Tag: Sandalwoood

  • ರಿಲೀಸ್‌ಗೂ ಮುನ್ನವೇ ದಾಖಲೆ ಮೊತ್ತಕ್ಕೆ ಬ್ಯುಸಿನೆಸ್ ಮಾಡಿದ `ವಿಕ್ರಾಂತ್ ರೋಣ’ ಚಿತ್ರ

    ರಿಲೀಸ್‌ಗೂ ಮುನ್ನವೇ ದಾಖಲೆ ಮೊತ್ತಕ್ಕೆ ಬ್ಯುಸಿನೆಸ್ ಮಾಡಿದ `ವಿಕ್ರಾಂತ್ ರೋಣ’ ಚಿತ್ರ

    ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ `ವಿಕ್ರಾಂತ್ ರೋಣ’ ರಿಲೀಸ್‌ಗೆ ರೆಡಿಯಿದೆ. ಬಿಡುಗಡೆಯ ಮುನ್ನವೇ ಸುದೀಪ್ ಸಿನಿಮಾ ದಾಖಲೆ ಮಾಡಿದೆ. ವಿದೇಶದ ವಿತರಕರು `ವಿಕ್ರಾಂತ್ ರೋಣ’ ಚಿತ್ರದ ಹಕ್ಕುಗಳನ್ನ ಭಾರೀ ಮೊತ್ತಕ್ಕೆ ಖರೀದಿ ಮಾಡಿದ್ದಾರೆ.

    ಇದೀಗ ಹೊರ ರಾಜ್ಯ, ಹೊರ ದೇಶ ಎಲ್ಲಾ ಕಡೆ ಕನ್ನಡ ಸಿನಿಮಾಗಳು ಸದ್ದು ಮಾಡುತ್ತಿದೆ. `ಕೆಜಿಎಫ್ 2′ ಭರ್ಜರಿ ಸಕ್ಸಸ್ ನಂತರ ಕನ್ನಡದ `ವಿಕ್ರಾಂತ್ ರೋಣ’ ಸಿನಿಮಾಗೆ ವಿದೇಶದ ವಿತರಕರು ಮಣೆ ಹಾಕಿದ್ದಾರೆ. ಇನ್ನು ರಿಲೀಸ್‌ಗೂ ಮುನ್ನವೇ ಕಿಚ್ಚ ಸುದೀಪ್‌ ನಟನೆಯ ವಿಕ್ರಾಂತ್‌ ರೋಣ ಚಿತ್ರದ ಹಕ್ಕನ್ನು ಭಾರೀ ಮೊತ್ತಕ್ಕೆ ಖರೀದಿಸಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ.

    ವಿದೇಶಿ ಮಾರುಕಟ್ಟೆಯ `ವಿಕ್ರಾಂತ್ ರೋಣ’ ಚಿತ್ರದ ಹಕ್ಕುಗಳನ್ನು `ಒನ್ ಟ್ವೆಂಟಿ 8 ಮೀಡಿಯಾ’ ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ವಿದೇಶಿ ಹಕ್ಕುಗಳು ಬಿಡುಗಡೆಗೂ ಮುನ್ನವೇ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ರಿಲೀಸ್‌ಗೂ ಮುಂಚೆನೇ ಚಿತ್ರ ಈ ಮಟ್ಟಿಗೆ ಹವಾ ಕ್ರಿಯೇಟ್ ಮಾಡಿರೋದು ಚಿತ್ರತಂಡಕ್ಕೆ ಖುಷಿಕೊಟ್ಟಿದೆ.

    ಅನುಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಜುಲೈ 28 ರಂದು ವಿಶ್ವಾದ್ಯಂತ ೩ಡಿ ಅವತರಣಿಕೆಯಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜಾಕ್ ಮಂಜುನಾಥ್ ಅವರು ಶಾಲಿನಿ ಆರ್ಟ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದು, ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಣ ಮಾಡುತ್ತಿದ್ದಾರೆ. ಇದನ್ನೂ ಓದಿ: ಪೂಜಾ ಹೆಗ್ಡೆ ಜತೆ ವಿಜಯ್ ದೇವರಕೊಂಡ ಡ್ಯುಯೆಟ್

    ʻವಿಕ್ರಾಂತ್‌ ರೋಣʼ ಚಿತ್ರದಲ್ಲಿ ಸುದೀಪ್‌ ಎಂದೂ ಮಾಡಿರದ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್‌ ಲುಕ್‌, ಟೀಸರ್‌ನಿಂದ ಗಮನ ಸೆಳೆದಿರೋ ʻವಿಕ್ರಾಂತ್‌ ರೋಣʼ ಚಿತ್ರ ನೋಡಲು ಫ್ಯಾನ್ಸ್‌ ಕಾಯ್ತಿದ್ದಾರೆ.

  • ಪ್ರಣಿತಾ ಸುಭಾಷ್ ಹೊಸ ಬೇಬಿ ಬಂಪ್ ಫೋಟೋಶೂಟ್ ವೈರಲ್

    ಪ್ರಣಿತಾ ಸುಭಾಷ್ ಹೊಸ ಬೇಬಿ ಬಂಪ್ ಫೋಟೋಶೂಟ್ ವೈರಲ್

    `ಪೊರ್ಕಿ’ ಚಿತ್ರದ ಮೂಲಕ ಚಂದನವನಕ್ಕೆ ಪರಿಚಿತರಾದ ನಟಿ ಪ್ರಣಿತಾ ಸುಭಾಷ್, ಬಹುಭಾಷಾ ನಟಿಯಾಗಿ ಸ್ಟಾರ್ ನಟರಿಗೆ ಜೋಡಿಯಾಗಿ ಮಿಂಚಿದರು. ಸಿನಿಮಾ ಜತೆಗೆ ಸಮಾಜಮುಖಿ ಕಾರ್ಯಗಳ ಮೂಲಕ ಜನಸೇವೆ ಮಾಡುತ್ತಾ ರಿಯಲ್ ಲೈಫ್‌ನಲ್ಲೂ ಅಚ್ಚುಮೆಚ್ಚಿನ ನಾಯಕಿಯಾಗಿ ಮನೆಮಾತಾದ್ರು. ಇನ್ನು ಕಳೆದ ವರ್ಷ ಲಾಕ್‌ಡೌನ್ ವೇಳೆಯಲ್ಲಿ ನಟಿ ಪ್ರಣಿತಾ ಹಸೆಮಣೆ ಏರಿದ್ದರು. ಈಗ ಬೇಬಿ ಬಂಪ್ ಫೋಟೋಶೂಟ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿದ್ದಾರೆ.

    ಇತ್ತೀಚೆಗಷ್ಟೇ ಪತಿ ನಿತಿನ್ ಹುಟ್ಟುಹಬ್ಬದ ದಿನದಂದು ತಾವು ಗರ್ಭಿಣಿಯಾಗುತ್ತಿರುವ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದರು. ಜತೆಗೆ ವಿಶೇಷ ಫೋಟೋಶೂಟ್‌ನಿಂದ ತಮ್ಮ ಅಭಿಮಾನಿಗಳಿಗೆ ಪ್ರಣಿತಾ ಗುಡ್‌ನ್ಯೂಸ್ ಕೊಟ್ಟಿದ್ದರು. ಆ ಪೋಸ್ಟ್ನಲ್ಲಿ ಪ್ರಣಿತಾ ಅವರು ಪತಿ ನಿತಿನ್ ರಾಜ್ ಮೇಲೆ ಕುಳಿತುಕೊಂಡು ತಮ್ಮ ಪ್ರೆಗ್ನೆನ್ಸಿ ರಿಪೋರ್ಟ್ ತೋರಿಸಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.ಇದನ್ನೂ ಓದಿ:ಎರಡನೇ ಮದುವೆಗೆ ಸಿದ್ಧರಾಗುತ್ತಿದ್ದಾರಾ ನಾಗಚೈತನ್ಯ?

    ಇದೀಗ ನಟಿ ಪ್ರಣಿತಾ ಮತ್ತೊಂದು ಹೊಸ ಬೇಬಿ ಬಂಪ್ ಫೋಟೋ ಶೇರ್ ಮಾಡಿ, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಪೂಲ್ ಬದಿಯಲ್ಲಿ ಮತ್ತು ಸನ್‌ಡೇಸ್ಸ್ ಎಂಬರ್ಥದಲ್ಲಿ ಬೇಬಿ ಬಂಪ್ ಫೋಟೋಸ್ ಪೋಸ್ಟ್ ಮಾಡಿದ್ದಾರೆ. ಇದೀಗ ಪ್ರಣೀತಾ ನಿತಿನ್ ದಂಪತಿ ಹೊಸದೊಂದು ಜೀವದ ಆಗಮನದ ಖುಷಿಯಲ್ಲಿದ್ದಾರೆ. ನೆಚ್ಚಿನ ನಟಿಯ ಖುಷಿ ನೋಡಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.

  • ವಿದೇಶದಲ್ಲೂ ಕನ್ನಡದ ಕಂಪು ಪಸರಿಸಲು ಹೊರಟ ಚಂದನ್ ಶೆಟ್ಟಿ!

    ವಿದೇಶದಲ್ಲೂ ಕನ್ನಡದ ಕಂಪು ಪಸರಿಸಲು ಹೊರಟ ಚಂದನ್ ಶೆಟ್ಟಿ!

    ಬೆಂಗಳೂರು: ಚಂದನ್ ಶೆಟ್ಟಿ ತಮ್ಮ ರ‍್ಯಾಪ್ ಹಾಡುಗಳ ಮೂಲಕವೇ ಕನ್ನಡದ ಜನತೆಯಿಂದ ಮೆಚ್ಚುಗೆ ಪಡೆದಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ರ‍್ಯಾಪ್ ಸ್ಟಾರ್ ಆಗಿ ಮಿಂಚುತ್ತಿರುವ ಚಂದನ್, ಮೊದಲ ಬಾರಿಗೆ ಹೊರದೇಶದಲ್ಲಿ ಕಾರ್ಯಕ್ರಮವನ್ನು ಮಾಡಲಿದ್ದಾರೆ.

    ಬಿಗ್ ಬಾಸ್-5 ಗೆದ್ದ ನಂತರ ಚಂದನ್ ಶೆಟ್ಟಿ ಕರ್ನಾಟಕದಲ್ಲಿ ಹಲವು ಕಾರ್ಯಕ್ರಮವನ್ನು ಮಾಡಿದ್ದಾರೆ. ಈಗ ಇದೇ ಮೊದಲ ಬಾರಿಗೆ ಚಂದನ್ ಆಸ್ಟ್ರೇಲಿಯಾದಲ್ಲಿ ಲೈವ್ ಕಾರ್ಯಕ್ರಮ ನೀಡುತ್ತಿದ್ದಾರೆ. ಈ ಬಗ್ಗೆ ಸ್ವತಃ ಚಂದನ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಪ್ರೇಕ್ಷಕರಿಗೆ ತಿಳಿಸಿದ್ದಾರೆ.

    ಕರ್ನಾಟಕದಲ್ಲಿ ಶೋ ಮಾಡುತ್ತಿದ್ದ ಚಂದನ್ ಈಗ ಆಸ್ಟ್ರೇಲಿಯಾದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಮಾರ್ಚ್ 16ರಂದು ಸಿಡ್ನಿ, ಮಾರ್ಚ್ 17ರಂದು ಮೆಲ್ಬರ್ನ್ ಹಾಗೂ ಮಾರ್ಚ್ 18ರಂದು ಅಡಿಲೇಡ್ ನಲ್ಲಿ ಕಾರ್ಯಕ್ರಮ ಮಾಡಲಿದ್ದಾರೆ. ಇದನ್ನೂ ಓದಿ: ಕಷ್ಟದಲ್ಲಿದ್ದಾಗ ಯಾರೂ ಇರಲಿಲ್ಲ ಅಂದ್ರು ಚಂದನ್ ಶೆಟ್ಟಿ

    ನಾನು ಮೊದಲ ಬಾರಿಗೆ ನಮ್ಮ ದೇಶ ಬಿಟ್ಟು ಆಸ್ಟ್ರೇಲಿಯಾದಲ್ಲಿ ಕಾರ್ಯಕ್ರಮ ಮಾಡುತ್ತಿರುವುದಕ್ಕೆ ನಾನು ಕಾತುರದಿಂದ ಕಾಯುತ್ತಿದ್ದೇನೆ. ನಿಮ್ಮಲ್ಲರ ಪ್ರೀತಿ ಹಾಗೂ ಆಶೀರ್ವಾದ ನನಗೆ ಬೇಕಿದೆ. ನಿಮ್ಮನ್ನು ಭೇಟಿ ಮಾಡುವುದಕ್ಕೆ ನಾನು ತುಂಬಾ ಖುಷಿಯಾಗಿದ್ದೀನಿ ಎಂದು ಚಂದನ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಮಂಗ್ಳೂರು ಸಮುದ್ರದಲ್ಲಿ ಸ್ನೇಹಿತರ ಜೊತೆ ಸಂಭ್ರಮ: ಜಾಲಿಮೂಡಲ್ಲಿ ಬಿಗ್ ಬಾಸ್ ಚಂದನ್ ಶೆಟ್ಟಿ

    ಚಂದನ್ ಶೆಟ್ಟಿ ಬಿಗ್ ಬಾಸ್ ಶೋ ಗೆದ್ದಿದ್ದು ಮಾತ್ರವಲ್ಲದೆ, ಕನ್ನಡದಲ್ಲಿ ರ‍್ಯಾಪ್ ಹಾಡುಗಳ ಮೂಲಕ ಜಗತ್ತಿನಾದ್ಯಂತ ಜನಪ್ರಿಯರಾಗಿದ್ದಾರೆ. 3ಪೆಗ್ ಹಾಡು ಚಂದನ್ ಗೆ ಬೇರೆ ಲೆವೆಲ್ಲಿನ ವರ್ಚಸ್ಸು ತಂದುಕೊಟ್ಟಿದೆ.