Tag: Sangh Parivar

  • ಸಂಘ ಪರಿವಾರ ಎಂದಿಗೂ ಮೀಸಲಾತಿ ವಿರೋಧಿಸಿಲ್ಲ: ಆರ್‌ಎಸ್‌ಎಸ್‌ ಮುಖ್ಯಸ್ಥ

    ಸಂಘ ಪರಿವಾರ ಎಂದಿಗೂ ಮೀಸಲಾತಿ ವಿರೋಧಿಸಿಲ್ಲ: ಆರ್‌ಎಸ್‌ಎಸ್‌ ಮುಖ್ಯಸ್ಥ

    ಹೈದರಾಬಾದ್: ಸಂಘ ಪರಿವಾರವು (Sangh Parivar) ಎಂದಿಗೂ ಮೀಸಲಾತಿಯನ್ನು ವಿರೋಧಿಸಿಲ್ಲ ಎಂದು ಆರ್‌ಎಸ್‌ಎಸ್‌ (RSS) ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

    ಶಿಕ್ಷಣ ಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೀಸಲಾತಿ ಎಲ್ಲಿಯವರೆಗೂ ಅಗತ್ಯವಿದೆಯೋ ಅಲ್ಲಿಯವರೆಗೆ ವಿಸ್ತರಿಸಬೇಕು ಎಂಬುದು ಸಂಘದ ಅಭಿಪ್ರಾಯವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಆಪ್‌ ಮೈತ್ರಿಗೆ ವಿರೋಧ – ದೆಹಲಿಯ ಕಾಂಗ್ರೆಸ್‌ ಅಧ್ಯಕ್ಷ ರಾಜೀನಾಮೆ

    ಮೀಸಲಾತಿ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾಗವತ್ (Mohan Bhagwat) ತಮ್ಮ ಹೇಳಿಕೆ ನೀಡಿದ್ದಾರೆ. ಸಮಾಜದಲ್ಲಿ ಅಗೋಚರವಾಗಿದ್ದರೂ ತಾರತಮ್ಯವಿದೆ ಎಂದಿದ್ದಾರೆ.

    ಸಮಾಜದಲ್ಲಿ ತಾರತಮ್ಯ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್‌ ಕಳೆದ ವರ್ಷ ನಾಗ್ಪುರದಲ್ಲಿ ಹೇಳಿದ್ದರು. ಆ ಹೇಳಿಕೆಯನ್ನು ಈಗ ಪುನರುಚ್ಛರಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಮುಸ್ಲಿಮರ ಮತ ಬೇಕು, ಅಭ್ಯರ್ಥಿ ಬೇಡ – ಪ್ರಚಾರದಿಂದ ದೂರ ಸರಿದ ನಸೀಮ್‌ ಖಾನ್‌

  • ಮುಸ್ಲಿಂ ಹುಡುಗ ಹಿಂದೂ ಹುಡುಗಿಯನ್ನು ರೇಪ್ ಮಾಡಿದ್ರೆ ಸಂಘ ಪರಿವಾರಕ್ಕೆ ಖುಷಿ: ಮಹೇಂದ್ರ ಕುಮಾರ್

    ಮುಸ್ಲಿಂ ಹುಡುಗ ಹಿಂದೂ ಹುಡುಗಿಯನ್ನು ರೇಪ್ ಮಾಡಿದ್ರೆ ಸಂಘ ಪರಿವಾರಕ್ಕೆ ಖುಷಿ: ಮಹೇಂದ್ರ ಕುಮಾರ್

    – ಸಾವಿನಲ್ಲಿಯೂ ಲಾಭ ಪಡೆಯುವ ಪ್ರವೃತ್ತಿ ಸಲ್ಲದು

    ಮಂಗಳೂರು: ಮುಸ್ಲಿಂ ಹುಡುಗನಿಂದ ಹಿಂದೂ ಹುಡುಗಿಯ ಮೇಲೆ ಅತ್ಯಾಚಾರವಾದರೆ ಸಂಘ ಪರಿವಾರಕ್ಕೆ ಆಗುವಷ್ಟು ಖುಷಿ ಯಾರಿಗೂ ಆಗಲ್ಲ ಎಂದು ಬಜರಂಗದಳದ ಮಾಜಿ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಹೇಳಿದ್ದಾರೆ.

    ಜನನುಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಸ್ಲಿಂ ಯುವಕರಿಂದ ಆಗುವ ತಪ್ಪನ್ನು ಎತ್ತಿಹಿಡಿದು ಅದರಿಂದ ಲಾಭ ಪಡೆಯುತ್ತದೆ. ದಯವಿಟ್ಟು ಜಾಗರುಕರಾಗಿ. ಸಂಘಕ್ಕೆ ಯಾವುದೇ ದೇಣಿಗೆ, ಭೂಮಿ ನೀಡಬೇಡಿ. ನಮ್ಮ ಸುತ್ತ ಅಪಾಯಕಾರಿ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ದೂರಿದರು.

    ಆರ್‌ಎಸ್‌ಎಸ್, ವಿಎಚ್‍ಪಿ, ಬಜರಂಗದಳ ಹಿಂದೂ ಸಮಾಜದ ಸಂಘಟನೆಗಳೇ ಹೊರತು ಅವು ಹಿಂದೂ ಸಮಾಜವಲ್ಲ. ಮುಸ್ಲಿಮರನ್ನು ಧರ್ಮದ ಕಾರಣಕ್ಕಾಗಿ ದ್ವೇಷ ಮಾಡುವುದಾದರೆ ಅದು ನಿಜವಾದ ದೇಶದ್ರೋಹ. ಸಂಘಪರಿವಾರದಲ್ಲಿರುವ ಜಾತಿ ಅಸ್ಪೃಶ್ಯತೆಯಿಂದಾಗಿ ಸಂಘ ಸಿದ್ಧಾಂತದಿಂದ ದೂರ ಉಳಿಯಲು ಕಾರಣ ಎಂದು ತಿಳಿಸಿದರು.

    ಸಂಘದ ಸದಸ್ಯರು ದಲಿತ ಪರ ಮಾತನಾಡಿದರೆ ಸಂಘದ ವಿರೋಧಿಗಳೇ? ಈ ರೀತಿಯ ಪ್ರಶ್ನೆಗಳು ಅನೇಕರಿಗೆ ಕಾಡುತ್ತಿವೆ. ಆದರೂ ಯುವಕರು ಈ ಸಂಘ ಪರಿವಾರಕ್ಕೆ ಸೇರುತ್ತಿದ್ದಾರೆ. ಅಲ್ಲಿ ಸಿದ್ಧಾಂತದ ಹೆಸರಿನಲ್ಲಿ ಮದ್ಯವನ್ನು ಕೊಡುತ್ತಾರೆಯೇ ಹೊರತು ಔಷಧಿಯನ್ನಲ್ಲ ಎಂದು ದೂರಿದರು.

    ಶಿವಮೊಗ್ಗದಲ್ಲಿ ಗೋಕುಲ್ ಎಂಬ ಯುವಕನೊಬ್ಬ ಮುಸ್ಲಿಂ ಯುವಕರಿಂದ ಕೊಲೆಯಾಗಿದ್ದ. ಸಂಘ ಪರಿವಾರದಲ್ಲಿಯೇ ಬೆಳೆದಿದ್ದ ಗೋಕುಲ್ ಮನೆಯವರಿಗೆ ಸಾಂತ್ವಾನ ಹೇಳಲು ನಾನು ಅವರ ಮನೆಗೆ ಹೋಗಿದ್ದೆ. ಈ ವೇಳೆ ನನ್ನ ಜೊತೆಗೆ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಕೂಡ ಬಂದಿದ್ದರು. ಅಷ್ಟೇ ಅಲ್ಲದೆ ಇಬ್ಬರು ಸಂಘದ ಪರಿವಾರದ ನಾಯಕರು ಆಗಮಿಸಿದ್ದರು. ಗೋಕುಲ್ ಕುಟುಂಬಸ್ಥರ ಜೊತೆಗೆ ಮಾತನಾಡಿ ಬಳಿಕ ತಮ್ಮಲ್ಲಿಯೇ ಮಾತನಾಡಿಕೊಂಡ ನಾಯಕರು, ಭೂಮಿ ಫಲವತ್ತಾಗಿದೆ, ಉಳಿಮೆ ಮಾಡಿದರೆ ಉತ್ತಮ ಬೆಳೆಯನ್ನು ತೆಗೆಯಬಹುದು ಅಂತಾ ಹೇಳಿಕೊಂಡರು ಎಂದರು ಮಹೇಂದ್ರ ಕುಮಾರ್ ಹೇಳಿದರು.

