Tag: Saniya sardhariya

  • ಚಿತ್ರರಂಗದಲ್ಲೇ ಧೂಳೆಬ್ಬಿಸಿರೋ ಕೆಜಿಎಫ್‌ನಲ್ಲಿ ಯಶ್‌ಗೆ ರೆಟ್ರೋ ಲುಕ್ ಕೊಟ್ಟಿದ್ದು ಇವರೇ..!

    ಚಿತ್ರರಂಗದಲ್ಲೇ ಧೂಳೆಬ್ಬಿಸಿರೋ ಕೆಜಿಎಫ್‌ನಲ್ಲಿ ಯಶ್‌ಗೆ ರೆಟ್ರೋ ಲುಕ್ ಕೊಟ್ಟಿದ್ದು ಇವರೇ..!

    ವಿಶ್ವದ ಮೂಲೆ ಮೂಲೆಯಲ್ಲೂ ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಬಾಕ್ಸ್ ಆಫೀಸ್ ಮಾಡುತ್ತಿದೆ. ಅಷ್ಟರ ಮಟ್ಟಿಗೆ ರಾಕಿಭಾಯ್ ಚಿತ್ರ ನೋಡಿ ಅಭಿಮಾನಿಗಳು ಫ್ಲಾಟ್ ಆಗಿದ್ದಾರೆ. `ಕೆಜಿಎಫ್ 2′ ಬಂದಮೇಲೆ ರಾಕಿಭಾಯ್ ಡೈಲಾಗ್ ಅಷ್ಟೇ ಟ್ರೆಂಡ್ ಆಗಿಲ್ಲ. ರಣಧೀರನ ಸ್ಟೈಲ್‌ ಕೂಡ ಟ್ರೆಂಡ್ ಸೃಷ್ಟಿಸಿದೆ.

    ʻಕೆಜಿಎಫ್ʼ ಚಾಪ್ಟರ್ 1 ಮತ್ತು ಚಾಪ್ಟರ್ 2 ನೋಡಿರೋ ರಾಕಿಭಾಯ್ ಫ್ಯಾನ್ಸ್, ಸಿನಿಮಾ ನೋಡಿ ಮಾತ್ರ ಇಷ್ಟಪಟ್ಟಿಲ್ಲ. ರಾಕಿಭಾಯ್ ಸ್ಟೈಲ್ ಉಘೇ ಉಘೇ ಅಂದಿದ್ದಾರೆ. ಇಡೀ ಸಿನಿಮಾದಲ್ಲಿನ ಯಶ್ ಲುಕ್ ಹಿಂದೆಯಿರೋ ರೂವಾರಿ ಅಂದ್ರೆ ಸೆಲೆಬ್ರೆಟಿ ಡಿಸೈನರ್ ಸಾನಿಯಾ ಸರ್ದಾರಿಯಾ ಕಾರಣ. `ಕೆಜಿಎಫ್’ ಚಿತ್ರ ಗೆಲ್ಲೋದರ ಜೊತೆಗೆ ರಾಕಿಭಾಯ್ ಸ್ಟೈಲ್ ಕೂಡ ಗೆದ್ದಿದೆ ಅಂದ್ರೆ ಸಾನಿಯಾ ಸರ್ದಾರಿಯಾ ಅವರ ಕಾರ್ಯವೈಖರಿ ಕೂಡ ಗೆದ್ದಿದೆ.

    ಚಿತ್ರದಲ್ಲಿನ ಯಶ್ ಗಡ್ಡದಿಂದ ಹಿಡಿದು ಸೂಟ್, ವಾಚ್, ಬೂಟ್ಸ್ ಪ್ರತಿಯೊಂದನ್ನು ಪಾತ್ರದ ತಕ್ಕಂತೆ ಸಾನಿಯಾ ನಿಗಾ ವಹಿಸಿದ್ದಾರೆ. ರಾಕಿಭಾಯ್ ಪಾತ್ರಕ್ಕೆ ಸಾನಿಯಾ ಅವರ ಬಳಿಯೇ ಕಸ್ಟ್ಮೈಸ್ ಮಾಡಿಸಿದ್ದಾರೆ. ರಾಕಿಭಾಯ್ ಸ್ಟೈಲ್‌ಗೆ ರೆಟ್ರೋ ಲುಕ್ ಕೊಟ್ಟು ಡಿಫರೆಂಟ್ ಆಗಿ ಸಾನಿಯಾ ಆನ್‌ಸ್ಕ್ರೀನ್‌ನಲ್ಲಿ ಯಶ್‌ನ ತೋರಿಸಿದ್ರು. ಇದೀಗ ಯಶ್ ಲುಕ್, ಅಗ್ರಸ್ಥಾನದಲ್ಲಿದೆ. ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ ಯಶ್ ಲುಕ್ ಹೊಸ ಟ್ರೆಂಡ್ ಹುಟ್ಟು ಹಾಕಿದೆ. ಇದನ್ನೂ ಓದಿ:ಮನಾಲಿಗೆ ಹೊರಟ ರಣ್‌ಬೀರ್ ಕಪೂರ್ ಆದರೆ ಹನಿಮೂನ್‌ಗಾಗಿ ಅಲ್ಲ!

    `ಕೆಜಿಎಫ್ ಚಾಪ್ಟರ್ 2′ ಸಿನಿಮಾ ಸೌಂಡ್ ಮಾಡುವುದರ ಜತೆಗೆ ರಾಕಿಭಾಯ್ ಸ್ಟೈಲ್‌ಗೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದ ಪ್ರಚಾರದ ವೇಳೆಯೂ ರಾಕಿಭಾಯ್ ಧರಿಸಿದ್ದ ಡ್ರೇಸ್ ಲುಕ್ ಗಮನ ಸೆಳೆದಿತ್ತು. ಹೀಗೆ ಸಾಕಷ್ಟು ಸಿನಿಮಾಗಳಿಗೆ ಸೆಲೆಬ್ರೆಟಿ ಡಿಸೈನರ್‌ ಆಗಿ ಸಾನಿಯಾ ಗುರುತಿಸಿಕೊಂಡಿದ್ದಾರೆ. ಇನ್ನು ಒಂದಲ್ಲಾ ಒಂದು ರೀತಿಯಲ್ಲಿ ಕೆಜಿಎಫ್ ತಂಡ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜತೆಗೆ ರಾಕಿಭಾಯ್ ಮೇನಿಯಾ ಕೂಡ ಜೋರಾಗಿದೆ.

  • ನನ್ನ ಸ್ಟೈಲ್ ನನ್ನ ವ್ಯಕ್ತಿತ್ವದ ಒಂದು ಭಾಗ: ಯಶ್

    ನನ್ನ ಸ್ಟೈಲ್ ನನ್ನ ವ್ಯಕ್ತಿತ್ವದ ಒಂದು ಭಾಗ: ಯಶ್

    ಬೆಂಗಳೂರು: ನನ್ನ ಸ್ಟೈಲ್ ನನ್ನ ವ್ಯಕ್ತಿತ್ವದ ಒಂದು ಭಾಗ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್ ಸ್ಟೈಲ್ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಭಾಷೆ ಅಷ್ಟೇ ಅಲ್ಲದೆ ತೆಲಗು, ತಮಿಳು ಸೇರಿದಂತೆ ವಿವಿಧ ಭಾಷೆಯಲ್ಲಿ ತೆರೆಕಂಡ ಕೆಜಿಎಫ್ ಸಿನಿಮಾದ ಮೂಲಕ ರಾಕಿಂಗ್ ಸ್ಟಾರ್ ಯಶ್ ಕಡ್ಡ ಬಿಟ್ಟು ಸೂಪರ್ ಲುಕ್‍ನಲ್ಲಿ ಕಾಣಿಸುತ್ತಿದ್ದಾರೆ. ಅವರ ಈ ಸ್ಟೈಲ್‍ಗೆ ಅನೇಕ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಅಭಿಮಾನಿಗಳ ಮೆಚ್ಚುಗೆಗೆ ಯಶ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿ ಧನ್ಯವಾದ ತಿಳಿಸಿದ್ದಾರೆ. ನಾನು ನಿಮ್ಮ ಸಂದೇಶವನ್ನು ಓದುತ್ತೇನೆ. ಅನೇಕರು ನನ್ನ ಸ್ಟೈಲ್ ಬಗ್ಗೆ ಕೇಳಿದ್ದೀರಿ. ನನ್ನ ಸ್ಟೈಲ್ ನನ್ನ ವ್ಯಕ್ತಿತ್ವದ ಒಂದು ಭಾಗ, ನನ್ನ ವರ್ತನೆ. ಅದು ನನ್ನ ಜೀವನದ ಒಂದು ಭಾಗ ಎಂದು ಬರೆದುಕೊಂಡಿದ್ದಾರೆ.

    ನನಗಾಗಿ ಇದನ್ನು ಒಟ್ಟಿಗೆ ಸೇರಿಸಿದ್ದಕ್ಕಾಗಿ ಕೆಜಿಎಫ್ ಕಾಸ್ಟ್ಯೂಮ್ ಡಿಸೈನರ್ ಸಾನಿಯಾ ಸರ್ದಾರಿಯಾ ಅವರಿಗೆ ಧನ್ಯವಾದ ಎಂದು ಯಶ್ ತಿಳಿಸಿದ್ದಾರೆ. ಜೊತೆಗೆ ಯಶ್ ತಮ್ಮ ಕೆಲವು ಫೋಟೋಗಳನ್ನು ಅಭಿಮಾಗಳ ಜೊತೆಗೆ ಹಂಚಿಕೊಂಡಿದ್ದಾರೆ.

    https://www.instagram.com/p/B5VNscQnIA8/

    ರಾಕಿಂಗ್ ಸ್ಟಾರ್ ಯಶ್ ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಹಾಗೂ ಸ್ಟೈಲ್ ಐಕಾನ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ರಾಧಿಕಾ ಅವರು ಪ್ರಶಸ್ತಿಗೆ ಕಾರಣರಾದ ಯಶ್ ಅವರ ಕಾಸ್ಟೂಮ್ ಡಿಸೈನರ್ ಬಗ್ಗೆ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಳ್ಳುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದರು.

    ಸಾನಿಯಾ ಸರ್ದಾರಿಯಾ ಯಶ್ ಅವರ ಕಾಸ್ಟೂಮ್ ಡಿಸೈನರ್ ಆಗಿದ್ದು, ”ಸ್ಟೈಲ್ ಎನ್ನುವುದು ಮಾತನಾಡದೆ ನಾವು ಏನು ಎನ್ನುವುದನ್ನು ಹೇಳುವುದಾಗಿದೆ. ಯಶ್ ಸ್ಟೈಲ್ ಐಕಾನ್ ಪ್ರಶಸ್ತಿಯನ್ನು ಗೆದ್ದಿರುವ ಈ ಸಂದರ್ಭದಲ್ಲಿ ನಮ್ಮ ಪ್ರೀತಿ ಸ್ಟೈಲಿಸ್ಟ್ ಸಾನಿಯಾ ಸರ್ದಾರಿಯ ಅವರ ಬಗ್ಗೆ ಹೇಳಲು ಬಯಸುತ್ತೇನೆ. ಅವರು ಕೇವಲ ನಮ್ಮ ಸ್ಟೈಲಿಸ್ಟ್ ಮಾತ್ರವಲ್ಲ, ಅವರು ನಮ್ಮನ್ನು ತುಂಬಾ ಕೇರ್ ಮಾಡುತ್ತಾರೆ. ಯಾವಾಗಲೂ ಸಂತೋಷದಿಂದ ಇರುತ್ತಾರೆ” ಎಂದು ರಾಧಿಕಾ ಬರೆದುಕೊಂಡಿದ್ದರು.

    https://www.instagram.com/p/B1NutWQg3c7/

    ಯಶ್ ಹಾಗೂ ರಾಧಿಕಾ ಪಂಡಿತ್ ಸಿನಿಮಾಗಳಿಗೆ ಹಾಗೂ ಕಾರ್ಯಕ್ರಮಗಳಿಗೆ ಸಾನಿಯಾ ಸರ್ದಾರಿಯಾ ಅವರೇ ಕಾಸ್ಟೂಮ್ ಡಿಸೈನ್ ಮಾಡುತ್ತಾರೆ. ಅಷ್ಟೇ ಅಲ್ಲದೇ ಯಶ್ ಮತ್ತು ರಾಧಿಕಾ ನಿಶ್ಚಿತಾರ್ಥ ಹಾಗೂ ಮದುವೆಗೆ ಸಹ ಸಾನಿಯಾ ಸರ್ದಾರಿಯಾ ವಸ್ತ್ರ ವಿನ್ಯಾಸ ಮಾಡಿದ್ದರು. ಸಾನಿಯಾ ಸರ್ದಾರಿಯಾ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಪತ್ನಿಯಾಗಿದ್ದು, ಅನೇಕ ವರ್ಷಗಳಿಂದ ಕಾಸ್ಟೂಮ್ ಡಿಸೈನರ್ ಆಗಿ ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ.