ತಿದೆ.

    ‘ವಿಂಡೋಸೀಟ್’ ರೊಮ್ಯಾಂಟಿಕ್ ಥ್ರಿಲ್ಲರ್ ಜಾನರ್ ಸಿನಿಮಾವಾಗಿದ್ದು ನಟಿ ಶೀತಲ್ ಶೆಟ್ಟಿ ಈ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಜಾಕ್ ಮಂಜುನಿರ್ಮಾಣದಲ್ಲಿ ಮೂಡಿ ಬರ್ತಿರೋ ‘ವಿಂಡೋಸೀಟ್’ ಚಿತ್ರದಲ್ಲಿ ಸಂಜನಾ ಆನಂದ್, ಅಮೃತಾ ಐಯ್ಯಂಗಾರ್ ನಿರೂಪ್ ಭಂಡಾರಿ ಜೊತೆ ನಾಯಕಿಯರಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ರವಿಶಂಕರ್, ಮಧುಸೂದನ್ ರಾವ್, ಲೇಖಾ ನಾಯ್ಡು, ಸೂರಜ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಚಿತ್ರದ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಮೂಡಿ ಬಂದಿವೆ.

  • ಕಿಕ್ ಕೊಡ್ತಿದೆ ‘ಸೂರಿ ಅಣ್ಣನ’ ಹಾಡು

    ಕಿಕ್ ಕೊಡ್ತಿದೆ ‘ಸೂರಿ ಅಣ್ಣನ’ ಹಾಡು

    ಸ್ಯಾಂಡಲ್‍ವುಡ್ ನಲ್ಲಿ ಸಖತ್ ಕ್ರೇಜ್ ಹುಟ್ಟಿಸಿರೋ ಸಿನಿಮಾ ಸಲಗ. ದುನಿಯಾ ವಿಜಿ ನಿರ್ದೇಶಿಸಿ ನಟಿಸುತ್ತಿರುವ ಈ ಚಿತ್ರದ ಫಸ್ಟ್ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಂಗ್ ರಿಲೀಸ್ ಮಾಡಿದ್ದಾರೆ. ಸದ್ಯ ‘ಸೂರಿ ಅಣ್ಣ’ ಹಾಡು ಸೆನ್ಸೇಷನಲ್ ಕ್ರಿಯೇಟ್ ಮಾಡಿದ್ದು ಸಖತ್ ಕಿಕ್ ಕೊಡುತ್ತಿದೆ. ಟಗರು ಚಿತ್ರದ ಟೈಟಲ್ ಟ್ರ್ಯಾಕ್ ಹಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಆಂಟೋನಿ ದಾಸ್ ‘ಸೂರಿ ಅಣ್ಣ’ ಸಾಂಗ್ ಗೆ ಧ್ವನಿಯಾಗಿ ಮತ್ತೆ ಸ್ಯಾಂಡಲ್‍ವುಡ್ ನಲ್ಲಿ ಮನೆ ಮಾತಾಗಿದ್ದಾರೆ.

    ಟಗರು ಖ್ಯಾತಿಯ ಚರಣ್ ರಾಜ್ ಮಾಸ್ ಮ್ಯೂಸಿಕ್ ಮತ್ತೆ ಮ್ಯಾಜಿಕ್ ಕ್ರಿಯೇಟ್. ಅಲ್ಲದೇ ಚರಣ್ ರಾಜ್ ಹಾಗೂ ಆಂಟೋನಿ ದಾಸ್ ಕಾಂಬಿನೇಷನ್ ಮತ್ತೊಂದು ಹಿಟ್ ಸಾಂಗ್ ನೀಡುವಲ್ಲಿ ಯಶಸ್ವಿಯಾಗಿದೆ.

    ‘ಸಲಗ’ ಮೂಲಕ ನಿರ್ದೇಶಕನಾಗಿ ಬಡ್ತಿ ಹೊಂದಿರುವ ಬ್ಲ್ಯಾಕ್ ಕೋಬ್ರಾ ಮೇಕಿಂಗ್ ನಲ್ಲಿ ತಮ್ಮ ನಿರ್ದೇಶನದ ಝಲಕ್ ತೋರಿಸಿದ್ರು. ಈಗ ಚಿತ್ರದ ಹಾಡು ಕೂಡ ಹಿಟ್ ಆಗಿದ್ದು ಮೊದಲ ನಿರ್ದೇಶನದಲ್ಲೆ ಜಯಭೇರಿ ಬಾರಿಸೋ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಒಟ್ನಲ್ಲಿ ಚಿತ್ರಕ್ಕೆ ಹುಟ್ಟಿರೋ ಕ್ರೇಜ್ ನೋಡಿ ವಿಜಿ ಅಭಿಮಾನಿಗಳು ಹಾಗೂ ಚಿತ್ರತಂಡ ಸಖತ್ ಥ್ರಿಲ್ ಆಗಿದ್ದಾರೆ.

    ಟಗರು ಖ್ಯಾತಿಯ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸಂಜನಾ ಆನಂದ್ ನಾಯಕಿಯಾಗಿ ವಿಜಿ ಜೊತೆ ಸ್ಕೀನ್ ಶೇರ್ ಮಾಡಿದ್ದಾರೆ. ಫಸ್ಟ್ ಲುಕ್, ಮೇಕಿಂಗ್ ಮತ್ತು ಹಾಡುಗಳು ಮೂಲಕ ಬಝ್ ಕ್ರಿಯೇಟ್ ಮಾಡಿರೋ ಸಲಗ ಸದ್ಯದಲ್ಲೆ ಟೀಸರ್, ಟ್ರೇಲರ್ ಮೂಲಕ ಮಾಸ್ ಪ್ರಿಯರ ಮನತಣಿಸಲಿದೆ.

  • ನಕ್ಕು ನಿರಾಳವಾಗಲು ನೋಡಲೇ ಬೇಕಾದ ಚಿತ್ರ ಕೆಮಿಸ್ಟ್ರಿ ಆಫ್ ಕರಿಯಪ್ಪ!

    ನಕ್ಕು ನಿರಾಳವಾಗಲು ನೋಡಲೇ ಬೇಕಾದ ಚಿತ್ರ ಕೆಮಿಸ್ಟ್ರಿ ಆಫ್ ಕರಿಯಪ್ಪ!

    ಬೆಂಗಳೂರು: ಸಮಸ್ಯೆಗಳು ಏನೇ ಇದ್ದರೂ ನಗುಮುಖದಿಂದಲೇ ಎದುರುಗೊಂಡರೆ ಎಲ್ಲವೂ ಸುಖಮಯವಾಗಿರುತ್ತದೆ ಅಂತೊಂದು ಮಾತಿದೆ. ಅದರ ಸಾರವನ್ನೇ ಆತ್ಮವಾಗಿಸಿಕೊಂಡು ಭರಪೂರ ನಗುವಿನ ಒಡ್ಡೋಲಗದಲ್ಲಿಯೇ ಗಂಭೀರ ವಿಚಾರವನ್ನ ಹೇಳೋ ವಿಭಿನ್ನ ಬಗೆಯ ಚಿತ್ರ ಕೆಮಿಸ್ಟ್ರಿ ಆಫ್ ಕರಿಯಪ್ಪ. ಇಲ್ಲಿ ಎಲ್ಲರ ಬದುಕಿಗೂ ಹತ್ತಿರಾದ ಗಂಭೀರ ವಿಚಾರಗಳಿವೆ. ಭಾವನಾತ್ಮಕ ಸನ್ನಿವೇಶಗಳೂ ಇವೆ. ಪ್ರೀತಿ, ಪ್ರೇಮ ಸೇರಿದಂತೆ ಎಲ್ಲವೂ ಇವೆ. ಆದರೆ ಯಾವುದೂ ಗೋಜಲಾಗದಂತೆ ನೋಡುಗರನ್ನೆಲ್ಲ ಜಂಜಾಟ ಮರೆತು ನಗುವಂತೆ ಮಾಡೋ ಸಿನಿಮಾ ಕೆಮಿಸ್ಟ್ರಿ ಆಫ್ ಕರಿಯಪ್ಪ.

    ಪೋಸ್ಟರ್‍ಗಳ ಮೂಲಕವೇ ಇದು ಭಿನ್ನ ಜಾಡಿನ ಚಿತ್ರ ಅನ್ನೋ ಸುಳಿವು ಸಿಕ್ಕಿತ್ತು. ಟ್ರೈಲರ್ ಹೊರ ಬಂದಾಗ ಈ ಸಿನಿಮಾ ಪೋಲಿತನ ಹೊದ್ದ ಸಂಭಾಷಣೆಗಳಿಂದಲೇ ಶೃಂಗರಿಸಲ್ಪಟ್ಟಿದೆಯಾ ಎಂಬ ಗುಮಾನಿಯೂ ಕಾಡಿತ್ತು. ಆದರೆ ಈ ಸಿನಿಮಾ ನೋಡಿದ ಪ್ರತಿಯೊಬ್ಬರ ಮುಖದಲ್ಲಿಯೂ ವಿಶಿಷ್ಟವಾದ ಚಿತ್ರವೊಂದನ್ನು ನೋಡಿದ ತೃಪ್ತಿಯ ಮಂದಹಾಸ ಸ್ಪಷ್ಟವಾಗಿಯೇ ಮೂಡಿಕೊಳ್ಳುತ್ತದೆ. ಇದುವೇ ಡಿಎಸ್ ಮಂಜುನಾಥ್ ನಿರ್ಮಾಣ ಮಾಡಿರೋ ಕುಮಾರ್ ನಿರ್ದೇಶನದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಗೆಲುವಿನ ಮೊದಲ ಹೆಜ್ಜೆ!

    ಈ ಸಿನಿಮಾ ಕಥೆ ತೀರಾ ಸಂಕೀರ್ಣವಾದದ್ದೇನೂ ಅಲ್ಲ. ಆದರೆ ಅದನ್ನು ಹೇಳಿರೋ ರೀತಿ, ದೃಶ್ಯ ಕಟ್ಟಿರೋ ಜಾಣ್ಮೆಯೇ ಎಲ್ಲರಿಗೂ ಆಪ್ತವಾಗಿಸುತ್ತದೆ. ಮಧ್ಯಮ ವರ್ಗದ ಅಪ್ಪ ಅಮ್ಮ ಮತ್ತು ಅವರಿಗೊಬ್ಬ ಮಗ ಉತ್ತರ ಕುಮಾರ. ಎದೆಮಟ್ಟ ಬೆಳೆದ ಮಗನಿಗೆ ಊರು ತುಂಬಾ ನೂರಾರು ಹುಡುಗೀರನ್ನ ನೋಡಿದರೂ ಸಂಬಂಧ ಕುದುರಿಕೊಳ್ಳೋದಿಲ್ಲ. ಇದರಿಂದಾಗಿ ಈ ಪುಟ್ಟ ಕುಟುಂಬದ ಯಜಮಾನ ಕರಿಯಪ್ಪನಿಗೆ ಮಹಾ ತಲೆನೋವು ಶುರುವಾಗಿ ಬಿಡುತ್ತದೆ. ಒಂದು ಕಡೆ ಮಗನ ವಯಸ್ಸು ಮದುವೆಯ ಗಡಿ ದಾಟುತ್ತಿದೆ. ಇನ್ನೊಂದು ಕಡೆ ಯಾವ ಸಂಬಂಧವೂ ಕುದುರುತ್ತಿಲ್ಲ ಅನ್ನೋ ಸಂಕಟದಲ್ಲಿ ಕರಿಯಪ್ಪ ಇರುವಾಗಲೇ ಪುತ್ರ ಉತ್ತರ ಕುಮಾರ ಚೆಂದದ ಹುಡುಗಿಯೊಬ್ಬಳಿಗೆ ಕಾಳು ಹಾಕಲಾರಂಭಿಸಿರುತ್ತಾನೆ.

    ಹೀಗೆ ಪ್ರೀತಿಸಿ ಮದುವೆಯಾಗೋ ಉತ್ತರ ಕುಮಾರನಿಗೆ ಮೊದಲ ರಾತ್ರಿಯ ದಿನವೇ ಮರ್ಮಾಘಾತ ಮಾಡೋ ಅಂಶ ಯಾವುದು, ಒಂದು ಏಜಿನಲ್ಲಿ ಹೆಣ್ಣುಮಕ್ಕಳು ಆತುರದಿಂದ ವರ್ತಿಸೋದರಿಂದಾಗಿ ಏನೇನೆಲ್ಲ ಸಂಭವಿಸುತ್ತದೆ ಅನ್ನೋ ಕುತೂಹಲ ತಣಿಸಿಕೊಳ್ಳಲು ನೇರವಾಗಿ ಚಿತ್ರ ಮಂದಿರಕ್ಕೆ ತೆರಳಿ. ಅಲ್ಲಿ ಕರಿಯಪ್ಪನ ಕೆಮಿಸ್ಟ್ರಿ ನಿಮ್ಮನ್ನು ಭರಪೂರವಾಗಿ ನಗಿಸುತ್ತಲೇ ಭಾವುಕರನ್ನಾಗಿಸುತ್ತದೆ. ಮತ್ತೆ ನಗುವಿನ ಕಡಲಿಗೆ ತಳ್ಳಿ ಖುಷಿಗೊಳಿಸುತ್ತದೆ. ಈ ಸಿನಿಮಾದ ಅಸಲೀ ಯಶಸ್ಸಿನ ಗುಟ್ಟಿರೋದೇ ಅಲ್ಲಿ.

    ನಿರ್ದೇಶಕ ಕುಮಾರ್ ಪ್ರತೀ ಹಂತದಲ್ಲಿಯೂ ಸೂಕ್ಷ್ಮವಾಗಿಯೇ ಕಾರ್ಯ ನಿರ್ವಹಿಸಿದ್ದಾರೆ. ಅದರಿಂದಲೇ ಅವರು ಗೆದ್ದಿದ್ದಾರೆ. ನಾಯಕ ಚಂದನ್ ಮತ್ತು ನಾಯಕಿ ಸಂಜನಾ ಆನಂದ್ ಕೂಡಾ ಚೆಂದಗೆ ನಟಿಸಿದ್ದಾರೆ. ಕರಿಯಪ್ಪನ ಪಾತ್ರಕ್ಕೆ ಜೀವ ತುಂಬಿರೋ ತಬಲಾ ನಾಣಿ ಇಲ್ಲಿ ಬೇರೆಯದ್ದೇ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲ ಪಾತ್ರವರ್ಗವೂ ಆಪ್ತವಾಗಿದೆ. ಬದುಕಿನ ಕಥೆಯನ್ನು ಹಾಸ್ಯದ ಮೂಲಕವೇ ಹೇಳೋ ಕೆಮಿಸ್ಟ್ರಿ ಆಫ್ ಕರಿಯಪ್ಪ ಎಲ್ಲರಿಗೂ ಇಷ್ಟವಾಗೋ ಚಿತ್ರ ಅನ್ನೋದರಲ್ಲಿ ಸಂದೇಹವಿಲ್ಲ.

    ರೇಟಿಂಗ್- 4/5 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv