Tag: Sandalwood Drug Scandal

  • ಮಂಗಳೂರು ಡ್ರಗ್ಸ್ ಜಾಲದ ಮತ್ತೋರ್ವ ಆರೋಪಿ ಅರೆಸ್ಟ್

    ಮಂಗಳೂರು ಡ್ರಗ್ಸ್ ಜಾಲದ ಮತ್ತೋರ್ವ ಆರೋಪಿ ಅರೆಸ್ಟ್

    – ಅನುಶ್ರೀ ಸೇರಿ ಹಲವು ನಟ, ನಟಿಯರ ಬಗ್ಗೆ ಬಾಯ್ಬಿಟ್ಟ ಸ್ಯಾಮ್

    ಮಂಗಳೂರು: ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಅರೆಸ್ಟ್ ಆದ ಬಳಿಕ ಪ್ರತಿ ದಿನ ಒಬ್ಬಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಇದೀಗ ಮತ್ತೊಬ್ಬ ಡ್ಯಾನ್ಸ್ ಕೊರಿಯೋಗ್ರಾಫರ್‍ನ್ನು ಪೊಲೀಸರು ಬಂಧಿಸಿದ್ದಾರೆ.

    ಕಿಶೋರ್ ನ ಹಳೆ ಮಿತ್ರ ಸ್ಯಾಮ್ ಫರ್ನಾಂಡಿಸ್‍ನನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಸ್ಯಾಮ್ ನನ್ನು ಟಿಪಿಕಲ್ ಪೊಲೀಸ್ ಸ್ಟೈಲ್ ನಲ್ಲಿ ವಿಚಾರಣೆ ಮಾಡಿದ ಬಳಿಕ ನಿರೂಪಕಿ ಅನುಶ್ರೀ ಬಗೆಗಿನ ಮತ್ತಷ್ಟು ಮಾಹಿತಿಗಳು ಸಿಸಿಬಿ ಪೊಲೀಸರಿಗೆ ಲಭ್ಯವಾಗಿವೆ. ಕಿಶೋರ್ ನಡೆಸುತ್ತಿದ್ದ ಪಾರ್ಟಿಗಳಲ್ಲಿ ಅನುಶ್ರೀಯನ್ನು ನೋಡಿರುವುದಾಗಿ ಸ್ಯಾಮ್ ಫರ್ನಾಂಡಿಸ್ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

    ಮಂಗಳೂರು ಮತ್ತು ಬೆಂಗಳೂರಿನಲ್ಲಿ ಪಾರ್ಟಿ ನಡೆಯುತ್ತಿತ್ತು. ಎರಡೂ ಕಡೆ ನಡೆಯುತ್ತಿದ್ದ ಪಾರ್ಟಿಗಳಲ್ಲಿ ಭಾಗವಹಿಸಿದ್ದಾಗಿ ಸ್ಯಾಮ್ ಹೇಳಿದ್ದಾನೆ. ಅನುಶ್ರೀ ಸೇರಿದಂತೆ ಬೆಳ್ಳಿತೆರೆ, ಕಿರುತೆರೆ ಹಾಗೂ ರಿಯಾಲಿಟಿ ಶೋನ ನಟ, ನಟಿಯರು ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ಸ್ಯಾಮ್ ಬಾಯ್ಬಿಟ್ಟಿದ್ದಾನೆ. ಹೀಗಾಗಿ ಪಾರ್ಟಿಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಈಗ ಢವ ಢವ ಆರಂಭವಾಗಿದೆ.

    ಇನ್ನೊಂದೆಡೆ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ರಾಜಕೀಯ ಒತ್ತಡ ಕೂಡ ನಡೆದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಕಿಶೋರ್ ಅರೆಸ್ಟ್ ಆದ ದಿನವೇ ಆತನನ್ನು ಪ್ರಕರಣದಿಂದ ಬಿಡುಗಡೆಗೊಳಿಸಲು ಮಂಗಳೂರಿನ ಶಾಸಕರೊಬ್ಬರು ಪ್ರಯತ್ನಿಸಿರುವುದು ಗೊತ್ತಾಗಿದೆ. ಕಿಶೋರ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಮತ್ತು ಕ್ರಿಕೆಟ್ ಬುಕ್ಕಿಯಾಗಿರುವ ಮಂಗಳೂರಿನ ಪ್ರತಿಷ್ಠಿತ ಯುವ ಉದ್ಯಮಿಯೋರ್ವ ಶಾಸಕನ ಮೂಲಕ ಕಿಶೋರ್ ಶೆಟ್ಟಿಯನ್ನು ಕೇಸ್ ನಿಂದ ತೆಗೆಯಲು ಯತ್ನಿಸಿರೋದಾಗಿ ತಿಳಿದುಬಂದಿದೆ. ಆದರೆ ಸಿಸಿಬಿ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ಪ್ರಕರಣದ ವಿಚಾರಣೆ ಮುಂದುವರಿಸಿದ್ದಾರೆ. ಒಟ್ಟಾರೆ ಮಂಗಳೂರಿನ ಡ್ರಗ್ ಕೇಸ್ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಾದಕತೆಯ ಅಮಲೇರಿಸಿಕೊಂಡವರು ಅಂದರ್ ಆಗುವ ಸಾಧ್ಯತೆಗಳಿವೆ.

  • ಮಂಗಳೂರು ಸಿಸಿಬಿ ಪೊಲೀಸರಿಂದ ಮುಂಬೈನಲ್ಲಿ ಮತ್ತೊಬ್ಬ ಡ್ರಗ್ ಪೆಡ್ಲರ್ ಬಂಧನ

    ಮಂಗಳೂರು ಸಿಸಿಬಿ ಪೊಲೀಸರಿಂದ ಮುಂಬೈನಲ್ಲಿ ಮತ್ತೊಬ್ಬ ಡ್ರಗ್ ಪೆಡ್ಲರ್ ಬಂಧನ

    ಮಂಗಳೂರು: ಮಂಗಳೂರು ಪೊಲೀಸರು ಡ್ರಗ್ ವಿರುದ್ಧದ ಸಮರವನ್ನು ಮುಂದುವರಿಸಿದ್ದು, ಇಂದು ಮತ್ತೊಬ್ಬ ಪೆಡ್ಲರ್‍ನನ್ನು ಬಂಧಿಸಿದ್ದಾರೆ.

    ಮಂಗಳೂರಿನಲ್ಲಿ ಡ್ಯಾನ್ಸರ್ ಕಿಶೋರ್ ಅಮನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ದಂಧೆಯ ಮತ್ತೊರ್ವ ಪ್ರಮುಖ ಪೆಡ್ಲರ್ ನನ್ನು ಮಂಗಳೂರು ಸಿಸಿಬಿ ಪೊಲೀಸರು ಮುಂಬೈಯಲ್ಲಿ ಬಂಧಿಸಿದ್ದಾರೆ ಶಾನ್ ಮುಂಬೈನಲ್ಲಿ ಬಂಧಿತನಾದ ಪ್ರಮುಖ ಪೆಡ್ಲರ್. ಮೂಲತಃ ಮಂಗಳೂರಿನ ಬಂದರು ನಿವಾಸಿಯಾಗಿರುವ ಶಾನ್, ತರುಣ್ ರಾಜ್‍ನ ಪಾರ್ಟಿಗಳಿಗೆ ಡ್ರಗ್ಸ್ ನೀಡುತ್ತಿದ್ದ. ಇತ್ತೀಚಿಗೆ ಬಂಧನವಾಗಿದ್ದ ಶಾಕೀರ್ ಮೂಲಕ ಡ್ರಗ್ಸ್ ಪಾರ್ಟಿಗಳಿಗೆ ಶಾನ್ ನಿಂದ ಡ್ರಗ್ಸ್ ಮಾಡಲಗುತ್ತಿತ್ತು ಎಂಬ ಮಾಹಿತಿ ಆಧರದ ಮೇಲೆ ಪೊಲೀಸರು ಬಂಧಿಸಿದ್ದಾರೆ.

    ಮುಂಬೈ, ಗೋವಾದಿಂದ ಡ್ರಗ್ಸ್ ತರಿಸಿಕೊಡುತ್ತಿದ್ದ ಶಾನ್, ರಾಜ್ಯದ ವಿವಿಧೆಡೆ ನಡೆಯುವ ಪರ್ಟಿಗಳಿಗೆ ಸಪ್ಲೈ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದ್ದು, ಮಂಗಳೂರು ಸಿಸಿಬಿ ಪೋಲಿಸರು ತನಿಖೆಯನ್ನು ಮುಂದುವರಿಸಿದ್ದಾರೆ.

    ಡ್ರಗ್ಸ್ ಪ್ರಕರಣಕ್ಕೆ ಸಬಂಧಿಸಿದಂತೆ ಬಂಧಿತರಾಗಿರುವ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಹಾಗೂ ಅಕೀಲ್ ನೌಶೀನ್‍ನನ್ನು ಅಕ್ಟೋಬರ್ 9 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರನ್ನು ನಾರ್ಕೊಟಿಕ್ ಕ್ರೈಂ ಪೊಲೀಸರು ಈ ಹಿಂದೆ ಮಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಿದ್ದ ಪೊಲೀಸರು, ಅ.9 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

    ಸೆಪ್ಟೆಂಬರ್ 19ರಂದು ಮಂಗಳೂರಿನ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಿಂದ ಎಂಡಿಎಂ ಪೌಡರ್, ಬೈಕ್, 2 ಮೊಬೈಲ್ ಫೋನ್ ಸೇರಿದಂತೆ 1 ಲಕ್ಷ ಮೌಲ್ಯದ ವಸ್ತು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆರೋಪಿಗಳು ಮುಂಬೈಯಿಂದ ವಸ್ತುಗಳನ್ನು ಖರೀದಿಸಿ ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಇಬ್ಬರ ಮೇಲೆ ಸೇವನೆ ಮತ್ತು ಮಾರಾಟ ಎರಡೂ ಪ್ರಕರಣ ದಾಖಲಾಗಿದೆ.

    ಆರೋಪಿ ಅಕೀಲ್ ನೌಶೀಲ್ ಈ ಹಿಂದೆ ವಿದೇಶದಲ್ಲಿ ಸೇಫ್ಟಿ ಆಫೀಸರ್ ಆಗಿದ್ದ. ಒಂದು ವರ್ಷದ ಊರಿಗೆ ಬಂದಿದ್ದ ಈತ, ಕಿಶೋರ್ ಅಮನ್ ಜೊತೆ ಡ್ಯಾನ್ಸರ್, ಕೋರಿಯೋಗ್ರಾಫರ್ ಆಗಿ ಕೆಲಸ ಮಾಡಿಕೊಂಡಿದ್ದ. ಅಲ್ಲದೆ ಅಕೀಲ್ ನೌಶೀಲ್ ಜೊತೆ ಸೇರಿ ಮಾದಕ ವಸ್ತು ಖರೀದಿಸಿ ಮಾರಾಟ ಮಾಡುತ್ತಿದ್ದ. ಬೆಂಗಳೂರು, ಮುಂಬೈಯಿಂದ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳಿದ್ದಾರೆ. ಇವರ ಚೈನ್ ಲಿಂಕ್ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಆಯುಕ್ತರು ಈ ಹಿಂದೆ ಮಾಹಿತಿ ನೀಡಿದ್ದರು.

  • ಜೈಲುಪಾಲಾದ ರಾಗಿಣಿಗೆ ಕಣ್ಣೀರ ವಿದಾಯ ಹೇಳಿದ ಸಂಜನಾ

    ಜೈಲುಪಾಲಾದ ರಾಗಿಣಿಗೆ ಕಣ್ಣೀರ ವಿದಾಯ ಹೇಳಿದ ಸಂಜನಾ

    ಬೆಂಗಳೂರು: ಡ್ರಗ್ಸ್‌ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರಾಗಿಣಿಗೆ ಸಂಜನಾ ಕಣ್ಣೀರ ವಿದಾಯ ಹೇಳಿದ್ದಾರೆ.

    ಇಂದು ಸಿಸಿಬಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂಜನಾ, ರಾಗಿಣಿ ಜೊತೆ ಆರೋಪಿಗಳನ್ನು  1ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್‌ ರಾಗಿಣಿ 14  ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ ನಟಿ ಸಂಜನಾರನ್ನು 2 ದಿನ ಪೊಲೀಸ್‌ ಕಸ್ಟಡಿಗೆ ನೀಡಿತು.

    ವಿಧಿವಿಜ್ಞಾನ ಕೇಂದ್ರದಲ್ಲಿ ಒಬ್ಬರನ್ನೊಬ್ಬರು ಬಿಟ್ಟು ಹೋಗುವಾಗ ಇಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಸಂಜನಾ ಕಣ್ಣೀರು ಹಾಕಿ ರಾಗಿಣಿಗೆ ವಿದಾಯ ಹೇಳಿದ್ದಾರೆ.

    ಡ್ರಗ್ಸ್‌ ಪ್ರಕರಣಕ್ಕೂ ಮೊದಲು ಇಬ್ಬರ ಸಂಬಂಧ ಅಷ್ಟಕ್ಕಷ್ಟೇ ಇತ್ತು. ಆದರೆ ಕಳೆದ 8 ದಿನಗಳಿಂದ ರಾಗಿಣಿ ಮತ್ತು ಸಂಜನಾ ಒಂದಾಗಿದ್ದರು. ಮೊದ ಮೊದಲು ಇಬ್ಬರ ನಡುವೆ ಅಸಮಾಧಾನವಿದ್ದರೂ ನಂತರ ಇಬ್ಬರು ಜೊತೆಯಾಗಿದ್ದರು. ಇದನ್ನೂ ಓದಿ: ದಿನ ಬೆಳಗ್ಗೆ ಎದ್ದರೆ ದೇವರು ನೋಡುವುದು ಬಿಟ್ಟು ಅದು ನೋಡುವುದೇ ಆಗಿದೆ: ರೇವಣ್ಣ

    ರೀಲ್ ನಲ್ಲಿ ಪೊಲೀಸ್‌ ಆಗಿದ್ದ ರಾಗಿಣಿ ಇಂದು ರಿಯಲ್ಲಾಗಿ ಖೈದಿಯಾಗುತ್ತಿದ್ದಾರೆ. ರಾಗಿಣಿ ಐಪಿಎಸ್‌ ಚಿತ್ರದಲ್ಲಿ ಕಾಪ್ ರೋಲ್ ನಲ್ಲಿ‌ ರಾಗಿಣಿ ಮಿಂಚಿಸಿದ್ದಾರೆ.

    ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ಅವರನ್ನು ವಾಹನದಲ್ಲಿ  ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ. ಈ ಮೂಲಕ ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲುಪಾಲದ ಮೊದಲ ನಟಿ ಎಂಬ ಕುಖ್ಯಾತಿಗೆ ರಾಗಿಣಿ ಪಾತ್ರವಾಗಿದ್ದಾರೆ.