Tag: Sandhana

  • ಸುದೀಪ್-ಎನ್.ಕುಮಾರ್ ಸಂಧಾನ: ಇವತ್ತು ಡೌಟು, ನಾಳೆಗೆ ಡೇಟು

    ಸುದೀಪ್-ಎನ್.ಕುಮಾರ್ ಸಂಧಾನ: ಇವತ್ತು ಡೌಟು, ನಾಳೆಗೆ ಡೇಟು

    ನಿರ್ಮಾಪಕ ಎನ್.ಕುಮಾರ್ ಮತ್ತು ಕಿಚ್ಚ ಸುದೀಪ್ (Sudeep) ನಡುವಿನ ಸಂಧಾನ (Sandhana) ಸಭೆ ಇಂದು ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ನಿನ್ನೆ ಬರೋಬ್ಬರಿ ಏಳು ಗಂಟೆಗಳ ಕಾಲ ನಟ ರವಿಚಂದ್ರನ್ (Ravichandran) ಈ ಇಬ್ಬರನ್ನೂ ಕೂರಿಸಿಕೊಂಡು ಮಾತನಾಡಿದ್ದಾರೆ. ಮಧ್ಯಾಹ್ನ ಶುರುವಾದ ಸಭೆ ರಾತ್ರಿ 10.30ಕ್ಕೆ ಮುಗಿದಿದೆ ಎಂದು ಹೇಳಲಾಗುತ್ತಿದೆ. ಆದರೂ, ಒಮ್ಮತಕ್ಕೆ ಬಾರದೇ ಇರುವ ಕಾರಣಕ್ಕಾಗಿ ಇಂದು ಮತ್ತೆ ಸಭೆ ಇದೆ ಎನ್ನುವ ಮಾಹಿತಿ ಇತ್ತು.

    ಇಂದು ಮತ್ತೆ ಸಭೆ ಸೇರುವುದು ಅನುಮಾನ ಎನ್ನಲಾಗುತ್ತಿದೆ. ಸುದೀಪ್ ಮತ್ತು ಕುಮಾರ್ ಆಡಿದ ಮಾತುಗಳನ್ನು ಕೇಳಿಸಿಕೊಂಡಿರುವ ರವಿಚಂದ್ರನ್, ಕೇವಲ ಮಾತುಗಳನ್ನಷ್ಟೇ ಕೇಳದ ಅದಕ್ಕಿರುವ ಪೂರಕ ಸಾಕ್ಷಿಯನ್ನೂ ಪರಿಶೀಲಿಸಿದ್ದಾರಂತೆ. ಇನ್ನೂ ಕೆಲವು ವಿಷಯಗಳಿಗೆ ಅಸ್ಪಷ್ಟ ಚಿತ್ರಣ ಸಿಕ್ಕಿರುವ ಕಾರಣದಿಂದಾಗಿ ಮತ್ತೆ ಸಭೆ ಮಾಡುವ ಮಾತುಗಳಾಗಿತ್ತು. ಅದರಂತೆ ನಾಳೆ ಸಂಧಾನದ ಸಭೆ ನಡೆಯಲಿದೆ.

    ಸುದೀಪ್ ಮೇಲೆ ನಿರ್ಮಾಪಕ ಎನ್.ಕುಮಾರ್ (N. Kumar) ಮಾಡಿರುವ ಆರೋಪದ ಕುರಿತಂತೆ ನಿನ್ನೆಯಿಂದ ರವಿಚಂದ್ರನ್ ನಿವಾಸದಲ್ಲಿ ಸಂಧಾನ ಸಭೆ ನಡೆಯುತ್ತಿದೆ. ನಿನ್ನೆ ಈ ಸಭೆಗೆ ಶಿವರಾಜ್ ಕುಮಾರ್ ಆಗಮಿಸಲಿದ್ದಾರೆ ಎಂದು ಹೇಳಲಾಗಿತ್ತು. ತಡರಾತ್ರಿವರೆಗೂ ನಡೆದ ಸಭೆಗೆ ಶಿವಣ್ಣ ಹಾಜರಾಗಲಿಲ್ಲ. ಆದರೆ, ಈ ಕುರಿತಂತೆ ಶಿವರಾಜ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಕಾಶ್ಮೀರದಲ್ಲಿ ಸ್ಟೈಲ್‌ ಆಗಿ ಕಾಣಿಸಿಕೊಂಡ ಸಾನ್ಯ ಅಯ್ಯರ್

    ಮಾಧ್ಯಮಗಳ ಜೊತೆ ಮಾತನಾಡಿದ ಶಿವರಾಜ್ ಕುಮಾರ್, ‘ರವಿದು ನಂದು ಬೇರೆ ಬೇರೆ ಮಾತಿಲ್ಲ. ಅವರು ಏನು ಹೇಳಿದ್ರೆ ಅದೇ ನನ್ನ ಮಾತು. ಎಲ್ಲಾ ಒಳ್ಳೆಯ ರೀತಿಯಲ್ಲಿ ಆಗ್ಬೇಕು ಅನ್ನೊದು ನನ್ನ ಆಸೆ. ಆದಷ್ಟು ಬೇಗ ಕುಮಾರ್-ಸುದೀಪ್ ನಡುವಿನ ಸಮಸ್ಯೆ ಬಗೆಹರಿಯಬೇಕು. ಸಿನಿಮಾ ಅನ್ನುವುದು ಒಂದು ಕುಟುಂಬ. ಸಮಸ್ಯೆ ಆಗೋದು ಸಹಜ. ಆದಷ್ಟು ಬೇಗ ಸರಿ ಹೋಗಲಿ’ ಎಂದಿದ್ದಾರೆ.

     

    ಆದರೆ, ನಿನ್ನೆಯ ಸಂಧಾನ ಯಶಸ್ವಿ ಆಗಿಲ್ಲ ಎಂದು ಹೇಳಲಾಗುತ್ತಿದೆ. ಕಿಚ್ಚ ಸುದೀಪ್ ಮತ್ತು ಕುಮಾರ್ ಪ್ರತ್ಯೇಕವಾಗಿ ತಮ್ಮ ನೋವುಗಳನ್ನು ಹೇಳಿಕೊಂಡಿದ್ದು, ಬಹುಶಃ ನಾಳೆ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಅಂದಾಜಿಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂಧಾನ ಯಶಸ್ವಿ ಎಂದ ಈಶ್ವರ ಖಂಡ್ರೆ

    ಸಂಧಾನ ಯಶಸ್ವಿ ಎಂದ ಈಶ್ವರ ಖಂಡ್ರೆ

    ಬೆಳಗಾವಿ: ಪಿಎಲ್‍ಡಿ ಬ್ಯಾಂಕ್ ಚುನಾವಣೆಯ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಸ್ಥಳೀಯ ನಾಯಕರ ನಡುವಿನ ಗೊಂದಲಕ್ಕೆ ವರಷ್ಠರ ಸಲಹೆ ಮೇರೆಗೆ ತೆರೆ ಎಳೆಯಲಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಈಶ್ವರ ಖಂಡ್ರೆ ಹೇಳಿದರು.

    ಪ್ರವಾಸಿ ಮಂದಿರದಲ್ಲಿ ಪಿಎಲ್‍ಡಿ ಬ್ಯಾಂಕಿನ ಚುನಾವಣಾ ಫಲಿತಾಂಶಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕರಾದ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಜತೆಗೆ ಚರ್ಚಿಸಿ ಒಮ್ಮತ ನಿರ್ಣಯ ಕೈಗೊಳ್ಳಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಮಹಾದೇವ ಪಾಟೀಲ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಾಪುಸಾಹೇಬ ನಾಮಪತ್ರ ಸಲ್ಲಿಸಿದ್ದು, ಇವರೇ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಈ ಇಬ್ಬರ ಆಯ್ಕೆಗೆ ಸ್ಥಳೀಯ ನಾಯಕರ ಸಹಮತ ಇದೆ. ವರಿಷ್ಠರ ಸೂಚನೆ ಮೇರೆಗೆ ಈ ಆಯ್ಕೆ ನಡೆದಿದೆ. ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಜತೆಗೆ ಸೌಹಾರ್ದಯುತವಾಗಿ ಚರ್ಚಿಸಿ ಸಮಸ್ಯೆ ಬಗೆಹರಿಸಿದ್ದೇನೆ. ಬೆಳಗಾವಿಯ ಪಿಎಲ್‍ಡಿ ಬ್ಯಾಂಕ್ ಚುನಾವಣೆ ಶಾಂತಿಯುತವಾಗಿ ಬಗೆಹರಿದಿದೆ. ಇದರಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಸಮ್ಮಿಶ್ರ ಸರ್ಕಾರ ಸುಭದ್ರವಾಗಿ ಇರಲಿದೆ ಎಂದರು.

    ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಬೆಳಗಾವಿಯ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ಆದ ಬೆಳವಣಿಗೆಗೆ ಸಂವಹನ ಕೊರತೆಯೇ ಮುಖ್ಯ ಕಾರಣ. ನಮ್ಮ ಹಾಗೂ ಗ್ರಾಮೀಣ ಕ್ಷೇತ್ರದ ಶಾಸಕರ ನಡುವೆ ಸಂವಹನ ಕೊರತೆ ಉಂಟಾಗಿತ್ತು. ಇದೀಗ ಕೆಪಿಸಿಸಿ ಕಾರ್ಯದರ್ಶಿ ಅವರು ನಮ್ಮ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿದ್ದಾರೆ. ನಮ್ಮ ವಾದ ಕೂಡ ಅವಿರೋಧ ಆಯ್ಕೆ ನಡೆಯಲಿ, ಚುನಾವಣೆ ಬೇಡ ಎಂದಾಗಿತ್ತು. ಹೀಗಾಗಿ ಒಮ್ಮತದ ಅಭಿಪ್ರಾಯದ ಮೇರೆಗೆ ಅವಿರೋಧ ಆಯ್ಕೆ ನಡೆದಿದೆ. ನಮ್ಮ ಭಾವನೆ, ವರ್ಚಸ್ಸಿಗೆ ಧಕ್ಕೆ ಆಗಿಲ್ಲ ಎಂದು ಹೇಳಿದರು.

    ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ನಾನು ವೈಯಕ್ತಿಕವಾಗಿ ಯಾವುದೇ ಹೇಳಿಕೆ ನೀಡುವುದಿಲ್ಲ. ಒಮ್ಮತದ ಆಯ್ಕೆಗೆ ನಮ್ಮ ಸಹಮತ ಇದೆ. ನಾನು ತಪ್ಪು ಮಾಡಿದ್ದರೆ ಭಗವಂತ ನೋಡಿಕೊಳ್ಳುತ್ತಾನೆ ಎಂದು ಪರೋಕ್ಷವಾಗಿ ಜಾರಕಿಹೊಳಿ ಕುಟುಂಬಕ್ಕೆ ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv