Tag: Sandalwoood

  • ಜು.25 ರಂದು 11ನೇ ದಿನದ ಕಾರ್ಯ – ಗಣ್ಯರಿಂದ ಸರೋಜಾದೇವಿ ಸ್ಮರಣೆ

    ಜು.25 ರಂದು 11ನೇ ದಿನದ ಕಾರ್ಯ – ಗಣ್ಯರಿಂದ ಸರೋಜಾದೇವಿ ಸ್ಮರಣೆ

    ಭಿನಯ ಸರಸ್ವತಿ ಬಿ.ಸರೋಜಾದೇವಿ (B. Saroja Devi) ಇಹಲೋಕ ತ್ಯಜಿಸಿ ದಿನಗಳು ಉರುಳಿದೆ. ಕಳೆದ ಜುಲೈ 14 ರಂದು ಸೋಮವಾರ ಬೆಳಗ್ಗೆ ಈ ಮೇರು ನಟಿ ವಯೋಸಹಜ ಕಾಯಿಲೆಯಿಂದಾಗಿ ನಿಧನ ಹೊಂದಿದ್ದರು. ಇದೀಗ ಅಗಲಿದ ಹಿರಿಯ 11ನೇ ದಿನದ ಕಾರ್ಯಗಳನ್ನು ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದು ಬೆಂಗಳೂರಿನ ಮಲ್ಲೇಶ್ವರಂ ನಿವಾಸದಲ್ಲಿ ಇದೇ ಜುಲೈ 25 ರಂದು ನಡೆಯಲಿದೆ.

    ಪಂಚಭಾಷಾ ತಾರೆ ಬಿ ಸರೋಜಾದೇವಿಯವರು 87ನೇ ವರ್ಷಕ್ಕೆ ಕಣ್ಮುಚ್ಚಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅಸಾಧಾರಣ ನಟಿ ಇವರು. ಇವರ ಪಾರ್ಥೀವಕ್ಕೆ ಸರ್ಕಾರಿ ಗೌರವದೊಂದಿಗೆ ಸ್ವಗ್ರಾಮ ಚನ್ನಪಟ್ಟಣದ ದಶವಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಇದನ್ನೂ ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವಿಜಯ್ ದೇವರಕೊಂಡ

     

    ಚಿತ್ರರಂಗದ ನೂರಾರು ಕಲಾವಿದರು, ರಾಜಕೀಯ ಗಣ್ಯರು ಹಾಗೂ ಅಭಿಮಾನಿಗಳು ಅಂತಿಮ ದರ್ಶನ ಪಡೆದಿದ್ದರು. ಇದೀಗ ಅಗಲಿದ ಹಿರಿಯ ನಟಿಯ 11 ದಿನದ ಕಾರ್ಯಕ್ಕೆ ಮಲ್ಲೇಶ್ವರಂ ನಿವಾಸದಲ್ಲಿ ಸಿದ್ಧತೆಗಳು ನಡೆದಿದ್ದು ಭಾರತೀಯ ಚಿತ್ರರಂಗ ಕಂಡ ಮೊದಲ ಲೇಡಿ ಸೂಪರ್ ಸ್ಟಾರ್‌ನ್ನು ಸ್ಮರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಹುಭಾಷಾ ಚಿತ್ರರಂಗದ ಕಲಾವಿದರು, ತಂತ್ರಜ್ಞರು, ರಾಜಕಾರಣಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ.  ಇದನ್ನೂ ಓದಿ: ಪ್ರೊಡಕ್ಷನ್‌ಗೆ ನನ್ನ ಮಗನೇ ಸ್ಫೂರ್ತಿ ಯಶ್‌ ತಾಯಿ ಮಾತು

  • ಪಹಲ್ಗಾಮ್‌ನಲ್ಲಿ ತುಂಬಾ ಕ್ರೂರವಾಗಿ ಸಾಯಿಸಿದ್ದಾರೆ: ಉಗ್ರರ ದಾಳಿ ಬಗ್ಗೆ ರಾಗಿಣಿ ಕಿಡಿ

    ಪಹಲ್ಗಾಮ್‌ನಲ್ಲಿ ತುಂಬಾ ಕ್ರೂರವಾಗಿ ಸಾಯಿಸಿದ್ದಾರೆ: ಉಗ್ರರ ದಾಳಿ ಬಗ್ಗೆ ರಾಗಿಣಿ ಕಿಡಿ

    ಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terrorist Attack) ನಡೆದ ಉಗ್ರರ ದಾಳಿ ಬಗ್ಗೆ ನಟಿ ರಾಗಿಣಿ ದ್ವಿವೇದಿ (Ragini Dwivedi) ಮೊದಲ ಬಾರಿಗೆ ರಿಯಾಕ್ಟ್ ಮಾಡಿದ್ದಾರೆ. ಕಾಶ್ಮೀರದಲ್ಲಿ ಹೀಗೆ ನಡೆದಿರೋದು ಅತ್ಯಂತ ದುರದೃಷ್ಟಕರ. ಇದಕ್ಕೆ ಸ್ಟ್ರಾಂಗ್ ಆಗಿ ಆ್ಯಕ್ಷನ್ ತೆಗೆದುಕೊಳ್ಳಬೇಕು ಎಂದು ನಟಿ ಮಾತನಾಡಿದ್ದಾರೆ.‌ ಇದನ್ನೂ ಓದಿ:‘ಜೈಲರ್ 2’ ಶೂಟಿಂಗ್ ನಡುವೆ ರಜನಿಕಾಂತ್ ಟೆಂಪಲ್ ರನ್

    ಕಾಶ್ಮೀರದಲ್ಲಿನ ಘಟನೆ ತುಂಬಾ ಬೇಜಾರ್ ಆಗೋ ವಿಷಯ. ತುಂಬಾ ಕ್ರೂರವಾಗಿ ಸಾಯಿಸಿದ್ದಾರೆ. ನೋಡಿದ್ರೆ ತುಂಬಾ ಕೋಪ ಬರುತ್ತದೆ. ಪ್ರತಿಯೊಂದು ಧರ್ಮವನ್ನು ನಾವು ಸಮನಾಗಿ ನೋಡುತ್ತೇವೆ. ಕಾಶ್ಮೀರದಲ್ಲಿ ಹೀಗೆ ನಡೆದಿರೋದು ಅತ್ಯಂತ ದುರದೃಷ್ಟಕರ. ಈ ಘಟನೆ ಬಗ್ಗೆ ಸ್ಟ್ರಾಂಗ್ ಆಗಿ ಹೆಜ್ಜೆ ಇಡಬೇಕು ಎಂಬುದು ನನ್ನ ಅಭಿಪ್ರಾಯ. ಮತ್ತೆ ಹೀಗೆ ಆಗದೇ ಇರುವಂತೆ ನೋಡಿಕೊಳ್ಳಬೇಕು. ನಮ್ಮ ಜಗತ್ತಿನಲ್ಲಿ ಪ್ರೀತಿ ಮತ್ತು ನೆಮ್ಮದಿ ಬೇಕು ಅಷ್ಟೇ ಮಾತನಾಡಿದ್ದಾರೆ. ಇದನ್ನೂ ಓದಿ:ನಾವಿಬ್ಬರೂ ಮೂವರಾಗಿ ಇಂದಿಗೆ 3 ತಿಂಗಳು: ಮಗನ ಫೋಟೋ ಹಂಚಿಕೊಂಡ ಹರಿಪ್ರಿಯಾ ದಂಪತಿ

    ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಬಲಿಯಾಗಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದಾರೆ.

  • ತಮಿಳು ನಟ ಸೂರ್ಯ ಜೊತೆಗಿನ ಫೋಟೋ ಶೇರ್ ಮಾಡಿದ ರಮ್ಯಾ

    ತಮಿಳು ನಟ ಸೂರ್ಯ ಜೊತೆಗಿನ ಫೋಟೋ ಶೇರ್ ಮಾಡಿದ ರಮ್ಯಾ

    ಮೋಹಕತಾರೆ ರಮ್ಯಾ (Ramya) ಸ್ಯಾಂಡಲ್‌ವುಡ್‌ಗೆ (Sandalwood) ಕಂಬ್ಯಾಕ್ ಆಗಿದ್ದಾರೆ. ‘ಉತ್ತರಾಕಾಂಡ’ (Uttarakanda) ಸಿನಿಮಾದಲ್ಲಿ ಮಿಂಚಲು ಸಕಲ ಸಿದ್ಧತೆ ಮಾಡ್ತಿದ್ದಾರೆ. ಹೀಗಿರುವಾಗ ನಟ ಸೂರ್ಯ ಜೊತೆಗಿನ ಫೋಟೋ ಹಂಚಿಕೊಂಡು ಅವರ ಜೊತೆ ನಟಿಸಿದ ಸಿನಿಮಾ ಬಗ್ಗೆ ನಟಿ ಮಾತನಾಡಿದ್ದಾರೆ. 20 ವರ್ಷಗಳ ಸಿನಿ ಜರ್ನಿಯಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನ ಕೊಟ್ಟಿರೋ ರಮ್ಯಾ ಈಗ ಸೂರ್ಯ (Suriya) ಜೊತೆಗಿನ ಚಿತ್ರದ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ.

    ಸದ್ಯ ರಮ್ಯಾ ಫಾರಿನ್‌ನಲ್ಲಿದ್ದಾರೆ. ಹೊಸ ಸಿನಿಮಾಗಾಗಿ ಮತ್ತು ತಮ್ಮ ಫಿಟ್‌ನೆಸ್ ಕಡೆ ಹೆಚ್ಚು ಒತ್ತು ಕೊಡ್ತಿದ್ದಾರೆ. ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಲು ರಮ್ಯಾ ಸಜ್ಜಾಗುತ್ತಿದ್ದಾರೆ. ಡಾಲಿ(Daali) ಜೊತೆ ರೊಮ್ಯಾನ್ಸ್ ಮಾಡಲು ಈಗಾಗಲೇ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ನಟಿ, ನಿರ್ಮಾಪಕಿಯಾಗಿಯೂ ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡಿದ್ದಾರೆ.

    2008ರಲ್ಲಿ ‘ಸೂರ್ಯ ಸನ್ ಆಫ್ ಕೃಷ್ಣಮೂರ್ತಿ’ (Surya S/O Krishnan) ಸಿನಿಮಾ ಸೂಪರ್ ಹಿಟ್ ಆಗಿತ್ತು. ನಟಿ ರಮ್ಯಾ ಅವರಿಗೂ ಒಳ್ಳೆಯ ಜನಪ್ರಿಯತೆ ತಂದುಕೊಟ್ಟಿತ್ತು. ಈ ಸಿನಿಮಾ ಮೂಲಕವೇ ಕಾಲಿವುಡ್ ಸಿನಿಮಾರಂಗದಲ್ಲಿ ದಿವ್ಯಾ ಸ್ಪಂದನ ಹೆಸರಲ್ಲಿ ಮಿಂಚಿದ್ರು. ಈ ಸಿನಿಮಾದಲ್ಲಿ ನಟಿಯ ಪ್ರಿಯಾ ಪಾತ್ರವನ್ನು ಜನರು ಇನ್ನೂ ಮರೆತಿಲ್ಲ. ಇಂದಿಗೂ ಅನೇಕರಿಗೆ ಈ ಸಿನಿಮಾ ಫೇವರಿಟ್ ಆಗಿದೆ. ಇದೀಗ ಸಿನಿಮಾದ ಪಾತ್ರದ ಬಗ್ಗೆ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಹರಿಕಥೆ ಅಲ್ಲ ಗಿರಿ ಕಥೆ’ ಚಿತ್ರದ ನಾಯಕಿ ತಪಸ್ವಿನಿ ಪೂಣಚ್ಚ ಮದುವೆ ಫೋಟೋಸ್

     

    View this post on Instagram

     

    A post shared by Ramya|Divya Spandana (@divyaspandana)

    ಈ ಚಿತ್ರದಲ್ಲಿ ಕೆಲಸ ಮಾಡಲು ಇಷ್ಟವಾಯಿತು. ನಾನು ಈ ಚಿತ್ರದಲ್ಲಿ ಕೆಲಸ ಮಾಡುವಾಗ ನನಗೆ 22 ವರ್ಷ ವಯಸ್ಸಾಗಿತ್ತು ಮತ್ತು ನಾನು ಹಿಂದೆಂದೂ ಅನುಭವಿಸದಂತಹ ತೀವ್ರವಾದ ಭಾವನೆಗಳನ್ನ ಇಲ್ಲಿ ತೋರಿಸಬೇಕಿತ್ತು. ನಾನು ಜೀವನ, ಸಂಬಂಧಗಳ ಬಗ್ಗೆ ತುಂಬಾ ಕಲಿತಿದ್ದೇನೆ ಮತ್ತು ನನಗೆ ಪ್ರಿಯಾ ಯಾವಾಗಲೂ ತಾಳ್ಮೆ ಮತ್ತು ಪ್ರೀತಿಯ ಸಾರಾಂಶವಾಗಿದ್ದಾರೆ. ಆಕೆಯ ಹಾಗೆ  ನಾನು ಪ್ರೀತಿಸಬಹುದೆಂದು ನಾನು ಬಯಸುತ್ತೇನೆ. ಹೇಗಾದರೂ, ಜುಲೈ 21ರಂದು ಈ ರಾಷ್ಟ್ರೀಯ ಪ್ರಶಸ್ತಿ ವಿಜೇತ, ಕಲ್ಟ್-ಕ್ಲಾಸಿಕ್‌ನ ಮ್ಯಾಜಿಕ್ ಅನ್ನು ನೀವು ಆನಂದಿಸಿ ಎಂದು ರಮ್ಯಾ ಬರೆದಿದ್ದಾರೆ. ಒಟ್ನಲ್ಲಿ ಇಂದಿಗೂ ಈ ಸಿನಿಮಾ ಫ್ಯಾನ್ಸ್‌ಗೆ ಕ್ರೇಜ್‌ ಇದೆ. ಅವರ ಮುಂಬರುವ ಚಿತ್ರಕ್ಕಾಗಿ ರಮ್ಯಾ ಫ್ಯಾನ್ಸ್‌ ಕಾಯ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಖ್ಯಾತ್ ಚಿತ್ರ ಪ್ರೊಡಕ್ಷನ್ ಸಾರಥ್ಯದಲ್ಲಿ ಪ್ಯಾನ್‌ ಇಂಡಿಯಾದತ್ತ ಗಣೇಶ್ ಗೋಲ್ಡನ್ ಹೆಜ್ಜೆ

    ವಿಖ್ಯಾತ್ ಚಿತ್ರ ಪ್ರೊಡಕ್ಷನ್ ಸಾರಥ್ಯದಲ್ಲಿ ಪ್ಯಾನ್‌ ಇಂಡಿಯಾದತ್ತ ಗಣೇಶ್ ಗೋಲ್ಡನ್ ಹೆಜ್ಜೆ

    ಸ್ಯಾಂಡಲ್‌ವುಡ್‌ನ (Sandalwood) ಗೋಲ್ಡನ್ ಹೀರೋ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರು ತಮ್ಮ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಟ, ನಿರ್ಮಾಪಕನಾಗಿ ಗೆದ್ದಿರುವ ನಟ ಗಣೇಶ್ ಅವರು ಈಗ ವಿಖ್ಯಾತ ಚಿತ್ರ ಪ್ರೊಡಕ್ಷನ್ ಸಂಸ್ಥೆ ಜೊತೆ ಕೈಜೋಡಿಸಿದ್ದಾರೆ. ಈ ಮೂಲಕ ನಟ ಗಣೇಶ್, ಪ್ಯಾನ್ ಇಂಡಿಯಾದತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.‌ ಇದನ್ನೂ ಓದಿ:ಅಣ್ಣಾಮಲೈಯಾರ್ ದೇವಸ್ಥಾನದಲ್ಲಿ ರಜನಿಕಾಂತ್

    ಇಂದು ಭಾನುವಾರ (ಜುಲೈ 2) ಗೋಲ್ಡನ್ ಸ್ಟಾರ್ ಗಣೇಶ್ ಅವರ ಪಾಲಿಗೆ ಹುಟ್ಟುಹಬ್ಬದ ಸಂಭ್ರಮ. 43ನೇ ವಸಂತಕ್ಕೆ ಕಾಲಿಟ್ಟಿರುವ ಗಣೇಶ್ ಅವರ ಬರ್ತ್ ಡೇ ಗಿಫ್ಟ್ ಎಂಬಂತೆ ವಿಖ್ಯಾತ್ ಚಿತ್ರ ಪ್ರೊಡಕ್ಷನ್ ಕಡೆಯಿಂದೊಂದು ಬಿಗ್ ಅನೌನ್ಸ್‌ಮೆಂಟ್ ಹೊರಬಿದ್ದಿದೆ. ಇದುವರೆಗೂ ವಿಶಿಷ್ಟ ಕಥೆಯನ್ನು ನಿರ್ಮಾಣ ಮಾಡುತ್ತಾ ಗಮನ ಸೆಳೆದಿರುವ ಯುವ ನಿರ್ಮಾಪಕ ವಿಖ್ಯಾತ್, ಗಣೇಶ್ ಅವರಿಗಾಗಿ ಒಂದು ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ.

    ಚೆಲ್ಲಾಟ, ಮುಂಗಾರುಮಳೆ, ಸಿನಿಮಾಗಳ ಮೂಲಕ ಸಿನಿ ಕೆರಿಯರ್ ಶುರು ಮಾಡಿದ ಪ್ರತಿಭಾನ್ವಿತ ನಟ ಗಣೇಶ್ ಇಂದು ಕನ್ನಡಿಗರ ನೆಚ್ಚಿನ ಗೋಲ್ಡನ್ ಸ್ಟಾರ್ ನಟನಾಗಿ ಮಿಂಚ್ತಿದ್ದಾರೆ. ಸದಾ ಭಿನ್ನ ಕಥೆಯಲ್ಲಿ ಕಾಣಿಸಿಕೊಳ್ಳುವ ಗಣೇಶ್ ಅವರು ಈಗ ಪ್ಯಾನ್ ಇಂಡಿಯಾ ಚಿತ್ರಕ್ಕೆ ಓಕೆ ಎಂದಿದ್ದಾರೆ. ಇನ್ನೂ ವಿಶೇಷತೆಗಳ ಬಗ್ಗೆ ಹೇಳೋದಾದರೆ, ಗಣೇಶ್ ಅವರ ವೃತ್ತಿ ಬದುಕಿನಲ್ಲಿ ಮಹತ್ತರವಾಗಿ ದಾಖಲಾಗಬಹುದಾದ 42ನೇ ಚಿತ್ರವಾಗಿದೆ. ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿ ಬರುತ್ತಿರುವ 6ನೇ ಚಿತ್ರ ಇದಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಈ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ತಯಾರಿ ಮಾಡ್ತಿದ್ದಾರೆ. ಇದೀಗ ಸಿನಿಮಾ ಬಗೆಗಿನ ತಯಾರಿಗಳು ಚಾಲ್ತಿಯಲ್ಲಿವೆ. ನಿರ್ದೇಶಕರು, ತಾರಾಗಣ, ತಾಂತ್ರಿಕ ವರ್ಗ, ನಾಯಕಿ ಯಾರು ಎಂಬ ವಿಚಾರಗಳು ಇಷ್ಟರಲ್ಲಿಯೇ ರಿವೀಲ್ ಆಗಲಿದೆ.

    ಸದ್ಯ ಗಣೇಶ್ ನಟನೆಯ 42ನೇ ಸಿನಿಮಾದ ಲುಕ್ ವಿಭಿನ್ನವಾಗಿದ್ದು, ಕೇಸರಿ ಬಣ್ಣದ ಧಿರಿಸಿನಲ್ಲಿ ನಟ ಗಣೇಶ್ ಬ್ಲ್ಯಾಕ್ ಸೈಡ್ ಪೋಸ್ ಖಡಕ್ ಆಗಿದೆ. ‌ಗಣೇಶ್‌ ಅವರ ನಯಾ ಲುಕ್‌ ನೋಡ್ತಿದ್ದಂತೆ ಅಭಿಮಾನಿಗಳಿಗೆ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ತಮ್ಮ ಹುಟ್ಟುಹಬ್ಬದ ದಿನ ಬಿಗ್‌ ನ್ಯೂಸ್‌ ಕೊಟ್ಟಿರುವ ನಟ ಗಣೇಶ್‌ಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕೆರಾಡಿ’ ಹೆಸರಿನಲ್ಲಿ ಹೊಸ ಉದ್ಯಮಕ್ಕೆ ರಿಷಬ್‌ ಶೆಟ್ಟಿ ಎಂಟ್ರಿ

    ‘ಕೆರಾಡಿ’ ಹೆಸರಿನಲ್ಲಿ ಹೊಸ ಉದ್ಯಮಕ್ಕೆ ರಿಷಬ್‌ ಶೆಟ್ಟಿ ಎಂಟ್ರಿ

    ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ’ (Kantara) ಸಿನಿಮಾದ ಸೂಪರ್ ಸಕ್ಸಸ್ ನಂತರ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ತಮ್ಮ ಹೊಸ ಹೆಜ್ಜೆ ಬಗ್ಗೆ ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಕೆರಾಡಿ’ ಹೆಸರಿನಲ್ಲಿ ಹೊಸ ಉದ್ಯಮಕ್ಕೆ ಕೈ ಹಾಕಿದ ರಿಷಬ್‌ ಶೆಟ್ಟಿ.

    ನಟ, ನಿರ್ದೇಶಕ, ನಿರ್ಮಾಪಕನಾಗಿ ಸೈ ಎನಿಸಿಕೊಂಡಿರುವ ರಿಷಬ್ ಶೆಟ್ಟಿ ಅವರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಘೋಷಣೆ ಮಾಡಿದ್ದಾರೆ. ಒಂದು ಸಿನಿಮಾದ ಗೆಲುವಿಗೆ ಅದರ ನಿರ್ಮಾಣದಷ್ಟೇ, ಪ್ರಚಾರದ ಅಗತ್ಯವೂ ಇದೆ. ಕಳೆದ ಕೆಲವು ವರ್ಷಗಳಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಅದನ್ನು ಸೂಕ್ತ ಪ್ರಚಾರದ ಮೂಲಕ ಜನರಿಗೆ ತಲುಪಿಸಿದ ಅನುಭವದೊಂದಿಗೆ ಇಂದು ನಮ್ಮ ತಂಡ ಹೊಸ ಹೆಜ್ಜೆ ಇರಿಸುತ್ತಿದೆ. ‘ಕೆರಾಡಿ ಸ್ಟುಡಿಯೋಸ್’ (Keradi Studios) ಎಂಬ ವೇದಿಕೆಯ ಮೂಲಕ ಚಿತ್ರಗಳ ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಪ್ರಾರಂಭಿಸಿದ್ದೇವೆ. ಇದು ಉತ್ತಮ ಚಿತ್ರಗಳು ಮತ್ತು ಪ್ರೇಕ್ಷಕರ ನಡುವೆ ಸೇತುವೆ ಆಗಬೇಕೆಂಬುದೇ ನಮ್ಮ ಆಶಯ ಎಂದು ರಿಷಬ್ ಪತ್ರ ಬರೆದಿದ್ದಾರೆ. ಇದನ್ನೂ ಓದಿ:ಪೊಲೀಸ್‌ ಅಧಿಕಾರಿ ಜೊತೆ ನಟಿ ಡಿಂಪಲ್‌ ಹಯಾತಿ ಕಿರಿಕ್-‌ ನಟಿಯ ವಿರುದ್ಧ ಬಿತ್ತು ಕೇಸ್

    ಅಂದ ಹಾಗೆ ಕೆರಾಡಿ.. ನಾನು ಹುಟ್ಟಿ ಬೆಳೆದ, ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಊರು. ಎಲ್ಲಕ್ಕಿಂತಲೂ ಹೆಚ್ಚಾಗಿ ನನ್ನೊಳಗೆ ಸಿನಿಮಾದ ಕನಸು ಹುಟ್ಟಿದ್ದು ಇಲ್ಲೇ! ಈ ಪ್ರಯತ್ನವನ್ನು ನನ್ನ ಕೆರಾಡಿಗೆ ಅರ್ಪಿಸಿ, ಚಿತ್ರರಂಗಕ್ಕೆ ನಮ್ಮ ಅಳಿಲು ಸೇವೆಯನ್ನು ಮುಂದುವರೆಸಲಿದ್ದೇವೆ. ನಿಮ್ಮ ಸಹಕಾರವಿರಲಿ’ ಎಂದು ರಿಷಬ್ ಕೋರಿದ್ದಾರೆ.

     

    View this post on Instagram

     

    A post shared by Rishab Shetty (@rishabshettyofficial)

    ರಿಷಬ್ ಶೆಟ್ಟಿ ಅವರು ಬಹುಮುಖ ಪ್ರತಿಭೆಯಾಗಿ ಸಿನಿಮಾ ಕ್ಷೇತ್ರದಲ್ಲಿ ಅವರು ಯಶಸ್ಸು ಕಂಡಿದ್ದಾರೆ. ಈಗ ಅವರು ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಅವರು ಸಿನಿಮಾಗಳ ಪ್ರಚಾರಕ್ಕೆಂದು ಹೊಸ ವೇದಿಕೆ ಕಟ್ಟಿದ್ದಾರೆ. ನೆಚ್ಚಿನ ನಟ ರಿಷಬ್ ಹೊಸ ಕೆಲಸಕ್ಕೆ ಅಭಿಮಾನಿಗಳು ಶುಭಕೋರಿದ್ದಾರೆ. ಕಾಂತಾರ 2 ಸಿನಿಮಾದ ಅಪ್‌ಡೇಟ್‌ಗೆ ಎದುರು ನೋಡ್ತಿದ್ದಾರೆ.

  • ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

    ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

    ಕಿರುತೆರೆಯ ಜನಪ್ರಿಯ ಸೀರಿಯಲ್ ‘ಅಗ್ನಿಸಾಕ್ಷಿ’ (Agnisakshi) ಖ್ಯಾತಿಯ ನಟ ಸಂಪತ್ ಜಯರಾಮ್ (Sampath Jayram) ಇತ್ತೀಚಿಗೆ ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು.  ರಾಜೇಶ್ ಧ್ರುವ (Rajesh Druva) ಅವರು ಸಂಪತ್ ಸಾವಿನ ಬಗ್ಗೆ ಸಂತಾಪ ಸೂಚಿಸಿದ್ದರು. ಈ ಬೆನ್ನಲ್ಲೇ ನಟಿ ವೈಷ್ಣವಿ ಗೌಡ (Vaishnavi Gowda) ಕೂಡ ಸಹನಟನ ಬಗ್ಗೆ ಮಾತನಾಡಿದ್ದಾರೆ.

    ‘ಅಗ್ನಿಸಾಕ್ಷಿ’ ಆರು ವರ್ಷಗಳ ಕಾಲ ಟಿವಿ ಪ್ರೇಕ್ಷಕರಿಗೆ ರಂಜಿಸಿತ್ತು. ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಅವರ ಅಣ್ಣನ (Brother) ಪಾತ್ರದಲ್ಲಿ ಸಂಪತ್ ಜಯರಾಮ್ ನಟಿಸಿದ್ದರು. ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಸಂಪತ್ ಜಯರಾಮ್ ಸಾವಿನ ಬಗ್ಗೆ ನಟಿ ವೈಷ್ಣವಿ ಮಾತನಾಡಿದ್ದಾರೆ.

    ಸಂಪತ್ ಸೆಟ್‌ನಲ್ಲಿ ಯಾವಾಗಲೂ ನಗುತ್ತಿದ್ದರು ಮತ್ತು ಇತರರನ್ನು ನಗಿಸುತ್ತಿದ್ದರು. ಅವರು ಧಾರಾವಾಹಿಯಲ್ಲಿ ನನ್ನ ಸಹೋದರನ ಪಾತ್ರ ನಿರ್ವಹಿಸಿದ್ದರು. ನಮ್ಮಿಬ್ಬರ ಕಾಂಬಿನೇಷನ್ ದಿನಾಲೂ ಇರುತ್ತಿರಲಿಲ್ಲ. ಆದರೆ, ಇದ್ದಾಗೆಲ್ಲ ಅವರು ಖುಷಿಯಿಂದ ಮಾತನಾಡುತ್ತಿದ್ದರು. ಜೀವನದ ಬಗ್ಗೆ ಅವರು ಎಂದಿಗೂ ದೂರಿಲ್ಲ. ಸೆಟ್‌ನಲ್ಲಿ ಅವರು ಯಾವಾಗಲೂ ಬೇಸರದಲ್ಲಿ ಇದ್ದಿದ್ದನ್ನು ನೋಡಿಲ್ಲ ಎಂದು ವೈಷ್ಣವಿ ಗೌಡ ಹೇಳಿದ್ದಾರೆ. ಇದನ್ನೂ ಓದಿ:ಅಗತ್ಯವಿತ್ತು, ಲಿಪ್ ಲಾಕ್ ಮಾಡಿದೆ : ಅಮಲಾ ಪೌಲ್ ಬೋಲ್ಡ್ ಮಾತು

     

    View this post on Instagram

     

    A post shared by Sampath J Ram (@sampath.jram)

    ‘ಅಗ್ನಿಸಾಕ್ಷಿ’ ಕೊನೆಗೊಂಡಾಗಿನಿಂದ ಸಂಪತ್‌ನ ಭೇಟಿ ಆಗಿರಲಿಲ್ಲ. ಅವರು ನನ್ನನ್ನು ಪಾರ್ಟಿ ಮತ್ತು ಮದುವೆಗೆ ಕರೆದಿದ್ದರು. ಆದರೆ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದ ಕಾರಣ ನಾನು ಅಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ನಾನು ಕಾಲ್‌ನಲ್ಲಿ ಮಾತನಾಡಿ ಅವರಿಗೆ ಶುಭಾಶಯ ತಿಳಿಸಿದ್ದೆ. ಸಂಪತ್‌ಗೆ ಮದುವೆಯಾಗಿ ಒಂದು ವರ್ಷವೂ ಆಗಿಲ್ಲ. ನನಗೆ ತಿಳಿದಿರುವ ಪ್ರಕಾರ ಅವರ ಪತ್ನಿ ಐದು ತಿಂಗಳ ಗರ್ಭಿಣಿ. ಹೀಗಿರುವಾಗ ಅವರಿಗೆ ಯಾವ ವಿಚಾರ ಆತ್ಮಹತ್ಯೆಗೆ ಪ್ರೇರೇಪಿಸಿತೋ ಗೊತ್ತಿಲ್ಲ ಎಂದು ಸಹನಟ ಸಾವಿಗೆ ಸಂತಾಪ ಸೂಚಿಸಿದ್ದಾರೆ.

    ಬಿಗ್‌ ಬಾಸ್‌ ಬಳಿಕ ನಟಿ ವೈಷ್ಣವಿ ಗೌಡ ಅವರು ʻಸೀತಾರಾಮʼ ಸೀರಿಯಲ್‌ ಮೂಲಕ ಮತ್ತೆ ಕಿರುತೆರೆಗೆ ಬರುತ್ತಿದ್ದಾರೆ. ನಾಯಕಿಯಾಗಿ ಹೊಸ ಬಗೆಯ ಕಥೆ ಜೊತೆ ಬರುತ್ತಿದ್ದಾರೆ.

  • ಕನ್ನಡಕ್ಕೆ ಮೊದಲ ಆದ್ಯತೆ ಕೊಟ್ರು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

    ಕನ್ನಡಕ್ಕೆ ಮೊದಲ ಆದ್ಯತೆ ಕೊಟ್ರು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

    ನ್ನಡತಿ ರಶ್ಮಿಕಾ ಮಂದಣ್ಣ (Rashmika Mandann) ಬಹುಭಾಷೆಗಳಲ್ಲಿ ನಟಿಸುತ್ತ ಎತ್ತರದ ಸ್ಥಾನದಲ್ಲಿದ್ದಾರೆ. ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುತ್ತ, ಮುನ್ನುಗ್ಗುತ್ತಿದ್ದಾರೆ. ಇನ್ನೂ ಸಂಕ್ರಾಂತಿ ಹಬ್ಬಕ್ಕೆ (Sankranthi Festival) ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ನಟಿ ಸುದ್ದಿಯಲ್ಲಿದ್ದಾರೆ. ಆದರೂ ರಶ್ಮಿಕಾ ಈ ಬಾರಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    `ಕಿರಿಕ್ ಪಾರ್ಟಿ’ ನಟಿ ರಶ್ಮಿಕಾ, ಅವರು ಸಂಕ್ರಾಂತಿ ಹಬ್ಬದ ನಿಮಿತ್ತ ಟ್ವೀಟ್ ಮಾಡಿದ್ದಾರೆ. ಕೆಂಪು ಬಣ್ಣದ ಟಾಪ್ ಧರಿಸಿ, ಸಾಂಪ್ರದಾಯಿಕ ಉಡುಗೆತೊಟ್ಟು ಕೈ ಮುಗಿದಿದ್ದಾರೆ. ಹಣೆಗೆ ಕುಂಕುಮ ಇಟ್ಟುಕೊಂಡಿದ್ದಾರೆ. ಹಲವು ಭಾಷೆಗಳಲ್ಲಿ ರಶ್ಮಿಕಾ ಶುಭಾಶಯ ತಿಳಿಸಿದ್ದಾರೆ. ವಿಶೇಷ ಎಂದರೆ ಅವರು ಮೊದಲು ಕನ್ನಡದಲ್ಲಿ (Kannada) ಬರೆದುಕೊಂಡಿದ್ದಾರೆ. ಸಂಕ್ರಾಂತಿಯ ಶುಭಾಶಯಗಳು ಎಂದು ರಶ್ಮಿಕಾ ಬರೆದಿದ್ದಾರೆ. ಆ ಬಳಿಕ ತಮಿಳು, ಹಿಂದಿ, ತೆಲುಗು, ಮಲಯಾಳಂ ಹಾಗೂ ಇಂಗ್ಲಿಷ್‌ನಲ್ಲಿ ನಟಿ ಶುಭಕೋರಿದ್ದಾರೆ.

    ರಶ್ಮಿಕಾ ಕನ್ನಡದಲ್ಲಿ ಬರೆದುಕೊಂಡ ಬಗ್ಗೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಎಲ್ಲರೂ ನಟಿಗೆ ಮರಳಿ ಶುಭಾಶಯ ತಿಳಿಸಿದ್ದಾರೆ. ಆದರೆ, ಇನ್ನೂ ಕೆಲವರು ಅಸಮಾಧಾನ ತೋರಿದ್ದಾರೆ. ರಶ್ಮಿಕಾ ಅವರೇ ನೀವು ಈ ಮೊದಲು ಮಾಡಿದ್ದನ್ನು ನಾವು ಮರೆಯುವುದಿಲ್ಲ. ಏನೇ ಮಾಡಿದರೂ ನೀವು ನಮಗೆ ಇಷ್ಟವಾಗುವುದಿಲ್ಲ ಎಂದು ಕೆಲವರು ಬರೆದುಕೊಂಡಿದ್ದಾರೆ. ಆದರೆ, ಈ ಟ್ರೋಲ್‌ಗಳ ಬಗ್ಗೆ ರಶ್ಮಿಕಾ ತಲೆಕೆಡಿಸಿಕೊಂಡಿಲ್ಲ. ಯಾರು ಅದೆಷ್ಟೇ ಕಿಡಿಕಾರಿದ್ರು, ತಮ್ಮ ಕೆಲಸಗಳ ಮೂಲಕ ನಟಿ ಸೌಂಡ್ ಮಾಡ್ತಿದ್ದಾರೆ. ಇದನ್ನೂ ಓದಿ: ಕುಟುಂಬದ ಜೊತೆ ಸಂಭ್ರಮದಿಂದ ಸಂಕ್ರಾಂತಿ ಹಬ್ಬ ಆಚರಿಸಿದ ರಾಕಿಂಗ್ ಸ್ಟಾರ್ ಯಶ್ ದಂಪತಿ

    ಸದ್ಯ ರಶ್ಮಿಕಾ `ವಾರಿಸು’ (Varisu) ಸಿನಿಮಾ ಮೂಲಕ ಸದ್ದು ಮಾಡ್ತಿದ್ದಾರೆ. `ಮಿಷನ್ ಮಜ್ನು’ ಚಿತ್ರ ಜ.20ಕ್ಕೆ ಒಟಿಟಿಯಲ್ಲಿ ತೆರೆಗೆ ಅಬ್ಬರಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಶ್ಮಿಕಾ ಕನ್ನಡದ ಹುಡುಗಿ, ಬ್ಯಾನ್ ಯಾಕೆ ಮಾಡಬೇಕು: ಧನಂಜಯ್

    ರಶ್ಮಿಕಾ ಕನ್ನಡದ ಹುಡುಗಿ, ಬ್ಯಾನ್ ಯಾಕೆ ಮಾಡಬೇಕು: ಧನಂಜಯ್

    ನ್ನಡದ ಲಕ್ಕಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಬ್ಯಾನ್ ಬಗ್ಗೆ ನಟರಾಕ್ಷಸ ಡಾಲಿ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ. ರಶ್ಮಿಕಾ ಕನ್ನಡದ ಹುಡುಗಿ, ಯಾಕೆ ಬ್ಯಾನ್ ಮಾಡಬೇಕು ಎಂದು ನಟ ಧನಂಜಯ್ (Actor Dhananjay) ಪ್ರಶ್ನಿಸಿದ್ದಾರೆ.

