ಅಲ್ಲು ಇಲ್ಲು ಎಲ್ಲೆಲ್ಲೂ ರಮ್ಯಾ (Ramya ) ಮಿಂಚ್ತಿದ್ದಾರೆ. ಅಂದವಾದ ಹೂವಿನ (Flower) ಜೊತೆ ಚಂದವಾದ ಹೀರೋಯಿನ್‌ನ ನೋಡಿದ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಹೂವು ಅರಳಿದೆ ರಮ್ಯಾ ಮೊಗದಲ್ಲಿ ಮಂದಹಾಸ ಮೂಡಿದೆ ಜೊತೆಗೆ ಈ ಚೆಲುವೆ ಪೋಣಿಸಿದ ಸಾಲುಗಳು (Poem) ಸಖತ್ ಸೌಂಡ್ ಮಾಡ್ತಿದೆ.
ಮೋಹಕತಾರೆಯ ಹೊಸ ಅಪ್‌ಡೇಟ್ ನೊಡಿಕೊಂಡು ರಮ್ಯಾ ಬರೆದಿರುವ ಕವಿತೆಯ ಸಾರವನ್ನ ತಿಳಿದುಕೊಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸುರಲೋಕದ ಸುಂದರಿಯನ್ನ ಯಾರೂ ನೋಡಿಲ್ಲ ಅವರು ಕಾಣಿಸ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಸ್ಯಾಂಡಲ್‌ವುಡ್ ಸಿನಿಮಾ ಅಭಿಮಾನಿಗಳಿಗೆ ಮೋಹಕತಾರೆ ರಮ್ಯಾ ದೇವಲೋಕದ ಸುಂದರಿಯಂತೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ ಕೊಡ್ತಿರ್ತಾರೆ.
ಸದ್ಯ ರಮ್ಯಾ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡ್ತಿದ್ದಾರೆ. ಈ ಕ್ಯೂಟ್ ಫೋಟೋಸ್ ನೋಡಿ ರಮ್ಯಾ ಅಭಿಮಾನಿಗಳು ಲೈಕ್ಸ್, ಕಾಮೆಂಟ್‌ಗಳ ಸುರಿಮಳೆ ಸುರಿಸ್ತಿದ್ದಾರೆ. ಫೋಟೋದಲ್ಲಿ ನಗ್ತಿರುವ ರಮ್ಯಾ ಮಂದಹಾಸವನ್ನ ಮನದಲ್ಲಿ ತುಂಬಿಕೊಳ್ತಿದ್ದಾರೆ ಈಕೆಯ ಅಭಿಮಾನಿಗಳು.
ರಮ್ಯಾ ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಗುಲಾಬಿ ಹೂವುಗಳ ಮುಂದೆ ನಿಂತು ಮುಗುಳು ನಗೆ ಕೊಟ್ಟಿದ್ದಾರೆ. ಈ ಸುಂದರಿಯ ಸ್ಮೈಲ್ ನೋಡಿ ಹೂವುಗಳು ಕೂಡ ಖುಷಿ ಪಟ್ಟಿದೆ ಅನ್ನೊದು ದೂರದಿಂದ ಬಂದ ಸಮಾಚಾರ. ಅಂದವಾದ ಫೋಟೋಗಳ ಜೊತೆ ಚಂದವಾದ ಸಾಲುಗಳನ್ನ ಕೂಡ ಪೋಣಿಸಿದ್ದಾರೆ ಮೋಹಕತಾರೆ.
ನಿರ್ಮಾಪಕಿಯಾಗಿ ಹೊಸ ಅಧ್ಯಾಯ ಶುರು ಮಾಡಿರುವ ರಮ್ಯಾ ನಟಿಯಾಗಿ ಕೂಡ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಶೂಟಿಂಗ್ ಶುರು ಮಾಡುವ ಮೊದಲು ಒಂದು ವೆಕೇಷನ್‌ಗೆ ಹೋಗಿದ್ದಾರೆ ಅನ್ನೊದು ಮೂಲಗಳ ಮಾಹಿತಿ. ಹೂವು ಅಂದ… ರಮ್ಯಾ ನಗು ಚೆಂದ… ನಮ್ಗು ನಿಮ್ಗು ಇರಲಿ ಜನುಮ ಜನುಮಕ್ಕು ಅನುಬಂಧ ಅಂತಿದ್ದಾರೆ ಅಭಿಮಾನಿಗಳು.





ಸಾಕಷ್ಟು ವರ್ಷಗಳ ನಂತರ ರಮ್ಯಾ ಮತ್ತೆ ಬಣ್ಣ ಹಚ್ತಿದ್ದಾರೆ. ಈ ಗುಡ್ ನ್ಯೂಸ್ ಮಧ್ಯೆ ತಮ್ಮ ಮದುವೆಯ ಬಗ್ಗೆ ಕೂಡ ನಟಿ ಮಾತನಾಡಿದ್ದಾರೆ. ಇತ್ತೀಚೆಗೆ ಬೆಂಗಳೂರು ಕಾಲೇಜುವೊಂದರಲ್ಲಿ ರಮ್ಯಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ನೆಚ್ಚಿನ ನಟಿ ರಮ್ಯಾಗೆ ಸಾಕಷ್ಟು ಪ್ರಶ್ನೆಗಳನ್ನ ಕೇಳಿದ್ದಾರೆ.








ಗಾಂಧಿನಗರದ ಅಂಗಳದಲ್ಲಿ ಹೊಸದೊಂದು ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ. ಸ್ಯಾಂಡಲ್‌ವುಡ್ ಪದ್ಮಾವತಿ ಎಂಟ್ರಿಗೆ ಕೌಂಟ್‌ಡೌನ್ ಶುರುವಾಗಿದೆ. ರಮ್ಯಾ ರೀ ಎಂಟ್ರಿಗೆ ಕಾಯ್ತಿರುವ ಅಭಿಮಾನಿಗಳಿಗೆ ನಿಜಕ್ಕೂ ಇದು ಖುಷಿ ಕೊಡುವ ಸುದ್ದಿ. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ ರಾಜ್ ಬಿ ಶೆಟ್ಟಿ ನಿರ್ದೇಶದ ಸಿನಿಮಾಗೆ ರಮ್ಯಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:
ಇತ್ತೀಚೆಗಷ್ಟೇ ರಮ್ಯಾ ಮತ್ತು ರಾಜ್ ಬಿ ಶೆಟ್ಟಿ ಭೇಟಿಯಾಗಿದ್ದರು. ಈ ವೇಳೆ ಕಥೆ ಕೇಳಿರುವ ರಮ್ಯಾ, ರಾಜ್ ಬಿ ಶೆಟ್ಟಿ ಕಥೆಗೆ ಓಕೆ ಅಂದಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರವನ್ನ ರಮ್ಯಾ ಅವರೇ ನಿರ್ಮಾಣ ಮಾಡಲಿದ್ದಾರಂತೆ. ಕಥೆ ಕೇಳಿ ಥ್ರೀಲ್ ಆಗಿರುವ ರಮ್ಯಾ, ಸಿನಿಮಾ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಅಧಿಕೃತ ಮಾಹಿತಿ ಹೊರ ಬೀಳುವವರೆಗೂ ಕಾದು ನೋಡಬೇಕಿದೆ.
