Tag: sandalwood drugs mafia

  • ಜನಪ್ರತಿನಿಧಿಗಳು, ನಟ-ನಟಿಯರು ಮಾದಕ ವಸ್ತು ಸೇವಿಸಿ ತಪ್ಪು ಮಾಡ್ಬಾರ್ದು: ಸುಧಾಕರ್

    ಜನಪ್ರತಿನಿಧಿಗಳು, ನಟ-ನಟಿಯರು ಮಾದಕ ವಸ್ತು ಸೇವಿಸಿ ತಪ್ಪು ಮಾಡ್ಬಾರ್ದು: ಸುಧಾಕರ್

    ಚಿಕ್ಕಬಳ್ಳಾಪುರ: ಜನಪ್ರತಿನಿಧಿಗಳು ಹಾಗೂ ನಟ-ನಟಿಯರು ಸಮಾಜದಲ್ಲಿ ರಾಯಭಾರಿಗಳ ರೀತಿ ಇರಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಮಿನಿವಿಧಾನಸೌಧದ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಸುಧಾಕರ್ ಮಾತನಾಡಿದರು. ಇದೇ ವೇಳೆ ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಸಿಸಿಬಿಯಿಂದ ಸ್ಯಾಂಡಲ್‍ವುಡ್ ನಟಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಅವರು, ನಾನು ವೈಯಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡಲ್ಲ. ಜನಪ್ರತಿನಿಧಿಗಳು ಹಾಗೂ ನಟ-ನಟಿಯರು ಸಮಾಜದಲ್ಲಿ ರಾಯಭಾರಿಗಳ ತರ ಇರಬೇಕು ಎಂದರು.

    ನಮ್ಮನ್ನ ನೋಡಿ ಬಹಳ ಜನ ಜೀವನದಲ್ಲಿ ಬದಲಾಗ್ತಾರೆ. ನಾವೇ ಮಾದಕ ವಸ್ತುಗಳನ್ನ ಸೇವಿಸಿ ತಪ್ಪು ಮಾಡಬಾರದು. ಇದರಿಂದ ನಾವು ತಪ್ಪು ಸಂದೇಶವನ್ನ ಜನರಿಗೆ ಕೊಡುವಂತಾಗುತ್ತೀರಿ. ಹೀಗಾಗಿ ಸಮಾಜದಲ್ಲಿ ಗಳಿಸಿದ ಹೆಸರು ಮಣ್ಣುಪಾಲಾಗುತ್ತೆ. ಈ ಕೃತ್ಯದಲ್ಲಿ ತೊಡಗಿಸಿಕೊಂಡವರಿಗೆ ಇದು ಅನ್ವಯವಾಗುತ್ತೆ ಅಂತ ಹೇಳಿದರು.

    ಮಾದಕ ವಸ್ತುಗಳ ಸೇವನೆಯಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತೆ. ಬೇರೆ ಬೇರೆ ದೇಶಗಳಲ್ಲಿ ಇದೊಂದು ದೊಡ್ಡ ಮಾಫಿಯಾ. ಹೀಗಾಗಿ ರಾಜ್ಯದಲ್ಲಿ ಮಾದಕವಸ್ತುಗಳ ನಿಗ್ರಹಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾನು ಈಗಾಗಲೇ ಈ ಬಗ್ಗೆ ಗೃಹ ಸಚಿವರ ಜೊತೆ ಮಾತನಾಡಿದ್ದು, ಸರ್ಕಾರ ಈ ಚಟುವಟಿಕೆಗೆಳ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದರು.

  • ಸಾರಾ ಗೋವಿಂದು ಪ್ರಶ್ನೆಗೆ ಪ್ರಶಾಂತ್ ಸಂಬರಗಿ ಖಡಕ್ ಉತ್ತರ

    ಸಾರಾ ಗೋವಿಂದು ಪ್ರಶ್ನೆಗೆ ಪ್ರಶಾಂತ್ ಸಂಬರಗಿ ಖಡಕ್ ಉತ್ತರ

    ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಕೊಡುಗೆ ಏನಿದೆ ಎಂಬ ಸಾರಾ ಗೋವಿಂದು ಹೇಳಿಕೆಗೆ ಇಂದು ಪ್ರಶಾಂತ್ ಸಂಬರಗಿ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಿದ್ದಾರೆ.

    2000 ಇಸವಿಯಲ್ಲಿ ಡಿಗ್ರಿ ಮುಗಿಸಿಕೊಂಡು ಹೀರೋ ಆಗಬೇಕೆಂಬ ಕನಸು ಇಟ್ಟುಕೊಂಡು ಬಂದಿದ್ದೆ. ಆಗ ನನಗೆ ಪರಿಚಯ ಆಗಿದ್ದು ಸುದೀಪ್. ಅವರ ಹಾದಿಯಲ್ಲಿ ಫಿಲಂ ಇಂಡಸ್ಟ್ರಿ ಬಗ್ಗೆ ತುಂಬಾ ಕಲಿತಿದ್ದೇನೆ. ಆದರೆ ಕಾರಣಾಂತರಗಳಿಂದ ಯಾವುದೇ ಚಾನ್ಸ್ ಸಿಕ್ಕಿಲ್ಲ. ಆದರೆ ಹೇಗಾದ್ರೂ ಮಾಡಿ ಚಿತ್ರಂಗದ ಜೊತೆಗೆ ಸಂಪರ್ಕ ಇರಬೇಕು ಅಂತ ಹೇಳಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಹಾಗೂ ಸೆಲೆಬ್ರಿಟಿ ಮ್ಯಾನೇಜ್ಮೆಂಟ್ ಕಂಪನಿಯನ್ನು 2002ರಲ್ಲಿ ಹುಟ್ಟುಹಾಕಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ನನಗೆ ರಿಲಾಯನ್ಸ್ ಇನ್ಫೋ ಕಾಂ.ಗೆ ಬೇಕಾಗಿರುವಂತಹ ಬ್ರಾಂಡ್ ಅಂಬಾಸಿಡರ್ ಎಂಬ ಮೊದಲ ಕಾರ್ಯಕ್ರಮ ಬಂತು. ಆಗಿನ ಕಾಲಕ್ಕೆ ನನಗೆ ಹೀರೋ ಆಗಿದ್ದವರು ಸುದೀಪ್. ಹೀಗಾಗಿ ಅವರನ್ನೇ ನಾನು ಅಂಬಾಸಿಡರ್ ಮಾಡಿ ಒಂದು ಪ್ರೀಫೈಡ್ ಫೋನ್ ಗೆ ಇಡೀ ವಿಶ್ವದಲ್ಲೇ ಮಾಡದೇ ಇರುವಂತಹ ಸಾಹಸವೊಂದನ್ನು ಮಾಡಿದೆವು ಎಂದರು.

    2006ರಲ್ಲಿ ಬೆಂಗಳೂರಿಗೆ ಎಫ್‍ಎಂ ಚಾನೆಲ್ ಬಂದಾಗ ಅನ್ನು ಜನರಿಗೆ ಹೇಗೆ ತಲುಪಿಸುವುದು ಅಂತ ಕೇಳಿದಾಗ ಐಡಿಯಾ ಕೊಟ್ಟಿದ್ದೆ. ಇದಕ್ಕೆ ಉಪೇಂದ್ರ ಅವರನ್ನು ಬ್ರಾಂಡ್ ಆಗಿ ಮಾಡಿದೆವು. ಬಿಗ್ ಎಫ್‍ಎಂ ನಲ್ಲಿ ಉಪೇಂದ್ರ ಅವರು ಒಂದು ಇಮೇಜ್ ಆಗಿ ಕಾಣಿಸಿಕೊಂಡರು. ಹೀಗೆ ಅನೇಕ ಬ್ರಾಂಡ್ ಗಳನ್ನು ಕರ್ನಾಟಕ್ಕೆ ಪರಿಚಯ ಮಾಡಿದ್ದೇನೆ ಎಂದು ಹೇಳಿದರು.

    2006ರಲ್ಲಿ ಐಶ್ವರ್ಯಾ ಸಿನಿಮಾವನ್ನು ಆತ್ಮೀಯ ಗೆಳೆಯ ಇಂದ್ರಜಿತ್ ಲಂಕೇಶ್ ಮಾಡಿದರು. ಈ ಚಿತ್ರದಲ್ಲಿ ಪಾಲುದಾರಿಕೆ ಹಾಕಿದೆ. 2004ರಲ್ಲಿ ರಿಲಾಯನ್ಸ್ ಸಂಸ್ಥೆಗಳಿಗೆ ರಿಂಗ್ ಟೋನ್ ಮ್ಯೂಸಿಕ್ ಕೊಡುವ ಮೂಲಕ ರೆವೆನ್ಯೂ ಶೇರಿಂಗ್ ಅನ್ನು ಕಂಡುಹಿಡಿದಿದ್ದೇ ನಾನೇ. ಅಂದು ನಿರ್ಮಾಪಕರು, ನಿರ್ದೇಶಕರು ನನ್ನ ಕಚೇರಿಗೆ ಓಡೋಡಿ ಬರುತ್ತಿದ್ದು, ಇಂದು ಪ್ರಶಾಂತ್ ಕೊಡುಗೆ ಏನು ಅಂತ ಕೇಳುತ್ತಿದ್ದಾರೆ ಅಂತ ಗರಂ ಆದರು.

    2010ರಲ್ಲಿ ಎಫ್‍ಎಂ ಚಾನೆಲ್ ನಲ್ಲಿ ಒಂದು ತಿಂಗಳು ‘ಉಪ್ಪಿ ಲಾಜಿ’ ಎಂಬ ಕಾರ್ಯಕ್ರಮ ಮಾಡಿದ್ದೆ. ಇದರಲ್ಲಿ ಜನಸಾಮಾನ್ಯರ ಪ್ರಶ್ನೆಗಳಿಗೆ ಉಪೇಂದ್ರ ಅವರು ಉತ್ತರ ಕೊಡುತ್ತಿದ್ದರು. ಹೀಗೆ ಅನೇಕ ಸಾಹಸಗಳನ್ನು ಮಾಡಿಕೊಂಡು ಬರುತ್ತಿರಬೇಕಾದರೆ ಚಿತ್ರರಂಗದ ಡಿಸ್ಟ್ರಿಬ್ಯೂಟರ್ಸ್ ಗಳು, ಸಣ್ಣ ಪುಟ್ಟ ತೆಲುಗು ಸಿನಿಮಾಗಳನ್ನು ಕನ್ನಡದಲ್ಲಿ ರಿಲೀಸ್ ಮಾಡಿಕೊಂಡು ಬಂದೆ. ಆದರೆ ಇಲ್ಲಿಯವರೆಗೂ ಫಿಲಂ ಚೇಂಬರ್ ನಲ್ಲಿ ಯಾವುದೇ ಸದಸ್ಯತ್ವ ಹೊಂದರಲಿಲ್ಲ. ಸದಸ್ಯತ್ವ ಪಡೆದುಕೊಳ್ಳುವುದೂ ಇಲ್ಲ ಎಂದು ತಿಳಿಸಿದರು.

    ಕರ್ನಾಟಕದ ಹಲವು ಚಿತ್ರಗಳನ್ನು ನಾನು ಡಿಸ್ಟ್ರಿಬ್ಯೂಟ್ ಮಾಡಿದ್ದೇನೆ. ಬಾಹುಬಲಿ ಚಿತ್ರವನ್ನ ಕರ್ನಾಟಕದಲ್ಲಿ ಬ್ಯಾನ್ ಮಾಡ್ತೀನಿ ಅಂತ ಸಾರಾ ಗೋವಿಂದ್ ಹೇಳಿದ್ರು. ಅವರು ಬಾಹುಬಲಿ ಮಾಡಿದ್ರೆ ನೀವು ಕೂಡ ಬಾಹುಬಲಿ ಮಾದರಿ ಸಿನಿಮಾ ಮಾಡಿ ಎಂದಿದ್ದೆ. ಅಲ್ಲಿಂದ ನನಗೂ ಸಾ ರಾ ಗೋವಿಂದುಗೂ ಮುನಿಸು ಎದ್ದಿದ್ದು, ಹೀಗಾಗಿ ನನ್ನ ಕಂಡ್ರೆ ಅವರಿಗೆ ಆಗಲ್ಲ ಅಂದರು.

    ಯಾವುದೇ ಚಿತ್ರ 24 ಸ್ಕ್ರೀನ್ ಗಳಿಗಿಂತ ಹೆಚ್ಚು ರಿಲೀಸ್ ಆಗಬಾರದು ಎಂಬ ರೂಲ್ ಇತ್ತು. ಆದರೂ ನಾವು 50 ಸ್ಕ್ರೀನ್ ಗಳಲ್ಲಿ ಬಿಡುಗಡೆ ಮಾಡಿದ್ವಿ. ಬಿಗ್ ಎಫ್‍ಎಂ ನಲ್ಲಿ ಆರ್ ಜೆ ರೋಹಿತ್ ಅವರಿಗೆ ಕಾಲ್ ಮಾಡಿ ಒಂದು ಹುಡುಗಿ ಪ್ರಶ್ನೆ ಮಾಡುತ್ತಾಳೆ. ಆಗ ಆಕೆ ಕಾಸ್ಟಿಂಗ್ ಕೌಚ್ ಬಗ್ಗೆ ಮಾತಾಡುತ್ತಾಳೆ. ಇದಕ್ಕೆ ರೋಹಿತ್ ಕೂಡ ನೀವು ಸಹಿಸಿಕೊಂಡು ಹೋಗಬೇಕು ಎಂದು ಉತ್ತರಿಸುತ್ತಾರೆ. ಆಗ ಇನ್ನೊಂದು ಎಫ್‍ಎಂ ಚಾನೆಲ್ ಫಿಲಂ ಚೇಂಬರ್ ಗೆ ಅದರ ರೆಕಾರ್ಡಿಂಗ್ ಕಳಿಸುತ್ತಾರೆ. ಬಿಗ್ ಎಫ್‍ಎಂಗೆ ಹಾಡು, ಇಂಟರ್ವ್ಯೂ ಕೊಡಬಾರದು ಎಂದು ಹೇಳ್ತಾರೆ. ಆಗ 10 ಲಕ್ಷ ಹಣವನ್ನು ನಮ್ಮ ಬಳಿ ಡಿಮ್ಯಾಂಡ್ ಮಾಡುತ್ತಾರೆ. ಈ ವೇಳೆ ಆರ್ಜೆ ರೋಹಿತ್ ನನ್ನ ತೆಗೆದು ಹಾಕಿದ್ವಿ. ಇದರ ಬಗ್ಗೆ ಕ್ಷಮೆಯಾಚನೆ ಮಾಡಿದ್ವಿ. ಇದರ ಇತ್ಯರ್ಥಕ್ಕೆ ರಾಕ್ ಲೈನ್ ವೆಂಕಟೇಶ್ ಸಹಕಾರಿಯಾದ್ರು ಎಂಂದರು.

    ಬಾಹುಬಲಿ ಯಲ್ಲಿ ಸತ್ಯರಾಜ್ ಇದ್ದರು ಅದಕ್ಕಾಗಿ ಇಂಟರ್ ನ್ಯಾಷನಲ್ ಸಿನಿಮಾ ತಡೆಯಲು ಸಾರಾ ಗೋವಿಂದು ಕರೆ ನೀಡಿದ್ದರು. ನಾನು ರೋಲ್ ಕಾಲ್ ಮಾಡಿದ್ದೀನಿ ಎಂದು ಉಪ್ಪಾರಪೇಟೆಯಲ್ಲಿ ಎನ್ಸಿಆರ್ ಮಾಡಿದ್ದರು. ಫಿಲಂ ಚೇಂಬರ್ ಅಂದ್ರೆ ಬರೀ ಕನ್ನಡ ಒಂದೇ ಒಂದು ಮಾಡಿಕೊಂಡು ಇರ್ತಾರಾ? ಫಿಲಂ ಚೇಂಬರಲ್ಲಿ ಮೆಂಬರ್ಸ್ ಎಷ್ಟು? ಎಲೆಕ್ಷನ್ ಪ್ರೋಸೆಸ್ ಏನು? ಡೆಪಾಸಿಟ್ ಹಣ ಏನ್ಮಾಡಿದ್ದಾರೆ? ಎಸಿಬಿಯಲ್ಲಿ ಫುಡ್ ಕಿಟ್ ಹಗರಣ ಬಗ್ಗೆ ದೂರು ನೀಡಲಾಗಿತ್ತು. ಸಾರಾ ಗೋವಿಂದ್ ಅವರಿಗೆ ರೋಲ್ ಕಾಲ್ ಸಿಗಲಿಲ್ಲ ಎಂಬ ಕಾರಣಕ್ಕೆ ಬಾಹುಬಲಿ 2ಗೆ ಕ್ಯಾತೆ ತೆಗೆದಿದ್ದರು ಎಂದು ಸಾರಾ ಗೋವಿಂದ್ ವಿರುದ್ಧ ಪ್ರಶಾಂತ್ ಸಂಬರಗಿ ಆರೋಪ ಮಾಡಿದರು.