Tag: sandeep

  • ಅನಿಮಲ್ ಶೂಟಿಂಗ್ ಮುಗಿಸಿದ ರಶ್ಮಿಕಾ ಮಂದಣ್ಣ

    ಅನಿಮಲ್ ಶೂಟಿಂಗ್ ಮುಗಿಸಿದ ರಶ್ಮಿಕಾ ಮಂದಣ್ಣ

    ಬಾಲಿವುಡ್‌ನಲ್ಲಿ ಬಾವುಟ ಹಾರಿಸಲು ರಶ್ಮಿಕಾ (Rashmika Mandanna) ಹಲವು ವರ್ಷಗಳಿಂದ ಒದ್ದಾಡುತ್ತಿದ್ದಾರೆ. ಆದರೆ ಅದೃಷ್ಟ ಕೈ ಕೊಟ್ಟಿದೆ. ಅಮಿತಾಬ್ ಬಚ್ಚನ್ ಜತೆ ನಟಿಸಿದ ಗುಡ್ ಬೈ ಮಕಾಡೆ ಮಲಗಿತು. ಮಿಶನ್ ಮಜ್ನು ಕೂಡ ಅದೇ ಹಾದಿ. ನ್ಯಾಷನಲ್ ಕ್ರಶ್‌ಗೆ ಅದ್ಯಾಕೊ ನ್ಯಾಷನಲ್ ಸ್ಟಾರ್ ಪಟ್ಟ ಸಿಗಲಿಲ್ಲ. ಇದೀಗ ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಅನಿಮಲ್ (Animal) ಮುಗಿಸಿದ್ದಾರೆ. ರಣಬೀರ್ ಕಪೂರ್ (Ranbir Kapoor) ನಾಯಕ. ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ಮೇಲೆ ನಿರೀಕ್ಷೆ ಇದೆ. ಅದಕ್ಕೆ ರಶ್ಮಿಕಾ ಕುಲುಕುಲು ನಗುತ್ತಿದ್ದಾರೆ.

    ಅನಿಮಲ್ ಮುಗಿಯಿತು. ಅದ್ಭುತ ಪಾತ್ರ. ಈ ರೂಪದಲ್ಲಿ ನನ್ನನ್ನು ಯಾರೂ ನೋಡಿಲ್ಲ. ನಿರ್ದೇಶಕ ಸಂದೀಪ್ (Sandeep) ವಂಡರ್‌ಫುಲ್. ರಣಬೀರ್ ಬಗ್ಗೆ ಏನು ಹೇಳಬೇಕು ? ಅಮೇಜಿಂಗ್ ಆಕ್ಟರ್. ಅಷ್ಟೇ ಒಳ್ಳೆಯ ಮನಸಿನ ಹುಡುಗ. ಅನಿಮಲ್ ನಿಮ್ಮನ್ನು ಖಂಡಿತ ರಂಜಿಸಲಿದೆ ಎನ್ನುತ್ತಾರೆ ರಶ್ಮಿಕಾ ಮಂದಣ್ಣ. ಇದನ್ನೂ ಓದಿ:ತಮಿಳಿನ ಕ್ಯಾಪ್ಟನ್ ಮಿಲ್ಲರ್ ಶೂಟಿಂಗ್ ಮುಗಿಸಿದ ಶಿವಣ್ಣ

    ಇದೊಂದು ಸಿನಿಮಾದ ಮೇಲೆ ಭರ್ಜರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ ರಶ್ಮಿಕಾ. ದಕ್ಷಿಣ ಭಾರತದ ನಟಿಯರು ಬಾಲಿವುಡ್‌ನಲ್ಲಿ ನಟಿಸುವುದು ಮಾಮೂಲಿ. ಆದರೆ ಅಲ್ಲಿ ಗೆದ್ದು ಬೀಗುವುದು, ಸೆಡ್ಡು ಹೊಡೆದು ಹೈವೇ ನಿರ್ಮಿಸಿಕೊಳ್ಳೋದು ಸುಲಭ ಅಲ್ಲ.

    ರಶ್ಮಿಕಾಗೆ ಈಗಾಗಲೇ ಎರಡು ಸೋಲು ಅದನ್ನು ತೋರಿಸಿದೆ. ಈ ಬಾರಿ ಅನಿಮಲ್ ಕೈ ಹಿಡಿಯಬೇಕು. ಇಲ್ಲದಿದ್ದರೆ ಇನ್ನಷ್ಟು ಸೈಕಲ್ ತುಳಿಯಬೇಕು. ಎಲ್ಲವೂ ಒಂದೇ ಸಲ, ಒಂದೇ ತಟ್ಟೆಯಲ್ಲಿ ಸಿಕ್ಕಿಬಿಟ್ಟರೆ ಏನು ಮಜಾ ಅಲ್ವಾ ? ಕುದ್ದಷ್ಟು ಹಾಲಿಗೆ ರುಚಿ ಜಾಸ್ತಿ.ಕೆನೆ ಕೂಡ.

  • ನಿರ್ಮಾಪಕ ಸಂದೀಪ್ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ ನಟಿ

    ನಿರ್ಮಾಪಕ ಸಂದೀಪ್ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ ನಟಿ

    ಟಿ ಸ್ವಸ್ತಿಕಾ (Swastika) ನಿರ್ಮಾಪಕರೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ (Sexual Harassment) ಆರೋಪ ಮಾಡಿದ್ದಾರೆ. ಕೇವಲ ಆರೋಪ ಮಾತ್ರವಲ್ಲ, ಆತನ ವಿರುದ್ಧ ದೂರು ಕೂಡ ನೀಡಿದ್ದಾರೆ. ಈ ದೂರು ಬೆಂಗಾಲಿ (Bengali) ಚಿತ್ರೋದ್ಯಮದಲ್ಲಿ ಭಾರೀ ಸಂಚಲನ ಮೂಡಿಸಿದೆ. ನಿರ್ಮಾಪಕ ಸಂದೀಪ್ ಸರ್ಕಾರ್ (Sandeep) ಎನ್ನುವವರು ಯಾರು ಎಂಬುದು ಗೊತ್ತಿಲ್ಲದಿದ್ದರೂ, ಬೆದರಿಕೆಯ ಇ ಮೇಲ್ ಮೂಲಕ ಹಿಂಸೆ ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

    ಬೆಂಗಾಲಿ ನಟಿ ಸ್ವಸ್ತಿಕಾ ಇತ್ತೀಚೆಗಷ್ಟೇ ‘ಶಿಬ್ತುರ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ನಿರ್ಮಾಪಕನೇ ಸಂದೀಪ್ ಸರ್ಕಾರ್. ಸಿನಿಮಾ ಮುಗಿಯುವತನಕ ಸಂದೀಪ್ ಒಂದು ಬಾರಿಯೂ ಆ ನಟಿಯೊಟ್ಟಿಗೆ ಮಾತನಾಡಿಲ್ಲವಂತೆ. ಮುಖ ಕೂಡ ನೋಡಿಲ್ಲವಂತೆ. ಸಿನಿಮಾ ಮುಗಿದ ನಂತರ ಇ ಮೇಲ್ ಮೂಲಕ ಲೈಂಗಿಕ ಕಿರುಕುಳಕ್ಕೆ ಮುಂದಾಗಿದ್ದಾರಂತೆ. ಅವರು ಅಮೆರಿಕಾದ ನಿವಾಸಿಯಾಗಿದ್ದು, ಅಲ್ಲಿಂದಲೇ ಹಲವು ಇಮೇಲ್ ಗಳನ್ನು ಬರೆದಿದ್ದಾರಂತೆ. ಇದನ್ನೂ ಓದಿ: ದುಬೈನಲ್ಲಿ ರಾಮ್‌ ಚರಣ್ ಪತ್ನಿ ಉಪಾಸನಾ ಬೇಬಿ ಶವರ್‌ ಸಂಭ್ರಮ

    ಸಿನಿಮಾ ಶೂಟಿಂಗ್ ಮುಗಿದ ನಂತರ ನನಗೆ ಇಮೇಲ್ ಮೂಲಕ ಸಂದೀಪ್ ಸಂಪರ್ಕಿಸಿದರು. ತಾವು ಅಮೆರಿಕಾ ನಿವಾಸಿಯಾಗಿದ್ದು, ತಮ್ಮೊಂದಿಗೆ ಸಹಕರಿಸಿದರೆ ಅಮೆರಿಕಾ ವೀಸಾ ಕೊಡಿಸುವೆ. ಅಲ್ಲದೇ, ತಮಗೆ ಪೊಲೀಸ್ ಅಧಿಕಾರಿಗಳು ಗೊತ್ತು, ಅವರಿಂದ ತೊಂದರೆ ಮಾಡಿಸುತ್ತೇನೆ. ಸಹಕರಿಸಿದರೆ ನಿಮಗೆ ಬೇಕಾದ ಸಹಾಯ ಮಾಡುವೆ ಎಂದು ಸಂದೀಪ್ ಆಮಿಷವೊಡ್ಡಿದ್ದಾನೆ ಎಂದು ನಟಿ ಹೇಳಿಕೊಂಡಿದ್ದಾರೆ.

    ಸ್ವಸ್ತಿಕಾಗೆ ಮಾತ್ರವಲ್ಲ ಅವರ ಮ್ಯಾನೇಜರ್ ಗೂ ಸಂದೀಪ್ ಬೆದರಿಕೆಯ  ಇ ಮೇಲ್ ಕಳುಹಿಸಿದ್ದಾನೆ ಎಂದು ದೆಹಲಿ (Delhi) ಪೊಲೀಸರಿಗೆ ನೀಡಿದ ದೂರಿನಲ್ಲಿ ಸ್ವಸ್ತಿಕಾ ತಿಳಿಸಿದ್ದಾರೆ. ನನ್ನ ಫೋಟೋ ಎಡಿಟ್ ಮಾಡಿ, ಇ ಮೇಲ್ ಹ್ಯಾಕ್ ಮಾಡುವುದಾಗಿಯೂ ಸಂದೀಪ್ ಬೆದರಿಸಿದ್ದಾನಂತೆ. ದೂರು ಸ್ವೀಕರಿಸಿರುವ ಪೊಲೀಸರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಗಾಯಾಳು ಸಂದೀಪ್‍ಗೆ ಉತ್ತಮ ಚಿಕಿತ್ಸೆ ನೀಡುವಂತೆ ಸುಧಾಕರ್ ಸೂಚನೆ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಗಾಯಾಳು ಸಂದೀಪ್‍ಗೆ ಉತ್ತಮ ಚಿಕಿತ್ಸೆ ನೀಡುವಂತೆ ಸುಧಾಕರ್ ಸೂಚನೆ

    ಬೆಂಗಳೂರು: ರಸ್ತೆ ಗುಂಡಿ (Potholes) ತಪ್ಪಿಸೋಕೆ ಹೋಗಿ ಗಂಭೀರ ಗಾಯಗೊಂಡು ಸದ್ಯ ಚೇರತಿಸಿಕೊಳ್ಳುತ್ತಿರುವ ಸಂದೀಪ್ ಅವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಡೀನ್ ಗೆ ಸೂಚನೆ ಕೊಡುವುದಾಗಿ ಆರೋಗ್ಯ ಸಚಿವ ಕೆ. ಸುಧಾಕರ್ (K Sudhakar) ಭರವಸೆ ನೀಡಿದರು.

    ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಸಿಗದ ವಿಚಾರದ ಕುರಿತು ಇಂದು ಪಬ್ಲಿಕ್ ಟಿವಿ ಸುದ್ದಿ ಬಿತ್ತರಿಸಿತ್ತು. ಈ ಬಗ್ಗೆ ಸಚಿವ ಸುಧಾಕರ್ ಪ್ರತಿಕ್ರಿಯಿಸಿ, ಈಗಾಗಲೇ ರೋಗಿಗೆ ವಿಕ್ಟೋರಿಯಾದಲ್ಲಿ ಬೆಡ್ ವ್ಯವಸ್ಥೆ ಮಾಡಲಾಗಿದೆ. ಉತ್ತಮ ಚಿಕಿತ್ಸೆ ನೀಡುವಂತೆ ಡೀನ್ ಗೆ ಸೂಚನೆ ಕೊಡ್ತೀನಿ. ರೋಗಿ ಆದಷ್ಟು ಬೇಗ ಹುಷಾರಾಗಲಿ ಎಂದು ಶುಭ ಹಾರೈಸಿದರು.

    ಕೆಲ ಸರ್ಕಾರಿ ಆಸ್ಪತ್ರೆ (Government Hospital) ಗಳಲ್ಲಿ ಕೆಲ ಅಧಿಕಾರಿಗಳಿಂದ ಸಮಸ್ಯೆ ಆಗುತ್ತಿದೆ. ಆ ವ್ಯವಸ್ಥೆಯನ್ನ ಸರಿ ಮಾಡೋ ಕೆಲಸ ಮಾಡುತ್ತಿದ್ದೇವೆ. ಅತ್ಯುತ್ತಮವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿದೆ. ಇದನ್ನ ಮತ್ತಷ್ಟು ಉತ್ತಮ ಮಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸುಧಾಕರ್ ಪಬ್ಲಿಕ್ ಟಿವಿಗೆ ತಿಳಿಸಿದರು. ಇದನ್ನೂ ಓದಿ: ಗುಂಡಿಗೆ ಬಿದ್ದು ಕೋಮಾಗೆ ಜಾರಿದ್ದ ಸಂದೀಪ್- ಪ್ರಜ್ಞಾವಸ್ಥೆಗೆ ಬಂದ ಸವಾರನಿಗೆ ಸಿಗ್ತಿಲ್ಲ ಆಸ್ಪತ್ರೆ ಬೆಡ್

    ಏನಿದು ಘಟನೆ..?: ಕೆಲವು ದಿನಗಳ ಹಿಂದೆಯಷ್ಟೇ ವಿದ್ಯಾರಣ್ಯಪುರದ ನಿವಾಸಿ ಸಂದೀಪ್ ಫ್ರೆಂಡ್ಸ್ ಗಳ ಜೊತೆ ಕ್ರಿಕೆಟ್ ಆಡಿಕೊಂಡು ಜಾಲಹಳ್ಳಿಯ ಗಂಗಮ್ಮ ರಸ್ತೆ ಮಾರ್ಗವಾಗಿ ಬೈಕ್‍ನಲ್ಲಿ ಬರುತ್ತಿದ್ದರು. ಆದರೆ ಅದೇ ದಾರಿಯಲ್ಲಿ ಯಮವಾಗಿದ್ದ ಗುಂಡಿಯೊಂದನ್ನ ತಪ್ಪಿಸಲು ಹೋದ ಸಂದೀಪ್ (Sandeep), ಕೆಳಗೆ ಬಿದ್ದು ಗಂಭೀರ ಗಾಯವಾಗಿ ಹತ್ತಿರದ ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಾದರು. ಸಂದೀಪ್ ಪತ್ನಿ ಸೀಮಾ ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ವಿರುದ್ಧ ದೂರು ಕೂಡ ನೀಡಿದ್ದರು.

    ಇತ್ತ ಚಿಂತಾಜನಕ ಸ್ಥಿತಿ ತಲುಪಿ ಸಾವು-ಬದುಕು ನಡುವೆ ಹೋರಾಡ್ತಿದ್ದ ಸಂದೀಪ್ ಕೊನೆಗೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಬಿಬಿಎಂಪಿ ಅಧಿಕಾರಿಗಳು ಮಾಡಿರೋ ಬೇಜವಾಬ್ದಾರಿ ಕೆಲಸಕ್ಕೆ ಬೈಕ್ ಸವಾರ ಸಂದೀಪ್ ಆಸ್ಪತ್ರಗೆ ಕಟ್ಟಿದ್ದು ಬರೋಬ್ಬರಿ 14 ಲಕ್ಷ ಹಣ. ಮಧ್ಯಮ ವರ್ಗ ಕುಟುಂಬದವರಾಗಿರೋ ಸಂದೀಪ್ ಕುಟುಂಬ ಈಗ ಹೆಚ್ಚಿನ ಚಿಕಿತ್ಸೆಗೆ ಹಣ ಇಲ್ಲದೆ ಪರದಾಡ್ತಿದ್ದಾರೆ.

    ಸಂದೀಪ್ ಸಾವು ಬದುಕಿನ ನಡುವೆ ಹೋರಾಡಿ ಸಾವನ್ನೇನೋ ಗೆದ್ದಿದ್ದಾರೆ. ಆದರೆ ಸಂದೀಪ್‍ಗಾಗಿ ಪರಿತಪಿಸ್ತಿರುವ ಪತ್ನಿ ಸೀಮಾ ಇನ್ನೂ ಕಂಗಾಲಾಗಿದ್ದಾರೆ. ಸಂದೀಪ್ ಪತ್ನಿ ಸೀಮಾ ಗೋಳಾಡ್ತಾ ಮಾತನಾಡಿ, ಒಂದೆಡೆ ನಿಮ್ಹಾನ್ಸ್‍ಗೆ ಶಿಫ್ಟ್ ಮಾಡೋಣ ಅಂದ್ರೆ ಅಲ್ಲಿ ಬೆಡ್ ಇಲ್ಲ. ಇಎಸ್‍ಐ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ವಂತೆ. ನಮಗೆ ಏನ್ ಮಾಡ್ಬೇಕು ಅಂತ ಗೊತ್ತಾಗ್ತಿಲ್ಲ. ಬಿಬಿಎಂಪಿ ಅಧಿಕಾರಿಗಳು ನಮ್ಮ ಸಹಾಯಕ್ಕೆ ಬರ್ತಿಲ್ಲ ಅಂತ ತಮ್ಮ ನೋವನ್ನ ಪಬ್ಲಿಕ್ ಟಿವಿ ಮುಂದೆ ತೋಡಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಗುಂಡಿಗೆ ಬಿದ್ದು ಕೋಮಾಗೆ ಜಾರಿದ್ದ ಸಂದೀಪ್- ಪ್ರಜ್ಞಾವಸ್ಥೆಗೆ ಬಂದ ಸವಾರನಿಗೆ ಸಿಗ್ತಿಲ್ಲ ಆಸ್ಪತ್ರೆ ಬೆಡ್

    ಗುಂಡಿಗೆ ಬಿದ್ದು ಕೋಮಾಗೆ ಜಾರಿದ್ದ ಸಂದೀಪ್- ಪ್ರಜ್ಞಾವಸ್ಥೆಗೆ ಬಂದ ಸವಾರನಿಗೆ ಸಿಗ್ತಿಲ್ಲ ಆಸ್ಪತ್ರೆ ಬೆಡ್

    ಬೆಂಗಳೂರು: ಸ್ನೇಹಿತರ ಜೊತೆ ಆಟ ಆಡಿಕೊಂಡು ಮನೆಗೆ ವಾಪಸ್ ಆಗುತ್ತಿದ್ದಾಗ ರಸ್ತೆ ಗುಂಡಿ (Potholes) ತಪ್ಪಿಸೋಕ್ಕೆ ಅಂತ ಹೋಗಿ ಗಂಭೀರಗೊಂಡು ವಿದ್ಯಾರಣ್ಯಪುರದ ನಿವಾಸಿ ಸಂದೀಪ್ (Sandeep0 ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ದಾಖಲಾಗಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿ ಗೆದ್ದಿದ್ದು, ಇದೀಗ ಆಸ್ಪತ್ರೆ ಬಿಲ್ ಕಟ್ಟಲಾಗದೆ ಪತ್ನಿ ಹಾಗೂ ಕುಟುಂಬ ಪರದಾಡುತ್ತಿದ್ದಾರೆ.

    ಹೌದು. ಕೆಲವು ದಿನಗಳ ಹಿಂದೆಯಷ್ಟೇ ವಿದ್ಯಾರಣ್ಯಪುರ 9Vidyaranypura) ದ ನಿವಾಸಿ ಸಂದೀಪ್ ಫ್ರೆಂಡ್ಸ್ ಗಳ ಜೊತೆ ಕ್ರಿಕೆಟ್ ಆಡಿಕೊಂಡು ಜಾಲಹಳ್ಳಿಯ ಗಂಗಮ್ಮ ರಸ್ತೆ ಮಾರ್ಗವಾಗಿ ಬೈಕ್‍ನಲ್ಲಿ ಬರುತ್ತಿದ್ದರು. ಆದರೆ ಅದೇ ದಾರಿಯಲ್ಲಿ ಯಮವಾಗಿದ್ದ ಗುಂಡಿಯೊಂದನ್ನ ತಪ್ಪಿಸಲು ಹೋದ ಸಂದೀಪ್, ಕೆಳಗೆ ಬಿದ್ದು ಗಂಭೀರ ಗಾಯವಾಗಿ ಹತ್ತಿರದ ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಸಂದೀಪ್ ಪತ್ನಿ ಸೀಮಾ ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆ (Jalahalli Police Station) ಯಲ್ಲಿ ಬಿಬಿಎಂಪಿ ವಿರುದ್ಧ ದೂರು ಕೂಡ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯಮಸ್ವರೂಪಿ ರಸ್ತೆ ಗುಂಡಿ ಅವಾಂತರ – ಬೈಕ್‌ನಿಂದ ಬಿದ್ದು ವ್ಯಕ್ತಿ ಕೋಮಾ

    ಇತ್ತ ಚಿಂತಾಜನಕ ಸ್ಥಿತಿ ತಲುಪಿ ಸಾವು-ಬದುಕು ನಡುವೆ ಹೋರಾಡ್ತಿದ್ದ ಸಂದೀಪ್ ಕೊನೆಗೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಮ್ಮ ಬಿಬಿಎಂಪಿ (BBMP) ಅಧಿಕಾರಿಗಳು ಮಾಡಿರೋ ಬೇಜವಾಬ್ದಾರಿ ಕೆಲಸಕ್ಕೆ ಬೈಕ್ ಸವಾರ ಸಂದೀಪ್ ಆಸ್ಪತ್ರಗೆ ಕಟ್ಟಿದ್ದು ಬರೋಬ್ಬರಿ 14 ಲಕ್ಷ ಹಣ. ಮಧ್ಯಮ ವರ್ಗ ಕುಟುಂಬದವರಾಗಿರೋ ಸಂದೀಪ್ ಕುಟುಂಬ ಈಗ ಹೆಚ್ಚಿನ ಚಿಕಿತ್ಸೆಗೆ ಹಣ (Money For Treatment) ಇಲ್ಲದೆ ಪರದಾಡ್ತಿದ್ದಾರೆ.

    ಸಂದೀಪ್ ಸಾವು ಬದುಕಿನ ನಡುವೆ ಹೋರಾಡಿ ಸಾವನ್ನೇನೋ ಗೆದ್ದಿದ್ದಾರೆ. ಆದರೆ ಸಂದೀಪ್‍ಗಾಗಿ ಪರಿತಪಿಸ್ತಿರುವ ಪತ್ನಿ ಸೀಮಾ ಇನ್ನೂ ಕಂಗಾಲಾಗಿದ್ದಾರೆ. ಸಂದೀಪ್ ಪತ್ನಿ ಸೀಮಾ ಗೋಳಾಡ್ತಾ ಮಾತನಾಡಿ, ಒಂದೆಡೆ ನಿಮ್ಹಾನ್ಸ್ (Nimhans Hospital) ಗೆ ಶಿಫ್ಟ್ ಮಾಡೋಣ ಅಂದ್ರೆ ಅಲ್ಲಿ ಬೆಡ್ (Hospital Bed) ಇಲ್ಲ. ಇಎಸ್‍ಐ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ವಂತೆ. ನಮಗೆ ಏನ್ ಮಾಡ್ಬೇಕು ಅಂತ ಗೊತ್ತಾಗ್ತಿಲ್ಲ. ಬಿಬಿಎಂಪಿ ಅಧಿಕಾರಿಗಳು ನಮ್ಮ ಸಹಾಯಕ್ಕೆ ಬರ್ತಿಲ್ಲ ಅಂತ ತಮ್ಮ ನೋವನ್ನ ತೋಡಿಕೊಂಡಿದ್ದಾರೆ.

    ಪ್ರತಿಯೊಂದು ಆಸ್ಪತ್ರೆಯಲ್ಲಿ ಕೂಡ ಹಾಸಿಗೆ ಇಲ್ಲ, ತಜ್ಞ ವೈದ್ಯರು ಇಲ್ಲ ಹೀಗಂಥ ಸಬೂಬು ಹೇಳಿ ಕಾಲ ದೂಡುತ್ತಾ ಇದ್ದಾರೆ. ಇತ್ತ ಕೈಯಲ್ಲಿ ಕಾಸು ಇಲ್ಲ. ಅತ್ತ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಕೂಡ ಸಿಗ್ತಾ ಇಲ್ಲ. ಏನೇ ಆಗ್ಲಿ ನಮ್ಮ ಸರ್ಕಾರ ನೊಂದವರ ಪರ ಜನಸಾಮಾನ್ಯರ ಆಶಾಕಿರಣ ಅಂತ ಎದೆ ತಟ್ಟಿ ಹೇಳಿಕೊಳ್ಳುವ ನಮ್ಮ ಜನ ನಾಯಕರು ಇಂಥ ಜನರ ಪಾಲಿಗೆ ಏನ್ ನೆರವಾಗ್ತಾರಾ…? ಸಾವನ್ನು ಗೆದ್ದ ಸಂದೀಪ್ ಜೀವನ ಗೆಲ್ಲೋ ಶಕ್ತಿಯನ್ನು ಸರ್ಕಾರ ಕೊಡುತ್ತಾ ಎಂಬುದನ್ನು ಕಾದು ನೋಡಬೇಕಿದೆ

    Live Tv
    [brid partner=56869869 player=32851 video=960834 autoplay=true]

  • ಎರಡೇ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪೊರಕೆ ಪಕ್ಷ ಇಷ್ಟೊಂದು ಹಾರಾಡುತ್ತಿದೆ: ಸಂದೀಪ್

    ಎರಡೇ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪೊರಕೆ ಪಕ್ಷ ಇಷ್ಟೊಂದು ಹಾರಾಡುತ್ತಿದೆ: ಸಂದೀಪ್

    ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ತಜೀಂದರ್ ಪಾಲ್ ಸಿಂಗ್ ಬಂಧನ ಖಂಡಿಸಿ ಕರ್ನಾಟಕ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ನೇತೃತ್ವದಲ್ಲಿ ಎಂಜಿ ರಸ್ತೆ ಸಮೀಪ ಇರುವ ಆಪ್ ಕಚೇರಿ ಮುಂದೆ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಈ ವೇಳೆ ಮಾತನಾಡಿದ ಸಂದೀಪ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಡಳಿತ ಇಂದಿರಾಗಾಂಧಿಯ ಸರ್ವಾಧಿಕಾರಿ ಧೋರಣೆ, ತುಘಲಕ್ ದರ್ಬಾರ್ ನೆನಪಿಸುವಂತಿದೆ. ದೆಹಲಿಗೆ ಪಂಜಾಬ್ ಪೊಲೀಸ್ ಕಳ್ಸಿ ಅರೆಸ್ಟ್ ಮಾಡಿಸುವ ದುಸ್ಸಾಹಸಕ್ಕೆ ಕೈಹಾಕಿ ಎಎಪಿ ಮುಖಭಂಗ ಅನುಭವಿಸಿದೆ ಎಂದು ಪ್ರತಿಭಟನೆಯಲ್ಲಿ ಫೋಷಣೆಯನ್ನು ಕೂಗಿದರು. ಇದನ್ನೂ ಓದಿ: ಪೊಲೀಸರೇ ಕಳ್ಳರು, ಇನ್ನೂ ಕಳ್ಳತನ ಹೇಗೆ ತಪ್ಪಿಸುತ್ತಾರೆ: ಸಿದ್ದರಾಮಯ್ಯ

    ಎರಡೇ ರಾಜ್ಯದಲ್ಲಿ ಅಧಿಕಾರದಲ್ಲಿರುವ ಈ ಪೊರಕೆ ಪಕ್ಷ ಇಷ್ಟೊಂದು ಹಾರಾಡುತ್ತಿದೆ. ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ, ಕೇಂದ್ರದಲ್ಲಿ ಪೂರ್ಣಪ್ರಮಾಣದಲ್ಲಿ ಅಧಿಕಾರದಲ್ಲಿರುವ ನಮ್ಮ ಪಕ್ಷ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡೋದಿಲ್ಲ. ಎಎಪಿ ಕುತಂತ್ರಿಗಳಿಗೆ ಎಚ್ಚರಿಕೆ ಕೊಡುತ್ತೇನೆ. ಈ ರೀತಿಯಾಗಿ ಹುಚ್ಚಾಟ ಮುಂದುವರೆದರೆ ಬಿಜೆಪಿ ಪಕ್ಷದ 10 ಪಟ್ಟು ಶಾಕ್ ಎಎಪಿಗೆ ಎಲ್ಲ ರೀತಿಯಲ್ಲೂ ಕೊಡುತ್ತೆ ಎಂದರು.

    ತಜೀಂದರ್ ಪಾಲ್ ಸಿಂಗ್ ತಾಯಿ ಹಾಗೂ ತಂದೆಗೆ ಹಲ್ಲೆ ಮಾಡಿರುವ ಪಂಜಾಬ್ ಪೊಲೀಸರ ಕೃತ್ಯ ಖಂಡನೀಯ. ಕೇಜ್ರಿವಾಲ್ ಓರ್ವ ಅರಾಜಕತೆ ಸೃಷ್ಟಿ ಮಾಡುವ ನಾಯಕ. ಪಂಜಾಬ್‍ನಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಇಡೀ ದೇಶ ಗೆದ್ದಂತೆ ಕೇಜ್ರಿವಾಲ್ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಕಾನೂನಿನ ಅರಿವಿಲ್ಲದ ಕೇಜ್ರಿವಾಲ್‍ಗೆ ಪಾಠ ಮಾಡಬೇಕಿದೆ. ನಮ್ಮ ಪಕ್ಷದ ತಜೀಂದರ್ ಪಾಲ್ ಸಿಂಗ್ ಮೇಲಿನ ಈ ದ್ವೇಷಪೂರಿತ ವರ್ತನೆ ಕೇಜ್ರಿವಾಲ್ ಎಂತಹ ಕುತಂತ್ರಿ ಅನ್ನೋದನ್ನ ತೋರಿಸುತ್ತೆ ಎಂದು ಆಕ್ರೋಶ ಹೊರಹಾಕಿದರು.

    ಖಲಿಸ್ತಾನಿಗಳ ಸಪೋರ್ಟರ್ ಈ ಕೇಜ್ರಿವಾಲ್ ಈಗಾಗಲೇ ಬಾಲ ಬಿಚ್ಚೋಕೆ ಶುರು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಜನ ಕೇಜ್ರಿವಾಲ್‍ಗೆ ಪಾಠ ಕಲಿಸ್ತಾರೆ. ಈಗ ಹರಿಯಾಣ ಪೊಲೀಸರು ಪಂಜಾಬ್ ಪೊಲೀಸರನ್ನೇ ಬಂಧಿಸಿದ್ದಾರೆ. ಅವಿವೇಕಿ ಸಿಎಂ ಮಾತು ಕೇಳಿ ಪಂಜಾಬ್ ಪೊಲೀಸರು ಮೂರ್ಖರಾಗಿದ್ದಾರೆ ಎಂದರು. ಇದನ್ನೂ ಓದಿ: ಸಿಎಂ ಪೋಸ್ಟ್‌ಗಾಗಿ 2,500 ಕೋಟಿ ರೂ. ಬೇಡಿಕೆ ವಿಚಾರ- ತನಿಖೆಗೆ ಡಿಕೆಶಿ ಒತ್ತಾಯ

  • ಎಸ್‍ಪಿಗೆ ಪತ್ರ ಬರೆದ ಹತ್ರಾಸ್ ಪ್ರಕರಣದ ಪ್ರಮುಖ ಆರೋಪಿ ಸಂದೀಪ್

    ಎಸ್‍ಪಿಗೆ ಪತ್ರ ಬರೆದ ಹತ್ರಾಸ್ ಪ್ರಕರಣದ ಪ್ರಮುಖ ಆರೋಪಿ ಸಂದೀಪ್

    – ನಮ್ಮಿಬ್ಬರ ಮಧ್ಯೆ ಗೆಳತನವಿತ್ತು
    – ಯುವತಿ ತಾಯಿ, ಸೋದರನ ಮೇಲೆ ಗಂಭೀರ ಆರೋಪ

    ಲಕ್ನೋ: ಹತ್ರಾಸ್ ಪ್ರಕರಣದದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಸಂದೀಪ್ ಎಸ್‍ಪಿಗೆ ಪತ್ರ ಬರೆದಿರುವ ವಿಚಾರ ಬೆಳಕಿಗೆ ಬಂದಿದೆ. ಪತ್ರದಲ್ಲಿ ತಾನು ನಿರ್ದೋಷಿಯಾಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ಸಂದೀಪ್ ಒತ್ತಾಯಿಸಿದ್ದಾನೆ. ಸೆಪ್ಟೆಂಬರ್ 7ರಂದು ಜೈಲಿನಿಂದಲೇ ಹತ್ರಾಸ್ ಎಸ್‍ಪಿಗೆ ಪತ್ರ ಬರೆದಿರುವ ಸಂದೀಪ್, ಬಂಧಿತ ಇನ್ನುಳಿದ ಮೂವರು ಸಹ ನಿರಪರಾಧಿಗಳು. ಆಕೆಯ ತಾಯಿ ಮತ್ತು ಸೋದರನ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದಾನೆ.

    ಪತ್ರದಲ್ಲಿ ಏನಿದೆ?: 19 ವರ್ಷದ ಯುವತಿ ಜೊತೆ ನನ್ನ ಸ್ನೇಹವಿತ್ತು. ಆದ್ರೆ ನಮ್ಮಿಬ್ಬರ ಸ್ನೇಹ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಘಟನೆಯ ದಿನ ನಾನು ಸ್ಥಳದಲ್ಲಿದ್ದೆ. ಆದ್ರೆ ಯುವತಿ ತಾಯಿ ಮತ್ತು ಸೋದರ ನನ್ನನ್ನು ಮನೆಗೆ ಕಳುಹಿಸಿದರು. ನಂತರ ನನ್ನನ್ನ ಆರೋಪಿಯೆಂದು ಬಂಧಿಸಿ ಜೈಲಿಗೆ ಕರೆತರಲಾಯ್ತು. ಯುವತಿಯ ಮೇಲೆ ಆಕೆ ತಾಯಿ ಮತ್ತು ಸೋದರ ಹಲ್ಲೆ ನಡೆಸಿದ್ದರಿಂದ ಅವಳು ಸಾವನ್ನಪ್ಪಿದ್ದಾಳೆ. ನಮ್ಮ ಮೇಲೆ ಸುಳ್ಳು ಕೇಸ್ ದಾಖಲಿಸಿ ಜೈಲಿನಲ್ಲಿರಿಸಲಾಗಿದೆ.

    ನಮ್ಮಿಬ್ಬರ ಮಧ್ಯೆ ಸ್ನೇಹವಿತ್ತು: ಸಾವನ್ನಪ್ಪಿರುವ ಯುವತಿ ಒಳ್ಳೆಯವಳಾಗಿದ್ದರಿಂದ ಆಕೆಯ ಜೊತೆ ನನ್ನ ಸ್ನೇಹವಿತ್ತು. ಇಬ್ಬರು ಫೋನ್ ನಲ್ಲಿ ಮಾತನಾಡುತ್ತಿದ್ದೇವು. ಹೊಲದಲ್ಲಿ ನನ್ನ ಜೊತೆಗಿನ ಸ್ನೇಹದ ವಿಚಾರವಾಗಿ ಆಕೆಯ ಮೇಲೆ ಕುಟುಂಬಸ್ಥರು ಹಲ್ಲೆ ನಡೆಸಿರುವ ವಿಚಾರ ನನಗೆ ತಿಳಿಯಿತು. ಹಲ್ಲೆ ಆರೋಪದಿಂದ ತಪ್ಪಿಸಿಕೊಳ್ಳಲು ಯುವತಿಯ ತಾಯಿ ಮತ್ತು ಸೋದರ ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದರಿಂದ ಸೆಪ್ಟೆಂಬರ್ 20ರಿಂದ ನಾವು ಜೈಲಿನಲ್ಲಿದ್ದೇವೆ. ನಿರಪರಾಧಿಗಳಾದ ನಮಗೆ ನ್ಯಾಯ ನೀಡಬೇಕೆಂದು ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ ಎಂದು ಸಂದೀಪ್ ಪತ್ರದಲ್ಲಿ ಹೇಳಿದ್ದಾನೆ. ಇನ್ನುಳಿದ ಬಂಧಿತ ರವಿ, ರಾಮು ಮತ್ತು ಲವಕುಶ್ ಅವರ ಸಹಿ ಈ ಪತ್ರದಲ್ಲಿದೆ.

    ಎರಡು ಫೋನ್, 104 ಕಾಲ್: ಸಂತ್ರಸ್ತೆಯ ಕುಟುಂಬ ಮತ್ತು ಆರೋಪಿ ಸಂದೀಪ್ ಫೋನ್ ಟ್ರ್ಯಾಕ್ ಮಾಡಿರುವ ಪೊಲೀಸರು, ಆರೋಪಿಯು ಯುವತಿಯೊಂದಿಗೆ ನಿರಂತರವಾಗಿ ದೂರವಾಣಿ ಸಂಪರ್ಕದಲ್ಲಿದ್ದ. ಸಂತ್ರಸ್ತೆಯ ಸಹೋದರನ ಹೆಸರಿನಲ್ಲಿ ಸಂದೀಪ್ ಗೆ ಒಂದೇ ಫೋನ್ ನಂಬರಿನಿಂದ ನಿಯಮಿತವಾಗಿ ಕರೆಗಳು ಬರುತ್ತಿದ್ದವು. ಈ ದೂರವಾಣಿ ಸಂಭಾಷಣೆಗಳು 2019 ಅಕ್ಟೋಬರ್ 13ರಿಂದ ಪ್ರಾರಂಭವಾಗಿವೆ. ಸಂತ್ರಸ್ತೆ ನೆಲೆಸಿದ್ದ ಹಳ್ಳಿ ಬೂಲ್ ಗಾಹಿಯಿಂದ ಕೇವಲ 2 ಕಿ.ಮೀ ದೂರದಲ್ಲಿರುವ ಚಂದಪಾ ಪ್ರದೇಶದಲ್ಲಿರುವ ಸೆಲ್ ಟವರ್ ಗಳಿಂದ ಹೆಚ್ಚಿನ ಕರೆಗಳನ್ನು ಮಾಡಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಇದನ್ನೂ ಓದಿ: ಹತ್ರಾಸ್‌ ಕೇಸ್‌ –  ಸಂಚಲನ ಸೃಷ್ಟಿ‌ಸಿದ್ದ ವೆಬ್‌ಸೈಟ್‌ ದಿಢೀರ್‌ ಬಂದ್

    ಎರಡು ಫೋನ್ ನಂಬರ್ ಗಳ ನಡುವೆ 62 ಔಟ್ ಗೋಯಿಂಗ್ ಮತ್ತು 42 ಇನ್ ಕಮಿಂಗ್ ಕಾಲ್ ಗಳು ಬಂದಿದ್ದು, ಒಟ್ಟು 104 ಬಾರಿ ಸಂಪರ್ಕಸಿರುವುದು ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಹಾಗೂ ಆರೋಪಿ ನಡುವೆ ನಿರಂತರ ಸಂಪರ್ಕ ಇತ್ತು ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿಹತ್ರಾಸ್ ಯುವತಿ ಮೇಲೆ ಅತ್ಯಾಚಾರವಾಗಿಲ್ಲ – ಶಾಕಿಂಗ್ ಹೇಳಿಕೆ ನೀಡಿದ ಐಜಿ

    ಏನಿದು ಪ್ರಕರಣ?: ಸೆಪ್ಟೆಂಬರ್ 14ರಂದು ತನ್ನ ತಾಯಿಯೊಂದಿಗೆ ಹುಲ್ಲು ತರಲೆಂದು ಯುವತಿ ಜಮೀನಿಗೆ ತೆರಳಿದ್ದಳು. ಈ ವೇಳೆ ನಾಲ್ವರು ಕಾಮಪಿಶಾಚಿಗಳು ಆಕೆಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದರು. ಅಲ್ಲದೇ ಆಕೆಯ ನಾಲಿಗೆಯನ್ನು ಕತ್ತರಿಸಿ, ಬೆನ್ನು ಮೂಳೆ, ಕತ್ತಿಗೆ ಗಂಭೀರವಾಗಿ ಹಾನಿ ಮಾಡಿದ್ದರು. ಕಾಮುಕರ ಅಟ್ಟಹಾಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದಂತೆಯೇ ಘಟನೆ ನಡೆದು ಎರಡು ವಾರಗಳ ನಂತರ ಸೆ.29ರಂದು ಮೃತಪಟ್ಟಿದ್ದಳು. ಇದನ್ನೂ ಓದಿ: ಕೊನೆ ಬಾರಿ ಮಗಳ ಮುಖ ತೋರಿಸಲಿಲ್ಲ: ಹತ್ರಾಸ್ ಸಂತ್ರಸ್ತೆ ತಾಯಿ

    ಯುವತಿ ಸಾವನ್ನಪ್ಪಿದ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ದೇಶದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆರೋಪಿಗಳನ್ನು ನೇಣಿಗೇರಿಸುವಂತೆ ದೇಶದ ಮೂಲೆಮೂಲೆಯಿಂದಲೂ ಕೂಗು ಕೇಳಿ ಬಂದಿದೆ. ಈ ಮಧ್ಯೆ ಉತ್ತರಪ್ರದೇಶದ ಪೊಲೀಸರು ಯುವತಿಯ ಕುಟುಂಬಕ್ಕೆ ತಿಳಿಯದಂತೆ ಮೃತದೇಹವನ್ನು ಅಸ್ಪತ್ರೆಯಿಂದ ಶಿಫ್ಟ್ ಮಾಡಿದ್ದಾರೆ ಎಂದು ಸಹೋದರ ಗಂಭೀರವಾಗಿ ಆರೋಪ ಮಾಡಿದ್ದರು. ಯುವತಿಯ ತಂದೆ ಹಾಗೂ ಸಹೋದರ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ನಮಗೆ ಗೊತ್ತಾಗಂದೆ ಪೊಲೀಸರು ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಮೃತದೇಹವನ್ನು ಸಾಗಿಸಿದ್ದಾರೆ ಎಂದು ಕೂಡ ಸಹೋದರ ದೂರಿದ್ದರು. ಇದನ್ನೂ ಓದಿ: ಹತ್ರಾಸ್ ಆರೋಪಿಗಳಿರೋ ಜೈಲಿಗೆ ಬಿಜೆಪಿ ಸಂಸದ ಭೇಟಿ

  • ಭರ್ಜರಿ ಪ್ರದರ್ಶನ ಕಾಣುತ್ತಿದೆ ರತ್ನಮಂಜರಿ!

    ಭರ್ಜರಿ ಪ್ರದರ್ಶನ ಕಾಣುತ್ತಿದೆ ರತ್ನಮಂಜರಿ!

    ಬೆಂಗಳೂರು: ಹೊಸಬರ ತಂಡವೊಂದು ಸೇರಿಕೊಂಡು ಯಾವ ಚಿತ್ರ ಮಾಡಿದರೂ ಅದರಲ್ಲೊಂದು ಹೊಸತನ ಇದ್ದೇ ಇರುತ್ತದೆಂಬುದು ಪ್ರೇಕ್ಷಕರಲ್ಲಿರೋ ನಂಬಿಕೆ. ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾ ತೆರೆ ಕಂಡಿರೋ ಪ್ರಸಿದ್ಧ್ ನಿರ್ದೇಶನದ ರತ್ನಮಂಜರಿ ಕೂಡಾ ಆ ನಂಬಿಕೆಯನ್ನು ನಿಜವಾಗಿಸಿದೆ. ಭರಪೂರವಾಗಿಯೇ ಓಪನಿಂಗ್ ಪಡೆದುಕೊಂಡಿದ್ದ ಈ ಚಿತ್ರವೀಗ ಎಲ್ಲೆಡೆ ಭರ್ಜರಿ ಪ್ರದರ್ಶನ ಪಡೆಯುತ್ತಾ ಮುಂದುವರೆಯುತ್ತಿದೆ.

    ಇದು ಅನಿವಾಸಿ ಕನ್ನಡಿಗರೇ ಸೇರಿ ನಿರ್ಮಾಣ ಮಾಡಿರೋ ಚಿತ್ರ. ಸಂದೀಪ್, ನಟರಾಜ್ ಹಳೇಬೀಡು ಮತ್ತು ಡಾ. ನವೀನ್ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ನಿರ್ಮಾಣಗೊಂಡಿದ್ದರ ಹಿಂದೆ ಹಲವಾರು ವರ್ಷಗಳ ಶ್ರಮ ಮತ್ತು ತಯಾರಿಗಳಿವೆ. ಹೀಗೆ ಕನ್ನಡಕ್ಕೆ ಒಂದೊಳ್ಳೆ ಚಿತ್ರವನ್ನು ಕೊಡಬೇಕೆಂಬ ಆಕಾಂಕ್ಷೆಯಿಂದಲೇ ಅಣಿಗೊಂಡಿದ್ದ ರತ್ನಮಂಜರಿಯನ್ನು ಜನ ಎಂಜಾಯ್ ಮಾಡಲಾರಂಭಿಸಿದ್ದಾರೆ. ಯಾವುದೇ ಚಿತ್ರವಾದರೂ ನೋಡುಗರ ಬಾಯಿಂದ ಬಾಯಿಗೆ ಹರಡೋ ಒಳ್ಳೆ ಮಾತುಗಳೇ ಚಿತ್ರ ಮಂದಿರವನ್ನು ಭರ್ತಿಯಾಗಿಸುತ್ತವೆ. ರತ್ನಮಂಜರಿ ಕೂಡಾ ಅಂಥಾದ್ದೇ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದೆ. ಎಲ್ಲ ದಿಕ್ಕಿನಿಂದಲೂ ಒಳ್ಳೆ ಅಭಿಪ್ರಾಯಗಳೇ ಕೇಳಿ ಬರುತ್ತಿರೋದರಿಂದ ರತ್ನಮಂಜರಿ ಗೆಲುವಿನತ್ತ ದಾಪುಗಾಲಿಡುತ್ತಿದೆ.

    ಈ ಚಿತ್ರದಲ್ಲಿ ಎಲ್ಲ ವರ್ಗದ ಪ್ರೇಕ್ಷಕರನ್ನೂ ಬೆರಗಾಗಿಸುವಂಥಾ, ಇಷ್ಟವಾಗುವಂತಾ ಕಥೆಯಿದೆ. ಒಂದಿನಿತೂ ಬೋರು ಹೊಡೆಸದೇ ನೋಡಿಸಿಕೊಂಡು ಹೋಗುವ ನಾಜೂಕಿನ ನಿರೂಪಣೆಯಿದೆ. ಉತ್ಕೃಷ್ಟ ಮಟ್ಟದ ತಾಂತ್ರಿಕ ಶ್ರೀಮಂತಿಕೆ ಮತ್ತು ಕಣ್ಣಿಗೆ ಹಬ್ಬದಂಥಾ ದೃಶ್ಯವೈಭವಗಳನ್ನು ಖಂಡಿತಾ ಕನ್ನಡದ ಪ್ರೇಕ್ಷಕರು ಮಿಸ್ ಮಾಡಿಕೊಳ್ಳಬಾರದು.

    ಅಮೆರಿಕಾದ ಕಾರ್ಪೋರೇಟ್ ಜಗತ್ತಿನ ಆಸುಪಾಸಿನಲ್ಲಿಯೇ ನಡೆಯುವ ಒಂದು ಕೊಲೆ ಮತ್ತು ಅದು ಕೊಡಗಿನತ್ತ ಹೊರಳಿಕೊಂಡು ಇಲ್ಲಿನ ಪ್ರಾಕೃತಿಕ ಶ್ರೀಮಂತಿಕೆಯ ನಡುವೆ ನಿಗೂಢವಾಗಿ ಸಾಗೋ ಕಥಾ ಹಂದರ ಈ ಚಿತ್ರದ್ದು. ಪ್ರತೀ ಕ್ಷಣವೂ ಮುಂದೇನಾಗುತ್ತದೆ ಎಂಬ ಕುತೂಹಲ ಕಾಯ್ದಿಟ್ಟುಕೊಳ್ಳುತ್ತಲೇ ಕಡೆಯವರೆಗೂ ತುದಿ ಸೀಟಲ್ಲಿ ಕೂತು ನೋಡುವಂತೆ ಮಾಡೋ ರತ್ನಮಂಜರಿ ಖಂಡಿತವಾಗಿಯೂ ಎಲ್ಲರೂ ಒಂದು ಸಲ ನೋಡಲೇಬೇಕಾದ ಚಿತ್ರ.

  • ರತ್ನಮಂಜರಿ ಬಗ್ಗೆ ನಿರ್ಮಾಪಕ ಸಂದೀಪ್ ಹೇಳಿದ ರೋಚಕ ಸ್ಟೋರಿ!

    ರತ್ನಮಂಜರಿ ಬಗ್ಗೆ ನಿರ್ಮಾಪಕ ಸಂದೀಪ್ ಹೇಳಿದ ರೋಚಕ ಸ್ಟೋರಿ!

    ಬೆಂಗಳೂರು: ಈಗ ಪ್ರೇಕ್ಷಕ ವಲಯವನ್ನು ಹಾಡುಗಳಿಂದಲೇ ಆವರಿಸಿಕೊಂಡು ಥೇಟರಿನತ್ತ ಮುಖ ಮಾಡಿರುವ ಚಿತ್ರ ರತ್ನ ಮಂಜರಿ. ಪ್ರಸಿದ್ಧ್ ನಿರ್ದೇಶನ ಮಾಡಿರೋ ಈ ಚಿತ್ರವನ್ನು ಮೂವರು ಸಮಾನ ಮನಸ್ಕ ಎನ್ ಆರ್ ಐಗಳು ಸೇರಿ ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಎಸ್ ಸಂದೀಪ್ ಕುಮಾರ್ ಕೂಡಾ ಒಬ್ಬರು. ಐಟಿ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರೋ ಅವರು ಎರಡು ಸಾಫ್ಟ್‍ವೇರ್ ಕಂಪೆನಿಗಳ ಮಾಲೀಕರು. ಆದರೂ ಕನ್ನಡತನ ಮತ್ತು ಸಿನಿಮಾ ವ್ಯಾಮೋಹವೆಂಬುದು ರತ್ನಮಂಜರಿಯೆಂಬ ವಿಭಿನ್ನ ಚಿತ್ರವೊಂದನ್ನು ನಿರ್ಮಾಣ ಮಾಡಲು ಅವರನ್ನು ಪ್ರೇರೇಪಿಸಿದೆ.

    ಎಸ್ ಸಂದೀಪ್ ವಿದೇಶಗಳಲ್ಲಿ ಎರಡು ಸಾಫ್ಟ್ ವೇರ್ ಕಂಪೆನಿಗಳ ಒಡೆಯ. ಬೇರೆ ದೇಶಗಳಲ್ಲಿ ಬದುಕೋ ಬಹುತೇಕ ಕನ್ನಡಿಗರಂತೆ ಸದಾ ತಾಯ್ನೆಲದ ಧ್ಯಾನ ಹೊಂದಿರೋ ಅವರ ಪಾಲಿಗೆ ಆರಂಭದಿಂದಲೂ ಕೂಡಾ ಸಿನಿಮಾ ಕ್ಷೇತ್ರ ಸೆಳೆದುಕೊಂಡಿತ್ತು. ತಾಯ್ನಾಡಿನ ಜನರೊಂದಿಗೆ ಮುಖಾಮುಖಿಯಾಗಲು ಸಿನಿಮಾ ಪರಿಣಾಮಕಾರಿ ಮಾಧ್ಯಮ ಎಂದೂ ಅವರಿಗನ್ನಿಸಿತ್ತು. ಆದರೆ ಬಹು ಕಾಲದ ನಂತರ ಎನ್ ಆರ್ ಐಗಳ ಕೂಟದಿಂದಲೇ ಅವರ ಕನಸು ನನಸಾಗಿದೆ. ಅದರ ಫಲವಾಗಿಯೇ ಸಂದೀಪ್ ನಿರ್ಮಾಪಕರಲ್ಲೊಬ್ಬರಾಗಿರೋ ರತ್ನಮಂಜರಿ ತೆರೆ ಕಾಣಲು ರೆಡಿಯಾಗಿದೆ.

    ಐಟಿ ವಲಯದಲ್ಲಿಯೇ ಇರುವ ನಟರಾಜ್ ಹಳೇಬೀಡು, ಡಾ. ನವೀನ್ ಜೊತೆ ಸೇರಿ ಸಂದೀಪ್ ಅವರ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇವರೆಲ್ಲರೂ ನಿರ್ದೇಶಕ ಪ್ರಸಿದ್ಧ್ ಅವರ ಸಂಪರ್ಕಕ್ಕೆ ಬಂದ ನಂತರ ರತ್ನಮಂಜರಿ ಎಂಬ ಕಥೆ ಹೊಳಪು ಪಡೆದುಕೊಂಡಿದ್ದೇ ಒಂದು ಸೋಜಿಗ!

    ಅಮೆರಿಕದಲ್ಲಿ ದಶಕಗಳ ಹಿಂದೆ ನಡೆದೊಂದು ಕಥೆಯ ಬೇಸಿನಲ್ಲಿ ರತ್ನಮಂಜರಿ ಚಿತ್ರದ ಕಥೆ ರೂಪುಗೊಂಡಿದೆ. ಅದು ಸಂದೀಪ್ ಸೇರಿದಂತೆ ನಿರ್ಮಾಪಕರೆಲ್ಲರ ಇಷಾರೆಯೊಂದಿಗೇ ರೆಡಿಯಾಗಿರೋ ಕಥೆ. ನಂತರ ಈ ಚಿತ್ರದ ಐವತ್ತರಷ್ಟು ಭಾಗದ ಕಥೆಯನ್ನು ಯುಎಸ್ ನಲ್ಲಿ ಮತ್ತುಳಿದ ಅರ್ಧ ಭಾಗವನ್ನು ಮಡಿಕೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆಯೇ ಇಡೀ ಚಿತ್ರೀಕರಣವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಲಾಗಿದೆ.

    ಪ್ರತಿಯೊಂದು ವಿಚಾರದಲ್ಲಿಯೂ ಕೂಡಾ ಹೊಸತನವೇ ತುಂಬಿಕೊಳ್ಳಬೇಕೆಂಬುದು ಸಂದೀಪ್ ಅವರ ಇರಾದೆಯಾಗಿತ್ತು. ತಮ್ಮಂತೆಯೇ ಕಲೆಯ ಗುಂಗು ಹೊಂದಿದ್ದ ಹೊರನಾಡ ಕನ್ನಡಿಗರಿಗೂ ಅವಕಾಶ ಮಾಡಿಕೊಡಬೇಕೆಂಬ ಆಲೋಚನೆಯೂ ಅವರಲ್ಲಿತ್ತು. ಆದ್ದರಿಂದಲೇ ಈ ಚಿತ್ರದ ಪಾತ್ರಕ್ಕಾಗಿ ವಿದೇಶದಲ್ಲಿ ಆಡಿಷನ್ ಕರೆದಾಗ ಸಾವಿರಕ್ಕೂ ಹೆಚ್ಚು ಆಸಕ್ತರು ಮುಂದೆ ಬಂದಿದ್ದರು. ಕಡೆಗೂ ಅವರಲ್ಲಿ ಹತ್ತು ಮಂದಿಯನ್ನು ಆಯ್ಕೆ ಮಾಡಿ ನಟಿಸಲು ಅವಕಾಶ ಮಾಡಿ ಕೊಡಲಾಗಿದೆ. ಅವರೆಲ್ಲರೂ ವಿದೇಶದಲ್ಲಿಯೇ ರಂಗಭೂಮಿಯ ಸಖ್ಯ ಹೊಂದಿದ್ದವರು.

    ಕಳೆದ ಆಗಸ್ಟ್ ತಿಂಗಳಲ್ಲಿಯೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹಾಡಿದ್ದ ಹಾಡೊಂದು ಅಕ್ಕ ಸಮ್ಮೇಳನದಲ್ಲಿ ಬಿಡುಗಡೆಯಾಗಿತ್ತು. ಈ ಮೂಲಕ ವಿದೇಶದಲ್ಲಿ ಆಡಿಯೋ ಲಾಂಚ್ ಮಾಡಿದ ಮೊದಲ ಚಿತ್ರವೆಂಬ ಹೆಗ್ಗಳಿಕೆಗೂ ರತ್ನಮಂಜರಿ ಪಾತ್ರವಾಗಿದೆ. ಇನ್ನು ಮಡಿಕೇರಿಯ ತಲಕಾವೇರಿಯಲ್ಲಿ ಚಿತ್ರೀಕರಣ ಮಾಡಿದ ಕಡೆಯ ಚಿತ್ರವಾಗಿಯೂ ರತ್ನಮಂಜರಿ ದಾಖಲಾಗಿದೆ. ಯಾಕೆಂದರೆ ಈ ಚಿತ್ರದ ಚಿತ್ರೀಕರಣವಾದ ಎರಡು ದಿನಗಳಲ್ಲಿಯೇ ರಾಜ್ಯ ಸರ್ಕಾರ ಇನ್ನು ಮುಂದೆ ಅಲ್ಲಿ ಯಾವ ಚಿತ್ರೀಕರಣವೂ ನಡೆಸುವಂತಿಲ್ಲ ಎಂಬ ಆದೇಶ ನೀಡಿತ್ತು!

    ಹೀಗೆ ಚಿತ್ರೀಕರಣವೂ ಸೇರಿದಂತೆ ಎಲ್ಲದರಲ್ಲಿಯೂ ಅಚ್ಚರಿಗಳನ್ನು ಬಚ್ಚಿಟ್ಟುಕೊಂಡಿರೋ ಈ ಚಿತ್ರವನ್ನು ಎನ್ ಆರ್ ಐಗಳೇ ಸೇರಿ ನಿರ್ಮಾಣ ಮಾಡಿರೋದರಿಂದ ಆ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಗಳಿವೆ. ಅದಕ್ಕೆ ತಕ್ಕುದಾಗಿಯೇ ಚಿತ್ರ ಮೂಡಿ ಬರಬೇಕೆಂಬ ಕಾರಣದಿಂದ ಸಂದೀಪ್ ಅವರ ಸಾರಥ್ಯದಲ್ಲಿ ತಾಂತ್ರಿಕವಾಗಿಯೂ ಈ ಚಿತ್ರ ಶ್ರೀಮಂತಿಕೆಯಿಂದ ಕೂಡಿದೆ. ವಿದೇಶದಲ್ಲಿಯೇ ಇದರ ಸಿಜಿ ಸೇರಿದಂತೆ ಅನೇಕ ಕಾರ್ಯಗಳು ನಡೆದಿವೆ. ಅದಕ್ಕೆ ಹಾಲಿವುಡ್ ಚಿತ್ರಗಳ ತಂತ್ರಜ್ಞರೇ ಕಾರ್ಯ ನಿರ್ವಹಿಸಿದ್ದಾರೆ. ಆದ್ದರಿಂದಲೇ ರೊಮ್ಯಾಂಟಿಕ್ ಥ್ರಿಲ್ಲರ್ ಕಥಾನಕ ಹೊಂದಿರೋ ರತ್ನಮಂಜರಿ ಹಾಲಿವುಡ್ ಚಿತ್ರಗಳಿಗೇ ಸೆಡ್ಡು ಹೊಡೆಯುವಂತೆ ಮೂಡಿ ಬಂದಿದೆಯಂತೆ.

    ಹೀಗೆ ಸಂದೀಪ್ ಅವರು ಸಾಲು ಸಾಲಾಗಿ ರತ್ನಮಂಜರಿಯ ವಿಶೇಷತೆಗಳನ್ನು ದಾಖಲಿಸುತ್ತಾರೆ. ಬೇರೆ ದೇಶದಲ್ಲಿ ಸಾಫ್ಟ್ ವೇರ್ ಜಗತ್ತಿನಲ್ಲಿ ದಿಗ್ಗಜರಾಗಿ ಗುರುತಿಸಿಕೊಂಡಿದ್ದರೂ ಅವರ ಪಾಲಿಗೆ ಸಿನಿಮಾ ಎಂಬುದು ದೈವೀಕ ಸೆಳೆತ. ಅವರೊಳಗೆ ಲಾಭ ನಷ್ಟದ ವ್ಯಾಪಾರಿ ಮನೋಭಾವ ಮೀರಿದೊಂದು ಸಿನಿಮಾ ಪ್ರೀತಿಯಿದೆ. ಇಂಥಾ ಮನಸ್ಥಿತಿಯಿಂದಲೇ ರೂಪುಗೊಂಡಿರೋ ರತ್ನಮಂಜರಿ ಇದೇ ಮೇ ತಿಂಗಳಲ್ಲಿ ತೆರೆ ಕಾಣಲಿದೆ.

  • ಕೊಳವೆ ಬಾವಿ ದುರಂತ: ರಾಯಚೂರಿನ ಸಂದೀಪ್ ಸಾವನ್ನಪ್ಪಿ ಇಂದಿಗೆ 10 ವರ್ಷ

    ಕೊಳವೆ ಬಾವಿ ದುರಂತ: ರಾಯಚೂರಿನ ಸಂದೀಪ್ ಸಾವನ್ನಪ್ಪಿ ಇಂದಿಗೆ 10 ವರ್ಷ

    ರಾಯಚೂರು: ಇಡೀ ರಾಜ್ಯದ ಜನರೆಲ್ಲಾ `ಕಾವೇರಿ ಬದುಕಿ ಬಾ’ ಅಂತ ಹೇಗೆ ಪ್ರಾರ್ಥನೆ ಮಾಡಿದ್ದಾರೋ, 2007ರ ಏಪ್ರಿಲ್ 24 ರಂದು ಕೂಡ `ಸಂದೀಪ್ ಬದುಕಿ ಬಾ’ ಅಂತ ಪ್ರಾರ್ಥಿಸಿದ್ದರು.

    ಹೌದು. ರಾಯಚೂರಿನ ಮಾನ್ವಿ ತಾಲೂಕಿನ ನೀರಮಾನ್ವಿಯಲ್ಲಿ ಯಮಸ್ಪರೂಪಿಯಾಗಿ ಬಾಯಿ ತೆರೆದ ಕೊಳವೆ ಬಾವಿ ಬಾಲಕ ಸಂದೀಪ್‍ನನ್ನ ಬಲಿ ಪಡೆದಿತ್ತು. ಆ ಘಟನೆ ನಡೆದು ಇಂದಿಗೆ ಬರೊಬ್ಬರಿ ಹತ್ತು ವರ್ಷಗಳೇ ಕಳೆದಿದೆ. ನತದೃಷ್ಠ ಬಾಲಕ ಸಂದೀಪ್ ಈಗ ನೆನಪು ಮಾತ್ರ.

    ಅಂದು ನಡೆದಿದ್ದೇನು?: ಗ್ರಾಮದ ಗೋಪಾಲ ಎಂಬುವವರ ಜಮೀನಿನಲ್ಲಿ ಟಿಲ್ಲರ್ ಹೊಡೆಯುತ್ತಿದ್ದಾಗ, ಆಟವಾಡಲು ಹೋಗಿ ನೀರು ಬಾರದೆ ಬಿಟ್ಟಿದ್ದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ. ಎರಡನೇ ತರಗತಿ ಪಾಸಾಗಿದ್ದ 9 ವರ್ಷದ ಸಂದೀಪ್‍ನ ಸಾವು ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದ ಸಂದೀಪನ ತಂದೆ ನಾಗರಾಜ್ ಹಾಗೂ ತಾಯಿ ಲಕ್ಷ್ಮಿಗೆ ಈ ಘಟನೆಯಿಂದ ಬರಸಿಡಿಲು ಬಡಿದಂತಾಗಿತ್ತು.

    ಅಂದು ಕೊಳವೆ ಬಾವಿಗೆ ಬಿದ್ದ ಸಂದೀಪನನ್ನ ಕಾಪಾಡಲು ಅಗ್ನಿ ಶಾಮಕ ದಳ, ಹಟ್ಟಿ ಚಿನ್ನದ ಗಣಿ ಕಂಪನಿ ರಕ್ಷಣಾ ತಂಡ ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಸತತ ಮೂರು ದಿನಗಳ ಪ್ರಯತ್ನದ ಬಳಿಕ ಏಪ್ರಿಲ್ 26 ರಂದು ಸಂದೀಪನ ಶವವನ್ನ ಹೊರತೆಗೆಯಲಾಗಿತ್ತು. ಸಂದೀಪ್ ಪ್ರಕರಣ ನಡೆದು ಇಂದಿಗೆ ಬರೋಬ್ಬರಿ ಹತ್ತು ವರ್ಷ ಕಳೆದಿದೆ. ಸಂದೀಪನನ್ನ ನೆನೆದು ಈಗಲೂ ಕಣ್ಣಲ್ಲಿ ನೀರನ್ನ ತುಂಬಿಕೊಳ್ಳುವ ಬಾಲಕನ ತಂದೆತಾಯಿಯಾದ ನಾಗರಾಜ್ ಲಕ್ಷ್ಮಿ ದಂಪತಿ ಕಾವೇರಿ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

    ಒಟ್ಟಿನಲ್ಲಿ ಸಂದೀಪನ ದುರಂತ ಸಾವಿನ ಘಟನೆ ನಡೆದು ಹತ್ತು ವರ್ಷ ಕಳೆದರು ತೆರೆದ ಕೊಳವೆ ಬಾವಿಗಳು ಈಗಲೂ ಯಮಸ್ವರೂಪಿಗಳಾಗಿ ಜೀವವಂತವಾಗಿರುವುದು ನಿಜಕ್ಕೂ ದುರಂತವೇ ಸರಿ.

  • ಹಾಸನ ತಲುಪಿದ ಮೃತ ಸಂದೀಪ್ ಪಾರ್ಥೀವ ಶರೀರ: ಇಂದು ಮಧ್ಯಾಹ್ನ ಅಂತ್ಯಕ್ರಿಯೆ

    ಹಾಸನ: ಜಮ್ಮುಕಾಶ್ಮೀರದಲ್ಲಿ ಹಿಮಕುಸಿತಕ್ಕೆ ಸಿಲುಕಿ ವೀರಮರಣವನ್ನಪ್ಪಿದ ಯೋಧ ಸಂದೀಪ್ ಪಾರ್ಥೀವ ಶರೀರ ಮಂಗಳವಾರ ತಡರಾತ್ರಿ ತವರು ಜಿಲ್ಲೆ ಹಾಸನಕ್ಕೆ ಆಗಮಿಸಿದೆ. ತಡರಾತ್ರಿ 2.30ಕ್ಕೆ ವಿಶೇಷ ಅಂಬುಲೆನ್ಸ್‍ನಲ್ಲಿ ಹಾಸನ ಜಿಲ್ಲಾಸ್ಪತ್ರೆಗೆ ಸೈನ್ಯದ ಅಧಿಕಾರಿಗಳ ತಂಡ ಸಂದೀಪ್ ಪಾರ್ಥೀವ ಶರೀರದೊಂದಿಗೆ ಆಗಮಿಸಿದರು.

    ಜಿಲ್ಲಾಡಳಿತದ ವತಿಯಿಂದ ಸಂದೀಪ್ ಪಾರ್ಥಿವ ಶರೀರವನ್ನು ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂದೀಪ್ ಪೋಷಕರು, ಶಾಸಕ ಹೆಚ್ ಎಸ್ ಪ್ರಕಾಶ್, ಅಪರ ಜಿಲ್ಲಾಧಿಕಾರಿ ಹಾಗು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಹಾಜರಿದ್ದರು.

    ರಾತ್ರಿ ಇಡೀ ಸಂದೀಪ್ ಪಾರ್ಥೀವ ಶರೀರವನ್ನು ಹಾಸನ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇಡಲಾಗಿದ್ದು ಜಿಲ್ಲಾಧಿಕಾರಿ ಕಛೇರಿ ಬಳಿ ಇಂದು ಬೆಳಗ್ಗೆ 8 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಬೆಳಗ್ಗೆ 10 ಗಂಟೆಯ ನಂತರ ಪಾರ್ಥೀವ ಶರೀರ ಸ್ವಗ್ರಾಮ ದೇವಿಹಳ್ಳಿಗೆ ಮೆರವಣಿಗೆ ಮುಖಾಂತರ ತೆರಳಲಿದೆ. ನಂತರ ದೇವಾಂಗ ಸಂಪ್ರದಾಯದ ಪ್ರಕಾರ ಅಂತಿಮ ವಿಧಿವಿಧಾನ ನಡೆಸಲಾಗುತ್ತದೆ. ಮಧ್ಯಾಹ್ನದ ವೇಳೆಗೆ ಅಂತ್ಯಕ್ರಿಯೆ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ.

    ಯೋಧ ಸಂದೀಪ್ ಮೃತದೇಹ ಬೆಂಗಳೂರಿಗೆ ಬಂದಿಳಿದಾಗ ಸಚಿವ ಎ.ಮಂಜು ಕೂಡ ಜೊತೆಗೇ ಇದ್ದರು. ಮೃತ ಸಂದೀಪ್ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ 25 ಲಕ್ಷ ರೂ., ಒಂದು ಸೈಟ್ ನೀಡಲಾಗುವುದು ಅಂತಾ ಘೋಷಣೆ ಮಾಡಿದ್ರು.