Tag: Sangeeta Sringeri

  • ಪಕ್ಕದಲ್ಲಿ ಕೂರಿಸಿಕೊಂಡು ಚೈಲ್ಡ್ ವುಡ್ ಕ್ರಶ್ ಪರಿಚಯಿಸಿದ ಸಂಗೀತಾ

    ಪಕ್ಕದಲ್ಲಿ ಕೂರಿಸಿಕೊಂಡು ಚೈಲ್ಡ್ ವುಡ್ ಕ್ರಶ್ ಪರಿಚಯಿಸಿದ ಸಂಗೀತಾ

    ಬಿಗ್ ಬಾಸ್ ಮನೆಯಿಂದ ಆಚೆ ಬರುತ್ತಿದ್ದಂತೆಯೇ ಸಂಗೀತಾ ನಟನೆಯ ಸಿನಿಮಾವೊಂದು ಬಿಡುಗಡೆಗೆ ರೆಡಿಯಾಗುತ್ತಿದೆ. ನಿನ್ನೆಯಷ್ಟೇ ಆ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಈ ಸಮಯದಲ್ಲಿ ತಮ್ಮ ಚೈಲ್ಡ್ ವುಡ್ ಕ್ರಶ್ (Child Wood Crush) ಬಗ್ಗೆ ಮಾತನಾಡಿದ್ದಾರೆ ಸಂಗೀತಾ. ಅದು ಆ ಕ್ರಶ್ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡು ಪರಿಚಯಿಸಿದ್ದಾರೆ. ಸಂಗೀತಾ ಚೈಲ್ಡ್ ವುಡ್ ಕ್ರಶ್ ಬೇರೆ ಯಾರೂ ಅಲ್ಲ ದೂದ್ ಪೇಡಾ ದಿಗಂತ್ ಎನ್ನುವುದು ವಿಶೇಷ.

    ಕ್ರಶ್ ಜೊತೆ ಸಂಗೀತಾ ಸಿನಿಮಾ

    ರಘುವರ್ಧನ್ ನಿರ್ಮಾಣ ಮಾಡಿ  ರಾಘವೇಂದ್ರ ಎಂ. ನಾಯ್ಕ. ಆಕ್ಷನ್ ಕಟ್ ಹೇಳಿರುವ ‘ಮಾರಿ ಗೋಲ್ಡ್‘ (Marigold) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಬಳಿಕ ಮಾತಿಗಿಳಿದ ನಿರ್ಮಾಪಕ ರಘುವರ್ಧನ್, ಗುಣವಂತ ಸೇರಿ ಹಲವು ಚಿತ್ರ ನಿರ್ದೇಶನ ಮಾಡಿದ್ದೇನೆ. ರಾಘವೇಂದ್ರ ನಾಯ್ಕ್ ಹೇಳಿದ ಕಥೆ ಇಷ್ಟವಾಯಿತು. ನಾನು ನಿರ್ಮಾಣ ಮಾಡುತ್ತೇನೆ. ನೀವೇ ನಿರ್ದೇಶನ ಮಾಡಿ ಎಂದು ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಚಿತ್ರ ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಮೂಡಿ ಬಂದಿದೆ. ನಾಯಕ ದಿಗಂತ್ (Diganth), ನಾಯಕಿ ಸಂಗೀತಾ (Sangeetha Sringeri) ಸಹಕಾರ ಅದ್ಬುವಾಗಿತ್ತು. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಎರಡನೇ ಅಥವಾ ಮೂರನೇ ವಾರ ಚಿತ್ರ ತೆರೆಗೆ ತರುವ ಉದ್ದೇಶವಿದೆ ಸಹಕಾರವಿರಲಿ ಎಂದರು.

    ನಿರ್ದೇಶಕ  ರಾಘವೇಂದ್ರ ಎಂ, ನಾಯ್ಕ್  ಮಾತನಾಡಿ,  ಮಾರಿ ಗೋಲ್ಡ್ ಗೋಲ್ಡ್ ಬಿಸ್ಕಟ್ ಮಾರಲು ಹೋದ 4 ಜನ ಹುಡುಗರ ಕಥೆ, ಚಿತ್ರದುರ್ಗ, ಬೆಂಗಳೂರು ಸಕಲೇಶಪುರ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ. ಕೋವಿಡ್ ಆದ ಮೇಲೆ ಆ ನಂತರದ ಬೆಳವಣಿಗೆಗಳು ಚಿತ್ರ ವಿಳಂಬಕ್ಕೆ ಕಾರಣವಾಯಿತು. ಈಗ ಬಿಡುಗಡೆಗೆ ಸಜ್ಜಾಗಿದೆ. ಟೀಸರ್ ಮೂಲಕ ಪ್ರಚಾರ ಆರಂಬಿಸಿದ್ದೇವೆ ಎಂದು ಹೇಳಿದರು. ಶುದ್ದ ಮನರಂಜನೆಗೆ ಒತ್ತು ನೀಡಿ ಚಿತ್ರ ಮಾಡಲಾಗಿದೆ. ಚಿತ್ರದ ಮೂಲಕ  ದಿಗಂತ್ ಅವರನ್ನು ಬೇರೆ ರೀತಿ ತೋರಿಸುವ ಪ್ರಯತ್ನ ಮಾಡಲಾಗಿದೆ‌. ಚಿತ್ರೀಕರಣಕ್ಕೂ ಮುನ್ನ ದಿಗಂತ್ ಅವರಿಗೆ ರಿಹಸರ್ಲ್ ಮಾಡಲಾಗಿದೆ. ಮನರಂಜನೆ ಡ್ರಾಮ ಮತ್ತು ಥ್ರಿಲ್ಲರ್ ಕಥೆ ಹೊಂದಿದೆ ಎಂದು ಮಾಹಿತಿ ನೀಡಿದರು.

    ನಟ ದಿಗಂತ್ ಮಾತನಾಡಿ, ಹೆಸರಾಂತ ನಿರ್ಮಾಪಕ ಹಣ ನೀಡಿದ್ದು, ಆದರೆ ಅದು ಅಲ್ಲಿಯೇ ನಿಂತಿದೆ. ಮಾರಿಗೋಲ್ಡ್ ಮೇಲೆ ನಿರ್ದೇಶಕರ ಜೊತೆ ಸಿನಿಮಾ ಮಾಡಬಹುದು. ಕಥೆ ಇಷ್ಡವಾಯಿತು, ಯಶ್ ಶೆಟ್ಟಿ, ಸಂಗೀತ ಶೆಟ್ಟಿ, ಸಂಪತ್, ಕಾಕ್ರೋಚ್ ಸುಧಿ, ಟ್ರೈಲರ್ ಇಷ್ಟವಾದರೆ ಎಲ್ಲರಿಗೂ ಹೇಳಿ, ಸಿನಿಮಾ ಗೆದ್ದರೆ ಮತ್ತಷ್ಟು ಮಾಡೋಣ ಎಂದಿದ್ದಾರೆ. ಚಿತ್ರದಲ್ಲಿ  ಬುದ್ದಿವಂತ ಸ್ಕಾಮರ್ ಪಾತ್ರ ಎಂದಿದ್ದಾರೆ. ನಟಿ ಸಂಗೀತಾ ಶೃಂಗೇರಿ ಮಾತನಾಡಿ, ನಟ ದಿಗಂತ್ ನನ್ನ ‌ ಚೈಲ್ಡ್ ವುಡ್ ಕ್ರಷ್. ಅದನ್ನು ಅವರಿಗೂ ಹೇಳಿದ್ದೇನೆ. ಎಲ್ಲವೂ ಊಹೆ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ. ಛಾಯಾಗ್ರಾಹಕ ಚಂದ್ರಶೇಖರ್ ಉತ್ತಮವಾಗಿ ತೋರಿಸಿದ್ದಾರೆ‌. ಚಿತ್ರದಿಂದ ಸುಮಾರು‌ ವರ್ಷದ ಕನಸು ನನಸಾಗಿದೆ ಎಂದರು

    ಕಲಾವಿದ ಭಜರಂಗ ಶೆಟ್ಟಿ ಮಾತನಾಡಿ,  ಮಾರಿಗೋಲ್ಡ್‌ನಲ್ಲಿ ನಟಿಸಲು ಗೆಳೆಯ ಯಶ್ ಶೆಟ್ಟಿ ಕಾರಣ ಕೋವಿಡ್ ಸಮಯದಲ್ಲಿ ಊರಲ್ಲಿ‌ ಮೀನು ಹಿಡಿಯುತ್ತಿದ್ದೆ. ಬಳಿಕ ಕಾಕ್ರೋಚ್‌ ಸುಧಿ ಮಾತನಾಡಿದರು. ನಂತರ ನಿರ್ದೇಶಕರು ಮಾತನಾಡಿದ ಮಾಹಿತಿ ಹಂಚಿಕೊಂಡರು. ಸಂಭಾಷಣೆ ಬರೆದಿರುವ ರಘು ನಿಡವಳ್ಳಿ ವಿಭಿನ್ನ ಸಂಭಾಷಣೆ ಇದೆ ಎಂದರೆ ಸಂಗೀತ ನಿರ್ದೇಶಕ ವೀರ್ ಸಮರ್ಥ್ , ಚಿತ್ರದಲ್ಲಿ ಎರಡೆ ಹಾಡು ಇವೆ. ಇದೊಂದು ಥ್ರಿಲ್ಲರ್ ಸಿನಿಮಾ ಆಕ್ಷನ್ ಸಿನಿಮಾ, ಸಿನಿಮಾ‌ ಹಿಟ್ ಆದರೆ ದಿಗಂತ್ ಆಕ್ಷನ್ ಹೀರೋ ಆಗಲಿದ್ದಾರೆ. ಯೋಗರಾಜ್ ಭಟ್, ವಿಜಯ್ ಭರಮಸಾಗರ, ಕವಿರಾಜ್ ಹಾಡು ಬರೆದಿದ್ದಾರೆ. ಗೆಲವಿನ ಆಶಾಕಿರಣ ಇದೆ ಎಂದರು.

     

    ಛಾಯಾಗ್ರಾಹಕ ಚಂದ್ರಶೇಖರ್ ಹೊಸ ಜಾನರ್ ಸಿನಿಮಾ, ಥ್ರಿಲ್ಲರ್ ಸಿನಿಮಾ ಮಾಡಿರಲಿಲ್ಲ. ನಿರ್ಮಾಪಕ ರಘುವರ್ಧನ್ ಜೊತೆ ಗುಣವಂತದಲ್ಲಿ ಕೆಲಸ ಮಾಡಿದ್ದೆ. ಈಗ ಅವರ ನಿರ್ಮಾಣದಲ್ಲಿ ಕೆಲಸ ಮಾಡಿದ್ದೇವೆ ಎಂದರು. ಚಿತ್ರದಲ್ಲಿ ದಿಗಂತ್ ಮಂಚಾಲೆ, ಸಂಗೀತ ಶ್ರಂಗೇರಿ, ಸಂಪತ್ ಮೈತ್ರೇಯ, ಯಶ್ ಶೆಟ್ಟಿ, ಕಾಕ್ರೋಚ್ ಸುಧೀ, ವಜ್ರಾಂಗ್ ಶೆಟ್ಟಿ, ಬಾಲಾ ರಾಜವಾಡಿ, ಮಹಂತೇಶ್, ಸಂದೀಪ್ ಮಲಾನಿ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.

  • Bigg Boss Kannada: ಬ್ಯಾಂಗಲ್ ಕ್ವೀನ್ ಸಂಗೀತಾ ಜರ್ನಿ ಅಷ್ಟು ಸಲೀಸಾಗಿರಲಿಲ್ಲ

    Bigg Boss Kannada: ಬ್ಯಾಂಗಲ್ ಕ್ವೀನ್ ಸಂಗೀತಾ ಜರ್ನಿ ಅಷ್ಟು ಸಲೀಸಾಗಿರಲಿಲ್ಲ

    ಬಿಗ್‌ಬಾಸ್‌ ಕನ್ನಡ 10ನೇ (Bigg Boss Kannada) ಸೀಸನ್‌ ಎರಡನೇ ರನ್ನರ್ ಅಪ್ (Second Runner up) ಆಗಿ ಸಂಗೀತಾ ಶೃಂಗೇರಿ (Sangeeta Sringeri) ಅವರು ಹೊರಹೊಮ್ಮಿದ್ದಾರೆ. ಬಿಗ್‌ಬಾಸ್ ಸೀಸನ್‌ನ ‘ಸಿಂಹಿಣಿ’ ಎಂದೇ ಪ್ರಸಿದ್ಧರಾಗಿದ್ದ ಸಂಗೀತಾ, ತಮ್ಮ ನೇರ ಮಾತು, ದಿಟ್ಟ ನಿಲುವಿನಿಂದ ಜನರ ಮೆಚ್ಚುಗೆ ಗಳಿಸಿದ್ದರು. ವರ್ತೂರು ಸಂತೋಷ್ ಮತ್ತು ವಿನಯ್ ಗೌಡ ಅವರು ಕ್ರಮವಾಗಿ ಮನೆಯಿಂದ ಹೊರಹೋಗುತ್ತಿದ್ದಂತೆಯೇ ಮನೆಯಲ್ಲಿ ಉಳಿದಿದ್ದವರು ಕಾರ್ತಿಕ್, ಸಂಗೀತಾ ಮತ್ತು ಪ್ರತಾಪ್. ಸ್ವತಃ ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ, ಕಾಫಿ ಕುಡಿದು ಹರಟಿ ನಂತರ ಬಿಗ್‌ಬಾಸ್‌ ಮನೆಯಿಂದ ಬೀಳ್ಕೊಟ್ಟು ಮೂವರೂ ಸ್ಪರ್ಧಿಗಳನ್ನು ಮುಖ್ಯವೇದಿಕೆಗೆ ಕರೆತಂದರು.

    ಮುಖ್ಯವೇದಿಕೆಯಲ್ಲಿ ನಿಂತಿದ್ದ ಮೂವರು ಸ್ಪರ್ಧಿಗಳ ಮುಖದಲ್ಲಿ ಆತಂಕ ಎದ್ದು ಕಾಣಿಸುತ್ತಿತ್ತು. ಸ್ಪರ್ಧಿಗಳ ಮುಖದಲ್ಲಿಯಷ್ಟೇ ಅಲ್ಲ, ವೇದಿಕೆಯ ಪಕ್ಕ ಕೂತ ಹಿಂದಿನ ಸ್ಪರ್ಧಿಗಳು, ಎದುರಿನಲ್ಲಿನ ಪ್ರೇಕ್ಷರು ಎಲ್ಲರ ಮುಖದಲ್ಲಿಯೂ ಆತಂಕ ಎದ್ದು ಕಾಣಿಸುತ್ತಿತ್ತು. ಫಿನಾಲೆ ವೀಕ್‌ನಲ್ಲಿ ಇದ್ದ ಒಬ್ಬರೇ ಒಬ್ಬರು ಮಹಿಳಾ ಸ್ಪರ್ಧಿ ಸಂಗೀತಾ ಗಟ್ಟಿ ವ್ಯಕ್ತಿತ್ವದಿಂದಲೇ ತನ್ನ ದಾರಿ ನಿರ್ಮಿನಿಸಿಕೊಂಡವರು. ಅವರ ಜರ್ನಿಯ ಏಳುಬೀಳುಗಳನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

    ಬಿಗ್‌ಬಾಸ್‌ ಸೀಸನ್‌ 10 ಪ್ರಾರಂಭವಾಗುವುದಕ್ಕೂ ಹಿಂದೆ ಈ ಹೆಸರು ಕೇಳಿದಾಗ ಮನಸಲ್ಲಿ ಎರಡು ಬಗೆಯ ಚಿತ್ರಗಳು ಮೂಡುತ್ತಿತ್ತು. ಒಂದು, ಪೌರಾಣಿಕ ಧಾರಾವಾಹಿಯೊಂದರ ದೇವಿ ಪಾತ್ರದ ಸೌಮ್ಯಮುಖ. ಇನ್ನೊಂದು ‘ಚಾರ್ಲಿ 777’ ಸಿನಿಮಾದ ನಾಯಕಿಯ ಮುಗ್ಧ ಮುಖ. ಮೆಲುವಾಗಿ ಮಾತಾಡುವ, ಮಿತವಾಗಿ ನಗುವ ಈ ಹುಡುಗಿ ಬಿಗ್‌ಬಾಸ್‌ ಮನೆಗೆ ಬಂದಾಗ ಪ್ರೇಕ್ಷಕರ ಹುಬ್ಬುಗಳು ಮೇಲೇರಿದ್ದವು. ಆದರೆ ಬಿಗ್‌ಬಾಸ್‌ ಸೀಸನ್‌ 10 ಮುಗಿದ ಈ ಕ್ಷಣದಲ್ಲಿ ಅದೇ ‘ಸಂಗೀತಾ ಶೃಂಗೇರಿ’ ಎಂಬ ಹೆಸರು ಕೇಳಿದರೆ ಮನಸಲ್ಲಿ ಮೂಡುವ ಚಿತ್ರಗಳು ಒಂದೆರಡಲ್ಲ; ನೂರಾರು! ಅದರಲ್ಲಿಯೂ ಮೇಲೆ ಹೇಳಿದ ಎರಡು ಬಗೆಯ ಚಿತ್ರಗಳಂತೂ ಕಾಣಿಸುವುದೇ ಇಲ್ಲ. ಅಸಮರ್ಥೆಯಾಗಿ ಚಿಂತಿತ ಮುಖದಲ್ಲಿ ಕೂತಿದ್ದ ಹುಡುಗಿ ಆತ್ಮವಿಶ್ವಾಸದ ಗಟ್ಟಿ ವ್ಯಕ್ತಿತ್ವದ ಹುಡುಗಿ, ಕೋಪದಲ್ಲಿ ಕಿಡಿಕಾರುತ್ತ ನಿಂತಿರುವ ಹುಡುಗಿ, ದುಃಖದಲ್ಲಿ ಒಬ್ಬಂಟಿಯಾಗಿ ಕೂತು ಬಿಕ್ಕಿ ಬಿಕ್ಕಿ ಅಳುತ್ತಿರುವ ಹುಡುಗಿ, ಆಟದಲ್ಲಿ ಜೀವಕೊಟ್ಟು ಆಡುವ ಜಿದ್ದಿನ ಹುಡುಗಿ, ಮುಖದ ಎದುರೇ ಮಾತಾಡಿ ಜಗಳಕ್ಕೆ ನಿಲ್ಲುವ ಜಗಳಗಂಟಿ ಹುಡುಗಿ, ಸ್ನೇಹದ ಹೆಗಲಿಗೆ ಒರಗುವ ಮುಗುಳುನಗೆಯ ಹುಡುಗಿ, ತಂತ್ರಗಾರಿಕೆಯ ಜಾಣ ಹುಡುಗಿ, ತನ್ನ ಸ್ನೇಹಿತರಿಂದಾದ ಸಣ್ಣ ನೋವನ್ನೂ ಸಹಿಸಿಕೊಳ್ಳದ ಹಟಮಾರಿ ಹುಡುಗಿ… ಟಿಕೆಟ್‌ ಟು ಫಿನಾಲೆ ವಾರದಲ್ಲಿ ಗೆದ್ದು ಮೊದಲು ಫಿನಾಲೆ ವಾರಕ್ಕೆ ಕಾಲಿಟ್ಟ ಮೊದಲ ಸ್ಪರ್ಧಿ ಅಬ್ಬಾ! ನೂರು ದಿನಗಳನ್ನು ದಾಟಿದ ಈ ಬಿಗ್‌ಬಾಸ್‌ ಮನೆಯಲ್ಲಿ ನೂರಾರು ನೆನಪುಗಳ ಚಿತ್ರವನ್ನು ಮೂಡಿಸಿದ ಹುಡುಗಿ ಈ ಸಂಗೀತಾ ಶೃಂಗೇರಿ.

