Tag: Sandur By Election

  • ಸಂಡೂರು ಸೋಲನ್ನ ಒಪ್ಪಿಕೊಳ್ತೇವೆ, 2028ಕ್ಕೆ ಬಂಗಾರು ಗೆಲ್ತಾರೆ: ಜನಾರ್ದನ ರೆಡ್ಡಿ

    ಸಂಡೂರು ಸೋಲನ್ನ ಒಪ್ಪಿಕೊಳ್ತೇವೆ, 2028ಕ್ಕೆ ಬಂಗಾರು ಗೆಲ್ತಾರೆ: ಜನಾರ್ದನ ರೆಡ್ಡಿ

    – ಹಣ, ಅಧಿಕಾರ ದುರುಪಯೋಗ ಮಾಡಿದ್ದಾರೆ
    – ಗ್ಯಾರಂಟಿ ಹಣ ಮೂರು ಕ್ಷೇತ್ರಗಳಿಗೆ ಮಾತ್ರ ಹಾಕಿದ್ದಾರೆ

    ಬಳ್ಳಾರಿ: ಸಂಡೂರು (Sandur By Election) ಸೋಲನ್ನು ಒಪ್ಪಿಕೊಳ್ಳುತ್ತೇವೆ. ಈ ರೀತಿಯಲ್ಲಿ ಸೋಲುತ್ತೇವೆ ಎಂದು ಅಂದುಕೊಂಡಿರಲಿಲ್ಲಾ ಎಂದು ಶಾಸಕ ಜನಾರ್ದನ ರೆಡ್ಡಿ (Janardhana Reddy) ಬೇಸರ ವ್ಯಕ್ತಪಡಿಸಿದ್ದಾರೆ.

    ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿ (BJP) ಸೋಲನ್ನು ಅನುಭವಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 5 ಸಾವಿರ ಮತಗಳಿಂದ ನಾವು ಗೆಲ್ಲುತ್ತೇವೆ ಅಂತ ಇತ್ತು. ಆದರೆ 9 ಸಾವಿರಕ್ಕೂ ಹೆಚ್ಚು ಅಂತರದಿಂದ ಕಾಂಗ್ರೆಸ್‌ಗೆ (Congress) ಗೆಲುವಾಗಿದೆ. ಸಿಎಂ ಸಿದ್ದರಾಮಯ್ಯ ಪಂಚಾಯತ್ ಲೆವಲ್‌ನಲ್ಲಿ ಪ್ರಚಾರ ಮಾಡಿದ್ದಾರೆ. 100 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಹಣ, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸಂಡೂರು ಸರ್ಕಲ್ ಇನ್ಸ್ಪೆಕ್ಟರ್, ಮಹೇಶ್ ಗೌಡ ಸೇರಿದಂತೆ ಅನೇಕ ಪೊಲೀಸರ ದುರ್ಬಳಕೆ ಆಗಿದೆ. ಸಂಡೂರು ಜನರ 83 ಸಾವಿರ ಮತಗಳು ಬಂಗಾರು ಹನುಮಂತು ಅವರಿಗೆ ಬಂದಿವೆ ಎಂದರು. ಇದನ್ನೂ ಓದಿ: ಅಭಿವೃದ್ಧಿಗೆ ಒಲವು, ಗ್ಯಾರಂಟಿಗೆ ಗೆಲುವು – ಬೈಎಲೆಕ್ಷನ್‌ ಫಲಿತಾಂಶಕ್ಕೆ ಕಾಂಗ್ರೆಸ್‌ ಸಂತಸ

    ನಮಗೆ ಇನ್ನೂ 5 ಸಾವಿರ ಮತಗಳು ನಮಗೆ ಬೇಕಿತ್ತು. ಸಿಎಂ ಸಿದ್ದರಾಮಯ್ಯ ಅವರು ಬಂದು ಕ್ಯಾಂಪೇನ್ ಮಾಡಿದ್ದಾರೆ. ಹಣದ ಹೊಳೆ ಹಂಚಿದ್ದಾರೆ. ಅಧಿಕಾರ ದುರುಪಯೋಗ ಆಗಿದೆ. ವಾಲ್ಮೀಕಿ ಹಗರಣ, ಮುಡಾ ಹಗರಣ ಇವೆಲ್ಲವೂ ಇವತ್ತು ಕೆಲಸ ಮಾಡಿದೆ. ತುಕಾರಾಂ ಅವರಿಗೆ ಎಂಪಿ ಚುನಾವಣೆಯಲ್ಲಿ ಲೀಡ್ ಎಷ್ಟಿತ್ತು, ಈಗ ಎಷ್ಟಿದೆ ನೋಡಿ. 83 ಸಾವಿರ ಮತಗಳು ನಮಗೆ ಬಂದಿವೆ. 30-40 ಸಾವಿರ ಮತಗಳ ಅಂತರದಿಂದ ನಾವು ಸೋತಿಲ್ಲಾ. ನಮಗೆ 5,000 ಮತಗಳು ಬೇಕಿತ್ತು. ರಾಜ್ಯದಲ್ಲಿ ಮೂರು ಕಡೆ ಕಾಂಗ್ರೆಸ್ ಬಂದಿದೆ. ಅಧಿಕಾರ ದುರುಪಯೋಗ ಮಾಡಲಾಗಿದೆ. ಆಡಳಿತ ಪಕ್ಷ ಇರೋ ಸಮಯದಲ್ಲಿ ಸಹಜವಾಗಿ ಆ ಪಕ್ಷ ಗೆಲ್ಲುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಹಣದ ಹೊಳೆಯನ್ನೇ ಹರಿಸಿದೆ: ಭರತ್ ಬೊಮ್ಮಾಯಿ

    ಉಪಚುನಾವಣೆಯಲ್ಲಿ ಆಡಳಿತ ಪಕ್ಷ ಹಣಬಲ, ತೋಳಬಲ ಉಪಯೋಗಿಸುವುದು ಸರ್ವೇ ಸಾಮಾನ್ಯ. ಉಪಚುನಾವಣೆ, ಜನರಲ್ ಎಲೆಕ್ಷನ್‌ಗೆ ಹೋಲಿಕೆ ಮಾಡಲು ಆಗಲ್ಲ. ಮೂರು ಕ್ಷೇತ್ರಗಳಲ್ಲಿ ಮತದಾನದ ಮುಂಚೆ ದಿನ ಗೃಹಲಕ್ಷ್ಮೀ ಯೋಜನೆಯ ಹಣ ಹಾಕಿದ್ದರು. ಗ್ಯಾರಂಟಿ ಯೋಜನೆಯ ಹಣ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹಾಕದೇ ಕೇವಲ ಮೂರು ಕ್ಷೇತ್ರಗಳಿಗೆ ಹಾಕಿದ್ದರು. ನೂರಾರು ಕೋಟಿ ಹಣ ಚೆಲ್ಲಿದ್ದಾರೆ. 2028ರಲ್ಲಿ ಬಂಗಾರು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿಎಂಗೆ ಮುಹೂರ್ತ ಇಡ್ತಿದ್ರು, ಈಗ ಯಾರು ಬದಲಾಗ್ತಾರೆ ನೋಡೋಣ – ಬಿವೈವಿಗೆ ಮಧು ಬಂಗಾರಪ್ಪ ತಿರುಗೇಟು

  • ಸಂಡೂರು ಉಪಚುನಾವಣೆ; ರಾಮುಲು-ಜನಾರ್ದನ ರೆಡ್ಡಿ ಜಂಟಿ ಪ್ರಚಾರ, ದೂರ ಉಳಿದ ಕಾಂಗ್ರೆಸ್ ಶಾಸಕರು

    ಸಂಡೂರು ಉಪಚುನಾವಣೆ; ರಾಮುಲು-ಜನಾರ್ದನ ರೆಡ್ಡಿ ಜಂಟಿ ಪ್ರಚಾರ, ದೂರ ಉಳಿದ ಕಾಂಗ್ರೆಸ್ ಶಾಸಕರು

    ಬಳ್ಳಾರಿ: ಸಂಡೂರು ಉಪಚುನಾವಣೆ (Sandur By Election) ಅಖಾಡ ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು (Bangaru Hanumanthu) ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಇದುವರೆಗೂ ಪ್ರಚಾರದಿಂದ ದೂರವೇ ಉಳಿದಿದ್ದ ಮಾಜಿ ಸಚಿವ ಶ್ರೀರಾಮುಲು ಕೊನೆಗೂ ಸಂಡೂರು ಉಪಚುನಾವಣೆ ಪ್ರಚಾರಕ್ಕೆ ಎಂಟ್ರಿ ಕೊಟ್ಟಿದ್ದು, ಜನಾರ್ದನ ರೆಡ್ಡಿ ಜೊತೆ ಜಂಟಿ ಪ್ರಚಾರ ಆರಂಭಿಸಿದ್ದಾರೆ.

    2023ರ ಚುನಾವಣೆ ವೇಳೆ ಶ್ರೀರಾಮುಲು (Sriramulu) ಹಾಗೂ ಜನಾರ್ದನ ರೆಡ್ಡಿ (Janardhan Reddy) ಆಂತರಿಕ ಭಿನ್ನಾಭಿಪ್ರಾಯದಿಂದ ದೂರವಾಗಿದ್ದರು. ಸಂಡೂರು ಚುನಾವಣೆ ವೇಳೆ ಶ್ರೀರಾಮುಲುಗಿಂತ ಮುಂಚೆನೇ ಜನಾರ್ದನ ರೆಡ್ಡಿ ಪ್ರಚಾರದ ಅಖಾಡಕ್ಕೆ ಧುಮುಕಿದ್ದರು. ಆಂತರಿಕ ಸಮಸ್ಯೆಯಿಂದ ಹಿಂದೆ ಸರಿದಿದ್ದ ರಾಮುಲು ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮನವೊಲಿಸಿದ್ದರು. ನಾಮಪತ್ರ ಸಲ್ಲಿಕೆ ಬಳಿಕ ಪ್ರಚಾರಕ್ಕೆ ಬರುತ್ತೇನೆ ಎಂದಿದ್ದ ರಾಮುಲು ಇದೀಗ ಪ್ರಚಾರಕ್ಕೆ ಬಂದಿದ್ದಾರೆ. ಆದರೆ ರಾಮುಲು- ಜನಾರ್ದನ ರೆಡ್ಡಿ ಜಂಟಿ ಪ್ರಚಾರದ ನಡುವೆಯೂ ಬಿಜೆಪಿ ನಾಯಕರಿಗೆ ಒಳೇಟಿನ ಆತಂಕ ಕಾಡುತ್ತಿದೆ. ಇದನ್ನೂ ಓದಿ: ಡಿಕೆಶಿಗೆ ಸಿಎಂ ಆಗುವ ಅವಕಾಶ ಇದೆ, ಯೋಗೇಶ್ಬರ್ ಗೆಲ್ಲಿಸಿದ್ರೆ ಶಕ್ತಿ ಬರುತ್ತೆ: ಎಂಎಲ್‌ಸಿ ಪುಟ್ಟಣ್ಣ

    ಇತ್ತ ಕಾಂಗ್ರೆಸ್‌ನಲ್ಲೂ ಎಲ್ಲವೂ ಸರಿ ಇಲ್ಲ ಅನ್ನೋದು ಸ್ಪಷ್ಟವಾಗಿದೆ. ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದರೂ ಯಾರೊಬ್ಬರೂ ಇದುವರೆಗೂ ಪ್ರಚಾರ ಕಾರ್ಯದಲ್ಲಿ ತೊಡಗಿಲ್ಲ. ಸಂಸದ ತುಕಾರಾಂ ಹಾಗೂ ಪತ್ನಿ ಅನ್ನಪೂರ್ಣ ತುಕಾರಾಂ ಮಾತ್ರ ಪ್ರಚಾರ ಮಾಡುತ್ತಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಮನೆದೇವ್ರು ದುರ್ಯೋಧನ, ಲಾಂಛನ ನಾಗರಹಾವು ಅಂದಿದ್ದು ಯಡಿಯೂರಪ್ಪ: ಬಾಲಕೃಷ್ಣ

  • ಸಂಡೂರು| ಕಾಂಗ್ರೆಸ್‌ಗೆ ಮಾಸ್ಟರ್ ಸ್ಟ್ರೋಕ್‌ ನೀಡಲು ರೆಡ್ಡಿ ಗೇಮ್‌!

    ಸಂಡೂರು| ಕಾಂಗ್ರೆಸ್‌ಗೆ ಮಾಸ್ಟರ್ ಸ್ಟ್ರೋಕ್‌ ನೀಡಲು ರೆಡ್ಡಿ ಗೇಮ್‌!

    ಬಳ್ಳಾರಿ: ಸಂಡೂರು ಉಪ ಚುನಾವಣೆಯಲ್ಲಿ (Sandur By Election) ಜನಾರ್ದನ ರೆಡ್ಡಿ (Janardhan Reddy) ಸದ್ದಿಲ್ಲದೇ ಆಪರೇಷನ್ ಮಾಡಿ ಕಾಂಗ್ರೆಸ್‌ಗೆ ಮಾಸ್ಟರ್ ಸ್ಟ್ರೋಕ್ ನೀಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

    ಸಂಡೂರಿನಲ್ಲೇ ಮನೆ ಮಾಡಿರುವ ಜನಾರ್ದನ ರೆಡ್ಡಿ ಗೌಪ್ಯವಾಗಿ ಕಾಂಗ್ರೆಸ್‌ (Congress) ಅತೃಪ್ತರ ಮುಖಂಡರ ಸಂಪರ್ಕ ಮಾಡುತ್ತಿದ್ದಾರೆ ಎನ್ನಲಾಗಿದೆ.

    ತುಕಾರಾಂ ಪತ್ನಿ ಅನ್ನಪೂರ್ಣ (Annapurna Tukaram) ಅವರಿಗೆ ಟಿಕೆಟ್ ಸಿಕ್ಕಿದ್ದಕ್ಕೆ ಕಾಂಗ್ರೆಸ್‌ ಕೆಲ ಮುಖಂಡರಿಗೆ ಒಳಗೊಳಗೆ ಅಸಮಾಧಾನ ಇದೆ. ಹೀಗಾಗಿ ಇದರ ಲಾಭ ಪಡೆಯಲು ಜನಾರ್ದನ ರೆಡ್ಡಿ ತೆರೆಮರೆಯ ಕಸರತ್ತು ನಡೆಸಿದ್ದಾರೆ.  ಇದನ್ನೂ ಓದಿ: ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಟಿಕೆಟ್‌ ದರ 200 ರೂ.ಗೆ ನಿಗದಿಪಡಿಸುವಂತೆ ಸಿಎಂಗೆ ಮನವಿ

     

    ಇತಿಹಾಸದಲ್ಲಿ ಇಲ್ಲಿಯವರೆಗೆ ಸಂಡೂರಿನಲ್ಲಿ ಬಿಜೆಪಿ ಗೆಲುವು ಸಾಧಿಸಿಲ್ಲ. ಹೀಗಾಗಿ ಈ ಬಾರಿ ಹೇಗಾದರೂ ಮಾಡಿ ಕಮಲ ಅರಳಿಸಲೇಬೇಕು ಎಂದು ಹಠಕ್ಕೆ ಬಿದ್ದಿದ್ದಾರೆ. ಇದೇ ಕಾರಣಕ್ಕೆ ಏನೆಲ್ಲಾ ಸಾಧ್ಯವೋ ಅದೆಲ್ಲವನ್ನೂ ಮಾಡುತ್ತಿರುವ ರೆಡ್ಡಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ (Bangaru Hanumantha) ಗೆಲುವಿಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ.

    ನಾಮಪತ್ರ ಸಲ್ಲಿಕೆಯ ಬಳಿಕ ಶ್ರೀರಾಮುಲು ಸಹಿತ ಅಖಾಡಕ್ಕೆ ಇಳಿದಿದ್ದು, ಜಂಟಿಯಾಗಿ ಪ್ರಚಾರ ನಡೆಸುವ ಜೊತೆ ಜೊತೆಗೆ ಕಾಂಗ್ರೆಸ್ ಕೆಲ ಅತೃಪ್ತರನ್ನ ಪಕ್ಷಕ್ಕೆ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

     

  • ಬೃಹತ್ ರೋಡ್ ಶೋ ನಡೆಸಿ ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಂ ನಾಮಪತ್ರ ಸಲ್ಲಿಕೆ

    ಬೃಹತ್ ರೋಡ್ ಶೋ ನಡೆಸಿ ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಂ ನಾಮಪತ್ರ ಸಲ್ಲಿಕೆ

     ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಇರ್ತಾರೆ – ಜಮೀರ್ ಅಹ್ಮದ್

    ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ (Sandur By Election) ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ (Annapurna Tukaram) ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

