Tag: Sandesh

  • `ಘೋಸ್ಟ್’ ನಿರ್ಮಿಸಿ ಪ್ಯಾನ್ ಇಂಡಿಯಾ ಸಂಚಲನ ಮೂಡಿಸಿದ ಸಂದೇಶ್ ಪ್ರೊಡಕ್ಷನ್ಸ್

    `ಘೋಸ್ಟ್’ ನಿರ್ಮಿಸಿ ಪ್ಯಾನ್ ಇಂಡಿಯಾ ಸಂಚಲನ ಮೂಡಿಸಿದ ಸಂದೇಶ್ ಪ್ರೊಡಕ್ಷನ್ಸ್

    ಸ್ಯಾಂಡಲ್ ವುಡ್ ಗಷ್ಟೇ ಸೀಮಿತವಾಗಿದ್ದ ನಿರ್ಮಾಪಕರು ಈಗ ಒಬ್ಬೊಬ್ಬರಾಗಿ ಪ್ಯಾನ್ ಇಂಡಿಯಾ ಅಖಾಡಕ್ಕೆ ಧುಮುಕಿದ್ದಾರೆ. ಕನ್ನಡದ ಜೊತೆಗೆ ನಾಲ್ಕೈದು ಭಾಷೆಗಳಲ್ಲಿ ಸಿನಿಮಾ ತಯಾರಿಸಿಕೊಂಡು ಪರಭಾಷಾ ಅಂಗಳದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಆ ಸಾಲಿಗೆ ಕನ್ನಡದ ಜನಪ್ರಿಯ ನಿರ್ಮಾಪಕರಾದ ಸಂದೇಶ್ ಎನ್ (Sandesh) ಸೇರ್ಪಡೆಗೊಳ್ಳುತ್ತಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯ ಬಹುನಿರೀಕ್ಷಿತ `ಘೋಸ್ಟ್’ (Ghost) ಚಿತ್ರವನ್ನ ಪರಭಾಷಾ ಅಂಗಳದಲ್ಲಿ ಸ್ಪರ್ಧೆಗಿಳಿಸುತ್ತಿದ್ದಾರೆ. ಟಾಲಿವುಡ್ ನಟ ಸಿಂಹ ಬಾಲಯ್ಯ ನಟನೆಯ `ಭಗವಂತ್ ಕೇಸರಿ’, ಮಾಸ್ ಮಹರಾಜ ರವಿತೇಜ ಅಭಿನಯದ `ಟೈಗರ್ ನಾಗೇಶ್ವರ್ ರಾವ್’, ದಳಪತಿ ವಿಜಯ್ ನಟಿಸಿರುವ `ಲಿಯೋ’ ಚಿತ್ರದೆದುರು, ಮಾಸ್ ಲೀಡರ್ ನಾಯಕತ್ವದ `ಘೋಸ್ಟ್’ ಸಿನಿಮಾನ ಫೀಲ್ಡಿಗಿಳಿಸುತ್ತಿದ್ದಾರೆ.

    `ಘೋಸ್ಟ್’ ಕಣಕ್ಕಿಳಿಯುವುದಕ್ಕೆ ಇನ್ನೇನು ಮೂರೇ ಮೂರು ದಿನ ಬಾಕಿಯಿದೆ. ಇದೇ ಅಕ್ಟೋಬರ್ 19ರಂದು ಬಹುನಿರೀಕ್ಷಿತ `ಘೋಸ್ಟ್’ ಚಿತ್ರ ತೆರೆಗಪ್ಪಳಿಸುತ್ತಿದೆ. ಬಿಗ್ಡ್ಯಾಡಿನಾ ಸ್ವಾಗತಿಸುವುದಕ್ಕೆ ಈ ಬಾರಿ ದೊಡ್ಮನೆ ಫ್ಯಾನ್ಸ್ ಮಾತ್ರವಲ್ಲ ಪ್ಯಾನ್ ಇಂಡಿಯಾ ಪ್ರೇಕ್ಷಕರೆಲ್ಲರೂ ಕೂಡ ಒಂಟಿ ಕಾಲಿನಲ್ಲಿ ನಿಂತಿದ್ದಾರೆ. `ಜೈಲರ್’ ಚಿತ್ರದಲ್ಲಿ ನರಸಿಂಹನಾಗಿ ಕಮಾಲ್ ಮಾಡಿದ ಶಿವಣ್ಣ (Shivaraj Kumar), `ಘೋಸ್ಟ್’ ಮೂಲಕ ಒರಿಜಿನಲ್ ಗ್ಯಾಂಗ್ ಸ್ಟರ್ ಆಗಿ ಖದರ್ ತೋರಿಸುವುದಕ್ಕೆ ಹೊರಟಿದ್ದಾರೆ. ಈಗಾಗಲೇ ಟೀಸರ್ ಹಾಗೂ ಟ್ರೇಲರ್ ಮೂಲಕವೇ ಸಮಸ್ತ ಸಿನಿಮಾ ಪ್ರೇಮಿಗಳನ್ನ ಹುಚ್ಚೆಬ್ಬಿಸಿದ್ದಾರೆ. ತಮ್ಮ ಸಿನಿಮಾಗಳಲ್ಲಿ ಇದೇ ಮೊದಲ ಬಾರಿಗೆ ಸಿನಿಮ್ಯಾಟಿಕ್ ಯೂನಿವರ್ಸ್ ಕಾನ್ಸೆಪ್ಟ್ ಇಂಟ್ರುಡ್ಯೂಸ್ ಮಾಡ್ತಿರುವ ನಿರ್ದೇಶಕ ಶ್ರೀನಿವಾಸ್ `ಘೋಸ್ಟ್’ ಮೇಲಿನ ನಿರೀಕ್ಷೆ ಹೆಚ್ಚಿಸಿದ್ದಾರೆ. ನಿರ್ಮಾಪಕ ಸಂದೇಶ್ ಎನ್ ಅವರು ಕೋಟಿ ಕೋಟಿ ಸುರಿದು `ಘೋಸ್ಟ್’ನ ರಿಚ್ ಆಗಿಯೇ ನಿರ್ಮಿಸಿದ್ದಾರೆ. ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ದತ್ತಣ್ಣ, ಪ್ರಶಾಂತ್ ನಾರಾಯಣನ್, ಅಭಿಜಿತ್, ಘೋಸ್ಟ್ ತಾರಾಬಳಗದಲ್ಲಿದ್ದಾರೆ.

    ಕಳೆದ ಮೂವತ್ತೇಳು ವರ್ಷಗಳಿಂದ ರಜತಪರದೆಯನ್ನು ಬೆಳಗುತ್ತಿರುವ ದೊಡ್ಮನೆ ದೊರೆ, ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ತುಂಬೆಲ್ಲಾ ಮೆರವಣಿಗೆ ಹೊರಡ್ತಿದ್ದಾರೆ. ಇನ್ನೂ ಇಲ್ಲಿತನಕ ಸ್ಯಾಂಡಲ್‌ವುಡ್‌ಗಷ್ಟೇ ಸೀಮಿತವಾಗಿದ್ದ ಸಂದೇಶ್ ನಾಗರಾಜ್ ಮಾಲೀಕತ್ವದ `ಸಂದೇಶ್ ಪ್ರೊಡಕ್ಷನ್ಸ್’ `ಘೋಸ್ಟ್’ ಮೂಲಕ ಪ್ಯಾನ್ ಇಂಡಿಯಾದಲ್ಲಿ ಸಂಚಲನ ಮೂಡಿಸಲು ಸಜ್ಜಾಗಿದೆ. ಸರಿಸುಮಾರು ಮೂರುವರೆ ದಶಕಗಳಿಂದ ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಕನ್ನಡ ಚಿತ್ರರಂಗಕ್ಕೆ ಭಿನ್ನ-ವಿಭಿನ್ನ ಸಿನಿಮಾಗಳನ್ನು ಕಾಣಿಕೆಯಾಗಿ ನೀಡುತ್ತಾ ಬಂದಿದ್ದಾರೆ. ಮಣ್ಣಿನ ದೋಣಿ, ಮೌನರಾಗಂ, ಹಠವಾದಿ, ಐರಾವತ, ಪ್ರಿನ್ಸ್, ಒಡೆಯ, ಅಮರ್, ಹರಿಕಥೆ ಅಲ್ಲ ಗಿರಿಕಥೆ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದು, ಈಗ `ಘೋಸ್ಟ್’ ಮೂಲಕ ಪ್ಯಾನ್ ಇಂಡಿಯಾ ತಲುಪುವತ್ತ ದಾಪುಗಾವಲಿಟ್ಟಿದ್ದಾರೆ. `ಅಸುರ’, `ಚಂದ್ರೋದಯ’ ಚಿತ್ರದ ನಂತರ ಸೆಂಚುರಿಸ್ಟಾರ್ ಜೊತೆಗೆ ಸಂದೇಶ್ ಪ್ರೊಡಕ್ಷನ್ಸ್ ನಿರ್ಮಿಸ್ತಿರುವ ಮೂರನೇ ಚಿತ್ರ ಇದಾಗಿದ್ದು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ.

    `ಸಂದೇಶ್ ಪ್ರೊಡಕ್ಷನ್ಸ್’ ಲಾಂಛನದಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ `ಘೋಸ್ಟ್’ಗೆ ಬೇಡಿಕೆ ಹೆಚ್ಚಿದೆ. ಆರ್ ಆರ್ ಆರ್, ಪೊನ್ನಿಯನ್ ಸೆಲ್ವನ್, ವಿಕ್ರಮ್, ಜವಾನ್ ಸೇರಿದಂತೆ ಬಿಗ್ ಬಜೆಟ್ ಸಿನಿಮಾಗಳನ್ನು ವಿತರಣೆ ಮಾಡಿರುವ ಬಾಲಿವುಡ್ ಪ್ರಖ್ಯಾತ ಪೆನ್ ಸ್ಟುಡಿಯೋಸ್ ಸಂಸ್ಥೆ, `ಘೋಸ್ಟ್’ ರೈಟ್ಸ್ ನ ತನ್ನದಾಗಿಸಿಕೊಂಡಿದೆ. ಹಿಂದಿ ಬೆಲ್ಟ್ ನಲ್ಲಿ ಹ್ಯಾಟ್ರಿಕ್ ಹೀರೋ ಸಿನಿಮಾನ ಗ್ರ್ಯಾಂಡ್ ಆಗಿ ರಿಲೀಸ್ ಮಾಡುವುದಕ್ಕೆ ಪ್ಲ್ಯಾನ್ ಮಾಡಿದೆ. ತಮಿಳಿನಲ್ಲಿ ಡ್ರೀಮ್ ವಾರಿಯರ್ ಸಂಸ್ಥೆ ಡಿಸ್ಟ್ರಿಬ್ಯೂಷನ್ ಜವಾಬ್ದಾರಿ ಹೊತ್ತಿದ್ದು, ಸಂದೇಶ್ ಪ್ರೊಡಕ್ಷನ್ ಹೌಸ್ ಕರ್ನಾಟಕದಲ್ಲಿ ಸುಮಾರು 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ `ಘೋಸ್ಟ್’ ಬಿಡುಗಡೆ ಮಾಡ್ತಿದೆ.

    ಇಂಟ್ರೆಸ್ಟಿಂಗ್ ಅಂದರೆ ಅಕ್ಟೋಬರ್ 18ರ ಮಧ್ಯರಾತ್ರಿಯಿಂದಲೇ ಕೆಂಪೇಗೌಡ್ರ ಅಖಾಡದಲ್ಲಿ ಫ್ಯಾನ್ಸ್ ಶೋ ಶುರುವಾಗಲಿದೆ. ಈಗಾಗಲೇ ಮೆಜೆಸ್ಟಿಕ್ ನ ಸಂತೋಷ್ ಥಿಯೇಟರ್ ಮುಂಭಾಗದಲ್ಲಿ ಮಾಸ್ ಲೀಡರ್ ಕಟೌಟ್ ತಲೆಎತ್ತಿದೆ. ಇಂದಿನಿಂದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಹೊಸಕೋಟೆ ಬಿರಿಯಾನಿ ರೇಂಜ್  ಗೆ ಟಿಕೆಟ್ ಗಳು  ಸೇಲ್ ಆಗ್ತಿವೆ. ಸದ್ಯ ಘೋಸ್ಟ್ ಫೀವರ್ ನೋಡ್ತಿದ್ದರೆ ಸಿನಿದುನಿಯಾದಲ್ಲಿ ಸುಂಟರಗಾಳಿ ಅಲ್ಲ ಸುನಾಮಿ ಏಳೋದು ಫಿಕ್ಸು ಎನಿಸ್ತಿದೆ. ಎನಿವೇ, ಕೆಜಿಎಫ್, ಕಾಂತಾರ ನಂತರ ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿರುವ `ಘೋಸ್ಟ್’ ಪ್ಯಾನ್ ಇಂಡಿಯಾ ತುಂಬೆಲ್ಲಾ ಧಗಧಗಿಸಲಿ. `ಸಂದೇಶ್ ಪ್ರೊಡಕ್ಷನ್ಸ್’ ಹೌಸ್ಗೆ ಬೇಡಿಕೆ ಹೆಚ್ಚಲಿ. ಹೋಟೆಲ್ ಬ್ಯುಸಿನೆಸ್, ಟ್ರಾನ್ಸ್ ಪೋರ್ಟಿಂಗ್ ನಲ್ಲಿ ದೊಡ್ಡ ಮಟ್ಟದ  ಯಶಸ್ಸು ಕಂಡಿರುವ ರಾಜಕಾರಣಿ ಕಮ್ ಪ್ರೊಡ್ಯೂಸರ್ ಸಂದೇಶ್ ನಾಗರಾಜ್ ಹಾಗೂ ಅವರ ಪುತ್ರ  ಸಂದೇಶ್ ಎನ್ ಗೆ `ಘೋಸ್ಟ್’ ಸಿನಿಮಾದಿಂದ  ಬಿಗ್ ಸಕ್ಸಸ್ ಸಿಗಲಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಡಿಜಿಪಿ ಬೆದರಿಕೆ ಬಗ್ಗೆ `ಹೈ’ ಆದೇಶದಲ್ಲಿ ಉಲ್ಲೇಖ – ಎಸಿಬಿಗೆ ಕಳಂಕಿತರ ನೇಮಿಸದಂತೆ ಸರ್ಕಾರಕ್ಕೆ ನಿರ್ದೇಶನ

    ಎಡಿಜಿಪಿ ಬೆದರಿಕೆ ಬಗ್ಗೆ `ಹೈ’ ಆದೇಶದಲ್ಲಿ ಉಲ್ಲೇಖ – ಎಸಿಬಿಗೆ ಕಳಂಕಿತರ ನೇಮಿಸದಂತೆ ಸರ್ಕಾರಕ್ಕೆ ನಿರ್ದೇಶನ

    ಬೆಂಗಳೂರು: ಎಸಿಬಿ ಎಡಿಜಿಪಿ ವಿರುದ್ಧ ಹೈಕೋರ್ಟ್ ನ್ಯಾಯಮೂರ್ತಿ ಸಂದೇಶ್ ಮತ್ತೆ ಗರಂ ಆಗಿದ್ದಾರೆ. ಎಸಿಬಿಗೆ ಕಳಂಕಿತ ಅಧಿಕಾರಿಗಳನ್ನು ನಿಯೋಜನೆ ಮಾಡದಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಎಸಿಬಿಗೆ ಅಧಿಕಾರಿಗಳ ನಿಯೋಜನೆ ವೇಳೆ ಯಾವುದೇ ಪ್ರಭಾವಕ್ಕೆ ಒಳಗಾಗದಂತೆಯೂ ಸೂಚನೆ ನೀಡಿದ್ದಾರೆ.

    ತಮಗೆ ಬಂದ ಬೆದರಿಕೆ ವಿಚಾರವನ್ನು ಕೋರ್ಟ್ ಆದೇಶದಲ್ಲಿ ಬರೆಸಿದ್ದಾರೆ. ಜುಲೈ 1ರಂದು ತಮಗೆ ಸಹ ನ್ಯಾಯಮೂರ್ತಿಗಳು ಹೇಳಿದ್ದೇನು ಎಂಬುದನ್ನು ಆದೇಶದಲ್ಲಿ ಇಂಚಿಂಚಾಗಿ ಬರೆಸಿದ್ದಾರೆ. ಆದರೆ ತಮ್ಮ ಬಳಿ ಮಾತನಾಡಿದ ಸಹ ನ್ಯಾಯಮೂರ್ತಿಗಳ ಹೆಸರನ್ನು ನ್ಯಾಯಮೂರ್ತಿಗಳು ಬಹಿರಂಗಪಡಿಸಲಿಲ್ಲ.

    ಈ ವೇಳೆ, ನ್ಯಾಯಮೂರ್ತಿಗಳ ಹೆಸರನ್ನು ಹೇಳಿ ಎಂದು ಎಡಿಜಿಪಿ ಪರ ಕೇಳಿದ್ದಕ್ಕೆ ನ್ಯಾಯಮೂರ್ತಿ ಸಂದೇಶ್ ಗರಂ ಆದರು. ನೋಡ್ರೀ ನನ್ನನ್ನ ತಪ್ಪಿಗೆ ಸಿಕ್ಕಿಸೋ ಪ್ರಯತ್ನ ಮಾಡ್ಬೇಡಿ. ನಾನು ಯಾರಿಗೆ ಅವರ ಹೆಸರನ್ನು ಹೇಳ್ಬೇಕೋ ಹೇಳಿದ್ದೇನೆ. ಓಪನ್ ಕೋರ್ಟ್ ಅಲ್ಲಿ ಹೇಳೋ ಅವಶ್ಯಕತೆ ಇಲ್ಲ. ನ್ಯಾಯಾಲಯದ ಸ್ವಾತಂತ್ರ್ಯದ ಮೇಲೆ ಬೆದರಿಕೆ ಹಾಕಿದ್ದಾರೆ. ಅದಕ್ಕೆ ನಾನು ತನಿಖೆಗೆ ಮನವಿ ಮಾಡುತ್ತೇನೆ. ಅದಕ್ಕೆ ಪ್ರಭಾವ ಬೀರಲು ನೊಡಿದವರ ಸರ್ವೀಸ್ ರೆಕಾರ್ಡ್ ಕೇಳಿದ್ದೇನೆ ಎಂದರು. ಈ ಸಂದರ್ಭದಲ್ಲಿ ಎಡಿಜಿಪಿ ಪರ ವಕೀಲ ಅಶೋಕ್ ಹಾರ್ನಳ್ಳಿಗೆ ವಾದ ಮಂಡಿಸಲು ನ್ಯಾಯಮೂರ್ತಿಗಳು ಬಿಡಲಿಲ್ಲ.

    ಸೀಮಂತ್ ಕುಮಾರ್ ವಿರುದ್ಧದ ದಾಳಿಗೆ ಸಂಬಂಧಿಸಿ ಸಿಬಿಐ ವಕೀಲರು ಕೋರ್ಟ್‍ಗೆ ವರದಿ ನೀಡಿದರು. ಈ ವೇಳೆ, ಅಕ್ರಮ ಗಣಿಗಾರಿಕೆ, ಅದಿರು ಸಾಗಾಟ ವಿಚಾರಕ್ಕೆ ಏನಾದ್ರೂ ಕ್ರಮಕೈಗೊಂಡಿದ್ಯಾ? ಎಸ್‍ಪಿ ಅವರ ಮನೆಯ ಮೇಲೆ ದಾಳಿ ಆಗಿತ್ತಲ್ವಾ? ಆಗ ಕ್ರಮ ಏನಾಗಿತ್ತು? ಈಗ ಯಾವ ಹಂತದಲ್ಲಿ ಪ್ರಕರಣ ಇದೆ ಎಂದು ಪ್ರಶ್ನಿಸಿದ್ರು.

    ಐಎಎಸ್ ಅಧಿಕಾರಿ ಮಂಜುನಾಥ್ ರಕ್ಷಣೆಗೆ ಯತ್ನಿಸಿದ್ದೀರಾ ಎಂದು ಎಜಿ ಮೇಲೆಯೂ ಗರಂ ಆದರು. ಕೊನೆಗೆ ಜುಲೈ 13ಕ್ಕೆ ವಿಚಾರಣೆ ಮುಂದೂಡಿದರು. ನ್ಯಾಯಮೂರ್ತಿಗಳು ಪದೇ ಪದೇ ಎಸಿಬಿ ನಿಷ್ಕ್ರಿಯತೆ ಬಗ್ಗೆ ಪ್ರಸ್ತಾಪಿಸಿದರು. ನನಗೇನು ವೈಯಕ್ತಿಕ ಜಿದ್ದು ಇಲ್ಲ ಎಂಬುದನ್ನೂ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪೋರ್ಚುಗಲ್‌ಗೆ ನೀಡಿದ ವಾಗ್ದಾನದಂತೆ ಅಬು ಸಲೇಂನನ್ನು ಬಿಡುಗಡೆ ಮಾಡಿ – ಕೇಂದ್ರಕ್ಕೆ ಸುಪ್ರೀಂ

    ಈ ಮಧ್ಯೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಐಎಎಸ್ ಅಧಿಕಾರಿ ಮಂಜುನಾಥ್ ಜಾಮೀನು ಅರ್ಜಿ ವಜಾ ಮಾಡಿದೆ. ಎಸಿಬಿ ಎಡಿಜಿಪಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಸಿಜೆಐ, ಆ ಅಧಿಕಾರಿ ಅಷ್ಟೊಂದು ಪ್ರಭಾವಿಯಾ ಎಂದು ಪ್ರಶ್ನೆ ಮಾಡಿದ್ದಾರೆ. ಮಂಗಳವಾರ ಈ ಅರ್ಜಿ ವಿಚಾರಣೆಯನ್ನು ಸಿಜೆಐ ಪೀಠ ನಡೆಸಲಿದೆ.

    supreme court 12

    ನ್ಯಾ. ಹೆಚ್‍ಪಿ ಸಂದೇಶ್ ಆದೇಶದಲ್ಲಿ ಬರೆಸಿದ್ದೇನು?
    ಜುಲೈ 1ರಂದು ಸಿಜೆ ನಿವೃತ್ತಿ ಹಿನ್ನೆಲೆ, ಬೀಳ್ಕೊಡುಗೆ ಸಮಾರಂಭ ಇತ್ತು. ಡಿನ್ನರ್ ವೇಳೆ ಸಹ ನ್ಯಾಯಮೂರ್ತಿಯೊಬ್ಬರು ನನ್ನ ಪಕ್ಕ ಕುಳಿತರು. ದೆಹಲಿಯಿಂದ ನನಗೆ ಒಂದು ಕರೆ ಬಂದಿದೆ ಎಂದು ಹೇಳಿದರು . ಕರೆ ಮಾಡಿದವರು ನಿಮ್ಮ ಬಗ್ಗೆ ವಿಚಾರಿಸಿದರೆಂದು ಹೇಳಿದರು. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲವೆಂದು ಹೇಳಿದೆ. ಆದರೆ ಆ ನ್ಯಾಯಮೂರ್ತಿ ವಿಷಯ ಅಲ್ಲಿಗೇ ನಿಲ್ಲಿಸಲಿಲ್ಲ. ಎಡಿಜಿಪಿ ಉತ್ತರ ಭಾರತದವರು, ಪವರ್ ಫುಲ್ ಆಗಿದ್ದಾರೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ದರ್ಶನ್ ಕ್ಷಮೆ ಕೇಳಲಿ, ಮುಂದುವರಿಸಿದ್ರೆ ಹೆಚ್ಚಿನ ತೇಜೋವಧೆ – ಇಂದ್ರಜಿತ್

    ದರ್ಶನ್ ಕ್ಷಮೆ ಕೇಳಲಿ, ಮುಂದುವರಿಸಿದ್ರೆ ಹೆಚ್ಚಿನ ತೇಜೋವಧೆ – ಇಂದ್ರಜಿತ್

    ಬೆಂಗಳೂರು: ಈಗಲೇ ದರ್ಶನ್ ಕ್ಷಮೆ ಕೇಳಿದರೆ ಒಳ್ಳೆಯವರಾಗುತ್ತೀರಿ. ಘಟನೆ ನಡೆದಿರುವ ಬಗ್ಗೆ ಕ್ಷಮೆ ಕೇಳಿ ನ್ಯಾಯ ಒದಗಿಸಿಕೊಡಿ ಎಂದು ನಿರ್ಮಾಪಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೊಲೀಸ್ ಆಫೀಸರ್ ಮುಂದೆ ಎಲ್ಲವನ್ನೂ ಹೇಳಲು ಸಿದ್ಧ. ನಾನು ವೈಯಕ್ತಿಕವಾಗಿ ಮುಂದೆ ಬಂದು ಮಾತನಾಡಿದ್ದೇನೆ. ಈ ಪ್ರಕರಣವನ್ನು ಮತ್ತಷ್ಟು ಮುಂದುವರಿಸುವುದು ಬೇಡ. ಮತ್ತೆ ಮುಂದುವರಿಸಿದರೆ ಇನ್ನು ಹೆಚ್ಚಿನ ತೇಜೋವಧೆಯಾಗಲಿದೆ. ಸಂದೇಶ್, ಸಂದೇಶ್ ನಾಗರಾಜ್ ಅವರಲ್ಲಿ ಕ್ಷಮೆ ಕೇಳಿದ್ರೆ ಏನ್ ಕಳ್ಕೋತ್ತೀರಾ ಎಂದು ದರ್ಶನ್ ಅವರನ್ನು ಇಂದ್ರಜಿತ್ ಪ್ರಶ್ನಿಸಿದ್ದಾರೆ.

    ಮೇರು ನಟ ಹೇಗಿರಬೇಕು ಎಂಬುದನ್ನು ರಾಜ್ ಕುಮಾರ್ ನೋಡಿ ಕಲಿಯಬೇಕು. ನಿಮ್ಮ ಪ್ರತಿಯೊಂದು ಹೆಜ್ಜೆಯೂ ಮುಖ್ಯವಾಗುತ್ತದೆ. ಸಾಮಾನ್ಯರ ವೈಯಕ್ತಿಕ ಜೀವನ ಫೋಕಸ್ ಆಗುವುದಿಲ್ಲ. ನಿಮ್ಮ ಜೀವನ ಹೆಚ್ಚು ಫೋಕಸ್ ಆಗಲಿದೆ. ಹಾಗಾಗಿ ನಾನು ಮಾತನಾಡುತ್ತೀದ್ದೇನೆ ಎಂದು ತಿಳಿಸಿದರು.

    ನನ್ನ ಟ್ರ್ಯಾಕ್ ರೆಕಾರ್ಡ್ ನೋಡಿದ್ದೀರಾ? ನನ್ನ ಮಾತುಗಳಿಗೆ ನಾನು ಬದ್ಧನಾಗಿದ್ದೇನೆ. ಸಮಾಜದ ಕಾಳಜಿಯಿಂದ ಮಾತನಾಡುತ್ತಿದ್ದೇನೆ. ಸಾಮಾನ್ಯ ಸಪ್ಲೈಯರಿಗೆ ಅನ್ಯಾಯವಾಗಿದೆ. ಅವರಿಗೆ ನ್ಯಾಯ ಕೊಡಿಸಲು ಮುಂದೆ ಬಂದಿದ್ದೇನೆ ಎಂದರು. ಇದನ್ನೂ ಓದಿ: ನಾನು ದಲಿತ ಅಲ್ಲ ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು: ಗಂಗಾಧರ್

    ಇದು ಜಾತಿ ವಿಷಯ ಅಲ್ಲ. ಶೋಷಿತನಿಗೆ ಅನ್ಯಾಯವಾಗಿದೆ. ಆಡಿಯೋದಲ್ಲಿ ಹೋಟೆಲ್ ಮಾಲೀಕ ತಪ್ಪೊಪ್ಪಿಕೊಂಡಿದ್ದಾರೆ. ಅವರು ವಿಸ್ತಾರವಾಗಿ ಮಾತಾಡಿದ್ದು, ಆಡಿಯೋದಲ್ಲಿ ಇರುವ ಧ್ವನಿ ನನ್ನದೆ. ಸಂದೇಶ್ ಜೊತೆ ಮಾತನಾಡಿದ್ದು ನಾನೇ. ಕೇವಲ ಅವರೊಬ್ಬರ ಜೊತೆಯಲ್ಲ ಅಲ್ಲಿನ ಸಿಬ್ಬಂದಿ ಜೊತೆಯೂ ಸಹ ಮಾತನಾಡಿದ್ದೇನೆ ಎಂದು ಹೇಳಿದರು.

    ಮೈಸೂರಿನ ಮಾಧ್ಯಮದ ಮೂಲಕ ಹಲವು ವಿಚಾರದಲ್ಲಿ ನೊಂದವರು ನನಗೆ ಕರೆ ಮಾಡಿ ಮಾತನಾಡಿದ್ದಾರೆ. ನ್ಯಾಯಲಯದ ಬಗ್ಗೆ ಸಂಪೂರ್ಣ ನಂಬಿಕೆ ಇದೆ. ದರ್ಶನ್‍ನಿಂದ ಯಾವುದೇ ಕಾಲ್ ಬಂದಿಲ್ಲ. ಯಾರಿಂದಲೂ ಬೆದರಿಕೆ ಕರೆ ಬಂದಿಲ್ಲ. ರಾಜಿ ಸಂಬಂಧ ಯಾವುದೋ ಕಾಲ್ ಬಂದಿತ್ತು ಎಂದು ತಿಳಿಸಿದರು.

    ಕುಮಾರಸ್ವಾಮಿ ಜೊತೆಗೆ ಇದ್ದ ಫೋಟೋದ ಬಗ್ಗೆ ಪ್ರತಿಕ್ರಿಯಿಸಿ, ಹಲವಾರು ಬಾರಿ ನಾನು ಕುಮಾರಸ್ವಾಮಿ ಜೊತೆ ಭೇಟಿ ಮಾಡಿದ್ದೇನೆ. ಆ ಫೋಟೋ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆಯ ಫೋಟೋ ಎಂದು ಸ್ಪಷ್ಟನೆ ನೀಡಿದರು.

    ಹಿರಿಯ ವಕೀಲ ಶ್ಯಾಮ್ ಸುಂದರ್ ಮಾತನಾಡಿ, ಯಾವುದೇ ದಾಖಲೆಗಳನ್ನು ಮಾಧ್ಯಮಗಳಿಗೆ ಕೊಡಬೇಡಿ. ಕೇವಲ ತನಿಖೆಗೆ ಮಾತ್ರ ನೀಡಿ ಅಂತ ನಾನೇ ಇಂದ್ರಜಿತ್ ಲಂಕೇಶ್ ಅವರಿಗೆ ಹೇಳಿದ್ದೆ. ತನಿಖೆ ವೇಳೆ ಪೊಲೀಸರು ಸಹ ಸ್ಟೇಟ್ಮೆಂಟ್ ಕೊಡಬಾರದು. ಸಾಕ್ಷ್ಯಧಾರಗಳಿರುವಂತದ್ದನ್ನು ಮಾಧ್ಯಮಗಳಿಗೆ ಕೊಡದಂತೆ ಹೇಳಿದ್ದೇನೆ ಎಂದರು.

  • ಉಮಾಪತಿಗೆ ಬ್ಲ್ಯಾಕ್‍ಮೇಲ್, ದರ್ಶನ್ ಹೊಡೆದಿದ್ದು ನಿಜ: ಸಂದೇಶ್ ಆಡಿಯೋ ಬಾಂಬ್

    ಉಮಾಪತಿಗೆ ಬ್ಲ್ಯಾಕ್‍ಮೇಲ್, ದರ್ಶನ್ ಹೊಡೆದಿದ್ದು ನಿಜ: ಸಂದೇಶ್ ಆಡಿಯೋ ಬಾಂಬ್

    ಬೆಂಗಳೂರು: ನಟ ದರ್ಶನ್ ಹೋಟೆಲ್‍ನಲ್ಲಿ ಹೊಡೆದಿರುವುದು ನಿಜ. ದರ್ಶನ್ ಜೊತೆಗಿರುವವರೆಲ್ಲರು ಪೋಲಿಗಳು. ಉಮಾಪತಿಗೆ ದರ್ಶನ್ ಬ್ಲ್ಯಾಕ್‍ಮೇಲ್ ಮಾಡಿದ್ದಾನೆ ಎಂದು ಸಂದೇಶ್  ಧ್ವನಿಯನ್ನು ಹೋಲುವ ಆಡಿಯೋ ಈಗ ಬಹಿರಂಗವಾಗಿದೆ.

    ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ಮಾಲೀಕ ಸಂದೇಶ್ ಮತ್ತು ನಿರ್ದೇಶನ ಇಂದ್ರಜಿತ್ ಲಂಕೇಶ್ ಧ್ವನಿಯನ್ನೇ ಹೋಲುವ ಆಡಿಯೋ ಈಗ ರಿವೀಲ್ ಆಗಿದೆ. ಈ ಆಡಿಯೋದಲ್ಲಿ ದರ್ಶನ್ ಹೊಡೆದಿರುವುದು ನಿಜ ಎಂದು ಸಂದೇಶ್ ಹೇಳಿದ್ದಾರೆ.

    ಆಡಿಯೋದಲ್ಲಿ ಏನಿದೆ?
    ಕುತ್ಕೊಂಡು ಅವನೇ ಹೊಡೆದಿರೋದು ಬೇರೆ ಕಸ್ಟಮರ್ ಗೆ.  **** ಮತ್ತೆ ದರ್ಶನ್ ಒಂದು ರೂಮ್. ಇನ್ನೂ ಅವರಿಗೇನೆ ಊಟ ಹಾಕಿರೋದು ಇವ್ನು. ಈ ಬೃಹಸ್ಪತಿಗಳು ಇವರೇ 15 ಜನ. ನಾನು ಬಂದು ಬೈದಿದ್ದು ಅವರಿಗೇನೆ. ಅಲ್ಲರೀ 15 ಜನ ಒಬ್ಬನನ್ನು ಹೊಡೀತಿದ್ರೆ ನೀನು ನೋಡ್ಕೊಂಡು ನಿಂತಿದ್ಯಲ್ಲಾ ಹರ್ಷ ಅಂತ ಕೇಳ್ದೆ. ಅವನು ಅಣ್ಣ ಅಣ್ಣ ಅಂತ ಕಾಲು ಕಟ್ಬಿಟ್ಟ.

