Tag: Sangha

  • ಪೋಷಕ ಕಲಾವಿದರ ಸಂಘದ ಕಾರ್ಯದರ್ಶಿ ಅಶ್ಲೀಲ ವಿಡಿಯೋ ಕಳಿಸ್ತಾರೆ : ನಟಿ ರಾಣಿ ಆರೋಪ

    ಪೋಷಕ ಕಲಾವಿದರ ಸಂಘದ ಕಾರ್ಯದರ್ಶಿ ಅಶ್ಲೀಲ ವಿಡಿಯೋ ಕಳಿಸ್ತಾರೆ : ನಟಿ ರಾಣಿ ಆರೋಪ

    ರ್ನಾಟಕ ಪೋಷಕ ಕಲಾವಿದರ ಸಂಘದ ಭಿನ್ನಾಭಿಪ್ರಾಯ ಇದೀಗ ಬೀದಿಗೆ ಬಂದಿದೆ. ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ನಡೆಗೆ ಸಿನಿಮಾ ಹಾಗೂ ಕಿರುತೆರೆ ನಟಿ ರಾಣಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹಣಕಾಸಿನ ಅವ್ಯವಹಾರದ ಜೊತೆ ಮಹಿಳೆಯರಿಗೆ ಸಂಘದಲ್ಲಿರುವವರು ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದರು ಎಂದು ಗುರುತರ ಆರೋಪ ಮಾಡಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ ರಾಣಿ, ‘ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಮತ್ತು ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಮೇಲೆ ಆರೋಪ ಮಾಡಿದ್ದು, ತಮ್ಮದು ಪೋಷಕ ಕಲಾವಿದರ ಸಂಘದ ಮೇಲೆ ಆರೋಪ ಮಾಡುವುದಿಲ್ಲ’  ಎಂದಿದ್ದಾರೆ. ಮಹಿಳೆಯರನ್ನು ಅಗೌರವದಿಂದ ಇವರು ನಡೆಸಿಕೊಳ್ಳುತ್ತಾರೆ. ಅದರಲ್ಲೂ ಸಂಘದ ಕಾರ್ಯದರ್ಶಿಗಳೇ ಸಂಘದಲ್ಲಿ ಇರುವಂತಹ ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎಂದು ಆರೋಪ ಮಾಡಿದ್ದಾರೆ.

    ‘ನಾನು ಈ ಸಂಘದಲ್ಲಿ 15 ವರ್ಷಗಳಿಂದ ಇದ್ದೇನೆ. ಚುನಾವಣೆಯಲ್ಲಿ ಗೆದ್ದು ಉಪಾಧ್ಯಕ್ಷೆ ಆಗಿದ್ದೇನೆ. ಸಂಘದ ಚಟುವಟಿಕೆಗಳಲ್ಲಿ ಭಾಗಿ ಆಗಲು ಬಿಡುತ್ತಿಲ್ಲ. ಸಂಘದ ಲೆಕ್ಕಾಚಾರ ಕೇಳಿದರೆ, ನಮಗೆ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ಅವರವರೇ ಸೇರಿಕೊಂಡು ಕೆಲಸ ಮಾಡಿಕೊಳ್ಳುತ್ತಾರೆ. ಪ್ರತಿಭಟಿಸಿದರೆ ಕೊಳಕು ಭಾಷೆ ಬಳಸುತ್ತಾರೆ. ಸುಮ್ಮನೆ ಇರದೇ ಇದ್ದರೆ ರಾಜಿನಾಮೆ ಕೊಟ್ಟು ಹೋಗಿ ಎಂದು ಹೆದರಿಸುತ್ತಾರೆ’ ಎನ್ನುತ್ತಾರೆ ರಾಣಿ.

    ಸಂಘದ ಕಾರ್ಯದರ್ಶಿ ಬಗ್ಗೆಯೇ ಹೆಚ್ಚು ಮಾತನಾಡಿರುವ ರಾಣಿ, ‘ಮಹಿಳೆಯರಿಗೆ ಅಗೌರವ ತೋರೋ ರೀತಿಯಲ್ಲಿ ಅವರು ಮಾತಾಡಿದ್ದಾರೆ. ಕೆಲವೊಮ್ಮೆ ಅಶ್ಲೀಲ ವಿಡಿಯೋ ಕಳಿಸ್ತಿದ್ರು. ಆ ವಿಚಾರವಾಗಿ ಗಲಾಟೆಯೂ ಆಗಿದೆ. ಸಭೆಯಲ್ಲಿ ದೊಡ್ಡ ಚರ್ಚೆಯಾಗಿ ಸಮಾಧಾನ ಮಾಡಿದರು. ಹಣಕಾಸಿನ ದುರುಪಯೋಗದ ಬಗ್ಗೆ ಕೇಳೀದಾಗ ಅವಾಚ್ಯ ಶಬ್ದಗಳಿಂದ  ನಿಂದನೆ ಮಾಡಿದರು. ಉಪಾಧ್ಯಕ್ಷೆ ಸ್ಥಾನದಿಂದ ಏಕಾಏಕಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ. ಹೀಗಾಗಿ ನ್ಯಾಯ ಸಿಗಬೇಕು ಅಂತ ಹೋರಾಟ ಮಾಡ್ತಿದ್ದಿನಿ’ ಎಂದಿದ್ದಾರೆ ರಾಣಿ.

    Live Tv
    [brid partner=56869869 player=32851 video=960834 autoplay=true]

  • ಸುದೀಪ್ ಹೆಸರಲ್ಲಿ 5 ಸಾವಿರ ಸ್ತ್ರೀಯರ ಮಹಾಸೇನೆ

    ಸುದೀಪ್ ಹೆಸರಲ್ಲಿ 5 ಸಾವಿರ ಸ್ತ್ರೀಯರ ಮಹಾಸೇನೆ

    ಬೆಂಗಳೂರು: ಸ್ಟಾರ್ ನಟರ ಹೆಸರಿನಲ್ಲಿ ಅಭಿಮಾನಿ ಸಂಘಗಳನ್ನು ಕಟ್ಟಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಆದರೆ ಸ್ಯಾಂಡಲ್‍ವುಡ್‍ನ ಸ್ಟಾರ್ ನಟ ಕಿಚ್ಚನ ಮೇಲಿನ ಅಭಿಮಾನಕ್ಕಾಗಿ 5 ಸಾವಿರ ಸ್ತ್ರೀಯರು ಒಟ್ಟಾಗಿ ಒಂದು ಸಂಘವನ್ನು ಕಟ್ಟಿಕೊಳ್ಳುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ.

    ಹೌದು. ಸ್ಯಾಂಡಲ್‍ವುಡ್ ಬಾದ್ ಷಾ ಕಿಚ್ಚನಿಗೆ ಅಪಾರವಾದ ಅಭಿಮಾನಿ ಬಳಗವಿದೆ. ಪುರುಷರಷ್ಟೇ ಸ್ತ್ರೀಯರ ಸಂಖ್ಯೆ ಕೂಡ ಇದೆ ಎಂಬುದಕ್ಕೆ ಉತ್ತಮ ಉದಾಹರಣೆ ಈ ಸಂಘವಾಗಿದೆ. ಯುವಕರ ಗುಂಪು ಅಭಿಮಾನಿ ಸಂಘಗಳನ್ನು ಕಟ್ಟಿ ಕೊಂಡಿರುತ್ತಾರೆ. ಆದರೆ ಕಿಚ್ಚ ಸುದೀಪ್ ಅವರ ಮಹಿಳಾ ಅಭಿಮಾನಿಗಳು ಕೂಡ ಇಂಥದ್ದೊಂದು ಸಂಘ ಮಾಡಿಕೊಂಡು ಒಳ್ಳೆಯ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ವೀಡಿಯೋವನ್ನು ಹಂಚಿಕೊಂಡು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

    ವೀಡಿಯೋದಲ್ಲಿ ಏನಿದೆ?
    ಚಿತ್ರರಂಗದಲ್ಲಿ 25 ವರ್ಷಗಳನ್ನು ಸುದೀಪ್ ಅವರು ಪೂರೈಸಿರುವುದರ ಸಂಭ್ರಮಕ್ಕಾಗಿ ಹಾವೇರಿ ಜಿಲ್ಲೆ, ಬ್ಯಾಡಗಿ ತಾಲೂಕಿನಲ್ಲಿರುವ ಮಹಿಳಾ ಅಭಿಮಾನಿಗಳು ಒಂದು ವೀಡಿಯೋ ಮೂಲಕ ಕಿಚ್ಚನಿಗೆ ಶುಭಾಶಯ ತಿಳಿಸಿ, ತಾವು ಮಾಡಿಕೊಂಡಿರುವ ಸಂಘದ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

    ‘ಮಹಾ ಸೇವಕ ಬಾದ್ ಷಾ ಕಿಚ್ಚ ಸುದೀಪ್ ಮಹಿಳಾ ಸೇನೆ’ ಎಂದು ನಮ್ಮ ಸಂಘಕ್ಕೆ ಹೆಸರಿಡಲಾಗಿದೆ. ಈ ಮಹಾಸೇನೆಯಲ್ಲಿ ಬರೀ ಮಹಿಳೆಯರೇ ಸಕ್ರಿಯರಾಗಿದ್ದೇವೆ. 5 ಸಾವಿರಕ್ಕೂ ಅಧಿಕ ಸ್ತ್ರೀಯರು ಸುದೀಪ್ ಮೇಲಿನ ಅಭಿಮಾನಕ್ಕಾಗಿ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದೇವೆ. ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಅಡಿಯಲ್ಲಿ ಈ ಸಂಘ ಕಾರ್ಯ ನಿರ್ವಹಿಸುತ್ತದೆ. ಸುದೀಪ್ ಅವರ ಮಾರ್ಗದರ್ಶನದಲ್ಲಿ ತಾವು ಮುನ್ನಡೆಯುತ್ತೇವೆ ಎಂದು ಈ ಮಹಿಳಾ ಸೇನೆಯ ಸದಸ್ಯರು ವೀಡಿಯೋ ಮಾಡಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ಟ್ವಿಟ್ಟರ್‌ನಲ್ಲಿ ಈ ವೀಡಿಯೋ ನೋಡಿದ ಸುದೀಪ್ ಅವರು ‘ಇದು ಮಧುರವಾಗಿದೆ. ನಿಮ್ಮೆಲ್ಲರಿಗೂ ಧನ್ಯವಾದಗಳು’ ಎಂದು ಟ್ವೀಟ್ ಮೂಲಕವಾಗಿ ಪ್ರೀತಿಯ ಸಂದೇಶವನ್ನು ಅಭಿಮಾನಿಗಳಿಗೆ ಹೇಳಿದ್ದಾರೆ. ಕಿಚ್ಚನ ಅಭಿಮಾನಿಯ ಬಳಗ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸಿನಿಮಾ ರಂಗ ಮಾತ್ರವಲ್ಲದೆ ಅವರ ಹೆಸರಿನಲ್ಲಿ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ.

  • ಖಾಕಿ ವಿರುದ್ಧ ಸಮರ ಸಾರಿದ ರೌಡಿಶೀಟರ್ ಗಳು!

    ಖಾಕಿ ವಿರುದ್ಧ ಸಮರ ಸಾರಿದ ರೌಡಿಶೀಟರ್ ಗಳು!

    ಬೆಂಗಳೂರು: ಖಾಕಿ ಖದರ್ ಗೆ ಬೆಚ್ಚಿಬಿದ್ದ ರೌಡಿಶೀಟರ್ ಗಳು ಈಗ ಪೊಲೀಸರ ವಿರುದ್ಧವೇ ಸಿಡಿದೆದ್ದಿದ್ದಾರೆ.

    ಪೊಲೀಸರು ಸುಖಾಸುಮ್ಮನೆ ಹಿಂಸೆ ಕೊಡ್ತಾರೆ ನಕಲಿ ಎನ್‍ಕೌಂಟರ್ ಇದನ್ನ ವಿರೋಧಿಸಬೇಕು ಅಂತ ಸಿದ್ಧ ಆಗಿರೋ ರೌಡಿಶೀಟರ್ ಗಳು ಸಂಘ ತೆರೆಯಲು ಮುಂದಾಗುತ್ತಿದ್ದಾರೆ. “ಫೈಟ್ ಫಾರ್ ಜಸ್ಟೀಸ್” ಎಂಬ ಸಂಘ ಹುಟ್ಟು ಹಾಕುತ್ತಿರುವ ರೌಡಿಶೀಟರ್ ಗಳು ಸಂಘ ನಿಯಂತ್ರಣ ಮಾಡಲು ಸಂಘಕ್ಕೆ ಲೀಗಲ್ ಅಡ್ವೈಸರ್ ಕೂಡ ಇರಲಿದ್ದಾರೆ ಅಂತೆ.

    ಒಂದು ಕಚೇರಿಯನ್ನು ತೆರಯಲು ಸಿದ್ಧ ಮಾಡಿರೋ ರೌಡಿಶೀಟರ್ ಗಳು ಮಾನವ ಹಕ್ಕುಗಳ ಆಯೋಗಕ್ಕೆ ಈಗಾಗಲೇ ಭೇಟಿ ನೀಡಿದ್ದು ಮಾಹಿತಿ ರವಾನೆ ಮಾಡಿದ್ದಾರೆ. ಖಾಕಿ ವಿರುದ್ಧ ಯಾರ ರೀತಿ ಹೋರಾಡಬೇಕು ಅನ್ನೋದನ್ನ ಮಾನವ ಹಕ್ಕು ಆಯೋಗದಿಂದ ಮಾಹಿತಿ ಸಂಗ್ರಹಿಸಿದ್ದಾರಂತೆ. ಈ ಎಲ್ಲಾ ಮಾಹಿತಿ ಕಲೆಹಾಕಿರೋ ಗುಪ್ತಚರ ಇಲಾಖೆ ನಗರ ಪೊಲೀಸ್ ಆಯುಕ್ತರಿಗೆ ಮಾಹಿತಿ ರವಾನೆ ಮಾಡಿದೆ. ಸದ್ಯ ಮಾಹಿತಿ ಪಡೆದಿರೋ ಸಿಸಿಬಿ ಪೊಲೀಸರು ಇನ್ನಷ್ಟು ರೌಡಿಶೀಟರ್ ಗಳಿಗೆ ಕಡಿವಾಣ ಹಾಕುವುದು ಹೇಗೆ ಎಂಬುದರ ಬಗ್ಗೆ ಪ್ಲಾನ್ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv