ನವದೆಹಲಿ: ಕರ್ನಾಟಕ ರಾಜ್ಯ ಅವಮಾನ ಪಡುವಂತಹ ಹೇಳಿಕೆ ಶಾಸಕ ಸಂಗಮೇಶ್ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ (Karnataka) ಮುಲ್ಲಾಗಳ ಸರ್ಕಾರ ಅನ್ನೋದು ಸಾಬೀತಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashok) ಹೇಳಿದ್ದಾರೆ.
ಮುಂದಿನ ಜನ್ಮ ಅಂತಿದ್ರೆ ಮುಸ್ಲಿಂ ಆಗಿಯೇ ಹುಟ್ಟಬೇಕು ಎಂಬ ಶಾಸಕ ಸಂಗಮೇಶ್ ಹೇಳಿಕೆ ಕುರಿತು ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಗಮೇಶ್ ಹೇಳಿಕೆ ನೋಡಿದರೆ ಕಾಂಗ್ರೆಸ್‌ನ (Congress) ಎಲ್ಲಾ ಶಾಸಕರು ಮುಸ್ಲಿಮರು ಆಗಬೇಕು ಅಂತಾ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದಾರಾ? ಇದೊಂದು ಮತಾಂತರ ಮಾಡುವ ಕೆಲಸ ಅನ್ನಿಸುತ್ತದೆ. ಸಂವಿಧಾನ ಅಡಿಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ಈ ರೀತಿ ಹೇಳಿಕೊಡುತ್ತಿದ್ದಾರೆ. ಸಂಗಮೇಶ್ ಹೇಳಿಕೆ ಇಡೀ ಕಾಂಗ್ರೆಸ್ ಹೇಳಿಕೆ ಆಗಿದೆ. ಕರ್ನಾಟಕ ಸರ್ಕಾರ ಸತ್ತು ಹೋಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮುಂದಿನ ಜನ್ಮ ಅಂತಿದ್ರೆ ಮುಸ್ಲಿಂ ಆಗಿಯೇ ಹುಟ್ಟಬೇಕು: `ಕೈ’ ಶಾಸಕ ಸಂಗಮೇಶ್
ಹಿಂದೂ ಅಂತಾ ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಮುಸ್ಲಿಂ ಓಲೈಕೆ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಬೆಂಕಿ ಹಚ್ಚುವ ಹೇಳಿಕೆ ಆಗದೆ
ನಾಳೆ ನಾವು ಧರ್ಮದ ಉಳಿವಿಗಾಗಿ ನಾವು ಹೋಗುತ್ತಿದ್ದೇವೆ. ಇದೊಂದು ತಾಲಿಬಾನ್ ಸರ್ಕಾರ. ಹಿಂದೂಗಳನ್ನು ದ್ವಿತೀಯ ದರ್ಜೆ ನಾಗರಿಕರಾಗಿಸಿದ್ದಾರೆ. ಮಹದೇವಪ್ಪ ಅವರೇ, ನೀವು ಮನೆಯಲ್ಲಿ ಇದ್ರೆ ಸಾಕು, ಕರ್ನಾಟಕ ತಣ್ಣಗಿರುತ್ತೆ. ಕರ್ನಾಟಕ ಧಗಧಗ ಉರಿಯುವುದು ತಪ್ಪುತ್ತದೆ. ಮತಾಂಧರು ಈ ರೀತಿ ಹೇಳಿಕೆ ನೀಡಲು ನೀವೇ ಕಾರಣ. ಬಿಜೆಪಿ ಸರ್ಕಾರ ಇದ್ದಿದ್ದರೆ ಇಂಥವರನ್ನು ಒದ್ದು ಒಳಗಡೆ ಹಾಕುತ್ತಿದ್ದೆವು. ಪಾಕ್ ಜಿಂದಾಬಾದ್ ಅನ್ನೋ ಹೇಳಿಕೆಗಳು ಕಾಂಗ್ರೆಸ್ ಪ್ರಚೋದನೆಯಿಂದಲೇ ಬರುತ್ತಿರುವುದು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪುತ್ರನಿಗೆ ಶಸ್ತ್ರಚಿಕಿತ್ಸೆ – ಶಾಸಕ ವಿನಯ್‌ಗೆ 2 ದಿನಗಳ ಮಧ್ಯಂತರ ಜಾಮೀನು ಮಂಜೂರು
– ಸರ್ಕಾರ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ತಿದೆ – ಮತಕ್ಕೋಸ್ಕರ ಇನ್ನೆಷ್ಟು ಓಲೈಕೆ ಮಾಡ್ತೀರಾ ಅಂತ ಪ್ರಶ್ನೆ
ನವದೆಹಲಿ: ಸಂಗಮೇಶ್ ಅವರೇ ಮುಂದಿನ ಜನ್ಮದ ತನಕ ಯಾಕೆ ಕಾಯಬೇಕು. ಈ ಜನ್ಮದಲ್ಲೇ ಹೋಗಿಬಿಡಿ. ನಾವೇ ಹಾರ ಹಾಕಿ ಕಳುಹಿಸಿಕೊಡ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಟೀಕಿಸಿದರು.
ನವದೆಹಲಿಯಲ್ಲಿ (New Delhi) ಮಾತನಾಡಿದ ಅವರು, ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಬೇಕು ಎಂಬ ಶಾಸಕ ಸಂಗಮೇಶ್ (Sangamesh) ಹೇಳಿಕೆಗೆ ಪ್ರತಿಕ್ರಿಯಿಸಿದರು. ಅವರು ಹುಟ್ಟಿದ ಜಾತಿಗೆ, ಅವರ ಮತದಾರರಿಗೆ ಅಪಮಾನ ಮಾಡುತ್ತಿದ್ದಾರೆ. ಮುಸ್ಲಿಮರು ನಿಮ್ಮ ಜೊತೆಗೆ ಇದ್ದಾರೆ. ಇನ್ನೆಷ್ಟು ಓಲೈಕೆ ಮಾಡುತ್ತೀರಿ. ನಿಮ್ಮಗೆ ಮತ ಹಾಕಲು ಲಿಂಗಾಯತರು, ಹಿಂದುಳಿದವರು, ದಲಿತರು ಬೇಕು. ಈಗ ಗೆದ್ದ ಮೇಲೆ ಮುಸ್ಲಿಂ (Muslim) ಆಗಬೇಕು ಅಂತಾರೆ. ಮುಂದಿನ ಜನ್ಮದ ತನಕ ಕಾಯುವುದು ಬೇಡ. ಈಗಲೇ ಹೋಗಿ ಎಂದು ಕುಟುಕಿದರು. ಇದನ್ನೂ ಓದಿ: ಮುಂದಿನ ಜನ್ಮ ಅಂತಿದ್ರೆ ಮುಸ್ಲಿಂ ಆಗಿಯೇ ಹುಟ್ಟಬೇಕು: `ಕೈ’ ಶಾಸಕ ಸಂಗಮೇಶ್
ಮದ್ದೂರಲ್ಲಿ ಕಲ್ಲು ತೂರಾಟ ಮಾಡಿದವ್ರನ್ನ ಕೂಡಲೇ ಬಂಧಿಸಿ:
ಮದ್ದೂರು (Maddur) ಗಲಭೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪೂರ್ಣ ಹದಗೆಟ್ಟಿದೆ. ಎಲ್ಲ ಜನರ ಮಾನ ಪ್ರಾಣ ಕಾಪಾಡಬೇಕಿದ್ದ ಸರ್ಕಾರ ಏಕ ಪ್ರಕಾರವಾಗಿ ನಡೆಯುತ್ತಿದೆ. ಮದ್ದೂರಿನಲ್ಲಿ ಕಲ್ಲು ತೂರಾಟ ನಡೆಸಿದವರನ್ನು ಕೂಡಲೇ ಬಂಧಿಸಿಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನನ್ನ ತಂದೆ ತಾಯಿ ಹೊಟ್ಟೆಯಲ್ಲಿ ಭಾರತೀಯನಾಗಿ ಮತ್ತೆ ಹುಟ್ಟಬೇಕು ಅನ್ನೋದು ನನ್ನಾಸೆ: ಮಧು ಬಂಗಾರಪ್ಪ
ಕಳೆದ ವರ್ಷ ಗಣೇಶ ಉತ್ಸವದಲ್ಲಿ ಹಲವು ಗಲಭೆ ನಡೆದಿದ್ದವು. ಈ ಹಿನ್ನಲೆ ಈ ವರ್ಷ ಮುಕ್ತವಾಗಿ ಹಬ್ಬ ಆಚರಿಸಲು ಅವಕಾಶ ಕೇಳಿದ್ದೇವು. ಅದಾಗ್ಯೂ ಸರ್ಕಾರ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿತ್ತು. ಮದ್ದೂರಿನಲ್ಲಿ ಕಲ್ಲು ತೂರಾಟ ಆಗಿರುವುದು ನೋಡಿದರೆ ಹಿಂದೂಗಳಿಗೆ ಭದ್ರತೆ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.
ಗಣೇಶ ಮೆರವಣಿಗೆ ಎಲ್ಲಿ ಹೋಗಬೇಕು ಎಂದು ಪೊಲೀಸರು ನಿರ್ಧಾರ ಮಾಡುತ್ತಾರೆ. ಅವರೇ ನಿರ್ಧಾರ ಮಾಡಿದ ಮೇಲೆ ಗಲಭೆ ಹೇಗೆ ಆಯ್ತು? ಮಸೀದಿಯಲ್ಲಿ ಅಷ್ಟು ದೊಡ್ಡ ಪ್ರಮಾಣದ ಕಲ್ಲು ಸಂಗ್ರಹಕ್ಕೆ ಅವಕಾಶ ಹೇಗೆ ಸಿಕ್ತು? ಕಲ್ಲು ತೂರಾಟ ಮಾಡಿದವರನ್ನು ಕೂಡಲೇ ಬಂಧಿಸಬೇಕಿತ್ತು ಯಾಕೆ ಈವರೆಗೂ ಬಂಧಿಸಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ; 12 ಸೆಕೆಂಡ್ ವೀಡಿಯೋ ಪರಿಶೀಲಿಸಿ ಕ್ರಮ: ಮಧು ಬಂಗಾರಪ್ಪ
ಪರಮೇಶ್ವರ್ (Parameshwar) ಅವರು ಒಬ್ಬ ಅಸಮರ್ಥ ಗೃಹ ಸಚಿವರು. ಕೇಸ್ ವಾಪಸ್ ಪಡೆದಿದ್ದೇ ಅಲ್ಪ ಸಂಖ್ಯಾತರಿಗೆ ಇಷ್ಟು ಧೈರ್ಯ ಬರಲು ಕಾರಣ. ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾಂದ್ ಅಂತಾರೆ, ಚಾಮರಾಜನಗರದಲ್ಲಿ ಐಎಸ್‌ಐ ಧ್ವಜಗಳನ್ನು ಹಾಕಿದ್ದಾರೆ. ಔರಂಗಜೇಬ್‌ನ ಖಡ್ಗ ಪ್ರದರ್ಶನ ಮಾಡುತ್ತಾರೆ. ಅಂತಹವರ ಮೇಲೆ ಏನು ಕ್ರಮ ತೆಗೆದುಕೊಳ್ಳಲ್ಲ ಎಂದು ವಾಗ್ದಾಳಿ ನಡೆಸಿದರು.
ಮುಸ್ಲಿಮರ ಮತ ನಿಮ್ಮಗೇ ಬರುತ್ತದೆ. ಆದ್ರೂ ಇನ್ನೆಷ್ಟು ಓಲೈಕೆ ಮಾಡುತ್ತೀರಿ? ಎಷ್ಟು ದಿನ ಸಿದ್ದರಾಮಯ್ಯ ಅವರ ಈ ತುಘಲಕ್ ದರ್ಬಾರ್ ನಡೆಯುತ್ತೆ. ಇನ್ನಾದರೂ ಹಿಂದೂಗಳ ರಕ್ಷಣೆ ಮಾಡಬೇಕು. ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿ ಬೆಣ್ಣೆ ಹಚ್ಚಬಾರದು ಎಂದು ಕಿಡಿಕಾರಿದರು.
ಬಿಜೆಪಿ ನಾಯಕರು ಪ್ರಚೋದನೆ ಮಾಡಿದರು ಎಂದು ಕಾಂಗ್ರೆಸ್ (Congress) ನಾಯಕರು ಹೇಳ್ತಾರೆ. ಮದ್ದೂರಿನಲ್ಲಿ ಯಾವ ಬಿಜೆಪಿ ನಾಯಕರು ಹೋಗಿದ್ದರು. ಗಲಭೆ ಆದ ಮೇಲೆ ನಾವು ಹೋಗಿದ್ದು. ಮೈಸೂರು ಧಾರ್ಮಿಕ ಕಾರ್ಯಕ್ರಮವನ್ನು ಸಾಂಸ್ಕೃತಿಕ ಉತ್ಸವ ಎಂದು ಮಹಾದೇವಪ್ಪ ಹೇಳ್ತಾರೆ. ಮಹಾರಾಜರ ಇತಿಹಾಸಕ್ಕೆ ಮಸಿ ಬಳಿಯುತ್ತಿದ್ದಾರೆ. ಮೈಸೂರು ದಸರ ಚಾಮುಂಡಿಗೆ ಸಂಬಂಧಿಸಿದ್ದು, ಬೆಟ್ಟದ ಮೇಲೆ ನಡೆಯುವುದು ಧಾರ್ಮಿಕ ಕಾರ್ಯಕ್ರಮ. ಸಾಂಸ್ಕೃತಿಕ ಕಾರ್ಯಕ್ರಮ ಮಾಡುವುದಾದರೆ ಬೇರೆ ಸಮಯದಲ್ಲಿ ಮಾಡಿ, ಯಾಕೆ ನವರಾತ್ರಿ ಸಮಯದಲ್ಲಿ ಮಾಡುತ್ತೀರಿ ಎಂದು ಗುಡುಗಿದರು.
ಶಿವಮೊಗ್ಗ: ಮುಂದಿನ ಜನ್ಮದಲ್ಲಿ ಹುಟ್ಟಿದ್ರೆ ಮುಸ್ಲಿಂ (Muslim) ಆಗಿಯೇ ಹುಟ್ಟಬೇಕು ಎನ್ನುವ ಮೂಲಕ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ ಸಂಗಮೇಶ್ (BK Sangamesh) ತಮ್ಮ ಇಸ್ಲಾಂ ಬಗೆಗಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ (Shivamogga) ಸೋಮವಾರ ನಡೆದ ಈದ್‌ಮಿಲಾದ್ (Eid Milad) ಮೆರವಣಿಗೆ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನನ್ನು ಜನರು 4 ಬಾರಿ ಗೆಲ್ಲಿಸಿದ್ದಾರೆ. ನಾನು ಎಂದಿಗೂ ನಿಮ್ಮ ಮನೆಮಗನಾಗಿರುತ್ತೇನೆ. ಮುಂದಿನ ಜನ್ಮ ಅಂತ ಇದ್ರೆ ನಾನು ಮುಸ್ಲಿಂ ಆಗಿಯೇ ಹುಟ್ಟಬೇಕು ಎಂದಿದ್ದಾರೆ. ಇದನ್ನೂ ಓದಿ: ಭದ್ರಾವತಿ ಈದ್ ಮೆರವಣಿಗೆಯಲ್ಲಿ ಪಾಕ್ ಪರ ಘೋಷಣೆ
ಪ್ರೀತಿ ಎಂದರೇನು? ನಿಜವಾದ ಪ್ರೀತಿ ಯಾವುದು? ಈ ಎರಡು ಪ್ರಶ್ನೆಗೆ ಒಂದೇ ರೀತಿಯ ಉತ್ತರ ಕೇಳಿಬರಲಿಕ್ಕೆ ಸಾಧ್ಯನೇ ಇಲ್ಲ. ಪ್ರೀತಿ ಅನ್ನೋದು ಕೇವಲ ಎರಡಕ್ಷರದ ಪದ ಆಗಿರಬಹುದು. ಆದರೆ, ಆ ಎರಡಕ್ಷರದ ಪ್ರೀತಿಗೆ ಬೆಲೆ ಕಟ್ಟುವುದಕ್ಕೆ ಸಾಧ್ಯಾನೇ ಇಲ್ಲ. ಅಷ್ಟಕ್ಕೂ ನಾವು ಈ ಕ್ಷಣ ಈ ಪ್ರೀತಿ ಕುರಿತಾಗಿ ಪೀಠಿಕೆ ಹಾಕ್ತಿರುವುದಕ್ಕೆ ಕಾರಣ ಸಂಗಮೇಶ್ (Sangamesh) ಜೀವಸಖಿ. ಯಾರು ಈ ಸಂಗಮೇಶ್? ಹೀಗೊಂದು ಪ್ರಶ್ನೆಯ ಜೊತೆಗೆ `ಜೀವಸಖಿ’ ಮೇಲೆಯೂ ಕುತೂಹಲ ಮೂಡಿರುತ್ತೆ. ಅದಕ್ಕೆ ಬ್ರೇಕ್ ಹಾಕ್ಬೇಕು ಅಂದರೆ, ನಿಜವಾದ ಪ್ರೀತಿಗೆ ಸಾಕ್ಷಿಯಾಗಲು ನಿಮ್ಮೆಲ್ಲರ ಮುಂದೆ ಕಿರುಚಿತ್ರದ ಮೂಲಕ ಬರುತ್ತಿರುವ `ಜೀವಸಖಿ’ ಬಗ್ಗೆ ಹೇಳಲೇಬೇಕು.
ಯಸ್, `ಜೀವಸಖಿ’ (Jeevasakhi) ಹೆಸರಲ್ಲಿ ಕನ್ನಡದಲ್ಲೊಂದು ಕಿರುಚಿತ್ರ ತಯಾರಾಗಿದೆ. ಕೆ. ಸಂಗಮೇಶ್ ಪಾಟೀಲ್ ಅನ್ನೋರು ಈ ಕಿರುಚಿತ್ರ ನಿರ್ದೇಶಿಸಿ, ನಿರ್ಮಿಸಿದ್ದಾರೆ. ನಾಲ್ಕೇ ನಾಲ್ಕು ಕ್ಯಾರೆಕ್ಟರ್ ಗಳನ್ನಿಟ್ಟುಕೊಂಡು ಚೆಂದದ ಕಥೆ ಹೆಣೆದಿದ್ದಾರೆ. ಮೇಲ್ನೋಟಕ್ಕೆ ಅದೇ ಲವ್ವು, ಬ್ರೇಕಪ್ಪು, ಮರ್ಡರ್ ಮಿಸ್ಟರಿ ಸ್ಟೋರಿ ಎನಿಸಿದರೂ ಕೂಡ `ಜೀವಸಖಿ’ ಒಡಲಲ್ಲಿ ಹೆಣ್ತತನದ ಕಥನ ಉಸಿರಾಡುತ್ತಿದೆ. ಅದನ್ನು ಜಗತ್ತಿನ ಮುಂದೆ ಹರವಿಡಲೆಂದೇ ಬರೀ 35 ನಿಮಿಷದಲ್ಲಿ `ಜೀವಸಖಿ’ ಕಿರುಚಿತ್ರ ಕಟ್ಟಿಕೊಟ್ಟಿದ್ದಾರೆ. ಸತ್ಯ ಹಾಗೂ ಜನನಿ ಪಾತ್ರಕ್ಕೆ ಯುವರಾಜ್ ಪಾಟೀಲ್ (Yuvraj Patil) ಹಾಗೂ ಸೌಂದರ್ಯ ಗೌಡ (Soundarya Gowda) ಜೀವತುಂಬಿದ್ದು, ಸತ್ಯ ಸ್ನೇಹಿತನಾಗಿ ನಾರದಮುನಿ ಅಭಿನಯಿಸಿದ್ದಾರೆ. ಟ್ರೈಲರ್ ಹಾಗೂ ಹಾಡಿನ ಮೂಲಕ ಕುತೂಹಲ ಮೂಡಿಸಿದ್ದ `ಜೀವಸಖಿ’ `ಸಂಗಮ್ ಟಾಕೀಸ್’ ಮೂಲಕ ಯೂಟ್ಯೂಬ್ ಲೋಕಕ್ಕೆ ಎಂಟ್ರಿಕೊಟ್ಟಿದ್ದಾಳೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ಪ್ರದೀಪ್ ಈಶ್ವರ್ : ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ
`ಜೀವಸಖಿ’ ಹೆಸರಿಗೆ ಮಾತ್ರ ಕಿರುಚಿತ್ರವಷ್ಟೇ. ಯಾಕಂದ್ರೆ, ಕಂಟೆಂಟ್ ಪ್ಲಸ್ ಕ್ವಾಲಿಟಿ ವೈಸ್ ನೋಡಿದ್ರೆ ಯಾವ ಫೀಚರ್ ಫಿಲ್ಮ್ ಗೂ ಕಡಿಮೆಯಿಲ್ಲದಂತೆಯೇ ಕಟ್ಟಿಕೊಟ್ಟಿದ್ದಾರೆ. ಬೆಂಗಳೂರು ಸುತ್ತಮುತ್ತವೇ ಶೂಟಿಂಗ್ ಮಾಡಿದ್ದು, ಜೀವನ್ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಸೂರಜ್ ಜೋಯಿಸ್ ಸಂಗೀತ, ಸುನೀಲ್ ಎಲ್ಎಸ್ಆರ್ ಸಂಕಲನ ಚಿತ್ರಕ್ಕಿದ್ದು, ಸಂಗಮ್ ಟಾಕೀಸ್ ನಿರ್ಮಾಣದಲ್ಲಿ ಸಿನಿಮಾ ರೇಂಜ್ಗೆ ಈ ಶಾರ್ಟ್ ಫಿಲ್ಮ್ ನಿರ್ಮಾಣಗೊಂಡಿದೆ. ಇವತ್ತು ಬೆಂಗಳೂರಿನಲ್ಲಿ ಸ್ಪೆಷಲ್ ಸ್ಕ್ರೀನಿಂಗ್ ಕೂಡ ನಡೆದಿದೆ. ವಿಶೇಷ ಅಂದರೆ `ಗ್ಲೋಬಲ್ ಇಂಡಿ ಫಿಲ್ಮ್ ಅವಾರ್ಡ್ಸ್’ ಹಾಗೂ ಸಂಗ್ರೂರು ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಡೈರೆಕ್ಟರ್, ಬೆಸ್ಟ್ ಸ್ಕ್ರೀನ್ ಪ್ಲೇ ರೈಟರ್ ಸೇರಿದಂತೆ ಐದಾರು ವಿಭಾಗದಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇನ್ನೂ ಅನೇಕ ಫಿಲ್ಮ್ ಫೆಸ್ಟಿವಲ್ ಗಳಲ್ಲಿ `ಜೀವಸಖಿ’ ನಾಮಿನೇಟ್ ಕೂಡ ಆಗಿದೆ.
ಸಿನಿಮಾ ನಿರ್ದೇಶಕನಾಗ್ಬೇಕು ಎನ್ನುವ ಕನಸೊತ್ತು ಗದಗ ಜಿಲ್ಲೆಯ ನರಗುಂದದಿಂದ ಗಾಂಧಿನಗರಕ್ಕೆ ಬಂದಿಳಿದಿದ್ದ ಸಂಗಮೇಶ್, ಯೋಗೇಶ್ ಮಾಸ್ಟರ್ ಅವರ ಕಲಾತ್ಮಕ ಸಿನಿಮಾಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಸಿನಿ ಕರಿಯರ್ ಶುರು ಮಾಡಿದ್ದಾರೆ. ನಂತರ ದಿನಕರ್ ತೂಗುದೀಪ್ ನಿರ್ದೇಶನದ `ಲೈಫ್ ಜೊತೆ ಒಂದ್ ಸೆಲ್ಫಿ’, `ಗಿರ್ಕಿ’, `ನಾನು ಮತ್ತು ಗುಂಡ’ ಸೇರಿದಂತೆ ಹಲವು ಸಿನಿಮಾಗಳಿಗೆ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಆಗಿ ಕೆಲಸ ಮಾಡಿ ಗುರ್ತಿಸಿಕೊಂಡಿದ್ದಾರೆ. ಇನ್ನೇನು ಸ್ವತಂತ್ರ ನಿರ್ದೇಶಕನಾಗಿ ಕಣಕ್ಕಿಳಿಬೇಕು ಎನ್ನುವಷ್ಟರಲ್ಲಿ ನಿರ್ಮಾಪಕರು ಹಿಂದೇಟು ಹಾಕಿದ್ದರಿಂದ ತನ್ನ ಪ್ರತಿಭೆಯನ್ನು ಅನಾವರಣ ಮಾಡಲಿಕ್ಕೆ `ಜೀವಸಖಿ’ ಮೊರೆ ಹೋಗಿದ್ದಾರೆ. ಸಮಾನಮನಸ್ಕರ ತಂಡ ಕಟ್ಟಿಕೊಂಡು `ಜೀವಸಖಿ’ ಮೂಲಕ ಅಖಾಡಕ್ಕಿಳಿದಿದ್ದಾರೆ.
35 ನಿಮಿಷವುಳ್ಳ ಕಿರುಚಿತ್ರದ ಮೂಲಕ ತನ್ನ ಕ್ಯಾಲಿಬರ್ ಏನು ಎಂಬುದನ್ನು ಸಾಬೀತುಪಡಿಸಿರುವ ಸಂಗಮೇಶ್ ಅವರಿಗೆ ಈಗಾಗಲೇ ಹಲವರಿಂದ ಕರೆ ಬಂದಿದೆ. ನಿನಗೆ ಸಿನಿಮಾ ಮಾಡುವ ಕ್ಯಾಪಾಸಿಟಿ ಇದೆ. ಈ ನಟನಿಗೆ ನೀನು ಆ್ಯಕ್ಷನ್ ಕಟ್ ಹೇಳಿದರೆ, ಹೀಗೊಂದು ಸಿನಿಮಾ ಮಾಡಿದರೆ ಸೂಪರ್ ಹಿಟ್ ಆಗುತ್ತೆ ಅಂತ ಸಜೆಷನ್ ಕೊಡುತ್ತಿದ್ದಾರಂತೆ. ಈ ಬಗ್ಗೆ ಖುಷಿಯಿಂದಲೇ ನಮ್ಮೊಟ್ಟಿಗೆ ಮಾತಿಗಿಳಿದು ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡ ಯುವ ನಿರ್ದೇಶಕ ಸಂಗಮೇಶ್, ಕ್ವಾಲಿಟಿ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡುವ ಕನಸು ಹರವಿಟ್ಟರು. ಕಂಟೆಂಟ್ ಈಸ್ ಆಲ್ವೇಸ್ ಕಿಂಗ್ ಎಂದು ಮಾತು ಮುಗಿಸಿದರು. ಎನಿವೇ ಈ ಕನಸುಗಾರನ ಕನಸು ಈಡೇರಲಿ. ಒಂದೊಳ್ಳೆ ಸಿನಿಮಾ ಮೂಲಕ ಸಂಗಮೇಶ್ ಬೆಳ್ಳಿಪರದೆ ಬೆಳಗಲಿ
ಬೆಂಗಳೂರು: ಶಿವಮೊಗ್ಗದಲ್ಲಿ ಯುವಕನ ಕೊಲೆಗೆ ಸಂಬಂಧಿಸಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ರಕ್ಷಣೆ ನೀಡದೇ ಕೂಡಲೇ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ಯಾವುದಕ್ಕೆ ಆಗಿದೆ ಎನ್ನುವುದರ ಬಗ್ಗೆ ನಮಗೆ ಮಾಹಿತಿಯಿಲ್ಲ. ಆದರೆ ಘಟನೆ ಕುರಿತು ತನಿಖೆ ಆಗಬೇಕು. ಈಗಾಗಲೇ ಶಾಸಕ ಸಂಗಮೇಶ್ ಬಳಿ ಮಾಹಿತಿ ಪಡೆಯುತ್ತಿದ್ದೇನೆ. ಎಲ್ಲರೂ ಶಾಂತಿ ಕಾಪಾಡಬೇಕು. ಯಾರೂ ಈ ಘಟನೆಯನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು.
ಕುವೆಂಪು ಶಾಂತಿಯ ತೋಟ ಎಂದಿದ್ದಾರೆ. ಶಿವಮೊಗ್ಗ ಶಾಂತಿಯಿಂದಿರಬೇಕು, ರಾಜ್ಯ ಶಾಂತಿಯಿಂದ ಇರಬೇಕು ಎಂದು ಹೇಳಿದ್ದರು. ಆದರೆ ಇಲ್ಲಿಂದಲೇ ಶಾಂತಿ ಕದಡುತ್ತಿದೆ. ಈ ರೀತಿ ಆಗಬಾರದು. ನಮ್ಮ ದೇಶ ಶಾಂತಿಯಿಂದ ಇರಬೇಕು. ಇದಕ್ಕಾಗಿಯೇ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ನಾವು ಹೋರಾಡುತ್ತಿದ್ದೇವೆ ಎಂದರು. ಇದನ್ನೂ ಓದಿ:ಯುವಕನ ಬರ್ಬರ ಹತ್ಯೆ – ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿ
ಈಗಾಗಲೇ ಶಿವಮೊಗ್ಗದಲ್ಲಿ ಯುವಕನ ಹತ್ಯೆಗೆ ಸಂಬಂಧಿಸಿದಂತೆ ಪರಿಸ್ಥಿತಿ ನಿಯಂತ್ರಿಸಲು ಗುಂಪುಗೂಡಿದ್ದ ಯುವಕರನ್ನು ಪೊಲೀಸರು ಮನೆಯತ್ತ ವಾಪಸ್ ಕಳುಹಿಸಿದ್ದಾರೆ ಮತ್ತು ಮುಂಜಾಗ್ರತಾ ಕ್ರಮವಾಗಿ ತಕ್ಷಣದಿಂದಲೇ ಜಿಲ್ಲೆಯಾದ್ಯಂತ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದನ್ನೂ ಓದಿ:ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ, ಶೀಘ್ರವೇ ಬಂಧನ: ಆರಗ ಜ್ಞಾನೇಂದ್ರ
ಶಿವಮೊಗ್ಗ: ಬಿಜೆಪಿಯವರ ಒಳ ಜಗಳದಿಂದಲೇ ಈ ಸರ್ಕಾರ ಬಿದ್ದು ಹೋಗಲಿದ್ದು, ಇನ್ನು 6 ತಿಂಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದು ಕೇವಲ 6 ತಿಂಗಳ ಸರ್ಕಾರ, ಇನ್ನು 6 ತಿಂಗಳಲ್ಲಿ ಸರ್ಕಾರ ಪತನವಾಗಲಿದೆ. ಬಿಜೆಪಿಯವರಿಗೆ ಜನರ ಬಗ್ಗೆ ಕಾಳಜಿ ಇಲ್ಲ, ಅವರು ಹಣ ಮಾಡುವುದಕ್ಕಾಗಿಯೇ ಅಧಿಕಾರದಲ್ಲಿದ್ದಾರೆ. ಬಿಜೆಪಿ ಶಾಸಕರಲ್ಲಿ ಈಗಾಗಲೇ ಒಳ ಜಗಳ ಆರಂಭವಾಗಿದ್ದು, 2022ರಲ್ಲಿ ಚುನಾವಣೆ ಎದುರಾಗಬಹುದು ಎಂದರು. ಇದನ್ನೂ ಓದಿ: ಸರ್ಕಾರ ರಚನೆಯಾಗೋದಕ್ಕೆ ನನ್ನದೂ ಅಳಿಲು ಸೇವೆ ಇದೆ : ಸಿ.ಪಿ.ಯೋಗೇಶ್ವರ್
ಪೆಟ್ರೋಲ್ ದರ ನೂರು ರೂಪಾಯಿ ದಾಟಿದೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಜನರು ಬಿಜೆಪಿ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಈ ಬಿಜೆಪಿಯವರಿಗೆ ಅಧಿಕಾರ ನಡೆಸಿ ಅನುಭವ ಇಲ್ಲ, ಅನುಭವದ ಕೊರತೆ ಇದೆ ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ, ಹಗರಣ ನಡೆದಿಲ್ಲ. ಬದಲಿಗೆ 70 ವರ್ಷ ಅಧಿಕಾರ ನಡೆಸಿದ ಅವಧಿಯಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದೆ. ಆದರೆ ಬಿಜೆಪಿಯವರು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಅವರ ಧರ್ಮದ ರಾಜಕಾರಣ ಈಗಾಗಲೇ ಜನರಿಗೆ ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪತನವಾಗಲಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಾಸಕ ಬಿ.ಕೆ.ಸಂಗಮೇಶ್ ತಿಳಿಸಿದರು.