    ಸಂಡೂರಿನ ಎಪಿಎಂಸಿಯಿಂದ ತಾಲೂಕು ಪಂಚಾಯತ್‌ ಕಚೇರಿವರೆಗೂ ಬೃಹತ್ ರೋಡ್ ಶೋ ಮಾಡುವ ಮೂಲಕ ಕೈ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಶಕ್ತಿ ಪ್ರದರ್ಶನ ಮಾಡಿದರು. ರೋಡ್ ಶೋ‌ನಲ್ಲಿ ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್, ಸಚಿವ ಸಂತೋಷ ಲಾಡ್, ಮಾಜಿ ಸಚಿವ ನಾಗೇಂದ್ರ, ಸಂಸದ ಈ ತುಕಾರಾಂ, ಮಾಜಿ ಸಚಿವ ಪರಮೇಶ್ವರ್ ನಾಯ್ಕ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದರು.

    ರೋಡ್ ಶೋ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಜಮೀರ್ ಅಹ್ಮದ್ ಜೈ ಭೀಮ್ ಎಂದು ಮಾತು ಆರಂಭಿಸಿ, ಸಿಎಂ ಸಿದ್ದರಾಮಯ್ಯ ‌ಅವರೇ ಐದು‌ ವರ್ಷ ಸಿಎಂ ಆಗಿರುತ್ತಾರೆ. ಯಾರೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಸಂವಿಧಾನ ಜಾರಿ ಆಗಿರುವುದರಿಂದ ನಾವೆಲ್ಲ ಸುಭದ್ರವಾಗಿದ್ದೇವೆ. ಸೋಲಿಲ್ಲದ ಸರದಾರ ತುಕಾರಾಂ ನಾಲ್ಕು ಬಾರಿ ಗೆದ್ದಿದ್ದಾರೆ. ಸುಮ್ಮನೆ ಗೆಲ್ಲಿಸುತ್ತಾರಾ? ಅಭಿವೃದ್ಧಿ ಕೆಲಸ ಮಾಡಿದ್ದಕ್ಕೆ ಗೆಲ್ಲಿಸಿದ್ದೀರಿ. ತುಕಾರಂ ಈ‌ ವರ್ಷದಲ್ಲಿ‌ 1,615 ಕೋಟಿ ಅನುದಾನ ತಂದಿದ್ದಾರೆ. ಸಿಎಂ ಸೇರಿ‌ 224 ಜನ ಯಾರೂ‌ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ. ಮಂತ್ರಿಯಾದರೂ ಪಿಯೂನ್‌ ರೀತಿ ಫೈಲ್ ಹಿಡಿದು ಟೇಬಲ್ ಟು ಟೇಬಲ್ ಓಡಾಡಿ ಕೆಲಸ ಮಾಡಿದ್ದಾರೆ ಎಂದು ಹೊಗಳಿದರು. ಇದನ್ನೂ ಓದಿ: ಕಾರ್ಯಕರ್ತರ ಒತ್ತಡಕ್ಕೆ ಮಣಿದು ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆ: ಹೆಚ್‌ಡಿಡಿ

    ತುಕಾರಾಂ ಬೇಕು ಅಂತ ರಾಜಿನಾಮೆ ನೀಡಿಲ್ಲ. ನಾವೇ ಒತ್ತಾಯ ಮಾಡಿ ಲೋಕಸಭಾ ಚುನಾವಣೆಗೆ ನಿಲ್ಲಿಸಿದ್ದೆವು. ರಾಜಕೀಯ ಲಾಭಕ್ಕಾಗಿ ಗ್ಯಾರಂಟಿ ಯೋಜನೆ ತಂದಿಲ್ಲ. ಇಸ್ಲಾಂ ಧರ್ಮ ಯಾವತ್ತೂ ಜಾತಿ‌ ಬೇಧ ಮಾಡಲ್ಲ. ಜನಾರ್ದನ ರೆಡ್ಡಿ ಅಪಪ್ರಚಾರ ಮಾಡುತ್ತಿದ್ದಾರೆ. ಬಳ್ಳಾರಿ ಪೂರ ಲೂಟಿ ಮಾಡಿದ್ದಾರೆ. ಅವರು ಈಗ ಜಿಲ್ಲೆಯಲ್ಲಿ ಏನೇನೋ ಮಾತಾಡಿ ತಪ್ಪು ಸಂದೇಶ ‌ನೀಡುತ್ತಿದ್ದಾರೆ ಎಂದು ಜಮೀರ್ ವಾಗ್ದಾಳಿ ನಡೆಸಿದರು.

