ಕನ್ನಡದ ಮತ್ತೋರ್ವ ನಟಿ ಸಂಜನಾ ಆನಂದ್ ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ‘ನೇನು ಮೀಕು ಬಾಗ ಕಾವಲ್ಸಿನವಾಡಿನಿ’ ಚಿತ್ರದಲ್ಲಿ ನಟಿಸಿದ್ದ ಸಂಜನಾ ಈಗ ಮತ್ತೊಂದು ತೆಲುಗು ಚಿತ್ರಕ್ಕೆ ಓಕೆ ಎಂದಿದ್ದಾರೆ. ಸತ್ಯದೇವ್ ನಟನೆಯ ‘ಫುಲ್ ಬಾಟಲ್’ ಚಿತ್ರದಲ್ಲಿ (Full Bottle) ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಸದ್ಯದಲ್ಲೇ ಈ ಚಿತ್ರದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.
ರ‍್ಯಾಪರ್ ಚಂದನ್ ಶೆಟ್ಟಿ (Chandan Shetty) ಅವರು ನಿವೇದಿತಾ (Niveditha Gowda) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ್ಮೇಲೆ ಸಂಜನಾ ಜೊತೆ ಹೆಸರು ಸದ್ದು ಮಾಡಿತ್ತು. ‘ಸಲಗ’ ನಟಿ ಸಂಜನಾ (Sanjana Anand) ಜೊತೆ ಚಂದನ್ 2ನೇ ಮದುವೆ ಆಗ್ತಾರೆ ಎಂದೇ ಸುದ್ದಿ ಹರಿದಾಡಿತ್ತು. ಅದಕ್ಕೆಲ್ಲಾ ಈಗ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಈ ಗಾಸಿಪ್ ಹೇಗೆ ಶುರುವಾಯ್ತು ಗೊತ್ತಿಲ್ಲ. ಈ ವಿಚಾರ ಸುಳ್ಳು ಎಂದಿದ್ದಾರೆ.
ಸಂಜನಾ ಆನಂದ್ ಜೊತೆ 2ನೇ ಮದುವೆ ಆಗ್ತಾರೆ ಎಂದು ಹರಿದಾಡುತ್ತಿದ್ದ ಸುದ್ದಿ ಬಗ್ಗೆ ಚಂದನ್ ಶೆಟ್ಟಿ ಮಾತನಾಡಿ, ಈ ರೀತಿ ಸುದ್ದಿ ಹರಿದಾಡೋದು ಕಾಮನ್. ಯಾರು ಗಾಸಿಪ್ ಶುರು ಮಾಡಿದ್ರು ಗೊತ್ತಿಲ್ಲ. ಈಗಿನ ಸೋಶಿಯಲ್ ಮೀಡಿಯಾ ಆ ರೀತಿ ಇದೆ. ಏನು ಮಾಡೋಕೆ ಆಗಲ್ಲ. ಯಾರೋ ಏನೋ ಒಂದು ಪೋಸ್ಟ್ ಹಾಕಿದ್ರೆ, ಅದನ್ನೇ ನಿಜ ಎಂದು ಜನ ನಂಬುತ್ತಾರೆ. ಆದರೆ ಈ ವಿಚಾರ ನನ್ನ ವೈಯಕ್ತಿಕ ಜೀವನಕ್ಕೆ ಅಷ್ಟಾಗಿ ಪರಿಣಾಮ ಬೀರಲಿಲ್ಲ. ಪಬ್ಲಿಕ್ ಫಿಗರ್ ಅಂದಾಗ ಹೀಗೆ ಸುದ್ದಿ ಹಬ್ಬೋದು ಕಾಮನ್, ಈ ವಿಚಾರ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ನಿರ್ದೇಶಕನ ಜೊತೆ ಶಾರುಖ್ ಖಾನ್ ಸಿನಿಮಾ
ಇತ್ತ ಸಂಜನಾ ಆನಂದ್ ಕೂಡ ಮಾತನಾಡಿ, ಎಲ್ಲರೂ ಕಾಲ್ ಮಾಡಿ, ಚಂದನ್ ಜೊತೆ ಮದುವೆನಾ? ಎಂದೆಲ್ಲಾ ಕೇಳುತ್ತಿದ್ದರು. ಆ ರೀತಿ ನಮ್ಮ ನಡುವೆ ಏನಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಂದಹಾಗೆ, ‘ಸೂತ್ರಧಾರಿ’ ಸಿನಿಮಾದಲ್ಲಿ ಚಂದನ್ ಶೆಟ್ಟಿ ಜೊತೆ ಸಂಜನಾ ಸೊಂಟ ಬಳುಕಿಸಿದ್ದಾರೆ. ‘ಡ್ಯಾಶ್’ ಎಂಬ ಸ್ಪೆಷಲ್ ಹಾಡಿಗೆ ಅವರು ಹೆಜ್ಜೆ ಹಾಕಿದ್ದಾರೆ. ಈ ಸಾಂಗ್ ರಿಲೀಸ್ ಆಗ್ತಿದ್ದಂತೆ ಚಂದನ್ ಮತ್ತು ಸಂಜನಾ ಮದುವೆ ಆಗ್ತಾರೆ ಎಂದೆಲ್ಲಾ ಸುದ್ದಿ ಹಬ್ಬಿತ್ತು. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅದಕ್ಕೆಲ್ಲಾ ನಟ ಸ್ಪಷ್ಟನೆ ನೀಡಿದ್ದಾರೆ.
ದೊಡ್ಮನೆ ಕುಡಿ ಯುವರಾಜ್‌ಕುಮಾರ್ (Yuva Rajkumar) ಅವರು ‘ಯುವ’ ಸಿನಿಮಾ ಬಳಿಕ ಎರಡನೇ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ‘ಎಕ್ಕ’ ಸಿನಿಮಾದಲ್ಲಿ ಯುವಗೆ ನಾಯಕಿ ಯಾರು? ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ‘ಸಲಗ’ ಬ್ಯೂಟಿ ಸಂಜನಾ ಆನಂದ್ (Sanjana Anand) ಹೀರೋಯಿನ್ ಆಗಿದ್ದಾರೆ.
‘ಎಕ್ಕ’ ಸಿನಿಮಾ ಶೂಟಿಂಗ್ ಭರದಿಂದ ನಡೆಯುತ್ತಿದೆ. ಈಗಾಗಲೇ ಯುವನ ರಕ್ತಸಿಕ್ತ ಅವತಾರದ ಪೋಸ್ಟರ್ ನೋಡಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಹೀಗಿರುವಾಗ ‘ಎಕ್ಕ’ (Ekka) ಅಡ್ಡಾಗೆ ನಾಯಕಿಯಾಗಿ ‘ಸಲಗ’ ನಟಿ ಸಂಜನಾ ಎಂಟ್ರಿ ಕೊಟ್ಟಿದ್ದಾರೆ. ಯುವ ಮತ್ತು ಸಂಜನಾ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವ ಪೋಸ್ಟರ್ ಅನ್ನು ಸಂಕ್ರಾಂತಿ ಹಬ್ಬದಂದು ಚಿತ್ರತಂಡ ರಿವೀಲ್ ಮಾಡಿದೆ. ‘ತೊದಲು ಪ್ರೀತಿಯ ಮೊದಲ ಪರಿಚಯ’ ಎಂದು ಪೋಸ್ಟರ್‌ಗೆ ಅಡಿಬರಹ ನೀಡಿದ್ದಾರೆ.
ಇನ್ನೂ ರೋಹಿತ್ ಪದಕಿ ನಿರ್ದೇಶನದ ‘ಎಕ್ಕ’ ಒಬ್ಬ ಯುವಕನ ಕಥೆಯನ್ನು ಹೇಳುತ್ತದೆ. ಒಬ್ಬ ಮನುಷ್ಯನು ಭೂಗತ ಲೋಕಕ್ಕೆ ತುತ್ತಾದಾಗ, ಆತನಿಗೆ ಆಗುವ ಅನುಭವಗಳನ್ನು ಹೇಳುವ ಕಥೆಯೇ ‘ಎಕ್ಕ’ ಸಿನಿಮಾ. ‘ಎಕ್ಕ’ ಚಿತ್ರದಲ್ಲಿ ಯುವ ರಾಜ್ ಕುಮಾರ್, ಸಂಪದಾ, ಅತ್ತುಲ್ ಕುಲಕರ್ಣೀ, ಶ್ರುತಿ ಕೃಷ್ಣ, ರಾಹುಲ್ ದೇವ್ ಶೆಟ್ಟಿ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಿಕಥೆಯನ್ನು ರೋಹಿತ್ ಪದಕಿ ಮತ್ತು ವಿಕ್ರಮ್ ಹತ್ವಾರ್ ರಚಿಸಿದ್ದಾರೆ.
ಈ ಚಿತ್ರವನ್ನು ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಪಿ.ಆರ್.ಕೆ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ, ಜಯಣ್ಣ ಮತ್ತು ಭೋಗೇಂದ್ರ ಜಯಣ್ಣ ಫಿಲಂಸ್ ಲಾಂಛನದಡಿಯಲ್ಲಿ ಹಾಗು ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಕೆ.ಆರ್.ಜಿ.ಸ್ಟುಡಿಯೋಸ್ ಲಾಂಛನದಡಿಯಲ್ಲಿ ನಿರ್ಮಿಸಲ್ಲಿದ್ದಾರೆ. ಈ ಚಿತ್ರವು ಈ ವರ್ಷ ಜೂನ್ 6ರಂದು ರಿಲೀಸ್ ಆಗಲಿದೆ.
ಸಹಜ ಅಭಿನಯ, ಸರಳ ಸೌಂದರ್ಯದಿಂದಲೇ ಸ್ಯಾಂಡಲ್ ವುಡ್ ನ್ಯೂ ಕ್ರಶ್ ಎನಿಸಿಕೊಂಡಿರುವ ಸಂಜನಾ ಆನಂದ್ (Sanjana Anand) ಹೊಸ ಫೋಟೋಶೂಟ್ ನಲ್ಲಿ ಭಾಗಿಯಾಗಿದ್ದಾರೆ. ಈ ಫೋಟೋಗಳು ಪಡ್ಡೆಗಳ ನಿದ್ದೆ ಹಾಳು ಮಾಡುವೆ. ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿರುವ ಸಂಜನಾ, ರಸಿಕರ ಎದೆ ಬಡಿತ ಹೆಚ್ಚಿಸಿದ್ದಾರೆ.
ಸದ್ಯ ಸಂಜನಾ ಆನಂದ್ ಮುಧೋಳ್ (Mudhol) ಹೆಸರಿನ ಸಿನಿಮಾ ಬಳಗ ಸೇರಿಕೊಂಡಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಸಂಜನಾ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋ ಜೊತೆ ತೆರೆಹಂಚಿಕೊಳ್ಳುವ ಅವಕಾಶಗಿಟ್ಟಿಸಿಕೊಂಡರು.
ದುನಿಯಾ ವಿಜಯ್ ಸಾರಥ್ಯದ ಸಲಗ ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದ ಈ ಬ್ಯೂಟಿ ಟಾಲಿವುಡ್ ಕೂಡ ಪ್ರವೇಶಿಸಿದ್ದಾರೆ. ಕನ್ನಡದ ಜೊತೆಗೆ ತೆಲುಗು ಅಂಗಳದಲ್ಲಿಯೂ ಬ್ಯುಸಿಯಾಗಿರುವ ಸಂಜನಾ ಆನಂದ್ ಈಗ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಜೊತೆ ರೋಮ್ಯಾನ್ಸ್ ಮಾಡಲು ಒಕೆ ಎಂದಿದ್ದಾರೆ.
‘ತ್ರಿವಿಕ್ರಮ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ (Vikram Ravichandran) ಈಗ ಎರಡನೇ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಮುಧೋಳ್ ಮೂಲಕ ಸಖತ್ ಮಾಸ್ ಅವತಾರ ತಾಳಿರುವ ವಿಕ್ಕಿಗೆ ನಾಯಕಿಯಾಗಿ ರಾಯಲ್ ಹುಡುಗಿ ನಟಿಸುತ್ತಿದ್ದಾರೆ.ಈ ಚಿತ್ರ ಸೆಟ್ಟೇರಿದಾಗಿನಿಂದಲೂ ಸಂಜನಾ ನಾಯಕಿ ಎಂಬ ವಿಷ್ಯ ಹರಿದಾಡಿತ್ತು. ಆದ್ರೆ ಚಿತ್ರತಂಡ ಮಾತ್ರ ಗುಟ್ಟುಬಿಟ್ಟುಕೊಟ್ಟಿರಲಿಲ್ಲ. ಸಲಗ ಸುಂದರಿ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರತಂಡ ಸಮಾಚಾರವನ್ನು ಅಧಿಕೃತಗೊಳಿಸಿತ್ತು.
ವಿಕ್ರಮ್ ಮುಧೋಳ್ ಸಿನಿಮಾದ ನಾಯಕಿಯಾಗಿರುವ ಸಂಜನಾ ಸ್ಪೆಷಲ್ ರೋಲ್ ಪ್ಲೇ ಮಾಡಿದ್ದಾರೆ. ಇಲ್ಲಿವರೆಗೂ ಅವರು ನಟಿಸಿದ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೇ ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಸಂಜನಾ ಆನಂದ್ ಮುಧೋಳ್ ಸಿನಿಮಾ ಜೊತೆಗೆ ದಿನಕರ್ ತೂಗುದೀಪ ನಿರ್ದೇಶನದ ರಾಯಲ್ ಹಾಗೂ ತೆಲುಗಿನ ಫುಲ್ ಬಾಟೆಲ್ ಎಂಬ ಚಿತ್ರಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಧನ್ವೀರ್ ಗೌಡ ನಟಿಸುತ್ತಿರುವ ಹಯಗ್ರೀವ್ ಗೂ ನಾಯಕಿಯಾಗಿರುವ ರಾಯಲ್ ಕ್ವೀನ್ ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಸಂಜನಾ ಆನಂದ್ (Sanjana Anand) ಮತ್ತು ಧನ್ವೀರ್ (Dhanveer) ಕಾಂಬಿನೇಷನ್ ನ ಹಯಗ್ರೀವ (Hayagreeva) ಸಿನಿಮಾದಲ್ಲಿ ನಟಿಸಲಿದ್ದಾರೆ ಸುನೀಲ್ ರಾವ್ (Sunil Rao). ಈಗಾಗಲೇ ಚಿತ್ರೀಕರಣದಲ್ಲಿ ಅವರು ಭಾಗಿಯಾಗಿದ್ದಾರಂತೆ. ಅದೊಂದು ಮಹತ್ವದ ಪಾತ್ರವಾಗಿದ್ದು, ಪಾತ್ರದ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಚಿತ್ರತಂಡವೇ ತಿಳಿಸಲಿದೆ.
ಸಮೃದ್ಧಿ ಮಂಜುನಾಥ್ ಅವರು ತಮ್ಮ ಕೆ.ವೆ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ, ರಘುಕುಮಾರ್ ಓ.ಆರ್ ನಿರ್ದೇಶನದ ಚಿತ್ರವಿದು. ಕೆಲ ದಿನಗಳ ಹಿಂದೆಯಷ್ಟೇ ಈ ಸಿನಿಮಾದ ಮುಹೂರ್ತ (Muhurta) ಸಮಾರಂಭ ನಾಡದೇವತೆ ಶ್ರೀಚಾಮುಂಡೇಶ್ವರಿ ಸನ್ನಿಧಿಯಲ್ಲಿ ನೆಡಿದಿತ್ತು.
ಹಯಗ್ರೀವ ಕೆವಿಸಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಮೂರನೆಯ ಚಿತ್ರ. ಈ ಕುರಿತಂತೆ ನಿರ್ಮಾಪಕ ಸಮೃದ್ದಿ ಮಂಜುನಾಥ್ ಮಾತಮಾಡಿ, ನಾನು ಯೂಟ್ಯೂಬ್‍ನಲ್ಲಿ ‘ದಿ ಬೆಲ್’ ಎಂಬ ಕಿರುಚಿತ್ರ ನೋಡಿದೆ. ಆ ಕಿರುಚಿತ್ರ ಬಹಳ ಖುಷಿ ನೀಡಿತು. ಆ ಕಿರುಚಿತ್ರದ ನಿರ್ದೇಶಕ ರಘುಕುಮಾರ್ ಅವರನ್ನು ಎಂಟು ತಿಂಗಳ ಹಿಂದೆ ಕರೆಸಿ ಮಾತನಾಡಿದೆ. ಒಂದು ಚಿತ್ರ ಮಾಡಿಕೊಡಿ ಎಂದು ಹೇಳಿದೆ. ಅವರು ತಮ್ಮ ತಂಡದೊಂದಿಗೆ ಒಂದೊಳ್ಳೆಯ ಕಥೆ ಮಾಡಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಕನ್ನಡದಲ್ಲಿ ಇಲ್ಲಿಯವರೆಗೂ ಈ ತರಹದ ಚಿತ್ರ ಬಂದಿಲ್ಲ ಎಂದು ಹೇಳಬಹುದು. ಧನ್ವೀರ್ ಹಾಗೂ ಸಂಜನಾ ಆನಂದ್ ನಾಯಕ-ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮತ್ತೊಬ್ಬ ನಾಯಕ ನಟಿಸುತ್ತಿದ್ದು, ಅವರು ಯಾರು ಎಂದು ಚಿತ್ರ ಬಿಡುಗಡೆಯವರೆಗೂ ಗೌಪ್ಯವಾಗಿಡಲಾಗುವುದು. ಒಂದೊಳ್ಳೆಯ ಕಥೆಗೆ ಪೂರಕವಾಗಿ ಶೀರ್ಷಿಕೆ ಸಿಕ್ಕಿದೆ. ಈ ಚಿತ್ರವನ್ನು ಎಲ್ಲರೂ ಒಪ್ಪುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದರು.
ನಿರ್ಮಾಪಕರು ಫೋನ್ ಮಾಡಿ ಸಿನಿಮಾ ಮಾಡಿಕೊಡಿ ಎಂದರು. ನನ್ನ ಹತ್ತಿರ ಒಂದು ಕಥೆ ಇತ್ತು. ಅದನ್ನು ಅವರಿಗೆ ಹೇಳಿದಾಗ, ಇಷ್ಟಪಟ್ಟು ಈ ಚಿತ್ರ ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಈ ಚಿತ್ರದಲ್ಲಿ ಮುಖ್ಯವಾಗಿ ಪೌರಾಣಿಕ ಅಂಶಗಳ ಜೊತೆಗೆ ಕ್ರೈಮ್ ಇದೆ. ಲವ್, ಸೆಂಟಿಮೆಂಟ್, ಸಸ್ಪೆನ್ಸ್ ಸೇರಿದಂತೆ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳು ಹಯಗ್ರೀವ ಚಿತ್ರದಲ್ಲಿದೆ. ಕನ್ನಡದಲ್ಲಿ ಇದುವರೆಗೂ ಯಾರೂ ಈ ತರಹದ ಪ್ರಯತ್ನವನ್ನು ಮಾಡಿಲ್ಲ ಎಂಬುದು ನನ್ನ ಅನಿಸಿಕೆ. ಇಲ್ಲಿ ಹಯಗ್ರೀವ ಎಂಬ ಪೌರಾಣಿಕ ಪಾತ್ರದ ಸುತ್ತ ಚಿತ್ರ ಸುತ್ತುತ್ತದೆ. ಬೆಂಗಳೂರಿನಲ್ಲಿ ಇಡೀ ಚಿತ್ರದ ಚಿತ್ರೀಕರಣ ನಡೆಯಲಿದೆ. ರಂಗಾಯಣ ರಘು, ತಾರಾ, ಸಾಧು ಕೋಕಿಲ, ರವಿಶಂಕರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ‍್ಳುತ್ತಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸುತ್ತಿದ್ದಾರೆ. ಕಾರ್ತಿಕ್, ಛಾಯಾಗ್ರಹಣ ಹಾಗೂ ಉಮೇಶ್ ಅವರ ಸಂಕಲನವಿರುವ ಈ ಚಿತ್ರಕ್ಕೆ ನಾನೇ ಕಥೆ, ಚಿತ್ರಕಥೆ ಬರೆದಿದ್ದೇನೆ. ಸಂಭಾಷಣೆಯನ್ನು ಶೈಲೇಶ್ ರಾಜ್ ಹಾಗೂ ಚೇತನ್ ಸಿದ್ ಬರೆದಿದ್ದಾರೆ ಎಂದು ನಿರ್ದೇಶಕ ರಘುಕುಮಾರ್ ಓ ಆರ್ ತಿಳಿಸಿದ್ದರು.
ಇದು ನನ್ನ ಐದನೇ ಚಿತ್ರ ಎಂದು ಮಾತು ಆರಂಭಿಸಿದ ನಾಯಕ ಧನ್ವೀರ್, ಒಳ್ಳೆಯ ತಂಡ ಮತ್ತು ಒಳ್ಳೆಯ ಶೀರ್ಷಿಕೆ ಸಿಕ್ಕಿದೆ. ಬಹಳ ದಿನಗಳಿಂದ ಪ್ಲಾನ್ ಮಾಡಿ, ಒಂದೊಳ್ಳೆಯ ಕಥೆ ಮಾಡಿ ಈ ಚಿತ್ರ ಮಾಡುತ್ತಿದ್ದೇವೆ. ಅಭಿಮಾನಿಗಳಿಗೆ ಖುಷಿಯಾಗುವಂತಹ ಕಥೆ ಇದೆ. ಈ ಚಿತ್ರದಲ್ಲಿ ನೀಗ್ರೋಗಳ ಜೊತೆಗೆ ಫೈಟ್ ಇದೆ. ‘ಬಜಾರ್’ ನಂತರ ಸಿಕ್ಸ್ ಪ್ಯಾಕ್ ಮಾಡಿಕೊಳ್ಳುತ್ತಿದ್ದೇನೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಕಥೆ ಮತ್ತು ಪಾತ್ರ ವಿಭಿನ್ನವಾಗಿದೆ ಎಂದಿದ್ದರು.
ಸಹಜ ಅಭಿನಯ, ಸರಳ ಸೌಂದರ್ಯದಿಂದಲೇ ಸ್ಯಾಂಡಲ್ ವುಡ್ ನ್ಯೂ ಕ್ರಶ್ ಎನಿಸಿಕೊಂಡಿರುವ ಸಂಜನಾ ಆನಂದ್ (Sanjana Anand) ಈಗ ಮುಧೋಳ್ (Mudhol) ಬಳಗ ಸೇರಿಕೊಂಡಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಸಂಜನಾ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋ ಜೊತೆ ತೆರೆಹಂಚಿಕೊಳ್ಳುವ ಅವಕಾಶಗಿಟ್ಟಿಸಿಕೊಂಡರು. ದುನಿಯಾ ವಿಜಯ್ ಸಾರಥ್ಯದ ಸಲಗ ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದ ಈ ಬ್ಯೂಟಿ ಟಾಲಿವುಡ್ ಕೂಡ ಪ್ರವೇಶಿಸಿದ್ದಾರೆ. ಕನ್ನಡದ ಜೊತೆಗೆ ತೆಲುಗು ಅಂಗಳದಲ್ಲಿಯೂ ಬ್ಯುಸಿಯಾಗಿರುವ ಸಂಜನಾ ಆನಂದ್ ಈಗ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಜೊತೆ ರೋಮ್ಯಾನ್ಸ್ ಮಾಡಲು ಒಕೆ ಎಂದಿದ್ದಾರೆ.
‘ತ್ರಿವಿಕ್ರಮ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ (Vikram Ravichandran) ಈಗ ಎರಡನೇ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಮುಧೋಳ್ ಮೂಲಕ ಸಖತ್ ಮಾಸ್ ಅವತಾರ ತಾಳಿರುವ ವಿಕ್ಕಿಗೆ ನಾಯಕಿಯಾಗಿ ರಾಯಲ್ ಹುಡುಗಿ ನಟಿಸುತ್ತಿದ್ದಾರೆ.ಈ ಚಿತ್ರ ಸೆಟ್ಟೇರಿದಾಗಿನಿಂದಲೂ ಸಂಜನಾ ನಾಯಕಿ ಎಂಬ ವಿಷ್ಯ ಹರಿದಾಡಿತ್ತು. ಆದ್ರೆ ಚಿತ್ರತಂಡ ಮಾತ್ರ ಗುಟ್ಟುಬಿಟ್ಟುಕೊಟ್ಟಿರಲಿಲ್ಲ. ಸಲಗ ಸುಂದರಿ ಹುಟ್ಟುಹಬ್ಬದ ವಿಶೇಷವಾಗಿ ಇಂದು ಚಿತ್ರತಂಡ ಸಮಾಚಾರವನ್ನು ಅಧಿಕೃತಗೊಳಿಸಿದೆ.
ವಿಕ್ರಮ್ ಮುಧೋಳ್ ಸಿನಿಮಾದ ನಾಯಕಿಯಾಗಿರುವ ಸಂಜನಾ ಸ್ಪೆಷಲ್ ರೋಲ್ ಪ್ಲೇ ಮಾಡಿದ್ದಾರೆ. ಇಲ್ಲಿವರೆಗೂ ಅವರು ನಟಿಸಿದ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೇ ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಸಂಜನಾ ಆನಂದ್ ಮುಧೋಳ್ ಸಿನಿಮಾ ಜೊತೆಗೆ ದಿನಕರ್ ತೂಗುದೀಪ ನಿರ್ದೇಶನದ ರಾಯಲ್ ಹಾಗೂ ತೆಲುಗಿನ ಫುಲ್ ಬಾಟೆಲ್ ಎಂಬ ಚಿತ್ರಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಧನ್ವೀರ್ ಗೌಡ ನಟಿಸುತ್ತಿರುವ ಹಯಗ್ರೀವ್ ಗೂ ನಾಯಕಿಯಾಗಿರುವ ರಾಯಲ್ ಕ್ವೀನ್ ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಸ್ಯಾಂಡಲ್‌ವುಡ್‌ಗೆ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ನಾಯಕ ನಟನಾಗಿ ಎಂಟ್ರಿ ಕೊಡ್ತಿದ್ದಾರೆ. ಚೊಚ್ಚಲ ಸಿನಿಮಾ ‘ಗೌರಿ’ (Gowri Film) ಶೂಟಿಂಗ್ ಕೂಡ ಭರದಿಂದ ನಡೆಯುತ್ತಿದೆ. ‘ಗೌರಿ’ ಸಿನಿಮಾದಲ್ಲಿ ಸಲಗ (Salaga) ಸುಂದರಿ ಸಂಜನಾ ಆನಂದ್ (Sanjana Anand) ಕೂಡ ನಟಿಸುತ್ತಿದ್ದಾರೆ.
ಇಂದ್ರಜಿತ್ ನಿರ್ದೇಶನದ ಈ ಸಿನಿಮಾದಲ್ಲಿ ಸಮರ್ಜಿತ್‌ಗೆ ನಾಯಕಿಯಾಗಿ ಸಾನ್ಯ ಅಯ್ಯರ್ (Saanya Iyer) ನಟಿಸುತ್ತಿದ್ದಾರೆ. ಲವ್ ಸ್ಟೋರಿ ಜೊತೆ ಆ್ಯಕ್ಷನ್ ಓರಿಯೆಂಟೆಡ್ ಸಿನಿಮಾವಾಗಿದೆ. ಇದೇ ಚಿತ್ರದಲ್ಲಿ ಸಂಜನಾ ಆನಂದ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಶಾರುಖ್ ಪುತ್ರಿ ಸುಹಾನಾ ಸೌಂದರ್ಯಕ್ಕೆ ಪಡ್ಡೆಹುಡುಗರು ಫಿದಾ
ಚಿತ್ರದಲ್ಲಿ ಸಂಜನಾ ಪಾತ್ರ ತಿರುವು ಕೊಡಲಿದೆ. ಅಷ್ಟೇ ಅಲ್ಲ, ಹೀರೋ ಸಮರ್ಜಿತ್ ಜೊತೆ ಸ್ಪೆಷಲ್ ಹಾಡಿಗೆ ಮಸ್ತ್ ಆಗಿ ಹೆಜ್ಜೆ ಹಾಕಿ ಬಂದಿದ್ದಾರೆ. ಸಂಜನಾ ಆ್ಯಕ್ಟಿಂಗ್ ಜೊತೆಗೆ ಡ್ಯಾನ್ಸ್ ಕೂಡ ತೆಗೆಸಿದ್ದಾರೆ ನಿರ್ದೇಶಕರು. ಎರಡು ದಿನ ರಿಹರ್ಸಲ್ ಮಾಡಿದ್ದು, ಇನ್ನೆರಡು ದಿನಗಳಲ್ಲಿ ಹಾಡಿನ ಚಿತ್ರೀಕರಣ ಮಾಡಿದ್ದಾರೆ. ಸಮರ್ಜಿತ್ ನೃತ್ಯ ಕೌಶಲ್ಯದ ಬಗ್ಗೆ ನಟಿ ಮೆಚ್ಚುಗೆ ಸೂಚಿಸಿದ್ದಾರೆ.
ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಸಂಜನಾ ಆನಂದ್ ಬ್ಯುಸಿಯಾಗಿದ್ದಾರೆ. ಸದ್ಯ ಹೊಸ ಚಿತ್ರದ ಅಪ್‌ಡೇಟ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಮೊನ್ನೆಯಷ್ಟೇ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ‘ಮುಧೋಳ್’ (Mudhol) ಸಿನಿಮಾಗೆ ಮುಹೂರ್ತ ನಡೆದಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ಕೂಡ ಶುರುವಾಗಿದೆ. ರವಿಚಂದ್ರನ್ ಪುತ್ರ ವಿಕ್ರಮ್ (Vikram Ravichandran) ಗೆ ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಮೂಡಿತ್ತು. ಬಲ್ಲ ಮೂಲಗಳ ಪ್ರಕಾರ ಸಂಜನಾ ಆನಂದ್ (Sanjana Anand) ಈ ಸಿನಿಮಾಗೆ ನಾಯಕಿ ಎಂದು ಹೇಳಲಾಗುತ್ತಿದೆ. ಅಧಿಕೃತವಾಗಿ ಚಿತ್ರತಂಡ ಮಾಹಿತಿ ನೀಡದೇ ಇದ್ದರೂ, ಸಂಜನಾ ಅಂತಿಮ ಎನ್ನುವ ಮಾತು ಕೇಳಿ ಬರುತ್ತಿದೆ.
ದುನಿಯಾ ವಿಜಯ್ ನಟನೆಯ ಸಲಗ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಸಂಜನಾ ಆನಂದ್, ಕೆಮಿಸ್ಟ್ರಿ ಅಫ್ ಕರಿಯಪ್ಪ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದವರು. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ತೆಲುಗು ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಇದೀಗ ಮುಧೋಳ್ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ ಎನ್ನುವ ಮಾಹಿತಿ ಇದೆ. ಸದ್ಯದಲ್ಲೇ ಈ ಕುರಿತು ಮಾಹಿತಿ ಹೊರಬೀಳಬಹುದು.
ಶೂಟಿಂಗ್ ವೇಳೆ ಅವಘಡ
ಕನ್ನಡದ ಹೆಸರಾಂತ ಸಾಹಸ ನಿರ್ದೇಶಕ ರವಿವರ್ಮ ಪೆಟ್ಟು ಮಾಡಿಕೊಂಡಿದ್ದಾರೆ. ವಿಕ್ರಮ್ ರವಿಚಂದ್ರನ್ ನಟನೆಯ ಮುಧೋಳ್ ಸಿನಿಮಾದ ಶೂಟಿಂಗ್ ವೇಳೆ ಈ ಘಟನೆ ನಡೆದಿದ್ದು, ಸಾಹಸ ದೃಶ್ಯಕ್ಕಾಗಿ ಕಟ್ಟಿದ ರೋಪ್ ಹರಿದು ಪೆಟ್ಟು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ:ಮಗಳ ಭವಿಷ್ಯಕ್ಕಾಗಿ ದೇಶ ಬಿಡಲು ಸಿದ್ಧ ಎಂದ ಪ್ರಿಯಾಂಕಾ ಚೋಪ್ರಾ
ವಿಕ್ರಮ್ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಸಾಕಷ್ಟು ಸಾಹಸ ಸನ್ನಿವೇಶಗಳನ್ನು ಚಿತ್ರಕ್ಕಾಗಿ ಕಂಪೋಸ್ ಮಾಡಲಾಗಿದೆಯಂತೆ. ಸಾಮಾನ್ಯವಾಗಿ ಕಷ್ಟದ ಸ್ಟಂಟ್ ಗಳನ್ನೇ ಕಂಪೋಸ್ ಮಾಡುವ ರವಿವರ್ಮ, ಈ ಸಿನಿಮಾದಲ್ಲೂ ಅಂಥದ್ದೊಂದು ದೃಶ್ಯವನ್ನು ಕಂಪೋಸ್ ಮಾಡಿದ್ದರಂತೆ. ಈ ದೃಶ್ಯವನ್ನು ಚಿತ್ರೀಕರಿಸುವಾಗ ಅವರಿಗೆ ಗಾಯವಾಗಿದೆ.
ಆತಂಕ ಪಡುವಂತಹ ಘಟನೆ ಅದಲ್ಲವಾದರೂ, ರವಿವರ್ಮ ಪದೇ ಪದೇ ಇಂತಹ ಘಟನೆಗಳಿಗೆ ಸಾಕ್ಷಿ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಾಸ್ತಿಗುಡಿ ಸಿನಿಮಾದಲ್ಲೂ ದುರ್ಘಟನೆ ನಡೆದಿತ್ತು. ಮೊನ್ನೆಯಷ್ಟೇ ಜೋಗಿ ಪ್ರೇಮ್ ನಿರ್ದೇಶನ ಕೇಡಿ ಸಿನಿಮಾದಲ್ಲೂ ನಟರೊಬ್ಬರು ಗಾಯ ಮಾಡಿಕೊಂಡಿದ್ದರು. ಈ ಎರಡು ಚಿತ್ರಗಳಿಗೂ ಇವರೇ ಸಾಹಸ ನಿರ್ದೇಶಕರು.
ಮುಧೋಳ್ ಸಿನಿಮಾ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿದ್ದು, ಪ್ರಧಾನ ಸಾಹಸಮಯ ಸನ್ನಿವೇಶಗಳನ್ನು ನಿರ್ದೇಶಕರು ಸೆರೆ ಹಿಡಿಯುತ್ತಿದ್ದಾರೆ. ಇದೊಂದು ಆಕ್ಷನ್ ಸಿನಿಮಾವಾಗಿದ್ದು, ಕಳೆದ ಒಂದು ವಾರದಿಂದ ಚಿತ್ರೀಕರಣ ನಡೆಯುತ್ತಿದೆ.
ಸ್ಯಾಂಡಲ್‌ವುಡ್‌ನ (Sandalwood) ಸಲಗ (Salaga) ಸುಂದರಿ ಸಂಜನಾ ಆನಂದ್ (Sanjana Anand) ಅವರು ರವಿಚಂದ್ರನ್ (Ravichandran) ಪುತ್ರನ ಜೊತೆ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ. ಕನ್ನಡ ಮತ್ತು ತೆಲುಗು ಸಿನಿಮಾ ಅಂತಾ ಬ್ಯುಸಿಯಿರುವ ನಟಿ ಸಂಜನಾ ಇದೀಗ ವಿಕ್ರಮ್‌ಗೆ ಜೋಡಿಯಾಗಿ ಬರುತ್ತಿದ್ದಾರೆ.
ದುನಿಯಾ ವಿಜಯ್‌ಗೆ (Duniya Vijay) `ಸಲಗ’ (Salaga) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಮೇಲೆ ಸಂಜನಾ ಆನಂದ್‌ಗೆ (Sanjana Anand) ಬಂಪರ್ ಅವಕಾಶಗಳು ಅರಸಿ ಬರುತ್ತಿದೆ. ಟಾಲಿವುಡ್‌ನಲ್ಲೂ (Tollywood) ಛಾಪು ಮೂಡಿಸಿ ಬಂದಿದ್ದಾರೆ. ತೆಲುಗಿನಲ್ಲೂ ಸಲಗ ಬ್ಯೂಟಿ ಸದ್ದು ಮಾಡ್ತಿದ್ದಾರೆ. ಇದನ್ನೂ ಓದಿ: ಮತ್ತೆ ಕಿರುತೆರೆಗೆ ಮರಳಿದ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ
ರವಿಚಂದ್ರನ್ ಅವರ ಪುತ್ರ ನಟ ವಿಕ್ರಮ್ ಅವರ 2ನೇ ಸಿನಿಮಾಗೆ ನಾಯಕಿಯಾಗಿ ಸಂಜನಾ ಆಯ್ಕೆಯಾಗಿದ್ದಾರೆ. ತ್ರಿವಿಕ್ರಮ್ ಚಿತ್ರದ ಮೂಲಕ ಗಮನ ಸೆಳೆದ ವಿಕ್ರಮ್‌ಗೆ ಸಂಜನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಗ್ಯಾಂಗ್‌ಸ್ಟರ್ ಕಥಾಹಂದರವಿರುವ ಈ ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದೆ.
ಮೊದಲ ಬಾರಿಗೆ ರವಿಚಂದ್ರನ್ ಅವರ ಪುತ್ರ ವಿಕ್ರಮ್- ಸಂಜನಾ ಜೊತೆಯಾಗಿದ್ದು, ಅದೆಷ್ಟರ ಮಟ್ಟಿಗೆ ತೆರೆಯ ಮೇಲೆ ಈ ಜೋಡಿ ಕಮಾಲ್ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.
`ಕಿಸ್’ ಸಿನಿಮಾ (Kiss Film) ಮೂಲಕ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಗಮನ ಸೆಳೆದ ವಿರಾಟ್ (Actor Viraat) ಇದೀಗ ಎರಡನೇ ಸಿನಿಮಾ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. ಖ್ಯಾತ ನಿರ್ದೇಶಕ ದಿನಕರ್ ತೂಗುದೀಪ್ (Dinakar Thoogudeepa) ನಿರ್ದೇಶನದಲ್ಲಿ ವಿರಾಟ್ ಹೊಸ ಸಿನಿಮಾ ಮೂಡಿ ಬಂದಿದೆ. ಈ ಚಿತ್ರದ ಟೈಟಲ್ ಕೂಡ ರಿವೀಲ್ ಆಗಿದೆ.
ಎ.ಪಿ ಅರ್ಜುನ್ ನಿರ್ದೇಶನದ `ಕಿಸ್’ ಚಿತ್ರದಲ್ಲಿ ವಿರಾಟ್- ಶ್ರೀಲೀಲಾ (Sreeleela) ಜೋಡಿಯಾಗಿ ಸಿನಿಪ್ರೇಕ್ಷಕರ ಮನಗೆದ್ದಿದ್ದರು. ಈಗ `ಸಲಗ’ ಬ್ಯೂಟಿ ಸಂಜನಾ ಆನಂದ್ (Sanjana Anand) ಜೊತೆ ವಿರಾಟ್ `ರಾಯಲ್’ (Royal) ಆಗಿ ಮಿಂಚಲು ಬರುತ್ತಿದ್ದಾರೆ. ಚಿತ್ರದ ಟೈಟಲ್ ಮತ್ತು ಪೋಸ್ಟರ್ ಲುಕ್ ಮೂಲಕ ನಟ ಹೈಪ್ ಕ್ರಿಯೆಟ್ ಮಾಡಿದ್ದಾರೆ. ಇದನ್ನೂ ಓದಿ: ಸಿದ್-ಕಿಯಾರಾ ಮದುವೆ ಜೀವನದ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ
ದಿನಕರ್ ತೂಗುದೀಪ್ ನಿರ್ದೇಶನದ, ಜಯಣ್ಣ ಫಿಲ್ಮ್ಸ್ ನಿರ್ಮಾಣದ ಹೊಸ ಸಿನಿಮಾಗೆ `ರಾಯಲ್’ ಎಂದು ಹೆಸರಿಡಲಾಗಿದೆ. ಈ ಚಿತ್ರದ ಟೈಟಲ್ ಅನ್ನ ಅಶ್ವಿನಿ ಪುನೀತ್ ರಾಜ್‌ಕುಮಾರ್ (Puneeth Rajkumar) ಮತ್ತು ಹೊಂಬಾಳೆ ಸಂಸ್ಥೆಯ (Hombale Films) ರೂವಾರಿ ವಿಜಯ್ ಕಿರಗಂದೂರು ಅವರು ಟೈಟಲ್ ಪೋಸ್ಟರ್ ಲಾಂಚ್ ಮಾಡಿದ್ದಾರೆ. ಈ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
`ರಾಯಲ್’ ಆಗಿ ಜೀವನ ಮಾಡಬೇಕು ಎಂಬುದು ಪ್ರತಿಯೊಬ್ಬರ ಕನಸು. ಅದರಂತೆಯೇ ಈ ಚಿತ್ರದ ನಾಯಕ ವಿರಾಟ್ ಕೂಡ ಅಂದುಕೊಂಡಿರುತ್ತಾರೆ. ಮುಂದೆ ಹೇಗೆಲ್ಲಾ ತಿರುವು ಬರಲಿದೆ ಎಂಬುದನ್ನ ಬೆಳ್ಳಿಪರದೆಯಲ್ಲಿ ತೋರಿಸಲು ನಿರ್ದೇಶಕರು ಹೊರಟಿದ್ದಾರೆ.
ಇನ್ನೂ `ರಾಯಲ್’ ಚಿತ್ರ ಪಕ್ಕಾ ಕರ್ಮರ್ಷಿಯಲ್ ಸಿನಿಮಾವಾಗಿದ್ದು, ಲವ್, ಆ್ಯಕ್ಷನ್, ಸೆಂಟಿಮೆಂಟ್, ಎಮೋಷನ್ಸ್ ಎಲ್ಲವನ್ನೂ ಒಳಗೊಂಡಿದೆ. ಮೊದಲ ಬಾರಿಗೆ ವಿರಾಟ್- ಸಂಜನಾ ಜೋಡಿ ತೆರೆಯ ಒಟ್ಟಿಗೆ ಕಾಣಿಸಿಕೊಳ್ತಿದ್ದು, ಚಿತ್ರದ 80% ರಷ್ಟು ಚಿತ್ರೀಕರಣವಾಗಿದೆ. ಈ ವರ್ಷದ ಅಂತ್ಯದಲ್ಲಿ ತೆರೆಗೆ ಅಬ್ಬರಿಸಲಿದೆ.
Live Tv
[brid partner=56869869 player=32851 video=960834 autoplay=true]