– ಮಾರ್ಚ್ 13ರಂದು ‘ಶಿವಮೊಗ್ಗ ಚಲೋ’ – ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಅಶೋಕ್ ಮನಗೊಳಿ
ಬೆಂಗಳೂರು: ಸದನದಲ್ಲಿ ಗಾಯ ತೋರಿಸಲು ಶಾಸಕ ಸಂಗಮೇಶ್ ಶರ್ಟ್ ಬಿಚ್ಚಿದ್ದಾರೆ. ಅದಕ್ಕೆ ಅಸಭ್ಯ ವರ್ತನೆ ಎಂದು ಅಮಾನತು ಮಾಡಿದ್ದಾರೆ. ಸ್ಪೀಕರ್ ಕೂಡ ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ. ಹೀಗಾಗಿ ಮಾರ್ಚ್ 13 ರಂದು ನಾವು ಪ್ರತಿಭಟನೆ ಮಾಡ್ತೇವೆ. ಶಿವಮೊಗ್ಗ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಇಂದು ಸಿಂದಗಿ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವ ಮನಗೊಳಿ ಪುತ್ರ ಅಶೋಕ್ ಮನಗೊಳಿ ಅಧಿಕೃತವಾಗಿ ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೌರ್ಜನ್ಯ ನಡೆದಿದೆ. ನಮ್ಮ ಮುಖಂಡರ ಮೇಲೆ ಸುಳ್ಳು ಕೇಸ್ ಹಾಕ್ತಿದ್ದಾರೆ. ಆದರೆ ಬಿಜೆಪಿ ನಾಯಕರು ಶಾಂತಿಭಂಗ ಹೇಳಿಕೆ ಕೊಟ್ರೂ ಕೇಸ್ ಹಾಕಲ್ಲ ಎಂದು ಗರಂ ಆದರು. ಇದನ್ನು ಓದಿ: ಸದನದ ಬಾವಿಯಲ್ಲಿ ಶರ್ಟ್ ಬಿಚ್ಚಿ ಅಸಭ್ಯ ವರ್ತನೆ – ಸಂಗಮೇಶ್ 1 ವಾರ ಅಮಾನತು
ಕೊರೊನಾ ಸಂದರ್ಭದಲ್ಲಿ ಪದಾರ್ಥ ಲೂಟಿ ಮಾಡಿದ್ರು. ಅವರ ಮೇಲೆ ದೂರು ಕೊಟ್ರೂ ಕೇಸ್ ಹಾಕ್ತಿಲ್ಲ. ಈಗ ನಮ್ಮ ನೂರಾರು ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ. ನಮ್ಮ ಶಾಸಕ ಸಂಗಮೇಶ್ ಅವರ ಮೇಲೆ ಕೇಸ್ ಹಾಕಿದ್ದಾರೆ. ಬಿಜೆಪಿಗೆ ಬರಲಿಲ್ಲವೆಂದು ಹಾಕಿದ್ದಾರೆ. ಹಿಂದೆಯೂ ಬಿಜೆಪಿಗೆ ಬರುವಂತೆ ಒತ್ತಡ ಹಾಕಿದ್ದರು. ಈಗಲೂ ಮತ್ತೆ ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಡಿಕೆಶಿ ಕಿಡಿಕಾರಿದರು. ಇದನ್ನೂ ಓದಿ: ನೀನು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ರೆ ಪವರ್‌ಫುಲ್ ಆಗಿರುತ್ತೆ- ಸಂಗಮೇಶ್‍ಗೆ ಐಡಿಯಾ ಕೊಟ್ಟಿದ್ದೇ ಜಮೀರ್..!
ಮನಗೂಳಿಯವರು ಸಾಯುವ ಮುನ್ನ ನನ್ನ ಹಾಗೂ ಸಿಎಲ್‍ಪಿ ನಾಯಕರನ್ನು ಭೇಟಿ ಮಾಡಿದ್ದರು. ನನ್ನ ಪುತ್ರನನ್ನ ನಿಮ್ಮ ಕೈಗೆ ಬಿಡ್ತೇವೆ ಅಂದಿದ್ದರು. ಅದಾದ 15 ದಿನಕ್ಕೆ ಅವರು ಕೊನೆಯುಸಿರೆಳೆದ್ರು. ಇಂದು ಅಶೋಕ್ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ಯಾವಾಗ ಬೇಕಾದರೂ ಉಪಚುನಾವಣೆ ಬರಬಹುದು. ಹೀಗಾಗಿ ಸ್ಥಳೀಯ ಮುಖಂಡರ ಜೊತೆ ಚರ್ಚಿಸಿದ್ದೆವು. ಇದೀಗ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ತಿದ್ದೇವೆ. ಯಾವುದೇ ಷರತ್ತು ಇಲ್ಲದೆ ಅಶೋಕ್ ಮನಗೊಳಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಈಶ್ವರ್ ಖಂಡ್ರೆ, ಎಂ.ಬಿ.ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು: ಶಾಸಕ ಸಂಗಮೇಶ್ ಶರ್ಟ್ ಕಹಾನಿಯ ಸತ್ಯ ಬಹಿರಂಗವಾಗಿದ್ದು, ಅವರಿಗೆ ಶರ್ಟ್ ಬಿಚ್ಚೋ ಐಡಿಯಾ ಕೊಟ್ಟಿದ್ದೇ ಜಮೀರ್ ಎಂಬುದು ಇದೀಗ ತಿಳಿದಿದೆ.
ಈ ಬಗ್ಗೆ ಇಂದು ಸಿಎಲ್‍ಪಿ ಸಭೆಯಲ್ಲಿ ಚರ್ಚೆಯಾಗಿದ್ದು, ನೀನು ಶರ್ಟ್ ಬಿಚ್ಚಿ ಪ್ರತಿಭಟಿಸಿದರೆ ಹೆಚ್ಚು ಪವರ್‍ಫುಲ್ ಆಗಿರುತ್ತೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದರು ಅದಕೆ ಬಿಚ್ಚಿದೆ ಎಂದು ಸಂಗಮೇಶ್ ಹೇಳಿದ್ದಾರೆ. ಈ ವೇಳೆ ರಮೇಶ್ ಕುಮಾರ್ ಅವರು ಬುದ್ಧಿವಾದ ಹೇಳಿದ್ದು, ಜಮೀರ್ ಹೇಳ್ತಾನೆ ಅಂತಾ ನಾಳೆ ಪ್ಯಾಂಟ್ ಕಳಚಿಬಿಟ್ಟಿಯಾ? ಮರ್ಯಾದೆ ತೆಗೆಯೋಕೆ ಎಂದು ಹೇಳಿದ್ದಾರೆ. ಆಗ ಸಂಗಮೇಶ್ ಮತ್ತೆ ಪ್ರತಿಕ್ರಿಯಿಸಿ, ಅವರು ಹೇಳಿದರು ನಾನು ಬಿಚ್ಚಿದೆ ಎಂದಿದ್ದಾರೆ.
ರಮೇಶ್ ಕುಮಾರ್ ಮತ್ತೆ ಮಧ್ಯೆ ಪ್ರವೇಶಿಸಿ ಅದೇ ಅವನು ಹೇಳ್ತಾನೆ ನೀನು ಬಿಚ್ತೀಯಾ, ಎಲ್ಲಿ ಅವನು ಎಂದು ಪ್ರಶ್ನಿಸಿದ್ದಾರೆ. ಒಟ್ನಲ್ಲಿ ಸಿಎಲ್‍ಪಿ ಸಭೆಯಲ್ಲಿ ಶರ್ಟ್ ಬಿಚ್ಚಿದ್ದರ ಕುರಿತು ಫುಲ್ ರಮೇಶ್ ಕುಮಾರ್ ಹಾಗೂ ಸಂಗಮೇಶ್ ಮಧ್ಯ ಭಾರೀ ಚರ್ಚೆಯಾಗಿದೆ.
ಸದನದಲ್ಲಿ ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಸಂಗಮೇಶ್ ಅಶಿಸ್ತು ಪ್ರದರ್ಶಿಸಿದ್ದರು. ಈ ಹಿನ್ನೆಲೆ ಮಾರ್ಚ್ 12ರ ವರೆಗೆ ಸಂಗಮೇಶ್‍ರನ್ನು ಕಲಾಪದಿಂದ ಅಮಾನತು ಮಾಡಿ ಸ್ಪೀಕರ್ ಆದೇಶಿಸಿದ್ದಾರೆ. ನಿಯಮ 348ರ ಅಡಿ ಅಮಾನತು ಮಾಡಿದ್ದಾರೆ.
ವಿಧಾನ ಮಂಡಲ ಅಧಿವೇಶನದಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಚರ್ಚೆ ನಡೆಸುವ ಬಗ್ಗೆ ಸ್ಪೀಕರ್ ಪ್ರಸ್ತಾಪಿಸಿದ್ದರು. ಇದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಡಿಸಿತ್ತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಯಾವ ನಿಯಮಾವಳಿಗಳಲ್ಲಿ ಚರ್ಚೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದರು. ತಕ್ಷಣವೇ ಕಾಂಗ್ರೆಸ್ ನಾಯಕರು ಆಕ್ರೋಶಗೊಂಡು ಗದ್ದಲ ಎಬ್ಬಿಸಿದ್ದರು. ಅಲ್ಲದೆ ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಸಂಗಮೇಶ್ ಬಾವಿಗಿಳಿದಾಗ ಶರ್ಟ್ ಬಿಚ್ಚಿ ದುರ್ವರ್ತನೆ ತೋರಿದ್ದರು.
ಬೆಂಗಳೂರು: ರಾಜಕೀಯ ನಾಯಕರು ಎಷ್ಟೇ ಕಿತ್ತಾಡಿಕೊಂಡರೂ ಪರಸ್ಪರ ಭೇಟಿಯಾದಾಗ ನಾವೆಲ್ಲ ಒಂದೇ ಎಂಬಂತೆ ನಡೆದುಕೊಳ್ಳುತ್ತಾರೆ. ಅಂತೆಯೇ ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಎಂ.ಪಿ ರೇಣುಕಾಚಾರ್ಯ ಇಬ್ಬರು ಹಾಸ್ಯ ಮಾತುಗಳನ್ನಾಡಿದರು.
