Tag: sandlwood

  • ಪ್ರೇಕ್ಷಕರ ಮನಸೂರೆಗೊಂಡ ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಚೇಸ್!

    ಪ್ರೇಕ್ಷಕರ ಮನಸೂರೆಗೊಂಡ ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಚೇಸ್!

    ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ವಿಭಿನ್ನ ರೀತಿಯ ಪ್ರಯೋಗಾತ್ಮಕ ಚಿತ್ರಗಳು ಮೂಡಿಬಂದು ಸಿನಿಪ್ರಿಯರಿಂದ ಮೆಚ್ಚುಗೆ ಗಳಿಸ್ತಿವೆ. ಇದೀಗ ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಚೇಸ್ ಸಿನಿಮಾ ಕೂಡ ಆ ಸಿನಿಮಾಗಳ ಸಾಲಿಗೆ ಸೇರಿದೆ. ಕಳೆದ ವಾರ ತೆರೆಕಂಡ ಈ ಸಿನಿಮಾ ಸದ್ಯ ಪ್ರೇಕ್ಷಕರ ಮೆಚ್ಚುಗೆ ಗಳಿಸಿ, ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣ್ತಿದೆ.

    ಒಂದು ಸಿನಿಮಾ ಯಶಸ್ವಿಯಾಗ್ಬೇಕು ಅಂದ್ರೆ ಮನೋರಂಜನೆ ಜೊತೆಗೆ ಒಂದೊಳ್ಳೆ ಕಂಟೆಂಟ್ ಕೂಡ ಬಹಳ ಮುಖ್ಯ. ಅದನ್ನರಿತ ನಿರ್ದೇಶಕ ವಿಲೋಕ್ ಶೆಟ್ಟಿ ಪ್ರಸ್ತುತ ಸಮಾಜದಲ್ಲಿ ನಡೆಯುವ ಅಪರಾಧಿ ಕೃತ್ಯದ ಬಗ್ಗೆ ಎಫೆಕ್ಟೀವ್ ಆಗಿ ಸಿನಿಮಾ ಮಾಡಿ ಆ ಮೂಲಕ ಜನರಿಗೆ ಸಂದೇಶ ನೀಡಿದ್ದಾರೆ. ತಮ್ಮ ಈ ಪ್ರಯತ್ನದಲ್ಲಿ ಗೆಲುವನ್ನೂ ಕಂಡಿದ್ದಾರೆ. ಚಾರ್ಲಿ ಚಿತ್ರದ ಬಗ್ಗೆ ಮೂಡಿಕೊಂಡಿದ್ದ ಥರದ ಕ್ರೇಜ್ ಇದೀಗ ಚೇಸ್ ಅನ್ನು ಸುತ್ತುವರೆದಿದೆ!

    ಸಿನಿಮಾದ ಕಥೆ, ನಿರೂಪಣೆ ಮಾಡಿರುವ ಶೈಲಿ, ಅಚ್ಚುಕಟ್ಟಾದ ಸ್ಕ್ರೀನ್ ಪ್ಲೇ, ನೋಡುಗರನ್ನ ಸೀಟಿನ ತುದಿಗೆ ಕೂರಿಸುವಂತಹ ಥ್ರಿಲ್ಲಿಂಗ್ ದೃಶ್ಯಗಳು, ಕಲಾವಿದರ ಅದ್ಭುತ ಅಭಿನಯದ ಕಾರಣ ಚೇಸ್ ಸಿನಿಮಾ ಸೂಪರ್ ಹಿಟ್ ಆಗಿದೆ. ನಟಿ ರಾಧಿಕಾ ನಾರಾಯಣ್ ಅವರ ವಿಭಿನ್ನ ಶೇಡ್ಸ್ ಇರುವ ಪಾತ್ರ, ಅರ್ಜುನ್ ಯೋಗಿ, ಶೀತಲ್ ಶೆಟ್ಟಿ ಅವರ ಪಾತ್ರಗಳು ನೋಡುಗರ ಮನಸ್ಸನ್ನು ಆವರಿಸಿವೆ. ಕ್ರೈಂ, ಥ್ರಿಲ್ಲರ್ ಜಾನರ್ ಸಿನಿಮಾ ಆದರೂ ಚೇಸ್ ಸಿನಿಮಾ ಪ್ರೇಕ್ಷರಿಂದ ಮೆಚ್ಚುಗೆ ಪಡೆದು ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಕ್ರೇಜ್ ಕ್ರಿಯೇಟ್ ಮಾಡಿದೆ. ಈ ಸಿನಿಮಾ ಬಗ್ಗೆಯೇ ಎಲ್ಲರೂ ಮಾತನಾಡುವಂತೆ ಮಾಡಿದೆ.

    ಅಂದಹಾಗೆ ಈ ಸಿನಿಮಾದಲ್ಲಿ ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್‌ ಶೆಟ್ಟಿ, ಅರವಿಂದ್ ಬೋಳಾರ್, ಶ್ವೇತಾ ಸಂಜೀವುಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ, ಸುಂದರ್, ಸತೀಶ್ ಸಿದ್ಧಾರ್ಥ, ಮಾಧ್ಯಮಿಕ, ಪ್ರಿಯಾ ಶಟಮರ್ಶನ್ ಮುಂತಾದ ಕಲಾವಿದರೂ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಕಾರ್ತಿಕ್ ಆಚಾರ್ಯ ಸಂಗೀತ ಸಂಯೋಜಿಸಿದ್ದಾರೆ. ಅನಂತರಾಜ್ ಅರಸ್ ಛಾಯಾಗ್ರಹಣ ಮಾಡಿದ್ದಾರೆ. ಇದನ್ನೂ ಓದಿ: `ಪುಷ್ಪ 2’ನಲ್ಲಿ ಅಲ್ಲು ಅರ್ಜುನ್‌ಗೆ ಟಕ್ಕರ್ ಕೊಡಲಿದ್ದಾರೆ ಈ ಬಾಲಿವುಡ್ ಸ್ಟಾರ್

    ಸಿಂಪ್ಲಿ ಫನ್ ಮೀಡಿಯಾ ನೆಟ್ ವರ್ಕ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ಮನೋಹರ್ ಸುವರ್ಣ ಚೇಸ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾ ನಿರ್ಮಾಣದಲ್ಲಿ ಪ್ರಶಾಂತ್ ಶೆಟ್ಟಿ, ಮತ್ತು ಪ್ರದೀಪ್ ಶೆಟ್ಟಿ ಕೂಡ ಸಾಥ್ ನೀಡಿದ್ದಾರೆ. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಒಟ್ಟಾರೆ ಚೇಸ್ ಸಿನಿಮಾ ಸದ್ಯ ರಾಜ್ಯಾದ್ಯಂತ ಯಶಸ್ವಿಯಾಗಿ ಹೌಸ್ ಫುಲ್ ಪ್ರದರ್ಶನ ಕಾಣ್ತಿದ್ದು, ಚಿತ್ರತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗಿದೆ. ಮುಂದಿನ ದಿನಗಳಲ್ಲಿ ಈ ಚಿತ್ರ ಏನೆಲ್ಲಾ ದಾಖಲೆಗಳನ್ನು ಬರೆಯಲಿದ್ಯೋ ನೋಡ್ಬೇಕು.

    Live Tv
    [brid partner=56869869 player=32851 video=960834 autoplay=true]

  • ಸಿನಿಮಿಯ ರೀತಿಯಲ್ಲಿ ಅಪಹರಣ – ಸ್ಯಾಂಡಲ್‍ವುಡ್ ಖಳನಟ ಅರೆಸ್ಟ್

    ಸಿನಿಮಿಯ ರೀತಿಯಲ್ಲಿ ಅಪಹರಣ – ಸ್ಯಾಂಡಲ್‍ವುಡ್ ಖಳನಟ ಅರೆಸ್ಟ್

    ಬೆಂಗಳೂರು: ಡೈಮಂಡ್ ಉದ್ಯಮಿಯನ್ನು ಸಿನಿಮಿಯ ರೀತಿಯಲ್ಲಿ ಅಪಹರಣ ಮಾಡಿದ್ದ ನಾರಾಯಣ್ ಹಾಗೂ ಆತನ ಸಹಚರರು ಪೊಲೀಸರು ಬಂಧಿಸಿದ್ದಾರೆ.

    ನಾರಾಯಣ್ ಸಿನಿಮಾದಲ್ಲಿ ಖಳನಟನಾಗಿ ಅಭಿನಯಿಸಿದ್ದ. ವೀರಪರಂಪರೆ ಸೇರಿದಂತೆ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖಳನಟನಾಗಿ ನಟಿಸಿದ್ದಾನೆ.

    ನಾರಾಯಣ್ ಮತ್ತು ಆತನ ಸಹಚರರು ಮಂಡ್ಯ ಮೂಲದ ವಜ್ರ ವ್ಯಾಪಾರಿಯನ್ನು ಬೆಂಗಳೂರಿನ ಯುಬಿ ಸಿಟಿ ಬಳಿ ಅಪಹರಿಸಿ ರಾತ್ರಿಯೆಲ್ಲಾ ಬೆಂಗಳೂರು ಸುತ್ತಾಡಿಸಿದ್ದಾರೆ. ಕಳೆದ ತಿಂಗಳು 21ರಂದು ಈ ಘಟನೆ ನಡೆದಿದ್ದು, ನಾರಾಯಣ್ ಮತ್ತು ಆತನ ಸಹಚರರು ಮರುದಿನ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಉದ್ಯಮಿಯನ್ನು ಬಿಟ್ಟು ಹೋಗಿದ್ದರು. ಬಳಿಕ ಉದ್ಯಮಿ ಹೈಗ್ರೌಂಡ್ಸ್ ಠಾಣೆಯಲ್ಲೇ ದೂರು ದಾಖಲಿಸಿದ್ದರು. ಇದನ್ನೂ ಓದಿ: ‘ಟಕ್ಕರ್’ ಮೂಲಕ ಪ್ರೇಕ್ಷಕರ ಮನಗೆಲ್ಲೋಕೆ ರೆಡಿಯಾದ ಮನೋಜ್ ಕುಮಾರ್

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಗ್ರೌಂಡ್ಸ್ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದರಿಂದ ಬಂಧಿತ ಮೂವರು ಆರೋಪಿಗಳನ್ನು 7 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 2 ವರ್ಷಗಳ ಬಳಿಕದ ದಾಖಲೆ – ಅಕ್ಷಯ ತೃತೀಯದಂದು ಭರ್ಜರಿ ಸೇಲ್

  • ವೀಲ್ ಚೇರ್ ರೋಮಿಯೋಗೆ ಒಲಿದು ಬಂದ ಅದೃಷ್ಟ: ಬೆಂಗಳೂರು ಫಿಲ್ಮಂ ಫೆಸ್ಟ್‌ನಲ್ಲಿ ಕಮಾಲ್ ಮಾಡಲು ರೋಮಿಯೋ ರೆಡಿ..!!!

    ವೀಲ್ ಚೇರ್ ರೋಮಿಯೋಗೆ ಒಲಿದು ಬಂದ ಅದೃಷ್ಟ: ಬೆಂಗಳೂರು ಫಿಲ್ಮಂ ಫೆಸ್ಟ್‌ನಲ್ಲಿ ಕಮಾಲ್ ಮಾಡಲು ರೋಮಿಯೋ ರೆಡಿ..!!!

    ವೀಲ್ ಚೇರ್ ರೋಮಿಯೋ’..ಹೀಗೊಂದು ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸೌಂಡ್ ಮಾಡ್ತಿರೋದು ಎಲ್ಲರ ಗಮನಕ್ಕೂ ಬಂದಿದೆ. ಡಿಫ್ರೆಂಟ್ ಟೈಟಲ್, ಅಷ್ಟೇ ಡಿಫ್ರೆಂಟ್ ಕಾನ್ಸೆಪ್ಟ್‌ನೊಂದಿಗೆ ಬರ್ತಿರೋ ಈ ರೋಮಿಯೋ ಈಗಾಗಲೇ ಹಾಡು ಮತ್ತು ಟ್ರೇಲರ್ ಮೂಲಕ ಒಂದಷ್ಟು ಸಿನಿಪ್ರಿಯರ ಮನದಲ್ಲೂ ಅಚ್ಚೊತ್ತಿದ್ದಾನೆ. ಒಂದಿಷ್ಟು ಕುತೂಹಲವನ್ನು ಕೆರಳಿಸಿದ್ದಾನೆ. ಅದ್ರಲ್ಲೂ ಟ್ರೇಲರ್ ಬಿಡುಗಡೆಯಾದ ಮೇಲಂತೂ ಚಿತ್ರದ ಮೇಲಿನ ಹೋಪ್ಸ್ ಸಿನಿಪ್ರಿಯರಲ್ಲಿ ದುಪ್ಪಟ್ಟಾಗಿದೆ. ಮಾಮೂಲಿ ಕಥೆ ಅಲ್ಲ ಸಂಥಿಂಗ್ ಈಸ್ ದೇರ್ ಅನ್ನೋ ಟಾಕ್ ಜೋರಾಗಿದೆ. ಈ ಪಾಸಿಟಿವ್ ಟಾಕ್ ನೋಡಿದ್ರೇನೆ ಗೊತ್ತಾಗುತ್ತೆ ವೀಲ್ ಚೇರ್ ರೋಮಿಯೋ ಹೊಸ ಬಝ್ ಕ್ರಿಯೇಟ್ ಮಾಡೋದ್ರಲ್ಲಿ ಡೌಟೇ ಇಲ್ಲ ಎಂದು. ಸದ್ಯ ಬಿಡುಗಡೆಯಾಗಿ ಪ್ರೇಕ್ಷಕರ ಮುಂದೆ ಬರಲು ಸಕಲ ರೀತಿಯಲ್ಲೂ ಸಜ್ಜಾಗಿ ನಿಂತಿರೋ ವೀಲ್ ಚೇರ್ ರೋಮಿಯೋಗೆ ಈಗ ಬಂಪರ್ ಆಫರ್ ಸಿಕ್ಕಿದೆ. ಅದುವೇ ಬೆಂಗಳೂರು ಫಿಲ್ಮಂ ಫೆಸ್ಟ್.