    ಸಂಘ ಪರಿವಾರದವರು ಸಾವಿನಲ್ಲಿಯೂ ಲಭ ಪಡೆಯುವ ಯೋಚನೆಯನ್ನು ಮಾಡುತ್ತಿದ್ದಾರೆ. ಯುವಕರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದು ಯಾರಿಗೂ ಅರ್ಥವಾಗುತ್ತಿಲ್ಲ ಎಂದು ದೂರಿದ ಅವರು, ಸಂಘ ಪರಿವಾರಕ್ಕೆ ಬಿಜೆಪಿಯನ್ನು ಬಿಟ್ಟು ಬೇರೆ ಯಾವುದೇ ಉದ್ದೇಶವಿಲ್ಲ. ದೇಶದ ಮೂಲೆ ಮೂಲೆಯ ಕಾರ್ಯಕರ್ತರ ಫಲವನ್ನು ನಾಯಕರು ಬಿಜೆಪಿಗೆ ಎರೆಯುತ್ತಿದ್ದಾರೆ. ಆದರೆ ಬಿಜೆಪಿ ಬತ್ತಳಿಕೆಯಲ್ಲಿ ಎಲ್ಲವೂ ಖಾಲಿಯಾದಾಗ ಅಯೋಧ್ಯೆ ವಿಚಾರ ಮುನ್ನೆಲೆಗೆ ಬರುತ್ತದೆ ಎಂದು ಕಿಡಿಕಾರಿದರು.

    https://www.youtube.com/watch?v=uQXYSAVoCbs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮಂಗಳೂರಿನಲ್ಲಿಯೇ ಮುಹೂರ್ತ?

    ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮಂಗಳೂರಿನಲ್ಲಿಯೇ ಮುಹೂರ್ತ?

    ಮಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಹೂರ್ತ ನಿಗದಿ ಮಾಡಲು ಮುಂದಾಗಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿವೆ.

    ಗುರುವಾರ ಸಂಘನಿಕೇತನದಲ್ಲಿ ನಡೆಯುತ್ತಿರುವ ಆರ್‍ಎಸ್‍ಎಸ್ ಅಖಿಲ ಭಾರತ ಬೈಠಕ್‍ನಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. ಈ ವೇಳೆ ದೇಶದ ವಿವಿಧ ಪ್ರದೇಶಗಳಿಂದ 400ಕ್ಕೂ ಹೆಚ್ಚು ಪ್ರತಿನಿಧಿಗಳು ಆಗಮಿಸಿಲಿದ್ದಾರೆ. ಕಾರ್ಯಕ್ರಮದ ಪೂರ್ವ ಸಿದ್ಧತೆ ಉದ್ದೇಶದಿಂದ ಅಮಿತ್ ಶಾ ಮಂಗಳವಾರ ಸಂಜೆಯೇ ನಗರಕ್ಕೆ ಭೇಟಿ ನೀಡಿ ವಾಸ್ತವ್ಯ ಹೂಡಿದ್ದಾರೆ.

    ಅಮಿತಾ ಶಾ ನೇತೃತ್ವದ ಬೈಠಕ್‍ನಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಲೋಕಸಭಾ ಚುನಾವಣೆ ಕುರಿತು ಚರ್ಚೆ ನಡೆಯಲಿದೆ. ಹೀಗಾಗಿ ರಾಮ ಮಂದಿರದ ನಿರ್ಮಾಣದ ಕೂಗಿಗೆ ಮಂಗಳೂರಿನಿಂದಲೇ ಮುಹೂರ್ತ ನಿಗದಿ ಮಾಡಲಾಗುತ್ತಿದೆಯಂತೆ. ಮಂಗಳೂರು ಅಷ್ಟೇ ಅಲ್ಲದೆ ವಾರಣಾಸಿಯಲ್ಲಿಯೂ ಏಕಾಲದಲ್ಲಿ ಬೈಠಕ್ ಆಯೋಜಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಅಖಿಲ ಭಾರತ ಬೈಠಕ್ ನವೆಂಬರ್ 8ರಂದು ಆರಂಭವಾಗಿದ್ದು, 16ರವರೆಗೆ ನಡೆಯಲಿದೆ. ಅತ್ಯಂತ ಗೌಪ್ಯವಾಗಿ ಬೈಠಕ್ ಕಾರ್ಯಕ್ರಮ ಸಂಘ ಪರಿವಾರದ ನಾಯಕರು ನಡೆಸುತ್ತಿದ್ದಾರೆ. ಹೀಗಾಗಿ ಅಮಿತ್ ಶಾ ಅವರು ಗುರುವಾರ ಬೈಠೆಕ್ ಕಾರ್ಯಕ್ರಮದ ಭಾಗವಹಿಸಿ, ಲೋಕಸಭಾ ಚುನಾವಣಾ ಸಿದ್ಧತೆ, ರಾಮ ಮಂದಿರ ನಿರ್ಮಾಣದ ಕುರಿತಾಗಿ ಚರ್ಚೆ ನಡೆಸಲಿದ್ದಾರೆ. ಸಂಘಟನೆಯ ಸ್ಥಳೀಯ ಮುಂಖಡರ ನಿಲುವು ತಿಳಿದು ದೆಹಲಿಗೆ ಮರಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews