Tag: Sandalwood Drugs Scandal

  • ನಟಿ ರಾಗಿಣಿ ಜೊತೆ ನಂಟು- ಬಂಧನ ಭೀತಿಯಲ್ಲಿ ಜಾಮೀನು ಪಡೆದ ಕೈ ಮುಖಂಡ

    ನಟಿ ರಾಗಿಣಿ ಜೊತೆ ನಂಟು- ಬಂಧನ ಭೀತಿಯಲ್ಲಿ ಜಾಮೀನು ಪಡೆದ ಕೈ ಮುಖಂಡ

    ಹುಬ್ಬಳ್ಳಿ: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿರುವ ನಟಿ ರಾಗಿಣಿ ಜೊತೆ ನಂಟು ಹೊಂದಿದ್ದ ಕೈ ನಾಯಕ ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

    ನಟಿ ರಾಗಿಣಿ ಬಂಧನದ ನಂತರ ಹುಬ್ಬಳ್ಳಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವರ ಆಪ್ತರನಾಗಿರುವ ಗಿರೀಶ್ ಗದಿಗೆಪ್ಪಗೌಡರ ನಟಿ ರಾಗಿಣಿ ಜೊತೆ ನಂಟು ಹೊಂದಿದ್ದು, ಬೆಳಕಿಗೆ ಬಂದಿತ್ತು. ಈ ಹಿನ್ನಲೆಯಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಕೈ ನಾಯಕ ಗದಿಗೆಪ್ಪಗೌಡರನ್ನ ತ್ರೀವ ವಿಚಾರಣೆ ಒಳಪಡಿಸಿದ್ದರು. ಹೀಗಾಗಿ ಬಂಧನದ ಭೀತಿ ಎದುರಿಸುತ್ತಿದ್ದ ಗದಿಗೆಪ್ಪಗೌಡರ್ ಧಾರವಾಡದ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.

    ನಟಿ ರಾಗಿಣಿ ಜೊತೆ ಹೊಂದಿದ ನಂಟು ಹಾಗೂ ಗೋವಾದ ಕ್ಯಾಸಿನೋ ಉದ್ಘಾಟನೆಯನ್ನು ನಟಿ ರಾಗಿಣಿ ನೇರವೇರಿಸಿದ ಬಗ್ಗೆ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ಗಿರೀಶ್ ಗದಿಗೆಪ್ಪಗೌಡರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಆದರೂ ಬಂಧನದ ಭೀತಿಯಿಂದ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕರು ಗಿರೀಶ್ ಗದಿಗೆಪ್ಪಗೌಡರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಜಾಮೀನು ನೀಡುವ ಅವಶ್ಯಕತೆ ಇಲ್ಲವೆಂದು ವಾದಿಸಿದ್ದರು. ಆದರೆ ಬಂಧನ ಭೀತಿ ಬಗ್ಗೆ ಗದಿಗೆಪ್ಪಗೌಡರ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿ ಕೆಲ ಉದಾಹರಣಗಳ ಹಾಗೂ ಸಾಂದರ್ಭಿಕ ಘಟನೆಗಳ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿ ನಿರೀಕ್ಷಣಾ ಜಾಮೀನಿನ ಬಗ್ಗೆ ಪ್ರಸ್ತಾಪಿಸಿದ್ದರು.

    ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಹಾಗೂ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧನ ಮಾಡುವ ಪ್ರಸಂಗ ಎದುರಾದರೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಧೀಶರು ಆದೇಶ ಮಾಡಿದ್ದಾರೆ. ಆದರೆ ಪ್ರಕರಣ ದಾಖಲಾಗುವ ಮುನ್ನವೇ ಕೈ ನಾಯಕ ಗಿರೀಶ್ ಗದಿಗೆಪ್ಪಗೌಡರ ನಿರೀಕ್ಷಣಾ ಜಾಮೀನು ಪಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.

  • ರಾಗಿಣಿಗೆ ಬೆನ್ನು ನೋವು- ಜೈಲಿನ ಆಸ್ಪತ್ರೆಯಲ್ಲಿ ರಾತ್ರಿ ಪೂರ್ತಿ ಚಿಕಿತ್ಸೆ

    ರಾಗಿಣಿಗೆ ಬೆನ್ನು ನೋವು- ಜೈಲಿನ ಆಸ್ಪತ್ರೆಯಲ್ಲಿ ರಾತ್ರಿ ಪೂರ್ತಿ ಚಿಕಿತ್ಸೆ

    – ಆಗುತ್ತಿಲ್ಲ ಆಸ್ಪತ್ರೆಗೆ ಸೇರಿಸಿ ಎಂದು ಗೋಳಾಟ

    ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟಿ ರಾಗಿಣಿಗೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿದೆಯಂತೆ. ಹೀಗಾಗಿ ರಾತ್ರಿ ಪೂರ್ತಿ ಗೋಳಾಡಿದ್ದು, ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಪರಪ್ಪನ ಅಗ್ರಹಾರದಲ್ಲಿರುವ ರಾಗಿಣಿ, ರಾತ್ರಿಯಿಂದ ಹೆಚ್ಚು ಬೆನ್ನು ನೋವು ಎಂದು ಜೈಲಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ. ಅಲ್ಲದೆ ತುರ್ತಾಗಿ ನನ್ನನ್ನು ಆಸ್ಪತ್ರೆಗೆ ಸೇರಿಸಿ, ಆಗುತ್ತಿಲ್ಲ ಎಂದು ಗೋಳಾಡಿದ್ದಾರೆ. ನಂತರ ಜೈಲಿನ ಆಸ್ಪತ್ರೆಗೆ ಸೇರಿಸಲಾಗಿದ್ದು, ರಾತ್ರಿ ಪೂರ್ತಿ ಚಿಕಿತ್ಸೆ ಪಡೆದಿದ್ದಾರೆ. ಈ ಮೂಲಕ ಅಧಿಕಾರಿಗಳ ನಿದ್ದೆಗೆಡಿಸಿದ್ದಾರೆ. ರಾಗಿಣಿ ಗೋಳಾಟ ತಾಳಲಾರದೆ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಕಳೆದ ಮೂರು ದಿನಗಳ ಹಿಂದೆಯಷ್ಟೇ ಆರೋಗ್ಯದ ಸಮಸ್ಯೆ ಎಂದು ರಾಗಿಣಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಹೆಚ್ಚು ಬೆನ್ನು ನೋವು ಎಂದು ಜೈಲು ಆಸ್ಪತ್ರೆಯಲ್ಲಿ ರಾತ್ರಿಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಲೂ ರಾಗಿಣಿ ಆಸ್ಪತ್ರೆಯಲ್ಲಿ ಮಲಗಿದ್ದು, ಜೈಲು ಸಿಬ್ಬಂದಿಯಿಂದ ರಾಗಿಣಿಗೆ ಪುಳಿಯೋಗರೆ ತಿಂಡಿ ನೀಡಲಾಗಿದೆ ಎಂದು ಜೈಲಿನ ಮೂಲಗಳು ಮಾಹಿತಿ ನೀಡಿವೆ.

  • ಮಣಿಪಾಲದಲ್ಲಿ 10 ಲಕ್ಷ ಮೌಲ್ಯದ ಡ್ರಗ್ಸ್ ವಶ

    ಮಣಿಪಾಲದಲ್ಲಿ 10 ಲಕ್ಷ ಮೌಲ್ಯದ ಡ್ರಗ್ಸ್ ವಶ

    ಉಡುಪಿ: ಡ್ರಗ್ಸ್ ಕುರಿತು ಬೆಂಗಳೂರು ಹಾಗೂ ಮಂಗಳೂರಿನಲ್ಲಿ ತನಿಖೆ ಚುರುಕುಗೊಂಡಿದ್ದು, ಇದೇ ವೇಳೆ ಸುಮಾರು 10 ರೂ. ಮೌಲ್ಯದ ಡ್ರಗ್ಸ್‍ನ್ನು ಪಾಣಿಪಾಲದಲ್ಲಿ ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ಡ್ರಗ್ಸ್ ತಂಧೆ ಜಾಲವನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

    ಜಿಲ್ಲೆಯ ಮಣಿಪಾಲದಲ್ಲಿ 10 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ ಪಡೆಯಲಾಗಿದ್ದು, ಉತ್ತರ ಭಾರತ ಮೂಲದ ಆರೋಪಿ ಯುವಾಂಶು ಜೋಶಿ(20)ಯನ್ನು ಬಂಧಿಸಲಾಗಿದೆ. ಆಂತರಿಕ ಭದ್ರತಾ ವಿಭಾಗದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದ್ದು, ಮಣಿಪಾಲ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿ ಸುಮಾರು ಹತ್ತು ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಇದು ಎಂಡಿಎಂಎ ಮಾದಕ ಡ್ರಗ್ ಎಂದು ಗುರುತಿಸಲಾಗಿದೆ.

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಈಗಾಗಲೇ ಹಲವರನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಇನ್ನೂ ಹಲವರಿಗಾಗಿ ಗಾಳ ಬೀಸಿದ್ದಾರೆ. ಹೀಗಿರುವಾಗಲೇ ಮಣಿಪಾಲದಲ್ಲಿ ಇದೀಗ 10 ಲಕ್ಷ ರೂ.ಗಳ ಡ್ರಗ್ಸ್ ಪತ್ತೆಯಾಗಿದೆ.