    ಎಸ್,, ಈ ಬಾರಿಯ ಬೆಂಗಳೂರು ಫಿಲ್ಮಂ ಫೆಸ್ಟ್‌ಗೆ ಅದ್ಧೂರಿ ವೇದಿಕೆ ಸಜ್ಜಾಗುತ್ತಿದೆ. ಮಾರ್ಚ್‌ನಲ್ಲಿ ನಡೆಯಲಿರೋ ಬೆಂಗಳೂರು ಫಿಲ್ಮಂ ಫೆಸ್ಟ್‌ನಲ್ಲಿ ಬೇರೆ ಬೇರೆ ದೇಶದ ನೂರಾರು ಸಿನಿಮಾಗಳು ಆಯ್ಕೆಯಾಗಿ ತೆರೆ ಕಾಣಲಿವೆ. ಈ ಚಲನಚಿತ್ರೋತ್ಸವಕ್ಕೆ ‘ವೀಲ್ ಚೇರ್ ರೋಮಿಯೋ’ ಸಿನಿಮಾ ಆಯ್ಕೆಯಾಗಿದೆ. ಸಿನಿಮಾದಲ್ಲಿರೋ ಕಂಟೆಂಟ್, ಚಿತ್ರ ಮೂಡಿ ಬಂದ ರೀತಿ ಆಯ್ಕೆದಾರರ ಮನಸ್ಸಿಗೆ ಇಷ್ಟವಾಗಿದೆ. ಆದ್ದರಿಂದ ನಮ್ಮ ಸಿನಿಮಾ ಕೂಡ ಬೆಂಗಳೂರು ಫಿಲ್ಮಂ ಫೆಸ್ಟ್‌ಗೆ ಸೆಲೆಕ್ಟ್ ಆಗಿದೆ ಎಂದು ಚಿತ್ರದ ನಿರ್ದೇಶಕ ನಟರಾಜ್ ಸಂತಸ ಹಂಚಿಕೊಂಡಿದ್ದಾರೆ.

    ‘ವೀಲ್ ಚೇರ್ ರೋಮಿಯೋ’ ಹೆಸರಿಗೆ ತಕ್ಕಂತೆ ಚಿತ್ರದ ನಾಯಕ ವೀಲ್ ಚೇರ್ ಮೇಲೆ ಕುಳಿತು ಪ್ರೀತಿಯಲ್ಲಿ ಬೀಳುತ್ತಾನೆ. ಆತ ಪ್ರೀತಿಯಲ್ಲಿ ಬೀಳೋದು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಅಂಧ ಹುಡುಗಿ ಜೊತೆ. ಈ ವಿಚಾರ ನಾಯಕನ ಮನೆಯಲ್ಲಿ ಗೊತ್ತಾದಾಗ ಏನೆಲ್ಲ ಆಗಬಹುದು ಎನ್ನೋದು ಚಿತ್ರದ ಒನ್ ಲೈನ್ ಕಹಾನಿ. ಹಾಗಂತ ಇದು ಸೀರಿಯಸ್ ಸಬ್ಜೆಕ್ಟ್ ಸಿನಿಮಾ ಅಲ್ಲ ಬದಲಾಗಿ ಪಕ್ಕಾ ಕಾಮಿಡಿ ಎಂಟಟೈನ್ಮೆಂಟ್ ಸಿನಿಮಾ. ಈ ಕಾಮಿಡಿಯೊಂದಿಗೆ ಕೊಂಚ ಸೆಂಟಿಮೆಂಟ್ ಕೂಡ ಆಡ್ ಆಗಿದ್ದು ಎಲ್ಲೂ ಬೋರ್ ಹೊಡಿಸದೇ ನೋಡುಗರನ್ನು ನಗಿಸಲಿದ್ದಾನೆ ರೋಮಿಯೋ. ಇದನ್ನೂ ಓದಿ : ಉಪೇಂದ್ರ ಅಣ್ಣನ ಮಗನ ಬೆನ್ನುಬಿದ್ದ ಸ್ಯಾಂಡಲ್ ವುಡ್

    ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಬಡ್ತಿ ಪಡಿತಿರೋ ನಟರಾಜ್ ಸಿನಿಮಾ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದಾರೆ. ಕಥೆ, ಚಿತ್ರಕಥೆ ಬರೆದು ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ನಟರಾಜ್ ರೋಮಿಯೋ, ಜೂಮ್, ಆರೆಂಜ್ ಸೇರಿದಂತೆ ಹಲವು ಸಿನಿಮಾಗಳಿಗೆ ಡೈಲಾಗ್ ರೈಟರ್ ಆಗಿ, ಸಹಾಯಕ ನಿರ್ದೇಶಕನಾಗಿ ಸಿನಿಮಾ ನಿರ್ದೇಶನದ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದಾರೆ. ವೀಲ್ ಚೇರ್ ರೋಮಿಯೋ ಸಿನಿಮಾ ಕೂಡ ಅಷ್ಟೇ ಪ್ಯಾಶನ್ ನಿಂದ, ಶ್ರದ್ಧೆವಹಿಸಿ ತೆರೆ ಮೇಲೆ ತಂದಿದ್ದಾರೆ ಎನ್ನೋದಕ್ಕೆ ಚಿತ್ರದ ಸ್ಯಾಂಪಲ್ ಗಳೇ ಸಾಕ್ಷಿ. ಇದನ್ನೂ ಓದಿ: ಮುದ್ದಾದ ಹುಡುಗಿ ಅನುಶ್ರೀಗೆ ಸೈತಾನ್ ಅಂದೋರು ಯಾರು?

    ಚಿತ್ರದಲ್ಲಿ ಸೀರಿಯಲ್‌ನಲ್ಲಿ ನಟಿಸಿ ಅನುಭವ ಹೊಂದಿರುವ ಹೊಸ ಪ್ರತಿಭೆ ರಾಮ್ ಚೇತನ್ ನಾಯಕನಾಗಿ ನಟಿಸಿದ್ದು, ಮಯೂರಿ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ಬಿ.ಜೆ.ಭರತ್ ಸಂಗೀತ ನಿರ್ದೇಶನದಲ್ಲಿ ಹಾಡು ಹಾಗೂ ಹಿನ್ನೆಲೆ ಸಂಗೀತ ಮೂಡಿ ಬಂದಿದ್ದು, ಗುರುಕಶ್ಯಪ್ ಸಂಭಾಷಣೆ, ಸಂತೋಷ್ ಪಾಂಡಿ ಕ್ಯಾಮೆರಾ ವರ್ಕ್, ವಿ ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಸಾಹಿತ್ಯ ಕೃಷಿ ಚಿತ್ರಕ್ಕಿದೆ. ಸುಚೇಂದ್ರಪ್ರಸಾದ್, ತಬಲ ನಾಣಿ, ರಂಗಾಯಣ ರಘು ಚಿತ್ರ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಬ್ಯಾನರ್ ನಡಿ ವೆಂಕಟಾಚಲಯ್ಯ ಚಿತ್ರಕ್ಕೆ ಬಂಡವಾಳ ಹೂಡಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಬೆಂಗಳೂರು, ಮಹರಾಷ್ಟ್ರ, ಪುಣೆಯಲ್ಲಿ ಚಿತ್ರೀಕರಣ ನಡೆಸಲಾಗಿದ್ದು ಮೇನಲ್ಲಿ ವೀಲ್ ಚೇರ್ ರೋಮಿಯೋ ಪ್ರೇಕ್ಷಕರ ಮನಸ್ಸಿಗೆ ಕಚಗುಳಿ ಇಡಲು ತೆರೆಗೆ ಬರಲಿದ್ದಾನೆ.

  • ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆದ ತುಂಬು ಗರ್ಭಿಣಿ ಅಮೂಲ್ಯ

    ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆದ ತುಂಬು ಗರ್ಭಿಣಿ ಅಮೂಲ್ಯ

    ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿ ಇಂದು ವಿಜಯನಗರದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಇಂದು ವಿಜಯನಗರದ ಶ್ರೀ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ಸ್ವಾಮೀಜಿ ಅವರಿಂದ ಭಗವದ್ಗೀತೆ ಗ್ರಂಥವನ್ನು ಪಡೆದಿದ್ದು, ಮನಸ್ಸಿಗೆ ಸಂತೋಷ ನೀಡಿತು ಎಂದು ತಿಳಿಸಿದ್ದಾರೆ.

