Tag: Sandesh Shetty Azri

  • ‘ಗುಂಮ್ಟಿ’ ಸಿನಿಮಾಗೆ ಹೀರೋನೇ ನಿರ್ದೇಶಕ

    ‘ಗುಂಮ್ಟಿ’ ಸಿನಿಮಾಗೆ ಹೀರೋನೇ ನಿರ್ದೇಶಕ

    ಗಾಗಲೇ ಕನ್ನಡ ಚಿತ್ರರಂಗದಲ್ಲಿ ‘ಕತ್ತಲೆ ಕೋಣೆ’ ಮತ್ತು ‘ಇನಾಮ್ದಾರ್’ ಸಿನಿಮಾಗಳನ್ನು ನಿರ್ದೇಶಿಸಿ ಕಂಟೆಂಟ್ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಂದೇಶದ ಶೆಟ್ಟಿ ಆಜ್ರಿ, ಈ ಬಾರಿ ಮತ್ತೊಂದು ಅಂಥದ್ದೇ ಕಂಟೆಂಟ್ ಆಧಾರಿತ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದ್ದಾರೆ.

    ಹೌದು, ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ತಮ್ಮ ಮೂರನೇ ಸಿನಿಮಾಕ್ಕೆ ‘ಗುಂಮ್ಟಿ’ (Gumti) ಎಂದು ಹೆಸರಿಟ್ಟಿದ್ದು, ಈ ಸಿನಿಮಾದಲ್ಲಿ ಸಂದೇಶ್ ಶೆಟ್ಟಿ (Sandesh Shetty Azri) ತೆರೆಮೇಲೆ ನಾಯಕನಾಗಿ, ತೆರೆಹಿಂದೆ ನಿರ್ದೇಶಕನಾಗಿ ‘ಡಬಲ್ ರೋಲ್’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ!

    ಇನ್ನು ‘ಗುಂಮ್ಟಿ’ ಸಿನಿಮಾದಲ್ಲಿ ಕರ್ನಾಟಕದ ಕರಾವಳಿ ತೀರದ ಕುಡುಬಿ ಜನಾಂಗದ ಕಥೆಯೊಂದು ತೆರೆಮೇಲೆ ಅನಾವರಣವಾಗಲಿದೆ. ಕುಡುಬಿ ಜನಾಂಗದ ಸಂಪ್ರದಾಯ, ಆಚಾರ-ವಿಚಾರ, ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷವನ್ನು ‘ಗುಂಮ್ಟಿ’ ಸಿನಿಮಾದಲ್ಲಿ ಮನಮುಟ್ಟುವಂತೆ ಹೇಳಲು ಹೊರಟಿದೆ ಚಿತ್ರತಂಡ.

    ಈಗಾಗಲೇ ಸದ್ದಿಲ್ಲದೆ ಉಡುಪಿ, ಕುಂದಾಪುರ, ಶಿರಸಿ, ಬೆಳಗಾವಿ, ಮಹಾರಾಷ್ಟ್ರದ ಸೋಲಾಪುರ ಹೀಗೆ ಕರಾವಳಿ-ಮಲೆನಾಡು ಮತ್ತು ಪಶ್ಚಿಮ ಘಟ್ಟದ ಸುತ್ತಮುತ್ತ ಸುಮಾರು 25ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರತಂಡ ‘ಗುಂಮ್ಟಿ’ ಚಿತ್ರೀಕರಣವನ್ನು ಯಶಸ್ವಿಯಾಗಿ  ಮುಗಿಸಿದೆ. ಇದೀಗ ‘ಗುಂಮ್ಟಿ’ ಸಿನಿಮಾದ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ ಇನ್ನು ಎರಡು-ಮೂರು ತಿಂಗಳಿನಲ್ಲಿ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

    ಇನ್ನು ‘ತಸ್ಮೈ ಪ್ರೊಡಕ್ಷನ್ಸ್’ ಮತ್ತು ‘ಜ್ಯೋತಿ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ ‘ಗುಂಮ್ಟಿ’ ಸಿನಿಮಾವನ್ನು ವಿಕಾಸ್ ಎಸ್. ಶೆಟ್ಟಿ ನಿರ್ಮಿಸುತ್ತಿದ್ದಾರೆ. ಸಿನಿಮಾದಲ್ಲಿ ನಾಯಕ ಸಂದೇಶ್ ಶೆಟ್ಟಿ ಆಜ್ರಿ ಅವರಿಗೆ ವೈಷ್ಣವಿ ನಾಡಿಗ್ (Vaishnavi Nadig) ನಾಯಕಿಯಾಗಿ ಜೋಡಿಯಾಗಿದ್ದು, ಉಳಿದಂತೆ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಗುಂಮ್ಟಿ’ ಸಿನಿಮಾ ಅನೀಶ್ ಡಿಸೋಜಾ ಕ್ಯಾಮರದ ಕೈಚಳಕದಲ್ಲಿ ಮೂಡಿ ಬಂದಿದ್ದು, ಸಿನಿಮಾಕ್ಕೆ ಮೋಹನ್  ಸಂಗೀತ ಸಂಯೋಜಿಸಿದ್ದಾರೆ.

    ‘ಗುಂಮ್ಟಿ’ ಸಿನಿಮಾಕ್ಕೆ ಶಿವರಾಜ್ ಮೇಹು ಸಂಕಲನವಿದೆ. ‘ಯುಗಾದಿ’ ಹಬ್ಬದ ಸಂದರ್ಭದಲ್ಲಿ ‘ಗುಂಮ್ಟಿ’ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಪೋಸ್ಟರ್ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ‘ಗುಂಮ್ಟಿ’ ಫಸ್ಟ್ ಲುಕ್ ಮತ್ತು ಟೈಟಲ್ ಪೋಸ್ಟರ್ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

  • ಆ್ಯಕ್ಸಿಡೆಂಟ್ ಲೆಕ್ಕಿಸದೇ ‘ ಇನಾಮ್ದಾರ್’ ಗಾಗಿ ಚೇಸಿಂಗ್ ಮಾಡಿದ್ರು ಶರತ್ ಲೋಹಿತಾಶ್ವ

    ಆ್ಯಕ್ಸಿಡೆಂಟ್ ಲೆಕ್ಕಿಸದೇ ‘ ಇನಾಮ್ದಾರ್’ ಗಾಗಿ ಚೇಸಿಂಗ್ ಮಾಡಿದ್ರು ಶರತ್ ಲೋಹಿತಾಶ್ವ

    ನಾಮ್ದಾರ್… ಇನಾಮ್ದಾರ್… ಇನಾಮ್ದಾರ್ (Inamdar)…ಎಲ್ಲಿ ನೋಡಿದರೂ ಈ‌ ಚಿತ್ರದ್ದೇ ಸದ್ದು ಸುದ್ದಿ. ಕರಾವಳಿ ಭಾಗದ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ (Sandesh Shetty Azri) ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ, ನೆಲಮೂಲದ ಕಥೆ ಹಾಗೂ ಪಾತ್ರವರ್ಗದಿಂದ ಗಮನ ಸೆಳೆಯುತ್ತಲೇ ಇದೆ.  ಹಿರಿಯ ನಟ ಅವಿನಾಶ್, ಥ್ರಿಲ್ಲರ್ ಮಂಜು, ಎಂ.ಕೆ ಮಠ, ಪ್ರಮೋದ್ ಶೆಟ್ಟಿ ಸೇರಿದಂತೆ ಬಹುತಾರಾಗಣವಿರುವ ಈ ಮೂವೀ ಯಲ್ಲಿ ಹಿರಿಯ ನಟ ಶರತ್ ಲೋಹಿತಾಶ್ವ (Sarath Lohitashwa) ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಕಥಾನಾಯಕನಿಗೆ ಸರಿಸಮನಾಗಿ ನಿಲ್ಲುವ ಕ್ಯಾರೆಕ್ಟರ್ ಇದಾಗಿದ್ದು, ಸ್ಪೆಷಲ್ ಪೊಲೀಸ್ ಆಫೀಸರ್ ಪಾತ್ರ ಪೋಷಣೆ ಮಾಡಿದ್ದಾರೆ.

    ಕಳೆದ ಎರಡೂವರೆ ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹಿರಿಯ ನಟ ಶರತ್ ಲೋಹಿತಾಶ್ವ ಅವರು ನಾನಾ ರೀತಿಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ, ಮಲೆಯಾಳಂ ಸೇರಿ ಐದು ಭಾಷೆಯಲ್ಲೂ ಗುರ್ತಿಸಿಕೊಂಡಿರುವ ಇವರು ಬಹು ಬೇಡಿಕೆಯ ಪೋಷಕ ನಟನ ಸ್ಥಾನಕ್ಕೇರಿದ್ದಾರೆ. ದಕ್ಷಿಣ ಭಾರತದ ಬಹುತೇಕ ಸೂಪರ್ ಸ್ಟಾರ್ ಗಳ ಜೊತೆ ಧಗಧಗಿಸಿದ್ದು ಈಗ ಹೊಸಬರಿಗೂ ಸಾಥ್ ಕೊಡ್ತಿದ್ದಾರೆ. ಆ್ಯಕ್ಸಿಡೆಂಟ್ ಆಗಿ ಕಾಲಿಗೆ ಆಪರೇಷನ್ ಆಗಿದ್ದರೂ ಕೂಡ ಅದನ್ನು ಲೆಕ್ಕಿಸದೇ ಇನಾಮ್ದಾರ್ ಸಿನಿಮಾದ ಚೇಸಿಂಗ್ ಸೀಕ್ವೆನ್ಸ್ ಗಳಲ್ಲಿ ಪಾಲ್ಗೊಂಡಿದ್ದಾರೆ. ಈ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ನಿರ್ದೇಶಕ ಸಂದೇಶ್ ಶೆಟ್ಟಿ, ಇವತ್ತಿನ ಯಂಗ್ ಸ್ಟಾರ್ಸ್ ಬೆಚ್ಚಿಬೀಳೋ ರೇ‌ಂಜ್ ಗೆ ಶರತ್ ಸರ್ ಸಾಹಸ ಮಾಡಿದ್ದಾರೆಂದಿದ್ದಾರೆ.

    ನಮ್ಮ ಸಿನಿಮಾದ 70 ಪರ್ಸೆಂಟ್ ಶೂಟಿಂಗ್ ಆಗಿರುವುದು ಕಾಡಲ್ಲೇ‌. ಕರಡಿ ಗುಡ್ಡ, ನಾಗನಕಲ್ಲು ಬರೆ, ಬೆಳಕಲ್ ಆಸುಪಾಸಿನಂತಹ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವುದು ಸವಾಲಿನ ಕೆಲಸವೇ. ಅಂತಹ ಕಡೆಯಲೆಲ್ಲಾ ತಂಡದ ಜೊತೆ ಬೆನ್ನೆಲುಬಾಗಿ ನಿಂತು ಶರತ್ ಲೋಹಿತಾಶ್ವ ಕೆಲಸ ಮಾಡಿದ್ರಂತೆ. ಅವರ ಈ ಮನೋಭಾವವನ್ನು ಶ್ಲಾಘಿಸುವ ನಿರ್ದೇಶಕರು, ಹಿರಿಯ ಹಾಗೂ ಕಿರಿಯ ಕಲಾವಿದರ ಸಹಕಾರದಿಂದ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ ಎನ್ನುತ್ತಾರೆ.

    ಅಂದ್ಹಾಗೇ, ನಮ್ಮ ಮಣ್ಣಿನ ಸೊಗಡು, ನಮ್ಮ ನೆಲದ ಶ್ರೀಮಂತಿಕೆಯನ್ನು ಸಾರುವಂತಹ ಸಿನಿಮಾಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಹಲವು ನಿರ್ದೇಶಕರು ಶ್ರಮವಹಿಸ್ತಿದ್ದಾರೆ. ಆ ದಿಸೆಯಲ್ಲಿ ಸಾಗಿದ ಸಂದೇಶ್ ಶೆಟ್ಟಿ ಆಜ್ರಿ, ಪಶ್ಚಿಮ ಘಟ್ಟದಲ್ಲಿ ಪರಶಿವನನ್ನು ಆರಾಧಿಸುವ ಬುಡಕಟ್ಟು ಜನಾಂಗ ಹಾಗೂ ಬಯಲು ಸೀಮೆಯಲ್ಲಿ ಶಿವಾಜಿ ಮಹರಾಜ್ ನ ಆರಾಧಿಸುವ  ಮನೆತನದ ಕಥೆನಾ ಮುನ್ನಲೆಗೆ ತಂದಿದ್ದಾರೆ. ಎರಡು ಜನಾಂಗದ ನಡುವಿನ ವರ್ಣ ಸಂಘರ್ಷದ ಕಥನವನ್ನು ಇನಾಮ್ದಾರ್ ಒಡಲಲ್ಲಿಟ್ಟು ಜಗತ್ತಿನ ಮುಂದೆ ಹರವಿಡಲು ರೆಡಿಯಾಗಿದ್ದಾರೆ. ನಿರ್ದೇಶನದ ಜೊತೆಗೆ ಕರಡಿ ಕಾಮ ಹಾಗೂ ಕಮರ ಕಾಳ ಹೆಸರಿನ ಪಾತ್ರಗಳನ್ನ ನಿಭಾಯಿಸಿದ್ದಾರೆ.

    ಬೆಳಗಾವಿ, ನಿಪ್ಪಾಣಿ, ಧಾರವಾಡ, ಹುಬ್ಬಳಿ, ಚಿಕ್ಕಮಂಗಳೂರು, ಕರಾವಳಿ ಭಾಗ ಸುತ್ತಮುತ್ತ ಸುಮಾರು 65 ದಿನ ಶೂಟಿಂಗ್ ಮಾಡಿದ್ದು, ಮುರುಳಿ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಶಿವರಾಜ್ ಮೇಹು ಸಂಕಲನ, ರಾಕಿ ಸೋನು ಸಂಗೀತ, ನಕುಲ್ ಅಭಯಂಕರ್ ಹಿನ್ನಲೆ ಸಂಗೀತ `ಇನಾಮ್ದಾರ್’ಗಿದೆ. ಚಿತ್ರಕಲಾ ರಾಜೇಶ್,ಕಾಂತಾರ ಖ್ಯಾತಿಯ ನಾಗರಾಜ್ ಬೈಂದೂರು, ಪ್ರಶಾಂತ್ ಸಿದ್ದಿ, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಸಂಜು ಬಸಯ್ಯ,  ಹಾಲಂಬಿಯಂತಹ ಪ್ರತಿಭೆಗಳು ಸಿನಿಮಾದಲ್ಲಿದ್ದಾರೆ. ನಾಯಕ ರಂಜನ್ ಛತ್ರಪತಿ ಗೆ ಚಿರಶ್ರೀ ಅಂಚನ್ ಹಾಗೂ ಎಸ್ತರ್ ನರೋನಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಶ್ರೀ ಕುಂತಿಯಮ್ಮ ಪ್ರೊಡಕ್ಷನ್ ನಿರ್ಮಾಣದಲ್ಲಿ  ಅದ್ದೂರಿಯಾಗಿ ಸಿನಿಮಾ ಮೂಡಿಬಂದಿದ್ದು, ವಿಜಯ್ ಫಿಲಂಸ್ ವಿತರಣೆ ಹೊಣೆ ಹೊತ್ತಿದ್ದಾರೆ. ಸುಮಾರು 150 ಥಿಯೇಟರ್ ನಲ್ಲಿ ರಾಜ್ಯಾದ್ಯಂತ ರಿಲೀಸ್ ಮಾಡುವ ಪ್ಲ್ಯಾನ್ ಹಾಕ್ಕೊಂಡಿದ್ದು, ಇದೇ ಅಕ್ಟೋಬರ್ 27ರಂದು ಬೆಳ್ಳಿತೆರೆ ಅಂಗಳಕ್ಕೆ ತರುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿರಿಯ ನಟ ಅವಿನಾಶ್ ಗೆ ಸಿಗ್ತು ಪಶ್ಚಿಮ ಘಟ್ಟದ ಸ್ಥಳೀಯ ಎಂಎಲ್ಎ ಪಟ್ಟ

    ಹಿರಿಯ ನಟ ಅವಿನಾಶ್ ಗೆ ಸಿಗ್ತು ಪಶ್ಚಿಮ ಘಟ್ಟದ ಸ್ಥಳೀಯ ಎಂಎಲ್ಎ ಪಟ್ಟ

    ಹೆಡ್ಡಿಂಗ್ ನೋಡಿದ್ಮೇಲೆ ಹಿರಿಯ ನಟ ಅವಿನಾಶ್ (Avinash) ಯಾವಾಗ ಖಾದಿ ತೊಟ್ಟು ಕಣಕ್ಕಿಳಿದಿದ್ದರು? ಯಾರ ವಿರುದ್ದ ಸ್ಪರ್ಧೆ ಮಾಡಿದ್ದರು? ನಮಗೆ ಗೊತ್ತಿಲ್ಲದೇ ಅದ್ಯಾವಾಗ ಪಶ್ವಿಮ ಘಟ್ಟದ ಸ್ಥಳೀಯ ಎಂಎಲ್ಎ (MLA) ಸ್ಥಾನಕ್ಕೇರಿದರು ? ಹೀಗೊಂದಿಷ್ಟು ಕುತೂಹಲದ ಪ್ರಶ್ನೆಗಳು ಒಮ್ಮೆಲೆ ದಾಂಗುಡಿ ಇಡುವುದು ಸಹಜ. ಆ ಪ್ರಶ್ನೆಗೆ ಉತ್ತರಿಸಬೇಕು ಅಂದರೆ ಅಸಲಿಯತ್ತು ಹರವಿಡಬೇಕು. ರಿಯಲ್ ಅಲ್ಲ ರೀಲ್ ಎನ್ನುವ ಸತ್ಯ ಒಪ್ಪಿಕೊಳ್ಳಬೇಕು

    ರೀಲ್ ಲೈಫ್ ನಲ್ಲಿ ಅಂದರೆ ಸಿನಿಮಾಗಳಲ್ಲಿ ಸಾಕಷ್ಟು ಭಾರಿ ಎಂಎಲ್ಎ ಆಗಿದ್ದಾರೆ. ಸದ್ಯ ಸಂದೇಶ್ ಶೆಟ್ಟಿ ಆಜ್ರಿ (Sandesh Shetty Azri) ನಿರ್ದೇಶಿಸಿರುವ ಇನಾಮ್ದಾರ್ (Inamdar) ಚಿತ್ರದಲ್ಲಿ   ಪಶ್ಚಿಮ ಘಟ್ಟದ ಸ್ಥಳೀಯ ಎಂಎಲ್ಎ ಸುಕುಮಾರ್ ಪಾತ್ರ ನಿರ್ವಹಿಸಿದ್ದಾರೆ.ಇದೊಂದು ಕ್ಲೀನ್ ಹ್ಯಾಂಡ್ ಎಂಎಲ್ಎ ಪಾತ್ರವಾಗಿದ್ದು ಖುದ್ದು ಅವಿನಾಶ್ ಅವರೇ ತಮ್ಮ ರೋಲ್ ಬಗ್ಗೆ ಎಕ್ಸೈಟ್ ಆಗಿದ್ದಾರೆ.  ಅಭಯಾರಣ್ಯದಲ್ಲಿ  ವಾಮಮಾರ್ಗದಲ್ಲಿ ನಡೆಯುವ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತಹ ಕ್ಯಾರೆಕ್ಟರ್ ಅವ್ರದ್ದು ಎಂದು ಹೇಳುವ ನಿರ್ದೇಶಕರು, ಥ್ರಿಲ್ಲರ್ ಮಂಜು ಸರ್ ಹಾಗೂ ಅವಿನಾಶ್ ಸರ್ ಮುಖಾಮುಖಿಯಾಗುವ ಸೀಕ್ವೆನ್ಸ್ ಹಾಗೂ ಡೈಲಾಗ್ಸ್ ಪ್ರೇಕ್ಷಕರಿಗೆ ವಾವ್ ಫೀಲ್ ಕೊಡುತ್ತೆ ಎಂದಿದ್ದಾರೆ.

    ಡಾ. ರಾಜ್ ಕುಮಾರ್, ರಜನಿಕಾಂತ್, ವಿಷ್ಣುವರ್ಧನ್ ರಂತಹ ಲೆಜೆಂಡರಿ ಆ್ಯಕ್ಟರ್ ಗಳಿಂದ ಹಿಡಿದು ಈಗೀನ ಬಡ್ಡಿಂಗ್ ಆರ್ಟಿಸ್ಟ್ ಗಳ ತನಕ ಎಲ್ಲರ ಸಿನಿಮಾಗಳಲ್ಲೂ ನಟ ಅವಿನಾಶ್ ಅವರು ಮೇಜರ್ ರೋಲ್ ಪ್ಲೇ ಮಾಡುತ್ತಾ ಬರುತ್ತಿದ್ದಾರೆ. ನಾನಾ ತರಹದ ಪಾತ್ರಗಳಿಗೆ ಜೀವತುಂಬಿ ವರ್ಸಟೈಲ್ ಆ್ಯಕ್ಟರ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.  3 ದಶಕಗಳಿಂದ ಮಾಯಾಲೋಕದಲ್ಲಿ ಸಕ್ರಿಯರಾಗಿರೋ ಮೈಸೂರಿನ ಹೀರೋ, ಇವತ್ತಿಗೂ ಡಿಮ್ಯಾಂಡ್ ಕಳೆದುಕೊಳ್ಳದೇ ಪೋಷಕ ನಟನಾಗಿ ಬ್ಯುಸಿಯಾಗಿದ್ದಾರೆ. ಕನ್ನಡ ,ತೆಲುಗು, ತಮಿಳು, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಸುಮಾರು 400 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. ಈಗ ಇನಾಮ್ದಾರ್ ಹೆಸರಿನ ಸಿನಿಮಾದಲ್ಲಿ ಎಂಎಲ್ಎ ಸುಕುಮಾರ್ ಆಗಿ ನಿಮ್ಮೆಲ್ಲರ ಮುಂದೆ ಬರಲು ರೆಡಿಯಾಗಿದ್ದಾರೆ

    ಇನಾಮ್ದಾರ್ ಪಶ್ಚಿಮ ಘಟ್ಟ ಹಾಗೂ ಬಯಲು ಸೀಮೆಯ ಎರಡು ಜನಾಂಗದ ನಡುವಿನ ವರ್ಣ ಸಂಘರ್ಷದ ಕಥೆಯುಳ್ಳ ಸಿನಿಮಾ. ಬೆಳಗಾವಿ, ಕುಂದಾಪುರ, ಚಿಕ್ಕಮಗಳೂರು ಒಳಗೊಂಡಂತೆ ಬಹುತೇಕ ಚಿತ್ರೀಕರಣ ನಡೆದಿರುವುದು ಕಾಡಲ್ಲೇ. ಕರಡಿ ಗುಡ್ಡ,  ನಾಗನಕಲ್ಲು ಬರೆ, ಮುದೂರು, ಬೆಳಕಲ್ಲು ಆಸುಪಾಸಿಲ್ಲಿ ಶೂಟಿಂಗ್ ಮಾಡಿದ್ದು ಚಿತ್ರತಂಡಕ್ಕೆ ಸವಾಲ್ ಆಗಿತ್ತು. ಆದರೆ, ಎಲ್ಲವೂ ಸುಸೂತ್ರವಾಗಿ ಸಾಗೋದಕ್ಕೆ ಹಿರಿಯ ಕಲಾವಿದರಾದ ಅವಿನಾಶ್ ಕೂಡ ಸಾಥ್ ಕೊಟ್ಟರು. ಹೊಸ ತಂಡವಾದರೂ ಸಿನಿಮಾ ಮೇಲಿರುವ ಬದ್ದತೆ ಹಾಗೂ ಪ್ಯಾಷನ್ ನೋಡಿ ಇನಾಮ್ದಾರ್ ಗೆ ಬೆಂಬಲವಾಗಿ ನಿಂತರು. ಫೈನಲೀ ಶೂಟಿಂಗ್ ಕಂಪ್ಲೀಟ್ ಆಗಿದೆ, ಸಿನಿಮಾ ಅದ್ಭುತವಾಗಿ ಮೂಡಿಬಂದಿದ್ದು ಇದೇ ಅಕ್ಟೋಬರ್ 27ರಂದು ತೆರೆಗೆ ಬರಲು ಸಜ್ಜಾಗಿದೆ. ನಿರಂಜನ್ ಶೆಟ್ಟಿ ತಲ್ಲೂರು ನಿರ್ಮಾಣದ ಈ ಸಿನಿಮಾದಲ್ಲಿ ವರ್ಸಟೈಲ್ ಆ್ಯಕ್ಟರ್ ಅವಿನಾಶ್ ಜೊತೆಗೆ ಶರತ್ ಲೋಹಿತಾಶ್ವ, ಥ್ರಿಲ್ಲರ್ ಮಂಜು, ಪ್ರಮೋದ್ ಶೆಟ್ಟಿ, ಎಂಕೆ ಮಠ ಸೇರಿದಂತೆ ಕಿರಿಯ ಪ್ರತಿಭಾನ್ವಿತ ಕಲಾವಿದರ ಸಮಾಗಮವೂ ಆಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬುಡಕಟ್ಟು ಜನರ ರಕ್ಷಣೆಗೆ ನಿಂತ  ಇನಾಮ್ದಾರ್: ನಟಿ ಚಿರಶ್ರೀ ಅಂಚನ್

    ಬುಡಕಟ್ಟು ಜನರ ರಕ್ಷಣೆಗೆ ನಿಂತ ಇನಾಮ್ದಾರ್: ನಟಿ ಚಿರಶ್ರೀ ಅಂಚನ್

    ಚಿರಶ್ರೀ ಅಂಚನ್ ಮೂಲತಃ ಕರಾವಳಿಯವರು. ತುಳು ಚಿತ್ರರಂಗದಿಂದ ಬಣ್ಣದ ಪಯಣ ಆರಂಭಿಸಿ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಬೆರಳೆಣಿಕೆಯಷ್ಟು ಸಿನಿಮಾ ಮಾಡಿದರೂ ಕಾಡುವ ಕಥೆಗಳ ಭಾಗವಾಗಿದ್ದಾರೆ. ಸವಾಲೆನಿಸುವ ಪಾತ್ರಗಳಿಗೆ ಜೀವತುಂಬುತ್ತಾ ಸೈ ಎನಿಸಿಕೊಂಡು ಬರುತ್ತಿರುವ ಇವರೀಗ, ಇನಾಮ್ದಾರ್ (Inamdar) ಚಿತ್ರದಿಂದ ಮತ್ತೆ ಸಂಚಲನ ಮೂಡಿಸಲು ಹೊರಟಿದ್ದಾರೆ. ಬುಡಕಟ್ಟು ಜನಾಂಗದ ಜನರ ರಕ್ಷಣೆಗೆ ನಿಲ್ಲುವ ಮೂಲಕ ನಟಿ ಚಿರಶ್ರೀ ಅಂಚನ್ (Chirasree Anchan) ಸುದ್ದಿ ಕೇಂದ್ರ ತಲುಪಿದ್ದಾರೆ.

    ಬಯಲು ಸೀಮೆ ಹಾಗೂ ಪಶ್ಚಿಮ ಘಟ್ಟಗಳ ಎರಡು ಜನಾಂಗಗಳ ಮಧ್ಯೆ ನಡೆಯುವ ಸಂಘರ್ಷದ ಕಥೆಯನ್ನು ನಿರ್ದೇಶಕ ಸಂದೇಶ್ ಶೆಟ್ಟಿ  (Sandesh Shetty Azri) ಇನಾಮ್ದಾರ್ ಚಿತ್ರವನ್ನಾಗಿಸಿದ್ದಾರೆ. ಇದರಲ್ಲಿ ಭುವಿ ಎನ್ನುವ ಕ್ಯಾರೆಕ್ಟರ್ ಪ್ಲೇ ಮಾಡಿರುವ ಚಿರಶ್ರೀ, ಕರಾವಳಿ ಸೀಮೆಯ ಬುಡಕಟ್ಟು ಜನಾಂಗದ ಹುಡುಗಿಯಾಗಿ ಕಾಣಸಿಗಲಿದ್ದಾರೆ. ಕಾಡಿನಲ್ಲಿ ತಮ್ಮ ಜನರನ್ನು ರಕ್ಷಣೆ ಮಾಡಿಕೊಳ್ಳುವ ದಿಟ್ಟ ನಾಯಕಿಯ ಪಾತ್ರವನ್ನು ನಿಭಾಯಿಸಿದ್ದು ತಮ್ಮೊಟ್ಟಿಗೆ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