    ಸಂಗೀತಾ ಅವರ ಬಿಗ್‌ಬಾಸ್‌ ಜರ್ನಿಯನ್ನು ಕೆಲವೇ ಸಾಲುಗಳಲ್ಲಿ ಹಿಡಿದಿಡಲು ಸಾಧ್ಯವೇ ಇಲ್ಲ. ಅಷ್ಟೊಂದು ಏರಿಳಿತಗಳು, ಅಷ್ಟೊಂದು ತಿರುವುಗಳು, ಅಷ್ಟೊಂದು ಅಚ್ಚರಿಗಳು ಅವರ ಈ ಪ್ರಯಾಣದಲ್ಲಿ ತುಂಬಿಕೊಂಡಿವೆ. ಹಲವು ಸಲ ಅವರು ಈ ಪ್ರಯಾಣವನ್ನು ಮೊಟಕುಗೊಳಿಸಿ ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ಹೇಳಿದ್ದರು. ಒಮ್ಮೆಯಂತೂ ಅವರಿಗಾದ ಗಾಯದಿಂದಾಗಿ ಅನಿವಾರ್ಯವಾಗಿ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಿ ಆಸ್ಪತ್ರೆಗೆ ದಾಖಲಾಗಬೇಕಾಯ್ತು. ಆದರೆ ಇಂದು ಅವನ್ನೆಲ್ಲ ನೆನಪಿಸಿಕೊಂಡರೆ ಸಂಗೀತಾ, ‘ನಾನೆಂಥ ಅನುಭವವನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ’ ಎಂದು ಉದ್ಘರಿಸಿದ್ದಾರೆ. ‘ಕೋಟಿ ಕೊಟ್ಟರೂ ನಾನು ಬಿಗ್‌ಬಾಸ್‌ಗೆ ಹೋಗಲ್ಲ’ ಎಂದು ಹಿಂದೊಮ್ಮೆ ಹೇಳಿದ್ದ ಸಂಗೀತಾ, ಈಗ ಕೋಟಿ ಕೊಟ್ಟರೂ ಸಿಗದ ಅನುಭವದ ಮೂಟೆಯನ್ನು ಹೊತ್ತುಕೊಂಡು ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದಾರೆ. ಅವರ ಜರ್ನಿಯ ಕೆಲವು ಮುಖ್ಯ ಸಂಗತಿಗಳನ್ನು ಕಟ್ಟಿಕೊಡುವ ಪ್ರಯತ್ನ.

    ಅಸಮರ್ಥಳಾಗಿ ಬಿಗ್‌ಬಾಸ್ ಮನೆಯೊಳಗೆ ಕಾಲಿಟ್ಟ ಸಂಗೀತಾ ಮೊದಲ ವಾರದಲ್ಲಿಯೇ ಸಾಕಷ್ಟು ವಿರೋಧ ಎದುಸಿರಬೇಕಾಯ್ತು. ಮನೆಯ ನಿಯಮವನ್ನು ಉಲ್ಲಂಘನೆ ಮಾಡಿ ಸೋಪಾದ ಮೇಲೆ ಕೂತಿದ್ದು ವಿನಯ್ ಅವರ ಜೊತೆಗೆ ಘರ್ಷಣೆಗೆ ಮೂಲವಾಯ್ತು. ಇದೇ ವಿಷಯ ವಾರದ ಕೊನೆಯ ಎಲಿಮಿನೇಷನ್‌ನಲ್ಲಿಯೂ ಪ್ರತಿಧ್ವನಿಸಿತು. ಅದೇ ವಾರದಲ್ಲಿ ಸಂಗೀತಾ ಅವರಿಗೆ ಸಗಣಿನೀರಿಸ ಸ್ನಾನವೂ ಆಯಿತು. ಆ ಘಟನೆ ಅವರನ್ನು ಕುಗ್ಗಿಸಲಿಲ್ಲ. ಬದಲಿಗೆ ಸಿಡಿದು ಪುಟಿದೇಳುವಂತೆ ಮಾಡಿತು. ಅಲ್ಲಿಂದ ಮುಂದೆ ಸಂಗೀತಾ ಹಿಂತಿರುಗಿ ನೋಡಿದ್ದೇ ಇಲ್ಲ. ಮೊದಲ ದಿನ ಸಂಗೀತಾ ಕಿಚ್ಚನ ಜೊತೆ ವೇದಿಕೆ ಹಂಚಿಕೊಂಡಾಗ, ‘ನಾನು ತುಂಬ ಕಾಮ್ ಕೂಲ್ಕ ಹುಡುಗಿಯ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದೀನಿ. ಆದರೆ ನಾನೆಷ್ಟು ಬೋಲ್ಡ್ ಅನ್ನುವುದನ್ನು ಜನರು ಬಿಗ್‌ಬಾಸ್ ಮನೆಯಲ್ಲಿ ನೋಡುತ್ತಾರೆ’ ಎಂದು ಹೇಳಿಕೊಂಡಿದ್ದರು. ಅದನ್ನು ಅಕ್ಷರಶಃ ಸಾಧಿಸಿದ್ದಾರೆ ಸಂಗೀತಾ. ಹಾಗಾಗಿ ಸಗಣಿನೀರಿನಲ್ಲಿ ಸ್ನಾನ ಮಾಡಿದ್ದು ಅವರ ಬಿಗ್‌ಬಾಸ್ ಜರ್ನಿಗೆ ಒಳ್ಳೆಯ ಆರಂಭವನ್ನೇ ಒದಗಿಸಿತು ಎನ್ನಬಹುದು.

    ಪ್ರತಿ ಶುಕ್ರವಾರ ಬರುತ್ತಿದ್ದ ಫನ್‌ಪ್ರೈಡೆ ಟಾಸ್ಕ್‌ಗಳಲ್ಲಿ ಸಂಗೀತಾ ಹಲವು ಬಾರಿ ಮಿಂಚಿದ್ದಾರೆ. ಅದರಲ್ಲಿಯೂ ‘ಚಂಡ ಮಾರುತ’ ಟಾಸ್ಕ್‌ನಲ್ಲಿ ಸಂಗೀತಾ ಮತ್ತು ಕಾರ್ತಿಕ್ ಸೇರಿ ಗೆಲುವಿನ ನಗೆ ಬೀರಿದ್ದೊಂದು ಗಮನಾರ್ಹ ಗಳಿಗೆ. ಅಂತಿಮ ಘಟ್ಟದಲ್ಲಿ ವಿನಯ್ ಮತ್ತು ತುಕಾಲಿ ಸಂತೋಷ್ ಅವರು ಎದುರಾದಾಗ, ಸಂಗೀತಾ, ಕಾರ್ತಿಕ್ ಜೊತೆಗೂಡಿ ತುಂಬ ಚೆನ್ನಾಗಿ ಆಡಿ ಗೆಲುವು ದಾಖಲಿಸಿದ್ದರು. ಸಂಗೀತಾ- ಕಾರ್ತೀಕ್ ಜೊತೆಗೂಡಿ ಗೆಲುವು ದಾಖಲಿಸಿದ ಮತ್ತೊಂದು ಫನ್‌ಫ್ರೈಡೆ ಟಾಸ್ಕ್‌ ‘ಬ್ರೇಕ್‌ ದ ಬಲೂನ್‌’ ಈ ಸಲ ಅವರಿಗೆ ಎದುರಾಗಿದ್ದು ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್‌ ಜೋಡಿ. ಅವರನ್ನು ಯಶಸ್ವಿಯಾಗಿ ಹಿಂದಿಕ್ಕಿದ ಸಂಗೀತಾ ಜೋಡಿ ಟಾಸ್ಕ್‌ನಲ್ಲಿ ಗೆಲುವು ದಾಖಲಿಸಿತ್ತು.

    ಎರಡನೇ ವಾರದಲ್ಲಿ ಸಂಗೀತಾ ಇದ್ದ ರಣಶಕ್ತಿ ತಂಡ, ವಿನಯ್ ಅವರಿದ್ದ ಮಾಣಿಕ್ಯ ತಂಡದ ವಿರುದ್ಧ ಸೋತಿತ್ತು. ಆ ಸಮಯದಲ್ಲಿ ವಿನಯ್ ಮತ್ತು ಸಂಗೀತಾ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಈ ಬಿರುಕು ಹಲವು ವಾರಗಳ ಕಾಲ ಉರಿಯುತ್ತಲೇ ಹೋಗಿತ್ತು.

  • ನಮ್ರತಾ ‘ಬಿಗ್ ಬಾಸ್’ ಜರ್ನಿ ಬಲು ರೋಚಕ

    ನಮ್ರತಾ ‘ಬಿಗ್ ಬಾಸ್’ ಜರ್ನಿ ಬಲು ರೋಚಕ

    ‘ಪುಟ್ಟಗೌರಿ ಮದುವೆ’ ಧಾರಾವಾಹಿಯ ಮೂಲಕ ನಟನೆಗೆ ಕಾಲಿಟ್ಟ ನಮ್ರತಾ ಗೌಡ (Namrata), ಬಿಗ್‌ ಬಾಸ್‌ (Bigg Boss Kannada) ವೇದಿಕೆಗೆ ಕಾಲಿಟ್ಟಿದ್ದು ‘ಡೊಂಟ್ ಯು ನೋ… ಐ ಆಮ್ ವೆರಿ ಸೆಕ್ಸಿ’ ಎಂದು ಹಾಡುತ್ತ… ಸೌಂದರ್ಯ, ಆತ್ಮವಿಶ್ವಾಸ ಮತ್ತು ಸ್ಪಷ್ಟತೆಯ ಹದವಾದ ಮಿಶ್ರಣದಂತೆ ಕಾಣಿಸಿದ್ದ ನಮ್ರತಾ ಅವರಿಗೆ ಪ್ರೀಮಿಯರ್ ವೇದಿಕೆಯಲ್ಲಿ ಶೇಕಡಾ ಮತಗಳು ಬಂದಿದ್ದವು. ಈ ಸೀಸನ್‌ನ ಮೊದಲ ಸ್ಪರ್ಧಿಯಾಗಿ ಅವರು ಬಿಗ್‌ಬಾಸ್‌ ಮನೆಯೊಳಗೆ ಕಾಲಿಟ್ಟಿದ್ದರು. ‘ಹ್ಯಾಪಿ ಬಿಗ್‌ಬಾಸ್‌’ ಎಂಬ ಟ್ಯಾಗ್‌ಲೈನ್‌ ಅನ್ನು ತಮ್ಮ ವ್ಯಕ್ತಿತ್ವಕ್ಕೂ ನೇತುಹಾಕಿಕೊಂಡಂತಿದ್ದ ನಮ್ರತಾ ಅವರು ಸದಾ ನಗುನಗುತ್ತಲೇ ಎಲ್ಲರ ಗಮನ ಸೆಳೆದಿದ್ದರು.

    ಬಿಗ್‌ಬಾಸ್ ಮನೆಯೊಳಗೆ ದಿನಗಳನ್ನು ಕಳೆಯಲಾರಂಭಿಸಿದಂತೆ, ವಿನಯ್, ತುಕಾಲಿ ಸಂತೋಷ್, ಇಶಾನಿ, ಮೈಕಲ್, ಸ್ನೇಹಿತ್‌, ಗೌರಿಶ್ ಮತ್ತು ಸಿರಿ ಅವರ ಜೊತೆಗೆ ಆಪ್ತರಾಗಿದ್ದರು. ‘ಶಾಡೋ’, ‘ಚಮಚ’ ‘ಇನ್‌ಪ್ಲ್ಯೂಯೆನ್ಸ್‌ ಆಗುವವರು’ ಪದೇ ಪದೇ ಇಂಥ ಮಾತುಗಳನ್ನು ಕೇಳುತ್ತಲೇ ಬಂದ ನಮ್ರತಾ, ಬಿಗ್‌ಬಾಸ್‌ ಮನೆಯಲ್ಲಿ ಹದಿನೈದು ವಾರಗಳನ್ನು ಉಳಿದುಕೊಂಡಿರುವುದೇ ಈ ಎಲ್ಲವಕ್ಕೂ ಉತ್ತರದಂತಿತ್ತು.

    ಈ ಸೀಸನ್‌ನಲ್ಲಿ ಹಲವು ಏಳುಬೀಳುಗಳನ್ನು ಹಾದು ಅಂತಿಮ ಹಂತಕ್ಕೆ ಒಂದೇ ಹೆಜ್ಜೆ ಉಳಿದಿರುವಾಗ ನಮ್ರತಾ ಮನೆಯಿಂದ ಹೊರಬಿದ್ದಿದ್ದಾರೆ. ಕೊನೆಕೊನೆಯ ದಿನಗಳಲ್ಲಿ ಅವರ ಆಟದ ವೈಖರಿಯನ್ನು ಕಂಡು ಹಿಂದೆ ಜರಿದವರೇ ಅವರನ್ನು ಹೊಗಳಿದ್ದು ಅವರ ಸಾಮರ್ಥ್ಯಕ್ಕೆ ಸಾಕ್ಷಿ. ಅವರ ಜರ್ನಿಯ JioCinemaದಲ್ಲಿ ಕಂಡ ಒಂದು ಕಿರುನೋಟ ಇಲ್ಲಿದೆ. ಜಿಯೊ ಸಿನಿಮಾ ಫನ್‌ ಫ್ರೈಡೆ ಟಾಸ್ಕ್‌ಗಳಲ್ಲಿ ನಮ್ರತಾ ಅವರ ಕಾಂಟ್ರಿಬ್ಯೂಷನ್ ದೊಡ್ಡದಿದೆ. ‘ಹೂಂ ಅಂತಿಯಾ ಊಹೂಂ’ ಅಂತಿಯಾ ಟಾಸ್ಕ್‌ನಲ್ಲಿ ಆನೆಗೆ ನಿಖರವಾಗಿ ಬಾಲ ಬಿಡಿಸುವುದರ ಮೂಲಕ ಅವರು ಗಮನಸೆಳೆದಿದ್ದರು. ಗೇಮ್‌ ಆಡುವುದು, ಜೊತೆಗೆ ಆಡುವ ಆಟಗಾರರಿಗೆ ಪ್ರೋತ್ಸಾಹಿಸುವುದು ಈ ಎರಡರಲ್ಲಿಯೂ ನಮ್ರತಾ ಅವರದ್ದು ಎತ್ತಿದ ಕೈ. ‘ಹುಡುಕಿ ತಂದವರೇ ಮಹಾಶೂರ’ ಟಾಸ್ಕ್‌ನಲ್ಲಿ ಅವರು ತೋರಿದ ಚಾಕಚಕ್ಯತೆ ಅವರ ತಂಡಕ್ಕೆ ದೊಡ್ಡ ಬಲ ತಂದಿತ್ತಿತ್ತು.

    ತನಿಷಾ ಜೊತೆಗೆ ಕ್ಲಾಶ್‌

    ಈ ಸೀಸನ್‌ನ ಆರಂಭದ ದಿನಗಳಲ್ಲಿ ನಮ್ರತಾ ವಿನಯ್ ಮತ್ತು ಇಶಾನಿ ಅವರನ್ನು ಸಾಕಷ್ಟು ಹಚ್ಚಿಕೊಂಡಿದ್ದರು. ಅದರಲ್ಲಿಯೂ ವಿನಯ್‌ ಅವರ ಜೊತೆಗಿನ ಅವರ ಬಾಂಧವ್ಯ ಕೊನೆಯ ದಿನದವರೆಗೂ ಕಿಂಚಿತ್ ಊನಗೊಳ್ಳದೆ ಬೆಳೆದುಕೊಂಡು ಬಂದಿತ್ತು. ಕ್ರಿಕೆಟ್‌ ಟಾಸ್ಕ್‌ನಲ್ಲಿ ತನಿಷಾ ಜೊತೆಗೆ ನಡೆದ ಮಾತಿನ ಚಕಮಕಿ ನಮ್ರತಾ ಅವರ ವ್ಯಕ್ತಿತ್ವದ ಮತ್ತೊಂದು ಸ್ಟ್ರಾಂಗ್ ಆಯಾಮವನ್ನು ಜನರೆದುರು ತೆರೆದಿಟ್ಟಿತ್ತು. ಹಾಗೆಯೇ ‘ಹಳ್ಳಿಮನೆ’ ಟಾಸ್ಕ್‌ನಲ್ಲಿಯೂ ತನಿಷಾ ಜೊತೆಗೆ ನಮ್ರತಾ ಮಾತಿನ ಚಕಮಕಿ ಜೋರಾಗಿಯೇ ನಡೆದಿತ್ತು. ಈ ಚಕಮಕಿ ಬೆಂಕಿಯಾಗಿ ಹೊತ್ತಿಕೊಂಡು ಮನೆಯ ನೆಮ್ಮದಿಯನ್ನೇ ಕೆಡಿಸಿದ್ದು, ಬಿಗ್‌ಬಾಸ್ ಮನೆಯ ಆಚೆಗೂ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಸಂಗೀತಾ ಮತ್ತು ತನಿಷಾ ಜೊತೆಗೆ ಅಂದು ಹುಟ್ಟಿಕೊಂಡಿದ್ದ ಭಿನ್ನಾಭಿಪ್ರಾಯದ ಕಿಡಿ ಆರಲು ಸಾಕಷ್ಟು ದಿನಗಳನ್ನೇ ತೆಗೆದುಕೊಂಡಿತು. ತನಿಷಾ ಮನೆಯಿಂದ ಹೊರಗೆ ಹೋಗುವ ಹೊತ್ತಿನಲ್ಲಿಯೂ ನಮ್ರತಾ ಅವರನ್ನೇ ನಾಮಿನೇಟ್ ಮಾಡಿದ್ದು ಇದಕ್ಕೊಂದು ಉದಾಹರಣೆ. ಆದರೆ ಸಂಗಿತಾ ಜೊತೆಗಿನ ಅವರ ಹಳಸಿದ್ದ ಸಂಬಂಧ ಕೊನೆದಿನಗಳಲ್ಲಿ ಸರಿಹೋಗಿತ್ತು. ನಮ್ರತಾ ಹಲವು ಸಲ ಕುಗ್ಗಿದಾಗ ಸಂಗೀತಾ ಹೆಗಲೆಣೆಯಾಗಿ ನಿಂತು ಸಂತೈಸಿದ್ದರು.