    2017ರಲ್ಲಿ ಜಗದೀಶ್ ಜೊತೆ ಅಮೂಲ್ಯ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾಗಳಿಗಿಂತಲೂ ಹೆಚ್ಚಾಗಿ ಕುಟುಂಬದ ಕಡೆಗೆ ಜಾಸ್ತಿ ಗಮನ ನೀಡುತ್ತಿದ್ದಾರೆ. ತಾವು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರುವ ವಿಚಾರವನ್ನು ಕೆಲವೇ ದಿನಗಳ ಹಿಂದೆ ಅಮೂಲ್ಯ ಮತ್ತು ಜಗದೀಶ್ ದಂಪತಿ ತಿಳಿಸಿದ್ದರು. ಇದನ್ನೂ ಓದಿ:  ಬಿಕಿನಿ ಫೋಟೋಗೆ ಕಾಮೆಂಟ್ ಮಾಡಿದ್ದ ಅರ್ಜುನ್‍ಗೆ ಚೋರ್ ಎಂದ ಮಲೈಕಾ

    ಕೆಲವು ದಿನಗಳ ಹಿಂದೆ ಅಮೂಲ್ಯ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು. ಅದ್ದೂರಿಯಾಗಿ ಸೀಮಂತ ಶಾಸ್ತ್ರ ನಡೆದಿದೆ. ಸೀಮಂತದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡಿದ್ದರು. ಇದನ್ನೂ ಓದಿ:  ಸಖತ್ ಹಾಟ್ ಫೋಟೋಗಳಿಂದ ಮೋಡಿ ಮಾಡಿದ ರಾಯ್ ಲಕ್ಷ್ಮೀ

  • ಅಮ್ಮನಿಗೆ ತಗೋ ಬಾ ಅಂದ್ರೆ ತನಗೇ ಗಿಫ್ಟ್ ತಗೊಂಡು ಬಂದ ವಂಶಿಕಾ..!

    ಅಮ್ಮನಿಗೆ ತಗೋ ಬಾ ಅಂದ್ರೆ ತನಗೇ ಗಿಫ್ಟ್ ತಗೊಂಡು ಬಂದ ವಂಶಿಕಾ..!

    ಬೆಂಗಳೂರು: ಮಾಸ್ಟರ್ ಆನಂದ್ ಮಗಳು ವಂಶಿಕಾ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಸಖತ್ ಫೆಮಸ್ ಆಗಿದ್ದಾಳೆ. ಅಮ್ಮನಿಗಾಗಿ ಗಿಫ್ಟ್ ತೆಗೆದುಕೊಂಡು ಬರಲು ವಂಶಿಕಾಗೆ ಟಾಸ್ಕ್ ನೀಡಲಾಗಿತ್ತು. ಆದರೆ ವಂಶಿಕಾ ಮಾತ್ರ ಅವಳಿಗಾಗಿ ಶಾಪಿಂಗ್ ಮಾಡಿಕೊಂಡು ಬಂದಿರುವ ವೀಡಿಯೋವೊವನ್ನು ಖಾಸಗಿ ವಾಹಿನಿ ಹಂಚಿಕೊಂಡಿದ್ದು, ಇದಕ್ಕೆ ನೆಟ್ಟಿಗರು ಫೀದಾ ಆಗಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಪ್ರತಿವಾರ ಹೊಸ ಹೊಸ ಟಾಸ್ಕ್ಗಳನ್ನು ನೀಡಲಾಗುತ್ತಿದೆ. ಅದರಲ್ಲೂ ಈ ವಾರ ಅಮ್ಮನ ಸಹಾಯ ಇಲ್ಲದೆ ಅಮ್ಮನಿಗೋಸ್ಕರ ಮಕ್ಕಳು ಗಿಫ್ಟ್ ಕೊಡಬೇಕು. ಈ ಹಿನ್ನೆಲೆಯಲ್ಲಿ ವಂಶಿಕಾ ಕೂಡ ತನ್ನ ಅಮ್ಮನಿಗೆ ಗಿಫ್ಟ್ ತರೋಕೆ ಶಾಪಿಂಗ್‌ಗೆ ತೆರಳಿದ್ದಾಳೆ. ಈ ಪ್ರೋಮೋವನ್ನು ಒಂದೇ ದಿನದಲ್ಲಿ ಶಾಪಿಂಗ್ ಲೋಕದ ರಾಣಿಯಾದ ವಂಶಿಕಾ ಎನ್ನುವ ಕ್ಯಾಪ್ಶನ್‌ನೊಂದಿಗೆ ಈ ವೀಡಿಯೋ ಖಾಸಗಿ ವಾಹಿನಿ ಹಂಚಿಕೊAಡಿದೆ. ಸದ್ಯ, ಈ ವಿಡಿಯೋವನ್ನು ವೀಕ್ಷಕರು ಸಾಕಷ್ಟು ಇಷ್ಟಪಟ್ಟಿದ್ದಾರೆ. ವಂಶಿಕಾ ನಡೆದುಕೊಂಡ ರೀತಿಗೆ ಎಲ್ಲರೂ ಬಿದ್ದುಬಿದ್ದು ನಕ್ಕಿದ್ದಾರೆ.

    ವೀಡಿಯೋದಲ್ಲಿ ಏನಿದೆ?: ಅಮ್ಮನಿಗೆ ಗಿಫ್ಟ್ ತೆಗೆದುಕೊಂಡು ಬರಲು ಹೋದ ವಂಶಿಕಾ ತನಗೆ ಗಿಫ್ಟ್ ತೆಗೆದುಕೊಂಡು ಬಂದಿದ್ದಾಳೆ. ಈ ಬಗ್ಗೆ ನಿರೂಪಕಿ ಅನುಪಮಾ ಮಾತನಾಡಿ, ಗಿಫ್ಟ್ ತೆಗೆದುಕೊಂಡು ಬನ್ನಿ ಅಂತ ಕಳಿಸಿದರೆ ವಂಶಿಕಾ ಒಂದು ಟೂರ್ ಮಾಡಿಕೊಂಡು ಬಂದಿದ್ದಾಳೆ. ನಮಗೆ ಇವಳ ಗಿಫ್ಟ್ ಮ್ಯಾಟರ್ ಆಗಲೇ ಇಲ್ಲ. ಅವಳು ಟೂರ್‌ಗೆ ಹೋಗಿರೋದು ಒಂದು ವಿಟಿ ಇದೆ ಎಂದರು. ಇದನ್ನೂ ಓದಿ: ಬೊಮ್ಮಾಯಿನೇ ಹಿಜಬ್ ಹಾಕಿದ್ದಾರೆ: ಸಿಎಂ ಇಬ್ರಾಹಿಂ

    ಆ ಬಳಿಕ ಅವಳ ಶಾಪಿಂಗ್ ವೀಡಿಯೋ ತೋರಿಸಲಾಯಿತು. ವಿಡಿಯೋ ಆರಂಭದಲ್ಲಿ ಮಾತನಾಡಿರುವ ವಂಶಿಕಾ, ಹಾಯ್, ಎವರಿಒನ್. ನಾನು ಇವತ್ತು ಶಾಪಿಂಗ್ ಮಾಡೋಕೆ ಬಂದಿದ್ದೇನೆ. ಅದು ನಂಗಲ್ಲ, ನಮ್ಮ ಅಮ್ಮನಿಗೆ. ಬನ್ನಿ ಏನೇನಿದೆ ನೋಡೋಣ ಎಂದು ಶಾಪಿಂಗ್ ಕಾಂಪ್ಲೆಕ್ಸ್ಗೆ ಎಂಟ್ರಿ ನೀಡುತ್ತಾಳೆ.

    ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ವಂಶಿಕಾ ಸಖತ್ ಸುತ್ತಾಟ ನಡೆಸಿದ್ದಾಳೆ. ಆದರೆ, ಎಲ್ಲಿಯೂ ಅವಳ ಅಮ್ಮನಿಗೆ ಗಿಫ್ಟ್ ಕೊಡುವ ಯಾವ ವಸ್ತುವೂ ಸಿಕ್ಕಿಲ್ಲ. ಈ ಕಾರಣಕ್ಕೆ ವಂಶಿಕಾ ತನಗಾಗಿ ಎಲ್ಲವನ್ನೂ ಕೊಂಡುಕೊಳ್ಳಲು ಪ್ರಾರಂಭಿಸಿದ್ದಾಳೆ. ಕೊನೆಯಲ್ಲಿ ವಂಶಿಕಾ ತನಗಾಗಿ ಖರೀದಿಸಿದ್ದೆ ಹೆಚ್ಚು. ಇದನ್ನೂ ಓದಿ: ಡಿವೋರ್ಸ್ ಹೆಚ್ಚಾಗಲು ಟ್ರಾಫಿಕ್ ಸಮಸ್ಯೆಯೂ ಕಾರಣವಾಗಿದೆ: ಅಮೃತಾ ಫಡ್ನವೀಸ್