    ಸಿನಿಮಾದಲ್ಲಿ ನಾಲ್ಕೈದು ಸೀನ್ ಬಂದು ಹೋಗುವ ಪಾತ್ರ ನಿಭಾಯಿಸಲು ನಂಗಿಷ್ಟವಿಲ್ಲ ಎನ್ನುವ ಚಿರಶ್ರೀ, ಸ್ಕೋಪ್ ಇರುವ ಪಾತ್ರಗಳನ್ನು, ಅಭಿನಯಕ್ಕೆ ಅವಕಾಶವಿರುವ ಕ್ಯಾರೆಕ್ಟರ್ ಗಳನ್ನೇ ಎದುರು ನೋಡ್ತಾರಂತೆ. ಆ ದಾಟಿಯಲ್ಲಿ ಸಿಕ್ಕಂತಹ ಸಿನಿಮಾವೇ ಇನಾಮ್ದಾರ್ ಅಂತೆನ್ನುವ ನಟಿ ಚಿರಶ್ರೀ ಅಂಚನ್, ‘ಭುವಿ’ ಪಾತ್ರದಿಂದ ತನ್ನ ವೃತ್ತಿಬದುಕು ಬದಲಾಗಬಹುದು. ಬಿಗ್ ಬ್ರೇಕ್ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.

    ಅಂದ್ಹಾಗೆ, ಭುವಿ ಪಾತ್ರಕ್ಕಾಗಿ ನಟಿ ಚಿರಶ್ರೀ ಅಂಚನ್ ಸಾಕಷ್ಟು ಶ್ರಮವಹಿಸಿದ್ದಾರೆ. ಮಳೆ ಗಾಳಿ ಎನ್ನದೇ ಬೆಟ್ಟ- ಗುಡ್ಡ ಹತ್ತಿ ಶೂಟಿಂಗ್ ಮಾಡಿದ್ದಾರೆ. ದಟ್ಟ ಕಾಡಲ್ಲಿ ಬರಿಗಾಲಲ್ಲೇ  ಚೇಸ್  ಸೀಕ್ವೆನ್ಸ್ ಚಿತ್ರೀಕರಣದಲ್ಲಿ ಪಾಲ್ಗೊಂಡಾಗ ಚಿರಶ್ರೀ ಕಾಲಿಗೆ ಕಲ್ಲು ತಾಗಿ ದೊಡ್ಡ ಮಟ್ಟದ ಗಾಯ ಆಗಿತ್ತಂತೆ. ಹಾಗಂತ, ಬ್ರೇಕ್ ಪಡೆಯದೇ ಕಾಲಿಗೆ ಬ್ಯಾಂಡೇಜ್ ಸುತ್ತಿಕೊಂಡೇ ಪಾತ್ರ ಪೋಷಣೆ ಮಾಡಿದ್ದಾರಂತೆ. ಈ ಬಗ್ಗೆ ಖುಷಿಯಿಂದಲೇ ಹೇಳಿಕೊಳ್ಳುವ ಚಿರಶ್ರೀ, ಭುವಿ ಪಾತ್ರ ಮನಸ್ಸಿಗೆ ನೆಮ್ಮದಿ ಮತ್ತು ಸಾರ್ಥಕತೆ ತಂದುಕೊಟ್ಟಿದೆ ಅಂತಾರೇ.

    ಇದೇ ಅಕ್ಟೋಬರ್ 27 ರಂದು ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶಿಸಿರುವ, ನಿರಂಜನ್ ಶೆಟ್ಟಿ ತಲ್ಲೂರು ನಿರ್ಮಿಸಿರುವ ಇನಾಮ್ದಾರ್ ಬಿಡುಗಡೆಯಾಗ್ತಿದೆ. ಈ ಚಿತ್ರ ರಿಲೀಸ್ ಗಾಗಿ ಎದುರುನೋಡ್ತಿರುವ ಚಿರಶ್ರೀ, ಬಿಗ್ ಬಾಸ್ ಖ್ಯಾತಿಯ  ಶಶಿ ಜೊತೆ ‘ಪ್ರೇಮಿಗಳ ಗಮನಕ್ಕಾಗಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆ ಸಿನಿಮಾವೂ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಅಪರೂಪದ ಕಥಾಹಂದರವುಳ್ಳ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಉತ್ಸಾಹದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]