ರೇಣುಕಾಚಾರ್ಯ ಅವರು ಇಂದು ವಿಧಾನಸೌಧದ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಅದೇ ವೇಳೆ ತಮ್ಮ ಬಳಗದೊಂದಿಗೆ ಸಿದ್ದರಾಮಯ್ಯ ಬಂದಿದ್ದಾರೆ. ಅಲ್ಲದೆ ರೇಣುಕಾಚಾರ್ಯರನ್ನು ನೋಡಿ ಏನಪ್ಪಾ ಅಂತ ಹೇಳಿದ್ದಾರೆ. ಇದೇ ವೇಳೆ ಜಮೀರ್ ಅವರು, ರೇಣುಕಚಾರ್ಯ ಅವರೇ ಸಾಹೆಬ್ರು ಕರೀತಿದ್ದಾರೆ. ಬೇಗ ಮುಗಿಸ್ಬೇಕಂತೆ ಅಂತ ಹೇಳುತ್ತಾ ತಮಾಷೆ ಮಾಡಿಕೊಂಡು ಮುಂದೆ ಹೋಗಿದ್ದಾರೆ. ಇದನ್ನೂ ಓದಿ: ಸದನದ ಬಾವಿಯಲ್ಲಿ ಶರ್ಟ್ ಬಿಚ್ಚಿ ಅಸಭ್ಯ ವರ್ತನೆ – ಸಂಗಮೇಶ್ 1 ವಾರ ಅಮಾನತು
ಸಿದ್ದರಾಮಯ್ಯರನ್ನು ಕಂಡ ರೇಣುಕಾಚಾರ್ಯ ನನ್ನ ಮಾತು ಮುಗೀತು ಬನ್ನಿ ಬನ್ನಿ ಎಂದು ಕರೆದಿದ್ದಾರೆ. ತಮ್ಮದುರು ಸಿದ್ದರಾಮಯ್ಯ ಹಾಗೂ ಬಳಗ ಬರುತ್ತಿದ್ದಂತೆಯೇ ಸಂಗಣ್ಣನ ಕರೆದುಕೊಂಡು ಬಂದಿದ್ದೀರಿ ಸಾರ್ ಅಂತ ನಕ್ಕಿದ್ದಾರೆ. ಆಗ ಸಿದ್ದರಾಮಯ್ಯ ಅವರು, ಅವರ ಮೇಲೆ 307 ಕೇಸ್ ಹಾಕಿಸಿ ಬಿಟ್ಟಿದ್ದಿಯಾ ನೀನು ಅಂದಾಗ ಅವನು ಬಾರಿ ಬುದ್ಧಿವಂತ ಸಾರ್. ಅವನಷ್ಟು ಕಿಲಾಡಿ, ಬುದ್ಧಿವಂತ ಯಾರಿಲ್ಲ ಎಂದು ಹೇಳುತ್ತಾ ಕೈ ಮುಗಿದು ಮುಂದೆ ಸಾಗಿದ ಪ್ರಸಂಗ ನಡೆಯಿತು.
ಶಿವಮೊಗ್ಗ: ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕಲು ಸಿಎಂ ಕುಮಾರಸ್ವಾಮಿ ಮತ್ತು ಡಿಕೆ ಬ್ರದರ್ಸ್ ತಂತ್ರಗಾರಿಕೆ ರೂಪಿಸಿದ್ದು, ಭದ್ರಾವತಿಯಲ್ಲಿ ಮೊದಲ ಯತ್ನದಲ್ಲೇ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗದ ಭದ್ರಾವತಿಯಲ್ಲಿ ಬಂಡಾಯ ಶಮನವಾಗಿದೆ. ಹಾವು ಮುಂಗುಸಿಯಂತಿದ್ದ ಭದ್ರಾವತಿಯ ಕಾಂಗ್ರೆಸ್ ಶಾಸಕ ಸಂಗಮೇಶ್, ಜೆಡಿಎಸ್‍ನ ಅಪ್ಪಾಜಿ ಗೌಡ ದಶಕಗಳ ಬಳಿಕ ಒಂದಾಗಿದ್ದಾರೆ. ಇಬ್ಬರ ಮಧ್ಯೆ ಇದ್ದ ಮುನಿಸಿಗೆ ಟ್ರಬಲ್ ಶೂಟರ್, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಇತಿಶ್ರೀ ಹಾಡಿದ್ದಾರೆ.
ಇವರಿಬ್ಬರನ್ನೂ ಡಿ.ಕೆ ಶಿವಕುಮಾರ್ ಒಂದು ಮಾಡಿದ್ದು, ಇನ್ಮುಂದೆ ಇವರಿಬ್ಬರೂ ಒಟ್ಟಿಗೆ ಜಂಟಿ ಪ್ರಚಾರ ಮಾಡಲಿದ್ದಾರೆ. ಇಬ್ಬರೂ ಜೊತೆಗೆ ಚುನಾವಣೆ ನಡೆಸಲಿದ್ದಾರೆ. ಕಾರ್ಯಕರ್ತರು, ನಾಯಕರ ನಡುವೆ ಒಟ್ಟಿಗೆ ಸಾಗಲು ತೀರ್ಮಾನಿಸಿದ್ದಾರೆ ಎಂದು ಡಿಕೆಶಿ ಘೋಷಿಸಿದ್ದಾರೆ.
ಶುಕ್ರವಾರ ರಾತ್ರಿ ತುರ್ತು ಪತ್ರಿಕಾಗೋಷ್ಠಿ ಕರೆದ ಡಿಕೆಶಿ ಇಬ್ಬರನ್ನು ಅಕ್ಕ ಪಕ್ಕ ಕೂರಿಸಿಕೊಂಡು, ಇಬ್ಬರು ನಾಯಕರು ಒಂದಾಗಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಕಾರಣಕ್ಕೆ ಮಾಜಿ ಹಾಲಿ ಶಾಸಕರು ಒಟ್ಟಿಗೆ ಪ್ರಚಾರ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇನ್ನು ಮುಂದೆ ಜಂಟಿ ಪ್ರಚಾರ ಮಾಡಲಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.
ಶಿವಮೊಗ್ಗವನ್ನು ಗೆಲ್ಲಬೇಕೆಂದು ಪಣ ತೊಟ್ಟಿರುವ ಮೈತ್ರಿ ಸರ್ಕಾರದ ಪ್ಲಾನ್‍ಗೆ ಯಡಿಯೂರಪ್ಪ ಹೆದರಿ ಬಿಟ್ಟರಾ ಎಂಬ ಪ್ರಶ್ನೆ ಎದುರಾಗಿದೆ. ಶುಕ್ರವಾರದಿಂದ ಶಿಕಾರಿಪುರದಲ್ಲಿ ವಾಸ್ತವ್ಯ ಹೂಡಿರುವ ಯಡಿಯೂರಪ್ಪ ಇನ್ನೂ ಮೂರು ದಿನ ಶಿವಮೊಗ್ಗದಲ್ಲಿ ಉಳಿದು ಜೋಡೆತ್ತುಗಳಿಗೆ ತಂತ್ರಗಳಿಗೆ ಪ್ರತಿತಂತ್ರ ರೂಪಿಸಲಿದ್ದಾರೆ. ಶಿವಮೊಗ್ಗ, ಭದ್ರಾವತಿಯಲ್ಲಿ ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಘವೇಂದ್ರ ಪರವಾಗಿ ಪ್ರಚಾರ ನಡೆಸಲಿದ್ದಾರೆ.