    ಈ ವೀಡಿಯೋ ನೋಡಿದ ಅನುಪಮಾ ವಂಶಿಕಾ ಅವರನ್ನು ಪ್ರಶ್ನಿಸಿದ್ದಾರೆ. ಕ್ಯಾಮರಾಮೆನ್‌ಗೆ, ವೀಡಿಯೋ ಎಡಿಟ್ ಮಾಡಿದವರಿಗೆ, ಅಲ್ಲಿದ್ದವರಿಗೆ ಎಲ್ಲರಿಗೂ ಡೌಟ್ ಬಂದಿದೆ. ನೀನು ಅಮ್ಮನಿಗೆ ಗಿಫ್ಟ್ ತರೋಕೆ ಹೋಗಿದ್ಯಾ ಅಥವಾ ನಿಂಗೆ ಗಿಫ್ಟ್ ತರೋಕೆ ಹೋಗಿದ್ಯಾ ಎಂದು ಪ್ರಶ್ನಿಸಿದ್ದಾರೆ. ನನಗೆ ಗಿಫ್ಟ್ ತರೋಕೆ ಹೋಗಿದ್ದೆ ಎಂದಳು ವಂಶಿಕಾ. ಇದನ್ನು ಕೇಳಿ ಸೃಜನ್ ಕೂಡ ನಕ್ಕರು. ಅಲ್ಲದೆ, ಅವರು ಪಂಚಿಂಗ್ ಡೈಲಾಗ್ ಕೂಡ ಹೊಡೆದರು.

  • ಸಂಕ್ರಾಂತಿಗೆ ಅಮೂಲ್ಯ ಮನೆಗೆ ಗಂಗೆ, ದ್ರೌಪದಿ ಆಗಮನ

    ಸಂಕ್ರಾಂತಿಗೆ ಅಮೂಲ್ಯ ಮನೆಗೆ ಗಂಗೆ, ದ್ರೌಪದಿ ಆಗಮನ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಅವರ ಮನೆಗೆ ಗೋವುಗಳನ್ನು ತಂದು ಗೋವುಗಳಿಗೆ ಪೂಜೆ ಮಾಡಿ ಅದ್ಧೂರಿಯಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ.

    ಅಮೂಲ್ಯ ಹಾಗೂ ಪತಿ ಜಗದೀಶ್ ಸೇರಿ ಸಂಕ್ರಾತಿಯನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಅಮೂಲ್ಯ ಅವರು ಗೋವಿಗೆ ಪೂಜೆ ಮಾಡುತ್ತಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯ ಕೋರಿ ನಮ್ಮ ಮನೆಗೆ ಸಂಕ್ರಾಂತಿ ಹಬ್ಬದ ದಿನ ಗಂಗೆ ಮತ್ತು ದ್ರೌಪದಿ ಎಂಬ ಹೆಸರಿನ ಹೊಸ ಅತಿಥಿಗಳ ಆಗಮನವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ನಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ತುಂಬು ಗರ್ಭಿಣಿಯಾಗಿರುವ ನಟಿ ಅಮೂಲ್ಯ ಫೋಟೋಶೂಟ್ ಮಾಡಿಸಿರುವ ಫೋಟೋ ಭಾರೀ ವೈರಲ್ ಆಗಿತ್ತು. ಈ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್‍ನಲ್ಲಿ ನಟಿ ಅಮೂಲ್ಯ

    ಅಮೂಲ್ಯ ಸ್ಯಾಂಡಲ್‍ವುಡ್‍ಗೆ ಬಾಲ ನಟಿಯಾಗಿ ಎಂಟ್ರಿಕೊಟ್ಟರು. ನಂತರ ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಹೀರೋಯಿನ್ ಆಗಿ ಚಿರಪರಿಚಿತರಾದರು. ಉತ್ತಮವಾದ ನಟನೆಯ ಮೂಲಕವಾಗಿ ಅಭಿಮಾನಿಗಳ ಮನದಲ್ಲಿ ಜಾಗ ಗಿಟ್ಟಿಸಿಕೊಂಡರು. 2017ರಲ್ಲಿ ಜಗದೀಶ್ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದಂಪತಿ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: ರಿಯಲ್ ಸ್ಟಾರ್  ಉಪ್ಪಿ ಮನೆಯಲ್ಲಿ ಸಂಕ್ರಾಂತಿ ಸಡಗರ