Tag: Sandeep malik

  • ರೈಲಿನಲ್ಲಿ ಶಿಷ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಬಾಕ್ಸಿಂಗ್ ಕೋಚ್ ಅರೆಸ್ಟ್

    ರೈಲಿನಲ್ಲಿ ಶಿಷ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಬಾಕ್ಸಿಂಗ್ ಕೋಚ್ ಅರೆಸ್ಟ್

    ನವದೆಹಲಿ: ಗುರು-ಶಿಷ್ಯೆಯ ಸಂಬಂಧಕ್ಕೆ ಕಳಂಕ ತರುವ ಕೃತ್ಯ ಎಸಗಿದ್ದ ಹರ್ಯಾಣದ ಬಾಕ್ಸಿಂಗ್ ತರಬೇತುದಾರ ಸಂದೀಪ್ ಮಲೀಕ್‍ನನ್ನು ಸೋನಿಪತ್‍ನಲ್ಲಿ ಬಂಧಿಸಲಾಗಿದೆ.

    ಬಾಕ್ಸಿಂಗ್ ತರಬೇತುದಾರ ಸಂದೀಪ್ ಮಲೀಕ್ (28) ವಿರುದ್ಧ 19 ವರ್ಷದ ವಿದ್ಯಾರ್ಥಿನಿ ಮಹಿಳಾ ಬಾಕ್ಸರ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ದೆಹಲಿ ಪೊಲೀಸರ ಪ್ರಕಾರ, ಸಂದೀಪ್ ಕೂಡ ಎಲ್ಲಾ ಆರೋಪಗಳನ್ನು ಒಪ್ಪಿಕೊಂಡಿದ್ದಾನೆ.

    ಪಶ್ಚಿಮ ಬಂಗಾಳ ಕ್ಲಾಸಿಕ್ ಬಾಕ್ಸಿಂಗ್ ಚಾಂಪಿಯನ್‍ಶಿಪ್-2020 ಟೂರ್ನಿಗೆ ಹರ್ಯಾಣ ಮಹಿಳಾ ತಂಡದ ಜೊತೆಗೆ ಕೋಚ್ ಸಂದೀಪ್ ಕೂಡ ಹೋಗಿದ್ದ. ಫೆಬ್ರವರಿ 29ರಿಂದ ಮಾರ್ಚ್ 3ರವರೆಗೆ ನಡೆಯಬೇಕಿದ್ದ ಈ ಟೂರ್ನಿಗಾಗಿ ತಂಡವು ಫೆಬ್ರವರಿ 27ರಂದು ನವದೆಹಲಿಯಿಂದ ಡುರೊಂಟೊ ಎಕ್ಸ್‌ಪ್ರೆಸ್‌ನಲ್ಲಿ ಕೋಲ್ಕತ್ತಾಗೆ ಹೊರಟಿತ್ತು. ಈ ಸಮಯದಲ್ಲಿ ರೈಲಿನಲ್ಲಿ ಮತ್ತು ಬಳಿಕ ಕೋಲ್ಕತ್ತಾದಲ್ಲಿ ತರಬೇತುದಾರ ಮಹಿಳಾ ಬಾಕ್ಸರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.

    ಮಹಿಳಾ ಬಾಕ್ಸರ್ ಕೋಲ್ಕತ್ತಾದಿಂದ ಹಿಂದಿರುಗಿದ ಕೂಡಲೇ ನವದೆಹಲಿ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಸೋನಿಪತ್‍ನಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಕೋಚ್ ಕೂಡ ಆರೋಪವನ್ನು ಒಪ್ಪಿಕೊಂಡಿದ್ದಾನೆ.

    ಆರೋಪಿ ಸಂದೀಪ್ ಭಾರತ ಮಟ್ಟದಲ್ಲಿ ಬಾಕ್ಸರ್ ಆಗಿದ್ದ. ಆತನಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಶಿಷ್ಯೆ ಮೇಲೆ ಲೈಂಗಿಕ  ದೌಜನ್ಯ ಎಸೆಗಿತ ಸಂದೀಪ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.