    ಸ್ನೇಹಿತ್ ಜೊತೆಗಿನ ಮಧುರ ಬಾಂಧವ್ಯ

    ಈ ಸೀಸನ್‌ನಲ್ಲಿ ನಮ್ರತಾ ನಂತರ ಮನೆಯೊಳಗೆ ಹೊಕ್ಕಿದ್ದು ಸ್ನೇಹಿತ್‌. ಮನೆಯೊಳಗೆ ಪರಸ್ಪರ ಎಲ್ಲರಿಗಿಂತ ಮೊದಲು ಮೀಟ್ ಆಗಿದ್ದ ಅವರ ನಡುವಿನ ಬಾಂಧವ್ಯ ನಂತರದ ದಿನಗಳಲ್ಲಿಯೂ ಮುಂದುವರಿದಿತ್ತು. ಅದರಲ್ಲಿಯೂ ಸ್ನೇಹಿತ್ ಅವರಂತೂ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ, ‘ನಿಮ್ಮ ಬಗ್ಗೆ ನನಗೆ ಸೀರಿಯಸ್‌ ಆಗಿ ಒಲವಿದೆ’ ಎಂಬರ್ಥದ ಮಾತುಗಳನ್ನು ಆಡಿಯೂ ಇದ್ದರು. ಸದಾ ಕಾಲ ನಮ್ರತಾ ಹಿಂದೆ ಸುತ್ತುತ್ತ, ಸಮಯ ಸಿಕ್ಕಾಗೆಲ್ಲ ಅವರನ್ನು ಹೊಗಳುತ್ತ, ಅವರಿಗೆ ಸಹಾಯ ಮಾಡುತ್ತ ಕೆಲವೊಮ್ಮೆ ಕಿರಿಕಿರಿಯಾಗುಷ್ಟು ಜೊತೆಗಿದ್ದರು ಸ್ನೇಹಿತ್. ನಮ್ರತಾ ಮಾತ್ರ ಅವರನ್ನು ತಮಾಷೆಯಾಗಿಯೇ ನೋಡುತ್ತ, ಅವರ ಮಾತಿಗೆಲ್ಲ ನಗುನಗುತ್ತಲೇ ಹಾರಿಕೆಯ ಉತ್ತರ ನೀಡುತ್ತಿದ್ದರು.

     

    ತಾವು ಎಲಿಮಿನೇಟ್ ಆಗುವ ವಾರದಲ್ಲಿ ಪಡೆದ ವಿಶೇಷ ಅಧಿಕಾರವನ್ನೂ ಸ್ನೇಹಿತ್, ನಮ್ರತಾ ಅವರನ್ನು ಇಂಪ್ರೆಸ್ ಮಾಡುವ ರೀತಿಯಲ್ಲಿಯೇ ಉಪಯೋಗಿಸಿದ್ದು ಮನೆಯ ಉಳಿದವರ ಅಸಮಧಾನಕ್ಕೂ ಕಾರಣವಾಗಿತ್ತು. ಆದರೆ ಸ್ನೇಹಿತ್ ಎಲಿಮಿನೇಟ್ ಆಗುವ ಸುದ್ದಿ ಕೇಳುತ್ತಿದ್ದ ಹಾಗೆಯೇ ನಮ್ರತಾ ಬಿಕ್ಕಿ ಬಿಕ್ಕಿ ಅತ್ತಿದ್ದರು. ಹೋಗುವಾಗ ‘ಇನ್ನು ಮೇಲೆ ನೀವು ನಿಮಗೊಬ್ಬರಿಗೆ ಮಾತ್ರವಲ್ಲ, ನನ್ನ ಪರವಾಗಿಯೂ ಆಡುತ್ತಿದ್ದೀರಿ. ಆಡಿ ಗೆದ್ದು ಬನ್ನಿ’ ಎಂದು ಹೇಳಿಯೇ ಸ್ನೇಹಿತ್ ಹೊರಗೆ ಹೋಗಿದ್ದರು. ಸ್ನೇಹಿತ್ ಅವರ ನೆನಪಿಗಾಗಿ ಅವರು ಕಾಫಿ ಕುಡಿಯುತ್ತಿದ್ದ ಕಪ್ ಅನ್ನು ನಮ್ರತಾ ಉಳಿಸಿಕೊಂಡಿದ್ದರು. ಅಲ್ಲದೆ, ಮನೆಯಲ್ಲಿದ್ದಾಗ ಅವರ ಜೊತೆಗೆ ನಡೆದುಕೊಂಡು ರೀತಿಯ ಬಗ್ಗೆ ಪಶ್ಚಾತ್ತಾಪದಿಂದ ಮಾತಾಡಿದ್ದರು. ತಾವು ಕ್ಯಾಪ್ಟನ್ ಆದಾಗಲೂ ಅದನ್ನು ಸ್ನೇಹಿತ್‌ ಅವರಿಗೆ ಅರ್ಪಿಸಿದ್ದರು.

  • ಪ್ರತಾಪ್, ಸಂಗೀತಾ ಕಣ್ಣಿಗೆ ಹಾನಿ: ಕನ್ನಡಕ ಹಾಕಿಕೊಂಡು ಎಂಟ್ರಿ

    ಪ್ರತಾಪ್, ಸಂಗೀತಾ ಕಣ್ಣಿಗೆ ಹಾನಿ: ಕನ್ನಡಕ ಹಾಕಿಕೊಂಡು ಎಂಟ್ರಿ

    ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಈ ವಾರವಿಡೀ  ಮನೆ ಪ್ರಕ್ಷುಬ್ದವಾಗಿಯೇ ಇತ್ತು. ರಕ್ಕಸರು-ಗಂಧರ್ವರ ನಡುವಿನ ಜಿದ್ದಾಜಿದ್ದಿ ವೈಯಕ್ತಿಕ ಮಟ್ಟಕ್ಕೆ ಇಳಿದು, ದೈಹಿಕವಾಗಿ ಗಾಯಗೊಳ್ಳುವ ಅತಿರೇಕಕ್ಕೂ ಹೋಯಿತು. ಪರಿಣಾಮವಾಗಿ ಸಂಗೀತಾ (Sangeeta Sringeri) ಮತ್ತು ಪ್ರತಾಪ್ (Drone Pratap) ಇಬ್ಬರೂ ಆಸ್ಪತ್ರೆ ಸೇರಿಕೊಳ್ಳುವಂತಾಗಿತ್ತು. ಅದೆಲ್ಲದ ಪರಿಣಾಮವಾಗಿ ಈ ವಾರದ ‘ಕಿಚ್ಚನ ಪಂಚಾಯ್ತಿ’ಯಲ್ಲಿ ಸುಂಟರಗಾಳಿಯೇ ಏಳುವ ಸಂಭವವಿದೆ. ಇದರ ಸೂಚನೆ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸಿಕ್ಕಿದೆ.

    ಗಂಧರ್ವರು ರಕ್ಕಸರಾಗದ್ದಕ್ಕೆ, ರಕ್ಕಸರು ಕಟುಕರಾಗಿ ಬದಲಾಗಿದ್ದಕ್ಕೆ, ವಿನಂತಿಗಳು ಅಪ್ಪಣೆಗಳಾಗಿ ಬದಲಾಗಿದ್ದಕ್ಕೆ ಕಿಚ್ಚ ಸುದೀಪ್‌, ‘ಪಂಚಾಯ್ತಿ’ಯಲ್ಲಿ ಚರ್ಚೆ ನಡೆಸಿದ್ದಾರೆ. ಎರಡು ದಿನಗಳ ಹಿಂದೆಯೇ ಟಾಸ್ಕ್‌ನಲ್ಲಿ ಗಾಯಗೊಂಡು ತುರ್ತಾಗಿ ಪ್ರತಾಪ್-ಸಂಗೀತಾ ಆಸ್ಪತ್ರೆಗೆ ಸೇರಿದ್ದರು. ಅವರ ಬಗ್ಗೆ ಮನೆಯವರಿಗೆ ಸುಳಿವೇ ಇರಲಿಲ್ಲ. ಆದರೆ ಇಂದು ಕಿಚ್ಚನ ಪಂಚಾಯ್ತಿಗೆ ಎಲ್ಲರೂ ರೆಡಿಯಾಗಿ ಕೂತಿದ್ದಾಗ ಬಿಗ್‌ಬಾಸ್ ಮನೆಯ ಬಾಗಿಲು ತೆರೆದುಕೊಂಡಿದೆ. ತೆರೆದ ಬಾಗಿಲಿನಿಂದ ಪ್ರತಾಪ್ ಮತ್ತು ಸಂಗೀತಾ ಇಬ್ಬರೂ ಒಳಗೆ ಬಂದಿದ್ದಾರೆ. ಆದರೆ ಅವರನ್ನು ನೋಡಿ ಮನೆಯವರೆಲ್ಲರೂ ಶಾಕ್ ಆಗಿದ್ದಾರೆ. ತನಿಷಾ ಅವರಂತೂ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

    ಮನೆಯೊಳಗೆ ಬಂದ ಪ್ರತಾಪ್ ಮತ್ತು ಸಂಗೀತಾ ಇಬ್ಬರ ಕಣ್ಣಿಗೂ ಬಿಸಿಲುರಕ್ಷಕ ಕಡುಗಪ್ಪು ಕನ್ನಡಕವನ್ನು ಹಾಕಲಾಗಿದೆ. ಟಾಸ್ಕ್‌ನಲ್ಲಿ ಉಂಟಾದ ಹಾನಿಯ ಪರಿಣಾಮವಾಗಿ ಅವರು ಕನ್ನಡಕ ಧರಿಸಿಯೇ ಮನೆಯೊಳಗೆ ಪ್ರವೇಶಿಸಿದ್ದಾರೆ.

     

    ಹಾಗಾದರೆ, ಪ್ರತಾಪ್ ಮತ್ತು ಸಂಗೀತಾ ಆರೋಗ್ಯ ಈಗ ಹೇಗಿದೆ? ಅವರು ಬಿಗ್‌ಬಾಸ್ ಮನೆಯಲ್ಲಿ ಮುಂದುವರಿಯುವಷ್ಟು ಆರೋಗ್ಯವಂತರಾಗಿದ್ದಾರೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ ವಾರದ ವೀಕೆಂಡ್‌ ಎಪಿಸೋಡ್‌ನಲ್ಲಿ ಸಿಗಲಿದೆ.

  • ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡ್ರೋನ್, ಸಂಗೀತಾ

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡ್ರೋನ್, ಸಂಗೀತಾ

    ನಿನ್ನೆ ದಿಢೀರ್ ನೆ ದೊಡ್ಮನೆಯಿಂದ ಡ್ರೋನ್ ಪ್ರತಾಪ್ (Drone Pratap) ಮತ್ತು ಸಂಗೀತಾ ಶೃಂಗೇರಿ (Sangeetha Sringeri) ಹೊರ ಬಂದಿದ್ದಾರೆ. ಟಾಸ್ಕ್ ವೊಂದರಲ್ಲಿ ಅವರ ಮುಖಕ್ಕೆ ಕೆಮಿಕಲ್ ನೀರು ಹಾಕಿದ ಕಾರಣದಿಂದಾಗಿ ಅವರು ಅಸ್ವಸ್ಥಗೊಂಡಿದ್ದರು ಎಂದು ಹೇಳಲಾಗುತ್ತಿದೆ. ಕಣ್ಣಿಗೆ ಮತ್ತು ಮೂಗು, ಬಾಯಿಗೆ ನೀರು ಬಿದ್ದ ಪರಿಣಾಮದಿಂದ ಡ್ರೋನ್ ಮತ್ತು ಸಂಗೀತಾ ಒದ್ದಾಡಿದ್ದಾರೆ ಎನ್ನುವ ಮಾಹಿತಿ ಇದೆ. ಅವರೀಗ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕಳೆದ ಎರಡು ದಿನಗಳಿಂದ ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ಗುಂಪುಗಳಾನ್ನಾಗಿ ಮಾಡಿ, ಹಲವು ಟಾಸ್ಕ್ ಗಳನ್ನು ನೀಡಲಾಗಿದೆ. ಈ ಟಾಸ್ಕ್ ನಲ್ಲಿ ಡ್ರೋನ್ ಮತ್ತು ಸಂಗೀತಾ ಗಾಯ ಮಾಡಿಕೊಂಡಿದ್ದಾರೆ ಎನ್ನುವುದು ಲೇಟೆಸ್ಟ್ ಅಪ್ ಡೇಟ್. ಈ ವಿಷಯದ ಕುರಿತಂತೆ ವಾಹಿನಿಯಾಗಲಿ ಅಥವಾ ಸಂಬಂಧಿಸಿದವರಾಗಲಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ನ್ಯೂಸ್ ಭರ್ಜರಿ ಸೇಲ್ ಆಗುತ್ತಿದೆ.

    ರಾಕ್ಷಸರು ಮತ್ತು ಗಂಧರ್ವರ ಗುಂಪುಗಳ ನಡುವೆ ಭಾರೀ ಕದನವೇ ನಡೆಯುತ್ತಿದೆ. ಹಲವರು ಟಾರ್ಗೆಟ್ ಮಾಡಿಕೊಂಡು ಆಡುತ್ತಿದ್ದಾರೆ. ಅದರಲ್ಲೂ ಸಂಗೀತಾ ಮತ್ತು ವಿನಯ್ ಮಧ್ಯ, ಕಾರ್ತಿಕ್ ಮತ್ತು ವಿನಯ್ ಮಧ್ಯ, ಸಂಗೀತಾ ಮತ್ತು ನಮ್ರತಾ ಮಧ್ಯ ಹೀಗೆ ವೈಯಕ್ತಿಕವಾಗಿ ಆಟಗಳನ್ನು ಆಡುತ್ತಿದ್ದಾರೆ. ಒಬ್ಬರಿಗೊಬ್ಬರನ್ನು ಕೆಣಕುತ್ತಿದ್ದಾರೆ. ಇದು ಎಲ್ಲೋ ಒಂದು ಕಡೆ ಅನಾಹುತ ಮಾಡಲಿದೆ ಎಂದೇ ಅಂದಾಜಿಸಲಾಗಿತ್ತು. ಬಹುಶಃ ಅದೇ ಆಗಿರಬಹುದು.

     

    ಕೆಮಿಕಲ್ ನೀರಿನ ಪರಿಣಾಮದಿಂದಾಗಿ ಸದ್ಯಕ್ಕೆ ಡ್ರೋನ್ ಮತ್ತು ಸಂಗೀತಾರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆ ತನಿಷಾರನ್ನು ಹೀಗೆಯೇ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಆನಂತರ ಬಿಗ್ ಬಾಸ್ (Bigg Boss Kannada) ಮನೆಗೆ ಕರೆತರಲಾಗಿತ್ತು. ಈ ಇಬ್ಬರನ್ನೂ ಹಾಗೆಯೇ ಮಾಡುವ ಸಾಧ್ಯತೆ ಇದೆ.

  • ಕಿಚ್ಚನ ಪಂಚಾಯತಿಯಲ್ಲೇ ಸಂಗೀತಾಗೆ ಕ್ಲಾಸ್

    ಕಿಚ್ಚನ ಪಂಚಾಯತಿಯಲ್ಲೇ ಸಂಗೀತಾಗೆ ಕ್ಲಾಸ್

    ವಾರದ ಕಥೆ ಕೇಳಲು ಕಿಚ್ಚ (Sudeep) ರೆಡಿಯಾಗಿದ್ದಾರೆ. ಸಖತ್ ಕಾಸ್ಟ್ಯೂಮ್ ಹಾಕಿಕೊಂಡು ವೇದಿಕೆಗೆ ಎಂಟ್ರಿ ಕೂಡ ಕೊಟ್ಟಿದ್ದಾರೆ. ಕಿಚ್ಚನ ಪಂಚಾಯತಿಯಲ್ಲಿ ಈ ವಾರ ಏನೆಲ್ಲ ಇರಬಹುದು ಎನ್ನುವ ಅಂದಾಜು ಕೂಡ ನಡೆದಿದೆ. ಈ ವಾರವೂ ಮನೆಯಲ್ಲಿ ಜಗಳ, ತಮಾಷೆ, ಕಾಲೆಳೆತ, ಮಾತಿನ ಚಕಮಕಿ ಎಲ್ಲವೂ ನಡೆದಿದೆ. ಜೊತೆಗೆ ನಡೆಯಬಾರದು ಎರಡು ಸಂಗತಿಗಳು ನಡೆದಿವೆ. ಅದರ ಬಗ್ಗೆ ಕಿಚ್ಚ ಇಂದು ಹೆಚ್ಚಿಗೆ ಮಾತನಾಡಲಿದ್ದಾರೆ ಎನ್ನುವ ಮಾಹಿತಿಯೂ ಹೊರ ಬಿದ್ದಿದೆ.

    ನಟಿ ಸಂಗೀತಾ (Sangeeta Sringeri) ಈ ವಾರ ಪೂರ್ತಿ ಸುದ್ದಿಯಲ್ಲಿದ್ದಾರೆ. ಅತ್ಯುತ್ತಮ ಕಂಟೆಸ್ಟೆಂಟ್ ಅನಿಸಿಕೊಂಡಿದ್ದ ಅವರು, ಈ ಬಾರಿ ಎಲ್ಲರ ಮನಸ್ಸನ್ನು ನೋಯಿಸಿದ್ದಾರೆ. ಬಿಗ್ ಬಾಸ್ (Bigg Boss Kannada) ಮನೆಯಲ್ಲಿದ್ದವರು ಮಾತ್ರವಲ್ಲ, ಶೋ ನೋಡುವವರು ಕೂಡ ಸಂಗೀತಾ ನಡೆಯನ್ನು ಟೀಕಿಸಿದ್ದಾರೆ. ಖಂಡಿಸಿದ್ದಾರೆ. ಸ್ವತಃ ಬಿಗ್ ಬಾಸ್ ಅವರೇ ಅದು ಸರಿಯಾದ ಕ್ರಮವಲ್ಲ ಎಂದು ನೇರವಾಗಿಯೇ ಸಂಗೀತಾಗೆ ಹೇಳಿದ್ದಾರೆ. ಹಾಗಾಗಿ ಈ ವಾರದ ಕಿಚ್ಚನ ಪಂಚಾಯತಿಯಲ್ಲಿ ಸಂಗೀತಾ ಅವರೇ ಹೆಚ್ಚು ಟಾರ್ಗೆಟ್ ಆಗಲಿದ್ದಾರೆ.

    ಕಿಚ್ಚನ ಪಂಚಾಯತಿಯ ಪ್ರೋಮೋಗಾಗಿ ಬೆಳಗ್ಗೆಯಿಂದ ಅಭಿಮಾನಿಗಳು ಕಾಯುತ್ತಿದ್ದರು. ಕೊನೆಗೂ ಪ್ರೊಮೋ ರಿಲೀಸ್ ಆಗಿದೆ. ‘ಇಷ್ಟು ದಿನ ಹೀರೋ ಆಗಿದ್ದೀರಿ. ಸಡನ್ನಾಗಿ ವಿಲನ್ ಆದ್ರಿ.. ಶತ್ರುಗಳು ಸ್ನೇಹಿತರಾದ್ರು.. ಈ ಬದಲಾವಣೆ ಈ ವಾರದ ಕಿಚ್ಚನ ಪಂಚಾಯತಿಯಲ್ಲಿ’ ಎಂದು ಸುದೀಪ್ ಹೇಳಿದ್ದಾರೆ. ಹಾಗಾಗಿ ಸಂಗೀತಾಗೆ ಕ್ಲಾಸ್ ತೆಗೆದುಕೊಳ್ಳೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಅದರಲ್ಲೂ ಕಾರ್ತಿಕ್ ಮತ್ತು ತುಕಾಲಿ ಅವರ ತಲೆ ಬೋಳಿಸಿದ್ದು ಮತ್ತು ವರ್ತೂರು ಸಂತೋಷ್ ಹಾಗು ತನಿಷಾಗೆ ಹಸಿ ಮೆಣಸಿನಕಾಯಿ ತಿನ್ನಿಸಿದ್ದರ ಬಗ್ಗೆ ಕಿಚ್ಚ ಏನು ಹೇಳಲಿದ್ದಾರೆ ಎನ್ನುವ ಕುತೂಹಲ ಎಲ್ಲರದ್ದಾಗಿದೆ.

    ಈ ವಾರ ಫುಲ್ ಬದಲಾವಣೆ ಆಗಿದ್ದು ಸಂಗೀತಾ. ಮಿತ್ರರ ಪಡೆಯನ್ನು ಬಿಟ್ಟು, ಶತ್ರು ಪಾಳೆಯ ಆಶ್ರಯ ಪಡೆದವರೂ ಸಂಗೀತಾ. ಯಾರನ್ನೂ ದ್ವೇಷಿಸುತ್ತಿದ್ದರೋ, ಈಗ ಅವರನ್ನೇ ಬೆಸ್ಟ್ ಎಂದು ಕರೆಯುತ್ತಿರುವುದು ಇದೇ ಸಂಗೀತಾ. ಅಂದು ದುಷ್ಮನ್ ಆಗಿದ್ದವರು, ಇಂದು ಸ್ನೇಹಿತರಂತೆ ಅಪ್ಪಿಕೊಂಡಿದ್ದು ಮತ್ತದೆ ಸಂಗೀತಾ. ಈ ವಾರ ಕಿಚ್ಚನ ಪಂಚಾಯತಿ ಕೇವಲ ಸಂಗೀತಾಗೆ ಮಾತ್ರ ಮೀಸಲಿರತ್ತಾ? ಅಥವಾ ಗ್ರೂಪಿಸಂ ಮಾಡುವ ಮೂಲಕ ಮನೆ ಮಂದಿಯನ್ನು ಹೆದರಿಸುತ್ತಿರುವ ವಿನಯ್ ಬಗ್ಗೆಯೂ ಮಾತಾಡ್ತಾರಾ? ಕಾದು ನೋಡಬೇಕು.

  • ವಿನಯ್ ಕೋಪಕ್ಕೆ ಜೈಲು ಪಾಲಾದ ಸಂಗೀತ

    ವಿನಯ್ ಕೋಪಕ್ಕೆ ಜೈಲು ಪಾಲಾದ ಸಂಗೀತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂಗೀತ ಸಂಜೆಗೆ ಸಾಕ್ಷಿ ಆಯಿತು ಬಿಗ್ ಬಾಸ್ ಹೌಸ್

    ಸಂಗೀತ ಸಂಜೆಗೆ ಸಾಕ್ಷಿ ಆಯಿತು ಬಿಗ್ ಬಾಸ್ ಹೌಸ್

    ಷ್ಟು ದಿನ ಕೋಪ, ಜಗಳ, ದೂಷಣೆಗಳೇ ಹೆಚ್ಚಾಗಿ ಕೇಳಿಸುತ್ತಿದ್ದ ಬಿಗ್‌ಬಾಸ್‌ (Bigg Boss Kannada) ಮನೆಯಲ್ಲಿಂದು ಹಬ್ಬದ ವಾತಾವರಣ. ಅದಕ್ಕೆ ಕಾರಣಗಳು ಹಲವು. ಕಲರ್ಸ್‌ ಕನ್ನಡದಲ್ಲಿ ಪ್ರಾರಂಭವಾಗುತ್ತಿರುವ ‘ಬೃಂದಾವನ’ ಧಾರಾವಾಹಿ ತಂಡ ಬಿಗ್‌ಬಾಸ್‌ ಮನೆಯೊಳಗೆ ಎಂಟ್ರಿ ಕೊಟ್ಟಿದ್ದು, ಅವರೊಂದಿಗೆ ನಕ್ಕು ನಲಿದ ಸ್ಪರ್ಧಿಗಳು ಪರ್ಫಾರ್ಮ್‌ ಮಾಡಿದ್ದಂತೂ ವಿಶೇಷವೇ. ಆದರೆ ಅದರ ಜೊತೆಗೆ ಇನ್ನೂ ಹಲವು ಫೀಲ್‌ಗುಡ್‌ ಸನ್ನಿವೇಶಗಳು ಮನೆಯಲ್ಲಿ ನಡೆದಿವೆ. ನಡೆಯುತ್ತಿವೆ. ಅದರಲ್ಲಿ ಇಶಾನಿ ಮತ್ತು ಸಂಗೀತಾ ಅವರ ಸಂಗೀತ ಕ್ಲಾಸ್‌ ಕೂಡ ಒಂದು.

    ಹೆಸರಿನಲ್ಲಿಯೇ ಮ್ಯೂಸಿಕ್ ಇಟ್ಟುಕೊಂಡಿರುವ ಸಂಗೀತಾ (Sangeeta Sringeri) ಅವರು ಎಂದಿಗೂ ಸಂಗೀತಪ್ರೇಮಿಯಾಗಿ ಕಾಣಿಸಿಕೊಂಡವರಲ್ಲ. ಇಶಾನಿಯಂತೂ ರಾಪರ್ ಆಗಿಯೇ ಪ್ರಸಿದ್ಧರಾದವರು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಸಂಗೀತ ಸಂಜೆ ನಡೆದಿದೆ. ಕಾರ್ತಿಕ್‌ ಮತ್ತು ತನಿಷಾ ಸ್ವಿಮ್ಮಿಂಗ್ ಪೂಲ್‌ ಬಳಿ ಆರಾಮವಾಗಿ ಮಲಗಿಕೊಂಡು ಹರಟೆ ಹೊಡೆಯುತ್ತಿದ್ದರು. ಅಲ್ಲಿಗೆ ಮೊದಲು ಬಂದಿದ್ದು ಇಶಾನಿ. ನಂತರ ಅವರ ಜೊತೆ ನೀತು, ನಮ್ರತಾ ಬಂದು ಕೂಡಿಕೊಂಡರು. ಆಗಲೇ ಇಶಾನಿ ಬಾಯಲ್ಲಿ, ‘ಪರಪ್ಪಪ್ಪಪ್ಪಾ…’ ಎಂದು ಸಂಗೀತದ ಫಲಕುಗಳನ್ನು ಹೇಳಲು ಶುರುಮಾಡಿದ್ದರು.

    ಮಳೆ ಬರುವ ಹಾಗಿರುವ ಸಂಜೆ ಎಲ್ಲರಲ್ಲಿಯೂ ಹರಟೆ ಮೂಡ್‌ ಹುಟ್ಟಿಸಿತ್ತು. ನಮ್ರತಾಗೆ ಈ ವಾತಾವರಣದಲ್ಲಿ ಟ್ರಾವೆಲ್ ಮಾಡಬೇಕು ಅನಿಸುತ್ತಿದೆ ಎಂಬ ಅನಿಸಿಕೆಯನನ್ನೂ ಹಂಚಿಕೊಂಡರು. ಈ ಮಾತಿನ ನಡುವೆಯೇ ಕಾರ್ತಿಕ್ ಗರ್ಲ್‌ಫ್ರೆಂಡ್ ಬಗ್ಗೆಯೂ ಚರ್ಚೆ ಬಂತು. ‘ಈಗ ಯಾರು ನಿಂಗೆ ಸ್ಪೆಷಲ್ ಫ್ರೆಂಡ್‌?’ ಎಂದು ನಮ್ರತಾ ಕೇಳಿದರೆ ಕಾರ್ತಿಕ್ ಅಷ್ಟೇ ಚಾಣಕ್ಷತನದಿಂದ, ‘ಫ್ರೆಂಡ್ಸೆಲ್ಲ ಸ್ಪೆಷಲ್ಲೇ’ ಅಂದ್ರು. ಈ ಹೊತ್ತಿನಲ್ಲಿ ಈ ಗುಂಪಿನಿಂದ ತುಸು ದೂರದಲ್ಲಿ ಬಾಲ್ಕನಿ ಮೇಲೆ, ಮರದ ನೆರಳಿನಲ್ಲಿ ಸಂಗೀತಾ ಕೂತಿದ್ದರು. ಅವರನ್ನು ಸೇರಿಕೊಂಡವರು ಇಶಾನಿ. ‘ಇದು ತುಂಬ ಕಾಮ್‌ ಪ್ಲೇಸ್. ಇಲ್ಲಿನ ಎನರ್ಜಿಯೇ ಡಿಫರೆಂಟ್‌’ ಎಂದರು ಇಶಾನಿ. ಹಕ್ಕಿಗಳ ಕಲರವ, ಮರದ ತಂಪು ಎಲ್ಲದರ ಬಗ್ಗೆ ಸಂಗೀತಾ ಮತ್ತು ಇಶಾನಿ ಮಾತುಕತೆ ಸಾಗಿತು. ಸಂಗೀತಾ ಶಿಳ್ಳೆ ಹಾಕಿ ಹಕ್ಕಿಗಳ ಜೊತೆಗೆ ಮಾತುಕತೆ ನಡೆಸಲೂ ಪ್ರಯತ್ನಿಸಿದರು.

    ಆಗಲೇ ಇಶಾನಿ  (Ishani) ಮತ್ತೆ, ‘ಪರಪ್ಪಪ್ಪ ಪ್ಪ ಪ್ಪ ಪ್ಪಾ…’ ಎಂದು ಹಾಡಲು ಶುರುಮಾಡಿದರು. ಸಂಗೀತಾಗೆ ಇದ್ದಕ್ಕಿದ್ದ ಹಾಗೆಯೇ ಸಂಗೀತ ಕಲಿಯುವ ಹುಕಿ ಬಂತು. ‘ನಂಗೂ ಕಲಿಸಿಕೊಡಿ’ ಎಂದು ಅವರು ಇಶಾನಿ ಬಳಿಯಿಂದ ಸಂಗೀತ ಹೇಳಿಸಿಕೊಳ್ಳಲು ಪ್ರಾರಂಭಿಸಿದರು. ಅಷ್ಟೇ ಅಲ್ಲ, ಗುರುವಿನಿಂದ ಶಹಭಾಶ್‌ಗಿರಿಯನ್ನೂ ಪಡೆದುಕೊಂಡರು. ಅತ್ತ ಕಡೆ ವರ್ತೂರ್ ಸಂತೋಷ್‌ ಮತ್ತಿತರರು ಕೃಷಿಯ ಕುರಿತಾಗಿ ಜೋರು ಜೋರಾಗಿ ಮಾತುಕತೆ ನಡೆಸುತ್ತಿದ್ದರೆ ಇತ್ತ ಬಾಲ್ಕನಿಯಲ್ಲಿ ಸಂಗೀತದ ಅಲೆಗಳು ಸಂಜೆಯ ತಂಗಾಳಿಯ ಹಾಗೆ ಸುಳಿಯುತ್ತಿದ್ದವು.

    ರಾಪ್‌ ಸ್ಟೈಲ್‌ನಿಂದ ಇಶಾನಿ ಕ್ಲಾಸಿಕಲ್ ಮ್ಯೂಸಿಕ್ ಕಡೆಗೆ ಹೊರಳಿ, ‘ಸ ರಿ ಗ ಮ ಪ ದ ನಿ ಸ; ಸ ನಿ ದ ಪ ಮ ಗ ರಿ ಸ’ ಎಂದು ಸಂಗೀತಾ ಮತ್ತು ಇಶಾನಿ ಇಬ್ಬರೂ ಒಟ್ಟಿಗೇ ಹೇಳಿದರು. ಸಂಗೀತ ಅವರೂ ತಮಗಿರುವ ಸಂಗೀತದ ಅರಿವನ್ನು ಹಂಚಿಕೊಂಡರು. ಕೆಲವು ಕಾಲ ಇಶಾನಿ ಮತ್ತು ಸಂಗೀತಾ ನಡುವೆ ನಡೆದ ಈ ಸಂಗೀತದ ಜುಗಲ್ಬಂದಿ ನಿಜಕ್ಕೂ ಕುತೂಹಲಕಾರಿಯಾಗಿತ್ತು. ‘ಹಿಂದೆ ಡಾನ್ಸ್ ಕಲಿಯಬೇಕಿದ್ದರೆ ನನಗೆ ಸಂಗೀತ ಕಲಿಸುತ್ತಿದ್ದರು. ನನಗೆ ಸಂಗೀತವೆಂದರೆ ಆಗುತ್ತಿರಲಿಲ್ಲ. ನಿನ್ನ ಹೆಸರು ಸಂಗೀತ ಅಲ್ವಾ? ಹಾಡು ಹೇಳು ಅಂತಿದ್ರು. ಆಗೆಲ್ಲ ನಂಗೆ ಕಿರಿಕಿರಿಯಾಗುತ್ತಿತ್ತು. ಒಂದು ಹಾಡಿತ್ತು. ಯಾರೇ ಕೇಳಿದ್ರೂ ನಾನು ಆ ಹಾಡು ಹೇಳ್ತಿದ್ದೆ’ ಎಂದು ಸಂಗೀತಾ ಸಂಗೀತದ ಜೊತೆಗಿನ ತಮ್ಮ ಒಡನಾಟದ ನೆನಪನ್ನು ಹಂಚಿಕೊಂಡರು.

     

    ಇಶಾನಿ ತಮಗೆ ಕರ್ನಾಟಿಕ್ ಶಾಸ್ತ್ರೀಯ ಸಂಗೀತ ಕಲಿಯುವ ಹಂಬಲ ಇರುವುದನ್ನು ಹೇಳಿಕೊಂಡರು. ಜೊತೆಗೆ ಪಾಶ್ಚಾತ್ಯ ಮತ್ತು ಭಾರತೀಯ ಸಂಗೀತದ ನಡುವಿನ ವ್ಯತ್ಯಾಸಗಳ ಬಗ್ಗೆಯೂ ಹೇಳಿಕೊಂಡರು. ಸಂಗೀತಾ ತುಂಬ ಆಸಕ್ತಿಯಲ್ಲಿ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. ಮುಸ್ಸಂಜೆಯಲ್ಲಿ ಮನೆಯೊಳಗಿನ ದೀಪಗಳೆಲ್ಲ ಬೆಳಗಿದ್ದರೂ ಸಂಗೀತಾ ಮತ್ತು ಇಶಾನಿ ಸಂಗೀತ ಕಛೇರಿ ಮುಂದುವರಿದೇ ಇತ್ತು. ರಾಪರ್ ಬಾಯಲ್ಲಿ ‘ಸರಿಗಮಪದನಿಸ’ ಸುಮಧುರವಾಗಿ ಹೊಮ್ಮಿದ ಕ್ಷಣಗಳಿಗೆ ಈ ದಿನದ ಬಿಗ್‌ಬಾಸ್‌ ಮನೆ ಸಾಕ್ಷಿಯಾಯ್ತು. JioCinemaದಲ್ಲಿ ಎಲ್ಲ ಕ್ಷಣಗಳನ್ನೂ ನೋಡಬಹುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]