    ನಿನ್ನ ಜೊತೆ ಇರೋರು ಯಾರೂ ಒಳ್ಳೇಯವರಲ್ಲ ಅಂತ ನಿನ್ನೆ ಹೇಳ್ದೆ. ಅಲ್ಲ ತಲೆ ಕಡೀತಿನಿ. ಬಡೀತಿನಿ ಅಂತ ಹೋದ್ನಲ್ಲ ಪ್ರೆಸ್‍ಗೆ. ಇದೆಲ್ಲಾ ಶಾಶ್ವತ ಅಲ್ಲ ದರ್ಶನ್. ತಪ್ಪು ನೀನು ಹೇಳಿರೋದು. ಅವರೂ ಒಳ್ಳೆಯವರಲ್ಲ ನಿನ್ ಜೊತೆ ಇರೋರು.

    ಉಮಾಪತಿ ಬಗ್ಗೆನೂ ನಿಂಗೆ ಗೊತ್ತು. ನಾನು ಬೇರೆ ಪ್ರೊಡ್ಯೂಸರ್ ಬಗ್ಗೆ ಮಾತಾಡ್ಬಾರ್ದು. ಪೊಲೀಸ್ ತನಿಖೆಯಲ್ಲಿ ನೀನೂ ತಗ್ಲಾಕ್ಕೊತೀಯ. ನನಗೆ ಬೇರೆ ಮಾಹಿತಿನೇ ಬಂದಿದೆ. ಪೊಲೀಸರು ನೋಡಿ ಸರ್. ಅವರು ಸೆಲೆಬ್ರಿಟಿಗಳು ನಾವೇನು ಮಾಡಲು ಆಗಲ್ಲ. ನಿಮ್ಮ ಫ್ರೆಂಡ್ ಕೂಡ ಬರಬೇಕಾಗುತ್ತೆ ಅಂದ್ರು. ಇದನ್ನೂ ಓದಿ: ದರ್ಶನ್ ನನ್ನ ಮೇಲೆ ಹಲ್ಲೆ ನಡೆಸಿಲ್ಲ, ಕೋಮಾದಲ್ಲಿಯೂ ಇಲ್ಲ: ಗೋಪಾಲ್ ರಾಜ್

    ದರ್ಶನ್‍ಗೆ ಇದನ್ನೇ ಹೇಳ್ದೆ. ನೀನು ತೋಟಕ್ಕೆ ಬಾ. ತೋಟಕ್ಕೆ ಬಾ ಅಂದ. ನಾವ್ ಸೀನ್‍ಗೂ ಇಲ್ಲ. ಬರೋದೂ ಇಲ್ಲ ಅಂದೆ. ಅವ್ನು ಫೋನ್ ಮಾಡಿದ್ದ. ಅಂದ್ರೆ ಅಪ್ಪ ಕೆಂಡಾಮಂಡಲರಾಗ್ಬಿಟ್ರು. ಏಯ್. ಬಂದ್‍ಗಿಂದ್ ಬಿಟ್ಟೋನು ತಿರ್ಗಾ. ದಯವಿಟ್ಟು ಬೇಡಪ್ಪ.. ಅವ್ನು ತಪ್ಪು ಮಾಡಿರೋದು ಅವ್ನಿಗೆ ಗಿಲ್ಟಿ ಇರಲಿ. ಮತ್ತೆ ನೀನೇನಾದ್ರೂ ಕರ್ಕೊಂಡೆ ಸ್ಟಾಪ್ ಬಳಿಯೂ ಬೆಲೆ ಇರಲ್ಲ. ಗಾಂಧಿನಗರದಲ್ಲೂ ಬೆಲೆ ಇರಲ್ಲ.

    ಅವನದ್ದು ಸಾವಿರ ಇದೆ. ನಿಮಿಷಕ್ಕೆ ಒಂದು ಹೊರ ಬರ್ತಾವೆ. ಆ ಹುಡುಗಿಗೂ ಅವಮಾನ. ನಿಮ್ಮಿಬ್ರದ್ದು ಏನಾಗಿದೆ ಅಂತಾನೆ ಗೊತ್ತಿಲ್ಲ. ಅವನ ಮನೆ ಹಾಳಾದ್ರೆ ಸುಮ್ಮನಿರ್ತಾನಾ? ಅವನು ನಿಂದನ್ನೂ ಬಿಡ್ತಾನೆ. ತಲೆ ಕತ್ತರಿಸುತ್ತೇನೆ ಅಂತೀಯಾ ಅದು ನಿನಗೆ ಬೇಕಾ? ನಮ್ಮ ಹೋಟೆಲಿನಲ್ಲಿ ಜಗಳ ಆದಾಗ ಹರ್ಷ ರಾಕೇಶ್ ಪಾಪಣ್ಣ ಎಲ್ಲರೂ ನೋಡ್ತಾ ಇದ್ರು.