Tag: Sandeep Reddy

  • ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ಸಂದೀಪ್ ರೆಡ್ಡಿ ಆಯ್ಕೆಗೆ ತಡೆ – ಮೇಲುಗೈ ಸಾಧಿಸಿದ ಸುಧಾಕರ್

    ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ಸಂದೀಪ್ ರೆಡ್ಡಿ ಆಯ್ಕೆಗೆ ತಡೆ – ಮೇಲುಗೈ ಸಾಧಿಸಿದ ಸುಧಾಕರ್

    ಚಿಕ್ಕಬಳ್ಳಾಪುರ: ಜಿಲ್ಲೆಯ ನೂತನ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಸಂದೀಪ್ ರೆಡ್ಡಿ (Sandeep Reddy) ಆಯ್ಕೆಯನ್ನು ತಡೆ ಹಿಡಿಯಲಾಗಿದೆ.

    ಸಂದೀಪ್ ರೆಡ್ಡಿಯನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ ಸುಧಾಕರ್ (Dr K Sudhakar) ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ವಿರುದ್ಧ ಕೆಂಡ ಕಾರಿದ್ದರು. ಇದನ್ನೂ ಓದಿ: ಸೋಮಣ್ಣ ಗೃಹಪ್ರವೇಶದಲ್ಲಿ ಭಿನ್ನರು – ದೆಹಲಿಯಲ್ಲೇ ಇದ್ರೂ ಅತ್ತ ಸುಳಿಯದ ವಿಜಯೇಂದ್ರ!

    ಸಂದೀಪ್ ರೆಡ್ಡಿ ಆಯ್ಕೆಯನ್ನು ಬದಲಾವಣೆ ಮಾಡಲೇಬೇಕು ಎಂದು ಸಂಸದ ಸುಧಾಕರ್ ಪಟ್ಟು ಹಿಡಿದಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ದಾ ಸೂಚನೆ ಮೇರೆಗೆ ಇಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ ವಾಲ್ ಸಂದೀಪ್ ರೆಡ್ಡಿ ನೇಮಕಾತಿ ಆಯ್ಕೆಯನ್ನ ತಡೆಹಿಡಿಯುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರೆಗೆ ಆದೇಶ ಮಾಡಿದ್ದಾರೆ.

    ಸಂದೀಪ್ ರೆಡ್ಡಿ ಆಯ್ಕೆಗೆ ಬ್ರೇಕ್ ಹಾಕಿಸುವ ಮೂಲಕ ಸಂಸದ ಸುಧಾಕರ್ ಮೇಲುಗೈ ಸಾಧಿಸಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿರುವ ಸಂದೀಪ್ ರೆಡ್ಡಿ, ಪಕ್ಷದ ತೀರ್ಮಾನವನ್ನು ಸ್ವಾಗತಿಸುತ್ತೇನೆ. ಎಲ್ಲವನ್ನೂ ಜನರು ಗಮನಿಸುತ್ತಿದ್ದಾರೆ. ನಾನು ಕಳೆದುಕೊಳ್ಳುವುದು ಏನೂ ಇಲ್ಲ. ನನಗೆ ಮತ್ತಷ್ಟು ಶಕ್ತಿ ಬರಲಿದೆ ಅಂತ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.

     

  • ‘ಸಲಾರ್ 2’ ಚಿತ್ರಕ್ಕೂ ಮುನ್ನ ಖಾಕಿ ಧರಿಸಲಿದ್ದಾರೆ ಪ್ರಭಾಸ್

    ‘ಸಲಾರ್ 2’ ಚಿತ್ರಕ್ಕೂ ಮುನ್ನ ಖಾಕಿ ಧರಿಸಲಿದ್ದಾರೆ ಪ್ರಭಾಸ್

    ಗತ್ತಿನಾದ್ಯಂತ ಸಲಾರ್ (Salaar) ಸಿನಿಮಾ ತನ್ನ ಯಶಸ್ಸಿನ ಯಶೋಗಾಥೆಯನ್ನು ಮುಂದುವರೆಸಿದೆ. ಆರು ದಿನಕ್ಕೆ ಅಂದಾಜು ಐನೂರು ಕೋಟಿ ಕಲೆಕ್ಷನ್ ಮಾಡಿದೆ ಎಂದು ಸಿನಿ ಪಂಡಿತರ ಲೆಕ್ಕಾಚಾರ. ಒಂದು ಕಡೆದ ದಕ್ಷಿಣದ ಈ ಸಿನಿಮಾ ಜಗತ್ತನ್ನೇ ಗೆಲ್ಲಲು ಹೊರಟಿದ್ದರೆ, ಮತ್ತೊಂದು ಹಿಂದಿ ಸಿನಿಮಾ ಎನಿಮಲ್ ಕೂಡ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಿದೆ. ಹೀಗಾಗಿ ಪ್ರಭಾಸ್ (Prabhas) ಮೇಲೆ ಒತ್ತಡ ಹೆಚ್ಚಾಗಿದೆ.

    ಸಲಾರ್ ಭಾರೀ ಗೆಲುವಿನ ನಂತರ ಸಲಾರ್ 2 ಬಗ್ಗೆ ಈಗಾಗಲೇ ಅಭಿಮಾನಿಗಳು ಅಪ್ ಡೇಟ್ ಕೇಳುತ್ತಿದ್ದಾರೆ. ಆದರೆ, ಸಲಾರ್ ಮಧ್ಯಯೂ ಪ್ರಭಾಸ್ ಅನಿಮಲ್ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy) ಅವರಿಗೆ ಡೇಟ್ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಸ್ಪಿರಿಟ್ (Spirit) ಎಂದು ಹೆಸರಿಡಲಾಗಿದೆ. ಒಂದು ಕಡೆ ಯಶಸ್ಸಿನ ಪ್ರಶಾಂತ್ ನೀಲ್ (Prashant Neel). ಮತ್ತೊಂದು ಕಡೆ ಎನಿಮಲ್ ಗೆಲ್ಲಿಸಿದ ಸಂದೀಪ್ ರೆಡ್ಡಿ. ಪ್ರಭಾಸ್ ಡೇಟ್ ಕೊಡೋದು ಯಾರಿಗೆ ಅನ್ನುವ ಚರ್ಚೆ ಕೂಡ ನಡೆದಿದೆ.

    ಈ ನಡುವೆ ಸಂದೀಪ್ ರೆಡ್ಡಿ ತಮ್ಮ ಸ್ಪಿರಿಟ್ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಹೊಸ ಅಪ್ ಡೇಟ್ ನೀಡಿದ್ದಾರೆ. ತಮ್ಮ ಸಿನಿಮಾದಲ್ಲಿ ಪ್ರಭಾಸ್ ಪೊಲೀಸ್ ಅಧಿಕಾರಿಯ ಪಾತ್ರ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ ಪೊಲೀಸ್ ವೇಷದಲ್ಲಿ ತಮ್ಮ ನೆಚ್ಚಿನ ನಟನ ಪಾತ್ರವನ್ನು ನೋಡಲು ಪ್ರಭಾಸ್ ಅಭಿಮಾನಿ ತುದಿಗಾಲಲ್ಲಿ ನಿಂತಿದ್ದಾರೆ.

     

    ಈ ವರ್ಷದ ಗೆಲುವಿನ ಸಿನಿಮಾಗಳಲ್ಲಿ ಅನಿಮಲ್ ಮತ್ತು ಸಲಾರ್ ಸಿನಿಮಾ ಸೇರಿವೆ. ಎರಡೂ ಸಿನಿಮಾಗಳು ಭರ್ಜರಿ ಗೆಲುವನ್ನೇ ಸಾಧಿಸಿವೆ. ಹೀಗಾಗಿ ಪ್ರಭಾಸ್ ಯಾರಿಗೆ ತಮ್ಮ ಮುಂದಿನ ಡೇಟ್ಸ್ ಕೊಡ್ತಾರೆ ಎನ್ನುವ ಕುತೂಹಲ ಮೂಡಿದೆ. ಮುಂದಿನ ದಿನಗಳಲ್ಲಿ ಈ ಎಲ್ಲದಕ್ಕೂ ಉತ್ತರ ಸಿಗಬಹುದು.

  • ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ?

    ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ?

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಹುಭಾಷೆಗಳಲ್ಲಿ ಮಿಂಚುತ್ತಿದ್ದು, ಇವರು ಮಾಡಿದ ಆಲ್ಮೂಸ್ಟ್ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿವೆ. ಅಭಿಮಾನಿಗಳು ರಶ್ಮಿಕಾ ಅವರನ್ನು ಲಕ್ಕಿ ಸ್ಟಾರ್ ಎಂದು ಕರೆಯುತ್ತಿದ್ದಾರೆ. ಈಗ ರಶ್ಮಿಕಾ ಬಾಲಿವುಡ್ನಲ್ಲಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಅವರ ಎರಡು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಈ ನಡುವೆಯೇ ಮೆಗಾ ಪ್ರಾಜೆಕ್ಟ್‌ಗೆ ಈ ತಾರೆ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಬಿಟೌನ್ ಅಂಗಳದಲ್ಲಿ ಹರಿದಾಡುತ್ತಿದೆ.

    ರಶ್ಮಿಕಾ ಬಾಲಿವುಡ್ ‘ಮಿಷನ್ ಮಜ್ನು’ ಶೂಟಿಂಗ್ ಪೂರ್ತಿ ಮುಗಿದಿದ್ದು, ರಿಲೀಸ್ಗೆ ರೆಡಿ ಇದೆ. ಬಾಲಿವುಡ್‌ಗೆ 2ನೇ ಸಿನಿಮಾ ‘ಗುಡ್ ಬೈ’ ಕೂಡ ಶೂಟಿಂಗ್ ಮುಗಿದು, ಇನ್ನಷ್ಟೇ ಅದು ತೆರೆಗೆ ಬರಬೇಕಿದೆ. ಈ ವೇಳೆಯೇ ‘ಅರ್ಜುನ್ ರೆಡ್ಡಿ’ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ಮತ್ತು ರಣಬೀರ್ ಕಪೂರ್ ಕಾಂಬಿನೇಷನ್‌ನಲ್ಲಿ ‘ಅನಿಮಲ್’ ಸಿನಿಮಾ ಮೂಡಿಬರಲಿದ್ದು ಈ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:  ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

    ಈ ಸಿನಿಮಾಗೆ ಮೊದಲು ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ನಾಯಕಿ ಎಂಬ ಸುದ್ದಿಯಿತ್ತು. ಆದರೆ ಅವರು ಸಿನಿಮಾದಿಂದ ಹೊರಬಂದಿದ್ದಾರೆ ಎಂಬ ಮಾಹಿತಿಯಿದೆ. ಆ ಪಾತ್ರವನ್ನು ರಶ್ಮಿಕಾ ನಿರ್ವಹಿಸುತ್ತಾರಂತೆ. ಈ ಸಿನಿಮಾಗೆ ಇವರೇ ಹೀರೋಯಿನ್ ಎಂದು ಅಧಿಕೃತವಾಗಿ ಘೋಷಣೆಯಾದರೆ ರಣಬೀರ್ ಅವರಿಗೆ ರಶ್ಮಿಕಾ ಪತ್ನಿಯಾಗಿ ನಟಿಸಲಿದ್ದಾರೆ. ಈ ಸುದ್ದಿ ರಶ್ಮಿಕಾ ಅಭಿಮಾನಿಗಳಿಗೆ ಫುಲ್ ಟ್ರೀಟ್ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.

    ರಶ್ಮಿಕಾಗೆ ಹಿಂದಿಯ ದೊಡ್ಡ ಬ್ಯಾನರ್ ಆದ ಕರಣ್ ಜೋಹರ್ ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಇತ್ತೀಚೆಗಷ್ಟೇ ರಶ್ಮಿಕಾ ಅವರು ಕರಣ್ ಜೋಹರ್ ಆಫೀಸ್‌ಗೆ ಭೇಟಿ ಕೊಟ್ಟಿದ್ದು, ಬಾಲಿವುಡ್ ಸ್ಟಾರ್ ನಟರ ಜೊತೆ ಈ ನಟಿ ತೆರೆಹಂಚಿಕೊಳ್ಳುತ್ತಾರೆ ಎಂಬ ಸುದ್ದಿಯೂ ಇದೆ. ತಮಿಳು, ತೆಲುಗಿನಲ್ಲಿ ಮಾತ್ರವಲ್ಲ, ಬಾಲಿವುಡ್ ನಲ್ಲೂ ಕನ್ನಡದ ಹುಡುಗಿ ಮಿಂಚುತ್ತಿದ್ದಾರೆ. ಇದನ್ನೂ ಓದಿ: ಡಿಂಪಲ್ ಕ್ವೀನ್‍ಗೆ ಮೋಹಕತಾರೆಯ ಮೆಚ್ಚುಗೆ ಕಾಮೆಂಟ್ – ಅಭಿಮಾನಿಗಳು ಖುಷ್