    ಕಿರಿಕ್ ಬ್ಯೂಟಿ ರಶ್ಮಿಕಾ ಸದ್ಯ ಸೌತ್ ಮತ್ತು ಬಾಲಿವುಡ್‌ನಲ್ಲಿ ಬೆಳಗುತ್ತಿರುವ ನಟಿ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಚೊಚ್ಚಲ ಚಿತ್ರದ ನಿರ್ಮಾಣ ಸಂಸ್ಥೆಯ ಹೆಸರನ್ನ ರಶ್ಮಿಕಾ ಹೇಳಿಲ್ಲ ಎಂದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ರಶ್ಮಿಕಾರನ್ನ ಕನ್ನಡ ಚಿತ್ರರಂಗದಲ್ಲಿ ಬ್ಯಾನ್ ಮಾಡಲೇಬೇಕು ಎಂಬ ಕೂಗು ಕೇಳಿ ಬಂದಿತ್ತು. ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಬ್ಯಾನ್ (Ban) ಎಂಬ ಅಭಿಯಾನ ಕೂಡ ಆಗಿತ್ತು. ಇದೀಗ ಈ ಬಗ್ಗೆ ಸಂದರ್ಶನವೊಂದರಲ್ಲಿ ಡಾಲಿಗೆ (Dali) ಪ್ರಶ್ನೆ ಎದುರಾಗಿದೆ. ಇದನ್ನೂ ಓದಿ: ‘ಪರಿಮಳಾ ಡಿಸೋಜಾ’ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿದ ಸಚಿವ ಮುನಿರತ್ನ

    ಚಿತ್ರರಂಗದಲ್ಲಿ ಎಲ್ಲರಿಗೂ ಅವರದ್ದೇ ಆದ ಬದುಕಿದೆ. ಸಿನಿಮಾರಂಗ ಎಲ್ಲರಿಗೂ ಓಪನ್ ಆಗಿದೆ. ಯಾರು ಯಾರನ್ನು ಇಲ್ಲಿ ಬರಬೇಡಿ ಎಂದು ಹೇಳೋದಕ್ಕೆ ಆಗಲ್ಲ. ಸಣ್ಣ ಪುಟ್ಟ ತಪ್ಪಾಯ್ತು ಅಂದಾಕ್ಷಣ ಮನೆ ಮಕ್ಕಳನ್ನ ಮನೆಯಿಂದ ಹೊರಗೆ ಹಾಕ್ತೀರಾ? ಇಲ್ಲಾವಲ್ಲಾ, ಆ ಜೀವನೂ ಅಷ್ಟೇ ಅವರು ಎಲ್ಲಿದ್ದರೂ ಕೂಡ ಕನ್ನಡದ ಹುಡುಗಿನೇ ಎಂದು ರಶ್ಮಿಕಾ ಪರ ಧನಂಜಯ್ ಖಡಕ್ ಉತ್ತರ ನೀಡಿದ್ದಾರೆ. ಪ್ಯಾನ್‌ ಇಂಡಿಯಾ ಸ್ಟಾರ್‌ ನಟಿಯಾಗಿ ಬೆಳೆದಿರುವ ಬಗ್ಗೆ ಡಾಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇನ್ನೂ ಪ್ಯಾನ್ ಇಂಡಿಯಾ ಸಿನಿಮಾ `ಪುಷ್ಪ’ (Pushpa) ಚಿತ್ರದಲ್ಲಿ ಡಾಲಿ, ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಜೊತೆ ನಟಿಸಿದ್ದರು. ಇದೀಗ `ಪುಷ್ಪ 2’ನಲ್ಲೂ ಡಾಲಿ ಇರಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಾಲ್ಡೀವ್ಸ್‌ನಲ್ಲಿ ತನ್ನ ಹುಡುಗನ ಜೊತೆ ಕಾಣಿಸಿಕೊಂಡ `ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಚಿನ್ನು

    ಮಾಲ್ಡೀವ್ಸ್‌ನಲ್ಲಿ ತನ್ನ ಹುಡುಗನ ಜೊತೆ ಕಾಣಿಸಿಕೊಂಡ `ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಚಿನ್ನು

    ಕಿರುತೆರೆಯಲ್ಲಿ ಲಕ್ಷ್ಮಿ ಬಾರಮ್ಮ ಸೀರಿಯಲ್‌ನ ಚಿನ್ನು ಎಂದೇ ಖ್ಯಾತಿ ಗಳಿಸಿರುವ ರಶ್ಮಿ ಪ್ರಭಾಕರ್ ಇತ್ತೀಚೆಗಷ್ಟೇ ನಿಖಿಲ್ ಭಾರ್ಗವ್ ಜೊತೆ ಹಸೆಮಣೆ ಏರಿದ್ದರು. ಇದೀಗ ಈ ಜೋಡಿ ಮಾಲ್ಡೀವ್ಸ್‌ನಲ್ಲಿ ಸುಂದರ ತಾಣಗಳಿಗೆ ಭೇಟಿ ಕೊಡುತ್ತಾ ಸಖತ್ ಏಂಜಾಯ್ ಮಾಡುತ್ತಿದ್ದಾರೆ. ಸದ್ಯ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಕನ್ನಡದ ಲಕ್ಷ್ಮಿ ಬಾರಮ್ಮ, ಮನಸೆಲ್ಲಾ ನೀನೇ, ಮಹಾಭಾರತ, ದರ್ಪಣ, ಜೀವನ ಚೈತ್ರ, ತಮಿಳಿನ ಅರುಂಧತಿ, ತೆಲುಗಿನ ಪೌರ್ಣಮಿ ಹೀಗೆ ಸಾಕಷ್ಟು ಸೀರಿಯಲ್ ಮೂಲಕ ಮನೆಮಾತಾಗಿರೋ ನಟಿ ರಶ್ಮಿ ಪ್ರಭಾಕರ್ ಇದೀಗ ತಮ್ಮ ಪತಿ ನಿಖಿಲ್ ಭಾರ್ಗವ್ ಜೊತೆ ದಾಂಪತ್ಯ ಜೀವನವನ್ನು ಏಂಜಾಯ್ ಮಾಡುತ್ತಿದ್ದಾರೆ. ಸದ್ಯ ಮಾಲ್ಡೀವ್ಸ್ನ ಸುಂದರ ತಾಣಗಳಿಗೆ ಈ ಜೋಡಿ ಭೇಟಿ ಕೊಟ್ಟಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

    ನಟಿ ರಶ್ಮಿ ಮತ್ತು ನಿಖಿಲ್ ಒಬ್ಬರನೊಬ್ಬರು ಪ್ರೀತಿಸಿ, ಗುರು ಹಿರಿಯರ ಸಮ್ಮುಖದಲ್ಲಿ ಏಪ್ರಿಲ್ 25ರಂದು ಹಸೆಮಣೆ ಏರಿದ್ದರು. ನಿಖಿಲ್ ಭಾರ್ಗವ್ ಜಾಹಿರಾತು ಕಂಪನಿಯೊಮದರಲ್ಲಿ ಕೆಲಸ ಮಾಡುತ್ತಿದ್ದಾರೆ. ರಶ್ಮಿ ಮದುವೆಗೆ ಅನೇಕ ಕಿರುತೆರೆ ಕಲಾವಿದರು ಬಂದು ಶುಭ ಹಾರೈಸಿದ್ದರು. ಸದ್ಯ ಈ ನವಜೋಡಿ ಹನಿಮೂನ್‌ಗಾಗಿ ಮಾಲ್ಡೀವ್ಸ್ಗೆ ಹಾರಿದ್ದಾರೆ. ತಮ್ಮ ದಾಂಪತ್ಯ ಜೀವನವನ್ನು ಸುಂದರ ತಾಣಗಳಿಗೆ ಭೇಟಿ ಕೊಡುತ್ತಾ ಏಂಜಾಯ್ ಮಾಡುತ್ತಿದ್ದಾರೆ. ಸದ್ಯ ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

  • ಆರ್‌ಆರ್‌ಆರ್ ಅಲ್ಲ, ಕೆಜಿಎಫ್ 2 ಸಿನಿಮಾ ನನ್ನ ಆಯ್ಕೆ ಎಂದ ಕಿಚ್ಚ ಸುದೀಪ್

    ಆರ್‌ಆರ್‌ಆರ್ ಅಲ್ಲ, ಕೆಜಿಎಫ್ 2 ಸಿನಿಮಾ ನನ್ನ ಆಯ್ಕೆ ಎಂದ ಕಿಚ್ಚ ಸುದೀಪ್

    ಸಿನಿಮಾ ರಂಗದ ಇತಿಹಾಸದಲ್ಲೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಟಾಪ್ ಚಿತ್ರಗಳಲ್ಲಿ `ಕೆಜಿಎಫ್ 2′ ಸಿನಿಮಾ ಕೂಡ ಸ್ಥಾನ ಗಿಟ್ಟಿಸಿಕೊಂಡಿದೆ. ಒಟ್ಟು 1227 ಕೋಟಿ ಗಳಿಕೆ ಮಾಡಿದ್ದು, ಹಿಂದಿಯಲ್ಲಿ 430ಕ್ಕೂ ಅಧಿಕ ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ಚಿತ್ರದ ಬಗ್ಗೆ ಹಲವು ಸ್ಟಾರ್‌ಗಳು ಪ್ರತಿಕ್ರಿಯೆ ನೀಡಿದ್ದರು. ಈಗ ಕಿಚ್ಚ ಸುದೀಪ್ ಕೂಡ ಈ ಚಿತ್ರದ ಕುರಿತು ಮಾತನಾಡಿದ್ದಾರೆ.

    ಈ ಹಿಂದೆ ಕೆಲ ಕಿಡಿಗೇಡಿಗಳು ಸುದೀಪ್ ಮಾತನಾಡಿದ್ದ ವಿಡಿಯೋವೊಂದು ಹರಿಬಿಟ್ಟು ತಂದಿಟ್ಟು ತಮಾಷೆ ನೋಡಿದ್ದರು. `ಕೆಜಿಎಫ್ 2′ ಚಿತ್ರದ ವಿರುದ್ಧ ಸುದೀಪ್ ಕಿಡಿಕರ‍್ತಿದ್ದಾರೆ ಅನ್ನೋ ಹಾಗೇ ಸುದ್ದಿ ಹಬ್ಬಿಸಿದ್ದರು. ಸುದೀಪ್ ನೀಡಿರೋ ಉತ್ತರ ಈಗ ಎಲ್ಲಾ ಗಾಸಿಪ್‌ ತೆರೆ ಎಳೆದಂತೆ ಆಗಿದೆ.

    ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ನೀಡಿದ ಸಂದರ್ಶನವೊಂದರಲ್ಲಿ ರ‍್ಯಾಪಿಡ್ ಫೈರ್ ಪ್ರಶ್ನೆಗಳಿಗೆ ಉತ್ತರಿಸಿದ್ದು, ಈ ವೇಳೆ ನನಗೆ ಕೆಜಿಎಫ್ ಸಿನಿಮಾ ಎಂದರೆ ಇಷ್ಟ ಅಂತಾ ಮಾತನಾಡಿದ್ದಾರೆ. ನಿರೂಪಕ ಆರ್‌ಆರ್‌ಆರ್ ಮತ್ತು ಕೆಜಿಎಫ್ ಚಿತ್ರದಲ್ಲಿ ಒಂದನ್ನು ಆಯ್ಕೆ ಮಾಡಿ ಅಂತಾ ಹೇಳಿದಾಗ ಥಟ್ ಅಂತ ಕೆಜಿಎಫ್ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಮಿಳು ಖ್ಯಾತ ನಟ ಸಿಂಬು ಮನೆಮುಂದೆ ಹೈಡ್ರಾಮಾ, ಸೀರಿಯಲ್ ನಟಿ ಧರಣಿ

    ಈ ವೇಳೆ ಬೇರೆ ಪ್ರಶ್ನೆಗಳಿಗೂ ಉತ್ತರಿಸಿರುವ ಕಿಚ್ಚ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ‌ ಆಯ್ಕೆ ಮಾಡಿ ಎಂದಾಗ ವಿರಾಟ್‌ನ ಆಯ್ಕೆ ಮಾಡಿದ್ದಾರೆ. ಅಜಯ್ ದೇವಗನ್ ಮತ್ತು ಸಲ್ಮಾನ್ ಖಾನ್ ಎಂದಾಗ ಸಲ್ಮಾನ್ ಖಾನ್‌ನ ಆಯ್ಕೆ ಮಾಡಿದ್ರು. ಟೆಸ್ಟ್ ಮತ್ತು ಟಿ20 ಅಲ್ಲಿ ಟಿ20 ಇಷ್ಟ ಅಂದ್ರು. ಬಳಿಕ ಆರ್‌ಆರ್‌ಆರ್ ಮತ್ತು ಕೆಜಿಎಫ್ ಚಿತ್ರದಲ್ಲಿ ಒಂದನ್ನು ಆಯ್ಕೆ ಮಾಡಿ ಅಂತಾ ಹೇಳಿದಾಗ ಥಟ್ ಅಂತ ಕೆಜಿಎಫ್ ಎಂದು ಹೇಳಿದ್ದಾರೆ. ಒಟ್ನಲ್ಲಿ `ಕೆಜಿಎಫ್’ ಚಿತ್ರಕ್ಕೆ ನನ್ನ ಸಹಮತವಿದೆ ಕೆಜಿಎಫ್ ಚಿತ್ರ ಇಷ್ಟ ಅಂತಾ ಹೇಳೋದರ ಮೂಲಕ ಎಲ್ಲಾ ಗಾಸಿಪ್‌ಗಳಿಗೂ ಸುದೀಪ್ ಫುಲ್ ಸ್ಟಾಪ್ ಇಟ್ಟಿದ್ದಾರೆ.