    ನಾಮಪತ್ರ ಸಲ್ಲಿಕೆಗೂ ಮುನ್ನ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, 2006 ರಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಡೂರಿನಲ್ಲಿ ಗಣಿಗಾರಿಕೆ ನಡೆಯುತ್ತಿತ್ತು.
    20 ವರ್ಷಕ್ಕೆ 800 ಮಿಲಿಯನ್ ಟನ್ ಅದಿರು ರಫ್ತು ಆಗಿತ್ತು. ಇದರಲ್ಲಿ ಎರಡೇ ಪರ್ಸಂಟೇಜ್ ನಾನು ತೆಗೆದುಕೊಂಡಿದ್ದರೆ 1600 ಕೋಟಿ ನನ್ನ ಮನೆಯಲ್ಲಿ ಇರುತ್ತಿತ್ತು. ಆದರೆ ನಾನು‌ ಬಡವರ ಹೊಟ್ಟೆ ಮೇಲೆ ಹೊಡಿಲಿಲ್ಲ, ಬ್ಲಾಕ್ ಮೇಲ್ ಮಾಡಿ‌ ವಸೂಲಿ ಮಾಡಲಿಲ್ಲ. ತುಕಾರಾಂ ಕೂಡ 2008 ರಿಂದ ಅದೇ ರೀತಿ ಕೆಲಸ ಮಾಡಿದ್ದಾರೆ. ಅನ್ನಪೂರ್ಣ ಅವರು ನಮ್ಮ ಫ್ಯಾಮಿಲಿಯ ಸದಸ್ಯೆ, ಇದು ನನ್ನ ಮನೆಯ ಚುನಾವಣೆ‌. ಇದೊಂದು ಬಾರಿ ಆಶಿರ್ವಾದ ಮಾಡಿ, ಧರ್ಮವನ್ನು ರಾಜಕೀಯಕ್ಕೆ ತರುವುದಿಲ್ಲ. ನಮ್ಮ ಮನೆತನವೇ ಧರ್ಮದಿಂದ ಬಂದಿದೆ ಎಂದರು.

    ರಾಜಕೀಯವಾಗಿ ನಾನು ಯಾರನ್ನೂ ಟೀಕೆ ಮಾಡಿಲ್ಲ. ನನ್ನ‌ ಬಗ್ಗೆ ಸಾಕಷ್ಟು ಜನ ಟೀಕೆ‌ ಮಾಡುತ್ತಿದ್ದಾರೆ. ಅವರೆಲ್ಲರಿಗೂ ದೇವರು ಒಳ್ಳೆಯದು ಮಾಡಲಿ. ಕೇಂದ್ರದ ‌ಮಂತ್ರಿಗಳು, ರಾಜ್ಯದ ನಾಯಕರು ಬಂದು ಇಲ್ಲಿ ಸುಳ್ಳು ಹೇಳುತ್ತಿದ್ದಾರೆ. 60 ಸಾವಿರ ಕೋಟಿ ರೂ.‌ ಸಿದ್ದರಾಮಯ್ಯ ಜನರ ಮನೆಗೆ ತಲುಪಿಸುತ್ತಿದ್ದಾರೆ. ಮೋದಿ‌ ಸರ್ಕಾರ ಅದಾನಿ, ಅಂಬಾನಿ‌ ಆದಾಯ ದ್ವಿಗುಣ ಮಾಡಿದ್ದಾರೆ. ಈ‌ ಚುನಾವಣೆ ಕಾಂಗ್ರೆಸ್ ಪ್ರತಿಷ್ಠಿತ ‌ಚುನಾವಣೆ. ಒಬ್ಬ ಹೆಣ್ಣು ಮಗಳಿಗೆ ಟಿಕೆಟ್ ಸಂಡೂರಿನ ‌ಪ್ರತಿಷ್ಠೆಯ ಚುನಾವಣೆ. ಪ್ರತಿ‌ ಮನೆಯ ಹೆಣ್ಣು ಮಗಳ ಗೆಲುವು ಆಗಬೇಕು ಎಂದು ಮನವಿ ಮಾಡಿದರು.